20 June 2021 KANNADA Murli Today | Brahma Kumaris

20 june 2021 Read and Listen today’s Gyan Murli in Kannada

June 19, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸಾಹಸದ ಮೊದಲ ಹೆಜ್ಜೆ – ಸಮರ್ಪಣತೆ (ಬ್ರಹ್ಮಾ ತಂದೆಯ ಜೀವನ ಚರಿತ್ರೆ)

♫ ಕೇಳು ಇಂದಿನ ಮುರ್ಲಿ (audio)➤

ಇಂದು ಸ್ನೇಹ ಸಾಗರ ಬಾಪ್ದಾದಾ ತನ್ನ ಸ್ನೇಹೀ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಪ್ರತಿಯೊಬ್ಬ ಸ್ನೇಹೀ ಆತ್ಮನಿಗೆ ಒಂದೇ ಲಗನ್ನಿದೆ, ಶ್ರೇಷ್ಠ ಸಂಕಲ್ಪವಿದೆ – ನಾವೆಲ್ಲರೂ ತಂದೆಯ ಸಮಾನರಾಗಬೇಕು, ಸ್ನೇಹದಲ್ಲಿ ಸಮಾವೇಶವಾಗಬೇಕು. ಸ್ನೇಹದಲ್ಲಿ ಸಮಾವೇಶವಾಗುವುದು ಎಂದರೆ ತಂದೆಯ ಸಮಾನರಾಗುವುದು. ಎಲ್ಲರ ಹೃದಯದಲ್ಲಿ ಇದೇ ಸಂಕಲ್ಪವಿದೆ – ನಾವು ಬಾಪ್ದಾದಾರವರ ಮೂಲಕ ಪ್ರಾಪ್ತವಾಗಿರುವ ಸ್ನೇಹ, ಶಕ್ತಿಶಾಲಿ ಪಾಲನೆ ಮತ್ತು ಅಕೂಟ ಅವಿನಾಶಿ ಖಜಾನೆಗಳಿಗೆ ಅವಶ್ಯವಾಗಿ ರಿಟರ್ನ್ (ಮರು ಪಾವತಿ) ಕೊಡಬೇಕಾಗಿದೆ. ಅಂದಮೇಲೆ ರಿಟರ್ನ್ ಏನು ಕೊಡುತ್ತೀರಿ? ಹೃದಯದ ಸ್ನೇಹವನ್ನು ಬಿಟ್ಟರೆ ನಿಮ್ಮ ಬಳಿ ಮತ್ತೇನಿದೆ? ಏನೆಲ್ಲವೂ ಇದೆಯೋ ಅದು ತಂದೆಯು ಕೊಟ್ಟಿರುವುದೇ ಆಗಿದೆ ಅಂದಮೇಲೆ ಅದನ್ನೇನು ಕೊಡುವಿರಿ? ತಂದೆಯ ಸಮಾನರಾಗುವುದೇ ಅವರಿಗೆ ರಿಟರ್ನ್ ಆಗಿದೆ ಮತ್ತು ಇದನ್ನು ಎಲ್ಲರೂ ಮಾಡಬಲ್ಲಿರಿ.

ಬಾಪ್ದಾದಾ ನೋಡುತ್ತಿದ್ದರು – ಇತ್ತೀಚೆಗೆ ಎಲ್ಲರ ಹೃದಯದಲ್ಲಿ ವಿಶೇಷವಾಗಿ ಬ್ರಹ್ಮಾ ತಂದೆಯ ಸ್ಮೃತಿ ಹೆಚ್ಚಿನದಾಗಿ ಇಮರ್ಜ್ ಆಗಿದೆ. ಶರೀರದ ಸ್ಮೃತಿಯಲ್ಲ ಆದರೆ ಚರಿತ್ರೆಗಳ, ವಿಶೇಷತೆಗಳ ಸ್ಮೃತಿಯಾಗಿದೆ ಏಕೆಂದರೆ ಅಲೌಕಿಕ ಬ್ರಾಹ್ಮಣ ಜೀವನವು ಜ್ಞಾನ ಸ್ವರೂಪ ಜೀವನವಾಗಿದೆ. ಜ್ಞಾನ ಸ್ವರೂಪರಾಗಿರುವ ಕಾರಣ ದೇಹದ ಸ್ಮೃತಿಯೂ ಸಹ ದುಃಖದ ಅಲೆಯನ್ನು ತರುವುದಿಲ್ಲ. ಅಜ್ಞಾನಿ ಜೀವನದಲ್ಲಿ ಯಾರನ್ನೇ ನೆನಪು ಮಾಡಿದರೂ ಸಹ ದೇಹವು ಸನ್ಮುಖದಲ್ಲಿ ಬರುತ್ತದೆ, ದೇಹದ ಸಂಬಂಧಗಳ ಕಾರಣ ದುಃಖದ ಅನುಭೂತಿಯಾಗುತ್ತದೆ ಆದರೆ ತಾವು ಬ್ರಾಹ್ಮಣ ಮಕ್ಕಳಿಗೆ ತಂದೆಯ ಸ್ಮೃತಿ ಬರುತ್ತಿದ್ದಂತೆಯೇ ನಾವೂ ಸಹ “ತಂದೆಯ ಸಮಾನ” ರಾಗಲೇಬೇಕಾಗಿದೆ ಎಂಬ ಸಾಮರ್ಥ್ಯವು ಬಂದು ಬಿಡುತ್ತದೆ. ಅಲೌಕಿಕ ತಂದೆಯ ಸ್ಮೃತಿಯು ಸಾಮರ್ಥ್ಯ ಅರ್ಥಾತ್ ಶಕ್ತಿಯನ್ನು ತರಿಸುತ್ತದೆ. ಭಲೆ ಕೆಲವು ಮಕ್ಕಳು ಹೃದಯದ ಸ್ನೇಹವನ್ನು ನಯನಗಳ ಮುತ್ತುಗಳ ಮೂಲಕವೂ ಸಹ ಪ್ರಕಟ ಮಾಡುತ್ತಾರೆ ಆದರೆ ಅದು ದುಃಖದ ಕಣ್ಣೀರಲ್ಲ, ವಿಯೋಗದ ಕಣ್ಣೀರಲ್ಲ, ಇವು ಸ್ನೇಹದ ಮುತ್ತುಗಳಾಗಿವೆ. ಹೃದಯದ ಮಿಲನದ ಸ್ನೇಹವಾಗಿದೆ. ವಿಯೋಗಿಗಳಲ್ಲ, ತಾವು ರಾಜಯೋಗಿಗಳಾಗಿದ್ದೀರಿ ಏಕೆಂದರೆ ಹೃದಯದ ಸ್ನೇಹವು ನಾವೂ ಸಹ ಬೇಗ ಬೇಗನೆ ಮೊದಲು ತಂದೆಗೆ ರಿಟರ್ನ್ ಕೊಡಬೇಕೆಂದು ಶಕ್ತಿಯನ್ನು ತರಿಸುತ್ತದೆ. ರಿಟರ್ನ್ ಕೊಡುವುದು ಎಂದರೆ ಸಮಾನರಾಗುವುದು. ಈ ವಿಧಿಯಿಂದಲೇ ತಮ್ಮ ಸ್ನೇಹಿ ಬಾಪ್ದಾದಾರವರ ಜೊತೆ ಮಧುರ ಮನೆಗೆ ರಿಟರ್ನ್ ಆಗುತ್ತೀರಿ ಅರ್ಥಾತ್ ಜೊತೆಯಲ್ಲಿ ಹಿಂತಿರುಗಿ ಹೋಗುತ್ತೀರಿ. ರಿಟರ್ನ್ ಕೊಡಲೂಬೇಕಾಗಿದೆ ಮತ್ತು ತಂದೆಯ ಜೊತೆ ಹೋಗಲೂಬೇಕಾಗಿದೆ. ಆದ್ದರಿಂದ ತಮ್ಮ ಸ್ನೇಹ ಮತ್ತು ನೆನಪು ಪ್ರಪಂಚದಿಂದ ಭಿನ್ನ ಹಾಗೂ ತಂದೆಗೆ ಪ್ರಿಯರಾಗುವಂತದ್ದಾಗಿದೆ.

ಅಂದಾಗ ಬಾಪ್ದಾದಾ ಮಕ್ಕಳ ಸಮರ್ಥರಾಗುವ ಸಂಕಲ್ಪ, ಸಮಾನರಾಗುವ ಉಲ್ಲಾಸವನ್ನು ನೋಡುತ್ತಿದ್ದೇವೆ. ಬ್ರಹ್ಮಾ ತಂದೆಯ ವಿಶೇಷತೆಗಳನ್ನು ನೋಡುತ್ತಿದ್ದೆವು. ಒಂದುವೇಳೆ ಬ್ರಹ್ಮಾ ತಂದೆಯ ವಿಶೇಷತೆಗಳನ್ನು ವರ್ಣನೆ ಮಾಡಿದರೆ ಎಷ್ಟಾಗಬಹುದು? ಪ್ರತೀ ಹೆಜ್ಜೆಯಲ್ಲಿ ವಿಶೇಷತೆಯಿತ್ತು, ಸಂಕಲ್ಪದಲ್ಲಿಯೂ ವಿಶೇಷ ವ್ಯಕ್ತಿಗಳನ್ನಾಗಿ ಮಾಡುವ ಉಲ್ಲಾಸ-ಉತ್ಸಾಹವು ಪ್ರತೀ ಸಮಯ ಇರುತ್ತಿತ್ತು. ತಮ್ಮ ವೃತ್ತಿಯ ಮೂಲಕ ಪ್ರತೀ ಆತ್ಮನನ್ನು ಉಲ್ಲಾಸ-ಉತ್ಸಾಹದಲ್ಲಿ ತರುವ ವಿಶೇಷತೆಯನ್ನು ಬ್ರಹ್ಮಾ ತಂದೆಯಲ್ಲಿ ಸದಾ ಪ್ರತ್ಯಕ್ಷ ರೂಪದಲ್ಲಿ ನೋಡಿದಿರಿ. ವಾಣಿಯ ಮೂಲಕ ಸಾಹಸವನ್ನು ತರಿಸುವಂತಹ, ಭರವಸೆಯಿಲ್ಲದವರನ್ನು ಭರವಸೆಯಲ್ಲಿ ತರುವಂತಹ, ನಿರ್ಬಲ ಆತ್ಮನನ್ನು ಹಾರುವ ಕಲೆಯ ವಿಧಿಯಿಂದ ಹಾರಿಸುವಂತಹ, ಸೇವೆಗೆ ಯೋಗ್ಯರನ್ನಾಗಿ ಮಾಡುವಂತಹ ಪ್ರತೀ ಮಾತು ಅಮೂಲ್ಯ, ಮಧುರ, ಯುಕ್ತಿ ಯುಕ್ತವಾಗಿತ್ತು. ಅದೇರೀತಿ ಕರ್ಮದಲ್ಲಿ ಮಕ್ಕಳ ಜೊತೆ ಪ್ರತೀ ಕರ್ಮದಲ್ಲಿ ಜೊತೆಗಾರನಾಗಿ ಕರ್ಮಯೋಗಿಗಳನ್ನಾಗಿ ಮಾಡಿದರು. ಕೇವಲ ಸಾಕ್ಷಿಯಾಗಿ ನೋಡುವವರಲ್ಲ ಆದರೆ ಸ್ಥೂಲ ಕರ್ಮದ ಮಹತ್ವಿಕೆಯನ್ನು ಅನುಭವ ಮಾಡಿಸುವುದಕ್ಕಾಗಿ ಕರ್ಮದಲ್ಲಿಯೂ ಜೊತೆಗಾರನಾದರು. ನಾನು ಯಾವ ಕರ್ಮ ಮಾಡುತ್ತೇನೆಯೋ ನನ್ನನ್ನು ನೋಡಿ ಮಕ್ಕಳೂ ಸ್ವತಹ ಮಾಡುತ್ತಾರೆ – ಈ ಪಾಠವನ್ನು ಸದಾ ಕರ್ಮ ಮಾಡಿ ತೋರಿಸಿದರು. ಸಂಬಂಧ-ಸಂಪರ್ಕದಲ್ಲಿ ಚಿಕ್ಕ ಮಕ್ಕಳಿಗೂ ಸಹ ಸಂಬಂಧದಿಂದ ಮಕ್ಕಳ ಸಮಾನರಾಗಿ ಖುಷಿ ಪಡಿಸಿದರು. ವಾನಪ್ರಸ್ಥಿಗಳಿಗೂ (ವೃದ್ಧರು) ಸಹ ವಾನಪ್ರಸ್ಥ ರೂಪದಿಂದ ಅನುಭವಿಯಾಗಿ ಸಂಬಂಧ-ಸಂಪರ್ಕದಿಂದ ಸದಾ ಉಲ್ಲಾಸ-ಉತ್ಸಾಹದಲ್ಲಿ ತಂದರು. ಬಾಲಕರೊಂದಿಗೆ ಬಾಲ್ಯ ರೂಪ, ಯುವಕರೊಂದಿಗೆ ಯುವ ರೂಪ ಮತ್ತು ವೃದ್ಧರೊಂದಿಗೆ ವೃದ್ಧ ರೂಪನಾಗಿ ಸದಾ ಮುಂದುವರೆಸಿದರು. ಸದಾ ಸಂಬಂಧ-ಸಂಪರ್ಕದಿಂದ ಪ್ರತಿಯೊಬ್ಬರಿಗೆ ನನ್ನತನದ ಅನುಭವ ಮಾಡಿಸಿದರು. ಚಿಕ್ಕ ಮಕ್ಕಳೂ ಸಹ ಹೇಳುವರು – “ಬಾಬಾ ನನ್ನನ್ನು ಎಷ್ಟು ಪ್ರೀತಿ ಮಾಡುತ್ತಾರೆಯೋ ಅಷ್ಟು ಮತ್ತ್ಯಾರನ್ನೂ ಮಾಡುವುದಿಲ್ಲ” ಅಂದಾಗ ಪ್ರತಿಯೊಬ್ಬರಿಗೂ ಇಷ್ಟೊಂದು ಪ್ರೀತಿ ಕೊಟ್ಟರು, ಅದರಿಂದ ಪ್ರತಿಯೊಬ್ಬರೂ ಸಹ ಬಾಬಾ ನನ್ನವರಾಗಿದ್ದಾರೆಂದು ತಿಳಿಯುತ್ತಿದ್ದರು. ಇದು ಸಂಬಂಧ-ಸಂಪರ್ಕದ ವಿಶೇಷತೆಯಾಗಿದೆ. ನೋಡುವುದರಲ್ಲಿ ಪ್ರತಿಯೊಂದು ಆತ್ಮನ ವಿಶೇಷತೆ ಮತ್ತು ಗುಣವನ್ನೇ ನೋಡುವುದು ಮತ್ತೆ ಆಲೋಚನೆಯಲ್ಲಿ ನೋಡಿ, ಸದಾ ಇವರು ಕೊನೆಯ ನಂಬರಿನ ಮಣಿಯಾಗಿದ್ದಾರೆ ಎಂಬುದು ಗೊತ್ತಿದ್ದರೂ ಸಹ ಅಂತಹ ಆತ್ಮನ ಪ್ರತಿಯೂ ಸದಾ ಇವರೂ ಸಹ ಮುಂದುವರೆಯಲಿ ಎಂದು ಪ್ರತಿಯೊಂದು ಆತ್ಮನ ಪ್ರತಿ ಶುಭ ಚಿಂತಕರಾಗಿದ್ದರು. ಈ ವಿಶೇಷತೆಗಳನ್ನು ಎಲ್ಲಾ ಮಕ್ಕಳು ಅನುಭವ ಮಾಡಿದಿರಿ. ಇವೆಲ್ಲಾ ಮಾತುಗಳಲ್ಲಿ ಸಮಾನರಾಗುವುದು ಅರ್ಥಾತ್ ಫಾಲೋ ಫಾದರ್ ಮಾಡುವುದಾಗಿದೆ. ಫಾಲೋ ಮಾಡುವುದು ಕಷ್ಟವಾಗುತ್ತದೆಯೇ? ಇದಕ್ಕೇ ಸ್ನೇಹ, ಇದಕ್ಕೇ ರಿಟರ್ನ್ ಕೊಡುವುದೆಂದು ಹೇಳಲಾಗುತ್ತದೆ. ಅಂದಾಗ ಬಾಪ್ದಾದಾ ನೋಡುತ್ತಿದ್ದೆವು, ಪ್ರತಿಯೊಬ್ಬ ಮಗುವೂ ಇಲ್ಲಿಯವರೆಗೆ ಎಷ್ಟು ರಿಟರ್ನ್ ಕೊಟ್ಟಿದ್ದಾರೆ? ಎಲ್ಲರ ಲಕ್ಷ್ಯವಂತೂ ಒಂದೇ ಆಗಿದೆ ಆದರೆ ಪ್ರತ್ಯಕ್ಷ ಜೀವನದಲ್ಲಿಯೇ ನಂಬರ್ವಾರ್ ಇದ್ದಾರೆ. ಎಲ್ಲರೂ ನಂಬರ್ವನ್ ಆಗಲು ಬಯಸುತ್ತೀರಿ, ಎರಡನೇ ಮೂರನೆಯವರಾಗಲು ಯಾರೂ ಇಷ್ಟ ಪಡುವುದಿಲ್ಲ. ಈ ಲಕ್ಷ್ಯವು ಶಕ್ತಿಶಾಲಿ ಮತ್ತು ಚೆನ್ನಾಗಿದೆ ಆದರೆ ಲಕ್ಷ್ಯ ಮತ್ತು ಲಕ್ಷಣಗಳು ಸಮಾನವಾಗಿರುವುದೇ ಸಮಾನರಾಗುವುದಾಗಿದೆ. ಇದಕ್ಕಾಗಿ ಹೇಗೆ ಬ್ರಹ್ಮಾ ತಂದೆಯು ಇಂತಹ ಮೊದಲ ಯಾವ ಸಾಹಸದ ಹೆಜ್ಜೆಯನ್ನಿಟ್ಟರು ಅದರಿಂದಲೇ ಪದಮಾಪದಮ ಭಾಗ್ಯಶಾಲಿಯ ಅನುಭವ ಮಾಡಿದರು? ಮೊದಲ ಸಾಹಸದ ಹೆಜ್ಜೆಯಾಗಿದೆ – ಎಲ್ಲಾ ಮಾತುಗಳಲ್ಲಿ ಸಮರ್ಪಣತೆ. ಎಲ್ಲವನ್ನು ಸಮರ್ಪಣೆ ಮಾಡಿದರು, ಏನಾಗುವುದೋ, ಹೇಗಾಗುವುದೋ ಎಂದು ಏನನ್ನೂ ಆಲೋಚಿಸಲಿಲ್ಲ. ಒಂದು ಸೆಕೆಂಡಿನಲ್ಲಿ ತಂದೆಯ ಶ್ರೇಷ್ಠ ಮತದ ಪ್ರಮಾಣ ತಂದೆಯು ಸೂಚನೆ ಕೊಟ್ಟರು, ತಂದೆಯ ಸೂಚನೆಯಂತೆ ಬ್ರಹ್ಮಾ ತಂದೆಯ ಕರ್ಮ ಹಾಗೂ ಹೆಜ್ಜೆಯಿತ್ತು. ಇದಕ್ಕೆ ಸಾಹಸದ ಮೊದಲ ಹೆಜ್ಜೆಯೆಂದು ಹೇಳುತ್ತಾರೆ. ತನುವನ್ನೂ ಸಮರ್ಪಣೆ ಮಾಡಿದರು, ಮನಸ್ಸನ್ನೂ ಸಹ ಸದಾ ಮನ್ಮನಾಭವದ ವಿಧಿಯಿಂದ ಸಿದ್ಧಿ ಸ್ವರೂಪವನ್ನಾಗಿ ಮಾಡಿಕೊಂಡರು ಆದ್ದರಿಂದ ಮನಸ್ಸು ಅರ್ಥಾತ್ ಪ್ರತೀ ಸಂಕಲ್ಪ ಸಿದ್ಧಿ ಅರ್ಥಾತ್ ಸಫಲತಾ ಸ್ವರೂಪರಾದರು. ಧನವನ್ನೂ ಸಹ ಭವಿಷ್ಯದ ಯಾವುದೇ ಚಿಂತೆಯಿಲ್ಲದೆ ನಿಶ್ಚಿಂತರಾಗಿ ಧನ ಸಮರ್ಪಣೆ ಮಾಡಿದರು ಏಕೆಂದರೆ ಅವರಿಗೆ ಇದು ಕೊಡುವುದಲ್ಲ, ಪದುಮದಷ್ಟು ತೆಗೆದುಕೊಳ್ಳುವುದಾಗಿದೆ ಎಂಬ ನಿಶ್ಚಯವಿತ್ತು, ಇದೇರೀತಿ ಸಂಬಂಧವನ್ನೂ ಸಮರ್ಪಣೆ ಮಾಡಿದರು ಅರ್ಥಾತ್ ಲೌಕಿಕವನ್ನು ಅಲೌಕಿಕ ಸಂಬಂಧದಲ್ಲಿ ಪರಿವರ್ತನೆ ಮಾಡಿದರು. ಬಿಟ್ಟು ಬಿಡಲಿಲ್ಲ, ಕಲ್ಯಾಣ ಮಾಡಿದರು ಪರಿವರ್ತನೆ ಮಾಡಿದರು. ನನ್ನತನದ ಬುದ್ಧಿ, ಅಭಿಮಾನದ ಬುದ್ಧಿಯನ್ನು ಸಮರ್ಪಣೆ ಮಾಡಿದರು. ಆದ್ದರಿಂದ ಸದಾ ತನು-ಮನ, ಬುದ್ಧಿಯಿಂದ ನಿರ್ಮಲ, ಶೀತಲ, ಸುಖದಾಯಿಯಾಗಿ ಬಿಟ್ಟರು. ಲೌಕಿಕ ಪರಿವಾರದಿಂದ ಹಾಗೂ ಪ್ರಪಂಚದ ಅಪರಿಚಿತ ಆತ್ಮಗಳಿಂದ ಏನೆಲ್ಲಾ ಪರಿಸ್ಥಿತಿಗಳು ಬಂದಿತು ಆದರೆ ಸಂಕಲ್ಪ-ಸ್ವಪ್ನದಲ್ಲಿಯೂ ಸಹ ಎಂದೂ ಸಂಶಯದ ಸೂಕ್ಷ್ಮ ರೂಪವು “ಸಂಕಲ್ಪ ಮಾತ್ರ”ದ ಏರುಪೇರಿನಲ್ಲಿಯೂ ಬರಲಿಲ್ಲ.

ಬ್ರಹ್ಮಾ ತಂದೆಯಲ್ಲಿ ವಿಶೇಷವಾಗಿ ಈ ಮಾತಿನ ಚಮತ್ಕಾರವಿತ್ತು – ತಮ್ಮೆಲ್ಲರ ಮುಂದೆ ಸಾಕಾರ ರೂಪದಲ್ಲಿ ಬ್ರಹ್ಮಾ ತಂದೆಯು ಉದಾಹರಣಾ ಮೂರ್ತಿಯಾಗಿದ್ದರು. ಆದರೆ ಬ್ರಹ್ಮಾ ತಂದೆಯ ಮುಂದೆ ಯಾರು ಸಾಕಾರ ಉದಾಹರಣೆಯಾಗಿ ಇರಲಿಲ್ಲ. ಕೇವಲ ಅಟಲ ನಿಶ್ಚಯ, ತಂದೆಯ ಶ್ರೀಮತದ ಆಧಾರವಿತ್ತು. ತಮ್ಮೆಲ್ಲರಿಗಂತೂ ಬಹಳ ಸಹಜವಾಗಿದೆ ಮತ್ತು ಯಾರೆಷ್ಟು ತಡವಾಗಿ ಬಂದಿದ್ದೀರೋ ಅಷ್ಟು ಸಹಜವಾಗಿದೆ ಏಕೆಂದರೆ ಅನೇಕ ಆತ್ಮಗಳ ಪರಿವರ್ತನೆಯ ಶ್ರೇಷ್ಠ ಜೀವನವು ತಮ್ಮ ಮುಂದೆ ಉದಾಹರಣೆಯಾಗಿದೆ. ಇದನ್ನು ಮಾಡಬೇಕು, ಈ ರೀತಿಯಾಗಬೇಕೆನ್ನುವುದು ಸ್ಪಷ್ಟವಾಗಿದೆ ಆದ್ದರಿಂದ ತಮ್ಮೆಲ್ಲರಿಗೆ “ಏಕೆ-ಏನು” ಎಂಬ ಪ್ರಶ್ನೆ ಬರುವ ಅವಕಾಶವೇ ಇಲ್ಲ. ಎಲ್ಲವನ್ನೂ ನೋಡುತ್ತಿದ್ದೀರಿ ಆದರೆ ಬ್ರಹ್ಮಾರವರ ಮುಂದೆ ಪ್ರಶ್ನೆ ಬರುವ ಅವಕಾಶವಿತ್ತು, ಏನು ಮಾಡಬೇಕು, ಮುಂದೇನಾಗುವುದೋ, ತಪ್ಪು ಮಾಡುತ್ತಿದ್ದೇನೆಯೇ ಅಥವಾ ಸರಿ ಮಾಡುತ್ತಿದ್ದೇನೆಯೇ ಎಂಬ ಸಂಕಲ್ಪ ಬರುವ ಸಂಭವವಿತ್ತು. ಆದರೆ ಸಂಭವವನ್ನು ಅಸಂಭವ ಮಾಡಿದರು. ಒಂದು ಬಲ ಒಂದು ಭರವಸೆ – ಇದೇ ಆಧಾರದಿಂದ ನಿಶ್ಚಯಬುದ್ಧಿ ನಂಬರ್ವನ್ ವಿಜಯಿಯಾಗಿ ಬಿಟ್ಟರು. ಇದೇ ಸಮರ್ಪಣತೆಯ ಕಾರಣ ಬುದ್ಧಿಯು ಸದಾ ಹಗುರವಾಗಿತ್ತು. ಬುದ್ಧಿಯಲ್ಲಿ ಹೊರೆಯಿರಲಿಲ್ಲ. ಮನಸ್ಸು ನಿಶ್ಚಿಂತವಾಗಿತ್ತು, ಚಹರೆಯಲ್ಲಿ ಸದಾ ನಿಶ್ಚಿಂತ ಚಕ್ರವರ್ತಿಯ ಚಿಹ್ನೆಗಳು ಸ್ಪಷ್ಟವಾಗಿ ಕಾಣುತ್ತಿತ್ತು. 350 ಮಂದಿ ಮಕ್ಕಳಿದ್ದರು ಆದರೆ ತಿನ್ನುವುದಕ್ಕೆ ಹಿಟ್ಟು ಸಹ ಇರಲಿಲ್ಲ ಮತ್ತು ಸಮಯದಲ್ಲಿ ಮಕ್ಕಳಿಗೆ ಊಟ ಮಾಡಿಸಬೇಕು! ಅಂದಾಗ ಆಲೋಚಿಸಿ, ಇಂತಹ ಸ್ಥಿತಿಯಲ್ಲಿ ಯಾರಾದರೂ ನಿಶ್ಚಿಂತರಾಗಿರಲು ಸಾಧ್ಯವೇ! ಒಂದು ಗಂಟೆಗೆ ಘಂಟೆ ಬಾರಿಸಬೇಕು ಮತ್ತು 11 ಗಂಟೆಯವರೆಗೆ ಅಡಿಗೆ ಮಾಡಲು ಏನೂ ಇರಲಿಲ್ಲ ಅಂದಮೇಲೆ ಯಾರು ನಿಶ್ಚಿಂತವಾಗಿ ಇರಬಲ್ಲರು? ಇಂತಹ ಸ್ಥಿತಿಯಲ್ಲಿಯೂ ಹರ್ಷಿತ, ಅಚಲವಾಗಿದ್ದರು. ಇದು ತಂದೆಯ ಜವಾಬ್ದಾರಿಯಾಗಿದೆ, ನನ್ನದಲ್ಲ, ನಾನೂ ತಂದೆಯವನು ಅಂದಮೇಲೆ ಈ ಮಕ್ಕಳೆಲ್ಲರೂ ತಂದೆಯವರಾಗಿದ್ದಾರೆ, ನಾನು ನಿಮಿತ್ತನಾಗಿದ್ದೇನೆ – ಇಂತಹ ನಿಶ್ಚಯ ಮತ್ತು ನಿಶ್ಚಿಂತರಾಗಿರಲು ಯಾರಿಗೆ ಸಾಧ್ಯ? ಮನಸ್ಸು-ಬುದ್ಧಿಯಿಂದ ಸಮರ್ಪಿತ ಆತ್ಮನೇ ಈ ರೀತಿ ಇರಲು ಸಾಧ್ಯ ಅಲ್ಲವೆ. ಒಂದುವೇಳೆ ತಮ್ಮ ಬುದ್ಧಿಯನ್ನು ಈ ರೀತಿ ನಡೆಸಬಹುದಿತ್ತಲ್ಲವೆ – ಏನಾಗುವುದೋ ಗೊತ್ತಿಲ್ಲ! ಎಲ್ಲರೂ ಹಸಿವಿನಿಂದ ಇರಲು ಸಾಧ್ಯವಿಲ್ಲ. ಇದಂತೂ ಸಾಧ್ಯವಿಲ್ಲ, ಅದಂತೂ ಸಾಧ್ಯವಿಲ್ಲ – ಹೀಗೆ ವ್ಯರ್ಥ ಸಂಕಲ್ಪ ಹಾಗೂ ಸಂಶಯದ ಅವಕಾಶವು ಇದ್ದರೂ ಸಹ ಸಮರ್ಥ ಸಂಕಲ್ಪವೇ ತಂದೆಗೆ ನಡೆಯಿತು – ಸದಾ ತಂದೆಯು ರಕ್ಷಕನಾಗಿದ್ದಾರೆ, ಕಲ್ಯಾಣಕಾರಿಯಾಗಿದ್ದಾರೆ. ಹೀಗೆ ಸಮರ್ಪಣೆಯ ವಿಶೇಷತೆಯು ತಂದೆಯಲ್ಲಿತ್ತು ಅಂದಾಗ ಹೇಗೆ ಬ್ರಹ್ಮಾ ತಂದೆಯು ಸಮರ್ಪಣೆಯಾಗುವ ಮೊದಲ “ಸಾಹಸ”ದ ಹೆಜ್ಜೆಯನ್ನಿಟ್ಟರೋ ಅದೇರೀತಿ ಫಾಲೋ ಫಾದರ್ ಮಾಡಿ. ನಿಶ್ಚಯದ ವಿಜಯವು ಅವಶ್ಯವಾಗಿ ಆಗುತ್ತದೆ ಆದ್ದರಿಂದ ಸಮಯದಲ್ಲಿ ಆಹಾರ ಧಾನ್ಯಗಳೂ ಬಂದಿತು, ಸಮಯಕ್ಕೆ ಸರಿಯಾಗಿ ಘಂಟೆಯೂ ಬಾರಿಸಿತು ಮತ್ತು ಪಾಸ್ ಆಗಿ ಬಿಟ್ಟರು. ಇದಕ್ಕೇ ಹೇಳುತ್ತಾರೆ – ಪ್ರಶ್ನಾರ್ಥಕ ಅಥವಾ ಡೊಂಕಾದ ಮಾರ್ಗವನ್ನು ಹಿಡಿಯದೇ ಸದಾ ಕಲ್ಯಾಣದ ಬಿಂದುವನ್ನಿಡಿ. ಫುಲ್ ಸ್ಟಾಪ್ – ಈ ವಿಧಿಯಿಂದಲೇ ಸಹಜವೂ ಆಗುವುದು ಮತ್ತು ಸಿದ್ಧಿಯೂ ಪ್ರಾಪ್ತಿಯಾಗುವುದು. ಅಂದಾಗ ಇದು ಬ್ರಹ್ಮಾರವರ ಚಮತ್ಕಾರವಾಗಿತ್ತು. ಇಂದು ಮೊದಲ ಒಂದು ಹೆಜ್ಜೆಯ ಬಗ್ಗೆ ತಿಳಿಸಿದ್ದೇವೆ, ಚಿಂತೆಯ ಹೊರೆಯಿಂದಲೂ ನಿಶ್ಚಿಂತರಾಗಿ ಬಿಡಿ. ಇದಕ್ಕೆ ಸ್ನೇಹಕ್ಕೆ ರಿಟರ್ನ್ ಕೊಡುವುದೆಂದು ಹೇಳಲಾಗುತ್ತದೆ. ಒಳ್ಳೆಯದು.

