18 May 2022 KANNADA Murli Today | Brahma Kumaris

Read and Listen today’s Gyan Murli in Kannada

May 17, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ- ನೀವು ಸತ್ಯ-ಸತ್ಯ ಪ್ರಿಯತಮೆಯರಾಗಿ ನಾನೊಬ್ಬ ಪ್ರಿಯತಮನನ್ನು ನೆನಪು ಮಾಡಿ, ಆಗ ನಿಮ್ಮ ಆಯಸ್ಸು ವೃದ್ಧಿಯಾಗುತ್ತದೆ, ಯೋಗ ಮತ್ತು ವಿದ್ಯೆಯಿಂದಲೇ ನೀವು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ”

ಪ್ರಶ್ನೆ:: -

ಭಾರತವನ್ನು ಸ್ವರ್ಗವನ್ನಾಗಿ ಮಾಡಲು ತಂದೆಯು ಮಕ್ಕಳೊಂದಿಗೆ ಯಾವ ಸಹಾಯವನ್ನು ಕೇಳುತ್ತಾರೆ?

ಉತ್ತರ:-

ಮಕ್ಕಳೇ – ನನಗೆ ಪವಿತ್ರತೆಯ ಸಹಯೋಗ ಬೇಕಾಗಿದೆ. ನಾವು ಕಾಮ ವಿಕಾರವನ್ನು ಕಾಲಿನಿಂದೊಡೆದು ಅವಶ್ಯವಾಗಿ ಪವಿತ್ರರಾಗುತ್ತೇವೆಂದು ಪ್ರತಿಜ್ಞೆ ಮಾಡಿ. ಬೆಳಗ್ಗೆ-ಬೆಳಗ್ಗೆ ಎದ್ದು ತಮ್ಮೊಂದಿಗೆ ತಾವೇ ಮಾತನಾಡಿ – ಮಧುರ ಬಾಬಾ ನಾವು ನಿಮ್ಮ ಸಹಾಯಕ್ಕೋಸ್ಕರ ತಯಾರಾಗಿದ್ದೇವೆ. ನಾವು ಪವಿತ್ರರಾಗಿ ಭಾರತವನ್ನು ಅವಶ್ಯವಾಗಿ ಮಾಡುತ್ತೇವೆ. ನಾವು ನಿಮ್ಮ ಶಿಕ್ಷಣದನುಸಾರ ನಡೆಯುತ್ತೇವೆ. ಯಾವುದೇ ಪಾಪದ ಕೆಲಸವನ್ನು ಮಾಡುವುದಿಲ್ಲ. ಬಾಬಾ ನಿಮ್ಮದು ಕಮಾಲ್ ಆಗಿದೆ, ನಾವು ವಿಶ್ವದ ಮಾಲೀಕರಾಗುತ್ತೇವೆ ಎನ್ನುವುದು ಸ್ವಪ್ನದಲ್ಲಿಯೂ ಇರಲಿಲ್ಲ. ನೀವು ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡುತ್ತಿದ್ದೀರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಕರೆಯಲು ನನ್ನ ಮನ ಇಚ್ಚಿಸುತ್ತದೆ..

ಓಂ ಶಾಂತಿ. ಮುದ್ದು ಮಕ್ಕಳು ಇದನ್ನು ತಿಳಿದುಕೊಂಡಿದ್ದೀರಿ, ನಾವು ಆತ್ಮಗಳು ಒಬ್ಬ ಪ್ರಿಯತಮ ತಂದೆಯ ಪ್ರಿಯತಮೆಯರಾಗಿದ್ದೇವೆ. ಪ್ರಿಯತಮ ಮತ್ತು ಪ್ರಿಯತಮೆಯರ ಸಂಬಂಧ ಎಷ್ಟು ಸೂಕ್ಷ್ಮವಾಗಿರುತ್ತದೆ, ಆ ಶರೀರದ ಪ್ರಿಯತಮೆಯರು ಯಾರಿರುತ್ತಾರೆ, ಅವರು ಶರೀರದ ಮೇಲೆ ಪ್ರಿಯತಮೆಯರಾಗುತ್ತಾರೆ, ವಿಕಾರಕ್ಕೋಸ್ಕರ ಅಲ್ಲ. ಯಾರದೇ ವಿವಾಹವಾಗುತ್ತದೆ ಎಂದರೆ ಅವರು ಭಲೆ ಸ್ತ್ರೀ-ಪುರುಷ ಎಂದು ಕರೆಸಿಕೊಳ್ಳುತ್ತಾರೆ, ಆದರೆ ಅವರೂ ಸಹ ಪ್ರಿಯತಮ-ಪ್ರಿಯತಮೆಯರು ಒಬ್ಬರು ಇನ್ನೊಬ್ಬರನ್ನು ಪತಿತರನ್ನಾಗಿ ಮಾಡುವವರಾಗಿದ್ದಾರೆ. ಮೊದಲಿನಿಂದಲೇ ಅವರಿಗೆ ನಾವು ವಿಕಾರಿಗಳಾಗುತ್ತೇವೆ ಎಂದು ತಿಳಿದಿರುತ್ತದೆ. ಈಗ ನೀವು ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ಶಿವಬಾಬಾ ಎಲ್ಲಾ ಆತ್ಮಗಳಿಗೆ ಪ್ರಿಯತಮನಾಗಿದ್ದಾರೆ. ಎಲ್ಲರೂ ಅವರ ಪ್ರಿಯತಮೆಯರಾಗಿದ್ದಾರೆ. ಎಲ್ಲಾ ಭಕ್ತರು ಭಗವಂತನ ಪ್ರಿಯತಮೆಯರಾಗಿದ್ದಾರೆ ಆದರೆ ಭಕ್ತರಿಗೆ ಭಗವಂತನ ಪರಿಚಯವಿಲ್ಲ. ಭಗವಂತನನ್ನು ತಿಳಿಯದೇ ಇರುವ ಕಾರಣ ಅವರಿಂದ ಏನೂ ಶಕ್ತಿಯನ್ನು ಪಡೆಯಲಾಗುವುದಿಲ್ಲ. ಸಾಧು-ಸಂತ ಮುಂತಾದವರು ಪವಿತ್ರರಾಗಿರುತ್ತಾರೆಂದರೆ ಅವರಿಗೆ ಒಂದಲ್ಲ ಒಂದು ಅಲ್ಪಕಾಲಕ್ಕೋಸ್ಕರ ಸಿಗುತ್ತದೆ. ನೀವಂತೂ ಒಬ್ಬ ಪ್ರಿಯತಮನನ್ನೇ ನೆನಪು ಮಾಡುತ್ತೀರಿ. ಅವರೊಂದಿಗೆ ಬುದ್ಧಿಯೋಗವನ್ನು ಜೋಡಿಸಲಾಗುತ್ತದೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಪತಿತ ಪಾವನ ಸರ್ವ ಶಕ್ತಿವಂತನಾಗಿದ್ದಾರೆ. ಆ ತಂದೆಯೊಂದಿಗೆ ನೀವು ಯೋಗವನ್ನು ಜೋಡಿಸಿ ಶಕ್ತಿಯನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ಜ್ಞಾನವೇ ಬೇರೆಯಾಗಿದೆ, ಮಾಯೆಯ ಮೇಲೆ ವಿಜಯವನ್ನು ಪಡೆಯಲು ಶಕ್ತಿಯನ್ನು ಪಡೆದುಕೊಳ್ಳುತ್ತೀರಿ. ಇಂತಹ ವಿಶ್ವದ ಮಾಲೀಕರನ್ನಾಗಿ ಮಾಡುವ ಪ್ರಿಯತಮ ಯಾರಿದ್ದಾರೆ, ಅವರು ಎಷ್ಟೊಂದು ಮಧುರರಾಗಿದ್ದಾರೆ, ಯಾರು ತಂದೆಯನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ ಅವರೇ ತಿಳಿದುಕೊಂಡಿದ್ದಾರೆ ಎಷ್ಟು ಒಳ್ಳೆಯ ಪ್ರಿಯತಮನಾಗಿದ್ದಾರೆ, ಇವರನ್ನೇ ಅರ್ಧಕಲ್ಪದಿಂದ ಎಲ್ಲರೂ ನೆನಪು ಮಾಡುತ್ತಾರೆ. ಆ ಶರೀರದ ಪ್ರಿಯತಮ-ಪ್ರಿಯತಮೆಯರಂತು ಒಂದು ಜನ್ಮದವರಾಗಿರುತ್ತಾರೆ. ನೀವು ಅರ್ಧ ಕಲ್ಪ ನೆನಪು ಮಾಡಿದ್ದೀರಿ. ಈಗ ನೀವು ತಂದೆಯನ್ನು ಅರಿತುಕೊಂಡಿರುವುದರಿಂದ ನಿಮಗೆ ತುಂಬಾ ಶಕ್ತಿಯು ಸಿಗುತ್ತಿದೆ. ನೀವು ಶ್ರೀಮತದ ಮೇಲೆ ನಡೆದು ಸ್ವರ್ಗದ ಶ್ರೇಷ್ಠಾತಿ ಶ್ರೇಷ್ಠ ಮಾಲೀಕರಾಗುತ್ತೀರಿ. ಆತ್ಮವು ಪ್ರಿಯತಮೆಯಾಗುತ್ತದೆ, ಕರ್ತವ್ಯವನ್ನು ಸಹ ಆತ್ಮವೇ ಕರ್ಮೇಂದ್ರಿಯಗಳಿಂದ ಮಾಡುತ್ತದೆ.

ಈಗ ನೀವು ಮಕ್ಕಳಿಗೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆನ್ನುವ ಆಸಕ್ತಿಯು ತುಂಬಿದೆ. ವಿಷ (ವಿಕಾರ)ದ ಲೇವಾದೇವಿಗೋಸ್ಕರ ಯಾರು ಮಾಂಗಲ್ಯವನ್ನು ಕಟ್ಟುತ್ತಿದ್ದರು ಅದನ್ನು ತಂದೆಯು ಬಂದು ಈಗ ನಿಷೇಧ ಮಾಡಿದ್ದಾರೆ. ಈಗ ಹೇಳುತ್ತಾರೆ ಈ ಎಲ್ಲ ಮಾತುಗಳನ್ನು ಬಿಟ್ಟು ನನ್ನೊಬ್ಬನನ್ನು ನೆನಪು ಮಾಡಿ. ಶರೀರದ ಪ್ರಿಯತಮೆಗೂ ಸಹ ಪ್ರತಿ ಸಮಯ ತಿನ್ನುತ್ತಾ-ಕುಡಿಯುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ಪ್ರಿಯತಮನ ನೆನಪಿರುತ್ತದೆಯಲ್ಲವೆ. ಅವರಲ್ಲಿ ಕೆಟ್ಟ ಭಾವನೆ ಇರುವುದಿಲ್ಲ, ವಿಕಾರದ ಮಾತಿರುವುದಿಲ್ಲ. ಈಗ ನೀವು ಒಬ್ಬರನ್ನೇ ನೆನಪು ಮಾಡುತ್ತೀರಿ. ನೆನಪಿನ ಪುರುಷಾರ್ಥದನುಸಾರ ನೀವು ತಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳಬಲ್ಲಿರಿ. ತಿಳಿದುಕೊಳ್ಳಿ ಯಾರೇ ಬ್ರಾಹ್ಮಣರು ನಿಮ್ಮ ಆಯಸ್ಸು ಐವತ್ತು ವರ್ಷವಿದೆ ಎಂದು ಹೇಳುತ್ತಾರೆ ಅದಕ್ಕೆ ತಂದೆಯು ಹೇಳುತ್ತಾರೆ ನೀವೀಗ ಯೋಗಬಲದಿಂದ ತಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳಬಲ್ಲಿರಿ. ಎಷ್ಟು ಜಾಸ್ತಿ ಯೋಗದಲ್ಲಿರುತ್ತೀರಿ ಅಷ್ಟೂ ಆಯಸ್ಸು ಹೆಚ್ಚುವುದು. ನಂತರ ಭವಿಷ್ಯ ಜನ್ಮ ಜನ್ಮಾಂತರವು ಹೆಚ್ಚಿನ ಆಯಸ್ಸುಳ್ಳವರೇ ಆಗಿ ಬಿಡುತ್ತೀರಿ. ಯೋಗವಿಲ್ಲವೆಂದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ, ನಂತರ ಪದವಿಯೂ ಕಡಿಮೆಯಾಗಿ ಬಿಡುತ್ತದೆ. ಭಲೆ ಎಲ್ಲರೂ ಸುಖಿಗಳಾಗುತ್ತೀರಿ ಆದರೆ ಯೋಗ ಮತ್ತು ವಿದ್ಯೆಯ ಆಧಾರದಿಂದ. ಅಂತರವೆಲ್ಲವೂ ಪದವಿಯದಾಗಿರುತ್ತದೆಯಲ್ಲವೇ. ಎಷ್ಟು ಪುರುಷಾರ್ಥವೋ ಅಷ್ಟು ಶ್ರೇಷ್ಠ ಪದವಿ. ಧನವಂತೂ ನಂಬರ್ವಾರ್ ಇರುತ್ತದೆಯಲ್ಲವೇ. ಒಬ್ಬರ ತರಹ ಎಲ್ಲರೂ ಧನಿಕರಾಗಲು ಸಾಧ್ಯವಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ ಮಕ್ಕಳೇ ಎಷ್ಟಾದರೂ ಸರಿ ನನ್ನ ಮತದ ಮೇಲೆ ನಡೆಯಿರಿ. ಅರ್ಧ ಕಲ್ಪ ನೀವು ಅಸುರೀ ಮತದ ಮೇಲೆ ನಡೆಯುತ್ತೀರಿ, ಇದರಿಂದಲೇ ನಿಮ್ಮ ಆಯಸ್ಸು ಕಡಿಮೆಯಾಗಿ ಬಿಟ್ಟಿದೆ. ಭಲೆ ಎಷ್ಟೇ ದೊಡ್ಡ ಮನುಷ್ಯರಾಗಿರಲಿ ಇಂದು ಜನ್ಮವನ್ನು ಪಡೆದುಕೊಂಡರು, ನಾಳೆ ಸತ್ತು ಹೋದರು. ದಾನ ಪುಣ್ಯ ಮಾಡುವುದರಿಂದ ದೊಡ್ಡ ಮನೆಯಲ್ಲಿ ಜನ್ಮವು ಸಿಗುತ್ತದೆಯಲ್ಲವೇ. ಈಗ ತಂದೆಯು ನಿಮಗೆ ಅವಿನಾಶೀ ಜ್ಞಾನರತ್ನಗಳ ದಾನ ಕೊಟ್ಟು ಜೋಳಿಗೆಯನ್ನು ತುಂಬಿಸುತ್ತಿದ್ದಾರೆ. ನೀವು ತುಂಬಾ ಸಾಹುಕಾರರಾಗುತ್ತೀರಿ. ಈ ಅವಿನಾಶೀ ಜ್ಞಾನರತ್ನಗಳ ದಾನ ಎಂದಾದರೂ ಹೇಳಿ ಅಥವಾ ಆಸ್ತಿ ಎಂದಾದರೂ ಹೇಳಿ, ತಂದೆಯಿಂದ ಸಿಗುತ್ತಿದೆ. ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರೆಂದರೆ ನೀವು ನಂತರ ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ. ಭಗವಂತನಿಗೆ ನಾವು ಮಕ್ಕಳಾಗಿರುವುದರಿಂದ ಅವಶ್ಯವಾಗಿ ಭಗವಾನ್ ಭಗವತೀ ಪದವಿಯು ಸಿಗಬೇಕು. ಭಾರತದಲ್ಲಿ ಭಗವಾನ್ ನಾರಾಯಣ ಭಗವತಿ ಲಕ್ಷ್ಮಿ ಎನ್ನುವ ಗಾಯನವಿದೆ. ಹೊಸ ಪ್ರಪಂಚದಲ್ಲಿ ಭಗವಾನ್ ಭಗವತಿಯೇ ರಾಜ್ಯ ಮಾಡುತ್ತಾರೆ ಏಕೆಂದರೆ ಭಗವಂತನ ಮುಖಾಂತರ ಪದವಿಯು ಸಿಕ್ಕಿದೆ. ಆದರೆ ತಂದೆಯು ತಿಳಿಸುತ್ತಾರೆ ಒಂದು ವೇಳೆ ಇವರನ್ನು ಭಗವಾನ್ ಭಗವತಿ ಎಂದು ಹೇಳಿದ್ದೇ ಆದರೆ ‘ಯಥಾ ರಾಜಾ ರಾಣಿ ತಥಾ ಪ್ರಜಾ’ ಪ್ರಜೆಗಳನ್ನೂ ಸಹ ಭಗವಾನ್-ಭಗವತಿ ಎಂದು ಹೇಳ ಬೇಕಾಗುತ್ತದೆ ಆದ್ದರಿಂದ ಇವರನ್ನು ದೇವೀ-ದೇವತೆಗಳೆಂದು ಹೇಳಲಾಗಿದೆ.

ನಾವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ. ಪರಮಪಿತ ಪರಮಾತ್ಮನ ಶ್ರೀಮತದ ಮುಖಾಂತರ ನಾವು ರಾಜಯೋಗವನ್ನು ಕಲಿಯುತ್ತೇವೆ. ನಂತರ ರಾಜ್ಯ ಭಾಗ್ಯವನ್ನು ಪಡೆಯುತ್ತೇವೆ. ಪರಮಾತ್ಮನೇ ಸ್ವರ್ಗದ ಸ್ಥಾಪನೆ ಮಾಡುವುದರಿಂದ ಅವಶ್ಯವಾಗಿ ನರಕದಲ್ಲೇ ಬರಬೇಕಾಗುತ್ತದೆ, ಆಗಲೇ ನರಕವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಯಾರು ಕಲ್ಪದ ಹಿಂದೆ ಆಗಿದ್ದರೋ ಅವರೇ ಆಗುತ್ತಾರೆ. ಎಲ್ಲರೂ ಏಕರಸವಾಗಿರುವುದಿಲ್ಲ, ನಂಬರ್ವಾರ್ ಪುರುಷಾರ್ಥ ಮಾಡುತ್ತಾರೆ. ಇಂದಿನ ಕಾಲದಲ್ಲಂತೂ ಮಕ್ಕಳು ಧೈರ್ಯ ಮಾಡಿ ಪಾನ್ಬೀಡ ತೆಗೆದುಕೊಳ್ಳುತ್ತಾರೆ ಆದ್ದರಿಂದ ಕೆಲವರು ಹೇಳುತ್ತಾರೆ ಬಾಬಾ ಇಂತಹ ಮಗುವಿಗೆ ತುಂಬಾ ಪೆಟ್ಟು ಬೀಳುತ್ತದೆ ಆದ್ದರಿಂದ ನಾವು ಅವರನ್ನು ಬಚಾವ್ ಮಾಡಲು ದಂಪತಿಗಳಾಗುತ್ತೇವೆ. ಅದಕ್ಕೆ ತಂದೆಯು ಹೇಳುತ್ತಾರೆ, ಒಳ್ಳೆಯದು – ಇದಂತೂ ಸರಿಯಾಗಿದೆ ಆದರೆ ನಿಮ್ಮಲ್ಲಿ ಜ್ಞಾನದ ತಾಕತ್ತು ಇರಬೇಕು, ಧಾರಣೆ ಇರಬೇಕು. ಎಷ್ಟು ಮಂದಿಯನ್ನು ವಾರಸುದಾರರು ಮತ್ತು ಪ್ರಜೆಗಳನ್ನಾಗಿ ಮಾಡುತ್ತೀರಿ, ಮುಳ್ಳುಗಳನ್ನು ಹೂವುಗಳನ್ನಾಗಿ ಮಾಡುವ ಸೇವೆ ಮಾಡುತ್ತೀರಿ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಎಷ್ಟು ಪರಿಶ್ರಮ ಪಡಬೇಕಾಗುತ್ತದೆ. ಹೀಗೆ ಅನೇಕರು ವಿದೇಶದಲ್ಲಿಯೂ ಇರುತ್ತಾರೆ. ಸಂಗಾತಿಯಾಗಿರುತ್ತಾರೆ, ಪವಿತ್ರರಾಗಿರುತ್ತಾರೆ. ನಂತರ ಎಲ್ಲಾ ಸಂಪತ್ತನ್ನು ಸ್ತ್ರೀಗೆ ಕೊಟ್ಟು ಬಿಡುತ್ತಾರೆ ಅಥವಾ ಆಶ್ರಮಗಳಿಗೆ ಕೊಟ್ಟು ಬಿಡುತ್ತಾರೆ. ಈಗ ನೀವು ಮಕ್ಕಳಿಗೆ ಪರಮಪಿತ ಪರಮಾತ್ಮ ಪ್ರಿಯತಮ ಸಿಕ್ಕಿದ್ದಾರೆ, ಅವರು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಂದರೆ ಅವರ ನೆನಪು ಬಹಳಷ್ಟಿರಬೇಕು. ಇಂತಹ ತಂದೆಯನ್ನು ನೀವು ತುಂಬಾ ನೆನಪು ಮಾಡಬೇಕು. ನೀವೇ ತಂದೆಯನ್ನು ಅರಿತುಕೊಂಡಿದ್ದೀರಿ, ಮತ್ಯಾವುದೇ ಸಾಧು-ಸಂತ ಮುಂತಾದವರು ತಂದೆಯನ್ನು ಅರಿತುಕೊಂಡಿಲ್ಲ. ಇಲ್ಲಿ ತಂದೆಯು ಮಕ್ಕಳ ಸಮ್ಮುಖದಲ್ಲಿ ಕುಳಿತಿದ್ದಾರೆ. ಈ ಸಮಯದಲ್ಲಿ ಮನುಷ್ಯರು ಭಲೇ ಪವಿತ್ರರಾಗಿರಬಹುದು ಆದರೆ ಅವರಿಗೆ ಪವಿತ್ರತೆಯ ಶಕ್ತಿಯು ಸಿಗಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ಪತಿತ ಪಾವನ ತಂದೆಯಿಂದ ಪವಿತ್ರತೆಯ ಶಕ್ತಿಯು ಸಿಗುತ್ತದೆ ಆದರೆ ಅವರಿಗೆ ಸಿಗುವುದಿಲ್ಲ ಏಕೆಂದರೆ ಅವರು ತಂದೆಯನ್ನು ಅರಿತುಕೊಂಡಿಲ್ಲ. ಆತ್ಮನೇ ಪರಮಾತ್ಮ ಅಥವಾ ಬ್ರಹ್ಮನೇ ಪರಮಾತ್ಮನಾಗಿದ್ದಾರೆ ಎಂದು ಹೇಳಿ ಬಿಡುತ್ತಾರೆ. ಅನೇಕಾನೇಕ ಮತ-ಮತಾಂತರಗಳಿದೆ. ಇಲ್ಲಿ ನಿಮ್ಮೆಲ್ಲರದೂ ಒಂದೇ ಅದ್ವೈತ ಮತವಾಗಿದೆ. ತಂದೆಯ ಮುಖಾಂತರ ಮನುಷ್ಯರಿಂದ ದೇವತೆಯಾಗುವಂತಹ ಮತವು ಸಿಗುತ್ತದೆ. ಅವಶ್ಯವಾಗಿ ಮನುಷ್ಯನಿಂದ ದೇವತೆಯಾಗುವುದರಲ್ಲಿ ನಿಧಾನವಾಗುವುದಿಲ್ಲ. ತಂದೆಯು ಕೊಳಕಾಗಿರುವ ಮನುಷ್ಯರನ್ನು ಬಂದು ಪವಿತ್ರರನ್ನಾಗಿ ಮಾಡುತ್ತಾರೆ. ಮಹಿಮೆಯಂತೂ ಇದೆಯಲ್ಲವೆ. ಬಾಕಿ ಶಾಸ್ತ್ರಗಳನ್ನು ಕೇಳುತ್ತಾ, ಓದುತ್ತಾ ಬಂದಿದ್ದೀರಿ ಆದರೆ ಅದರಿಂದ ಯಾವುದೇ ಫಲವು ಸಿಗಲಿಲ್ಲ. ಈಗ ತಂದೆಯು ಬಂದಿರುವುದರಿಂದ ಅವರ ಸತ್ಯ ಸತ್ಯ ಪ್ರಿಯತಮೆಯರಾಗಬೇಕು. ಬುದ್ಧಿಯೋಗವು ಮತ್ತೆಲ್ಲೂ ಅಲೆದಾಡಬಾರದು. ಭಲೆ ಗೃಹಸ್ಥ ವ್ಯವಹಾರದಲ್ಲಿರಿ ಆದರೆ ಕಮಲಪುಷ್ಪ ಸಮಾನವಾಗಿರಿ. ಭಕ್ತಿಮಾರ್ಗದಲ್ಲಿ ಕೆಲವರು ಹನುಮಂತನನ್ನು, ಕೆಲವರು ಗಣೇಶನನ್ನು, ಕೆಲವರು ಇನ್ನೊಬ್ಬರನ್ನು ಹಿಡಿದುಕೊಂಡು ಬಂದಿದ್ದಾರೆ ಆದರೆ ಅವರ್ಯಾರೂ ಭಗವಂತನಲ್ಲ. ಭಲೆ ಶಿವಬಾಬಾರವರ ಹೆಸರು ನೆನಪಿದೆ ಆದರೆ ಅರಿತುಕೊಂಡಿಲ್ಲ. ಪರಮಾತ್ಮನನ್ನು ಕಲ್ಲು-ಮುಳ್ಳಲ್ಲಿ ಹಾಕಿ ಬಿಟ್ಟಿದ್ದಾರೆ. ಇಡೀ ಸೂತ್ರವೇ ಗಂಟಾಗಿ ಬಿಟ್ಟಿದೆ, ತಂದೆಯ ವಿನಃ ಯಾರೂ ಬಿಡಿಸಲು ಸಾಧ್ಯವಿಲ್ಲ. ಭಗವಂತನು ಯಾರಿಗೂ ಸಿಗುವುದಿಲ್ಲ. ಯಾವಾಗ ಭಕ್ತಿಯು ಪೂರ್ತಿಯಾಗುತ್ತದೆ ಆಗ ನಾನು ಬರುತ್ತೇನೆ ಎಂದು ಸ್ವಯಂ ಭಗವಂತನೇ ಹೇಳುತ್ತಾರೆ. ಅರ್ಧಕಲ್ಪ ಭಕ್ತಿಮಾರ್ಗವು ನಡೆಯುತ್ತದೆ, ದಿನ ಮತ್ತು ರಾತ್ರಿ. ಪ್ರಾರಂಭದಲ್ಲಿಯೂ ಸಹ ಮೊದ ಮೊದಲು ಪ್ರವೇಶತೆಯಾದಾಗ ಚಿಕ್ಕ ಮಕ್ಕಳ ತರಹ ಗೋಡೆಗಳ ಮೇಲೆ ಚಕ್ರಗಳ ರೀತಿಯಲ್ಲಿ ಬರೆಯುತ್ತಿದ್ದೆವು. ಏನೂ ಅರ್ಥವಾಗುತ್ತಿರಲಿಲ್ಲ. ನಾವು, ನೀವು ಎಲ್ಲರೂ ಮಕ್ಕಳಾಗಿದ್ದೆವು, ನಂತರ ನಿಧಾನ ನಿಧಾನವಾಗಿ ಬುದ್ಧಿಯಲ್ಲಿ ಬರತೊಡಗಿತು. ಈಗ ನೀವು ಓದಿ ಬುದ್ಧಿವಂತರಾಗುತ್ತೀರೆಂದರೆ ಸಂಪೂರ್ಣ ಸಹಜ ರೀತಿಯಲ್ಲಿ ತಿಳಿಸಬಲ್ಲಿರಿ. ಇವರು ತುಂಬಾ ಹಳೆಯ ಮಕ್ಕಳಾಗಿದ್ದಾರೆ ಆದ್ದರಿಂದ ನಮಗಿಂತ ಬುದ್ಧಿವಂತರಾಗಿದ್ದಾರೆ, ನಾವಂತೂ ಇಷ್ಟೊಂದು ಓದಲಾಗುವುದಿಲ್ಲ ಎಂದು ತಿಳಿಯಬಾರದು. ಬಾಬಾ ಹೇಳುತ್ತಾರೆ – ಅಂತ್ಯದಲ್ಲಿ ಬರುವವರು ತುಂಬಾ ಮುಂದೆ ಹೋಗುತ್ತಾರೆ. ನಿಧಾನವಾಗಿ ಬರುವವರು ದಿನ-ರಾತ್ರಿ ಯೋಗದಲ್ಲಿ ಮುಳುಗಿ ಹೋಗುತ್ತಾರೆ. ದಿನ ಪ್ರತಿದಿನ ತುಂಬಾ ಒಳ್ಳೊಳ್ಳೆಯ ವಿಷಯಗಳು ಸಿಗುತ್ತಿರುತ್ತವೆ. ಪರಮಪಿತ ಪರಮಾತ್ಮ ಸ್ವರ್ಗದ ರಚಯಿತನಾಗಿರುವುದರಿಂದ ಅವರಿಂದ ಆಸ್ತಿಯನ್ನು ಪಡೆಯಬೇಕಲ್ಲವೆ. ಆಸ್ತಿಯು ಸತ್ಯಯುಗದಲ್ಲಿತ್ತು, ಈಗಿಲ್ಲ, ಆದ್ದರಿಂದಲೇ ತಂದೆಯು ಪುನಃ ಕೊಡಲು ಬಂದಿದ್ದಾರೆ. ಮಕ್ಕಳಿಗೆ ಅರ್ಥವಾಗಲಿ ಮತ್ತು ಯೋಗದಲ್ಲಿ ತೊಡಗಲಿ ಎಂದು ಎಷ್ಟೊಂದು ಉಪಾಯಗಳನ್ನು ಮಾಡಬೇಕಾಗುತ್ತದೆ. ಆದರೆ ಕೆಲವರು ನಮಗೆ ಸಮಯವಿಲ್ಲವೆಂದು ಹೇಳುತ್ತಾರೆ. ಈ ನೆನಪಿನಿಂದಲೇ ನೀವು ಸದಾಕಾಲಕ್ಕೆ ನಿರೋಗಿಗಳಾಗುತ್ತೀರಿ ಆದ್ದರಿಂದ ಈ ವ್ಯಾಪಾರದಲ್ಲಿ ತೊಡಗಬೇಕಲ್ಲವೆ. ಇದರಲ್ಲಿ ಸ್ಥೂಲವಾದದ್ದು ಏನೂ ಮಾಡಬೇಕಾಗಿಲ್ಲ. ಲೌಕಿಕ ತಂದೆಯ ನೆನಪಿರುತ್ತದೆ, ಪಾರಲೌಕಿಕ ತಂದೆಯನ್ನೇಕೆ ಮರೆತು ಬಿಡುತ್ತೀರಿ! ತಂದೆಯು