22 October 2021 KANNADA Murli Today | Brahma Kumaris

Read and Listen today’s Gyan Murli in Kannada

21 October 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ಮಾಯೆಗೆ ಹೆದರಬೇಡಿ, ಭಲೆ ಎಷ್ಟಾದರೂ ಮರೆಸುವ ಪ್ರಯತ್ನ ಪಡಲಿ ಆದರೆ ಸುಸ್ತಾಗಬೇಡಿ, ಅಮೃತವೇಳೆ ಎದ್ದು ನೆನಪಿನಲ್ಲಿರುವ ಸಂಪೂರ್ಣ ಪುರುಷಾರ್ಥ ಮಾಡಿರಿ”

ಪ್ರಶ್ನೆ:: -

ಪುರುಷಾರ್ಥದಲ್ಲಿ ಮೊದಲಿನ ನಂಬರನ್ನು ಯಾವ ಮಕ್ಕಳು ತೆಗೆದುಕೊಳ್ಳುವರು?

ಉತ್ತರ:-

ಯಾರು ತಂದೆಯ ಮೇಲೆ ಸಂಪೂರ್ಣ ಬಲಿಹಾರಿಯಾಗುವರೋ ಅವರೇ ಎಲ್ಲರಿಗಿಂತ ಮುಂದೆ ಹೋಗುತ್ತಾರೆ. ತಂದೆಯ ಮೇಲೆ ಮಕ್ಕಳು ಬಲಿಹಾರಿಯಾಗುತ್ತಾರೆ ಮತ್ತು ಮಕ್ಕಳ ಮೇಲೆ ತಂದೆಯು ಬಲಿಹಾರಿಯಾಗುತ್ತಾರೆ. ನೀವು ತಮ್ಮ ಕೆಲಸಕ್ಕೆ ಬಾರದ ವಸ್ತುಗಳು, ಹಳೆಯ ತನು-ಮನ-ಧನವನ್ನು ತಂದೆಗೆ ಕೊಡುತ್ತೀರಿ ಮತ್ತು ತಂದೆಯು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ, ಆದ್ದರಿಂದ ಅವರಿಗೆ ಬಡವರ ಬಂಧು ಎಂದು ಹೇಳಲಾಗುತ್ತದೆ. ಬಡ ಭಾರತಕ್ಕೆ ದಾನ ನೀಡಲು ತಂದೆಯು ಬಂದಿದ್ದಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಯನಹೀನರಿಗೆ ದಾರಿ ತೋರಿಸು ಪ್ರಭು….

ಓಂ ಶಾಂತಿ. ಮಧುರಾತಿ ಮಧುರ ಅತಿ ಮಧುರ, ಈ ರೀತಿ ಹೇಳಬಹುದಲ್ಲವೆ! ಬೇಹದ್ದಿನ ತಂದೆ ಮತ್ತು ಬೇಹದ್ದಿನ ಪ್ರೀತಿಯಾಗಿದೆ. ಹೇಳುತ್ತಾರೆ – ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ ಗೀತೆಯನ್ನು ಕೇಳಿದಿರಾ. ಮಾರ್ಗವನ್ನು ಒಬ್ಬ ತಂದೆಯೇ ತೋರಿಸುತ್ತಾರೆ. ಭಕ್ತಿಮಾರ್ಗದಲ್ಲಿ ಮಾರ್ಗ ತಿಳಿಸುವವರು ಯಾರೂ ಇಲ್ಲ. ಅಲ್ಲಿಯೇ ಹುಡುಕಾಡುತ್ತಾ ಇರುತ್ತಾರೆ. ಈಗ ನಿಮಗೆ ಮಾರ್ಗವು ಸಿಕ್ಕಿದೆ ಆದರೂ ಸಹ ತಂದೆಯ ಜೊತೆ ಬುದ್ಧಿಯೋಗವನ್ನು ಇಡಲು ಮಾಯೆಯು ಬಿಡುವುದಿಲ್ಲ. ಒಬ್ಬ ತಂದೆಯನ್ನು ನೆನಪು ಮಾಡುವುದರಿಂದ ನಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ. ಚಿಂತೆಯ ಯಾವುದೇ ಮಾತಿರುವುದಿಲ್ಲ ಎಂಬುದನ್ನೂ ತಿಳಿದುಕೊಳ್ಳುತ್ತಾರೆ ಆದರೆ ಮರೆತು ಹೋಗುತ್ತಾರೆ. ತಂದೆಯು ಹೇಳುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ಪತಿತ-ಪಾವನ ತಂದೆಯಾದ ನನ್ನನ್ನು ನೆನಪು ಮಾಡಿರಿ. ತಂದೆಯು ಜ್ಞಾನ ಸಾಗರನಾಗಿದ್ದಾರಲ್ಲವೆ, ಅವರೇ ಗೀತಾ ಜ್ಞಾನದಾತನಾಗಿದ್ದಾರೆ. ಸ್ವರ್ಗದ ರಾಜ್ಯಭಾಗ್ಯ ಸದ್ಗತಿಯನ್ನು ಕೊಡುತ್ತಾರೆ. ಕೃಷ್ಣನಿಗೆ ಜ್ಞಾನಸಾಗರನೆಂದು ಹೇಳಲು ಸಾಧ್ಯವಿಲ್ಲ. ಈ ಭೂಮಿಯ ನಾಲ್ಕೂ ಕಡೆ ಸಾಗರವೇ ಸಾಗರವಿದೆ. ಸಾಗರವೆಲ್ಲವೂ ಒಂದೇ ಆಗಿದೆ, ಆದರೆ ಅದನ್ನು ಹಂಚಲಾಗಿದೆ. ನೀವು ವಿಶ್ವದ ಮಾಲೀಕರಾಗುತ್ತೀರೆಂದರೆ ಇಡೀ ಸಾಗರ, ಧರಣಿಗೆ ನೀವು ಮಾಲೀಕರಾಗುತ್ತೀರಿ. ಇದು ನಮ್ಮ ಭಾಗ, ನಮ್ಮ ಎಲ್ಲೆಯ ಒಳಗಡೆ ಬರಬೇಡಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಇಲ್ಲಿ ಸಾಗರದಲ್ಲಿಯೂ ತುಂಡು-ತುಂಡು ಮಾಡಿ ಬಿಟ್ಟಿದ್ದಾರೆ. ನೀವು ತಿಳಿದುಕೊಂಡಿದ್ದೀರಿ – ಇಡೀ ವಿಶ್ವವೇ ಭಾರತವಾಗಿತ್ತು, ಅದಕ್ಕೆ ನೀವು ಮಾಲೀಕರಾಗಿದ್ದಿರಿ. ಗೀತೆಯೂ ಇದೆ, ಬಾಬಾ ತಮ್ಮಿಂದ ನಾವು ಇಂತಹ ರಾಜ್ಯಭಾಗ್ಯವನ್ನು ಪಡೆಯುತ್ತೇವೆ ಯಾವುದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ನೋಡಿ, ನೀರಿಗಾಗಿಯೂ ಜಗಳವಾಗುತ್ತದೆ, ಒಬ್ಬರು ಇನ್ನೊಬ್ಬರಿಗೆ ನೀರು ಕೊಡಬೇಕೆಂದರೆ ಲಕ್ಷಾಂತರ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ನೀವು ಮಕ್ಕಳಿಗೆ ಇಡೀ ವಿಶ್ವದ ರಾಜ್ಯಭಾಗ್ಯವು ಕಲ್ಪದ ಹಿಂದಿನ ತರಹ ಸಿಗುತ್ತಿದೆ. ತಂದೆಯು ಜ್ಞಾನದ ಮೂರನೇ ನೇತ್ರವನ್ನು ಕೊಟ್ಟಿದ್ದಾರೆ. ಜ್ಞಾನದಾತನು ಪರಮಪಿತ ಪರಮಾತ್ಮನಾಗಿದ್ದಾರೆ. ಈ ಸಮಯದಲ್ಲಿ ಬಂದು ಜ್ಞಾನವನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ಬಳಿಯೂ ಈ ಜ್ಞಾನವಿರುವುದಿಲ್ಲ. ಹಾ! ಈ ರೀತಿ ಹೇಳಬಹುದು, ಇವರು ಮೊದಲಿನ ಜನ್ಮದಲ್ಲಿ ಜ್ಞಾನವನ್ನು ಪಡೆದು ಈ ರೀತಿಯಾಗಿದ್ದಾರೆ. ನೀವೇ ಆಗಿದ್ದಿರಿ, ನೀವು ಹೇಳುತ್ತೀರಿ – ಬಾಬಾ, ತಾವು ಅದೇ ಕಲ್ಪದ ಹಿಂದಿನ ತಂದೆಯಾಗಿದ್ದೀರಿ. ತಾವು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಿದ್ದಿರಿ. ತಂದೆಯು ಹೇಳುತ್ತಾರೆ – ನನ್ನ ಮತವು ಬಹಳ ಉದ್ದಗಲವಾಗಿ ಇಲ್ಲ. ಆ ಲೌಕಿಕ ವಿದ್ಯೆಯು ಎಷ್ಟು ದೊಡ್ಡದಾಗಿರುತ್ತದೆ. ಇದಂತೂ ಬಹಳ ಸಹಜವಾಗಿದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡು ಅನ್ಯರಿಗೆ ತಿಳಿಸುತ್ತಾ ಇರುತ್ತೀರಿ – ಹೇಗೆ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ ಎಂದು. ಈಗ ತಂದೆಯ ಬಳಿ ಹಿಂತಿರುಗಿ ಹೋಗಬೇಕಾಗಿದೆ. ಇದನ್ನೂ ತಂದೆಯು ತಿಳಿಸಿದ್ದಾರೆ, ಮಕ್ಕಳೇ, ಮಾಯೆಯ ಬಿರುಗಾಳಿಗಳು ಬಹಳಷ್ಟು ಬರುತ್ತವೆ. ಇದಕ್ಕೆ ಹೆದರಬೇಡಿ. ಬೆಳಗ್ಗೆ ಎದ್ದು ಕುಳಿತುಕೊಳ್ಳುತ್ತಾರೆ, ಬುದ್ಧಿಯು ಬೇರೆ-ಬೇರೆ ವಿಚಾರಗಳಲ್ಲಿ ಹೊರಟು ಹೋಗುತ್ತವೆ. ಎರಡು ನಿಮಿಷಗಳೂ ನೆನಪಿರುವುದಿಲ್ಲ. ತಂದೆಯು ಹೇಳುತ್ತಾರೆ, ಸುಸ್ತಾಗಬೇಡಿ. ಒಳ್ಳೆಯದು – ಒಂದು ನಿಮಿಷ ನೆನಪು ಮಾಡಿದಿರಿ ಮತ್ತೆ ನಾಳೆ ಕುಳಿತುಕೊಳ್ಳಿ, ನಾಡಿದ್ದು ಕುಳಿತುಕೊಳ್ಳಿರಿ. ಒಳಗೆ ಇದನ್ನು ಪಕ್ಕಾ ಮಾಡಿಕೊಳ್ಳಿರಿ – ನಾವು ನೆನಪು ಮಾಡಲೇಬೇಕಾಗಿದೆ. ಒಂದುವೇಳೆ ಯಾರಾದರೂ ವಿಕಾರದಲ್ಲಿ ಹೋಗುತ್ತಾ ಇದ್ದರೆ ಮತ್ತೆ ಅನೇಕ ಬಿರುಗಾಳಿಗಳು ಬರುತ್ತವೆ. ಪವಿತ್ರತೆಯೇ ಮುಖ್ಯವಾಗಿದೆ. ಇಂದು ಈ ಪ್ರಪಂಚವು ಪತಿತ ವೇಶ್ಯಾಲಯವಾಗಿದೆ. ನಾಳೆ ಪಾವನ ಶಿವಾಲಯವಾಗುವುದು. ತಿಳಿದುಕೊಂಡಿದ್ದೀರಿ, ಇದು ಹಳೆಯ ಶರೀರವಾಗಿದೆ. ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ಯಾವುದೇ ಸಮಯದಲ್ಲಿ ಶರೀರ ಬಿಟ್ಟರೂ ಸಹ ಸ್ವರ್ಗದಲ್ಲಿ ಹೋಗಲು ಯೋಗ್ಯರಾಗುತ್ತೀರಿ. ತಂದೆಯಿಂದ ಅಲ್ಪಸ್ವಲ್ಪ ಜ್ಞಾನವನ್ನು ಕೇಳಿರುತ್ತಾರಲ್ಲವೆ. ಇಂತಹವರು ಅನೇಕರಿದ್ದಾರೆ ಯಾರು ಇಲ್ಲಿಂದ ಬಿಟ್ಟು ಹೊರಟು ಹೋಗಿದ್ದಾರೆಯೋ ಅವರೂ ಸಹ ಬಂದು ತಮ್ಮ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂತ್ಯ ಮತಿ ಸೋ ಗತಿಯಾಗುವುದು. ಉದಾಹರಣೆಗೆ, ಯಾರಾದರೂ ಶರೀರ ಬಿಡುತ್ತಾರೆ, ಜ್ಞಾನದ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆಂದರೆ ಮತ್ತೆ ಬಾಲ್ಯದಲ್ಲಿಯೇ ಅವರಿಗೆ ಈ ಜ್ಞಾನದ ಕಡೆ ಸೆಳೆತವಾಗುವುದು. ಭಲೆ ಕರ್ಮೇಂದ್ರಿಯಗಳು ಚಿಕ್ಕದಾಗಿರುವ ಕಾರಣ ಹೇಳಲು ಸಾಧ್ಯವಾಗುವುದಿಲ್ಲ ಆದರೆ ಆಕರ್ಷಣೆಯಾಗುತ್ತದೆ. ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ಇರುತ್ತದೆ, ಸುಖದಾಯಿಯಾಗುತ್ತಾರೆ. ತಂದೆಯು ಆತ್ಮಕ್ಕೇ ಕಲಿಸುತ್ತಾರಲ್ಲವೆ. ಹೇಗೆ ತಂದೆಯು ಸೈನಿಕರ ಉದಾಹರಣೆಯನ್ನು ತಿಳಿಸುತ್ತಾರೆ – ಯುದ್ಧದ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆಂದರೆ ಮತ್ತೆ ಸೈನ್ಯದಲ್ಲಿ ಬಂದು ಸೇರುತ್ತಾರೆ. ಹಾಗೆಯೇ ಶಾಸ್ತ್ರಗಳನ್ನು ಓದುವವರು ಸಂಸ್ಕಾರವನ್ನು ತೆಗೆದುಕೊಂಡು ಹೋಗುವ ಕಾರಣ ಮುಂದಿನ ಜನ್ಮದಲ್ಲಿ ಬಾಲ್ಯದಲ್ಲಿಯೇ ಶಾಸ್ತ್ರಗಳು ಕಂಠಪಾಠವಾಗಿ ಬಿಡುತ್ತದೆ, ಅವರ ಮಹಿಮೆಯೂ ಆಗುತ್ತದೆ. ಅಂದಾಗ ಇಲ್ಲಿಂದ ಯಾರು ಹೋಗುತ್ತಾರೆಯೋ ಅವರದು ಬಾಲ್ಯದಲ್ಲಿಯೇ ಮಹಿಮೆಯಾಗುತ್ತದೆ. ಆತ್ಮವೇ ಜ್ಞಾನವನ್ನು ಧಾರಣೆ ಮಾಡಿಕೊಳ್ಳುತ್ತದೆಯಲ್ಲವೆ. ಬಾಕಿ ಉಳಿದಿರುವ ಲೆಕ್ಕಾಚಾರಗಳನ್ನು ಮುಗಿಸಬೇಕಾಗುತ್ತದೆ. ಸ್ವರ್ಗದಲ್ಲಂತೂ ಬರುತ್ತಾರಲ್ಲವೆ. ತಂದೆಯ ಬಳಿ ಬಂದು ನಮಸ್ಕಾರ ಮಾಡುತ್ತಾರೆ. ಹೀಗೆ ಪ್ರಜೆಗಳಂತೂ ಅನೇಕರಾಗುವರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವರು. ಅಂತಿಮದಲ್ಲಿನ ಹೇಳಿಕೆಯಿದೆಯಲ್ಲವೆ – ಓಹೋ ಪ್ರಭು! ನಿನ್ನ ಲೀಲೆ ಅಪರಮಪಾರ……

ನೀವೀಗ ತಿಳಿದುಕೊಳ್ಳುತ್ತೀರಿ – ಓಹೋ ಬಾಬಾ! ತಮ್ಮ ಲೀಲೆಯು ಡ್ರಾಮಾ ಪ್ಲಾನನುಸಾರ ಈ ರೀತಿಯಿದೆ, ತಮ್ಮ ಪಾತ್ರವು ಎಲ್ಲಾ ಮನುಷ್ಯ ಮಾತ್ರರಿಗಿಂತ ಭಿನ್ನವಾಗಿದೆ. ಯಾರು ತಂದೆಯ ಸರ್ವೀಸನ್ನು ಚೆನ್ನಾಗಿ ಮಾಡುವರೋ ಅವರಿಗೆ ಬಹಳ ದೊಡ್ಡ ಬಹುಮಾನವು ಸಿಗುತ್ತದೆ. ವಿಜಯಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ. ಇದು ಆತ್ಮಿಕ ಜ್ಞಾನವಾಗಿದೆ, ಆತ್ಮಿಕ ತಂದೆಯೇ ಆತ್ಮರಿಗೆ ಕೊಡುತ್ತಾರೆ. ಮನುಷ್ಯರಂತೂ ಎಲ್ಲರೂ ಶರೀರಗಳನ್ನೇ ನೆನಪು ಮಾಡುತ್ತಾರೆ. ಶಿವಾನಂದ, ಗಂಗೇಶ್ವರಾನಂದ……. ಮೊದಲಾದವರು ಈ ಜ್ಞಾನವನ್ನು ಕೊಡುತ್ತಾರೆಂದು ಹೇಳುತ್ತಾರೆ ಅಂದರೆ ಶರೀರವೇ ನೆನಪಿಗೆ ಬರುತ್ತದೆ. ಇಲ್ಲಂತೂ ನಿರಾಕಾರ ಶಿವ ತಂದೆಯು ಜ್ಞಾನವನ್ನು ಕೊಡುತ್ತಾರೆಂದು ಹೇಳುತ್ತೀರಿ. ನಾನು ಸರ್ವಶ್ರೇಷ್ಠನಾಗಿದ್ದೇನೆ, ನಾನಾತ್ಮನ ಹೆಸರಾಗಿದೆ – ಶಿವ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಮತ್ತೆ ಬ್ರಹ್ಮಾ-ವಿಷ್ಣು-ಶಂಕರನಿಗೆ ದೇವತಾಯ ನಮಃ ಎಂದು ಹೇಳುತ್ತಾರೆ. ತ್ರಿಮೂರ್ತಿಗಳು ರಚನೆಯಾಗಿದ್ದಾರೆ, ಅವರಿಂದ ಆಸ್ತಿಯು ಸಿಗುವುದಿಲ್ಲ. ನೀವು ಪರಸ್ಪರ ಸಹೋದರ-ಸಹೋದರರಾಗಿದ್ದೀರಿ. ಸಹೋದರರನ್ನು ನೆನಪು ಮಾಡಿದರೆ ಆಸ್ತಿಯು ಸಿಗುವುದಿಲ್ಲ. ಇವರೂ (ಬ್ರಹ್ಮದಾದಾ) ಸಹ ನಿಮ್ಮ ಸಹೋದರನಾಗಿದ್ದಾರೆ, ವಿದ್ಯಾರ್ಥಿಯಲ್ಲವೆ. ಇವರೂ ಓದುತ್ತಿದ್ದಾರೆ, ಇವರಿಂದ ಆಸ್ತಿಯು ಸಿಗುವುದಿಲ್ಲ. ಇವರೂ ಸಹ ಶಿವ ತಂದೆಯಿಂದಲೇ ಆಸ್ತಿ ಪಡೆಯುತ್ತಿದ್ದಾರೆ, ಮೊದಲು ಇವರು ಕೇಳಿಸಿಕೊಳ್ಳುತ್ತಾರೆ. ನಾನು (ಬ್ರಹ್ಮಾ) ತಂದೆಗೆ ಹೇಳುತ್ತೇನೆ, ಬಾಬಾ ನಾನಂತೂ ನಿಮ್ಮ ಮೊಟ್ಟ ಮೊದಲ ಮಗನಾಗಿದ್ದೇನೆ, ತಮ್ಮಿಂದ ನಾನು ಕಲ್ಪ-ಕಲ್ಪವೂ ಆಸ್ತಿಯನ್ನು ತೆಗೆದುಕೊಳ್ಳುತ್ತೇನೆ. ಕಲ್ಪ-ಕಲ್ಪವೂ ತಮಗೆ ರಥವಾಗುತ್ತೇನೆ. ಶಿವನ ರಥವು ಬ್ರಹ್ಮನಾಗಿದ್ದಾರೆ, ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತದೆ. ನೀವು ಬ್ರಾಹ್ಮಣರೂ ಸಹ ಸಹಯೋಗಿಗಳಾಗಿದ್ದೀರಿ. ನಂತರ ನೀವು ಮಾಲೀಕರಾಗುತ್ತೀರಿ. ಈಗ ನಿಮಗೆ ತಿಳಿದಿದೆ, ನಾವು 5000 ವರ್ಷಗಳ ಹಿಂದಿನ ತರಹ ತಂದೆಯ ಮೂಲಕ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಯಾರು ಕಲ್ಪದ ಹಿಂದೆ ರಾಜ್ಯಭಾಗ್ಯವನ್ನು ತೆಗೆದುಕೊಂಡಿದ್ದರೋ ಅವರೇ ಬರುತ್ತಾರೆ. ಪ್ರತಿಯೊಬ್ಬರ ಪುರುಷಾರ್ಥದಿಂದಲೇ ಯಾರು ಮಹಾರಾಜ-ಮಹಾರಾಣಿಯಾಗುತ್ತಾರೆ, ಯಾರು ಪ್ರಜೆಗಳಾಗುತ್ತಾರೆ ಎಂಬುದು ಅರ್ಥವಾಗುತ್ತದೆ. ಕೊನೆಯಲ್ಲಿ ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗುವುದು. ಎಲ್ಲವೂ ಪುರುಷಾರ್ಥದ ಮೇಲೆ ಅವಲಂಭಿಸಿದೆ. ಬಲಿಹಾರಿಯಾಗಬೇಕಾಗಿದೆ. ತಂದೆಯು ಹೇಳುತ್ತಾರೆ – ನಾನು ಬಡವರ ಬಂಧುವಾಗಿದ್ದೇನೆ, ನೀವು ಬಡವರೇ ನನಗೆ ಬಲಿಹಾರಿಯಾಗುತ್ತೀರಿ. ಯಾವಾಗಲೂ ದಾನವನ್ನು ಬಡವರಿಗೇ ಮಾಡಲಾಗುತ್ತದೆ. ಉದಾಹರಣೆಗೆ, ಯಾರಾದರೂ ಕಾಲೇಜು ಕಟ್ಟಿಸುತ್ತಾರೆ ಅದೇನೂ ಬಡವರಿಗೆ ದಾನವಾಗುವುದಿಲ್ಲ. ಅದೇನೂ ಈಶ್ವರಾರ್ಥವಾಗಿ ಕೊಡುವುದಾಗಲಿಲ್ಲ ಆದರೆ ದಾನವನ್ನಂತೂ ಮಾಡುತ್ತಾರಲ್ಲವೆ. ಕಾಲೇಜು ತೆರೆಯುತ್ತಾರೆಂದರೆ ಅದಕ್ಕೆ ಫಲವು ಸಿಗುತ್ತದೆ. ಇನ್ನೊಂದು ಜನ್ಮದಲ್ಲಿ ಚೆನ್ನಾಗಿ ಓದುತ್ತಾರೆ. ಇದು ಆಶೀರ್ವಾದ ಸಿಗುತ್ತದೆ. ಭಾರತದಲ್ಲಿಯೇ ಎಲ್ಲದಕ್ಕಿಂತ ಹೆಚ್ಚು ದಾನ-ಪುಣ್ಯವಾಗುತ್ತದೆ. ಈ ಸಮಯದಲ್ಲಿ ಬಹಳ ದಾನವಾಗುತ್ತದೆ. ನೀವು ತಂದೆಗೆ ದಾನ ಮಾಡುತ್ತೀರಿ, ತಂದೆಯು ನಿಮಗೆ ದಾನ ಮಾಡುತ್ತಾರೆ. ನಿಮ್ಮಿಂದ ಕೆಲಸಕ್ಕೆ ಬಾರದೇ ಇರುವುದನ್ನು ತೆಗೆದುಕೊಂಡು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಈ ಸಮಯದಲ್ಲಿ ನೀವು ತನು-ಮನ-ಧನ ಎಲ್ಲವನ್ನೂ ತಂದೆಗೆ ದಾನವಾಗಿ ಕೊಡುತ್ತೀರಿ. ಮನುಷ್ಯರಾದರೆ ಶರೀರ ಬಿಡುವಾಗ ವ್ಹಿಲ್ ಮಾಡಿ ಹೋಗುತ್ತಾರೆ- ಇಂತಹ ಆಶ್ರಮಕ್ಕೆ ಕೊಡುವುದು ಅಥವಾ ಇದು ಆರ್ಯ ಸಮಾಜದವರಿಗೆ ಸಿಗಲಿ ಎಂದು. ವಾಸ್ತವದಲ್ಲಿ ಯಾರು ಹಸಿವಿನಿಂದ ಇರುತ್ತಾರೆಯೋ ಅಂತಹ ಬಡವರಿಗೆ ದಾನ ಕೊಡಬೇಕಾಗಿದೆ. ಈಗ ಭಾರತವು ಬಡ ದೇಶವಾಗಿದೆಯಲ್ಲವೆ. ಸ್ವರ್ಗದಲ್ಲಿ ಭಾರತವು ಎಷ್ಟು ಸಾಹುಕಾರನಾಗಿರುತ್ತದೆ! ನೀವು ತಿಳಿದುಕೊಂಡಿದ್ದೀರಿ, ಅಲ್ಲಿ ನಿಮ್ಮ ಬಳಿ ಎಷ್ಟು ಆಹಾರ-ದಾನ್ಯ ಇತ್ಯಾದಿಗಳಿರುತ್ತದೆಯೋ ಅಷ್ಟು ಮತ್ತ್ಯಾರ ಬಳಿಯೂ ಇರುವುದಿಲ್ಲ. ಅಲ್ಲಂತೂ ಯಾವುದಕ್ಕೂ ಹಣ ಕೊಡಬೇಕಾಗುವುದಿಲ್ಲ. ಹಿಡಿ ಅವಲಕ್ಕಿಯನ್ನು ಈಗ ದಾನ ಮಾಡುತ್ತೀರೆಂದರೆ ಅದಕ್ಕೆ ಪ್ರತಿಯಾಗಿ 21 ಜನ್ಮಗಳಿಗಾಗಿ ಮಹಲು ಸಿಗುತ್ತದೆ, ಆಸ್ತಿಯೂ ಸಿಗುತ್ತದೆ. ಈಗ ತತ್ವಗಳು ತಮೋಪ್ರಧಾನವಾಗಿರುವ ಕಾರಣ ದುಃಖ ಕೊಡುತ್ತದೆ, ಅಲ್ಲಿ ತತ್ವಗಳೂ ಸತೋಪ್ರಧಾನವಾಗಿರುತ್ತವೆ. ಸತ್ಯಯುಗದಲ್ಲಿ ಯಾರು-ಯಾರು ಬರುತ್ತಾರೆ ಮತ್ತೆ ದ್ವಾಪರದಲ್ಲಿ ಯಾರು ಬರುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಕಲಿಯುಗದ ಅಂತಿಮದಲ್ಲಿ ಚಿಕ್ಕ-ಚಿಕ್ಕ ರೆಂಬೆಗಳು ಅಂದರೆ ಮತಪಂಥ ಇತ್ಯಾದಿಗಳು ಹುಟ್ಟಿಕೊಳ್ಳುತ್ತಾ ಇರುತ್ತವೆ. ಈಗ ನಿಮ್ಮ ಬುದ್ಧಿಯಲ್ಲಿ ಕಲ್ಪವೃಕ್ಷ, ಸೃಷ್ಟಿನಾಟಕದ ಜ್ಞಾನವಿದೆ, ತಂದೆಯ ಪಾತ್ರವನ್ನೂ ಅರಿತುಕೊಂಡಿದ್ದೀರಿ. ಮಹಾಭಾರತ ಯುದ್ಧದಲ್ಲಿ ಪಂಚ ಪಾಂಡವರು ಉಳಿದರು ಎಂದು ತೋರಿಸುತ್ತಾರೆ. ಒಳ್ಳೆಯದು – ನಂತರ ಏನಾಯಿತು? ಅವಶ್ಯವಾಗಿ ಯಾರು ರಾಜಯೋಗವನ್ನು ಕಲಿತರೋ ಅವರೇ ಹೋಗಿ ರಾಜ್ಯಭಾರ ಮಾಡುತ್ತಾರಲ್ಲವೆ. ಮೊದಲು ನೀವೂ ಸಹ ಏನನ್ನೂ ತಿಳಿದುಕೊಂಡಿರಲಿಲ್ಲ. ಬ್ರಹ್ಮಾ ತಂದೆಯು ಮೊದಲು ಗೀತೆಯನ್ನು ಓದುತ್ತಿದ್ದರು, ನಾರಾಯಣನ ಭಕ್ತಿ ಮಾಡುತ್ತಿದ್ದರು. ಗೀತೆಯ ಜೊತೆ ಬಹಳ ಪ್ರೀತಿಯಿತ್ತು. ರೈಲಿನಲ್ಲಿ ಹೋಗುವಾಗಲೂ ಗೀತೆಯನ್ನು ಓದುತ್ತಿದ್ದರು. ಆದರೆ ನೋಡಿದರೂ ಇದರಿಂದ ಏನೂ ಅರ್ಥವಾಗಲಿಲ್ಲ. ಭಕ್ತಿಮಾರ್ಗದಲ್ಲಿ ಏನೆಲ್ಲವನ್ನು ಮಾಡುತ್ತಾ ಬಂದರು ಆದರೆ ಉದ್ಧಾರವಂತೂ ಆಗಲಿಲ್ಲ. ಪ್ರಪಂಚದಲ್ಲಿ ಎಷ್ಟೊಂದು ಕಲಹವಿದೆ, ಇಲ್ಲಿಯೂ ಸಹ ಎಲ್ಲರೂ ಪವಿತ್ರರಾಗಲು ಸಾಧ್ಯವಿಲ್ಲ. ಆದ್ದರಿಂದಲೇ ಪವಿತ್ರತೆಗಾಗಿ ಗಲಾಟೆಗಳಾಗುತ್ತವೆ. ತಂದೆಯ ಆಶ್ರಯವನ್ನೂ ತೆಗೆದುಕೊಳ್ಳುತ್ತಾರೆ ಆದರೂ ತಂದೆಯು ಹೇಳುತ್ತಾರೆ – ಮಕ್ಕಳೇ, ಕಾಯಿಲೆಯು ಅವಶ್ಯವಾಗಿ ಹೆಚ್ಚಾಗುವುದು. ಮಕ್ಕಳು ಮೊದಲಾದವರು ನೆನಪಿಗೆ ಬರುವರು ಆದರೆ ಇದರಲ್ಲಿ ನಷ್ಟಮೋಹಿಗಳಾಗಬೇಕಾಗಿದೆ. ತಿಳಿದುಕೊಳ್ಳಿ, ನಾವು ಸತ್ತು ಹೋಗಿದ್ದೇವೆ, ತಂದೆಯವರಾದೆವು ಅರ್ಥಾತ್ ಈ ಪ್ರಪಂಚದಿಂದ ಸತ್ತೆವು ಮತ್ತೆ ಶರೀರ ಭಾನವೂ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ – ದೇಹ ಸಹಿತ ಏನೆಲ್ಲಾ ಸಂಬಂಧಗಳಿದೆಯೋ ಅದನ್ನು ಮರೆಯಬೇಕಾಗಿದೆ. ಈ ಪ್ರಪಂಚದಲ್ಲಿ ಏನೆಲ್ಲವನ್ನು ನೋಡುತ್ತೀರೋ ಅದೆಲ್ಲವೂ ಇಲ್ಲವೇ ಇಲ್ಲ. ಈ ಹಳೆಯ ಶರೀರವನ್ನೂ ಬಿಡಬೇಕಾಗಿದೆ. ನಾವು ಮನೆಗೆ ಹೋಗಬೇಕಾಗಿದೆ. ಮನೆಗೆ ಹೋಗಿ ನಂತರ ಬಂದು ಹೊಸ ಸುಂದರ ಶರೀರವನ್ನು ತೆಗೆದುಕೊಳ್ಳುತ್ತೀರಿ. ಈಗ ಶ್ಯಾಮ ಆಗಿದ್ದೀರಿ, ಈಗ ಸುಂದರರಾಗುತ್ತೀರಿ. ಭಾರತವು ಈಗ ಶ್ಯಾಮ ಅರ್ಥಾತ್ ಪತಿತನಾಗಿದೆ ಮತ್ತೆ ಇದೇ ಸುಂದರವಾಗುವುದು. ಈಗ ಭಾರತವು ಮುಳ್ಳುಗಳ ಕಾಡಾಗಿದೆ. ಎಲ್ಲರೂ ಒಬ್ಬರು ಇನ್ನೊಬ್ಬರನ್ನು ಕುಟುಕುತ್ತಾ ಇರುತ್ತಾರೆ. ಯಾವುದೇ ಮಾತಿನಲ್ಲಿ ಮುನಿಸಿಕೊಂಡರೆ ಸಾಕು, ನಿಂದನೆ ಮಾಡುತ್ತಾರೆ ಹೊಡೆದಾಡುತ್ತಾರೆ. ನೀವು ಮಕ್ಕಳು ಮನೆಯಲ್ಲಿಯೂ ಬಹಳ ಮಧುರರಾಗಿ ಇರಬೇಕಾಗಿದೆ. ಇಲ್ಲದಿದ್ದರೆ ಇವರು ಪಂಚ ವಿಕಾರಗಳನ್ನು ದಾನ ಮಾಡಿದ್ದಾರೆ ಮತ್ತೇಕೆ ಕ್ರೋಧ ಮಾಡಿಕೊಳ್ಳುತ್ತಾರೆ? ಬಹುಷಃ ಕ್ರೋಧವನ್ನು ದಾನ ಮಾಡಲಿಲ್ಲವೆಂದು ಮನುಷ್ಯರು ಹೇಳತೊಡಗುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಜೋಳಿಗೆಯಲ್ಲಿ ಐದು ವಿಕಾರಗಳ ದಾನವನ್ನು ಕೊಟ್ಟು ಬಿಡಿ ಆಗ ನಿಮ್ಮ ಗ್ರಹಣ ಬಿಟ್ಟು ಹೋಗುವುದು. ಚಂದ್ರಮನಿಗೆ ಗ್ರಹಣ ಹಿಡಿಯುತ್ತದೆಯಲ್ಲವೆ. ನೀವೂ ಸಹ ಈಗ ಸಂಪೂರ್ಣರಾಗುತ್ತೀರಿ ಆದ್ದರಿಂದ ಈ ವಿಕಾರಗಳನ್ನು ದಾನವಾಗಿ ಕೊಟ್ಟುಬಿಡಿ. ನಿಮಗೆ ಸ್ವರ್ಗದ ರಾಜ್ಯಭಾಗ್ಯ ಸಿಗುತ್ತದೆಯೆಂದು ತಂದೆಯು ಹೇಳುತ್ತಾರೆ. ಆತ್ಮಕ್ಕೆ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಆತ್ಮವು ಹೇಳುತ್ತದೆ – ಈ ಹಳೆಯ ಪ್ರಪಂಚದಲ್ಲಿ ಇನ್ನು ಸ್ವಲ್ಪವೇ ಸಮಯವಿದೆ, ಎಲ್ಲಾ ಕೆಲಸವನ್ನು ಇಳಿಸಿಕೊಳ್ಳಬೇಕಾಗಿದೆ. ಎಲ್ಲಾ ವಿಚಾರಗಳನ್ನು ಕಡಿಮೆ ಮಾಡಿಕೊಳ್ಳಬೇಕು, ತಂದೆಗೆ ಗೊತ್ತಿದೆ – ಅನೇಕ ಪ್ರಕಾರದ ವಿಚಾರಗಳು ಬರುತ್ತವೆ. ಉದ್ಯೋಗ-ವ್ಯವಹಾರಗಳ ವಿಚಾರಗಳು ಬರುತ್ತವೆ, ಭಕ್ತಿಮಾರ್ಗದಲ್ಲಿ ಭಕ್ತಿ ಮಾಡುವ ಸಮಯದಲ್ಲಿ ಗ್ರಾಹಕರು ಉದ್ಯೋಗ-ವ್ಯಾಪಾರಗಳು ನೆನಪಿಗೆ ಬಂದರೆ ತಮಗೆ ತಾವೇ ಪೆಟ್ಟು ಕೊಟ್ಟುಕೊಳ್ಳುತ್ತಾರೆ. ನಾನು ನಾರಾಯಣನ ನೆನಪಿನಲ್ಲಿ ಕುಳಿತಿದ್ದೇನೆ ಅಂದಮೇಲೆ ಮತ್ತೆ ಈ ಮಾತುಗಳು ಏಕೆ ನೆನಪಿಗೆ ಬಂದಿತು! ಇಲ್ಲಿಯೂ ಅದೇ ರೀತಿ ಆಗುತ್ತದೆ. ಯಾವಾಗ ಈ ಆತ್ಮಿಕ ಸೇವೆಯಲ್ಲಿ ಚೆನ್ನಾಗಿ ತೊಡಗುವರೋ ಆಗ ತಿಳಿಸಲಾಗುತ್ತದೆ – ಒಳ್ಳೆಯದು, ಉದ್ಯೋಗ-ವ್ಯವಹಾರಗಳನ್ನು ಬಿಡಿ, ತಂದೆಯ ಸೇವೆಯಲ್ಲಿ ತೊಡಗಿರಿ. ಬಿಟ್ಟರೆ ಬಿಡುಗಡೆಯಾಗುತ್ತದೆ ಎಂದು ಹೇಳುತ್ತಾರೆ. ದೇಹಾಭಿಮಾನವನ್ನು ಬಿಡುತ್ತಾ ಹೋದಿರಿ. ಕೇವಲ ತಂದೆಯನ್ನು ನೆನಪು ಮಾಡಿರಿ ಆಗ ಮಂಗನಿಂದ ಮಂದಿರ ಯೋಗ್ಯರಾಗುವಿರಿ. ಭ್ರಮರಿ, ಆಮೆಯ ಎಲ್ಲಾ ಉದಾಹರಣೆಗಳನ್ನು ತಂದೆಯು ಕೊಡುತ್ತಾರೆ. ಇದನ್ನು ಭಕ್ತಿಮಾರ್ಗದಲ್ಲಿಯೂ ಮನುಷ್ಯರು ಉದಾಹರಣೆಯಾಗಿ ತಿಳಿಸುತ್ತಾರೆ. ಆ ಕೀಟಗಳು ಯಾರು ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ನೀವು ಬ್ರಾಹ್ಮಿಣಿಯರಾಗಿದ್ದೀರಿ, ಜ್ಞಾನದ ಭೂ ಭೂ ಮಾಡುತ್ತೀರಿ. ಈ ದೃಷ್ಟಾಂತವು ಈಗಿನದಾಗಿದೆ, ಅವರು ತಿಳಿಸಲು ಸಾಧ್ಯವಿಲ್ಲ. ಹಬ್ಬಗಳೆಲ್ಲವೂ ಈ ಸಮಯದ್ದಾಗಿದೆ. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಹಬ್ಬವಾಗುವುದಿಲ್ಲ, ಇವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಈಗ ನೋಡಿ, ಕೃಷ್ಣ ಜಯಂತಿಯಾಯಿತು, ಮಣ್ಣಿನಿಂದ ಕೃಷ್ಣನನ್ನು ಮಾಡಿ ಪೂಜೆ ಮಾಡಿ ಮತ್ತೆ ಕೆರೆಯಲ್ಲಿ ಮುಳುಗಿಸಿದರು. ಇವರು ಏನು ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಇದು ಅಂಧಶ್ರದ್ಧೆಯಾಗಿದೆ. ನೀವು ಯಾರಿಗೆ ತಿಳಿಸಿದರೂ ಸಹ ಅವರು ತಿಳಿದುಕೊಳ್ಳುವುದಿಲ್ಲ. ಯಾರಿಗಾದರೂ ಕಾಯಿಲೆಯಾದರೆ ನೋಡಿ ನೀವು ಕೃಷ್ಣನ ಪೂಜೆಯನ್ನು ಬಿಟ್ಟಿರಿ ಆದ್ದರಿಂದಲೇ ಈ ಸ್ಥಿತಿಯಾಯಿತು ಎಂದು ಹೇಳತೊಡಗುತ್ತಾರೆ. ಹೀಗೆ ಅನೇಕರು ಆಶ್ಚರ್ಯವೆನಿಸುವಂತೆ ಕೇಳುತ್ತಾ-ಹೇಳುತ್ತಾ ಮತ್ತೆ ಬಿಟ್ಟು ಹೊರಟು ಹೋಗುತ್ತಾರೆ ಆದ್ದರಿಂದ ಬ್ರಾಹ್ಮಣರ ಮಾಲೆಯು ತಯಾರಾಗುವುದಿಲ್ಲ. ಈ ಬ್ರಾಹ್ಮಣ ಕುಲಭೂಷಣರು ಶ್ರೇಷ್ಠರಾಗಿದ್ದಾರೆ ಆದರೆ ಮಾಲೆಯು ಮಾತ್ರ ತಯಾರಾಗುವುದಿಲ್ಲ ಏಕೆಂದರೆ ಬದಲಾಗುತ್ತಿರುತ್ತಾರೆ. ನಿಮ್ಮ ಬುದ್ಧಿಯಲ್ಲಿದೆ, ಇದು ಶಿವ ತಂದೆಯ ಮಾಲೆಯಾಗಿದೆ ನಂತರ ನಾವು ಹೋಗಿ ಸತ್ಯಯುಗದಲ್ಲಿ ನಂಬರ್ವಾರ್ ವಿಷ್ಣುವಿನ ಮಾಲೆಯ ಮಣಿಯಾಗುತ್ತೇವೆ. ನಿಮ್ಮ ಒಂದೊಂದು ಶಬ್ಧವು ಈ ರೀತಿಯಿದೆ, ಅದು ಯಾರಿಗೂ ಅರ್ಥವಾಗುವುದಿಲ್ಲ. ತಂದೆಯು ಓದಿಸುತ್ತಾ ಇರುತ್ತಾರೆ, ವೃದ್ಧಿಯಾಗುತ್ತಾ ಇರುತ್ತದೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಇರುತ್ತಾರೆ, ನಾವು ಹೋಗಿ ತಿಳಿದುಕೊಳ್ಳುತ್ತೇವೆ ಎಂದು ಹೇಳಿ ಹೋಗುತ್ತಾರೆ. ಮನೆಗೆ ಹೋದಮೇಲೆ ಸಮಾಪ್ತಿ. ಇಲ್ಲಿಯದು ಇಲ್ಲಿಯೇ ಉಳಿಯುವುದು. ಪ್ರಭುವಿನೊಂದಿಗೆ ಮಿಲನ ಮಾಡಲು ಬಹಳ ಒಳ್ಳೆಯ ಮಾರ್ಗವನ್ನು ತಿಳಿಸುತ್ತಾರೆಂದು ಹೇಳುತ್ತಾರೆ ಆದರೆ ನಾವು ಅದರಂತೆ ನಡೆಯಬೇಕು, ಆಸ್ತಿಯನ್ನು ಪಡೆಯಬೇಕು ಎಂಬುದು ಬುದ್ಧಿಯಲ್ಲಿ ಬರುವುದಿಲ್ಲ. ಬ್ರಹ್ಮಾಕುಮಾರಿಯರು ಬಹಳ ಒಳ್ಳೆಯ ಸೇವೆ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಅರೆ! ನೀವೂ ತಿಳಿದುಕೊಳ್ಳಿರಿ, ದೈಹಿಕ ಸೇವೆಯನ್ನಂತೂ ಮಾಡುತ್ತಾ ಇರುತ್ತೀರಿ. ಈಗ ಈ ಆತ್ಮಿಕ ಸೇವೆ ಮಾಡಿರಿ. ಸಂಘ ಸಂಸ್ಥೆಗಳ ಸೇವೆಯನ್ನು ಎಲ್ಲಾ ಮನುಷ್ಯರು ಮಾಡುತ್ತಾರೆ. ಸುಮ್ಮನೆ ಯಾರೂ ಸೇವೆ ಮಾಡುವುದಿಲ್ಲ, ಇಲ್ಲದಿದ್ದರೆ ತಿನ್ನುವುದಕ್ಕೆ ಎಲ್ಲಿಂದ ಬರುತ್ತದೆ? ನೀವು ಮಕ್ಕಳು ಬಹಳ ಸೇವೆ ಮಾಡುತ್ತೀರಿ. ನಿಮಗೆ ಭಾರತದ ಬಗ್ಗೆ ಬಹಳ ದಯೆ ಬರುತ್ತದೆ, ನಮ್ಮ ಭಾರತವು ಹೇಗಿತ್ತು ನಂತರ ರಾವಣನು ಯಾವ ಗತಿಯಲ್ಲಿ ತಂದಿದ್ದಾನೆ? ನಾವೀಗ ತಂದೆಯ ಶ್ರೀಮತದಂತೆ ನಡೆದು ಅವಶ್ಯವಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ.

