22 June 2021 KANNADA Murli Today | Brahma Kumaris

22 June 2021 Read and Listen today’s Gyan Murli in Kannada

June 21, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಪ್ರಪಂಚದಲ್ಲಿ ನಿಷ್ಕಾಮ ಸೇವೆಯನ್ನು ಕೇವಲ ಒಬ್ಬ ತಂದೆಯೇ ಮಾಡುತ್ತಾರೆ, ಉಳಿದಂತೆ ನೀವು ಏನೆಲ್ಲಾ ಕರ್ಮ ಮಾಡುತ್ತಿದ್ದೀರಿ ಅದರ ಫಲವು ಅವಶ್ಯವಾಗಿ ಸಿಗುತ್ತದೆ”

ಪ್ರಶ್ನೆ:: -

ಡ್ರಾಮಾನುಸಾರ ಯಾವ ಮಾತು 100% ನಿಶ್ಚಿತವಾಗಿದೆ? ಯಾವುದರಿಂದ ನೀವು ಮಕ್ಕಳಿಗೆ ಬಹಳ ಖುಷಿಯಾಗುತ್ತದೆ?

ಉತ್ತರ:-

ಡ್ರಾಮಾನುಸಾರ ಹೊಸ ರಾಜಧಾನಿಯು ಸ್ಥಾಪನೆಯಾಗುವುದು ನಿಶ್ಚಿತವಾಗಿದೆ. ಶ್ರೀಮತದಂತೆ ನಾವು ನಮಗಾಗಿ ರಾಜಧಾನಿ ಸ್ಥಾಪನೆ ಮಾಡುತ್ತಿದ್ದೇವೆ ಎಂದು ನೀವು ಮಕ್ಕಳಿಗೆ ಖುಷಿಯಿದೆ. ಈ ಹಳೆಯ ಪ್ರಪಂಚದ ವಿನಾಶವಾಗಲೇಬೇಕು. ನೀವು ಮಕ್ಕಳು ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಉನ್ನತ ಪದವಿಯನ್ನು ಪಡೆಯುತ್ತೀರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು………….

ಓಂ ಶಾಂತಿ. ಮಕ್ಕಳು ಏನು ಹೇಳುವುದೋ ತಂದೆಯೂ ಸಹ ಅದನ್ನೇ ಹೇಳುವರು. ಬಾಬಾ ನಿಮ್ಮನ್ನು ಪಡೆದ ನಾವು ಸ್ವರ್ಗದ ಮಾಲೀಕರಾಗುತ್ತೇವೆಂದು ಮಕ್ಕಳು ಹೇಳುತ್ತಾರೆ. ತಂದೆಯೂ ಸಹ ಹೇಳುತ್ತಾರೆ – ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ಸ್ವರ್ಗದ ಮಾಲೀಕರಾಗುವಿರಿ. ಮನುಷ್ಯರೆಲ್ಲರೂ ಕೇಳುತ್ತಾರೆ, ಬ್ರಹ್ಮಾಕುಮಾರ-ಕುಮಾರಿಯರ ಈ ಸತ್ಸಂಗದಲ್ಲಿ ಏನು ಸಿಗುತ್ತದೆ? ಆಗ ನಾವು ಬಾಪ್ದಾದಾರವರಿಂದ ವಿಶ್ವದ ಮಾಲೀಕರಾಗುತ್ತೇವೆಂದು ಬ್ರಹ್ಮಾಕುಮಾರ-ಕುಮಾರಿಯರು ಹೇಳುತ್ತಾರೆ. ವಿಶ್ವದ ಮಾಲೀಕರನ್ನಾಗಿ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ವಿಶ್ವದ ಮಾಲೀಕರು ಈ ಲಕ್ಷ್ಮೀ-ನಾರಾಯಣರೇ ಆಗಿದ್ದರು, ಶಿವ ತಂದೆಯಂತೂ ವಿಶ್ವದ ಮಾಲೀಕರಾಗುವುದಿಲ್ಲ, ನೀವು ಮಕ್ಕಳೇ ವಿಶ್ವದ ಮಾಲೀಕರಾಗುತ್ತೀರಿ ಆದರೆ ನಿಮ್ಮ ತಂದೆಯು ವಿಶ್ವದ ಮಾಲೀಕರಾಗುವುದಿಲ್ಲ. ಇಂತಹ ನಿಷ್ಕಾಮ ಸೇವೆ ಮಾಡುವವರು ಮತ್ತ್ಯಾರೂ ಇಲ್ಲ. ಪ್ರತಿಯೊಬ್ಬರಿಗೂ ಸೇವೆಯ ಫಲ ಅವಶ್ಯವಾಗಿ ಸಿಗುವುದು. ಭಕ್ತಿಮಾರ್ಗದಲ್ಲಿ ಅಥವಾ ಯಾರೇ ಯಾವುದೇ ಪ್ರಕಾರವಾಗಿ ಏನು ಮಾಡಿದರು…. ಸಮಾಜ ಸೇವಾಕರ್ತರಿಗೂ ಸಹ ಸೇವೆಯ ಫಲವು ಅವಶ್ಯವಾಗಿ ಸಿಗುತ್ತದೆ. ಸರ್ಕಾರದಿಂದ ಸಂಬಳ ಸಿಗುತ್ತದೆ. ತಂದೆಯು ತಿಳಿಸುತ್ತಾರೆ – ನಾನಂತೂ ನಿಷ್ಕಾಮ ಸೇವೆ ಮಾಡುತ್ತೇನೆ, ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ ಆದರೆ ನಾನಾಗುವುದಿಲ್ಲ. ಮಕ್ಕಳಿಗೆ ಸುಖವನ್ನು ಕೊಟ್ಟು ಸುಖಧಾಮದ ಮಾಲೀಕರನ್ನಾಗಿ ಮಾಡಿ 21 ಜನ್ಮಗಳಿಗೆ ಸುಖವನ್ನು ಕೊಟ್ಟು ನಾನು ನಿರ್ವಾಣಧಾಮದಲ್ಲಿ ಅಥವಾ ವಾನಪ್ರಸ್ಥ ಸ್ಥಿತಿಯಲ್ಲಿ ಕುಳಿತುಕೊಳ್ಳುತ್ತೇನೆ. ವಾನಪ್ರಸ್ಥವೆಂದು ಮೂಲವತನಕ್ಕೇ ಹೇಳುತ್ತಾರೆ. ಮನುಷ್ಯರು ವಾನಪ್ರಸ್ಥವನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳಿಗೆ ಎಲ್ಲವನ್ನೂ ಕೊಟ್ಟು ಸತ್ಸಂಗಗಳನ್ನು ಮಾಡುತ್ತಾರೆ. ಮುಕ್ತಿಯನ್ನು ತೋರಿಸುತ್ತಾರೆಂದು ಗುರುಗಳನ್ನೂ ಮಾಡಿಕೊಳ್ಳುತ್ತಾರೆ. ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ಯಾವುದೇ ಮನುಷ್ಯರೂ ಕೊಡಲು ಸಾಧ್ಯವಿಲ್ಲವೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಅವರು ಯಾರಿಗೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ, ತಮಗೇ ತಾವು ಕೊಡಲು ಸಾಧ್ಯವಿಲ್ಲ. ತಮಗೆ ಕೊಟ್ಟುಕೊಂಡರೆ ಅನ್ಯರಿಗೂ ಕೊಡಬಹುದು. ತಂದೆಯು ಪರಮಧಾಮದಿಂದ ಬರುತ್ತಾರೆ, ಅವರು ಅಲ್ಲಿಯೇ ವಾಸಿಸುತ್ತಾರೆ, ನೀವೂ ಸಹ ಅಲ್ಲಿಯೇ ವಾಸಮಾಡುತ್ತೀರಿ. ನೀವು ಪಾತ್ರವನ್ನಭಿನಯಿಸಲು ಈ ಕರ್ಮಕ್ಷೇತ್ರದಲ್ಲಿ ಬರಬೇಕಾಗುತ್ತದೆ. ತಂದೆಯೂ ಸಹ ಒಂದುಬಾರಿ ಇಲ್ಲಿಗೆ ಬರಬೇಕಾಗುತ್ತದೆ. ನೀವು ಮಕ್ಕಳಿಗಾಗಿ ಸ್ವರ್ಗವು ಸ್ಥಾಪನೆಯಾಗುತ್ತದೆ ಅಂದಮೇಲೆ ಅವಶ್ಯವಾಗಿ ನರಕದ ವಿನಾಶವೂ ಆಗಲೇಬೇಕಿದೆ.

ಶಿವ ತಂದೆಯು ಬ್ರಹ್ಮನ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಿದ್ದಾರೆ, ಪುನಃ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆಂದು ನೀವು ತಿಳಿದಿದ್ದೀರಿ. 5000 ವರ್ಷಗಳ ನಂತರ ಪುನಃ ಬಂದು ಬ್ರಹ್ಮನ ಮೂಲಕ ಶಿವ ತಂದೆಯ ಮಕ್ಕಳಾಗುತ್ತೇವೆ, ಆಸ್ತಿಯನ್ನು ಪಡೆಯುತ್ತೇವೆಂದು ನಿಮ್ಮ ಬುದ್ಧಿಯಲ್ಲಿದೆ. ಪತಿತ-ಪಾವನನೆಂದು ಅವರಿಗೇ ಹೇಳಲಾಗುತ್ತದೆ. ನಾಲೆಡ್ಜ್ಫುಲ್, ಜ್ಞಾನ ಸಾಗರನೂ ಆಗಿದ್ದಾರೆ. ಯೋಗ ಅರ್ಥಾತ್ ನೆನಪನ್ನು ಕಲಿಸುತ್ತಾರೆ ಆದರೆ ನಿರಾಕಾರನು ಹೇಗೆ ತಿಳಿಸುವುದು! ಅದಕ್ಕಾಗಿ ಬ್ರಹ್ಮನ ಮೂಲಕ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆ ಅರ್ಥಾತ್ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ. ಈಗ ಆ ಧರ್ಮವಿಲ್ಲ, ಪುನಃ ಮಾಡಬೇಕಾಗಿದೆ. ಈಗ ಮತ್ತೆ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ಬಾಕಿ ಭಾರತ ಪ್ರಾಚೀನ ಖಂಡವಾಗಿದೆ ಆದ್ದರಿಂದ ವಾಸ್ತವದಲ್ಲಿ ಭಾರತದ ಪರಂಪರೆಯು ಎಲ್ಲದಕ್ಕಿಂತ ಹೆಚ್ಚಾಗಿರಬೇಕು. ಇಂತಹ ಮಾತುಗಳು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಆದಿ ಸನಾತನ ದೇವಿ-ದೇವತಾ ಧರ್ಮವು ಎಲ್ಲದಕ್ಕಿಂತ ಬಹಳ ದೊಡ್ಡದಾಗಿರಬೇಕು. 5000 ವರ್ಷದಿಂದ ಅವರ ವೃದ್ಧಿಯಾಗುತ್ತಲೇ ಇದೆ ಬಾಕಿ ಬೇರೆಯವರು 2500 ವರ್ಷಗಳ ನಂತರ ಬರುತ್ತಾರೆ. ಇಸ್ಲಾಮಿಗಳ ಪರಂಪರೆಯು ಕಡಿಮೆಯಿರಬೇಕು ಏಕೆಂದರೆ ಸ್ವಲ್ಪಸಮಯದ ನಂತರ ಬೌದ್ಧ ಧರ್ಮದವರು ಬರುತ್ತಾರೆ, ಅವರಲ್ಲಿ ಸ್ವಲ್ಪ ಅಂತರವಿರಬೇಕು. ಇಸ್ಲಾಮಿ, ಬೌದ್ಧಿ, ಇವರುಗಳು ಮೊದಲು ಸತೋಪ್ರಧಾನರಾಗಿದ್ದು ನಂತರ ನಿಧಾನ-ನಿಧಾನವಾಗಿ ತಮೋಪ್ರಧಾರಾಗುತ್ತಾರೆ. ಇವೆಲ್ಲದರ ಲೆಕ್ಕವಿದೆ. ಯಾರು ಅನನ್ಯ ಬುದ್ಧಿವಂತ ಮಕ್ಕಳಿರುತ್ತಾರೆ ಅವರ ಬುದ್ಧಿಯಲ್ಲಿಯೇ ವಿಚಾರ ಬರುತ್ತದೆ. ಇತ್ತೀಚೆಗೆ ಚೈನಾದವರು ಬಹಳ ಇದ್ದಾರೆ ಎಂದು ಬರೆಯುತ್ತಾರೆ ಆದರೆ ಅವರಿಗೆ ಸೃಷ್ಟಿಚಕ್ರದ ಜ್ಞಾನವೇ ಗೊತ್ತಿಲ್ಲ. ಇವೆಲ್ಲದರ ರಹಸ್ಯವು ನೀವು ಮಕ್ಕಳ ಬುದ್ಧಿಯಲ್ಲಿದೆ. ಯಾರು ವಿದ್ಯಾವಂತರಿರುತ್ತಾರೆಯೋ ಅವರಿಗೆ ಪರಿಪೂರ್ಣವಾಗಿ ತಿಳಿಸಬೇಕಾಗುತ್ತದೆ. ದೇವಿ-ದೇವತಾ ಧರ್ಮದವರಿಗೆ 5000 ವರ್ಷಗಳಾಯಿತು ಅಂದಮೇಲೆ ಈ ಸಮಯದಲ್ಲಿ ಅವರ ಸಂಖ್ಯೆಯೇ ಹೆಚ್ಚಾಗಿರಬೇಕಲ್ಲವೆ. ಆದರೆ ದೇವಿ-ದೇವತಾ ಧರ್ಮದವರು ಅನ್ಯ ಧರ್ಮಗಳಲ್ಲಿ ಪರಿವರ್ತನೆಯಾಗಿ ಬಿಟ್ಟಿದ್ದಾರೆ. ಮೊಟ್ಟ ಮೊದಲು ಬಹಳ ಮುಸಲ್ಮಾನರಾಗಿ ಹೋಗುತ್ತಾರೆ, ನಂತರ ಬೌದ್ಧಿಯರೂ ಬಹಳಷ್ಟು ಜನ ಆಗುತ್ತಾರೆ. ಇಲ್ಲಿಯೂ ಸಹ ಬೌದ್ಧರು ಬಹಳಷ್ಟು ಜನ ಇದ್ದಾರೆ. ಕ್ರೈಸ್ತರಂತೂ ಲೆಕ್ಕವಿಲ್ಲದಷ್ಟು ಇದ್ದಾರೆ, ದೇವತಾ ಧರ್ಮದ ಹೆಸರೇ ಇಲ್ಲ. ಒಂದುವೇಳೆ ನಾವು ಬ್ರಾಹ್ಮಣ ಧರ್ಮದವರು ಎಂದರೆ ಹಿಂದೂಗಳ ಸಾಲಿನಲ್ಲಿ ಹಾಕಿ ಬಿಡುತ್ತಾರೆ. ಈಗ ನೀವು ತಿಳಿದಿದ್ದೀರಿ – ಶ್ರೀಮತದ ಆಧಾರದ ಮೇಲೆ ಬ್ರಾಹ್ಮಣರ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆ ಆಗುತ್ತಿದೆ ಎಂದು ನೀವು ತಿಳಿದಿದ್ದೀರಿ. ಇದನ್ನೂ ಸಹ ತಿಳಿದುಕೊಳ್ಳಬೇಕಾಗಿದೆ. ಧರ್ಮದ ಬಗ್ಗೆ ಗಾಯನ ಮಾಡುತ್ತಾರಲ್ಲವೆ. ಇಲ್ಲಿಯ ಮನುಷ್ಯರಂತೂ ತಮ್ಮನ್ನು ಹಿಂದೂಗಳ ಸಾಲಿನಲ್ಲಿ ತೆಗೆದುಕೊಳ್ಳುತ್ತಾರೆ, ಹಿಂದೂ ಆರ್ಯ ಧರ್ಮವಾಗಿದೆ, ಎಲ್ಲದಕ್ಕಿಂತ ಪುರಾತನವಾಗಿದೆ ಎಂದು ಹೇಳುತ್ತಾರೆ. ಭಾರತವಾಸಿಗಳು ಮೊಟ್ಟ ಮೊದಲು ಆರ್ಯರಾಗಿದ್ದರು, ಬಹಳ ಧನವಂತರಾಗಿದ್ದರು, ಈಗ ಅನಾರ್ಯರಾಗಿದ್ದಾರೆ. ಸ್ವಲ್ಪವೂ ಬುದ್ಧಿಯಿಲ್ಲ. ಯಾರಿಗೆ ಏನು ಬರುತ್ತದೆಯೋ ಆ ಧರ್ಮದ ಹೆಸರನ್ನು ಇಟ್ಟು ಬಿಡುತ್ತಾರೆ. ವೃಕ್ಷದ ಹಿಂದೆ ಚಿಕ್ಕ-ಚಿಕ್ಕ ಎಲೆಗಳು, ರೆಂಬೆ-ಕೊಂಬೆಗಳು ಬರುತ್ತಲೇ ಇರುತ್ತವೆ. ಹೊಸಬರಿಗೆ ಸ್ವಲ್ಪ ಮಾನ್ಯತೆಯಿರುತ್ತದೆ.

ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಅಂತಹ ಆಸ್ತಿಯನ್ನು ಕೊಡುವಂತಹ ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವು ಎಷ್ಟು ಹೆಚ್ಚು ನೆನಪು ಮಾಡುತ್ತೀರೋ ಒಂದನೆಯದಾಗಿ ಆಸ್ತಿಯು ಸಿಗುತ್ತದೆ ಮತ್ತು ಪಾವನರಾಗುತ್ತೀರಿ. ಲೌಕಿಕ ತಂದೆಯಿಂದ ಧನದ ಆಸ್ತಿಯಂತೂ ಸಿಗುತ್ತದೆ. ಜೊತೆ ಜೊತೆಗೆ ಪತಿತರಾಗುವ ಆಸ್ತಿಯೂ ಸಹ ಸಿಗುತ್ತದೆ. ಅವರಂತೂ ಲೌಕಿಕ ತಂದೆ, ಇವರು ಪಾರಲೌಕಿಕ ತಂದೆ ಮತ್ತು ಇವರು (ಬ್ರಹ್ಮಾ) ಮಧ್ಯದಲ್ಲಿ ಅಲೌಕಿಕ ತಂದೆ. ಇವರನ್ನು ಇಬ್ಬರ ಮಧ್ಯದಲ್ಲಿ ಜೋಡಿಸಲಾಗುತ್ತದೆ. ಶಿವ ತಂದೆಗೆ ಯಾವುದೇ ಕಷ್ಟ ಆಗುವುದಿಲ್ಲ. ಇವರು ಎಷ್ಟು ನಿಂದನೆ ಅನುಭವಿಸಬೇಕಾಗುತ್ತದೆ. ವಾಸ್ತವದಲ್ಲಿ ಕೃಷ್ಣನಿಗೂ ನಿಂದನೆ ಸಿಗುವುದಿಲ್ಲ, ಮಧ್ಯದಲ್ಲಿ ಇವರೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮಾರ್ಗದಲ್ಲಿ ನಡೆಯುತ್ತಾ ಬ್ರಾಹ್ಮಣನು ಸಿಕ್ಕಿಕೊಂಡನು ಎಂದು ಹೇಳುತ್ತಾರಲ್ಲವೆ. ಇವರು ನಿಂದನೆಯನ್ನು ಅನುಭವಿಸುವುದಕ್ಕಾಗಿ ಸಿಕ್ಕಿಕೊಂಡಿದ್ದಾರೆ. ಅಲೌಕಿಕ ತಂದೆಯೇ ಸಹನೆ ಮಾಡಬೇಕಾಗುತ್ತದೆ. ಶಿವ ತಂದೆಯು ಇವರಲ್ಲಿ ಪ್ರವೇಶ ಮಾಡಿ ಪತಿತರನ್ನು ಪಾವನ ಮಾಡುತ್ತಾರೆಂದು ಇದು ಯಾರಿಗೂ ಗೊತ್ತಿಲ್ಲ. ಪವಿತ್ರರಾಗುವುದರಲ್ಲಿಯೇ ಪೆಟ್ಟು ತಿನ್ನುತ್ತಾರೆ. ನಾನು ಬರುತ್ತೇನೆ, ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುತ್ತೆನೆಂದು ತಂದೆಯು ತಿಳಿಸುತ್ತಾರೆ. ಎದುರಿನಲ್ಲಿ ಮೃತ್ಯು ನಿಂತಿದೆ ಎಂದು ನೀವು ತಿಳಿದಿದ್ದೀರಿ. ವಿನಾಶವಂತೂ ಆಗಲೇಬೇಕಾಗಿದೆ. ವಿನಾಶದ ಹೊರತು ಸುಖ-ಶಾಂತಿ ಹೇಗಾಗುತ್ತದೆ. ಯಾವಾಗ ಯಾವುದೇ ಯುದ್ಧ ನಡೆಯುತ್ತದೆಯೆಂದರೆ ಯುದ್ಧಗಳು ನಿಂತು ಹೋಗಲಿ ಎಂದು ಮನುಷ್ಯರು ಯಜ್ಞವನ್ನು ಮಾಡುತ್ತಾರೆ. ನೀವು ಬ್ರಾಹ್ಮಣ ಕುಲಭೂಷಣರೇ ತಿಳಿದಿದ್ದೀರಿ, ಅವಶ್ಯವಾಗಿ ಆಗಲೇಬೇಕು ಇಲ್ಲದಿದ್ದರೆ ಸ್ವರ್ಗದ ದ್ವಾರ ಹೇಗೆ ತೆರೆಯಲ್ಪಡುವುದು! ಎಲ್ಲರೂ ಸ್ವರ್ಗದಲ್ಲಂತೂ ಬರಲು ಸಾಧ್ಯವಿಲ್ಲ. ಯಾರು