21 October 2021 KANNADA Murli Today | Brahma Kumaris

Read and Listen today’s Gyan Murli in Kannada

October 20, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿಮ್ಮಂತಹ ಸೌಭಾಗ್ಯಶಾಲಿಗಳು ಯಾರೂ ಇಲ್ಲ ಏಕೆಂದರೆ ಯಾವ ತಂದೆಯನ್ನು ಇಡೀ ಪ್ರಪಂಚವು ಕರೆಯುತ್ತಿದೆಯೋ ಅವರೇ ನಿಮಗೆ ಓದಿಸುತ್ತಿದ್ದಾರೆ, ನೀವು ಅವರೊಂದಿಗೆ ಮಾತನಾಡುತ್ತೀರಿ”

ಪ್ರಶ್ನೆ:: -

ಯಾವ ಮಕ್ಕಳಿಗೆ ವಿಚಾರ ಸಾಗರ ಮಂಥನ ಮಾಡುವುದು ಬರುತ್ತದೆಯೋ ಅವರ ಚಿಹ್ನೆಗಳೇನು?

ಉತ್ತರ:-

ಅವರ ಬುದ್ಧಿಯಲ್ಲಿ ಇಡೀ ದಿನ ಇದೇ ಚಿಂತೆಯಿರುತ್ತದೆ – ಎಲ್ಲರಿಗೆ ಹೇಗೆ ಮಾರ್ಗವನ್ನು ತಿಳಿಸುವುದು! ಹೇಗೆ ಅನ್ಯರ ಕಲ್ಯಾಣ ಮಾಡುವುದು! ಅವರು ಸರ್ವೀಸಿನ ಹೊಸ-ಹೊಸ ಯೋಜನೆಗಳನ್ನು ಮಾಡುತ್ತಿರುತ್ತಾರೆ, ಅವರ ಬುದ್ಧಿಯಲ್ಲಿ ಇಡೀ ದಿನ ಜ್ಞಾನವು ಹನಿಯುತ್ತಿರುತ್ತದೆ, ಅವರು ತಮ್ಮ ಸಮಯವನ್ನು ವ್ಯರ್ಥವಾಗಿ ಕಳೆಯುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಕ್ಕಳ ಮುಂದೆ ನಿರಾಕಾರ ಪರಮಪಿತ ಪರಮಾತ್ಮನು ಮಾತನಾಡುತ್ತಿದ್ದಾರೆ, ಇದನ್ನು ಮಕ್ಕಳೇ ತಿಳಿದುಕೊಂಡಿದ್ದೀರಿ. ಭಗವಂತನಿಗೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಅವರ ಧಾಮವೂ ಶ್ರೇಷ್ಠವಾಗಿದೆ. ಅವರು ಇರುವ ಸ್ಥಾನವಂತೂ ಪ್ರಸಿದ್ಧವಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಮೂಲವತನದ ನಿವಾಸಿಗಳಾಗಿದ್ದೇವೆ. ಮನುಷ್ಯರಿಗೆ ಇವೆಲ್ಲಾ ಮಾತುಗಳ ಬಗ್ಗೆ ಏನೂ ತಿಳಿದಿಲ್ಲ. ಪರಮಾತ್ಮನು ಹೇಳುತ್ತಾರೆ – ನೀವು ಮಕ್ಕಳ ವಿನಃ ಮತ್ತ್ಯಾವ ಮನುಷ್ಯರಿಗೂ ಸಹ ನಿರಾಕಾರ ಭಗವಂತನೇ ಮಾತನಾಡುತ್ತಾರೆಂದು ತಿಳಿದಿರುವುದಿಲ್ಲ. ನಿರಾಕಾರನಾಗಿರುವ ಕಾರಣ ಭಗವಂತನು ಹೇಗೆ ಮಾತನಾಡುತ್ತಾರೆ ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಇದು ತಿಳಿಯದ ಕಾರಣ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈಗ ಮಕ್ಕಳ ಮುಂದೆ ಮಾತನಾಡುತ್ತಿದ್ದಾರೆ. ಸನ್ಮುಖದಲ್ಲಿ ಇಲ್ಲದೇ ಇದ್ದರೆ ಕೇಳಲು ಸಾಧ್ಯವಿಲ್ಲ. ದೂರದಿಂದ ಭಲೆ ಕೇಳಿಸಿಕೊಳ್ಳುತ್ತಾರೆ ಆದರೆ ನಿಶ್ಚಯವಾಗುವುದಿಲ್ಲ. ಭಗವಾನುವಾಚವನ್ನು ಕೇಳುವುದಂತೂ ಕೇಳುತ್ತಾರೆ ಆದರೆ ಯಥಾರ್ಥ ರೀತಿಯಿಂದ ನೀವೇ ತಿಳಿದುಕೊಳ್ಳುತ್ತೀರಿ. ಭಗವಂತನು ಶಿವ ತಂದೆಯಾಗಿದ್ದಾರೆ, ಆ ತಂದೆಯು ನಮಗೆ ಜ್ಞಾನ ತಿಳಿಸುತ್ತಿದ್ದಾರೆ ಎಂಬುದನ್ನು ನೀವೇ ಪ್ರತ್ಯಕ್ಷದಲ್ಲಿ ತಿಳಿದುಕೊಂಡಿದ್ದೀರಿ. ನಿಮ್ಮ ಬುದ್ಧಿಯು ಕೂಡಲೇ ಮೇಲೆ ಹೋಗುತ್ತದೆ. ಶಿವ ತಂದೆಯು ಅತೀ ಮೇಲಿನ ಧಾಮದ ನಿವಾಸಿಯಾಗಿದ್ದಾರೆ. ಹೇಗೆ ಯಾವುದೇ ದೊಡ್ಡ ವ್ಯಕ್ತಿ ರಾಜಾ-ರಾಣಿ ಮೊದಲಾದವರು ಬರುತ್ತಾರೆಂದರೆ ಇವರು ಇಂತಹ ಕಡೆಯಿರುವವರು ಈ ಸಮಯದಲ್ಲಿ ಇಲ್ಲಿಗೆ ಬಂದಿದ್ದಾರೆಂದು ತಿಳಿದಿರುತ್ತದೆ. ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ, ತಂದೆಯು ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ನಾವೂ ಸಹ ತಂದೆಯ ಜೊತೆ ಹಿಂತಿರುಗಿ ಹೋಗುತ್ತೇವೆ. ನಾವು ಪರಮಧಾಮದ ನಿವಾಸಿಗಳಾಗಿದ್ದೇವೆ. ಈಗ ನಿಮಗೆ ತಂದೆ ಮತ್ತು ಮನೆಯ ನೆನಪು ಬರುತ್ತದೆ. ಆ ತಂದೆಯೇ ಸೃಷ್ಟಿಯ ರಚಯಿತನಾಗಿದ್ದಾರೆ. ತಂದೆಯು ಬಂದು ನೀವು ಮಕ್ಕಳಿಗೆ ಮೂಲವತನ, ಸೂಕ್ಷ್ಮವತನ, ಸ್ಥೂಲವತನದ ರಹಸ್ಯವನ್ನು ತಿಳಿಸಿದ್ದಾರೆ. ಯಾರ ಬುದ್ಧಿಯಲ್ಲಿ ಇರುವುದೋ ಅವರು ತಿಳಿದುಕೊಳ್ಳುತ್ತಾರೆ. ಅವಶ್ಯವಾಗಿ ಭವಿಷ್ಯ 21 ಜನ್ಮಗಳಿಗಾಗಿ ತಂದೆಯಿಂದ ಆಸ್ತಿಯನ್ನು ಪಡೆಯಲು ನಾವು ಪುರುಷಾರ್ಥ ಮಾಡುತ್ತಿದ್ದೇವೆ. ಪುರುಷಾರ್ಥವನ್ನಂತೂ ಮಾಡಲೇಬೇಕಾಗಿದೆ. ಪುರುಷಾರ್ಥವನ್ನೆಂದೂ ಬಿಡಬಾರದು. ಶಾಲೆಯ ಮಕ್ಕಳಿಗೆ ತಿಳಿದಿರುತ್ತದೆ, ಪರೀಕ್ಷೆಯು ಮುಗಿಯುವವರೆಗೂ ನಾವು ಓದಲೇಬೇಕಾಗಿದೆ. ಇದೇ ಗುರಿ-ಧ್ಯೇಯವಿರುತ್ತದೆ. ನಾವು ಬಹಳ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡುತ್ತೇವೆ. ಒಂದು ಕಾಲೇಜನ್ನು ಬಿಟ್ಟು ಇನ್ನೊಂದು, ಮತ್ತೊಂದು ಕಾಲೇಜಿಗೆ ಹೋಗುತ್ತೀರಿ ಅಂದರೆ ಅರ್ಥವೇನೆಂದರೆ ಓದುತ್ತಲೇ ಇರಬೇಕಾಗಿದೆ. ದೊಡ್ಡ ವ್ಯಕ್ತಿಗಳ ಮಕ್ಕಳಾಗಿದ್ದರೆ ಅವಶ್ಯವಾಗಿ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡುವ ವಿಚಾರವಿರುತ್ತದೆ. ನಾವು ಬಹಳ ದೊಡ್ಡ ತಂದೆಯ ಮಕ್ಕಳಾಗಿದ್ದೇವೆ. ನಾವು ಶಿವ ತಂದೆಯ ಸಂತಾನರಾಗಿದ್ದೇವೆ ಎಂದು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ನೀವು ಬಹಳ ದೊಡ್ಡ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೀರಿ. ಬಹಳ ದೊಡ್ಡ ವಿದ್ಯೆಯನ್ನು ಓದುತ್ತೀರಿ. ನಿಮಗೆ ತಿಳಿದಿದೆ, ಇದು ಬಹಳ ಶ್ರೇಷ್ಠವಾದ ವಿದ್ಯೆಯಾಗಿದೆ, ಓದಿಸುವವರು ತಂದೆಯಾಗಿದ್ದಾರೆ ಅಂದಮೇಲೆ ಎಷ್ಟೊಂದು ಉಮ್ಮಂಗ ಮತ್ತು ಖುಷಿಯಲ್ಲಿ ಇರಬೇಕು! ಇದನ್ನು ಯಾರಿಗೆ ಬೇಕಾದರೂ ತಿಳಿಸಬಲ್ಲಿರಿ – ನಾವು ಬಹಳ ದೊಡ್ಡ ತಂದೆಯ ಮಕ್ಕಳಾಗಿದ್ದೇವೆ. ಬಹಳ ದೊಡ್ಡ ಸದ್ಗುರುವಿನ ಮತದಂತೆ ನಡೆಯುತ್ತೇವೆ. ಶಿಕ್ಷಕರ, ಗುರುವಿನ ಮತದಂತೆ ನಡೆಯಲಾಗುತ್ತದೆಯಲ್ಲವೆ. ಅಂತಹವರಿಗೆ ಅನುಯಾಯಿಗಳೆಂದು ಹೇಳಿ ಬಿಡುತ್ತಾರೆ. ಇಲ್ಲಿ ತಂದೆಯ ಮತದಂತೆ ನಡೆಯಬೇಕಾಗಿದೆ. ಶಿಕ್ಷಕರ ಮತದ ಅನುಸಾರವೂ ನಡೆಯಬೇಕಾಗಿದೆ ಮತ್ತು ಗುರುವಿನ ಮತದಂತೆಯೂ ನಡೆಯಬೇಕಾಗಿದೆ. ಅವರು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ, ಅವರ ಮತದಂತೆ ಅವಶ್ಯವಾಗಿ ನಡೆಯಬೇಕಾಗಿದೆ. ಇವರೊಬ್ಬರೇ ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯಾಗಿದ್ದಾರೆ. ಅವರೇ ಮಾತನಾಡುತ್ತಾರೆ.

ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ – ಶಿವ ತಂದೆಯು ಮಾತನಾಡುತ್ತಾರೆಯೋ, ಶಂಕರನು ಮಾತನಾಡುತ್ತಾರೆಯೋ? ಬ್ರಹ್ಮನು ಮಾತನಾಡುತ್ತಾರೆಯೇ ಅಥವಾ ವಿಷ್ಣುವು ಮಾತನಾಡುತ್ತಾರೆಯೇ? (ಒಬ್ಬರು ಹೇಳಿದರು – ಶಿವ ಮತ್ತು ಬ್ರಹ್ಮನು ಮಾತನಾಡುತ್ತಾರೆ, ವಿಷ್ಣು ಮತ್ತು ಶಂಕರನು ಮಾತನಾಡುವುದಿಲ್ಲ) ವಿಷ್ಣುವಿನ ಎರಡು ರೂಪಗ ಲಕ್ಷ್ಮೀ-ನಾರಾಯಣರೆಂದು ಹೇಳುತ್ತೀರಿ ಅಂದಮೇಲೆ ಅವರು ಮಾತನಾಡುವುದಿಲ್ಲವೆ? ಮೂಖರಾಗಿದ್ದಾರೆಯೇ? (ಜ್ಞಾನ ಹೇಳುವುದಿಲ್ಲ) ನಾವು ಜ್ಞಾನದ ಮಾತನಾಡುತ್ತಿಲ್ಲ. ಮಾತನಾಡುವ ಮಾತನ್ನು ಕೇಳುತ್ತಿದ್ದೇನೆ. ವಿಷ್ಣು, ಲಕ್ಷ್ಮೀ-ನಾರಾಯಣರು ಮಾತನಾಡುತ್ತಾರೆಯೇ? ಶಂಕರನು ಮಾತನಾಡುವುದಿಲ್ಲ, ಅದು ಸರಿಯಾಗಿದೆ. ಇನ್ನುಳಿದ ಮೂವರು ಏಕೆ ಮಾತನಾಡುವುದಿಲ್ಲ? ವಿಷ್ಣುವಿನ ಎರಡು ರೂಪ ಲಕ್ಷ್ಮೀ-ನಾರಾಯಣರಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮಾತನಾಡುತ್ತಾರಲ್ಲವೆ. ಮನುಷ್ಯರು ನಿರಾಕಾರ ಶಿವ ತಂದೆಯು ಹೇಗೆ ಮಾತನಾಡುವರು ಎಂದು ತಿಳಿದುಕೊಂಡಿರಬಹುದು. ನಿಮಗೆ ತಿಳಿದಿದೆ – ಶಿವ ತಂದೆಯೂ ಸಹ ಇವರಲ್ಲಿ ಬಂದು ಮಾತನಾಡುತ್ತಾರೆ, ಬ್ರಹ್ಮನೂ ಸಹ ಮಾತನಾಡುತ್ತಾರೆ. ದತ್ತು ಪುತ್ರನಲ್ಲವೆ. ಸನ್ಯಾಸಿಗಳೂ ಸಹ ಸನ್ಯಾಸತ್ವದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ, ನೀವೂ ಸಹ ಸನ್ಯಾಸ ಮಾಡಿದ್ದೀರಿ ಅಂದಮೇಲೆ ನಿಮ್ಮ ಹೆಸರು ಬದಲಾಗಬೇಕು. ಮೊದಲು (ಆದಿಯಲ್ಲಿ) ತಂದೆಯ ಹೆಸರುಗಳನ್ನು ಇಟ್ಟಿದ್ದರು ಆದರೆ ಹೆಸರು ಬದಲಾಯಿಸಿದ್ದರೂ ಸಹ ಆಶ್ಚರ್ಯವೆನಿಸುವಂತೆ ಜ್ಞಾನ ಬಿಟ್ಟು ಹೊರಟು ಹೋಗುವುದನ್ನು ನೋಡಿದರು ಆದ್ದರಿಂದ ಎಷ್ಟು ಮಂದಿಗೆ ಎಷ್ಟು ಹೆಸರುಗಳೆಂದು ಇಡುವುದು? ಅದಕ್ಕಾಗಿ ನಿಲ್ಲಿಸಿ ಬಿಟ್ಟರು. ಇತ್ತೀಚೆಗೆ ಮಾಯೆಯೂ ಸಹ ಬಹಳ ತೀಕ್ಷ್ಣವಾಗಿದೆ. ಬುದ್ಧಿಯು ಹೇಳುತ್ತದೆ – ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಅದಕ್ಕೆ ವಿಷ್ಣು ಪುರಿಯೆಂದು ಹೇಳಲಾಗುತ್ತಿತ್ತು. ಈ ಗುರಿ-ಧ್ಯೇಯವು ಬುದ್ಧಿಯಲ್ಲಿದೆ. ವಿಷ್ಣುವಿನ ಎರಡುರೂಪ ಲಕ್ಷ್ಮೀ-ನಾರಾಯಣರ ರಾಜ್ಯ ಮಾಡುತ್ತಾರೆಂದ ಮೇಲೆ ಏಕೆ ಮಾತನಾಡುವುದಿಲ್ಲ!! ತಂದೆಯು ಇಲ್ಲಿನ ಮಾತನ್ನು ಹೇಳುತ್ತಿಲ್ಲ. ಮನುಷ್ಯರಂತೂ ನಿರಾಕಾರನು ಹೇಗೆ ಮಾತನಾಡುತ್ತಾರೆಂದು ಕೇಳುತ್ತಾರೆ. ನಿರಾಕಾರನು ಹೇಗೆ ಬರುತ್ತಾರೆ ಎಂಬುದು ಅವರಿಗೆ ತಿಳಿದೇ ಇಲ್ಲ. ಅವರಿಗೆ ಪತಿತ-ಪಾವನನೆಂದು ಹೇಳುತ್ತಾರೆ. ಅವರು ಜ್ಞಾನ ಸಾಗರನೂ ಆಗಿದ್ದಾರೆ, ಚೈತನ್ಯನೂ ಆಗಿದ್ದಾರೆ, ಪ್ರೀತಿಯ ಸಾಗರನೂ ಆಗಿದ್ದಾರೆ. ಈಗ ಪ್ರೀತಿಯು ಪ್ರೇರಣೆಯಿಂದ ಸಿಗುವುದಿಲ್ಲ. ಅವರೂ ಸಹ ಈ ರಥದಲ್ಲಿ ಪ್ರವೇಶ ಮಾಡಿ ಮಕ್ಕಳಿಗೆ ಪ್ರೀತಿ ಮಾಡುತ್ತಾರಲ್ಲವೆ ಆದ್ದರಿಂದಲೇ ನಾವು ಪರಮಪಿತ ಪರಮಾತ್ಮನ ಮಡಿಲಿಗೆ ಬರುತ್ತೇವೆಂದು ಹೇಳುತ್ತೀರಿ. ಬಾಬಾ, ನಿಮ್ಮೊಂದಿಗೇ ತಿನ್ನುವೆನು, ನಿಮ್ಮಿಂದಲೇ ಕೇಳುವೆನು….. ಬುದ್ಧಿಯು ಅವರ ಕಡೆ ಹೊರಟು ಹೋಗುತ್ತದೆ. ಬುದ್ಧಿಯಲ್ಲಿ ಶ್ರೀಕೃಷ್ಣನು ಬರುವುದಿಲ್ಲ ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ನಿಮ್ಮಂತಹ ಸೌಭಾಗ್ಯಶಾಲಿಗಳು ಬೇರೆ ಯಾರೂ ಇಲ್ಲ. ನಾವು ಎಷ್ಟು ಶ್ರೇಷ್ಠ ಪಾತ್ರಧಾರಿಗಳೆಂದು ನಿಮಗೆ ತಿಳಿದಿದೆ. ಇದು ಆಟವಲ್ಲವೆ. ಇದಕ್ಕೆ ಮೊದಲು ನೀವು ಏನನ್ನೂ ತಿಳಿದುಕೊಂಡಿರಲಿಲ್ಲ, ಈಗ ತಂದೆಯು ಪ್ರವೇಶ ಮಾಡಿದ್ದಾರೆ ಆದ್ದರಿಂದ ಡ್ರಾಮಾನುಸಾರ ಅವರ ಮೂಲಕ ಕೇಳುತ್ತಿದ್ದೀರಿ.

ತಂದೆಯು ಹೇಳುತ್ತಾರೆ – ಮಧುರಾತಿ ಮಧುರ ಮಕ್ಕಳೇ, ನೀವು ತಿಳಿದುಕೊಂಡಿದ್ದೀರಿ, ತಂದೆಯು ನಿರಾಕಾರನಾಗಿದ್ದಾರೆ. ಅವರು ನಾವಾತ್ಮರ ತಂದೆಯಾಗಿದ್ದಾರೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿ ಬರೆದಿಲ್ಲ. ಈಗ ನಿಮ್ಮದು ವಿಶಾಲ ಬುದ್ಧಿಯಾಗಿದೆ. ವಿದ್ಯಾರ್ಥಿಗಳು ಓದುತ್ತಾರೆ, ಬುದ್ಧಿಯಲ್ಲಿ ಇಡೀ ಚರಿತ್ರೆ-ಭೂಗೋಳವೇ ಬಂದು ಬಿಡುತ್ತದೆ. ಆದರೆ ತಂದೆಯು ಎಲ್ಲಿದ್ದಾರೆ ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ. ಯಥಾರ್ಥ ರೀತಿಯಿಂದ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ ಮತ್ತು ಪ್ರತ್ಯಕ್ಷದಲ್ಲಿ ಆ ಖುಷಿಯಿದೆ. ತಂದೆಯು ಪರಮಧಾಮದಿಂದ ಬರುತ್ತಾರೆ, ನಮಗೆ ಓದಿಸುತ್ತಾರೆ. ಇಡೀ ದಿನ ಪರಸ್ಪರ ಇದೇ ವಾರ್ತಾಲಾಪವು ನಡೆಯಲಿ. ಈ ಜ್ಞಾನವನ್ನು ಬಿಟ್ಟರೆ ಉಳಿದೆಲ್ಲವೂ ಸತ್ಯನಾಶ ಮಾಡುವ ಮಾತುಗಳಾಗಿವೆ. ಶರೀರ ನಿರ್ವಹಣೆಗಾಗಿ ನೀವು ಉದ್ಯೋಗ-ವ್ಯವಹಾರಗಳನ್ನೂ ಮಾಡಬೇಕಾಗಿದೆ, ಜೊತೆ ಜೊತೆಗೆ ಈ ಆತ್ಮಿಕ ಸೇವೆಯನ್ನೂ ಕೂಡ.

