21 July 2021 KANNADA Murli Today | Brahma Kumaris

Read and Listen today’s Gyan Murli in Kannada

20 July 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಮಕ್ಕಳಿಗೆ ಅವಿನಾಶಿ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಲು ತಂದೆಯು ಬಂದಿದ್ದಾರೆ, ಈ ಒಂದೊಂದು ಜ್ಞಾನರತ್ನವು ಲಕ್ಷಾಂತರ ರೂಪಾಯಿಗಳು ಬೆಲೆ ಬಾಳುವಂತಹುದ್ದಾಗಿದೆ”

ಪ್ರಶ್ನೆ:: -

ಗುಪ್ತದಾನಕ್ಕೆ ಇಷ್ಟು ಅಧಿಕ ಮಹತ್ವಿಕೆ ಏಕೆ ಇದೆ?

ಉತ್ತರ:-

ಏಕೆಂದರೆ ತಂದೆಯು ನಿಮಗೆ ಈಗ ಗುಪ್ತ ಜ್ಞಾನರತ್ನಗಳ ದಾನ ಮಾಡುತ್ತಾರೆ, ಇದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ, ಮತ್ತೆ ನೀವು ಮಕ್ಕಳು ಈ ಜ್ಞಾನರತ್ನಗಳ ದಾನ ಮಾಡುವುದರಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ, ಇದೂ ಸಹ ಗುಪ್ತವಾಗಿದೆ. ಯಾವುದೇ ಯುದ್ಧವಿಲ್ಲ, ಯಾವುದೇ ಸಿಡಿ-ಮದ್ದುಗಳಿಲ್ಲ ಮತ್ತು ಯಾವುದೇ ಖರ್ಚೂ ಇಲ್ಲ, ಗುಪ್ತ ರೀತಿಯಿಂದ ತಂದೆಯು ನಿಮಗೆ ರಾಜ್ಯವನ್ನು ದಾನದಲ್ಲಿ ಕೊಟ್ಟರು. ಆದ್ದರಿಂದ ಗುಪ್ತದಾನಕ್ಕೆ ಬಹಳ ಮಹತ್ವಿಕೆಯಿದೆ.

♫ ಕೇಳು ಇಂದಿನ ಮುರ್ಲಿ (audio)➤

ಡಬಲ್ ಓಂ ಶಾಂತಿ. ಒಂದನ್ನು ಶಿವ ತಂದೆಯು ಹೇಳುತ್ತಾರೆ, ಇನ್ನೊಂದನ್ನು ಬ್ರಹ್ಮಾದಾದಾರವರು ಹೇಳುತ್ತಾರೆ. ಇಬ್ಬರ ಸ್ವಧರ್ಮವೂ ಶಾಂತಿಯಾಗಿದೆ. ಇಬ್ಬರೂ ಶಾಂತಿಧಾಮ ನಿವಾಸಿಯಾಗಿದ್ದಾರೆ. ನೀವು ಮಕ್ಕಳೂ ಸಹ ಶಾಂತಿಧಾಮ ನಿವಾಸಿಯಾಗಿದ್ದೀರಿ, ನಿರಾಕಾರ ದೇಶದಲ್ಲಿರುವವರು ಸಾಕಾರಿ ದೇಶದಲ್ಲಿ ಪಾತ್ರವನ್ನು ಅಭಿನಯಿಸಲು ಬಂದಿದ್ದೀರಿ ಏಕೆಂದರೆ ಇದು ಡ್ರಾಮಾ ಅಲ್ಲವೆ. ಮಕ್ಕಳಿಗೆ ಮೇಲಿನಿಂದ ಹಿಡಿದು ಕೆಳಗಿನವರೆಗೆ ಡ್ರಾಮಾದ ಆದಿ-ಮಧ್ಯ-ಅಂತ್ಯದ ಜ್ಞಾನವು ಬುದ್ಧಿಯಲ್ಲಿ ತುಂಬಲ್ಪಟ್ಟಿದೆ, ಸರ್ವಶ್ರೇಷ್ಠ ಭಗವಂತ ಮತ್ತು ಅವರ ಜೊತೆ ಮಕ್ಕಳು. ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಳ್ಳಿ. ನಿಮ್ಮ ವಿನಃ ಯಾರಲ್ಲಿಯೂ ಈ ಜ್ಞಾನವಿಲ್ಲ. ನೀವು ಈಶ್ವರನ ಶಾಲೆಯಲ್ಲಿ ಓದುತ್ತೀರಿ, ಭಗವಾನುವಾಚ – ಭಗವಂತನು ಒಬ್ಬರೇ ಆಗಿದ್ದಾರೆ, ಯಾವುದೇ 10-20 ಮಂದಿ ಭಗವಂತರಿಲ್ಲ. ಯಾವುದೆಲ್ಲಾ ಧರ್ಮದವರಿದ್ದಾರೆಯೋ ಅವರ ಯಾರೆಲ್ಲಾ ಆತ್ಮರಿದ್ದಾರೆಯೋ ಎಲ್ಲರಿಗೂ ಒಬ್ಬರೇ ತಂದೆಯಾಗಿದ್ದಾರೆ. ನಂತರ ತಂದೆಯು ಸೃಷ್ಟಿಯನ್ನು ರಚಿಸುತ್ತಾರೆಂದರೆ ಆಗ ಪ್ರಜಾಪಿತ ಬ್ರಹ್ಮಾ ಎಂದು ಹೇಳಲಾಗುತ್ತದೆ. ಶಿವನಿಗೆ ಪ್ರಜಾಪಿತನೆಂದು ಹೇಳುವುದಿಲ್ಲ, ಪ್ರಜೆಗಳಂತೂ ಜನನ-ಮರಣದಲ್ಲಿ ಬರುತ್ತಾರೆ, ಆತ್ಮವು ಸಂಸ್ಕಾರದ ಆಧಾರದಿಂದ ಜನನ-ಮರಣದಲ್ಲಿ ಬರುತ್ತದೆ ಅಂದಮೇಲೆ ಪ್ರಜಾಪಿತ ಬ್ರಹ್ಮನು ಬೇಕಾಗಿದೆ. ಪರಮಪಿತ ಪರಮಾತ್ಮನು ಪ್ರಜಾಪಿತ ಬ್ರಹ್ಮನ ಮೂಲಕ ರಚನೆಯನ್ನು ರಚಿಸುತ್ತಾರೆಂದು ಗಾಯನವಿದೆ. ಅವರನ್ನು ಪತಿತ-ಪಾವನ ಬನ್ನಿ ಎಂದು ಕರೆಯಲಾಗುತ್ತದೆ. ಯಾವಾಗ ಪ್ರಪಂಚವು ಪತಿತವಾಗುತ್ತದೆಯೋ ಮತ್ತು ಅದರ ಅಂತ್ಯವಾಗುತ್ತದೆಯೋ ಆಗಲೇ ತಂದೆಯು ಪತಿತರಿಂದ ಪಾವನರನ್ನಾಗಿ ಮಾಡಲು ಬರುತ್ತಾರೆ, ನೀವೀಗ ತಿಳಿದುಕೊಂಡಿದ್ದೀರಿ – ತಂದೆಯು ಒಂದೇ ಬಾರಿ ಬರುತ್ತಾರೆ, ಮತ್ತೆಂದೂ ಬರುವುದಿಲ್ಲ. ಈಗ ನಿಮಗೆ ಸಂಪೂರ್ಣ ಜ್ಞಾನ ಸಿಕ್ಕಿದೆ, ನೀವು ಡ್ರಾಮಾದ ಪಾತ್ರಧಾರಿಗಳಾಗಿದ್ದೀರಲ್ಲವೆ. ಡ್ರಾಮಾದ ಪಾತ್ರಧಾರಿಗಳಿಗೆ ಯಾರ್ಯಾರದ್ದು ಯಾವ-ಯಾವ ಪಾತ್ರವೆಂದು ಎಲ್ಲರ ಪಾತ್ರದ ಬಗ್ಗೆ ಅವಶ್ಯವಾಗಿ ತಿಳಿದಿರಬೇಕು. ಅದಂತೂ ಚಿಕ್ಕ ಹದ್ದಿನ ನಾಟಕವಾಗಿರುತ್ತದೆ, ಅದರ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ, ನೀವೂ ಸಹ ನೋಡಿ ಬರುತ್ತೀರಿ. ಬೇಕಾದರೆ ನೀವು ಅದನ್ನು ಬರೆಯಲೂಬಹುದು, ನೆನಪು ಮಾಡಿಕೊಳ್ಳಲೂಬಹುದು. ಬಹಳ ಚಿಕ್ಕದಾಗಿರುತ್ತದೆ ಆದರೆ ಇದು ಬಹಳ ದೊಡ್ಡ ಬೇಹದ್ದಿನ ನಾಟಕವಾಗಿದೆ. ಇದನ್ನು ನೀವು ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ತಿಳಿದಿದ್ದೀರಿ. ಈಗ ನಿಮಗೆ ತಿಳಿದಿದೆ – ನಮಗೆ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ ಮತ್ತೆ ಹದ್ದಿನ ತಂದೆಯಿಂದ ಹದ್ದಿನ ಆಸ್ತಿ, ಹದ್ದಿನ ಸಂಪತ್ತು ಸಿಗುತ್ತದೆ. ತಂದೆಯು ತಿಳಿಸಿದ್ದರು, ಯಾರು ರಾಜರಾಗುವರೋ ಅವರು ಹಿಂದಿನ ಜನ್ಮದಲ್ಲಿ ದಾನ, ಪುಣ್ಯ ಇತ್ಯಾದಿಗಳನ್ನು ಮಾಡಿರುವುದರಿಂದ ಒಂದು ಜನ್ಮಕ್ಕಾಗಿ ರಾಜರಾಗುತ್ತಾರೆ, ಅವರು ಇನ್ನೊಂದು ಜನ್ಮದಲ್ಲಿಯೂ ರಾಜರಾಗುತ್ತಾರೆ ಎಂದಲ್ಲ. ನೀವು ಯಾರು ಸತ್ಯಯುಗದಲ್ಲಿ ರಾಜ-ಮಹಾರಾಜರಾಗಿದ್ದಿರೋ, ನಿಮ್ಮ ರಾಜ್ಯವು ಮರೆಯಾಗಿ ಬಿಡುತ್ತದೆ ಎಂದು ತಿಳಿದುಕೊಳ್ಳಬೇಡಿ, ನಂತರ ಯಾವಾಗ ಭಕ್ತಿಮಾರ್ಗವಾಗುವುದೋ ಆಗಲೂ ಸಹ ಅವರು ಹೆಚ್ಚು ದಾನ-ಪುಣ್ಯ ಮಾಡುತ್ತಾರೆಂದರೆ ಅವರೂ ಸಹ ರಾಜಧಾನಿಯಲ್ಲಿ ಹೋಗುತ್ತಾರೆ ಆದರೆ ಅವರು ವಿಕಾರಿ ರಾಜರಾಗಿ ಬಿಡುತ್ತಾರೆ. ನೀವೇ ಯಾರು ಪೂಜ್ಯರಾಗಿದ್ದಿರೋ ನಂತರ ಪೂಜಾರಿಗಳಾಗಿದ್ದೀರಿ, ಅದು ಅಲ್ಪಕಾಲದ ಸುಖವಿರುತ್ತದೆ, ದುಃಖವಂತೂ ಕೇವಲ ಈಗಲೇ ಇರುತ್ತದೆ. ಈಗ ತಮೋಪ್ರಧಾನತೆಯಲ್ಲಿಯೂ ಸಹ ನಿಮಗೆ ಸುಖವಿದೆ, ಯಾವುದೇ ಕಲಹ-ಜಗಳಗಳ ಮಾತಿಲ್ಲ. ಇದಂತೂ ನಂತರದಲ್ಲಿ ಆಗುತ್ತದೆ, ಯಾವಾಗ ಲಕ್ಷಾಂತರ ಅಂದಾಜಿನಲ್ಲಿ ಆಗಿ ಬಿಡುವರೋ ಆಗ ಯುದ್ಧ ಇತ್ಯಾದಿಗಳು ಆರಂಭವಾಗುತ್ತದೆ. ನೀವು ಮಕ್ಕಳಿಗೆ ಸತ್ಯಯುಗ, ತ್ರೇತಾ-ದ್ವಾಪರದಲ್ಲಿಯೂ ಸುಖವಿರುತ್ತದೆ. ಯಾವಾಗ ತಮೋಪ್ರಧಾನತೆಯು ಹೆಚ್ಚಾಗುವುದೋ ಆಗ ಸ್ವಲ್ಪ ದುಃಖವಿರುತ್ತದೆ. ಈಗಂತೂ ಬಹಳ ತಮೋಪ್ರಧಾನತೆಯಿದೆ, ಇದು ತಮೋಪ್ರಧಾನ ಪ್ರಪಂಚವೆಂದು ತಂದೆಯು ತಿಳಿಸುತ್ತಾರೆ. ನಿಮಗೆ ತಿಳಿದಿದೆ – ಇದು ಬೇಹದ್ದಿನ ನಾಟಕವಾಗಿದೆ, ಇದರಿಂದ ಯಾರೂ ಬಿಡುಗಡೆಯಾಗಲು ಸಾಧ್ಯವಿಲ್ಲ. ಮನುಷ್ಯರು ಯಾವಾಗ ದುಃಖದಲ್ಲಿ ಬೇಸತ್ತು ಹೋಗುವರೋ ಆಗ ಭಗವಂತನು ಇಂತಹ ಆಟವನ್ನು ಏಕೆ ರಚಿಸಿದರು ಎಂದು ಹೇಳುತ್ತಾರೆ. ಒಂದುವೇಳೆ ಭಗವಂತನು ರಚಿಸದೇ ಇದ್ದಿದ್ದರೆ ಪ್ರಪಂಚವೇ ಇರುತ್ತಿರಲಿಲ್ಲ, ಏನೂ ಇರುತ್ತಿರಲಿಲ್ಲ. ರಚಯಿತ ಮತ್ತು ರಚನೆಯಂತೂ ಇದೆಯಲ್ಲವೆ. ಅದರ ವಿವರವೂ ಇದೆ, ಸತ್ಯಯುಗದಿಂದ ಕಲಿಯುಗದ ಅಂತ್ಯದವರೆಗೆ ಇನ್ನು ಕೆಲವೇ ದಿನಗಳಿವೆ, ನೀವು ಪ್ರತ್ಯಕ್ಷದಲ್ಲಿ ನೋಡುತ್ತೀರಿ. ಮೊದಲೇ ತೋರಿಸುವುದಿಲ್ಲ. 5000 ವರ್ಷಗಳ ಚಕ್ರದಲ್ಲಿ ಇನ್ನು ಸ್ವಲ್ಪವೇ ಇದೆ, ಅದನ್ನು ಈಗಲೇ ತೋರಿಸಿ ಬಿಡುವುದಿಲ್ಲ. ಯಾವಾಗ ಆಗುವುದೋ ಆಗ ಅದನ್ನೂ ಸಹ ಸಾಕ್ಷಿಯಾಗಿ ನೋಡುತ್ತೀರಿ, ಏನಾಗಬೇಕಾಗಿದೆಯೋ ಅದು ಕಲ್ಪದ ಹಿಂದಿನ ತರಹ ಆಗುವುದು. ಇದನ್ನಂತೂ ನೋಡುತ್ತಲೇ ಇದ್ದೀರಿ, ತಯಾರಿಗಳೂ ನಡೆಯುತ್ತಿದೆ, ವಿನಾಶವಂತೂ ಖಂಡಿತ ಆಗುವುದು. ಎಲ್ಲದರ ತಯಾರಿ ಆಗುತ್ತಿದೆ, ಅದು ಡ್ರಾಮಾದಲ್ಲಿ ಮೊದಲಿನಿಂದಲೇ ನಿಗಧಿಯಾಗಿದೆ, ವಿನಾಶವು ಖಂಡಿತ ಆಗುವುದು. ಈಗ ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ – ನಿಮ್ಮ ಆತ್ಮವು ತಮೋಪ್ರಧಾನವಾಗಿದೆ ಅದನ್ನೂ ಸಹ ಇಲ್ಲಿಯೇ ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ, ಇದನ್ನು ನೀವೀಗ ತಿಳಿದುಕೊಂಡಿದ್ದೀರಿ.

