22 August 2021 KANNADA Murli Today | Brahma Kumaris

Read and Listen today’s Gyan Murli in Kannada

August 21, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಭಾಗ್ಯಶಾಲಿ ಮಕ್ಕಳ ಶ್ರೇಷ್ಠ ಭಾಗ್ಯದ ಪಟ್ಟಿ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಭಾಗ್ಯವಿದಾತ ಬಾಪ್ದಾದಾ ತನ್ನ ಭಾಗ್ಯಶಾಲಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣ ಮಗುವಿನ ಭಾಗ್ಯವು ಪ್ರಪಂಚದ ಸಾಧಾರಣ ಆತ್ಮಗಳಿಗಿಂತ ಅತೀ ಶ್ರೇಷ್ಠವಾಗಿದೆ ಏಕೆಂದರೆ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರಾಗಿದ್ದಾರೆ. 550 ಕೋಟಿ ಆತ್ಮರೆಲ್ಲಿ! ತಾವು ಬ್ರಾಹ್ಮಣರ ಚಿಕ್ಕ ಸಂಸಾರವೆಲ್ಲಿ! ಅವರ ಲೆಕ್ಕದಲ್ಲಿ ನೀವು ಎಷ್ಟು ಕಡಿಮೆ ಸಂಖ್ಯೆಯಲ್ಲಿದ್ದೀರಿ. ಆದ್ದರಿಂದ ಅಜ್ಞಾನಿ, ಅಪರಿಚಿತ ಆತ್ಮಗಳ ಅಂತರದಲ್ಲಿ ತಾವೆಲ್ಲಾ ಬ್ರಾಹ್ಮಣರು ಶ್ರೇಷ್ಠ ಭಾಗ್ಯಶಾಲಿಗಳಾಗಿದ್ದೀರಿ. ಬಾಪ್ದಾದಾ ನೋಡುತ್ತಿದ್ದೇವೆ – ಪ್ರತಿಯೊಬ್ಬ ಬ್ರಾಹ್ಮಣನ ಮಸ್ತಕದಲ್ಲಿ ಭಾಗ್ಯದ ರೇಖೆಯು ಬಹಳ ಸ್ಪಷ್ಟವಾಗಿ ತಿಲಕದಂತೆ ಹೊಳೆಯುತ್ತಿದೆ. ಲೌಕಿಕ ಜ್ಯೋತಿಷಿಗಳು ಹಸ್ತರೇಖೆಯನ್ನು ನೋಡುತ್ತಾರೆ. ಆದರೆ ಈ ದಿವ್ಯ ಈಶ್ವರೀಯ ಭಾಗ್ಯದ ರೇಖೆಯು ಪ್ರತಿಯೊಬ್ಬರ ಮಸ್ತಕದಲ್ಲಿ ಕಂಡು ಬರುತ್ತಿದೆ. ಎಷ್ಟು ಶ್ರೇಷ್ಠ ಭಾಗ್ಯವೋ ಅಷ್ಟು ಭಾಗ್ಯಶಾಲಿ ಮಕ್ಕಳ ಮಸ್ತಕವು ಸದಾ ಅಲೌಕಿಕ ಪ್ರಕಾಶದಲ್ಲಿ ಹೊಳೆಯುತ್ತಿರುತ್ತದೆ. ಭಾಗ್ಯವಂತ ಮಕ್ಕಳಲ್ಲಿ ಇನ್ನ್ಯಾವ ಲಕ್ಷಣಗಳು ಕಂಡು ಬರುತ್ತವೆ? ಸದಾ ಮುಖದಲ್ಲಿ ಈಶ್ವರೀಯ ಆತ್ಮಿಕ ಮುಗುಳ್ನಗೆಯ ಅನುಭವವಾಗುವುದು. ಭಾಗ್ಯಶಾಲಿಗಳ ನಯನ ಅರ್ಥಾತ್ ದಿವ್ಯ ದೃಷ್ಟಿಯು ಯಾರಿಗಾದರೂ ಸದಾ ಖುಷಿಯ ಅಲೆಯನ್ನು ಉತ್ಪನ್ನ ಮಾಡಿಸಲು ನಿಮಿತ್ತವಾಗುತ್ತದೆ. ಅವರಿಂದ ಯಾರಿಗೇ ದೃಷ್ಟಿ ಸಿಕ್ಕಿದರೂ ಸಹ ಅವರು ಆತ್ಮೀಯತೆಯ, ಆತ್ಮಿಕ ತಂದೆಯ, ಪರಮಾತ್ಮನ ನೆನಪಿನ ಅನುಭವ ಮಾಡುವರು. ಭಾಗ್ಯಶಾಲಿ ಆತ್ಮನ ಸಂಪರ್ಕದಲ್ಲಿ ಪ್ರತಿಯೊಂದು ಆತ್ಮನಿಗೆ ಹಗುರತೆಯ ಅನುಭೂತಿಯಾಗುವುದು. ಬ್ರಾಹ್ಮಣ ಆತ್ಮರಲ್ಲಿಯೂ ಸಹ ಕೊನೆಯವರೆಗೂ ನಂಬರ್ವಾರ್ ಇದ್ದೇ ಇರುತ್ತಾರೆ ಆದರೆ ಲಕ್ಷಣಗಳು ನಂಬರ್ವಾರ್ ಎಲ್ಲಾ ಭಾಗ್ಯಶಾಲಿ ಮಕ್ಕಳಿಗೆ ಇದೆ. ಮುಂದೆ ಇನ್ನೂ ಪ್ರತ್ಯಕ್ಷವಾಗುತ್ತಾ ಹೋಗುವುದು.

