23 November 2021 KANNADA Murli Today | Brahma Kumaris

Read and Listen today’s Gyan Murli in Kannada

November 22, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಡ್ರಾಮಾದಲ್ಲಿ ನೀವು ಹೀರೋ-ಹೀರೋಯಿನ್ ಪಾತ್ರಧಾರಿಗಳಾಗಿದ್ದೀರಿ, ಇಡೀ ಕಲ್ಪದಲ್ಲಿ ನಿಮ್ಮಂತಹ ಹೀರೊ ಪಾತ್ರವು ಮತ್ತ್ಯಾರದೂ ಇಲ್ಲ”

ಪ್ರಶ್ನೆ:: -

ಮನುಷ್ಯರಿಂದ ದೇವತೆಗಳಾಗುವ ಪರೀಕ್ಷೆಯನ್ನು ಯಾರು ತೇರ್ಗಡೆ ಮಾಡಬಲ್ಲರು?

ಉತ್ತರ:-

ಯಾರು ತಂದೆಯನ್ನು ಫಾಲೋ ಮಾಡಿ, ತಂದೆಯ ಸಮಾನ ಪವಿತ್ರರಾಗುವರೋ ಅವರೇ ಈ ಪರೀಕ್ಷೆಯನ್ನು ತೇರ್ಗಡೆ ಮಾಡಬಲ್ಲರು. 21 ಜನ್ಮಗಳ ಬೇಹದ್ದಿನ ಆಸ್ತಿಯು ಸಿಗುತ್ತದೆ ಅಂದಮೇಲೆ ಅವಶ್ಯವಾಗಿ ಸ್ವಲ್ಪ ಪರಿಶ್ರಮ ಪಡಬೇಕಾಗುವುದು. ಈಗ ಪರಿಶ್ರಮ ಪಡಲಿಲ್ಲವೆಂದರೆ ಕಲ್ಪ-ಕಲ್ಪವೂ ಪಡುವುದಿಲ್ಲ ಮತ್ತೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವಿರಿ! ಪವಿತ್ರರಾದರೆ ಒಳ್ಳೆಯ ಪದವಿಯನ್ನು ಪಡೆಯುತ್ತೀರಿ. ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೊಂದಿಗೆ ತಂದೆಯು ಸನ್ಮುಖದಲ್ಲಿ ಮಾತನಾಡುತ್ತಿದ್ದಾರೆ. ಮಕ್ಕಳೂ ಸಹ ತಿಳಿದುಕೊಂಡಿರುತ್ತೀರಿ – ನಮ್ಮ ಜೊತೆ ಬೇಹದ್ದಿನ ತಂದೆಯು ಮಾತನಾಡುತ್ತಿದ್ದಾರೆ, ಅವರು ಎಲ್ಲರಿಗಿಂತ ಅತಿ ಮಧುರವಾಗಿದ್ದಾರೆ. ತಂದೆಯು ಮಧುರರಾಗಿರುತ್ತಾರೆ, ಶಿಕ್ಷಕರು ಮಧುರರಾಗಿರುತ್ತಾರೆ ಏಕೆಂದರೆ ಇಬ್ಬರಿಂದಲೂ ಆಸ್ತಿಯು ಸಿಗುತ್ತದೆ. ಗುರುವಿನಿಂದ ಭಕ್ತಿಯ ಆಸ್ತಿಯು ಸಿಗುತ್ತದೆ. ಇಲ್ಲಂತೂ ಒಬ್ಬರಲ್ಲಿಯೇ ಮೂವರು ಸಿಗುತ್ತಾರೆ, ಖುಷಿಯೂ ಇರುತ್ತದೆ. ನೀವು ಅವರ ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ – ಬೇಹದ್ದಿನ ತಂದೆ ಯಾರಿಗೆ ಪತಿತ-ಪಾವನನೆಂದು ಹೇಳಲಾಗುತ್ತದೆಯೋ ಅವರೇ ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ, ಆ ಬೀಜವು ಜಡವಾಗಿರುತ್ತದೆ ಇವರು ಚೈತನ್ಯವಾಗಿದ್ದಾರೆ. ಇವರಿಗೆ ಸತ್ಚಿತ್ ಆನಂದ ಸ್ವರೂಪನೆಂದು ಹೇಳಲಾಗುತ್ತದೆ ಮತ್ತೆ ಅವರಿಗೆ ಮಹಿಮೆಯೂ ಇದೆ. ಅವರು ಜ್ಞಾನ ಸಾಗರನಾಗಿದ್ದಾರೆ ಆದರೆ ಅವರಿಂದ ಯಾವ ಜ್ಞಾನವು ಸಿಗುತ್ತದೆಯೆಂಬುದು ಯಾರಿಗೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ, ಯಾರಿಗೆ ತಂದೆಯು ಜ್ಞಾನವನ್ನು ಕೊಡುತ್ತಿದ್ದಾರೆಯೋ ಅವರೇ ಭಕ್ತಿಮಾರ್ಗದಲ್ಲಿ ಇವರ ಮಂದಿರ, ಶಾಸ್ತ್ರ ಇತ್ಯಾದಿಗಳನ್ನು ರಚಿಸುತ್ತಾರೆ. ಇದನ್ನೂ ತಿಳಿದುಕೊಂಡಿದ್ದೀರಿ – ಅವಶ್ಯವಾಗಿ ಪ್ರತೀ 5000 ವರ್ಷಗಳ ನಂತರ ಈ ಕಲ್ಪದ ಸಂಗಮವು ಬರುತ್ತದೆ. ಇದಕ್ಕೆ ಆತ್ಮಿಕ ಅವಿನಾಶಿ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಉತ್ತಮ ಪುರುಷರು ಅನೇಕರಿರುತ್ತಾರೆ ಆದರೆ ಅವರು ಒಂದು ಜನ್ಮದಲ್ಲಿ ಉತ್ತಮ ಪುರುಷಾಗಿರುತ್ತಾರೆ ನಂತರ ಮಧ್ಯಮ, ಕನಿಷ್ಠರಾಗಿ ಬಿಡುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನು ನೋಡಿ, ಎಷ್ಟು ಉತ್ತಮ ಪುರುಷರಾಗಿದ್ದಾರೆ! ಇವರು ಪುರುಷೋತ್ತಮ ಮತ್ತು ಪುರುಷೋತ್ತಮೆ ಆಗಿದ್ದಾರೆ. ಇಬ್ಬರನ್ನೂ ಇಷ್ಟು ಉತ್ತಮರನ್ನಾಗಿ ಯಾರು ಮಾಡಿದರು! ಶ್ರೇಷ್ಠಾತಿ ಶ್ರೇಷ್ಠರು ಭಗವಂತನಾಗಿದ್ದಾರೆಂದು ಗಾಯನವಿದೆ, ಅವರು ಪರಮಧಾಮದಲ್ಲಿ ಇರುತ್ತಾರೆ. ಮನುಷ್ಯ ಸೃಷ್ಟಿಯಲ್ಲಿ ಶ್ರೇಷ್ಠಾತಿ ಶ್ರೇಷ್ಠರು ಈ ವಿಶ್ವ ಮಹಾರಾಜ -ಮಹಾರಾಣಿಯಾಗಿದ್ದಾರೆ. ಇವರು ಶ್ರೇಷ್ಠಾತಿ ಶ್ರೇಷ್ಠ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರು ಈ ರಾಜ್ಯವನ್ನು ಹೇಗೆ ಪಡೆದರು! ಇದು ಯಾರಿಗೂ ತಿಳಿದಿಲ್ಲ. ತಂದೆಯು ನಿಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರು ಎಷ್ಟು ಪ್ರಿಯರೆನಿಸಬೇಕು! ಅವರ ಮತದಂತೆ ನಡೆಯಬೇಕಾಗಿದೆ. ಇಷ್ಟು ಶ್ರೇಷ್ಠ ವಿಶ್ವದ ಮಾಲೀಕರನ್ನಾಗಿ ಮಾಡುವಂತಹ ತಂದೆಯು ಎಷ್ಟು ಸಾಧಾರಣ ರೀತಿಯಿಂದ ಓದಿಸುತ್ತಾರೆ! ಇದನ್ನೂ ಸಹ ತಿಳಿದುಕೊಂಡಿದ್ದೀರಿ – ಬೇಹದ್ದಿನ ತಂದೆಯು ಭಾರತದಲ್ಲಿ ಬರುತ್ತಾರೆ. ಇಲ್ಲಿ ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಈಗ ಸ್ಮೃತಿ ಬಂದಿದೆ – ನಾವು ಸ್ವರ್ಗವಾಸಿಗಳು 84 ಜನ್ಮಗಳನ್ನು ಪಡೆದು ನರಕವಾಸಿಗಳಾಗಿದ್ದೇವೆ. ಪುನಃ ಸ್ವರ್ಗವಾಸಿಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗುವುದು. ಸತೋಪ್ರಧಾನರಾಗದೇ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಶಿಕ್ಷೆಯೂ ಸಹ ಆತ್ಮಕ್ಕೇ ಸಿಗುತ್ತದೆಯಲ್ಲವೆ. ಗರ್ಭ ಜೈಲಿನಲ್ಲಿ ಶರೀರ ಧಾರಣೆ ಮಾಡಿಸಿ ನಂತರ ಶಿಕ್ಷೆ ಕೊಡುತ್ತಾರೆ. ಮಕ್ಕಳೇ, ಬಹಳ ದುಃಖವನ್ನು ಅನುಭವಿಸಬೇಕಾಗುತ್ತದೆ. ತ್ರಾಹಿ ತ್ರಾಹಿ ಎನ್ನುತ್ತಾರೆ, ಮತ್ತೆಂದೂ ನಾನು ಪಾಪ ಮಾಡುವುದಿಲ್ಲ ಎಂದು ಹೇಳುತ್ತಾರೆ. ನೀವು ಮಕ್ಕಳು ಗರ್ಭ ಜೈಲಿನಲ್ಲಿ ಹೋಗಬಾರದು, ಅಲ್ಲಿ ಗರ್ಭವು ಮಹಲಿನಂತಿರುತ್ತದೆ ಏಕೆಂದರೆ ಪಾಪವಿರುವುದಿಲ್ಲ. ಇಲ್ಲಿ ರಾವಣ ರಾಜ್ಯದಲ್ಲಿ ಪಾಪವಾಗುತ್ತದೆ ಆದ್ದರಿಂದ ರಾಮ ರಾಜ್ಯ ಬೇಕೆಂದು ಬಯಸುತ್ತಾರೆ ಆದರೆ ರಾವಣ ರಾಜ್ಯವೆಂದರೇನು ಎಂಬುದನ್ನು ತಿಳಿದುಕೊಂಡಿಲ್ಲ. ರಾವಣನನ್ನು ಒಂದು ಸಲ ಸುಟ್ಟರೆ ಸಮಾಪ್ತಿಯಾಗಬೇಕು ಆದರೆ ಮತ್ತೆ-ಮತ್ತೆ ಸುಡುತ್ತಾರೆ. ಅಂದಮೇಲೆ ಇನ್ನೂ ಸತ್ತಿಲ್ಲವೆಂದರ್ಥ. ಮತ್ತೆ ಇದೆಲ್ಲವನ್ನೂ ಮಾಡುವುದರಿಂದ ಏನು ಲಾಭ? ಅವರಂತೂ ಹೋಗಿ ಲಂಕೆಯನ್ನು ಲೂಟಿ ಮಾಡಿ ಬರುತ್ತಾರೆ. ವಾಸ್ತವದಲ್ಲಿ ನೀವು ಈ ಸಮಯದಲ್ಲಿ ರಾವಣನ ಮೇಲೆ ಜಯ ಗಳಿಸುತ್ತೀರಿ ಮತ್ತು ಸತ್ಯಯುಗದ ಮಾಲೀಕರಾಗುತ್ತೀರಿ. ಅಜ್ಮೀರಿನಲ್ಲಿ ವೈಕುಂಠದ ಮಾದರಿಯನ್ನು ತೋರಿಸಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ತಂದೆಯು ಮಕ್ಕಳನ್ನು ಪುನಃ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ, ನಾವು ವಜ್ರ-ವೈಡೂರ್ಯಗಳ ಮಹಲುಗಳಲ್ಲಿ ರಾಜ್ಯಭಾರ ಮಾಡುತ್ತೇವೆ.