ತಂದೆಯು ಗುಪ್ತವಾಗಿ ಬರುತ್ತಾರೆ, ಗುಪ್ತವಾಗಿಯೇ ನಿಮಗೆ ಜ್ಞಾನವನ್ನು ಕೊಡುತ್ತಿದ್ದಾರೆ. ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಗುಪ್ತ ರೀತಿಯಿಂದ ನೀವು ವಿಶ್ವದ ರಾಜ್ಯವನ್ನು ತೆಗೆದುಕೊಳ್ಳುತ್ತೀರಿ, ಯಾವುದೆ ಗಲಾಟೆಯಿಲ್ಲ. ಸಂಪೂರ್ಣ ಗುಪ್ತ ದಾನವೆಂದು ಹೇಳಲಾಗುತ್ತದೆಯಲ್ಲವೆ. ತಂದೆಯು ಬಂದು ಮಕ್ಕಳಿಗೆ ಅವಿನಾಶಿ ಜ್ಞಾನ ರತ್ನಗಳ ಗುಪ್ತದಾನವನ್ನು ಕೊಡುತ್ತಾರೆ. ತಂದೆಯೂ ಸಹ ಎಷ್ಟೊಂದು ಗುಪ್ತವಾಗಿದ್ದಾರೆ, ಯಾರೂ ತಿಳಿದುಕೊಂಡಿಲ್ಲ. ಇವರೆಲ್ಲರೂ ಎಲ್ಲಿ ಹೋಗುತ್ತಾರೆ? ಬ್ರಹ್ಮಾಕುಮಾರ-ಕುಮಾರಿಯರು ಏನು ಮಾಡುತ್ತಾರೆ? ಎಂಬುದೇನನ್ನೂ ತಿಳಿದುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯು ಎಷ್ಟು ಗುಪ್ತವಾಗಿದ್ದಾರೆ! ನೀವು ಮಕ್ಕಳನ್ನು ಗುಪ್ತ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಯಾವುದೇ ಯುದ್ಧವಿಲ್ಲ, ಸಿಡಿ ಮದ್ದುಗಳಿಲ್ಲ. ಯಾವುದೇ ಖರ್ಚಿಲ್ಲ. ಇಲ್ಲಾದರೆ ಒಂದು ಚಿಕ್ಕ ಹಳ್ಳಿಯನ್ನು ತೆಗೆದುಕೊಳ್ಳುವುದರಲ್ಲಿಯೇ ಎಷ್ಟೊಂದು ಜಗಳ-ಕಲಹಗಳಾಗುತ್ತವೆ! ತಂದೆಯು ಬಂದು ಗುಪ್ತದಾನವನ್ನು ಕೊಡುತ್ತಾರೆ. ಅವಿನಾಶಿ ಜ್ಞಾನ ರತ್ನಗಳಿಂದ ನಿಮ್ಮ ಜೋಳಿಗೆಯನ್ನು ತುಂಬಿಸುತ್ತಾರೆ. ಶಿವ ಭೋಲಾ ಭಂಡಾರಿಯೇ ನಮ್ಮ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ.

ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ಅವಿನಾಶಿ ಜ್ಞಾನರತ್ನಗಳಿಂದ ನಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದಾರೆ ಅಂದಾಗ ಒಂದೊಂದು ರತ್ನವೂ ಲಕ್ಷಾಂತರ ರೂಪಾಯಿಗಳು ಬೆಲೆ ಬಾಳುವಂತದ್ದಾಗಿದೆ. ನೀವು ಎಷ್ಟೊಂದು ರತ್ನಗಳನ್ನು ಕೊಡುತ್ತೀರಿ, ಎಷ್ಟೊಂದು ಜ್ಞಾನಿಯಾಗುತ್ತೀರಿ, ಅದೂ ಸಹ ಗುಪ್ತವಾಗಿದೆ. ದೇವತೆಗಳಿಗೆ ಎಷ್ಟೊಂದು ಆಯುಧಗಳು, ಭುಜಗಳನ್ನು ತೋರಿಸುತ್ತಾರೆ. ವಾಸ್ತವದಲ್ಲಿ ಅದೇನೂ ಇರುವುದಿಲ್ಲ. ಸತ್ಯಯುಗದಲ್ಲಿ ದೇವತೆಗಳಿಗೆ ಇಷ್ಟೊಂದು ಭುಜಗಳಿರುವುದೇ ಇಲ್ಲ. ಕಲಿಯುಗದಲ್ಲಿ ಅನೇಕ ಪ್ರಕಾರದ ಆಯುಧಗಳನ್ನು ತೋರಿಸುತ್ತಾರೆ. ವಿನಾಶಕ್ಕಾಗಿ ಅಣು ಬಾಂಬುಗಳಿವೆ ಅಂದಮೇಲೆ ಕತ್ತಿ, ಬಾಣಗಳನ್ನು ಏನು ಮಾಡುವರು? ನೀವು ಹೇಳುತ್ತೀರಿ – ಈ ಜ್ಞಾನ ಖಡ್ಗವನ್ನು ಅವರು ಆಯುಧಗಳೆಂದು ತಿಳಿದುಕೊಂಡಿದ್ದಾರೆ. ವಾಸ್ತವದಲ್ಲಿ ಏನೂ ಇಲ್ಲ. ನಿಮಗೆ ಗುಪ್ತದಾನ ಸಿಗುತ್ತದೆ. ನೀವು ಮತ್ತೆ ಎಲ್ಲರಿಗೆ ಗುಪ್ತದಾನ ಮಾಡುತ್ತೀರಿ. ನಿಮಗೆ ತಿಳಿದಿದೆ, ತಂದೆಯು ಶ್ರೀಮತವನ್ನು ಕೊಡುತ್ತಿದ್ದಾರೆ. ಶ್ರೀಮತವು ಭಗವಂತನದ್ದಾಗಿದೆ. ನಾವು ನರನಿಂದ ನಾರಾಯಣರಾಗಲು ಬರುತ್ತೇವೆಂದು ನಿಮಗೆ ತಿಳಿದಿದೆ. ಲಕ್ಷ್ಮೀ-ನಾರಾಯಣರಿಗೆ ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ, ದೈವೀ ಗುಣಧಾರಿ ಎಂದು ಹೇಳುತ್ತಾರೆ. ದೈವೀ ಗುಣಗಳು ಕೇವಲ ಆ ದೇವಿ-ದೇವತೆಗಳಲ್ಲಿ ಇರುತ್ತವೆ ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಹೇಗೆ ಪೂರ್ಣ ಚಂದ್ರಮನ ಬೆಳಕು ಬಹಳ ಚೆನ್ನಾಗಿರುತ್ತದೆ. ನಂತರ ಕಡಿಮೆಯಾಗುತ್ತಾ ಹೋಗುತ್ತದೆ. ಕಡಿಮೆಯಾಗುತ್ತಾ ಆಗುತ್ತಾ ಕೊನೆಗೆ ಒಂದು ಚಿಕ್ಕಗೆರೆ ಉಳಿಯುತ್ತದೆ. ಪೂರ್ಣ ಮಾಯವಾಗುವುದಿಲ್ಲ. ಒಂದು ಚಿಕ್ಕ ಗೆರೆಯಷ್ಟು ಉಳಿದುಕೊಳ್ಳುತ್ತದೆ, ಅದಕ್ಕೆ ಅಮಾವಾಸ್ಯೆ ಎಂದು ಹೇಳುತ್ತಾರೆ. ಈಗ ನಿಮ್ಮದು ಬೇಹದ್ದಿನ ಮಾತಾಗಿದೆ. ನೀವು 16 ಕಲಾ ಸಂಪೂರ್ಣರಾಗಿದ್ದೀರಿ, ಕೃಷ್ಣನ ಬಾಯಲ್ಲಿ ಮಾತೆಯರು ಚಂದ್ರಮನನ್ನು ನೋಡುತ್ತಾರೆಂದು ತೋರಿಸುತ್ತಾರೆ. ಇವು ಸಾಕ್ಷಾತ್ಕಾರದ ಮಾತುಗಳಾಗಿವೆ, ತಂದೆಯು ಇದರ ತಿಳುವಳಿಕೆ ನೀಡುತ್ತಾರೆ. ನೀವೀಗ ಸಂಪೂರ್ಣರಾಗಬೇಕಾಗಿದೆ, ಮಾಯೆಯ ಸಂಪೂರ್ಣ ಗ್ರಹಣ ಹಿಡಿದಿದೆ. ಕೊನೆಗೆ ಗೆರೆಯಷ್ಟು ಮಾತ್ರವೇ ಉಳಿದುಕೊಳ್ಳುತ್ತದೆ. ಏಣಿಯನ್ನು ಇಳಿಯುತ್ತಾ ಬಂದಿದ್ದಾರೆ. ಎಲ್ಲರೂ ಏಣಿಯನ್ನು ಇಳಿಯಲೇಬೇಕಾಗಿದೆ, ಆಗಲೇ ಪುನಃ ಎಲ್ಲರೂ ಹಿಂತಿರುಗಿ ಹೋಗುವರು. ನೀವಂತೂ ಈಗ ಕೆಲವರೇ ಇದ್ದೀರಿ, ದಿನ ಕಳೆದಂತೆ ವೃದ್ಧಿಯಾಗುವುದು. ವಿದ್ಯೆಯಲ್ಲಿ ಎಲ್ಲರೂ ತೇರ್ಗಡೆಯಾಗುವುದಿಲ್ಲ. ನಿಮ್ಮ ಸೇವಾಕೇಂದ್ರಗಳೂ ಸಹ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾ ಇರುತ್ತವೆ. ಸಮಯವು ಸಮೀಪಿಸುತ್ತಾ ಹೋದಂತೆ ಇವರಲ್ಲಿ ಏನಿದೆ ಎಂದು ತಿಳಿದುಕೊಳ್ಳುತ್ತಾರೆ. ದಿನ-ಪ್ರತಿದಿನ ವೃದ್ಧಿಯಾಗುತ್ತಾ ಇರುತ್ತೀರಿ. ಈಗ ಹೇಳುತ್ತಾರೆ – ಇವರು ಎಲ್ಲಿಯವರೆಗೆ ನಡೆಯುತ್ತಾರೆ? ಇವರದು ಸಮಾಪ್ತಿಯಾಗುತ್ತದೆ ಎಂದು ನಾವು ತಿಳಿದುಕೊಂಡಿದ್ದೆವು, ಆರಂಭದಲ್ಲಿ ಈ ಭಯದಿಂದ ಅನೇಕರು ಬಿಟ್ಟು ಹೋದರು. ಏನಾಗುವುದೋ ಗೊತ್ತಿಲ್ಲ, ಇಲ್ಲಿಯೂ ಇಲ್ಲ ಅಲ್ಲಿಯೂ ಇಲ್ಲ ಎನ್ನುವಂತಾಗಬಹುದು. ಇದಕ್ಕಿಂತಲೂ ಹೊರಟು ಹೋಗೋಣವೆಂದು ಅನೇಕರು ಹೊರಟು ಹೋದರು. ಪುನಃ ಅವರಲ್ಲಿ ಕೆಲವರು ಬರುತ್ತಿದ್ದಾರೆ. ತಂದೆಯು ಎಷ್ಟು ಸಹಜ ರೀತಿಯಿಂದ ತಿಳಿಸುತ್ತಾರೆ. ಈ ಅಬಲೆಯರು, ಅಹಲ್ಯೆಯರಿಗೆ ಏನೂ ಕಷ್ಟ ಕೊಡುವುದಿಲ್ಲ, ಇವರ ಉದ್ಧಾರವೂ ಸಹ ಆಗಬೇಕಾಗಿದೆ. ಬಾಬಾ, ನಾವಂತೂ ಏನೂ ಓದಿಲ್ಲ, ಅವಿದ್ಯಾವಂತರಾಗಿದ್ದೇವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಏನನ್ನೂ ಓದಿಲ್ಲದಿದ್ದರೆ ಇನ್ನೂ ಒಳ್ಳೆಯದೇ ಆಗಿದೆ. ಶಾಸ್ತ್ರ ಇತ್ಯಾದಿ ಏನೆಲ್ಲವನ್ನೂ ಓದಿದ್ದೀರೋ ಎಲ್ಲವನ್ನೂ ಮರೆತು ಬಿಡಿ. ನಾನು ಹೆಚ್ಚಿನದಾಗಿ ಏನನ್ನೂ ಓದಿಸುವುದಿಲ್ಲ. ಕೇವಲ ಹೇಳುತ್ತೇನೆ – ನನ್ನನ್ನು ನೆನಪು ಮಾಡಿದರೆ ರಾಜ್ಯಭಾಗ್ಯವು ನಿಮ್ಮದಾಗುವುದು. ನಿಮ್ಮ ದೋಣಿಯು ಪಾರಾಗಿ ಬಿಡುವುದು. ಮಗು ಜನ್ಮ ಪಡೆಯಿತೆಂದರೆ ಅಪ್ಪ ಎಂದು ಹೇಳುತ್ತಾರೆ. ಆಸ್ತಿಗೆ ಹಕ್ಕುದಾರನಾಗಿ ಬಿಡುತ್ತಾರೆ. ಹಾಗೆಯೇ ಇಲ್ಲಿಯೂ ನೀವು ಹಕ್ಕುದಾರರಾಗಿ ಬಿಡುತ್ತೀರಿ. ಬಾಪ್ದಾದಾರವರನ್ನು ನೆನಪು ಮಾಡಿದರೆ ಸಾಕು ರಾಜಧಾನಿಯು ನಿಮ್ಮದಾಗುವುದು ಆದ್ದರಿಂದಲೇ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ಸಾಹುಕಾರರ ಪಾತ್ರವಂತೂ ಅಂತಿಮದಲ್ಲಿರುತ್ತದೆ. ಮೊದಲು ಬಡವರೇ ಬಂದು ಜ್ಞಾನ ಪಡೆಯುವರು. ನಿಮ್ಮ ಬಳಿ ತಾವಾಗಿಯೇ ಬರುತ್ತಾರೆ. ಕೆಲಸಗಾರರ ಉದ್ಧಾರವನ್ನೂ ಸಹ ಮಾಡಬೇಕಾಗಿದೆ. ಬಿಲ್ಲಿನಿಯರ ಗಾಯನವೂ ಇದೆ. ರಾಮನು ಬಿಲ್ಲಿನಿಯರ ಬೇರಿ ಹಣ್ಣು ತಿಂದನೆಂದು ಹೇಳುತ್ತಾರೆ. ವಾಸ್ತವದಲ್ಲಿ ರಾಮನೂ ಇಲ್ಲ, ಶಿವ ತಂದೆಯೂ ಇಲ್ಲ. ಹಾ! ಈ ಬ್ರಹ್ಮಾರವರು ತಿನ್ನಬಹುದು, ಬಿಲ್ಲಿನಿಯರು (ಕಾಡು ಜನಾಂಗ) ಬರುತ್ತಾರೆ. ತಿಳಿದುಕೊಳ್ಳಿ, ಅವರು ಟೋಲಿ ಇತ್ಯಾದಿಗಳನ್ನು ತರುತ್ತಾರೆಂದರೆ ಅದನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಬಿಲ್ಲಿನಿಯರು, ಗಣಿಕೆಯರು ತೆಗೆದುಕೊಂಡು ಬಂದರೆ ನೀವೂ ಸಹ ತಿನ್ನುವಿರಿ. ಶಿವ ತಂದೆಯು ಹೇಳುತ್ತಾರೆ – ನಾನಂತೂ ತಿನ್ನುವುದಿಲ್ಲ, ನಾನು ಅಭೋಕ್ತನಾಗಿದ್ದೇನೆ. ನಿಮ್ಮ ಬಳಿ ಎಲ್ಲರೂ ಬರುತ್ತಾರೆ, ಮೊದಲು ಇವರನ್ನು ಮೇಲೆತ್ತಿರಿ ಎಂದು ಸರ್ಕಾರವೂ ಸಹ ಸಹಯೋಗ ನೀಡುವುದು. ನಿಮಗೂ ಸಹ ತಾನಾಗಿಯೇ ಪ್ರೇರಣೆಯಾಗುವುದು. ತಂದೆಯು ಬಡವರ ಬಂಧುವಾಗಿದ್ದಾರೆ ಅಂದಮೇಲೆ ನಾವೂ ಸಹ ಬಡವರಿಗೆ ತಿಳಿಸೋಣ, ಕಾಡು ಜನರಲ್ಲಿಯೂ ಕೆಲವರಾದರೂ ಬಂದೇ ಬರುತ್ತಾರೆ. ಇಷ್ಟು ದೊಡ್ಡ ವೃಕ್ಷವಿದೆ, ಇದರಲ್ಲಿ ಒಬ್ಬರೂ ದೇವಿ-ದೇವತಾ ಧರ್ಮದವರಿಲ್ಲ, ಮತ್ತೆಲ್ಲಾ ಧರ್ಮಗಳಲ್ಲಿ ಹೋಗಿ ಸೇರಿ ಬಿಟ್ಟಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ – ಯಾರು ಭಕ್ತಿ ಮಾಡುವವರಿದ್ದಾರೆಯೋ ಅವರಿಗೆ ತಿಳಿಸಿಕೊಡಿ. ನೀವು ನೋಡುತ್ತಿದ್ದೀರಿ – ಹೇಗೆ ನಾಟಿಯಾಗುತ್ತಿದೆ! ಹೇಗೆ ಬ್ರಾಹ್ಮಣರಾಗುತ್ತಾರೆ! ಯಾರು ಸೂರ್ಯವಂಶಿ, ಚಂದ್ರವಂಶಿ ದೇವತೆಗಳಾಗ ಬೇಕಾಗಿದೆಯೋ ಅವರೇ ಬರತೊಡಗುತ್ತಾರೆ. ಒಂದು ಬಾರಿ ಈ ಜ್ಞಾನವನ್ನು ಕೇಳಿದರೂ ಸಹ ಸ್ವರ್ಗದಲ್ಲಿ ಖಂಡಿತ ಬಂದೇ ಬರುತ್ತಾರೆ. ತಂದೆಯು ಕಾಶಿಯಲ್ಲಿ ಬಲಿಯಾಗುವ ಉದಾಹರಣೆಯನ್ನೂ ತಿಳಿಸಿದ್ದಾರೆ. ಅಲ್ಲಿ ಹೋಗಿ ಶಿವನಿಗೆ ಬಲಿಯಾಗುತ್ತಾರೆ. ಅವರಿಗೂ ಸಹ ಏನಾದರೂ ಸಿಗಬೇಕಲ್ಲವೆ. ನೀವು ಬಲಿಹಾರಿಯಾಗುತ್ತೀರಿ, ರಾಜ್ಯ ಪದವಿಗಾಗಿ ಪುರುಷಾರ್ಥ ಮಾಡುತ್ತೀರಿ. ಭಕ್ತಿಮಾರ್ಗದಲ್ಲಿ ರಾಜ್ಯವಂತೂ ಇರುವುದಿಲ್ಲ. ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ ಅಂದಮೇಲೆ ಏನಾಗುತ್ತದೆ, ಅವರು ಯಾವ ಪಾಪಗಳನ್ನು ಮಾಡಿದ್ದಾರೆಯೋ ಅದರ ಶಿಕ್ಷೆಯನ್ನು ಅನುಭವಿಸಿ ಅದನ್ನು ಮುಗಿಸಿಕೊಳ್ಳುತ್ತಾರೆ ನಂತರ ಹೊಸದಾಗಿ ಜನ್ಮವಾಗುತ್ತದೆ. ಮತ್ತೆ ಹೊಸದಾಗಿ ಪಾಪವಾಗಲು ಆರಂಭವಾಗುತ್ತದೆ ಬಾಕಿ ಅವರು ಎಲ್ಲಿಯೂ ಹೋಗುವುದಿಲ್ಲ, ಇಲ್ಲಿಯೇ ಜನ್ಮ ಕಳೆಯಬೇಕಾಗಿದೆ. ನೀವೇ ಮೊಟ್ಟ ಮೊದಲಿಗರಾಗಿದ್ದೀರಿ, ನೀವೇ 84 ಜನ್ಮಗಳನ್ನು ಭೋಗಿಸುತ್ತೀರಿ. ಎಲ್ಲರೂ ಸತೋ, ರಜೋ, ತಮೋದಲ್ಲಿ ಬರಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ – ಈ ಸಮಯದಲ್ಲಿ ಇಡೀ ಮನುಷ್ಯ ಸೃಷ್ಟಿಯ ವೃಕ್ಷವು ಜಡಜಡೀಭೂತವಾಗಿ ಬಿಟ್ಟಿದೆ. ಮನುಷ್ಯರು ಸಂಪೂರ್ಣ ಘೋರ ಅಂಧಕಾರದಲ್ಲಿ ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ. ಒಬ್ಬ ಕುಂಭಕರ್ಣನಿರಲಿಲ್ಲ, ಅನೇಕರಿದ್ದಾರೆ. ನೀವು ಇಷ್ಟಾದರೂ ತಿಳಿಸಿ, ಅವರು ಕೇಳಿಸಿಕೊಳ್ಳುವುದೇ ಇಲ್ಲ. ಯಾರದು ಪಾತ್ರವಿದೆಯೋ ಅವರು ಪುರುಷಾರ್ಥ ಮಾಡುತ್ತಾರೆ ಮತ್ತು ಅವರೇ ಮಾತಾಪಿತರ ಹೃದಯವನ್ನೇರುತ್ತಾರೆ, ಅವರೇ ಸಿಂಹಾಸನಾಧೀಶರಾಗುತ್ತಾರೆ. ಬಾಬಾ ಮಕ್ಕಳಿಗೆ ಶಿಕ್ಷಣ ಕೊಡಬೇಕಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಇದನ್ನು ಆಲೋಚಿಸಬೇಡಿ, ನಾವು ಪತಿತರನ್ನು ಪಾವನ ಮಾಡಿ ಎಂದು ನೀವು ಕರೆಯುತ್ತೀರಿ. ತಂದೆಯೂ ಸಹ ಹೇಳುತ್ತಾರೆ, ಕಾಮ ಮಹಾಶತ್ರುವಾಗಿದೆ. ಕ್ರೋಧವು ಶತ್ರುವೆಂದು ಹೇಳಲಾಗುವುದಿಲ್ಲ. ಪುರುಷರು ಬಹಳ ಹೊಡೆದಾಡುತ್ತಾರೆ, ಮಾತೆಯರಲ್ಲಿ ಅಷ್ಟೊಂದು ಇರುವುದಿಲ್ಲ. ಈಗ ತಂದೆಯು ನೀವು ಮಾತೆಯರನ್ನು ಮುಂದಿಟ್ಟಿದ್ದಾರೆ. ವಂದೇ ಮಾತರಂ. ಪತಿಯು ನಿಮಗೆ ಗುರು, ಈಶ್ವರನಾಗಿದ್ದಾರೆ, ಅವರ ಮತದಂತೆ ನಡೆಯಬೇಕೆಂದು ಮಾತೆಯರಿಗೆ ಹೇಳಿಕೊಡುತ್ತಾರೆ. ಮಾಂಗಲ್ಯ ಕಟ್ಟಿದರೆ ಸಾಕು ಕೂಡಲೇ ಪತಿತರಾಗುವರು. ಅವರಿಗೆ ಈ ಈಶ್ವರ ಸಿಕ್ಕಿದನೇ! ಈಗ ರಾಮ ರಾಜ್ಯವು ಸ್ಥಾಪನೆಯಾಗುತ್ತದೆ, ಉಳಿದೆಲ್ಲರೂ ಹೊರಟು ಹೋಗುತ್ತಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂದೂ ತಂದೆಯು ತಿಳಿಸುತ್ತಾರೆ. ಈಗ ನಿಮಗೆ ಪರಮಪಿತ ಪರಮಾತ್ಮನೊಂದಿಗೆ ಪ್ರೀತಿಬುದ್ಧಿಯಿದೆ. ಶಿವ ತಂದೆಯು ಇವರಲ್ಲಿ ಬರುತ್ತಾರೆ, ಇವರ ಮೂಲಕ ನಾವು ಕೇಳುತ್ತಿದ್ದೇವೆ ಎಂದು ನೀವಾತ್ಮರಿಗೆ ತಿಳಿದಿದೆ. ಆತ್ಮವು ಚಿಕ್ಕ ಬಿಂದುವಾಗಿದೆ. ಶಿವ ತಂದೆಗೆ ಇದು ತಾತ್ಕಾಲಿಕ ರಥವಾಗಿದೆ. ಇವರ ಮೂಲಕ ಈ ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದಾರೆ, ಇದು ವೃದ್ಧಿಯಾಗುತ್ತಲೇ ಹೋಗುವುದು. ಮಕ್ಕಳ ಹನಿ ಹನಿಗೂಡಿ ಹಳ್ಳವಾಗುವುದು. ಮಕ್ಕಳು ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳುತ್ತಾ ಇರುತ್ತೀರಿ ಏಕೆಂದರೆ ಇದೆಲ್ಲವೂ ಮಣ್ಣು ಪಾಲಾಗಲಿದೆ, ಏನೂ ಉಳಿಯುವುದಿಲ್ಲ. ಆದ್ದರಿಂದ ಇಷ್ಟಾದರೂ ಸಫಲವಾಗಲಿ. ಸುಧಾಮನ ಉದಾಹರಣೆ ಇದೆಯಲ್ಲವೆ. ಹೆಣ್ಣು ಮಕ್ಕಳು ತಂದೆಯ ಬಳಿ ಹಿಡಿ ಅವಲಕ್ಕಿ ಅಥವಾ 6-8 ರೂಪಾಯಿಗಳನ್ನು ಕಳುಹಿಸುತ್ತಾರೆ. ವಾಹ್ ಮಗುವೆ! ತಂದೆಯಂತೂ ಬಡವರ ಬಂಧುವಲ್ಲವೆ. ಇದಂತೂ ಡ್ರಾಮದಲ್ಲಿ ನಿಗಧಿಯಾಗಿದೆ, ಇದು ಕಲ್ಪದ ನಂತರವೂ ಆಗುವುದು. ಬಂಧನದಲ್ಲಿ ಇರುವವರಿದ್ದಾರೆ, ತಂದೆಯು ಹೇಳುತ್ತಾರೆ – ನೀವು ಭಾಗ್ಯಶಾಲಿಗಳಾಗಿದ್ದೀರಿ, ಶಿವ ತಂದೆಯ ಕೈಯಂತೂ ಸಿಕ್ಕಿದೆಯಲ್ಲವೆ. ಮುಂದೆ ಒಂದು ದಿನ ಬರುವುದು ಎಲ್ಲಾ ಆರ್ಯ ಸಮಾಜಿಗಳೂ ಬರುತ್ತಾರೆ. ಇನ್ನೆಲ್ಲಿಗೆ ಹೋಗುವರು? ಮುಕ್ತಿ-ಜೀವನ್ಮುಕ್ತಿಯ ಅಂಗಡಿಯು ಇದೊಂದೇ ಆಗಿದೆ, ಶಿಕ್ಷೆಗಳನ್ನು ಅನುಭವಿಸಿ ಮುಕ್ತಿಯಲ್ಲಿ ಹೋಗಬೇಕಾಗಿದೆ, ಇದು ಅಂತಿಮ ಸಮಯವಾಗಿದೆ. ಎಲ್ಲರೂ ಹಿಂತಿರುಗಿ ಹೋಗುತ್ತಾರೆ. ಇದು ಪ್ರಿಯತಮನ ಮೆರವಣಿಗೆಯಾಗಿದೆ. ಹೇಗೆ ಮೆರವಣಿಗೆಯು ನಡೆಯುತ್ತದೆ ಎಂಬುದೂ ಸಹ ಸಾಕ್ಷಾತ್ಕಾರವಾಗುವುದು. ನಿಮ್ಮ ವಿನಃ ಮತ್ತ್ಯಾರೂ ನೋಡಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಮೂಲಕ ಜ್ಞಾನದ ಯಾವ ಗುಪ್ತ ದಾನ ಸಿಕ್ಕಿದೆಯೊ ಅದರ ಬೆಲೆಯನ್ನರಿತು ತಮ್ಮ ಜೋಳಿಗೆಯನ್ನು ಜ್ಞಾನ ರತ್ನಗಳಿಂದ ತುಂಬಿಸಿಕೊಳ್ಳಬೇಕಾಗಿದೆ. ಎಲ್ಲರಿಗೆ ಗುಪ್ತ ದಾನವನ್ನು ಕೊಡುತ್ತಾ ಹೋಗಬೇಕಾಗಿದೆ.

2. ಈ ಅಂತಿಮ ಸಮಯದಲ್ಲಿ ಹಿಂತಿರುಗಿ ಹೋಗಬೇಕಾಗಿದೆ, ಆದ್ದರಿಂದ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಬೇಕು. ಪ್ರೀತಿ ಬುದ್ಧಿಯವರು ಆಗಬೇಕಾಗಿದೆ, ಎಲ್ಲರಿಗೆ ಮುಕ್ತಿ ಹಾಗೂ ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಬೇಕಾಗಿದೆ.

ವರದಾನ:-

ಯಾವಾಗ ತಾವು ಮಕ್ಕಳು ಸತ್ಯತೆಯ ಶಕ್ತಿಯನ್ನು ಧಾರಣೆ ಮಾಡಿಕೊಂಡು ಮಾಸ್ಟರ್ ವಿಧಿ-ವಿಧಾತಾ ಆಗುವಿರಿ, ಆಗಲೇ ಪ್ರಕೃತಿಯು ಸತೋಪ್ರಧಾನವಾಗಿ ಬಿಡುತ್ತದೆ, ಯುಗವು ಸತ್ಯಯುಗವಾಗುತ್ತದೆ. ಸರ್ವ ಆತ್ಮರುಗಳು ಸದ್ಗತಿಯ ಅದೃಷ್ಟವನ್ನು ಬೆಳಗಿಸಿಕೊಳ್ಳುವರು. ತಮ್ಮ ಸತ್ಯತೆಯು ಪಾರಸದಂತೆ, ಹೇಗೆ ಪಾರಸವು ಲೋಹವನ್ನೂ ಪಾರಸವನ್ನಾಗಿ ಮಾಡಿ ಬಿಡುತ್ತದೆಯೋ ಹಾಗೆಯೇ ಸತ್ಯತೆಯ ಶಕ್ತಿಯು ಆತ್ಮನನ್ನು, ಪ್ರಕೃತಿಯನ್ನು, ಸಮಯವನ್ನು, ಸರ್ವ ಸಾಮಗ್ರಿಗಳನ್ನು, ಸರ್ವ ಸಂಬಂಧ, ಸಂಸ್ಕಾರಗಳನ್ನೂ, ಆಹಾರ-ವ್ಯವಹಾರ ಎಲ್ಲವನ್ನೂ ಸತೋಪ್ರಧಾನವನ್ನಾಗಿ ಮಾಡಿ ಬಿಡುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top