23 October 2021 KANNADA Murli Today | Brahma Kumaris

Read and Listen today’s Gyan Murli in Kannada

October 22, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ರಾವಣನ ಮತದಂತೆ ಯಾವುದೇ ವಿಕರ್ಮ ಮಾಡಬೇಡಿ, ಪತಿತರಿಗೆ ಪಾವನರಾಗುವ ಮಾರ್ಗವನ್ನು ತಿಳಿಸಿ”

ಪ್ರಶ್ನೆ:: -

ಸುಪುತ್ರ ಬುದ್ಧಿವಂತ ಮಕ್ಕಳು ಯಾವ ಪುರುಷಾರ್ಥ ಮಾಡುತ್ತಾ ಅವಶ್ಯವಾಗಿ ಒಂದು ಶ್ರೀಮತದ ಗಮನವನ್ನು ಇಡುತ್ತಾರೆ?

ಉತ್ತರ:-

ಬುದ್ಧಿವಂತ ಮಕ್ಕಳು ಶ್ರೇಷ್ಠ ಪದವಿಯನ್ನು ಪಡೆಯಲು ನಿರಂತರ ನೆನಪಿನಲ್ಲಿರುವ ಪುರುಷಾರ್ಥ ಮಾಡುತ್ತಾ ಸದಾ ಈ ಶ್ರೀಮತದ ಪ್ರತಿ ಗಮನವನ್ನು ಇಡುತ್ತಾರೆ – ನಾವು ನಿಮಿತ್ತರಾಗಿ ಅನೇಕ ಆತ್ಮರ ಕಲ್ಯಾಣ ಮಾಡಬೇಕಾಗಿದೆ. ಯಾರು ಅನೇಕರ ಕಲ್ಯಾಣ ಮಾಡುವರೋ ಅವರ ಕಲ್ಯಾಣ (ಉನ್ನತಿ) ವು ಸ್ವತಹ ಆಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ…..

ಓಂ ಶಾಂತಿ. ಮಕ್ಕಳ ಬುದ್ಧಿಯಲ್ಲಿ ಈಗ ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ ಎರಡೂ ಇದೆ ಏಕೆಂದರೆ ಮಕ್ಕಳಿಗೆ ತಿಳಿದಿದೆ – ಈಗ ಹಳೆಯ ಪ್ರಪಂಚದ ವಿನಾಶವಾಗಲಿದೆ ಮತ್ತು ಹೊಸ ಪ್ರಪಂಚವನ್ನು ತಂದೆಯೇ ರಚಿಸುತ್ತಾರೆ. ಮಕ್ಕಳಿಗೆ ತಿಳಿದಿದೆ, ಶಿವ ಜಯಂತಿಯನ್ನು ಆಚರಿಸುತ್ತಾರೆ, ಶಿವರಾತ್ರಿಯನ್ನೂ ಆಚರಿಸುತ್ತಾರೆ. ಎರಡೂ ಪದಗಳ ಅರ್ಥವು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ಶಿವ ಜಯಂತಿ ಅರ್ಥಾತ್ ಶಿವನ ಜನ್ಮ. ಈಗ ಇಲ್ಲಂತೂ ಮನುಷ್ಯರ ಜನ್ಮದಿನವನ್ನು ಆಚರಿಸುತ್ತಾರೆ. ಶಿವನ ಜನ್ಮವಂತೂ ಆಗುವುದೇ ಇಲ್ಲ. ಅವರು ಹೇಗೆ ಜನ್ಮ ಪಡೆಯುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಶ್ರೀಕೃಷ್ಣನಿಗಂತೂ ಜನ್ಮವಾಯಿತೆಂದು ಗಾಯನವಿದೆ ಆದರೆ ಶಿವ ಜಯಂತಿಯ ಪ್ರತಿ ಯಾವುದೆ ವರ್ಣನೆಯೇ ಇಲ್ಲ. ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ ಅಂದಾಗ ಸೂಕ್ಷ್ಮವತನದಲ್ಲಿ ಕುಳಿತು ಯಾರಿಗಾದರೂ ಪ್ರೇರಣೆ ನೀಡುತ್ತಾರೆಯೇ? ಇದು ಸಾಧ್ಯವಿಲ್ಲ. ಪತಿತ-ಪಾವನ ತಂದೆಯನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಯಾವಾಗ ತಂದೆಯೇ ಸ್ವಯಂ ಬಂದು ತಿಳಿಸುವರೋ ಆಗ ಮನುಷ್ಯರ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ಇದು ಡ್ರಾಮಾದಲ್ಲಿ ಇರುವ ಕಾರಣ ತಂದೆಯು ಸಂಗಮದಲ್ಲಿಯೇ ಬರಬೇಕಾಗಿದೆ. ಆ ತಂದೆಯು ಬಂದಿದ್ದಾರೆ ಎಂಬುದು ನೀವು ಮಕ್ಕಳಿಗೆ ತಿಳಿದಿದೆ ಆದರೆ ಈ ಮಾತನ್ನು ಇಲ್ಲಿಯವರೆಗೂ ತಿಳಿದುಕೊಳ್ಳುವವರು ಬಹಳ ವಿರಳ. ಪರಮಾತ್ಮನು ಬ್ರಹ್ಮನ ಮೂಲಕ ಭಾರತವನ್ನು ಪುನಃ ಶ್ರೇಷ್ಠಾಚಾರಿ ಸತ್ಯಯುಗೀ ಪ್ರಪಂಚವನ್ನಾಗಿ ಮಾಡುತ್ತಿದ್ದಾರೆಂದು ಯಾರೂ ತಮ್ಮ ಅಭಿಪ್ರಾಯವನ್ನು ಬರೆದುಕೊಡುವುದಿಲ್ಲ. ತಂದೆಯು ಬಂದಿದ್ದಾರೆ ಸ್ವರ್ಗದ ರಾಜಧಾನಿಯ ಆಸ್ತಿಯನ್ನು ಕೊಡುತ್ತಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂಬುದನ್ನು ಯಥಾರ್ಥವಾಗಿ ಯಾರೂ ತಿಳಿದುಕೊಂಡಿಲ್ಲ. ಸಾವಿರಾರು ಮಂದಿ ಬರುತ್ತಾರೆ, ಅದರಲ್ಲಿ ಕೆಲವರೇ ಪಕ್ಕಾ ಆಗುತ್ತಾರೆ. ಅವರಲ್ಲಿಯೂ ಬರುತ್ತಾ-ಬರುತ್ತಾ ಕಡಿಮೆಯಾಗತೊಡಗುತ್ತಾರೆ. ಎಷ್ಟೊಂದು ತಮೋಪ್ರಧಾನ ಬುದ್ಧಿಯಾಗಿದೆ, ಇಷ್ಟು ಸಹಜ ಮಾತನ್ನೂ ತಿಳಿದುಕೊಳ್ಳುವುದಿಲ್ಲ! ತಂದೆಯು ಹೇಳುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವುದು. ಇದು ಯೋಗಾಗ್ನಿಯಾಗಿದೆ. ಇದರಿಂದ ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ಯಾವುದೇ ವಿಕರ್ಮ ಮಾಡಬೇಡಿ, ವಿಕರ್ಮ ಮಾಡಿಸುವವನು ರಾವಣನಾಗಿದ್ದಾನೆ. ರಾವಣನ ಮತದಂತೆ ನಡೆಯಬೇಡಿ. ಯಾರಿಗೂ ದುಃಖ ಕೊಡಬೇಡಿ. ತಂದೆಯು ಪತಿತರನ್ನು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ – ನಿಮ್ಮದೂ ಸಹ ಇದೇ ಕರ್ತವ್ಯವಾಗಿದೆ. ಹಗಲು-ರಾತ್ರಿ ಇದೇ ಚಿಂತನೆ ಮಾಡಿರಿ – ನಾವು ಪತಿತರಿಗೆ ಪಾವನರಾಗುವ ಮಾರ್ಗವನ್ನು ಹೇಗೆ ತಿಳಿಸುವುದು! ಮಾರ್ಗವು ಬಹಳ ಸಹಜವಾಗಿದೆ, ಯೋಗಬಲದಿಂದಲೇ ನಾವು ಸತೋಪ್ರಧಾನರಾಗುತ್ತೇವೆ. ಇದು ಅವಿನಾಶಿ ಸರ್ಜನ್ನ ಔಷಧಿಯಾಗಿದೆ. ಇದು ಯಾವುದೆ ಮಂತ್ರವಲ್ಲ, ಇಲ್ಲಿ ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಎಷ್ಟು ಸ್ಪಷ್ಟವಾಗಿ ತಿಳಿಸುತ್ತಾರೆ! ಕಲ್ಪ-ಕಲ್ಪವೂ ಇದನ್ನು ತಿಳಿಸಿದ್ದರು. ಜ್ಞಾನ, ಭಕ್ತಿ, ವೈರಾಗ್ಯ ಎಂಬ ಮಾತಿದೆ ಅಂದಾಗ ಯಾವುದರ ವೈರಾಗ್ಯ? ಈ ಹಳೆಯ ಛೀ ಛೀ ಪ್ರಪಂಚದ ವೈರಾಗ್ಯ. ಹಳೆಯ ಪ್ರಪಂಚದಲ್ಲಿ ಸಂಪೂರ್ಣ ಪಾಪಾತ್ಮರಾಗಿ ಬಿಟ್ಟಿದ್ದಾರೆ. ಪತಿತ-ಪಾವನ ಮುಕ್ತಿದಾತ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಯಾವುದರಿಂದ ಮುಕ್ತ ಮಾಡಬೇಕಾಗಿದೆ? ದುಃಖದಿಂದ, ರಾವಣ ರಾಜ್ಯದಿಂದ. ರಾವಣನನ್ನು ಆಂಗ್ಲಭಾಷೆಯಲ್ಲಿ ಇವಿಲ್ (ಶೈತಾನ್) ಎಂದು ಹೇಳುತ್ತಾರೆ. ಆದ್ದರಿಂದ ಈ ಶೈತಾನನ ರಾಜ್ಯದಿಂದ ಮುಕ್ತ ಮಾಡಿ ಮನೆಗೆ ಕರೆದುಕೊಂಡು ಹೋಗಿರಿ. ನಮ್ಮ ಮಾರ್ಗದರ್ಶಕನಾಗಿ ಜೊತೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಹೇಗೆ ಯಾರಾದರೂ ಜೈಲಿನಿಂದ ಬಿಡಿಸಿ ಬಹಳ ಪ್ರೀತಿಯಿಂದ ಮನೆಗೆ ಕರೆದುಕೊಂಡು ಹೋಗುತ್ತಾರೆ. ಬೇಹದ್ದಿನ ತಂದೆಯು ಎಲ್ಲಾ ಮಕ್ಕಳಿಗೆ ಭರವಸೆ ನೀಡುತ್ತಾರೆ- ಮಕ್ಕಳೇ, ನಾನು ನಿಮ್ಮನ್ನು ಬಂಧನದಿಂದ ಬಿಡಿಸಲು ಬಂದಿದ್ದೇನೆ. ಮೇಳ, ಪ್ರದರ್ಶನಿಯಲ್ಲಿಯೂ ಇದನ್ನು ಮಾದರಿ ರೂಪದಲ್ಲಿ ತೋರಿಸಲಾಗಿದೆ – ಹೇಗೆ ಎಲ್ಲರೂ ಜೈಲಿನಲ್ಲಿದ್ದಾರೆ ಆದರೂ ಸಹ ಮನುಷ್ಯರು ತಿಳಿದುಕೊಳ್ಳುತ್ತಾರೆಯೇ! ತಂದೆಯು ಎಷ್ಟು ಸಹಜ ರೀತಿಯಲ್ಲಿ ತಿಳಿಸಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಕಳೆಯುತ್ತವೆ. ನೀವು ಸತ್ಯಯುಗದ ಮಾಲೀಕರಾಗುತ್ತೀರೆಂದು ತಿಳಿಸುತ್ತಾರೆ. ಇದು ಎಷ್ಟು ಸಹಜವಾಗಿದೆ. ಯಾವ ಧರ್ಮದವರಾದರೂ ತಿಳಿದುಕೊಳ್ಳಬಹುದು. ತಿಳಿಸಿರಿ, ಯಾವ ಧರ್ಮವು ಯಾವಾಗ ಸ್ಥಾಪನೆಯಾಗುತ್ತದೆ? ಅಂತಿಮದಲ್ಲಿ ಎಲ್ಲಾ ಆತ್ಮರು ತಮ್ಮ-ತಮ್ಮ ವಿಭಾಗಗಳಲ್ಲಿ ಹೋಗಿ ಸ್ಥಿತರಾಗುತ್ತಾರೆ ನಂತರ ಮೊದಲನೆಯದಾಗಿ ದೇವಿ-ದೇವತಾ ಧರ್ಮವು ಆರಂಭವಾಗುತ್ತದೆ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಬರೆಯಲಾಗಿದೆ, ತ್ರಿಮೂರ್ತಿಯ ಚಿತ್ರವು ಬಹಳ ಸುಂದರವಾಗಿದೆ. ತ್ರಿಮೂರ್ತಿ ಮತ್ತು ಸೃಷ್ಟಿಚಕ್ರದ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಬಹುದಾಗಿದೆ. ಇದನ್ನೂ ತಿಳಿಸಿದ್ದಾರೆ – ಒಂದು ಶಾಂತಿಧಾಮ, ಇನ್ನೊಂದು ಸುಖಧಾಮವಾಗಿದೆ ಮತ್ತು ಇದು ದುಃಖಧಾಮವಾಗಿದೆ. ಈ ದುಃಖಧಾಮದಿಂದ ವೈರಾಗ್ಯವಿರಬೇಕು. ಈಗ ಭಕ್ತಿಯ ರಾತ್ರಿಯು ಮುಗಿಯಿತು, ಸತ್ಯ-ತ್ರೇತಾಯುಗದ ದಿನವು ಆರಂಭವಾಗುತ್ತದೆ.

ತಂದೆಯು ತಿಳಿಸುತ್ತಾರೆ – ಈಗ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಆದ್ದರಿಂದ ಇದರೊಂದಿಗೆ ವೈರಾಗ್ಯವಿರಲಿ. ಅವರದು ಹದ್ದಿನ ವೈರಾಗ್ಯ, ನಿಮ್ಮದು ಬೇಹದ್ದಿನ ವೈರಾಗ್ಯವಿದೆ. ಸನ್ಯಾಸಿಗಳು ಹೊಸ ಪ್ರಪಂಚವನ್ನು ರಚಿಸುವುದಿಲ್ಲ. ರಚಯಿತನು ತಂದೆಯಾಗಿದ್ದಾರಲ್ಲವೆ. ಅವರಿಗೆ ಸ್ವರ್ಗ ಸ್ಥಾಪಕನೆಂದು ಹೇಳಲಾಗುತ್ತದೆ, ಮತ್ತ್ಯಾರಿಂದಲೂ ಸಾಧ್ಯವಿಲ್ಲ. ಈ ವಿದ್ಯೆಯು ಸತ್ಯಯುಗೀ ರಾಜಧಾನಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಇದೆ. ಜ್ಞಾನ ಸಾಗರನೇ ಬಂದು ಜ್ಞಾನವನ್ನು ಕೊಡುತ್ತಾರೆ. ಜ್ಞಾನಸಾಗರ, ಪತಿತ-ಪಾವನನೆಂದು