ಪುರುಷಾರ್ಥ ಮಾಡುತ್ತಾರೆಯೋ ಅವರೇ ಸ್ವರ್ಗಕ್ಕೆ ಹೋಗುತ್ತಾರೆ ಉಳಿದವರು ಮುಕ್ತಿಧಾಮಕ್ಕೆ ಹೋಗುತ್ತಾರೆ. ಇದು ಯಾರಿಗೂ ತಿಳಿಯದೇ ಇರುವ ಕಾರಣ ಎಷ್ಟೊಂದು ಭಯ ಪಡುತ್ತಾರೆ. ಶಾಂತಿಗಾಗಿ ಎಷ್ಟೊಂದು ಅಲೆದಾಡುತ್ತಾರೆ. ಸಮ್ಮೇಳನಗಳನ್ನೂ ಮಾಡುತ್ತಾರೆ, ಕೇವಲ ನೀವು ಬ್ರಾಹ್ಮಣರು ಸುಖಧಾಮ-ಶಾಂತಿಧಾಮವು ಹೇಗೆ ಸ್ಥಾಪನೆಯಾಗುತ್ತಿದೆ ಎಂದು ತಿಳಿದಿದ್ದೀರಿ. ವಿನಾಶದ ವಿನಃ ಸ್ಥಾಪನೆಯಾಗಲು ಸಾಧ್ಯವಿಲ್ಲ. ನೀವೀಗ ತ್ರಿಕಾಲದರ್ಶಿಗಳಾಗಿದ್ದೀರಿ. ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ಅವರಂತೂ ಶಾಂತಿಯನ್ನು ಹೇಗೆ ಪಡೆಯುವುದು ಅರ್ಥಾತ್ ಯಾರೂ ಜಗಳವಾಡುವುದು ಬೇಡ. ಎಲ್ಲರೂ ಒಮ್ಮತವಾಗಿರಬೇಕು ಎಂದು ಹೇಳುತ್ತಿರುತ್ತಾರೆ ಆದರೆ ಒಬ್ಬರೇ ತಂದೆಯ ಒಂದು ಮತವನ್ನು ತೆಗೆದುಕೊಂಡು ಎಲ್ಲರೂ ತಂದೆಯ ಮಕ್ಕಳು ಸಹೋದರ-ಸಹೋದರರಾದಿರಿ ಅಂದಮೇಲೆ ಒಮ್ಮತವಾಗಿ ಬಿಡುವುದು. ಒಬ್ಬ ತಂದೆಯ ಮಕ್ಕಳು ಅಂದಮೇಲೆ ಪರಸ್ಪರ ಜಗಳವಾಡಬಾರದು. ಇದಂತೂ ಸತ್ಯಯುಗದಲ್ಲಿಯೇ ಇತ್ತಲ್ಲವೆ! ಅಲ್ಲಿ ಯಾರೂ ಪರಸ್ಪರದಲ್ಲಿ ಜಗಳವಾಡುವುದಿಲ್ಲ. ಅದಂತೂ ಸತ್ಯಯುಗದ ಮಾತಾಯಿತು, ಇದು ಕಲಿಯುಗವಾಗಿದೆ. ಅವಶ್ಯವಾಗಿ ಸತ್ಯಯುಗದಲ್ಲಿ ದೇವತೆಗಳಿದ್ದರು, ಉಳಿದ ಬೇರೆಲ್ಲಾ ಆತ್ಮರು ಎಲ್ಲಿರುತ್ತಾರೆಂದು ಗೊತ್ತಾಗುವುದಿಲ್ಲ. ಒಂದು ರಾಜ್ಯ ಕೇವಲ ಸತ್ಯಯುಗದಲ್ಲಿ ಮಾತ್ರ ಇತ್ತೆಂದು ಈಗ ನೀವು ತಿಳಿದಿದ್ದೀರಿ, ಅಲ್ಲಿ ಸುಖ-ಶಾಂತಿ ಎಲ್ಲವೂ ಇತ್ತು. ನಂಬರ್ವಾರ್ ಪುರುಷಾರ್ಥದನುಸಾರ ಇವೆಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ, ಅವಶ್ಯವಾಗಿ ನಾವು ಸತ್ಯಯುಗದಲ್ಲಿ ರಾಜ್ಯ ಮಾಡುತ್ತಿದ್ದೆವು, ಬಹಳ ಸುಖವಾಗಿದ್ದೆವು ಎಂದು ತಿಳಿದಿದ್ದೀರಿ. ಅದ್ವೈತ ಜ್ಞಾನವಿತ್ತು ಎಂಬ ತಿಳುವಳಿಕೆ ಯಾರಿಗೂ ಇರಲಿಲ್ಲ. ಈ ಸಮಯದಲ್ಲಿ ನೀವು ನಾಲೆಡ್ಜ್ಫುಲ್ ಆಗುತ್ತೀರಿ. ತಂದೆಯು ನಿಮ್ಮನ್ನು ತಮ್ಮ ಸಮಾನ ಮಾಡಿಕೊಳ್ಳುತ್ತಾರೆ, ತಂದೆಯ ಮಹಿಮೆಯೇನಿದೆಯೋ ಅದರಂತೆ ನಿಮ್ಮನ್ನೂ ಮಾಡುತ್ತಾರೆ. ಕೇವಲ ದಿವ್ಯ ದೃಷ್ಟಿಯ ಬೀಗದ ಕೈ ತಂದೆಯ ಬಳಿ ಇರುತ್ತದೆ. ಭಕ್ತಿಮಾರ್ಗದಲ್ಲಿಯೂ ಸಹ ನಾನು ಕೆಲಸ ಮಾಡಬೇಕಾಗುತ್ತದೆ. ಯಾರು ಯಾವ ಪೂಜೆಯನ್ನು ಮಾಡುತ್ತಾರೆಯೋ ಅವರ ಮನೋಕಾಮನೆಗಳನ್ನು ಪೂರ್ಣ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಇಲ್ಲಿಯೂ ದಿವ್ಯ ದೃಷ್ಟಿಯ ಪಾತ್ರವು ನಡೆಯುತ್ತದೆ. ಅರ್ಜುನನು ವಿನಾಶದ ಸಾಕ್ಷಾತ್ಕಾರ ಮಾಡಿದನು ಎಂದು ಹೇಳುತ್ತಾರಲ್ಲವೆ. ವಿನಾಶವು ಅವಶ್ಯವಾಗಿ ಆಗಲೇಬೇಕಾಗಿದೆ, ವಿಷ್ಣು ಪುರಿಯ ಸ್ಥಾಪನೆಯೂ ಅವಶ್ಯವಾಗಿ ಆಗಬೇಕು. ಕಲ್ಪದ ಹಿಂದೆ ತಂದೆಯು ಹೇಗೆ ತಿಳಿಸಿದ್ದರೋ ಅದೇರೀತಿ ಈಗಲೂ ಸಹ ತಿಳಿಸುತ್ತಿದ್ದಾರೆ. ಬಾಬಾ ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ, ಯಾವಾಗ ದೇವತೆಗಳಾಗುತ್ತೇವೆ ಆಗ ಆಸುರೀ ಸೃಷ್ಟಿಯ ವಿನಾಶವಾಗಲೇಬೇಕು. ನಾಲ್ಕೂ ಕಡೆ ಹಾಹಾಕಾರ ಮೊಳಗಲೇಬೇಕು. ಪ್ರಾಕೃತಿಕ ವಿಕೋಪಗಳೂ ಸಹ ಆಗಲೇಬೇಕೆಂದು ಬುದ್ಧಿಯಲ್ಲಿದೆ, ಬಾಂಬುಗಳ ಮಳೆಯಾಗುತ್ತದೆ. ಇವೆಲ್ಲದರ ವಿನಾಶವಾದರೆ ಸತ್ಯಯುಗದ ಸ್ಥಾಪನೆಯಾಗುವುದು. 5 ತತ್ವಗಳ ಗೊಬ್ಬರ ಸಹ ಸೇರಿ ಬಿಡುತ್ತವೆ. ಈ ಧರಣಿಗೆ ಗೊಬ್ಬರ ಎಷ್ಟೊಂದು ಸಿಗುತ್ತದೆ! ಈ ರುದ್ರ ಜ್ಞಾನ ಯಜ್ಞದಲ್ಲಿ ಎಲ್ಲವೂ ಸ್ವಾಹಾ ಆಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಿ ರುದ್ರ ಯಜ್ಞವನ್ನು ಹೇಗೆ ರಚಿಸುತ್ತಾರೆ ನೋಡಿ. ಶಿವಬಾಬಾನ ಲಿಂಗ ಮತ್ತು ಅನೇಕ ಚಿಕ್ಕ-ಚಿಕ್ಕ ಸಾಲಿಗ್ರಾಮ ಮಾಡಿ, ಅದಕ್ಕೆ ಪೂಜೆ ಮಾಡಿ ನಂತರ ಅಳಿಸಿ ಹಾಕುತ್ತಾರೆ, ಪುನಃ ತಯಾರು ಮಾಡುತ್ತಾರೆ. ಪೂಜೆ ಮಾಡಿ ನಂತರ ಒಡೆದು ಹಾಕುತ್ತಾರೆ. ಶಿವ ತಂದೆಯ ಜೊತೆ ಯಾರು-ಯಾರು ಸೇವೆ ಮಾಡಿದ್ದಾರೆ ಅವರ ಸ್ಥಿತಿಯನ್ನೂ ಹೀಗೆ ಮಾಡುತ್ತಾರೆ. ರಾವಣನ ಗೊಂಬೆಯನ್ನು ಮಾಡಿ ಪ್ರತೀ ವರ್ಷ ಸುಡುತ್ತಾರೆ. ಶತ್ರುವೆಂದ ಮೇಲೆ ಒಂದೆರಡು ಬಾರಿ ಸುಡುತ್ತಾರೆ, ವರ್ಷ-ವರ್ಷವೂ ಸುಡುವ ರೀತಿಯಲ್ಲ. ಒಂದೇ ಬಾರಿ ಕೋಪವನ್ನು ತಯಾರಿಸುತ್ತಾರೆ, ರಾವಣನ್ನಂತೂ ವರ್ಷ-ವರ್ಷ ಸುಡುತ್ತಾರೆ, ಇದರ ಅರ್ಥವನ್ನೂ ಸ್ವಲ್ಪವೂ ತಿಳಿದಿಲ್ಲ. ನಂತರ ಸೀತೆಯನ್ನು ರಾವಣನು ಕದ್ದುಕೊಂಡು ಹೋದನು ಎಂದು ಹೇಳುತ್ತಾರೆ, ಸ್ವಲ್ಪವೂ ಅರ್ಥವನ್ನೇ ತಿಳಿದಿಲ್ಲ. ವಿದೇಶಿಯರಿಗಂತೂ ಸ್ವಲ್ಪವೂ ಅರ್ಥವಾಗುವುದಿಲ್ಲ. ದಿನ-ಪ್ರತಿದಿನ ರಾವಣನ ಗೊಂಬೆಯನ್ನು ದೊಡ್ಡದಾಗಿ ಮಾಡುತ್ತಾರೆ ಏಕೆಂದರೆ ರಾವಣನು ಬಹಳ ದುಃಖ ಕೊಡುವವನಾಗಿದ್ದಾನೆ. ಈಗ ನೀವು ಇದರ ಮೇಲೆ ಜಯ ಗಳಿಸುತ್ತೀರಿ. ಸತ್ಯಯುಗದಲ್ಲಿ ಇದು ಇರುವುದೇ ಇಲ್ಲ. ಇಲ್ಲಿ ಏನು ಕರ್ಮ ಭೋಗ ಭೋಗಿಸುವರೋ, ರೋಗ ಇತ್ಯಾದಿಗಳಿಗೆ ರಾವಣನೇ ಕಾರಣನಾಗಿದ್ದಾನೆ. ರಾವಣನ ಪ್ರವೇಶತೆಯ ಕಾರಣ ಮನುಷ್ಯರು ಏನೇ ಕರ್ಮವನ್ನು ಮಾಡಿದರೆ ವಿಕರ್ಮವೇ ಆಗುತ್ತದೆ. ಸುಖ-ದುಃಖದ ಆಟ ಮಾಡಲ್ಪಟ್ಟಿದೆ. ಈ ಇತಿಹಾಸ-ಭೂಗೋಳವು ಯಾರಿಗೂ ಗೊತ್ತಿಲ್ಲ. ಲಕ್ಷ್ಮೀ-ನಾರಾಯಣರಿಗೆ ಹೇಗೆ ರಾಜ್ಯ ಸಿಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಲಕ್ಷ್ಮೀ-ನಾರಾಯಣರು ಹೇಗೆ ರಾಜ್ಯ ಮಾಡಿದರೆಂದು ಚಿಕ್ಕ-ಚಿಕ್ಕ ಮಕ್ಕಳು ತಿಳಿದುಕೊಂಡಿದ್ದೀರಿ, ಸಂಗಮದಲ್ಲಿ ರಾಜಯೋಗವನ್ನು ಕಲಿತು ಇವರು ಪದವಿಯನ್ನು ಪಡೆದಿದ್ದಾರೆ. ಚಿಕ್ಕ-ಚಿಕ್ಕ ಮಕ್ಕಳು ಹೋಗಿ ಇವರು ಹೇಗೆ ರಾಜ್ಯಭಾಗ್ಯವನ್ನು ಪಡೆದರು, ಈಗಂತೂ ಕಲಿಯುಗವಾಗಿದೆ, ಇದನ್ನಂತೂ ಸತ್ಯಯುಗವೆನ್ನಲು ಸಾಧ್ಯವಿಲ್ಲವೆಂದು ಬಿರ್ಲಾದವರಿಗೆ ತಿಳಿಸಬೇಕು. ರಾಜ್ಯಭಾಗ್ಯವಂತೂ ಈಗ ಇಲ್ಲವೇ ಇಲ್ಲ. ರಾಜರ ಕಿರೀಟಗಳನ್ನು ಉಡಾಯಿಸಿ ಬಿಟ್ಟಿದ್ದಾರೆ. ಧರ್ಮ ಶಾಸ್ತ್ರಗಳು ಕೇವಲ ನಾಲ್ಕು ಮಾತ್ರವೇ ಇದೆ. ಗೀತಾ ಧರ್ಮ ಶಾಸ್ತ್ರವಾಗಿದೆ ಯಾವುದರಿಂದ ಈ ಮೂರು ಧರ್ಮಗಳು ಸ್ಥಾಪನೆಯಾಗುತ್ತದೆ, ಸತ್ಯಯುಗದಲ್ಲಿ ಅಲ್ಲ. ಲಕ್ಷ್ಮೀ-ನಾರಾಯಣ ಅಥವಾ ರಾಮನು ಧರ್ಮವನ್ನು ಸ್ಥಾಪನೆ ಮಾಡಿದರು ಎಂದಲ್ಲ. ಈಗ ಈ ಧರ್ಮ ಸ್ಥಾಪನೆಯಾಗುತ್ತಿದೆ ನಂತರ ಇಸ್ಲಾಮಿ, ಬೌದ್ಧಿ ಮತ್ತು ಕ್ರಿಶ್ಚಿಯನ್ ಧರ್ಮ ಸ್ಥಾಪನೆಯಾಗುತ್ತದೆ. ಕ್ರಿಶ್ಚಿಯನ್ನರ ಧರ್ಮ ಗ್ರಂಥ ಬೈಬಲ್ ಆಗಿದೆ ನಂತರ ಮುಂದೆ ವೃದ್ಧಿಯಾಗುತ್ತಾ ಹೋಗುತ್ತದೆ. ಆದಿ ಸನಾತನವು ದೇವತಾ ಧರ್ಮವೇ ಆಗಿದೆ ಈಗ ಪುನಃ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ನೀವು