20 July 2021 KANNADA Murli Today | Brahma Kumaris

Read and Listen today’s Gyan Murli in Kannada

19 July 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಸಭೆಯಲ್ಲಿ ಬಾಹರ್ಮುಖಿಯಾಗಿ ಕುಳಿತುಕೊಳ್ಳಬಾರದು, ತಂದೆಯ ನೆನಪಿನಲ್ಲಿ ಇರಬೇಕಾಗಿದೆ, ಮಿತ್ರಸಂಬಂಧಿ ಅಥವಾ ಉದ್ಯೋಗ-ವ್ಯವಹಾರಗಳನ್ನು ನೆನಪು ಮಾಡುವುದರಿಂದ ವಾಯುಮಂಡಲದಲ್ಲಿ ವಿಘ್ನವಾಗುತ್ತದೆ”

ಪ್ರಶ್ನೆ:: -

ನೀವು ಮಕ್ಕಳ ಆತ್ಮಿಕ ಡ್ರಿಲ್ನ ವಿಶೇಷತೆ ಏನಾಗಿದೆ? ಯಾವುದನ್ನು ಮನುಷ್ಯರು ಮಾಡಲು ಸಾಧ್ಯವಿಲ್ಲ?

ಉತ್ತರ:-

ನಿಮ್ಮ ಆತ್ಮಿಕ ಡ್ರಿಲ್ ಬುದ್ಧಿಯದಾಗಿದೆ. ಅದರ ವಿಶೇಷತೆಯೇ ಆಗಿದೆ – ನೀವು ಪ್ರಿಯತಮೆಯರಾಗಿ ತಮ್ಮ ಪ್ರಿಯತಮನನ್ನು ನೆನಪು ಮಾಡುತ್ತೀರಿ, ಇದರ ಸೂಚನೆಯು ಗೀತೆಯಲ್ಲಿಯೂ ಬಂದಿದೆ – ಮನ್ಮನಾಭವ ಆದರೆ ಮನುಷ್ಯರು ತಮ್ಮ ಪ್ರಿಯತಮ ಪರಮಾತ್ಮನನ್ನು ತಿಳಿದುಕೊಂಡೇ ಇಲ್ಲ ಅಂದಮೇಲೆ ಡ್ರಿಲ್ ಹೇಗೆ ಮಾಡಲು ಸಾಧ್ಯ? ಅವರಂತೂ ಪರಸ್ಪರ ದೈಹಿಕ ವ್ಯಾಯಾಮವನ್ನೇ ಕಲಿಸುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಕ್ಕಳು ತಿಳಿದುಕೊಳ್ಳುತ್ತೀರಿ, ತಂದೆಯೂ ತಿಳಿದುಕೊಳ್ಳುತ್ತಾರೆ – ಮಕ್ಕಳು (ಯೋಗ ಮಾಡಿಸುವವರು) ಇಲ್ಲಿ ಏನು ಮಾಡುತ್ತಿದ್ದಾರೆ! ನೆನಪಿನ ಯಾತ್ರೆಯ ಡ್ರಿಲ್ ಮಾಡಿಸುತ್ತಿದ್ದೀರಿ. ಬಾಯಿಂದ ಏನನ್ನೂ ಹೇಳುವಂತಿಲ್ಲ. ಯಾರ ನೆನಪಿದೆ? ಪರಮಪಿತ ಪರಮಾತ್ಮ ಶಿವ ತಂದೆಯ ನೆನಪಿದೆ. ಅವರ ನೆನಪಿನಲ್ಲಿ ಇರುವುದರಿಂದ ನಮ್ಮ ಯಾವುದೆಲ್ಲಾ ವಿಕರ್ಮಗಳಿವೆಯೋ ಅವು ಭಸ್ಮವಾಗುತ್ತವೆ ಮತ್ತು ವಿಕರ್ಮಾಜೀತರಾಗಿ ಬಿಡುತ್ತೇವೆ. ಯಾರೆಷ್ಟು ನೆನಪಿನ ಡ್ರಿಲ್ನಲ್ಲಿ ಇರುವರೋ ಅಷ್ಟು ಆಗುವರು. ಇದು ಆತ್ಮದ ವ್ಯಾಯಾಮವಾಗಿದೆ, ಶರೀರದ್ದಲ್ಲ, ಭಾರತದಲ್ಲಿ ಯಾವುದೆಲ್ಲಾ ವ್ಯಾಯಾಮಗಳನ್ನು ಕಲಿಸುತ್ತಾರೆಯೋ ಅವೆಲ್ಲವೂ ದೈಹಿಕವಾಗಿದೆ, ಇದು ಆತ್ಮಿಕ ವ್ಯಾಯಾಮವಾಗಿದೆ, ಇದನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ.