ಇನ್ನು ಸ್ವಲ್ಪ ಸಮಯವು ಕಳೆದರೆ ನೋಡುವಿರಿ – ಸ್ವಲ್ಪ ಸಮಯದಲ್ಲಿಯೇ ಯಾವಾಗ ಅತೀ ಮತ್ತು ಅಂತ್ಯ ಎರಡೂ ಅನುಭವವಾಗುವುದು ಆಗ ನಾಲ್ಕಾರು ಕಡೆಯ ಅಪರಿಚಿತ ಆತ್ಮರು ಹದ್ದಿನ ವೈರಾಗ್ಯ ವೃತ್ತಿಯಲ್ಲಿ ಬರುತ್ತಾರೆ ಮತ್ತು ತಾವು ಭಾಗ್ಯಶಾಲಿ ಆತ್ಮರು ಬೇಹದ್ದಿನ ವೈರಾಗ್ಯ ವೃತ್ತಿಯ ಅನುಭವದಲ್ಲಿರುತ್ತೀರಿ. ಈಗಂತೂ ಪ್ರಪಂಚದವರಲ್ಲಿಯೂ ವೈರಾಗ್ಯವಿಲ್ಲ. ಒಂದುವೇಳೆ ಅಲ್ಪಸ್ವಲ್ಪ ವಿನಾಶದ ಮುನ್ಸೂಚನೆಗಳು ಆಗುತ್ತಿದ್ದರೂ ಸಹ ಇದಂತೂ ಆಗುತ್ತಲೇ ಇರುತ್ತದೆ ಎಂದು ಇನ್ನೂ ಆಲಸ್ಯದ ನಿದ್ರೆಯಲ್ಲಿ ಮಲಗಿ ಬಿಡುತ್ತಾರೆ. ಆದರೆ ಯಾವಾಗ `ಅತಿ’ ಮತ್ತು `ಅಂತ್ಯ’ದ ಚಿಹ್ನೆಗಳು ಸನ್ಮುಖದಲ್ಲಿ ಕಾಣುವವೋ ಆಗ ಸ್ವತಹವಾಗಿಯೇ ಹದ್ದಿನ ವೈರಾಗ್ಯ ವೃತ್ತಿಯು ಉತ್ಪನ್ನವಾಗುವುದು ಮತ್ತು ಅತೀ ಟೆನ್ಶನ್ (ಒತ್ತಡ) ಆಗುವ ಕಾರಣ ಎಲ್ಲರ ಅಟೆನ್ಷನ್ (ಗಮನ) ಒಬ್ಬ ತಂದೆಯ ಕಡೆ ಹೋಗುವುದು. ಆ ಸಮಯದಲ್ಲಿ ಸರ್ವ ಆತ್ಮರ ಹೃದಯದಿಂದ ಇದೇ ಕೂಗು ಹೊರ ಬರುವುದು – ಎಲ್ಲರ ರಚಯಿತ, ಎಲ್ಲರ ತಂದೆಯು ಒಬ್ಬರೇ ಆಗಿದ್ದಾರೆ ಮತ್ತು ಬುದ್ಧಿಯು ಅನೇಕ ಕಡೆಯಿಂದ ತೆಗೆದು ಸ್ವತಹವಾಗಿ ಒಬ್ಬರ ಕಡೆ ಹೋಗುವುದು. ಇಂತಹ ಸಮಯದಲ್ಲಿ ತಾವು ಭಾಗ್ಯಶಾಲಿ ಆತ್ಮರ ಬೇಹದ್ದಿನ ವೈರಾಗ್ಯ ವೃತ್ತಿಯ ಸ್ಥಿತಿಯು ಸ್ವತಃ ಮತ್ತು ನಿರಂತರವಾಗಿ ಬಿಡುವುದು ಮತ್ತು ಪ್ರತಿಯೊಬ್ಬರ ಮಸ್ತಕದಿಂದ ಭಾಗ್ಯದ ರೇಖೆಗಳು ಸ್ಪಷ್ಟವಾಗಿ ಕಾಣಿಸುವವು. ಈಗಲೂ ಸಹ ಶ್ರೇಷ್ಠ ಭಾಗ್ಯಶಾಲಿ ಮಕ್ಕಳ ಬುದ್ಧಿಯಲ್ಲಿ ಸದಾ ಏನಿರುತ್ತದೆ? `ಭಗವಂತ’ ಮತ್ತು `ಭಾಗ್ಯ’.

ಅಮೃತವೇಳೆಯಿಂದ ತಮ್ಮ ಭಾಗ್ಯದ ಪಟ್ಟಿಯನ್ನು ತೆಗೆಯಿರಿ. ಭಾಗ್ಯವಂತ ಮಕ್ಕಳನ್ನು ಅಮೃತವೇಳೆಯಲ್ಲಿ ಸ್ವಯಂ ತಂದೆಯೇ ಏಳಿಸುತ್ತಾರೆ ಮತ್ತು ಆಹ್ವಾನ ಮಾಡುತ್ತಾರೆ. ಯಾರು ಅತೀ ಸ್ನೇಹಿ ಮಕ್ಕಳಿದ್ದಾರೆಯೋ ಅವರ ಅನುಭವವಾಗಿದೆ – ಮಲಗಿದರೂ ಸಹ ಯಾರೋ ಮಲಗಲು ಬಿಡುತ್ತಿಲ್ಲ, ಯಾರೋ ಏಳಿಸುತ್ತಿದ್ದಾರೆ, ಕರೆಯುತ್ತಿದ್ದಾರೆ ಎಂದು. ಈ ರೀತಿ ಅನುಭವ ಆಗುತ್ತದೆಯಲ್ಲವೆ. ಅಮೃತವೇಳೆಯಿಂದ ತಮ್ಮ ಭಾಗ್ಯವನ್ನೂ ನೋಡಿಕೊಳ್ಳಿ, ಭಕ್ತಿಯಲ್ಲಿ ದೇವತೆಗಳನ್ನು ಭಗವಂತನೆಂದು ತಿಳಿದು ಭಕ್ತರು ಘಂಟೆಯನ್ನು ಬಾರಿಸಿ ಏಳಿಸುತ್ತಾರೆ ಮತ್ತು ತಮ್ಮನ್ನು ನೋಡಿ, ಸ್ವಯಂ ಭಗವಂತನೇ ಏಳಿಸುತ್ತಾರೆ. ಎಷ್ಟು ಭಾಗ್ಯವಾಗಿದೆ! ಅಮೃತವೇಳೆಯಿಂದ ಹಿಡಿದು ತಂದೆಯು ಮಕ್ಕಳ ಸೇವಾಧಾರಿಯಾಗಿ ಸೇವೆ ಮಾಡುತ್ತಾರೆ ಮತ್ತು “ಬನ್ನಿ, ತಂದೆಯ ಸಮಾನ ಸ್ಥಿತಿಯ ಅನುಭವ ಮಾಡಿ, ನನ್ನ ಜೊತೆ ಕುಳಿತುಕೊಳ್ಳಿ” ಎಂದು ಆಹ್ವಾನ ಮಾಡುತ್ತಾರೆ. ಅಂದಾಗ ತಂದೆಯು ಎಲ್ಲಿ ಕುಳಿತಿದ್ದಾರೆ? ಉನ್ನತ ಸ್ಥಾನದಲ್ಲಿ ಮತ್ತು ಉನ್ನತ ಸ್ಥಿತಿಯಲ್ಲಿ. ಯಾವಾಗ ತಂದೆಯ ಜೊತೆ ಕುಳಿತು ಬಿಡುತ್ತೀರೋ ಆಗ ಸ್ಥಿತಿಯು ಹೇಗಿರುವುದು! ಅಂದಮೇಲೆ ಪರಿಶ್ರಮವನ್ನು ಏಕೆ ಪಡುತ್ತೀರಿ, ಕೇವಲ ಜೊತೆಯಲ್ಲಿ ಕುಳಿತುಕೊಳ್ಳಿ ಆಗ ಸಹಜವಾಗಿಯೇ ಸಂಗದ ರಂಗು ಅಂಟುವುದು. ಸ್ಥಾನದ ಪ್ರಮಾಣ ಸ್ಥಿತಿ ಸ್ವತಹವಾಗಿ ಇರುವುದು. ಹೇಗೆ ಮಧುಬನದಲ್ಲಿ ಬರುತ್ತೀರೆಂದರೆ ನಿಮ್ಮ ಮನೋಸ್ಥಿತಿಯು ಹೇಗಿರುತ್ತದೆ? ಯೋಗ ಮಾಡಬೇಕಾಗುತ್ತದೆಯೋ ಅಥವಾ ಯೋಗವು ಸ್ವತಹವಾಗಿಯೇ ಇರುತ್ತದೆಯೋ? ಸ್ವತಹ ಇರುತ್ತದೆ ಆದ್ದರಿಂದಲೇ ಇಲ್ಲಿರುವುದಕ್ಕೆ ಹೆಚ್ಚಿನದಾಗಿ ಇಷ್ಟಪಡುತ್ತೀರಲ್ಲವೆ! ಈಗ ಇನ್ನೂ 15 ದಿನ ಇಲ್ಲಿಯೇ ಇದ್ದು ಬಿಡಿ ಎಂದು ಹೇಳಿದರೆ ಖುಷಿಯಲ್ಲಿ ನರ್ತಿಸುತ್ತೀರಲ್ಲವೆ. ಅಂದಾಗ ಹೇಗೆ ಸ್ಥಾನದ ಪ್ರಭಾವವು ಸ್ಥಿತಿಯ ಮೇಲೆ ಬೀರುತ್ತದೆಯೋ ಹಾಗೆಯೇ ಅಮೃತವೇಳೆಯಲ್ಲಿ ಪರಮಧಾಮಕ್ಕೆ ಅಥವಾ ಸೂಕ್ಷ್ಮವತನದಲ್ಲಿ ಹೊರಟುಹೋಗಿ ತಂದೆಯ ಜೊತೆ ಕುಳಿತುಬಿಡಿ. ಅಮೃತವೇಳೆ ಶಕ್ತಿಶಾಲಿಯಾಗಿದ್ದರೆ ಇಡೀ ದಿನ ಸ್ವತಹವಾಗಿ ಸಹಯೋಗ ಸಿಗುವುದು. ಅಂದಾಗ ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ – “ವಾಹ್ ನನ್ನ ಭಾಗ್ಯವೇ ವಾಹ್!” ದಿನಚರಿಯೇ ಭಗವಂತನಿಂದ ಆರಂಭವಾಗುತ್ತದೆ.

