21 March 2022 KANNADA Murli Today | Brahma Kumaris

Read and Listen today’s Gyan Murli in Kannada

March 20, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿಮ್ಮ ಬಳಿ ಇರುವುದನ್ನೆಲ್ಲಾ ಈಶ್ವರೀಯ ಸೇವೆಯಲ್ಲಿ ತೊಡಗಿಸಿ ಸಫಲ ಮಾಡಿಕೊಳ್ಳಿ. ಕಾಲೇಜು ಅಥವಾ ಆಸ್ಪತ್ರೆಯನ್ನು ತೆರೆಯುತ್ತಾ ಹೋಗಿ”

ಪ್ರಶ್ನೆ:: -

ಮಕ್ಕಳಿಗೆ ಶಿವ ತಂದೆಯಿಂದ ಯಾವ ಒಂದು ಸಂಬಂಧ ಬಹಳ ರಮಣೀಕ ಹಾಗೂ ರಹಸ್ಯವಾಗಿದೆ?

ಉತ್ತರ:-

ಶಿವ ತಂದೆ ನಮ್ಮ ತಂದೆಯೂ ಆಗಿದ್ದಾರೆ ಹಾಗೂ ಮಗನೂ ಸಹ ಆಗಿದ್ದಾರೆ. ಆದರೆ ತಂದೆಯು ಮಗ ಹೇಗೆ ಆಗುತ್ತಾರೆ, ಆದರೆ ಇದು ಹೇಗೆ? ಇದು ಬಹಳ ರಮಣೀಕ ಹಾಗು ರಹಸ್ಯವಾದ ಮಾತಾಗಿದೆ. ನೀವು ಅವರನ್ನು ಬಾಲಕನೆಂದು ತಿಳಿದುಕೊಂಡಿದ್ದೀರಿ. ಏಕೆಂದರೆ ನೀವು ಅವರಿಗೆ ಸಂಪೂರ್ಣ ಬಲಿಹಾರಿ ಆಗುತ್ತೀರಿ. ತಂದೆಯಿಂದ ಎಲ್ಲಾ ಆಸ್ತಿಯನ್ನು ಮೊದಲು ನೀವು ತೆಗೆದುಕೊಳ್ಳುತ್ತೀರಿ. ಯಾರು ಶಿವಬಾಬಾರನ್ನು ತನ್ನ ವಾರಿಸ್ ಮಾಡಿಕೊಳ್ಳುತ್ತಾರೆ, ಅವರೇ ಇಪ್ಪತ್ತೊಂದು ಜನ್ಮಗಳಿಗೆ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಈ ಮಗು (ಶಿವ ಬಾಬಾ) ಹೇಳುತ್ತಾರೆ – ನನಗೆ ನಿಮ್ಮ ಹಣ ಬೇಡ. ನೀವು ಕೇವಲ ಶ್ರೀಮತದಂತೆ ನಡೆಯಬೇಕು, ಆಗ ನಿಮಗೆ ರಾಜ್ಯ ಭಾಗ್ಯ ಸಿಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಮಾತೇ ಓ ಮಾತೇ….

ಓಂ ಶಾಂತಿ. ಓಂ ಶಾಂತಿಯೆಂದು ಯಾರು ಹೇಳಿದರು? ಶರೀರವೇ ಅಥವಾ ಆತ್ಮವೇ? ಇದನ್ನು ಮಕ್ಕಳು ಚೆನ್ನಾಗಿ ತಿಳಿದುಕೊಳ್ಳಬೇಕು. ಒಂದಾಗಿದೆ ಆತ್ಮ, ಇನ್ನೊಂದಾಗಿದೆ ಶರೀರ. ಆತ್ಮವಂತು ಅವಿನಾಶಿಯಾಗಿದೆ. ನಾನು ಬಿಂದು ಸ್ವರೂಪವಾಗಿದ್ದೇನೆಂದು ಸ್ವಯಂ ಆತ್ಮವೇ ತನ್ನ ಪರಿಚಯ ಕೊಡುತ್ತದೆ. ಪರಮಾತ್ಮ ಯಾರೆಂದು ಸ್ವಯಂ ತಂದೆಯೇ ಪರಿಚಯ ಕೊಡುತ್ತಾರೆ. ಏಕೆಂದರೆ ಅವರು ಎಲ್ಲರ ತಂದೆಯಾಗಿದ್ದಾರೆ. ಎಲ್ಲರು ಹೇಳುತ್ತಾರೆ-ಪರಂಪಿತ ಪರಮಾತ್ಮ. ಹೇ ಭಗವಂತ, ಇದೆಲ್ಲವೂ ಅಂಧಶ್ರದ್ಧೆಯ ಮಾತಲ್ಲ, ತಿಳಿದುಕೊಳ್ಳುವ ಮಾತಾಗಿದೆ. ಅನ್ಯರು ಏನು ತಿಳಿಸುತ್ತಾರೆ ಅದೆಲ್ಲವೂ ಸತ್ಯವಲ್ಲ, ಮನುಷ್ಯರು ಪರಮಾತ್ಮನ ಬಗ್ಗೆ ಏನೆಲ್ಲ ಹೇಳುತ್ತಾರೆ – ಅದೆಲ್ಲವೂ ಅಸತ್ಯವಾಗಿದೆ. ಒಬ್ಬ ಈಶ್ವರನೇ ಸತ್ಯವಾಗಿದ್ದಾರೆ. ಅವರು ಸತ್ಯವನ್ನು ಹೇಳುತ್ತಾರೆ. ಅನ್ಯ ಮನುಷ್ಯರೆಲ್ಲರು ಈಶ್ವರನ ಬಗ್ಗೆ ಸುಳ್ಳು ಹೇಳುತ್ತಾರೆ. ಆದ್ದರಿಂದ ತಂದೆಗೆ ಸತ್ಯ ಎಂದು ಹೇಳಲಾಗುತ್ತದೆ, ಅವರೆ ಸತ್ಯ ಖಂಡವನ್ನು ಸ್ಥಾಪನೆ ಮಾಡುತ್ತಾರೆ. ಭಾರತವೇ ಸತ್ಯ ಖಂಡವಾಗಿತ್ತು. ಆ ಸಮಯದಲ್ಲಿ ಭಾರತದ ಹೊರತು ಅನ್ಯ ಯಾವುದೇ ಖಂಡವಿರಲ್ಲಿಲ್ಲ. ಇದೆಲ್ಲವನ್ನು ಕೇವಲ ಸತ್ಯ ತಂದೆಯಷ್ಟೆ ತಿಳಿಸಿಕೊಡಲು ಸಾಧ್ಯ. ನಮಗೆ ಈಶ್ವರ, ರಚಯಿತ ಹಾಗು ರಚನೆಯು ತಿಳಿದಿಲ್ಲವೆಂದು ಋಷಿ ಮುನಿಗಳು ಹೇಳುತ್ತಲೇ ಬಂದಿದ್ದಾರೆ ಹಾಗು ನೇತಿ-ನೇತಿ ಎಂದು ಹೇಳಿ ಬಿಡುತ್ತಾರೆ. ಯಾರೂ ಸಹ ತಂದೆಯ ಪರಿಚಯವನ್ನು ಕೊಡಲು ಸಾಧ್ಯವಾಗಲೇ ಇಲ್ಲ. ತಂದೆಯ ಪರಿಚಯ ತಂದೆಯೇ ಕೊಡುತ್ತಾರೆ. ನಾನು ನಿಮ್ಮ ತಂದೆಯಾಗಿದ್ದೇನೆ. ನಾನೇ ಬಂದು ಹೊಸ ಪ್ರಪಂಚದ ಸ್ಥಾಪನೆಯನ್ನು ಮಾಡಿ, ಶಂಕರನ ಮುಖಾಂತರ ಹಳೆಯ ಪ್ರಪಂಚವನ್ನು ವಿನಾಶ ಮಾಡಿಸುತ್ತೇನೆ, ಬ್ರಹ್ಮಾರವರ ಮೂಲಕ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತೇನೆ. ತಂದೆ ಹೇಳುತ್ತಾರೆ ನಾನೇ ನಿಮಗೆ ನನ್ನ ಸತ್ಯ ಪರಿಚಯವನ್ನು ಕೊಡುತ್ತೇನೆ, ಅನ್ಯರು ನನ್ನ ಬಗ್ಗೆ ನಿಮಗೆ ಅಸತ್ಯವನ್ನು ತಿಳಿಸಿಕೊಡುತ್ತಾರೆ. ಸತ್ಯಯುಗದಲ್ಲಿ ಯಾರೆಲ್ಲ ಬಂದಿದ್ದರು ಅವರನ್ನು ಯಾರೂ ಸಹ ತಿಳಿದು ಕೊಂಡಿಲ್ಲ. ಸತ್ಯಯುಗದ ಲಕ್ಷ್ಮೀ-ನಾರಾಯಣರು ಶ್ರೇಷ್ಠರಲ್ಲಿ ಶ್ರೇಷ್ಠರಾಗಿದ್ದರು. ಅವರೇ ಈ ಶ್ರೇಷ್ಠಾತಿ ಶ್ರೇಷ್ಠ ಹೊಸ ಪ್ರಪಂಚದ ಮಾಲೀಕರಾಗಿದ್ದರು. ಆದರೆ ಈ ಶ್ರೇಷ್ಠ ಪ್ರಪಂಚವನ್ನು ಯಾರು ಮಾಡಿದರು ಹಾಗೂ ಇದರ ಮಾಲೀಕರನ್ನು ಯಾರು ಮಾಡಿದರು ಎಂದು ಯಾರೂ ಸಹ ತಿಳಿದುಕೊಂಡಿಲ್ಲ. ಯಾರು ಸ್ವರ್ಗದ ರಾಜ್ಯಭಾಗ್ಯದ ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರ ಬುದ್ಧಿಯಲ್ಲಿಯಷ್ಟೆ ಈ ಮಾತುಗಳು ಕುಳಿತುಕೊಳ್ಳಲು ಸಾಧ್ಯ ಎಂದು ತಂದೆ ತಿಳಿಸಿ ಕೊಡುತ್ತಾರೆ. ನೀವು ತಾಯಿ ತಂದೆ ನಾವು ಮಕ್ಕಳು, ನಿಮ್ಮ ಕೃಪೆಯಿಂದ ಆಪಾರವಾದ ಸುಖ ಪ್ರಾಪ್ತಿ ಆಗುವುದೆಂಬ ಮಹಿಮೆಯನ್ನು ಮಾಡುತ್ತಾರೆ. ಯಾರನ್ನು ಕುರಿತು ಈ ಮಹಿಮೆಯನ್ನು ಮಾಡುತ್ತಾರೆ? ಲೌಕಿಕ ತಾಯಿ ತಂದೆಯನ್ನೋ ಅಥವಾ ಪಾರಲೌಕಿಕ ತಂದೆ ತಾಯಿಯನ್ನೋ? ಲೌಕಿಕ ತಂದೆ ತಾಯಿಯನ್ನು ಹೀಗೆ ಮಹಿಮೆ ಮಾಡುವುದಿಲ್ಲ ಹಾಗು ಸತ್ಯಯುಗದಲ್ಲಿ ಈ ರೀತಿ ಮಹಿಮೆ ಮಾಡುವುದಿಲ್ಲ. ನೀವು ಆ ತಂದೆ ತಾಯಿಯಿಂದ ಇಪ್ಪತ್ತೊಂದು ಜನ್ಮಗಳಿಗೆ ಅಪಾರವಾದ ಸುಖದ ಆಸ್ತಿಯನ್ನು ಪಡೆಯಲು ಹಾಗು ರಾಜ್ಯ ಭಾಗ್ಯದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ಭಗವಂತ ರಚಯಿತನೊಂದಿಗೆ ತಾಯಿಯೂ ಸಹ ಇರಬೇಕಲ್ಲವೇ. ನಾವು ತಾಯಿ ತಂದೆಯ ಬಳಿ ಬಂದಿದ್ದೇವೆಂದು ನೀವು ಮಹಿಮೆ ಮಾಡುತ್ತೀರಿ. ಇಲ್ಲಿ ಯಾವ ಗುರು ಗೋಸಾಯಿ ಇಲ್ಲ. ನೀವು ನನ್ನಿಂದ ಪುನಃ ಸ್ವರ್ಗದ ಆಸ್ತಿಯನ್ನು ಪಡೆಯುತ್ತಿದ್ದೀರೆಂದು ತಂದೆ ತಿಳಿಸುತ್ತಾರೆ. ಸತ್ಯ ಯುಗದಲ್ಲಿ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಿದ್ದರು. ಶ್ರೀಕೃಷ್ಣನನ್ನು ಎಲ್ಲರೂ ಪ್ರೀತಿ ಮಾಡುತ್ತಾರೆ, ರಾಧೆಯನ್ನು ಏಕೆ ಪ್ರೀತಿ ಮಾಡುವುದಿಲ್ಲ. ಲಕ್ಷ್ಮೀ ನಾರಾಯಣರು ಬಾಲ್ಯದಲ್ಲಿ ಯಾರಾಗಿದ್ದರು? ಇದನ್ನು ಯಾರೂ ತಿಳಿದು ಕೂಂಡಿಲ್ಲ. ಇವರು ದ್ವಾಪರ ಯುಗದಲ್ಲಿ ಇರಬಹುದೆಂದು ತಿಳಿದುಕೊಳ್ಳುತ್ತಾರೆ. ಮಾಯಾ ರಾವಣನು ಸಂಪೂರ್ಣವಾಗಿ ತುಚ್ಛ ಬುದ್ಧಿಯವರಾಗಿ ಮಾಡಿದ್ದಾನೆ. ನೀವು ಸಹ ಮೊದಲು ಕಲ್ಲು ಬುದ್ಧಿಯರಗಿದ್ದೀರಿ, ಈಗ ತಂದೆಯು ಪಾರಸ ಬುದ್ದಿಯವರನ್ನಾಗಿ ಮಾಡುತ್ತಿದ್ದಾರೆ. ಪಾರಸ ಬುದ್ದಿಯವರನ್ನಾಗಿ ಮಾಡುವವರು ಒಬ್ಬ ತಂದೆಯಾಗಿದ್ದಾರೆ. ಸ್ವರ್ಗದಲ್ಲಿ ಚಿನ್ನದ ಅರಮನೆಯಿರುತ್ತದೆ. ಈ ಕಲಿಯುಗದಲ್ಲಿ ಚಿನ್ನವೇನು, ತಾಮ್ರವು ಸಹ ಸಿಗುವುದಿಲ್ಲ. ತಾಮ್ರದ ನಾಣ್ಯವನ್ನು ಸಹ ಮಾಡುವುದಿಲ್ಲ. ಅಲ್ಲಿಯಂತು ತಾಮ್ರದ ಯಾವುದೇ ವಸ್ತುಗಳು ಇರುವುದಿಲ್ಲ. ಕೆಲವರ ಹಣ ಮಣ್ಣಿನಲ್ಲಿ ಪಾಲಾಯಿತು, ಕೆಲವರ ಹಣ ಸರ್ಕಾರದ ಪಾಲಾಯಿತು, ಎಂದು ಹಾಡುತ್ತಾರೆ. ಇದಂತು ಆಗಲೇ ಬೇಕಾಗಿದೆ. ಕಲ್ಪದ ಹಿಂದೆ ಈ ಪ್ರಪಂಚಕ್ಕೆ ಬೆಂಕಿ ಬಿದ್ದಿತ್ತು ಹಾಗು ವಿನಾಶವಾಗಿತ್ತು, ಹಾಗೆಯೇ ಈಗಲೂ ಸಹ ಆಗುತ್ತದೆ. ಖಂಡಿತವಾಗಿ ಐದು ಸಾವಿರ ವರ್ಷಗಳ ಹಿಂದಿನಂತೆ ಈಗಲೂ ಸಹ ದೈವೀ ರಾಜ್ಯ ಸ್ಥಾಪನೆ ಯಾಗುತ್ತಿದೆ. ನೀವು ಮಕ್ಕಳಿಗೆ ರಾಜ್ಯವನ್ನು ಕೊಡುತ್ತೇನೆ. ಅದಕ್ಕಾಗಿ ಎಷ್ಟು ಬೇಕಾದರು ಓದ ಬಹುದು. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರು, ರಾಜ ರಾಣಿ ಹಾಗು ಪ್ರಜೆಗಳು ಎಲ್ಲಿಂದ ಬಂದರು ಎಂದು ವಿಚಾರ ಮಾಡಬೇಕು. ಅವರು ರಾಜ್ಯವನ್ನು ಎಲ್ಲಿಂದ ಪಡೆದರು? ಕೆಲವರು ಮಾತ್ರ ಪಡೆದರೋ ಅಥವಾ ಸೂರ್ಯವಂಶದವರಿಂದ ಚಂದ್ರವಂಶದವರು ಪಡೆದರೋ…. ಚಂದ್ರವಂಶದವರಿಂದ ಮತ್ತೆ ವಿಕಾರಿ ರಾಜರು ತೆಗೆದುಕೊಳ್ಳುತ್ತಾರೆ, ಮತ್ತೆ ರಾಜರಿಂದ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡರು. ಈಗ ಯಾರೂ ರಾಜರೇ ಇಲ್ಲ. ಲಕ್ಷ್ಮೀ – ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು ಅಲ್ಲವೆ – ಎಂಟು ಪೀಳಿಗೆಗಳು ನಡೆದವು. ತ್ರೇತಾದಲ್ಲಿ ಸೀತಾ-ರಾಮರ ರಾಜ್ಯ ಇತ್ತು. ಆಮೇಲೆ ಮಾಯೆಯ ರಾಜ್ಯ ಪ್ರಾರಂಭವಾಯಿತು. ವಿಕಾರಿ ರಾಜರು ನಿರ್ವಿಕಾರಿ ರಾಜರ ಮಂದಿರಗಳನ್ನು ಮಾಡಿ ಪೂಜೆ ಮಾಡ ತೊಡಗಿದರು. ಯಾರು ಪೂಜ್ಯರಾಗಿದ್ದರು, ಅವರೇ ಪೂಜಾರಿಗಳಾದರು. ಈಗಂತು ವಿಕಾರಿ ರಾಜರೂ ಸಹ ಇಲ್ಲ. ಈಗ ಮತ್ತೆ ಹೊಸ ಪ್ರಪಂಚದ ಚರಿತ್ರೆ ರಿಪೀಟ್ ಆಗುತ್ತದೆ. ಹೊಸ ಪ್ರಪಂಚಕ್ಕೆ ಹೋಗಲು ತಂದೆ ನಿಮಗೆ ರಾಜ ಯೋಗವನ್ನು ಕಲಿಸಿದ್ದರು. ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ಯಾರು ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ, ಅವರೇ ಕಲ್ಪ-ಕಲ್ಪ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇದು ಗೀತಾ ಪಾಠ ಶಾಲೆಯಾಗಿದೆ. ವಾಸ್ತವದಲ್ಲಿ ಇದನ್ನು ಈಶ್ವರೀಯ ವಿಶ್ವ ವಿದ್ಯಾಲವೆಂದು ಹೇಳಬೇಕು ಏಕೆಂದರೆ ಇದರಿಂದಲೇ ಭಾರತ ಸ್ವರ್ಗವಾಗುತ್ತದೆ. ಆದರೆ ಎಲ್ಲರೂ ಈ ಮಾತನ್ನು ತಿಳಿದುಕೊಳ್ಳುವುದಿಲ್ಲ. ಆದರೆ ಸ್ವಲ್ಪ ತಡೆಯಾಗುತ್ತದೆ. ಮುಂದೆ ಹೋದಾಗ ಪ್ರಭಾವವಿರುತ್ತದೆ. ಇದೆಲ್ಲವನ್ನು ಕೇವಲ ಶಿವಬಾಬಾರವರೇ ತಿಳಿಸಿಕೊಡುತ್ತಾರೆ. ಶಿವ ತಂದೆ ಎಂದು ಹೇಳುವುದೋ ಅಥವಾ ಶಿವ ಬಾಲಕ ಎಂದು ಹೇಳುವುದೋ? ಶಿವ ತಂದೆಯೂ ಆಗಿದ್ದಾರೆ ಹಾಗು ತಾಯಿಯೂ ಆಗಿದ್ದಾರೆ, ಶಿವ ಭಗವಂತ ತಾಯಿಯಾಗಿರದಿದ್ದರೆ ನೀವು ಹೀಗೇಕೆ ಕೂಗುತ್ತಿದ್ದಿರಿ -ನೀವು ಮಾತ-ಪಿತಾ ನಾವು ನಿಮ್ಮ ಬಾಲಕರು. ಇಲ್ಲಿ ಬುದ್ದಿ ಕೆಲಸ ಮಾಡಬೇಕಾತ್ತದೆ. ಶಿವ ತಂದೆಯೂ ಹೌದು, ತಾಯಿಯೂ ಹೌದು. ಈಗ ಹೇಳಿ ಶಿವನಿಗೆ ತಾಯಿ ಇದ್ದಾರೆಯೇ? ಶಿವ ನಿಮ್ಮ ಮಗುವಾಗಿದ್ದಾರೆಯೇ? ಯಾರು ಶಿವನನ್ನು