19 August 2021 KANNADA Murli Today | Brahma Kumaris

Read and Listen today’s Gyan Murli in Kannada

August 18, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಸತ್ಯ-ಸತ್ಯ ರಾಜಋಷಿ-ರಾಜಯೋಗಿಗಳಾಗಿದ್ದೀರಿ, ನೀವು ರಾಜ್ಯ ಪದವಿಗಾಗಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ”

ಪ್ರಶ್ನೆ:: -

ಯಾವ ಗಮನವು ರಾಜ್ಯ ಪದವಿಗೆ ಯೋಗ್ಯರನ್ನಾಗಿ ಮಾಡುತ್ತದೆ?

ಉತ್ತರ:-

ಒಂದುವೇಳೆ ವಿದ್ಯೆಯ ಮೇಲೆ ಸಂಪೂರ್ಣ ಗಮನವು ಇದೆಯೆಂದರೆ ರಾಜ್ಯಭಾಗ್ಯವು ಪ್ರಾಪ್ತಿಯಾಗುತ್ತದೆ. ತಂದೆಗೆ ಏನನ್ನು ತಿಳಿಸುವರೋ ಅದನ್ನು ಚೆನ್ನಾಗಿ ಕೇಳಿ ಧಾರಣೆ ಮಾಡಿರಿ. ತಂದೆಯು ತಿಳಿಸಿದರು ಮತ್ತು ಮಕ್ಕಳು ಕೇಳಿದಿರಿ ಅಂದಮೇಲೆ ರಾಜ್ಯಭಾಗ್ಯವು ಸಿಕ್ಕಿ ಬಿಡುವುದು. ಒಂದುವೇಳೆ ಕೇಳುವ ಸಮಯದಲ್ಲಿ ಆಕಳಿಸುತ್ತೀರಿ ಅಥವಾ ತೂಕಡಿಸುತ್ತೀರಿ, ಬುದ್ಧಿಯು ಅಲೆದಾಡುತ್ತದೆಯೆಂದರೆ ರಾಜ್ಯ ಪದವಿಯನ್ನು ಕಳೆದುಕೊಳ್ಳುವಿರಿ. ಆದ್ದರಿಂದ ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಾವು ಆ ಮಾರ್ಗದಂತೆ ನಡೆಯಬೇಕಾಗಿದೆ……

ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳ ಪ್ರತಿ ತಿಳಿಸುತ್ತಿದ್ದಾರೆ. ಇಂದು ಮಕ್ಕಳಿಗೆ ಹಠಯೋಗ ಮತ್ತು ರಾಜಯೋಗವನ್ನು ಕುರಿತು ತಿಳಿಸುತ್ತೇವೆ. ಮಕ್ಕಳಿಗೆ ಅರ್ಥವಾಗಿದೆ – ಅವರು ಏನೆಲ್ಲವನ್ನೂ ಕಲಿಸುತ್ತಾರೆಯೋ ಎಲ್ಲವೂ ಹಠಯೋಗವಾಗಿದೆ ಏಕೆಂದರೆ ಅವರು ಕರ್ಮ ಸನ್ಯಾಸಿಗಳಾಗಿದ್ದಾರೆ. ವಾಸ್ತವದಲ್ಲಿ ಗೃಹಸ್ಥಿಗಳು ಹಠಯೋಗ, ಕರ್ಮ ಸನ್ಯಾಸವನ್ನು ಕಲಿಯುವಂತಿಲ್ಲ ಏಕೆಂದರೆ ಸನ್ಯಾಸಗಳದು ನಿವೃತ್ತಿ ಮಾರ್ಗವಾಗಿದೆ, ಆ ಧರ್ಮವೇ ಬೇರೆಯಾಗಿದೆ. ನಿಮ್ಮದು ದೇವಿ-ದೇವತಾ ಧರ್ಮವಾಗಿದೆ, ಆ ದೇವಿ-ದೇವತೆಗಳು ರಾಜಯೋಗದಿಂದಲೇ ರಾಜ್ಯವನ್ನು ಪಡೆದಿದ್ದಾರೆ. ನೀವೀಗ ರಾಜಋಷಿಗಳಾಗಿದ್ದೀರಿ, ಯಾರು ಪವಿತ್ರರಾಗಿರುವರೋ ಅವರಿಗೇ ಋಷಿಗಳೆಂದು ಹೇಳಲಾಗುತ್ತದೆ. ನೀವೀಗ ಪವಿತ್ರರಾಗಿದ್ದೀರಿ. ಒಂದುವೇಳೆ ಪವಿತ್ರರಾಗಿರದಿದ್ದರೆ ಅವರಿಗೆ ಋಷಿಗಳೆಂದು ಹೇಳಲಾಗುವುದಿಲ್ಲ. ನೀವು ರಾಜ್ಯಭಾಗ್ಯವನ್ನು ಪಡೆಯುವುದಕ್ಕಾಗಿ ಪವಿತ್ರರಾಗುತ್ತೀರಿ. ಅವರು ರಾಜ್ಯ ಪದವಿಗಾಗಿ ಪವಿತ್ರರಾಗುವುದಿಲ್ಲ. ನಿಮಗೆ ತಿಳಿದಿದೆ, ಪವಿತ್ರ ಪ್ರಪಂಚದಲ್ಲಿ ನಮಗೆ ಪವಿತ್ರ ರಾಜ್ಯವಿತ್ತು ಭಾರತದಲ್ಲಿಯೇ 5000 ವರ್ಷಗಳ ಮೊದಲು ದೇವಿ-ದೇವತೆಗಳ ಪೂಜ್ಯ ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಪೂಜಾರಿ ಪತಿತರಾಗಿ ಬಿಟ್ಟಿದ್ದಾರೆ. ಹೇಗೆ ಪತಿತರಾದರು? 84 ಜನ್ಮಗಳ ಲೆಕ್ಕವಿದೆಯಲ್ಲವೆ. ತಂದೆಯು ಯಾವ ಸಹಜ ರಾಜಯೋಗವನ್ನು ಕಲಿಸುತ್ತಿದ್ದಾರೆಯೋ ಅವರೇ ನಿಮಗೆ 84 ಜನ್ಮಗಳ ಕಥೆಯನ್ನು ತಿಳಿಸುತ್ತಾರೆ. ಅನ್ಯ ಧರ್ಮದ ಬಗ್ಗೆ ಸನ್ಯಾಸ ಧರ್ಮದವರಿಗೆ ಏನು ಗೊತ್ತು! ಇದು ದೇವಿ-ದೇವತೆಗಳ ಪ್ರಾಚೀನ ಧರ್ಮವಾಗಿದೆ, ಅದು ಕೊನೆಯಲ್ಲಿ ಬಂದ ಧರ್ಮವಾಗಿದೆ. ಏನು ಕಳೆದು ಹೋಗಿದೆಯೋ ಅದನ್ನು ಸನ್ಯಾಸಿಗಳು ತಿಳಿದುಕೊಳ್ಳಲು ಸಾಧ್ಯವಿಲ್ಲ. ಯಾವುದು ಕೊನೆಯಲ್ಲಿ ಅವರ ಕಣ್ಮುಂದೆ ಕಾಣುವುದೋ ಅದನ್ನು ತಿಳಿಸುತ್ತಾ ಹೋಗುತ್ತಾರೆ. ನಿಮಗೆ ತಿಳಿದಿದೆ, ಹಠಯೋಗಗಳು ಅನೇಕ ಪ್ರಕಾರವಾಗಿದೆ. ದ್ವಾಪರದಿಂದ ಭಕ್ತಿಮಾರ್ಗದ ಜೊತೆಗೆ ಹಠಯೋಗವು ಆರಂಭವಾಗುತ್ತದೆ. ಈಗ ಇದು ರಾಜಯೋಗವಾಗಿದೆ, ಆ ಹಠಯೋಗವನ್ನು ಪ್ರತೀ ಜನ್ಮದಲ್ಲಿಯೂ ಕಲಿಯುತ್ತಾ ಬಂದಿದ್ದಾರೆ. ರಾಜಯೋಗವನ್ನು ನೀವು ಇದೊಂದು ಜನ್ಮದಲ್ಲಿಯೇ ಕಲಿಯುತ್ತೀರಿ. ಅವರಂತೂ ಪ್ರತೀ ಜನ್ಮದಲ್ಲಿ ಪುನರ್ಜನ್ಮವನ್ನು ತೆಗೆದುಕೊಂಡು ಹಠಯೋಗವನ್ನು ಕಲಿಯಲೇಬೇಕಾಗಿದೆ. ನೀವು ರಾಜಯೋಗವನ್ನು ಕಲಿಯಲು ಪುನರ್ಜನ್ಮವನ್ನು ತೆಗೆದುಕೊಳ್ಳಬೇಕಾಗುವುದಿಲ್ಲ. ನೀವು ಕೇವಲ ಈ ಸಂಗಮದಲ್ಲಿಯೇ ರಾಜಯೋಗವನ್ನು ಕಲಿಯುತ್ತೀರಿ. ರಾಜ್ಯವು ಪ್ರಾಪ್ತಿಯಾಯಿತು, ಸ್ವರ್ಗವಾಯಿತೆಂದರೆ ಮತ್ತೆಲ್ಲಾ ಧರ್ಮಗಳು ಸಮಾಪ್ತಿಯಾಗುತ್ತವೆ. ನೀವು ರಾಜಋಷಿಗಳಾಗಿದ್ದೀರಿ. ರಾಧೆ-ಕೃಷ್ಣರೂ ಸಹ ಪವಿತ್ರರಲ್ಲವೆ, ಪವಿತ್ರರಿಗೆ ಮಹಾತ್ಮರೆಂತಲೂ ಹೇಳುತ್ತಾರೆ. ಮಹಾತ್ಮರು ಪವಿತ್ರರಾಗಿರುತ್ತಾರೆ. ನೀವೂ ಸಹ ಈಗ ಮಹಾತ್ಮರು ಅಥವಾ ರಾಜಋಷಿಗಳಾಗಿದ್ದೀರಿ. ಮಹಾತ್ಮ ಅರ್ಥಾತ್ ಪವಿತ್ರ, ಮಹಾನ್ ಆತ್ಮ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ, ಶಾಸ್ತ್ರಗಳು ಕೊನೆಯಲ್ಲಿ ರಚಿಸಲ್ಪಡುತ್ತವೆ. ಕಥೆಗಳ ರೂಪದಲ್ಲಿ ಬರೆಯುತ್ತಾರೆ, ಯಾವುದು ಕಳೆದು ಹೋಗಿರುತ್ತದೆಯೋ ಅದನ್ನು ಕುಳಿತು ಆಟದಂತೆ ಬರೆಯುತ್ತಾರೆ. ಸತ್ಯವಂತೂ ಏನೂ ಇಲ್ಲ. ಈಗ ತಂದೆಯು ಮಕ್ಕಳಿಗೆ ಸನ್ಮುಖದಲ್ಲಿ ಓದಿಸುತ್ತಾರೆ, ನಂತರ ಇವರದು ಚರಿತ್ರೆಯಾಗುತ್ತದೆ. ಯಾದವರು-ಕೌರವರು, ಪಾಂಡವರಿದ್ದರು ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ಇರಲು ಸಾಧ್ಯ. ಸಂಗಮಯುಗದ ಚರಿತ್ರೆಯನ್ನು ಅವರು ಬರೆದಿದ್ದಾರೆ. ಹಬ್ಬಗಳೆಲ್ಲವೂ ಈ ಸಂಗಮಯುಗದ್ದಾಗಿದೆ, ರಕ್ಷಾಬಂಧನವೂ ಸಹ ಪವಿತ್ರತೆಯ ಮೇಲಿದೆ, ನಂತರದಲ್ಲಿ ಅದರ ನೆನಪಾರ್ಥವು ನಡೆಯುತ್ತದೆ. ಇಲ್ಲಿ ತಂದೆಯು ಎಲ್ಲರನ್ನೂ ಪವಿತ್ರರನ್ನಾಗಿ ಮಾಡಿ ಪ್ರತಿಜ್ಞೆ ಮಾಡಿಸುತ್ತಾರೆ. ಸಿಖ್ಖರು ಕಂಕಣವನ್ನು ಧರಿಸುತ್ತಾರೆ, ಅದೂ ಸಹ ಪವಿತ್ರತೆಯ ಸಂಕೇತವಾಗಿದೆ. ಹಿಂದೂ ಜನರು ಜನಿವಾರವನ್ನು