20 August 2021 KANNADA Murli Today | Brahma Kumaris

Read and Listen today’s Gyan Murli in Kannada

August 19, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯ ಬಲಭುಜವಾಗಬೇಕೆಂದರೆ ಪ್ರತೀ ಮಾತಿನಲ್ಲಿ ಸತ್ಯವಂತರಾಗಿರಿ, ಸದಾ ಶ್ರೇಷ್ಠ ಕರ್ಮ ಮಾಡಿರಿ”

ಪ್ರಶ್ನೆ:: -

ಯಾವ ಸಂಸ್ಕಾರವು ಸೇವೆಯಲ್ಲಿ ಬಹಳ ವಿಘ್ನಗಳನ್ನು ಹಾಕುತ್ತದೆ?

ಉತ್ತರ:-

ಭಾವ-ಸ್ವಭಾವದ ಕಾರಣ ಪರಸ್ಪರ ಯಾವ ದ್ವೈತ ಮತದ (ಘರ್ಷಣೆಯ) ಸಂಸ್ಕಾರವುಂಟಾಗುತ್ತದೆಯೋ ಅದು ಸೇವೆಯಲ್ಲಿ ಬಹಳ ವಿಘ್ನ ಹಾಕುತ್ತದೆ. ಎರಡು ಮತಗಳಿಂದ ಬಹಳ ನಷ್ಟವುಂಟಾಗುತ್ತದೆ. ಕ್ರೋಧದ ಭೂತವು ಇಂತಹದ್ದಾಗಿದೆ ಕ್ರೋಧಿಗಳು ಭಗವಂತನನ್ನು ಎದುರಿಸುವುದರಲ್ಲಿಯೂ ತಡ ಮಾಡುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಇಂತಹ ಯಾವುದೇ ಸಂಸ್ಕಾರವಿದ್ದರೆ ಅದನ್ನು ತೆಗೆದು ಹಾಕಿರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ…….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳು ಅರ್ಥಾತ್ ಶಿವ ತಂದೆ ಯಾರು ಪರಮಾತ್ಮನಾಗಿದ್ದಾರೆಯೋ ಅವರ ಮಕ್ಕಳಾದ ಆತ್ಮರು ಶರೀರರೂಪಿ ಕರ್ಮೇಂದ್ರಿಯಗಳ ಮೂಲಕ ಗೀತೆಯನ್ನು ಕೇಳಿದಿರಿ. ಈಗ ಮಕ್ಕಳು ಆತ್ಮಾಭಿಮಾನಿಗಳಾಗಬೇಕಾಗಿದೆ, ಬಹಳ ಪರಿಶ್ರಮವೂ ಇದೆ. ಪುನಃ-ಪುನಃ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದು ಗುಪ್ತ ಪರಿಶ್ರಮವಾಗಿದೆ. ತಂದೆಯು ಗುಪ್ತವಾದ್ದರಿಂದ ಗುಪ್ತ ಪರಿಶ್ರಮ ಮಾಡಿಸುತ್ತಾರೆ. ಸ್ವಯಂ ತಂದೆಯೇ ಬಂದು ತಿಳಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿರಿ. ಇದರಿಂದ 5000 ವರ್ಷಗಳ ಹಿಂದಿನ ತರಹ ಸತೋಪ್ರಧಾನರಾಗುವಿರಿ. ಮಕ್ಕಳಿಗೆ ತಿಳಿದಿದೆ – ನಾವೇ ಸತೋಪ್ರಧಾನರಾಗಿದ್ದೆವು ಮತ್ತೆ ನಾವೇ ಈಗ ತಮೋಪ್ರಧಾನರಾಗಿದ್ದೇವೆ. ಪುನಃ ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ಗೀತೆಯಲ್ಲಿಯೂ ಹಾಡುತ್ತಾರೆ, ಯಾವ ಅದೃಷ್ಟವನ್ನು ಕಳೆದುಕೊಂಡಿದ್ದಾರೆಯೋ ಅದನ್ನು ಪುನಃ ಪಡೆಯುವುದಕ್ಕಾಗಿ ಪುರುಷಾರ್ಥ ಮಾಡಿಸುವವರು ಒಬ್ಬರೇ ಸರ್ವಶಕ್ತಿವಂತ ತಂದೆಯಾಗಿದ್ದಾರೆ ಏಕೆಂದರೆ ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರಲ್ಲವೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ಹೇಗೆ ಆತ್ಮಿಕ ಮಕ್ಕಳೇ, ಈಗ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ವಿದ್ಯಾರ್ಥಿಗಳು ಅದೃಷ್ಟವನ್ನು ರೂಪಿಸಿಕೊಳ್ಳಲು