ಈಗ ನೀವು ಮಕ್ಕಳು ಯೋಗಬಲದಿಂದ ನಿರ್ವಿಕಾರಿ, ಸತೋಪ್ರಧಾನರಾಗುತ್ತೀರಿ. ಆತ್ಮವು ಸಂಪೂರ್ಣ ನಿರ್ವಿಕಾರಿಯಾಗಿ ಮತ್ತೆ ಶಾಂತಿಧಾಮಕ್ಕೆ ಹೊರಟು ಹೋಗುವುದು. ಅಲ್ಲಿ ದುಃಖದ ಮಾತಿಲ್ಲ. ತಂದೆಯು ತಿಳಿಸಿದ್ದಾರೆ- ಈ ನಾಟಕದಲ್ಲಿ ನಿಮ್ಮದು ಎಲ್ಲರಿಗಿಂತ ಮುಖ್ಯವಾದುದು ಹೀರೋ-ಹೀರೋಯಿನ್ ಪಾತ್ರವಾಗಿದೆ. ರಾಜ್ಯವನ್ನು ಪಡೆಯುವುದು ಮತ್ತು ಕಳೆದುಕೊಳ್ಳುವುದು ಇದು ಆಟವಾಗಿದೆ. ನೀವು ಹೀರೋ-ಹೀರೋಯಿನ್ ಆಗಿದ್ದೀರಿ, ಹೀರೋ ಅಂದರೆ ಮುಖ್ಯ ಪಾತ್ರಧಾರಿಗಳಾಗಿದ್ದೀರಿ. ನೀವು ಸತ್ಯಯುಗದಲ್ಲಿ ಪವಿತ್ರ ಗೃಹಸ್ಥ ಆಶ್ರಮದಲ್ಲಿದ್ದಿರಿ, ಕಲಿಯುಗದಲ್ಲಿ ಅಪವಿತ್ರ ಗೃಹಸ್ಥ ವ್ಯವಹಾರವಾಗಿದೆ. ಈಗ ತಂದೆಯು ಸತ್ಯಯುಗದಲ್ಲಿ ಕರೆದುಕೊಂಡು ಹೋಗುವರು, ಅಲ್ಲಿ ಲಕ್ಷ್ಮೀ-ನಾರಾಯಣ ಸೂರ್ಯವಂಶಿಯರ ರಾಜ್ಯವಿರುವುದು. ಅವರು ಪುನರ್ಜನ್ಮವನ್ನು ತೆಗೆದುಕೊಂಡು ಚಂದ್ರವಂಶದಲ್ಲಿ ಬರುತ್ತಾರೆ, ವೃದ್ಧಿಯಾಗುತ್ತಾ ಇರುತ್ತದೆ. ಈಗ ಎಷ್ಟೊಂದು ಕೋಟಿಗಳಷ್ಟು ಜನಸಂಖ್ಯೆಯಾಗಿ ಬಿಟ್ಟಿದೆ! ಸಂತಾನ ನಿಯಂತ್ರಣವಾಗಬೇಕೆಂದು ಹೇಳುತ್ತಾರೆ, ಯಾರಿಗೆ ಒಂದೆರಡು ಮಕ್ಕಳಾಗುವವೋ ಅವರು ನಿಲ್ಲಿಸುತ್ತಾರೆಯೇ? ಈಗ ನೀವು ಇದನ್ನು ಸಿದ್ಧ ಮಾಡಿ ತಿಳಿಸಬಹುದು – ಜನಸಂಖ್ಯೆಯನ್ನು ಕಡಿಮೆ ಮಾಡುವುದು ತಂದೆಯ ಮೇಲಿದೆ. ತಂದೆಗೆ ಗೊತ್ತಿದೆ – ಹೆಚ್ಚು ಮನುಷ್ಯರಿದ್ದರೆ ಸಾಯುವರು, ನಾನು ಎಲ್ಲರನ್ನೂ ಸಮಾಪ್ತಿ ಮಾಡಿ ಒಂದು ಧರ್ಮದ ಸ್ಥಾಪನೆ ಮಾಡಲು ಬಂದಿದ್ದೇನೆ. ಅಲ್ಲಿ ಕೇವಲ 9 ಲಕ್ಷ ಮಂದಿ ಇರುತ್ತಾರೆ, ಛೂ ಮಂತ್ರವಾಯಿತಲ್ಲವೆ. ಕಲಿಯುಗರೂಪಿ ರಾತ್ರಿಯು ಮುಕ್ತಾಯವಾಗಿ ದಿನವು ಆರಂಭವಾಗುವುದು. ಸಂತಾನ ನಿಯಂತ್ರಣಕ್ಕಾಗಿ ಎಷ್ಟೊಂದು ಖರ್ಚು ಮಾಡುತ್ತಾರೆ, ತಂದೆಗೆ ಯಾವುದೇ ಖರ್ಚಿಲ್ಲ, ಪ್ರಾಕೃತಿಕ ವಿಕೋಪಗಳಾಗುವವು ಆಗ ಎಲ್ಲರೂ ಸಮಾಪ್ತಿಯಾಗುವರು. ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಅವರು ಯಾವ ಯೋಜನೆಗಳನ್ನು ಮಾಡುತ್ತಿದ್ದಾರೆಯೋ ಅದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಯುರೋಪಿಯನ್ ಯಾದವರು, ಭಾರತವಾಸಿ ಕೌರವರು ಮತ್ತು ಪಾಂಡವರು. ಅವರೆಲ್ಲರೂ ಒಂದು ಕಡೆ, ಇನ್ನೊಂದು ಕಡೆ ಇವರಿಬ್ಬರೂ ಸಹೋದರರಿದ್ದಾರೆ. ಭಾರತದಲ್ಲಿ ಸಹೋದರ-ಸಹೋದರರಿದ್ದಾರೆ. ಯಾರು ಈಗ ಕಲಿಯುಗದಲ್ಲಿ ಸಹೋದರ-ಸಹೋದರರಿದ್ದಾರೆಯೋ ಅವರಿಂದ ನೀವೀಗ ಸಂಗಮಕ್ಕೆ ಹೊರ ಬಂದಿದ್ದೀರಿ. ಕೌರವರು ಮತ್ತು ಪಾಂಡವರು ಒಂದೇ ಮನೆಯವರಾಗಿದ್ದರು, ಆತ್ಮರು ಮೂಲತಃ ಸಹೋದರ-ಸಹೋದರರಾಗಿದ್ದಾರೆ. ತಂದೆಯು ಮೊಟ್ಟಮೊದಲು ನೀವಾತ್ಮರೊಂದಿಗೇ ಮಿಲನ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಯಾರು ಮೊಟ್ಟ ಮೊದಲು ಹೋಗುತ್ತಾರೆಯೋ ಅವರು ಬಹುಮಾನ ತೆಗೆದುಕೊಳ್ಳುತ್ತಾರೆ. ನಿಮ್ಮದು ಇದು ನೆನಪಿನ ಸ್ಪರ್ಧೆಯಾಗಿದೆ, ಇದು ಯಾವುದೇ ಶಾಸ್ತ್ರದಲ್ಲಿಲ್ಲ. ತಂದೆಯು ತಿಳಿಸುತ್ತಾರೆ – ನನ್ನ ಜೊತೆ ಯೋಗವನ್ನು ಇಡಿ. ಯೋಗದ ಯಾತ್ರೆಯು ಈ ಸಮಯದಲ್ಲಿಯೇ ನಡೆಯುತ್ತದೆ. ಈ ಯಾತ್ರೆಯನ್ನು ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಆತ್ಮಿಕ ಯೋಗವಾಗಲಿ, ಶಾರೀರಿಕ ಯೋಗವಾಗಲಿ ಇರುವುದಿಲ್ಲ. ಅಲ್ಲಿ ಅವಶ್ಯಕತೆಯೇ ಇಲ್ಲ. ಇದು ಈ ಸಮಯದಲ್ಲಿ ನಿಮ್ಮ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಡ್ರಾಮಾದಲ್ಲಿ ಒಂದೊಂದು ಸೆಕೆಂಡಿನ ಪಾತ್ರವನ್ನು ತಿಳಿಸಿದ್ದಾರೆ, ಇದಕ್ಕೆ ಸ್ವದರ್ಶನ ಚಕ್ರವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಈಗ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ, ನಿಮಗೆ 84 ಜನ್ಮಗಳ ಅಥವಾ ಸೃಷ್ಟಿಚಕ್ರದ ಜ್ಞಾನವಿದೆ. ಸ್ವ ಎಂದರೆ ಆತ್ಮ. ಆತ್ಮಕ್ಕೆ ಈ ಜ್ಞಾನವಿದೆ ಆದ್ದರಿಂದ ಈಗ ನೀವು ಮಕ್ಕಳು ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ನಾನು ನಿಮಗೆ ಆತ್ಮಿಕ ಮಕ್ಕಳೇ ಎಂದು ಹೇಳುತ್ತೇನೆ. ಸ್ವದರ್ಶನ ಚಕ್ರಧಾರಿ ಬ್ರಾಹ್ಮಣ ಕುಲಭೂಷಣರಾಗಿದ್ದೀರಿ. ಈ ಪದಗಳ ಅರ್ಥವು ಹೊಸಬರಿಗೆ ಅರ್ಥವಾಗುವುದಿಲ್ಲ. ಈ ಅಲಂಕಾರಗಳನ್ನು ನಿಮಗೆ ಕೊಡುವುದಿಲ್ಲ ಏಕೆಂದರೆ ನಿಮ್ಮಲ್ಲಿ ಕೆಲವರು ಜ್ಞಾನವನ್ನು