ಸದಾ ಪ್ರತೀ ಹೆಜ್ಜೆಯನ್ನು ತಂದೆಯನ್ನು ಫಾಲೋ ಮಾಡುವಂತಹ, ಪ್ರತೀ ಹೆಜ್ಜೆಯಲ್ಲಿ ಸ್ನೇಹಕ್ಕೆ ರಿಟರ್ನ್ ಕೊಡುವಂತಹ, ಸದಾ ನಿಶ್ಚಿಂತ ಬುದ್ಧಿಯವರಾಗಿ ನಿಶ್ಚಿಂತ ಚಕ್ರವರ್ತಿಗಳಾಗುವಂತಹ, ಮನಸ್ಸು-ವಾಣಿ-ಕರ್ಮ-ಸಂಬಂಧದಲ್ಲಿ ತಂದೆಯ ಸಮಾನರಾಗುವಂತಹ ಸದಾ ಶುಭ ಚಿಂತಕ ಸದಾ ಪ್ರತಿಯೊಬ್ಬರ ವಿಶೇಷತೆಯನ್ನು ನೋಡುವಂತಹ, ಪ್ರತೀ ಆತ್ಮನನ್ನು ಸದಾ ಮುಂದುವರೆಸುವಂತಹ ತಂದೆಯ ಸಮಾನ ಮಕ್ಕಳಿಗೆ ಸ್ನೇಹೀ ತಂದೆಯ ಸ್ನೇಹ ಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ ವಾರ್ತಾಲಾಪ:

1. ತಮ್ಮನ್ನು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣ ಆತ್ಮರೆಂದು ತಿಳಿದುಕೊಳ್ಳುವಿರಾ? ಬ್ರಾಹ್ಮಣರು ಅತ್ಯಂತ ಶ್ರೇಷ್ಠರೆಂದು ಗಾಯನವಾಗುತ್ತದೆ, ಶ್ರೇಷ್ಠತೆಯ ಸಂಕೇತವಾಗಿ ಬ್ರಾಹ್ಮಣರನ್ನು ಸದಾ ಶಿಖೆಯಲ್ಲಿ ತೋರಿಸುತ್ತಾರೆ. ಪ್ರಪಂಚದವರು ಹೆಸರಿಗಿರುವ ಬ್ರಾಹ್ಮಣರ ಸಂಕೇತವನ್ನು ತೋರಿಸಿದ್ದಾರೆ, ಅಂದಮೇಲೆ ಶಿಖೆಯನ್ನಿಡುವವರಲ್ಲ ಆದರೆ ಶಿಖೆಯ ಸ್ಥಿತಿಯಲ್ಲಿ ಇರುವವರು. ಅವರು ಸ್ಥೂಲ ಸಂಕೇತವನ್ನು ತೋರಿಸಿದ್ದಾರೆ, ವಾಸ್ತವದಲ್ಲಿ ಶ್ರೇಷ್ಠ ಸ್ಥಿತಿಯಲ್ಲಿ ಇರುವುದಾಗಿದೆ. ಬ್ರಾಹ್ಮಣರನ್ನೇ ಪುರುಷೋತ್ತಮರೆಂದು ಹೇಳಲಾಗುತ್ತದೆ, ಪುರುಷೋತ್ತಮ ಎಂದರೆ ಪುರುಷರಿಗಿಂತಲೂ ಉತ್ತಮ, ಸಾಧಾರಣ ಮನುಷ್ಯಾತ್ಮರಿಗಿಂತಲೂ ಉತ್ತಮವಾದವರು, ಇಂತಹ ಪುರುಷೋತ್ತಮರಲ್ಲವೆ! ಪುರುಷ ಎಂದು ಆತ್ಮನಿಗೂ ಹೇಳಲಾಗುತ್ತದೆ, ಶ್ರೇಷ್ಠಾತ್ಮ ಆಗುವವರು ಅಂದರೆ ಪುರುಷರಿಗಿಂತಲೂ ಉತ್ತಮ ಪುರುಷನಾಗುವವರು. ದೇವತೆಗಳಿಗೂ ಪುರುಷೋತ್ತಮ ಎಂದು ಹೇಳಲಾಗುತ್ತದೆ ಏಕೆಂದರೆ ದೇವ-ಆತ್ಮರಾಗಿದ್ದಾರೆ. ತಾವು ದೇವ-ಆತ್ಮರಿಗಿಂತಲೂ ಶ್ರೇಷ್ಠವಾದ ಬ್ರಾಹ್ಮಣರಾಗಿದ್ದೀರಿ – ಈ ನಶೆಯು ಸದಾ ಇರಲಿ. ಅನ್ಯ ನಶೆಗಾಗಿ ಕಡಿಮೆ ಮಾಡಿ ಎಂದು ಹೇಳಲಾಗುತ್ತದೆ, ಆತ್ಮಿಕ ನಶೆಗಾಗಿ ತಂದೆಯವರು ಹೆಚ್ಚಿಸಿಕೊಳ್ಳಿರಿ ಎಂದು ಹೇಳುತ್ತಾರೆ. ಏಕೆಂದರೆ ಈ ನಶೆಯು ಹಾನಿ ಮಾಡುವಂತದ್ದಲ್ಲ ಹಾಗೂ ಶ್ರೇಷ್ಠ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ, ಉಳಿದ ಎಲ್ಲಾ ನಶೆಗಳು ಹಾನಿಯನ್ನುಂಟು ಮಾಡುತ್ತದೆ ಹಾಗೂ ಕನಿಷ್ಟರನ್ನಾಗಿ ಮಾಡುತ್ತದೆ. ಒಂದುವೇಳೆ ಆತ್ಮಿಕ ನಶೆಯು ಕಡಿಮೆಯಾಗಿ ಬಿಡುತ್ತದೆ ಎಂದರೆ ಹಳೆಯ ಪ್ರಪಂಚದ ಸ್ಮೃತಿಯು ಬಂದು ಬಿಡುತ್ತದೆ. ನಶೆಯೇರಿದರೆ ಹೊಸ ಪ್ರಪಂಚದ ಸ್ಮೃತಿಯಿರುತ್ತದೆ. ಈ ಬ್ರಾಹ್ಮಣ ಸಂಸಾರವೇ ಹೊಸ ಸಂಸಾರ ಆಗಿದೆ. ಸತ್ಯಯುಗಕ್ಕಿಂತಲೂ ಈ ಸಂಸಾರ(ಪ್ರಪಂಚ)ವು ಅತಿ ಶ್ರೇಷ್ಠ ಆಗಿದೆ! ಅಂದಮೇಲೆ ಸದಾ ಈ ಸ್ಮೃತಿಯಿಂದ ಮುಂದುವರೆಯುತ್ತಾ ಸಾಗಿರಿ.

