18 June 2022 KANNADA Murli Today | Brahma Kumaris
Read and Listen today’s Gyan Murli in Kannada
17 June 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - 21 ಜನ್ಮಗಳಿಗೆ ಸ್ವರಾಜ್ಯವನ್ನು ಪಡೆಯಬೇಕೆಂದರೆ ದೇಹಸಹಿತ ದೇಹ ಎಲ್ಲಾ ಪರಿವೆಯನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಿ”
ಪ್ರಶ್ನೆ:: -
ಬಡಮಕ್ಕಳ ಯಾವ ಬುದ್ಧಿವಂತಿಕೆಯಿಂದ ತಂದೆಯು ಖುಷಿಯಾಗುತ್ತಾರೆ, ಅವರಿಗೆ ಯಾವ ಸಲಹೆಯನ್ನು ಕೊಡುತ್ತಾರೆ?
ಉತ್ತರ:-
ಬಡಮಕ್ಕಳು ತಮ್ಮ ಬಳಿಯಿರುವ ಕವಡೆಗಳನ್ನು ತಂದೆಯ ಸೇವೆಯಲ್ಲಿ ಸಫಲ ಮಾಡಿ ಭವಿಷ್ಯ 21 ಜನ್ಮಕ್ಕಾಗಿ ತಮ್ಮ ಭಾಗ್ಯವನ್ನು ಜಮಾ ಮಾಡಿಕೊಳ್ಳುತ್ತಾರೆ. ತಂದೆಯು ಅಂತಹ ಮಕ್ಕಳ ಬುದ್ಧಿವಂತಿಕೆಯಿಂದ ಬಹಳ ಖುಷಿಪಡುತ್ತಾರೆ. ಅಂತಹ ಮಕ್ಕಳಿಗೆ ಬಹಳ ಒಳ್ಳೆಯ ಸಲಹೆಯನ್ನು ಕೊಡುತ್ತಾರೆ- ಮಕ್ಕಳೇ, ನೀವು ನಿಮಿತ್ತರಾಗಿರಿ, ನನ್ನದು ಎಂದು ತಿಳಿಯಬಾರದು. ಮಕ್ಕಳನ್ನೂ ಸಹ ನಿಮಿತ್ತರಾಗಿ ಸಂಭಾಲನೆ ಮಾಡಿ. ಜ್ಞಾನದಿಂದ ತಮ್ಮ ಜೀವನವನ್ನು ಸುಧಾರಣೆ ಮಾಡಿಕೊಂಡು ರಾಜರಿಗೂ ರಾಜರಾಗಿರಿ ಎಂದು ತಿಳಿಸುತ್ತಾರೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಅದೃಷ್ಟವನ್ನು ರೂಪಿಸುಕೊಂಡು ಬಂದಿದ್ದೇನೆ….
ಓಂ ಶಾಂತಿ. ಮಕ್ಕಳು ಎರಡು ಅಕ್ಷರಗಳನ್ನು ಕೇಳಿದಿರಿ. ನಾವು ಇಲ್ಲಿ ಹೊಸ ಪ್ರಪಂಚಕ್ಕಾಗಿ ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೇವೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ಅದೃಷ್ಟವನ್ನು ರೂಪಿಸಿಕೊಳ್ಳಲು ಯುಕ್ತಿಯಿರಬೇಕು. ಮಕ್ಕಳಿಗೆ ಗೊತ್ತಿದೆ- ಇಲ್ಲಿ ಶ್ರೀಮತ ಸಿಗುತ್ತದೆ, ಮಹಾಮಂತ್ರವೂ ಸಿಗುತ್ತದೆ, ಮನ್ಮನಾಭವ ಎಂಬ ಅಕ್ಷರವಂತೂ ಇದೆಯಲ್ಲವೇ. ಈ ಮಂತ್ರವನ್ನು ಯಾರು ಕೊಡುತ್ತಾರೆ ಅವರು ಸರ್ವಶ್ರೇಷ್ಠನಾಗಿದ್ದಾರೆ ಮತ್ತು ಮತ ಕೊಡುವುದರಲ್ಲೂ ಸಾಗರನಾಗಿದ್ದಾರೆ. ಅವರ ಮತವು ಒಮ್ಮೆ ಸಿಗುತ್ತದೆ. ಡ್ರಾಮಾದಲ್ಲಿ ಒಂದುಬಾರಿ ಯಾವುದು ಆಗಿದೆಯೋ ಅದು ಮತ್ತೆ 5000 ವರ್ಷಗಳ ನಂತರವೇ ಆಗುತ್ತದೆ. ಈ ಒಂದು ಮಹಾಮಂತ್ರದಿಂದಲೇ ನಿಮ್ಮ ದೋಣಿಯು ಪಾರಾಗಿಬಿಡುತ್ತದೆ. ಪತಿತ-ಪಾವನ ತಂದೆಯು ಒಂದುಸಾರಿ ಬಂದು ಶ್ರೀಮತವನ್ನು ಕೊಡುವರು. ಪತಿತ ಪಾವನ ಯಾರು? ಪರಮಪಿತ ಪರಮಾತ್ಮನೇ ಪತಿತರಿಂದ ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದಲ್ಲಿ ಕರೆದೊಯ್ಯುವರು. ಅವರಿಗೆ ಪತಿತ ಪಾವನ, ಸದ್ಗತಿದಾತ ಎಂದು ಹೇಳಲಾಗುತ್ತದೆ. ನೀವು ಅವರ ಸಮ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ಗೊತ್ತಿದೆ, ಅವರೇ ನಮಗೆ ಸರ್ವಸ್ವವೂ ಆಗಿದ್ದಾರೆ. ಸರ್ವಶ್ರೇಷ್ಠ ಅದೃಷ್ಟವನ್ನು ರೂಪಿಸುವವರಾಗಿದ್ದಾರೆ. ನಿಮಗೆ ನಿಶ್ಚಯವಿದೆ- ಬೇಹದ್ದಿನ ತಂದೆಯ ಮೂಲಕ ಈ ಮಹಾಮಂತ್ರ ಸಿಗುವುದು. ಅವರು ತಂದೆಯಾಗಿದ್ದಾರಲ್ಲವೇ. ಒಬ್ಬರು ನಿರಾಕಾರ, ಮತ್ತೊಬ್ಬರು ಸಾಕಾರನಾಗಿದ್ದಾರೆ. ಮಕ್ಕಳು ನೆನಪು ಮಾಡುತ್ತಾರೆ, ತಂದೆಯು ನೆನಪು ಮಾಡುತ್ತಾರೆ. ಕಲ್ಪ-ಕಲ್ಪವು ತನ್ನ ಮಕ್ಕಳಿಗಷ್ಟೇ ತಿಳಿಸುವರು. ತಂದೆಯು ಹೇಳುತ್ತಾರೆ- ಸರ್ವರ ಸದ್ಗತಿಗಾಗಿ ಒಂದೇ ಮಹಾಮಂತ್ರವಾಗಿದೆ ಮತ್ತು ಕೊಡುವಂತಹವರೂ ಒಬ್ಬರೇ ಆಗಿದ್ದಾರೆ. ಸದ್ಗುರುವೇ ಸತ್ಯ ಮಂತ್ರವನ್ನು ಕೊಡುವವರಾಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ- ನಾವು ನಮ್ಮ ಸುಖಧಾಮದ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆ. ಸತ್ಯಯುಗಕ್ಕೆ ಸುಖಧಾಮವೆಂದು ಕರೆಯಲಾಗುತ್ತದೆ, ಇದು ದುಃಖಧಾಮವಾಗಿದೆ. ಯಾರು ಬ್ರಾಹ್ಮಣರಾಗುತ್ತಾರೆ ಅವರಿಗೆ ಶಿವತಂದೆಯು ಬ್ರಹ್ಮನ ಮುಖದಿಂದ ಮಂತ್ರವನ್ನು ಕೊಡುವರು ಅಂದಮೇಲೆ ಅವಶ್ಯವಾಗಿ ಸಾಕಾರದಲ್ಲಿ ಬರಲೇಬೇಕು, ಇಲ್ಲವೆಂದರೆ ಕೊಡುವುದಾದರೂ ಹೇಗೆ? ಬಾಬಾ ಹೇಳುತ್ತಾರೆ, ಕಲ್ಪ-ಕಲ್ಪವೂ ನಿಮಗೆ ಈ ಮಹಾಮಂತ್ರವನ್ನು ಕೊಡುತ್ತೇನೆ- ನನ್ನೊಬ್ಬನನ್ನೇ ನೆನಪು ಮಾಡಿರಿ (ಮಾಮೇಕಂ ಯಾದ್ ಕರೊ). ದೇಹದ ಎಲ್ಲಾ ಧರ್ಮಗಳನ್ನು ತ್ಯಜಿಸಿ, ದೇಹ ಮತ್ತು ದೇಹದ ಸರ್ವಧರ್ಮಗಳನ್ನು ಮರೆಯಿರಿ. ತನ್ನನ್ನು ದೇಹ ಎಂದು ತಿಳಿಯುವುದರಿಂದ ದೇಹದ ಸಂಬಂಧಿಗಳಾದ ಚಿಕ್ಕಪ್ಪ, ಮಾವ, ಗುರು-ಗೋಸಾಯಿ ಮುಂತಾದವರೆಲ್ಲರೂ ನೆನಪಿಗೆ ಬರುತ್ತಾರೆ. ತಾವು ಸತ್ತರೆ ತಮ್ಮಪಾಲಿಗೆ ಇಡೀ ಜಗತ್ತೇ ಸತ್ತಂತೆ. ತಂದೆ ಹೇಳುತ್ತಾರೆ- ನಾನು ನಿಮಗೆ ಇಂತಹ ಮಂತ್ರವನ್ನು ಕೊಡುತ್ತೇನೆ, ತನ್ನನ್ನು ಆತ್ಮ ಎಂದು ತಿಳಿದು ಅಶರೀರಿಗಳಾಗಿ. ಶರೀರದ ಭಾನವನ್ನು ಬಿಟ್ಟುಬಿಡಿ. ಇಲ್ಲಿ ದೇಹಾಭಿಮಾನಿಗಳಿದ್ದಾರೆ, ಸತ್ಯಯುಗದಲ್ಲಿ ಆತ್ಮಾಭಿಮಾನಿಗಳಿರುತ್ತಾರೆ. ಈ ಸಂಗಮಯುಗದಲ್ಲಿ ನೀವು ಆತ್ಮಾಭಿಮಾನಿಗಳಾಗುತ್ತೀರಿ ಮತ್ತು ಪರಮಾತ್ಮನನ್ನು ತಿಳಿದುಕೊಳ್ಳುತ್ತೀರಿ, ಆಸ್ತಿಕರಾಗುತ್ತೀರಿ. ಯಾರು ಪರಮಪಿತ ಪರಮಾತ್ಮನನ್ನು ಮತ್ತು ಅವರ ರಚನೆಯನ್ನು ತಿಳಿದುಕೊಂಡಿದ್ದಾರೆ ಅವರಿಗೆ ಆಸ್ತಿಕರು ಎಂದು ಹೇಳುತ್ತಾರೆ. ಆಸ್ತಿಕರು ಕಲಿಯುಗದಲ್ಲಿಯೂ ಇರುವುದಿಲ್ಲ, ಸತ್ಯಯುಗದಲ್ಲೂ ಇರುವುದಿಲ್ಲ. ಸಂಗಮಯುಗದಲ್ಲಿ ತಂದೆಯಿಂದ ಆಸ್ತಿಯನ್ನು ಪಡೆದ ನಂತರ ಸತ್ಯಯುಗದಲ್ಲಿ ರಾಜ್ಯ ಮಾಡುತ್ತೀರಿ. ಇಲ್ಲಿ ಆಸ್ತಿಕರು ಮತ್ತು ನಾಸ್ತಿಕರ ಮಾತು ನಡೆಯುತ್ತದೆ, ಅಲ್ಲಿ ನಡೆಯುವುದಿಲ್ಲ. ಬ್ರಾಹ್ಮಣರು ಆಸ್ತಿಕರಾಗುತ್ತಾರೆ, ಅವರೇ ಮೊದಲು ನಾಸ್ತಿಕರಾಗಿದ್ದರು. ಈ ಸಮಯದಲ್ಲಿ ಇಡೀ ಪ್ರಪಂಚ ನಾಸ್ತಿಕನಾಗಿದೆ. ಯಾರೂ ಸಹ ತಂದೆಯನ್ನಾಗಲಿ ಅಥವಾ ತಂದೆಯ ರಚನೆಯನ್ನಾಗಲಿ ತಿಳಿದುಕೊಂಡಿಲ್ಲ. ಸರ್ವವ್ಯಾಪಿ ಎಂದು ಹೇಳುವರು. ನೀವು ಮಕ್ಕಳಿಗೆ ಒಬ್ಬ ಬೇಹದ್ದಿನ ತಂದೆಯ ಜೊತೆಯಲ್ಲಿ ಮಾತ್ರವೇ ಕೆಲಸವಿದೆ. ಅವರ ಶ್ರೀಮತ ಸಿಗುತ್ತದೆ ಅಥವಾ ಅದೃಷ್ಟನ್ನು ರೂಪಿಸುವವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ದೇಹಸಹಿತ ದೇಹದ ಎಲ್ಲಾ ಪರಿವೆಯನ್ನು ಮರೆಯಬೇಕಾಗಿದೆ, ಯಾರನ್ನೂ ನೆನಪು ಮಾಡಬಾರದು, ತಮ್ಮನ್ನು ಆತ್ಮನೆಂದು ತಿಳಿದು ಒಬ್ಬ ತಂದೆಯನ್ನೇ ನೆನಪು ಮಾಡಿ ಇದಕ್ಕೆ ಮಹಾಮಂತ್ರವೆಂದು ಕರೆಯಲಾಗುತ್ತದೆ, ಇದರಿಂದಲೇ ನಿಮ್ಮ ಅದೃಷ್ಟ ಬೆಳಗುತ್ತದೆ, 21 ಜನ್ಮಗಳಗಾಗಿ ಸ್ವರಾಜ್ಯದ ತಿಲಕವೂ ಸಿಗುತ್ತದೆ. ಅದು ಪ್ರಾಲಬ್ಧವಾಗಿದೆ. ಗೀತೆಯಿದೆ- ನರನಿಂದ ನಾರಾಯಣನಾಗುವ, ಮನುಷ್ಯನಿಂದ ದೇವತೆ ಆಗುವಂತಹದು.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಈ ಪ್ರಪಂಚವು ಬದಲಾಗುತ್ತಿದೆ. ನಾವು ಹೊಸಪ್ರಪಂಚಕ್ಕಾಗಿ ಅದೃಷ್ಟವನ್ನು ರೂಪಿಸಿಕೊಳ್ಳುತ್ತಿದ್ದೇವೆ, ಇದು ಮೃತ್ಯುಲೋಕವಾಗಿದೆ. ಇಲ್ಲಿಯ ಮನುಷ್ಯರ ಅದೃಷ್ಟವನ್ನು ನೋಡಿ ಹೇಗಿದೆ! ಇದರ ಹೆಸರೇ ಆಗಿದೆ- ದುಃಖಧಾಮ. ನಮ್ಮದು ಪರಮಧಾಮವಾಗಿದೆ, ಅಲ್ಲಿ ತಂದೆಯಿರುತ್ತಾರೆ. ಈಗ ತಂದೆಯು ಜ್ಞಾನವನ್ನು ತಿಳಿಸುತ್ತಾರೆ ಮತ್ತು ಅದೃಷ್ಟವನ್ನು ಬೆಳಗಿಸುತ್ತಾರೆ. ತಂದೆಯು ಒಂದು ಮಹಾಮಂತ್ರವನ್ನು ಕೊಡುತ್ತಾರೆ- ನನ್ನನ್ನೇ ನೆನಪು ಮಾಡಿರಿ. ಭಲೆ ಯಾವುದೇ ದೇಹಧಾರಿಗಳಿಂದ ಕೇಳಿ ಆದರೆ ನಾನು ಒಬ್ಬ ವಿದೇಹೀಯನ್ನೇ ನೆನಪು ಮಾಡಿ. ಕೇಳುವುದಂತೂ ದೇಹಧಾರಿಯ ಮೂಲಕ ಅಲ್ಲವೇ. ಬ್ರಹ್ಮಾಕುಮಾರ-ಕುಮಾರಿಯರು ಮುಖದಿಂದಲೇ ತಿಳಿಸುವರು. ಪತಿತ-ಪಾವನನ್ನು ನೆನಪು ಮಾಡಿ. ನಿಮ್ಮ ತಲೆಯ ಮೇಲಿರುವ ವಿಕರ್ಮಗಳ ಹೊರೆಯನ್ನು ನೆನಪಿನ ಬಲದಿಂದಲೇ ಭಸ್ಮ ಮಾಡಿಕೊಳ್ಳಬೇಕಾಗಿದೆ. ನೀವು ಮಕ್ಕಳು ತಂದೆಯ ಸಮ್ಮುಖದಲ್ಲಿ ಕುಳಿತಿದ್ದೀರಿ. ತಿಳಿದುಕೊಂಡಿದ್ದೀರಿ- ನಮ್ಮ ಅದೃಷ್ಟವನ್ನು ಬೆಳಗಿಸಲು ಮತ್ತು ಬಹಳ ಸಹಜವಾದ ಮಾರ್ಗವನ್ನು ತಿಳಿಸಲು ತಂದೆಯು ಬಂದಿದ್ದಾರೆ. ಮಕ್ಕಳು ಹೇಳುತ್ತಾರೆ- ಬಾಬಾ, ನಿಮ್ಮ ನೆನಪೇ ಮರೆತುಹೋಗುತ್ತದೆ. ಅರೇ! ಇದಂತು ನಾಚಿಕೆ ಪಡಬೇಕಾದ ಮಾತಲ್ಲವೇ! ಲೌಕಿಕ ತಂದೆ ನಿಮ್ಮನ್ನು ಪತಿತರನ್ನಾಗಿ ಮಾಡುತ್ತಾರೆ ಅವರ ನೆನಪು ಇರುತ್ತದೆ ಮತ್ತು ಯಾವ ಪಾರಲೌಕಿಕ ತಂದೆಯು ನಿಮ್ಮನ್ನು ಪಾವನ ಮಾಡುತ್ತಾರೆ ಅಂತಹ ತಂದೆಯನ್ನು ಹೇಗೆ ಮರೆಯುತ್ತೀರಿ!! ಬಾಬಾ ಹೇಳುತ್ತಾರೆ- ನನ್ನೊಬ್ಬನನ್ನು ನೆನಪು ಮಾಡಿ ಆಗ ನಿಮ್ಮ ವಿಕರ್ಮ ವಿನಾಶವಾಗುವುದು. ನಾನು ನಿಮ್ಮನ್ನು ಮಂದಿರಕ್ಕೆ ಯೋಗ್ಯರನ್ನಾಗಿ ಮಾಡಲು ಬಂದಿದ್ದೇನೆ. ನಿಮಗೆ ತಿಳಿದಿದೆ- ಭಾರತವು ಶಿವಾಲಯವಾಗಿತ್ತು, ನಾವೇ ರಾಜ್ಯ ಮಾಡುತ್ತಿದ್ದೆವು, ನಂತರ ನಮ್ಮದೇ ಜಡಚಿತ್ರಗಳನ್ನು ಮಂದಿರದಲ್ಲಿ ಪೂಜಿಸುತ್ತಾ ಬಂದೆವು. ನಾವೇ ದೇವತೆಗಳಾಗಿದ್ದೆವು, ಇದನ್ನು ಮರೆತುಬಿಟ್ಟೆವು. ನಿಮ್ಮ ಮಮ್ಮಾ, ಬಾಬಾ ಪೂಜ್ಯ ದೇವೀ-ದೇವತಾ ಆಗಿದ್ದರು ನಂತರ ಪೂಜಾರಿಗಳಾದರು. ಈ ಜ್ಞಾನವು ಬುದ್ಧಿಯಲ್ಲಿದೆ. ವೃಕ್ಷದಲ್ಲಿಯೂ ಸಹ ಮುಖ್ಯವಾಗಿ ತೋರಿಸಲಾಗಿದೆ. ಮೊದಲು ಆದಿಸನಾತನ ದೇವೀ-ದೇವತೆ ಆಗಿದ್ದರು, ಈಗ ಇಲ್ಲ. 5000 ವರ್ಷಗಳ ಮೊದಲು ಸತ್ಯಯುಗವಿತ್ತು ಈಗ ಕಲಿಯುಗವಿದೆ. ಕಲಿಯುಗದ ನಂತರ ಮತ್ತೆ ಸತ್ಯಯುಗ ಬರಬೇಕಾಗಿದೆ. ಶ್ರೀಮತ ಕೊಡುವಂತಹ ತಂದೆಯು ಬಂದೇ ಬರಬೇಕು. ಪ್ರಪಂಚ ಖಂಡಿತವಾಗಿಯೂ ಬದಲಾಗಲೇಬೇಕು. ಡಂಗುರವನ್ನೂ ಬಾರಿಸುತ್ತಿರುತ್ತೀರಿ. ವೃಕ್ಷವಂತೂ ಬೇಗ ವೃದ್ಧಿಯಾಗುವುದಿಲ್ಲ. ವಿಘ್ನಗಳು ಬರುತ್ತವೆ. ಭಿನ್ನ-ಭಿನ್ನ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳುವರು. ತಂದೆಯು ಸಿಕ್ಕಿ ಹಾಕಿಕೊಳ್ಳಬೇಡಿ ಎಂದು ತಿಳಿಸುತ್ತಾರೆ. ಭಲೆ ಗೃಹಸ್ಥ ವ್ಯವಹಾರದಲ್ಲಿ ಇರಿ ಆದರೆ ತಂದೆಯನ್ನು ನೆನಪು ಮಾಡಿ ಮತ್ತು ಪವಿತ್ರರಾಗಿ. ಭಗವಾನುವಾಚ – ಕಾಮ ಮಹಾಶತ್ರುವಾಗಿದೆ. ಹಿಂದೆಯೂ ಸಹ ಗೀತೆಯ ಭಗವಂತನೂ ಹೇಳಿದ್ದರು, ಈಗಲೂ ಮತ್ತೆ ಹೇಳುತ್ತಾರೆ. ಗೀತೆಯ ಭಗವಂತನು ಅವಶ್ಯವಾಗಿ ಕಾಮದ ಮೇಲೆ ವಿಜಯಿಯನ್ನಾಗಿ ಮಾಡಿಸಿದ್ದರು. ಒಂದು ರಾವಣರಾಜ್ಯ ಆಗಿದೆ ಮತ್ತೊಂದು ರಾಮರಾಜ್ಯವಾಗಿದೆ. ರಾಮರಾಜ್ಯ ಆಗಲು ರಾವಣರಾಜ್ಯ ರಾತ್ರಿಯಾಗಿದೆ. ತಂದೆಯು ಹೇಳುತ್ತಾರೆ- ಈಗ ಈ ರಾವಣರಾಜ್ಯವೂ ಸಮಾಪ್ತಿಯಾಗಲಿದೆ, ಇದಕ್ಕಾಗಿಯೇ ಎಲ್ಲಾ ಸಿದ್ಧತೆಗಳು ಆಗಿವೆ. ತಂದೆಯು ಓದಿಸಿ ಕರೆದುಕೊಂಡು ಹೋಗುವರು. ನಂತರ ನಿಮಗೆ ರಾಜ್ಯ ಬೇಕಾಗುವುದು. ಈ ಪತಿತ ಸೃಷ್ಟಿಯಲ್ಲಿ ರಾಜ್ಯ ಮಾಡುತ್ತೀರೇನು! ಶಿವತಂದೆ ಕಾಲುಗಳನ್ನು ಇಡಲು ಅವರಿಗೆ ಕಾಲುಗಳೇ ಇಲ್ಲ. ದೇವತೆಗಳ ಕಾಲುಗಳು ಈ ಪತಿತ ಪ್ರಪಂಚದ ಮೇಲೆ ಇಡಲು ಸಾಧ್ಯವೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ- ನಾವು ದೇವತೆಗಳಾಗುತ್ತಿದ್ದೇವೆ ನಂತರ ಭಾರತದಲ್ಲಿಯೇ ಬರುತ್ತೇವೆ ಆದರೆ ಸೃಷ್ಟಿಯು ಬದಲಾಗಿ ಕಲಿಯುಗದಿಂದ ಸತ್ಯಯುಗವಾಗಿಬಿಡುತ್ತದೆ. ಈಗ ನೀವು ಶ್ರೇಷ್ಠರಾಗುತ್ತಿದ್ದೀರಿ. ಬಹಳ ಮಕ್ಕಳು ಹೇಳುತ್ತಾರೆ- ಬಾಬಾ ಬಹಳ ಬಿರುಗಾಳಿ ಬರುತ್ತವೆ. ನೀವು ತಂದೆಯನ್ನು ಮರೆಯುತ್ತೀರಿ, ತಂದೆಯ ಮತದಂತೆ ನಡೆಯುವುದಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಮಕ್ಕಳೇ ಭ್ರಷ್ಟಾಚಾರಿಗಳಾಗ ಬೇಡಿ ಶ್ರೇಷ್ಠಾತಿಶ್ರೇಷ್ಠ ತಂದೆಯ ಮತ ಸಿಗುತ್ತದೆ. ನಿಮಗೆ ಓದಿಸುವಂತಹವರು ಒಬ್ಬರೇ ಆಗಿದ್ದಾರೆ. ಅವರು ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ. ಈ ಬ್ರಹ್ಮನ ರಥವನ್ನೂ ನೆನಪು ಮಾಡಬಾರದು. ರಥ ಮತ್ತು ರಥಿ. ಕುದುರೆ ಗಾಡಿಯ ಮಾತಂತೂ ಇಲ್ಲ. ಅದರಲ್ಲಿ ಕುಳಿತು ಜ್ಞಾನವನ್ನು ಕೊಡಲು ಹೇಗೆ ಸಾಧ್ಯ? ಈ ಸಮಯದಲ್ಲಂತೂ ಎಲ್ಲರೂ ವಿಮಾನದ ಸವಾರಿಗಳಾಗಿದ್ದಾರೆ. ವಿಜ್ಞಾನವೂ ಬಹಳಷ್ಟು ತೀವ್ರವಾಗಿದೆ. ಮಾಯೆಯ ಆಡಂಭರವೂ ಬಹಳ ವಿಸ್ತಾರವಾಗಿದೆ. ವರ್ತಮಾನ ಸಮಯದಲ್ಲಂತೂ ಒಬ್ಬರನ್ನೊಬ್ಬರು ಬಹಳ ಸತ್ಕರಿಸುತ್ತಾರೆ. ಎಲ್ಲಿಂದಲಾದರೂ ಪ್ರಧಾನಮಂತ್ರಿ ಬಂದರೆ ಅವರಿಗೆ ಬಹಳ ಗೌರವ ಸಿಗುತ್ತದೆ. 15 ದಿನಗಳ ನಂತರ ಎಲ್ಲಾ ಗೌರವವು ಇಳಿದುಬಿಡುತ್ತದೆ. ರಾಜರಿಗೂ ಬಹಳ ಕಷ್ಟವಿದೆ, ಭಯಪಡುತ್ತಿರುತ್ತಾರೆ. ನಿಮಗೆ ಎಷ್ಟೊಂದು ಸಹಜವಾದ ಜ್ಞಾನ ಸಿಗುತ್ತದೆ. ನೀವು ಎಷ್ಟು ಬಡವರಾಗಿದ್ದೀರಿ, ಕವಡೆಯೂ ಇಲ್ಲ. ಬಾಬಾ ಇದೆಲ್ಲವೂ ನಿಮ್ಮದೆ ಆಗಿದೆ ಎಂದು ತಂದೆಯನ್ನು ಟ್ರಸ್ಟಿಯನ್ನಾಗಿ ಮಾಡುತ್ತೀರಿ. ನಂತರ ಬಾಬಾ ಹೇಳುತ್ತಾರೆ- ಒಳ್ಳೆಯದು, ನೀವೇ ನಿಮಿತ್ತರಾಗಿ ಇರಿ. ಒಂದುವೇಳೆ ನಮ್ಮದು ಎಂದು ತಿಳಿದರೆ ಇದು ನಿಮ್ಮ ಬುದ್ಧಿವಂತಿಕೆಯಲ್ಲ. ಶ್ರೀಮತದಂತೆ ನಡೆಯಬೇಕು. ಯಾರು ನಿಮಿತ್ತರಾಗಿರುತ್ತಾರೆ ಅವರು ಶ್ರೀಮತದಂತೆ ನಡೆಯುವರು. ನೀವು ಬಡಮಕ್ಕಳು ತಿಳಿದುಕೊಳ್ಳುತ್ತೀರಿ- ಈ ಕಲ್ಲು-ಮಣ್ಣು ಎಲ್ಲವನ್ನೂ ತಂದೆಗೆ ಕೊಡೋಣ. ಬಾಬಾ ಅಂತಹವರಿಗೆ ಬಹಳ ಉತ್ತಮವಾದ ಸಲಹೆ ಕೊಡುತ್ತಾರೆ- ಮಕ್ಕಳನ್ನೂ ಸಂಭಾಲನೆ ಮಾಡಬೇಕು, ಈ ಸಮಯದಲ್ಲಿ ನಿಮಗೆ ಜ್ಞಾನ ಸಿಗುತ್ತದೆ, ಇದರಿಂದ ನಿಮ್ಮ ಭವಿಷ್ಯ ಸುಧಾರಣೆ ಆಗುತ್ತದೆ ಮತ್ತು ರಾಜರಿಗೂ ರಾಜರಾಗುತ್ತೀರಿ. ಸಲಹೆಯನ್ನು ಕೊಡುವುದು ತಂದೆಯ ಕರ್ತವ್ಯವಾಗಿದೆ. ತಂದೆಯನ್ನು ನೆನಪು ಮಾಡಬೇಕಾಗಿದೆ ದಯೆ ಬರಬೇಕಾಗಿದೆ. ಹಳ್ಳದಲ್ಲಿ ಬೀಳುವವವರನ್ನು ಮುಕ್ತರನ್ನಾಗಿ ಮಾಡಬೇಕು. ಬಹಳ ಯುಕ್ತಿಯಿಂದ ನಡೆಯಬೇಕಾಗುತ್ತದೆ. ಸೂರ್ಪಣಕ, ಪೂತನ, ಅಜಾಮೀಳ, ದುರ್ಯೋಧನ ಇವೆಲ್ಲವೂ ಈಗಿನ ಹೆಸರುಗಳಾಗಿವೆ. ಈಗಿನ ದೃಶ್ಯವೂ ಮತ್ತೆ ಕಲ್ಪದ ನಂತರ ಬರುತ್ತದೆ. ಅದೇ ತಂದೆಯು ಸಮ್ಮುಖದಲ್ಲಿ ಬಂದು ಜ್ಞಾನ ಕೊಡುತ್ತಾರೆ ಮತ್ತು ಮನುಷ್ಯರಿಂದ ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ನೀವು 5000 ವರ್ಷಗಳ ಮೊದಲಿನಂತೆ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೀರಿ. ಮೊದಲೂ ಸಹ ಮಹಾಭಾರತ ಯುದ್ಧವು ನಡೆದಿತ್ತು. ಈ ಯುದ್ಧವೂ ಅದರೊಂದಿಗೆ ಸಂಬಂಧವಿದೆ. ಬಾಬಾ ಚೆನ್ನಾಗಿ ತಿಳಿಸಿ ಮನುಷ್ಯರಿಂದ ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ತಂದೆಯಿಂದ ಆಸ್ತಿಯನ್ನು ಪಡೆಯಲು ನೀವು ಬಂದಿದ್ದೀರಿ. ಬ್ರಹ್ಮನಿಂದಾಗಲಿ ಅಥವಾ ಜಗದಂಬೆಯಿಂದಾಗಲಿ ಅಥವಾ ಬಿ.ಕೆ.,ಗಳಿಂದಾಗಲಿ ಆಸ್ತಿ ಸಿಗುವುದಿಲ್ಲ. ಬ್ರಹ್ಮನೂ ಸಹ ತಂದೆಯಿಂದಲೇ ಆಸ್ತಿಯನ್ನು ಪಡೆಯುವರು. ಅನ್ಯರಿಗೂ ತಿಳಿಸುತ್ತಾರೆ- ನೀವು ಜಗತ್ಪಿತನ ಮಕ್ಕಳಾಗಿ ಅವರಿಂದ ಆಸ್ತಿಯನ್ನು ಪಡೆಯುತ್ತೀರಿ. ಎಲ್ಲರಿಗೂ ಭಿನ್ನವಾಗಿಯೇ ತಿಳಿಸುತ್ತಾರೆ. ಮಕ್ಕಳೇ, ನನ್ನನ್ನು ನೆನಪು ಮಾಡಿ ಎನ್ನುವಂತಹ ಬಾಣವು ನೇರವಾಗಿ ನಾಟುತ್ತದೆ. ತಂದೆಯು ಹೇಳುತ್ತಾರೆ- ಮಕ್ಕಳೇ, ನೀವು ನನ್ನಿಂದಲೇ ಆಸ್ತಿಯನ್ನು ಪಡೆಯಬೇಕು. ಯಾರೇ ಮಿತ್ರಸಂಬಂಧಿಗಳು ಸತ್ತರೂ ನೀವು ತಂದೆಯಿಂದಲೇ ಆಸ್ತಿಯನ್ನು ಪಡೆಯಬೇಕು. ಇದರಲ್ಲಿ ಬಹಳ ಖುಷಿಯಿರಬೇಕು. ಅರೇ! ಅದೃಷ್ಟವನ್ನು ಮಾಡಿಕೊಳ್ಳಲು ಬಂದಿದ್ದೀರಿ. ತಿಳಿದುಕೊಂಡಿದ್ದೀರಿ- ಬಾಬಾ ನಮ್ಮನ್ನು ಮತ್ತೆ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಾಗ ಈ ನಡವಳಿಕೆಯನ್ನು ಧಾರಣೆ ಮಾಡಿ ವಿಕಾರಗಳಿಂದ ಮುಕ್ತರಾಗಬೇಕಾಗಿದೆ. ನಾವು ಪಾವನ ನಿರ್ವಿಕಾರಿ ಆಗುತ್ತಿದ್ದೇವೆ, ಡ್ರಾಮ ಮತ್ತು ವೃಕ್ಷವನ್ನು ತಿಳಿದುಕೊಳ್ಳಬೇಕು ಮತ್ತ್ಯಾವುದೇ ಕಷ್ಟವಿಲ್ಲ, ಅತಿಸಹಜವಾಗಿದೆ ಆದರೂ ಬಾಬಾ ಮರೆತುಬಿಟ್ಟೆವು, ಭೂತ ಬಂದುಬಿಟ್ಟಿತು ಎಂದು ಹೇಳುತ್ತಾರೆ. ಬಾಬಾ ಹೇಳುತ್ತಾರೆ- ಈ ಭೂತಗಳನ್ನು ಓಡಿಸಿಬಿಡಿ. ನಾವು ಯೋಗ್ಯರಾಗಿದ್ದೇವೆಯೇ ಎಂದು ಹೃದಯವೆಂಬ ದರ್ಪಣದಲ್ಲಿ ನೋಡಿಕೊಳ್ಳಬೇಕಾಗಿದೆ. ತಂದೆಯು ಕುಳಿತು ತಿಳಿಸಿಕೊಡುತ್ತಾರೆ- ಮಧುರಾತಿಮಧುರ ಸೌಭಾಗ್ಯಶಾಲಿ ಮಕ್ಕಳೇ, ನೀವು ಸೌಭಾಗ್ಯಶಾಲಿಗಳಾಗಲು ಬಂದಿದ್ದೀರಿ, ಈಗಂತೂ ಎಲ್ಲರೂ ದುರ್ಭಾಗ್ಯಶಾಲಿ ಆಗಿದ್ದಾರಲ್ಲವೇ. ಭಾರತವಾಸಿಗಳೇ ಸೌಭಾಗ್ಯಶಾಲಿ ಆಗಿದ್ದರು, ಎಷ್ಟೊಂದು ಸಾಹುಕಾರರಾಗಿದ್ದರು. ಇದು ಭಾರತದ ಮಾತಾಗಿದೆ, ತಂದೆಯು ತಿಳಿಸುತ್ತಾರೆ- ನೀವು ತಮ್ಮನ್ನು ಆತ್ಮನೆಂದು ತಿಳಿಯಿರಿ ಏಕೆಂದರೆ ನೀವು ನನ್ನಬಳಿ ಬರಬೇಕೆಂದರೆ ಅಂತ್ಯಮತಿ ಸೋ ಗತಿಯಾಗಿಬಿಡುವುದು. ಈಗ ನಾಟಕವೂ ಪೂರ್ಣವಾಗಲಿದೆ, ಉಪಾಯವನ್ನು ತಿಳಿಸುತ್ತಾರೆ- ಎಲ್ಲಾ ಪಾಪಗಳಿಂದ ಮುಕ್ತರಾಗಿ, ಆಗ ಪುಣ್ಯಾತ್ಮರಾಗುತ್ತೀರಿ. ಪುಣ್ಯಾತ್ಮರ ಪ್ರಪಂಚವೂ ಇತ್ತಲ್ಲವೇ! ಅದು ಪುನಸ್ರ್ಥಾಪನೆ ಆಗಲಿದೆ. ಹಳೆಯ ಪ್ರಪಂಚವು ಬದಲಾಗಿ ಹೊಸದಾಗಬೇಕು. ತಿಳಿದುಕೊಳ್ಳುತ್ತಾರೆ- ಪ್ರಾಚೀನ ಭಾರತ ಸ್ವರ್ಗವಾಗಿತ್ತು. ಸ್ವರ್ಗದ ಸ್ಥಾಪಕ ತಂದೆಯು ಸ್ವರ್ಗವನ್ನು ರಚನೆ ಮಾಡಿದ್ದರು. ಅವರು ಯಾವಾಗ ಬಂದರು? ಈ ಸಮಯದಲ್ಲಿ ಬರುತ್ತಾರೆ, ಇದಕ್ಕೆ ಕಲ್ಯಾಣಕಾರಿ ತಂದೆಯು ಬರುವಂತಹ ಸಮಯ ಎಂದು ಹೇಳಲಾಗುವುದು. ಈ ರಾವಣ ಸಂಪ್ರದಾಯ ಎಷ್ಟು ದೊಡ್ಡದಾಗಿದೆ, ರಾಮನ ಸಂಪ್ರದಾಯವು ಬಹಳ ಚಿಕ್ಕದಾಗಿರುವುದು. ಇಲ್ಲಿ ವೃದ್ಧಿಯನ್ನು ಪಡೆಯುತ್ತಾರೆ. ಮಕ್ಕಳು ಮತ್ತೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಬರುತ್ತಿರುತ್ತಾರೆ. ಪ್ರದರ್ಶನಿ ಅಥವಾ ಪ್ರೋಜೆಕ್ಟರ್ ಮೂಲಕ ತಿಳಿಸಿಕೊಡುತ್ತಿರಿ. ಈಗಂತೂ ಬಹಳ ಸರ್ವೀಸ್ ಮಾಡಬೇಕಾಗಿದೆ. ತಂದೆಯು ಹೇಳುತ್ತಾರೆ- ಮುದ್ದಾದ ಮಕ್ಕಳೇ, ಇದು ನಾಟಕವಾಗಿದೆ ಆದರೆ ಇಲ್ಲಿಯವರೆಗೆ ಏನಾಯಿತು ಅದನ್ನು ಆಕ್ಯುರೇಟ್ ನಾಟಕವೆಂದೇ ಹೇಳುತ್ತಾರೆ. ತಂದೆಯು ಹೇಳುತ್ತಾರೆ- ಈ ನಾಟಕದಲ್ಲಿ ನಾನೂ ಸಹ ಬಂಧಿತನಾಗಿದ್ದೇನೆ. ಮಕ್ಕಳೇ, ಪತಿತಪ್ರಪಂಚದಲ್ಲಿ ನಾನೂ ಸಹ ಬರಬೇಕಾಗುತ್ತದೆ. ನೋಡಿ! ನಾನು ಮಕ್ಕಳಿಗೋಸ್ಕರ ಹೇಗೆ ಪರಮಧಾಮವನ್ನು ಬಿಟ್ಟು ಇಲ್ಲಿಗೆ ಬರುತ್ತೇನೆ. ಪ್ಲೇಗ್ನ ರೋಗಿಗಳನ್ನು ನೋಡಿ ವೈದ್ಯರು ದೂರ ಓಡಿಹೋಗುವುದಿಲ್ಲ, ಅವರಂತೂ ಬರಲೇಬೇಕಾಗುತ್ತದೆ. ಗಾಯನವನ್ನು ಮಾಡುತ್ತೀರಿ- ಪತಿತ-ಪಾವನ ಬನ್ನಿ ಬಂದು ಪಂಚವಿಕಾರಗಳಿಂದ ಬಿಡಿಸಿ ಪಾವನರನ್ನಾಗಿ ಮಾಡಿ ಅರ್ಥಾತ್ ಮುಕ್ತರನ್ನಾಗಿ ಮಾಡಿ. ದುಃಖಧಾಮದಿಂದ ಸುಖಧಾಮದಲ್ಲಿ ಕರೆದುಕೊಂಡು ಹೋಗಿ. ಪರಮಾತ್ಮ ಮುಕ್ತಿದಾತನಾಗಿದ್ದಾರೆ. ಅವರು ಸರ್ವರ ಮುಕ್ತಿದಾತನಾಗಿದ್ದಾರೆ ಮತ್ತು ಮಾರ್ಗದರ್ಶಕನಾಗಿ ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ ಮತ್ತೆ ಆತ್ಮಗಳು ನಂಬರ್ವಾರ್ ಬರುತ್ತಾರೆ. ಸೂರ್ಯವಂಶಿ ನಂತರ ಚಂದ್ರವಂಶಿ ಮತ್ತೆ ದ್ವಾಪರವು ಪ್ರಾರಂಭವಾಗುವುದರಿಂದ ನೀವು ಪೂಜಾರಿಗಳಾಗಿಬಿಡುತ್ತೀರಿ ಆದ್ದರಿಂದಲೇ ದೇವತೆಗಳು ವಾಮಮಾರ್ಗದಲ್ಲಿ ಹೋದರೆಂದು ಗಾಯನವೂ ಇದೆ. ವಾಮಮಾರ್ಗದ ಚಿತ್ರಗಳನ್ನು ತೋರಿಸುತ್ತಾರೆ ಆದರೆ ನೀವೀಗ ಪ್ರತ್ಯಕ್ಷದಲ್ಲಿ ತಿಳಿಯುತ್ತೀರಿ- ನಾವೇ ದೇವತೆಗಳಾಗಿದ್ದೇವು, ಇವು ಎಷ್ಟು ಸಹಜ ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ಇದಂತೂ ಚೆನ್ನಾಗಿ ಬುದ್ಧಿಯಲ್ಲಿ ಧಾರಣೆಯಾಗಬೇಕು.