ಮತ್ತೆ ತಮ್ಮ ಭಾಗ್ಯವನ್ನು ನೋಡಿಕೊಳ್ಳಿ – ಸ್ವಯಂ ತಂದೆಯೇ ಶಿಕ್ಷಕನಾಗಿ ಎಷ್ಟು ದೂರ ದೇಶದಿಂದ ತಮಗೆ ಓದಿಸಲು ಬರುತ್ತಾರೆ. ಮನುಷ್ಯರಾದರೆ ಭಗವಂತನ ಬಳಿ ಹೋಗುವುದಕ್ಕಾಗಿ ಪ್ರಯತ್ನ ಪಡುತ್ತಾರೆ ಆದರೆ ಸ್ವಯಂ ಭಗವಂತನೇ ತಮ್ಮ ಬಳಿ ಶಿಕ್ಷಕನಾಗಿ ಓದಿಸಲು ಬರುತ್ತಾರೆ, ಇದು ಎಷ್ಟು ದೊಡ್ಡಭಾಗ್ಯವಾಗಿದೆ! ಮತ್ತು ಎಷ್ಟು ಸಮಯದಿಂದ ತನ್ನ ಸೇವೆಯ ಪಾತ್ರವನ್ನು ಅಭಿನಯಿಸುತ್ತಿದ್ದಾರೆ! ಎಂದಾದರೂ ದಣಿಯುತ್ತಾರೆಯೇ? ಅಥವಾ ಎಂದಾದರೂ ಇಂದು ತಲೆ ನೋವಾಗುತ್ತಿದೆ, ಇಂದು ರಾತ್ರಿ ಮಲಗಿರಲಿಲ್ಲ ಎಂದು ನೆಪ ಹೇಳುತ್ತಾರೆಯೇ? ಅಂದಮೇಲೆ ಹೇಗೆ ತಂದೆಯು ಅವಿಶ್ರಾಂತ ಸೇವಾಧಾರಿಯಾಗಿ ಸೇವೆ ಮಾಡುತ್ತಾರೆಯೋ ಹಾಗೆಯೇ ತಂದೆಯ ಸಮಾನ ಮಕ್ಕಳೂ ಸಹ ಅವಿಶ್ರಾಂತ ಸೇವಾಧಾರಿಗಳು. ತಮ್ಮ ದಿನಚರಿಯನ್ನು ನೋಡಿಕೊಳ್ಳಿ ಎಷ್ಟು ದೊಡ್ಡ ಭಾಗ್ಯವಿದೆ! ತಂದೆಯು ಸದಾ ಸ್ನೇಹಿ, ಮುದ್ದಾದ ಮಕ್ಕಳಿಗೆ ಹೇಳುತ್ತಾರೆ – ಮಕ್ಕಳೇ, ಯಾವುದೇ ಸೇವೆ ಮಾಡುತ್ತೀರಿ, ಲೌಕಿಕವಿರಲಿ ಅಥವಾ ಅಲೌಕಿಕವಿರಲಿ, ಪರಿವಾರದಲ್ಲಿರಲಿ ಸೇವಾಕೇಂದ್ರದಲ್ಲಿರಲಿ, ಯಾವುದೇ ಕರ್ಮ ಮಾಡಿ, ಯಾವುದೇ ಕರ್ತವ್ಯವನ್ನು ಪಾಲಿಸಿ ಆದರೆ ಸದಾ ಈ ಅನುಭವ ಮಾಡಿ – ಮಾಡಿಸುವವರು ನಾನು ನಿಮಿತ್ತ ಮಾಡುವವನ ಮೂಲಕ ಮಾಡಿಸುತ್ತಿದ್ದಾರೆ. ನಾನು ಸೇವೆ ಮಾಡುವುದಕ್ಕಾಗಿ ನಿಮಿತ್ತನಾಗಿದ್ದೇನೆ, ಮಾಡಿಸುವ ತಂದೆಯು ಮಾಡಿಸುತ್ತಿದ್ದಾರೆ. ಇಲ್ಲಿಯೂ ಸಹ ನೀವು ಒಂಟಿಯಾಗಿ ಇಲ್ಲ, ಮಾಡಿಸುವವರ ರೂಪದಲ್ಲಿ ತಂದೆಯು ಕರ್ಮ ಮಾಡುವ ಸಮಯದಲ್ಲಿಯೂ ಜೊತೆಯಿದ್ದಾರೆ. ತಾವಂತೂ ಕೇವಲ ನಿಮಿತ್ತರಾಗಿದ್ದೀರಿ. ವಿಶೇಷವಾಗಿ ಭಗವಂತನು ಮಾಡಿಸುವವರಾಗಿದ್ದಾರೆ ಅಂದಮೇಲೆ ತಾವು ಒಂಟಿಯಾಗಿ ಒಬ್ಬರೇ ಏಕೆ ಮಾಡುತ್ತೀರಿ? ನಾನೊಬ್ಬನೇ ಮಾಡುತ್ತೇನೆಂಬ ಸ್ಮೃತಿ ಇದ್ದರೆ ಈ `ನಾನು’ ಎಂಬುದು ಮಾಯೆಯ ದ್ವಾರವಾಗಿದೆ. ನಂತರ ಮಾಯೆಯು ಬಂದು ಬಿಟ್ಟಿತು ಎಂದು ಹೇಳುತ್ತೀರಿ. ಬಾಗಿಲನ್ನು ತೆರೆಯುತ್ತೀರೆಂದರೆ ಮಾಯೆಯಂತೂ ಮೊದಲೇ ಕಾಯುತ್ತಿದೆ ಮತ್ತು ತಾವು ಅದಕ್ಕೆ ಚೆನ್ನಾಗಿ ಅವಕಾಶ ಕೊಡುತ್ತೀರೆಂದರೆ ಅದು ಏಕೆ ತಾನೇ ಬರುವುದಿಲ್ಲ?

ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ – ಮಾಡಿಸುವಂತಹ ತಂದೆಯು ಪ್ರತೀ ಕರ್ಮದಲ್ಲಿ ಮಾಡಿಸುತ್ತಿದ್ದಾರೆ ಅಂದಾಗ ಅಲ್ಲಿ ಹೊರೆಯೆನಿಸುವುದಿಲ್ಲ. ಹೊರೆಯೆಲ್ಲವೂ ಮಾಲೀಕನಿಗೆ ಇರುತ್ತದೆ. ಯಾರು ಸಹಯೋಗಿಗಳು ಆಗಿರುವರೋ ಅವರಿಗೆ ಭಾರವೆನಿಸುವುದಿಲ್ಲ. ನೀವು ಮಾಲೀಕರು ಆಗಿ ಬಿಡುತ್ತೀರೆಂದರೆ ಎಲ್ಲಾ ಹೊರೆಯು ನಿಮ್ಮ ಮೇಲೆ ಬಂದು ಬಿಡುತ್ತದೆ. ಆದ್ದರಿಂದ ನಾನು ಬಾಲಕನಾಗಿದ್ದೇನೆ, ತಂದೆಯು ಮಾಲೀಕನಾಗಿದ್ದಾರೆ, ನಾನು ಬಾಲಕನ ಮೂಲಕ ಮಾಲೀಕನು ಮಾಡಿಸುತ್ತಿದ್ದಾರೆ ಎಂಬ ಸ್ಮೃತಿಯಿರಲಿ. ತಾವೇ ದೊಡ್ಡವರಾಗಿ ಬಿಡುತ್ತೀರೆಂದರೆ ದೊಡ್ಡ ದುಃಖವು ಬಂದು ಬಿಡುತ್ತದೆ ಆದ್ದರಿಂದ ಬಾಲಕನಾಗಿ ಮಾಲೀಕನ ಆದೇಶದನುಸಾರ ಮಾಡಿರಿ. ಇದು ಎಷ್ಟು ದೊಡ್ಡ ಭಾಗ್ಯವಾಗಿದೆ! ಪ್ರತೀ ಕರ್ಮದಲ್ಲಿ ತಂದೆಯು ಜವಾಬ್ದಾರನಾಗಿ ಹಗುರರನ್ನಾಗಿ ಮಾಡಿ ಹಾರಿಸುತ್ತಿದ್ದಾರೆ ಆದರೆ ಆಗುವುದೇನೆಂದರೆ ಯಾವುದೇ ಸಮಸ್ಯೆಯು ಬಂದಾಗ ಬಾಬಾ, ಈಗ ತಮಗೇ ಗೊತ್ತೆಂದು ಹೇಳುತ್ತೀರಿ ಮತ್ತು ಯಾವಾಗ ಸಮಸ್ಯೆಯು ಸಮಾಪ್ತಿ ಆಗಿ ಬಿಡುವುದೋ ಆಗ ಮಸ್ತರಾಗಿ ಬಿಡುತ್ತೀರಿ ಆದರೆ ಸಮಸ್ಯೆಯು ಬರುವಂತೆ ಮಾಡಿಕೊಳ್ಳುವುದಾದರೂ ಏಕೆ? ಮಾಡಿಸುವ ತಂದೆಯ ಆದೇಶದಂತೆ ಪ್ರತೀ ಕರ್ಮವನ್ನು ಮಾಡುತ್ತಾ ಹೋಗಿ ಆಗ ಕರ್ಮವೂ ಶ್ರೇಷ್ಠ ಮತ್ತು ಶ್ರೇಷ್ಠ ಕರ್ಮದ ಫಲವಾಗಿ ಸದಾ ಖುಷಿ, ಸದಾ ಹಗುರತೆ, ಫರಿಶ್ತಾ ಜೀವನದ ಅನುಭವ ಮಾಡುತ್ತಾ ಇರುತ್ತೀರಿ. `ಫರಿಶ್ತೆಗಳು ಕರ್ಮದ ಸಂಬಂಧದಲ್ಲಿ ಬರುವರೇ ಹೊರತು ಕರ್ಮದ ಬಂಧನದಲ್ಲಿ ಬಂಧಿತರಾಗುವುದಿಲ್ಲ’ ಮತ್ತು ಮಾಡಿಸುವ ತಂದೆಯ ಜೊತೆ ಸಂಬಂಧವು ಏರ್ಪಟ್ಟಿದೆ ಆದ್ದರಿಂದ ನಿಮಿತ್ತ ಭಾವದಲ್ಲಿ ಎಂದೂ `ನಾನು’ ಎಂಬ ಅಭಿಮಾನವು ಬರುವುದಿಲ್ಲ. ಸದಾ ನಿರ್ಮಾನರಾಗಿ, ನಿರ್ಮಾಣದ ಕಾರ್ಯ ಮಾಡುತ್ತೀರಿ ಅಂದಮೇಲೆ ತಮ್ಮದು ಎಷ್ಟು ದೊಡ್ಡ ಭಾಗ್ಯವಾಗಿದೆ!

