17 July 2021 KANNADA Murli Today | Brahma Kumaris

Read and Listen today’s Gyan Murli in Kannada

July 16, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ಜ್ಞಾನ ಸಾಗರ ತಂದೆಯು ನಿಮಗೆ ಜ್ಞಾನದ ಮೂರನೇ ನೇತ್ರವನ್ನು ಕೊಡಲು ಬಂದಿದ್ದಾರೆ, ಇದರಿಂದ ಆತ್ಮ ಜ್ಯೋತಿಯು ಜಾಗೃತವಾಗುತ್ತದೆ”

ಪ್ರಶ್ನೆ:: -

ತಂದೆಗೆ ಮಾಡಿ-ಮಾಡಿಸುವವರು ಎಂದು ಏಕೆ ಹೇಳಲಾಗಿದೆ? ಅವರು ಏನನ್ನು ಮಾಡುತ್ತಾರೆ ಮತ್ತು ಏನು ಮಾಡಿಸುತ್ತಾರೆ?

ಉತ್ತರ:-

ತಂದೆಯು ಹೇಳುತ್ತಾರೆ – ನಾನು ನೀವು ಮಕ್ಕಳಿಗೆ ಮುರುಳಿಯನ್ನು ತಿಳಿಸುವ ಕಾರ್ಯ ಮಾಡುತ್ತೇನೆ. ಮುರುಳಿಯನ್ನು ತಿಳಿಸಿ ಮಂತ್ರವನ್ನು ಕೊಟ್ಟು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತೇನೆ, ಮತ್ತೆ ನಿಮ್ಮ ಮೂಲಕ ಸ್ವರ್ಗದ ಉದ್ಘಾಟನೆ ಮಾಡಿಸುತ್ತೇನೆ. ನೀವು ಸಂದೇಶವಾಹಕರಾಗಿ ಎಲ್ಲರಿಗೂ ಸಂದೇಶ ಕೊಡುತ್ತೀರಿ. ನಾನು ನೀವು ಮಕ್ಕಳಿಗೆ ಆದೇಶ ನೀಡುತ್ತೇನೆ – ಇದೇ ನನ್ನ ಕೃಪೆ ಅಥವಾ ಆಶೀರ್ವಾದವಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದು ಬೆಳಗ್ಗೆ-ಬೆಳಗ್ಗೆ ಬಂದವರು ಯಾರು….

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ನಾವು ಮಕ್ಕಳನ್ನು ಬೆಳಗ್ಗೆ-ಬೆಳಗ್ಗೆ ಏಳಿಸಲು ಯಾರು ಬಂದಿದ್ದಾರೆ ಯಾವುದರಿಂದ ನಮ್ಮ ಜ್ಞಾನದ ಮೂರನೇ ನೇತ್ರವು ಒಮ್ಮೆಲೆ ತೆರೆಯಿತು? ಜ್ಞಾನ ಸಾಗರ ಪರಮಪಿತ ಪರಮಾತ್ಮನ ಮೂಲಕ ನಮ್ಮ ಜ್ಞಾನದ ಮೂರನೇ ನೇತ್ರವು ತೆರೆದಿದೆ. ತಂದೆಯು ಜ್ಯೋತಿಯನ್ನು ಜಾಗೃತಗೊಳಿಸುವವರು ಎಂದು ಹೇಳುತ್ತಾರೆ ಆದರೆ ಅವರು ತಂದೆಯಾಗಿದ್ದಾರೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಅವರು ಜ್ಯೋತಿಯಾಗಿದ್ದಾರೆ ಎಂದು ಬ್ರಹ್ಮ ಸಮಾಜಿಗಳು ಹೇಳುತ್ತಾರೆ. ಮಂದಿರಗಳಲ್ಲಿ ಯಾವಾಗಲೂ ಜ್ಯೋತಿಯನ್ನೇ ಬೆಳಗಿಸುತ್ತಾರೆ ಏಕೆಂದರೆ ಅವರು ಪರಮಾತ್ಮನನ್ನು ಜ್ಯೋತಿ ಸ್ವರೂಪನೆಂದು ಒಪ್ಪುತ್ತಾರೆ ಆದ್ದರಿಂದ ಅಲ್ಲಿ ಮಂದಿರದಲ್ಲಿ ಜ್ಯೋತಿಯನ್ನು ಬೆಳಗಿಸುತ್ತಲೇ ಇರುತ್ತಾರೆ. ವಾಸ್ತವದಲ್ಲಿ ತಂದೆಯು ಯಾವುದೇ ಬೆಂಕಿ ಪೊಟ್ಟಣದಿಂದ ಜ್ಯೋತಿಯನ್ನು ಬೆಳಗಿಸುವುದಿಲ್ಲ. ಈ ಮಾತೇ ಭಿನ್ನವಾಗಿದೆ – ಈಶ್ವರನ ಗತಿಮತವು ಭಿನ್ನವಾಗಿದೆ ಎಂದು ಗಾಯನವಿದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯು ಸದ್ಗತಿಗಾಗಿ ಜ್ಞಾನ-ಯೋಗವನ್ನು ಕಲಿಸುತ್ತಾರೆ, ಕಲಿಸುವವರಂತೂ ಅವಶ್ಯವಾಗಿ ಬೇಕಲ್ಲವೆ. ಶರೀರವಂತೂ ಕಲಿಸುವುದಿಲ್ಲ, ಆತ್ಮವೇ ಎಲ್ಲವನ್ನೂ ಮಾಡುತ್ತದೆ. ಆತ್ಮದಲ್ಲಿ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ. ಈ ಸಮಯದಲ್ಲಿ ರಾವಣನ ಪ್ರವೇಶತೆಯಾಗಿರುವ ಕಾರಣ ಮನುಷ್ಯರ ಸಂಸ್ಕಾರವೂ ಕೆಟ್ಟದ್ದಾಗಿರುತ್ತದೆ ಅರ್ಥಾತ್ ಪಂಚ ವಿಕಾರಗಳ ಪ್ರವೇಶತೆಯಾಗಿದೆ. ದೇವತೆಗಳಲ್ಲಿ ಈ ಪಂಚ ವಿಕಾರಗಳು ಇರುವುದಿಲ್ಲ. ಭಾರತದಲ್ಲಿ ದೈವೀ ಸ್ವರಾಜ್ಯವಿದ್ದಾಗ ಈ ಕೆಟ್ಟ ಸಂಸ್ಕಾರವು ಇರಲಿಲ್ಲ. ಸರ್ವಗುಣ ಸಂಪನ್ನರಾಗಿದ್ದರು, ದೇವಿ-ದೇವತೆಗಳದು ಎಷ್ಟು ಒಳ್ಳೆಯ ಸಂಸ್ಕಾರವಿತ್ತು, ಅದನ್ನು ನೀವೀಗ ಧಾರಣೆ ಮಾಡಿಕೊಳ್ಳುತ್ತಿದ್ದೀರಿ. ತಂದೆಯೇ ಬಂದು ಸೆಕೆಂಡಿನಲ್ಲಿ ಸರ್ವರಿಗೆ ಸದ್ಗತಿ ನೀಡುತ್ತಾರೆ. ಬಾಕಿ ಗುರು-ಗೋಸಾಯಿಗಳಂತೂ ಭಕ್ತಿಮಾರ್ಗದಲ್ಲಿ ನಡೆಯುತ್ತಾ ಬಂದಿದ್ದಾರೆ, ಅವರು ಯಾರೊಬ್ಬರಿಗೂ ಗತಿ-ಸದ್ಗತಿ ನೀಡಲು ಸಾಧ್ಯವಿಲ್ಲ. ತಂದೆಯು ಬರುತ್ತಿದ್ದಂತೆಯೇ ಸರ್ವರ ಸದ್ಗತಿಯಾಗುತ್ತದೆ. ಬಂದು ಪತಿತ ಪ್ರಪಂಚದ ವಿನಾಶ ಮಾಡಿ ಪಾವನ ಪ್ರಪಂಚದ ಉದ್ಘಾಟನೆ ಮಾಡಿ ಅಥವಾ ಬಾಗಿಲನ್ನು ತೆರೆಯಿರಿ ಎಂದೇ ಪರಮಪಿತ ಪರಮಾತ್ಮನನ್ನು ಕರೆಯುತ್ತಾರೆ. ತಂದೆಯು ಬಂದು ಶಿವಶಕ್ತಿ ಮಾತೆಯರ ಮೂಲಕ ಸ್ವರ್ಗದ ಬಾಗಿಲನ್ನು ತೆರೆಸುತ್ತಾರೆ. ವಂದೇ ಮಾತರಂ ಎಂದು ಗಾಯನವಿದೆ. ಈ ಸಮಯದಲ್ಲಿ ಯಾವುದೇ ಮಾತೆಗೆ ವಂದನೆ ಮಾಡಲಾಗುವುದಿಲ್ಲ ಏಕೆಂದರೆ ಯಾರೊಬ್ಬರೂ ಶ್ರೇಷ್ಠಾಚಾರಿ ಮಾತೆಯರಿಲ್ಲ. ಯೋಗಬಲದಿಂದ ಜನ್ಮ ಪಡೆಯುವವರಿಗೆ ಶ್ರೇಷ್ಠಾಚಾರಿಗಳೆಂದು ಹೇಳಲಾಗುತ್ತದೆ. ಲಕ್ಷ್ಮೀ-ನಾರಾಯಣರಿಗೆ ಶ್ರೇಷ್ಠಾಚಾರಿಗಳೆಂದು ಹೇಳಲಾಗುತ್ತದೆ. ಭಾರತದಲ್ಲಿ ದೇವಿ-ದೇವತೆಗಳಿದ್ದಾಗ ಭಾರತವು ಶ್ರೇಷ್ಠಾಚಾರಿಯಾಗಿತ್ತು, ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ಅವರು ತಮ್ಮದೇ ಯೋಜನೆಗಳನ್ನು ಮಾಡುತ್ತಿದ್ದಾರೆ, ಗಾಂಧೀಜಿಯೂ ಸಹ ರಾಮ ರಾಜ್ಯವನ್ನು ಬಯಸುತ್ತಿದ್ದರು. ಈಗ ರಾವಣ ರಾಜ್ಯವಾಗಿದೆ ಎಂಬುದು ಇದರಿಂದಲೇ ಸಿದ್ಧವಾಗುತ್ತದೆ. ಭಾರತವು ಪತಿತವಾಗಿದೆ, ಆದರೆ ರಾಮ ರಾಜ್ಯವನ್ನು ಸ್ಥಾಪನೆ ಮಾಡುವುದಕ್ಕಾಗಿ ಬೇಹದ್ದಿನ ಬಾಪೂಜಿ ಬೇಕಾಗಿದೆ. ಅವರೇ ರಾಮ ರಾಜ್ಯದ ಸ್ಥಾಪನೆ ಮತ್ತು ರಾವಣ ರಾಜ್ಯದ ವಿನಾಶ ಮಾಡುವರು. ರಾವಣ ರಾಜ್ಯಕ್ಕೆ ಈಗ ಬೆಂಕಿ ಬೀಳಲಿದೆ ಎಂದು ಮಕ್ಕಳಿಗೆ ತಿಳಿದಿದೆ. ಎಲ್ಲಾ ಆತ್ಮರು ಅಜ್ಞಾನ ಅಂಧಕಾರದಲ್ಲಿ ಮಲಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ – ನಾವೂ ಸಹ ಮಲಗಿದ್ದೆವು, ತಂದೆಯು ಬಂದು ಜಾಗೃತ ಮಾಡುತ್ತಾರೆ. ಈಗ ಭಕ್ತಿಯ ರಾತ್ರಿಯು ಮುಕ್ತಾಯವಾಗಿದೆ ದಿನವು ಪ್ರಾರಂಭವಾಗುತ್ತದೆ. ರಾತ್ರಿಯು ಮುಗಿದು ಈಗ ಹಗಲಾಗುತ್ತಿದೆ, ತಂದೆಯು ಸಂಗಮದಲ್ಲಿ ಬಂದಿದ್ದಾರೆ. ಮಕ್ಕಳಿಗೆ ದಿವ್ಯ ದೃಷ್ಟಿ ಮತ್ತು ಜ್ಞಾನದ ಮೂರನೇ ನೇತ್ರವನ್ನು ಕೊಡುತ್ತಾರೆ. ಇದರಿಂದ ನೀವು ಇಡೀ ವಿಶ್ವವನ್ನು ಅರಿತುಕೊಂಡಿದ್ದೀರಿ. ನಿಮ್ಮ ಬುದ್ಧಿಯಲ್ಲಿ ಕುಳಿತಿದೆ – ಇದು ಮಾಡಿ-ಮಾಡಲ್ಪಟ್ಟ ಅವಿನಾಶಿ ನಾಟಕವಾಗಿದೆ, ಇದು ಸುತ್ತುತ್ತಲೇ ಇರುತ್ತದೆ. ನೀವೀಗ ಎಷ್ಟೊಂದು ಜಾಗೃತರಾಗಿದ್ದೀರಿ, ಇಡೀ ಪ್ರಪಂಚವು ಮಲಗಿದೆ. ಈಗ ನೀವು ಮಕ್ಕಳಿಗೆ ಇಡೀ ವಿಶ್ವದ ಆದಿ-ಮಧ್ಯ-ಅಂತ್ಯ, ಮೂಲವತನ-ಸೂಕ್ಷ್ಮವತನ-ಸ್ಥೂಲವತನದ ಬಗ್ಗೆ ತಿಳಿದಿದೆ. ಇಡೀ ಪ್ರಪಂಚವು ಕುಂಭಕರ್ಣನ ಅಜ್ಞಾನ ನಿದ್ರೆಯಲ್ಲಿ ಮಲಗಿದೆ. ಪತಿತ-ಪಾವನ ಯಾರೆಂಬುದು ಯಾರಿಗೂ ತಿಳಿದಿಲ್ಲ, ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಆದರೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿ ಎಂದು ಹೇಳುವುದಿಲ್ಲ. ತಂದೆಯು ಹೇಳುತ್ತಾರೆ – ನೀವು ಈ ಸೃಷ್ಟಿಚಕ್ರವನ್ನು ತಿಳಿದುಕೊಳ್ಳುವುದರಿಂದಲೇ ಚಕ್ರವರ್ತಿ ರಾಜರಾಗುತ್ತೀರಿ, ನೆನಪಿನಿಂದಲೇ ಪಾವನರಾಗುತ್ತೀರಿ. ಇದೂ ಸಹ ನಿಮಗೆ ತಿಳಿದಿದೆ, ವಿನಾಶವು ಸನ್ಮುಖದಲ್ಲಿ ನಿಂತಿದೆ. ಯುದ್ಧವೂ ಆಗಲಿದೆ ಆದರೆ ಯಾವುದೇ ಕೌರವರ ಪಾಂಡವರ ಯುದ್ಧವಾಗಲಿಲ್ಲ. ಪಾಂಡವರು ಯಾರಾಗಿದ್ದರು! ಇದೂ ಸಹ ಯಾರಿಗೂ ತಿಳಿದಿಲ್ಲ. ಇಲ್ಲಿ ಸೈನ್ಯ ಇತ್ಯಾದಿಗಳ ಮಾತಿಲ್ಲ. ನಿಮ್ಮ ಕಡೆ ಸಾಕ್ಷಾತ್ ಪಾರಲೌಕಿಕ ಪರಮಪಿತನಿದ್ದಾರೆ, ಆ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ನೀವು ಇದನ್ನು ಅರಿತಿದ್ದೀರಿ, ಕೃಷ್ಣನ ಆತ್ಮವು 84 ಜನ್ಮಗಳನ್ನು ತೆಗೆದುಕೊಂಡು ಈಗ ಪುನಃ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತಿದೆ. ಈಗ ನೀವು