ಈಗ ನೀವು ಮಕ್ಕಳು ತಮ್ಮ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ಇಲ್ಲಿ ತಂದೆಯ ಸಮ್ಮುಖದಲ್ಲಿ ಕುಳಿತಿದ್ದೀರಿ. ಬಾಕಿ ಶಿಕ್ಷಕರು ನಂಬರ್ವಾರ್ ಆಗಿರುತ್ತಾರೆ. ಇಲ್ಲಿ ಪ್ರಜಾಪಿತ ಬ್ರಹ್ಮಾರವರ ಮುಖದಿಂದ ಭಗವಂತನು ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸಿದ್ದಾರೆ. ಮೊದಲು ಈ ಬ್ರಹ್ಮನೇ ಕೇಳುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರನ್ನು ಸೂಕ್ಷ್ಮವತನದಲ್ಲಿ ತೋರಿಸುತ್ತಾರೆ. ಈಗ ವಿಷ್ಣುವಂತೂ ಸತ್ಯಯುಗದ ಮಾಲೀಕನಾಗಿದ್ದಾರೆ ಮತ್ತು ಬ್ರಹ್ಮಾ ಸಂಗಮಯುಗದವರಾಗಿದ್ದಾರೆ. ಬ್ರಹ್ಮನಂತೂ ಇಲ್ಲಿಯೇ ಬೇಕಲ್ಲವೇ, ಆಗಲೇ ಬ್ರಾಹ್ಮಣರು ದೇವತೆಗಳಾಗುತ್ತಾರೆ. ಇದು ರುದ್ರಜ್ಞಾನಯಜ್ಞವಾಗಿದೆ. ಮೊದಲೂ ಸಹ ಈ ಯಜ್ಞವನ್ನು ರಚಿಸಲಾಗಿತ್ತು, ಇದರಲ್ಲಿಯೇ ಪ್ರಪಂಚವೆಲ್ಲವೂ ಸ್ವಾಹಾ ಆಗುತ್ತದೆ, ಎಲ್ಲರೂ ಸಮಾಪ್ತಿಯಾಗುತ್ತಾರೆ. ನೀವು ಮಕ್ಕಳು ನಂತರ ಹೊಸಪ್ರಪಂಚದಲ್ಲಿ ಬಂದು ರಾಜ್ಯ ಮಾಡುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಆಂತರ್ಯದಿಂದ ಭೂತಗಳನ್ನು ತೆಗೆದು ನರನಿಂದ ನಾರಾಯಣನಾಗಲು ಯೋಗ್ಯರಾಗಬೇಕು, ನಾವು ಎಲ್ಲಿಯ ತನಕ ಯೋಗ್ಯರಾಗಿದ್ದೇವೆ ಎಂದು ಹೃದಯವೆಂಬ ದರ್ಪಣದಲ್ಲಿ ನೋಡಿಕೊಳ್ಳಬೇಕಾಗಿದೆ.
2. ತಮ್ಮನ್ನು ಆತ್ಮನೆಂದು ತಿಳಿದು ಅಶರೀರಿಯಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಶರೀರದ ಪರಿವೆಯೂ ಇರಬಾರದು- ಇಂತಹ ಅಭ್ಯಾಸ ಮಾಡಬೇಕು.
ವರದಾನ:-
ಪವಿತ್ರತೆಯ ರಾಯಲ್ಟಿ ಅರ್ಥಾತ್ ಸತ್ಯತೆಯಲ್ಲಿರುವ ಆತ್ಮರು ಸದಾ ಖುಷಿಯಲ್ಲಿ ನರ್ತಿಸುತ್ತಾರೆ. ಅವರಲ್ಲಿ ಕೆಲವೊಮ್ಮೆ ಖುಷಿ ಕಡಿಮೆ, ಕೆಲವೊಮ್ಮೆ ಹೆಚ್ಚಾಗುವುದಿಲ್ಲ. ದಿನಕಳೆದಂತೆ, ಪ್ರತೀ ಸಮಯದಲ್ಲಿ ಇನ್ನೂ ಖುಷಿಯು ಹೆಚ್ಚಾಗುತ್ತಿರುತ್ತದೆ. ಅವರಲ್ಲಿ ಒಳಗೊಂದು ಹೊರಗೊಂದು ಇರುವುದಿಲ್ಲ. ವೃತ್ತಿ, ದೃಷ್ಟಿ, ಮಾತು ಹಾಗೂ ಚಲನೆಯೆಲ್ಲವೂ ಸತ್ಯವಾಗಿರುವುದು. ಇಂತಹ ಸತ್ಯವಾದ ಘನತೆಯುಳ್ಳ ಆತ್ಮರ ಚಿತ್ತದಿಂದಲೂ ಹಾಗೂ ಚಲನೆ-ವಲನೆಯಿಂದಲೂ ಸದಾ ಹರ್ಷಿತವಾಗಿರುತ್ತಾರೆ. ಹರ್ಷಿತಚಿತ್ತ, ಹರ್ಷಿತ ಮುಖವು ಅವಿನಾಶಿಯಾಗಿರುವುದು.
ಸ್ಲೋಗನ್:-
➤ Email me Murli: Receive Daily Murli on your email. Subscribe!