ಮತ್ತೆ ಬ್ರಹ್ಮಾ ಭೋಜನವನ್ನು ಯಾರು ತಿನ್ನಿಸುತ್ತಾರೆ? ಹೆಸರೇ ಆಗಿದೆ – ಬ್ರಹ್ಮಾ ಭೋಜನ. ಬ್ರಹ್ಮ ಭೋಜನವಲ್ಲ, ಬ್ರಹ್ಮಾ ಭೋಜನ. ಅಂದಾಗ ಬ್ರಹ್ಮಾರವರು ಸದಾ ಯಜ್ಞದ ರಕ್ಷಕನಾಗಿದ್ದಾರೆ. ಪ್ರತಿಯೊಬ್ಬ ಯಜ್ಞ ವತ್ಸರಿಗೆ ಅಥವಾ ಬ್ರಹ್ಮಾ ವತ್ಸರಿಗೆ ಬ್ರಹ್ಮಾ ತಂದೆಯ ಮೂಲಕ ಬ್ರಹ್ಮಾ ಭೋಜನವು ಅವಶ್ಯವಾಗಿ ಸಿಗುವುದು. ಮನುಷ್ಯರಂತೂ ಕೇವಲ ಹಾಗೆಯೇ ನಮಗೆ ಭಗವಂತನು ತಿನ್ನಿಸುತ್ತಿದ್ದಾರೆಂದು ಹೇಳುತ್ತಾರೆ. ಭಗವಂತ ಯಾರು ಎಂಬುದೇ ಗೊತ್ತಿಲ್ಲ ಆದರೆ ಭಗವಂತನು ತಿನ್ನಿಸುತ್ತಾರೆಂದು ಹೇಳುತ್ತಾರೆ. ಆದರೆ ಬ್ರಾಹ್ಮಣ ಮಕ್ಕಳಿಗಂತೂ ತಂದೆಯೇ ತಿನ್ನಿಸುತ್ತಾರೆ. ಭಲೆ ಲೌಕಿಕ ಸಂಪಾದನೆ ಮಾಡಿ, ಹಣವನ್ನು ಜಮಾ ಮಾಡುತ್ತೀರಿ ಅದರಿಂದಲೇ ಭೋಜನವನ್ನು ತಯಾರಿಸುತ್ತೀರಿ ಆದರೆ ಮೊದಲು ತಮ್ಮ ಸಂಪಾದನೆಯನ್ನೂ ಸಹ ತಂದೆಯ ಭಂಡಾರದಲ್ಲಿ ಹಾಕುತ್ತೀರಿ ಆದ್ದರಿಂದ ತಂದೆಯ ಭಂಡಾರಿಯು ಭೋಲಾನಾಥನ ಭಂಡಾರವಾಗಿ ಬಿಡುತ್ತದೆ. ಈ ವಿಧಿಯನ್ನು ಎಂದೂ ಮರೆಯಬೇಡಿ, ಇಲ್ಲವೆಂದರೆ ನಾನೇ ಸಂಪಾದಿಸುತ್ತೇನೆ. ನಾನೇ ತಿನ್ನುತ್ತೇನೆ ಎಂದು ತಿಳಿದುಕೊಳ್ಳುತ್ತೀರಿ. ಹಾಗೆ ನೋಡಿದರೆ ನೀವು ಟ್ರಸ್ಟಿಗಳಾಗಿದ್ದೀರಿ. ಟ್ರಸ್ಟಿಗಳದೇನೂ ಇರುವುದಿಲ್ಲ. ನಾವು ನಮ್ಮ ಸಂಪಾದನೆಯಿಂದ ತಿನ್ನುತ್ತೇವೆಂದು ಸಂಕಲ್ಪವೂ ಬರುವುದಿಲ್ಲ. ಯಾವಾಗ ಟ್ರಸ್ಟಿಗಳಾಗಿದ್ದೀರಿ ಅಂದಮೇಲೆ ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡಿದಿರಿ, ನನ್ನದೇನೂ ಇಲ್ಲ, ಎಲ್ಲವೂ ನಿನ್ನದು ಎಂದಾಯಿತು. ಟ್ರಸ್ಟಿ ಅರ್ಥಾತ್ ನಿನ್ನದು ಮತ್ತು ಗೃಹಸ್ಥಿ ಅರ್ಥಾತ್ ನನ್ನದು. ಅಂದಮೇಲೆ ತಾವು ಯಾರಾಗಿದ್ದೀರಿ? ಗೃಹಸ್ಥಿಗಳಂತೂ ಅಲ್ಲ ತಾನೇ! ಭಗವಂತನು ತಿನ್ನಿಸುತ್ತಿದ್ದಾರೆ, ಬ್ರಹ್ಮಾ ಭೋಜನವು ಸಿಗುತ್ತಿದೆ – ಬ್ರಾಹ್ಮಣ ಆತ್ಮರಿಗೆ ಈ ನಶೆಯು ಸ್ವತಹವಾಗಿ ಇರುತ್ತದೆ ಮತ್ತು ತಂದೆಯ ಗ್ಯಾರಂಟಿಯಾಗಿದೆ – 21 ಜನ್ಮಗಳವರೆಗೆ ಬ್ರಾಹ್ಮಣ ಆತ್ಮನು ಎಂದೂ ಹಸಿವಿನಿಂದ ಇರಲು ಸಾಧ್ಯವಿಲ್ಲ. ಬಹಳ ಪ್ರೀತಿಯಿಂದ ರೊಟ್ಟಿ, ಪಲ್ಯವನ್ನಾದರೂ ತಿನ್ನಿಸುತ್ತೇವೆ. ಈ ಜನ್ಮದಲ್ಲಿಯೂ ರೊಟ್ಟಿ, ಪಲ್ಯವನ್ನು ಪ್ರೀತಿಯಿಂದ ತಿನ್ನುತ್ತೀರಿ, ಪರಿಶ್ರಮದಿಂದಲ್ಲ ಆದ್ದರಿಂದ ಸದಾ ಈ ಸ್ಮೃತಿಯಿರಲಿ – ಅಮೃತವೇಳೆಯಿಂದ ಹಿಡಿದು ಯಾವ-ಯಾವ ಭಾಗ್ಯವು ಪ್ರಾಪ್ತಿಯಾಗಿದೆ! ಇಡೀ ದಿನಚರಿಯನ್ನು ನೋಡಿಕೊಳ್ಳಿ.