ಹೇಳುತ್ತಾರೆ – ನೀವು ಭಾರತವಾಸಿಗಳಿಗೆ ಐದು ಸಾವಿರ ವರ್ಷಗಳ ಹಿಂದೆಯೂ ಆಸ್ತಿಯನ್ನು ಕೊಟ್ಟಿದ್ದೆನಲ್ಲವೆ. ನೀವು ವಿಶ್ವದ ಮಾಲೀಕರಾಗಿದ್ದಿರಿ – ಇದನ್ನು ಮರೆತು ಹೋಗಿದ್ದೀರಾ? ನೀವು ಸೂರ್ಯವಂಶೀ ಆಗಿದ್ದಿರಿ, ನಂತರ ಚಂದ್ರವಂಶಿ, ವೈಶ್ಯವಂಶಿಗಳಾದಿರಿ. ಈಗ ಮತ್ತೆ ಬ್ರಾಹ್ಮಣವಂಶಿಯರನ್ನಾಗಿ ಮಾಡಲು ಬಂದಿದ್ದೇನೆ. ಕೇವಲ ಬ್ರಾಹ್ಮಣರಾದಾಗ ಯಜ್ಞದ ಸಂಭಾಲನೆ ಮಾಡುತ್ತೀರಿ. ಬ್ರಾಹ್ಮಣರು ಎಂದೂ ವಿಕಾರಿಗಳಾಗಲು ಸಾಧ್ಯವಿಲ್ಲ. ಅಂತ್ಯದ ತನಕ ಪವಿತ್ರರಾಗಿರಲೇಬೇಕಾಗಿದೆ, ಆಗಲೇ ಹೊಸ ಪ್ರಪಂಚದ ಮಾಲೀಕರಾಗುತ್ತೀರಿ. ಎಷ್ಟು ದೊಡ್ಡ ಪ್ರಾಪ್ತಿ ಇದೆ. ನೀವು ತಂದೆಯನ್ನು ನೆನಪು ಮಾಡುವುದಿಲ್ಲವೇ? ತಂದೆಯ ಮಗುವಾಗಿ ಮತ್ತೆ ತಂದೆಯನ್ನು ನೆನಪು ಮಾಡದೇ ಇರುವುದು – ಹೀಗೆ ಎಂದೂ ಆಗಲು ಸಾಧ್ಯವಿಲ್ಲ. ತಂದೆಯನ್ನು ಮರೆಯುತ್ತೀರೆಂದರೆ ಆಸ್ತಿಯು ಹೇಗೆ ಸಿಗುತ್ತದೆ? ಇದು ಸಂಪಾದನೆಯಾಗಿದೆಯಲ್ಲವೆ. ಸಾಧು-ಸಂತರ ಬಳಿಯಂತೂ ಏನೂ ಪ್ರಾಪ್ತಿ ಇಲ್ಲ. ಕೇವಲ ಪವಿತ್ರತೆಯ ಬಲವಿದೆ ಆದರೆ ಈಶ್ವರೀಯ ಬಲವಿಲ್ಲ. ಈಶ್ವರನನ್ನು ಅರಿತುಕೊಂಡೇ ಇಲ್ಲವೆಂದರೆ ಬಲ ಸಿಗುವುದಾದರೂ ಹೇಗೆ? ನಿಮಗೆ ಬಲವು ಸಿಕ್ಕಿದೆ. ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ನೀವು ಸ್ವಲ್ಪ ಸಮಯಕ್ಕೋಸ್ಕರ ಪವಿತ್ರರಾಗಿರಲು ಸಾಧ್ಯವಿಲ್ಲವೇ? ಕ್ರೋಧವು ಎರಡನೇ ನಂಬರ್ನ ಭೂತವಾಗಿದೆ. ದೊಡ್ಡದಕ್ಕಿಂತ ದೊಡ್ಡ ಭೂತವು ಕಾಮದ ಭೂತವಾಗಿದೆ. ಸತ್ಯಯುಗದಲ್ಲಿ ಭಾರತವು ನಿರ್ವಿಕಾರಿಯಾಗಿತ್ತು, ಎಷ್ಟೊಂದು ಸುಖಿಯಾಗಿತ್ತು. ವಿಕಾರಿಯಾಗಿರುವುದರಿಂದ ಈಗ ಭಾರತದ ಸ್ಥಿತಿಯು ಏನಾಗಿ ಬಿಟ್ಟಿದೆ! ತಂದೆಯು ಪುನಃ ಭಾರತವನ್ನು ನಿರ್ವಿಕಾರಿಯನ್ನಾಗಿ ಮಾಡಲು ಬಂದಿದ್ದಾರೆ ಆದ್ದರಿಂದ ಇಂತಹ ತಂದೆಯನ್ನು ನೆನಪು ಮಾಡುವುದನ್ನು ನೀವು ಮರೆಯುತ್ತೀರಾ? ಮಾಯೆಯು ತಕ್ಷಣ ವಿಕರ್ಮವನ್ನು ಮಾಡಿಸಿ ಬಿಡುತ್ತದೆ! ತುಂಬಾ ದೊಡ್ಡ ಗುರಿಯಾಗಿದೆ. ನೀವು ಇಂತಹ ತಂದೆಯ ಶ್ರೀಮತದ ಮೇಲೆ ನಡೆಯುವುದಿಲ್ಲವೇ! ಇಂತಹ ತಂದೆಯೊಂದಿಗೆ ಪ್ರೀತಿ ಇಲ್ಲವೆ! ಕೆಲವರು ಮರೆತು ಹೋಗುತ್ತೇವೆಂದು ಹೇಳುತ್ತಾರೆ, ಒಳ್ಳೆಯದು. ಒಂದು ಗಳಿಗೆ, ಅರ್ಧ ಗಳಿಗೆ…… ಕೊನೆಪಕ್ಷ ಪ್ರಯತ್ನ ಪಡುತ್ತೀರೆಂದರೆ ಅದರಿಂದ ಅಂತ್ಯದಲ್ಲಿ ತಂದೆಯ ನೆನಪೇ ಇರಬೇಕು. ಇದು ಅಂತ್ಯಕಾಲವಾಗಿದೆಯಲ್ಲವೆ. ತಂದೆಯು ಹೇಳುತ್ತಾರೆ – ಪೂರ್ಣ ಪ್ರಿಯತಮೆಯರಾದರೂ ಆಗಬೇಕಲ್ಲವೆ. ತಂದೆಯು ದಾತಾ ಆಗಿದ್ದಾರೆ. ತಂದೆಯನ್ನು ತಮ್ಮವರನ್ನಾಗಿ ಮಾಡಿಕೊಂಡಾಗ ತಂದೆಯು ಸಲಹೆ ಅಥವಾ ಮತವನ್ನು ಕೊಡುತ್ತಾರೆ. ಮಲತಾಯಿ ಮಕ್ಕಳಿಗೆ ಮತವನ್ನು ಕೊಡುವುದಿಲ್ಲ. ತಂದೆಯು ದಾತಾ ಆಗಿದ್ದಾರೆ. ನಿಮ್ಮಿಂದ ಏನಾದರೂ ತೆಗೆದುಕೊಳ್ಳುತ್ತಾರೆಯೇ? ನೀವು ಏನೆಲ್ಲಾ ಮಾಡುತ್ತೀರಿ ಅದನ್ನು ತಮಗೋಸ್ಕರವೇ ಮಾಡುತ್ತೀರಿ. ನಾನಂತೂ ವಿಶ್ವದ ಮಾಲೀಕನೂ ಆಗುವುದಿಲ್ಲ. ನಾವು ಶಿವಬಾಬಾರವರಿಗೆ ದಾನ ಕೊಡುತ್ತೇವೆಂದು ಎಂದೂ ತಿಳಿಯಬಾರದಾಗಿದೆ. ಶಿವಬಾಬಾರವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಸಾಯುವ ಸಮಯದಲ್ಲಿ ದಾನ ಮಾಡಿಸುತ್ತಾರಲ್ಲವೆ. ಕಾರ್ಯ ಮಾಡುವವರಿಗೆ ಎಲ್ಲವನ್ನೂ ಕೊಟ್ಟು ಬಿಡುತ್ತಾರೆ. ನಿಮ್ಮ ಹತ್ತಿರ ಇರುವುದಾದರೂ ಏನು? ಕಲ್ಲು, ಬೇಡದೇ ಇರುವ ವಸ್ತುವನ್ನು ಪರಮಾತ್ಮನಿಗೆ ದಾನ ಮಾಡುತ್ತೀರಿ! ನಿಮ್ಮದೆಲ್ಲವೂ ಸಮಾಪ್ತಿಯಾಗುವುದಿದೆ. ಸಾಯುವುದಕ್ಕೆ ಹೆದರುವುದಿಲ್ಲ ತಾನೆ! ತಂದೆಯು ಹೇಳುತ್ತಾರೆ. ಈ ಪತಿತ ಪ್ರಪಂಚಕ್ಕಿಂತ ಸಾಯುವುದೇ ಒಳ್ಳೆಯದಾಗಿದೆ. ಐದು ಸಾವಿರ ವರ್ಷಗಳ ಹಿಂದೆಯೂ ಸಹ ಸೊಳ್ಳೆಗಳ ರೀತಿಯಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗಿದ್ದೆನು. ನಾನು ನಿಮ್ಮ ಕಾಲರಕಾಲ ತಂದೆಯೂ ಆಗಿದ್ದೇನೆ. ನಿಮ್ಮನ್ನು ಅರ್ಧಕಲ್ಪಕ್ಕಾಗಿ ಕಾಲದ ಪಂಜರದಿಂದ ಬಿಡಿಸುತ್ತೇನೆ. ಅಲ್ಲಂತೂ ಆತ್ಮವು ಸ್ವತಂತ್ರವಾಗಿರುತ್ತದೆ. ಯಾವಾಗ ಶರೀರವು ಹಳೆಯದಾದರೆ ಆಗ ಅದನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತದೆ. ಈಗಲೂ ಸಹ ಬಾಬಾನ ಹತ್ತಿರ ಹೋಗಬೇಕೆಂದರೆ ಬೆಳಗ್ಗೆ ಎದ್ದು ಬಾಬಾನೊಂದಿಗೆ ಮಾತನಾಡಿ. ಬಾಬಾ ನಿಮ್ಮದಂತೂ ಕಮಾಲ್ ಆಗಿದೆ. ನೀವು ಬಂದು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೀರೆನ್ನುವುದು ಸ್ವಪ್ನದಲ್ಲಿಯೂ ಇರಲಿಲ್ಲ. ನಾವು ಸಂಪೂರ್ಣ ಘೋರ ಅಂಧಕಾರದಲ್ಲಿದ್ದೆವು. ಬಾಬಾ ನಿಮ್ಮದು ಕಮಾಲ್ ಆಗಿದೆ. ನಿಮ್ಮ ಶಿಕ್ಷಣದ ಮೇಲೆ ಅವಶ್ಯವಾಗಿ ನಡೆಯುತ್ತೇವೆ. ಯಾವುದೇ ಪಾಪದ ಕೆಲಸವನ್ನು ಮಾಡುವುದಿಲ್ಲ. ಕಾಮದ ಭೂತಕ್ಕೆ ಮೊದಲು ಕಾಲಿನಿಂದ ಒದೆಯುತ್ತೇವೆ. ತಂದೆಯು ಹೇಳುತ್ತಾರೆ ಮಕ್ಕಳೇ ಪವಿತ್ರತೆಯ ಪ್ರತಿಜ್ಞೆ ಮಾಡಿ. ಬಾಬಾ, ಮಧುರ ಬಾಬಾ ನಾವು ನಿಮಗೆ ಸಹಯೋಗ ಕೊಡಲು ತಯಾರಾಗಿದ್ದೇವೆ…. ಹೀಗೀಗೆ ಮಾತನಾಡಬೇಕಾಗುತ್ತದೆ. ಹೇಗೆ ಬಾಬಾ ಪುರುಷಾರ್ಥ ಮಾಡುತ್ತಾರೆ, ಅದನ್ನೇ ಮಕ್ಕಳಿಗೆ ತಿಳಿಸುತ್ತಾರೆ. ಬಾಬಾ ನಾವು ಅಶರೀರಿಯಾಗಿ ಬಂದಿದ್ದೇವೆ, ಈಗ ನೆನಪಾಯಿತು… ಈ ಹಳೆಯ ಪ್ರಪಂಚವನ್ನು ಮರೆಯುವ ಪುರುಷಾರ್ಥ ಮಾಡಬೇಕಾಗಿದೆ. ಶಿವಬಾಬಾರವರಿಗೆ ಇಷ್ಟೊಂದು ಜನ ಮಕ್ಕಳಿದ್ದಾರೆ ಆದ್ದರಿಂದ ಚಿಂತೆಯಂತೂ ಇರುತ್ತದೆಯಲ್ಲವೆ! ಬ್ರಹ್ಮಾ ತಂದೆಗೂ ಸಹ ಚಿಂತೆಯಿರುತ್ತದೆಯಲ್ಲವೆ! ಇಷ್ಟೊಂದು ಮಕ್ಕಳಿದ್ದಾರೆ, ಮಕ್ಕಳು ಸಂಪೂರ್ಣ ಆರಾಮವಾಗಿರಲಿ ಎಂದು ಎಷ್ಟೊಂದು ಸಂಭಾಲನೆ ಮಾಡಬೇಕಾಗುತ್ತದೆ. ಇಲ್ಲಿ ನೀವು ಈಶ್ವರನ ಮನೆಯಲ್ಲಿದ್ದೀರಲ್ಲವೆ. ಯಾವುದೇ ಸಂಘ ದೋಷವಿಲ್ಲ. ತಂದೆಯು ಸಮ್ಮುಖದಲ್ಲಿ ಕುಳಿತಿದ್ದಾರೆ. ನಿಮ್ಮೊಂದಿಗೆ ತಿನ್ನುತ್ತೇನೆ, ನಿಮ್ಮ ಜೊತೆಯೇ ಕುಳಿತುಕೊಳ್ಳುತ್ತೇನೆ… ನೀವು ತಿಳಿದುಕೊಂಡಿದ್ದೀರಿ ಶಿವಬಾಬಾ ಇವರಲ್ಲಿ ಬಂದು ಮಗು ಮಗು ಎಂದು ಹೇಳುತ್ತಾರೆ. ತಂದೆಯು ಹೇಳುತ್ತಾರೆ ನನ್ನ ಮುದ್ದು ಮಕ್ಕಳು ಪ್ರತಿಜ್ಞೆ ಮಾಡಿ ಎಂದೂ ವಿಕಾರದಲ್ಲಿ ಹೋಗಬಾರದು. ನನಗೆ ಪವಿತ್ರತೆಯ ಸಹಯೋಗ ಕೊಡಿ ಆಗ ಭಾರತವನ್ನು ಪವಿತ್ರವನ್ನಾಗಿ ಮಾಡುತ್ತೇನೆ. ಸಾಹಸ ಮಕ್ಕಳದು ಸಹಯೋಗವು ತಂದೆಯದು… ಇದು ನೆನಪಿಗೆ ಬರುವುದಿಲ್ಲವೆ! ಕಲ್ಪಕಲ್ಪವು ನಾನು ಇದೇ ವ್ಯಾಪಾರ ಮಾಡುತ್ತೇನೆ, ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ. ಯಾರು ಪರಿಶ್ರಮ ಪಡುತ್ತಾರೆ ಅವರೇ ಸ್ವರ್ಗದ ಮಾಲೀಕರಾಗುತ್ತಾರೆ. ಕಾಂಗ್ರೆಸ್ನವರು ಗಾಂಧೀಜಿಯವರಿಗೆ ಎಷ್ಟು ಸಹಯೋಗ ಕೊಟ್ಟರು. ಈಗ ನೋಡಿ ರಾಜ್ಯವಂತೂ ಸಿಕ್ಕಿತು… ಆದರೆ ರಾಮ ರಾಜ್ಯವಂತೂ ಆಗಿಲ್ಲ. ದಿನ ಪ್ರತಿದಿನ ಇನ್ನೂ ತಮೋಪ್ರಧಾನವಾಗುತ್ತಲೇ ಹೋಗುತ್ತಾರೆ. ಈಗ ತಂದೆಯು ಬಂದು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಅರ್ಧ ಕಲ್ಪ ನೀವು ಸುಖಿಯಾಗಿರುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸತ್ಯ ಸತ್ಯ ಪ್ರಿಯತಮೆಯರಾಗಬೇಕಾಗಿದೆ. ಬುದ್ಧಿಯೋಗವನ್ನು ಒಬ್ಬ ಪ್ರಿಯತಮನೊಂದಿಗೆ ಜೋಡಿಸಬೇಕಾಗಿದೆ. ಬುದ್ಧಿಯು ಅಲ್ಲಿ-ಇಲ್ಲಿ ಅಲೆದಾಡಬಾರದು, ಇದರ ಮೇಲೆ ಗಮನ ಕೊಡಬೇಕಾಗಿದೆ.

2. ಪ್ರಾಪ್ತಿಯನ್ನು ಮುಂದಿಟ್ಟುಕೊಂಡು ತಂದೆಯನ್ನು ನಿರಂತರ ನೆನಪು ಮಾಡಬೇಕಾಗಿದೆ. ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಭಾರತವನ್ನು ಸ್ವರ್ಗವನ್ನಾಗಿ ಮಾಡುವ ವ್ಯಾಪಾರ ಮಾಡಬೇಕಾಗಿದೆ.

ವರದಾನ:-

ಯಾರು ಮಹಾವೀರನಾಗಿದ್ದಾರೆಯೋ ಅವರೆಂದಿಗೂ ಕಾರಣಗಳನ್ನು ಉಂಟು ಮಾಡಲು ಸಾಧ್ಯವಿಲ್ಲ – ಸಂದರ್ಭವೇ ಹೀಗಿತ್ತು, ಸಮಸ್ಯೆಯೇ ಹೀಗಿತ್ತು ಆದ್ದರಿಂದ ಸೋತೆನು. ಸಮಸ್ಯೆಯ ಕೆಲಸ ಬರುವುದು ಮತ್ತು ಮಹಾವೀರರ ಕೆಲಸ ಸಮಸ್ಯೆಗೆ ಸಮಾಧಾನ ಕೊಡುವುದೇ ಹೊರತು ಸೋಲುವುದಲ್ಲ. ಯಾರು ಸದಾ ನಿರ್ಭಯರಾಗಿದ್ದು ವಿಜಯಿಯಾಗುವರು, ಚಿಕ್ಕ ಪುಟ್ಟ ಮಾತುಗಳಲ್ಲಿ ಬಲಹೀನರಾಗುವುದಿಲ್ಲವೋ ಅವರೇ ಮಹಾವೀರರು. ಮಹಾವೀರ ವಿಜಯಿ ಆತ್ಮರು ಪ್ರತೀ ಹೆಜ್ಜೆಯಲ್ಲಿಯೂ ತನುವಿನಿಂದ, ಮನಸ್ಸಿನಿಂದ ಖುಷಿಯಾಗಿರುತ್ತಾರೆ, ಅವರೆಂದಿಗೂ ಬೇಸರದಿಂದ ಇರುವುದಿಲ್ಲ, ಅವರ ಬಳಿ ದುಃಖ ಪ್ರಕಂಪನಗಳು ಸ್ವಪ್ನದಲ್ಲಿಯೂ ಬರಲು ಸಾಧ್ಯವಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top