2. ತಮ್ಮನ್ನು ಸದಾ ವಿಶ್ವ-ರಚೈತ ತಂದೆಯ ಶ್ರೇಷ್ಠ ರಚನೆ ಎಂದು ಅನುಭವ ಮಾಡುತ್ತೀರಾ? ಬ್ರಾಹ್ಮಣ ಜೀವನವೆಂದರೆ ವಿಶ್ವ-ರಚೈತನ ಶ್ರೇಷ್ಠ ರಚನೆ. ನಾವು ತಂದೆಯ ಡೈರೆಕ್ಟ್ ರಚನೆಯಾಗಿದ್ದೇವೆ ಎಂಬ ನಶೆಯು ಇದೆಯೇ? ಪ್ರಪಂಚದವರಂತು ಕೇವಲ ಅರಿವಿಲ್ಲದವರಾಗಿ ಹೇಳುತ್ತಾರೆ – ಭಗವಂತನು ನಮ್ಮ ಜನ್ಮ ಕೊಟ್ಟಿದ್ದಾರೆ. ಮುಂಚೆ ತಾವೆಲ್ಲರೂ ಸಹ ಇದೇರೀತಿ ಹೇಳುತ್ತಿದ್ದಿರಿ ಆದರೆ ಈಗ ತಿಳಿದಿದ್ದೀರಿ – ನಾವು ಶಿವವಂಶಿ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಆಗಿದ್ದೇವೆ. ಅಂದಮೇಲೆ ಈಗ ಜ್ಞಾನದ ಆಧಾರದಿಂದ ಮತ್ತು ತಿಳುವಳಿಕೆಯಿಂದ ಹೇಳುತ್ತೀರಿ- ಭಗವಂತನೇ ನಮಗೆ ಜನ್ಮ ಕೊಟ್ಟಿದ್ದಾರೆ, ನಾವು ಮುಖ ವಂಶಾವಳಿ ರಚನೆಯಾಗಿದ್ದೇವೆ. ತಂದೆಯು ಡೈರೆಕ್ಟ್ ಆಗಿ ಬ್ರಹ್ಮಾ ತಂದೆಯ ಮೂಲಕ ರಚನೆ ಮಾಡಿದ್ದಾರೆ. ಅಂದಮೇಲೆ ಬಾಪ್ದಾದಾ ಅಥವಾ ಮಾತಾಪಿತನ ರಚನೆಯಾಗಿದ್ದೀರಿ. ಡೈರೆಕ್ಟ್ ಭಗವಂತನ ರಚನೆ ಎಂದು ಈಗ ಅನುಭವದಿಂದ ಹೇಳಬಲ್ಲಿರಿ. ಅಂದಮೇಲೆ ಭಗವಂತನ ರಚನೆಯು ಎಷ್ಟೊಂದು ಶ್ರೇಷ್ಠವಾಗಿರಬೇಕು! ರಚೈತನಂತೆ ರಚನೆಯೂ ಆಗುತ್ತದೆಯಲ್ಲವೆ! ಈ ನಶೆ ಮತ್ತು ಖುಷಿಯು ಸದಾ ಇರುತ್ತದೆಯೇ? ತಮ್ಮನ್ನು ಸಾಧಾರಣರೆಂದು ತಿಳಿಯುವುದಿಲ್ಲವೇ? ಯಾವಾಗ ಈ ರಹಸ್ಯವು ಅರ್ಥವಾಗುತ್ತದೆಯೋ, ಆಗ ಸದಾಕಾಲವೂ ಚಹರೆಯಲ್ಲಿ ಅಥವಾ ಚಲನೆಯಲ್ಲಿ ಸ್ವತಹವಾಗಿಯೇ ಆತ್ಮಿಕ ನಶೆ ಮತ್ತು ಖುಷಿಯಿರುತ್ತದೆ. ತಮ್ಮ ಚಹರೆಯನ್ನು ಯಾರೇ ನೋಡಿದರೂ ಈ ಅನುಭವವಾಗಲಿ – ಇವರು ಸತ್ಯವಾಗಿಯೂ ಶ್ರೇಷ್ಠ ರಚೈತನ ರಚನೆಯಾಗಿದ್ದಾರೆ. ಹೇಗೆ ರಾಜನ ರಾಜಕುಮಾರಿಯು ತನ್ನ ಚಲನೆಯಿಂದ ತಿಳಿದುಬರುತ್ತದೆ – ಇವರು ರಾಯಲ್ ಮನೆತನದವರು ಆಗಿದ್ದಾರೆ. ಇವರು ಸಾಹುಕಾರ ಮನೆಯವರು ಅಥವಾ ಇವರು ಸಾಧಾರಣ ಮನೆಯವರು ಆಗಿದ್ದಾರೆ. ಅದೇರೀತಿಯಲ್ಲಿ ತಮ್ಮ ಚಲನೆಯಿಂದ, ಚಹರೆಯಿಂದ ಅನುಭವವಾಗಲಿ – ಇವರು ಶ್ರೇಷ್ಠ ರಚನೆಯಾಗಿದ್ದಾರೆ, ಶ್ರೇಷ್ಠ ತಂದೆಯ ಮಕ್ಕಳಾಗಿದ್ದಾರೆ!

