19 January 2022 KANNADA Murli Today | Brahma Kumaris

Read and Listen today’s Gyan Murli in Kannada

January 18, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಕಾರ್ಯ ವ್ಯವಹಾರವನ್ನು ಮಾಡುತ್ತಾ ಬುದ್ದಿಯೋಗ ಒಬ್ಬ ತಂದೆಯ ಜೊತೆ ಇರಬೇಕು, ಇದೇ ಸತ್ಯವಾದಂತಹ ಯಾತ್ರೆಯಾಗಿದೆ. ಈ ಯಾತ್ರೆಯಲ್ಲಿ ಎಂದಿಗೂ

ಪ್ರಶ್ನೆ:: -

ಬ್ರಾಹ್ಮಣ ಜೀವನದ ಉನ್ನತಿಗಾಗಿ ಯಾವ ಮಾತಿನ ಬಲ ಬೇಕಾಗುತ್ತದೆ?

ಉತ್ತರ:-

ಅನೇಕ ಆತ್ಮಗಳ ಆಶೀರ್ವಾದದ ಬಲ ಉನ್ನತಿಯ ಸಾಧಾನವಾಗಿದೆ. ಎಷ್ಟು ಅನೇಕರ ಕಲ್ಯಾಣ ಮಾಡುತ್ತೇವೆ, ತಂದೆಯಿಂದ ಪಡೆದಿರುವ ಜ್ಞಾನರತ್ನಗಳನ್ನು ದಾನ ಮಾಡುತ್ತೇವೆ ಅಷ್ಟು ಅನೇಕ ಆತ್ಮಗಳ ಆಶೀರ್ವಾದ ಸಿಗುತ್ತದೆ. ತಂದೆ ಮಕ್ಕಳಿಗೆ ಮಾರ್ಗದರ್ಶನ ಕೊಡುತ್ತಾರೆ-ಹಣವಿದ್ದರೆ ಸೇವಾಕೇಂದ್ರವನ್ನು ತೆರೆಯುತ್ತಾ ಹೋಗಿ. ಆಸ್ಪತ್ರೆ ಅಥವಾ ವಿಶ್ವ ವಿದ್ಯಾಲಯವನ್ನು ತೆರೆಯಿರಿ. ಅಲ್ಲಿ ಕಲ್ಯಾಣವಾಗುವಂತಹವರ ಆಶೀರ್ವಾದ ಸಿಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ರಾತ್ರಿಯ ಪ್ರಯಾಣಿಕ ಸುಸ್ತಾಗಬೇಡ……

ಓಂ ಶಾಂತಿ. ಗೀತೆಯ ಅರ್ಥ ಮಕ್ಕಳ ಬುದ್ದಿಯಲ್ಲಿ ತಾನೇ-ತಾನಾಗಿ ಬರಬೇಕು. ಈಗ ನಾವು ಆತ್ಮಿಕ ಪ್ರಯಾಣಿಕರಾಗಿದ್ದೇವೆ. ಭಗವಂತ ತಂದೆಯ ಬಳಿಗೆ ಆತ್ಮಗಳು ಹೋಗಬೇಕು. ಜೀವಾತ್ಮಗಳು ಹೋಗಬೇಕೆಂದು ಹೇಳುವುದಿಲ್ಲ. ಜೀವಾತ್ಮಗಳು ಶರೀರವನ್ನು ಬಿಟ್ಟು ಹಿಂತಿರುಗಿ ಹೋಗಬೇಕು. ಮನುಷ್ಯರು ಸತ್ತಾಗ ವೈಕುಂಠವಾಸಿಯಾದರೆಂದು ಹೇಳುತ್ತಾರೆ. ಆದರೆ ನೀವು ತಿಳಿದುಕೊಂಡಿದ್ದೀರಿ -ಉತ್ತಮ ಅಥವಾ ಕನಿಷ್ಟ ಸಂಸ್ಕಾರಗಳಿಗೆ ಅನುಗುಣವಾಗಿ ಪುನರ್ಜನ್ಮ ತೆಗೆದುಕೊಳ್ಳಬೇಕಾಗುತ್ತದೆ. ಕನಿಷ್ಟ ಸಂಸ್ಕಾರದ ಕಾರಣ ನಿಮ್ಮ ತಲೆಯ ಮೇಲೆ ಪಾಪಗಳ ಭಾರವಿದೆ. ಅದು ಈ ಜನ್ಮದಲ್ಲಿ ಅಥವಾ ಜನ್ಮ-ಜನ್ಮಾಂತರದಿಂದ ಮಾಡಿರುವ ಪಾಪದ ಹೊರೆಯಾಗಿದೆ. ಈಗ ಅದನ್ನು ಯೋಗಬಲದಿಂದ ಭಸ್ಮ ಮಾಡಿಕೊಳ್ಳಬೇಕು. ತಂದೆಯನ್ನು ನೆನಪು ಮಾಡುವುದಕ್ಕೆ ಯೋಗಾಗ್ನಿಯೆಂದು ಕರೆಯಲಾಗುತ್ತದೆ. ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವದರಿಂದ ಪಾಪಾತ್ಮರಾಗುತ್ತಾರೆ ಹಾಗು ಈ ಯೋಗಾಗ್ನಿಯಿಂದ ಮಾಡಿರುವ ಪಾಪ ಭಸ್ಮವಾಗುತ್ತದೆ. ಬ್ರಾಹ್ಮಣ ಮಕ್ಕಳಾದ ನಾವು ಪ್ರಯಾಣಿಕರೆಂದು ತಿಳಿದುಕೊಂಡಿದ್ದೀರಿ. ಗೃಹಸ್ಥ ವ್ಯವಹಾರದಲ್ಲಿದ್ದು ಕೆಲಸ ಕಾರ್ಯ ಮಾಡುತ್ತಾ ನಮ್ಮ ಬುದ್ದಿಯೋಗ ತಂದೆ ಜೊತೆ ಇದ್ದಾಗ ನಾವು ಯಾತ್ರೆಯಲ್ಲಿದ್ದಂತೆ. ಇದರಲ್ಲಿ ಆಯಾಸ ಪಡಬಾರದು. ತುಂಬಾ ಪುರುಷಾರ್ಥ ಬೇಕಾಗುತ್ತದೆ. ಜ್ಞಾನ ತುಂಬಾ ಸಹಜವಾಗಿದೆ. ಪ್ರಾಚೀನ ಭಾರತದ ಯೋಗದ ಮಹಿಮೆ ತುಂಬಾ ಇದೆ. ಆದರೆ ಆ ಗೀತೆ ಹೇಳುವಂತಹವರು ಶಿವ ತಂದೆ ಯೋಗ ಕಲಿಸಿ ಕೊಟ್ಟರೆಂದು ಎಂದಿಗು ಹೇಳುವುದಿಲ್ಲ. ಗೀತೆಯಲ್ಲಿ ಒಬ್ಬ ಅರ್ಜುನನಿಗೆ ಕೃಷ್ಣ ಕುಳಿತು ಹೇಳಿರುವುದನ್ನು ತೋರಿಸುತ್ತಾರೆ. ಇಂತಹ ಮಾತೇನಿಲ್ಲ. ಇಲ್ಲಿ ಮನುಷ್ಯರಿಂದ ದೇವತೆಗಳಾಗಬೇಕು ಹಾಗೂ ಪಾಂಡವ ಸೈನ್ಯವು ಅವಶ್ಯಕವಾಗಿಯಿದೆ. ಪಾಂಡವರ ಸೈನ್ಯದವರಿಗೆ ಜ್ಞಾನ ಸಿಗುತ್ತದೆ ಮತ್ತು ಪಾಂಡವ ಪತಿಯೇ ಕೊಡುತ್ತಾರೆ. ಮನುಷ್ಯರಿಗೆ ಇದೇನು ಗೊತ್ತಿಲ್ಲ. ಮುಂಬರುತ್ತಾ ಗೀತೆಯ ಭಗವಂತ ಐದು ಸಾವಿರದ ವರ್ಷ ಹಿಂದೆ ಸಹ ಜ್ಞಾನ ಕೊಟ್ಟೀದ್ದಾರೆಂದು ಅನೇಕರು ಹೇಳುತ್ತಾರೆ. ಆದರೆ ಯಾರು ಕೊಟ್ಟರೆಂದು ಗೊತ್ತಿಲ್ಲ. ಕಲ್ಪದ ಆಯಸ್ಸನ್ನು ತಿಳಿದುಕೊಂಡಿಲ್ಲ. ತಮ್ಮ-ತಮ್ಮ ಮತವನ್ನು ಕೊಡಿತ್ತಿರುತ್ತಾರೆ-ಗಾಂಧಿ ಗೀತೆ, ಠಾಗೂರ್ ಗೀತೆಯಲ್ಲೂ ಕೃಷ್ಣ ಭಗವಾನುವಾಚ: ಅರ್ಜುನನ ಪ್ರತಿಯೆಂದೇ ಇರುತ್ತದೆ. ಯುದ್ದವನ್ನು ತೋರಿಸುತ್ತಾರೆ. ಆದರೆ ಯುದ್ದದ ಮಾತೇನಿಲ್ಲ. ಇಲ್ಲಿ ಯೋಗ ಬಲದ ಮಾತಾಗಿದೆ. ಅವರು ಯುದ್ದದ ಹೆಸರಲ್ಲಿ ತೋರಿಸಿದ್ದಾರೆ. ಹೇಗೆ ಚಂದ್ರವಂಶೀ ರಾಮನಿಗೆ ಬಿಲ್ಲು ಬಾಣ ಮುಂತಾದವನ್ನು ಕೊಟ್ಟಿದ್ದಾರೆ. ವಾಸ್ತವಿಕವಾಗಿ ಜ್ಞಾನ ಬಾಣದ ಮಾತಾಗಿದೆ. ರಾಮ ಅನುತ್ತೀರ್ಣ(ಫೇಲ್)ದ ಚಿನ್ಹೆಯಾಗಿದೆ. ಆದುದರಿಂದ ರಾಮ ಸೀತೆಯ ಚಿತ್ರವನ್ನು ಕೊಡಬೇಕು. ಮನೆತನಗಳು ಇರುತ್ತವೆಯಲ್ಲವೆ, ಸೂರ್ಯವಂಶಿ ಮನೆತನ, ಚಂದ್ರವಂಶಿ ಮನೆತನ. ಭಗವಂತ ಗೀತೆಯನ್ನು ಹೇಳಿ ಸೂರ್ಯವಂಶೀ, ಚಂದ್ರವಂಶೀ ರಾಜಧಾನಿಯನ್ನು ಸ್ಥಾಪನೆ ಮಾಡಿದರೆಂದು ಗೀತೆಯಲ್ಲಿ ಬರೆದಿಲ್ಲ. ಗೀತೆಯು ಅವಶ್ಯಕವಾಗಿ ಆದಿ ಸನಾತನ ದೇವೀ-ದೇವತಾ ಧರ್ಮದ ಶಾಸ್ತ್ರವಾಗಿದೆ. ಅವರು ಹಿಂದೂ ಧರ್ಮ ಎಂದು ಹೇಳಿ ಬಿಟ್ಟಿದ್ದಾರೆ. ತಮ್ಮನ್ನು ದೇವೀ-ದೇವತಾ ಧರ್ಮದವರೆಂದು ಹೇಳಿಕೊಳ್ಳುವುದಿಲ್ಲ. ಏಕೆಂದರೆ ಅಪವಿತ್ರರಾಗಿದ್ದಾರೆ. ಇದನ್ನೇ ಸುಳ್ಳಿನ ಮಾಯೆ, ಸುಳ್ಳಿನ ಕಾಯ. . . . . . . . . ಎಂದು ಹೇಳುವುದು ಸಂಪೂರ್ಣವಾಗಿ ಸರಿಯಿದೆ. ಅಸತ್ಯ ಖಂಡದಲ್ಲಿ ಅಸತ್ಯವೇ ಇರುತ್ತದೆ. ಸತ್ಯ ಖಂಡದಲ್ಲಿ ಸತ್ಯವೇ ಇರುತ್ತದೆ. ಸತ್ಯ ಖಂಡ ಸ್ಥಾಪನೆ ಮಾಡುವವರು ಸತ್ಯವನ್ನೇ ಹೇಳುತ್ತಾರೆ. ಭಾರತ ಪೂಜ್ಯವಾಗಿತ್ತು ಈಗ ಪೂಜಾರಿ ಆಗಿ ಬಿಟ್ಟಿದೆ. ಯಾರು ಪೂಜ್ಯರಾಗಿ ಹೋಗಿದ್ದಾರೆ ಅವರೇ ಪೂಜೆ ಮಾಡುತ್ತಿದ್ದಾರೆ. ಯಾರು ಪೂಜ್ಯ ಮನೆತನದವರಾಗಿದ್ದರು ಅವರೇ ಈಗ ಪೂಜಾರಿಗಳಾಗಿದ್ದಾರೆ. ಆದುದರಿಂದ ನೀವೇ ಪೂಜ್ಯರು ನೀವೇ ಪೂಜಾರಿಗಳೆಂದು ಮಹಿಮೆ ಮಾಡುತ್ತಾರೆ. ಪೂಜ್ಯ ವಂಶವಿತ್ತು ಈಗ ಕಲಿಯುಗದಲ್ಲಿ ಪೂಜಾರಿ, ಶೂದ್ರ ವಂಶದವರಾಗಿದ್ದಾರೆ. ಸೂರ್ಯವಂಶೀ ಕುಲ, ಚಂದ್ರವಂಶೀ ಕುಲ. ಭಾರತ ಈ ರೀತಿ ಇತ್ತೆಂದು ನೀವು ಮಕ್ಕಳು ತಿಳಿಸಿಕೊಡಬೇಕು. ಚಿತ್ರಗಳು ಇವೆಯಲ್ಲವೆ. ಸತ್ಯಯುಗದಲ್ಲಿ ಭಾರತ ಸಂಪತ್ತು ಭರಿತವಾಗಿತ್ತು. ಈ ಬೇಹದ್ದಿನ ಚರಿತ್ರೆ-ಭೂಗೋಳವನ್ನು ಯಾರು ತಿಳಿದುಕೊಂಡಿಲ್ಲ. ಈ ವರ್ಣಗಳನ್ನು ಅಗತ್ಯವಾಗಿ ತಿಳಿಸಿಕೊಡಬೇಕು. ನಾವು ಬ್ರಾಹ್ಮಣರು ಶ್ರೇಷ್ಠಾತಿಶ್ರೇಷ್ಠವಾಗಿದ್ದೇವೆ. ಇದನ್ನು ಹೊಸ ಶ್ರೇಷ್ಠ ವರ್ಣ ಎಂದು ಕರೆಯಲಾಗುತ್ತದೆ. ವಿವಾಹದ ಸಮಯದಲ್ಲಿಯೂ ಕುಲವನ್ನು ನೋಡುತ್ತಾರಲ್ಲವೆ. ನಿಮ್ಮ ಕುಲ ಶ್ರೇಷ್ಠವಾಗಿದೆ. ಪ್ರಪಂಚದಲ್ಲಿ ತುಂಬಾ ಬ್ರಾಹ್ಮಣರಿದ್ದಾರೆ ಆದರೆ ಸಂಗಮಯುಗದಲ್ಲಿ ಬ್ರಹ್ಮಾರವರ ಸಂತಾನ ಬ್ರಾಹ್ಮಣ ಕುಲವು ಇರುತ್ತದೆ. ಅವರು ಇದನ್ನು ತಿಳಿದುಕೊಂಡಿಲ್ಲ, ಇದು ಹೊಸ ಮಾತಲ್ಲವೇ. ಬಹುಶ ಇವರು ತಮ್ಮದೇ ಆದ ಹೊಸ ಗೀತೆಯನ್ನು ಮಾಡಿದ್ದಾರೆಂದು ಮನುಷ್ಯರು ತಿಳಿದುಕೊಂಡಿದ್ದಾರೆ. ಆದರೆ ಮಕ್ಕಳಿಗಂತೂ ಗೊತ್ತಿದೆ ತಂದೆ ನಮಗೆ ರಾಜಯೋಗವನ್ನು ಕಲಿಸಿಕೊಡುತ್ತಾರೆ. ನಾವೇ ದೇವತೆಗಳಾಗುತ್ತಿದ್ದೇವೆ. ನಾವು ರಾಜ್ಯ ಸ್ಥಾಪನೆಯನ್ನು ಮಾಡುತ್ತಿದ್ದೇವೆ ಈ ರೀತಿ ಬೇರೆ ಯಾರು ಹೇಳಲಾರರು. ಅವರಂತು ಹಿಂದೆ ಇದ್ದು ಹೋಗಿರುವಂತಹವರ ಕಥೆಗಳನ್ನು ಹೇಳಿತ್ತಿರುತ್ತಾರೆ. ಇಲ್ಲಿ ನಾವು ಗೀತೆಯ ಮಹಿಮೆಯನ್ನು ಮಾಡುತ್ತೇವೆ ಆದುದರಿಂದ ಇವರು ಗೀತೆಗೆ ಮಾನ್ಯತೆ ನೀಡುತ್ತಾರೆಂದು ಮನುಷ್ಯರು ತಿಳಿದುಕೊಂಡಿದ್ದಾರೆ. ಅದು ಭಕ್ತಿ ಮಾರ್ಗದ ಗೀತೆಯನ್ನು ನಾವು ತಿಳಿದುಕೊಂಡಿದ್ದೇವೆ. ಆದರೆ ಯಾರು ಗೀತೆಯನ್ನು ತಿಳಿಸಿದರೋ, ಅವರಿಂದಲೇ ನಾವು ಸೀದಾ ಕೇಳುತ್ತಿದ್ದೇವೆ. ಕಪಿ ಸೈನ್ಯವು ಸಹ ಪ್ರಸಿದ್ದವಾಗಿದೆ. ಚಿತ್ರವನ್ನು ತೋರಿಸುತ್ತಾರೆ-ಕೆಟ್ಟದನ್ನು ಕೇಳಬಾರದು, ನೋಡಬಾರದು. . . . . . ಕಪಿಗಳಿಗೆ ಇದನ್ನು ಹೇಳುವುದಿಲ್ಲ. ಅವಶ್ಯವಾಗಿ ಮನುಷ್ಯರಿಗೆ ಇರಬೇಕು ಆದರೆ ಮುಖ ಮನುಷ್ಯರದ್ದು ಗುಣ ಕಪಿಯ ಗುಣವಾಗಿದೆ. ಆದುದರಿಂದ ಕೆಟ್ಟದ್ದನ್ನು ಕೇಳಬೇಡಿ, ಕಿವಿಯನ್ನು ಮುಚ್ಚಿಕೊಂಡುಬಿಡಿ ಎಂದು ಮನುಷ್ಯರೆಂಬ ಮಂಗಗಳಿಗೆ ಹೇಳಲಾಗುತ್ತದೆ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ-ಈ ಶರೀರ ಹಳೆಯದಾಗಿರುವ ಕಾರಣ ಒಂದಲ್ಲ ಒಂದು ತೊಂದರೆ ಆಗುತ್ತಿರುತ್ತದೆ. ಯಾರ ಪತ್ನಿಯಾದರು ದೇಹ ಬಿಟ್ಟರೆ ಹಳೆಯ ಚಪ್ಪಲಿ ಹೋಯಿತೆಂದು ಹೇಳುತ್ತಾ ಮತ್ತೊಂದು ವ್ಯಾಪಾರ ಮಾಡೋಣವೆಂದು ತಿಳಿಯುತ್ತಾರೆ. ಶಿವಬಾಬಾರವರಿಗೂ ಸಹ ಈ ಹಳೆಯ ಚಪ್ಪಲಿ ಬೇಕಾಗಿದೆ. ಹೊಸ ಚೆಪ್ಪಲಿ ಅರ್ಥಾತ್ ಹೊಸ ಶರೀರದಲ್ಲಿ ಬರುವ ಹಾಗಿಲ್ಲ. ತುಂಬಾ ಹೊಸದಾಗಿದ್ದಂತದ್ದೆ ಈಗ ಹಳೆಯದಾಗಿದೆ. ತಂದೆ ತಿಳಿಸುತ್ತಾರೆ-ನಂಬರ್ವನ್ 84 ಜನ್ಮ ಇವರೇ(ಬ್ರಹ್ಮಾ) ಪಡೆಯುತ್ತಾರೆ. ಶ್ರೀಕೃಷ್ಣ ನಂಬರ್ ವನ್ ಪಾವನ್, ಸರ್ವಗುಣ ಸಂಪನ್ನ. . . . . ಕೃಷ್ಣನು ಪತಿತನಾಗಬೇಕಾಗುತ್ತದೆ, ಆಗ ಮತ್ತೆ ಪಾವನರಾಗಬೇಕಾಗುತ್ತದೆ. 84 ಜನ್ಮಗಳ ಲೆಕ್ಕವಿದೆಯಲ್ಲವೇ. ತಾವೇ ಪೂಜ್ಯರು. . . . . . ಲಕ್ಷ್ಮೀ ನಾರಾಯಣರೇ ಸ್ವಯಂ ಪೂಜಾರಿಯಾದಾಗ ನಾರಾಯಣನ ಪೂಜೆ ಮಾಡುತ್ತಾರೆ. ಇದು ಆಶ್ಚರ್ಯವಲ್ಲವೇ. ಅಂತಿಮ ಜನ್ಮದಲ್ಲೂ ನಾರಾಯಣನ ಪೂಜೆಯನ್ನು ಮಾಡುತ್ತಾರೆ. ಆದರೆ ಲಕ್ಷ್ಮಿ ದಾಸಿಯಾಗಿ ಪಾದಗಳನ್ನೊತ್ತುವುದನ್ನು ನೋಡಿದಾಗ ಇಷ್ಟವಾಗಲಿಲ್ಲ. ಆಗ ಲಕ್ಷ್ಮಿಯ ಚಿತ್ರವನ್ನು ತೆಗೆದು ನಾರಾಯಣನ ಚಿತ್ರವನ್ನು ಮಾಡಿಸಿದರು. ಅದೇ ಆತ್ಮ ಪುನಃ ಪೂಜಾರಿಯಿಂದ ಪೂಜ್ಯವಾಗುತ್ತದೆ, ತತ್ವಂ ಕೇವಲ ಒಬ್ಬರೇ ಇರುವುದಿಲ್ಲವಲ್ಲವೇ? ಸತ್ಯಯುಗದಲ್ಲಿ ಜನ್ಮ ಪಡೆಯುವ ಮಕ್ಕಳು ಸಹ ರಾಜಕುಮಾರ-ರಾಜಕುಮಾರಿಯಾಗಿರುತ್ತಾರಲ್ಲವೆ? ಈಗ ತಂದೆಯು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಶೃಂಗಾರ ಮಾಡುತ್ತಿದ್ದಾರೆ. ನಾವು ಸ್ವರ್ಗದ ಮಾಲಿಕರಾಗುತ್ತೇವೆಂದು ತಿಳಿದುಕೊಂಡುದ್ದೀರಿ. ಪುನರ್ಜನ್ಮವೂ ಸಹ ಸತ್ಯಯುಗದಲ್ಲಿ ಸಿಗುತ್ತದೆ. ಈಗ ಸತ್ಯಯುಗದ ಸ್ಥಾಪನೆಯಾಗುತ್ತಿದೆ. ಇಂತಹ ಅಟಲ-ಅಖಂಡ, ಸುಖ-ಶಾಂತಿಯ ರಾಜ್ಯವಿತ್ತೆಂದು ನೀವು ತಿಳಿದುಕೊಂಡಿದ್ದೀರಿ. ನಾವು ಪ್ರತ್ಯಕ್ಷವಾಗಿ (ಪ್ರಾಕ್ಟಿಕಲ್) ರಾಜಯೋಗ ಕಲಿಯುತ್ತಿದ್ದೇವೆಂದು ನೀವು ಯಾರಿಗಾದರು ಹೇಳಬಹುದು. ಕೆಲವರು ಇಂತಹ ಸಂತರ ಬಳಿ ಹೋದರೆ ತುಂಬಾ ಶಾಂತಿ ಸಿಗುತ್ತದೆಯೆಂದು ಹೇಳುತ್ತಾರೆ, ಆದರೆ ಇದು ಅಲ್ಪಕಾಲದ ಕ್ಷಣ ಭಂಗುರ ಶಾಂತಿಯಾಗಿದೆ. ಹತ್ತು – ಇಪ್ಪತ್ತು ಮಂದಿಗಷ್ಟೆ ಸಿಗಬಹುದು. ಇದು ಪ್ರಪಂಚದ ಸವಾಲ್ ಆಗಿದೆ. ಸತ್ಯ-ಸತ್ಯವಾದ ಶಾಂತಿ ಸತ್ಯಯುಗದಲ್ಲಿ ಇರುತ್ತದೆ. ಯಾರು ಬುದ್ದಿವಂತ ಮಕ್ಕಳಿದ್ದಾರೆ ಅವರು ಕಲ್ಪದ ಹಿಂದಿನಂತೆ ಪುರುಷಾರ್ಥ ಮಾಡುತ್ತಿದ್ದಾರೆ. ಕೆಲವು ಹೊಸ ಹೊಸ ಗೋಪಿಕೆಯರಿಗೆ (ಮಾತೆಯರು) ಮನೆಯಲ್ಲಿ ಕುಳಿತೇ ಒಮ್ಮೆ ಜ್ಞಾನ ಪಡೆದರೆ ಸಾಕು ತುಂಬಾ ಖುಷಿಯಾಗಿ ಬಿಡುತ್ತದೆ. ನಿನ್ನೆ ಒಬ್ಬರು ಯುಗಲ್ ತಂದೆ ಬಳಿ ಬಂದಿದ್ದರು ತಂದೆಯು ಅವರಿಗೆ ಈ ರೀತಿ ತಿಳಿಸಿಕೊಟ್ಟರು-ಮಕ್ಕಳೇ ನೀವು ತಂದೆಯಿಂದ ಬೇಹದ್ದಿನ ಆಸ್ತಿ ತೆಗೆದುಕೊಳ್ಳುವುದಿಲ್ಲವೇ?ಅರ್ಧ ಕಲ್ಪದಿಂದ ನರಕದಲ್ಲಿ ಮುಳಗಿ ದುಃಖಿಗಳಾಗಿದ್ದೀರಿ, ಈಗ ಒಂದು ಜನ್ಮದಲ್ಲಿ ವಿಷವನ್ನು ಬಿಡಲಾಗುವುದಿಲ್ಲವೇ? ಸ್ವರ್ಗದ ಮಾಲಿಕರಾಗಲು ಪವಿತ್ರರಾಗುವುದಿಲ್ಲವೆ. ಅವರು ಇದು ಸ್ವಲ್ಪ ಕಷ್ಟವೆಂದು ಹೇಳಿದರು. ಆಗ ಬಾಬಾ ತಿಳಿಸಿದರು ಕಾಮ ಚಿತೆಯ ಮೇಲೆ ಕುಳಿತುಕೊಳ್ಳಲು ಲೌಕಿಕ ಬ್ರಾಹ್ಮಣರು ನಿಮ್ಮಿಂದ ಕಂಕಣ ಕಟ್ಟಿಸಿದರು ಈಗ ನೀವು ಜ್ಞಾನ ಚಿತೆಯ ಮೇಲೆ ಕುಳಿತು ಸ್ವರ್ಗದ ಮಹಾರಾಜ-ಮಹರಾಣಿ ಆಗಿರಿ. ಆಗ ಅವರು ನೀವು ಸಹಾಯ ಮಾಡಬೇಕಾಗುತ್ತದೆಂದು ಹೇಳಿದರು. ಶಿವ ತಂದೆಯನ್ನು ನೆನಪು ಮಾಡುತ್ತಿದ್ದರೆ ಅವಶ್ಯವಾಗಿ ಸಹಾಯ ಸಿಗುತ್ತದೆಯೆಂದು ಬಾಬಾ ತಿಳಿಸಿದರು. ಆಗ ಅವರು ನೆನಪು ಮಾಡುತ್ತೇನೆಂದು ಹೇಳಿದರು. ತಕ್ಷಣ ತಂದೆಯಿಂದ ಕಂಕಣ ಕಟ್ಟಿಸಲಾಯಿತು, ಉಂಗುರವನ್ನು ತೊಡಿಸಿದರು. ಇವರು ಬಾಪ್ ದಾದಾ ಆಗಿದ್ದಾರಲ್ಲವೆ. ಬೇಹದ್ದಿನ ತಂದೆ ತಿಳಿಸುತ್ತಾರೆ-ಮಕ್ಕಳೇ ನೀವು ಪವಿತ್ರರಾಗುವುದಿಲ್ಲವೆಂದರೆ ಸ್ವರ್ಗದಲ್ಲಿ ಬರುವುದಿಲ್ಲ. ಈ ಅಂತಿಮ ಜನ್ಮದಲ್ಲಿ ಪವಿತ್ರರಾಗದ ಕಾರಣ ರಾಜ್ಯವನ್ನು ಕಳೆದು ಕುಳಿತುಕೊಳ್ಳುತ್ತೀರಿ. ಈ ಸ್ವಲ್ಪ ಸಮಯ ನೀವು ಪವಿತ್ರರಾಗಲು ಸಾಧ್ಯವಿಲ್ಲವೇ. ತಂದೆ ಜ್ಞಾನ ಯೋಗದಿಂದ ನಿಮ್ಮನ್ನು ಶೃಂಗಾರ ಮಾಡುತ್ತಿದ್ದಾರೆ. ನೀವು ಈ ರೀತಿ ಲಕ್ಷ್ಮೀ ನಾರಾಯಣರು ಆಗಿ ಬಿಡುತ್ತೀರಿ. ಒಂದುವೇಳೆ ತಂದೆ ಹೇಳುವುದನ್ನು ಒಪ್ಪಿಕೊಳ್ಳದವರಿಗಿಂತ ಮಹಾ ಮೂರ್ಖರು ಪ್ರಪಂಚದಲ್ಲಿ ಯಾರು ಇಲ್ಲ. ಒಬ್ಬರು ಹದ್ದಿನ ಮೂರ್ಖರು, ಬೇರೆಯವರು ಬೇಹದ್ದಿನ ಮೂರ್ಖರು. ಇಲ್ಲಿ ಸುಮ್ಮನೆ ಹಾಗಿಯೇ ಕುಳಿತುಕೊಳ್ಳುವಂತಿಲ್ಲ. ಇದರಿಂದ ವಾಯುಮಂಡಲ ಅಶುದ್ದವಾಗುತ್ತದೆ. ಹಂಸಗಳ ಸಭೆಯಲ್ಲಿ ಶೂದ್ರರು ಕುಳಿತುಕೊಳ್ಳಲಾರರು. ತಂದೆ ಎಷ್ಟೊಂದು ಶೃಂಗಾರ ಮಾಡಿ ಲಕ್ಷ್ಮೀ-ನಾರಾಯಣರಂತೆ ಮಾಡುತ್ತಿದ್ದಾರೆ. ಆದರೆ ಮತ್ತೆ ಮಾಯೆ ಪೂರ್ಣ ಕಂಗಾಲ್ ನಯಾ ಪೈಸೆಗೆ ಯೋಗ್ಯರನ್ನಾಗಿ ಮಾಡಿ ಬಿಡುತ್ತದೆ. ಕೆಲವರ ಬಳಿ ಐವತ್ತು ಕೋಟಿ ಇರಬಹುದು, ಅದೂ ಸಹ ನಯಾ ಪೈಸೆಯಾಗಿದೆ, ಏಕೆಂದರೆ ಇದೆಲ್ಲವು ಭಸ್ಮವಾಗುವುದಾಗಿದೆ. ಜೊತೆಯಲ್ಲಿ ಸತ್ಯ ಸಂಪಾದನೆ ಮಾತ್ರ ಬರುತ್ತದೆ.

ತಂದೆಯ ಆದೇಶವಾಗಿದೆ-ಮಕ್ಕಳೇ ಸೇವಾ ಕೇಂದ್ರಗಳನ್ನು ತೆರೆಯುತ್ತಾ ಹೋಗಿ. ಮನುಷ್ಯರಿಗೆ ಕುಳಿತು ಶೃಂಗಾರ ಮಾಡಿ, ಆದರೆ ವಿಶ್ವ ವಿದ್ಯಾಲಯ ಮತ್ತು ಆಸ್ಪತ್ರೆಯನ್ನು ತೆರೆಯುವವರು ಬುದ್ದಿವಂತರಾಗಿರಬೇಕು, ಬೇರೆಯವರಿಗೆ ತಿಳಿಸಿಕೊಡುವಂತಹವರಾಗಿರಬೇಕು ಅಥವಾ ಬೇರೆಯವರಿಗೆ ತೆರೆದುಕೊಟ್ಟಾಗ ಅವರು ಕುಳಿತು ತಿಳಿಸಿಕೊಡಬೇಕು. ಆಗ ಅವರು ಆಶೀರ್ವಾದಗಳಿಂದ ಸಂಪನ್ನರಾಗುತ್ತಾರೆ. ಬಲ ಸಿಗ್ಗುತ್ತದೆಯಲ್ಲವೇ. 21 ಜನ್ಮಗಳಿಗೆ ಲಾಭವಿದೆ. ತಂದೆಯ ಶ್ರೀಮತದಂತೆ ನಡೆಯದಂತಹವರೂ ಸಹ ಇರುತ್ತಾರೆ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯ ಶ್ರೀಮತದಂತೆ ನಡೆಯಬೇಕು. ವಿಘ್ನ ಬಂದೇ ಬರುತ್ತದೆ. ಬಂಧನದಲ್ಲಿರುವ ಮಾತೆಯರು ಎಷ್ಟೊಂದು ಸಹನೆ ಮಾಡಿಕೊಳ್ಳುತ್ತಾರೆ. ನಿರ್ಭಯರಾಗಿರಬೇಕು. ತಂದೆಯ ಮಹಿಮೆಯಾಗಿದೆ-ನಿರ್ಭಯ, ನಿರ್ವೈರ… ನಮಗೆ ಯಾರೊಂದಿಗೂ ವೈರತ್ವವಿಲ್ಲ. ತಂದೆ ನಮಗೆ ಶೃಂಗಾರ ಮಾಡುತ್ತಿರುವಾಗ ತಂದೆಯ ಸೇವೆಯನ್ನು ನಾವು ಮಾಡಬೇಕಾಗುತ್ತದೆ. ಬಾಬಾ ನಿಮ್ಮ ಶ್ರೀಮತದಂತೆ ಏಕೆ ನಡೆಯುವುದಿಲ್ಲ! ಇದರಲ್ಲಿ ತುಂಬಾ ನಮ್ಮ ಕಲ್ಯಾಣವಿದೆ. ನಮ್ಮ ಜೊತೆ-ಜೊತೆ ನಮ್ಮ ಮಕ್ಕಳ ಕಲ್ಯಾಣವಾಗುತ್ತದೆ. ಪ್ರತಿಯೊಬ್ಬರಿಗೂ ಸತ್ಯ ಯಾತ್ರೆಯಲ್ಲಿ ನಡೆಯುವಂತಹ ಮಾರ್ಗ ತೋರಿಸಬೆಕು. ಜಗಳ ಆಗುತ್ತದೆ, ಅಬಲೆಯರು ಸಹನೆ ಮಾಡಿಕೊಳ್ಳಬೇಕಾಗುತ್ತದೆ, ಆದರೆ ತಂದೆಯ ಮಾತನ್ನು ಕೇಳದವರಿಗೆ ನಮ್ಮ ಕುಲದವರಲ್ಲವೆಂದು ತಿಳಿದುಕೊಳ್ಳಬೇಕು. ಕಷ್ಟ ಪಡಬೇಕಾಗುತ್ತದೆ. ನಮ್ಮ ಕುಲದವರಾದರೆ ಬಂದು ಕೊನೆಗೆ ಪ್ರಜೆಯಾಗಿಯಾದರು ಯೋಗ್ಯರಾಗಲಿ. ಮನುಷ್ಯರಿಂದ ದೇವತೆಯನ್ನಾಗಿ ಮಾಡಬೇಕು. ತಂದೆಯ ವಿನಃ ಬೇರೆ ಯಾರೂ ಮಾಡುವುದಿಲ್ಲ. ನೀವು ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣರಾಗಿದ್ದೀರಿ. ಅವರು ಕನಿಷ್ಠದಲ್ಲಿ ಕನಿಷ್ಠರಾಗಿದ್ದಾರೆ, ನೀವು ಹಂಸಗಳು ಅವರು ಕೊಕ್ಕರೆ ಆಗಿದ್ದಾರೆ. ಆದುದರಿಂದ ಅವಶ್ಯವಾಗಿ ಜಗಳ, ಅತ್ಯಾಚಾರ ನಡೆಯುತ್ತದೆ. ಮಾಯಾ ರಾವಣನು ಎಲ್ಲರನ್ನು ಹಾಳು ಮಾಡಿ ಬಿಟ್ಟಿದ್ದಾನೆ, ತಂದೆ ಬಂದು ಸಂಪನ್ನರಾಗಿ, ಶ್ರೀಮಂತರನ್ನಾಗಿ ಮಾಡುತ್ತಾರೆ. ಅಂತ್ಯದಲ್ಲಿ ರಾಜ್ಯ ನಿಮ್ಮದಾಗಿರುತ್ತದೆ. ಯುದ್ದದ ನಂತರ ಭಾರತ ಸಂಪತ್ತು ಭರಿತವಾಗುತ್ತದೆ, ಮಹಾಭಾರತ ಯುದ್ದದ ನಂತರ ಭಾರತ ಸ್ವರ್ಗವಾಗುತ್ತದೆ ಎಂದು ಅವರು ತಿಳಿದುಕೊಂಡಿಲ್ಲ. ಈಗ ಮಕ್ಕಳು ತುಂಬಾ ಒಳ್ಳೆಯ ಪುರುಷಾರ್ಥವನ್ನು ಮಾಡಬೇಕು. ಭಾಷಣದಲ್ಲಿ ಉತ್ತಮ ಪ್ರಭಾವ ಇರಬೇಕು, ಶಂಖ ಧ್ವನಿ ಮಾಡಬೇಕು. ಇಲ್ಲವೆಂದರೆ ಇವರ ಬಳಿ ಶಂಖು ಇಲ್ಲವೆಂದು ತಿಳಿಯುತ್ತಾರೆ. ಕಮಲ ಪುಷ್ಪ ಸಮಾನವೇನೋ ಇದ್ದಾರೆ, ಚಕ್ರವು ಇದೆ ಆದರೆ ಶಂಖ ಇವರ ಬಳಿ ಇಲ್ಲ. ಜ್ಞಾನಿ ಆತ್ಮಗಳೇ ನನಗೆ ಪ್ರಿಯವೆಂದು ತಂದೆ ತಿಳಿಸುತ್ತಾರೆ. ಗೋಪಿಯರು ಮುರಳಿಯಲ್ಲಿ ತಲ್ಲೀನವಾಗಿರುತ್ತಾರೆ. ಕೃಷ್ಣನಂತು ಮುರಳಿ ಹೇಳಲಿಲ್ಲ. ಇದು ಕೃಷ್ಣನ ಆತ್ಮ ಅಂತಿಮ ಜನ್ಮವಾಗಿದೆ ಚಕ್ರ ಸುತ್ತಿಕೊಂಡು ಬಂದು ಜ್ಞಾನ ಪಡೆಯುತ್ತಿದ್ದಾರೆ. ಇದು ಹಳೆಯ ಪ್ರಪಂಚ ಇದನ್ನು ನಾವು ಬಿಡಬೇಕಾಗಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ಈಗ ನೀವು ಹೊಸ ಪ್ರಪಂಚದ ಮಾಲಿಕರಾಗುತ್ತಿದ್ದೀರಿ. ವಿನಾಶಕ್ಕೆ ಮೊದಲು ಹಳೆಯ ಪ್ರಪಂಚವನ್ನು ಬಿಡುತ್ತೀರಿ. ಒಂದುವೇಳೆ ಹಳೆಯ ಪ್ರಾಂಚವನ್ನು ಬಿಡುವುದಿಲ್ಲವೆಂದರೆ ಹೊಸ ಪ್ರಪಂಚವನ್ನು ಮರೆತು ಹೋಗುತ್ತೀರಿ, ನೆನಪು ಮಾಡಲು ಆಗುವುದಿಲ್ಲ. ರಾವಣ ಪುರಿಯಲ್ಲಿ 63 ಜನ್ಮ ದುಃಖ ಭೋಗಿಸುತ್ತೀರಿ, ಈಗ ನೀವು ದೇಹ ಸಹಿತ ಎಲ್ಲವನ್ನು ಬಿಟ್ಟು ನೀವು ಆತ್ಮ ಒಂಟಿಯಾಗಿ ನನ್ನ ಬಳಿ ಬಂದು ಬಿಡುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನಿ ಆತ್ಮನಾಗಿ ಶಂಖ-ಧ್ವನಿ ಮಾಡಬೇಕು. ಪ್ರತಿಯೊಬ್ಬರಿಗೂ ಸತ್ಯ ಯಾತ್ರೆಯನ್ನು ಕಲಿಸಬೇಕು. ತಮ್ಮ ಪ್ರಜೆಗಳನ್ನು ತಯಾರು ಮಾಡಿಕೊಳ್ಳಬೇಕು.

2. ಬುದ್ದಿಯಿಂದ ಹಳೆಯ ಪ್ರಪಂಚಕ್ಕೆ ವಿಚ್ಚೇದನ ಕೊಡಬೇಕು, ಹೊಸ ಪ್ರಪಂಚದೊಂದಿಗೆ ಬುದ್ದಿಯೋಗವನ್ನು ಇಡಬೇಕು. ನಿರ್ಭಯ, ನಿರ್ವೈರರಾಗಬೇಕು.

ವರದಾನ:-

ಪ್ರವೃತ್ತಿಯಲ್ಲಿರುತ್ತಾ ಬಂಧನ ಮುಕ್ತರಾಗುವುದಕ್ಕಾಗಿ ಸಂಕಲ್ಪದಿಂದಲೂ ಯಾವುದೇ ಸಂಬಂಧದಲ್ಲಿಯೂ, ತಮ್ಮ ದೇಹದಲ್ಲಿಯೂ ಮತ್ತು ಪದಾರ್ಥಗಳಲ್ಲಿಯೂ ಸಿಲುಕಬಾರದು. ಯಾವುದೇ ಬಂಧನವು ಸಂಕಲ್ಪದಲ್ಲಿಯೂ ಆಕರ್ಷಿಸಬಾರದು ಏಕೆಂದರೆ ಸಂಕಲ್ಪದಲ್ಲಿ ಬಂದರೆ ಸಂಕಲ್ಪದ ನಂತರ ಕರ್ಮದಲ್ಲಿಯೂ ಬಂದು ಬಿಡುವುದು. ಆದ್ದರಿಂದ ವ್ಯಕ್ತ ಭಾವದಲ್ಲಿ ಬರುತ್ತಿದ್ದರೂ, ಅದರ ಆಕರ್ಷಣೆಯಲ್ಲಿ ಬರಬಾರದು. ಹೀಗಿದ್ದಾಗಲೇ ಭಿನ್ನ ಹಾಗೂ ಪ್ರಿಯವಾದ ಅವ್ಯಕ್ತ ಸ್ಥಿತಿಯ ಅನುಭವ ಮಾಡಲು ಸಾಧ್ಯವಾಗುವುದು.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಪರಮಾತ್ಮನ ಪ್ರೀತಿಯಲ್ಲಿ ಸದಾ ಲವಲೀನ, ಮುಳುಗಿರುವವರಾಗಿರಿ, ಅದರಿಂದ ಚಹರೆಯ ಹೊಳಪು ಮತ್ತು ನಶೆ, ಅನುಭೂತಿಯ ಆ ಕಿರಣಗಳು ಇಷ್ಟೂ ಶಕ್ತಿಶಾಲಿಯಾಗಿರುತ್ತವೆ, ಯಾವುದೇ ಸಮಸ್ಯೆಯು ಸಮೀಪದಲ್ಲಿ ಬರುವುದಂತು ದೂರದ ಮಾತು, ಆದರೆ ಕಣ್ಣೆತ್ತಿಯೂ ನೋಡಲು ಸಾಧ್ಯವಾಗುವುದಿಲ್ಲ. ಯಾವುದೇ ಪ್ರಕಾರದ ಪರಿಶ್ರಮದ ಅನುಭವವಾಗುವುದಿಲ್ಲ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top