ನೀವು ತಿಳಿದುಕೊಂಡಿದ್ದೀರಿ, ನಾವು ಸಂಗಮಯುಗ ವಾಸಿಗಳಾಗಿದ್ದೇವೆ ಉಳಿದೆಲ್ಲರೂ ಕಲಿಯುಗಿಗಳಾಗಿದ್ದಾರೆ. ನಾವು ಆ ತೀರವನ್ನು ಸೇರುತ್ತಿದ್ದೇವೆ. ಯಾರು ತಂದೆಯ ನೆನಪಿನಲ್ಲಿ ಚೆನ್ನಾಗಿ ಇರುವರೋ ಅವರು ಹಾಗೆಯೇ ಕುಳಿತಲ್ಲಿಯೇ ನೆನಪು ಮಾಡುತ್ತಾ-ಮಾಡುತ್ತಾ ಶರೀರ ಬಿಟ್ಟು ಬಿಡುತ್ತಾರೆ. ಮತ್ತೆ ಆತ್ಮವು ಹಿಂತಿರುಗಿ ಬರುವುದಿಲ್ಲ. ಕುಳಿತು-ಕುಳಿತಿದ್ದಂತೆಯೇ ತಂದೆಯ ನೆನಪಿನಲ್ಲಿ ಹೊರಟುಹೋದರು. ಇಲ್ಲಿ ಯಾವುದೇ ಹಠಯೋಗದ ಮಾತಿಲ್ಲ. ಹೇಗೆ ನೋಡುತ್ತೀರಿ, ಅವರು ಧ್ಯಾನದಲ್ಲಿ ಕುಳಿತು ಕುಳಿತಲ್ಲಿಯೇ ಹೊರಟು ಹೋಗುತ್ತಾರೆ. ಹಾಗೆಯೇ ನೀವೂ ಈ ಶರೀರವನ್ನು ಬಿಟ್ಟು ಬಿಡುತ್ತೀರಿ. ಸೂಕ್ಷ್ಮವತನಕ್ಕೆ ಹೋಗಿ ನಂತರ ತಂದೆಯ ಬಳಿಗೆ ಹೋಗುತ್ತೀರಿ. ಯಾರು ನೆನಪಿನ ಯಾತ್ರೆಯ ಹೆಚ್ಚು ಪರಿಶ್ರಮ ಪಡುವರೋ ಅವರು ಇದೇರೀತಿ ಶರೀರ ಬಿಡುತ್ತಾರೆ, ಸಾಕ್ಷಾತ್ಕಾರವಾಗುತ್ತದೆ. ಹೇಗೆ ಯಜ್ಞದ ಆದಿಯಲ್ಲಿ ಕೆಲವರಿಗೆ ಬಹಳ ಸಾಕ್ಷಾತ್ಕಾರವಾಯಿತು ಹಾಗೆಯೇ ಅಂತಿಮದಲ್ಲಿಯೂ ನೀವು ಬಹಳಷ್ಟು ನೋಡುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಮಂದಿರಕ್ಕೆ ಯೋಗ್ಯರಾಗಲು ದೇಹಾಭಿಮಾನವನ್ನು ಬಿಡಬೇಕಾಗಿದೆ. ಆತ್ಮಿಕ ಸೇವೆಯಲ್ಲಿ ತೊಡಗಬೇಕಾಗಿದೆ.

2. ಈಗ ಮನೆಗೆ ಹೋಗುವ ಸಮಯವಾಗಿದೆ ಆದ್ದರಿಂದ ಏನೆಲ್ಲವೂ ಲೆಕ್ಕಾಚಾರವಿದೆಯೋ, ಉದ್ಯೋಗ-ವ್ಯವಹಾರಗಳ ಯೋಚನೆಯಿದೆಯೋ ಅದನ್ನು ಇಳಿಸಿಕೊಳ್ಳಬೇಕಾಗಿದೆ. ನೆನಪಿನ ಯಾತ್ರೆಯ ಪರಿಶ್ರಮ ಪಡಬೇಕಾಗಿದೆ.

ವರದಾನ:-

1. ಯೋಗಯುಕ್ತವಾಗಿ ಇರುವುದರ ಚಿಹ್ನೆಯಾಗಿದೆ – ಬಂಧನ ಮುಕ್ತರಾಗಿರುವುದು. ಯೋಗಯುಕ್ತರು ಆಗುವುದರಲ್ಲಿ ಅತಿ ದೊಡ್ಡ ಅಂತಿಮ ಬಂಧನವೆಂದರೆ – ಸ್ವಯಂನ್ನು ಬುದ್ಧಿವಂತನೆಂದು ತಿಳಿದುಕೊಂಡು, ಶ್ರೀಮತವನ್ನು ತಮ್ಮ ಬುದ್ಧಿಯ ಚಮತ್ಕಾರವೆಂದು ತಿಳಿಯುವುದು ಅರ್ಥಾತ್ ಶ್ರೀಮತದಲ್ಲಿ ತಮ್ಮ ಬುದ್ಧಿಯನ್ನು ಸೇರ್ಪಡೆ ಮಾಡುವುದು. ಇದಕ್ಕೆ ಬುದ್ಧಿಯ ಅಭಿಮಾನವೆಂದು ಹೇಳಲಾಗುತ್ತದೆ. 2. ಯಾವಾಗ ಯಾರೇ ಬಲಹೀನತೆಯ ಸನ್ನೆ ಮಾಡುತ್ತಾರೆ ಅಥವಾ ಕೆಟ್ಟದ್ದನ್ನು ಮಾಡುತ್ತಾರೆ – ಒಂದುವೇಳೆ ಆ ಸಮಯದಲ್ಲಿ ಸ್ವಲ್ಪ ವ್ಯರ್ಥ ಸಂಕಲ್ಪವೇ ನಡೆಯುತ್ತದೆ ಎಂದರೂ ಸಹ ಬಂಧನವಾಗಿದೆ. ಯಾವಾಗ ಇವೆಲ್ಲಾ ಬಂಧನಗಳನ್ನು ಎದುರಿಸುತ್ತಾ ಸೋಲು-ಗೆಲುವು, ನಿಂದಾ-ಸ್ತುತಿಯಲ್ಲಿ ಸಮಾನ ಸ್ಥಿತಿಯನ್ನಾಗಿ ಮಾಡಿಕೊಳ್ಳುತ್ತೀರಿ, ಆಗ ಸಂಪೂರ್ಣ ಬಂಧನಮುಕ್ತರು ಎಂದು ಹೇಳಲಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top