ಕುಮಾರಿಯರೊಂದಿಗೆ: ಕನ್ಯೆಯರು 100 ಬ್ರಾಹ್ಮಣರಿಗಿಂತಲೂ ಉತ್ತಮಳೆಂದು ಗಾಯನವಿದೆ, ಈ ಮಹಿಮೆಯು ಏಕೆ ಇದೆ? ಏಕೆಂದರೆ ಸ್ವಯಂ ಎಷ್ಟು ಶ್ರೇಷ್ಠವಾಗುವರು, ಅಷ್ಟೇ ಅನ್ಯರನ್ನೂ ಶ್ರೇಷ್ಠರನ್ನಾಗಿ ಮಾಡಲು ಸಾಧ್ಯವಿದೆ. ಅಂದಾಗ ಶ್ರೇಷ್ಠಾತ್ಮರೆಂಬ ಖುಷಿಯು ಇರುತ್ತದೆಯೇ? ಕುಮಾರಿಯರು ಸೇವಾಧಾರಿಯಾಗಿ ಸೇವೆಯಲ್ಲಿ ಮುಂದುವರೆಯುತ್ತಾ ಸಾಗಿರಿ ಏಕೆಂದರೆ ಈ ಸಂಗಮಯುಗವೇ ಸ್ವಲ್ಪ ಸಮಯದ ಯುಗವಾಗಿದೆ, ಇದರಲ್ಲಿ ಯಾರೆಷ್ಟು ಮಾಡಿಕೊಳ್ಳಬೇಕೆಂದು ಬಯಸುವಿರಿ, ಅಷ್ಟೂ ಮಾಡಿಕೊಳ್ಳಬಹುದು. ಅಂದಮೆಲೆ ಶ್ರೇಷ್ಠ ಲಕ್ಷ್ಯ ಮತ್ತು ಶ್ರೇಷ್ಠ ಲಕ್ಷಣವಿರುವವರು ಆಗಿದ್ದೀರಲ್ಲವೇ? ಎಲ್ಲಿ ಲಕ್ಷ್ಯ ಮತ್ತು ಲಕ್ಷಣವು ಶ್ರೇಷ್ಠವಾಗಿರುವುದೋ ಅಲ್ಲಿ ಪ್ರಾಪ್ತಿಯೂ ಸಹ ಸದಾ ಶ್ರೇಷ್ಟವಾಗಿರುವುದೇ ಅನುಭವವಾಗುವುದು. ಸದಾ ಈ ಈಶ್ವರೀಯ ಜೀವನದ ಫಲವಾದ “ಖುಷಿ” ಹಾಗೂ “ಶಕ್ತಿ” ಎರಡನ್ನೂ ಅನುಭವ ಮಾಡುತ್ತೀರಾ? ಪ್ರಪಂಚದಲ್ಲಿ ಇರುವವರು ಖುಷಿಗಾಗಿ ಖರ್ಚು ಮಾಡಿದರೂ ಪ್ರಾಪ್ತಿಯಾಗುವುದಿಲ್ಲ. ಒಂದುವೇಳೆ ಪ್ರಾಪ್ತಿಯಾದರೂ ಅಲ್ಪಕಾಲದ್ದಷ್ಟೇ ಆಗುವುದು ಮತ್ತು ಖುಷಿಯ ಜೊತೆ ಜೊತೆಗೆ ದುಃಖವೂ ಆಗುವುದು ಆದರೆ ತಾವುಗಳ ಜೀವನವು ಸದಾ ಖುಷಿಯದಾಯಿತು. ಪ್ರಪಂಚದವರು ಖುಷಿಗಾಗಿ ಹುಡುಕಾಡುತ್ತಾರೆ ಮತ್ತು ತಮಗಂತು ಖುಷಿಯು ಪ್ರತ್ಯಕ್ಷ ಫಲದ ರೂಪದಲ್ಲಿ ಸಿಗುತ್ತಿದೆ. ತಮ್ಮ ಜೀವನದ ವಿಶೇಷತೆ ಖುಷಿಯೇ ಆಗಿದೆ! ಒಂದುವೇಳೆ ಖುಷಿಯಿಲ್ಲದಿದ್ದರೆ ಜೀವನವಿಲ್ಲ ಅಂದಮೇಲೆ ಸದಾ ತಮ್ಮ ಉನ್ನತಿ ಮಾಡಿಕೊಳ್ಳುತ್ತಾ ಮುಂದುವರೆಯುತ್ತಾ ಇರುತ್ತೀರಲ್ಲವೇ? ಬಾಪ್ದಾದಾರವರು ಈ ಮಾತಿನಲ್ಲಿ ಖುಷಿಯಾಗುತ್ತಾರೆ- ಕುಮಾರಿಯರು ಸಮಯದಲ್ಲಿ ಪಾರಾಗಿ ಬಿಟ್ಟರು, ಇಲ್ಲದಿದ್ದರೆ ಉಲ್ಟಾ ಏಣಿಯನ್ನು ಹತ್ತಿದ ನಂತರ ಇಳಿಯಬೇಕಾಗಿತ್ತು. ಏರಿಳಿತದಲ್ಲಿ ಪರಿಶ್ರಮವಿದೆ ಅಲ್ಲವೆ. ನೋಡಿ – ಯಾರೇ ಪ್ರವೃತ್ತಿಯಲ್ಲಿದ್ದಾರೆ, ಆದರೂ ಹೇಳುವುದರಲ್ಲಿ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಎನ್ನುವು ಬರುತ್ತದೆ, ಬ್ರಹ್ಮಾ ಅಧರ್ಕುಮಾರ್ ಎಂದು ಹೇಳುವುದಿಲ್ಲ. ಇಷ್ಟಾದರೂ ಕುಮಾರ-ಕುಮಾರಿ ಆಗಿದ್ದಾರಲ್ಲವೆ. ಅವರು ಏಣಿಯನ್ನಿಳಿದರು ಆದರೆ ತಾವು ಇಳಿಯಬೇಕಾಗಲಿಲ್ಲ, ಬಹಳ ಭಾಗ್ಯಶಾಲಿ ಆಗಿದ್ದೀರಿ, ಸಮಯದಲ್ಲಿ ತಂದೆಯವರು ಸಿಕ್ಕಿ ಬಿಟ್ಟರು. ಕುಮಾರಿಯನ್ನೇ ಪೂಜಿಸುತ್ತಾರೆ, ಕುಮಾರಿಯು ಯಾವಾಗ ಗೃಹಸ್ಥಿಯಾಗುವಳು ಆಗ ಕುರಿಯಂತೆ ಎಲ್ಲರ ಮುಂದೆ ತಲೆ ಬಾಗಿಸುತ್ತಾ ಇರುತ್ತಾಳೆ. ಅದರಿಂದ ತಾವುಗಳು ಪಾರಾಗಿ ಬಿಟ್ಟಿರಲ್ಲವೆ. ತಮ್ಮನ್ನು ಸದಾ ಇಂತಹ ಭಾಗ್ಯಶಾಲಿ ಎಂದು ತಿಳಿಯುತ್ತಾ ಮುಂದೆ ಸಾಗುತ್ತಿರಿ. ಒಳ್ಳೆಯದು!

