21 June 2021 KANNADA Murli Today | Brahma Kumaris

21 June 2021 Read and Listen today’s Gyan Murli in Kannada

June 20, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಪಾವನರಾಗಲು ಒಂದು ಉಪಾಯ ಮಾತ್ರ ಇದೆ - ತಂದೆಯ ನೆನಪು, ನೆನಪಿನ ಪರಿಶ್ರಮವೇ ಅಂತ್ಯದಲ್ಲಿ ಕೆಲಸಕ್ಕೆ ಬರುವುದು”

ಪ್ರಶ್ನೆ:: -

ಸಂಗಮದಲ್ಲಿ ಯಾವ ತಿಲಕವನ್ನು ಇಡುತ್ತೀರೆಂದರೆ ಸ್ವರ್ಗದ ರಾಜ್ಯಭಾಗ್ಯದ ತಿಲಕವು ಪ್ರಾಪ್ತಿಯಾಗುವುದು?

ಉತ್ತರ:-

ಸಂಗಮದಲ್ಲಿ ಇದೇ ತಿಲಕವನ್ನಿಡಿ – ನಾನಾತ್ಮನು ಬಿಂದುವಾಗಿದ್ದೇನೆ, ನಾನು ಶರೀರವಲ್ಲ. ಆಂತರ್ಯದಲ್ಲಿ ಇದೇ ಇರಬೇಕು – ನಾನಾತ್ಮನಾಗಿದ್ದೇನೆ, ನಾವು ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ತಂದೆಯೂ ಬಿಂದುವಾಗಿದ್ದಾರೆ, ನಾವೂ ಬಿಂದುವಾಗಿದ್ದೇವೆ. ಈ ತಿಲಕದಿಂದ ಸ್ವರ್ಗದ ರಾಜ್ಯಭಾಗ್ಯದ ತಿಲಕವು ಪ್ರಾಪ್ತಿಯಾಗುವುದು. ತಂದೆಯು ಹೇಳುತ್ತಾರೆ – ನಾನು ಗ್ಯಾರಂಟಿ ಕೊಡುತ್ತೇನೆ, ನೀವು ನೆನಪು ಮಾಡಿ ಆಗ ಅರ್ಧಕಲ್ಪಕ್ಕಾಗಿ ಅಳುವುದರಿಂದ ಮುಕ್ತರಾಗಿ ಬಿಡುತ್ತೀರಿ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಈ ನಶೆಯಿರಬೇಕು – ನಾನಾತ್ಮ ತಂದೆಯನ್ನು ಅವಶ್ಯವಾಗಿ ನೆನಪು ಮಾಡುತ್ತೇನೆ ಆಗಲೇ ಪಾವನವಾಗಲು ಸಾಧ್ಯ. ಇದೇ ಪರಿಶ್ರಮವಿದೆ ಅದು ಮಕ್ಕಳಬಳಿ ತಲುಪುವುದೇ ಇಲ್ಲ. ಮಾಯೆಯು ಬಹಳ ತೊಂದರೆ ಕೊಡುತ್ತದೆ. ಒಬ್ಬ ತಂದೆಯನ್ನು ಮರೆಸಿ ಬೇರೆಯವರ ನೆನಪೇ ಬರುತ್ತದೆ, ತಂದೆ ಅಥವಾ ಪ್ರಿಯತಮನ ನೆನಪೇ ಮಾಡುವುದಿಲ್ಲ. ಇಂತಹ ಪ್ರಿಯತಮನನ್ನು ಕೊನೆಪಕ್ಷ 8 ಗಂಟೆಯಾದರೂ ನೆನಪು ಮಾಡುವ ಸರ್ವೀಸ್ ಮಾಡಬೇಕು ಅರ್ಥಾತ್ ಪ್ರಿಯತಮನಿಗೆ ನೆನಪು ಮಾಡಿ ಸಹಾಯ ಮಾಡಬೇಕು ಅಥವಾ ಮಕ್ಕಳು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದೇ ಬಹಳ ದೊಡ್ಡ ಪರಿಶ್ರಮವಾಗಿದೆ. ಗೀತೆಯಲ್ಲಿಯೂ ಸಹ ಮನ್ಮನಾಭವ ಇದೆ. ತಂದೆಯನ್ನು ನೆನಪು ಮಾಡುತ್ತಲೇ ಇರಿ, ಕುಳಿತುಕೊಳ್ಳುತ್ತಾ-ನಿಂತುಕೊಳ್ಳುತ್ತಾ, ಓಡಾಡುತ್ತಾ-ತಿರುಗಾಡುತ್ತಾ ಒಬ್ಬ ತಂದೆಯನ್ನೇ ನೆನಪು ಮಾಡಬೇಕು, ಬೇರೆ ಯಾವುದೂ ಇಲ್ಲ. ಅಂತ್ಯದಲ್ಲಿ ಈ ನೆನಪೇ ಕೆಲಸಕ್ಕೆ ಬರುವುದು. ತಮ್ಮನ್ನು ಆತ್ಮ ಅಶರೀರಿ ಎಂದು ತಿಳಿದುಕೊಳ್ಳಿ, ಈಗ ನಾವೆಲ್ಲರೂ ಮನೆಗೆ ಹಿಂತಿರುಗಬೇಕಾಗಿದೆ, ಇದರ ಬಹಳ ಪರಿಶ್ರಮ ಪಡಬೇಕಾಗಿದೆ. ಬೆಳಗ್ಗೆ ಸ್ನಾನ ಇತ್ಯಾದಿಗಳನ್ನು ಮಾಡಿ ನಂತರ ಮೇಲ್ಛಾವಣಿಯಲ್ಲಿ ಅಥವಾ ಕ್ಲಾಸ್ಹಾಲ್ನಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳಿ. ಎಷ್ಟು ಏಕಾಂತದಲ್ಲಿರುತ್ತೀರೋ ಅಷ್ಟು ಚೆನ್ನಾಗಿರುವುದು. ಸದಾ ಇದೇ ವಿಚಾರ ಮಾಡಿ – ನಾವು ತಂದೆಯನ್ನು ನೆನಪು ಮಾಡಬೇಕು, ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಈ ಪರಿಶ್ರಮವನ್ನು ಪ್ರತೀ 5000 ವರ್ಷದ ನಂತರ ಮಾಡಬೇಕಾಗಿದೆ. ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ ಎಲ್ಲಿಯೂ ಸಹ ನೀವು ಪರಿಶ್ರಮ ಪಡಬೇಕಾಗಿಲ್ಲ. ಈ ಸಂಗಮದಲ್ಲಿಯೇ ನನ್ನನ್ನು ನೆನಪು ಮಾಡಿ ಎಂದು ನಿಮಗೆ ತಂದೆಯು ತಿಳಿಸುತ್ತಾರೆ. ಈ ವೇಳೆಯಲ್ಲಿ ನನ್ನನ್ನು ನೆನಪು ಮಾಡಿ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ, ಮತ್ತ್ಯಾವುದೇ ಸಮಯದಲ್ಲಿ ಬರುವುದಿಲ್ಲ. ನೀವೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಮಕ್ಕಳು ತಂದೆಯನ್ನು ಮರೆತು ಬಿಡುತ್ತಾರೆ. ಆದ್ದರಿಂದಲೇ ಬಹಳ ಮೋಸ ಹೋಗುತ್ತಾರೆ, ರಾವಣನು ಬಹಳ ಮೋಸಗಾರನಾಗಿದ್ದಾನೆ. ಇವನು ಅರ್ಧಕಲ್ಪದ ಶತ್ರುವಾಗಿದ್ದಾನೆ. ಆದ್ದರಿಂದ ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡಿ ಚಾರ್ಟ್ ಇಡಿ – ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆನು? ತುಕ್ಕು ಎಷ್ಟು ಬಿಟ್ಟು ಹೋಗಿದೆ? ನೆನಪಿನ ಮೇಲೆಯೇ ಎಲ್ಲವೂ ಆಧಾರಿತವಾಗಿದೆ. ಮಕ್ಕಳು ಪೂರ್ಣ ಆಸ್ತಿಯನ್ನು ಪಡೆಯಲು ಪ್ರಯತ್ನ ಪಟ್ಟು ನರನಿಂದ ನಾರಾಯಣರಾಗಬೇಕಾಗಿದೆ, ಇದೇ ಸತ್ಯವಾದ ಸತ್ಯ ನಾರಾಯಣನ ಕಥೆಯಾಗಿದೆ. ಭಕ್ತರು ಹುಣ್ಣಿಮೆಯ ದಿನ ಸತ್ಯ ನಾರಾಯಣನ ಕಥೆಯನ್ನು ಹೇಳುತ್ತಾರೆ, ಈಗ ನೀವು 16 ಕಲಾಸಂಪೂರ್ಣರಾಗಬೇಕೆಂದು ನಿಮಗೆ ತಿಳಿದಿದೆ. ಇದು ಸತ್ಯ ತಂದೆಯನ್ನು ನೆನಪು ಮಾಡುವುದರಿಂದ ಆಗುತ್ತದೆ. ಶ್ರೀಮತವನ್ನು ಒಬ್ಬ ತಂದೆಯೇ ಕೊಡುತ್ತಾರೆ. ಗೃಹಸ್ಥದಲ್ಲಿರಿ, ಎಲ್ಲಾ ವ್ಯವಹಾರಗಳನ್ನೂ ಮಾಡಿ, ಕೇವಲ ತಂದೆಯನ್ನು ನೆನಪು ಮಾಡಬೇಕಷ್ಟೇ. ನೆನಪೇ ಮಾಡುವುದಿಲ್ಲವೆಂದರೆ ಎಲ್ಲಾದರೂ ಒಂದು ಕಡೆ ರಾವಣನಿಂದ ಮೋಸ ಹೋಗುತ್ತೀರಿ. ಮೂಲ ಮಾತು ನೆನಪು ಮಾಡುವುದಾಗಿದೆ. ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ತನ್ನನ್ನು ಆತ್ಮನೆಂದು ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿ ಪದೇ-ಪದೇ ತಿಳಿಸುತ್ತಾರೆ. ಇಲ್ಲದಿದ್ದರೆ ಅಂತ್ಯದಲ್ಲಿ ಬಹಳ ಪಶ್ಚಾತ್ತಾಪ ಪಡುವಿರಿ, ಬಹಳ ಮೋಸ ಹೋಗುತ್ತೀರಿ. ಕೆಲವರಿಗೆ ಇಷ್ಟು ಜೋರಾಗಿ ಪೆಟ್ಟು ಬೀಳುವುದು, ಮಾಯೆಯು ಒಂದೇ ಬಾರಿಗೆ ಕಪ್ಪು ಮುಖ ಮಾಡಿ ಬಿಡುತ್ತದೆ. ತಂದೆಯು ಸುಂದರರನ್ನಾಗಿ ಮಾಡಲು ಬಂದಿದ್ದಾರೆ. ಈ ಸಮಯದಲ್ಲಿ ಒಬ್ಬರಿಗೊಬ್ಬರು ಕಪ್ಪು ಮುಖವನ್ನಾಗಿಯೇ ಮಾಡುತ್ತಾರೆ. ಸುಂದರರನ್ನಾಗಿ ಒಬ್ಬ ತಂದೆಯೇ ಮಾಡುತ್ತಾರೆ. ಇವರ ನೆನಪಿನಿಂದಲೇ ಸುಂದರ ಅರ್ಥಾತ್ ಸ್ವರ್ಗದ ಮಾಲೀಕರಾಗುತ್ತೀರಿ. ಇದು ಪತಿತ ಪ್ರಪಂಚವಾಗಿದೆ. ತಂದೆಯು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬರುತ್ತಾರೆ. ಬಾಕಿ ನಿಮ್ಮ ಯಾವುದೇ ವ್ಯಾಪಾರ-ವ್ಯವಹಾರ ಇತ್ಯಾದಿಗಳ ಜೊತೆ ತಂದೆಯ ಸಂಬಂಧವಿಲ್ಲ. ಶರೀರ ನಿರ್ವಹಣೆಗಾಗಿ ನೀವು ಏನು ಮಾಡಬೇಕಾಗಿದೆಯೋ ಅದನ್ನು ಮಾಡಿ ಆದರೆ ಕೇವಲ ಮನ್ಮನಾಭವ ಆಗಿರಿ ಎಂದು ತಂದೆಯು ತಿಳಿಸುತ್ತಾರೆ. ನೀವು ಪಾವನ ಪ್ರಪಂಚದ ಮಾಲೀಕರಾಗುವುದು ಹೇಗೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ಕೇವಲ ನನ್ನನ್ನು ನೆನಪು ಮಾಡಿ, ಮತ್ತ್ಯಾವುದೇ ಉಪಾಯವು ಪಾವನರಾಗುವುದಕ್ಕಾಗಿ ಇಲ್ಲ. ತಂದೆಯ ನೆನಪಿನ ವಿನಃ ದಾನ-ಪುಣ್ಯ, ಎಷ್ಟೇ ಪುರುಷಾರ್ಥ ಮಾಡಿದರೂ, ಬೆಂಕಿಯ ಮೇಲೆ ನಡೆದರೂ ಯಾವುದೇ ಕೆಲಸಕ್ಕೆ ಬರುವುದಿಲ್ಲ. ಇದು ಬಹಳ ಸಹಜವಾಗಿದೆ ಆದ್ದರಿಂದ ಇದು ಸಹಜಯೋಗವಾಗಿದೆ. ನಿಮ್ಮನ್ನು ನೀವು ಕೇಳಿಕೊಳ್ಳಿ – ಮಧುರ ತಂದೆಯನ್ನು ಇಡೀ ದಿನದಲ್ಲಿ ಎಷ್ಟು ನೆನಪು ಮಾಡಿದ್ದೇನೆ? ಆಗ ನಿದ್ರೆಯಲ್ಲಿ ಯಾವುದೇ ಪಾಪವಾಗುವುದಿಲ್ಲ, ಅಶರೀರಿಯಾಗಿ ಬಿಡುತ್ತೀರಿ, ಬಾಕಿ ದಿನದಲ್ಲಿ ಬಹಳ ಪಾಪಕರ್ಮವಾಗುತ್ತದೆ, ಹಳೆಯ ಪಾಪಕರ್ಮಗಳು ಬಹಳಷ್ಟಿವೆ ಆದ್ದರಿಂದ ನೆನಪಿನ ಪರಿಶ್ರಮ ಪಡಬೇಕು. ಇಲ್ಲಿ ಬರುತ್ತೀರೆಂದರೆ ಪರಿಶ್ರಮ ಪಡಲೇಬೇಕಾಗಿದೆ. ಹೊರಗಡೆಯ ವ್ಯರ್ಥ ಸಂಕಲ್ಪಗಳನ್ನು ತೆಗೆದು ಬಿಡಿ. ಇಲ್ಲದಿದ್ದರೆ ವಾಯುಮಂಡಲವು ಬಹಳ ಕೆಟ್ಟದಾಗಿ ಬಿಡುತ್ತದೆ. ಮನೆ, ಹೊಲ-ಗದ್ದೆಗಳ ವಿಚಾರವಂತೂ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಮಕ್ಕಳ ನೆನಪು ಬರುವುದು, ಕೆಲವೊಮ್ಮೆ ಗುರುಗಳ ನೆನಪು ಬರುವುದು. ಸಂಕಲ್ಪಗಳು ನಡೆಯುತ್ತಿದ್ದರೆ ವಾಯುಮಂಡಲವು ಹಾಳು ಮಾಡಿ ಬಿಡುವುದು. ಪುರುಷಾರ್ಥ ಮಾಡದೇ ಇರುವವರು ಬಹಳ ವಿಘ್ನಗಳನ್ನು ಹಾಕುತ್ತಾರೆ, ಇವುಗಳು ಬಹಳ ಸೂಕ್ಷ್ಮವಾದ ಮಾತುಗಳಾಗಿವೆ. ಇದನ್ನು ನೀವೀಗ ತಿಳಿದಿದ್ದೀರಿ ನಂತರ ಎಂದೂ ತಿಳಿಯುವುದಿಲ್ಲ. ತಂದೆಯು ಈಗ ಆಸ್ತಿಯನ್ನು ಕೊಡುತ್ತಾರೆ ನಂತರ ಅರ್ಧಕಲ್ಪಕ್ಕೆ ನಿಶ್ಚಿಂತರಾಗುವಿರಿ. ಲೌಕಿಕ ತಂದೆಯ ವಿಚಾರಗಳು ಮತ್ತು ಬೇಹದ್ದಿನ ತಂದೆಯ ವಿಚಾರಗಳಲ್ಲಿ ಅಂತರವಿದೆ. ತಂದೆಯು ಹೇಳುತ್ತಾರೆ – ಭಕ್ತಿಮಾರ್ಗದಲ್ಲಿ ನನಗೆ ಬಹಳ ವಿಚಾರಗಳಿರುತ್ತವೆ. ಭಕ್ತರು ಘಳಿಗೆ-ಘಳಿಗೆ ಎಷ್ಟೊಂದು ನೆನಪು ಮಾಡುತ್ತಾರೆ, ಸತ್ಯಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ. ನಾನು ನಿಮಗೆ ಇಷ್ಟೊಂದು ಸುಖ ಕೊಡುತ್ತೇನೆ, ಅಲ್ಲಿ ನೀವು ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ, ಏಕೆಂದರೆ ನಮ್ಮ ಮಕ್ಕಳು ಶಾಂತಿಧಾಮ-ಸುಖಧಾಮದಲ್ಲಿ ಕುಳಿತಿರುತ್ತಾರೆ. ಬೇರೆ ಯಾವುದೇ ಮನುಷ್ಯರು ಇದನ್ನು ತಿಳಿಯಲು ಸಾಧ್ಯವಿಲ್ಲ. ಇಂತಹ ತಂದೆಯಲ್ಲಿ ನಿಶ್ಚಯ ಬುದ್ಧಿಯವರಾಗುವುದರಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ಕೇವಲ ನನ್ನನ್ನು ನೆನಪು ಮಾಡುವುದರಿಂದ ನಿಮ್ಮಲ್ಲಿ ಸೇರಿರುವ ಬೆಳ್ಳಿ, ತಾಮ್ರ, ಲೋಹ… ಇವುಗಳು ಬಿಟ್ಟು ಹೋಗುವುದು. ಚಿನ್ನದ ಯುಗದಿಂದ ಬೆಳ್ಳಿಯ ಯುಗದಲ್ಲಿ ಬಂದ ನಂತರ ಎರಡು ಕಲೆ ಕಡಿಮೆಯಾಗುತ್ತದೆ. ಈ ಮಾತುಗಳನ್ನು ನೀವೇ ಕೇಳುತ್ತೀರಿ, ತಿಳಿದುಕೊಳ್ಳುತ್ತೀರಿ. ಯಾರು ಸತ್ಯ ಬ್ರಾಹ್ಮಣರಾಗಿದ್ದಾರೆಯೋ ಅವರ ಬುದ್ಧಿಯಲ್ಲಿಯೇ ಚೆನ್ನಾಗಿ ಕುಳಿತುಕೊಳ್ಳುತ್ತದೆ, ಇಲ್ಲದಿದ್ದರೆ ಇಲ್ಲ. ನೆನಪು ನಿಲ್ಲುವುದೇ ಇಲ್ಲ. ಎಲ್ಲದರ ಆಧಾರ ತಂದೆಯನ್ನು ನೆನಪು ಮಾಡುವುದರಲ್ಲಿಯೇ ಇದೆ. ಮತ್ತೆ-ಮತ್ತೆ ನನ್ನನ್ನು ನೆನಪು ಮಾಡಿ ಎಂದು ಮಕ್ಕಳಿಗೆ ತಿಳಿಸುತ್ತಾರೆ. ಬ್ರಹ್ಮಾ ತಂದೆಯೂ ಹೇಳುತ್ತಾರೆ – ಶಿವ ತಂದೆಯನ್ನು ನೆನಪು ಮಾಡಿ. ನಿಮ್ಮ ತಂದೆಯಾದ ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಆತ್ಮಗಳಿಗೆ ಮಕ್ಕಳೆಂದು ಹೇಳಲಾಗುತ್ತದೆ, ಆ ನಿರಾಕಾರ ಪರಮಾತ್ಮನು ಆತ್ಮಗಳಿಗೇ ಹೇಳುತ್ತಾರೆ. ಮೂಲ ಮಾತೇ ಇದಾಗಿದೆ. ಮೊಟ್ಟ ಮೊದಲು ಯಾರೇ ಬಂದರೂ ಅವರಿಗೆ ತಂದೆಯನ್ನು ನೆನಪು ಮಾಡಿ ಎಂದು ಹೇಳಿರಿ, ಮತ್ತ್ಯಾವುದನ್ನೂ ಒತ್ತುಕೊಟ್ಟು ಹೇಳಬೇಡಿ. ಕೇವಲ ತಮ್ಮನ್ನು ತಾವು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದನ್ನೇ ಒಳಗಡೆ ಮೆಲುಕು ಹಾಕಬೇಕು. ನಾವು ಆತ್ಮ ಎಂದು ತುಳಸೀದಾಸರು ಹಾಡುತ್ತಾರೆ – ಗಂಧವನ್ನು ತೇಯ್ದು…. ತಿಲಕವೆಂದರೆ ಯಾವುದೇ ಸ್ಥೂಲ ವಸ್ತುವಲ್ಲ. ವಾಸ್ತವದಲ್ಲಿ ತಿಲಕವು ಈ ಸಮಯದ ನೆನಪಾರ್ಥವಾಗಿದೆ. ನೀವು ನೆನಪು ಮಾಡುತ್ತೀರೆಂದರೆ ರಾಜ್ಯಭಾಗ್ಯದ ತಿಲಕವನ್ನು ಕೊಡುತ್ತಾರೆ, ನಿಮಗೆ ರಾಜ್ಯಭಾಗ್ಯದ ತಿಲಕವೂ ಸಿಗುತ್ತದೆ, ಎರಡು ಕಿರೀಟಗಳೂ ಸಿಗುತ್ತವೆ. ರಾಜ್ಯಭಾಗ್ಯದ ತಿಲಕ ಸಿಗುತ್ತದೆ ಅರ್ಥಾತ್ ಸ್ವರ್ಗದ ಮಹಾರಾಜ-ಮಹಾರಾಣಿಯಾಗುತ್ತೀರಿ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ತಂದೆಯನ್ನು ನೆನಪು ಮಾಡಿ. ನಾನಾತ್ಮ, ಶರೀರವಲ್ಲ. ನಾವು ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ.

ನಾವು ಆತ್ಮರು ಬಿಂದುವಿನ ತರಹ ಇದ್ದೇವೆ, ತಂದೆಯೂ ಬಿಂದುವಾಗಿದ್ದಾರೆಂದು ನೀವು ತಿಳಿದಿದ್ದೀರಿ. ತಂದೆಯು ಜ್ಞಾನದ ಸಾಗರ, ಸುಖದ ಸಾಗರರಾಗಿದ್ದಾರೆ, ಅವರು ನಮಗೆ ವರದಾನವನ್ನು ಕೊಡುತ್ತಾರೆ. ಇವರ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಗುರುಗಳು ತಮ್ಮ ಶಿಷ್ಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಓದಿಸುತ್ತಾರೆ. ಇವರೂ (ಶಿವ ತಂದೆ) ಸಹ ಪಕ್ಕದಲ್ಲಿಯೇ ಕುಳಿತಿದ್ದಾರೆ, ನಿಮ್ಮನ್ನು ನೀವು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಸತ್ಯಯುಗದಲ್ಲಿ ನೀವು ನಿಮ್ಮನ್ನು ಆತ್ಮನೆಂದು ತಿಳಿದುಕೊಳ್ಳುತ್ತೀರಿ ಆದರೆ ತಂದೆಯನ್ನು ತಿಳಿದುಕೊಂಡಿರುವುದಿಲ್ಲ. ನಾವಾತ್ಮರು ಶರೀರವನ್ನು ಬಿಡುತ್ತೇವೆ, ಇನ್ನೊಂದು ಶರೀರವನ್ನು ತೆಗೆದುಕೊಳ್ಳಬೇಕು. ಡ್ರಾಮಾನುಸಾರ ನಿಮ್ಮ ಪಾತ್ರ ಹೀಗೇ ಇದೆ ಆದ್ದರಿಂದ ಅಲ್ಲಿ ನಿಮ್ಮದು ದೀರ್ಘಾಯಸ್ಸು ಇರುತ್ತದೆ, ನೀವು ಪವಿತ್ರರಾಗಿಯೂ ಇರುತ್ತೀರಿ. ಸತ್ಯಯುಗದಲ್ಲಿ ಆಯಸ್ಸು ಹೆಚ್ಚಾಗಿರುತ್ತದೆ, ಕಲಿಯುಗದಲ್ಲಿ ಇರುವುದಿಲ್ಲ. ಅಲ್ಲಿ ಯೋಗಿಗಳು, ಇಲ್ಲಿ ಭೋಗಿಗಳಿದ್ದಾರೆ. ಪವಿತ್ರವಾಗಿರುವವರೇ ಯೋಗಿಗಳಾಗಿದ್ದಾರೆ. ರಾವಣ ರಾಜ್ಯವೇ ಅಲ್ಲಿರುವುದಿಲ್ಲ. ಆಯಸ್ಸು ಬಹಳ ಜಾಸ್ತಿಯಿರುತ್ತದೆ. ಇದಕ್ಕೆ ಕರ್ಮ ಭೋಗವೆಂದು ಹೇಳಲಾಗುತ್ತದೆ. ಅಲ್ಲಿ ಅಕಾಲ ಮೃತ್ಯು ಎಂದೂ ಆಗುವುದಿಲ್ಲ, ಅಂದಮೇಲೆ ತಂದೆಯನ್ನು ಗುರುತಿಸಿ ಶ್ರೀಮತದಂತೆ ನಡೆಯಬೇಕಾಗಿದೆ. ಒಬ್ಬ ತಂದೆಯನ್ನು ನೆನಪು ಮಾಡಿ, ತಮ್ಮನ್ನು ತಾವು ಆತ್ಮನೆಂದು ತಿಳಿಯಬೇಕು. ನಾವು ಹಿಂತಿರುಗಿ ಹೋಗಬೇಕಾಗಿದೆ, ಈ ಶರೀರವನ್ನು ಬಿಡಬೇಕಾಗಿದೆ ಬಾಕಿ ಸಮಯವನ್ನು ಸೇವೆಯಲ್ಲಿ ತೊಡಗಿಸಬೇಕಾಗಿದೆ.

ನೀವು ಮಕ್ಕಳು ಬಹಳ ಬಡವರಿದ್ದೀರಿ ಆದ್ದರಿಂದ ತಂದೆಗೆ ಬಹಳ ದಯೆಯುಂಟಾಗುತ್ತದೆ. ನೀವು ವೃದ್ಧರು, ಕುಬ್ಜೆಯರು ಮುಂತಾದವರಿಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ವೃದ್ಧರಿಗೆ ಕುಬ್ಜರೆಂದು ಹೇಳಲಾಗುತ್ತದೆ. ತಂದೆಯನ್ನು ನೆನಪು ಮಾಡಿ ಎಂದು ವೃದ್ಧರಿಗೆ ತಿಳಿಸುತ್ತಾರೆ. ನಿಮ್ಮನ್ನು ಯಾರಾದರೂ ಕೇಳಿದಾಗ ಪಾಠಶಾಲೆಗೆ ಹೋಗುತ್ತೇವೆಂದು ಹೇಳಿ. ಇಲ್ಲಂತೂ ಕೃಷ್ಣನ ಆತ್ಮವು 84 ಜನ್ಮಗಳನ್ನು ಪಡೆದು ಈಗ ತಂದೆಯಿಂದ ಜ್ಞಾನವನ್ನು ತೆಗೆದುಕೊಳ್ಳುತ್ತಿದೆ.

