23 July 2021 KANNADA Murli Today | Brahma Kumaris

Read and Listen today’s Gyan Murli in Kannada

22 July 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ತಮ್ಮ ಚಿಂತನೆ ಮಾಡಬೇಕಾಗಿದೆ, ಅನ್ಯರದಲ್ಲ ಏಕೆಂದರೆ ಡ್ರಾಮಾನುಸಾರ ಯಾರು ಮಾಡುವರೋ ಅವರೇ ಪಡೆಯುವರು”

ಪ್ರಶ್ನೆ:: -

ತ್ರಿಕಾಲದರ್ಶಿಗಳಾಗುವುದರಿಂದ ಆತ್ಮಕ್ಕೆ ಯಾವ ಸ್ಮೃತಿ ಬಂದಿದೆ?

ಉತ್ತರ:-

ಆತ್ಮಕ್ಕೆ ಸ್ಮೃತಿ ಬಂದಿದೆ – ನಾವು ಮೂಲತಃ ಮೂಲವತನದ ನಿವಾಸಿಗಳು ಈ ಡ್ರಾಮಾದಲ್ಲಿ ಪಾತ್ರವನ್ನು ಅಭಿನಯಿಸಲು ಬಂದಿದ್ದೇವೆ, ನಾವು ಮುಖ್ಯ ಪಾತ್ರಧಾರಿಗಳಾಗಿ 84 ಜನ್ಮಗಳ ಪಾತ್ರವನ್ನು ಅಭಿನಯಿಸಿದೆವು. ಈಗ ತಂದೆಯ ಸನ್ಮುಖದಲ್ಲಿದ್ದೇವೆ ನಂತರ ಜೊತೆಯಲ್ಲಿ ಮನೆಗೆ ಹೋಗುತ್ತೇವೆ. ಪಾವನರಾಗಿ ಮನೆಗೆ ಹೋಗಬೇಕಾಗಿದೆ ಮತ್ತೆ ಸುಖಧಾಮದಲ್ಲಿ ಬರಬೇಕಾಗಿದೆ. ಭಾರತದ ಮೇಲೆ ಇದೆಲ್ಲಾ ಆಟವು ಮಾಡಲ್ಪಟ್ಟಿದೆ. ತ್ರಿಕಾಲದರ್ಶಿಗಳು ಆಗುವುದರಿಂದ ಇದೆಲ್ಲಾ ಸ್ಮೃತಿ ಬಂದು ಬಿಟ್ಟಿತು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸತ್ತರೂ ನಿಮ್ಮ ಮಡಿಲಿನಲ್ಲಿಯೇ, ಬದುಕಿದರೂ ನಿಮ್ಮ ಮಡಿಲಿನಲ್ಲಿಯೇ…

 
 
 

ಓಂ ಶಾಂತಿ. ಈ ಗೀತೆಯನ್ನು ಯಾರು ಹಾಡಿದರು? ಮಕ್ಕಳು. ಮಕ್ಕಳು ಏನು ಹೇಳುತ್ತಾರೆ! ಬಾಬಾ, ಈಗಂತೂ ತಮ್ಮ ಕೊರಳಿನ ಹಾರವಾಗಬೇಕಾಗಿದೆ. ಈ ಶರೀರವನ್ನು ಇಲ್ಲಿಯೇ ಬಿಡಬೇಕಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ – ಶಾಂತಿಧಾಮ ಅಥವಾ ನಿರ್ವಾಣ ಧಾಮದಲ್ಲಿ ತಂದೆ ಮತ್ತು ನಾವಾತ್ಮರೇ ಇರುತ್ತೇವೆ. ಈಗ ತಂದೆಯು ಮತ್ತೆ ಮತ್ತೆ ತಿಳಿಸುತ್ತಾರೆ – ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ. ನೀವು ತಿಳಿದುಕೊಂಡಿದ್ದೀರಿ – ತಂದೆಯ ಜೊತೆ ನಾವಾತ್ಮರು ನಿರ್ವಾಣ ಧಾಮದಲ್ಲಿದ್ದೆವು ನಂತರ ಈ ಶರೀರ ಧಾರಣೆ ಮಾಡಿ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ. ಮೂಲತಃ ನಾವು ಪರಮಧಾಮ ನಿವಾಸಿಗಳು. ಈಗ ತಂದೆಯು ಪುನಃ ಬಂದಿದ್ದಾರೆ. ನೀವು ಕುಳಿತಿದ್ದೀರಿ, ನೋಡುತ್ತೀರಿ ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ. ಇಲ್ಲಿ ಲೌಕಿಕ ಶರೀರದ ಸಂಬಂಧವಿದೆ. ನಾವು ಮೂಲತಃ ಆತ್ಮಗಳಾಗಿದ್ದೇವೆ ಆದರೆ ಲೌಕಿಕ ಸಂಬಂಧದಲ್ಲಿ ಸುಖ-ದುಃಖದ ಜೀವನವನ್ನು ಕಳೆದೆವು. ಈಗ ನೀವಾತ್ಮರು ತ್ರಿಕಾಲದರ್ಶಿಗಳಾಗಿದ್ದೀರಿ, ತಂದೆಯೂ ಸಹ ಮೂರೂ ಕಾಲಗಳು, ಮೂರೂ ಲೋಕಗಳನ್ನು ಅರಿತಿದ್ದಾರೆ. ಅದನ್ನು ನೀವೂ ಸಹ ನಂಬರ್ವಾರ್ ಪುರುಷಾರ್ಥದ ಅನುಸಾರ ಅರಿತುಕೊಂಡಿದ್ದೀರಿ. ವಿದ್ಯೆಯ ನೆನಪಂತೂ ಇರಬೇಕಲ್ಲವೆ. ಈಗ ಸ್ಮೃತಿಗೆ ಬಂದಿದೆ – ತಂದೆಯು ತಿಳಿಸಿದ್ದಾರೆ, ನಾನೂ ಸಹ ಮೂಲವತನದ ನಿವಾಸಿಯಾಗಿದ್ದೇನೆ ಮತ್ತು ನಾನೀಗ ತ್ರಿಕಾಲದರ್ಶಿಯಾಗಿದ್ದೇನೆ. ಈ ಡ್ರಾಮಾದಲ್ಲಿ ನಾವು ಮುಖ್ಯ ಪಾತ್ರಧಾರಿಗಳೆಂದು ನೀವು ಮಕ್ಕಳಿಗೆ ತಿಳಿದಿದೆ – ಇಡೀ ಡ್ರಾಮಾದ ಜ್ಞಾನವು ಈಗ ನಿಮ್ಮ ಬುದ್ಧಿಯಲ್ಲಿದೆ. ಈಗ ಸ್ಮೃತಿಗೆ ಬಂದಿದೆ – ನಾವು ಅರ್ಧಕಲ್ಪ ಸುಖಧಾಮದಲ್ಲಿ ಇರುತ್ತೇವೆ, ಅಲ್ಲಿ ರಾವಣನಿರುವುದಿಲ್ಲ, ನಾವಾತ್ಮರು ಪೂರ್ಣ 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ. ಈಗ ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ. ಬಾಬಾ, ತಮ್ಮ ಶ್ರೀಮತದಂತೆ ನಡೆದು ನಾವು ನಿಮ್ಮ ಜೊತೆಯಲ್ಲಿಯೇ ಬರುತ್ತೇವೆ. ಎಷ್ಟು ಸಾಧ್ಯವೋ ಅಷ್ಟು ನಿಮ್ಮನ್ನು ನೆನಪು ಮಾಡುತ್ತೇವೆ. ನೀವೀಗ ತ್ರಿಕಾಲದರ್ಶಿಗಳಾಗಿದ್ದೀರಿ ಅಂದಮೇಲೆ ನಿಮಗೆ ಇಡೀ ದಿನ ಇದೇ ಚಿಂತನೆಯಿರಬೇಕು. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ, ಅವರ ಜೊತೆ ನೀವು ಮಕ್ಕಳೂ ಸಹ ಮೂಲವತನದ ನಿವಾಸಿಗಳಾಗಿದ್ದೀರಿ. ಈಗ ನೀವು ಮಕ್ಕಳಿಗೆ ಮನೆಯ ನೆನಪು ಬಂದಿದೆ. ನಾವು ಪವಿತ್ರರಾಗಿ ನಮ್ಮ ಪರಮಧಾಮಕ್ಕೆ ಹೋಗುತ್ತೇವೆ. ತಂದೆ ಶಿವನ ಪೂಜೆ ಮಾಡುವಾಗ ಸಾಲಿಗ್ರಾಮಗಳಿಗೂ ಪೂಜೆಯು ನಡೆಯುತ್ತದೆ. ತಂದೆಯು ಬಂದು ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ. ಆತ್ಮರನ್ನು ಪವಿತ್ರರನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ನೀವೀಗ ಇಡೀ ಡ್ರಾಮಾದ ಆಟವನ್ನು ಅರಿತುಕೊಂಡಿದ್ದೀರಿ. ನಿಮಗೆ ತಿಳಿದಿದೆ – ಇಡೀ ಆಟವು ಭಾರತದ ಮೇಲೆ ಮಾಡಲ್ಪಟ್ಟಿದೆ ಆದ್ದರಿಂದ ಈಗ ನೀವು ಮಕ್ಕಳಿಗೆ ತಂದೆಯು ಸಮ್ಮುಖದಲ್ಲಿ ಕುಳಿತು ತಿಳಿಸುತ್ತಾರೆ- ತಂದೆಯು ಜ್ಞಾನ ಸಾಗರ ಎಂಬುದನ್ನು ಪ್ರತಿಯೊಂದು ಜೀವಾತ್ಮರೂ ತಿಳಿದುಕೊಂಡಿದ್ದಾರೆ. ಅವರನ್ನು ಭಕ್ತಿಮಾರ್ಗದಲ್ಲಿ ಕರೆಯುತ್ತಾ ಬಂದಿದ್ದೀರಿ ಮತ್ತು ಪ್ರತಿಜ್ಞೆ ಮಾಡುತ್ತಾ ಬಂದಿದ್ದೀರಿ- ಬಾಬಾ, ತಾವು ಬಂದರೆ ಅವಶ್ಯವಾಗಿ ನಿಮ್ಮ ಶ್ರೀಮತದಂತೆ ನಡೆಯುತ್ತೇವೆ. ಇದು ಯಾವುದೇ ಲೌಕಿಕ ಸಂಬಂಧದ ಮಾತಲ್ಲ. ನೀವು ಆತ್ಮಾಭಿಮಾನಿಯಾಗಿ ಈ ವಿಚಾರ ಮಾಡಬೇಕಾಗಿದೆ – ನಾವು ಒಬ್ಬ ಬೇಹದ್ದಿನ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಅವರ ಆಜ್ಞೆಯನ್ನೇ ಪಾಲಿಸಬೇಕಾಗಿದೆ. ಅವರಂತೂ ಬಹಳ ಸಹಜವಾಗಿ ತಿಳಿಸುತ್ತಾರೆ. ಈಗ ನಿಮ್ಮ ಜ್ಞಾನದ ಮೂರನೇ ನೇತ್ರವು ತೆರೆದಿದೆ. ಈ ಜ್ಞಾನವು ನಿಮಗೆ ಇಲ್ಲಿಯೇ ಇದೆ. ಮೂಲವತನದಲ್ಲಿ ತಂದೆ ಮತ್ತು ಮಕ್ಕಳಿರುತ್ತಾರೆ, ಅಲ್ಲಿ ಇದು ಯಾರಿಗೂ ತಿಳಿದಿರುವುದಿಲ್ಲ. ಈಗ ನೀವು ಮಕ್ಕಳಿಗೆ ತಂದೆಯು ತನ್ನ ಪರಿಚಯವನ್ನು ಕೊಡುತ್ತಾರೆ. ಅವರೇ ಜ್ಞಾನ ಸಾಗರನಾಗಿದ್ದಾರೆ. ಮತ್ತ್ಯಾವುದೇ ಸತ್ಸಂಗಗಳಲ್ಲಿ ತಂದೆಯು ನಾವಾತ್ಮರಿಗೆ ಓದಿಸುತ್ತಾರೆಂದು ಹೇಳುವುದಿಲ್ಲ, ಇದನ್ನು ನೀವು ತಿಳಿದುಕೊಂಡಿದ್ದೀರಿ. ಆತ್ಮಾಭಿಮಾನಿಗಳಾಗಿ ಎಂದು ನಿಮಗೆ ಪದೇ-ಪದೇ ಹೇಳಬೇಕಾಗುತ್ತದೆ. ಆತ್ಮವು ಈ ಡ್ರಾಮಾದಲ್ಲಿ ಪಾತ್ರಧಾರಿಯಾಗಿದೆ, ಪಾತ್ರವನ್ನಭಿನಯಿಸುತ್ತಿದೆ. ಆತ್ಮವು ಶರೀರವೆಂಬ ವಸ್ತ್ರವನ್ನು ಧರಿಸಿದೆ, ಆ ಪಾತ್ರಧಾರಿಗಳು ವಸ್ತ್ರಗಳನ್ನು ಬದಲಾಯಿಸುತ್ತಾರೆ.

ನೀವಾತ್ಮರು ನಿರಾಕಾರಿ ಪ್ರಪಂಚದಿಂದ ಇಲ್ಲಿಗೆ ಬಂದು ಈ ಶರೀರರೂಪಿ ವಸ್ತ್ರವನ್ನು ಧರಿಸುತ್ತೀರಿ. ಅವರು ಕೇವಲ ತಮ್ಮ ವಸ್ತ್ರಗಳನ್ನು ಬದಲಾಯಿಸುತ್ತಾರೆ, ನಾವಾತ್ಮರಿಗೆ ತಂದೆಯು ಪುನಃ ರಾಜಯೋಗವನ್ನು ಕಲಿಸುತ್ತಿದ್ದಾರೆ. ಈಗ ನೀವು ತಿಳಿದುಕೊಂಡಿದ್ದೀರಿ – ತಂದೆಯು ಬಂದಿದ್ದಾರೆ ಅಂದಮೇಲೆ ಅವಶ್ಯವಾಗಿ ನಾವು ತಂದೆಗೆ ಸಹಯೋಗಿಗಳಾಗುತ್ತೇವೆ. ಪವಿತ್ರವಾಗಿ ಇಡೀ ಭಾರತವನ್ನು ಪವಿತ್ರವನ್ನಾಗಿ ಮಾಡುತ್ತೇವೆ. ನಾವು ಶ್ರೀಮತದ ಅನುಸಾರವೇ ನಡೆಯಬೇಕಾಗಿದೆ. ಶ್ರೀಮತವು ಹೇಳುತ್ತದೆ – ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾರು ಮಾಡುವರೋ ಅವರು ಪಡೆಯುವರು. ಎಲ್ಲರೂ ಬಂದು ಪುರುಷಾರ್ಥ ಮಾಡುವುದಿಲ್ಲ, ಯಾರು ಕಲ್ಪದ ಮೊದಲು ಪುರುಷಾರ್ಥ ಮಾಡಿದ್ದಾರೆಯೋ ಅವರೇ ಮಾಡುತ್ತಾರೆ. ಈಗ ಹಿಂತಿರುಗಿ ಹೋಗಬೇಕಾಗಿದೆ. ಆದ್ದರಿಂದ ಪುರುಷಾರ್ಥ ಮಾಡಿ ಖಂಡಿತ ಪವಿತ್ರರಾಗಬೇಕಾಗಿದೆ. ನಾವು ಮೇಲೆ ಮೂಲವತನ ನಿವಾಸಿಗಳಾಗಿದ್ದೇವೆ, ಮೊಟ್ಟ ಮೊದಲು ನಾವು ಸ್ವರ್ಗದಲ್ಲಿ ಬಂದೆವು, ನಂತರ ಏಣಿಯನ್ನು ಕೆಳಗಿಳಿಯುತ್ತಾ ಹೋದೆವು. ತಂದೆಯು ಭಾರತವಾಸಿಗಳಿಗೇ ತಿಳಿಸುತ್ತಾರೆ, ಭಾರತದಲ್ಲಿಯೇ ಬರುತ್ತಾರೆ, ಭಾರತದಲ್ಲಿಯೇ ನೆನಪು ಮಾಡುತ್ತಾರೆ – ಭಾರತದಲ್ಲಿ ಬಂದು ನಮ್ಮನ್ನು ಪಾವನ ಮಾಡಿರಿ, ಶರೀರ ಧಾರಣೆ ಮಾಡಿ ನಮಗೆ ಶ್ರೇಷ್ಠ ಕರ್ಮವನ್ನು ಕಲಿಸಿ ಎಂದು ನೆನಪು ಮಾಡುತ್ತಾರೆ. ಶರೀರದ ಹೆಸರೂ ಗಾಯನವಿದೆ. ಇದು ಭಾಗ್ಯಶಾಲಿ ರಥವಾಗಿದೆ. ತಂದೆಯು ಹೇಳುತ್ತಾರೆ – ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಮೊದಲೂ ತಿಳಿಸಿದ್ದೆನು – ನೀವು ಮಕ್ಕಳಿಗೆ ಸ್ಮೃತಿ ಬಂದಿದೆ – ಅವಶ್ಯವಾಗಿ 5000 ವರ್ಷಗಳ ಮೊದಲೂ ಸಹ ತಂದೆಯು ಇದನ್ನೇ ಹೇಳಿದ್ದರು, ಮತ್ತ್ಯಾರೂ ಈ ಮಾತನ್ನು ತಿಳಿಸಲು ಸಾಧ್ಯವಿಲ್ಲ, ತಂದೆಯೇ ಹೇಳುತ್ತಾರೆ – 5000 ವರ್ಷಗಳ ಮೊದಲೂ ಸಹ ನಾನು ಈ ಶರೀರದಲ್ಲಿ ಬಂದು ನಿಮಗೆ ತಿಳಿಸಿದ್ದೆನು. ಈಗ ಪುನಃ ನೀವು ಮಕ್ಕಳಿಗೆ ಹೇಳುತ್ತೇನೆ – ಆತ್ಮಾಭಿಮಾನಿಗಳಾಗಿರಿ, ಹೇಗೆ ನಾಟಕದವರಿಗೆ ನಾವು ಯಾವ ವಸ್ತ್ರಗಳನ್ನು ಧರಿಸಿ ಯಾವ-ಯಾವ ಪಾತ್ರವನ್ನು ಅಭಿನಯಿಸುತ್ತೇವೆ ಎಂದು ತಿಳಿದಿರುತ್ತದೆ ಆದರೆ ಅವರು ದೇಹಾಭಿಮಾನಿಗಳಾಗಿದ್ದಾರೆ. ಇದು ಬೇಹದ್ದಿನ ಮಾತಾಗಿದೆ, ಇಲ್ಲಿ ಆತ್ಮಾಭಿಮಾನಿಗಳಾಗಬೇಕಾಗಿದೆ. ನಾವು ನಿಜವಾಗಿಯೂ ಆತ್ಮರೇ ಆಗಿದ್ದೇವೆ. ಈಗ ನಮ್ಮ ಪಾತ್ರವು ಮುಕ್ತಾಯವಾಗುತ್ತದೆ, ತಂದೆಯು ಸನ್ಮುಖದಲ್ಲಿ ಕುಳಿತು ನಿಮಗೆ ಎಲ್ಲವನ್ನೂ ತಿಳಿಸುತ್ತಾರೆ, ಇದನ್ನು ಮರೆಯಬಾರದು. ಮಾಯೆಯು ಎಷ್ಟೊಂದು ವಿಘ್ನಗಳನ್ನು ಹಾಕುತ್ತದೆ ಆದರೆ ಮಕ್ಕಳೇ, ನೀವು ಯಾವುದೇ ವಿಕರ್ಮ ಮಾಡಬೇಡಿ, ಮನಸ್ಸಿನ ಬಿರುಗಾಳಿ ಬಹಳ ಬರುತ್ತದೆ. ತನ್ನನ್ನು ಪರೀಕ್ಷೆ ಮಾಡಿಕೊಳ್ಳಿ, ನನ್ನ ಕರ್ಮೇಂದ್ರಿಯಗಳು ಎಲ್ಲಿಯೂ ಚಂಚಲವಾಗುತ್ತಿಲ್ಲವೇ? ನಾವು ಕಾಮ ವಿಕಾರವನ್ನು ಗೆಲ್ಲಬಲ್ಲೆವೆ? ನಿಮಗಂತೂ ಬಹಳ ಸಹಜವಾಗಿದೆ. ನಾವಾತ್ಮರಾಗಿದ್ದೇವೆ, ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ತಂದೆಯೊಂದಿಗೇ ಬುದ್ಧಿಯೋಗವನ್ನು ಇಡಬೇಕಾಗಿದೆ. ಕರ್ಮೇಂದ್ರಿಯಗಳಲ್ಲಿ ಚಂಚಲತೆ ಬರುವುದೂ ಸಹ ದೇಹಾಭಿಮಾನ ಆಯಿತಲ್ಲವೆ. ನೀವು ಯಾರೊಂದಿಗೂ ಹೆದರಬಾರದು, ನಿರ್ಭಯರಾಗಿ ಇರಬೇಕಾಗಿದೆ. ಎಲ್ಲಿಗೇ ಹೋದರೂ ಸಹ ಸಾಕ್ಷಿಯಾಗಿ ನೋಡಬೇಕಾಗಿದೆ, ನಾವಂತೂ ಆತ್ಮರಾಗಿದ್ದೇವೆ ಎಂದೂ ಈ ಆಟವನ್ನು ಸಂಪೂರ್ಣವಾಗಿ ಅರಿತಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ ಎಂಬುದು ಬುದ್ಧಿಯಲ್ಲಿ ಬಂದಿದೆ. ಅವರಿಗೆ ಬಿಂದುವೆಂದು ಹೇಳಲಾಗುತ್ತದೆ, ನಿರಾಕಾರಿ ಪ್ರಪಂಚದಲ್ಲಿ ಆತ್ಮಗಳ ವೃಕ್ಷವಿದೆ. ಬೀಜದಿಂದ ವೃಕ್ಷವು ಹೊರಬರುತ್ತದೆ ನಂತರ ನಂಬರ್ವಾರ್ ಎಲೆಗಳು ಬರುತ್ತವೆ. ಇಲ್ಲಿಯೂ ಹಾಗೆಯೇ. ನಂಬರ್ವಾರ್ ಆಗಿ ಮೇಲಿನಿಂದ ಆತ್ಮರು ಬರುತ್ತಾರೆ. ಆತ್ಮವು ಹೇಗೆ ಪ್ರವೇಶ ಮಾಡುತ್ತದೆ, ಹೇಗೆ ಹೊರಟು ಹೋಗುತ್ತದೆ ಎಂಬುದನ್ನು ಯಾರೂ ನೋಡಲು ಸಾಧ್ಯವಿಲ್ಲ. ಈಗ ತಂದೆಯು ತಿಳಿಸುತ್ತಾರೆ – ನಿಮ್ಮ ಆತ್ಮವು ಪತಿತವಾಗಿ ಬಿಟ್ಟಿದೆ, ಅದನ್ನು ಪಾವನ ಮಾಡಿಕೊಳ್ಳಿ. ತಂದೆಯು ಇವರ (ಬ್ರಹ್ಮಾ) ಮೂಲಕ ತಿಳಿಸುತ್ತಾರೆ. ಕರ್ಮೇಂದ್ರಿಯಗಳಿಂದಲೇ ಮಾತನಾಡುತ್ತಾರಲ್ಲವೆ. ಇದರಲ್ಲಿ ಆತ್ಮ ಬಿಂದು ಇಲ್ಲದೇ ಇದ್ದರೆ ಕರ್ಮೇಂದ್ರಿಯಗಳು ಏನೂ ಮಾಡಲು ಸಾಧ್ಯವಿಲ್ಲ. ಇಷ್ಟು ಚಿಕ್ಕ ಬಿಂದು ಎಷ್ಟು ಶಕ್ತಿಶಾಲಿಯಾಗಿದೆ, ಅದರಲ್ಲಿ ಸಂಪೂರ್ಣ ಜ್ಞಾನವಿದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರು ನಿಮಗೆ ತಿಳಿಸಿಕೊಡುತ್ತಾರೆ. ಅವರಲ್ಲಿ ಸಂಪೂರ್ಣ ಜ್ಞಾನವಿದೆ, ಅವರ ಈ ಪಾತ್ರವೂ ಸಹ ನಿಗಧಿಯಾಗಿದೆ. ನೀವಾತ್ಮರಲ್ಲಿಯೂ 84 ಜನ್ಮಗಳ ಪಾತ್ರವಿದೆ, ನೀವು ಸುಖ-ದುಃಖದ ಪಾತ್ರವನ್ನು ಅಭಿನಯಿಸುತ್ತೀರಿ. ದುಃಖದಲ್ಲಿ ಬಹಳ ಕಷ್ಟವನ್ನು ಅನುಭವಿಸುತ್ತೀರಿ. ತಂದೆಯು ಹೇಳುತ್ತಾರೆ – ನಾನಂತೂ ಪುನರ್ಜನ್ಮದಲ್ಲಿ ಬರುವುದಿಲ್ಲ, ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ನಾನು ತೆಗೆದುಕೊಳ್ಳುವುದಿಲ್ಲ. ನಾನು ಬಂದು ನೀವು ಮಕ್ಕಳಿಗೆ ಸಹಜ ಯುಕ್ತಿಯನ್ನು ತಿಳಿಸುತ್ತೇನೆ – ನನ್ನನ್ನು ನೆನಪು ಮಾಡಿದರೆ ಪಾವನರಾಗುವಿರಿ. ನೀವು ಅರ್ಧಕಲ್ಪ ಕಾಮ ಚಿತೆಯ ಮೇಲೆ ಕುಳಿತು ತಮೋಪ್ರಧಾನರಾಗಿದ್ದೀರಿ, ತಂದೆಯು ಆತ್ಮಗಳೊಂದಿಗೇ ಮಾತನಾಡುತ್ತಾರೆ. ಆತ್ಮನ ಕರ್ಮೇಂದ್ರಿಯಗಳು ಮೊದಲು ಚಿಕ್ಕದಾಗಿರುತ್ತವೆ ನಂತರ ದೊಡ್ಡದಾಗುತ್ತವೆ. ಆತ್ಮವು ಚಿಕ್ಕದು, ದೊಡ್ಡದು ಆಗುವುದಿಲ್ಲ. ಹೇ ಪತಿತ-ಪಾವನ ಬನ್ನಿ ಎಂದು ಆತ್ಮವೇ ಹೇಳುತ್ತದೆ, ಆತ್ಮವೇ ತಂದೆಯನ್ನು ಕರೆಯುತ್ತದೆ. ತಂದೆಯು ಹೇಳುತ್ತಾರೆ – ನಾನು ಕಲ್ಪ-ಕಲ್ಪವೂ ನೀವು ಪತಿತರನ್ನು ಪಾವನರನ್ನಾಗಿ ಮಾಡಲು ಬರುತ್ತೇನೆ. ಈಗ ನೀವು ತಿಳಿದುಕೊಂಡಿದ್ದೀರಿ – ಆತ್ಮವು ಹೇಗೆ ಬಂದು ಹೋಗುತ್ತದೆ ಎಂದು. ಆತ್ಮವು ಹೇಗೆ ಹೋಗುತ್ತದೆಯೋ ನೋಡೋಣವೆಂದು ಮನುಷ್ಯರು ಬಹಳ ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ಇದು ಯಾರಿಗೂ ತಿಳಿಯುವುದಿಲ್ಲ ಏಕೆಂದರೆ ಆತ್ಮವು ಅತೀ ಸೂಕ್ಷ್ಮವಾಗಿದೆ. ಇಷ್ಟು ಚಿಕ್ಕ ಆತ್ಮನಲ್ಲಿ ಎಷ್ಟೊಂದು ಪಾತ್ರವಿದೆ. ಹೇಗೆ ಬೀಜದಲ್ಲಿ ಸಂಪೂರ್ಣ ಜ್ಞಾನವಿರುತ್ತದೆ, ಅದಂತೂ ಜಡ ಬೀಜವಾಗಿದೆ. ಆಲದ ಮರದ ಬೀಜವು ಎಷ್ಟು ಚಿಕ್ಕದು ಮತ್ತು ಅದರಿಂದ ಬರುವ ವೃಕ್ಷವು ಎಷ್ಟು ಉದ್ದಗಲವಾಗಿರುತ್ತದೆ. ಕಲ್ಕತ್ತಾದ ಆಲದ ಮರವನ್ನು ಕೆಲವರು ನೋಡಿರಬೇಕು, ಬಹಳ ದೊಡ್ಡ ವೃಕ್ಷವಾಗಿದೆ. ಈಗ ಅದರ ಬುಡವು ಸಡಿಲವಾಗಿ ಬಿಟ್ಟಿದೆ. ವೃಕ್ಷವು ಮಾತ್ರ ನಿಂತಿದೆ, ಇದೂ ಹಾಗೆಯೇ ದೇವತಾ ಧರ್ಮದ ಬುಡವೇ ಇಲ್ಲ. ವೃಕ್ಷವೂ ಸಹ ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಆದ್ದರಿಂದಲೇ ಸರ್ಕಾರಕ್ಕೂ ಹೇಳುತ್ತೀರಿ – ನಾವು ಇಷ್ಟು ಸಮಯದಲ್ಲಿ ಪ್ರಪಂಚವನ್ನು ಪಾವನ ಮಾಡಿ ತೋರಿಸುತ್ತೇವೆ ಎಂದು. ಮನುಷ್ಯರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ನಿಮಗೆ ನಿಶ್ಚಯವಿದೆ – ನಾವು ಈ ಭಾರತವನ್ನು ಶ್ರೇಷ್ಠಾಚಾರಿ ಪ್ರಪಂಚವನ್ನಾಗಿ ಮಾಡುತ್ತೇವೆ ಆಗಲೇ ಭ್ರಷ್ಟಾಚಾರಿ ಪ್ರಪಂಚದ ವಿನಾಶವಾಗುವುದು. ಶಾಂತಿ ಸ್ಥಾಪನೆಯಾಗಲಿ ಎಂದು ಬಯಸುತ್ತಾರೆ, ಆತ್ಮವು ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಸುಸ್ತಾಗಿ ಬಿಟ್ಟಿದೆ. ಆದ್ದರಿಂದ ಹೇ ಶಾಂತಿ ದೇವ ಎಂದು ಕರೆಯುತ್ತದೆ, ಆತ್ಮವೇ ಶಾಂತ ಸ್ವರೂಪ ಎಂಬುದನ್ನು ತಿಳಿದುಕೊಳ್ಳುತ್ತಾರೆಯೇ! ಆದರೆ ಇಲ್ಲಿ ಆತ್ಮವು ಕರ್ಮೇಂದ್ರಿಯಗಳ ಮೂಲಕ ಕರ್ಮವನ್ನಂತೂ ಅವಶ್ಯವಾಗಿ ಮಾಡಲೇಬೇಕಾಗಿದೆ. ಶಾಂತಿಯನ್ನು ಕೊಡಿ ಎಂದು ಹೇಳುತ್ತಾರೆ, ಆದರೆ ಶಾಂತಿಧಾಮವೇ ಬೇರೆ, ಸುಖಧಾಮವೇ ಬೇರೆ ಎಂಬುದನ್ನು ಅವರು ತಿಳಿದುಕೊಂಡಿಲ್ಲ. ಸುಖಧಾಮದಲ್ಲಿ ಬಹಳ ಕಡಿಮೆ ಜನಸಂಖ್ಯೆ ಇರುತ್ತದೆ ಅಲ್ಲದೆ ಅದು ಪವಿತ್ರ ಪ್ರಪಂಚವಾಗಿರುತ್ತದೆ. ಅಲ್ಲಿ ಯಾರೂ ಶಾಂತಿಗಾಗಿ ಬೇಡುವುದಿಲ್ಲ. ಅಲ್ಲಿಯೂ ಕರ್ಮ ಮಾಡುತ್ತಾರೆ ಆದರೆ ಅಶಾಂತಿಯಿರುವುದಿಲ್ಲ. ಜೀವನ್ಮುಕ್ತಿಧಾಮ, ಶಾಂತಿಧಾಮ ಎರಡೂ ಬೇರೆ-ಬೇರೆಯಾಗಿದೆ. ಸತ್ಯಯುಗದಲ್ಲಿ ಜೀವಾತ್ಮರಿಗೆ ಸುಖವೂ ಇರುತ್ತದೆ, ಶಾಂತಿಯೂ ಇರುತ್ತದೆ. ಸದಾ ಆರೋಗ್ಯವಂತರು ಐಶ್ವರ್ಯವಂತರಾಗಿರುತ್ತಾರೆ.

ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಿ ಸ್ವರ್ಗವೆಂದರೇನು ಎಂಬುದು ಯಾರಿಗೂ ತಿಳಿದಿಲ್ಲ. ಇವರು (ಲಕ್ಷ್ಮೀ-ನಾರಾಯಣ) ಮಕ್ಕಳಲ್ಲವೆ. ಈ ಮಕ್ಕಳಿಗೂ ಸಹ ಸುಖವನ್ನು ಯಾರು ಕೊಟ್ಟರು? ಯಾರಾದರೂ ಸುಖ ಕೊಡುವವರಿರಬೇಕಲ್ಲವೆ. ಇವರದು ಪುನಃ ರಾಜ್ಯ ಬರುತ್ತದೆಯೇ? ಸ್ವರ್ಗವು ಅವಶ್ಯವಾಗಿ ಮತ್ತೆ ಪುನರಾವರ್ತನೆಯಾಗುವುದು. ಸ್ವರ್ಗದಲ್ಲಿದ್ದಾಗ ನರಕವು ಪುನಃ ಬರುತ್ತದೆ ಎಂಬುದನ್ನು ಯಾರೂ ಹೇಳುವುದಿಲ್ಲ. ಈಗ ಹೇಳುತ್ತೀರಿ – ಪವಿತ್ರತೆ, ಸುಖ, ಶಾಂತಿಯ ಹೊಸ ಪ್ರಪಂಚವು ಪುನಃ ಪುನರಾವರ್ತನೆಯಾಗುವುದು. ಇದಂತೂ ಹಳೆಯ ಪ್ರಪಂಚ, ದುಃಖಧಾಮವಾಗಿದೆ. ಇದಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಹೊಸ ಪ್ರಪಂಚವೂ ಇತ್ತಲ್ಲವೆ, ಅದಕ್ಕೆ ಸ್ವರ್ಗವೆಂದು ಹೇಳುತ್ತಿದ್ದರು. ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿ ಕುಳಿತಿದೆ, ಅವಶ್ಯವಾಗಿ ನಾವು ಪುನಃ ದೇವಿ-ದೇವತೆಗಳಾಗುತ್ತಿದ್ದೇವೆ. ನಿಮ್ಮ ಗುರಿ-ಧ್ಯೇಯವೇ ಇದಾಗಿದೆ – ನಾವು ಪುನಃ ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಅವಶ್ಯವಾಗಿ ಪಡೆಯುತ್ತೇವೆ, ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕಾಗಿದೆ. ನಾವಾತ್ಮರೇ ಮೂಲವತನದಲ್ಲಿರುತ್ತೇವೆ, ಮತ್ತೆ ಅಲ್ಲಿಂದ ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬರುತ್ತೇವೆ. ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದು ಈಗ ಸ್ಮೃತಿಗೆ ಬಂದಿದೆ. ತಂದೆಯು ತಿಳಿಸುವುದೂ ಸಹ ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಿಗೆ ಮಾತ್ರ. ಬ್ರಾಹ್ಮಣರಾಗದೇ ಪ್ರಜಾಪಿತ ಬ್ರಹ್ಮನ ಮಕ್ಕಳಾಗದೆ ಶಿವ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವಿರಿ! ಪ್ರಜಾಪಿತ ಬ್ರಹ್ಮನು ಹೆಸರುವಾಸಿಯಲ್ಲವೆ. ಬ್ರಹ್ಮಾರವರ ಮೂಲಕ ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ ಅಂದಮೇಲೆ ಹೊಸ ಪ್ರಪಂಚದ ರಾಜ್ಯವೂ ಸಹ ಅವಶ್ಯವಾಗಿ ಅವರಿಗೇ ಸಿಕ್ಕಿರಬೇಕು. 5000 ವರ್ಷಗಳ ಮೊದಲೂ ಸಹ ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗಿತ್ತು. ಈಗ ಮತ್ತೆ ಪುನರಾವರ್ತನೆಯಾಗುವುದು ಅದಕ್ಕಾಗಿ ನೀವು ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಡ್ರಾಮಾ ದೊಡ್ಡದೋ, ಪುರುಷಾರ್ಥ ದೊಡ್ಡದೋ? ಎಂದು ಕೆಲವರು ಕೇಳುತ್ತಾರೆ. ತಿಳಿಸಬೇಕಾಗಿದೆ, ಪುರುಷಾರ್ಥವನ್ನು ಅವಶ್ಯವಾಗಿ ಮಾಡಲೇಬೇಕಾಗಿದೆ. ಪುರುಷಾರ್ಥವಿಲ್ಲದೆ ಪ್ರಾಲಬ್ಧ ಹೇಗೆ ಸಿಗುವುದು, ಆದ್ದರಿಂದ ಸಂಪೂರ್ಣ ಪುರುಷಾರ್ಥ ಮಾಡಬೇಕು. ಯಾರಾದರೂ ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆಂದರೆ ಡ್ರಾಮಾನುಸಾರ ಇವರ ಪುರುಷಾರ್ಥವು ಚೆನ್ನಾಗಿ ನಡೆಯುತ್ತಿದೆ. ಒಳ್ಳೆಯ ಪದವಿಯನ್ನೇ ಪಡೆಯುತ್ತಾರೆ. ಅವರ ಪುರುಷಾರ್ಥವು ಬಹಳ ತೀವ್ರವಾಗಿ ನಡೆಯುತ್ತದೆ ಎಂದು ತಿಳಿಸಲಾಗುತ್ತದೆ. ನಂತರ ನಡೆಯುತ್ತಾ ನಡೆಯುತ್ತಾ ಕೆಲವರದು ಕಡಿಮೆ ಪದವಿಯೂ ಆಗುತ್ತದೆ. ಬ್ರಾಹ್ಮಿಣಿಯರು ತಿಳಿದುಕೊಳ್ಳುತ್ತೀರಿ, ಬ್ರಾಹ್ಮಣಿಯರ ಬಳಿ ಬರುವವರು ತಿಳಿದುಕೊಳ್ಳುತ್ತಾರೆ. ಇಂತಹವರು ಬಹಳ ಚೆನ್ನಾಗಿ ನಡೆಯುತ್ತಿದ್ದರು ಆದರೆ ಇಂದು ಬರುತ್ತಿಲ್ಲ. ಕೆಲವರು ಹೇಳುತ್ತಾರೆ – ನಮ್ಮ ಬುದ್ಧಿಯಲ್ಲಿ ಏಕೆ ಕುಳಿತುಕೊಳ್ಳುವುದಿಲ್ಲವೋ ಗೊತ್ತಿಲ್ಲ, ತಂದೆಯನ್ನು ನೆನಪು ಮಾಡಲು ಆಗುತ್ತಿಲ್ಲ. ನಮ್ಮಿಂದ ನಡೆಯಲು ಸಾಧ್ಯವಿಲ್ಲ. ಗುರಿಯು ಬಹಳ ಉನ್ನತವಾಗಿದೆ ಎಂದು ಬರೆಯುತ್ತಾರೆ. ಮೂಲ ಮಾತೇ ಆಗಿದೆ – ನಿರ್ವಿಕಾರಿಗಳಾಗುವುದು. ವಿಕಾರಗಳನ್ನು ಬಿಡುವುದು ಬಹಳ ಪರಿಶ್ರಮವಾಗಿದೆ, ನೀವು ತಿಳಿದುಕೊಂಡಿದ್ದೀರಿ – ಡ್ರಾಮಾನುಸಾರ ಕಲ್ಪದ ಹಿಂದಿನ ತರಹ ಇವರದು ಅದೇ ಸ್ಥಿತಿಯು ನಡೆದು ಬರುತ್ತಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಬೇಹದ್ದಿನ ನಾಟಕವನ್ನು ಸಾಕ್ಷಿಯಾಗಿ ನೋಡಬೇಕಾಗಿದೆ, ಯಾರೊಂದಿಗೂ ಹೆದರಬಾರದು, ನಿರ್ಭಯರಾಗಲು “ನಾನು ಆತ್ಮನಾಗಿದ್ದೇನೆ” ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ.

2. ತಮ್ಮ ಪರಿಶೀಲನೆ ಮಾಡಿಕೊಂಡು ಸ್ವಯಂನಿಂದ ಪರೀಕ್ಷೆ ತೆಗೆದುಕೊಳ್ಳಬೇಕು – ಯಾವುದೇ ಕರ್ಮೇಂದ್ರಿಯವು ಚಂಚಲವಾಗುತ್ತಿಲ್ಲವೆ? ಕಾಮ ವಿಕಾರದ ಮೇಲೆ ಜಯ ಗಳಿಸಿದ್ದೇನೆಯೇ? ಎಲ್ಲಿಯವರೆಗೆ ಆತ್ಮಾಭಿಮಾನಿಯಾಗಿದ್ದೇನೆ?

ವರದಾನ:-

“ನಾನು ಮತ್ತು ನನ್ನ ಬಾಬಾ” – ಈ ಸ್ಮೃತಿಯಲ್ಲಿ ಕಂಬೈಂಡ್ ಆಗಿರಿ ಹಾಗೂ ಈ ಶ್ರೇಷ್ಠ ಸ್ಥಿತಿಯ ಸ್ಥಾನವು ಸದಾ ಸ್ಮೃತಿಯಲ್ಲಿರಲಿ – ಇಂದು ನಾವು ಬ್ರಾಹ್ಮಣರಾಗಿದ್ದೇವೆ, ನಾಳೆ ದೇವತೆಯಾಗುವೆವು. ಹಮ್ ಸೊ, ಸೊ ಹಮ್..ನ ಮಂತ್ರವು ಸದಾ ನೆನಪಿದ್ದರೆ, ಈ ನಶೆ ಮತ್ತು ಖುಷಿಯಲ್ಲಿ ಸಹಜವಾಗಿ ಹಳೆಯ ಪ್ರಪಂಚವು ಮರೆತು ಹೋಗುತ್ತದೆ. ಸದಾ ಇದೇ ನಶೆಯಿರುವುದು – ನಾವೇ ಕಲ್ಪ-ಕಲ್ಪದ ಅಧಿಕಾರಿ ಆತ್ಮನಾಗಿದ್ದೇವೆ. ನಾವೇ ಆಗಿದ್ದೆವು, ನಾವೇ ಆಗಿದ್ದೇವೆ ಮತ್ತು ಕಲ್ಪ-ಕಲ್ಪವೂ ನಾವೇ ಆಗುವೆವು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top