18 August 2021 KANNADA Murli Today | Brahma Kumaris

Read and Listen today’s Gyan Murli in Kannada

August 17, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಪರಚಿಂತನೆಯನ್ನು ಬಿಟ್ಟು ತಮ್ಮ ಕಲ್ಯಾಣ ಮಾಡಿಕೊಳ್ಳಿ, ನೀವು ಚಿನ್ನದಂತೆ ಆಗಿ ಅನ್ಯರಿಗೂ ಮಾರ್ಗವನ್ನು ತಿಳಿಸಿರಿ”

ಪ್ರಶ್ನೆ:: -

ಅಶರೀರಿಯಾಗುವ ಅಭ್ಯಾಸವನ್ನು ಯಾರು ಸದಾ ಮಾಡುತ್ತಿರುವರೋ ಅವರ ಮುಖ್ಯ ಲಕ್ಷಣಗಳನ್ನು ತಿಳಿಸಿ.

ಉತ್ತರ:-

ಅವರು ಹಠದಿಂದ ತಮ್ಮ ಕರ್ಮೇಂದ್ರಿಯಗಳನ್ನು ವಶ ಪಡಿಸಿಕೊಳ್ಳುವುದಿಲ್ಲ. ಬದಲಾಗಿ ಅವರ ಕರ್ಮೇಂದ್ರಿಯಗಳು ಸ್ವತಹ ಶೀತಲವಾಗಿ ಬಿಡುತ್ತದೆ. ನಾವಾತ್ಮರು ಸಹೋದರ-ಸಹೋದರರಾಗಿದ್ದೇವೆ ಎಂಬ ಸ್ಮೃತಿಯು ಸ್ವತಹ ಇರುತ್ತದೆ. ದೇಹಾಭಿಮಾನವು ಕಳೆಯುತ್ತಾ ಹೋಗುತ್ತದೆ, ನಾಮ-ರೂಪದ ನಶೆಯು ಸಮಾಪ್ತಿಯಾಗುತ್ತಾ ಹೋಗುತ್ತದೆ. ಅನ್ಯರ ನೆನಪು ಬರುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವು ಪ್ರೀತಿಯ ಸಾಗರನಾಗಿದ್ದೀರಿ…….

ಓಂ ಶಾಂತಿ. ಇವರು ಕೇವಲ ಪ್ರೀತಿಯ ಸಾಗರನಲ್ಲ, ಜ್ಞಾನ ಸಾಗರನಾಗಿದ್ದಾರೆ. ಜ್ಞಾನ ಮತ್ತು ಅಜ್ಞಾನ. ಜ್ಞಾನಕ್ಕೆ ದಿನವೆಂತಲೂ ಅಜ್ಞಾನಕ್ಕೆ ರಾತ್ರಿಯೆಂತಲೂ ಹೇಳಲಾಗುತ್ತದೆ, ಜ್ಞಾನ ಎಂಬ ಅಕ್ಷರವೇ ಚೆನ್ನಾಗಿದೆ. ಅಜ್ಞಾನವೆಂಬುದು ಕೆಟ್ಟ ಅಕ್ಷರವಾಗಿದೆ. ಅರ್ಧ ಕಲ್ಪ ಜ್ಞಾನದ ಪ್ರಾಲಬ್ಧವಿರುತ್ತದೆ, ಇನ್ನರ್ಧ ಕಲ್ಪ ಅಜ್ಞಾನದ ಪ್ರಾಲಬ್ಧವಿರುತ್ತದೆ. ಅಜ್ಞಾನದ ಪ್ರಾಲಬ್ಧವು ದುಃಖವಾಗಿದೆ, ಜ್ಞಾನದ ಪ್ರಾಲಬ್ಧವು ಸುಖವಾಗಿದೆ, ಇವು ಬಹಳ ಸಹಜ ತಿಳಿದುಕೊಳ್ಳುವ ಮಾತುಗಳಾಗಿವೆ. ಜ್ಞಾನವು ದಿನವಾಗಿದೆ, ಅಜ್ಞಾನವು ರಾತ್ರಿಯಾಗಿದೆ. ಇದೂ ಸಹ ಯಾರಿಗೂ ತಿಳಿದಿಲ್ಲ. ಜ್ಞಾನವೆಂದು ಯಾವುದಕ್ಕೆ ಹೇಳಲಾಗುತ್ತದೆ, ಯಾವುದಕ್ಕೆ ಅಜ್ಞಾನವೆಂದು ಹೇಳಲಾಗುತ್ತದೆ, ಇವು ಬೇಹದ್ದಿನ ಮಾತುಗಳಾಗಿವೆ. ಜ್ಞಾನವೆಂದರೇನು, ಭಕ್ತಿಯೆಂದರೇನು ಎಂಬುದನ್ನು ನೀವು ಎಲ್ಲರಿಗೂ ತಿಳಿಸುತ್ತೀರಿ. ಜ್ಞಾನದಿಂದ ನೀವು ಪೂಜ್ಯರಾಗುತ್ತಿದ್ದೀರಿ. ಯಾವಾಗ ಪೂಜ್ಯರಾಗಿ ಬಿಡುತ್ತೀರೋ ಆಗ ನಿಮಗೆ ಪೂಜೆಯ ಸಾಮಗ್ರಿ ಅಂದರೆ ಯಾವುದೆಲ್ಲಾ ಮಂದಿರ ಇತ್ಯಾದಿಗಳಿದೆಯೋ ಇದೆಲ್ಲದರ ಅರಿವಾಗುತ್ತದೆ. ನಿಮಗೆ ತಿಳಿದಿದೆ, ಇವೆಲ್ಲವೂ ನೆನಪಾರ್ಥವಾಗಿದೆ. ಅವರ ಜೀವನ ಚರಿತ್ರೆಯು ಏನೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಯಾರು ಪೂಜೆ ಮಾಡಲು ಹೋಗುತ್ತಾರೆಯೋ ಅವರೂ ಸಹ ತಿಳಿದುಕೊಂಡಿಲ್ಲ. ಪೂಜೆಗೆ ಭಕ್ತಿಯೆಂದು ಹೇಳಲಾಗುತ್ತದೆ, ಭಗವಂತನು ಭಕ್ತಿಯ ಫಲವನ್ನು ಕೊಡುವುದಕ್ಕಾಗಿ ಭಕ್ತರೊಂದಿಗೆ ಮಿಲನ ಮಾಡಬೇಕಾಗಿದೆ ಅಂದಮೇಲೆ ಭಗವಂತನೇ ಬಂದು ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತಾರೆ. ಪೂಜ್ಯರು ಸತ್ಯಯುಗದಲ್ಲಿಯೂ, ಪೂಜಾರಿಗಳು ಕಲಿಯುಗದಲ್ಲಿಯಿರುತ್ತಾರೆ. ಇಂದು ಏನಿದೆ? ನಾಳೆ ಏನಾಗುವುದು ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ವಿನಾಶವಂತೂ ಅವಶ್ಯವಾಗಿ ಆಗುವುದು. ಯಾವ ಸಮಯದಲ್ಲಿ ಬೇಕಾದರೂ ಆಗುವ ಸಾಧ್ಯತೆಯಿದೆ. ತಯಾರಿ ಆಗುತ್ತಿದೆ, ಅನೇಕ ಪ್ರಾಕೃತಿಕ ಆಪತ್ತುಗಳು ಬರುತ್ತವೆ ಎಂದು ಗಾಯನವಿದೆ. ಇದನ್ನು ಬರೆಯಬೇಕು – ಗೃಹ ಯುದ್ಧ ಮತ್ತು ಪ್ರಾಕೃತಿಕ ಆಪತ್ತುಗಳಿಗೆ ಈಶ್ವರೀಯ ವಿಕೋಪಗಳೆಂದು ಹೇಳುವುದಿಲ್ಲ. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಇದರಲ್ಲಿ ಪ್ರಾಕೃತಿಕ ಆಪತ್ತುಗಳೆಲ್ಲವೂ ಬರಲಿವೆ. ವಿನಾಶದಲ್ಲಿ ಸಹಯೋಗ ಕೊಡುತ್ತದೆ. ಬೆಂಕಿಯ ಮಳೆ ಬೀಳುತ್ತದೆ, ಜನರು ಹಸಿವಿನಿಂದ ಸಾಯುತ್ತಾರೆ, ಭೂಕಂಪಗಳಾಗಲಿವೆ. ಇದರ ಮುಖಾಂತರವೇ ವಿನಾಶವಾಗಬೇಕಾಗಿದೆ. ಮಕ್ಕಳಿಗೆ ತಿಳಿದಿದೆ, ಇದಂತೂ ಅವಶ್ಯವಾಗಿ ಆಗುವುದು ಇಲ್ಲದಿದ್ದರೆ ಸತ್ಯಯುಗದಲ್ಲಿ ಅಷ್ಟು ಕಡಿಮೆ ಜನಸಂಖ್ಯೆಯು ಹೇಗೆ ಇರುವುದು? ಅಂದಮೇಲೆ ಅವಶ್ಯವಾಗಿ ಒಟ್ಟಿಗೆ ವಿನಾಶವಾಗುವುದು. ಮಕ್ಕಳು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ, ಎಲ್ಲಾ ಬಟ್ಟೆಗಳನ್ನು ಈಗ ಒಗೆಯಲಾಗುತ್ತದೆ. ಇದು ಬೇಹದ್ದಿನ ಬಹಳ ದೊಡ್ಡ ಯಂತ್ರವಾಗಿದೆ. ಕೊಳಕಾದ ಬಟ್ಟೆಗಳನ್ನು ಒಗೆದರು ಎಂದು ಗಾಯನವಿದೆ. ವಾಸ್ತವದಲ್ಲಿ ಬಟ್ಟೆಗಳ ಮಾತಿಲ್ಲ, ಇದು ಶರೀರದ ಮಾತಾಗಿದೆ. ಆತ್ಮರನ್ನು ಯೋಗಬಲದಿಂದ ತೊಳೆಯಬೇಕಾಗಿದೆ. ಈ ಸಮಯದಲ್ಲಿ ಪಂಚ ತತ್ವಗಳೇ ತಮೋಪ್ರಧಾನವಾಗಿರುವುದರಿಂದ ಶರೀರವೂ ಅದೇರೀತಿ ಇರುತ್ತದೆ. ಪತಿತ-ಪಾವನ ತಂದೆಯು ಬಂದು ಪಾವನರನ್ನಾಗಿ ಮಾಡುತ್ತಾರೆ, ಮತ್ತೆಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ಹೇಗೆ ಪಾವನರಾಗುತ್ತೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಬಹಳ ಸಹಜ ಮಾರ್ಗವನ್ನು ತಿಳಿಸುತ್ತಾರೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಎಲ್ಲೆಲ್ಲಿ ಭಕ್ತಿ, ಯಜ್ಞ ಇತ್ಯಾದಿಗಳು ನಡೆಯುತ್ತವೆಯೋ ಅಲ್ಲಿಗೆ ಹೋಗಿ ತಿಳಿಸಿ – ನೀವು ಯಾರ ಭಕ್ತಿ ಮಾಡುತ್ತಿದ್ದೀರೋ ಅವರ ಚರಿತ್ರೆಯನ್ನೂ ತಿಳಿದುಕೊಳ್ಳುವುದರಿಂದಲೇ ನೀವು ದೇವತೆಗಳಾಗಲು ಸಾಧ್ಯ. ಅವರು ಹೇಗೆ ಜೀವನ್ಮುಕ್ತಿಯನ್ನು ಪಡೆದರು ಎಂಬುದನ್ನು ನೀವು ತಿಳಿದುಕೊಳ್ಳಿ ಆಗ ನೀವೂ ಸಹ ಜೀವನ್ಮುಕ್ತರಾಗುವಿರಿ. ಮಂದಿರಗಳಲ್ಲಿ ಕುಳಿತು ಜೀವನ ಚರಿತ್ರೆಯನ್ನು ತಿಳಿಸಿದರೆ ಚೆನ್ನಾಗಿ ತಿಳಿದುಕೊಳ್ಳುವರು.

ನೀವೂ ಸಹ ತಂದೆಯಿಂದ ಈಗ ಜೀವನ ಕಥೆಯನ್ನು ಕೇಳುತ್ತೀರಿ, ನೀವು ಮಕ್ಕಳಿಗೆ ಎಷ್ಟೊಂದು ತಿಳುವಳಿಕೆ ಸಿಕ್ಕಿದೆ. ಪರಮಪಿತ ಪರಮಾತ್ಮನ ಜೀವನ ಚರಿತ್ರೆಯನ್ನು ಯಾರೂ ತಿಳಿದುಕೊಂಡಿಲ್ಲ. ಸರ್ವವ್ಯಾಪಿಯೆಂದು ಹೇಳುವುದಾದರೆ ಅಲ್ಲಿ ಜೀವನ ಚರಿತ್ರೆಯ ಮಾತೇ ಬರುವುದಿಲ್ಲ. ನೀವು ಮಕ್ಕಳು ಈಗ ಪರಮಪಿತ ಪರಮಾತ್ಮನ ಜೀವನ ಕಥೆಯನ್ನು ತಿಳಿದುಕೊಂಡಿದ್ದೀರಿ ಅಂದರೆ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ. ಈ ಸಮಯಕ್ಕೆ ಆದಿಯೆಂದು ಹೇಳುತ್ತಾರೆ, ಈಗಲೇ ತಂದೆಯು ಬಂದು ಪತಿತರನ್ನು ಪಾವನ ಮಾಡುತ್ತಾರೆ ನಂತರ ಮಧ್ಯದಲ್ಲಿ ಭಕ್ತಿಯ ಪಾತ್ರವು ನಡೆಯುತ್ತದೆ. ತಂದೆಯು ತಿಳಿಸುತ್ತಾರೆ – ಈ ಸಮಯದಲ್ಲಿ ನಾನು ಬಂದು ಸ್ಥಾಪನೆ ಮಾಡುತ್ತೇನೆ, ಮಾಡಿಸುತ್ತೇನೆ. ಮಾಡಿ-ಮಾಡಿಸುವವನಾಗಿದ್ದೇನೆ. ಪ್ರೇರಣೆ ಕೊಡುವುದಾದರೆ ಅದಕ್ಕೆ ಮಾಡುವುದೆಂದು ಹೇಳುವುದಿಲ್ಲ, ತಂದೆಯು ಬಂದು ಇವರ ಕರ್ಮೇಂದ್ರಿಯಗಳ ಮೂಲಕ ಮಾಡುತ್ತಾರೆ. ಇದರಲ್ಲಿ ಪ್ರೇರಣೆಯ ಮಾತಿಲ್ಲ. ಮಾಡಿ-ಮಾಡಿಸುವವರು ಅವಶ್ಯವಾಗಿ ಸನ್ಮುಖದಲ್ಲಿದ್ದಾಗಲೇ ಮಾಡಿಸುವರು. ಪ್ರೇರಣೆಯಿಂದ ಏನೂ ಆಗಲು ಸಾಧ್ಯವಿಲ್ಲ. ಆತ್ಮವು ಶರೀರವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಅನೇಕರು ಹೇಳುತ್ತಾರೆ, ಈಶ್ವರನೇ ಪ್ರೇರಣೆಯಿಂದ ಎಲ್ಲವನ್ನೂ ಮಾಡುತ್ತಾರೆ. ಬಾಬಾ, ತಾವು ಪ್ರೇರಣೆ ಕೊಡಿ, ನಮ್ಮ ಪತಿಯ ಬುದ್ಧಿಯು ಸರಿಹೋಗಲಿ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಇದರಲ್ಲಿ ಪ್ರೇರಣೆಯ ಮಾತಿಲ್ಲ. ಹಾಗಿದ್ದರೆ ಶಿವ ಜಯಂತಿಯನ್ನು ಏಕೆ ಆಚರಿಸಲಾಗುತ್ತಿತ್ತು! ಪ್ರೇರಣೆಯಿಂದ ಕೆಲಸವಾಗುವಂತಿದ್ದರೆ ಮತ್ತೆ ಬರುವುದಾದರೂ ಏಕೆ? ಮೊದಲನೆಯದಾಗಿ ಈಶ್ವರನೆಂದರೆ ಯಾರು ಎಂಬುದನ್ನೂ ತಿಳಿದುಕೊಂಡಿಲ್ಲ. ಕೇವಲ ಈಶ್ವರನ ಪ್ರೇರಣೆಯಿಂದ ಎಲ್ಲವೂ ಆಗುತ್ತದೆಯೆಂದು ಹೇಳಿ ಬಿಡುತ್ತಾರೆ. ನಿರಾಕಾರನು ಪ್ರೇರಣೆಯಿಂದ ಹೇಗೆ ಮಾಡುತ್ತಾರೆ, ಅವರಂತೂ ಮಾಡಿ-ಮಾಡಿಸುವವರಾಗಿದ್ದಾರೆ. ಅವರೇ ಬಂದು ಮಾರ್ಗವನ್ನು ತಿಳಿಸುತ್ತಾರೆ. ಕರ್ಮೇಂದ್ರಿಯಗಳಿಂದ ಮುರುಳಿಯನ್ನು ನುಡಿಸುತ್ತಾರೆ. ಎಲ್ಲಿಯವರೆಗೆ ಕರ್ಮೇಂದ್ರಿಯಗಳ ಆಧಾರ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಮುರುಳಿಯನ್ನು ಹೇಗೆ ನುಡಿಸುವುದು! ಜ್ಞಾನ ಸಾಗರನೆಂದ ಮೇಲೆ ತಿಳಿಸುವುದಕ್ಕಾಗಿ ಮುಖ ಬೇಕಲ್ಲವೆ. ಈಗ ನೀವು ಮಕ್ಕಳಿಗೆ ಇಡೀ ಪ್ರಪಂಚದ ಆದಿ-ಮಧ್ಯ-ಅಂತ್ಯದ ಬಗ್ಗೆ ತಿಳಿದಿದೆ. ಸಂಪೂರ್ಣ ಜ್ಞಾನ ಸಿಕ್ಕಿದೆ, ಜ್ಞಾನವಿಲ್ಲದೆ ಗತಿಯಿಲ್ಲವೆಂದು ತಿಳಿಯುತ್ತಾರೆ ಅಂದಮೇಲೆ ಜ್ಞಾನವನ್ನು ಯಾರು ಕೊಡುವರು? ಜ್ಞಾನಮಾರ್ಗ ಮತ್ತು ಅಜ್ಞಾನ ಮಾರ್ಗದಲ್ಲಿ ಇರುವ ಅಂತರವನ್ನಾದರೂ ನೋಡಿರಿ. ವಿಜ್ಞಾನವೆಂದೂ ಹೇಳುತ್ತಾರೆ, ಅಜ್ಞಾನವು ಅಂಧಕಾರವಾಗಿದೆ ಬಾಕಿ ಜ್ಞಾನ ಮತ್ತು ವಿಜ್ಞಾನಕ್ಕೆ ನಾವು ಮುಕ್ತಿ-ಜೀವನ್ಮುಕ್ತಿಯೆಂದು ಹೇಳಬಹುದು. ಈಗ ನಿಮಗೆ ಪಾವನರಾಗುವ ಜ್ಞಾನವು ಸಿಗುತ್ತದೆ. ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ಯಾರಾದರೂ ಕೇಳಿದರೆ ಆಶ್ಚರ್ಯಚಕಿತರಾಗುತ್ತಾರೆ. ಆತ್ಮವು ಜ್ಞಾನವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾರೆ ಅಂದಮೇಲೆ ಆತ್ಮವು ಅವಶ್ಯವಾಗಿ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆಯಲ್ಲವೆ. ಮನುಷ್ಯರಿಂದ ದೇವತೆಗಳಾಗುತ್ತೀರೆಂದರೆ ಜ್ಞಾನವಿರಬೇಕಾಗಿದೆ ಆದರೆ ತಂದೆಯು ತಿಳಿಸುತ್ತಾರೆ – ಪ್ರಾಲಬ್ಧಕ್ಕಾಗಿ ಇದು ಪುರುಷಾರ್ಥವಾಗಿದೆ. ಪ್ರಾಲಬ್ಧವನ್ನು ಪಡೆದ ಮೇಲೆ ಮತ್ತೆ ಜ್ಞಾನದ ಅವಶ್ಯಕತೆಯೇನಿದೆ! ಸತ್ಯಯುಗವು ನೀವು ಮಕ್ಕಳಿಗಾಗಿ ಪ್ರಾಲಬ್ಧವಾಗಿದೆ, ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಆಶ್ಚರ್ಯಚಕಿತರಾಗುತ್ತಾರೆ. ಈ ಜ್ಞಾನವು ಪರಂಪರೆಯಿಂದ ಏಕೆ ನಡೆಯುತ್ತಾ ಬಂದಿಲ್ಲ ಎಂದು ಕೇಳುತ್ತಾರೆ. ಇದು ಪ್ರಾಯಃಲೋಪವಾಗಿ ಬಿಡುತ್ತದೆ. ದಿನವಾಯಿತೆಂದರೆ ಮತ್ತೆ ಅಜ್ಞಾನವಿರುವುದಿಲ್ಲ, ಅಜ್ಞಾನವಿದ್ದಾಗಲೇ ಜ್ಞಾನದ ಅವಶ್ಯಕತೆಯಿರುವುದು. ಇವೂ ಸಹ ತಿಳಿದುಕೊಳ್ಳುವ ಮತ್ತು ತಿಳಿಸುವ ಮಾತುಗಳಾಗಿವೆ, ಕೂಡಲೇ ಯಾರೂ ತಿಳಿದುಕೊಳ್ಳುವುದಿಲ್ಲ. ಶಿವ ತಂದೆಯು ಭಾರತದಲ್ಲಿಯೇ ಬರುತ್ತಾರೆ, ಮಕ್ಕಳಿಗಾಗಿ ಉಡುಗೊರೆಯನ್ನು ತೆಗೆದುಕೊಂಡು ಬರುತ್ತಾರೆ. ಭಕ್ತಿಯ ಫಲವನ್ನು ಕೊಡುವುದಕ್ಕಾಗಿ ಬರುತ್ತಾರೆ. ಭಕ್ತಿಯ ನಂತರ ಸದ್ಗತಿ, ವಿನಾಶವೂ ಅವಶ್ಯವಾಗಿ ಆಗುವುದು. ಅದಕ್ಕಾಗಿ ಎಲ್ಲಾ ತಯಾರಿಗಳೂ ಆಗಿವೆ, ನೀವು ಕೇಳುತ್ತಾ ಇರುತ್ತೀರಿ, ಒಂದು ಕಿಡಿ ಬಿದ್ದರೂ ಸಹ ಒಂದೆರಡು ಗಂಟೆಯಲ್ಲಿ ಇಡೀ ಮನೆಯೇ ಸುಟ್ಟು ಭಸ್ಮವಾಗಿ ಬಿಡುತ್ತದೆ. ಇದೇನೂ ಹೊಸ ಮಾತಲ್ಲ, ವಿನಾಶವು ಖಂಡಿತ ಆಗಬೇಕಾಗಿದೆ. ಸತ್ಯಯುಗದಲ್ಲಿ ಇರುವುದೇ ಕಡಿಮೆ ಜನಸಂಖ್ಯೆ, ಅದರಲ್ಲಿಯೂ ಶ್ರೇಷ್ಠಾಚಾರಿಗಳಿರುತ್ತಾರೆ. ಅಂದಾಗ ಶ್ರೇಷ್ಠಾಚಾರಿಗಳಾಗುವುದರಲ್ಲಿ ಎಷ್ಟೊಂದು ಪರಿಶ್ರಮವಾಗುತ್ತದೆ, ಮಾಯೆಯು ಒಮ್ಮೆಲೆ ಮೂಗನ್ನು ಹಿಡಿದುಕೊಳ್ಳುತ್ತದೆ. ಹೀಗೆ ಬೀಳುವವರಿಗೆ ಬಹಳ ಪೆಟ್ಟು ಬೀಳುತ್ತದೆ, ಸಮಯ ಹಿಡಿಸುತ್ತದೆ. ಕಾಮ ವಿಕಾರವು ಅತಿ ದೊಡ್ಡ ಪೆಟ್ಟಾಗಿದೆ, ಆದ್ದರಿಂದಲೇ ಕಾಮ ಮಹಾಶತ್ರುವೆಂದು ಹೇಳಲಾಗುತ್ತದೆ. ಇದೇ ಪತಿತರನ್ನಾಗಿ ಮಾಡುತ್ತದೆ. ವಿಕಾರದ ಮೇಲೆಯೇ ಜಗಳವಾಗುತ್ತದೆ, ಪವಿತ್ರರಾಗಿರಲು ಬಿಡದೇ ಇದ್ದಾಗ ಅವಶ್ಯವಾಗಿ ಹೇಳುತ್ತಾರೆ – ಇದಕ್ಕಿಂತಲೂ ಪಾತ್ರೆಯನ್ನು ತೊಳೆಯುವುದೇ ಒಳ್ಳೆಯದು, ಕಸಗುಡಿಸಿ ಪಾತ್ರೆಯನ್ನು ತೊಳೆದರೂ ಪರವಾಗಿಲ್ಲ ಆದರೆ ಪವಿತ್ರವಾಗಿರುತ್ತೇವೆ, ಇದರಲ್ಲಿ ಬಹಳ ಧೈರ್ಯಬೇಕು. ಯಾವಾಗ ಯಾರಾದರೂ ತಂದೆಯ ಆಶ್ರಯದಲ್ಲಿ ಬರುತ್ತಾರೆಯೋ ಆಗ ಮಾಯೆಯೂ ಸಹ ಯುದ್ಧ ಮಾಡಲು ಆರಂಭಿಸುತ್ತದೆ, ಪಂಚ ವಿಕಾರಗಳ ರೋಗವು ಇನ್ನೂ ಅಧಿಕವಾಗಿ ಹೊರಬರುತ್ತದೆ. ಮೊದಲು ಪಕ್ಕಾ ನಿಶ್ಚಯ ಬುದ್ಧಿಯವರಾಗಬೇಕು. ಜೀವಿಸಿದ್ದಂತೆಯೇ ಸತ್ತಿದ್ದೀರಿ, ಇಲ್ಲಿಂದ ನಿಮ್ಮ ದೋಣಿಯು ಹೊರಟಿದೆ. ನೀವು ಕಲಿಯುಗೀ ವಿಕಾರಿ ತೀರವನ್ನು ಬಿಟ್ಟಿದ್ದೀರಿ. ನೀವೀಗ ಯಾತ್ರೆಯಲ್ಲಿ ಹೋಗುತ್ತಿದ್ದೀರಿ, ಅಶರೀರಿಯಾಗಿ ತಮ್ಮ ಮನೆಗೆ ಹೋಗುತ್ತೀರಿ. ಆತ್ಮಕ್ಕೆ ಈ ಜ್ಞಾನವಿದೆ – ನಾವು ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಹೋಗುತ್ತೇವೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿ ಯಾತ್ರೆಯಲ್ಲಿರುತ್ತೇವೆ. ಬುದ್ಧಿಯಲ್ಲಿ ನೆನಪಿರಲಿ – ಇದಂತೂ ಸ್ಮಶಾನವಾಗಿದೆ, ನಾವೀಗ ಸುಖಧಾಮಕ್ಕೆ ಹೋಗುತ್ತೇವೆ. ತಂದೆಯು ನಮಗೆ ಆಸ್ತಿಯನ್ನು ಕೊಡುವ ಯುಕ್ತಿಯನ್ನು ತಿಳಿಸುತ್ತಿದ್ದಾರೆ. ಪಾವನರಾಗಲು ನಾವು ಯೋಗದಲ್ಲಿರುತ್ತೇವೆ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಆಗ ಆತ್ಮವು ಶರೀರವನ್ನು ಬಿಡುವುದು. ಯಾತ್ರೆಯು ಎಷ್ಟು ಅದ್ಭುತವಾಗಿದೆ ಕೇವಲ ತಂದೆಯನ್ನು ನೆನಪು ಮಾಡಿ, ತಮ್ಮ ರಾಜಧಾನಿಯನ್ನು ನೆನಪು ಮಾಡಿರಿ. ಇಷ್ಟು ಸಹಜ ಮಾತೂ ಸಹ ನೆನಪಿಗೆ ಬರುವುದಿಲ್ಲ, ತಂದೆಯನ್ನು ನೆನಪು ಮಾಡಿ ಸಾಕು ಆದರೆ ಮಾಯೆಯು ಅವರನ್ನೂ ನೆನಪು ಮಾಡಲು ಬಿಡುವುದಿಲ್ಲ, ಪರಿಶ್ರಮವಾಗುತ್ತದೆ. ನಮ್ಮ ತಂದೆಯು ಬಂದಿದ್ದಾರೆಂದು