ಮಕ್ಕಳು ಪ್ರದರ್ಶನಿ ಇತ್ಯಾದಿಗಳಲ್ಲಿ ಖರ್ಚು ಮಾಡುತ್ತಾರೆ, ಇಂತಹವರು ಬಹಳ ಪ್ರಭಾವಿತರಾದರು ಎಂದೂ ಸಹ ಬರೆಯುತ್ತಾರೆ ಆದರೆ ಅವಶ್ಯವಾಗಿ ಈ ಸಮಯದಲ್ಲಿ ಬ್ರಹ್ಮನ ಶರೀರದಲ್ಲಿ ತಂದೆಯು ಬಂದಿದ್ದಾರೆ, ಅವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ ಎಂದು ಯಾರೂ ಬರೆಯುವುದಿಲ್ಲ. ಒಬ್ಬರಿಗೂ ನಿಶ್ಚಯವಾಗಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಜ್ಞಾನ ಚೆನ್ನಾಗಿದೆ ಎಂದು ಪ್ರಭಾವಿತರಾಗುತ್ತಾರೆ, ಏಣಿಯನ್ನು ಸರಿಯಾದ ರೀತಿಯಲ್ಲಿ ತೋರಿಸಿದ್ದಾರೆ ಆದರೆ ಸ್ವತಃ ಯೋಗದಲ್ಲಿದ್ದು ತಮೋಪ್ರಧಾನದಿಂದ ಸತೋಪ್ರಧಾನರಾಗುವುದನ್ನು ಮಾಡುವುದಿಲ್ಲ. ಕೇವಲ ಪರಮಾತ್ಮನಿಂದ ಆಸ್ತಿಯನ್ನು ಪಡೆಯಲು ತಿಳುವಳಿಕೆ ಚೆನ್ನಾಗಿದೆ ಎನ್ನುತ್ತಾರೆ ಆದರೆ ಸ್ವಯಂ ತಾವೇ ತಿಳಿದುಕೊಳ್ಳಿ ಎಂದು ಹೇಳಿದರೆ ಅದನ್ನು ಮಾಡುವುದಿಲ್ಲ. ಪುರುಷಾರ್ಥವನ್ನು ಏನೂ ಮಾಡುವುದಿಲ್ಲ, ಪ್ರಜೆಗಳು ಬಹಳಷ್ಟು ಮಂದಿ ಆಗುತ್ತಾರೆ. ಬಾಕಿ ರಾಜರಾಗುವುದರಲ್ಲಿಯೇ ಪರಿಶ್ರಮವಿದೆ. ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಕೇಳಿಕೊಳ್ಳಬೇಕು – ನಾವು ತಂದೆಯ ನೆನಪಿನಲ್ಲಿ ಎಷ್ಟು ಹರ್ಷಿತರಾಗಿರುತ್ತೇವೆ, ನಾವೇ ನಂತರ ದೇವತೆಗಳಾಗುತ್ತೇವೆ. ಈ ರೀತಿ ತಮ್ಮೊಂದಿಗೆ ತಾವು ಏಕಾಂತದಲ್ಲಿ ಕುಳಿತು ಮಾತನಾಡಿಕೊಳ್ಳಬೇಕು. ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ ಅರ್ಧಕಲ್ಪ ದುಃಖವೇ ಇರುವುದಿಲ್ಲವೆಂದು ತಂದೆಯು ಗ್ಯಾರಂಟಿ ಕೊಡುತ್ತಾರೆ. ಈಗ ತಂದೆಯು ಬಂದು ನಮ್ಮನ್ನು ರಾವಣನ ಮಾಯೆಯಿಂದ ಗೆಲ್ಲಿಸುತ್ತಿದ್ದಾರೆ, ಯಾರೆಷ್ಟು ಪುರುಷಾರ್ಥ ಮಾಡುತ್ತಾರೆಯೋ ಅವರು ತಮಗಾಗಿಯೇ ಮಾಡುತ್ತಾರೆ ನಂತರ ನೀವು ಹೊಸ ಪ್ರಪಂಚದಲ್ಲಿ ಬರುತ್ತೀರಿ. ಹಳೆಯ ಪ್ರಪಂಚದ ಲೆಕ್ಕಾಚಾರವನ್ನೂ ಸಮಾಪ್ತಿ ಮಾಡಬೇಕಾಗಿದೆ ಏಕೆಂದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಪಾವನರಾಗಲು ಯುಕ್ತಿಯನ್ನೂ ಸಹ ತಿಳಿಸುತ್ತಾರೆ. ಇದು ವಿನಾಶದ ಸಮಯವಾಗಿದೆ, ಎಲ್ಲರ ವಿನಾಶವಾಗಲೇಬೇಕಾಗಿದೆ. ಹೊಸ ಪ್ರಪಂಚದ ಸ್ಥಾಪನೆಯಾಗಬೇಕಾಗಿದೆ. ನಾವು ಈ ಮೃತ್ಯುಲೋಕದಲ್ಲಿ ಶರೀರವನ್ನು ಬಿಟ್ಟು ನಂತರ ಹೊಸಪ್ರ ಪಂಚ ಅಮರಲೋಕದಲ್ಲಿ ಬರುತ್ತೇವೆ. ನಾವು ಓದುವುದೇ ಹೊಸ ಪ್ರಪಂಚಕ್ಕಾಗಿ ಮತ್ತು ಭವಿಷ್ಯಕ್ಕಾಗಿ ಓದುತ್ತಾರೆ ಇಂತಹ ಪಾಠಶಾಲೆಯು ಎಲ್ಲಿಯೂ ಇಲ್ಲ. ಹಾ! ಕೆಲವರು ಬಹಳ ದಾನ-ಪುಣ್ಯವನ್ನು ಮಾಡುತ್ತಾರೆಂದ ಮೇಲೆ ರಾಜರ ಬಳಿ ಜನ್ಮವನ್ನು ಪಡೆಯುತ್ತಾರೆ. ಬಾಯಲ್ಲಿ ಚಿನ್ನದ ಚಮಚ ಎಂದು ಹೇಳಲಾಗುತ್ತದೆ, ಅದು ಸತ್ಯಯುಗದಲ್ಲಿ ನಿಮಗೆ ಸಿಗುವುದು. ಕಲಿಯುಗದಲ್ಲಿಯೂ ಸಹ ಅನೇಕ ರಾಜರ ಬಳಿ ಜನ್ಮ ಪಡೆಯುತ್ತಾರೆ, ಅವರಿಗೂ ಸಿಗುತ್ತದೆ ಆದರೆ ಅನೇಕ ಪ್ರಕಾರದ ದುಃಖವಿರುತ್ತದೆ. ಭವಿಷ್ಯದಲ್ಲಿ 21 ಜನ್ಮಗಳವರೆಗೆ ದುಃಖವಿರುವುದಿಲ್ಲ. ಎಂದೂ ಆರೋಗ್ಯ ತಪ್ಪುವುದಿಲ್ಲ. ಸ್ವರ್ಗದಲ್ಲಿ ಬಾಯಲ್ಲಿ ಚಿನ್ನದ ಚಮಚ ಇರುತ್ತದೆ. ಇಲ್ಲಿ ಅಲ್ಪಕಾಲದ ಸುಖಕ್ಕಾಗಿ ರಾಜ್ಯಭಾಗ್ಯ ಸಿಗುತ್ತದೆ, ನಿಮ್ಮದು 21 ಜನ್ಮಗಳ ರಾಜ್ಯಭಾಗ್ಯ ಸಿಗುತ್ತದೆ. ಬುದ್ಧಿಯಲ್ಲಿ ಈ ರೀತಿ ಕೆಲಸ ತೆಗೆದುಕೊಂಡು ನಂತರ ತಿಳಿಸಬೇಕಾಗಿದೆ. ಭಕ್ತಿಯಲ್ಲಿ ರಾಜನಾಗುವುದಿಲ್ಲ ಎಂದಲ್ಲ, ಕೆಲವರು ಕಾಲೇಜು-ಆಸ್ಪತ್ರೆಯನ್ನು ಕಟ್ಟಿಸುತ್ತಾರೆಂದರೆ ಪ್ರತಿಫಲ ಸಿಗುತ್ತದೆ, ಆಸ್ಪತ್ರೆಗಳನ್ನು ಕಟ್ಟಿಸುತ್ತಾರೆಂದರೆ ಮುಂದಿನ ಜನ್ಮದಲ್ಲಿ ಬಹಳ ಚೆನ್ನಾಗಿ ಆರೋಗ್ಯವಂತರಾಗಿರುತ್ತಾರೆ. ಇವರಿಗೆ ಇಡೀ ಆಯಸ್ಸಿನಲ್ಲಿ ಜ್ವರವೇ ಬಂದಿರಲಿಲ್ಲ ಎಂದು ಹೇಳುತ್ತಾರಲ್ಲವೆ. ಬಹಳ ದೊಡ್ಡ ಆಯಸ್ಸು ಇರುತ್ತದೆ, ಬಹಳ ದಾನ ಇತ್ಯಾದಿಗಳನ್ನು ಮಾಡಿದ್ದಾರೆ, ಆಸ್ಪತ್ರೆ ಇತ್ಯಾದಿಗಳನ್ನು ಮಾಡಿದ್ದಾರೆ ಆದ್ದರಿಂದ ಆಯಸ್ಸು ಹೆಚ್ಚಾಗಿದೆ. ಇಲ್ಲಂತೂ ಯೋಗದಿಂದ ನೀವು ಸದಾ ಆರೋಗ್ಯವಂತರು – ಐಶ್ವರ್ಯವಂತರು ಆಗುತ್ತೀರಿ. ಯೋಗದಿಂದ ನೀವು 21 ಜನ್ಮಗಳಿಗೆ ಅಪಾರ ಸುಖವನ್ನು ಪಡೆಯುತ್ತೀರಿ. ಇದಂತೂ ದೊಡ್ಡ ಆಸ್ಪತ್ರೆ ಮತ್ತು ದೊಡ್ಡ ವಿಶ್ವ ವಿದ್ಯಾಲವಾಗಿದೆ. ತಂದೆಯು ಪ್ರತಿಯೊಂದು ಮಾತನ್ನು ಬಹಳ ಒಳ್ಳೆಯ ರೀತಿಯಲ್ಲಿ ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ – ಯಾರಿಗೆ ಎಲ್ಲಿ ಮಜಾ ಬರುತ್ತದೆಯೋ, ಎಲ್ಲಿ ಮನಸ್ಸಾಗುತ್ತದೆಯೋ ಅಲ್ಲಿ ಹೋಗಿ ವಿದ್ಯೆಯನ್ನು ಓದಬಹುದು. ನಮ್ಮ ಸೇವಾಕೇಂದ್ರಕ್ಕೇ ಬರಬೇಕು, ಅವರ ಬಳಿ ಏಕೆ ಹೋಗುತ್ತೀರಿ ಎಂದಲ್ಲ, ಯಾರಿಗೆ ಎಲ್ಲಿ ಇಷ್ಟವಾಗುತ್ತದೆಯೋ ಅಲ್ಲಿಗೆ ಹೋಗಬಹುದು. ಮಾತಂತೂ ಒಂದೇ ಆಗಿದೆ, ಮುರುಳಿಯನ್ನು ಓದಿ ಹೇಳುತ್ತಾರೆ. ಅವರಿಗೆ ಮುರುಳಿಯು ಇಲ್ಲಿಂದಲೇ ಹೋಗುತ್ತದೆ, ಆದರೆ ಕೆಲವರು ವಿಸ್ತಾರವಾಗಿ ಚೆನ್ನಾಗಿ ತಿಳಿಸುತ್ತಾರೆ, ಇನ್ನೂ ಕೆಲವರು ಕೇವಲ ಓದಿ ಹೇಳುತ್ತಾರೆ. ಭಾಷಣ ಮಾಡುವವರಿಗೆ ಚೆನ್ನಾಗಿ ಹುರಿದುಂಬಿಸಿ ಹೇಳುತ್ತಾರೆ. ಎಲ್ಲಾದರೂ ಭಾಷಣವಾಯಿತೆಂದರೆ ಮೊಟ್ಟ ಮೊದಲು ತಮ್ಮನ್ನು ತಾವು ಆತ್ಮವೆಂದು ತಿಳಿದುಕೊಳ್ಳಿ, ತಂದೆಯಾದ ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ ಮತ್ತು ಪಾವನರಾಗಿ ಪಾವನಪ್ರ ಪಂಚದ ಮಾಲೀಕರಾಗುತ್ತೀರೆಂದು ಶಿವ ತಂದೆಯು ತಿಳಿಸುತ್ತಾರೆಂದು ಹೇಳಿರಿ. ಎಷ್ಟು ಸಹಜವಾಗಿ ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಹೊರಗಿನ ವ್ಯರ್ಥ ವಿಚಾರಗಳನ್ನು ಬಿಟ್ಟು ಏಕಾಂತದಲ್ಲಿ ಕುಳಿತು ತಂದೆಯನ್ನು ನೆನಪು ಮಾಡುವ ಪರಿಶ್ರಮ ಪಡಬೇಕಾಗಿದೆ.

2. ಬೆಳಗ್ಗೆ-ಬೆಳಗ್ಗೆ ವಿಚಾರ ಸಾಗರ ಮಂಥನ ಮಾಡಬೇಕು ಮತ್ತು ಚಾರ್ಟನ್ನು ನೋಡಿಕೊಳ್ಳಬೇಕು. ಹೇಗೆ ಭಕ್ತಿಮಾರ್ಗದಲ್ಲಿ ದಾನ-ಪುಣ್ಯದ ಮಹತ್ವಿಕೆ ಇದೆಯೋ ಹಾಗೆಯೇ ಜ್ಞಾನ ಮಾರ್ಗದಲ್ಲಿ ನೆನಪಿನ ಮಹತ್ವಿಕೆಯಿದೆ. ನೆನಪಿನಿಂದ ಆತ್ಮವನ್ನು ಎವರ್ಹೆಲ್ದಿ-ವೆಲ್ಧಿಯನ್ನಾಗಿ ಮಾಡಿಕೊಳ್ಳಬೇಕು, ಅಶರೀರಿಯಾಗುವ ಅಭ್ಯಾಸ ಮಾಡಬೇಕು.

ವರದಾನ:-

ಯಾರು ವಾಚಾದ ಮೂಲಕ ಜ್ಞಾನ ರತ್ನಗಳ ದಾನ ಮಾಡುವರು, ಅವರಿಗೆ ಮಾಸ್ಟರ್ ಜ್ಞಾನ ಪೂರ್ಣನ ವರದಾನವು ಪ್ರಾಪ್ತವಾಗುವುದು. ಅವರ ಒಂದೊಂದು ಶಬ್ಧಗಳ ಮೌಲ್ಯವು ಬಹಳಷ್ಟಿರುತ್ತದೆ. ಅನೇಕ ಆತ್ಮರು ಅವರ ಒಂದೊಂದು ವಾಕ್ಯವನ್ನು ಕೇಳುವುದಕ್ಕಾಗಿ ಬಾಯಾರಿರುತ್ತಾರೆ. ಅವರ ಪ್ರತೀ ಶಬ್ಧದಲ್ಲಿ ಸಾರವು ಅಡಗಿರುತ್ತದೆ, ಅವರಿಗೆ ವಿಶೇಷ ಖುಷಿಯ ಪ್ರಾಪ್ತಿಯಾಗುತ್ತದೆ. ಅವರ ಬಳಿ ಖಜಾನೆಗಳು ಸಂಪನ್ನವಾಗಿರುತ್ತದೆ, ಆದ್ದರಿಂದ ಅವರು ಸದಾ ಸಂತುಷ್ಟ ಹಾಗೂ ಹರ್ಷಿತವಾಗಿ ಇರುತ್ತಾರೆ. ಅವರ ವಾಕ್ಯಗಳು ಪ್ರಭಾವಶಾಲಿ ಆಗಿರುತ್ತದೆ. ವಾಣಿಯ ದಾನ ಮಾಡುವುದರಿಂದ ಬಹಳಷ್ಟು ಗುಣಗಳು ಬಂದು ಬಿಡುತ್ತವೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top