22 February 2022 KANNADA Murli Today | Brahma Kumaris

Read and Listen today’s Gyan Murli in Kannada

February 21, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ತಾವು ಎಲ್ಲರಿಗೆ ಸತ್ಯ ಗೀತೆಯನ್ನು ತಿಳಿಸುವಂತಹ ಸತ್ಯ-ಸತ್ಯ ವ್ಯಾಸರಾಗಿದ್ದೀರಿ, ನೀವು ಚೆನ್ನಾಗಿ ಓದಿ ಎಲ್ಲರಿಗೂ ಓದಿಸಬೇಕು, ಸುಖ ಕೊಡಬೇಕು”

ಪ್ರಶ್ನೆ:: -

ಎಲ್ಲಕ್ಕಿಂತ ಶ್ರೇಷ್ಠ ಗುರಿ ಯಾವುದು, ಆ ಗುರಿಯನ್ನು ತಲುಪುವ ಪುರುಷಾರ್ಥ ನೀವು ಮಾಡುತ್ತಿದ್ದೀರಿ?

ಉತ್ತರ:-

ತಮ್ಮನ್ನು ಅಶರೀರಿ ಎಂದು ತಿಳಿದುಕೊಳ್ಳಬೇಕು. ದೇಹಾಭಿಮಾನವನ್ನು ಗೆಲ್ಲಬೇಕು. ಇದೇ ಶ್ರೇಷ್ಠ ಗುರಿಯಾಗಿದೆ. ಏಕೆಂದರೆ ಎಲ್ಲಕ್ಕಿಂತ ಅತಿ ದೊಡ್ಡ ಶತ್ರು ದೇಹಾಭಿಮಾನವಾಗಿದೆ. ಅಂತ್ಯದಲ್ಲಿ ಒಬ್ಬ ತಂದೆಯ ವಿನಃ ಬೇರೆ ಯಾರ ನೆನಪೂ ಬರದಂತೆ ಪುರುಷಾರ್ಥ ಮಾಡಬೇಕು. ಈ ಶರೀರವನ್ನು ಬಿಟ್ಟು ತಂದೆಯ ಬಳಿ ಹೋಗಬೇಕು. ಈ ಶರೀರದ ನೆನಪೂ ಸಹ ಬರದಂತೆ ಶ್ರಮ ಪಡಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಈ ಪಾಪದ ಪ್ರಪಂಚದಿಂದ ದೂರ ಕರೆದುಕೊಂಡು ಹೋಗು……

ಓಂ ಶಾಂತಿ. ಜೀವಾತ್ಮಗಳು ಅಥವಾ ಮಕ್ಕಳೀಗ ತಮ್ಮ ಮನಸ್ಸಿನಲ್ಲಿ ತಿಳಿದುಕೊಂಡಿದ್ದೀರಿ ನಮ್ಮನ್ನು ತಂದೆ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂದು. ನಾವು ಎಲ್ಲಿಂದ ಬಂದಿದ್ದೇವೆ ಅಲ್ಲಿಗೆ ಕರೆದುಕೊಂಡು ಹೋಗುವರು. ನಂತರ ನಮ್ಮನ್ನು ಪುಣ್ಯಾತ್ಮರ ಪ್ರಪಂಚ, ಜೀವಾತ್ಮರ ಜಗತ್ತಿಗೆ ಕಳುಹಿಸಿಕೊಡುತ್ತಾರೆ. ಶ್ರೇಷ್ಠ ಹಾಗೂ ಭ್ರಷ್ಠ ಎಂಬ ಅಕ್ಷರವನ್ನು ಜೀವಾತ್ಮಗಳಿಗೆ ಹೇಳಲಾಗುವುದು. ಈ ಶರೀರದಲ್ಲಿದ್ದಾಗ ಮಾತ್ರ ಸುಖ ದುಃಖವನ್ನು ಅನುಭವ ಮಾಡುತ್ತೇವೆ. ಈಗ ತಂದೆಯು ಬಂದಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಆ ತಂದೆ ಹೆಸರು ಸದಾ ಶಿವನೆಂದು ಕರೆಯಲಾಗುವುದು. ನಾವಾತ್ಮಗಳ ಹೆಸರು ಸಾಲಿಗ್ರಾಮ ಎಂದಾಗಿದೆ. ಶಿವನ ಮಂದಿರದಲ್ಲಿ ಸಾಲಿಗ್ರಾಮಗಳಿಗೂ ಪೂಜೆ ನಡೆಯುತ್ತದೆ. ಒಂದು ರುದ್ರ ಜ್ಞಾನ ಯಜ್ಞ, ಮತ್ತೊಂದು ರುದ್ರ ಯಜ್ಞವಾಗಿದೆ ಎಂದು ತಂದೆ ತಿಳಿಸುತ್ತಿದ್ದಾರೆ. ರುದ್ರ ಯಜ್ಞದ ಪೂಜೆಗಾಗಿ ವಿಶೇಷ ಕಾಶಿಯ ಬ್ರಾಹ್ಮಣ ಪಂಡಿತರನ್ನು ಕರೆಯುತ್ತಾರೆ. ಕಾಶಿಯಲ್ಲಿ ಶಿವನಿರುವಂತಹ ಅನೇಕ ಮಂದಿರಗಳಿವೆ. ಶಿವಕಾಶಿ ಎಂದು ಹೇಳುವರು, ಆದರೆ ನಿಜ ಹೆಸರು ಕಾಶಿಯೆಂದಾಗಿದೆ. ನಂತರ ವಿದೇಶಿಯರು ಬನಾರಸ್ ಎಂದು ನಾಮಕರಣ ಮಾಡಿದರು. ಈಗ ವಾರಣಾಸಿ ಎಂದು ಹೆಸರಿಟ್ಟಿದ್ದಾರೆ. ಭಕ್ತಿಮಾರ್ಗದಲ್ಲಿ ಆತ್ಮ ಪರಮಾತ್ಮನ ಜ್ಞಾನವಿರುವುದಿಲ್ಲ. ಇಬ್ಬರಿಗೂ ಬೇರೆ ಬೇರೆಯಾಗಿ ಪೂಜೆ ಮಾಡುತ್ತಾರೆ. ಒಂದು ದೊಡ್ಡ ಶಿವಲಿಂಗವನ್ನು ಮಾಡಿ ನಂತರ ಅನೇಕ ಚಿಕ್ಕ ಚಿಕ್ಕ ಸಾಲಿಗ್ರಾಮಗಳನ್ನು ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ನಾವು ಆತ್ಮಗಳ ಹೆಸರು ಸಾಲಿಗ್ರಾಮ ಹಾಗೂ ನಮ್ಮ ತಂದೆಯ ಹೆಸರು ಶಿವ ಎಂದಾಗಿದೆ. ಸಾಲಿಗ್ರಾಮಗಳನ್ನು ಒಂದೇ ಗಾತ್ರದಲ್ಲಿ ಮಾಡುವ ಕಾರಣ ತಂದೆ ಹಾಗೂ ಮಕ್ಕಳ ಸಂಬಂಧವು ಸ್ಪಷ್ಟವಾಗುತ್ತದೆ. ಹೇ ಪರಮಪಿತ ಪರಮಾತ್ಮ ಎಂದು ಆತ್ಮ ನೆನಪು ಮಾಡುತ್ತದೆ. ನಾವು ಪರಮಾತ್ಮರಲ್ಲ, ಪರಮಾತ್ಮ ನಮ್ಮ ತಂದೆಯಾಗಿದ್ದಾರೆಂದು ತಿಳಿಸುವಂತಹ ಮಾರ್ಗದರ್ಶನವನ್ನು ನಿಮಗೆ ನೀಡಲಾಗಿದೆ. ಪ್ರತಿನಿತ್ಯ ತಂದೆಯ ಪರಿಚಯವನ್ನು ನೀಡುತ್ತಾ ಆಸ್ತಿಯ ನೆನಪನ್ನು ಹೇಗೆ ಮಾಡಿಸಬೇಕೆಂದು ಶ್ರೀಮತ ಸಿಗುತ್ತಿರುತ್ತದೆ. ತಂದೆ ನಿರಾಕಾರನೆಂದು ನೀವು ಮೊದಲು ಸಿದ್ಧ ಮಾಡಿ ತಿಳಿಸಬೇಕು. ಈ ಪ್ರಜಾಪಿತ ಸಾಕಾರ ಆಗಿದ್ದಾರೆ. ನಿರಾಕಾರನಿಂದ ಆಸ್ತಿ ಸಿಗುತ್ತದೆ. ಶಿವನೆಂದೇ ನನ್ನ ಹೆಸರಾಗಿದೆ ಎಂದು ತಂದೆ ತಿಳಿಸುತ್ತಾರೆ. ನನಗೆ ಬೇರೆ ಯಾವ ಹೆಸರೂ ಇಲ್ಲ. ಎಲ್ಲಾ ಆತ್ಮಗಳಿಗೆ ಶರೀರಕ್ಕೆ ಅನೇಕ ಹೆಸರುಗಳಿವೆ, ನನಗೆ ಯಾವುದೇ ಶರೀರವಿಲ್ಲ, ನಾನು ಪರಮಆತ್ಮನಾಗಿದ್ದೇನೆ.

ತಂದೆ ಕೇಳುತ್ತಾರೆ – ಮಕ್ಕಳೇ ನಿಮ್ಮ ಅತ್ಯಂತ ದೊಡ್ಡ ಶತ್ರು ಯಾರಾಗಿದ್ದಾರೆ? ಯಾವುದರಿಂದ ಕಾಮ ವಿಕಾರವು ಜನ್ಮ ಪಡೆಯುತ್ತದೆ ಆ ದೇಹಾಭಿಮಾನವೇ ಅತ್ಯಂತ ದೊಡ್ಡ ಶತ್ರುವಾಗಿದೆ ಎಂದು ಬುದ್ಧಿವಂತ ಮಕ್ಕಳು ತಿಳಿದುಕೊಳ್ಳುವರು. ದೇಹಾಭಿಮಾನದ ಮೇಲೆ ವಿಜಯಿಗಳಾಗುವುದು ತುಂಬಾ ಕಷ್ಟವಾಗುತ್ತದೆ. ದೇಹೀ ಅಭಿಮಾನಿ ಆಗುವುದರಲ್ಲಿ ತುಂಬಾ ಶ್ರಮವಿದೆ. ಜನ್ಮ-ಜನ್ಮಾಂತರದಿಂದ ನೀವು ದೇಹದ ಸಂಬಂಧದಲ್ಲಿ ನಡೆದಿದ್ದೀರಿ. ನಾನು ಆತ್ಮ ಅವಿನಾಶಿ ಆಗಿದ್ದೇನೆ, ಆತ್ಮದ ಆಧಾರದಿಂದ ಈ ಶರೀರ ನಡೆಯುವುದೆಂದು ಈಗ ತಿಳಿದುಕೊಂಡಿದ್ದೀರಿ. ಧಾರ್ಮಿಕ ಬುದ್ಧಿಯುಳ್ಳ ವ್ಯಕ್ತಿಗಳು ನಾವು ದೇಹವಲ್ಲ ಆತ್ಮವೆಂದು ತಿಳಿದುಕೊಂಡಿರುತ್ತಾರೆ. ಆತ್ಮನ ಹೆಸರು ಒಂದೇ ಆಗಿದ್ದು ದೇಹದ ಹೆಸರು ಪರಿವರ್ತನೆ ಆಗುತ್ತಿರುತ್ತದೆ. ಆತ್ಮ ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಪಡೆಯುತ್ತದೆ. ನಮಗೆ ತಂದೆ ತಿಳಿಸುತ್ತಿದ್ದಾರೆ – ನೀವು ಪುಣ್ಯಾತ್ಮರ ಪ್ರಪಂಚಕ್ಕೆ ಹೋಗಬೇಕಾಗಿದೆ, ಏಕೆಂದರೆ ಇದು ಪಾಪಾತ್ಮರ ಪ್ರಪಂಚವಾಗಿದೆ. ರಾವಣ ಭ್ರಷ್ಟಚಾರಿಗಳನ್ನಾಗಿ ಮಾಡುತ್ತಾನೆ. 