19 July 2021 KANNADA Murli Today | Brahma Kumaris

Read and Listen today’s Gyan Murli in Kannada

July 18, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೆ – ಜೀವಿಸಿದ್ದಂತೆಯೇ ಈ ಶರೀರದಿಂದ ಭಿನ್ನವಾಗಿ ಬಿಡಿ, ಅಶರೀರಿಯಾಗಿ ತಂದೆಯನ್ನು ನೆನಪು ಮಾಡಿ, ಇದಕ್ಕೆ ಡೆಡ್ ಸೈಲೆನ್ಸ್ ಎಂದು ಕರೆಯಲಾಗುತ್ತದೆ”

ಪ್ರಶ್ನೆ:: -

ನೀವು ಮಕ್ಕಳೀಗ ತಮ್ಮ ತಳಪಾಯವನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳುತ್ತಿದ್ದೀರಿ, ಈ ಬಲವು ಯಾವ ಆಧಾರದಿಂದ ಬರುತ್ತದೆ?

 

ಉತ್ತರ:-

ಮಕ್ಕಳೇ, ಈಗ ಈ ನಾಟಕವು ಸಮಾಪ್ತಿ ಆಗುವುದಿದೆ ಆದ್ದರಿಂದ ಎಲ್ಲಾ ಆತ್ಮರು ಇಲ್ಲಿ ಹಾಜರಾಗಲೇಬೇಕಾಗಿದೆ. ಎಲ್ಲಾ ಧರ್ಮದ ಆತ್ಮರು ಈಗ ಇಲ್ಲಿ ಹಾಜರಾಗುವರು ಏಕೆಂದರೆ ಸರ್ವರ ತಂದೆಯು ಇಲ್ಲಿ ಹಾಜರಾಗಿದ್ದಾರೆ. ಎಲ್ಲರೂ ತಂದೆಯ ಮುಂದೆ ಸಲಾಮು ಮಾಡಲು ಬರಲೇಬೇಕಾಗಿದೆ. ಎಲ್ಲಾ ಧರ್ಮದ ಆತ್ಮವು ಮನ್ಮನಾಭವದ ಮಂತ್ರವನ್ನು ತೆಗೆದುಕೊಂಡು ಹೋಗುವರು. ಅವರು ಮಧ್ಯಾಜೀಭವದ ಮಂತ್ರವನ್ನು ಧಾರಣೆ ಮಾಡಿ ಚಕ್ರವರ್ತಿಗಳಾಗುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ……

ಓಂ ಶಾಂತಿ. ತಂದೆಯು ಹೇಳುತ್ತಾರೆ – ನನ್ನನ್ನು ನೆನಪು ಮಾಡಿರಿ ಅರ್ಥಾತ್ ಅಶರೀರಿಯಾಗಿರಿ ಅರ್ಥಾತ್ ಡೆಡ್ ಸೈಲೆನ್ಸ್. ಹೇಗೆ ಮನುಷ್ಯರು ಶರೀರ ಬಿಟ್ಟಾಗ ಅಲ್ಲಿ ಶೂನ್ಯ ಶಾಂತಿಯಾಗಿ ಬಿಡುತ್ತದೆ. ಇವರ ಶರೀರ ಶಾಂತವಾಗಿ ಬಿಟ್ಟಿತು ಎಂದು ಹೇಳುತ್ತಾರೆ. ಶರೀರ ಮತ್ತು ಆತ್ಮ ಪ್ರತ್ಯೇಕವಾಯಿತು, ಸಮಾಪ್ತಿಯಾಯಿತು. ಇಲ್ಲಿಯೂ ಸಹ ನೀವು ಮಕ್ಕಳು ಯಾವಾಗ ಕುಳಿತುಕೊಳ್ಳುತ್ತೀರೆಂದರೆ ಇದಕ್ಕೆ ಶೂನ್ಯ ಶಾಂತಿ ಎಂದು ಹೇಳಲಾಗುತ್ತದೆ. ಜೀವಿಸಿದ್ದಂತೆಯೇ ಅಶರೀರಿಯಾಗಿ ಬಿಡಿ, ತಮ್ಮನ್ನು ಆತ್ಮನೆಂದು ತಿಳಿಯಿರಿ ತಂದೆಯನ್ನು ನೆನಪು ಮಾಡಿ. ನೀವು ತಿಳಿದುಕೊಂಡಿದ್ದೀರಿ – ಈಗ ಸತ್ಯ ಶಾಂತಿಯಾಗಿದೆ. ಅವರು ಶಾಂತಿಯೆಂದರೆ ಏನು ಎಂಬುದನ್ನು ತಿಳಿದುಕೊಂಡಿಲ್ಲ. ಶೂನ್ಯ ಶಾಂತಿಯ ಅರ್ಥವಂತೂ ಅವರಿಗೆ ತಿಳಿದೇ ಇಲ್ಲ. ಶೂನ್ಯ ಶಾಂತಿಯೆಂದು ಏಕೆ ಹೇಳುತ್ತಾರೆ? ಅವರು ಶರೀರ ಬಿಟ್ಟರು, ಶಾಂತವಾಗಿ ಬಿಟ್ಟರು ಎಂದು ನೆನಪು ತರಿಸುತ್ತಾರೆ. ನೀವು ಶರೀರದ ಭಿನ್ನವಾಗಿ ನೀವೂ ಸಹ ಶಾಂತವಾಗಿ ಬಿಡಿ, ದೊಡ್ಡ-ದೊಡ್ಡ ವ್ಯಕ್ತಿಗಳಾದ ಗಾಂಧೀಜಿ ಮೊದಲಾದವರ ಸಮಾಧಿಯ ಬಳಿ ಹೋಗುತ್ತಾರೆ. ಅಲ್ಲಿ ಹೋಗಿ ಡೆಡ್ಲಿ ಸೈಲೆನ್ಸ್ ಅಂದರೆ ಶಾಂತಿಯಲ್ಲಿ ಕುಳಿತುಕೊಳ್ಳಿ ಎಂದು ಹೇಳುತ್ತಾರೆ. ನಿಮಗೂ ಸಹ ತಿಳಿದಿದೆ – ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ, ಪ್ರಪಂಚದವರಿಗೆ ತಿಳಿದೇ ಇಲ್ಲ. ನಾವು ನಮ್ಮ ಸ್ವಧರ್ಮದಲ್ಲಿ ಸ್ಥಿತರಾಗುತ್ತೇವೆ, ನಮ್ಮ ಸ್ವ ಧರ್ಮವೇ ಶಾಂತಿಯಾಗಿದೆ. ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ, ಅವರಿಗೆ ಇದು ತಿಳಿದೇ ಇಲ್ಲ ಆದ್ದರಿಂದ ಶಾಂತಿಯನ್ನು ಬೇಡುತ್ತಾರೆ. ಆತ್ಮವು ಶಾಂತಿ ಬೇಕೆಂದು ಹೇಳುತ್ತದೆ. ಆತ್ಮವೇ ತನ್ನ ಸ್ವಧರ್ಮವನ್ನು ಮರೆತು ಬಿಟ್ಟಿದೆ. ವಾಸ್ತವದಲ್ಲಿ ಆತ್ಮನ ಧರ್ಮವೇ ಶಾಂತಿಯಾಗಿದೆ ಅಂದಮೇಲೆ ಅಶಾಂತಿಯಾಗಿದೆ ಎಂದು ಆತ್ಮವು ಏಕೆ ಹೇಳುತ್ತದೆ? ಅಶರೀರಿಯಾಗಿ ಕುಳಿತು ಬಿಡಿ, ಅವರಂತೂ ಹಠದಿಂದ ಪ್ರಾಣಾಯಾಮಗಳನ್ನು ಮಾಡುತ್ತಾರಲ್ಲವೆ. ಹೇಗೆ ಅವರು ಶರೀರದಿಂದ ಸತ್ತಂತೆ ಇರುತ್ತಾರೆ, ಅದಕ್ಕೆ ತಾತ್ಕಾಲಿಕ ಶಾಂತಿ ಎಂದು ಹೇಳಲಾಗುತ್ತದೆ. ನೀವು ಮಕ್ಕಳಿಗಂತೂ ನಮ್ಮ ಸ್ವಧರ್ಮವೇ ಶಾಂತಿ ಎಂಬುದು ಅರ್ಥವಾಗಿದೆ. ನೀವಾತ್ಮರು ಸ್ವರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ, ಆತ್ಮನೇ ಎಲ್ಲವೂ ಆಗುತ್ತದೆ. ಆತ್ಮವೇ ವಕೀಲನಾಗುತ್ತದೆ. ನಮಗೆ ರಾಜ್ಯ ಬೇಕೆಂದು ಆತ್ಮವೇ ಹೇಳುತ್ತದೆ. ಮೊದಲೂ ಸಹ ತಂದೆಯಿಂದ ರಾಜ್ಯವನ್ನು ಪಡೆದುಕೊಂಡಿದ್ದಿರಿ, ಈಗ ಪುನಃ ಪಡೆಯಲು ಬಂದಿದ್ದೀರಿ, ಮನುಷ್ಯರು ದೇಹಾಭಿಮಾನದಲ್ಲಿ ಇರುವ ಕಾರಣ ದುಃಖದಲ್ಲಿದ್ದಾರೆ.

ನೀವೀಗ ತಿಳಿದುಕೊಳ್ಳುತ್ತೀರಿ – ನಾವಾತ್ಮರಾಗಿದ್ದೇವೆ, ನಾವು ನಮ್ಮ ಪರಮಪಿತ ಪರಮಾತ್ಮನಿಂದ ಸ್ವರಾಜ್ಯವನ್ನು ಪಡೆಯಲು ಬಂದಿದ್ದೇವೆ, ನೀವಾತ್ಮರಿಗೆ ರಾಜ್ಯ ಬೇಕಾಗಿದೆ. ಈ ಸಮಯದಲ್ಲಿ ಆತ್ಮವು ಬೇಹದ್ದಿನ ತಂದೆಯಿಂದ ಸ್ವರಾಜ್ಯವನ್ನು ಬಯಸುತ್ತದೆ. ಶ್ರೀಕೃಷ್ಣನಿಗೂ ಸ್ವರಾಜ್ಯವಿತ್ತು, ನಂತರ ಅದು ಕಳೆದು ಹೋಯಿತು. ಈಗ ತಂದೆಯು ಬಂದು ನೀವಾತ್ಮರಿಗೆ ರಾಜ್ಯವನ್ನು ಕೊಡುತ್ತಾರೆ. ಇದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ಪರಮಪಿತ ಪರಮಾತ್ಮನು ರಾಜಯೋಗವನ್ನು ಕಲಿಸುತ್ತಾರೆ, ಮನುಷ್ಯರು ದೇಹಾಭಿಮಾನಿಗಳಾಗಿರುವ ಕಾರಣ ನಾನು ಇಂತಹವನಾಗಿದ್ದೇನೆ ಎಂದು ಹೇಳುತ್ತಾರೆ. ದೇಹವನ್ನೇ “ನಾನು” ಎಂದು ತಿಳಿದುಕೊಳ್ಳುತ್ತಾರೆ. ವಾಸ್ತವದಲ್ಲಿ “ನಾನು”, “ನಾನು” ಎಂದು ಆತ್ಮವೇ ಹೇಳುತ್ತದೆ. ನಾನು ಈ ವಸ್ತುವನ್ನು ತೆಗೆದುಕೊಳ್ಳುತ್ತೇನೆ ಎಂದು ಆತ್ಮವೇ ಹೇಳುತ್ತದೆ. ವಾಸ್ತವದಲ್ಲಿ ಆತ್ಮವು ಪುರುಷನಾಗಿದೆ, ನಾನಾತ್ಮನು ತಂದೆಯ ಮಗುವಾಗಿದ್ದೇನೆ. ಬಾಬಾ, ನಾವು ತಮ್ಮಿಂದ ಸ್ವರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಆತ್ಮವು ಹೇಳುತ್ತದೆ. ಆತ್ಮಕ್ಕೆ ಪರಮಾತ್ಮನು ಸ್ವರಾಜ್ಯವನ್ನು ಕೊಡುತ್ತಾರೆ, ಭಕ್ತಿ ಮತ್ತು ಜ್ಞಾನದಲ್ಲಿ ನೋಡಿ ಎಷ್ಟೊಂದು ಅಂತರವಿದೆ! ಶಿವನ ಮಂದಿರವು ಇರುತ್ತದೆ, ಎಲ್ಲದಕ್ಕಿಂತ ಹೆಚ್ಚಿನದಾಗಿ ಶಿವನ ಮಂದಿರದಲ್ಲಿಯೇ ಗಂಟೆಯನ್ನು ಬಾರಿಸುತ್ತಾರೆ, ಅವರನ್ನು ಏಳಿಸುತ್ತಾರೆ. ವಾಸ್ತವದಲ್ಲಿ ಎಲ್ಲರನ್ನೂ ಏಳಿಸುತ್ತಾರೆ, ಬೆಳಗ್ಗೆ-ಬೆಳಗ್ಗೆ ವಾದ್ಯಗಳನ್ನು ಬಾರಿಸುತ್ತಾರೆ, ಇಲ್ಲಿ ತಂದೆಯು ಮಕ್ಕಳನ್ನು ಜಾಗೃತಗೊಳಿಸಿ ದೇವತೆಗಳನ್ನಾಗಿ ಮಾಡುತ್ತಾರೆ. ಸ್ಥೂಲವಾಗಿ ಗಂಟೆಯನ್ನು ಹೊಡೆಯುವ ಮಾತಿಲ್ಲ. ತಂದೆಯು ಹೇಳುತ್ತಾರೆ – ನಿಮಗೆ ಸ್ವರಾಜ್ಯವು ಬೇಕೆಂದರೆ ಮೊದಲು ಪವಿತ್ರರಾಗಿ, ಗುರಿ-ಧ್ಯೇಯವಂತೂ ಬುದ್ಧಿಯಲ್ಲಿರುತ್ತದೆ. ನಾವು ಈ ಮೆಟ್ರಿಕ್ನ್ನು ತೇರ್ಗಡೆ ಮಾಡುತ್ತೇವೆ ನಂತರ ಇದನ್ನು ಮಾಡುತ್ತೇವೆಂದು ವಿದ್ಯಾರ್ಥಿಗಳು ಹೇಳುತ್ತಾರೆ. ಸನ್ಯಾಸಿಗಳು ನಮಗೆ ಮನಃಶ್ಯಾಂತಿ ಬೇಕೆಂದು ಬಯಸುತ್ತಾರೆ. ಒಂದು ಕಥೆಯೂ ಇದೆಯಲ್ಲವೆ. ರಾಣಿಯ ಕೊರಳಲ್ಲಿಯೇ ಹಾರವಿತ್ತು ಆದರೆ ಅದಕ್ಕಾಗಿ ಹೊರಗಡೆ ಹುಡುಕುತ್ತಿದ್ದಳು ಹಾಗೆಯೇ ಅವರೂ ಸಹ ಶಾಂತಿಯನ್ನು ಹೊರಗೆ ಹುಡುಕುತ್ತಾರೆ ಆದರೆ ಆತ್ಮವಂತೂ ಸ್ವಯಂ ಶಾಂತ ಸ್ವರೂಪವಾಗಿದೆ. ಆತ್ಮವು ತನ್ನ ಸ್ವಧರ್ಮವನ್ನು ಮರೆತು ತನ್ನನ್ನು ಶರೀರವೆಂದು ತಿಳಿದು ಕುಳಿತಿದೆ. ತಂದೆಯು ಪುನಃ ಸ್ಮೃತಿ ತರಿಸುತ್ತಾರೆ – ನೀವಾತ್ಮರಾಗಿದ್ದೀರಿ, ನೀವು 84 ಜನ್ಮಗಳನ್ನು ಭೋಗಿಸಿದ್ದೀರಿ, ಈ ಮಾತುಗಳನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ – ನೀವು ತಮ್ಮ ಜನ್ಮಗಳನ್ನೇ ತಿಳಿದುಕೊಂಡಿಲ್ಲ. ನಾನು ನಿಮಗೆ ತಿಳಿಸುತ್ತೇನೆ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ, ಪವಿತ್ರತೆಯಿಲ್ಲದೆ ಜ್ಞಾನದ ಧಾರಣೆಯಾಗಲು ಸಾಧ್ಯವಿಲ್ಲ. ಹೇಗೆ ಸಿಂಹದ ಹಾಲಿಗೆ ಚಿನ್ನದ ಪಾತ್ರೆಯು ಬೇಕೆಂದು ಹೇಳುತ್ತಾರಲ್ಲವೆ. ಹಾಗೆಯೇ ಇಲ್ಲಿಯೂ ಬುದ್ಧಿಯು ಚಿನ್ನದ ಪಾತ್ರೆಯಾಗಬೇಕು. ಆತ್ಮವು ತಂದೆಯನ್ನು ನೆನಪು ಮಾಡುವುದರಿಂದ ಚಿನ್ನದ ಸಮಾನವಾಗಿ ಬಿಡುತ್ತದೆ. ತಂದೆಯೂ ಸಹ ಸತ್ಯ ಚಿನ್ನವಾಗಿದ್ದಾರೆ, ಆತ್ಮವು ತಂದೆಯನ್ನು ನೆನಪು ಮಾಡುತ್ತದೆ ಆಗ ಜ್ಞಾನವು ಬಂದು ಬಿಡುತ್ತದೆ. ನೀವು ಸತ್ಯ ಚಿನ್ನ ಅರ್ಥಾತ್ ಪವಿತ್ರರಾಗಿದ್ದಿರಿ – ಈ ಜ್ಞಾನದ ಪ್ರಭಾವವು ಯಾರಿಗೂ ಬೀರುವುದಿಲ್ಲ. ತಂದೆಯು ತಿಳಿಸುತ್ತಾರೆ – ನಾನು ನೀವಾತ್ಮರಿಗೆ ಸ್ವರಾಜ್ಯ ಕೊಡುತ್ತೇನೆ. ಯಾವಾಗ ಈ ಹಳೆಯ ಸೃಷ್ಟಿಯ ಅಂತ್ಯ ಮತ್ತು ಹೊಸ ಸೃಷ್ಟಿಯ ಆದಿಯಾಗುವುದೋ ಆಗಲೇ ಸ್ವರಾಜ್ಯ ಸಿಗುವುದು. ಮನುಷ್ಯರಿಗೆ ಹದ್ದಿನ ರಾಜ್ಯವಿದೆ, ಬೇಹದ್ದಿನ ರಾಜ್ಯವು ಮನುಷ್ಯರಿಗೆಂದೂ ಸಿಗುವುದಿಲ್ಲ, ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ನೀವು ತಂದೆಯ ಮೂಲಕ ಆಗುತ್ತೀರಿ. ಭಗವಂತ ತಂದೆಗೆ ಮಾತ್ರವೇ ನಿಮ್ಮ 84 ಜನ್ಮಗಳ ಬಗ್ಗೆ ತಿಳಿದಿದೆ. ದೇವತೆಗಳೂ ಸಹ ತಮ್ಮ ಜನ್ಮಗಳನ್ನು ಅರಿತುಕೊಂಡಿರುವುದಿಲ್ಲ, ಒಂದುವೇಳೆ ಅಲ್ಲಿ ಅವರಿಗೆ ತಮ್ಮ ಪುನರ್ಜನ್ಮದ ಬಗ್ಗೆ ತಿಳಿದಿದ್ದರೆ ನಾವು ಏಣಿಯನ್ನು ಕೆಳಗಿಳಿಯುತ್ತಾ ಹೋಗುತ್ತೇವೆಯೇ ಎಂದು ದುಃಖಿಯಾಗಿ ಬಿಡುತ್ತಿದ್ದರು. ರಾಜ್ಯಭಾಗ್ಯದ ಸುಖವೇ ಅಲ್ಲಿ ಮಾಯವಾಗಿ ಬಿಡುತ್ತಿತ್ತು. ನಿಮಗೆ ಇಲ್ಲಿ ಜ್ಞಾನವು ತಿಳಿದಿದೆ, ನಾವಾತ್ಮರಾಗಿದ್ದೇವೆ. ಇದರಲ್ಲಿ ಸಂಶಯದ ಮಾತಿಲ್ಲ. ಒಬ್ಬರು ಇನ್ನೊಬ್ಬರಿಂದ ಕೇಳುತ್ತಾ ವೃದ್ಧಿಯಾಗುತ್ತಾ ಹೋಗುತ್ತದೆ. ಈ ದೈವೀ ಧರ್ಮದ ವೃಕ್ಷವು ಸ್ಥಾಪನೆಯಾಗುತ್ತಿದೆ. ನೀವು ತಿಳಿದುಕೊಳ್ಳುತ್ತೀರಿ – ಇವರು ನಮ್ಮ ಬ್ರಾಹ್ಮಣ ಕುಲದವರು ಬಂದಿದ್ದಾರೆ, ಇವರು ಪೂರ್ಣ ಭಕ್ತಿ ಮಾಡಿದ್ದಾರೆ. ಆದ್ದರಿಂದ ತಂದೆಯಿಂದ ಪುನಃ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದಾರೆ. ಜ್ಞಾನವು ಮುಗಿಯುತ್ತದೆ ನಂತರ ಭಕ್ತಿಯು ಪ್ರಾರಂಭವಾಗುತ್ತದೆ, ಇದು ಯಾರಿಗೂ ತಿಳಿದಿಲ್ಲ. ಮನೆಯೂ ಸಹ ಹೊಸದರಿಂದ ಮತ್ತೆ ಹಳೆಯದಾಗುತ್ತದೆಯಲ್ಲವೆ. ಹಳೆಯ ಮನೆಯ ಆಯಸ್ಸು ಅವಶ್ಯವಾಗಿ ಕಡಿಮೆಯಿರುತ್ತದೆ. ಇತ್ತೀಚೆಗೆ ಮನೆಗಳನ್ನು ಬಹಳ ಪ್ರಬಲವಾಗಿ ಕಟ್ಟಿಸುತ್ತಾರೆ. ಭಲೆ ಭೂಕಂಪಗಳಾದರೂ ಸಹ ಮನೆ ಬೀಳದಿರಲಿ, ನಷ್ಟವಾಗದಿರಲಿ ಎಂದು ಬಹಳ ಬಲವಾಗಿ ಕಟ್ಟಿಸುತ್ತಾರೆ. ಬಲವಾಗಿ ತಳಪಾಯ ಹಾಕಿಸುತ್ತಾರೆ. ಹಾಗೆಯೇ ಈಗ ಸ್ವರಾಜ್ಯದ ತಳಪಾಯವು ಹಾಕಲ್ಪಡುತ್ತಿದೆ, ಆತ್ಮಕ್ಕೆ 21 ಜನ್ಮಗಳಿಗಾಗಿ ರಾಜ್ಯವು ಸಿಗುತ್ತದೆ. ಇಲ್ಲಿನ ರಾಜ್ಯವಂತೂ ಏನೇನೂ ಇಲ್ಲ. ಇಂದು ರಾಜ್ಯವಿದೆ, ನಾಳೆ ಯಾರಾದರೂ ಮುತ್ತಿಗೆ ಹಾಕಿದರೆ ಸಮಾಪ್ತಿ. ಯಾರದೂ ಶಾಶ್ವತವಿಲ್ಲ, ಮನುಷ್ಯರಿಗೂ ಸಹ ಗ್ಯಾರಂಟಿಯಿಲ್ಲ, ಇಂದು ಇರುತ್ತಾರೆ ನಾಳೆ ಹೊರಟು ಹೋಗುತ್ತಾರೆ. ಈಗ ನಿಮ್ಮ ತಳಪಾಯವನ್ನು ತಂದೆಯು ಪ್ರಬಲವಾಗಿ ಹಾಕುತ್ತಾರೆ. ಅದರಿಂದ 21 ಜನ್ಮಗಳವರೆಗೆ ನೀವು ರಾಜ್ಯಭಾಗ್ಯವನ್ನು ಪಡೆಯುತ್ತೀರಿ, ಈಗ ನಿಮ್ಮ ರಾಜಧಾನಿಯ ಬಲವಾದ ತಳಹದಿಯು ಹಾಕಲ್ಪಡುತ್ತದೆ. ನಿಮ್ಮನ್ನು ಯಾವುದೇ ಧರಣಿಯ ಬಿರುಗಾಳಿಯು ಅಲುಗಾಡಿಸಲು ಸಾಧ್ಯವಿಲ್ಲ. ಗೀತೆಯಲ್ಲಿಯೂ ಹೇಳುತ್ತಾರೆ – ತಂದೆಯು ನಮಗೆ ಸ್ವರಾಜ್ಯವನ್ನು ಕೊಡುತ್ತಾರೆ ಯಾವುದನ್ನು ಯಾರೂ ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ, ಬೀಳಿಸಲು ಸಾಧ್ಯವಿಲ್ಲ. ಇಂತಹ ರಾಜ್ಯವನ್ನು ಕೊಡುತ್ತಾರೆ ಎಲ್ಲಿ ದುಃಖದ ಮಾತು ಇರುವುದಿಲ್ಲ ಅಂದಮೇಲೆ ಆತ್ಮಕ್ಕೆ ಎಷ್ಟೊಂದು ಖುಷಿಯಿರಬೇಕು! ನಿಶ್ಚಯವಂತೂ ಇದೆಯಲ್ಲವೆ. ನಿಶ್ಚಯವಿಲ್ಲದಿದ್ದರೆ ಅವರು ಸ್ವರ್ಗದಲ್ಲಿ ಹೋಗಲು ಯೋಗ್ಯರಲ್ಲ. ಇಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರು ವೃದ್ಧಿಯಾಗುತ್ತಾ ಇರುತ್ತೀರಿ.

ನೀವು ತಿಳಿದುಕೊಂಡಿದ್ದೀರಿ – ಜ್ಞಾನ ಸಾಗರ, ಪತಿತ-ಪಾವನನು ನಮಗೆ ಓದಿಸಿ, ರಾಜಯೋಗವನ್ನು ಕಲಿಸುತ್ತಿದ್ದಾರೆ. ಮನುಷ್ಯರು ಕೃಷ್ಣನು ಕಲಿಸಿದನೆಂದು ಹೇಳಿಬಿಡುತ್ತಾರೆ. ಶಿವ ತಂದೆಯು ಮನುಷ್ಯನ ತನುವಿನಲ್ಲಿ ಬಂದು ಕಲಿಸಿದರು ಎಂಬುದನ್ನು ಹೇಗೆ ತಿಳಿದುಕೊಳ್ಳುವುದು! ಭಾರತವೇ ಪವಿತ್ರವಾಗಿತ್ತು, ಈಗ ಅಪವಿತ್ರ, ಪತಿತನಾಗಿದೆ. ದೇವತೆಗಳ ಮುಂದೆ ಹೋಗಿ ಅವರ ಮಹಿಮೆಯನ್ನು ಹಾಡುತ್ತಾರೆ. ಶಿವನ ಮುಂದೆ ಎಂದೂ ಸಹ ನೀವು ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರಾಗಿದ್ದೀರಿ ಎಂದು ಹಾಡುವುದಿಲ್ಲ. ಶಿವನ ಮಹಿಮೆಯೇ ಬೇರೆಯಾಗಿದೆ, ಅವರು ಜ್ಞಾನ ಸಾಗರ, ಪತಿತ-ಪಾವನ, ಸರ್ವರ ಸದ್ಗತಿ ಮಾಡುವವರು, ಸರ್ವರ ಜೋಳಿಗೆಯನ್ನು ತುಂಬುವಂತಹ ಭೋಲಾನಾಥನಾಗಿದ್ದಾರೆ. ಇಂತಹ ತಂದೆಯನ್ನು ಎಲ್ಲರೂ ಮರೆತಿದ್ದಾರೆ. ನಮ್ಮ ದುಃಖ ದೂರ ಮಾಡಿ ಸುಖ ಕೊಡಿ ಎಂದು ಪರಮಪಿತ ಪರಮಾತ್ಮನನ್ನು ಕರೆಯುತ್ತಾರೆ. ದುಃಖಹರ್ತ-ಸುಖಕರ್ತನು ಒಬ್ಬರೇ ಆಗಿದ್ದಾರೆ. ಅವರದೇ ಶ್ರೇಷ್ಠ ಮತವಾಗಿದೆ. ಅದು ಶ್ರೀ ಶ್ರೀ ಭಗವಂತನ ಮತವಾಗಿದೆ, ಅದರಿಂದ ನೀವು ಮಕ್ಕಳೂ ಶ್ರೇಷ್ಠರಾಗುತ್ತೀರಿ. ಇದು ಭ್ರಷ್ಟಾಚಾರಿ ಪ್ರಪಂಚವಾಗಿದೆ ಎಂದು ಸರ್ಕಾರವೂ ಸಹ ಹೇಳುತ್ತದೆ. ಈಗ ಶ್ರೇಷ್ಠರನ್ನಾಗಿ ಯಾರು ಮಾಡುವರು? ಎಂಬುದು ಅರ್ಥವಾಗುವುದೇ ಇಲ್ಲ. ಸಾಧು-ಸಂತರು ಮಾಡುವರೆಂದು ತಿಳಿಯುತ್ತಾರೆ ಆದರೆ ಅವರು ಶ್ರೇಷ್ಠರನ್ನಾಗಿ ಮಾಡಲು ಸಾಧ್ಯವಿಲ್ಲ. ಇದು ತಂದೆಯ ಕರ್ತವ್ಯವೇ ಆಗಿದೆಯಲ್ಲವೆ. ಮೊದಲು ಒಬ್ಬ ರಾಜನ ಆಜ್ಞೆಯಂತೆ ನಡೆಯುತ್ತಿದ್ದರು. ಸತ್ಯಯುಗದಲ್ಲಿ ನಿಮಗೆ ಮಂತ್ರಿ ಮೊದಲಾದವರು ಯಾರೂ ಇರುವುದಿಲ್ಲ. ರಾಜನಲ್ಲಿಯೂ ಶಕ್ತಿಯಿರುತ್ತದೆ, ಮಂತ್ರಿಯ ಹೆಸರೇ ಇರುವುದಿಲ್ಲ. ನೀವು ತಿಳಿದುಕೊಳ್ಳುತ್ತೀರಿ, ನಾವು ವಿಶ್ವದ ಮಾಲೀಕರಾಗಿ ರಾಜ್ಯ ನಡೆಸಿದ್ದೆವು. ಹೇಗೆ ನಡೆಸಿದ್ದೆವೋ ಅದೇರೀತಿ ಈಗಲೂ ಹೋಗಿ ನಡೆಸಬೇಕಾಗಿದೆ. ಅವಶ್ಯವಾಗಿ ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಪ್ರತಿಯೊಬ್ಬರಿಗೆ ತಮ್ಮ-ತಮ್ಮ ರಾಜಧಾನಿ ಸಿಗುವುದು. ಕೃಷ್ಣನಿಗೂ ತನ್ನ ರಾಜಧಾನಿಯಿರುವುದು. ಅನ್ಯ ರಾಜರೂ ಇರುತ್ತಾರಲ್ಲವೆ. ಕೊನೆಪಕ್ಷ 8 ಮಂದಿಯಾದರೂ ಇರುತ್ತಾರಲ್ಲವೆ. 