ತಂದೆಯೇ ಜೋಗುಳವನ್ನು ಹಾಡಿ ಮಲಗಿಸುತ್ತಾರೆ, ತಂದೆಯ ಮಡಿಲಿನಲ್ಲಿ ಮಲಗಿ ಬಿಡಿ ಆಗ ಸುಸ್ತು, ಖಾಯಿಲೆ ಎಲ್ಲವೂ ಮರೆತು ಹೋಗುವುದು ಮತ್ತು ವಿಶ್ರಾಂತಿ ಪಡೆಯುತ್ತೀರಿ. ಕೇವಲ `ಹಾ-ರಾಮ್’ (ರಾಮನೇ ಬನ್ನಿ) ಎಂದು ಕೇವಲ ಆಹ್ವಾನ ಮಾಡಿ ಆಗ ಆರಾಮವಾಗಿ ಬಿಡುವುದು ಅರ್ಥಾತ್ ವಿಶ್ರಾಂತಿ ಸಿಗುವುದು. ಹಾಗೆಯೇ ಒಂಟಿಯಾಗಿ ಮಲಗುತ್ತೀರೆಂದರೆ ಬೇರೆ-ಬೇರೆ ಸಂಕಲ್ಪಗಳು ನಡೆಯುತ್ತವೆ. ತಂದೆಯ ಜೊತೆ `ನೆನಪಿನ ಮಡಿಲಿನಲ್ಲಿ’ ಮಲಗಿಬಿಡಿ. `ಮಧುರ ಮಕ್ಕಳೇ, ಪ್ರಿಯ ಮಕ್ಕಳೇ’ ಎನ್ನುವ ಜೋಗುಳವನ್ನು ಕೇಳುತ್ತಾ-ಕೇಳುತ್ತಾ ಮಲಗಿ ಬಿಡಿ ಆಗ ನೋಡಿ, ಎಷ್ಟು ಅಲೌಕಿಕ ಅನುಭವವಾಗುತ್ತದೆ! ಅಮೃತವೇಳೆಯಿಂದ ಹಿಡಿದು ರಾತ್ರಿಯವರೆಗೆ ಎಲ್ಲವನ್ನೂ ಭಗವಂತನು ಮಾಡಿಸುತ್ತಿದ್ದಾರೆ, ನಡೆಸುವವರು ನಡೆಸುತ್ತಿದ್ದಾರೆ, ಮಾಡಿಸುವವರು ಮಾಡಿಸುತ್ತಿದ್ದಾರೆ – ಸದಾ ಈ ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಿ, ಇಮರ್ಜ್ ಮಾಡಿಕೊಳ್ಳಿ. ಮಧ್ಯಪಾನವನ್ನೂ ಸಹ ಎಲ್ಲಿಯವರೆಗೆ ಕುಡಿಯುವುದಿಲ್ಲವೋ ಅಲ್ಲಿಯವರೆಗೆ ನಶೆಯೇರುವುದಿಲ್ಲ, ಕೇವಲ ಹಾಗೆಯೇ ಬಾಟಲಿನಲ್ಲಿ ಇಟ್ಟುಕೊಂಡು ನೋಡುತ್ತಿದ್ದರೆ ನಶೆಯೇರುವುದೇ? ಹಾಗೆಯೇ ಇದೂ ಸಹ ಬುದ್ಧಿಯಲ್ಲಿ ಸಮಾವೇಶವಾಗಿದೆ ಆದರೆ ಇದನ್ನು ಉಪಯೋಗಿಸಿ, ಅದನ್ನು ಸ್ಮೃತಿಯಲ್ಲಿ ತರುವುದು ಎಂದರೆ ಕುಡಿಯುವುದು, ಇಮರ್ಜ್ ಮಾಡಿಕೊಳ್ಳುವುದು. ಇದಕ್ಕೇ ಸ್ಮೃತಿ ಸ್ವರೂಪರಾಗಿ ಎಂದು ಹೇಳುತ್ತಾರೆ. ಬುದ್ಧಿಯಲ್ಲಿ ಕೇವಲ ಸಮಾವೇಶ ಮಾಡಿಟ್ಟುಕೊಳ್ಳಿ ಎಂದು ಹೇಳಿಲ್ಲ. ಜೊತೆಗೆ ಸ್ಮೃತಿ ಸ್ವರೂಪರಾಗಿ. ಎಷ್ಟು ಭಾಗ್ಯಶಾಲಿಗಳಾಗಿದ್ದೀರಿ, ನಿತ್ಯವೂ ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಂಡು ಸಮರ್ಥರಾಗಿ ಮತ್ತು ಹಾರುತ್ತಾ ಇರಿ. ಏನು ಮಾಡಬೇಕೆಂದು ತಿಳಿಯಿತೇ? ಡಬಲ್ ವಿದೇಶಿಯರು ಹದ್ದಿನ ನಶೆಯ ಅನುಭವಿಗಳಂತೂ ಆಗಿದ್ದೀರಿ, ಈಗ ಈ ಬೇಹದ್ದಿನ ನಶೆಯನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ ಆಗ ಸದಾ ಭಾಗ್ಯದ ಶ್ರೇಷ್ಠ ರೇಖೆಯು ಮಸ್ತಕದಲ್ಲಿ ಹೊಳೆಯುತ್ತಿರುವುದು ಸ್ಪಷ್ಟವಾಗಿ ಕಾಣುವುದು. ಈಗಿನ್ನೂ ಕೆಲವರ ರೇಖೆಯು ಸ್ಪಷ್ಟವಾಗಿ ಕಾಣುತ್ತಿಲ್ಲ, ಕೆಲವರದು ಸ್ಪಷ್ಟವಾಗಿ ಕಾಣುತ್ತಿದೆ ಆದರೆ ಸದಾ ಸ್ಮೃತಿಯಲ್ಲಿದ್ದಾಗ ಮಸ್ತಕದಲ್ಲಿ ಹೊಳೆಯುತ್ತಿರುವುದು, ಅನ್ಯರಿಗೂ ಅನುಭವ ಮಾಡಿಸುತ್ತಾ ಇರುತ್ತೀರಿ. ಒಳ್ಳೆಯದು.