ಬಿಟ್ಟು ಹೊರಟು ಹೋಗುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ 84 ಜನ್ಮಗಳ ಚಕ್ರವಿದೆ, ಈಗ ನಂಬರ್ವನ್ನಲ್ಲಿ ಹೋಗುತ್ತೀರಿ. ಮೊದಲು ಮನೆಗೆ ಹೋಗಿ ನಂತರ ದೇವತೆಗಳಾಗುತ್ತೀರಿ. ಅನಂತರ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಎಷ್ಟು ತಿಳುವಳಿಕೆಯ ಮಾತಾಗಿದೆ. ಯಾರಾದರೂ ಇಷ್ಟು ನೆನಪು ಮಾಡಿದರೂ ಸಹ ಸೌಭಾಗ್ಯವೇ! ಇನ್ನು ಸ್ವಲ್ಪವೇ ಸಮಯವಿದೆ ನಂತರ ನಾವು ಸ್ವರ್ಗದಲ್ಲಿ ಹೋಗುತ್ತೇವೆ. ಬಾಕಿ ಶಾಸ್ತ್ರಗಳಲ್ಲಿ ಅನೇಕ ದಂತ ಕಥೆಗಳನ್ನು ಬರೆದಿದ್ದಾರೆ, ಕೃಷ್ಣನೊಂದಿಗೆ ಎಲ್ಲರಿಗೂ ಪ್ರೀತಿಯಿದೆ ಆದರೆ ಕೃಷ್ಣನಿಗೆ ಸರ್ಪವು ಕಚ್ಚಿತು, ಹೀಗಾಯಿತು, ಹಾಗಾಯಿತು…. ಎಂದು ಬರೆದು ಬಿಟ್ಟಿದ್ದಾರೆ. ಕೃಷ್ಣನು ರಾಧೆಗಿಂತಲೂ ಪ್ರಿಯನಾಗಿದ್ದಾನೆ ಏಕೆಂದರೆ ಮುರುಳಿಯನ್ನು ನುಡಿಸಿದ್ದಾನೆ. ಅದು ವಾಸ್ತವದಲ್ಲಿ ಜ್ಞಾನದ ಮಾತಾಗಿದೆ. ನೀವು ಈ ಸಮಯದಲ್ಲಿ ಜ್ಞಾನ ಜ್ಞಾನೇಶ್ವರಿಯರಾಗಿದ್ದೀರಿ ನಂತರ ಓದಿ ರಾಜ ರಾಜೇಶ್ವರಿಯರಾಗುತ್ತೀರಿ. ಇದು ಗುರಿ-ಧ್ಯೇಯವಾಗಿದೆ. ಇಲ್ಲಿನ ಉದ್ದೇಶವೇನೆಂದು ಯಾರಾದರೂ ನಿಮ್ಮೊಂದಿಗೆ ಕೇಳಿದರೆ ಹೇಳಿರಿ, ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ನಾವೇ ದೇವತೆಗಳಾಗಿದ್ದೆವು, 84 ಜನ್ಮಗಳ ನಂತರ ಶೂದ್ರರಾದೆವು, ಈಗ ಬ್ರಾಹ್ಮಣರಾಗಿದ್ದೇವೆ ನಂತರ ದೇವತೆಗಳಾಗುತ್ತೇವೆ. ಓದಿಸುವವರು ಜ್ಞಾನ ಸಾಗರ ಪರಮಾತ್ಮನಾಗಿದ್ದಾರೆ, ಕೃಷ್ಣನಲ್ಲ. ಈ ರಾಜಯೋಗವನ್ನು ಯಾರೂ ಕಲಿಸಲು ಸಾಧ್ಯವಿಲ್ಲ. ಬಾಬಾ, ನಾವು ಕಲ್ಪ-ಕಲ್ಪವೂ ಬಂದು ತಮ್ಮಿಂದ ರಾಜ್ಯಭಾಗ್ಯವನ್ನು ಪಡೆಯುತ್ತೇವೆಂದು ನೀವು ಹೇಳುತ್ತೀರಿ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ಈ ಮಹಾಭಾರಿ ಯುದ್ಧದಿಂದಲೇ ಸ್ವರ್ಗದ ಬಾಗಿಲು ತೆರೆಯುವುದು. ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ ಅಂದಮೇಲೆ ಸ್ವರ್ಗವು ಅವಶ್ಯವಾಗಿ ಬೇಕು, ನರಕವು ಸಮಾಪ್ತಿಯಾಗಬೇಕು. ಈ ಮಹಾಭಾರಿ ಯುದ್ಧವು ಶಾಸ್ತ್ರಗಳಲ್ಲಿದೆ.