ನಿಮಗೆ ತಿಳಿದಿದೆ – ಅವಶ್ಯವಾಗಿ ಈ ಭಾರತವು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಏನೆಲ್ಲಾ ದೇವಿ-ದೇವತೆಗಳ ಚಿತ್ರಗಳಿದೆಯೋ ಅದರ ಯಥಾರ್ಥ ಜ್ಞಾನವು ಬುದ್ಧಿಯಲ್ಲಿ ಬಂದು ಬಿಟ್ಟಿದೆ. ನಂಬರ್ವನ್ ಲಕ್ಷ್ಮೀ-ನಾರಾಯಣರ ಚಿತ್ರವನ್ನು ತೆಗೆದುಕೊಳ್ಳಿ. ವಿಚಾರ ಮಾಡಿರಿ – ಅವಶ್ಯವಾಗಿ ಇವರು ಭಾರತದಲ್ಲಿ ರಾಜ್ಯ ಮಾಡುತ್ತಿದ್ದರು. ಆಗ ಒಂದೇ ಧರ್ಮವಿತ್ತು. ರಾತ್ರಿಯು ಮುಕ್ತಾಯವಾಗಿ ದಿನವು ಆರಂಭವಾಯಿತು ಅರ್ಥಾತ್ ಕಲಿಯುಗವು ಮುಕ್ತಾಯವಾಗಿ ಸತ್ಯಯುಗವು ಆರಂಭವಾಯಿತು. ಕಲಿಯುಗವು ರಾತ್ರಿಯಾಗಿದೆ, ಸತ್ಯಯುಗವು ಮುಂಜಾನೆಯಾಗಿದೆ. ಇವರು ಈ ರಾಜ್ಯವನ್ನು ಹೇಗೆ ಪಡೆದರು ಎಂಬುದನ್ನು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಹೇಗೆ ಸಾಗರದಲ್ಲಿ ಕಲ್ಲನ್ನು ಹಾಕಿದರೆ ಅಲೆಗಳು ಏಳುತ್ತವೆಯೆಂದು ಹೇಳಲಾಗುತ್ತದೆ. ಹಾಗೆಯೇ ನೀವೂ ಸಹ ಬುದ್ಧಿಗೆ ಕಲ್ಲು ಹೊಡೆಯಿರಿ, ಮನುಷ್ಯರಿಗೆ ತಿಳಿಸಿಕೊಡಿ – ಇದೇ ವಿಚಾರ ಮಾಡಿರಿ, ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತಲ್ಲವೆ. ಅವರೇ ಮತ್ತೆ ಭಕ್ತಿಮಾರ್ಗದಲ್ಲಿ ಮಂದಿರಗಳನ್ನು ಕಟ್ಟಿಸಿದ್ದಾರೆ. ಅದನ್ನು ಮುಸಲ್ಮಾನರು ಲೂಟಿ ಮಾಡಿದರು. ಇದು ನೆನ್ನೆಯ ಮಾತಾಗಿದೆ. ಈಗ ಭಕ್ತಿಮಾರ್ಗವಾಗಿದೆ ಅಂದಮೇಲೆ ಅದಕ್ಕೆ ಮೊದಲು ಜ್ಞಾನ ಮಾರ್ಗವಿರುವುದು. ಇವೆಲ್ಲಾ ಮಾತುಗಳು ಈಗ ನಿಮ್ಮ ಬುದ್ಧಿಯಲ್ಲಿದೆ. ತಂದೆಯೂ ಸಹ ಬಂದು ತಮ್ಮ ಜೀವನ ಕಥೆಯನ್ನು ತಿಳಿಸುತ್ತಾರೆ. ನಿಮಗೆ ಇದೇಕೆ ನೆನಪಿಗೆ ಬರುವುದಿಲ್ಲ! ತಂದೆಯು ಬಂದು ನಮಗೆ ಇಡೀ ಜ್ಞಾನವನ್ನು ತಿಳಿಸುತ್ತಾರೆ, ತಿಳುವಳಿಕೆಯೂ ಬೇಕಲ್ಲವೆ. ಯಾರಿಗಾದರೂ ಇದೇ ಮಾತನ್ನು ತಿಳಿಸಿರಿ. ಇದು ಗುರಿ-ಧ್ಯೇಯದ ಚಿತ್ರವಾಗಿದೆ. ಈ ಲಕ್ಷ್ಮೀ-ನಾರಾಯಣರು ಎಲ್ಲರಿಗಿಂತ ದೊಡ್ಡ ರಾಜ-ರಾಣಿಯಾಗಿದ್ದಾರೆ. ಭಾರತವು ಸ್ವರ್ಗವಾಗಿತ್ತಲ್ಲವೆ. ಇದು ನೆನ್ನೆಯ ಮಾತಾಗಿದೆ. ನಂತರ ಇವರು ಈ ರಾಜ್ಯ ಸಿಂಹಾಸನವನ್ನು ಹೇಗೆ ಕಳೆದುಕೊಂಡರು! ತಮ್ಮ ಮಕ್ಕಳು ಭಲೆ ಇದೆಲ್ಲವನ್ನೂ ಕೇಳುತ್ತಾರೆ ಆದರೆ ಎಂದೂ ಬುದ್ಧಿಯಲ್ಲಿ ಇದು ಹನಿಯುವುದಿಲ್ಲ. ಬುದ್ಧಿಯಲ್ಲಿ ನೆನಪೂ ಬರುವುದಿಲ್ಲ. ಒಂದುವೇಳೆ ನೆನಪಿಗೆ ಬಂದರೆ ಅನ್ಯರಿಗೂ ತಿಳಿಸುವರು. ಇದು ಬಹಳ ಸಹಜವಾಗಿದೆ. ನೀವಿಲ್ಲಿ ಲಕ್ಷ್ಮೀ-ನಾರಾಯಣರಂತೆ ಆಗಲು ಬರುತ್ತೀರಿ. ತಿಳಿಸಿದ್ದಾರೆ – 5000 ವರ್ಷಗಳ ಮಾತಾಗಿದೆ. ಇದಕ್ಕಿಂತಲೂ ಹಿಂದೆ ಯಾರೂ ಇರುವುದಿಲ್ಲ. ಎಲ್ಲದಕ್ಕಿಂತ ಬಹಳ ಹಳೆಯ ಭಾರತದ ಕಥೆಯು ಇದಾಗಿದೆ. ವಾಸ್ತವದಲ್ಲಿ ಸತ್ಯ-ಸತ್ಯವಾದ ಕಥೆಯು ಇದೇ ಇರಬೇಕಾಗಿದೆ. ಎಲ್ಲದಕ್ಕಿಂತ ದೊಡ್ಡ ಕಥೆಯು ಇದಾಗಿದೆ. ಹಿಂದೆ ಇವರ ರಾಜ್ಯವಿತ್ತು, ಈಗ ಅದು ಇಲ್ಲ. ಯಾರಿಗೂ ಸ್ವಲ್ಪವೂ ಗೊತ್ತಿಲ್ಲ. ನಿಮ್ಮ ಬುದ್ಧಿಯಲ್ಲಿ ನಂಬರ್ವಾರ್ ಹನಿಯುತ್ತದೆ. ನನ್ನನ್ನು ನೆನಪು ಮಾಡಿರಿ ಎಂದು ತಂದೆಯು ತಿಳಿಸುತ್ತಾರೆ. ಪೂರ್ಣ ರೀತಿಯಿಂದ ಯಾರೂ ಸಹ ನೆನಪು ಮಾಡುವುದಿಲ್ಲ. ತಂದೆಯು ಬಿಂದುವಾಗಿದ್ದಾರೆ, ನಾವೂ ಬಿಂದುವಾಗಿದ್ದೇವೆ, ಇದು ಬುದ್ಧಿಯಲ್ಲಿ ನಿಲ್ಲುವುದೇ ಇಲ್ಲ. ಕೆಲ ಕೆಲವರ ಬುದ್ಧಿಯಲ್ಲಿ ಬಹಳ ಚೆನ್ನಾಗಿ ಹನಿಯುತ್ತದೆ. ಯಾರಿಗಾದರೂ ಕುಳಿತು ತಿಳಿಸುತ್ತಾರೆಂದರೆ 4-5 ಗಂಟೆಗಳೂ ಹಿಡಿಸುತ್ತವೆ. ಇವು ಬಹಳ ಅದ್ಭುತ ಮಾತುಗಳಾಗಿವೆ. ಹೇಗೆ ಸತ್ಯ ನಾರಾಯಣನ ಕಥೆಯನ್ನು ಕುಳಿತು ಕೇಳುತ್ತಾರಲ್ಲವೆ. ಯಾರಿಗಾದರೂ ಅಭಿರುಚಿಯಿದ್ದರೆ ಅವರು 2-3 ಗಂಟೆಗಳ ಕಾಲ ಕುಳಿತು ಕೇಳುತ್ತಾರೆ. ಇದರಲ್ಲಿಯೂ ಹಾಗೆಯೇ, ಯಾರಿಗೆ ಬಹಳ ರುಚಿಯಿರುವುದೋ ಅವರಿಗೂ ಮತ್ತೇನೂ ತೋಚುವುದಿಲ್ಲ. ಈ ಮಾತುಗಳನ್ನು ತಿಳಿದುಕೊಳ್ಳುವುದರಲ್ಲಿಯೇ ಆನಂದವಾಗುತ್ತದೆ. ಈ ಮಾತುಗಳು ಇಷ್ಟವಾಗುತ್ತವೆ. ನಾವು ಈ ಸೇವೆಯಲ್ಲಿಯೇ ತೊಡಗಬೇಕು, ಅನ್ಯ ಉದ್ಯೋಗ-ವ್ಯವಹಾರಗಳನ್ನೆಲ್ಲಾ ಬಿಟ್ಟು ಬಿಡೋಣವೆಂದು. ಆದರೆ ಈ ರೀತಿ ಯಾರೂ ಕುಳಿತುಕೊಳ್ಳುವಂತಿಲ್ಲ. ನೀವು ಮಕ್ಕಳು ಈ ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಿದ್ದೀರಿ. ಈಗ ನಿಮ್ಮ ಬುದ್ಧಿಯಲ್ಲಿ ಎಷ್ಟು ಒಳ್ಳೆಯ ಮಾತುಗಳು ತಿರುಗುತ್ತವೆ. ನಾವು ಈ ಸಾಮಾನುಗಳನ್ನು ಹಂಚುವುದಕ್ಕಾಗಿ ಎವರೆಡಿಯಾಗಿದ್ದೇನೆ. ಸಾಮಗ್ರಿಗಳು ಸದಾ ತಯಾರಿರಬೇಕು. ಈ ಚಿತ್ರವನ್ನೂ ಸಹ ನೀವು ತೋರಿಸಿ ತಿಳಿಸಬಹುದು – ಈ ಲಕ್ಷ್ಮೀ-ನಾರಾಯಣರಿಗೆ ಈ ರಾಜ್ಯವು ಹೇಗೆ ಸಿಕ್ಕಿತು? ಎಷ್ಟು ವರ್ಷಗಳ ಮೊದಲು ಇವರು ವಿಶ್ವದ ಮಾಲೀಕರಾಗಿದ್ದರು? ಆ ಸಮಯದ ಸೃಷ್ಟಿಯಲ್ಲಿ ಎಷ್ಟು ಜನಸಂಖ್ಯೆಯಿತ್ತು, ಈಗ ಎಷ್ಟೊಂದಿದೆ. ಒಂದಲ್ಲ ಒಂದು ಕಲ್ಲನ್ನು (ಬಾಣ) ಹಾಕಬೇಕು ಆಗ ವಿಚಾರ ಸಾಗರ ಮಂಥನ ನಡೆಯುವುದು. ನಮ್ಮ ಕುಲದವರಾಗಿದ್ದರೆ ಕೂಡಲೆ ಅಲೆಯು ಏಳುವುದು. ನಮ್ಮ ಕುಲದವರಲ್ಲದಿದ್ದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ, ಹೊರಟು ಹೋಗುತ್ತಾರೆ. ಇದು ನಾಡಿಯನ್ನು ನೋಡುವ ಮಾತಾಗಿದೆ. ಈ ಮಧುರಾತಿ ಮಧುರ ಜ್ಞಾನದ ಮಾತುಗಳನ್ನು ಬಿಟ್ಟರೆ ಬೇರೇನೂ ಮಾತನಾಡಬಾರದು. ಒಂದುವೇಳೆ ಜ್ಞಾನದ ಮಾತನ್ನು ಬಿಟ್ಟು ಅನ್ಯ ಮಾತುಗಳನ್ನು ಮಾತನಾಡುತ್ತಾರೆಂದರೆ ತಿಳಿದುಕೊಳ್ಳಿ, ಅವು ಕೆಟ್ಟ ಮಾತುಗಳಾಗಿವೆ. ಅದರಲ್ಲಿ ಯಾವುದೇ ಸಾರವಿಲ್ಲ, ನಮ್ಮ ಬಳಿ ಇಂತಹ ಅನೇಕ ಮಕ್ಕಳಿದ್ದಾರೆ ಯಾರಿಗೆ ಕೇಳಲು ಬಹಳ ಆಸಕ್ತಿಯಿರುತ್ತದೆ. ತಂದೆಯು ತಿಳಿಸುತ್ತಾರೆ – ಕೆಟ್ಟ ಮಾತುಗಳನ್ನು ಎಂದೂ ಕೇಳಬಾರದು, ಕಲ್ಯಾಣದ ಮಾತುಗಳನ್ನೇ ಕೇಳಿರಿ. ಇಲ್ಲದಿದ್ದರೆ ತಮ್ಮದೇ ಸತ್ಯನಾಶ ಮಾಡಿಕೊಳ್ಳುತ್ತೀರಿ. ತಂದೆಯು ಬಂದು ನಿಮಗೆ ಜ್ಞಾನವನ್ನು ತಿಳಿಸುತ್ತಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಹೇಳುತ್ತಾರೆ- ಮಕ್ಕಳೇ, ಮತ್ತ್ಯಾವುದೇ ಮಾತುಗಳನ್ನು ಆಡಬೇಡಿ, ಇದರಲ್ಲಿ ಬಹಳ ಸಮಯವನ್ನು ವ್ಯರ್ಥ ಮಾಡುತ್ತೀರಿ. ಇವರು ಹೀಗಿದ್ದಾರೆ, ಅವರು ಹೀಗೆ ಮಾಡುತ್ತಾರೆ….. ಇದಕ್ಕೆ ಕೆಟ್ಟ ಮಾತುಗಳೆಂದು ಹೇಳಲಾಗುತ್ತದೆ. ಪ್ರಪಂಚದ ಮಾತೇ ಬೇರೆಯಾಗಿದೆ. ನಿಮ್ಮ ಒಂದೊಂದು ಸೆಕೆಂಡಿನ ಸಮಯವು ಬಹಳ ಅತ್ಯಮೂಲ್ಯವಾಗಿದೆ, ನೀವು ಎಂದೂ ಇಂತಹ ಮಾತುಗಳನ್ನು ಕೇಳಲೂಬೇಡಿ, ಮಾತನಾಡಲೂ ಬೇಡಿ. ಇದಕ್ಕಿಂತಲೂ ನೀವು ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ನಿಮಗೆ ಬಹಳ ಸಂಪಾದನೆ ಆಗುವುದು. ಎಲ್ಲಿಯಾದರೂ ಹೋಗಿ ತಂದೆಯ ಪರಿಚಯ ನೀಡಿರಿ. ಇದೇ ಆತ್ಮಿಕ ಸೇವೆಯನ್ನು ಮಾಡುತ್ತಾ ಇರಿ.