ಧರಿಸುತ್ತಾರೆ, ಅದೂ ಸಹ ಪವಿತ್ರತೆಯ ಸಂಕೇತವಾಗಿದೆ ಆದರೆ ಅವರು ಪವಿತ್ರರಾಗಿರುವುದಿಲ್ಲ. ಶ್ರೀ ರಕ್ಷೆಯನ್ನು ಕಟ್ಟಿಸಿಕೊಳ್ಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಹಿಂದಿನ ಕಾಲದಲ್ಲಿ ಬ್ರಾಹ್ಮಣರು ಶ್ರೀ ರಕ್ಷೆಯನ್ನು ಕಟ್ಟುತ್ತಿದ್ದರು ಆದರೆ ಈಗ ಸಹೋದರಿಯು ಸಹೋದರನಿಗೆ ಶ್ರೀ ರಕ್ಷೆಯನ್ನು ಕಟ್ಟುತ್ತಾಳೆ. ಅದಕ್ಕಾಗಿ ಸಹೋದರನು ಹಣ ಕೊಡುತ್ತಾರೆ. ಇದೆಲ್ಲವೂ ಈಗ ಫ್ಯಾಷನ್ ಬಂದಿದೆ, ವಾಸ್ತವದಲ್ಲಿ ಇದು ಪವಿತ್ರತೆಯ ಮಾತಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಕಾಮ ಮಹಾಶತ್ರುವಾಗಿದೆ, ಆ ಬ್ರಾಹ್ಮಣರು ಈ ರೀತಿ ತಿಳಿಸುವುದಿಲ್ಲ, ಈಗ ಬೇಹದ್ದಿನ ತಂದೆಯು ಹೇಳುತ್ತಾರೆ. ಮಕ್ಕಳೇ, ನಾವು ಪವಿತ್ರರಾಗಿರುತ್ತೇವೆ, ಎಂದೂ ವಿಕಾರದಲ್ಲಿ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡಿರಿ. ತಾವು ಬಂದು ಪತಿತರನ್ನು ಪಾವನ ಮಾಡಿ ಎಂದೇ ನನ್ನನ್ನು ಕರೆಯುತ್ತೀರಿ, ಸತ್ಯ-ತ್ರೇತಾಯುಗದಲ್ಲಿ ಯಾರೂ ಕರೆಯುವುದಿಲ್ಲ. ಅದು ರಾಮ ರಾಜ್ಯ, ಇದು ರಾವಣ ರಾಜ್ಯವಾಗಿದೆ. ರಾಮ ರಾಜ್ಯದಲ್ಲಿ ಪಂಚ ವಿಕಾರಗಳಿರುವುದಿಲ್ಲ, ಯಥಾ ರಾಜ-ರಾಣಿ ತಥಾ ಪ್ರಜಾ. ಈಗ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ನಾವು ತಂದೆಯಿಂದ ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ, ಈ ನರಕದಿಂದ ಖಂಡಿತವಾಗಿಯೂ ಹೋಗಬೇಕಾಗಿದೆ. ಪಾವನರನ್ನಾಗಿ ಮಾಡಿ ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ ಅಂದಮೇಲೆ ನಾವೇಕೆ ಪಾವನರಾಗಬಾರದು. ಅವರದು ಅನೇಕ ಪ್ರಕಾರದ ಹಠಯೋಗಗಳಿದೆ. ಜೈಪುರದ ಮ್ಯೂಜಿಯಂನಲ್ಲಿ ಹೋಗಿ ನೋಡಿರಿ, ಎಷ್ಟೊಂದು ಪ್ರಕಾರದ ಹಠಯೋಗಿಗಳ ಚಿತ್ರವಿದೆ! ಅದರಿಂದ ಆಗುವುದೇನೂ ಇಲ್ಲ. ಇನ್ನೂ ಏಣಿಯನ್ನು ಕೆಳಗಿಳಿಯುತ್ತಲೇ ಹೋಗುತ್ತಾರೆ.

ತಂದೆಯು ತಿಳಿಸಿದ್ದಾರೆ, ಭಾರತವು ಯಾವಾಗ ಪತಿತವಾಗುತ್ತದೆಯೋ, ರಾವಣನ ರಾಜ್ಯವಾಗುತ್ತದೆಯೋ ಆಗ ಧರಣಿಯು ಅಲುಗಾಡತೊಡಗುತ್ತದೆ. ಚಿನ್ನದ ಮಹಲುಗಳೆಲ್ಲವೂ ಕೆಳಗಡೆ ಹೊರಟು ಹೋಗುತ್ತವೆ. ಮಹಲು ಮೊದಲಾದುವುಗಳನ್ನು ಯಾರೂ ಲೂಟಿ ಮಾಡಲಿಲ್ಲ. ಆ ಇಸ್ಲಾಮಿಗಳು ಕೇವಲ ಮಂದಿರಗಳನ್ನು ಲೂಟಿ ಮಾಡಿದ್ದಾರೆ, ಕೆಲವು ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆಭರಣಗಳ ಆಸಕ್ತಿ ಎಲ್ಲರಿಗಿಂತ ಹೆಚ್ಚು ಆಸಕ್ತಿ ನಿಮಗಿದೆ. ನೀವು ಸ್ವರ್ಗದಲ್ಲಿ ಬರುತ್ತಿದ್ದಂತೆಯೇ ಆಭರಣಗಳನ್ನು ಧರಿಸುತ್ತೀರಿ, ರಾಜ್ಯಭಾರ ಮಾಡುತ್ತೀರಿ, ಅನ್ಯ ಧರ್ಮದವರು ಬರುತ್ತಿದ್ದಂತೆಯೇ ರಾಜ್ಯಭಾರ ಮಾಡುವುದಿಲ್ಲ, ನೀವು ಬೇಹದ್ದಿನ ತಂದೆಯಿಂದ ಸ್ವರ್ಗದ ರಾಜಧಾನಿಯ ಆಸ್ತಿಯನ್ನು ಪಡೆಯುತ್ತೀರಿ ಅಂದಾಗ ತಂದೆಯು ಕುಳಿತು ಇದೆಲ್ಲವನ್ನೂ ತಿಳಿಸುತ್ತಾರೆ. ಇವರು ಗೀತೆಯನ್ನು ಓದಿ ತಿಳಿಸುವುದಿಲ್ಲ. ಗೀತೆಯಲ್ಲಿ ಏನೆಲ್ಲವನ್ನು ಓದಿ ಬರೆದಿದ್ದಾರೆಯೋ ಅದೆಲ್ಲವನ್ನೂ ನಾನೂ ಹೇಳಲಿಲ್ಲ, ಆ ಮನುಷ್ಯರು ನನ್ನ ಮಹಾವಾಕ್ಯಗಳನ್ನು ನಂತರದಲ್ಲಿ ಕುಳಿತು ಶಾಸ್ತ್ರಗಳ ರೂಪದಲ್ಲಿ ಬರೆದಿದ್ದಾರೆ. ನಾನು ಏನನ್ನು ತಿಳಿಸಿದೆನೋ ಅದನ್ನು ನೀವೇ ಯಥಾರ್ಥವಾಗಿ ಕೇಳಿದಿರಿ ನಂತರ ಹೋಗಿ ರಾಜ್ಯಭಾರ ಮಾಡಿದಿರಿ. ಅಲ್ಲಿ ಈ ಜ್ಞಾನ ಇರುವುದಿಲ್ಲ. ಇಲ್ಲಂತೂ ತಂದೆಯು ಶಿಕ್ಷಕನಾಗಿ ಶಿಕ್ಷಣವನ್ನು ಕೊಡುತ್ತಾರೆ. ತಂದೆಯು ಹಿಂಧಿ ಭಾಷೆಯಲ್ಲಿಯೇ ತಿಳಿಸುತ್ತಾರೆ, ಇಲ್ಲಿ ಎಲ್ಲರೂ ಹಿಂದಿ ಹಿಂದಿ ಹೇಳುತ್ತಿರುತ್ತಾರಲ್ಲವೆ. ಯಾವುದು ಅವರ ಭಾಷೆಯಾಗಿರುವುದೋ ಅದನ್ನು ಹೇಳುತ್ತಿರುತ್ತಾರೆ. ವಾಸ್ತವದಲ್ಲಿ ಪ್ರಾಚೀನ ಭಾಷೆಯು ಹಿಂದಿಯಾಗಿದೆ, ಸಂಸ್ಕೃತವಲ್ಲ. ಈ ಸಂಸ್ಕೃತವು ಶಂಕರಾಚಾರ್ಯರ ನಂತರ ಬಂದಿರುವುದಾಗಿದೆ. ಯಾರು ಬರುವರೋ ಅವರು ತಮ್ಮ ಭಾಷೆಯನ್ನು ಪ್ರಚಲಿತ ಮಾಡುತ್ತಾರೆ. ತಂದೆಯು ಗೀತೆಯನ್ನು ಸಂಸ್ಕೃತದಲ್ಲಿ ತಿಳಿಸಲಿಲ್ಲ, ಗುರುನಾನಕರದು ತಮ್ಮದೇ ಆದ ಗ್ರಂಥವಿದೆ, ಅವರು ಸಿಖ್ಖ್ಧರ್ಮವನ್ನು ಸ್ಥಾಪನೆ ಮಾಡಿದರು. ಅವರನ್ನೂ ಸಹ ಅವತಾರವೆಂದು ತಿಳಿಯುತ್ತಾರೆ. ಅವರಲ್ಲಿ ರಾಜರೂ ಇರುತ್ತಾರೆ, ಸನ್ಯಾಸಿಗಳಲ್ಲಿಯೂ ರಾಜ್ಯಭಾರ ಇರುವುದಿಲ್ಲ. ತಂದೆಯು ತಿಳಿಸಿದ್ದಾರೆ, ಬುದ್ಧ-ಕ್ರೈಸ್ಟ್ ಮೊದಲಾದವರು ಮೊದಲು ಗೃಹಸ್ಥಿ ಆತ್ಮ ಆಗಿದ್ದರು. ಗೃಹಸ್ಥಿ, ಪತಿತ ಆತ್ಮರಂತೂ ಧರ್ಮ ಸ್ಥಾಪನೆ ಮಾಡಲು ಸಾಧ್ಯವಿಲ್ಲ ಆದ ಕಾರಣ ಅವರಲ್ಲಿ ಸಮಯನುಸಾರ ಪವಿತ್ರ ಆತ್ಮವು ಪ್ರವೇಶ ಮಾಡಿತು ಆಗ ಅವರು ಧರ್ಮ ಸ್ಥಾಪನೆ ಮಾಡಿದರು. ಅನ್ಯ ಧರ್ಮಗಳು ಭಿನ್ನ-ಭಿನ್ನ ಪ್ರಕಾರದಲ್ಲಿದೆ, ಅವರು ಬಂದು ತಮ್ಮ ಚಿಕ್ಕ ಮಠ-ಪಂಥಗಳನ್ನು ಸ್ಥಾಪನೆ ಮಾಡುತ್ತಾರೆ. ವೃಕ್ಷದ ಚಿತ್ರದಲ್ಲಿಯೂ ತೋರಿಸಿದ್ದಾರಲ್ಲವೆ ಅಂದಾಗ ಹಠಯೋಗ ಮತ್ತು ರಾಜಯೋಗದಲ್ಲಿ ಬಹಳ ಅಂತರವಿದೆ. ಈ ಮಾತುಗಳನ್ನು ತಿಳಿದುಕೊಳ್ಳಬೇಕಾಗಿದೆ. ಯಾರಿಗೆ ಇವು ಅರ್ಥವಾಗುವುದಿಲ್ಲವೋ ಅವರು ತೂಕಡಿಸುತ್ತಾ ಇರುತ್ತಾರೆ ಅಥವಾ ಆಕಳಿಸುತ್ತಾ ಇರುತ್ತಾರೆ. ಇಲ್ಲಂತೂ ನಿಮಗೆ ಖಜಾನೆಯು ಸಿಗುತ್ತದೆ, ಬಹಳ ದೊಡ್ಡ ಸಂಪಾದನೆಯಿದೆ. ನೀವು ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ ಅಂದಮೇಲೆ ಇಲ್ಲಿ ಕಣ್ಣುಗಳನ್ನು ತೆರೆದು ಕೇಳಬೇಕಾಗಿದೆ. ಆಕಳಿಸುತ್ತಾ ಇರುತ್ತೀರಿ ಅಥವಾ ಬುದ್ಧಿಯು ಹೊರಗಡೆ ಅಲೆದಾಡುತ್ತಾ ಇದ್ದರೆ ಅವರು ರಾಜ್ಯವನ್ನು ಪಡೆಯಲು ಸಾಧ್ಯವಿಲ್ಲ.

ನೀವು ರಾಜಋಷಿಗಳಾಗಿದ್ದೀರಿ, ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವವರಾಗಿದ್ದೀರಿ. ತಂದೆಯೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ, ಶೀಕೃಷ್ಣನು ಮಾಡುವುದಿಲ್ಲ. ಕೃಷ್ಣನೂ ಸಹ ತಂದೆಯ ಆಸ್ತಿಯನ್ನು ಪಡೆದುಕೊಳ್ಳುತ್ತಾನೆ, ನಿಮ್ಮ ತಂದೆಯು ನಿರಾಕಾರನಾಗಿದ್ದಾರೆ ಅವರಿಂದ ವಿಶ್ವದ ರಾಜ್ಯ ಪದವಿಯ ಆಸ್ತಿಯನ್ನು ಪಡೆಯುತ್ತಿದ್ದೀರಿ. ನೀವು ಎಷ್ಟೊಂದು ಸಾಹುಕಾರರಾಗಿದ್ದೀರಿ. ಇಲ್ಲಿ ಒಬ್ಬ ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಅದರಲ್ಲಿಯೂ ನೀವು ತಿನ್ನಿರಿ, ಕುಡಿಯಿರಿ, ತಿರುಗಾಡಿರಿ ಕೇವಲ ತಂದೆಯನ್ನು ನೆನಪು ಮಾಡಿರಿ. ಸಾಹುಕಾರರು ಅವಶ್ಯವಾಗಿ ಚೆನ್ನಾಗಿ ತಿನ್ನುತ್ತಾರೆ. ಅವರಂತೂ ತಮ್ಮ ಸಂಪಾದನೆಯ ಫಲವನ್ನು ತಿನ್ನುತ್ತಾರೆ. ಭಕ್ಷ್ಯ ಭೋಜನವನ್ನಾದರೂ ತಿನ್ನಿರಿ ಅಥವಾ ರೊಟ್ಟಿಯನ್ನಾದರೂ ತಿನ್ನಿರಿ ಆದರೆ ತಂದೆಯನ್ನು ನೆನಪು ಮಾಡಿರಿ. ಭಲೆ ಏನನ್ನಾದರೂ ತಿನ್ನಿರಿ, ಹಣವಿರುವುದಾದರೂ ಏತಕ್ಕೆ! ಬಾಬಾ ಇದನ್ನು ನಿರಾಕರಿಸುವುದಿಲ್ಲ. ಕೇವಲ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ. ಈ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಯಾವುದೇ ಖರ್ಚಿಲ್ಲ, ಆ ಯುದ್ಧ ಮೊದಲಾದುವುಗಳಲ್ಲಿ ಎಷ್ಟೊಂದು ಖರ್ಚಾಗುತ್ತದೆ. ವಿಮಾನಗಳಿಗಾಗಿ ಎಷ್ಟೊಂದು ಖರ್ಚಾಗುತ್ತದೆ ಒಂದುವೇಳೆ ಕೆಳಗೆಬಿದ್ದರೆ ಒಮ್ಮೆಲೆ ಸಮಾಪ್ತಿಯಾಗಿ ಬಿಡುತ್ತಾರೆ, ಎಷ್ಟೊಂದು ನಷ್ಟವುಂಟಾಗುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ – ನಡೆಯುತ್ತಾ, ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿರಿ, ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಇರಿ. ನಾವು 84 ಜನ್ಮಗಳನ್ನು ಪೂರ್ಣಗೊಳಿಸಿದ್ದೇವೆ, ಈಗ ವತನದ ಕಡೆಗೆ ಹೋಗಬೇಕಾಗಿದೆ. ಮನೆಗೆ ಹೋಗಿ ನಂತರ ಬಂದು ರಾಜ್ಯಭಾರ ಮಾಡುತ್ತೇವೆ. ನೀವು ಪಾತ್ರಧಾರಿಗಳಲ್ಲವೆ. ಆ ಚಲನ ಚಿತ್ರವು 2-3 ಗಂಟೆಗಳ ಕಾಲ ನಡೆಯುತ್ತದೆ, ಈ ಬೇಹದ್ದಿನ ನಾಟಕವು 5000 ವರ್ಷ ನಡೆಯುತ್ತದೆ. ಇದನ್ನು ಮನುಷ್ಯರೇ ತಿಳಿದುಕೊಳ್ಳಲು ಸಾಧ್ಯ. ಈ ಪ್ರಪಂಚವು ಮುಳ್ಳುಗಳ ಕಾಡಾಗಿದೆ. ವಿಕಾರದ ಮುಳ್ಳು ಅತಿ ದೊಡ್ಡ ಮುಳ್ಳಾಗಿದೆ. ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಎರಡನೇ ಮುಳ್ಳು ಕ್ರೋಧವಾಗಿದೆ. ಅದರ ಗುರುತು, ಈ ಮಹಾಭಾರತ ಯುದ್ಧವನ್ನು ನೋಡಿರಿ. ಯಾವುದೇ ಮಾತಿನಲ್ಲಿ ಕ್ರೋಧ ಬಂದರೆ ಸಾಕು ಕೂಡಲೇ ಬಾಂಬುಗಳನ್ನು ಹಾಕಲು ಆರಂಭಿಸುತ್ತಾರೆ. ಈಗಂತೂ ಇಂತಿಂತಹ ಬಾಂಬುಗಳನ್ನು ತಯಾರಿಸಿದ್ದಾರೆ, ಅದರ ಮಾತೇ ಕೇಳಬೇಡಿ. ಸತ್ಯಯುಗದಲ್ಲಿ ಯಾವುದೇ ಯುದ್ಧ ಇತ್ಯಾದಿಗಳಾಗುವುದಿಲ್ಲ. ಸಂಗಮದಲ್ಲಿ ಈ ಮಹಾಭಾರತ ಯುದ್ಧವನ್ನು ತೋರಿಸಿದ್ದಾರೆ, ಮತ್ತ್ಯಾವುದೇ ಶಾಸ್ತ್ರಗಳಲ್ಲಿ ಯುದ್ಧದ ಮಾತಿಲ್ಲ. ಅಲ್ಲಂತೂ ನೀವು ಇಡೀ ವಿಶ್ವದ ಮಾಲೀಕರಾಗಿರುತ್ತೀರಿ, ಯುದ್ಧದ ಮಾತಿರಲು ಸಾಧ್ಯವಿಲ್ಲ, ಶಾಸ್ತ್ರಗಳಲ್ಲಿ ಅಸುರರು ಮತ್ತು ದೇವತೆಗಳ ಯುದ್ಧವನ್ನು ತೋರಿಸಿದ್ದಾರೆ ಆದರೆ ದೇವತೆಗಳು ಅಹಿಂಸಕರಾಗಿದ್ದಾರೆ. ನೀವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಇದು ಶಾಂತಿಯ ಬಲವಾಗಿದೆ, ಇದರಲ್ಲಿ ನೀವು ಏನನ್ನೂ ಹೇಳುವಂತಿಲ್ಲ. ನೆನಪಿನ ಬಲದಿಂದ ನೀವು ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಅಂತರವು ನೋಡಿ, ಎಷ್ಟಿದೆ! ವಿಜ್ಞಾನದ ಬಲದಿಂದ ವಿನಾಶವಾಗುತ್ತದೆ ಮತ್ತೆ ಅದೇ ವಿಜ್ಞಾನದಿಂದ ನೀವು ಸತ್ಯಯುಗದಲ್ಲಿ ಸುಖವನ್ನೂ ನೋಡುತ್ತೀರಿ, ವಿಜ್ಞಾನದಿಂದ ಅನ್ವೇಷಣೆ ಮಾಡುತ್ತಾರೆ, ಅದನ್ನು ಸುಖಕ್ಕಾಗಿಯೇ ಮಾಡುತ್ತಾರೆ. ವಿಜ್ಞಾನದವರೂ ಸಹ ಬಂದು ಜ್ಞಾನವನ್ನು ತೆಗೆದುಕೊಳ್ಳುತ್ತಾರೆ, ಪ್ರದರ್ಶನಿಗೆ ಎಲ್ಲರೂ ಬರುತ್ತಾರೆ. ಮುಂದೆ ಹೋದಂತೆ ಎಲ್ಲರೂ ಬರುವರು, ನಿಮ್ಮ ಈ ಶಾಂತಿಯ ಶಕ್ತಿಯ ಪ್ರಭಾವ ಬೀರುವುದು.