ಸದಾ ಭಗವಂತ ಮತ್ತು ಭಾಗ್ಯ – ಇಂತಹ ಸ್ಮೃತಿ ಸ್ವರೂಪ, ಸಮರ್ಥ ಆತ್ಮರಿಗೆ, ಸದಾ ಪ್ರತೀ ಕರ್ಮದಲ್ಲಿ ಮಾಡುವವನಾಗಿ ಕರ್ಮ ಮಾಡುವ ಶ್ರೇಷ್ಠಾತ್ಮರಿಗೆ, ಸದಾ ಅಮೃತವೇಳೆ ತಂದೆಯ ಜೊತೆ ಶ್ರೇಷ್ಠ ಸ್ಥಾನ, ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿರುವ ಭಾಗ್ಯಶಾಲಿ ಮಕ್ಕಳಿಗೆ, ಸದಾ ತಮ್ಮ ಮಸ್ತಕದ ಮೂಲಕ ಶ್ರೇಷ್ಠ ಭಾಗ್ಯದ ರೇಖೆಗಳನ್ನು ಅನ್ಯರಿಗೂ ಅನುಭವ ಮಾಡಿಸುವ ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವಿದಾಯಿ ಸಮಯದಲ್ಲಿ ದಾದಿ ಜಾನಕಿಯವರು ಬಾಂಬೆ ಹಾಗೂ ಕುರುಕ್ಷೇತ್ರದ ಸೇವೆಯಲ್ಲಿ ಹೋಗುವುದಕ್ಕಾಗಿ ಅನುಮತಿ ಪಡೆಯುತ್ತಿದ್ದಾರೆ;

ಮಹಾರಥಿಗಳು ಪಾದಗಳಲ್ಲಿ ಸೇವೆಯ ಚಕ್ರವಂತು ಇದ್ದೇ ಇದೆ. ಎಲ್ಲಿಯೇ ಹೋಗುತ್ತಾರೆ, ಅಲ್ಲಿ ಸೇವೆಯಿಲ್ಲದೇ ಮತ್ತೇನೂ ಇಲ್ಲ. ಭಲೆ ಯಾವುದೇ ಕಾರಣದಿಂದ ಹೋಗಬಹುದು ಆದರೆ ಸೇವೆಯು ಸಮಾವೇಶವಾಗಿದೆ. ಪ್ರತೀ ಹೆಜ್ಜೆಯಲ್ಲಿ ಸೇವೆಯಿಲ್ಲದೆ ಮತ್ತೇನೂ ಇಲ್ಲ. ಒಂದುವೇಳೆ ನಡೆಯುತ್ತಲೇ ಇರಬಹುದು, ಅದರಲ್ಲಿಯೂ ಸೇವೆಯಿದೆ. ಒಂದುವೇಳೆ ಆಹಾರ ಸೇವನೆ ಮಾಡಬಹುದು, ಯಾರಿಗೆ ನಿಮಂತ್ರಣ ಕೊಟ್ಟು ಉಟೋಪಚಾರ ಮಾಡಬಹುದು, ಸ್ನೇಹದಿಂದ ಸ್ವೀಕಾರ ಮಾಡುತ್ತಾರೆಂದರೂ ಸೇವೆಯಾಯಿತು. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ ಇರುವಾಗಲೂ ಸೇವೆಯೇ ಇದೆ, ಇಂತಹ ಸೇವಾಧಾರಿ ಆಗಿದ್ದೀರಿ. ಸೇವೆಯ ಅವಕಾಶವು ಸಿಗುವುದೂ ಸಹ ಭಾಗ್ಯದ ಸಂಕೇತವಾಗಿದೆ. ಶ್ರೇಷ್ಠ ಚಕ್ರವರ್ತಿ ಆಗಬೇಕೆಂದರೆ ಸೇವೆಯ ಪರಿಕ್ರಮಣವೂ ದೊಡ್ಡದಾಗಿರುತ್ತದೆ. ಒಳ್ಳೆಯದು!

ವರದಾನ:-

ದಿನ-ದಿನಕ್ಕೂ ಪರಿಸ್ಥಿತಿಗಳು ಅತಿ ತಮೋಪ್ರಧಾನವಾಗಲಿದೆ, ವಾಯುಮಂಡಲವು ಇನ್ನಷ್ಟು ಹಾಳಾಗುವುದಿದೆ. ಇಂತಹ ವಾಯುಮಂಡಲದಲ್ಲಿ ಕಮಲ ಪುಷ್ಪ ಸಮಾನ ಭಿನ್ನವಾಗಿರುವುದು, ತಮ್ಮ ಸ್ಥಿತಿಯನ್ನು ಸತೋಪ್ರಧಾನ ಮಾಡಿಕೊಳ್ಳುವುದಕ್ಕಾಗಿ, ಇದರಷ್ಟೇ ಸಾಹಸ ಅಥವಾ ಶಕ್ತಿಯ ಅವಶ್ಯಕತೆಯಿರುತ್ತದೆ. ಯಾವಾಗ ನಾನು ಮಾಸ್ಟರ್ ಸರ್ವಶಕ್ತಿವಂತನು ಆಗಿದ್ದೇನೆ ಎಂಬ ವರದಾನವು ಸ್ಮೃತಿಯಲ್ಲಿರುತ್ತದೆಯೋ, ಆಗ ಯಾವುದೇ ಪರೀಕ್ಷೆಗಳು ಭಲೆ ಪ್ರಕೃತಿಯಿಂದ ಅಥವಾ ಲೌಕಿಕ ಸಂಬಂಧದಿಂದ ಅಥವಾ ದೈವೀ ಪರಿವಾರದಿಂದ ಬರಬಹುದು, ಅದರಲ್ಲಿ ಸದಾ ಏಕರಸ, ಅಚಲ-ಅಡೋಲವಾಗಿ ಇರುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top