22 July 2021 KANNADA Murli Today | Brahma Kumaris
Read and Listen today’s Gyan Murli in Kannada
21 July 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ವೃಕ್ಷಪತಿ ತಂದೆಯು ನೀವು ಮಕ್ಕಳ ಮೇಲೆ ಬೃಹಸ್ಪತಿ ದೆಶೆಯನ್ನು ಕೂರಿಸಿದ್ದಾರೆ, ನೀವೀಗ ಅವಿನಾಶಿ ಸುಖದ ಪ್ರಪಂಚದಲ್ಲಿ ಹೋಗುತ್ತಿದ್ದೀರಿ”
ಪ್ರಶ್ನೆ:: -
ಅವಿನಾಶಿ ಬೃಹಸ್ಪತಿ ದೆಶೆಯು ಯಾವ ಮಕ್ಕಳ ಮೇಲೆ ಕುಳಿತುಕೊಳ್ಳುತ್ತದೆ? ಅವರ ಚಿಹ್ನೆಗಳೇನು?
ಉತ್ತರ:-
ಯಾವ ಮಕ್ಕಳು ಜೀವಿಸಿದ್ದಂತೆಯೇ ದೇಹದ ಎಲ್ಲಾ ಸಂಬಂಧಗಳನ್ನು ತ್ಯಾಗ ಮಾಡಿ ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳುವರೋ ಅಂತಹ ಆತ್ಮಿಕ ನಿಶ್ಚಯ ಬುದ್ಧಿಯುಳ್ಳ ಮಕ್ಕಳ ಮೇಲೆ ಬೃಹಸ್ಪತಿ ದೆಶೆಯು ಕುಳಿತುಕೊಳ್ಳುತ್ತದೆ. ಅತೀಂದ್ರಿಯ ಸುಖವನ್ನು ಗೋಪ-ಗೋಪಿಕೆಯರಿಂದ ಕೇಳಿರಿ ಎಂದು ಅವರದೇ ಸುಖದ ಗಾಯನವಿದೆ. ಅವರ ಖುಷಿಯು ಎಂದಿಗೂ ಮಾಯವಾಗಲು ಸಾಧ್ಯವಿಲ್ಲ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಓಂ ನಮಃ ಶಿವಾಯ…..
ಓಂ ಶಾಂತಿ. ಮಕ್ಕಳು ತಂದೆಯ ಮಹಿಮೆಯನ್ನು ಕೇಳಿದಿರಿ. ಇಂದಿನ ದಿನಕ್ಕೆ ವೃಕ್ಷಪತಿ ದಿನವೆಂದು ಹೇಳಲಾಗುತ್ತದೆ, ಇದನ್ನು ಸೇರಿಸಿ ಬೃಹಸ್ಪತಿ ಎಂದು ಹೇಳುತ್ತಾರೆ. ಇದಕ್ಕೇ ಗುರುವಾರವೆಂದು ಹೇಳಲಾಗುತ್ತದೆ. ಕೇವಲ ಗುರುವಾರವಲ್ಲ ಆದರೆ ಸದ್ಗುರುವಾರ ಆಗಿದೆ. ಬಂಗಾಳದಲ್ಲಿ ಬಹಳ ಮಾನ್ಯತೆ ಕೊಡುತ್ತಾರೆ. ಮನುಷ್ಯ ಸೃಷ್ಟಿಯ ಬೀಜರೂಪನೆಂದೂ ಗಾಯನವಿರುವ ಕಾರಣ ವೃಕ್ಷಪತಿಯೆಂದು ಹೇಳುತ್ತಾರೆ. ಬೀಜವೂ ಆದರು ಮತ್ತು ಪತಿಯೂ ಆದರು. ವೃಕ್ಷದ ಬೀಜಕ್ಕೆ ತಂದೆಯೆಂದೂ ಹೇಳುತ್ತಾರೆ, ಅದರಿಂದ ವೃಕ್ಷವು ಉತ್ಪನ್ನವಾಗುತ್ತದೆ. ಇದು ಮನುಷ್ಯ ಸೃಷ್ಟಿರೂಪಿ ವೃಕ್ಷವಾಗಿದೆ, ಇದರ ಬೀಜವು ಮೇಲಿದೆ. ಈಗ ನಾವು ಮಕ್ಕಳ ಮೇಲೆ ಅವಿನಾಶಿ ವೃಕ್ಷಪತಿಯ ದೆಶೆಯಿದೆ ಎಂಬುದು ನಿಮಗೆ ತಿಳಿದಿದೆ ಏಕೆಂದರೆ ಅವಿನಾಶಿ ಸ್ವರಾಜ್ಯ ಸಿಗುತ್ತಿದೆ. ಸತ್ಯಯುಗಕ್ಕೆ ಅವಿನಾಶಿ ಸುಖಧಾಮವೆಂದು ಹೇಳಲಾಗುತ್ತದೆ, ಕಲಿಯುಗಕ್ಕೆ ವಿನಾಶೀ ದುಃಖಧಾಮವೆಂದು ಹೇಳುತ್ತಾರೆ. ಈಗ ಈ ದುಃಖಧಾಮದ ವಿನಾಶವಾಗಲಿದೆ. ಸುಖಧಾಮವು ಅವಿನಾಶಿಯಾಗಿದೆ, ಅರ್ಧಕಲ್ಪ ನಡೆಯುತ್ತದೆ. ಅದನ್ನು ಅವಿನಾಶಿ ವೃಕ್ಷಪತಿ ಸ್ಥಾಪನೆ ಮಾಡುತ್ತಿದ್ದಾರೆ, ಮಕ್ಕಳು ಸರ್ವೀಸಿಗಾಗಿ ಒಳ್ಳೊಳ್ಳೆಯ ಅಂಶಗಳನ್ನು ಬರೆದಿಟ್ಟುಕೊಳ್ಳಬೇಕು, ಪ್ರದರ್ಶನಿಯಲ್ಲಿ ಇಂತಿಂತಹ ಮುಖ್ಯ ಮಾತುಗಳನ್ನು ತಿಳಿಸಬೇಕಾಗಿದೆ ಏಕೆಂದರೆ ಮನುಷ್ಯರಂತೂ ಏನನ್ನೂ ತಿಳಿದಿಲ್ಲ. ಇದು ಜ್ಞಾನವಾಗಿದೆ, ತಂದೆಯು ಹೊಸ ಮತ್ತು ಹಳೆಯ ಪ್ರಪಂಚದ ಮಧ್ಯದಲ್ಲಿಯೇ ಜ್ಞಾನವನ್ನು ಕೊಡುತ್ತಾರೆ ಮತ್ತೆ ಇದು ಪ್ರಾಯಃಲೋಪವಾಗಿ ಬಿಡುತ್ತದೆ. ದೇವತೆಗಳಿಗೆ ಈ ಜ್ಞಾನವಿರುವುದಿಲ್ಲ. ಒಂದುವೇಳೆ ಈ ಚಕ್ರದ ಜ್ಞಾನವು ಇದ್ದಿದ್ದರೆ ಅವರ ರಾಜ್ಯದಲ್ಲಿ ಮಜವೇ ಇರುತ್ತಿರಲಿಲ್ಲ. ಈಗಲೂ ಸಹ ನಿಮಗೆ ಸಂಕಲ್ಪ ಬರುತ್ತದೆಯಲ್ಲವೆ, ನಾವು ರಾಜ್ಯವನ್ನು ತೆಗೆದುಕೊಂಡು ನಂತರ ಕೊನೆಯಲ್ಲಿ ನಮ್ಮದು ಇಂತಹ ಸ್ಥಿತಿಯಾಗುವುದೇ! ಆದರೆ ಇದಂತೂ ನಾಟಕದಲ್ಲಿ ಮಾಡಲ್ಪಟ್ಟಿದೆ. ಚಕ್ರವು ಸುತ್ತಲೇಬೇಕಾಗಿದೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತಿದೆ, ಹೇಗೆ ಪುನರಾವರ್ತನೆ ಆಗುವುದು ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ಮನುಷ್ಯ ಸೃಷ್ಟಿಯಾಗಿದೆ, ನಿಮ್ಮ ಬುದ್ಧಿಯಲ್ಲಿ ಮೂಲವತನದ ವೃಕ್ಷದ ಜ್ಞಾನವಿದೆ. ಅಲ್ಲಿಯೂ ಎಲ್ಲರ ವಿಭಾಗಗಳು ಬೇರೆ-ಬೇರೆಯಾಗಿರುತ್ತದೆ. ಈ ಮಾತುಗಳು ಎಂದೂ ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಯಾವುದೇ ಶಾಸ್ತ್ರಗಳಲ್ಲಿಯೂ ಇದನ್ನು ಬರೆದಿಲ್ಲ, ನಾವಾತ್ಮರು ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಅವಿನಾಶಿಯಾಗಿದ್ದೇವೆ, ಎಂದೂ ವಿನಾಶ ಹೊಂದುವುದಿಲ್ಲ. ನೀರಿನ ಗುಳ್ಳೆಯು ನೀರಿನಿಂದ ಹೊರಬಂದು ಮತ್ತೆ ಅದರಲ್ಲಿ ಸೇರಿ ಹೋಗುತ್ತದೆ ಎಂದು ಅವರು ತಿಳಿಯುತ್ತಾರೆ. ಆದರೆ ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ರಹಸ್ಯವಿದೆ. ಆತ್ಮವು ಅವಿನಾಶಿಯಾಗಿದೆ, ಅದರಲ್ಲಿ ಪಾತ್ರವೆಲ್ಲವೂ ಮೊದಲೇ ನಿಗಧಿಯಾಗಿದೆ. ಈ ಚಕ್ರದ ಜ್ಞಾನವು ಯಾವುದೇ ಶಾಸ್ತ್ರಗಳಲ್ಲಿಲ್ಲ, ಕೆಲವೊಂದೆಡೆ ಸ್ವಸ್ತಿಕವನ್ನು ತೋರಿಸುತ್ತಾರೆ ಆದರೆ ಕೇವಲ ಹಾಗೆಯೇ ಗೆರೆಗಳನ್ನು ಎಳೆದು ಬಿಡುತ್ತಾರೆ, ಇದರಿಂದಲೇ ಸಿದ್ಧವಾಗುತ್ತದೆ – ಅನೇಕ ಧರ್ಮಗಳಿತ್ತು, ತಂದೆಯು ತಿಳಿಸಿದ್ದಾರೆ ಮುಖ್ಯವಾಗಿ ನಾಲ್ಕು ಧರ್ಮ ಶಾಸ್ತ್ರಗಳಿವೆ, ಸತ್ಯ-ತ್ರೇತಾಯುಗದಲ್ಲಿ ಯಾವುದೇ ಧರ್ಮ ಸ್ಥಾಪನೆಯಾಗುವುದಿಲ್ಲ, ಅಲ್ಲಿ ಯಾವುದೇ ಧರ್ಮ ಶಾಸ್ತ್ರವೂ ಇರುವುದಿಲ್ಲ, ಇವೆಲ್ಲವೂ ದ್ವಾಪರದಿಂದ ಆರಂಭವಾಗುತ್ತದೆ ನಂತರ ನೋಡಿ! ಎಷ್ಟೊಂದು ವೃದ್ಧಿಯಾಗುತ್ತದೆ. ಒಳ್ಳೆಯದು. ಗೀತೆಯನ್ನು ಯಾವಾಗ ತಿಳಿಸಲಾಯಿತು? ನಾನು ಕಲ್ಪದ ಸಂಗಮಯುಗದಲ್ಲಿಯೇ ಬರುತ್ತೇನೆಂದು ತಂದೆಯು ಹೇಳುತ್ತಾರೆ. ಈ ಕಲ್ಪದ ಅಕ್ಷರವನ್ನು ತೆಗೆದು ಮನುಷ್ಯರು ಸಂಗಮ ಯುಗೇ ಯುಗೇ ಅರ್ಥಾತ್ ಯುಗ-ಯುಗದಲ್ಲಿ ಬರುತ್ತಾರೆಂದು ಬರೆದಿದ್ದಾರೆ. ವಾಸ್ತವದಲ್ಲಿ ಸಂಗಮಯುಗದಲ್ಲಿ ಮತ್ತ್ಯಾವುದೇ ಧರ್ಮ ಸ್ಥಾಪನೆ ಮಾಡುವುದಿಲ್ಲ. ತ್ರೇತಾದ ಅಂತ್ಯದ ದ್ವಾಪರದ ಆದಿಯ ಸಂಗಮದಲ್ಲಿ ಇಸ್ಲಾಮಿಗಳ ಧರ್ಮ ಸ್ಥಾಪನೆಯಾಯಿತು ಎಂದಲ್ಲ. ದ್ವಾಪರದಲ್ಲಿ ಸ್ಥಾಪನೆಯಾಯಿತು ಎಂದು ಹೇಳುತ್ತಾರೆ. ಈಗಿನ ಸಂಗಮವು ಮಂಗಳಕಾರಿ ಸಮಯವಾಗಿದೆ. ಇದಕ್ಕೆ ಕುಂಭವೆಂದು ಹೇಳುತ್ತಾರೆ. ಸಂಗಮಕ್ಕೆ ಕುಂಭವೆಂದು ಹೇಳಲಾಗುತ್ತದೆ, ಇದು ಆತ್ಮರು ಮತ್ತು ಪರಮಾತ್ಮನ ಮಿಲನದ ಸಂಗಮವಾಗಿದೆ. ಈ ಆತ್ಮಿಕ ಮೇಳವು ಸಂಗಮದಲ್ಲಿಯೇ ಆಗುತ್ತದೆ. ಇದಕ್ಕಾಗಿ ಅವರು ಗಂಗಾಜಲದ ಹೆಸರನ್ನು ಪ್ರಖ್ಯಾತ ಮಾಡಿ ಬಿಟ್ಟಿದ್ದಾರೆ. ಜ್ಞಾನ ಸಾಗರ, ಪತಿತ-ಪಾವನನ್ನು ತಿಳಿದುಕೊಂಡೇ ಇಲ್ಲ. ಅವರು ಹೇಗೆ ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡಿದರು ಎಂದು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ. ಈಗ ನೀವು ಮಕ್ಕಳಿಗೆ ತಂದೆಯು ಹೇಳುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿರಿ, ದೇಹದ ಎಲ್ಲಾ ಧರ್ಮಗಳನ್ನು ತ್ಯಾಗ ಮಾಡಿರಿ. ಯಾರಿಗೆ ತಿಳಿಸುತ್ತಾರೆ? ಆತ್ಮರಿಗೆ. ಇದನ್ನು ಜೀವಿಸಿದ್ದಂತೆಯೇ ಸಾಯುವುದು ಎಂದು ಹೇಳಲಾಗುವುದು. ಮನುಷ್ಯರು ಶರೀರ ಬಿಟ್ಟ ಮೇಲೆ ದೇಹದ ಎಲ್ಲಾ ಸಂಬಂಧಗಳೂ ಬಿಟ್ಟು ಹೋಗುತ್ತವೆ.
ತಂದೆಯು ತಿಳಿಸುತ್ತಾರೆ – ಯಾವುದೆಲ್ಲಾ ದೇಹದ ಸಂಬಂಧಗಳಿವೆಯೋ ಅವೆಲ್ಲವನ್ನೂ ಬಿಟ್ಟು ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ. ಆತ್ಮಿಕ ನಿಶ್ಚಯ ಬುದ್ಧಿಯವರಾಗಿ. ಎಷ್ಟು ಹೆಚ್ಚು ನೆನಪು ಮಾಡುವಿರೋ ಅಷ್ಟು ಬೃಹಸ್ಪತಿಯ ದೆಶೆಯಿರುವುದು. ನಾವು ಶಿವ ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ ಎಂದು ಪರಿಶೀಲನೆ ಮಾಡಿಕೊಳ್ಳಿ. ನೆನಪಿನಿಂದಲೇ ತುಕ್ಕು ಕಳೆಯುತ್ತಾ ಹೋಗುವುದು ಮತ್ತು ನಿಮಗೆ ಖುಷಿಯಿರುವುದು. ನಾವು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ ಎಂದು ನೀವೂ ಸಹ ಅನುಭವ ಮಾಡಬಹುದು. ಒಂದುವೇಳೆ ಕಡಿಮೆ ನೆನಪು ಮಾಡಿದರೆ ಕಡಿಮೆ ತುಕ್ಕು ಕಳೆಯುತ್ತದೆ, ಖುಷಿಯೂ ಕಡಿಮೆಯಿರುತ್ತದೆ, ಕಡಿಮೆ ಪದವಿಯನ್ನೇ ಪಡೆಯುವಿರಿ. ಆತ್ಮವೆ ಸತೋ, ರಜೋ, ತಮೋ ಆಗುತ್ತದೆ. ಗೋಪ-ಗೋಪಿಕೆಯರ ಅತೀಂದ್ರಿಯ ಸುಖವು ಈ ಸಮಯದ ಗಾಯನವೇ ಆಗಿದೆ. ಯಾವಾಗ ತಂದೆಯ ವಿನಃ ಮತ್ತೇನೂ ನೆನಪಿಗೆ ಬರುವುದಿಲ್ಲವೋ ಆಗಲೇ ಖುಷಿಯ ನಶೆಯೇರುವುದು. ನಮ್ಮ ಮೇಲೆ ಬೃಹಸ್ಪತಿ ದೆಶೆ ಅಥವಾ ಸದ್ಗುರುವಿನ ದೆಶೆಯಿದೆ. ಯಾವಾಗ ಖುಷಿಯು ಮಾಯವಾಗುವುದೋ ಆಗ ಬೃಹಸ್ಪತಿ ದೆಶೆಯು ಬದಲಾಗಿ ರಾಹುವಿನ ಗ್ರಹಣ ಹಿಡಿದಿದೆ ಎಂದು ಹೇಳುತ್ತಾರೆ. ಯಾರಾದರೂ ಬಹಳ ಸಾಹುಕಾರರಾಗಿರುತ್ತಾರೆ, ಯಾರಾದರೂ ಮೋಸ ಮಾಡಿದರೆಂದರೆ ದಿವಾಳಿ ಆಗಿ ಬಿಡುವರು. ಭಾರತದಲ್ಲಿಯೇ ಯಾವಾಗ ಗ್ರಹಣ ಹಿಡಿಯುವುದೋ ಆಗ ದಾನ ಕೊಟ್ಟರೆ ಗ್ರಹಣವು ಬಿಡುವುದೆಂದು ಹೇಳುತ್ತಾರೆ. ನಿಮ್ಮ ದೇವಿ-ದೇವತಾ ಧರ್ಮವು 16 ಕಲಾ ಸಂಪೂರ್ಣವಾಗಿತ್ತು, ಅದಕ್ಕೆ ಈಗ ಗ್ರಹಣ ಹಿಡಿದಿದೆ, ರಾಹುವಿನ ದೆಶೆ ಕುಳಿತುಕೊಳ್ಳುತ್ತದೆ. ಆದ್ದರಿಂದ ದೇವತೆಗಳ ಮುಂದೆ ಹೋಗಿ ತಾವು ಸರ್ವಗುಣ ಸಂಪನ್ನರು….. ನಾವು ಪಾಪಿಗಳು ಕಪಟಿಗಳು ಎಂದು ಹಾಡುತ್ತಾರೆ. ಈಗ ನೀವು ತಿಳಿದುಕೊಳ್ಳುತ್ತೀರಿ – ರಾಹುವಿನ ಗ್ರಹಣ ಹಿಡಿಯುವುದರಿಂದ ಎಲ್ಲರೂ ಕಪ್ಪಾಗಿ ಬಿಟ್ಟಿದ್ದಾರೆ. ಹೇಗೆ ಚಂದ್ರಮನಿಗೂ ಸಹ ಕೊನೆಯಲ್ಲಿ ಒಂದು ರೇಖೆಯು ಮಾತ್ರವೇ ಉಳಿದಿರುತ್ತದೆ. ತಂದೆಯು ತಿಳಿಸುತ್ತಾರೆ, ನೀವು ದೇವಿ-ದೇವತೆಗಳ ಚಿತ್ರಗಳಿವೆ. ಗೀತೆಯೇ ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ ಆದರೆ ಇವರೇ ತಮ್ಮ ಧರ್ಮವನ್ನು ಅರಿತುಕೊಂಡಿಲ್ಲ. ಧರ್ಮ ಗುರುಗಳ ಸಮ್ಮೇಳನಗಳನ್ನು ಮಾಡುತ್ತಾರೆ, ನೀವು ಅಲ್ಲಿಯೂ ಸಹ ತಿಳಿಸಿರಿ – ಈಶ್ವರ ಸರ್ವವ್ಯಾಪಿಯಲ್ಲ, ಅವರು ಬೇಹದ್ದಿನ ತಂದೆಯಾಗಿದ್ದಾರೆ. ಬಂದು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಸಾಧು-ಸಂತ ಮೊದಲಾದವರಿಗೆ ಆಸ್ತಿಯೇ ಸಿಗುವುದಿಲ್ಲ ಅಂದಮೇಲೆ ಅವರು ಹೇಗೆ ಒಪ್ಪುವರು! ನೀವು ಮಕ್ಕಳಿಗೇ ಆಸ್ತಿಯು ಸಿಗುತ್ತದೆ. ಮುಖ್ಯ ಮಾತು ಇದನ್ನೇ ಸಿದ್ಧ ಮಾಡಬೇಕಾಗಿದೆ – ಈಶ್ವರ ಸರ್ವವ್ಯಾಪಿಯಲ್ಲ, ಶಿವ ಜಯಂತಿಯಾಗುತ್ತದೆ. ಶಿವ ಜಯಂತಿ ಎಂದಾದರೂ ಹೇಳಿ ಅಥವಾ ರುದ್ರ ಜಯಂತಿ ಎಂದಾದರೂ ಹೇಳಿ, ರುದ್ರನು ಈ ಜ್ಞಾನ ಯಜ್ಞವನ್ನು ರಚಿಸುತ್ತಾರೆ. ಶಿವನೇ ಆಗಿದ್ದಾರೆ, ಅದೇ ಗೀತಾ ಜ್ಞಾನ ಯಜ್ಞವಾಗಿದೆ ಇದರಿಂದಲೇ ವಿನಾಶ ಜ್ವಾಲೆಯು ಪ್ರಜ್ವಲಿತವಾಯಿತು. ನಿರಾಕಾರ ತಂದೆಯು ಹೇಗೆ ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದಾರೆ ಎಂಬುದನ್ನು ನೀವು ಪ್ರತ್ಯಕ್ಷದಲ್ಲಿ ನೋಡುತ್ತೀರಿ, ಇದು ಬೇಹದ್ದಿನ ಯಜ್ಞವಾಗಿದೆ, ಇದರಲ್ಲಿ ಇಡೀ ಹಳೆಯ ಪ್ರಪಂಚವೇ ಸ್ವಾಹಾ ಆಗುವುದು. ಉಳಿದೆಲ್ಲವೂ ಸ್ಥೂಲ ಯಜ್ಞಗಳಾಗಿವೆ. ಎಷ್ಟು ಹಗಲು-ರಾತ್ರಿಯ ವ್ಯತ್ಯಾಸವಿದೆ. ತಂದೆಯು ತಿಳಿಸುತ್ತಾರೆ – ಇದು ರುದ್ರ ಜ್ಞಾನ ಯಜ್ಞವಾಗಿದೆ, ವಿನಾಶವೂ ಆಗಬೇಕಾಗಿದೆ. ಯಾವಾಗ ನೀವು ತೇರ್ಗಡೆಯಾಗಿ ಬಿಡುತ್ತೀರೊ ಆಗ ಸಂಪೂರ್ಣ ಜ್ಞಾನಿ ಮತ್ತು ಯೋಗಿಗಳಾಗಿ ಬಿಡುತ್ತೀರಿ ಆಗ ನಿಮಗಾಗಿ ಹೊಸ ಪ್ರಪಂಚ, ಸ್ವರ್ಗವು ಬೇಕಾಗುವುದು ಮತ್ತು ಅವಶ್ಯವಾಗಿ ನರಕದ ವಿನಾಶವಾಗಬೇಕು. ರಾಜಸ್ವ ಅಶ್ವಮೇಧ ಅಕ್ಷರವು ಸರಿಯಾಗಿದೆ. ಅಶ್ವವನ್ನು ಸ್ವಾಹಾ ಮಾಡುತ್ತಾರೆ, ವಾಸ್ತವದಲ್ಲಿ ನಿಮ್ಮ ಈ ರಥವು ಅಶ್ವವಾಗಿದೆ. ಒಬ್ಬ ಧಕ್ಷ ಪ್ರಜಾಪತಿಯ ಯಜ್ಞವನ್ನು ರಚಿಸುತ್ತಾರೆ, ಅವರದು ಕಥೆಯಿದೆ.
ಈಗ ನೀವು ಮಕ್ಕಳಿಗೆ ವೃಕ್ಷಪತಿ ತಂದೆಯು ಓದಿಸುತ್ತಿದ್ದಾರೆ ಎಂದು ಎಷ್ಟೊಂದು ಖುಷಿಯಿರಬೇಕು. ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ, ನಿಮ್ಮ ಸ್ಥಿತಿಯು ಬಹಳ ಚೆನ್ನಾಗಿದೆ. ನಡೆಯುತ್ತಾ-ನಡೆಯುತ್ತಾ ಮತ್ತೆ ಪತ್ರ ಬರೆಯುತ್ತಾರೆ – ಬಾಬಾ, ನಾವಂತೂ ಗೊಂದಲಕ್ಕೊಳಗಾಗಿದ್ದೇವೆ. ಮೊದಲು ನಾವು ಬಹಳ ಖುಷಿಯಲ್ಲಿದ್ದೆವು, ಈಗ ಏನಾಯಿತೋ ಗೊತ್ತಿಲ್ಲ. ಇಲ್ಲಿ ಬಂದು ತಂದೆಯ ಮಕ್ಕಳಾಗುವುದು ದೊಡ್ಡ ಯಾತ್ರೆಯಾಗಿದೆ. ಅಲ್ಲಿ ತೀರ್ಥ ಯಾತ್ರೆಗೆ ಹೋಗುತ್ತಾರೆಂದರೆ ಎಷ್ಟೊಂದು ಹಣವನ್ನು ಖರ್ಚು ಮಾಡುತ್ತಾರೆ. ಇಲ್ಲಿ ದಾನ ಮಾಡುವ ಮಾತಿಲ್ಲ. ಇದರಲ್ಲಿ ಸ್ವಲ್ಪವೂ ಹಣವನ್ನು ಖರ್ಚು ಮಾಡುವಂತಿಲ್ಲ. ಅವು ದೈಹಿಕ ಯಾತ್ರೆಗಳಾಗಿವೆ, ನಿಮ್ಮದು ಆತ್ಮಿಕ ಯಾತ್ರೆ ಆಗಿದೆ. ಆ ಯಾತ್ರೆಯಿಂದ ಲಾಭವೇನೂ ಇಲ್ಲ ಆದ್ದರಿಂದಲೇ ಗೀತೆಯು ಇದೆಯಲ್ಲವೆ – ನಾಲ್ಕೂ ಧಾಮಗಳನ್ನು ಸುತ್ತಿ ಬಂದೆವು ಆದರೂ ಜನ್ಮ-ಜನ್ಮಾಂತರ ಭಗವಂತನಿಂದ ದೂರ ಉಳಿದೆವು. ಈಗ ನೀವು ತಿಳಿದುಕೊಳ್ಳುತ್ತೀರಿ, ಎಷ್ಟೊಂದು ಯಾತ್ರೆಗಳನ್ನು ಮಾಡಿರಬಹುದು! ಮನುಷ್ಯರು ಒಂದಲ್ಲ ಒಂದು ಕಡೆ ಹೋಗುತ್ತಿರುತ್ತಾರೆ. ಹರಿದ್ವಾರದಲ್ಲಿ ಗಂಗಾ ತೀರಕ್ಕೆ ಹೋಗುತ್ತಾರೆ, ಪತಿತ-ಪಾವನಿ ಗಂಗೆ ಎಂದು ತಿಳಿದುಕೊಳ್ಳುತ್ತಾರಲ್ಲವೆ. ವಾಸ್ತವದಲ್ಲಿ ನೀವು ಸತ್ಯ-ಸತ್ಯವಾದ ಜ್ಞಾನ ಗಂಗೆಯರಾಗಿದ್ದೀರಿ, ನಿಮ್ಮ ಬಳಿಯೂ ಅನೇಕರು ಬಂದು ಜ್ಞಾನ ಸ್ನಾನ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಸದ್ಗುರು ಒಬ್ಬರೇ ಆಗಿದ್ದಾರೆ, ಸರ್ವರ ಸದ್ಗತಿದಾತ ಒಬ್ಬ ಸದ್ಗುರುವಿನ ವಿನಃ ಮತ್ತ್ಯಾರೂ ಗುರುಗಳಲ್ಲ. ತಂದೆಯು ತಿಳಿಸುತ್ತಾರೆ – ನಾನು ನಿಮಗೆ ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ಬಂದು ಸದ್ಗತಿ ನೀಡಿ ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತೇನೆ. ಮತ್ತೆ ನೀವು ಪೂಜಾರಿಗಳಾಗಿ ದುಃಖಿಯಾಗಿ ಬಿಡುತ್ತೀರಿ ಇದೂ ಸಹ ಈಗ ಅರ್ಥವಾಗಿದೆ. ಅವಶ್ಯವಾಗಿ ನಮ್ಮ ಅರ್ಧಕಲ್ಪ ರಾಜ್ಯ ನಡೆಯುತ್ತದೆ ನಂತರ ದ್ವಾಪರದಲ್ಲಿ ನಾವೇ ದೇವಿ-ದೇವತೆಗಳು ವಾಮ ಮಾರ್ಗದಲ್ಲಿ ಇಳಿಯುತ್ತೇವೆ. ಯಾವಾಗ ರಾವಣ ರಾಜ್ಯವು ಆರಂಭವಾಗುತ್ತದೆಯೋ ಆಗಿನಿಂದಲೇ ವಾಮಮಾರ್ಗವು ಆರಂಭವಾಗುತ್ತದೆ. ಅದರ ಸಾಕ್ಷಿಗಳೂ ಇವೆ. ಜಗನ್ನಾಥ ಮಂದಿರದಲ್ಲಿ ನೋಡಿರಿ, ಒಳಗೆ ಕಪ್ಪು ಮೂರ್ತಿಗಳಿವೆ, ಹೊರಗಡೆ ದೇವತೆಗಳ ಕೊಳಕು ಚಿತ್ರಗಳಿವೆ. ಆ ಸಮಯದಲ್ಲಿ ತಮಗೂ ಸಹ ಇದೇನು ಎಂದು ಅರ್ಥವಾಗಿರಲಿಲ್ಲ. ವಿಕಾರಿ ಮನುಷ್ಯರು ವಿಕಾರಿ ದೃಷ್ಟಿಯಿಂದ ನೋಡುತ್ತಾರೆ ಆದ್ದರಿಂದ ದೇವತೆಗಳು ವಿಕಾರಿಗಳಾಗಿದ್ದರು ಎಂದು ತಿಳಿದುಕೊಳ್ಳುತ್ತಿದ್ದರು. ದೇವತೆಗಳು ವಾಮ ಮಾರ್ಗದಲ್ಲಿ ಹೋಗುತ್ತಾರೆಂದು ಬರೆಯಲ್ಪಟ್ಟಿದೆ. ದೇವತೆಗಳ ಉಡುಪುಗಳನ್ನೇ ತೋರಿಸಿದ್ದಾರೆ. ಇಲ್ಲಿಯೂ ದಿಲ್ವಾಡಾ ಮಂದಿರದಲ್ಲಿ ಹೋಗಿ ನೋಡಿರಿ. ಮೇಲೆ ಸ್ವರ್ಗವಿದೆ, ಕೆಳಗೆ ತಪಸ್ಸಿನಲ್ಲಿ ಕುಳಿತಿದ್ದಾರೆ. ಇವೆಲ್ಲಾ ರಹಸ್ಯಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯದು ಅನುಭವೀ ರಥವಲ್ಲವೆ.
ನೀವು ಮಕ್ಕಳು ಈಗ ತಿಳಿದುಕೊಳ್ಳುತ್ತಿದ್ದೀರಿ – ಆತ್ಮರು ಮತ್ತು ಪರಮಾತ್ಮನು ಬಹಳ ಕಾಲ ಅಗಲಿದ್ದರು… ನಿಮ್ಮಲ್ಲಿ ಯಾರು ಮೊದಲು ತಂದೆಯಿಂದ ಅಗಲಿದ್ದೀರೋ ಅವರೇ ಪುನಃ ಬಂದು ಮೊಟ್ಟ ಮೊದಲಿಗೆ ಮಿಲನ ಮಾಡುತ್ತೀರಿ, ಸತ್ಯಯುಗದ ಮೊದಲ ರಾಜಕುಮಾರನು ಶ್ರೀಕೃಷ್ಣನಾಗಿದ್ದಾರೆ. ಕೃಷ್ಣನ ತಂದೆಯೂ ಇರಬೇಕಲ್ಲವೆ. ಕೃಷ್ಣನ ತಂದೆ-ತಾಯಿಯ ಮಹಿಮೆಯನ್ನು ಎಷ್ಟೊಂದು ತೋರಿಸುವುದಿಲ್ಲ, ಕೇವಲ ತಲೆಯ ಮೇಲೆ ಕೂರಿಸಿಕೊಂಡು ನದಿಯನ್ನು ದಾಟಿ ಕರೆದುಕೊಂಡು ಹೋದರೆಂದು ತೋರಿಸುತ್ತಾರೆ. ರಾಜಧಾನಿ ಇತ್ಯಾದಿಗಳೇನೂ ತೋರಿಸಿಲ್ಲ. ಅವರ ತಂದೆಯ ಮಹಿಮೆಯು ಏಕೆ ಇಲ್ಲ! ನೀವೀಗ ತಿಳಿದುಕೊಂಡಿದ್ದೀರಿ – ಈ ಸಮಯದಲ್ಲಿ ಕೃಷ್ಣನ ಆತ್ಮವು ಚೆನ್ನಾಗಿ ವಿದ್ಯೆಯನ್ನು ಓದಿದೆ, ಆದ ಕಾರಣವೇ ತಂದೆ-ತಾಯಿಗಿಂತಲೂ ಶ್ರೇಷ್ಠ ಪದವಿಯನ್ನು ಪಡೆದಿದ್ದಾರೆ. ನೀವು ತಿಳಿದುಕೊಳ್ಳುತ್ತೀರಿ – ನಾವು ಶ್ರೀಕೃಷ್ಣನ ರಾಜ್ಯದಲ್ಲಿದ್ದೆವು, ಸ್ವರ್ಗದಲ್ಲಿದ್ದೆವು ನಂತರ ನಾವು ಚಂದ್ರವಂಶಿಯರಾದೆವು. ಈಗ ಪುನಃ ಸೂರ್ಯವಂಶಿಯರಾಗಲು ಶ್ರೀಮತದಂತೆ ನಡೆದು ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗುತ್ತೇವೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಸ್ಥಿತಿಯನ್ನು ನೋಡಿಕೊಳ್ಳಬಹುದು. ಒಂದುವೇಳೆ ಈ ಸಮಯದಲ್ಲಿ ನಾನು ಶರೀರ ಬಿಟ್ಟರೆ ಯಾವ ಪದವಿಯನ್ನು ಪಡೆಯಬಹುದು ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದಾಗಿದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತದೆ. ಮನುಷ್ಯರ ಮೇಲೆ ಯಾವುದಾದರೂ ಆಪತ್ತು ಬಂದರೆ, ಇಲ್ಲವೆ ದಿವಾಳಿಯಾದರೆ ಹೋಗಿ ಸಾಧುಗಳ ಸಂಗ ಮಾಡುತ್ತಾರೆ. ನಂತರ ಮನುಷ್ಯರು ತಿಳಿದುಕೊಳ್ಳುತ್ತಾರೆ – ಇವರು ಭಕ್ತಾತ್ಮನಾಗಿದ್ದಾರೆ. ಮೋಸ ಮಾಡುವುದಿಲ್ಲ, ಇಂತಿಂತಹವರೂ ಸಹ 2-4 ವರ್ಷಗಳಲ್ಲಿಯೇ ಬಹಳ ಧನವಂತರಾಗಿ ಬಿಡುತ್ತಾರೆ. ಅವರ ಬಳಿ ಬಹಳ ಹಣವನ್ನು ಕೂಡಿಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಬುದ್ಧಿಯಿಂದ ತಿಳಿದುಕೊಳ್ಳಬಹುದಾಗಿದೆ, ನಿಮ್ಮಲ್ಲಿಯೂ ಅನೇಕರಿದ್ದಾರೆ. ಬಹಳ ಕಡಿಮೆ ನೆನಪು ಮಾಡುತ್ತಾರೆ. ಆದ್ದರಿಂದ ತಂದೆಯು ಹೇಳುತ್ತಾರೆ – ತಮ್ಮ ಕಲ್ಯಾಣವನ್ನು ಬಯಸುವುದಾದರೆ ತಮ್ಮ ಬಳಿ ಒಂದು ನೋಟ್ಬುಕ್ ಇಟ್ಟುಕೊಳ್ಳಿ, ಚಾರ್ಟನ್ನು ಬರೆಯಿರಿ – ನಾವು ಇಡೀ ದಿನದಲ್ಲಿ ಎಷ್ಟು ಸಮಯ ನೆನಪಿನಲ್ಲಿದ್ದೆವು? ಮನುಷ್ಯರಂತೂ ಇಡೀ ಜೀವನದ ಚರಿತ್ರೆಯನ್ನು ಬರೆಯುತ್ತಾರೆ. ನೀವು ಕೇವಲ ನೆನಪಿನ ಚಾರ್ಟ್ ಬರೆಯಬೇಕಾಗಿದೆ. ಇದರಲ್ಲಿ ತಮ್ಮದೇ ಉನ್ನತಿಯಾಗುವುದು. ತಂದೆಯನ್ನು ನೆನಪು ಮಾಡದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ, ವಿಕರ್ಮವೇ ವಿನಾಶವಾಗಲಿಲ್ಲವೆಂದರೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವಿರಿ ಮತ್ತೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಯಾರು ಪೆಟ್ಟು ತಿನ್ನುವುದಿಲ್ಲವೋ ಅವರಿಗೆ ಬಹಳ ಒಳ್ಳೆಯ ಪದವಿ ಸಿಗುವುದು. ಪೆಟ್ಟು ತಿಂದಮೇಲೆ ಅಲ್ಪಸ್ವಲ್ಪ ಪದವಿಯನ್ನು ಪಡೆಯುವುದರಿಂದ ಏನು ಪ್ರಯೋಜನ? ಧರ್ಮರಾಜನ ಶಿಕ್ಷೆಯನ್ನು ಅನುಭವಿಸಬಾರದು, ಅಗೌರವ ಆಗಬಾರದು ಅಂತಹ ಪುರುಷಾರ್ಥ ಮಾಡಬೇಕಾಗಿದೆ. ನೀವು ನೋಡುತ್ತೀರಿ – ಶಿವ ತಂದೆಯು ಕುಳಿತಿದ್ದಾರೆ, ಮತ್ತೆ ಧರ್ಮರಾಜನೂ ಇದ್ದಾರೆ. ನಿಮಗೆ ಎಲ್ಲವನ್ನೂ ಸಾಕ್ಷಾತ್ಕಾರ ಮಾಡಿಸುತ್ತಾರೆ – ನೀವು ಹೀಗೀಗೆ ಮಾಡಿದ್ದಿರಿ ನೆನಪಿದೆಯೇ? ಅದಕ್ಕಾಗಿ ಈಗ ಶಿಕ್ಷೆಯನ್ನು ಅನುಭವಿಸಿರಿ. ಜನ್ಮ-ಜನ್ಮಾಂತರದಿಂದ ಎಷ್ಟು ಅನುಭವಿಸುತ್ತೀರೋ ಅಷ್ಟೇ ಶಿಕ್ಷೆಯನ್ನು ಆ ಸಮಯದಲ್ಲಿ ಅನುಭವಿಸುತ್ತೀರಿ. ಅಂತ್ಯದಲ್ಲಿ ಅಲ್ಪಸ್ವಲ್ಪ ತುಂಡು ರೊಟ್ಟಿ ಸಿಕ್ಕಿದರೆ ಏನು ಲಾಭ? ಶಿಕ್ಷೆಯನ್ನಂತೂ ಅನುಭವಿಸಬಾರದು. ಆದ್ದರಿಂದ ತಮ್ಮ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಿರಿ. ಹೇಗೆ ಲೆಕ್ಕ ಪತ್ರವನ್ನು ಇಡುತ್ತೀರಿ, ಕೆಲವರು ಆರು ತಿಂಗಳದು, ಕೆಲವರು 12 ತಿಂಗಳು, ಕೆಲವರಂತೂ ಪ್ರತಿ ನಿತ್ಯದ ಲೆಕ್ಕವನ್ನು ಇಡುತ್ತಾರೆ. ನೀವೂ ಸಹ ವ್ಯಾಪಾರಿಗಳಾಗಿದ್ದೀರಿ. ಈ ಬೇಹದ್ದಿನ ತಂದೆಯೊಂದಿಗೆ ಕೆಲವರೇ ವಿರಳ ವ್ಯಾಪಾರಿಗಳು ವ್ಯಾಪಾರ ಮಾಡುವರು. ಧನವಿಲ್ಲದಿದ್ದರೂ ತನು, ಮನವಂತೂ ಇದೆಯಲ್ಲವೆ. ಅವರಿಗೆ ಆಚಾರಿ ಎಂದು ಹೇಳುತ್ತಾರೆ. ಎಲ್ಲವನ್ನೂ ಕುಟ್ಟಿ, ಕುಟ್ಟಿ ಸರಿಪಡಿಸುತ್ತಾರಲ್ಲವೆ. ನೀವು ತನು-ಮನ-ಧನವನ್ನು ಕೊಡುತ್ತೀರಿ, ಇದಕ್ಕೆ ಪ್ರತಿಯಾಗಿ 21 ಜನ್ಮಗಳ ಎಷ್ಟೊಂದು ಆಸ್ತಿಯನ್ನು ಪಡೆಯುತ್ತೀರಿ, ಬಾಬಾ ನಾನು ನಿಮ್ಮವನಾಗಿದ್ದೇನೆ, ಇಂತಹ ಯುಕ್ತಿಯನ್ನು ತಿಳಿಸಿ ಅದರಿಂದ ನಮ್ಮ ಆತ್ಮ ಮತ್ತು ಶರೀರವು ಈ ಲಕ್ಷ್ಮೀ-ನಾರಾಯಣರಂತೆ ಆಗಿ ಬಿಡಲಿ. ತಂದೆಯು ಹೇಳುತ್ತಾರೆ – ನಾನು ನಿಮ್ಮನ್ನು ಎಷ್ಟು ಸುಂದರರನ್ನಾಗಿ ಮಾಡುತ್ತೇನೆ, ಒಮ್ಮೆಲೆ ರೂಪವನ್ನೇ ಬದಲಾಯಿಸಿ ಬಿಡುತ್ತೇನೆ. ಇನ್ನೊಂದು ಜನ್ಮದಲ್ಲಿ ನಿಮಗೆ ಬಹಳ ಸುಂದರ ಶರೀರವು ಸಿಗುವುದು. ನೀವು ವೈಕುಂಠದಲ್ಲಿಯೂ ನೋಡುತ್ತೀರಿ, ನಿಮಗೆ ತಿಳಿದಿದೆ – ಈ ಮಮ್ಮಾ-ಬಾಬಾರವರೇ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ. ಗುರಿ-ಧ್ಯೇಯವನ್ನೂ ತೋರಿಸುತ್ತಾರೆ, ಈಗ ಯಾರೆಷ್ಟು ಪುರುಷಾರ್ಥ ಮಾಡುವರೋ ಅದರಂತೆ ಪಡೆಯುವರು. ಒಂದುವೇಳೆ ಪೂರ್ಣ ಪುರುಷಾರ್ಥ ಮಾಡುವುದಿಲ್ಲ, ಏರುಪೇರು ಮಾಡುತ್ತಿದ್ದರೆ ತಮ್ಮ ಪದವಿಯನ್ನೇ ಭ್ರಷ್ಟ ಮಾಡಿಕೊಳ್ಳುವರು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ತಮ್ಮ ಸ್ಥಿತಿಯನ್ನು ತಾವೇ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ತಮ್ಮ ಕಲ್ಯಾಣಕ್ಕಾಗಿ ನಿತ್ಯವೂ ಡೈರಿಯನ್ನು ಇಟ್ಟುಕೊಳ್ಳಬೇಕು, ಅದರಲ್ಲಿ ನೆನಪಿನ ಚಾರ್ಟ್ ಬರೆಯಬೇಕಾಗಿದೆ.
2. ಬೇಹದ್ದಿನ ತಂದೆಯೊಂದಿಗೆ ಸತ್ಯ-ಸತ್ಯವಾದ ವ್ಯಾಪಾರ ಮಾಡಬೇಕಾಗಿದೆ, ತಮ್ಮ ತನು-ಮನ-ಧನವನ್ನು ತಂದೆಗೆ ಅರ್ಪಣೆ ಮಾಡಿ 21 ಜನ್ಮಗಳಿಗಾಗಿ ಪ್ರತಿಫಲವನ್ನೇ ಪಡೆಯಬೇಕಾಗಿದೆ. ನಿಶ್ಚಯ ಬುದ್ಧಿಯವರಾಗಿ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ.
ವರದಾನ:-
ಬಾಪ್ದಾದಾರವರ ನಂಬರ್ವನ್ ಶ್ರೀಮತವಿದೆ – ತಮ್ಮನ್ನು ಆತ್ಮನೆಂದು ತಿಳಿದುಕೊಂಡು ತಂದೆಯನ್ನು ನೆನಪು ಮಾಡಿರಿ. ಒಂದುವೇಳೆ ತಮ್ಮನ್ನು ಆತ್ಮನ ಬದಲು ದೇಹಧಾರಿ ಎಂದು ತಿಳಿದುಕೊಳ್ಳುತ್ತೀರೆಂದರೆ, ನೆನಪಿನಲ್ಲಿ ಸ್ಥಿತರಾಗಲು ಸಾಧ್ಯವಿಲ್ಲ. ಯಾವಾಗ ಯಾವುದೇ ಎರಡು ವಸ್ತುವನ್ನು ಜೋಡಿಸುತ್ತೀರೆಂದರೆ, ಮೊದಲು ಸಮಾನ ಮಾಡುವರು. ಅದೇ ರೀತಿಯಲ್ಲಿ ಆತ್ಮನೆಂದು ತಿಳಿದುಕೊಂಡು ನೆನಪು ಮಾಡುವಿರೆಂದರೆ ನೆನಪು ಸಹಜವಾಗಿ ಬಿಡುತ್ತದೆ. ಈ ಶ್ರೀಮತವೇ ಮುಖ್ಯವಾದ ಬುನಾದಿಯಾಗಿದೆ, ಈ ಮಾತಿನಲ್ಲಿ ಮತ್ತೆ-ಮತ್ತೆ ಗಮನ ಕೊಡುವಿರೆಂದರೆ ಸಹಜಯೋಗಿ ಆಗಿ ಬಿಡುವಿರಿ.
ಸ್ಲೋಗನ್:-
➤ Email me Murli: Receive Daily Murli on your email. Subscribe!