ಈ ಆತ್ಮಿಕ ವ್ಯಾಯಾಮದ ಸೂಚನೆಯು ಅವಶ್ಯವಾಗಿ ಗೀತೆಯಲ್ಲಿದೆ. ಭಗವಾನುವಾಚ ಅಥವಾ ಭಗವಂತನ ಮಕ್ಕಳ ಉವಾಚವೂ ಆಗಿದೆ. ನೀವೀಗ ಭಗವಂತ ಶಿವ ತಂದೆಯ ಮಕ್ಕಳಾಗಿದ್ದೀರಲ್ಲವೆ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಮಕ್ಕಳಿಗೆ ಆದೇಶ ಸಿಕ್ಕಿದೆ. ತಂದೆಯೂ ಸಹ ವ್ಯಾಯಾಮವನ್ನು ಕಲಿಸುತ್ತಾರೆ. ಮಕ್ಕಳೂ ಸಹ ಇದೇ ವ್ಯಾಯಾಮವನ್ನು ಕಲಿಸುತ್ತೀರಿ, ಕಲ್ಪದ ಮೊದಲೂ ತಂದೆಯು ಇದನ್ನೇ ಹೇಳಿದ್ದರು – ತಂದೆಯಾದ ನನ್ನನ್ನು ನೆನಪು ಮಾಡಿರಿ. ಇದರಲ್ಲಿ ಮತ್ತೆ-ಮತ್ತೆ ಹೇಳುವ ಅವಶ್ಯಕತೆಯಿಲ್ಲ ಆದರೂ ಹೇಳಬೇಕಾಗುತ್ತದೆ. ಇಲ್ಲಿ ಕುಳಿತಿದ್ದರೂ ಸಹ ಕೆಲವರು ತಮ್ಮ ಮಿತ್ರ-ಸಂಬಂಧಿಗಳನ್ನು, ಉದ್ಯೋಗ-ವ್ಯವಹಾರಗಳನ್ನು ನೆನಪು ಮಾಡುತ್ತಾ ಇರುತ್ತಾರೆ. ಅಂತಹವರು ವಾಯುಮಂಡಲದಲ್ಲಿ ವಿಘ್ನ ಹಾಕುತ್ತಾರೆ. ತಂದೆಯು ತಿಳಿಸುತ್ತಾರೆ – ಹೇಗೆ ನೀವಿಲ್ಲಿ ನೆನಪಿನಲ್ಲಿ ಕುಳಿತಿದ್ದೀರೋ ಅದೇರೀತಿ ನಡೆಯುತ್ತಾ-ತಿರುಗಾಡುತ್ತಾ, ಕರ್ಮ ಮಾಡುತ್ತಾ ನೆನಪಿನಲ್ಲಿ ಇರಬೇಕಾಗಿದೆ. ಹೇಗೆ ಪ್ರಿಯತಮೆ, ಪ್ರಿಯತಮನು ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾರೆ, ಅವರದು ದೈಹಿಕ ನೆನಪಾಗಿದೆ ನಿಮ್ಮದು ಆತ್ಮಿಕ ನೆನಪಾಗಿದೆ. ಆತ್ಮರು ಭಕ್ತಿಮಾರ್ಗದಲ್ಲಿಯೂ ಪರಮಪಿತ ಪರಮಾತ್ಮ ಪ್ರಿಯತಮನಿಗೆ ಪ್ರಿಯತಮೆಯರು ಆಗಿರುತ್ತಾರೆ ಆದರೆ ಆ ಪ್ರಿಯತಮನನ್ನು ಅರಿತುಕೊಂಡಿರುವುದಿಲ್ಲ ಮತ್ತು ತನ್ನನ್ನು ಆತ್ಮನೆಂದಾಗಲಿ ಅರಿತಿರುವುದಿಲ್ಲ. ಪ್ರಿಯತಮ ತಂದೆಯು ಬಂದಿದ್ದಾರೆ, ಭಕ್ತಿಮಾರ್ಗದಿಂದ ಹಿಡಿದು ಆತ್ಮರು ಪ್ರಿಯತಮೆಯರಾಗಿದ್ದಾರೆ, ಇದು ಆತ್ಮರು ಮತ್ತು ಪರಮಾತ್ಮನ ಮಾತಾಗಿದೆ. ತಂದೆಯು ಮಕ್ಕಳಿಗೆ ಸನ್ಮುಖದಲ್ಲಿ ತಿಳಿಸುತ್ತಾರೆ – ನೀವು ಪ್ರಿಯತಮೆಯರು ಪ್ರಿಯತಮನಾದ ನನ್ನನ್ನು ಬಾಬಾ ಬನ್ನಿರಿ, ಬಂದು ನಮ್ಮನ್ನು ದುಃಖದಿಂದ ಬಿಡಿಸಿ, ತಮ್ಮ ಜೊತೆ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು ನೆನಪು ಮಾಡುತ್ತೀರಿ. ನಿಮಗೆ ತಿಳಿದಿದೆ – ಈಗ ಈ ದುಃಖಧಾಮ, ಮೃತ್ಯುಲೋಕದ ವಿನಾಶವಾಗಲಿದೆ. ಅಮರಲೋಕದ ಜಯ ಜಯಕಾರ, ಮೃತ್ಯುಲೋಕದ ವಿನಾಶವಾಗುವುದು. ನೀವೀಗ ಬ್ರಾಹ್ಮಣ ಮಕ್ಕಳಾಗಿದ್ದೀರಿ, ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದ ಅನುಸಾರ ಇದ್ದಾರೆ. ನೀವು ಮಕ್ಕಳಿಗೆ ಪೂರ್ಣ ನಿಶ್ಚಯವಿರಲಿ – ನಾವೀಗ 21 ಜನ್ಮಗಳಿಗಾಗಿ ನರಕವಾಸಿಗಳಿಂದ ಸ್ವರ್ಗವಾಸಿಗಳಾಗುತ್ತೇವೆ. ಯಾರಾದರೂ ಮರಣ ಹೊಂದಿದರೆ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಆದರೆ ಎಷ್ಟು ಸಮಯಕ್ಕಾಗಿ ಸ್ವರ್ಗವಾಸಿಯಾದರು ಎಂಬುದನ್ನು ಯಾರೂ ಅರಿತುಕೊಂಡಿಲ್ಲ. ನೀವೀಗ ಸ್ವರ್ಗವಾಸಿಯಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ಇದನ್ನು ಯಾರು ನಿಶ್ಚಯ ಮಾಡಿಸುತ್ತಾರೆ? ಅವರು ಗೀತೆಯ ಭಗವಂತನಾಗಿದ್ದಾರೆ. ಆದರೆ ಒಬ್ಬನೇ ನಿರಾಕಾರ ಗೀತೆಯ ಭಗವಂತನಾಗಲು ಸಾಧ್ಯ. ನಿರಾಕಾರನೇ ಆಗಿದ್ದಾರೆ, ಅವರು ಹೇಗೆ ಇಲ್ಲಿ ಬಂದು ಕಲಿಸುವರು? ಎಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ತಂದೆಯನ್ನು ಅರಿಯದ ಕಾರಣ ಡ್ರಾಮಾ ಅನುಸಾರ ತಪ್ಪಾಗಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈ ಸಮಯದಲ್ಲಿ ಕೃಷ್ಣ ಮತ್ತು ಶಿವನ ಸಂಬಂಧವು ಬಹಳ ಸಮೀಪದಲ್ಲಿದೆ. ಸಂಗಮದಲ್ಲಿ ಶಿವ ಜಯಂತಿ ಆಗುತ್ತದೆ, ಮತ್ತೆ ನಾಳೆ ಕೃಷ್ಣ ಜಯಂತಿ ಆಗುವುದು. ಶಿವ ಜಯಂತಿಯು ರಾತ್ರಿಯಲ್ಲಿಯೂ, ಕೃಷ್ಣ ಜಯಂತಿಯು ಮುಂಜಾನೆಯಲ್ಲಿಯೂ ಆಗುವುದು, ಇದಕ್ಕೆ ಪ್ರಭಾತವೆಂದು ಹೇಳುತ್ತಾರೆ. ಶಿವರಾತ್ರಿಯು ಮುಕ್ತಾಯವಾದಾಗ ಕೃಷ್ಣ ಜಯಂತಿಯಾಗುತ್ತದೆ. ಈ ಮಾತುಗಳನ್ನು ಮಕ್ಕಳೇ ತಿಳಿದುಕೊಳ್ಳುತ್ತೀರಿ. ಇಲ್ಲಿನ ನಿಯಮವೇನೆಂದರೆ ಈ ಸಭೆಯಲ್ಲಿ ಯಾರೂ ಬಾಹರ್ಮುಖಿ ಆಗಿರಬಾರದು, ತಂದೆಯ ನೆನಪಿನಲ್ಲಿ ಇರಬೇಕು. ಮನುಷ್ಯರು ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಕರೆಯುತ್ತಾರೆ ಆದರೆ ಡ್ರಾಮಾ ಅನುಸಾರ ಕಲ್ಲು ಬುದ್ಧಿಯವರಾಗಿರುವ ಕಾರಣ ಏನನ್ನೂ ತಿಳಿದುಕೊಂಡಿಲ್ಲ. ಒಂದುವೇಳೆ ತಿಳಿದುಕೊಂಡಿದ್ದೇ ಆದರೆ ತಿಳಿಸುತ್ತಿದ್ದರು. ಈಗ ಕಲಿಯುಗದ ಅಂತ್ಯವಾಗಿದೆ, ನಂತರ ಯಾವಾಗ ತಂದೆಯು ಬರುವರೋ ಆಗ ಆದಿಯಾಗುತ್ತದೆ ಎಂಬುದೂ ಸಹ ಅವರಿಗೆ ತಿಳಿದಿಲ್ಲ. ಮನುಷ್ಯರು ಘೋರ ಅಂಧಕಾರದಲ್ಲಿದ್ದಾರೆ. ಕಲಿಯುಗವು ಇನ್ನೂ 40 ಸಾವಿರ ವರ್ಷಗಳಿರುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ, ಲೌಕಿಕ ತಂದೆಯೆಂದೂ ಪತಿತ-ಪಾವನನಾಗಲು ಸಾಧ್ಯವಿಲ್ಲ. ಬಾಪೂಜಿ ಎಂದು ಅನೇಕರಿಗೆ ಹೆಸರನ್ನಿಟ್ಟಿದ್ದಾರೆ, ವೃದ್ಧರಿಗೂ ಸಹ ಬಾಪೂ ಅಥವಾ ಪಿತಾಜೀ ಎಂದು ಹೇಳುತ್ತಾರೆ. ಈ ಆತ್ಮಿಕ ಪಿತಾಶ್ರೀ ಅಂತೂ ಒಬ್ಬರೇ ಆಗಿದ್ದಾರೆ, ಅವರು ಪತಿತ-ಪಾವನ, ಜ್ಞಾನ ಸಾಗರನಾಗಿದ್ದಾರೆ. ಮಕ್ಕಳು ಪಾವನರಾಗಲು ಜ್ಞಾನವು ಬೇಕಾಗಿದೆ, ನೀರಿನಲ್ಲಿ ಸ್ನಾನ ಮಾಡುವುದರಿಂದ ಯಾರೂ ಪಾವನರಾಗುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮ್ಮ ಮುಂದೆ ಈ ತನುವಿನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಬ್ರಹ್ಮಾನ ಮೂಲಕ ರಾಜಯೋಗವನ್ನು ಕಲಿಸುತ್ತಿದ್ದಾರೆ. ಅವರಂತೂ ಭಗವಾನುವಾಚ ಅರ್ಜುನನ ಪ್ರತಿಯಾಗಿದೆ ಎಂದು ಹೇಳಿ ಬಿಡುತ್ತಾರೆ. ಬ್ರಾಹ್ಮಣರ ಹೆಸರು, ಗುರುತೂ ಇಲ್ಲ. ಬ್ರಹ್ಮನ ಮೂಲಕ ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ ಎಂದು ಗಾಯನವಾಗುತ್ತದೆ, ಸ್ಥಾಪನೆಯನ್ನಂತೂ ಬ್ರಹ್ಮಾರವರ ಮುಖಾಂತರವೇ ಮಾಡುತ್ತಾರೆ. ವಿಷ್ಣುವಿನ ಮೂಲಕವಾಗಲಿ, ಶಂಕರನ ಮೂಲಕವಾಗಲಿ ಅಲ್ಲ. ನೀವು ಮಕ್ಕಳಿಗೆ ಈಗ ಈ ತಿಳುವಳಿಕೆ ಸಿಕ್ಕಿದೆ, ತಂದೆಯು ಇಲ್ಲಿ ಬರಬೇಕಾಗುತ್ತದೆ. ಯಾವುದೇ ಆತ್ಮನು ಹಿಂತಿರುಗಿ ಹೋಗಲು ಸಾಧ್ಯವಿಲ್ಲ, ಯಾರೆಲ್ಲರೂ ಬರುವರೋ ಎಲ್ಲರೂ ಸತೋ, ರಜೋ, ತಮೋವನ್ನು ಪಾರು ಮಾಡಲೇಬೇಕಾಗಿದೆ. ಕೃಷ್ಣನೂ ಸಹ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ ಮತ್ತು ಪೂರ್ಣ 5000 ವರ್ಷಗಳ ಕಾಲ ಪಾತ್ರವನ್ನು ಅಭಿನಯಿಸಿದನು. ಆತ್ಮವು ಗರ್ಭದಲ್ಲಿದ್ದಾಗಲೂ ಜನ್ಮವಾಗಿದೆ ಎಂದೇ ಅರ್ಥ, ಕೃಷ್ಣನ ಆತ್ಮವು ಸತ್ಯಯುಗದಲ್ಲಿ ಬರುತ್ತದೆ. ಗರ್ಭದಲ್ಲಿ ಪ್ರವೇಶ ಮಾಡಿದಾಗಿನಿಂದ ಹಿಡಿದು 5000 ವರ್ಷಗಳಲ್ಲಿ 84 ಜನ್ಮಗಳ ಪಾತ್ರವನ್ನು ಅಭಿನಯಿಸಬೇಕಾಗಿದೆ. ಹೇಗೆ ಶಿವ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಇವರಲ್ಲಿ ಕುಳಿತಿದ್ದಾರಲ್ಲವೆ. ಕೃಷ್ಣನ ಆತ್ಮವೂ ಸಹ ಗರ್ಭದಲ್ಲಿ ಬಂದಾಗ ಸ್ವಲ್ಪ ಕದಲುತ್ತದೆ ಆ ಸಮಯದಿಂದ ಹಿಡಿದು 5000 ವರ್ಷಗಳ ಲೆಕ್ಕವು ಪ್ರಾರಂಭವಾಗುತ್ತದೆ. ಒಂದುವೇಳೆ ಹೆಚ್ಚು ಕಡಿಮೆ ಇದ್ದರೆ ಮತ್ತೆ 5000 ವರ್ಷಗಳಲ್ಲಿ ಕಡಿಮೆಯಾಗಿ ಬಿಡುವುದು. ಇವು ಸೂಕ್ಷ್ಮ ತಿಳಿದುಕೊಳ್ಳುವ ಮಾತುಗಳಾಗಿವೆ, ಮಕ್ಕಳಿಗೆ ತಿಳಿದಿದೆ – ಕೃಷ್ಣನ ಆತ್ಮವು ಪುನಃ ಶ್ರೀಕೃಷ್ಣನಾಗುವುದಕ್ಕಾಗಿ ಈ ಜ್ಞಾನವನ್ನು ಪಡೆಯುತ್ತಿದೆ. ನೀವೂ ಸಹ ಕಂಸ ಪುರಿಯಿಂದ ಕೃಷ್ಣ ಪುರಿಯಲ್ಲಿ ಹೋಗುತ್ತೀರಿ, ಈ ಮಾತುಗಳನ್ನು ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ.

ತಂದೆಯು ಹೇಳುತ್ತಾರೆ – ಮಾಯೆಯು ಬಹಳ ಪ್ರಬಲವಾಗಿದೆ, ಒಳ್ಳೊಳ್ಳೆಯ ಮಹಾರಥಿಗಳನ್ನೂ ಸಹ ಸೋಲಿಸಿ ಬಿಡುತ್ತದೆ. ಜ್ಞಾನವನ್ನು ಪಡೆಯುತ್ತಾ-ಪಡೆಯುತ್ತಾ ಕೆಲವೊಮ್ಮೆ ಗ್ರಹಚಾರವು ಕುಳಿತುಕೊಳ್ಳುತ್ತದೆ, ಆಶ್ಚರ್ಯವೆನಿಸುವಂತೆ ನನ್ನವರಾಗಿ ನಡೆಯುತ್ತಾ-ನಡೆಯುತ್ತಾ ಮತ್ತೆ ಮಾಯೆಗೆ ವಶರಾಗಿ ಹೊರಟು ಹೋಗುತ್ತಾರೆ. ಸಂಪಾದನೆಯಲ್ಲಿ ಗ್ರಹಚಾರವು ಕುಳಿತುಕೊಳ್ಳುತ್ತದೆ. ಎಲ್ಲರಿಗೂ ರಾಹುವಿನ ಗ್ರಹಣ ಹಿಡಿದಿದೆ, ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆ ಕುಳಿತಿದೆ, ಮತ್ತೆ ನಡೆಯುತ್ತಾ-ನಡೆಯುತ್ತಾ ಕೆಲವರ ಮೇಲೆ ರಾಹುವಿನ ಗ್ರಹಣವು ಕುಳಿತುಕೊಳ್ಳುತ್ತದೆ. ಆದ್ದರಿಂದಲೇ ಹೇಳುತ್ತಾರೆ – ಈ ಪ್ರಪಂಚದಲ್ಲಿ ಮಹಾಮೂರ್ಖರನ್ನು ನೋಡಬೇಕೆಂದರೂ ಇಲ್ಲಿ ನೋಡಿರಿ, ನಾವು ತಂದೆಯಿಂದ ಸದಾ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಿಮ್ಮ ಆತ್ಮವು ಹೇಳುತ್ತದೆ. ಬಾಬಾ, ತಮ್ಮಿಂದ ಕಲ್ಪದ ಮೊದಲೂ ಸಹ ಈ ಆಸ್ತಿಯನ್ನು ತೆಗೆದುಕೊಂಡಿದ್ದೇವೆ, ಪುನಃ ಈಗ ತಂದೆಯ ಬಳಿ ಬಂದಿದ್ದೇವೆ. ತಂದೆಯು ತಿಳಿಸಿದ್ದಾರೆ – ಹೊರಗಿನ ನಿಮ್ಮ ಸೇವಾಕೇಂದ್ರಗಳಲ್ಲಿ ತಿಳಿದುಕೊಳ್ಳಲು ಅನೇಕರು ಬರುತ್ತಾರೆ, ಇಲ್ಲಿ ಇದು ಇಂದ್ರಸಭೆಯಾಗಿದೆ, ಇಂದ್ರನು ಶಿವ ತಂದೆಯಾಗಿದ್ದಾರಲ್ಲವೆ. ಅವರು ಜ್ಞಾನದ ಮಳೆಯನ್ನು ಸುರಿಸುತ್ತಾರೆ ಅಂದಮೇಲೆ ಇಂತಹ ಸಭೆಯಲ್ಲಿ ಪತಿತರು ಬರುವಂತಿಲ್ಲ. ನೀಲಮಣಿ, ಪಚ್ಚೆ…. ಯಾವ ಬ್ರಾಹ್ಮಣಿಯರು ಮಾರ್ಗದರ್ಶಕರಾಗಿ ಬರುತ್ತಾರೆಯೋ ಅವರಿಗೆ ಹೇಳುತ್ತೇವೆ – ತಮ್ಮ ಜೊತೆ ವಿಕಾರದಲ್ಲಿ ಹೋಗುವವರನ್ನು ಕರೆದುಕೊಂಡು ಬರಬೇಡಿರಿ. ಇಲ್ಲವಾದರೆ ಅದಕ್ಕೆ ನೀವೇ ಜವಾಬ್ದಾರರಾಗುತ್ತೀರಿ. ಯಾರಾದರೂ ವಿಕಾರಿಯನ್ನು ಕರೆತರುತ್ತೀರೆಂದರೆ ಅವರಮೇಲೆ ಬಹಳ ಕಲೆಯುಂಟಾಗಿ ಬಿಡುತ್ತದೆ. ಬಹಳ ಭಾರಿ ಶಿಕ್ಷೆಯು ಸಿಗುತ್ತದೆ. ಬ್ರಾಹ್ಮಣಿಯರ ಮೇಲೆ ಬಹಳ ಜವಾಬ್ದಾರಿಯಿದೆ. ಮಾನಸ ಸರೋವರದಲ್ಲಿ ಸ್ನಾನ ಮಾಡಿದರೆ ದೇವತೆಗಳಾಗಿ ಬಿಡುತ್ತಾರೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಇದು ಜ್ಞಾನ ಮಾನಸ ಸರೋವರವಾಗಿದೆ. ತಂದೆಯು ಮನುಷ್ಯನ ತನುವಿನಲ್ಲಿ ಜ್ಞಾನದ ಮಳೆ ಸುರಿಸುತ್ತಾರೆ. ಜ್ಞಾನ ಸಾಗರನಲ್ಲವೆ. ನೀವು ನದಿಗಳೂ ಆಗಿದ್ದೀರಿ, ಸರೋವರವೂ ಆಗಿದ್ದೀರಿ, ಜ್ಞಾನ ಸಾಗರನು ಇವರಲ್ಲಿ ಕುಳಿತು ಮಕ್ಕಳನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಸ್ವರ್ಗದಲ್ಲಿ ಶ್ರೀಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ, ಇದು ಪ್ರವೃತ್ತಿ ಮಾರ್ಗದ ಗುರಿ-ಧ್ಯೇಯವಾಗಿದೆ. ನಾವಿಬ್ಬರೂ ಜ್ಞಾನ ಚಿತೆಯ ಮೇಲೆ ಕುಳಿತು ಲಕ್ಷ್ಮೀ-ನಾರಾಯಣರಾಗುತ್ತೇವೆ ಎಂದು ಹೇಳುತ್ತಾರೆ, ಶ್ರೇಷ್ಠ ಪದವಿಯನ್ನೇ ಪಡೆಯಬೇಕಲ್ಲವೆ. ಆತ್ಮರು ಅರ್ಧಕಲ್ಪ ಅಲೆದಾಡುತ್ತಾ ಇರುತ್ತಾರೆ – ಬಾಬಾ, ಬಂದು ನಮಗೆ ರಾಜಯೋಗವನ್ನು ಕಲಿಸಿ ಪಾವನರನ್ನಾಗಿ ಮಾಡಿರಿ ಎಂದು. ತಂದೆಯು ಸಲಹೆ ನೀಡುತ್ತಾರೆ. ಭಾರತವಾಸಿಗಳು ಯಾರು ದೇವಿ-ದೇವತೆಗಳನ್ನು ಒಪ್ಪುವವರಿದ್ದಾರೆಯೋ ಅವರು ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ಪ್ರಯತ್ನ ಪಟ್ಟು ದೇವಿ-ದೇವತೆಗಳ ಭಕ್ತರಿಗೆ ಹೋಗಿ ತಿಳಿಸಿಕೊಡಿ, ತಂದೆಯು ಹೇಗೆ ಬಂದು ಮೂರು ಧರ್ಮಗಳನ್ನು ಸ್ಥಾಪನೆ ಮಾಡುತ್ತಾರೆ! ಬ್ರಾಹ್ಮಣ, ಸೂರ್ಯವಂಶಿ, ಚಂದ್ರವಂಶಿ ಮೂರು ಧರ್ಮಗಳನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ. ಅರ್ಧಕಲ್ಪದವರೆಗೂ ಮತ್ತ್ಯಾವುದೇ ಧರ್ಮವು ಸ್ಥಾಪನೆಯಾಗುವುದಿಲ್ಲ. ನಂತರ ಅರ್ಧಕಲ್ಪದಲ್ಲಿ ಎಷ್ಟೊಂದು ಮಠಪಂಥ, ಧರ್ಮಗಳು ಸ್ಥಾಪನೆಯಾಗುತ್ತವೆ! ಅರ್ಧಕಲ್ಪದಲ್ಲಿ ಒಂದು ಧರ್ಮವು ಸ್ಥಾಪನೆಯಾಗುತ್ತದೆ, ಅದು ಈ ಸಂಗಮಯುಗದಲ್ಲಿ ಭವಿಷ್ಯಕ್ಕಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಅವರೆಲ್ಲರೂ ಹಳೆಯ ಪ್ರಪಂಚದಲ್ಲಿ ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಇಲ್ಲಿ ತಂದೆಯು ಅರ್ಧಕಲ್ಪಕ್ಕಾಗಿ ಒಂದು ಧರ್ಮದ ಸ್ಥಾಪನೆ ಮಾಡುತ್ತಾರೆ, ಮತ್ತ್ಯಾರಲ್ಲಿಯೂ ಈ ಬಲವಿಲ್ಲ. ತಂದೆಯು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡು ಸೂರ್ಯವಂಶಿ, ಚಂದ್ರವಂಶಿ ಮನೆತನವನ್ನು ಸ್ಥಾಪನೆ ಮಾಡಿ ಮತ್ತೆಲ್ಲದರ ವಿನಾಶ ಮಾಡಿಸುತ್ತಾರೆ. ಎಲ್ಲಾ ಆತ್ಮರೂ ಶಾಂತಿಯಲ್ಲಿ ಹೊರಟು ಹೋಗುತ್ತಾರೆ, ನೀವು ಸುಖದಲ್ಲಿ ಬರುತ್ತೀರಿ. ಆ ಸಮಯದಲ್ಲಿ ತಂದೆಯನ್ನು ನೆನಪು ಮಾಡಲು ಯಾವುದೇ ದುಃಖವಿರುವುದೇ ಇಲ್ಲ. ಈ ಜ್ಞಾನವೂ ಸಹ ನಿಮ್ಮ ಬುದ್ಧಿಯಲ್ಲಿದೆ. ನೀವು ತಿಳಿದುಕೊಂಡಿದ್ದೀರಿ – ಯಾವ ತಂದೆಯು ಜ್ಞಾನ ಸಾಗರನಾಗಿದ್ದಾರೆಯೋ ಅವರು ಜ್ಞಾನವನ್ನು ಕೊಡುತ್ತಿದ್ದಾರೆ, ಸಾಗರನು ಒಬ್ಬರೇ ಆಗಿದ್ದಾರೆ. ನೀವು ತಮ್ಮನ್ನು ಸಾಗರನೆಂದು ಕರೆಸಿಕೊಳ್ಳುವುದಿಲ್ಲ, ನೀವು ತಂದೆಗೆ ಸಹಯೋಗಿಗಳಾಗುತ್ತೀರಿ ಆದ್ದರಿಂದ ನಿಮಗೆ ಜ್ಞಾನ ಗಂಗೆಯರೆಂದು ಹೆಸರಿದೆ. ಬಾಕಿ ಅವೆಲ್ಲವೂ ನೀರಿನ ನದಿಗಳಾಗಿವೆ, ತಂದೆಯು ತಿಳಿಸುತ್ತಾರೆ – ನಾನು ಸಾಗರನ ಮಕ್ಕಳು ನೀವು ಕಾಮ ಚಿತೆಯನ್ನೇರಿ ಸುಟ್ಟು ಹೋಗಿದ್ದೀರಿ ಅರ್ಥಾತ್ ಪತಿತರಾಗಿ ಬಿಟ್ಟಿದ್ದೀರಿ, ಈಗ ಪುನಃ ನನ್ನನ್ನು ನೆನಪು ಮಾಡುವುದರಿಂದಲೇ ನೀವು ಪಾವನರಾಗುವಿರಿ. ಇದು 5000 ವರ್ಷಗಳ ಸೃಷ್ಟಿ ಚಕ್ರವಾಗಿದೆ, ಇದೂ ಸಹ ಯಾರಿಗೂ ತಿಳಿದಿಲ್ಲ. ಸೃಷ್ಟಿ ಚಕ್ರವು ಪೂರ್ಣ ನಾಲ್ಕೂ ಭಾಗಗಳಲ್ಲಿದೆ. ನಾಲ್ಕು ಯುಗಗಳಿವೆಯಲ್ಲವೆ. ಈ ಸಂಗಮಯುಗವು ಕಲ್ಯಾಣಕಾರಿಯಾಗಿದೆ, ಕುಂಭವೆಂದು ಹೇಳುತ್ತಾರಲ್ಲವೆ. ಮೇಳಕ್ಕೆ ಕುಂಭವೆಂದು ಹೇಳಲಾಗುತ್ತದೆ. ನದಿಗಳು ಬಂದು ಸಾಗರಕ್ಕೆ ಸೇರುತ್ತವೆ, ಆತ್ಮವು ಬಂದು ಪರಮಾತ್ಮನೊಂದಿಗೆ ಸೇರುತ್ತದೆ. ಇದಕ್ಕೇ ಕುಂಭವೆಂದು ಹೇಳುತ್ತಾರೆ, ಆತ್ಮ-ಪರಮಾತ್ಮನ ಮೇಳವನ್ನು ನೀವು ನೋಡುತ್ತೀರಿ. ನೀವು ಪರಸ್ಪರ ಮಿಲನ ಮಾಡುತ್ತೀರಿ. ಚರ್ಚಾಗೋಷ್ಟಿಗಳನ್ನು ಮಾಡುತ್ತೀರಿ, ಅದಕ್ಕೆ ಕುಂಭವೆಂದು ಹೇಳುವುದಿಲ್ಲ. ಸಾಗರನಂತೂ ತಮ್ಮ ಜಾಗದಲ್ಲಿ ಕುಳಿತಿದ್ದಾರೆ, ಈ ತನುವಿನಲ್ಲಿದ್ದಾರಲ್ಲವೆ. ಇವರ ತನುವೆಲ್ಲಿಯೋ ಅಲ್ಲಿಯೇ ಜ್ಞಾನ ಸಾಗರನಿರುತ್ತಾರೆ. ಉಳಿದಂತೆ ನೀವು ಜ್ಞಾನ ಗಂಗೆಯರು ಪರಸ್ಪರ ಸೇರುತ್ತೀರಿ, ನದಿಗಳಲ್ಲಿಯೂ ಚಿಕ್ಕದು-ದೊಡ್ಡದು ಇರುತ್ತದೆಯಲ್ಲವೆ. ಅಲ್ಲಿಗೆ ಸ್ನಾನ ಮಾಡಲು ಹೋಗುತ್ತಾರೆ, ಗಂಗಾ, ಯಮುನಾ, ಸರಸ್ವತಿ ಇತ್ಯಾದಿಗಳಂತೂ ಇದ್ದೇ ಇವೆ. ದೆಹಲಿ ಜಮುನಾ ನದಿಯ ತೀರದಲ್ಲಿ ಸ್ವರ್ಗವಿರುತ್ತದೆ, ಕೃಷ್ಣಪುರಿಯಂತೂ ಇರುತ್ತದೆ. ದೆಹಲಿಯೇ ಪರಿಸ್ಥಾನವಾಗಿತ್ತು ಎಂದು ಹೇಳುತ್ತಾರೆ. ಆಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಕೃಷ್ಣನ ರಾಜ್ಯವಿತ್ತು ಎಂದು ಹೇಳುವುದಿಲ್ಲ, ರಾಧೆ-ಕೃಷ್ಣರು ಯಾವಾಗ ದಂಪತಿಗಳಾಗುವರೋ ಆಗಲೇ ರಾಜ್ಯ ಮಾಡುವರು. ಈಗ ನೀವು ಮಕ್ಕಳು ಎಷ್ಟು ಖುಷಿಯಲ್ಲಿದ್ದೀರಿ! ಮಾಯೆಯ ಬಿರುಗಾಳಿಗಳಂತೂ ಬಹಳ ಬರುತ್ತವೆ, ಬೇಹದ್ದಿನ ಮಲ್ಲ ಯುದ್ದವಾಗಿದೆ, ಪ್ರತಿಯೊಬ್ಬರಿಗೆ 5 ವಿಕಾರಗಳ ಜೊತೆ ಯುದ್ಧ ನಡೆಯುತ್ತದೆ, ತಂದೆಯನ್ನು ನಿರಂತರ ನೆನಪು ಮಾಡಬೇಕೆಂದು ನಾವು ಬಯಸುತ್ತೇವೆ, ಮಾಯೆಯು ನಮ್ಮ ಯೋಗವನ್ನು ತುಂಡರಿಸಿ ಬಿಡುತ್ತದೆ. ಒಂದು ಆಟವನ್ನೂ ತೋರಿಸುತ್ತಾರೆ – ಅದರಲ್ಲಿ ಒಂದು ಕಡೆ ಪರಮಾತ್ಮನು ತನ್ನ ಕಡೆ ಎಳೆಯುತ್ತಾರೆ, ಮಾಯೆಯು ತನ್ನಕಡೆ ಎಳೆಯುತ್ತಿದೆ – ಹೀಗೆ ಒಂದು ನಾಟಕವನ್ನೂ ಮಾಡಿದ್ದಾರೆ. ಸಿನಿಮಾದ ಫ್ಯಾಷನ್ ಈಗ ಹೊರಬಂದಿದೆ. ನಿಮಗೆ ಡ್ರಾಮಾನುಸಾರ ಸಿನಿಮಾದ ಬಗ್ಗೆಯೇ ತಿಳಿಸಬೇಕಾಗಿತ್ತು, ನಾಟಕದಲ್ಲಂತೂ ಅದಲು ಬದಲಾಗುವ ಸಾಧ್ಯತೆಯಿದೆ, ಇದಂತೂ ಅನಾದಿ-ಅವಿನಾಶಿ ನಾಟಕವು ಮಾಡಿ-ಮಾಡಲ್ಪಟ್ಟಿದೆ. ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ… ಯಾರಾದರೂ ಮರಣ ಹೊಂದಿದರೆ ಅವರದು ಅಷ್ಟೇ ಪಾತ್ರವಿತ್ತು, ನಾವೇಕೆ ಚಿಂತೆ ಮಾಡುವುದು? ಡ್ರಾಮಾ ಅಲ್ಲವೆ. ಶರೀರವನ್ನು ಬಿಟ್ಟ ಮೇಲೆ ಪುನಃ ಬರಲು ಸಾಧ್ಯವೇ? ಅಳುವುದರಿಂದೇನು ಲಾಭ? ಇದರ ಹೆಸರೇ ದುಃಖಧಾಮವಾಗಿದೆ, ಸತ್ಯಯುಗದಲ್ಲಿ ಮೋಹಜೀತ ರಾಜರಿರುತ್ತಾರೆ. ಇದರ ಮೇಲೆ ಒಂದು ಕಥೆಯಿದೆ – ಸತ್ಯಯುಗದಲ್ಲಿ ಮೋಹದ ಮಾತಿರುವುದಿಲ್ಲ, ಇಲ್ಲಂತೂ ಮನುಷ್ಯರಲ್ಲಿ ಎಷ್ಟೊಂದು ಮೋಹವಿದೆ! ಯಾರಿಗಾದರೂ ಅಳುಬರದಿದ್ದರೆ ತಾನು ಅಳುತ್ತಾ ಅವರನ್ನೂ ಅಳುವಂತೆ ಮಾಡಿ ಬಿಡುತ್ತಾರೆ. ಅದರಿಂದ ಇವರು ದುಃಖಿಸುತ್ತಿದ್ದಾರೆಂದು ತಿಳಿಯಲಿ, ಇಲ್ಲದಿದ್ದರೆ ನಿಂಧನೆಯಾಗುವುದು ಎಂದು ಈ ರೀತಿ ಮಾಡುತ್ತಾರೆ. ಭಾರತದಲ್ಲಿಯೇ ಇವೆಲ್ಲಾ ಪದ್ಧತಿಗಳಿವೆ, ಭಾರತದಲ್ಲಿಯೇ ಸುಖ ಭಾರತದಲ್ಲಿಯೇ ದುಃಖವಾಗುತ್ತದೆ. ಭಾರತದಲ್ಲಿ ದೇವಿ-ದೇವತೆಗಳು ರಾಜ್ಯ ಮಾಡುತ್ತಿದ್ದರು, ವಿದೇಶಿಗಳು ಹಳೆಯ ಚಿತ್ರಗಳನ್ನು ಬಹಳ ಖುಷಿಯಿಂದ ತೆಗೆದುಕೊಳ್ಳುತ್ತಾರೆ, ಹಳೆಯ ವಸ್ತುಗಳಿಗೆ ಬಹಳ ಮಾನ್ಯತೆಯಿರುತ್ತದೆ. ಎಲ್ಲರಿಗಿಂತ ಹಳಬರಾದ ಶಿವನಂತೂ ಇಲ್ಲಿ ಬಂದಿದ್ದರಲ್ಲವೆ. ಅವರಿಗೆ ಎಷ್ಟೊಂದು ಪೂಜೆ ಮಾಡುತ್ತಾರೆ! ಈಗಂತೂ ಶಿವ ತಂದೆಯು ಬಂದಿದ್ದಾರೆ, ನೀವು ಪೂಜೆ ಮಾಡುವುದಿಲ್ಲ. ಅವರು ಬಂದು ಹೋಗಿದ್ದಾರೆ, ಆದ್ದರಿಂದಲೇ ಅವರ ಪೂಜೆ ಮಾಡುತ್ತಾ ಇರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಡ್ರಾಮಾದ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ನಿಶ್ಚಿಂತರಾಗಬೇಕಾಗಿದೆ, ಯಾವುದೇ ಪ್ರಕಾರದ ಚಿಂತೆ ಮಾಡಬಾರದು. ಏಕೆಂದರೆ ನಿಮಗೆ ತಿಳಿದಿದೆ – ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ…. ನಿರ್ಮೋಹಿಗಳಾಗಬೇಕಾಗಿದೆ.

2. ತಂದೆಯ ಮೂಲಕ ಬೃಹಸ್ಪತಿಯ ದೆಶೆ ಕುಳಿತಿದೆ ಅಂದಮೇಲೆ ಮತ್ತೆ ರಾಹುವಿನ ಗ್ರಹಣ ಹಿಡಿಯದಂತೆ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ಗ್ರಹಚಾರವಿದ್ದರೆ ಅದನ್ನು ಜ್ಞಾನ ದಾನದಿಂದ ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಅನುಭವಗಳನ್ನು ವೃದ್ಧಿ ಮಾಡಿಕೊಳ್ಳುವ ಆಧಾರವಾಗಿದೆ – ಮನನ ಶಕ್ತಿ. ಮನನ ಮಾಡುವವರು ಸ್ವತಹವಾಗಿಯೇ ಮಗ್ನವಾಗಿರುತ್ತಾರೆ. ಮಗ್ನಾ ಅವಸ್ಥೆಯಲ್ಲಿ ಯೋಗವನ್ನು ಇಡಬೇಕಾಗಿರುವುದಿಲ್ಲ. ಆದರೆ ನಿರಂತರ ಜೋಡಣೆಯಾಗಿರುತ್ತದೆ, ಅದಕ್ಕಾಗಿ ಪರಿಶ್ರಮ ಪಡಬೇಕಾಗಿರುವುದಿಲ್ಲ. ಮಗ್ನ ಅರ್ಥಾತ್ ಪ್ರೀತಿಯ ಸಾಗನರಲ್ಲಿ ಸಮಾವೇಶವಾಗಿರುವುದು, ಈ ರೀತಿ ಸಮಾವೇಶ ಆಗಿರುವವರನ್ನೆಂದಿಗೂ ಯಾರೂ ಬೇರೆ ಮಾಡಲು ಸಾಧ್ಯವಿಲ್ಲ. ಹಾಗಾದರೆ ಪರಿಶ್ರಮದಿಂದ ಮುಕ್ತರಾಗಿರಿ, ಸಾಗರನ ಮಕ್ಕಳಾಗಿದ್ದೀರಿ ಅಂದಾಗ ಅನುಭವಗಳ ಬಾವಿಗಳಲ್ಲಿ ಜಳಕ ಮಾಡಬಾರದು. ಆದರೆ ಸಾಗರನಲ್ಲಿಯೇ ಸಮಾವೇಶವಾಗಿರಿ, ಆಗ ಅನುಭವಿ ಮೂರ್ತಿ ಎಂದು ಹೇಳಲಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top