ನಿಮ್ಮ ತಂದೆ ಮತ್ತು ಮಗು ಎಂದು ತಿಳಿದುಕೊಂಡಿದ್ದೀರೋ ಅವರು ಕೈ ಎತ್ತಿ! ಇದು ಬಹಳ ರಮಣೀಕ ಹಾಗು ಗುಹ್ಯ ಮಾತಾಗಿದೆ. ತಂದೆಯೇ, ತಂದೆ ಹಾಗು ಮಗು ಹೇಗೆ ಆಗಲು ಸಾಧ್ಯ. ವಾಸ್ತವದಲ್ಲಿ ಕೃಷ್ಣ ಗೀತೆಯನ್ನು ನುಡಿಸಲಿಲ್ಲ. ಅವನು ತಂದೆ ತಾಯಿಗೆ ಒಬ್ಬನೇ ಮಗು ಆಗಿದ್ದ. ಸತ್ಯಯುಗದಲ್ಲಿ ಮಡಿಕೆ ಹೊಡೆಯುವ ಮಾತೇ ಇಲ್ಲ. ಗೀತೆಯನ್ನು ನುಡಿಸಿದವರು ಶಿವ. ಅವರನ್ನು ಬಾಲಕ ಎಂದು ಸಹ ಹೇಳುತ್ತಾರೆ, ಏಕೆಂದರೆ ಯಾರು ಅವರಿಗೆ ಬಲಿಹಾರಿಯಾಗುತ್ತಾರೆ. ಪೂರ್ತಿ ಆಸ್ತಿ ಅವರಿಗೆ ಕೊಡುತ್ತಾರೆ. ಶಿವಬಾಬಾ ನೀವು ಬಂದರೆ ನಾವು ಬಲಿಹಾರಿಗಳಾಗುತ್ತೇವೆಂದು ಹಾಡುತ್ತೇವೆ. ಈಗ ತಂದೆ ಹೇಳುತ್ತಾರೆ – ನನ್ನನ್ನು ವಾರಿಸುದಾರನನ್ನಾಗಿ ಮಾಡಿಕೊಂಡರೆ, ನಾನು ನಿಮ್ಮನ್ನು ಇಪ್ಪತ್ತೊಂದು ಜನ್ಮಗಳಿಗೆ ವಾರಸುದಾರನನ್ನಾಗಿ ಮಾಡುತ್ತೇನೆ. ಲೌಕಿಕ ಮಗು ನಿಮ್ಮಿಂದ ತೆಗೆದುಕೊಳ್ಳುತ್ತಾನೆಯೇ ವಿನಃ ನಿಮಗೆ ಏನನ್ನು ಕೊಡುವುದಿಲ್ಲ. ಆದರೆ ಇವರು ನೋಡಿ ಎಷ್ಟು ಕೊಡುತ್ತಾರೆ. ನೀವು ನಿಮ್ಮ ಮಕ್ಕಳನ್ನು ಪಾಲನೆ ಮಾಡಿ, ಆದರೆ ಶ್ರೀಮತದನುಸಾರವಾಗಿ ನಡೆಯಿರಿ. ಯೋಗದಿಂದ ಇಪ್ಪತ್ತೊಂದು ಜನ್ಮಗಳಿಗೆ ಅರೋಗ್ಯ, ಓದಿನಿಂದ ರಾಜ್ಯ ಭಾಗ್ಯ ಸಿಗುತ್ತದೆ. ಈ ರೀತಿಯ ಕಾಲೇಜು ಹಾಗೂ ಆಸ್ಪತ್ರೆಗಳನ್ನು ತೆರೆಯಿರಿ. ಶಿವಬಾಬಾರವರಂತು ದಾತ ಆಗಿದ್ದಾರೆ. ನಾನು ನಿಮ್ಮದನ್ನು ತೆಗೆದುಕೊಂಡು ಏನು ಮಾಡಲಿ! ಆದರೆ, ಯುಕ್ತಿಯನ್ನು ತಿಳಿಸಿಕೊಡುತ್ತಾರೆ, ತಮ್ಮದನ್ನು ಈಶ್ವರನ ಸೇವೆಯಲ್ಲಿ ತೊಡಗಿಸಿ. ಶ್ರೀಮತದಂತೆ ನಡೆಯಿರಿ. ಶ್ರೀಕೃಷ್ಣನಿಗೆ ಅರ್ಪಣೆ ಮಾಡುತ್ತಾರೆ, ಅವನು ರಾಜಕುಮಾರನಾಗಿದ್ದ, ಅವನಿಗೆ ಇದರ ಅವಶ್ಯಕತೆ ಇದೆಯೇ. ಶಿವ ತಂದೆ ನಿಮಗೆ ಇದರ ಬದಲು ಸ್ವರ್ಗ ಕೊಡುತ್ತಾರೆ. ಭಗವಂತ ಭಕ್ತಿಯ ಫಲ ಕೊಡುತ್ತಾರೆ. ಅವರು ದುಃಖಹರ್ತಾ ಹಾಗು ಸುಖಕರ್ತಾ ಆಗಿದ್ದಾರೆ. ನಮಗೆ ಸದ್ಗತಿಯನ್ನು ಯಾರೂ ಸಹ ಕೊಡಲು ಸಾಧ್ಯವಿಲ್ಲ. ತಂದೆ ಹೇಳುತ್ತಾರೆ – ನಾನು ನೀವು ಮಕ್ಕಳಿಗೆ ಸದ್ಗತಿಯನ್ನು ಕೊಡುತ್ತೇನೆ. ಒಳ್ಳೆಯದು. ಆದರೆ ನಿಮಗೆ ದುರ್ಗತಿಯನ್ನು ಯಾರು ಮಾಡುತ್ತಾರೆ? ರಾವಣನ ಪ್ರವೇಶದ ಕಾರಣ ನಮಗೆ ದುರ್ಗತಿಯಾಗುತ್ತಿದೆ. ರಾವಣನ ಮತದಲ್ಲಿ ಎಲ್ಲರೂ ನಿಮಗೆ ದುರ್ಗತಿಯನ್ನೇ ಮಾಡುತ್ತಾ ಬಂದಿದ್ದಾರೆ. ರಾವಣನ ಮತದಲ್ಲಿ ಒಮ್ಮೆಯೇ ಭ್ರಷ್ಟಾರನ್ನಾಗಿ ಮಾಡಿ ಬಿಟ್ಟಿದ್ದಾನೆ. ಈಗ ನಾನು ನಿಮ್ಮನ್ನು ಶ್ರೇಷ್ಠಾಚಾರಿಗಳನ್ನಾಗಿ ಮಾಡಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆಂದು ತಂದೆ ತಿಳಿಸಿಕೊಡುತ್ತಾರೆ. ಇಲ್ಲಿ ಏನೆಲ್ಲಾ ನೀವು ಮಾಡುತ್ತೀರಿ, ಅದು ಅಸುರಿ ಮತದಂತೆ ಮಾಡುತ್ತೀರಿ, ಈಗ ನೀವು ದೇವತೆಗಳು ಆಗುವುದರಿಂದ, ಅನ್ಯ ಸಂಗವನ್ನು ಬಿಟ್ಟು ಒಬ್ಬ ತಂದೆಯ ಸಂಗದಲ್ಲಿ ಬರಬೇಕಾಗಿದೆ. ಎಷ್ಟು ತಂದೆಯ ಮತದಲ್ಲಿ ನಡೆಯುತ್ತೀರಿ, ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಓದುವುದಿಲ್ಲವೆಂದರೆ ಪ್ರಜೆಗಳಲ್ಲಿಯೂ ಕಡಿಮೆ ಪದವಿಯನ್ನು ಪಡೆಯುತ್ತೀರಿ. ಒಮ್ಮೆ ಕೇಳಿ, ಧಾರಣೆ ಮಾಡುವುದರಿಂದ ಸ್ವರ್ಗದಲ್ಲಿ ಬರುತ್ತೇವೆ, ಆದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ದಿನ ಪ್ರತಿದಿನ ತೊಂದರೆಗಳು ಬಹಳ ಬರುತ್ತವೆ, ಆಗ ಮನುಷ್ಯರು ಇದು ವಿನಾಶದ ಸಮಯವೆಂದು ತಿಳಿದುಕೊಳ್ಳುತ್ತಾರೆ. ಆದರೆ ಬಹಳ ತಡವಾಗಿ ಬರುವುದರಿಂದ ಶ್ರೇಷ್ಠ ಪದವಿಯನ್ನಂತು ಪಡೆಯಲು ಸಾಧ್ಯವಿಲ್ಲ. ಯೋಗದ ವಿನಃ ವಿಕರ್ಮ ವಿನಾಶವಾಗುವುದಿಲ್ಲ. ಈಗ ಎಲ್ಲರಿಗೂ ಸಹ ಅಂತಿಮ ಸಮಯವಾಗಿದೆ ಆದುದರಿಂದ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗಿದೆ. ಇಲ್ಲಿ ನಿಮ್ಮ ಕರ್ಮ ವಿಕರ್ಮವಾಗುತ್ತಿರುತ್ತದೆ. ಸತ್ಯಯುಗದಲ್ಲಿ ನಿಮ್ಮ ಕರ್ಮ ಅಕರ್ಮವಾಗಿರುತ್ತದೆ. ಕರ್ಮವಂತು ಎಲ್ಲರೂ ಮಾಡಬೇಕಾಗುತ್ತದೆ, ಯಾರೂ ಕರ್ಮ ಮಾಡದೇ ಇರಲು ಸಾಧ್ಯವಿಲ್ಲ. ಆತ್ಮ ಹೇಳುತ್ತದೆ – ನಾನು ಈ ಕರ್ಮವನ್ನು ಮಾಡುತ್ತೇನೆ, ರಾತ್ರಿಯ ವೇಳೆ ಧಣಿಯುವ ಕಾರಣ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಈ ಕರ್ಮೇಂದ್ರಿಯಗಳಿಂದ ಭಿನ್ನವೆಂದು ತಿಳಿದು ನಿದ್ರೆ ಮಾಡುತ್ತೇನೆ, ಇದನ್ನು ನಿದ್ರೆಯೆಂದು ಕರೆಯುತ್ತಾರೆ. ಹೇ ಅತ್ಮ ನಾನು ನಿಮಗೆ ಏನು ಹೇಳುತ್ತೇನೆ, ಅದನ್ನು ಧಾರಣೆ ಮಾಡಿ ಎಂದು ತಂದೆ ಹೇಳುತ್ತಾರೆ. ಗೃಹಸ್ಥ ವ್ಯವಹಾರದಲ್ಲಿ ಇದ್ದು ಈ ವಿದ್ಯೆಯನ್ನು ಓದಬೇಕು. ವಿದ್ಯೆಯಿಂದ ಶ್ರೇಷ್ಠ ಪದವಿ ಸಿಗುತ್ತದೆ. ಪವಿತ್ರರಾಗದೆ ಈ ಜ್ಞಾನ ಧಾರಣೆಯಾಗುವುದಿಲ್ಲ. ಮಾಯೆಯು ಬುದ್ದಿಯನ್ನು ಅಪವಿತ್ರ ಮಾಡುತ್ತದೆ, ಆದುದರಿಂದ ತಂದೆಗೆ ಪತಿತ ಪಾವನನೆಂದು ಕರೆಯುತ್ತಾರೆ. ನೀವು ಮಾತಾ-ಪಿತಾ ನಾವು ನಿಮ್ಮ ಬಾಲಕರೆಂದು ಹಾಡುತ್ತಾರೆ. ಆದರೆ ಈಗ ನೀವು ಆ ತಂದೆಯ ಮುಂದೆ ಕುಳಿತು ಸಹಜ ರಾಜಯೊಗದ ಬಲದಿಂದ ಇಪ್ಪತ್ತೊಂದು ಜನ್ಮಗಳಿಗೆ ನಾವು ಸ್ವರ್ಗದ ಮಾಲೀಕರಾಗುತ್ತೇವೆ. ಅದಕ್ಕಾಗಿ ನೀವು ಬಂದ್ದೀರಿ. ಭಕ್ತಿ ಮಾರ್ಗದಲ್ಲಿ ನೀವು ಬಹಳ ಮಹಿಮೆ ಮಾಡುತ್ತಾ ಹಾಡುತ್ತಿದ್ದವರು ಈಗ ಹಾಡುವುದನ್ನು ನಿಲ್ಲಿಸಿದ್ದೀರಿ. ಸ್ವರ್ಗದಲ್ಲಿ ಈ ರೀತಿ ಯಾರೂ ಸಹ ಮಹಿಮೆ ಮಾಡುವುದಿಲ್ಲ, ನಂತರ ಭಕ್ತಿಮಾರ್ಗದಲ್ಲಿ ಅರಂಭ ಮಾಡುತ್ತಾರೆ. ಮಾಯೆ ಮತ್ತೆ ನಿಮ್ಮನ್ನು ನರಕವಾಸಿಯನ್ನಾಗಿ ಮಾಡುತ್ತದೆ. ಇದು ಆಟವಾಗಿದೆ. ಇದನ್ನು ಅರಿತು ಮರಣದ ಮುನ್ನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ಇಲ್ಲವೆಂದರೆ ರಾಜ್ಯ ಭಾಗ್ಯವನ್ನು ಕಳೆದುಕೊಳ್ಳುತ್ತೀರಿ. ಪತಿತರು ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ಪ್ರಜೆಯಲ್ಲಿ ಬಂದು ಬಿಡುತ್ತಾರೆ. ಅವರಲ್ಲಿಯೂ ನಂಬರ್‍ವಾರ್ ಪದವಿ ಇದೆ.

ತಂದೆ ಹೇಳುತ್ತಾರೆ – ಈ ಮೃತ್ಯು ಲೋಕದಲ್ಲಿ ಇದು ನಿಮ್ಮ ಅಂತ್ಯದ ಜನ್ಮವಾಗಿದೆ. ಈಗ ನನ್ನ ಮತದಲ್ಲಿ ನಡೆದಾಗ ನಿಮ್ಮ ಹಡಗು ಪಾರಾಗಿ ಬಿಡುತ್ತದೆ, ಇದರಲ್ಲಿ ಅಂಧಶ್ರದ್ಧೆಯ ಯಾವ ಮಾತೂ ಇಲ್ಲ. ಓದಿನಲ್ಲಿ ಎಂದೂ ಅಂಧಶ್ರದ್ಧೆ ಇರುವುದಿಲ್ಲ. ಪರಮಾತ್ಮ ಓದಿಸುತ್ತಾರೆ. ಈ ನಿಶ್ಚಯವಿಲ್ಲದೆ ಹೇಗೆ ಓದಲು ಸಾಧ್ಯ? ಓದುತ್ತಾ-ಓದುತ್ತಾ ಮಾಯೆ ಮತ್ತೆ ವಿಘ್ನ ಹಾಕುತ್ತದೆ. ಅಗ ವಿದ್ಯೆಯನ್ನು ಬಿಟ್ಟು ಬಿಡುತ್ತಾರೆ. ಆದುದರಿಂದ ಈ ರೀತಿ ಹೇಳಲಾಗುತ್ತದೆ-ಜ್ಞಾನವನ್ನು ಕೇಳುತ್ತಾರೆ, ಹೇಳುತ್ತಾರೆ ನಂತರ ಓಡಿ ಹೋಗುತ್ತಾರೆ……… ತಂದೆಗೆ ವಿದಾಯ ಹೇಳಿ ಬಿಡುತ್ತಾರೆ. ಆದರೆ ಒಂದುವೇಳೆ ಪ್ರೀತಿ ಇದ್ದರೆ ಮತ್ತೆ ಬಂದು ಮಿಲನ ಮಾಡುತ್ತಾರೆ. ಆದರೆ ಮುಂದೆ ಬಹಳ ಪಶ್ಚಾತಾಪ ಪಡುತ್ತಾರೆ-ತಂದೆಯ ಮಗುವಾಗಿ ಮತ್ತೆ ತಂದೆಯನ್ನೇ ಬಿಟ್ಟು ಬಿಟ್ಟಿದ್ದಾರೆ. ಮಾಯೆಗೆ ಮತ್ತೆ ವಶವಾದಾಗ ಶಿಕ್ಷೆಯನ್ನು ಬಹಳ ಅನುಭವಿಸ ಬೇಕಾಗುತ್ತದೆ ಹಾಗೂ ಪದವಿ ಭ್ರಷ್ಟಾರಾಗಿ ಬಿಡುತ್ತೀರಿ. ಕಲ್ಪ-ಕಲ್ಪಾಂತರಕ್ಕೆ ನಮ್ಮ ರಾಜ್ಯ ಭಾಗ್ಯವನ್ನು ಕಳೆದುಕೊಂಡು ಬಿಡುತ್ತೇವೆ. ಶಿಕ್ಷೆಯನ್ನು