ಆತ್ಮಕ್ಕೆ ಜ್ಞಾನ ಸಿಕ್ಕಿದೆ. ಆತ್ಮವೇ ಓದುತ್ತದೆಯಲ್ಲವೆ. ಆತ್ಮವು ಶರೀರದ ಮೂಲಕ ಜನ್ಮ ಪಡೆಯುತ್ತದೆ, ಆತ್ಮವು ಸಹೋದರ -ಸಹೋದರನಾಗಿದೆ, ದೇಹಾಭಿಮಾನದಲ್ಲಿ ಬರುವುದರಿಂದ ಮತ್ತೆ ಅನೇಕ ಸಂಬಂಧಗಳಾಗಿ ಬಿಡುತ್ತವೆ, ಇಲ್ಲಿ ನೀವು ಸಹೋದರ-ಸಹೋದರರಾಗಿದ್ದೀರಿ, ಪರಸ್ಪರ ಸಹೋದರ-ಸಹೋದರಿಯೂ ಆಗಿದ್ದೀರಿ. ಪ್ರವೃತ್ತಿ ಮಾರ್ಗವಲ್ಲವೆ. ಇಬ್ಬರಿಗೂ ಆಸ್ತಿಯು ಬೇಕು. ಆತ್ಮವೇ ಪುರುಷಾರ್ಥ ಮಾಡುತ್ತದೆ, ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳುವುದೇ ಪರಿಶ್ರಮವಿದೆ, ದೇಹಾಭಿಮಾನವಿರಬಾರದು. ಶರೀರವೇ ಇಲ್ಲವೆಂದ ಮೇಲೆ ಯಾವುದರಿಂದ ವಿಕಾರ ನಡೆಸುವುದು! ನಾವಾತ್ಮರಾಗಿದ್ದೇವೆ, ತಂದೆಯ ಬಳಿ ಹೋಗಬೇಕಾಗಿದೆ. ಶರೀರದ ಅಭಿಮಾನವೇ ಇರಬಾರದು. ಎಷ್ಟು ಯೋಗಿಗಳಾಗುತ್ತಾ ಹೋಗುತ್ತೀರೋ ಅಷ್ಟು ಕರ್ಮೇಂದ್ರಿಯಗಳು ಶೀತಲವಾಗುತ್ತಾ ಹೋಗುವವು. ದೇಹಾಭಿಮಾನದಲ್ಲಿ ಬರುವುದರಿಂದ ಕರ್ಮೇಂದ್ರಿಯಗಳು ಚಂಚಲವಾಗುತ್ತವೆ. ಆತ್ಮಕ್ಕೆ ತಿಳಿದಿದೆ, ನಮಗೆ ಪ್ರಾಪ್ತಿಯಾಗುತ್ತಿದೆ, ಶರೀರದಿಂದ ಭಿನ್ನವಾಗುತ್ತಾ ಹೋದಾಗ ಕರ್ಮೇಂದ್ರಿಯಗಳು ಶಾಂತವಾಗುತ್ತಾ ಹೋಗುವುದು. ಸನ್ಯಾಸಿಗಳು ಔಷಧಿಯನ್ನು ಸೇವಿಸಿ ಕರ್ಮೇಂದ್ರಿಯಗಳನ್ನು ಶಾಂತ ಮಾಡಿಕೊಳ್ಳುತ್ತಾರೆ, ಅದಂತೂ ಹಠಯೋಗವಾಯಿತಲ್ಲವೆ. ನೀವು ಯೋಗದಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಯೋಗಬಲದಿಂದ ನೀವು ಕರ್ಮೇಂದ್ರಿಯಗಳನ್ನು ವಶ ಪಡಿಸಿಕೊಳ್ಳಲು ಸಾಧ್ಯವಿಲ್ಲವೆ! ಎಷ್ಟು ಆತ್ಮಾಭಿಮಾನಿಯಾಗುತ್ತಾ ಹೋಗುತ್ತೀರೋ ಅಷ್ಟು ಕರ್ಮೇಂದ್ರಿಯಗಳು ಶಾಂತವಾಗಿ ಬಿಡುತ್ತವೆ, ಬಹಳ ಪರಿಶ್ರಮ ಪಡಬೇಕಾಗುತ್ತದೆ. ಪ್ರಾಪ್ತಿಯು ಬಹಳ ಉನ್ನತವಾಗಿದೆಯಲ್ಲವೆ. ತಂದೆಯು ತಿಳಿಸುತ್ತಾರೆ – ಯೋಗಬಲದಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ, ಕರ್ಮೇಂದ್ರಿಯಗಳ ಮೇಲೆ ಜಯ ಗಳಿಸುತ್ತೀರಿ ಆದ್ದರಿಂದ ಭಾರತದ ಯೋಗವು ಪ್ರಸಿದ್ಧವಾಗಿದೆ. ನೀವು ಮನುಷ್ಯನಿಂದ ದೇವತೆ, ಪತಿತರಿಂದ ಪಾವನರಾಗುತ್ತೀರಿ, ಪ್ರಜೆಗಳೂ ಸಹ ಸ್ವರ್ಗವಾಸಿಗಳೇ ಅಲ್ಲವೆ. ಯೋಗಬಲದಿಂದ ನೀವು ಸ್ವರ್ಗವಾಸಿಗಳಾಗುತ್ತೀರಿ, ಬಾಹುಬಲದಿಂದ ಸಾಧ್ಯವಿಲ್ಲ. ಇದರಲ್ಲಿ ಏನೂ ಕಷ್ಟವಿಲ್ಲ, ಕುಮಾರಿಯರಿಗಂತೂ ಸ್ವಲ್ಪವೂ ಪರಿಶ್ರಮವೇ ಇಲ್ಲ. ಬಂಧನಮುಕ್ತರಾಗಿದ್ದಾರೆ, ವಿಕಾರದಲ್ಲಿ ಹೋದರೆಂದರೆ ಬಹಳ ದೊಡ್ಡ ಪಂಚಾಯಿತಿಯಾಗಿ ಬಿಡುತ್ತದೆ, ಕುಮಾರಿಯರಾಗಿರುವುದೇ ಒಳ್ಳೆಯದಾಗಿದೆ. ಇಲ್ಲವಾದರೆ ಮತ್ತೆ ಅಧರ್ ಕುಮಾರಿಯೆಂದು ಹೆಸರು ಬರುತ್ತದೆ. ಅಂದಮೇಲೆ ದಂಪತಿಗಳಾಗುವುದಾದರೂ ಏಕೆ? ಇದರಲ್ಲಿಯೂ ನಾಮ-ರೂಪದ ನಶೆಯೇರುತ್ತದೆ, ಇದೂ ಸಹ ಮೂರ್ಖತೆಯಾಗಿದೆ. ದಂಪತಿಗಳಾದ ಮೇಲೆ ಪವಿತ್ರರಾಗಿರಲು ಬಹಳ ದೊಡ್ಡ ಸಾಹಸ ಬೇಕು. ಜ್ಞಾನದ ಪರಾಕಾಷ್ಠತೆಯನ್ನು ಹೊಂದಿರಬೇಕು, ಅನೇಕರು ಇದರಲ್ಲಿ ಸಾಹಸವನ್ನು ಇಡುತ್ತಾರೆ ಆದರೆ ವಿಕಾರದ ಬೆಂಕಿಯ ಶಾಖವು ಬಂದು ಬಿಟ್ಟರೆ ಆಟವೇ ಸಮಾಪ್ತಿಯಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ, ಕುಮಾರಿಯಾಗಿರುವುದೇ ಒಳ್ಳೆಯದು, ಅಧರ್ಕುಮಾರಿಯಾಗುವ ಸಂಕಲ್ಪವಾದರೂ ಏಕೆ ಮಾಡಬೇಕು! ಕುಮಾರಿಯರ ಹೆಸರು ಪ್ರಸಿದ್ಧಿಯಾಗಿದೆ, ಬಾಲ ಬ್ರಹ್ಮಚಾರಿಯಾಗಿದ್ದೀರಿ, ಬಾಲ ಬ್ರಹ್ಮಚಾರಿಯಾಗುವುದು ಒಳ್ಳೆಯದಾಗಿದೆ, ಪವಿತ್ರತೆಯ ಶಕ್ತಿಯಿರುತ್ತದೆ, ಮತ್ತ್ಯಾರ ನೆನಪೂ ಬರುವುದಿಲ್ಲ ಬಾಕಿ ಸಾಹಸವಿದ್ದರೆ ಮಾಡಿ ತೋರಿಸಿ, ಇದರಲ್ಲಿಯೇ ಪರಿಶ್ರಮವಿದೆ. ಕುಮಾರಿಯಾಗಿದ್ದಾಗ ಒಬ್ಬರೇ ಇರುತ್ತಾರೆ, ವಿವಾಹವಾಗಿ ಬಿಟ್ಟರೆ ಅಲ್ಲಿ ಇಬ್ಬರಾಗಿ ಬಿಡುತ್ತಾರೆ. ಇಬ್ಬರಿಂದ ದ್ವೈತವು ಬಂದು ಬಿಡುತ್ತದೆ, ಸಾಧ್ಯವಾದಷ್ಟು ಕುಮಾರಿಯಾಗಿರುವುದೇ ಒಳ್ಳೆಯದಾಗಿದೆ. ಕುಮಾರಿಯರು ಸೇವೆಗಾಗಿ ಹೊರಡಬಹುದಾಗಿದೆ, ಬಂಧನದಲ್ಲಿ ಬಿದ್ದರೆ ಮತ್ತೆ ಗೊಂದಲವು ವೃದ್ಧಿಯಾಗುತ್ತಾ ಹೋಗುತ್ತದೆ ಅಂದಮೇಲೆ ಬುದ್ಧಿಯು ಸಿಕ್ಕಿ ಹಾಕಿಕೊಳ್ಳುವಂತಹ ಜಾಲವನ್ನು ರಚಿಸುವುದಾದರೂ ಏಕೆ! ಇಂತಹ ಜಾಲದಲ್ಲಿ ಸಿಲುಕುವುದು ಸರಿಯಲ್ಲ, ಕುಮಾರಿಯರಿಗಂತೂ ಇನ್ನೂ ಒಳ್ಳೆಯದಾಗಿದೆ. ಕುಮಾರಿಯರು ಹೆಸರನ್ನು ತಂದಿದ್ದೀರಿ, ಕನ್ನಯ್ಯ ಎಂಬ ಹೆಸರು ಗಾಯನವಿದೆಯಲ್ಲವೆ. ಕುಮಾರಿಯಾಗಿರುವುದು ಬಹಳ ಒಳ್ಳೆಯದಾಗಿದೆ. ನಿಮಗಾಗಿ ಬಹಳ ಸಹಜವಾಗಿದೆ. ವಿದ್ಯಾರ್ಥಿ ಜೀವನವು ಪವಿತ್ರ ಜೀವನವೂ ಆಗಿದೆ, ಬುದ್ಧಿಯು ತಾಜಾ ಆಗಿರುತ್ತದೆ, ಕುಮಾರಿಯರು ಭೀಷ್ಮ ಪಿತಾಮಹರಂತೆ ಆಗಬೇಕಾಗಿದೆ. ಕಲ್ಪದ ಮೊದಲೂ ಸಹ ಇದ್ದಿರಿ ಆದ್ದರಿಂದಲೇ ದಿಲ್ವಾಡಾ ಮಂದಿರದಲ್ಲಿ ನೆನಪಾರ್ಥವಿದೆ, ಈಗ ತಂದೆಯು ಮಕ್ಕಳಿಗೆ ಆದೇಶ ನೀಡುತ್ತಾರೆ – ನನ್ನನ್ನು ನೆನಪು ಮಾಡಿರಿ, ಮತ್ತೆಲ್ಲಾ ಮಾತುಗಳನ್ನು ಬಿಟ್ಟು ನೀವು ನಿಮ್ಮ ಕಲ್ಯಾಣ ಮಾಡಿಕೊಳ್ಳಿರಿ. ತಂದೆಯನ್ನು ನೆನಪು ಮಾಡುವುದರಲ್ಲಿಯೇ ಕಲ್ಯಾಣವಿದೆ. ತಪ್ಪುಗಳಾಗುತ್ತವೆಯೆಂದರೆ ಮಕ್ಕಳು ಬಿದ್ದು ಹೋಗುತ್ತಾರೆ, ನೀವು ಪರಚಿಂತನೆಯನ್ನು ಬಿಟ್ಟು ತಮ್ಮ ಕಲ್ಯಾಣ ಮಾಡಿಕೊಳ್ಳಿ. ಅನ್ಯ ಚಿಂತನೆಯಲ್ಲಿ ಹೋಗಲೇಬೇಡಿ. ನೀವು ಚಿನ್ನದಂತೆ ಆಗಿಬಿಡಿ, ಅನ್ಯರಿಗೂ ಮಾರ್ಗವನ್ನು ತೋರಿಸಿರಿ. ಸತೋಪ್ರಧಾನರಾಗಲು ಇದೊಂದೇ ಉಪಾಯವಾಗಿದೆ, ಪಾವನರಾಗದ ವಿನಃ ಮುಕ್ತಿಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ಒಂದೇ ಉಪಾಯವಾಗಿದೆ, ಇದರಿಂದಲೇ ಮತ್ತೆ ಅಂತ್ಯ ಮತಿ ಸೋ ಗತಿಯಾಗುವುದು. ಈಗ ಅಲ್ಲ ಸಲ್ಲದ ಮಾತುಗಳನ್ನು ಬಿಟ್ಟು ಬಿಡಿ ಇಲ್ಲದಿದ್ದರೆ ತಮ್ಮದೇ ನಷ್ಟ ಮಾಡಿಕೊಳ್ಳುವಿರಿ. ತಂದೆಯು ಶಾಪ ಕೊಡುವುದಿಲ್ಲ. ಶ್ರೀಮತದಂತೆ ನಡೆಯದಿದ್ದರೆ ತಮ್ಮನ್ನು ತಾವೇ ಶಾಪಗ್ರಸ್ತರನ್ನಾಗಿ ಮಾಡಿಕೊಳ್ಳುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ನಿಶ್ಚಯ ಬುದ್ಧಿಯವರಾಗಿ ಜೀವಿಸಿದ್ದಂತೆಯೇ ಈ ಹಳೆಯ ಪ್ರಪಂಚದ ತಮ್ಮ ದೋಣಿಯ ಹಗ್ಗವನ್ನು ಬಿಚ್ಚಬೇಕಾಗಿದೆ. ತಂದೆಯ ಪ್ರತೀ ಆಜ್ಞೆಯನ್ನು ಪಾಲನೆ ಮಾಡಿ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ.

2. ಅನ್ಯರ ಚಿಂತನೆಯನ್ನು ಬಿಟ್ಟು ತಮ್ಮ ಬುದ್ಧಿಯನ್ನು ಸ್ವಚ್ಛ ಚಿನ್ನದಂತೆ ಮಾಡಿಕೊಳ್ಳಬೇಕಾಗಿದೆ, ಅಲ್ಲಸಲ್ಲದ ಮಾತುಗಳಲ್ಲಿ ತಮ್ಮ ಸಮಯವನ್ನು ನಷ್ಟ ಮಾಡಿಕೊಳ್ಳಬಾರದು. ಯೋಗಬಲದಿಂದ ತಮ್ಮ ಕರ್ಮೇಂದ್ರಿಯಗಳನ್ನು ಶಾಂತ, ಶೀತಲ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಯಾರು ಸ್ವಯಂನ್ನು ಅತಿಥಿಯೆಂದು ತಿಳಿದುಕೊಂಡು ನಡೆಯುತ್ತಾರೆಯೋ ಅವರು ತನ್ನ ದೇಹವೆಂಬ ಮನೆಯಿಂದಲೂ ನಿರ್ಮೋಹಿ ಆಗಿ ಬಿಡುತ್ತಾರೆ. ಅತಿಥಿಗೆ ತನ್ನದೇನೂ ಇರುವುದಿಲ್ಲ, ಕಾರ್ಯದಲ್ಲಿ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾರೆ ಆದರೆ ನನ್ನದೆಂಬ ಭಾವವಿರುವುದಿಲ್ಲ. ಅವರು ಎಲ್ಲಾ ಸಾಧನಗಳನ್ನು ಉಪಯೋಗಿಸುತ್ತಿದ್ದರೂ, ಎಷ್ಟು ಭಿನ್ನವೋ ಅಷ್ಟು ತಂದೆಯ ಪ್ರಿಯರಾಗಿ ಇರುತ್ತಾರೆ. ಅವರು ಸಹಜವಾಗಿಯೇ ದೇಹ, ದೇಹದ ಸಂಬಂಧ ಮತ್ತು ವೈಭವಗಳಿಂದಲೂ ಉಪರಾಂ (ನಿರ್ಲಿಪ್ತ) ಆಗಿ ಬಿಡುತ್ತಾರೆ. ಅತಿಥಿಯೆಂಬ ವೃತ್ತಿ ಎಷ್ಟಿರುವುದೋ ಅಷ್ಟೇ ಶ್ರೇಷ್ಠ ಪ್ರವೃತ್ತಿ ಹಾಗೂ ಸ್ಥಿತಿಯೂ ಶ್ರೇಷ್ಠವಾಗಿ ಇರುತ್ತದೆ

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top