8 ಮಂದಿಯೋ ಅಥವಾ 108 ಮಂದಿ ಇರುವರೋ? ಅದು ಮುಂದೆ ಹೋದಂತೆ ಅರ್ಥವಾಗುವುದು. ಯಾವುದನ್ನು ಅಂತ್ಯದಲ್ಲಿ ಜ್ಞಾನ ಕೊಡಬೇಕಾಗಿದೆಯೋ ಅದನ್ನು ಈಗ ಕೊಡುತ್ತೇವೆ ಎಂದಲ್ಲ. ಯಾರು ಉಳಿಯುವರೋ ಅವರಿಗೆ ತಂದೆಯು ಜ್ಞಾನ ಕೊಡುತ್ತಾರೆ, ಕೊಡಲೇಬೇಕಾಗಿದೆ. ಡ್ರಾಮಾದಲ್ಲಿ ನಿಗಧಿಯಾಗಿದೆ. ಪರಮಾತ್ಮನದು ಈಗ ಪಾತ್ರವಿದೆ. ಈ ಜ್ಞಾನವನ್ನು ಕೊಡುವ ಪಾತ್ರವು ಈಗ ನಿಗಧಿಯಾಗಿದೆ. ತಂದೆಯು ಹೇಳುತ್ತಾರೆ – ಮುಂದೆ ಹೋದಂತೆ ನೀವು ಬಹಳ ತಿಳಿದುಕೊಳ್ಳುವಿರಿ. ದಿನ-ಪ್ರತಿದಿನ ತಿಳಿಸುತ್ತಲೇ ಇರುತ್ತೇವೆ. ಅಲ್ಲಿ ಹೇಗೆ ರಾಜಧಾನಿಯನ್ನು ನಡೆಸುತ್ತಾರೆ? ಹೇಗೆ ಸ್ವಯಂವರವಾಗುತ್ತದೆ? ಎಂಬುದೂ ಸಹ ಅರ್ಥವಾಗುವುದು. ನೀವು ಧ್ಯಾನದಲ್ಲಿ ಹೋಗುತ್ತೀರಿ, ವೈಕುಂಠದಲ್ಲಿ ಹೋಗಿ ನೋಡುತ್ತೀರಿ, ಅಲ್ಲಿ ಚಿನ್ನದ ಮಹಲುಗಳಿರುತ್ತವೆ. ಚಿನ್ನವೇ ಚಿನ್ನವಿರುತ್ತದೆ. ತಮ್ಮನ್ನು ಪಾರಸ ಪುರಿಯಲ್ಲಿ ನೋಡಿಕೊಳ್ಳುತ್ತೀರಿ, ಚಿನ್ನದ ಇಟ್ಟಿಗೆಗಳ ಮನೆಗಳು ತಯಾರಾಗುತ್ತಿವೆ. ಕೆಲವು ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗೋಣವೆಂದು ತಿಳಿದು ಕೆಳಗಡೆ ಬರುತ್ತೀರೆಂದರೆ ತಮ್ಮನ್ನು ಇಲ್ಲಿ ನೋಡುತ್ತೀರಿ. ಮೀರಾ ಧ್ಯಾನದಲ್ಲಿ ತನ್ನನ್ನು ನೃತ್ಯ ಮಾಡುತ್ತಾ ಕೃಷ್ಣನ ಜೊತೆಯಿರುವಂತೆ ನೋಡುತ್ತಿದ್ದಳು. ನೀವೂ ಸಹ ಸೂಕ್ಷ್ಮವತನದಲ್ಲಿ ಹೋಗುತ್ತೀರಿ, ಅಲ್ಲಿ ಮೂಳೆ-ಮಾಂಸಗಳಿರುವುದಿಲ್ಲ, ಫರಿಶ್ತೆಗಳಾಗಿ ಬಿಡುತ್ತಾರೆ. ಬ್ರಹ್ಮನ ಸೂಕ್ಷ್ಮ ಶರೀರವೂ ಸಹ ಅಲ್ಲಿ ಕಾಣುತ್ತದೆ, ಸಾಕಾರ ಬ್ರಹ್ಮನೇ ಫರಿಶ್ತೆಯಾಗಿದ್ದಾರೆ. ಅಲ್ಲಿ ನೀವು ಹೂದೋಟ ಇತ್ಯಾದಿಗಳನ್ನು ನೋಡುತ್ತೀರಿ, ಇದೆಲ್ಲವನ್ನೂ ತಂದೆಯು ಸಾಕ್ಷಾತ್ಕಾರ ಮಾಡಿಸುತ್ತಾರೆ. ತಂದೆಯು ನಮಗೆ ಶೂಬೀ ರಸವನ್ನು ಕುಡಿಸುತ್ತಾರೆಂದು ನೀವು ಹೇಳುತ್ತೀರಿ. ಸೂಕ್ಷ್ಮವತನದಲ್ಲಂತೂ ಕುಡಿಸಲು ಸಾಧ್ಯವಿಲ್ಲ, ವೈಕುಂಠದಲ್ಲಿ ಫಲ ಪುಷ್ಫಗಳು ಬಹಳ ಸುಂದರವಾಗಿರುತ್ತವೆ. ಸೂಕ್ಷ್ಮವತನದಲ್ಲಂತೂ ಯಾವುದೇ ಹೂದೋಟ ಇತ್ಯಾದಿಗಳಿರುವುದಿಲ್ಲ, ಉದ್ಯಾನವನದಲ್ಲಿ ಹೋದೆವು ಅಲ್ಲಿ ರಾಜಕುಮಾರ-ಕುಮಾರಿಯರಿದ್ದರು ಎಂದು ನೀವು ತಿಳಿಸುತ್ತೀರಿ. ಅದಂತೂ ವೈಕುಂಠದಲ್ಲಿಯೇ ಇರಲು ಸಾಧ್ಯವಲ್ಲವೆ. ನಿಮಗೆ ಕಾಣುವುದು ಕೇವಲ ಸಾಕ್ಷಾತ್ಕಾರವಾಗಿದೆ. ವೈಕುಂಠದ ವೈಭವವು ಇಲ್ಲಿ ಸಿಗಲು ಸಾಧ್ಯವಿಲ್ಲ, ಅಲ್ಲಂತೂ ಬಹಳ ವೈಭವಗಳಿರುತ್ತವೆ. ತಂದೆಯು ತಿಳಿಸುತ್ತಾರೆ, ನಾನು ನಿಮ್ಮನ್ನು ವೈಕುಂಠದ ಮಾಲೀಕರನ್ನಾಗಿ ಮಾಡುತ್ತೇನೆ, ಇಲ್ಲಂತೂ ದುಃಖವೇ ದುಃಖವಿದೆ. ಹೇ ಭಗವಂತ ದುಃಖದಿಂದ ಬಿಡಿಸು ಎಂದು ಹೇಳದೇ ಇರುವಂತಹ ಮನುಷ್ಯರಿಲ್ಲ, ದುಃಖದಲ್ಲಿಯೇ ನೆನಪು ಮಾಡುತ್ತಾರೆ. ಕೃಷ್ಣನ ಪೂಜಾರಿಗಳು, ಕೃಷ್ಣ ಎನ್ನಿರಿ ಎಂದು ಹೇಳುತ್ತಾರೆ, ಹನುಮಂತನ ಪೂಜಾರಿಗಳು ಹನುಮಂತನಿಗೆ ಜಯವಾಗಲಿ… ಎಂದು ಹೇಳುತ್ತಾರೆ. ಇಲ್ಲಿ ತಂದೆಯು ಹೇಳುತ್ತಾರೆ – ತಂದೆಯಾದ ನನ್ನನ್ನು ನಿರಂತರ ನೆನಪು ಮಾಡಿರಿ, ಈ ರೀತಿ ನೆನಪು ಮಾಡಿರಿ ಅಂತಿಮ ಕಾಲದಲ್ಲಿ ಯಾರದೇ ಸ್ಮೃತಿ ಬಾರದಿರಲಿ. ಕಾಶಿಗೆ ಹೋಗಿ ಬಲಿಯಾಗುತ್ತಿದ್ದರು, ಅದರಲ್ಲಿ ಮಾಡಿರುವ ಪಾಪಗಳು ಅಂತಿಮ ಸಮಯದಲ್ಲಿ ಈ ರೀತಿ ಅನುಭವವಾಗುತ್ತದೆ, ಹೇಗೆ ನಾವು ಜನ್ಮ-ಜನ್ಮಾಂತರದ ಶಿಕ್ಷೆಗಳನ್ನು ಭೋಗಿಸುತ್ತಿದ್ದೇವೆ ಬಹಳ ಪಾಪ ಮಾಡಿದ್ದೇವೆ ಎಂದೆನಿಸುತ್ತದೆ. ಇದಕ್ಕೆ ಪಾಪಾತ್ಮರ ಪ್ರಪಂಚವೆಂದು ಹೇಳಲಾಗುತ್ತದೆ. ಆತ್ಮವು ಪಾಪಿಯಾಗಿದೆ, ಹೇ ಪರಮಪಿತ ಪರಮಾತ್ಮ, ಹೇ ಪರಮಧಾಮ ನಿವಾಸಿ ಶಿವ ತಂದೆ ಎಂದು ಆತ್ಮವೇ ತಂದೆಯನ್ನು ಕರೆಯುತ್ತದೆ. ತಂದೆಯ ಮೂಲ ಹೆಸರು ಒಂದೇ ಆಗಿದೆ, ಅವರು ಆತ್ಮರ ತಂದೆಯಾಗಿದ್ದಾರೆ. ರುದ್ರನ ಜೊತೆ ಸಾಲಿಗ್ರಾಮ ಎಂಬ ಹೆಸರು ಶೋಭಿಸುವುದಿಲ್ಲ, ಶಿವ ಮತ್ತು ಸಾಲಿಗ್ರಾಮ ಎಂಬುದು ಶೋಭಿಸುತ್ತದೆ. ಶಿವನ ಮಣ್ಣಿನ ಲಿಂಗವನ್ನು ಮಾಡುತ್ತಾರೆ ಆಗ ಸಾಲಿಗ್ರಾಮಗಳನ್ನೂ ಮಾಡುತ್ತಾರೆ, ಪತಿತ-ಪಾವನನಂತೂ ಅವರೇ ಆಗಿದ್ದಾರಲ್ಲವೆ. ಇಲ್ಲಿ ಯಜ್ಞಗಳನ್ನು ರಚಿಸುತ್ತಾರೆ, ಭಾರತವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ ಆದರೆ ದೇವತಾ ಧರ್ಮವನ್ನು ಮರೆತು ಬಿಟ್ಟಿದ್ದಾರೆ. ನಿಮ್ಮದು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಅದೇ ನಡೆದು ಬರಬೇಕಲ್ಲವೆ. ಹಿಂದೂ ಧರ್ಮವೆಂಬುದು ಯಾವುದೂ ಇಲ್ಲ, ದೇವತಾ ಧರ್ಮದವರೇ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ತಮೋದಲ್ಲಿ ಬಂದಾಗ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ವಾಸ್ತವದಲ್ಲಿ ಹಿಂದೂ ಎಂಬುದು ಧರ್ಮವೇ ಇಲ್ಲ, ಆದ್ದರಿಂದಲೇ ನೀವಿಲ್ಲಿ ದೇವಿ-ದೇವತೆಗಳಾಗಬಹುದು ಬಂದು ತಿಳಿದುಕೊಳ್ಳಿ ಎಂದು ಹೇಳಿದಾಗ ನಮಗೆ ಬಿಡುವೆಲ್ಲಿದೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ನಿಮಗೆ ಶಾಂತಿ ಮತ್ತು ಸುಖದ ಆಸ್ತಿಯನ್ನು