10 ತಲೆಗಳುಳ್ಳ ಯಾವುದೇ ಮನುಷ್ಯರಿರಲು ಸಾಧ್ಯವಿಲ್ಲ, ಆದರೆ ಈ ಮಾತನ್ನು ಯಾರೂ ತಿಳಿದುಕೊಂಡಿಲ್ಲ. ಎಲ್ಲರೂ ರಾಮ ಲೀಲೆ ಮೊದಲಾದ ಕಡೆ ಪಾತ್ರ ಮಾಡುತ್ತಿರುತ್ತಾರೆ, ಅದೂ ಸಹ ಎಲ್ಲರೂ ಒಂದೇ ಮತದಂತೆ ಮಾಡುವುದಿಲ್ಲ. ಕೆಲವರಂತೂ ಈ ಮಾತುಗಳನ್ನು ಕಲ್ಪನೆಯೆಂದು ತಿಳಿದುಕೊಳ್ಳುತ್ತಾರೆ. ಭ್ರಷ್ಟಾಚಾರಕ್ಕೆ ರಾವಣ ಎಂದು ಹೇಳಲಾಗುತ್ತದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ಪರ ಸ್ತ್ರೀಯನ್ನು ಕದಿಯುವುದು ಭ್ರಷ್ಠಾಚಾರವಲ್ಲವೆ. ಈ ಸಮಯ ವಿಕಾರದಲ್ಲಿರುವ ಕಾರಣ ಎಲ್ಲರೂ ಭ್ರಷ್ಟಾಚಾರಿಗಳಾಗಿದ್ದಾರೆ. ವಿಕಾರದ ವಶವಾಗದಿರುವವರಿಗೆ ನಿರ್ವಿಕಾರಿಗಳೆಂದು ಹೇಳಲಾಗುವುದು. ಅದು ರಾಮ ರಾಜ್ಯವಾಗಿದೆ, ಇದು ರಾವಣ ರಾಜ್ಯವಾಗಿದೆ. ಭಾರತದಲ್ಲಿಯೇ ರಾಮ ರಾಜ್ಯಇತ್ತು, ಭಾರತ ಎಲ್ಲದಕ್ಕಿಂತಲೂ ಪ್ರಾಚೀನ ದೇಶವಾಗಿದೆ. ಸೂರ್ಯವಂಶಿ ದೇವೀ ದೇವತೆಗಳ ಬಾವುಟ ಮೊಟ್ಟ ಮೊದಲು ಈ ಸೃಷ್ಟಿಯ ಮೇಲೆ ಹಾರಿಸಲ್ಪಟ್ಟಿತು. ಆ ಸಮಯದಲ್ಲಿ ಚಂದ್ರವಂಶದವರೂ ಸಹ ಇರಲಿಲ್ಲ. ಈಗ ಈ ಸೂರ್ಯವಂಶಿ ಬಾವುಟವು ನಿಮ್ಮದಾಗಿದೆ. ನಿಮಗೆ ತಮ್ಮ ಗುರಿ ತಿಳಿದುಕೊಂಡಿದ್ದರೂ ಸಹ ಮರೆತು ಬಿಡುತ್ತೀರಿ. ಶಾಲೆಯಲ್ಲಿ ಮಕ್ಕಳೆಂದಿಗೂ ತಮ್ಮ ಗುರಿ-ಉದ್ದೇಶವನ್ನು ಮರೆಯುವುದಿಲ್ಲ. ವಿದ್ಯಾರ್ಥಿ ತನ್ನ ಶಿಕ್ಷಕನ್ನಾಗಲಿ, ವಿದ್ಯೆಯನ್ನಾಗಲಿ ಎಂದಿಗೂ ಮರೆಯಲಾರರು. ಆದರೆ ಇಲ್ಲಿ ಮರೆತು ಬಿಡುತ್ತಾರೆ. 21 ಜನ್ಮಗಳಿಗೆ ರಾಜ್ಯ ಭಾಗ್ಯ ಪಡೆಯುವಂತಹ ಎಷ್ಟೊಂದು ಶ್ರೇಷ್ಠ ವಿದ್ಯೆ ಇದಾಗಿದೆ. ಇಂತಹ ಶಾಲೆಯಲ್ಲಿ ಒಂದು ದಿನವು ತಪ್ಪಿಸಿಕೊಳ್ಳದೇ ಶ್ರದ್ದೆಯಿಂದ ಓದಬೇಕು. ಈ ಕಲ್ಪದಲ್ಲಿ ಫೇಲ್ ಆದರೆ ಕಲ್ಪ-ಕಲ್ಪ ಫೇಲ್ ಆಗುತ್ತಿರುತ್ತೀರಿ. ಮತ್ತೆಂದಿಗೂ ಪಾಸ್ ಆಗುವುದೇ ಇಲ್ಲ, ಆದುದರಿಂದ ಎಷ್ಟೊಂದು ಪುರುಷಾರ್ಥ ಮಾಡಬೇಕಾಗುತ್ತದೆ. ಶ್ರೀಮತದಂತೆ ನಡೆಯಬೇಕು. ಶ್ರೀಮತ ಹೇಳುತ್ತದೆ ಶ್ರದ್ಧೆಯಿಂದ ಧಾರಣೆ ಮಾಡಿ ಹಾಗೂ ಮಾಡಿಸಿ. ಒಂದುವೇಳೆ ಈಶ್ವರೀಯ ಆದೇಶದಂತೆ ನಡೆದುಕೊಳ್ಳುವುದಿಲ್ಲವಾದರೆ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುವುದಿಲ್ಲ. ನಾವು ಶ್ರೀಮತದಂತೆ ನಡೆಯುತ್ತಿದ್ದೇವೆಯೇ ಎಂದು ನಮ್ಮ ಮನಸ್ಸನ್ನು ನಾವು ಕೇಳಿಕೊಳ್ಳಬೇಕು. ತಮಗೆ ಎಲ್ಲವೂ ಗೊತ್ತಿದೆ ಎಂದು ತಿಳಿದುಕೊಳ್ಳಬಾರದು. ಬ್ರಹ್ಮಾ ಸರಸ್ವತಿಯವರಂತೆ ಶ್ರೀಮತದಂತೆ ನಾವು ನಡೆದುಕೊಳ್ಳುತ್ತಿದ್ದೇವೆಯೇ ಎಂದೂ ಸಹ ಕೇಳಿಕೊಳ್ಳಬೇಕು. ನಾವು ಓದುತ್ತಾ ಬೇರೆಯವರಿಗೂ ಓದಿಸುತ್ತಿದ್ದೇವೆಯೇ ಎಂದು ನೋಡಿಕೊಳ್ಳಬೇಕು. ಏಕೆಂದರೆ ನೀವು ಸತ್ಯ-ಸತ್ಯ ಗೀತೆ ಹೇಳುವಂತಹ ವ್ಯಾಸ ಆಗಿದ್ದೀರಿ. ಆ ಗೀತೆಯನ್ನು ಬರೆದಿರುವ ವ್ಯಾಸನಲ್ಲ. ನೀವೀಗ ಸುಖ ದೇವನ ಮಕ್ಕಳು ಸುಖ ಕೊಡುವಂತಹ ವ್ಯಾಸ ಆಗಿದ್ದೀರಿ. ಸುಖ ದೇವ ಶಿವ ತಂದೆಯೇ ಗೀತೆಯ ಭಗವಂತ ಆಗಿದ್ದಾರೆ. ನೀವು ಕಥೆ ಹೇಳುವಂತಹ ಅವರ ಮಕ್ಕಳು ವ್ಯಾಸ ಆಗಿದ್ದೀರಿ.

ಇದು ಶಾಲೆ ಆಗಿದೆ, ಶಾಲೆಯಲ್ಲಿ ಮಕ್ಕಳ ಓದಿನಿಂದ ಅವರ ಅಂಕಗಳು ತಿಳಿದು ಬಿಡುತ್ತದೆ. ಅದು ಪ್ರತ್ಯಕ್ಷ ಶಾಲೆ ಇದು ಗುಪ್ತವಾಗಿದೆ. ಇಲ್ಲಿ ನಾವು ಎಂತಹ ಪದವಿಗೆ ಯೋಗ್ಯರಾಗಿದ್ದೇವೆಂದು ಬುದ್ಧಿಯಿಂದ ತಿಳಿದುಕೊಳ್ಳಬಹುದು. ತಂದೆಗೆ ಕೆಲವರು ಈ ರೀತಿ ಬರೆಯುತ್ತಾರೆ – ಬಾಬಾ ಇಂತಹವರು ತಿಳಿಸಿ ಕೊಟ್ಟಾಗ ನಾವು ನಿಮ್ಮ ಮಕ್ಕಳಾಗಿ ಬಿಟ್ಟೆವು, ಈ ರೀತಿ ತಂದೆಗೆ ಓದಿಸುವಂತಹ ಪ್ರತ್ಯಕ್ಷ ಪ್ರಮಾಣ ತಿಳಿಯುತ್ತಿರುತ್ತದೆ. ಕೆಲವು ಮಕ್ಕಳು ತಂದೆಯ ಮುಂದೆ ಬರುವ ಮೊದಲೇ ಬಾಬಾ ನಿಮ್ಮ ಮಕ್ಕಳಾಗಿ ಬಿಟ್ಟಿದ್ದೇವೆಂದು ಹೇಳುತ್ತಾರೆ. ಕೆಲವು ಮಕ್ಕಳು ಪವಿತ್ರತೆಯ ಕಾರಣದಿಂದ ಶಿಕ್ಷೆಯನ್ನು ಸಹ ತಿನ್ನುತ್ತಿರುತ್ತಾರೆ. ಕೆಲವರು ಮಕ್ಕಳಾಗಿ ನಂತರ ಮಾಯೆಗೆ ವಶವಾಗಿ ಬಿಡುತ್ತಾರೆ, ಏಕೆಂದರೆ ಶ್ರದ್ಧೆಯಿಂದ ಓದುವುದಿಲ್ಲ. ಇಲ್ಲವಾದರೆ ತಂದೆಯು ಹೇಳುವ ಉತ್ತಮ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ – ಮಕ್ಕಳೇ ನನ್ನನ್ನು ನೆನಪು ಮಾಡಿ ಹಾಗು ಶ್ರದ್ದೆಯಿಂದ ಓದಿದಾಗ ನೀವು ಚಕ್ರವರ್ತಿ ರಾಜ ಆಗುತ್ತೀರಿ. ಜನಕನಂತೆ 21 ಜನ್ಮಗಳಿಗಾಗಿ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ ಎಂದು ಮನೆಯ ಹೊರಗಡೆ ಬರೆಯಬೇಕು. ಒಂದು ಸೆಕೆಂಡಿನಲ್ಲಿ ನೀವು ವಿಶ್ವದ ಮಾಲೀಕರಾಗಬಹುದು. ಅಗತ್ಯವಾಗಿ ದೇವತೆಗಳೇ ಹೊಸ ವಿಶ್ವದಲ್ಲಿ, ಹೊಸ ಭಾರತದಲ್ಲಿ ವಿಶ್ವದ ಮಾಲೀಕರಾಗುತ್ತಾರೆ. ಭಾರತ ಹೊಸದಾಗಿತ್ತು ಈಗ ಹಳೆಯದಾಗಿ ಬಿಟ್ಟಿದೆ. ಭಾರತ ಖಂಡದ ವಿನಃ ಬೇರೆ ಯಾವ ಖಂಡಗಳಿಗೂ ಹೊಸದು ಎಂದು ಹೇಳಲಾಗುವುದಿಲ್ಲ. ಒಂದುವೇಳೆ ಹೊಸದು ಎಂದು ಹೇಳಿದರೆ ಪುನಃ ಹಳೆಯದು ಎಂದು ಹೇಳಬೇಕಾಗುವುದು. ನಾವು ಸಂಪೂರ್ಣ ಹೊಸ ಭಾರತ ಖಂಡದಲ್ಲಿ ಹೋಗುತ್ತೇವೆ. ಭಾರತವು 16 ಕಲಾ ಸಂಪೂರ್ಣ ಆಗುತ್ತದೆ ಹಾಗೂ ಬೇರೆ ಯಾವ ಖಂಡವೂ ಸಹ ಪೂರ್ಣ ಚಂದ್ರ (ಪೂರ್ಣಿಮ) ನಂತೆ 16 ಕಲಾ ಸಂಪೂರ್ಣ ಆಗುವುದಿಲ್ಲ. ಅವುಗಳೆಲ್ಲವೂ ಅರ್ಧ ಕಲ್ಪದ ನಂತರ ಆರಂಭ ಆಗುತ್ತವೆ. ಇದು ಎಷ್ಟೊಂದು ಒಳ್ಳೆಯ ರಹಸ್ಯವಾಗಿದೆ. ನಮ್ಮ ಭಾರತವೇ ಸತ್ಯ ಖಂಡವಾಗಿತ್ತು. ಸತ್ಯದ ಜೊತೆಯಲ್ಲಿ ಅಸತ್ಯವೂ ಇರುತ್ತದೆ. ಭಾರತ ಮೊದಲು ಪೂರ್ಣ ಚಂದ್ರನಂತೆ ಇರುತ್ತದೆ. ನಂತರ ಕತ್ತಲಾಗಿ ಬಿಡುತ್ತದೆ. ಸ್ವರ್ಗವು ಭಾರತದ ಮೊದಲನೆ ಬಾವುಟ ಆಗಿದೆ. ಭಾರತದಲ್ಲಿ ಸ್ವರ್ಗ ಇತ್ತೆಂದು ಹೇಳುತ್ತಾರೆ….. ನಾವೀಗ ಅನುಭವದಿಂದ ಎಲ್ಲವನ್ನು ಸ್ಪಷ್ಟವಾಗಿ ತಿಳಿಸಿಕೊಡಬಹುದು. ಸತ್ಯ-ತ್ರೇತಾಯುಗದಲ್ಲಿ ನಾವು ಹೇಗೆ ರಾಜ್ಯ ಮಾಡಿದೆವು, ನಂತರ ದ್ವಾಪರ ಕಲಿಯುಗದಲ್ಲಿ ಏನಾಯಿತು… ಈ ಎಲ್ಲಾ ಮಾತುಗಳು ಬುದ್ಧಿಯಲ್ಲಿ ಬಂದಾಗ ಎಷ್ಟೊಂದು ಖುಷಿ ಆಗಬೇಕು. ಸತ್ಯಯುಗವನ್ನು ಹಗಲು, ಕಲಿಯುಗವನ್ನು ರಾತ್ರಿಯೆಂದು ಕರೆಯಲಾಗುತ್ತದೆ. ಆದುದರಿಂದ ಜ್ಞಾನ ಅಂಜನ ಸದ್ಗುರು ಕೊಟ್ಟರೆಂದು ಹೇಳಲಾಗುತ್ತದೆ. ತಂದೆಯೇ ಬಂದು ಹೇಗೆ ಅಬಲೆಯರನ್ನು, ಮಾತೆಯರನ್ನು ಉದ್ಧಾರ ಮಡುತ್ತಾರೆ. ಶ್ರೀಮಂತರು ಕಷ್ಟ ಪಟ್ಟು ಜ್ಞಾನದಲ್ಲಿ ನಡೆಯುತ್ತಾರೆ. ನಿಜವಾಗಿಯೂ ತಂದೆ ಈ ಸಮಯದಲ್ಲಿ ಬಡವರ ಬಂಧು ಆಗಿದ್ದಾರೆ. ಬಡವರೇ ಸ್ವರ್ಗದ ಮಾಲೀಕರಾಗುತ್ತಾರೆ, ಶ್ರೀಮಂತರಾಗುವುದಿಲ್ಲ. ಇದಕ್ಕೆ ಗುಪ್ತ ಕಾರಣವಿದೆ. ಏಕೆಂದರೆ ಇಲ್ಲಿ ಬಲಿಹಾರಿ ಆಗಬೇಕಾಗುತ್ತದೆ. ಬಡವರು ಬಲಿಹಾರಿ ಆಗಲು ತಡವಾಗುವುದಿಲ್ಲ. ಆದುದರಿಂದ ಸುಧಾಮನ ಉದಾಹರಣೆ ಹೇಳಲಾಗುತ್ತದೆ. ನಿಮಗೀಗ ಜ್ಞಾನದ ಪ್ರಕಾಶವು ನಂಬರ್ವಾರ್ ಪ್ರಾಪ್ತಿಯಾಗಿದೆ. ಉಳಿದೆಲ್ಲರ ಜ್ಯೋತಿ ನಂದಿ ಹೋಗಿದೆ. ಇಷ್ಟೊಂದು ಸೂಕ್ಷ್ಮ ಆತ್ಮನಲ್ಲಿ ಅವಿನಾಶಿ ಪಾತ್ರ ತುಂಬಿರುವುದು ಆಶ್ಚರ್ಯವಾಗಿದೆಯಲ್ಲವೇ. ಇದು ಯಾವುದೇ ವಿಜ್ಞಾನದ ಶಕ್ತಿಯಲ್ಲ. ಈಗ ನಿಮಗೆ ತಂದೆಯಿಂದ ಶಕ್ತಿ ಪ್ರಾಪ್ತಿಯಾಗುತ್ತದೆ. ಇದು ಅವಿನಾಶಿ ಚಕ್ರ ಸುತ್ತುತ್ತಿರುತ್ತದೆ, ಈ ಚಕ್ರಕ್ಕೆ ಆದಿ, ಅಂತ್ಯವಿಲ್ಲ. ಹೊಸ ಆತ್ಮಗಳು