ಡ್ರಾಮಾದ ರಹಸ್ಯವನ್ನು ತಿಳಿದುಕೊಂಡಿದ್ದೀರಿ, ಖುಷಿಯಾಗಿಯೂ ಇರುತ್ತೀರಿ. ನೀವೀಗ ತಿಳಿದಿದ್ದೀರಿ – 100% ನಿಶ್ಚಿತವಾಗಿದೆ, ನಮ್ಮ ರಾಜ್ಯಭಾಗ್ಯವನ್ನು ಸ್ಥಾಪನೆ ಮಾಡಿಕೊಳ್ಳುತ್ತೇವೆ, ಇದರಲ್ಲಿ ಯುದ್ಧ, ಯಾವುದರ ಮಾತಿಲ್ಲ. ರಾಜಧಾನಿಯ ಸ್ಥಾಪನೆಯಾಗುತ್ತಿದೆ, ಇದು ನಿಶ್ಚಿತವಾಗಿದೆ. ಆಯಸ್ಸೂ ನಿಗಧಿಯಾಗಿದೆ, ಮೃತ್ಯುವೂ ನಿಗಧಿಯಾಗಿದೆ. ನಾವೀಗ ಮತ್ತೆ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ, ತಂದೆಯಿಂದ ಕಲ್ಪ-ಕಲ್ಪವೂ ಆಸ್ತಿಯನ್ನು ಪಡೆಯುತ್ತೇವೆ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆಂದು ನೀವೀಗ ತಿಳಿದಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಯಾವ-ಯಾವ ಮಹಿಮೆಯಿದೆಯೋ ಅದನ್ನು ಸ್ವಯಂನಲ್ಲಿ ತರಬೇಕು. ತಂದೆಯ ಸಮಾನ ಮಹಿಮಾಯೋಗ್ಯರಾಗಬೇಕಾಗಿದೆ. ಪಾರಲೌಕಿಕ ತಂದೆಯಿಂದ ಪವಿತ್ರತೆಯ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಪವಿತ್ರರಾಗುವುದರಿಂದಲೇ ಸ್ವರ್ಗದ ಆಸ್ತಿಯು ಸಿಗುತ್ತದೆ.

2. ಶ್ರೀಮತದಂತೆ ತಮ್ಮದೇ ತನು-ಮನ-ಧನದಿಂದ ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಬೇಕಾಗಿದೆ.

ವರದಾನ:-

ಯಾವಾಗ ಮಾಸ್ಟರ್ ತ್ರಿಕಾಲದರ್ಶಿಯಾಗಿ ಸಂಕಲ್ಪವನ್ನು ಕರ್ಮದಲ್ಲಿ ತರುತ್ತೀರೆಂದರೆ, ಯಾವುದೇ ಕರ್ಮವೂ ವ್ಯರ್ಥವಾಗುವುದಿಲ್ಲ. ಈ ವ್ಯರ್ಥವನ್ನು ಪರಿವರ್ತನೆ ಮಾಡಿಕೊಂಡು ಸಮರ್ಥ ಸಂಕಲ್ಪ ಹಾಗೂ ಸಮರ್ಥ ಕಾರ್ಯವನ್ನು ಮಾಡುವುದಕ್ಕೆ ಹೇಳಲಾಗುತ್ತದೆ – ಸಂಪೂರ್ಣ ಸ್ಥಿತಿ. ಕೇವಲ ತಮ್ಮ ವ್ಯರ್ಥ ಸಂಕಲ್ಪ ಹಾಗೂ ವಿಕರ್ಮಗಳನ್ನು ಭಸ್ಮ ಮಾಡುವುದಲ್ಲ ಆದರೆ ಶಕ್ತಿ ರೂಪರಾಗಿ ಇಡೀ ವಿಶ್ವದ ವಿಕರ್ಮಗಳ ಹೊರೆಯನ್ನು ಹಗುರ ಮಾಡುವ ಅಥವಾ ಅನೇಕ ಆತ್ಮರುಗಳ ವ್ಯರ್ಥ ಸಂಕಲ್ಪಗಳನ್ನು ನಶಿಸುವ ಯಂತ್ರವನ್ನು ತೀವ್ರಗೊಳಿಸುತ್ತೀರೆಂದರೆ ಹೇಳಲಾಗುತ್ತದೆ – ವಿಶ್ವ ಕಲ್ಯಾಣಕಾರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top