ಶಾಲೆಗೆ ಹೋಗುತ್ತಾರಲ್ಲವೆ. ಅವರಂತೂ ಚಿಕ್ಕ ಮಕ್ಕಳಾಗಿರುತ್ತಾರೆ. ನೀವು ಚಿಕ್ಕವರಲ್ಲ, ನೀವಂತೂ ವಾನಪ್ರಸ್ಥಿಗಳಾಗಿದ್ದೀರಿ. ಅದೃಷ್ಟವನ್ನು ರೂಪಿಸಿಕೊಳ್ಳುತ್ತಿದ್ದೀರಿ. ಕೆಲವರು ಬಹಳ ವೃದ್ಧರೂ ಇದ್ದೀರಿ, ವೃದ್ಧಾಪ್ಯಕ್ಕಿಂತಲೂ ಯವ್ವನದಲ್ಲಿ ಓದುವುದು ಚೆನ್ನಾಗಿರುತ್ತದೆ. ಯುವಕರ ಬುದ್ಧಿಯು ಚುರುಕಾಗಿರುತ್ತದೆ. ಈ ವಿದ್ಯೆಯಂತೂ ಎಲ್ಲರಿಗಾಗಿ ಅತಿ ಸಹಜವಾಗಿದೆ. ನಿಮ್ಮ ಶರೀರವಂತೂ ದೊಡ್ಡದಾಗಿದೆಯಲ್ಲವೆ. (ಮಗುವನ್ನು ನೋಡುತ್ತಾ) ಇದಂತೂ ಮಗುವಾಗಿದೆ, ಇದಕ್ಕೆ ಅಷ್ಟೊಂದು ಅರ್ಥವಾಗುವುದಿಲ್ಲ, ಏಕೆಂದರೆ ಕರ್ಮೇಂದ್ರಿಯಗಳು ಚಿಕ್ಕದಾಗಿದೆ ಆದರೆ ನೀವು ಹೊಗಳಿಕೆ-ತೆಗಳಿಕೆ, ಸುಖ-ದುಃಖ ಇವೆಲ್ಲಾ ಮಾತುಗಳನ್ನು ತಿಳಿದುಕೊಳ್ಳಬಲ್ಲಿರಿ. ಆತ್ಮವಂತೂ ಬಿಂದುವಾಗಿದೆ, ಶರೀರವು ಬೆಳವಣಿಗೆಯಾಗುತ್ತಾ ಇರುತ್ತದೆ. ಆತ್ಮವಂತೂ ಏಕರಸವಾಗಿರುತ್ತದೆ, ಎಂದೂ ಅದು ಹೆಚ್ಚುವುದಾಗಲಿ, ಸವೆಯುವುದಾಗಲಿ ಇಲ್ಲ. ಆ ಆತ್ಮದ ಬುದ್ಧಿಗಾಗಿಯೇ ತಂದೆಯು ಕಸ್ತೂರಿಯಂತಹ ಉಡುಗೊರೆಯನ್ನು ಕೊಡುತ್ತಿದ್ದಾರೆ ಏಕೆಂದರೆ ಬುದ್ಧಿಯು ಸಂಪೂರ್ಣ ತಮೋಪ್ರಧಾನವಾಗಿ ಬಿಟ್ಟಿದೆ. ಅದು ಈಗ ಸ್ವಚ್ಛವಾಗುತ್ತಿದೆ, ಈ ಚಿತ್ರಗಳು ತಿಳಿಸಿಕೊಡಲು ನಿಮಗೆ ಬಹಳ ಸಹಾಯಕವಾಗುತ್ತದೆ. ಭಕ್ತಿಮಾರ್ಗದಲ್ಲಿ ದೇವತೆಗಳ ಮುಂದೆ ಹೋಗಿ ತಲೆ ಬಾಗುತ್ತಾರೆ, ಪೂಜೆ ಮಾಡುತ್ತಾರೆ. ಮೊದಲು ನೀವೂ ಸಹ ಅಂಧಶ್ರದ್ಧೆಯಿಂದ ಹೋಗುತ್ತಿದ್ದಿರಿ, ಶಿವನ ಮಂದಿರಕ್ಕೆ ಹೋಗುತ್ತಿದ್ದಿರಿ ಆದರೆ ಇವರು ಶಿವತಂ ದೆಯಾಗಿದ್ದಾರೆ, ತಂದೆಯಿಂದ ಅವಶ್ಯವಾಗಿ ಆಸ್ತಿಯು ಸಿಕ್ಕಿದೆ ಆದ್ದರಿಂದಲೇ ಅವರ ಮಹಿಮೆಯನ್ನು ಗಾಯನ ಮಾಡಲಾಗುತ್ತದೆ ಎಂಬುದು ನಿಮಗೆ ತಿಳಿದಿರಲಿಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿ ಹೋಗುತ್ತಾರೆಂದರೆ ಅವರ ಮಹಿಮೆಯನ್ನು ಹಾಡಲಾಗುತ್ತದೆ. ವಾಸ್ತವದಲ್ಲಿ ಒಬ್ಬ ಶಿವ ತಂದೆಯ ಅಂಚೆ ಚೀಟಿಯನ್ನು ಮಾಡಿಸಬೇಕು. ಶಿವ ತಂದೆಯು ಗೀತಾ ಜ್ಞಾನ ದಾತನಾಗಿದ್ದಾರೆ…. ಈ ಅಂಚೆ ಚೀಟಿಯು ಸಹಜವಾಗಿ ಆಗಬಲ್ಲದು. ಆ ತಂದೆಯು ಎಲ್ಲರಿಗೆ ಸುಖ ನೀಡುವವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ನಾನು ನಿಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡುವವನಾಗಿದ್ದೇನೆ. ವೃದ್ಧರೂ ಸಹ ಇದನ್ನು ತಿಳಿದುಕೊಳ್ಳಬಹುದಲ್ಲವೆ – ನಾವು ಶಿವ ತಂದೆಯ ಬಳಿ ಬಂದಿದ್ದೇವೆ, ಅವರು ವಿಚಿತ್ರನಾಗಿದ್ದಾರೆ. ಅವರೇ ಈ ಚಿತ್ರದಲ್ಲಿ (ಶರೀರ) ಪ್ರವೇಶ ಮಾಡಿದ್ದಾರೆ, ನಿರಾಕಾರನಿಗೆ ವಿಚಿತ್ರನೆಂದು ಹೇಳಲಾಗುತ್ತದೆ. ನಾವು ಶಿವ ತಂದೆಯ ಬಳಿ ಹೋಗುತ್ತೇವೆ, ಅವರು