ಈ ಮಾತುಗಳನ್ನು ಕೇಳಿದಾಗ ಆಶ್ಚರ್ಯ ಪಡುತ್ತಾರೆ. ಇಲ್ಲಿಯೂ ಸಹ 10-20 ವರ್ಷದವರು ತಿಳಿದುಕೊಳ್ಳದ ಕಾರಣ ಅನ್ಯರಿಗೆ ತಿಳಿಸಿಕೊಡಲಾಗುವುದಿಲ್ಲ. ನಿಮಗೆ ಅಂತಿಮದಲ್ಲಿ ಯಾರು, ಯಾರ ಬಳಿ ಜನ್ಮ ಪಡೆಯುತ್ತಾರೆ ಮೊದಲಾದ ಮಾತುಗಳು ಆ ಸಮಯದಲ್ಲಿ ತಿಳಿಯುತ್ತದೆ. ಯಾರು ಮಹಾವೀರರಾಗಿರುತ್ತಾರೆ, ಅವರಿಗೆ ಎಲ್ಲವೂ ಸಾಕ್ಷಾತ್ಕಾರ ಆಗುತ್ತಿರುತ್ತದೆ. ಅಂತ್ಯದಲ್ಲಿ ನಿಮಗೆ ಸತ್ಯಯುಗದ ವೃಕ್ಷ ಅತೀ ಸಮೀಪವಾಗಿ ಇರುವಂತೆ ಕಾಣುತ್ತದೆ. ಮಹಾವೀರ ಮಕ್ಕಳ ಮಾಲೆಯಾಗಿದೆಯಲ್ಲವೇ! ಮೊದಲಿಗೆ ಎಂಟು ಮಹಾವೀರರು ನಂತರ 108 ಮಹಾವೀರರ ಮಾಲೆಯಾಗಿದೆ. ಅಂತ್ಯದಲ್ಲಿ ಫಸ್ಟ್ಕ್ಲಾಸ್ ಸಾಕ್ಷಾತ್ಕಾರವಾಗುತ್ತದೆ. ಪರಮಪಿತ ಪರಮಾತ್ಮ ಬಾಣ ಹೊಡೆಸಿದರೆಂಬ ಗಾಯನವಿದೆ. ನಾಟಕದಲ್ಲಿ ಅನೇಕ ಮಾತುಗಳನ್ನು ಬರೆದಿದ್ದಾರೆ. ವಾಸ್ತವದಲ್ಲಿ ಇದು ಸ್ಥೂಲ ಬಾಣದ ಮಾತಲ್ಲ. ಕನ್ಯೆಯರು ಮಾತೆಯರು ಬಾಣ ಬಿಡುವುದನ್ನು ಹೇಗೆ ತಿಳಿದುಕೊಂಡಿರುತ್ತಾರೆ. ವಾಸ್ತವವಾಗಿ ಇದು ಜ್ಞಾನದ ಬಾಣವಾಗಿದೆ ಹಾಗೂ ಇವರಿಗೆ ಕೊಡುವವರು ಪರಮಪಿತ ಪರಮಾತ್ಮನಾಗಿದ್ದಾರೆ. ಈ ಮಾತುಗಳು ಎಷ್ಟೊಂದು ಆಶ್ಚರ್ಯವಾಗಿವೆ, ಆದರೆ ಮಕ್ಕಳಿಗೆ ಒಂದೇ ಮುಖ್ಯ ಮಾತು ಮತ್ತೆ-ಮತ್ತೆ ಮರೆತು ಹೋಗುತ್ತದೆ. ಎಲ್ಲದಕ್ಕಿಂತ ದೊಡ್ಡ ತಪ್ಪು ದೇಹಾಭಿಮಾನದಲ್ಲಿ ಬಂದು ತಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳುವುದಿಲ್ಲ. ತಂದೆಗೆ ಯಾರೂ ಸತ್ಯವನ್ನು ಹೇಳುವುದಿಲ್ಲ, ಸತ್ಯವಾಗಿ ಅರ್ಧ, ಒಂದು ಗಂಟೆ ಕಾಲ ಇಡೀ ದಿನ ಕಷ್ಟ ಪಟ್ಟು ನೆನಪಿನಲ್ಲಿರುತ್ತಾರೆ. ಯೋಗ ಎಂದು ಯಾವುದಕ್ಕೆ ಹೇಳಲಾಗುತ್ತದೆ ಎನ್ನುವುದನ್ನೂ ಸಹ ಯಾರಿಗೂ ತಿಳಿಯುವುದಿಲ್ಲ. ಏಕೆಂದರೆ ಗುರಿ ತುಂಬಾ ಶ್ರೇಷ್ಠವಾಗಿದೆ. ತಮ್ಮನ್ನು ಅಶರೀರಿ ಎಂದು ತಿಳಿದು ಎಷ್ಟು ಸಾಧ್ಯವೋ ಅಷ್ಟು ಅಂತಿಮದಲ್ಲಿ ಯಾರ ನೆನಪು ಬಾರದಂತೆ, ಒಬ್ಬ ತಂದೆಯ ನೆನಪು ಇರುವಂತೆ ಪುರುಷಾರ್ಥ ಮಾಡಬೇಕು. ಕೆಲವು ತತ್ವ ಜ್ಞಾನಿ, ಬ್ರಹ್ಮ ಜ್ಞಾನಿ ಶ್ರೇಷ್ಠ ಸ್ಥಿತಿಯುಳ್ಳವರು ತಮ್ಮ ಸಿಂಹಾಸನದ ಮೇಲೆ ಕುಳಿತಿದ್ದಂತೆಯೇ ತತ್ವದಲ್ಲಿ ಲೀನ ಆಗುತ್ತೇವೆಂದು ತಿಳಿಯುತ್ತಾರೆ. ಶರೀರದ ಸೆಳೆತ ಇರುವುದಿಲ್ಲ. ನಂತರ ಅವರ ಶರೀರ ಬಿಟ್ಟಾಗ ಸುತ್ತ ಮುತ್ತಲೂ ಶಾಂತಿ ಆವರಿಸಿ ಬಿಡುತ್ತದೆ. ಆಗ ಯಾರೋ ಮಹಾತ್ಮರು ಶರೀರ ಬಿಟ್ಟಿರಬೇಕೆಂದು ತಿಳಿದುಕೊಳ್ಳುತ್ತಾರೆ.

ಹೀಗೆ ನೀವು ಮಕ್ಕಳು ನೆನಪಿನಲ್ಲಿದ್ದಾಗ ಎಷ್ಟೊಂದು ಶಾಂತಿಯನ್ನು ಹರಡುತ್ತೀರಿ. ಯಾರು ಈ ಕುಲದವರಾಗಿರುತ್ತಾರೆ ಅವರಿಗೆ ಶಾಂತಿಯ ಅನುಭವ ಆಗುತ್ತದೆ. ಉಳಿದವರೆಲ್ಲರೂ ಸೊಳ್ಳೆಗಳೋಪಾಧಿಯಲ್ಲಿ ಸಾವನ್ನಪ್ಪುತ್ತಾರೆ. ನಿಮಗೆ ಅಶರೀರಿ ಆಗುವ ಅಭ್ಯಾಸ ಆಗಿ ಬಿಟ್ಟಿರುತ್ತದೆ. ಈ ಅಭ್ಯಾಸವನ್ನು ನೀವು ಸಂಗಮಯುಗದಲ್ಲಿಯೇ ಮಾಡಬೇಕು. ಸತ್ಯಯುಗದಲ್ಲಿ ಆತ್ಮ ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತದೆ. ಆದರೆ ಈಗ ನೀವು ಈ ಶರೀರವನ್ನು ಬಿಟ್ಟು ತಂದೆಯ ಬಳಿ ಹೋಗಬೇಕೆಂದು ತಿಳಿದುಕೊಂಡಿದ್ದೀರಿ. ಅಂತಿಮದಲ್ಲಿ ಈ ಶರೀರದ ಸಹಿತ ಯಾವ ನೆನಪೂ ಇರಬಾರದು, ನಿಮ್ಮ ಶರೀರದ ನೆನಪನ್ನೇ ಮರೆಯಬೇಕೆಂದಾಗ ನೆನಪು ಮಾಡುವಂತಹುದು ಇನ್ನೇನು ಉಳಿದಿದೆ, ಇದಕ್ಕಾಗಿಯೇ ತುಂಬಾ ಶ್ರಮ ಪಡಬೇಕು. ಈ ರೀತಿ ಶ್ರಮ ಪಡುತ್ತಾ ಕೊನೆಯಲ್ಲಿ ವಿಜಯಿಗಳಾಗಿ ಬಿಡುತ್ತೀರಿ. ಪುರುಷಾರ್ಥಿಗಳಿಗಂತೂ ಅಂತ್ಯದಲ್ಲಿ ಎಲ್ಲವೂ ತಿಳಿಯುತ್ತದೆ, ಅವರು ಪ್ರಖ್ಯಾತವಾಗುತ್ತಾರೆ. ಬಂಧನದಲ್ಲಿರುವಂತಹ ಗೋಪಿಕೆಯರು ಇಂತಹ ಪತ್ರವನ್ನು ಬರೆಯುತ್ತಾರೆ, ಬಂಧನ ಮುಕ್ತರೂ ಸಹ ಆ ರೀತಿ ಬರೆದಿರುವುದಿಲ್ಲ. ಏಕೆಂದರೆ ಅವರಿಗೆ ಬರೆಯವಷ್ಟು ಸಮಯವಿಲ್ಲ. ಶಿವ ತಂದೆಯು ಇವರ (ಬ್ರಹ್ಮಾ) ಕೈಗಳನ್ನು ಲೋನ್ ತೆಗೆದುಕೊಂಡಿರುವಾಗ ಶಿವ ತಂದೆಯಿಂದ ಪತ್ರ ಬರುತ್ತದೆಂದು ಬಂಧನದಲ್ಲಿರುವವರು ತಿಳಿದುಕೊಳ್ಳುತ್ತಾರೆ. ಇಂತಹ ಪತ್ರ ಐದು ಸಾವಿರ ವರ್ಷದ ನಂತರ ಬರುತ್ತದೆ ಆದುದರಿಂದ ಏಕೆ ತಾನೇ ಶಿವ ತಂದೆಗೆ ಪ್ರತಿನಿತ್ಯ ಪತ್ರ ಬರೆಯಬಾರದು? ಹೀಗೆ ತಮ್ಮ ಕಣ್ಣಿನ ಕಾಡಿಗೆಯಿಂದ ಪತ್ರ ಬರೆಯೋಣ ಎಂಬ ಯೋಚನೆ ಮಾಡುತ್ತಾರೆ. ಹಾಗೂ ಬಾಬಾ ನಾನು ಅದೇ ಕಲ್ಪದ ಹಿಂದಿನ ಗೋಪಿಕೆ ಆಗಿದ್ದೇನೆಂದು, ನಿಮ್ಮೊಂದಿಗೆ ಅಗತ್ಯವಾಗಿ ಮಿಲನ ಮಾಡಿ ಆಸ್ತಿ ತೆಗೆದುಕೊಳ್ಳುತ್ತೇನೆಂದು ಪತ್ರ ಬರೆಯುತ್ತಾರೆ. ಯೋಗ ಬಲವಿದ್ದಾಗ ತಮ್ಮನ್ನು ಬಂಧನದಿಂದ ಬಿಡಿಸಿಕೊಳ್ಳುತ್ತಾರೆ. ಆದರೂ ಯಾರೊಂದಿಗೂ ಮೋಹ ಇರಬಾರದು. ತುಂಬಾ ಬುದ್ಧಿವಂತಿಕೆಯಿಂದ ತಿಳಿಸಿ ಕೊಡಬೇಕಾಗುತ್ತದೆ. ತಮ್ಮನ್ನು ರಕ್ಷಿಸಿಕೊಂಡು ಸಂಬಂಧವನ್ನು ನಿಭಾಯಿಸಲು