ಸತ್ಯ-ಸತ್ಯ ಮಹಾವೀರರು ನೀವಾಗಿದ್ದೀರಿ. ಕೇವಲ ಇಡೀ ದಿನ ಇದೇ ಚಿಂತೆಯಿರಲಿ – ಯಾರಿಗಾದರೂ ಮಾರ್ಗ ತಿಳಿಸೋಣ. ತಂದೆಯು ಹೇಳುತ್ತಾರೆ – ತಂದೆಯಾದ ನನ್ನನ್ನು ನೆನಪು ಮಾಡಿದರೆ ಆಸ್ತಿ ಸಿಗುವುದು. ಎಷ್ಟು ಸಹಜವಾಗಿದೆ! ಹೀಗೀಗೆ ಹೋಗಿ ಸರ್ವೀಸ್ ಮಾಡಬೇಕು. ಮಕ್ಕಳು ಸರ್ವೀಸಿನ ಮೇಲೆ ಬಹಳ ಗಮನ ಕೊಡಬೇಕು. ತನ್ನ ಮತ್ತು ಅನ್ಯರ ಕಲ್ಯಾಣ ಮಾಡಬೇಕು. ತಂದೆಯೂ ಸಹ ನೀವು ಮಕ್ಕಳಿಗೆ ತಿಳಿಸುವುದಕ್ಕಾಗಿಯೇ ಬಂದಿದ್ದಾರಲ್ಲವೆ. ನೀವು ಮಕ್ಕಳೂ ಸಹ ಓದಲು ಮತ್ತು ಓದಿಸಲು ಬಂದಿದ್ದೀರಿ. ಸಮಯ ವ್ಯರ್ಥ ಮಾಡಲು ಅಥವಾ ಕೇವಲ ಅಡಿಗೆ ಮಾಡಲು ನೀವು ಬಂದಿಲ್ಲ. ಇಡೀ ದಿನ ಸರ್ವೀಸಿನಲ್ಲಿ ಬುದ್ಧಿಯನ್ನು ಓಡಿಸಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾವ ಮಾತುಗಳು ತಮ್ಮ ಕೆಲಸಕ್ಕೆ ಬರುವುದಿಲ್ಲವೋ ಅವನ್ನು ಕೇಳುವ ಮತ್ತು ಮಾತನಾಡುವುದರಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಎಷ್ಟು ಸಾಧ್ಯವೋ ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ.

2. ಸದಾ ಖುಷಿ ಮತ್ತು ಉಮ್ಮಂಗದಲ್ಲಿರಿ – ನಮಗೆ ಓದಿಸುವವರು ಯಾರು!! ಪುರುಷಾರ್ಥವನ್ನೆಂದೂ ಬಿಡಬಾರದು. ಬಾಯಿಂದ ಜ್ಞಾನ ರತ್ನಗಳೇ ಹೊರ ಬರುತ್ತಿರಲಿ.

ವರದಾನ:-

1. ಸದಾ ತಮ್ಮ ಸತೋಪ್ರಧಾನ ಸಂಸ್ಕಾರಗಳಲ್ಲಿ ಸ್ಥಿತರಾಗಿದ್ದು ಸುಖ-ಶಾಂತಿಯ ಅನುಭೂತಿ ಮಾಡುವುದೇ ಸತ್ಯ ಅಹಿಂಸೆಯಾಗಿದೆ. ಹಿಂಸೆ ಎಂದರೆ ಯಾವುದರಿಂದ ದುಃಖ-ಅಶಾಂತಿಯ ಪ್ರಾಪ್ತಿಯಾಗುವುದು. ಹಾಗಾದರೆ ಇಡೀ ದಿನದಲ್ಲಿ ಯಾವುದೇ ಪ್ರಕಾರದ ಹಿಂಸೆಯನ್ನಂತು ಮಾಡುತ್ತಿಲ್ಲವೇ! ಇದನ್ನು ಪರಿಶೀಲನೆ ಮಾಡಿರಿ. ಒಂದುವೇಳೆ ಯಾವುದಾದರೂ ಶಬ್ಧದ ಮೂಲಕ ಯಾರದೇ ಸ್ಥಿತಿಯನ್ನು ಏರುಪೇರು ಮಾಡಿ ಬಿಡುತ್ತೀರೆಂದರೂ ಸಹ ಹಿಂಸೆಯನ್ನು ಕೊಟ್ಟಂತೆ. 2. ಒಂದುವೇಳೆ ತಮ್ಮ ಸತೋಪ್ರಧಾನ ಸಂಸ್ಕಾರಗಳನ್ನು ಒತ್ತಿಡುತ್ತಾ ಅನ್ಯ ಸಂಸ್ಕಾರಗಳನ್ನು ಪ್ರತ್ಯಕ್ಷದಲ್ಲಿ ತರುತ್ತೀರೆಂದರೆ – ಇದೂ ಸಹ ಹಿಂಸೆಯಾಯಿತು. ಆದ್ದರಿಂದ ಸೂಕ್ಷ್ಮತೆಯಲ್ಲಿ ಹೋಗುತ್ತಾ ಮಹಾನ್ ಆತ್ಮನ ಸ್ಮೃತಿಯಿಂದ ಡಬಲ್ ಅಹಿಂಸಕರಾಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top