ಅವರಿಗೇ ಹೇಳಲಾಗುತ್ತದೆ. ಯಾವುದರ ಜ್ಞಾನ? ಬ್ಯಾರಿಸ್ಟರ್, ಸರ್ಜನ್ ಆಗುವ ಜ್ಞಾನವೇ? ಪರಮಾತ್ಮನಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ಅದರಲ್ಲಿ ಎಲ್ಲಾ ಜ್ಞಾನವು ಬಂದು ಬಿಡುತ್ತದೆ – ಬ್ಯಾರಿಸ್ಟರಿ, ಇಂಜಿನಿಯರಿ ಮೊದಲಾದ ಎಲ್ಲದರ ಮೂಲ ಬೆಣ್ಣೆಯು ಈಶ್ವರೀಯ ಜ್ಞಾನವಾಗಿದೆ. ಆ ಲೌಕಿಕ ಜ್ಞಾನವನ್ನು ಓದುವುದು, ಇಂಜಿನಿಯರ್ ಇತ್ಯಾದಿ ಆಗುವುದು ದೊಡ್ಡ ಮಾತೇನೂ ಅಲ್ಲ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ, ಸತ್ಯಯುಗೀ ಹೊಸ ಪ್ರಪಂಚದ ರೀತಿ ಪದ್ಧತಿಗಳು ಏನಿರುವುದೋ ಅದೇ ಅಲ್ಲಿ ನಡೆಯುತ್ತದೆ. ನಾವು ಕಲ್ಪದ ಹಿಂದೆ ಹೇಗೆ ಮಹಲು ಇತ್ಯಾದಿಗಳನ್ನು ಕಟ್ಟಿಸಿದ್ದೆವೋ ಅದೇ ಪುನರಾವರ್ತನೆ ಮಾಡುತ್ತೇವೆ. ಅದಕ್ಕೆ ಸತ್ಯಯುಗವೆಂದು ಹೇಳಲಾಗುತ್ತದೆ. ಅಲ್ಲಿನ ರೀತಿ ಪದ್ಧತಿಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ಅಲ್ಲಿ ವಜ್ರ ವೈಡೂರ್ಯಗಳ ಮಹಲುಗಳಾಗುತ್ತವೆ. ದೇವತೆಗಳು 16 ಕಲಾ ಸಂಪೂರ್ಣರು, ಸಂಪೂರ್ಣ ನಿರ್ವಿಕಾರಿಗಳೆಂದೇ ಗಾಯನವಿದೆ. ಯಾವ ರೀತಿ-ನೀತಿಗಳಿರುವುದೋ ಅದರ ಅನುಸಾರವೇ ರಾಜ್ಯಭಾರ ನಡೆಯುವುದು. ಅದು ಡ್ರಾಮಾದಲ್ಲಿ ನಿಗಧಿತವಾಗಿದೆ. ಆತ್ಮರು ತಮ್ಮ ಪಾತ್ರವನ್ನೂ ಅಭಿನಯಿಸುತ್ತಾರೆ. ಮನೆಗಳನ್ನು ಹೇಗೆ ಕಟ್ಟಿಸುತ್ತಾರೆ, ಹೇಗೆ ಇರುತ್ತಾರೆ ಅದೆಲ್ಲವೂ ಮೊದಲೇ ನಿಗಧಿತವಾಗಿದೆ. ಹೇಗೆ ಈ ಹಳೆಯ ಪ್ರಪಂಚದ ರೀತಿನೀತಿಗಳು ನಡೆಯುತ್ತವೆಯೋ ಹಾಗೆಯೇ ಸತ್ಯಯುಗದ ರೀತಿನೀತಿಗಳು ಅಲ್ಲಿ ನಡೆಯುತ್ತವೆ. ಇಲ್ಲಿ ಅಸುರರಿದ್ದಾರೆ, ಅಲ್ಲಿ ದೇವತೆಗಳಿರುತ್ತಾರೆ. ಶಾಸ್ತ್ರಗಳಲ್ಲಿ ಈ ಮಾತುಗಳೇನೂ ಇಲ್ಲ. ಜ್ಞಾನ ಮತ್ತು ಭಕ್ತಿ. ಬ್ರಹ್ಮನ ದಿನ, ಬ್ರಹ್ಮನ ರಾತ್ರಿಯೆಂದು ಹೇಳುತ್ತಾ ಇರುತ್ತಾರೆ. ಬ್ರಹ್ಮನ ಹೆಸರನ್ನೇ ತೆಗೆದುಕೊಳ್ಳುತ್ತಾರೆ, ವಿಷ್ಣುವಿನದಲ್ಲ. ಬ್ರಹ್ಮನೇ ವಿಷ್ಣುವಾಗುತ್ತಾರೆ. ಬ್ರಹ್ಮಾ-ಸರಸ್ವತಿಯು ವಿಷ್ಣುವಿನ ಎರಡು ರೂಪ ಲಕ್ಷ್ಮೀ-ನಾರಾಯಣರಾಗಿದ್ದಾರೆ ಆದ್ದರಿಂದ ತಂದೆಯು ತಿಳಿಸಿದ್ದಾರೆ, ಲಕ್ಷ್ಮೀ-ನಾರಾಯಣರೇ 84 ಜನ್ಮಗಳ ನಂತರ ಬ್ರಹ್ಮಾ-ಸರಸ್ವತಿಯಾಗುತ್ತಾರೆ. ರಾಜಯೋಗದ ತಪಸ್ಸನ್ನು ಇಲ್ಲಿಯೇ ಮಾಡುತ್ತಾರೆ. ಸೂಕ್ಷ್ಮ ವತನದಲ್ಲಿ ಅಲ್ಲ. ಯಜ್ಞ ಇತ್ಯಾದಿಗಳನ್ನೂ ಇಲ್ಲಿಯೇ ರಚಿಸಲಾಗುತ್ತದೆ, ತಂದೆಯು ತಿಳಿಸುತ್ತಾರೆ – ಇದು ಅಂತಿಮ ಯಜ್ಞವಾಗಿದೆ, ಇದರ ನಂತರ ಸತ್ಯ-ತ್ರೇತಾಯುಗದಲ್ಲಿ ಯಾವುದೇ ಯಜ್ಞವಾಗುವುದಿಲ್ಲ. ಇಲ್ಲಿ ಭಿನ್ನ-ಭಿನ್ನ ಪ್ರಕಾರ ಯಜ್ಞಗಳನ್ನು ರಚಿಸುತ್ತಾರೆ. ಮಳೆಯಾಗದಿದ್ದರೆ ಯಜ್ಞವನ್ನು ರಚಿಸುತ್ತಾರೆ, ಯಾವುದೇ ದುಃಖ ಬಂದರೂ ಸಹ ಯಜ್ಞವನ್ನು ರಚಿಸುತ್ತಾರೆ. ಯಜ್ಞದಿಂದ ದುಃಖವು ದೂರವಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಇದಂತೂ ಎಲ್ಲದಕ್ಕಿಂತ ದೊಡ್ಡ ಯಜ್ಞವಾಗಿದೆ. ಯಾವ ಜ್ಞಾನ ಯಜ್ಞದಿಂದ ಇಡೀ ಸೃಷ್ಟಿಯ ದುಃಖವು ದೂರವಾಗುತ್ತದೆ. ಇದು ರಾಜಸ್ವ ಅಶ್ವಮೇಧ ಅವಿನಾಶಿ ಜ್ಞಾನ ಯಜ್ಞವಾಗಿದೆ. ಎಲ್ಲವೂ ಇದರಲ್ಲಿ ಸ್ವಾಹಾ ಆಗಿ ಬಿಡುತ್ತದೆ. ಎಷ್ಟು ಚೆನ್ನಾಗಿ ತಿಳಿಸಲಾಗುತ್ತದೆ. ದೆಹಲಿಯಲ್ಲಿ ಮಂಟಪ ಮಾಡಿ ಮೇಳ ಮಾಡಿದ್ದಾರೆ. ಇದೂ ಸಹ ಒಳ್ಳೆಯದಾಗಿದೆ. ಮಂಟಪವನ್ನು ಮಾಡುವುದರಲ್ಲಿ ನಿಧಾನವಾಗುವುದಿಲ್ಲ. ಈ ಹಾಲ್ನ್ನು ಮಾಡಿಸುವುದಕ್ಕಾಗಿ ಎಷ್ಟು ಪರಿಶ್ರಮ ಪಡಬೇಕಾಗುತ್ತದೆ ಆದರೆ ಇದಕ್ಕಿಂತಲೂ ನಮ್ಮದೇ ಶೈಲಿಯಲ್ಲಿ ಮಂಟಪವನ್ನು ತಯಾರಿಸಿ. ಚಿಕ್ಕ-ಚಿಕ್ಕ ಹಳ್ಳಿಗಳಲ್ಲಿ ಚಿಕ್ಕ ಮಂಟಪವನ್ನು ತಯಾರು ಮಾಡಿ. ಹಳ್ಳಿಗಳಲ್ಲಿ ವಿದ್ಯುತ್ ಇಲ್ಲದಿದ್ದರೆ ದಿನದಲ್ಲಿ ಬೇಕಾದರೂ ಪ್ರದರ್ಶನಿಯನ್ನು ಇಡಬಹುದು ಆದ್ದರಿಂದ ನಮ್ಮದೇ ಆದ ಸಾಮಾನುಗಳಿರಲಿ. ಬಾಡಿಗೆಗೆ ಏಕೆ ತೆಗೆದುಕೊಳ್ಳುವುದು! ತಂದೆಯು ಪ್ರದರ್ಶನಿ ಕಮಿಟಿಗೆ ಸಲಹೆ ನೀಡುತ್ತಿದ್ದಾರೆ. ವಾಟರ್ ಪ್ರೂಫ್ ಮಂಟಪವನ್ನು ಮಾಡಿಸಿರಿ, ಭಲೆ ಮಳೆ ಬಂದರೂ ಏನೂ ಆಗುವುದಿಲ್ಲ. ಬಾಬಾರವರು ದೆಹಲಿಗೆ ಹೋಗಿದ್ದಾಗ ಚಳಿಯಲ್ಲಿಯೂ ಮಂಟಪದಲ್ಲಿ ಹೋಗಿ ಭಾಷಣ ಮಾಡುತ್ತಿದ್ದರು. ಚಳಿಗಾಲಕ್ಕಾಗಿ ಎಲ್ಲರಿಗೂ ಬೆಚ್ಚನೆಯ ವಸ್ತ್ರಗಳಿವೆ. ಪ್ರದರ್ಶನಿಗಾಗಿ ನೀವು ಎಷ್ಟು ಮಂಟಪಗಳನ್ನು ಬೇಕಾದರೂ ಮಾಡಬಹುದು. ಯಾರು ವಿಘ್ನಗಳನ್ನು ಹಾಕದಂತೆ ಇನ್ಶೂರೆನ್ಸ್ ಮಾಡಿಸಿ ಬಿಡಿ. ಸರ್ವೀಸನ್ನು ಮಾಡಬೇಕಲ್ಲವೆ. ತಿಳಿಸಲೂ ಬೇಕಾಗಿದೆ, ತಂದೆಯ ಪೂರ್ಣ ಪರಿಚಯ ಕೊಡಬೇಕಾಗಿದೆ. ಈಗಂತೂ ನಾವು ತಂದೆಯ ಜೊತೆಯಿದ್ದೇವೆ, ಜ್ಞಾನ ಸಾಗರ ತಂದೆಯಿಂದ ನಮಗೆ ಜ್ಞಾನವು ಸಿಗುತ್ತಿದೆ, ಸತ್ಯಯುಗದಲ್ಲಿ ಜ್ಞಾನದ ಅವಶ್ಯಕತೆಯಿರುವುದಿಲ್ಲ. ತಂದೆಯು ತಿಳಿಸುತ್ತಾರೆ – ನಾನು ಸದ್ಗತಿಗಾಗಿ ಬಂದಿದ್ದೇನೆ, ಮತ್ತೆ ರಾವಣನಿಂದ ದುರ್ಗತಿಯಾಗುತ್ತದೆ. ಸದ್ಗತಿದಾತನು ಒಬ್ಬ ತಂದೆಯೇ ಆಗಿದ್ದಾರೆ. ಎಷ್ಟು ಸ್ಪಷ್ಟವಾಗಿ ತಿಳಿಸಲಾಗುತ್ತದೆ ಆದರೆ ಮನುಷ್ಯರು ಇದನ್ನು ತಿಳಿದುಕೊಳ್ಳದೇ ಕೇವಲ ಇದು ಮನುಷ್ಯರಿಗಾಗಿ ಬಹಳ ಚೆನ್ನಾಗಿದೆ ಎಂದಷ್ಟೇ ಹೇಳಿ ಬಿಡುತ್ತಾರೆ. ತಾನು ತಿಳಿದುಕೊಳ್ಳಲು ಬಿಡುವಿಲ್ಲವೆಂದು ಹೇಳುತ್ತಾರೆ. ದೊಡ್ಡ-ದೊಡ್ಡವರಿಗೂ ಸಹ ಹೋಗಿ ಎಷ್ಟೊಂದು ತಿಳಿಸುತ್ತೀರಿ. ತಂದೆಯು ಹೇಗೆ ಶ್ರೇಷ್ಠಾಚಾರಿ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ ಎಂಬುದನ್ನಾದರೂ ತಿಳಿದುಕೊಳ್ಳಿ. ಶ್ರೇಷ್ಠಾಚಾರಿಗಳನ್ನಾಗಿ ಮಾಡುವುದು ತಂದೆಯ ಕರ್ತವ್ಯವಾಗಿದೆ ಆದ್ದರಿಂದಲೇ ತಂದೆಯನ್ನು ಕರೆಯುತ್ತಾರೆ. ದುಃಖ ದೂರ ಮಾಡಿ ಸುಖ ನೀಡಿ ಎಂದು ಹೇಳುತ್ತಾ ಇರುತ್ತಾರೆ. ತಂದೆಯು ಬಂದು ಬಿಟ್ಟರೆ ನಾವು ಬಲಿಹಾರಿಯಾಗುತ್ತೇವೆ, ಶ್ರೀಮತದಂತೆ ನಡೆಯುತ್ತೇವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ ಆದರೆ ತಂದೆಯ ಶ್ರೀಮತದಂತೆ ನಡೆಯುವುದೇ ಇಲ್ಲ. ಭಗವಂತ ಎಂದರೆ ಯಾರು ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಅರೆ! ಪತಿತ-ಪಾವನ ಭಗವಂತನಂತೂ ಒಬ್ಬರೇ ಆಗಿದ್ದಾರಲ್ಲವೆ. ಅವರು ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ! ಹಾಗಿದ್ದರೆ ಎಲ್ಲರೂ ಭಗವಂತನೆಂದು ಕರೆಸಿಕೊಳ್ಳುವರು. ಭಗವಂತನು ಚಿಕ್ಕವರು, ದೊಡ್ಡವರು ಆಗುವುದಿಲ್ಲ. ಪ್ರದರ್ಶನಿಯಲ್ಲಿ ಇದನ್ನೂ ತೋರಿಸಲಾಗಿದೆ – ಕೆಲವರು ಮಾಂಸ, ಮಧ್ಯಗಳನ್ನು ಸೇವಿಸುತ್ತಾರೆ. ಕೆಲವರು ಹೊಡೆದಾಡುತ್ತಾರೆ….. ಇವೆಲ್ಲವನ್ನೂ ಭಗವಂತನು ಮಾಡುತ್ತಾರೆಯೇ! ಆ ಸಮಯದಲ್ಲಿ ಮನುಷ್ಯರು ಖುಷಿಯಾಗಿ ಹೋಗುತ್ತಾರೆ. ಹೊರಗೆ ಹೋದ ಕೂಡಲೇ ಇಲ್ಲಿಯ ಮಾತು ಇಲ್ಲಿಯೇ ಉಳಿದುಕೊಳ್ಳುತ್ತದೆ. ಅಂತಹವರು ಕೇವಲ ಪ್ರಜೆಗಳಾಗುತ್ತಾರೆ. ರಾಜರಾಗುವುದಕ್ಕಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೀರಿ! ರಾಜರಾಗಲು ಎಲ್ಲರೂ ಕೈಯೆತ್ತುತ್ತುತ್ತಾರೆ. ಮತ್ತೆ 5-7 ದಿನಗಳ ನಂತರ ನೋಡಿದರೆ ಅಲ್ಲಿ ಇರುವುದೇ ಇಲ್ಲ. ಮಾಯೆಯು ಎಷ್ಟು ಪ್ರಬಲವಾಗಿದೆ! ಬಹು ಬೇಗನೆ ಸಿಕ್ಕಿ ಹಾಕಿಸಿ ಬಿಡುತ್ತದೆ. ರಾಜಧಾನಿಯನ್ನು ಸ್ಥಾಪನೆ ಮಾಡುವುದು ಎಷ್ಟು ಕಷ್ಟವಿದೆ. ಧರ್ಮ ಸ್ಥಾಪನೆ ಮಾಡುವುದರಲ್ಲಿ ಕಷ್ಟವಿಲ್ಲ, ಅಲ್ಲಿ ಅಸುರರ ವಿಘ್ನಗಳು ಬರುವುದಿಲ್ಲ. ಇಲ್ಲಿ ಮಕ್ಕಳು ನಾವು ವಿವಾಹವಾಗುವುದಿಲ್ಲ ಎಂದು ಹೇಳುತ್ತಾರೆ. ವಿವಾಹ ಮಾಡಿಕೊಳ್ಳಲೇಬೇಕು. ವಿವಾಹವಿಲ್ಲದೆ ಪ್ರಪಂಚವು ಹೇಗೆ ನಡೆಯುವುದು ಎಂದು ಅವರ ತಂದೆಯು ಹೇಳುತ್ತಾರೆ. ಎಷ್ಟೊಂದು ವಿಘ್ನಗಳು ಬರುತ್ತವೆ. ಅರೆ! ವಿವಾಹವಾಗುವುದೇ ಇರುವುದೇ ಒಳ್ಳೆಯದಲ್ಲವೆ. ವಿವಾಹ ಮಾಡಿಕೊಳ್ಳದೇ ಇದ್ದರೆ ಮಕ್ಕಳೂ ಆಗುವುದಿಲ್ಲ. ಜನಸಂಖ್ಯಾ ನಿಯಂತ್ರಣವಾಗುತ್ತದೆ. ಯಾರು ಮಾಡುವರೋ ಅವರು ಪಡೆಯುವರು. ಮುಂದೆ ಹೋದಂತೆ ಅವರು ಬಹಳ ಬೇಗ-ಬೇಗ ತಯಾರಾಗುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಹೇಗೆ ಕಲ್ಪದ ಹಿಂದೆ ಸ್ಥಾಪನೆಯಾಗಿತ್ತೊ ಹಾಗೆಯೇ ಆಗುವುದು. ಯಾವ ದಿನವು ಕಳೆದು ಹೋಯಿತೋ ಅದು ಕಲ್ಪದ ಹಿಂದಿನಂತೆ ಕಳೆಯಿತು. ರಾತ್ರಿಯಲ್ಲಿ ಮಲಗುವಾಗ ವಿಚಾರ ನಡೆಯುತ್ತದೆ – ಇಂದು ಇಡೀ ದಿನ ಏನು ಕಳೆದು ಹೋಯಿತು ಅದು ಡ್ರಾಮಾನುಸಾರ, ಮತ್ತೆ ನಾಳೆ ಏನಾಗಬೇಕಾಗಿದೆಯೋ ಅದೂ ಡ್ರಾಮಾನುಸಾರ ಆಗುವುದು. ಇದು ಡ್ರಾಮಾ ಆಗಿದೆ, ಇದರ ಆದಿ-ಮಧ್ಯ-ಅಂತ್ಯ ಏನಾಗಿದೆ ಎಂಬುದು ನಿಮ್ಮ ವಿನಃ ಮತ್ತ್ಯಾರಿಗೂ ತಿಳಿದಿಲ್ಲ. ನಿಮಗೆ ತಿಳಿದಿದೆ, ನೀವು ಪುರುಷಾರ್ಥ ಮಾಡುತ್ತೀರಿ ಮತ್ತೆಲ್ಲರೂ ಘೋರ ಅಂಧಕಾರದಲ್ಲಿದ್ದಾರೆ. ಏನೆಲ್ಲಾ ಪಾತ್ರವು ನಡೆಯುತ್ತದೆಯೋ ಡ್ರಾಮಾನುಸಾರ ನಡೆಯುತ್ತದೆ. ಇಂದು ಇಲ್ಲಿ ಕುಳಿತಿದ್ದೀರಿ ಮತ್ತು ನಾಳೆ ರೋಗಿಯಾಗಿಬಿಟ್ಟರೆ ಅದನ್ನೂ ಸಹ ಡ್ರಾಮಾನುಸಾರ ಅನುಭವಿಸಬೇಕಾಗಿದೆ. ಕಲ್ಪ-ಕಲ್ಪವೂ ಇದೇರೀತಿ ಆಗುವುದು. ಸೃಷ್ಟಿ ನಾಟಕದ ಜ್ಞಾನವು ಬುದ್ಧಿಯಲ್ಲಿ ಇರುವುದರಿಂದ ಯಾವುದೇ ಚಿಂತೆಯಾಗುವುದಿಲ್ಲ. ವಿಘ್ನಗಳು ಬರುತ್ತವೆ, ಕೆಲಸಗಳು ತಡವಾಗುತ್ತವೆ ಆದರೂ ಸಹ ಕಲ್ಪ-ಕಲ್ಪವೂ ಇದೇರೀತಿ ಆಗುವುದು ಎಂದು ತಿಳಿಯುತ್ತೇವೆ. ಶ್ರೇಷ್ಠ ಪದವಿಯನ್ನು ಪಡೆಯಲು ಬಹಳ ಪುರುಷಾರ್ಥ ಮಾಡಬೇಕಾಗಿದೆ. ನೋಡಿಕೊಳ್ಳಿ, ನಾವು ಮೇಲೆರುತ್ತಿದ್ದೇವೆಯೇ? ತಂದೆಯ ಸೇವೆ ಮಾಡುತ್ತೇವೆಯೇ ಅಥವಾ ಒಂದು ಜಾಗದಲ್ಲಿ ನಿಂತು ಬಿಟ್ಟಿದ್ದೇವೆಯೇ? ನಾವು ಅನ್ಯರ ಕಲ್ಯಾಣ ಮಾಡುತ್ತೇವೆಯೇ? ಅನೇಕರ ಕಲ್ಯಾಣ ಮಾಡಿದರೆ ನಮ್ಮ ಕಲ್ಯಾಣವೂ ಆಗುವುದು. ಯಾವಾಗ ಪರೀಕ್ಷೆಯು ಮುಗಿಯುವುದೋ ಆಗ ನಾವು ಇಂತಹ ಪದವಿಯನ್ನು ಪಡೆಯುತ್ತೇವೆಂದು ಎಲ್ಲವೂ ಅರ್ಥವಾಗುವುದು. ಕಲ್ಪ-ಕಲ್ಪಾಂತರದ ಆಟವಾಗಿದೆ. ನಂತರ ಕೊನೆಯಲ್ಲಿ ನಾವು ಇಷ್ಟು ಸಮಯ ಏಕೆ ಪುರುಷಾರ್ಥ ಮಾಡಲಿಲ್ಲ? ತಂದೆಯ ಶ್ರೀಮತದಂತೆ ಏಕೆ ನಡೆಯಲಿಲ್ಲವೆಂದು ಬಹಳ ಪಶ್ಚಾತ್ತಾಪ ಪಡುವರು ಆದ್ದರಿಂದಲೇ ತಂದೆಯು ಕೇವಲ ತಿಳಿಸುತ್ತಾರೆ – ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿರಿ ಎಂದು ಎಷ್ಟು ಪ್ರೀತಿಯಿಂದ ಹೇಳುತ್ತಾರೆ. ಅನ್ಯರಿಗೂ ಮಾರ್ಗವನ್ನು ತಿಳಿಸುವ ಸರ್ವೀಸ್ ಮಾಡಿರಿ. ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಏಕೆ ಪಡೆಯಬಾರದು! ಅಂತಹವರಿಗೆ ಬುದ್ಧಿವಂತ ಸುಪುತ್ರರೆಂದು ಹೇಳಲಾಗುವುದು. ಓದಿಸುವವರೂ ಸಹ ತಿಳಿದುಕೊಳ್ಳುತ್ತಾರೆ – ಇವರು ಶ್ರೀಮತದಂತೆ ನಡೆಯುವುದಿಲ್ಲ, ಅನ್ಯರ ಕಲ್ಯಾಣ ಮಾಡುವುದಿಲ್ಲ ಅಂದಮೇಲೆ ಅವಶ್ಯವಾಗಿ ಕಡಿಮೆ ಪದವಿ ಸಿಗುವುದು. ಅನೇಕರಿಗೆ ಎಷ್ಟು ಮಾರ್ಗ ತಿಳಿಸುವಿರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಮಗಾಗಿ ಸರ್ವೀಸ್ ಮಾಡಬೇಕಾಗಿದೆ. ಯಾರು ಮಾಡುವರೋ ಅವರು ಪಡೆಯುವರು ಅಂದಮೇಲೆ ನಾವೂ ಇಂತಹ ಸರ್ವೀಸ್ ಮಾಡಬೇಕು ಎಂದು ಪುರುಷಾರ್ಥ ಮಾಡಬೇಕು. ಎಲ್ಲಿಯಾದರೂ ಪ್ರದರ್ಶನಿಯನ್ನು ಇಟ್ಟರೆ ಅಲ್ಲಿ ಅರ್ಧದಿನ ರಜೆ ಹಾಕಿಯಾದರೂ ಸರ್ವೀಸ್ ಮಾಡುತ್ತಾರೆ. ಕೆಲವರು ಪೂರ್ಣ ದಿನ ರಜೆ ಹಾಕಿ ಸರ್ವೀಸ್ ಮಾಡುತ್ತಾರೆ. ಆದ್ದರಿಂದ ತಂದೆಯು ಹೇಳುತ್ತಾರೆ, ಅಂತಹವರಿಗೆ ಅವರ ಮಕ್ಕಳು ಮೊದಲಾದವರಿಗಾಗಿ ಏನು ಬೇಕೋ ಅದನ್ನು ಕಳುಹಿಸಿಕೊಡಿ. ಶರೀರ ನಿರ್ವಹಣೆಯನ್ನಂತೂ ಸಾವಿರ ರೂಪಾಯಿಗಳಿಂದಲೂ ಮಾಡಬಹುದು, ಕೇವಲ 10 ರೂಪಾಯಿಗಳಿಂದಲೂ ಮಾಡಬಹುದು. ಯಾರ ಬಳಿಯಾದರೂ ಬಹಳ ಹಣವಿದ್ದರೆ ಲಕ್ಷಾಂತರ ರೂಪಾಯಿಗಳನ್ನೂ ಶರೀರ ನಿರ್ವಹಣೆಗಾಗಿ ಖರ್ಚು ಮಾಡುತ್ತಾರೆ. ತಂದೆಯು ಹೇಳುವುದೇನೆಂದರೆ ಭಲೆ ನೀವು ಹುಲ್ಲನ್ನು ಕತ್ತರಿಸುವಾಗಲೂ ಕೇವಲ ತಂದೆಯನ್ನು ನೆನಪು ಮಾಡಿರಿ. ಇದರಿಂದ 21 ಜನ್ಮಗಳಿಗಾಗಿ ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಎಲ್ಲಾ ಚಿಂತೆಗಳಿಂದ ಮುಕ್ತರಾಗಲು ಡ್ರಾಮಾದ ಜ್ಞಾನವನ್ನು ಯಥಾರ್ಥ ರೀತಿಯಿಂದ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಏನು ಕಳೆಯಿತೊ ಅದು ಕಲ್ಪದ ಹಿಂದಿನಂತೆ.

2. ಹಗಲು-ರಾತ್ರಿ ಇದೇ ಚಿಂತನೆ ಮಾಡಬೇಕಾಗಿದೆ – ನಾವು ಪತಿತರನ್ನು ಪಾವನರನ್ನಾಗಿ ಮಾಡುವ ಮಾರ್ಗವನ್ನು ಹೇಗೆ ತಿಳಿಸುವುದು! ಶ್ರೀಮತದಂತೆ ತನ್ನ ಹಾಗೂ ಅನ್ಯರ ಕಲ್ಯಾಣ ಮಾಡಬೇಕಾಗಿದೆ.

ವರದಾನ:-

ಸಂಗಮಯುಗದಲ್ಲಿ ಸದಾ ತಮ್ಮನ್ನು ಡಬಲ್ ಕಿರೀಟಧಾರಿ ಎಂದು ತಿಳಿದುಕೊಂಡು ನಡೆಯಿರಿ – 1. ಲೈಟ್ ಅರ್ಥಾತ್ ಪವಿತ್ರತೆಯ ಕಿರೀಟ ಹಾಗೂ 2. ಜವಾಬ್ದಾರಿಯ ಕಿರೀಟ. ಪವಿತ್ರತೆ ಹಾಗೂ ಶಕ್ತಿ – ಲೈಟ್ ಹಾಗೂ ಮೈಟ್ನ ಕಿರೀಟವನ್ನು ಧರಿಸುವವರಲ್ಲಿ ಡಬಲ್ ಫೋರ್ಸ್(ಶಕ್ತಿ) ಸದಾ ಕಾಯಂ ಆಗಿರುತ್ತದೆ. ಇಂತಹ ಡಬಲ್ ಫೋರ್ಸ್ ಇರುವಂತಹ ಆತ್ಮರು ಸದಾ ಶಕ್ತಿಶಾಲಿ ಆಗಿರುತ್ತಾರೆ. ಅಂತಹವರಿಗೆ ಸದಾ ಸೇವೆ ಅಥವಾ ಪುರುಷಾರ್ಥದಲ್ಲಿ ಸಫಲತೆಯ ಪ್ರಾಪ್ತಿಯಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top