ತುಂಬಾ ಪ್ರಯತ್ನ ಪಡಬೇಕು. ಮಾತೆಯರು ತಮ್ಮ ಪತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ತಮ್ಮ ಜವಾಬ್ದಾರಿಯೆಂದು ತಿಳಿದುಕೊಳ್ಳುತ್ತಾರೆ. ಪವಿತ್ರತೆ ತುಂಬಾ ಶ್ರೇಷ್ಠವಾಗಿದೆ. ಕಾಮ ಮಹಾಶತ್ರುವಿನ ಮೇಲೆ ವಿಜಯಿಗಳಾಗಬೇಕೆಂದು ತಂದೆ ತಿಳಿಸುತ್ತಿದ್ದಾರೆ. ನನ್ನನ್ನು ನೆನಪು ಮಾಡಿದಾಗ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ತಮ್ಮ ಪತಿಗೂ ಜ್ಞಾನವನ್ನು ತಿಳಿಸಿ ಕರೆದುಕೊಂಡು ಬರುವ ಮಕ್ಕಳೂ ಇದ್ದಾರೆ. ಬಂಧನದಲ್ಲಿರುವವರ ಪಾತ್ರವೂ ಇದೆ. ಅಬಲೆಯರ ಮೇಲೆ ಅತ್ಯಾಚಾರವಂತೂ ಆಗಲೇ ಬೇಕು. ಕಾಮೇಶು, ಕ್ರೋಧೇಶು ಎಂಬ ಗಾಯನವು ಶಾಸ್ತ್ರಗಳಲ್ಲಿದೆ…. ಇದು ಯಾವುದೂ ಸಹ ಹೊಸ ಮಾತುಗಳೇನಲ್ಲ. ನಿಮಗೆ 21 ಜನ್ಮಗಳ ಆಸ್ತಿ ಸಿಗುತ್ತದೆ. ಆದುದರಿಂದ ಅಲ್ಪ ಸ್ವಲ್ಪ ಸಹನೆ ಮಾಡಿಕೊಳ್ಳಬೇಕಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯೋಗ ಬಲದಿಂದ ತಮ್ಮ ಎಲ್ಲಾ ಬಂಧನಗಳನ್ನು ಕಳೆದುಕೊಂಡು ಬಂಧನ ಮುಕ್ತರಾಗಬೇಕು, ಯಾರೊಂದಿಗೂ ಮೋಹ ಇಟ್ಟುಕೊಳ್ಳಬಾರದು.

2. ಯಾವ ಈಶ್ವರೀಯ ಮಾರ್ಗದರ್ಶನ ಸಿಗುತ್ತಿರುತ್ತದೆ, ಅದರಂತೆ ಸಂಪೂರ್ಣವಾಗಿ ನಡೆಯಬೇಕು. ತುಂಬಾ ಶ್ರದ್ಧೆಯಿಂದ ಸ್ವಯಂ ಓದಬೇಕು ಹಾಗೂ ಓದಿಸಬೇಕು. ಎಲ್ಲಾ ನನಗೆ ಗೊತ್ತಿದೆ ಎಂದು ಅಭಿಮಾನಿಗಳಾಗಬಾರದು.

ವರದಾನ:-

ಇಡೀ ವಿಶ್ವದಲ್ಲಿರುವ ಆತ್ಮರು ಪರಮಾತ್ಮನನ್ನು ತಂದೆಯೆಂದು ಹೇಳುತ್ತಾರೆ. ಆದರೆ ಪಾಲನೆ ಹಾಗೂ ವಿದ್ಯೆಗೆ ಪಾತ್ರರಾಗುವುದಿಲ್ಲ. ಇಡೀ ಕಲ್ಪದಲ್ಲಿ ತಾವಷ್ಟೇ ಸ್ವಲ್ಪ ಆತ್ಮರೀಗ, ಈಗಲೇ ಈ ಭಾಗ್ಯಕ್ಕೆ ಪಾತ್ರರಾಗುತ್ತೀರಿ. ಅಂದಮೇಲೆ ಈ ಪಾಲನೆಯ ಪ್ರತ್ಯಕ್ಷ ಸ್ವರೂಪವೆಂದರೆ ಸಹಜಯೋಗಿ ಜೀವನವಾಗಿದೆ. ತಂದೆಯು ಮಕ್ಕಳಲ್ಲಿನ ಯಾವುದೇ ಕಷ್ಟದ ಮಾತನ್ನು ನೋಡಲು ಸಾಧ್ಯವಿಲ್ಲ. ಮಕ್ಕಳು ಸ್ವಯಂ ಯೋಚನೆ ಮಾಡುತ್ತಾ-ಮಾಡುತ್ತಾ ಕಷ್ಟಕರವನ್ನಾಗಿ ಮಾಡಿ ಬಿಡುತ್ತಾರೆ. ಆದರೆ ಸ್ಮೃತಿ ಸ್ವರೂಪದ ಸಂಸ್ಕಾರವನ್ನು ಇಮರ್ಜ್ ಮಾಡಿಕೊಳ್ಳುತ್ತೀರೆಂದರೆ ಸಮರ್ಥತೆಯು ಬಂದು ಬಿಡುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top