(ಕೆಮ್ಮು ಬಂದಿತು) ಇದು ಯಾರಿಗೆ ಬರುತ್ತದೆ? ಶಿವ ತಂದೆಗೋ ಅಥವಾ ಬ್ರಹ್ಮಾ ತಂದೆಗೋ? (ಬ್ರಹ್ಮಾ ತಂದೆಗೆ) ಇದು ಕರ್ಮಭೋಗವಾಗಿದೆ. ಅಂತ್ಯದವರೆಗೂ ಆಗುತ್ತಾ ಇರುವುದು. ಸಂಪೂರ್ಣರಾಗಿ ಬಿಟ್ಟರೆ ಮತ್ತೆ ಈ ಶರೀರವೂ ಇರುವುದಿಲ್ಲ ಅಲ್ಲಿಯವರೆಗೂ ಇದಕ್ಕೆ ಏನಾದರೊಂದು ಆಗುತ್ತಾ ಇರುವುದು, ಇದಕ್ಕೆ ಕರ್ಮಭೋಗವೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಕರ್ಮಭೋಗವಿರುವುದಿಲ್ಲ, ಯಾವುದೇ ಕಾಯಿಲೆ ಇತ್ಯಾದಿಗಳು ಬರುವುದಿಲ್ಲ. ನಾವು ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೇವೆ, ಸದಾ ಹರ್ಷಿತರಾಗಿರುತ್ತೇವೆ ಏಕೆಂದರೆ ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ ಮತ್ತೆ ಅರ್ಧಕಲ್ಪದ ನಂತರ ದುಃಖವು ಆರಂಭವಾಗುತ್ತದೆ. ಅದರಲ್ಲಿಯೂ ಯಾವಾಗ ಭಕ್ತಿಯು ವ್ಯಭಿಚಾರಿಯಾಗಿ ಬಿಡುತ್ತದೆಯೋ ಆಗ ಹೆಚ್ಚು ದುಃಖವಾಗುತ್ತದೆ ಆಗಲೇ ತ್ರಾಹಿ ತ್ರಾಹಿ ಎನ್ನುತ್ತಾರೆ ಮತ್ತೆ ವಿನಾಶವಾಗುತ್ತದೆ. ಈಗ ನೀವು ಸನ್ಮುಖದಲ್ಲಿ ಕೇಳುತ್ತೀರಿ ಆದ್ದರಿಂದ ಎಷ್ಟೊಂದು ಮಜಾ ಬರುತ್ತದೆ. ನಿಮಗೆ ತಿಳಿದಿದೆ, ಇವರು ನಮ್ಮ ಸತ್ಯ ತಂದೆ, ಸತ್ಯ ಶಿಕ್ಷಕ, ಸತ್ಯ ಸದ್ಗುರುವಾಗಿದ್ದಾರೆ, ಈ ಮಹಿಮೆಯು ಒಬ್ಬ ನಿರಾಕಾರ ತಂದೆಯದೇ ಆಗಿದೆ, ಅವರು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ಆ ತಂದೆಯನ್ನು ನೆನಪು ಮಾಡಿದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಇಲ್ಲಿ ಯಾವುದೇ ಸಾಧು-ಸಂತ, ಮಹಾತ್ಮರು ಗದ್ದುಗೆಯ ಮೇಲೆ ಕುಳಿತುಕೊಳ್ಳುವುದಿಲ್ಲ, ಎಂದೂ ಕಾಲಿಗೆ ಬೀಳುವುದಕ್ಕೂ ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ – ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ, ನನಗೆ ಕಾಲುಗಳಾದರೂ ಎಲ್ಲಿದೆ? ನೀವು ಯಾವುದಕ್ಕೆ ತಲೆ ಬಾಗುತ್ತೀರಿ? ಅನೇಕ ಗುರುಗಳಿಗೆ ತಲೆಬಾಗುತ್ತಾ-ಬಾಗುತ್ತಾ ನಿಮ್ಮ ಹಣೆಯೇ ಸವೆದು ಹೋಗಿದೆ. ಯಾವುದು ಭಕ್ತಿಮಾರ್ಗದಲ್ಲಿ ಇರುತ್ತದೆಯೋ ಅದು ಜ್ಞಾನ ಮಾರ್ಗದಲ್ಲಿರಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಹೇ ರಾಮನೇ….. ಎಂದು ಹೇಳುತ್ತಾರೆ. ಇಲ್ಲಿ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಯಾವುದೇ ಶಬ್ಧ ಮಾಡುವಂತಿಲ್ಲ. ತಮ್ಮನ್ನು ಆತ್ಮನೆಂದು ತಿಳಿದು ಗುಪ್ತವಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಹೇ ಶಿವ…. ಎಂದೂ ಹೇಳುವಂತಿಲ್ಲ. ನೀವು ಶಬ್ಧದಿಂದ ದೂರ ಹೋಗಬೇಕಾಗಿದೆ. ಮಗುವಿಗೆ ಆಂತರ್ಯದಲ್ಲಿ ತಂದೆಯ ನೆನಪಿರುತ್ತದೆ, ಇವರು ನಮ್ಮ ತಂದೆಯಾಗಿದ್ದಾರೆಂದು ಆತ್ಮಕ್ಕೆ ಗೊತ್ತಿದೆ. ನೀವು ಒಳಗೆ ಗುಪ್ತವಾಗಿ ನೆನಪು ಮಾಡಬೇಕಾಗಿದೆ, ಇದಕ್ಕೆ ಅಜಪಾಜಪ ನೆನಪು ಎಂದು ಹೇಳಲಾಗುತ್ತದೆ ಅಂದರೆ ಜಪ ಮಾಡಬೇಕಾಗಿಲ್ಲ, ಮಾಲೆಯನ್ನು ಆಂತರ್ಯದಲ್ಲಾದರೂ ಜಪಿಸಿ ಅಥವಾ ಹೊರಗಡೆಯಾದರೂ ಜಪಿಸಿರಿ ಒಂದೇ ಮಾತಾಗಿದೆ. ಆಂತರ್ಯದಲ್ಲಿ ಜಪಿಸುವುದು ಯಾವುದೇ ಗುಪ್ತವಲ್ಲ. ಗುಪ್ತ ಮಾತು ಯಾವುದೆಂದರೆ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಅವರು ಶಿವ ತಂದೆ, ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಶೃಂಗಾರ ಮಾಡುವುದಕ್ಕಾಗಿ ನಿಮಗೆ ಡಬಲ್ ಇಂಜಿನ್ ಸಿಗುತ್ತದೆ, ಇವರ ಆತ್ಮವೂ ಶೃಂಗರಿತವಾಗುತ್ತದೆ ನಂತರ ಎಲ್ಲರೂ ತಂದೆಯ ಮನೆಗೆ ಹೋಗುತ್ತೀರಿ, ಅಲ್ಲಿಂದ ಮತ್ತೆ ಮಾವನ ಮನೆಯಾದ ಕೃಷ್ಣ ಪುರಿಯಲ್ಲಿ ಬರುತ್ತೀರಿ. ಇದು ಡಬಲ್ ತಂದೆಯ ಮನೆಯಾಗಿದೆ, ಈ ಅಲೌಕಿಕ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ ಆದ್ದರಿಂದಲೇ ಈ ದಾದಾರವರನ್ನು ಏಕೆ ತೋರಿಸಿದ್ದೀರಿ ಎಂದು ಕೇಳುತ್ತಾರೆ ಆದರೆ ಇವರ ತನುವಿನಲ್ಲಿ ಪರಮಾತ್ಮ ಓದಿಸುತ್ತಾರೆಂದು ಯಾರಿಗೂ ತಿಳಿದಿಲ್ಲ. ಇವರು ಬಹಳ ಜನ್ಮಗಳ ಅಂತಿಮದಲ್ಲಿ ಪೂಜ್ಯರಿಂದ ಪೂಜಾರಿಯಾಗಿದ್ದಾರೆ, ರಾಜನಿಂದ ಪ್ರಜೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ನಾನು ಇವರ ತನುವಿನಲ್ಲಿ ಪ್ರವೇಶ ಮಾಡುತ್ತೇನೆ ಎಂದು. ಆದರೂ ಸಹ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಮಂದಿರಗಳಲ್ಲಿ ನಂದಿಯನ್ನು ತೋರಿಸಿದ್ದಾರೆ. ಶಂಕರನಂತು ಸೂಕ್ಷ್ಮವತನವಾಸಿ ಆಗಿದ್ದಾರೆ, ಸೂಕ್ಷ್ಮವತನದಲ್ಲಿ ನಂದಿ ಇತ್ಯಾದಿಗಳಿರುವುದಿಲ್ಲ, ನಂದಿ ಅರ್ಥಾತ್ ಪುರುಷ. ಭಗೀರಥನನ್ನು ಪುರುಷನಂತೆ ತೋರಿಸುತ್ತಾರೆ, ಮನುಷ್ಯರು ಸಂಪೂರ್ಣ ಬುದ್ಧಿಹೀನರಾಗಿ ಬಿಟ್ಟಿದ್ದಾರೆ. ರಾವಣನು ಬುದ್ಧಿಹೀನರನ್ನಾಗಿ ಮಾಡಿದ್ದಾನೆ. ರಾಮ ರಾಜ್ಯ ಬೇಕೆಂದು ತಾವೇ ಹೇಳುತ್ತಾರೆ ಆದರೆ ರಾಮ ರಾಜ್ಯವಂತೂ ಸತ್ಯಯುಗದಲ್ಲಿರುತ್ತದೆ. ಕಲಿಯುಗದಲ್ಲಿ ರಾವಣ ರಾಜ್ಯವಿದೆ. ರಾಮ ಮತ್ತು ರಾವಣನು ಭಾರತದಲ್ಲಿಯೇ ಇರುತ್ತಾರೆ. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ. ರಾವಣನ ಜಯಂತಿಯನ್ನು ಆಚರಿಸುವುದಿಲ್ಲ ಏಕೆಂದರೆ ಶತ್ರುವಾಗಿದ್ದಾನೆ. ಯಾರು ಸುಖ ಕೊಡುತ್ತಾರೆಯೋ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಈಗ ಶಿವ ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ ಮತ್ತು ರಾವಣನಿಂದ ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ರಾವಣನೆಂದರೆ ಯಾರು? ಯಾವಾಗ ಬರುತ್ತಾನೆ? ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಅಕ್ಯೂರೇಟ್ ಲೆಕ್ಕವನ್ನು ತಿಳಿಸಲಾಗುತ್ತದೆ, ಈ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಿ, ಮರೆಯಬೇಡಿ. ಜ್ಞಾನ ಸಾಗರನ ಬಳಿಗೆ ಮೋಡಗಳಾಗಿ ಬಂದಿದ್ದೀರಿ ಅಂದಮೇಲೆ ತುಂಬಿಸಿಕೊಂಡು ಹೋಗಿ ಮಳೆ ಸುರಿಸಬೇಕು. ಧಾರಣೆಯು ಚೆನ್ನಾಗಿರಬೇಕಾಗಿದೆ. ಇಲ್ಲಿ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ, ನಾವು ಬೇಹದ್ದಿನ ತಂದೆಯ ಸನ್ಮುಖದಲ್ಲಿ ಮನೆಯಲ್ಲಿ ಕುಳಿತಿದ್ದೇವೆಂದು ಭಾಸವಾಗುತ್ತದೆ. ಬ್ರಾಹ್ಮಣ ಕುಲಭೂಷಣರೂ ಇದ್ದಾರೆ, ಮಮ್ಮಾ-ಬಾಬಾರವರೂ ಇದ್ದಾರೆ. ತಂದೆಯು ನಮಗೆ ಶಿಕ್ಷಕನ ರೂಪದಲ್ಲಿ ಓದಿಸುತ್ತಿದ್ದಾರೆ. ಸದ್ಗುರುವಿನ ರೂಪದಲ್ಲಿ ಜೊತೆ ಕರೆದುಕೊಂಡು ಹೋಗುತ್ತಾರೆ. ಆ ಗುರುಗಳು ಕರೆದುಕೊಂಡು ಹೋಗುವುದಿಲ್ಲ. ಗುರುವಿನ ಕೆಲಸವಾಗಿದೆ – ಅನುಯಾಯಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು. ವಾಸ್ತವದಲ್ಲಿ ಅವರು ಅನುಯಾಯಿಗಳೂ ಅಲ್ಲ ಏಕೆಂದರೆ ಅವರು ಸನ್ಯಾಸಿಗಳು ಇವರು ಗೃಹಸ್ಥಿಗಳು ಅಂದಮೇಲೆ ಅನುಯಾಯಿಗಳು ಹೇಗಾದರು! ನೀವು ಶಿವ ತಂದೆಯನ್ನು ಅನುಸರಿಸುತ್ತೀರಿ ಮತ್ತು ಬ್ರಹ್ಮಾ ತಂದೆಯನ್ನೂ ಅನುಸರಿಸುತ್ತೀರಿ. ಹೇಗೆ ಇವರು ಆಗುತ್ತಾರೆಯೋ ನೀವೂ ಆಗುತ್ತೀರಿ. ನೀವಾತ್ಮರು ಪವಿತ್ರರಾಗಿ ತಂದೆಯಬಳಿ ಹೊರಟು ಹೋಗುತ್ತೀರಿ. ತಂದೆಯು ಹೇಳುತ್ತಾರೆ – ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ನೀವು ಸತ್ಯ-ಸತ್ಯವಾದ ಅನುಯಾಯಿಗಳಾಗಿದ್ದೀರಿ.