ಗೀತೆಯ ಭಗವಂತ ಯಾರು ಎಂದು ನೀವು ಪ್ರಶ್ನೆಯನ್ನು ಕೇಳುತ್ತೀರಿ, ಈ ರೀತಿ ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ. ಎಲ್ಲಿ ಈ ಪ್ರಶ್ನೆಗಳನ್ನು ಬರೆಯುವಿರೋ ಅದರ ಜೊತೆಗೆ ಚಿತ್ರಗಳನ್ನೂ ಕೊಡಿ. ಗೀತೆಯ ಭಗವಂತ ಪರಮಪಿತ ಪರಮಾತ್ಮನೋ ಅಥವಾ ಶ್ರೀಕೃಷ್ಣನೋ? ಶ್ರೀಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ, ಪತಿತರಿಂದ ಪಾವನರನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಕೃಷ್ಣನ ಆತ್ಮವಂತೂ 84 ಜನ್ಮಗಳನ್ನು ತೆಗೆದುಕೊಂಡು ಪತಿತನಾಗಿದೆ. ಅವರಿಗೇ ತಂದೆಯು ತಿಳಿಸುತ್ತಾರೆ – ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ನೀವು ನಿಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ನಾವು 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದನ್ನು ಪಾತ್ರಧಾರಿಗಳಿಗೆ ತಿಳಿದಿರಬೇಕಲ್ಲವೆ. ಸನ್ಯಾಸಿಗಳ ಧರ್ಮವೇ ಬೇರೆಯಾಗಿದೆ. ಭಾರತವಾಸಿಗಳಿಗೆ ತಮ್ಮ ಧರ್ಮದ ಬಗ್ಗೆ ಅರಿವಿಲ್ಲದ ಕಾರಣ ಅನ್ಯ ಧರ್ಮಗಳಲ್ಲಿ ಹೋಗುತ್ತಿರುತ್ತಾರೆ. ಯಾವ ಗುರುವಿನ ಆಶೀರ್ವಾದದಿಂದಾದರೂ ಯಾರಿಗಾದರೂ ಹಣ ಸಿಕ್ಕಿತೆಂದರೆ ಅವರ ಹಿಂದೆ ಬೀಳುತ್ತಾರೆ, ಮತ್ತೆ ದಿವಾಳಿಯಾದರೆ ಅದು ಭಗವಂತನ ಇಚ್ಛೆಯೆಂದು ಹೇಳುತ್ತಾರೆ. ಗಂಡು ಮಗುವಾಯಿತೆಂದರೆ ಬಹಳ ಖುಷಿಯಾಗುತ್ತದೆ, ಒಂದುವೇಳೆ 10-12 ದಿನಗಳ ನಂತರ ಮಗು ಸತ್ತು ಹೋಯಿತೆಂದರೆ ಇದು ಈಶ್ವರನ ಲೀಲೆಯೆಂದು ಹೇಳುತ್ತಾರೆ. ಇವರನ್ನು ಬದುಕಿಸುವುದು ನಮ್ಮ ಕೈಯಲ್ಲಿಲ್ಲ ಎನ್ನುತ್ತಾರೆ. ಬ್ರಹ್ಮಾ ತಂದೆಯು ಇಂತಹ ಅನೇಕ ಉದಾಹರಣೆಗಳನ್ನು ನೋಡಿದ್ದಾರೆ, ಇಂತಹವರು ಅನೇಕರಿದ್ದಾರೆ. ಇಲ್ಲಂತೂ ತಂದೆಯು ಕುಳಿತಿದ್ದಾರೆ, ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ಮಧುರಾತಿ ಮಧುರ ಮಕ್ಕಳೇ, ಪಾವನರಾಗಿ. ನಿಮಗೆ ನೆನಪಿದೆಯೇ, ಯಾವಾಗ ಮಹಾಭಾರತ ಯುದ್ಧವಾಗಿತ್ತೊ ಆಗ ಬಾಬಾ, ನಮ್ಮನ್ನು ಈ ದುಶ್ಯಾಸನರು ಅಪವಿತ್ರವನ್ನಾಗಿ ಮಾಡುತ್ತಾರೆ, ಇದರಿಂದ ರಕ್ಷಣೆ ಮಾಡಿ ಎಂದು ದ್ರೌಪದಿಯು ಕರೆದಿದ್ದಳು. ಇದು 5000 ವರ್ಷಗಳ ಮಾತಾಗಿದೆ. ವಿಕಾರಕ್ಕಾಗಿಯೇ ಅಬಲೆಯರ ಮೇಲೆ ಅತ್ಯಾಚಾರಗಳಾಗುತ್ತವೆ, ಕೆಲವರು ಸ್ತ್ರೀಯರೂ ಸಹ ಈ ರೀತಿಯಿರುತ್ತಾರೆ, ಅವರು ವಿಕಾರವಿಲ್ಲದೆ ಇರಲು ಸಾಧ್ಯವಾಗುವುದಿಲ್ಲ. ಶೂರ್ಪನಖಿ, ಪೂತನ ಎಂದು ಅವರ ಹೆಸರನ್ನು ಇಡಲಾಗಿದೆ. ಯಾರು ವಿಕಾರಕ್ಕಾಗಿ ತೊಂದರೆ ಕೊಡುವರೋ ಅವರು ಕಂಸ, ಜರಾಸಂಧ, ಶಿಶುಪಾಲ….. ಆಗಿದ್ದಾರೆ. ಇವರೆಲ್ಲರೂ ವಿನಾಶವನ್ನು ಹೊಂದಲೇಬೇಕಾಗಿದೆ. ಈ ಸಮಯದಲ್ಲಿ ಆಸುರೀ ರಾವಣ ರಾಜ್ಯವಿದೆ, ನಂತರ ಈಶ್ವರೀಯ ರಾಜ್ಯವಿರುವುದು. ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನೀವು ಈ ಇಡೀ ಚಕ್ರವನ್ನು ಅರಿತುಕೊಂಡಿದ್ದೀರಿ. ಯಾವಾಗ ವಿಕಾರದಲ್ಲಿ ಹೋಗುವರೋ ಆಗ ಇದೆಲ್ಲವೂ ಮರೆತು ಹೋಗುತ್ತದೆ. ವಿಕಾರದಲ್ಲಿ ಹೋಗುವವರ ಮುಖವೇ ಬಾಡಿ ಹೋಗುತ್ತದೆ. ನಾವು ಏನು ಮಾಡಿ ಬಿಟ್ಟೆವು ಎಂದು ಸ್ವಯಂ ಅವರೇ ತಿಳಿದುಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ – ಮಕ್ಕಳೇ, ಈ ವಿಕಾರದ ಗುಣಿಯಲ್ಲಿ ಬೀಳಬೇಡಿ, ಇದು ನಿಮಗೆ ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುವಂತದ್ದಾಗಿದೆ. ಇದರಲ್ಲಿ ಬೀಳಬಾರದು. ಪ್ರತಿಜ್ಞೆ ಮಾಡಿರಿ, ನಾವೆಂದೂ ವಿಕಾರದಲ್ಲಿ ಹೋಗುವುದಿಲ್ಲ, ಭಗವಾನುವಾಚ ಇದೆ – ಕಾಮ ಮಹಾಶತ್ರುವಾಗಿದೆ. ಪ್ರತಿಯೊಂದು ಚಿತ್ರದಲ್ಲಿ ಮೊದಲು ಇದನ್ನು ಬರೆಯಿರಿ. ಜ್ಞಾನ ಸಾಗರ, ಪತಿತ-ಪಾವನ ಗೀತಾ ಜ್ಞಾನ ದಾತ ಶಿವ ಭಗವಾನುವಾಚ – ಈ ರೀತಿ ಬರೆದಾಗ ಕೃಷ್ಣನ ಹೆಸರೇ ಹೊರಟು ಹೋಗುವುದು. ನಮಗೆ ಗೀತೆಯ ಭಗವಂತನೇ ಕುಳಿತು ಇದನ್ನು ತಿಳಿಸುತ್ತಾರೆ. ಅದೇ ಜ್ಞಾನವನ್ನು ನಾವು ತೆಗೆದುಕೊಳ್ಳುತ್ತೇವೆ, ಭಗವಂತನೇ ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ ಮತ್ತೆ ಹಳೆಯ ಪ್ರಪಂಚದ ವಿನಾಶವಾಗುತ್ತದೆ. ಇದು ರುದ್ರ ಜ್ಞಾನ ಯಜ್ಞವಲ್ಲವೆ. ಇದಕ್ಕೆ ಮೂಲ ಶಿವ ತಂದೆಯಾಗಿದ್ದಾರೆ. ರುದ್ರ ತಂದೆ ಎಂದು ಹೇಳುವುದಿಲ್ಲ, ಬಾಂಬೆಯಲ್ಲಿ ಬಬೂಲ್ನಾಥನ ಮಂದಿರವೂ ಇದೆ. ಮುಳ್ಳುಗಳಿಗೆ ಬಬುಲ್ ಎಂದು ಹೇಳಲಾಗುತ್ತದೆ ಅಂದಮೇಲೆ ಬಬೂಲ್ನಾಥ ಎಂಬ ಹೆಸರನ್ನು ಏಕೆ ಇಟ್ಟಿದ್ದಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಚಿತ್ರವಂತೂ ಶಿವನದಾಗಿದೆ. ಬಾಕಿ ಅದಕ್ಕೆ ಅನೇಕ ಹೆಸರುಗಳನ್ನು ಇಟ್ಟು ಬಿಟ್ಟಿದ್ದಾರೆ. ಶಿವ ತಂದೆಯೇ ಬಂದು ಮುಳ್ಳುಗಳ ಕಾಡನ್ನು ಹೂದೋಟವನ್ನಾಗಿ ಮಾಡುತ್ತಾರೆ, ಅವರೇ ನಿಮ್ಮ ತಂದೆಯಾಗಿದ್ದಾರೆ. ಅವರ ಹೆಸರಾಗಿದೆ – ಶಿವ. ಶಿವ ಪರಮಾತ್ಮಾಯ ನಮಃ, ಬ್ರಾಹ್ಮಣ ದೇವಿ-ದೇವತಾಯ ನಮಃ ಶಬ್ಧವು ಸಂಪೂರ್ಣ ಸ್ಪಷ್ಟವಾಗಿದೆ. ಆ ಪರಮಪಿತ ಪರಮಾತ್ಮನೇ ಕುಳಿತು ಈಗ ಈ ರಥದ ಮೂಲಕ ತಿಳಿಸುತ್ತಿದ್ದಾರೆ. ಹೇಗೆ ಲೌಕಿಕ ತಂದೆಯು ತಿಳಿಸುತ್ತಾರಲ್ಲವೆ – ಮಕ್ಕಳೇ, ನನ್ನ ಕುಲಕ್ಕೆ ಕಳಂಕ ತರಬೇಡಿ, ಯಾವುದೇ ಕೆಟ್ಟ ಕೆಲಸವನ್ನು ಮಾಡಬೇಡಿ ಎಂದು. ಅದೇರೀತಿ ಈ ತಂದೆಯೂ ಸಹ ಹೇಳುತ್ತಾರೆ – ಮಕ್ಕಳೇ, ವಿಕಾರದಲ್ಲಿ ಹೋಗಬೇಡಿರಿ. ಪವಿತ್ರರಾಗದೇ ಸ್ವರ್ಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ನೀವು ಬಹಳ ದೊಡ್ಡ ಸಂಪಾದನೆಯನ್ನೂ ಮಾಡಿಕೊಳ್ಳುತ್ತಿದ್ದೀರಿ, ಉಳಿದೆಲ್ಲರೂ ಕಳೆದುಕೊಳ್ಳುತ್ತಿದ್ದಾರೆ. ಭಲೆ ಯಾರ ಬಳಿಯಾದರೂ ಪದುಮದಷ್ಟಿರಬಹುದು. ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟಿಸುತ್ತಿದ್ದಾರೆ, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ ಆದರೆ ನಿಮಗೆ ತಿಳಿದಿದೆ – ಇದೆಲ್ಲವೂ ಸಮಯದ ವ್ಯರ್ಥವಾಗಿದೆ. ಇದೇನೂ ಕೆಲಸಕ್ಕೆ ಬರುವುದಿಲ್ಲ, ಎಲ್ಲವೂ ಸಮಾಪ್ತಿಯಾಗಿ ಬಿಡುವುದು. ಇನ್ನೂ 10-12 ಸಾವಿರ ವರ್ಷಗಳು ನಡೆಯುತ್ತದೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಆದರೆ ನಿಮಗೆ ಗೊತ್ತಿದೆ, ಮೃತ್ಯುವು ಸನ್ಮುಖದಲ್ಲಿ ನಿಂತಿದೆ, ತಲೆಯ ಮೇಲೆ ನಿಂತಿದೆ. ಸ್ವಲ್ಪ ಸಮಯದಲ್ಲಿಯೇ ಈ ಭೂಕಂಪ ಇತ್ಯಾದಿಗಳು ಆಗಿ ಎಲ್ಲವೂ ಡೋಲಾಯನಮಾನವಾಗಿ ಆಗಿ ಬಿಡುವುದು. ಭೂಕಂಪದಲ್ಲಿ ಅಸಂಖ್ಯಾತ ಜನರು ಸಾಯುತ್ತಾರೆ, ಈಗಂತೂ ವಿನಾಶವಾಗಲೇಬೇಕಾಗಿದೆ, ವಿನಾಶದ ಸಾಕ್ಷಾತ್ಕಾರ ಮತ್ತು ಸ್ಥಾಪನೆಯ ಸಾಕ್ಷಾತ್ಕಾರವನ್ನು ನೋಡಿದ್ದೀರಿ, ಈಗ ಮತ್ತೆ ಈ ಸ್ಥೂಲ ಕಣ್ಣುಗಳಿಂದ ನೋಡುತ್ತೀರಿ. ಭಕ್ತಿಮಾರ್ಗದಲ್ಲಿ ಏನೆಲ್ಲವನ್ನೂ ಮಾಡುತ್ತಾರೆ ಆದರೆ ಯಾರೂ ವೈಕುಂಠದಲ್ಲಿ ಹೋಗಲು ಸಾಧ್ಯವಿಲ್ಲ, ಜ್ಞಾನವಿಲ್ಲದೆ ಸದ್ಗತಿಯಿಲ್ಲ. ಇವೆಲ್ಲವೂ ಭಕ್ತಿಮಾರ್ಗದ ಗೊಂಬೆಗಳಾಗಿವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಕುಲಕಳಂಕಿತ ಮಾಡುವಂತಹ ಯಾವುದೇ ಕೆಟ್ಟ ಕೆಲಸವನ್ನು ಮಾಡಬಾರದು. ತಮ್ಮೊಂದಿಗೆ ತಾವೇ ಪವಿತ್ರರಾಗುವ ಪ್ರತಿಜ್ಞೆ ಮಾಡಿಕೊಳ್ಳಬೇಕಾಗಿದೆ.

2. ಈಗ ತಮ್ಮ ಹಣ, ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಹೂದೋಟದಲ್ಲಿ ಹೋಗುವುದಕ್ಕಾಗಿ ಮುಳ್ಳುಗಳನ್ನು ತೆಗೆದು ಹಾಕಬೇಕಾಗಿದೆ.

ವರದಾನ:-

ಹೇಗೆ ಬಾಪ್ದಾದಾರವರು ತನ್ನನ್ನು ವಿಧೇಯ ಸೇವಕನೆಂದು ಹೇಳುವರು, ಸೇವಕನೆಂದು ಹೇಳುವುದರಿಂದ ಸ್ವತಹವಾಗಿಯೇ ಕಿರೀಟಧಾರಿ ಆಗಿ ಬಿಡುತ್ತಾರೆ. ಹಾಗೆಯೇ ತಾವು ಮಕ್ಕಳೂ ಸಹ ನಮ್ರಚಿತ್ತರಾಗಿದ್ದು ಅನ್ಯರಿಗೆ ಶ್ರೇಷ್ಠ ಸ್ಥಾನವನ್ನು ಕೊಟ್ಟುಬಿಡಿ, ಅವರನ್ನು ಆಸನದ ಮೇಲೆ ಕುಳ್ಳರಿಸುತ್ತೀರೆಂದರೆ ಅವರು ಅದರಿಂದ ಇಳಿದು, ಸ್ವತಹವಾಗಿಯೇ ತಮ್ಮನ್ನು ಕೂರಿಸುವರು. ಒಂದುವೇಳೆ ತಾವು ಕುಳಿತುಕೊಳ್ಳಲು ಪ್ರಯತ್ನಿಸುತ್ತೀರೆಂದರೆ, ಅವರು ತಮ್ಮನ್ನು ಕುಳಿತುಕೊಳ್ಳಲು ಬಿಡುವುದಿಲ್ಲ. ಆದ್ದರಿಂದ ಅನ್ಯರನ್ನು ಕೂರಿಸುವುದೇ ತಾವು ಕುಳಿತುಕೊಳ್ಳುವುದಾಗಿದೆ. ಹಾಗಾದರೆ “ಮೊದಲು ತಾವು” ಎಂಬ ಪಾಠವನ್ನು ಪರಿಪಕ್ವ ಮಾಡಿಕೊಳ್ಳಿರಿ ನಂತರ ಸಂಸ್ಕಾರವೂ ಸಹ ಸಹಜವಾಗಿಯೇ ಮಿಲನವಾಗುತ್ತದೆ, ಕಿರೀಟಧಾರಿಯೂ ಆಗಿ ಬಿಡುವಿರಿ – ಇದೇ ಬುದ್ಧಿವಂತರಾಗುವ ವಿಧಿಯಾಗಿದೆ, ಇದರಲ್ಲಿ ಪರಿಶ್ರಮವೂ ಇಲ್ಲ ಮತ್ತು ಪ್ರಾಪ್ತಿಯೂ ಹೆಚ್ಚಾಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top