ತಾತ್ಕಾಲಿಕವಾಗಿ ಈ ಶರೀರವನ್ನು ಧಾರಣೆ ಮಾಡಿದ್ದಾರೆಂದು ಬುದ್ಧಿಯಲ್ಲಿರುತ್ತದೆ, ಪತಿತರನ್ನು ಪಾವನರನ್ನಾಗಿ ಮಾಡಿ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ ಅಥವಾ ಶಾಂತಿಧಾಮ, ಸುಖಧಾಮದ ನಿವಾಸಿಗಳನ್ನಾಗಿ ಮಾಡುತ್ತಾರೆ. ಮನುಷ್ಯರು ಶಾಂತಿಗಾಗಿಯೇ ಪ್ರಯತ್ನ ಪಡುತ್ತಾರೆ. ಭಗವಂತ ಸಿಕ್ಕಿದರೆ ಶಾಂತಿ ಸಿಗುವುದು ಎಂದು ಪ್ರಯತ್ನ ಪಡುತ್ತಾರೆ. ಸುಖಕ್ಕಾಗಿ ಪುರುಷಾರ್ಥ ಮಾಡುವುದಿಲ್ಲ, ತಂದೆಯ ಬಳಿ ಮನೆಗೆ ಹೋಗಬೇಕು, ಭಗವಂತ ಸಿಗಬೇಕೆಂದು ಪುರುಷಾರ್ಥ ಮಾಡುತ್ತಾರೆ. ಈ ಸಮಯದಲ್ಲಿ ಎಲ್ಲರೂ ಮುಕ್ತಿಯನ್ನು ಬಯಸುವವರಾಗಿದ್ದಾರೆ. ಜೀವನ್ಮುಕ್ತಿಯನ್ನು ಪಡೆಯುವವರು ಕೇವಲ ನೀವು ಬ್ರಾಹ್ಮಣರೇ ಆಗಿದ್ದೀರಿ, ಉಳಿದೆಲ್ಲರೂ ಮುಕ್ತಿಯನ್ನು ಬಯಸುವವರಾಗಿದ್ದಾರೆ. ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುವವರು ಮತ್ತ್ಯಾರೂ ಇಲ್ಲ. ಸನ್ಯಾಸಿಗಳು ಮೊದಲಾದವರ ಬಳಿ ಹೋಗಿ ಶಾಂತಿಯನ್ನು ಬೇಡುತ್ತಾರೆ, ಮನಃಶ್ಯಾಂತಿ ಹೇಗೆ ಸಿಗುವುದು ಎಂದು ಕೇಳುತ್ತಾರೆ. ಯಾರೆಲ್ಲಾ ಮಾರ್ಗ ತಿಳಿಸುವವರಿದ್ದಾರೆಯೋ ಅವರೆಲ್ಲರೂ ಮುಕ್ತಿಯಲ್ಲಿ ಹೋಗುವವರಾಗಿದ್ದಾರೆ. ಮೋಕ್ಷವೆಂದರೇನು ಎಂಬುದೂ ಸಹ ಬುದ್ಧಿಯಲ್ಲಿ ಬರುವುದಿಲ್ಲ. ಜೀವನದಿಂದ ಬೇಸತ್ತು ಹೇಳುತ್ತಾರೆ – ಮುಕ್ತಿಯಲ್ಲಿ ಹೋಗುವುದೇ ಒಳ್ಳೆಯದು ಎಂದು. ವಾಸ್ತವದಲ್ಲಿ ಮುಕ್ತಿಧಾಮವು ಆತ್ಮಗಳಿರುವ ಸ್ಥಾನವಾಗಿದೆ. ಇಷ್ಟೊಂದು ಸೇವಾಕೇಂದ್ರಗಳಲ್ಲಿ ಮಕ್ಕಳಿದ್ದಾರೆ, ಎಲ್ಲರೂ ತಿಳಿದುಕೊಂಡಿದ್ದಾರೆ – ನಾವು ಹೊಸ ಪ್ರಪಂಚಕ್ಕಾಗಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ತಂದೆಯು ನಮಗೆ ಹೊಸ ಪ್ರಪಂಚದ ರಾಜ್ಯವನ್ನು ಕೊಡುತ್ತಾರೆ. ಎಲ್ಲಿ ಕೊಡುತ್ತಾರೆ? ಹೊಸ ಪ್ರಪಂಚದಲ್ಲಿ ಕೊಡುವರೋ ಅಥವಾ ಹಳೆಯ ಪ್ರಪಂಚದಲ್ಲಿ ಕೊಡುವರೋ? ತಂದೆಯು ತಿಳಿಸುತ್ತಾರೆ, ನಾನು ಸಂಗಮದಲ್ಲಿ ಬರುತ್ತೇನೆ, ಸತ್ಯಯುಗದಲ್ಲಾಗಲಿ ಕಲಿಯುಗದಲ್ಲಾಗಲಿ ಬರುವುದಿಲ್ಲ. ಎರಡರ ಮಧ್ಯದಲ್ಲಿ ಬರುತ್ತೇನೆ. ತಂದೆಯಂತೂ ಎಲ್ಲರಿಗೆ ಸದ್ಗತಿ ನೀಡುತ್ತಾರಲ್ಲವೆ. ಎಲ್ಲರನ್ನು ದುರ್ಗತಿಯಲ್ಲಿ ಬಿಟ್ಟು ಹೋಗುತ್ತಾರೆಂದಲ್ಲ. ಸದ್ಗತಿ ಮತ್ತು ದುರ್ಗತಿ ಒಟ್ಟಿಗೆ ಇರಲು ಸಾಧ್ಯವಿಲ್ಲ. ಮಕ್ಕಳು ತಿಳಿದುಕೊಂಡಿದ್ದೀರಿ, ಈ ಹಳೆಯ ಪ್ರಪಂಚದ ವಿನಾಶವಾಗುವುದು ಆದ್ದರಿಂದ ಇದರೊಂದಿಗೆ ಪ್ರೀತಿಯನ್ನು ಇಟ್ಟುಕೊಳ್ಳಬಾರದು. ನಾವೀಗ ಸಂಗಮಯುಗದಲ್ಲಿದ್ದೇವೆ. ಈ ಪ್ರಪಂಚವು ಬದಲಾಗಲಿದೆ ಎಂದು ಬುದ್ಧಿಯು ಹೇಳುತ್ತದೆ. ಈಗ ತಂದೆಯು ಬಂದಿದ್ದಾರೆ, ತಿಳಿಸುತ್ತಾರೆ – ನಾನು ಕಲ್ಪ-ಕಲ್ಪವೂ ಸಂಗಮದಲ್ಲಿ ಬರುತ್ತೇನೆ, ನಿಮ್ಮನ್ನು ದುಃಖದಿಂದ ಬಿಡಿಸಿ ಹರಿದ್ವಾರಕ್ಕೆ ಕರೆದುಕೊಂಡು ಹೋಗುತ್ತೇನೆ. ಇದು ಜ್ಞಾನದ ಮಾತಾಗಿದೆ. ಹರಿದ್ವಾರ, ಕೃಷ್ಣನ ದ್ವಾರ ಎಂದು ಕೃಷ್ಣ ಪುರಿಗೆ ಹೇಳಲಾಗುತ್ತದೆ. ಅದರ ನಂತರ ಲಕ್ಷ್ಮಣನ ಉಯ್ಯಾಲೆಯನ್ನು ಹಾಕಿದ್ದಾರೆ. ಮೊದಲು ಹರಿದ್ವಾರ ಬರುವುದು. ಸತ್ಯಯುಗಕ್ಕೆ ಹರಿದ್ವಾರವೆಂದು ಹೇಳಲಾಗುತ್ತದೆ. ನಂತರ ರಾಮ-ಲಕ್ಷ್ಮಣ ಮೊದಲಾದವರನ್ನು ತೋರಿಸುತ್ತಾರೆ ಆದರೆ ಅಂತಹ ಮಾತೇನೂ ಇಲ್ಲ. ಇವು ಕಲ್ಪನೆಯ ಮಾತುಗಳಾಗಿವೆ. ರಾಮನಿಗೆ 4 ಮಂದಿ ಸಹೋದರರನ್ನು ತೋರಿಸಿದ್ದಾರೆ ಆದರೆ 4 ಜನರಂತೂ ಇರುವುದಿಲ್ಲ. 4-8 ಮಂದಿ ಈ ಕಲಿಯುಗದಲ್ಲಿರುತ್ತಾರೆ. ಒಂದು ಕಡೆ ಈಶ್ವರೀಯ ಸಂತಾನರಿದ್ದೀರಿ, ಇನ್ನೊಂದು ಕಡೆ ಆಸುರೀ ಸಂತಾನರಿದ್ದಾರೆ.

ಈಗ ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ. ಶಿವನು ತಂದೆಯಾಗಿದ್ದಾರೆ, ಬ್ರಹ್ಮಾರವರು ದಾದಾ ಆಗಿದ್ದಾರೆ, ಪ್ರಜಾಪಿತ ಆಗಿದ್ದಾರೆ. ಆ ಆತ್ಮರ ಪಿತನಂತೂ ಅನಾದಿಯಾಗಿದ್ದಾರೆ, ಈ ಸಮಯದಲ್ಲಿ ಬ್ರಾಹ್ಮಣರನ್ನು ರಚಿಸುತ್ತಾರೆ. ಶಿವ ತಂದೆಯು ಸಾಲಿಗ್ರಾಮಗಳನ್ನು ರಚಿಸುವುದಿಲ್ಲ, ಸಾಲಿಗ್ರಾಮಗಳಂತೂ ಅವಿನಾಶಿಯಾಗಿದೆ. ಕೇವಲ ತಂದೆಯು ಬಂದು ಸಾಲಿಗ್ರಾಮಗಳನ್ನೇ ಪವಿತ್ರರನ್ನಾಗಿ ಮಾಡುತ್ತಾರೆ. ಆತ್ಮವು ಪವಿತ್ರವಾಗುವವರೆಗೆ ಶರೀರವು ಪವಿತ್ರವಾಗಲು ಹೇಗೆ ಸಾಧ್ಯ! ನಾವಾತ್ಮರು ಪವಿತ್ರರಾಗಿದ್ದಾಗ ಸತೋಪ್ರಧಾನರಾಗಿದ್ದೆವು, ಈಗ ಅಪವಿತ್ರ, ತಮೋಪ್ರಧಾನರಾಗಿದ್ದೇವೆ ಅಂದಮೇಲೆ ಪುನಃ ಸತೋಪ್ರಧಾನರಾಗುವುದು ಹೇಗೆ? ಇವಂತೂ ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಸಮಯದಲ್ಲಿ ಆತ್ಮದಲ್ಲಿ ತುಕ್ಕು ಸೇರಿರುವ ಕಾರಣ ನೀವು ಪತಿತ, ತಮೋಪ್ರಧಾನರಾಗಿ ಬಿಟ್ಟಿದ್ದೀರಿ, ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ. ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಎಲ್ಲರೂ ಶಾಂತಿಧಾಮ ಹಾಗೂ ಸುಖಧಾಮದಲ್ಲಿ ಬರುತ್ತೀರಿ. ಆತ್ಮಗಳು ಹೇಗೆ ಬರುತ್ತಾರೆ ಎಂಬುದನ್ನೂ ಸಹ ನಿರಾಕಾರಿ ವೃಕ್ಷವನ್ನು ಮಾಡಿ ಅದರಲ್ಲಿ ಬಲ್ಬುಗಳನ್ನು ಹಾಕಿ ಕ್ರಿಶ್ಚಿಯನ್ನರು ಆಚರಣೆ ಮಾಡುತ್ತಾರೆ. ನಿಮಗೆ ತಿಳಿದಿದೆ – ಇವರೆಲ್ಲರೂ ಭಿನ್ನ-ಭಿನ್ನ ಶಾಖೆಗಳಾಗಿದ್ದಾರೆ. ಅಲ್ಲಿಂದ ಮೊಟ್ಟ ಮೊದಲು ಆತ್ಮರು ಹೇಗೆ ಕೆಳಗಿಳಿಯುತ್ತಾರೆ ಎಂಬ ಜ್ಞಾನವು ನಿಮಗೆ ಸಿಕ್ಕಿದೆ. ನಾವಾತ್ಮರ ಮನೆಯು ಶಾಂತಿಧಾಮವಾಗಿದೆ, ಈಗ ಸಂಗಮವಾಗಿದೆ. ಅಲ್ಲಿಂದ ಎಲ್ಲಾ ಆತ್ಮರು ಬಂದು ಬಿಡುತ್ತಾರೆ ನಂತರ ಎಲ್ಲರೂ ಹೋಗುತ್ತಾರೆ. ಪ್ರಳಯವಂತೂ ಆಗುವುದಿಲ್ಲ, ನೀವು ತಿಳಿದುಕೊಂಡಿದ್ದೀರಿ, ತಂದೆಯಿಂದ ನಾವು ಅದೃಷ್ಟವನ್ನು ರೂಪಿಸಿಕೊಳ್ಳಲು ಪುನಃ ಸ್ವರಾಜ್ಯವನ್ನು ಪಡೆಯಲು ಬಂದಿದ್ದೇವೆ. ಇದು ಕೇವಲ ಹೇಳುವುದಕ್ಕೆ ಮಾತ್ರವಲ್ಲ, ನೆನಪಿನಿಂದಲೇ ಆಸ್ತಿಯು ಸಿಗುವುದು. ತಂದೆಯು ತಿಳಿಸುತ್ತಾರೆ – ದೇಹ ಸಹಿತ ಯಾರೆಲ್ಲಾ ದೇಹದ ಮಿತ್ರ ಸಂಬಂಧಿ ಮೊದಲಾದವರಿದ್ದಾರೆಯೋ ಎಲ್ಲರನ್ನೂ ಮರೆಯಿರಿ. ಚಿತ್ರ ಮತ್ತು ವಿಚಿತ್ರನು ಇದ್ದಾರಲ್ಲವೆ. ಯಾರನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲವೋ ಅವರಿಗೆ ವಿಚಿತ್ರನೆಂದು ಹೇಳಲಾಗುತ್ತದೆ, ಇವು ಬಹಳ ಸೂಕ್ಷ್ಮ ಮಾತುಗಳಾಗಿವೆ. ಆತ್ಮವು ಎಷ್ಟು ಚಿಕ್ಕದಾಗಿದೆ, ಅದು ಪದೇ-ಪದೇ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ, ಮತ್ತ್ಯಾರ ಬುದ್ಧಿಯಲ್ಲಿಯೂ ಈ ಮಾತುಗಳಿರುವುದಿಲ್ಲ. ಮೊಟ್ಟ ಮೊದಲು ಇದನ್ನು ಬುದ್ಧಿಯಲ್ಲಿ ಕುಳ್ಳರಿಸಬೇಕಾಗಿದೆ – ನಾವಾತ್ಮರಾಗಿದ್ದೇವೆ, ಅವರು ನಮ್ಮ ತಂದೆಯಾಗಿದ್ದಾರೆ, ಅವರನ್ನೇ ಪತಿತ-ಪಾವನ, ಹೇ ಭಗವಂತ ಎಂದು ಹೇಳಿ ನೆನಪು ಮಾಡುತ್ತಾರೆ, ಮತ್ತೆಲ್ಲಿಯೂ ಹೋಗಬೇಕಾಗಿಲ್ಲ ಅಂದಮೇಲೆ ಒಬ್ಬರನ್ನೇ ನೆನಪು ಮಾಡಬೇಕಲ್ಲವೆ. ಭಗವಂತನನ್ನು ನೆನಪು ಮಾಡುತ್ತಾರೆ, ಅಂದಮೇಲೆ ಅವಶ್ಯವಾಗಿ ಅವರಿಂದ ಏನೋ ಸಿಗುವುದಲ್ಲವೆ! ಮತ್ತೆ ಅಲ್ಲಿ-ಇಲ್ಲಿ ಏಕೆ ಅಲೆಯುತ್ತೀರಿ. ಭಗವಂತನು ಪರಮಧಾಮದಿಂದ ಬರಬೇಕಾಗುತ್ತದೆಯಲ್ಲವೆ. ನಾವಂತೂ ಹೋಗಲು ಸಾಧ್ಯವಿಲ್ಲ ಏಕೆಂದರೆ ಪತಿತರಾಗಿದ್ದೇವೆ. ಪತಿತರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ, ನೀವೀಗ ಆಶ್ಚರ್ಯ ಚಕಿತರಾಗುತ್ತೀರಿ, ಭಕ್ತಿಮಾರ್ಗದ ಪಾತ್ರವು ಎಷ್ಟು ಅದ್ಭುತವಾಗಿದೆ! ಹೇ ಈಶ್ವರ, ಹೇ ಪರಮಪಿತ, ಓ ಗಾಡ್ಫಾದರ್ ಎಂದು ಒಬ್ಬ ಭಗವಂತನನ್ನು ನೆನಪು ಮಾಡುತ್ತಾರೆ. ಯಾವಾಗ ಅವರೊಬ್ಬರೇ ಆಗಿದ್ದಾರೆ ಅಂದಮೇಲೆ ಮತ್ತೆ ಅಲ್ಲಿ-ಇಲ್ಲಿ ಏಕೆ ಅಲೆದಾಡುತ್ತೀರಿ! ಅವರು ಮೇಲಿರುತ್ತಾರೆ ಆದರೆ ಇದೆಲ್ಲವೂ ನಿಗಧಿಯಾಗಿದೆ. ಡ್ರಾಮಾನುಸಾರ ತಿಳುವಳಿಕೆಹೀನರಾಗಿ ಭಕ್ತಿ ಮಾಡುತ್ತಾರೆ. ನೀವೀಗ ಪುನಃ ಬೇಹದ್ದಿನ ಬುದ್ಧಿವಂತರಾಗುತ್ತೀರಿ. ಶ್ರೀಮತದಂತೆ ನಡೆಯುವವರೇ ಬುದ್ಧಿವಂತರಾಗುತ್ತಾರೆ. ಅವರು ಗುಪ್ತವಾಗಿರಲು ಸಾಧ್ಯವಿಲ್ಲ, ಅವರು ಸದಾ ಶ್ರೇಷ್ಠಾಚಾರಿ ಕಾರ್ಯಗಳನ್ನೇ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ದುಃಖಹರ್ತ, ಸುಖಕರ್ತನಾಗಿದ್ದೇನೆ ಅಂದಮೇಲೆ ಮಕ್ಕಳೂ ಸಹ ಎಷ್ಟೊಂದು ಮಧುರರಾಗಬೇಕು! ತಂದೆಯ ಬಲ ಭುಜವಾಗಬೇಕು. ಇಂತಹ ಮಕ್ಕಳೇ ತಂದೆಗೆ ಪ್ರಿಯರಾಗುತ್ತಾರೆ. ಬಲ ಭುಜಗಳಲ್ಲವೆ. ನಿಮಗೆ ತಿಳಿದಿದೆ – ಎಡ ಗೈಯಿಂದ ಅಷ್ಟೊಂದು ಕೆಲಸ ಮಾಡಲು ಸಾಧ್ಯವಿಲ್ಲ ಏಕೆಂದರೆ ಬಲ ಗೈ ಒಳ್ಳೆಯ ಕಾರ್ಯವನ್ನು ಮಾಡುತ್ತದೆ ಆದ್ದರಿಂದ ಬಲ ಗೈಯನ್ನು ಶುಭ ಕಾರ್ಯದಲ್ಲಿ ಉಪಯೋಗಿಸುತ್ತಾರೆ. ಯಾವಾಗಲೂ ಬಲ ಗೈಯಿಂದಲೇ ಪೂಜೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಪ್ರತೀ ಮಾತಿನಲ್ಲಿ ಸತ್ಯವಂತರಾಗಿ. ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಖುಷಿಯಿರಬೇಕಲ್ಲವೆ.

ತಂದೆಯು ಹೇಳುತ್ತಾರೆ – ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ಇದರಿಂದ ಮತ್ತೆ ಅಂತ್ಯ ಮತಿ ಸೋ ಗತಿಯಾಗುವುದು. ಮತ ಮತ್ತು ಗತಿ ಅಥವಾ ಗತಿ ಕೊಡುವ ಮತವು ಒಂದೇ ಆಗಿದೆ. ಈಶ್ವರನ ಗತಿ ಮತವು ಈಶ್ವರನಿಗೇ ಗೊತ್ತು ಎಂದು ಗಾಯನವಿದೆ, ಅವರೇ ಪತಿತ-ಪಾವನನಾಗಿದ್ದಾರೆ. ಮನುಷ್ಯರನ್ನು ಪಾವನರನ್ನಾಗಿ ಮಾಡಿ ಹೇಗೆ ನಾನು ದುರ್ಗತಿಯಿಂದ ಸದ್ಗತಿಯಲ್ಲಿ ಕರೆದುಕೊಂಡು ಹೋಗಬೇಕೆಂದು ಅವರಿಗೆ ತಿಳಿದಿದೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಪರಿಶ್ರಮ ಪಡುತ್ತಾರೆ ಆದರೆ ಸದ್ಗತಿ ಸಿಗುವುದಿಲ್ಲ. ಫಲವೇನೂ ಸಿಗುವುದಿಲ್ಲ. ಸದ್ಗತಿ ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ಭಕ್ತಿಯಲ್ಲಿ ಯಾರು ಯಾವ ಭಾವನೆಯಿಂದ ಪೂಜೆ ಮಾಡುವರೋ ಅವರಿಗೆ ಫಲ ನೀಡುವವನು ನಾನೇ ಆಗಿದ್ದೇನೆ, ಅದು ಡ್ರಾಮಾದಲ್ಲಿ ನಿಗಧಿಯಾಗಿದೆ. ಅವರಿಗೆ ತನ್ನ ಪುರುಷಾರ್ಥದಿಂದ ತಾನಾಗಿಯೇ ಸಿಕ್ಕಿ ಬಿಡುತ್ತದೆ. ಈಗ ಮಕ್ಕಳು ತಮ್ಮ ಪುರುಷಾರ್ಥದಿಂದ ಪವಿತ್ರರಾಗಬೇಕಾಗಿದೆ. ಆದ್ದರಿಂದ ಮಧುರಾತಿ ಮಧುರ ತಂದೆಯನ್ನು ನೆನಪು ಮಾಡಿರಿ, ಅವರೇ ಸರ್ವಶಕ್ತಿವಂತ ಆಲ್ಮೈಟಿ ಅಥಾರಿಟಿ ಎಷ್ಟು ಚೆನ್ನಾಗಿ ಮಾಡುತ್ತಾರೆ. ನೀವು ಎಲ್ಲವನ್ನೂ ಅರಿತುಕೊಂಡಿದ್ದೀರಿ ಮತ್ತು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ, ರಚಯಿತ ಮತ್ತು ರಚನೆಯ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಈಗ ನೀವು ತಿಳಿದುಕೊಂಡಿದ್ದೀರಿ, ಈ ಜ್ಞಾನವು ನಮ್ಮಲ್ಲಿರಲಿಲ್ಲ, ಯಜ್ಞ-ತಪ ಇತ್ಯಾದಿಗಳನ್ನು ಮಾಡುವುದು ಶಾಸ್ತ್ರಗಳನ್ನು ಕೇಳುವುದು ಇದೆಲ್ಲವೂ ಶಾಸ್ತ್ರಗಳ ಜ್ಞಾನವಾಗಿದೆ, ಅದಕ್ಕೆ ಭಕ್ತಿಯೆಂದು ಹೇಳಲಾಗುತ್ತದೆ. ಅದರಲ್ಲಿ ಗುರಿ-ಧ್ಯೇಯವೇನೂ ಇಲ್ಲ. ವಿದ್ಯೆಯಲ್ಲಿ ಸದಾ ಗುರಿ-ಧ್ಯೇಯವಿರುತ್ತದೆ, ಯಾವುದಾದರೊಂದು ಪ್ರಕಾರದ ಜ್ಞಾನವಿರುತ್ತದೆ. ನಮಗೆ ಪತಿತರಿಂದ ಪಾವನರಾಗುವ ಜ್ಞಾನವನ್ನು ಪತಿತ-ಪಾವನ ತಂದೆಯು ನೀಡಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸಿದ್ದಾರೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಇದರಲ್ಲಿ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ, ಈ ಅನಾದಿ ನಾಟಕವು ಮಾಡಲ್ಪಟ್ಟಿದೆ ಎಂಬ ಈ ಬೇಹದ್ದಿನ ಜ್ಞಾನವು ಅವಶ್ಯವಾಗಿ ಇರಬೇಕಾಗಿದೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನೀವು ಈಗ ಘೋರ ಅಂಧಕಾರದಿಂದ ಘೋರ ಪ್ರಕಾಶತೆಯಲ್ಲಿ ಹೋಗುತ್ತಿದ್ದೀರಿ. ನೀವೀಗ ದೇವತೆಗಳಾಗುತ್ತಿದ್ದೀರಿ. ಇದನ್ನೂ ತಿಳಿಸಬೇಕಾಗಿದೆ – ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ, ಇದನ್ನು ಹಿಂದೂ ಧರ್ಮವೆಂದು ಹೇಳಿ ಬಿಟ್ಟಿದ್ದಾರೆ. ಕೊನೆಗೆ ಈ ಮಾತೂ ಸಹ ಮನುಷ್ಯರಿಗೆ ಅರ್ಥವಾಗುತ್ತದೆ ಆದ್ದರಿಂದ ಮಕ್ಕಳು ಎದ್ದು ನಿಲ್ಲಬೇಕು. ಇದರಲ್ಲಿ ಬಹಳ ಮಂದಿ ಮಕ್ಕಳು ಬೇಕಾಗಿದೆ. ದೆಹಲಿಯಲ್ಲಿ ಸಮ್ಮೇಳನಗಳನ್ನು ಮಾಡಬೇಕಾಗಿದೆ, ದೆಹಲಿಗೆ ಪರಿಸ್ತಾನವೆಂದು ಹೇಳಲಾಗುತ್ತದೆ, ಇದೇ ಜಮುನಾ ನದಿಯ ತೀರವಾಗಿತ್ತು, ದೆಹಲಿಯು ರಾಜಧಾನಿಯಾಗಿದೆ. ಅನೇಕರ ಕೈಸೇರಿದೆ. ದೇವತೆಗಳ ರಾಜಧಾನಿಯೂ ಇದೇ ಆಗಿತ್ತು ಆದ್ದರಿಂದ ದೆಹಲಿಯಲ್ಲಿ ಬಹಳ ದೊಡ್ಡ ಸಮ್ಮೇಳನಗಳನ್ನು ಮಾಡಬೇಕು ಆದರೆ ಮಾಯೆಯು ಮಾಡಲು ಬಿಡುವುದಿಲ್ಲ, ಬಹಳ ವಿಘ್ನಗಳನ್ನೂ ಹಾಕುತ್ತದೆ. ಇಂದು ಭಾವ-ಸ್ವಭಾವಗಳು ಹೆಚ್ಚಾಗುತ್ತಿದೆ (ಮತ-ಭೇದ). ಮಕ್ಕಳು ಪರಸ್ಪರ ಸೇರಿ ಸರ್ವೀಸಿನಲ್ಲಿ ತೊಡಗಬೇಕಾಗಿದೆ. ಹೇಗೆ ಅವರೂ ಸಹ ಪರಸ್ಪರ ಹೊಂದಿಕೊಳ್ಳದಿದ್ದರೆ ರಾಜ್ಯವೇ ಹೊರಟು ಹೋಗುತ್ತದೆ. ಎರಡು ಪಂಗಡಗಳಾಗಿ ಬಿಟ್ಟರೆ ರಾಷ್ಟ್ರಪತಿಯನ್ನೂ ಹಾರಿಸಿ ಬಿಡುತ್ತಾರೆ. ದ್ವೈತ ಮತವು ಬಹಳ ನಷ್ಟವನ್ನುಂಟು ಮಾಡುತ್ತದೆ ಮತ್ತೆ ಭಗವಂತನಿಗೂ ಎದುರು ನಿಲ್ಲಲು ನಿಧಾನಿಸುವುದಿಲ್ಲ. ಬಹಳ ನಷ್ಟ ಹೊಂದುತ್ತಾರೆ. ಕ್ರೋಧದ ಭೂತವು ಬಂದು ಬಿಟ್ಟರೆ ಮಾತೇ ಕೇಳಬೇಡಿ, ಆದ್ದರಿಂದಲೇ ತಂದೆಯು ಹೇಳುತ್ತಾರೆ – ಬೆಲ್ಲದ ರುಚಿ ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು. ತಂದೆಯು ಮಕ್ಕಳಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಿದ್ದಾರೆ. ಈಗ ಧಾರಣೆ ಮಾಡುವುದು, ಬಿಡುವುದು ಅವರವರ ಪುರುಷಾರ್ಥದ ಮೇಲಿದೆ. ತಂದೆಯು ಆಶೀರ್ವಾದ ಅಥವಾ ಕೃಪೆ ಮಾಡಿ ಬಿಡುತ್ತಾರೆ ಎಂದಲ್ಲ. ಇದರಲ್ಲಿ ಕೃಪೆಯ ಮಾತಿಲ್ಲ. ಒಂದುವೇಳೆ ಪ್ರೇರಣೆಯಿಂದ ಯೋಗ ಮತ್ತು ಜ್ಞಾನವನ್ನು ಕಲಿಸುವಂತಿದ್ದರೆ ನಾನೇಕೆ ಈ ಕೊಳಕು ಪ್ರಪಂಚದಲ್ಲಿ ಬರುತ್ತಿದ್ದೆನು? ಪ್ರೇರಣೆ, ಆಶೀರ್ವಾದ ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಇಲ್ಲಂತೂ ಪುರುಷಾರ್ಥ ಮಾಡಬೇಕಾಗಿದೆ, ಪ್ರೇರಣೆಯ ಮಾತಿಲ್ಲ. ನಿಮಗೆ ಒಟ್ಟಿಗೆ ಮೂರು ಇಂಜಿನ್ಗಳು ಸಿಕ್ಕಿವೆ, ಅಲ್ಲಾದರೆ ತಂದೆಯೇ ಬೇರೆ, ಶಿಕ್ಷಕನೇ ಬೇರೆ ಸಿಗುತ್ತಾರೆ ಮತ್ತು ಕೊನೆಯಲ್ಲಿ ಗುರುಗಳು ಸಿಗುತ್ತಾರೆ. ಇಲ್ಲಿ ಮೂವರೂ ಒಟ್ಟಿಗೆ ಇರುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ನಿಮ್ಮನ್ನು ಪೂಜ್ಯರನ್ನಾಗಿ ಮಾಡುತ್ತೇನೆ, ನೀವು ಮತ್ತೆ ಪೂಜಾರಿಗಳಾಗಿ ಬಿಡುತ್ತೀರಿ. ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ. ಯಾರೂ ಮೂರ್ಛಿತರಾಗುವಂತಾಗಬಾರದು. ಮೊಟ್ಟ ಮೊದಲು ಇಬ್ಬರು ತಂದೆಯರ ಮಾತನ್ನು ತಿಳಿಸಬೇಕಾಗಿದೆ, ಭಗವಂತನು ತಂದೆಯಾಗಿದ್ದಾರೆ. ಅವರ ಜನ್ಮ ಶಿವ ಜಯಂತಿಯನ್ನು ಇಲ್ಲಿಯೇ ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಆ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುವರು. ಭಾರತದಲ್ಲಿಯೇ ಸ್ವರ್ಗವಿತ್ತು, ಈಗ ನರಕದ ವಿನಾಶಕ್ಕಾಗಿ ಮಹಾಭಾರತ ಯುದ್ಧವು ನಿಂತಿದೆ. ಅವಶ್ಯವಾಗಿ ತಂದೆಯು ಹೊಸ ಪ್ರಪಂಚದ ಸ್ಥಾಪನೆಯನ್ನು ಮಾಡಿಸುವವರೂ ಆಗಿದ್ದಾರೆ. ತಂದೆಯ ಶ್ರೀಮತದ ಅನುಸಾರವೇ ನಾವು ಹೇಳುತ್ತೇವೆ – ನಾವು ಭಾರತವನ್ನು ಪಾವನವನ್ನಾಗಿ ಮಾಡಿಯೇ ತೀರುತ್ತೇವೆ ಎಂದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಹೇಗೆ ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆಯೋ ಹಾಗೆಯೇ ತಂದೆಯ ಸಮಾನರಾಗಬೇಕಾಗಿದೆ. ಬಹಳ ಮಧುರರಾಗಬೇಕಾಗಿದೆ. ಸದಾ ಶುಭ ಕಾರ್ಯ ಮಾಡಿ ಬಲ ಭುಜಗಳಾಗಬೇಕಾಗಿದೆ.

2. ಎಂದೂ ಎರಡು ಅಥವಾ ದ್ವೈತ ಮತವನ್ನು ಮಾಡಿಕೊಳ್ಳಬಾರದು. ಭಾವ-ಸ್ವಭಾವದಲ್ಲಿ (ಘರ್ಷಣೆಯಲ್ಲಿ) ಬಂದು ಒಬ್ಬರು ಇನ್ನೊಬ್ಬರಿಗೆ ಎದುರಾಗಬಾರದು. ಕ್ರೋಧದ ಭೂತವನ್ನು ತೆಗೆಯಬೇಕಾಗಿದೆ.

ವರದಾನ:-

ಸಂಗಮಯುಗದ ವಿಶೇಷತೆಯಾಗಿದೆ – ಈಗೀಗ ಪುರುಷಾರ್ಥಿ, ಈಗೀಗ ಪ್ರತ್ಯಕ್ಷ ಫಲ. ಈಗ ಸ್ಮೃತಿ ಸ್ವರೂಪ, ಈಗ ಪ್ರಾಪ್ತಿಯ ಅನುಭವವಾಗುವುದು. ಭವಿಷ್ಯದ ಗ್ಯಾರಂಟಿಯಂತು ಇದ್ದೇ ಇದೆ, ಆದರೆ ಭವಿಷ್ಯಕ್ಕಿಂತಲೂ ಶ್ರೇಷ್ಠವಾದ ಭಾಗ್ಯ ವರ್ತಮಾನದ್ದಾಗಿದೆ.ಈಗ ಭಾಗ್ಯದ ನಶೆಯಲ್ಲಿ ಇರುತ್ತೀರೆಂದರೆ, ಸ್ವತಹವಾಗಿಯೇ ನೆನಪಿರುವುದು ಎಲ್ಲಿ ನೆನಪಿದೆಯೋ ಅಲ್ಲಿ ಏನು ಮಾಡಲಿ, ಹೇಗೆ ಮಾಡಲಿ, ಇದಾಗುವುದಿಲ್ಲ, ಸ್ವಲ್ಪ ಸಹಯೋಗ ಕೊಡಿ – ಈ ರೀತಿ ಪ್ರಾರ್ಥಿಸುವುದು ಇರುವುದಿಲ್ಲ. ಹಾಗಾದರೆ ಪ್ರಾರ್ಥನೆ ಮಾಡುವುದನ್ನು ಬಿಟ್ಟು ಸ್ವತಹ ಯೋಗಿ ನಿರಂತರ-ಯೋಗಿ ಆಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top