ಕೊಡುವುದಕ್ಕಾಗಿ ನನ್ನವರನ್ನಾಗಿ ಮಾಡಿಕೊಳ್ಳುತ್ತೇನೆ, ಕೆಲವು ಪರಿವಾರಗಳಲ್ಲಿ ಪರಸ್ಪರ ಒಟ್ಟಿಗೆ ಇರುತ್ತಾರೆ, ಬಹಳ ಪ್ರೀತಿಯಿಂದ ನಡೆಯುತ್ತಾರೆ. ಎಲ್ಲರ ಸಂಪಾದನೆಯು ಒಟ್ಟಾಗಿ ಸೇರುತ್ತದೆ. ಯಾವುದೇ ಏರುಪೇರುಗಳಿರುವುದಿಲ್ಲ, ಆದರೂ ಸಹ ಇದಕ್ಕೆ ಸ್ವರ್ಗವೆಂದು ಹೇಳಲು ಸಾಧ್ಯವಿಲ್ಲ ಅಲ್ಲವೆ? ಸತ್ಯಯುಗದಲ್ಲಿ ಯಾವ ಒಂದು ಮನೆಯಲ್ಲಿಯೂ ರೋಗಿ, ದುಃಖಿಯಾಗಿರುವುದಿಲ್ಲ, ಹೆಸರೇ ಆಗಿದೆ – ಸ್ವರ್ಗ, ಅಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ. ತಂದೆಯಿಂದ ನೀವು ಸುಖದ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೀರಿ, ನಿಮಗೆ ಜ್ಞಾನ ಸಿಕ್ಕಿದೆ. ಬಾಬಾ, ತಾವು ಪತಿತ-ಪಾವನ ಆಗಿದ್ದೀರಿ, ನಮ್ಮನ್ನು ಪಾವನ ಮಾಡಿ ಎಂದು ಹೇಳುತ್ತೀರಿ. ತಂದೆಯ ಜೊತೆ ನೀವು ಮಕ್ಕಳೂ ಸಹ ಈಶ್ವರೀಯ ಸೇವಾಧಾರಿಗಳಾಗಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸ್ವರಾಜ್ಯವನ್ನು ತೆಗೆದುಕೊಳ್ಳಲು ಪವಿತ್ರತೆಯ ತಳಪಾಯವನ್ನು ಈಗಿನಿಂದಲೇ ಬಲಪಡಿಸಿಕೊಳ್ಳಬೇಕಾಗಿದೆ. ಹೇಗೆ ತಂದೆಯು ಪತಿತ-ಪಾವನನಾಗಿದ್ದಾರೆಯೋ ಹಾಗೆಯೇ ತಂದೆಯ ಸಮಾನ ಪಾವನರಾಗಬೇಕಾಗಿದೆ.

2. ತನ್ನ ಸ್ವಧರ್ಮ ಶಾಂತಿಯಲ್ಲಿ ಸ್ಥಿತರಾಗಿರಬೇಕಾಗಿದೆ. ಎಷ್ಟು ಸಾಧ್ಯವೋ ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರಬೇಕಾಗಿದೆ. ಡೆಡ್ ಸೈಲೆನ್ಸ್ ಅರ್ಥಾತ್ ಅಶರೀರಿಯಾಗಿರುವ ಅಭ್ಯಾಸ ಮಾಡಬೇಕಾಗಿದೆ.

ವರದಾನ:-

ಹೇಗೆ ತಂದೆಯವರು ಲೋನ್ ತೆಗೆದುಕೊಳ್ಳುವರು, ಬಂಧನದಲ್ಲಿ ಬರುವುದಿಲ್ಲ. ಹಾಗೆಯೇ ತಾವೂ ಮರುಜೀವಾ ಜನ್ಮವಿರುವ ಮಕ್ಕಳು ಶರೀರದ, ಸಂಸ್ಕಾರದ, ಸ್ವಭಾವದ ಬಂಧನಗಳಿಂದ ಮುಕ್ತರಾಗಿರಿ. ಯಾವಾಗ ಬೇಕು ಹೇಗೆ ಬೇಕು ಹಾಗೆಯೇ ತಮ್ಮ ಸಂಸ್ಕಾರವನ್ನಾಗಿ ಮಾಡಿಕೊಳ್ಳಿರಿ. ಹೇಗೆ ತಂದೆಯು ನಿರ್ಬಂಧನ ಆಗಿದ್ದಾರೆಯೋ ಹಾಗೆಯೇ ನಿರ್ಬಂಧನರು ಆಗಿರಿ. ಮೂಲವತನದ ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾ, ನಂತರ ಕೆಳಗೆ ಬನ್ನಿರಿ. ತಮ್ಮ ಅನಾದಿ-ಆದಿ ಸ್ವರೂಪದ ಸ್ಮೃತಿಯಲ್ಲಿರಿ, ಅವತರಣೆಯಾದ ಆತ್ಮನೆಂದು ತಿಳಿಯುತ್ತಾ ಕರ್ಮವನ್ನು ಮಾಡುತ್ತೀರೆಂದರೆ, ಅನ್ಯರೂ ಸಹ ತಮ್ಮನ್ನು ಅನುಕರಣೆ ಮಾಡುವರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top