ಮಕ್ಕಳು ವಿನಾಶಕ್ಕೆ ಮೊದಲೇ ಸತೋಪ್ರಧಾನರಾಗಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿರಬೇಕಾಗಿದೆ. ಭಗವಾನುವಾಚ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಇದೊಂದು ಜನ್ಮ ಪವಿತ್ರರಾಗಿರಿ ಎಂದು ಗಾಯನವಿದೆ. ಕಳೆದದ್ದು ಕಳೆದುಹೋಯಿತು, ಇದಂತೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಸೃಷ್ಟಿಯು ಸತೋಪ್ರಧಾನವಾಗಲೇಬೇಕಾಗಿದೆ. ಇದು ಡ್ರಾಮಾದ ಪೂರ್ವ ನಿಶ್ಚಿತವಾಗಿದೆ. ಈಶ್ವರನ ಲೀಲೆಯಲ್ಲ, ಡ್ರಾಮಾದ ಲೀಲೆಯು ಹೀಗೆ ಮಾಡಲ್ಪಟ್ಟಿದೆ ಅದನ್ನು ತಂದೆಯು ತಿಳಿಸುತ್ತಾರೆ. ಅರ್ಧಕಲ್ಪವು ಮುಗಿದ ನಂತರ ತಂದೆಯು ಬರುತ್ತಾರೆ. ತಂದೆಯು ತಿಳಿಸುತ್ತಾರೆ – ಯಾವಾಗ ರಾತ್ರಿಯು ಮುಗಿದು ದಿನವು ಆರಂಭವಾಗುತ್ತದೆಯೋ ಆಗಲೇ ನಾನು ಬರುತ್ತೇನೆ, ಶಿವರಾತ್ರಿ ಎಂದೂ ಹೇಳುತ್ತಾರಲ್ಲವೆ. ಶಿವನ ಪೂಜಾರಿಗಳು ಶಿವರಾತ್ರಿಯನ್ನು ಆಚರಿಸುತ್ತಾರೆ ಆದರೆ ಸರ್ಕಾರವಂತೂ ರಜಾದಿನವನ್ನೂ ನಿಲ್ಲಿಸಿ ಬಿಟ್ಟಿದೆ. ಕೊನೆಪಕ್ಷ ಒಂದು ತಿಂಗಳಾದರೂ ರಜಾ ದಿನಗಳನ್ನು ಘೋಷಿಸಬೇಕು. ಶಿವ ತಂದೆಯು ಸರ್ವರ ಸದ್ಗತಿ ಮಾಡುವವರಾಗಿದ್ದಾರೆ, ಅವರೇ ಸರ್ವರ ದುಃಖಹರ್ತ-ಸುಖಕರ್ತನಾಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರ ಜಯಂತಿಯನ್ನಂತೂ ಬಹಳ ವಿಜೃಂಭಣೆಯಿಂದ ಒಂದು ತಿಂಗಳವರೆಗೆ ಎಲ್ಲಾ ಧರ್ಮದವರೂ ಆಚರಿಸಬೇಕಾಗಿದೆ ಏಕೆಂದರೆ ವಿಶೇಷವಾಗಿ ತಂದೆಯು ಬಂದು ಭಾರತಕ್ಕೆ ಸದ್ಗತಿ ನೀಡುತ್ತಾರೆ. ಭಾರತವು ಸ್ವರ್ಗವಾಗಿದ್ದಾಗ ದೇವಿ-ದೇವತೆಗಳ ರಾಜ್ಯವಿತ್ತು, ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ದೇವತೆಗಳು ವಿಶ್ವದ ಮಾಲೀಕರಾಗಿದ್ದರು. ಯಾವುದೇ ವಿಭಜನೆಯಿರಲಿಲ್ಲ ಆದ್ದರಿಂದ ಹೇಳಲಾಗುತ್ತದೆ- ಅಟಲ, ಅಖಂಡ, ಸುಖ-ಶಾಂತಿ, ಸಂಪತ್ತಿನ ದೈವೀ ರಾಜ್ಯವನ್ನು ಪುನಃ ನಾವು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೇವೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು 5000 ವರ್ಷಗಳ ಮೊದಲೂ ಸಿಕ್ಕಿತ್ತು, ಸೂರ್ಯವಂಶಿ-ಚಂದ್ರವಂಶಿಯರ ರಾಜ್ಯದಲ್ಲಿ ದುಃಖದ ಹೆಸರೂ ಇರಲಿಲ್ಲ. ಅದಕ್ಕಾಗಿಯೇ ರಾಮ ರಾಜ, ರಾಮ ಪ್ರಜೆ…. ಎಂದು ಗಾಯನವಿದೆ. ಅಲ್ಲಿ ಯಾವುದೇ ಅಧರ್ಮದ ಮಾತಿರುವುದಿಲ್ಲ.

ತಂದೆಯು ನಿಮಗೆ ಬ್ರಹ್ಮಾ ಮತ್ತು ವಿಷ್ಣುವಿನ ಬಗ್ಗೆ ತಿಳಿಸಿದ್ದಾರೆ – ಇವರಿಬ್ಬರಿಗೂ ಪರಸ್ಪರ ಏನು ಸಂಬಂಧವಿದೆ ಎಂದು. ವಿಷ್ಣುವಿನ ನಾಭಿ ಕಮಲದಿಂದ ಬ್ರಹ್ಮನು ಹೊರ ಬಂದನು, ಇದು ಎಂತಹ ಅದ್ಭುತ ಚಿತ್ರವನ್ನು ಮಾಡಿದ್ದಾರೆ. ತಂದೆಯು ತಿಳಿಸುತ್ತಾರೆ – ಈ ಲಕ್ಷ್ಮೀ-ನಾರಾಯಣರೇ ಅಂತ್ಯದಲ್ಲಿ ಬಂದು ಬ್ರಹ್ಮಾ-ಸರಸ್ವತಿ, ಜಗದಂಬಾ-ಜಗತ್ಪಿತನಾಗಿದ್ದಾರೆ. ಇವರಿಬ್ಬರೂ ಪುನಃ ವಿಷ್ಣು ಅರ್ಥಾತ್ ಲಕ್ಷ್ಮೀ-ನಾರಾಯಣನಾಗುತ್ತಾರೆ. ತಂದೆಯು ತಿಳಿಸುತ್ತಾರೆ – ಯಾವುದೆಲ್ಲಾ ಚಿತ್ರಗಳನ್ನು ನೋಡುತ್ತೀರೋ ಇದರಲ್ಲಿ ಯಾವುದೂ ಯಥಾರ್ಥವಲ್ಲ. ಶಿವನ ದೊಡ್ಡ ಚಿತ್ರವನ್ನು ತೋರಿಸುತ್ತಾರೆ, ಅದೂ ಸಹ ಅಯತಾರ್ಥವಾಗಿದೆ. ಭಕ್ತಿಯ ಕಾರಣ ದೊಡ್ಡ ಗಾತ್ರದಲ್ಲಿ ಮಾಡಿದ್ದಾರೆ ಇಲ್ಲದಿದ್ದರೆ ಬಿಂದುವಿಗೆ ಹೇಗೆ ಪೂಜೆ ಮಾಡುವುದು? ಮತ್ತೆ ಬ್ರಹ್ಮಾ-ವಿಷ್ಣು, ಶಂಕರನ ಬಗ್ಗೆಯೂ ತಿಳಿದುಕೊಂಡಿಲ್ಲ. ತ್ರಿಮೂರ್ತಿ ಬ್ರಹ್ಮಾ ಎಂದು ಹೇಳುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ ಎಂಬುದನ್ನೂ ಹೇಳುತ್ತಾರೆ ಆದರೆ ಬ್ರಹ್ಮನಂತೂ ಸ್ಥಾಪನೆ ಮಾಡುವುದಿಲ್ಲ. ಬ್ರಹ್ಮನು ಸ್ವರ್ಗದ ಸ್ಥಾಪನೆ ಮಾಡುವರೇ? ಇಲ್ಲ. ಪರಮಪಿತ ಪರಮಾತ್ಮನೇ ಸ್ಥಾಪನೆ ಮಾಡುತ್ತಾರೆ, ಈ (ಬ್ರಹ್ಮಾ) ಆತ್ಮವಂತೂ ಪತಿತನಾಗಿದೆ. ಇವರಿಗೆ ವ್ಯಕ್ತ ಬ್ರಹ್ಮನೆಂದು ಹೇಳಲಾಗುತ್ತದೆ, ಇದೇ ಆತ್ಮವು ಪಾವನವಾಗಿ ಮತ್ತೆ ಹೊರಟು ಹೋಗುವುದು. ನಂತರ ಸತ್ಯಯುಗದಲ್ಲಿ ಇವರೇ ನಾರಾಯಣನಾಗುತ್ತಾರೆ ಅಂದಮೇಲೆ ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಇಲ್ಲಿಯೇ ಬೇಕಲ್ಲವೆ ಆದರೆ ಚಿತ್ರವನ್ನು ಅಲ್ಲಿ ತೋರಿಸಿದ್ದಾರೆ. ಹೇಗೆ ವಾಸ್ತವದಲ್ಲಿ ಈ ಜ್ಞಾನದ ಅಲಂಕಾರಗಳು ನಿಮ್ಮದಾಗಿವೆ ಆದರೆ ವಿಷ್ಣುವಿಗೆ ತೋರಿಸಿದ್ದಾರೆ. ನೌಧಾಭಕ್ತಿಯಲ್ಲಿಯೂ ಸಾಕ್ಷಾತ್ಕಾರವಾಗುತ್ತದೆ, ಮೀರಾಳ ಹೆಸರಿನ ಗಾಯನವಿದೆಯಲ್ಲವೆ. ಪುರುಷನಲ್ಲಿ ಮೊಟ್ಟ ಮೊದಲನೇ ಭಕ್ತ ನಾರದನೆಂದು, ಮಾತೆಯರಲ್ಲಿ ಮೀರಾ ಎಂದು ಗಾಯನವಿದೆ. ನೀವೀಗ ನಾರಾಯಣ ಅಥವಾ ಲಕ್ಷ್ಮಿಯನ್ನು ವರಿಸುವುದಕ್ಕಾಗಿ ಈ ಜ್ಞಾನ ಕೇಳುತ್ತಿದ್ದೀರಿ, ನಿಮ್ಮದೇ ಸ್ವಯಂವರವಾಗುತ್ತದೆ. ಸಭೆಯಲ್ಲಿ ಬಂದು ನಾನು ಲಕ್ಷ್ಮಿಯನ್ನು ವರಿಸಬಲ್ಲೆನೆ? ಎಂದು ನಾರದನು ಕೇಳಿದನೆಂದು ತೋರಿಸುತ್ತಾರೆ. ನೀವೀಗ ಲಕ್ಷ್ಮಿಯನ್ನು ವರಿಸಲು ಯೋಗ್ಯರಾಗುತ್ತಿದ್ದೀರಿ ಬಾಕಿ ಅವೆಲ್ಲವೂ ಭಕ್ತಿಮಾರ್ಗದ ಕಥೆಗಳಾಗಿವೆ. ತಂದೆಯು ಸತ್ಯ ಮಾತನ್ನು ತಿಳಿಸುತ್ತಾರೆ. ಲಕ್ಷ್ಮಿಯಿರುವುದು ಸತ್ಯಯುಗದಲ್ಲಿ, ನಾರದ ಭಕ್ತನಿರುವುದು ದ್ವಾಪರದಲ್ಲಿ ಅಂದಮೇಲೆ ನಾರದನು ಸತ್ಯಯುಗದಲ್ಲಿ ಎಲ್ಲಿಂದ ಬಂದನು! ರಾಧೆ-ಕೃಷ್ಣನಿಗೆ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣ ಎಂದು ಹೆಸರಿಡಲಾಗುತ್ತದೆ. ಇದನ್ನೂ ಸಹ ಭಾರತವಾಸಿಗಳು ತಿಳಿದುಕೊಂಡಿಲ್ಲ. ಎಷ್ಟು ಅಜ್ಞಾನ ಅಂಧಕಾರವಿದೆ! ತಂದೆಯು ಕಲ್ಯಾಣಕಾರಿಯಾಗಿದ್ದಾರೆ, ನಿಮ್ಮನ್ನೂ ಸಹ ಕಲ್ಯಾಣಕಾರಿಗಳನ್ನಾಗಿ ಮಾಡುತ್ತಾರೆ. ಅನ್ಯರಿಗೆ ಹೇಗೆ ತಿಳಿಸಬೇಕೆಂದು ಈಗ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ – ಚಿತ್ರ ಇತ್ಯಾದಿಗಳನ್ನು ಹೇಗೆ ರಚಿಸಿದ್ದಾರೆ! ಗಾಂಧೀಜಿಯ ನಾಭಿಯಿಂದ ನೆಹರು ಬಂದರು, ಈಗ ವಿಷ್ಣು ದೇವತೆಯರೆಲ್ಲಿ, ಆ ಮನುಷ್ಯರೆಲ್ಲಿ…. ಇವೆಲ್ಲಾ ಮಾತುಗಳನ್ನು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ. ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆಂದು ನಿಮಗೆ ನಂಬರ್ವಾರ್ ಖುಷಿಯಿದೆ. ಇದನ್ನಂತೂ ಎಂದೂ ಹೇಳಿಲ್ಲ ಏಕೆಂದರೆ ಗೀತೆಯನ್ನು ಕೃಷ್ಣ ಭಗವಾನುವಾಚ ಎಂದು ಬರೆದು ಬಿಟ್ಟಿದ್ದಾರೆ. ಭಗವಂತನು ಯಾವಾಗ ಬಂದರು? ಯಾವಾಗ ಬಂದು ಗೀತೆಯನ್ನು ತಿಳಿಸಿದರು! ತಿಥಿ, ತಾರೀಖು ಏನೂ ಇಲ್ಲ. ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಈಗ ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಬ್ರಾಹ್ಮಣ ವೃಕ್ಷವು ವೃದ್ಧಿಯಾಗುತ್ತಾ ಇರುತ್ತದೆ. ವೃದ್ಧಿಯಾಗಿ ಬಹಳಷ್ಟು ಮಂದಿ ಮಕ್ಕಳಾಗುವರು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ವರ್ಣಗಳಲ್ಲಿ ಹೇಗೆ ಸುತ್ತುತ್ತೇವೆ? ನಾವು ಬ್ರಾಹ್ಮಣರ ವರ್ಣವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ನಾವು ಭಾರತದ ಗುಪ್ತವಾದ ಸತ್ಯ ಆತ್ಮಿಕ ಸಮಾಜ ಸೇವಕರಾಗಿದ್ದೇವೆ. ಪರಮಪಿತ ಪರಮಾತ್ಮನು ನಮ್ಮಿಂದ ಸೇವೆ ಮಾಡಿಸುತ್ತಿದ್ದಾರೆ. ನಾವು ಆತ್ಮಿಕ ಸೇವೆ ಮಾಡುತ್ತೇವೆ, ಅವರು ದೈಹಿಕ ಸೇವೆ ಮಾಡುತ್ತಾರೆ. ನೀವು ಭಾರತಕ್ಕೆ ಏನು ಸೇವೆ ಮಾಡುತ್ತೀರಿ ಎಂದು ನಿಮ್ಮನ್ನು ಕೇಳುತ್ತಾರೆ. ಆಗ ತಿಳಿಸಿರಿ, ನಾವು ಆತ್ಮಿಕ ಸೇವಾಧಾರಿಗಳಾಗಿದ್ದೇವೆ. ಸ್ವರ್ಗದ ಉದ್ಘಾಟನೆ ಮಾಡಿಸುತ್ತಿದ್ದೇವೆ. ಸ್ಥಾಪನೆ ಮಾಡಿಸುತ್ತಿದ್ದೇವೆ. ಶಿವ ತಂದೆಯು ಮಾಡಿ-ಮಾಡಿಸುವವರಾಗಿದ್ದಾರೆ, ಅವರು ಮಾಡಿಸುತ್ತಿದ್ದಾರೆ ಮತ್ತು ತಾನೂ ಮಾಡುತ್ತಾರೆ, ಮುರುಳಿಯನ್ನು ಯಾರು ನುಡಿಸುತ್ತಾರೆ? ಅಂದಾಗ ತಂದೆಯು ಕರ್ಮ ಮಾಡುತ್ತಾರೆ. ನಿಮಗೂ ಹೀಗೆ ಮಾಡಿರಿ ಎಂದು ಕಲಿಸುತ್ತಾರೆ. ಮನ್ಮನಾಭವ ಮಂತ್ರವನ್ನು ಕೊಡುತ್ತಾರೆ ಅಂದಾಗ ಕರ್ಮವನ್ನು ಕಲಿಸಿದಂತಾಯಿತಲ್ಲವೆ. ನಂತರ ಅನ್ಯರಿಗೂ ಕಲಿಸಿಕೊಡಿ ಎಂದು ನಿಮಗೆ ಹೇಳುತ್ತಾರೆ ಆದ್ದರಿಂದ ಅವರಿಗೆ ಮಾಡಿ-ಮಾಡಿಸುವವರು ಎಂದು ಹೇಳಲಾಗುತ್ತದೆ. ನೀವು ಮಕ್ಕಳೂ ಸಹ ಇದೇ ಶಿಕ್ಷಣವನ್ನು ಕೊಡುತ್ತೀರಿ – ತಂದೆಯನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ನೀವು ಮಕ್ಕಳು ಇದೇ ಸಂದೇಶವನ್ನು ಕೊಡಬೇಕಾಗಿದೆ. ಅನ್ಯರಿಗೆ ಸಂದೇಶ ಕೊಟ್ಟು ತಾನು ನೆನಪಿನಲ್ಲಿ ಇಲ್ಲವೆಂದರೆ ಏನಾಗುವುದು? ಅನ್ಯರು ಮಾತ್ರ ಪುರುಷಾರ್ಥ ಮಾಡಿ ಮೇಲೇರುತ್ತಾರೆ, ಸಂದೇಶವನ್ನು ಕೊಡುವವರು ಹಿಂದುಳಿಯುತ್ತೀರಿ. ನೆನಪಿನ ಪುರುಷಾರ್ಥ ಮಾಡದಿದ್ದರೆ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಸಂದೇಶವನ್ನು ಪಡೆದವರು ನೆನಪಿನ ಯಾತ್ರೆಯಿಂದ ಪಾವನರಾಗಿಬಿಡುತ್ತಾರೆ. ಹೇಗೆ ತಂದೆಯು ಬಂಧನದಲ್ಲಿ ಇರುವವರ ಉದಾಹರಣೆ ನೀಡುತ್ತಾರೆ. ಅವರು ಹೆಚ್ಚು ನೆನಪಿನಲ್ಲಿರುತ್ತಾರೆ. ತಂದೆಯನ್ನು ನೋಡಿರದಿದ್ದರೂ ಸಹ ಪತ್ರ ಬರೆಯುತ್ತಾರೆ – ಬಾಬಾ, ನಾವು ನಿಮ್ಮವರು ಆಗಿ ಬಿಟ್ಟಿದ್ದೇವೆ, ನಾವು ಖಂಡಿತವಾಗಿಯೂ ಪವಿತ್ರರಾಗಿರುತ್ತೇವೆ ಎಂದು. ನೀವು ಮಕ್ಕಳಿಗೆ ತಂದೆಯ ಜೊತೆ ಪ್ರೀತಿ ಬುದ್ಧಿಯಿದೆ, ನಿಮ್ಮದೇ ಮಾಲೆಯು ಮಾಡಲ್ಪಟ್ಟಿದೆ. ವಿಷ್ಣುವಿನ ಮಾಲೆ ಮತ್ತು ರುದ್ರಾಕ್ಷಿ ಮಾಲೆಯಲ್ಲಿ ಮೇಲೆ ಜೋಡಿ ಮಣಿಗಳಿವೆ, ಮಾಲೆಯನ್ನು ಕೈಗೆತ್ತಿಕೊಂಡ ಕೂಡಲೇ ಮೊದಲು ಹೂ ಮತ್ತು ಎರಡು ಮಣಿಗಳು ಕೈಗೆ ಬರುತ್ತವೆ. ಅದಕ್ಕೆ ನಮಸ್ಕರಿಸುತ್ತಾರೆ, ಅದರ ನಂತರ ಇಡೀ ಮಾಲೆಯನ್ನು ಜಪಿಸುತ್ತಾರೆ. ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ ಆದ್ದರಿಂದ ಈ ಮಾಲೆಯು ನಿಮ್ಮದೇ ನೆನಪಾರ್ಥವಾಗಿದೆ. ತಂದೆಯು ಈ ಗೀತಾ ಜ್ಞಾನ ಯಜ್ಞವನ್ನು ರಚಿಸಿದ್ದಾರೆ, ಇದರಲ್ಲಿ ಇಡೀ ಹಳೆಯ ಪ್ರಪಂಚವೇ ಸ್ವಾಹಾ ಆಗುವುದು. ತಂದೆಯು ಅತಿ ಪ್ರಿಯನಾಗಿದ್ದಾರೆ, ನಿಮಗೆ ಭವಿಷ್ಯ 21 ಜನ್ಮಗಳಿಗಾಗಿ ಸದಾ ಸುಖದ ಆಸ್ತಿಯನ್ನು ಕೊಡುತ್ತಾರೆ. ಯಾರು ಕಲ್ಪದ ಹಿಂದೆ ಡ್ರಾಮಾದ ಅನುಸಾರ ಬಂದು ಆಸ್ತಿಯನ್ನು ತೆಗೆದುಕೊಂಡಿದ್ದಾರೆಯೋ ಅವರು ಅವಶ್ಯವಾಗಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸುಖಧಾಮದಲ್ಲಿ ಹೋಗಬೇಕೆಂದರೆ ಪವಿತ್ರರಾಗಿರಿ, ನನ್ನನ್ನು ನೆನಪು ಮಾಡಿರಿ. ಬಾಬಾ, ಕೃಪೆ ಮಾಡಿ-ಸಹಾಯ ಮಾಡಿ ಎಂದು ಏನನ್ನೂ ಬೇಡಬಾರದು. ನಾನಂತೂ ಎಲ್ಲರಿಗೂ ಸಹಯೋಗ ನೀಡುತ್ತೇನೆ ಆದರೆ ಪುರುಷಾರ್ಥವನ್ನಂತೂ ನೀವೇ ಮಾಡಬೇಕಾಗಿದೆ. ಇಲ್ಲಿ ಆಶೀರ್ವಾದದ ಮಾತಿಲ್ಲ. ಕೇವಲ ನನ್ನೊಬ್ಬನನ್ನೇ ನೆನಪು ಮಾಡಿರಿ. ನೆನಪು ಮಾಡುವುದು ನಿಮ್ಮ ಕರ್ತವ್ಯವಾಗಿದೆ. ಆದೇಶ ನೀಡುವುದು ನನ್ನ ಕೃಪೆಯಾಗಿದೆ. ಭಲೆ ತಿನ್ನಿರಿ, ಕುಡಿಯಿರಿ, ಸುತ್ತಾಡಿರಿ…. ಆದರೆ ನೀವು ಪವಿತ್ರ ಭೋಜನವನ್ನೇ ಸ್ವೀಕರಿಸಬೇಕಾಗಿದೆ. ನಾವು ದೇವಿ-ದೇವತೆಗಳಾಗುತ್ತೇವೆ ಅಂದಮೇಲೆ ಅಲ್ಲಿ ಈ ಈರುಳ್ಳಿ ಇತ್ಯಾದಿಗಳು ಇರುತ್ತವೆಯೇ? ಇದೆಲ್ಲವನ್ನೂ ಇಲ್ಲಿಯೇ ಬಿಡಬೇಕಾಗುತ್ತದೆ. ಈ ಪದಾರ್ಥಗಳು ಅಲ್ಲಿರುವುದಿಲ್ಲ, ಬೀಜವೇ ಇರುವುದಿಲ್ಲ. ಹೇಗೆ ಸತ್ಯಯುಗದಲ್ಲಿ ಖಾಯಿಲೆ ಇತ್ಯಾದಿಗಳು ಇರುವುದೇ ಇಲ್ಲ. ಈಗ ನೋಡಿ, ಎಷ್ಟೊಂದು ಖಾಯಿಲೆಗಳು ಬಂದು ಬಿಟ್ಟಿವೆ! ಅಲ್ಲಿ ತಮೋಗುಣಿಯಾದ ಯಾವುದೇ ವಸ್ತುವಿರುವುದಿಲ್ಲ. ಪ್ರತಿಯೊಂದು ವಸ್ತು ಸತೋಪ್ರಧಾನಾವಾಗಿ ಇರುತ್ತದೆ. ಇಲ್ಲಿ ನೋಡಿ ಮನುಷ್ಯರು ಎಂತೆಂತಹ ಪದಾರ್ಥಗಳನ್ನು ತಿನ್ನುತ್ತಾರೆ! ಈಗ ತಂದೆ ಮಕ್ಕಳಿಗೆ ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ ಮತ್ತು ಎಲ್ಲಾ ಸಂಗಗಳನ್ನು ಬಿಟ್ಟು ನನ್ನ ಸಂಗ ಮಾಡಿರಿ ಆಗ ನೀವು ಪಾವನರಾಗುವಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಕಳೆದದ್ದು ಕಳೆದು ಹೋಯಿತು, ಏನು ಕಳೆಯಿತೋ ಅದನ್ನು ಮರೆತು ಗೃಹಸ್ಥ ವ್ಯವಹಾರದಲ್ಲಿರುತ್ತಾ ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. ವಿನಾಶಕ್ಕೆ ಮೊದಲೇ ಅವಶ್ಯವಾಗಿ ಪಾವನರಾಗಬೇಕಾಗಿದೆ.

2. ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸತ್ಯ-ಸತ್ಯವಾದ ಸೇವೆಯಲ್ಲಿ ತತ್ಫರರಾಗಿರಬೇಕಾಗಿದೆ. ಆಹಾರ-ಪಾನೀಯಗಗಳು ಬಹಳ ಶುದ್ಧವಾಗಿರಲಿ. ಪವಿತ್ರ ಭೋಜನವನ್ನೇ ಸ್ವೀಕರಿಸಬೇಕಾಗಿದೆ.

ವರದಾನ:-

ಆತ್ಮಿಕ ಪರಿಮಳವುಳ್ಳ ಗುಲಾಬಿಯು ತನ್ನ ಆತ್ಮಿಕ ವೃತ್ತಿಯ ಮೂಲಕ ದೂರ-ದೂರದವರೆಗೂ ಆತ್ಮೀಯತೆಯ ಸುಗಂಧವನ್ನು ಹರಡಿಸುತ್ತದೆ. ಅಂತಹವರ ದೃಷ್ಟಿಯಲ್ಲಿ ಸದಾ ಪರಮ ಆತ್ಮನೇ ಸಮಾವೇಶವಾಗಿರುತ್ತದೆ. ಅವರು ಸದಾ ಆತ್ಮನನ್ನು ನೋಡು, ಆತ್ಮನೊಂದಿಗೇ ಮಾತನಾಡುವರು. ನಾನು ಆತ್ಮನಿದ್ದೇನೆ, ಸದಾ ಪರಮ ಆತ್ಮನ ಛತ್ರಛಾಯೆಯಲ್ಲಿ ನಡೆಯುತ್ತಿದ್ದೇನೆ, ನಾನು ಆತ್ಮನಿಂದ ಮಾಡಿಸುವವರು ಪರಮ ಆತ್ಮನಾಗಿದ್ದಾರೆ, ಹೀಗೆ ಪ್ರತೀ ಸೆಕೆಂಡಿನಲ್ಲಿಯೂ ಪ್ರಭುವಿನ ಹಾಜರಿಯ ಅನುಭವ ಮಾಡುವವರು, ಸದಾ ಆತ್ಮಿಕ ಸುಗಂಧದಲ್ಲಿ ಅವಿನಾಶಿ ಮತ್ತು ಏಕರಸವಾಗಿ ಇರುತ್ತಾರೆ. ಆತ್ಮಿಕ ಸೇವಾಧಾರಿಯ ಮೊಟ್ಟ ಮೊದಲನೇ ವಿಶೇಷತೆಯು ಇದೇ ಆಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top