ತಿಂದು ಪ್ರಜೆಯಲ್ಲಿ ಬಂದು ಬಿಡುತ್ತೀರಿ ಇದರಿಂದ ಲಾಭವೇನು! ತಂದೆಯ ಸಮ್ಮುಖದಲ್ಲಿ ಬಂದು ಬಹಳ ಕೇಳುತ್ತಾರೆ-ನಂತರ ಘೋರ ಅಂಧಕಾರದಲ್ಲಿ ಬಂದು ಎಲ್ಲವನ್ನೂ ಮರೆತು ಬಿಡುತ್ತಾರೆ. ಮೊದಲ ನಂಬರಿನ ಪಾಪವಾಗಿದೆ ಕಾಮ ವಿಕಾರಕ್ಕೆ ವಶವಾಗುವುದು. ಆದ್ದರಿಂದ ತಂದೆಯೇ ಎಲ್ಲಾ ಪತಿತರನ್ನು ಪಾವನ ಮಾಡುವವರು ಆಗಿದ್ದಾರೆ. ಮಲಿನ ವಸ್ತ್ರಧಾರಿಗಳು ಎಂದೂ ಆಗಬಾರದು ಎಂದು ತಂದೆ ತಿಳಿಸಿಕೊಡುತ್ತಾರೆ. ತಂದೆ ಬಂದು ಎಲ್ಲರ ವಸ್ತ್ರಗಳನ್ನು ಸ್ವಚ್ಚ ಮಾಡುತ್ತಾರೆ ಅರ್ಥಾತ್ ತಂದೆಯೇ ಎಲ್ಲಾ ಪತಿತರನ್ನು ಪಾವನ ಮಾಡುವವರಾಗಿದ್ದಾರೆ. ಸತ್ಯಯುಗದಲ್ಲಿ ಯಾರೂ ಪತಿತರು ಇರುವುದಿಲ್ಲ. ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡು ವಿಶ್ವದ ಮಾಲೀಕರಾಗುತ್ತೇವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈಗ ರಾವಣನ ಮತವನ್ನು ಬಿಟ್ಟು ಶ್ರೀಮತದಂತೆ ನಡೆಯಬೇಕಾಗಿದೆ ಹಾಗೂ ಎಲ್ಲಾ ಸಂಗವನ್ನು ಬಿಟ್ಟು ಒಬ್ಬ ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸಬೇಕು.

2. ನಿಶ್ಚಯಬುದ್ಧಿಯವರಾಗಿ ವಿದ್ಯೆಯನ್ನು ಖಂಡಿತ ಓದಬೇಕು. ಯಾವುದೇ ವಿಘ್ನಗಳಿಗೆ ವಶವಾಗಿ ತಂದೆಯ ಕೈ ಬಿಡಬಾರದು. ಯೋಗದಿಂದ ಆರೋಗ್ಯ ಹಾಗೂ ವಿದ್ಯೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕು.

ವರದಾನ:-

ಹೇಗೆ ಹಂಸವು ಸದಾ ನೀರಿನಲ್ಲಿ ತೇಲಾಡುತ್ತಾ ಇರುತ್ತದೆ, ಹಾಗೂ ಹಾರುವುದೂ ಸಹ ಮಾಡುತ್ತದೆ ಹಾಗೆಯೇ ತಾವು ಸತ್ಯವಾದ ಪವಿತ್ರ ಹಂಸ ಮಕ್ಕಳು ಹಾರುವ ಹಾಗೂ ತೇಲುವುದನ್ನು ತಿಳಿದಿದ್ದೀರಿ. ಜ್ಞಾನದ ಮನನ ಮಾಡುವುದು ಎಂದರೆ ಜ್ಞಾನಾಮೃತ ಅಥವಾ ಜ್ಞಾನ ಜಲದಲ್ಲಿ ತೇಲಾಡುವುದು ಹಾಗೂ ಹಾರುವುದೆಂದರೆ ಶ್ರೇಷ್ಠ ಸ್ಥಿತಿಯಲ್ಲಿರುವುದು. ಈ ರೀತಿ ಜ್ಞಾನದ ಮನನ ಮಾಡುವ ಅಥವಾ ಶ್ರೇಷ್ಠ ಸ್ಥಿತಿಯಲ್ಲಿರುವ ಪವಿತ್ರ ಹಂಸಗಳೆಂದಿಗೂ ಹೃದಯ ವಿಧೀರ್ಣರಾಗಲು ಅಥವಾ ಭರವಸೆಯಿಲ್ಲದೇ ಇರುವವರಾಗಲು ಸಾಧ್ಯವಿಲ್ಲ. ಅವರು ಕಳೆದು ಹೋದದ್ದಕ್ಕೆ ಬಿಂದುವನ್ನಿಡುತ್ತಾ, ಏಕೆ-ಏನು ಎಂಬ ಜಾಲದಿಂದ ಮುಕ್ತರಾಗಿ ಹಾರುತ್ತಾ ಹಾಗೂ ಹಾರಿಸುತ್ತಾ ಇರುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top