ಮಾತೆಯರೊಂದಿಗೆ: ಎಲ್ಲರೂ ಶಕ್ತಿಶಾಲಿಯಾದ ಮಾತೆಯರು ಆಗಿದ್ದೀರಲ್ಲವೇ? ಬಲಹೀನರಂತು ಅಲ್ಲ ತಾನೆ? ಬಾಪ್ದಾದಾರವರು ಮಾತೆಯರಿಂದ ಬಯಸುವುದೇನು? ಒಂದೊಂದು ಮಾತೆಯು “ಜಗನ್ಮಾತೆ” ಯಾಗಿದ್ದು ವಿಶ್ವದ ಕಲ್ಯಾಣವನ್ನು ಮಾಡಲಿ. ಆದರೆ ಮಾತೆಯರು ಚತುರತೆಯಿಂದ ಕಾರ್ಯವನ್ನು ಮಾಡುತ್ತಾರೆ. ಯಾವಾಗ ಲೌಕಿಕ ಕಾರ್ಯವಿರುತ್ತದೆ ಆಗ ಯಾರಾದರೊಬ್ಬರನ್ನು ನಿಮಿತ್ತರನ್ನಾಗಿ ಮಾಡಿ ಸ್ವಯಂ ಹೊರಟು ಹೋಗುತ್ತಾರೆ ಮತ್ತು ಯಾವಾಗ ಈಶ್ವರೀಯ ಕಾರ್ಯವಿರುತ್ತದೆಯೋ ಆಗ ಹೇಳುತ್ತಾರೆ – ಮಕ್ಕಳಿದ್ದಾರೆ, ಯಾರು ಸಂಭಾಲಿಸುತ್ತಾರೆ? ಪಾಂಡವರಿಗಂತು ಬಾಪ್ದಾದಾರವರು ಹೇಳುತ್ತಾರೆ – ಸಂಭಾಲಿಸಬೇಕು ಏಕೆಂದರೆ ರಚೈತನಾಗಿದ್ದಾರೆ, ಪಾಂಡವರು ಶಕ್ತಿಯರನ್ನೂ ಫ್ರೀ ಮಾಡಿರಿ. ಡ್ರಾಮಾನುಸಾರ ವರ್ತಮಾನ ಸಮಯದಲ್ಲಿ ಮಾತೆಯರಿಗೆ ಅವಕಾಶ ಸಿಕ್ಕಿದೆ ಆದ್ದರಿಂದ ಮಾತೆಯರನ್ನು ಮುಂದಿಡಬೇಕಾಗಿದೆ. ಈಗ ಬಹಳಷ್ಟು ಸೇವೆಯನ್ನು ಮಾಡಬೇಕಾಗಿದೆ. ಇಡೀ ವಿಶ್ವದ ಪರಿವರ್ತನೆ ಮಾಡಬೇಕಾಗಿದೆ ಅಂದಮೇಲೆ ಸೇವೆಯು ಹೇಗೆ ಸಂಪೂರ್ಣ ಮಾಡುವಿರಿ? ತೀವ್ರ ಗತಿಯಿರಬೇಕು ಅಲ್ಲವೆ. ಅದಕ್ಕಾಗಿ ಪಾಂಡವರು, ಶಕ್ತಿಯರನ್ನು ಫ್ರೀ ಮಾಡುತ್ತೀರೆಂದರೆ ಸೇವಾಕೇಂದ್ರಗಳು ತೆರೆಯುತ್ತವೆ ಮತ್ತು ಧ್ವನಿ ಮೊಳಗಿ ಬಿಡಲಿ. ಒಳ್ಳೆಯದು!

ವರದಾನ:-

ಯಾವುದರೊಂದಿಗೆ ಅತ್ಯಂತ ಸ್ನೇಹವಿರುತ್ತದೆಯೋ, ಆ ಸ್ನೇಹಕ್ಕಾಗಿ ಎಲ್ಲರನ್ನೂ ದೂರ ಮಾಡಿಕೊಂಡು ಎಲ್ಲವನ್ನೂ ಅರ್ಪಣೆ ಮಾಡಿ ಬಿಡುತ್ತಾರೆ. ಹೇಗೆ ತಂದೆಯವರಿಗೆ ಮಕ್ಕಳೊಂದಿಗೆ ಸ್ನೇಹವಿದೆ ಆದ್ದರಿಂದ ಸದಾಕಾಲವೂ ಸ್ನೇಹಿ ಮಕ್ಕಳಿಗೆ ಸುಖಗಳ ಪ್ರಾಪ್ತಿಯನ್ನು ಮಾಡಿಸುತ್ತಾರೆ, ಉಳಿದೆಲ್ಲರನ್ನು ಮುಕ್ತಿಧಾಮದಲ್ಲಿ ಕೂರಿಸುತ್ತಾರೆ. ಹಾಗೆಯೇ ಮಕ್ಕಳ ಸ್ನೇಹದ ಪ್ರಮಾಣವಾಗಿದೆ – ಸರ್ವ ರೂಪಗಳಿಂದ, ಸರ್ವ ಸಂಬಂಧಗಳಿಂದ ತಮ್ಮದೆಲ್ಲವನ್ನೂ ತಂದೆಯ ಮುಂದೆ ಅರ್ಪಣೆ ಮಾಡುವುದು. ಎಲ್ಲಿ ಸ್ನೇಹವಿರುತ್ತದೆಯೋ ಅಲ್ಲಿ ಯೋಗವಿರುತ್ತದೆ ಮತ್ತು ಯೋಗವಿದ್ದರೆ ಸಹಯೋಗವಿದೆ. ಮನ ಮತದಿಂದ ಒಂದು ಖಜಾನೆಯನ್ನೂ ವ್ಯರ್ಥವಾಗಿ ಕಳೆಯಲು ಸಾಧ್ಯವಿಲ್ಲ.

ಸ್ಲೋಗನ್:-

ಸೂಚನೆ:

ಇಂದು ತಿಂಗಳಿನ ಮೂರನೇ ರವಿವಾರ ಅಂತರಾಷ್ಟ್ರೀಯ ಯೋಗ ದಿನವಾಗಿದೆ, ಬಾಬಾರವರ ಎಲ್ಲಾ ಮಕ್ಕಳು ಸಂಜೆ 6.30ರಿಂದ 7.30 ಗಂಟೆಯವರೆಗೆ, ವಿಶೇಷವಾಗಿ ತಮ್ಮ ಇಷ್ಟ ದೇವ/ಇಷ್ಟ ದೇವಿ (ಪೂಜ್ಯ ಸ್ವರೂಪ)ಯಾಗಿ ಸ್ಥಿತರಾಗುತ್ತಾ, ಭಕ್ತಾತ್ಮರ ಕೂಗನ್ನು ಆಲಿಸಿರಿ, ಉಪಕಾರ ಮಾಡಿರಿ. ದಯಾಹೃದಯಿ ದಾತಾ ಸ್ವರೂಪದಲ್ಲಿ ಸ್ಥಿತರಾಗಿರುತ್ತಾ, ಅವರಿಗೆ ಸುಖ-ಶಾಂತಿಯ ಹನಿಯನ್ನು ಕೊಡುವ ಸೇವೆಯನ್ನು ಮಾಡೋಣ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top