ತಂದೆಯು ತಿಳಿಸುತ್ತಾರೆ – ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ, ನೀವೀಗ ಜ್ಞಾನ ಚಿತೆಯ ಮೇಲೆ ಕುಳಿತುಕೊಂಡರೆ ಕರೆದುಕೊಂಡು ಹೋಗುತ್ತೇನೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಆ ಸಮಯದಲ್ಲಿ ಮತ್ತೆಲ್ಲಾ ಧರ್ಮದವರು ಶಾಂತಿಧಾಮದಲ್ಲಿದ್ದರು, ಇವು ಬಹಳ ಸಹಜ ಮಾತುಗಳಾಗಿವೆ. ತಂದೆಗೆ ಅನುಯಾಯಿಗಳಾಗಿರಿ. ಎಷ್ಟು ಪವಿತ್ರರಾಗುತ್ತೀರೋ ಅಷ್ಟು ಒಳ್ಳೆಯ ಪದವಿಯನ್ನು ಪಡೆಯುತ್ತೀರಿ ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಹೋಗುವುದಂತೂ ನಿಶ್ಚಿತವಾಗಿದೆ, 21 ಜನ್ಮಗಳ ಆಸ್ತಿಯು ಸಿಗುತ್ತದೆ ಅಂದಮೇಲೆ ಪರಿಶ್ರಮವನ್ನು ಏಕೆ ಪಡಬಾರದು! ಈಗ ಪರಿಶ್ರಮ ಪಡದಿದ್ದರೆ ಕಲ್ಪ-ಕಲ್ಪಾಂತರವೂ ಮಾಡುವುದಿಲ್ಲ ಅಂದಮೇಲೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುತ್ತೀರಿ! ಇದು ಬೇಹದ್ದಿನ ತರಗತಿಯಾಗಿದೆ. ಒಂದೇ ಪರೀಕ್ಷೆಯಿದೆ- ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಒಬ್ಬ ತಂದೆಗೆ ಸತ್ಯ-ಸತ್ಯವಾದ ಅನುಯಾಯಿಗಳಾಗಿ ಸಂಪೂರ್ಣ ಪವಿತ್ರರಾಗಬೇಕಾಗಿದೆ. 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ.

2. ಬಾಯಿಂದ ಎಂದೂ ಹೇ ಶಿವ ತಂದೆಯೇ ಎಂದು ಹೇಳಬಾರದು, ಶಬ್ಧದಿಂದ ದೂರ ಹೋಗಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ಆಂತರ್ಯದಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ.

ವರದಾನ:-

ಅಂತಹ ಮಕ್ಕಳಲ್ಲಿಯೇ ಸ್ಥೂಲ ಆದೇಶವನ್ನು ಪಾಲನೆ ಮಾಡುವ ಶಕ್ತಿಯು ಬರಲು ಸಾಧ್ಯ. ಯಾರು ಸೂಕ್ಷ್ಮ ಆದೇಶವನ್ನು ಪಾಲನೆ ಮಾಡುತ್ತಾರೆ. ಸೂಕ್ಷ್ಮ ಹಾಗೂ ಮುಖ್ಯವಾದ ಆದೇಶವಿದೆ – ನಿರಂತರ ನೆನಪಿನಲ್ಲಿರಿ ಅಥವಾ ಮನ-ವಚನ-ಕರ್ಮದಿಂದ ಪವಿತ್ರವಾಗಿರಿ. ಸಂಕಲ್ಪದಲ್ಲಿಯೂ ಅಪವಿತ್ರತೆ ಅಥವಾ ಅಶುದ್ಧತೆ ಇರಬಾರದು. ಒಂದುವೇಳೆ ಸಂಕಲ್ಪದಲ್ಲಿ ಏನಾದರೂ ಹಳೆಯ ಅಶುದ್ಧ ಸಂಸ್ಕಾರಗಳು ಟಚ್ ಮಾಡುತ್ತದೆಯೆಂದರೆ, ಸಂಪೂರ್ಣ ವೈಷ್ಣವ ಅಥವಾ ಸಂಪೂರ್ಣ ಪವಿತ್ರರೆಂದು ಹೇಳುವುದಿಲ್ಲ. ಆದ್ದರಿಂದ ಯಾವುದೊಂದು ಸಂಕಲ್ಪವೂ ಸಹ ಆದೇಶವಿಲ್ಲದೆ ನಡೆಯುವಂತಿಲ್ಲ. ಹೀಗಿದ್ದಾಗ ಸಂಪೂರ್ಣ ಆದೇಶ ಪಾಲಕನೆಂದು ಹೇಳಲಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top