17 January 2022 KANNADA Murli Today | Brahma Kumaris

Read and Listen today’s Gyan Murli in Kannada

January 16, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಪ್ರೀತಿಯಿಂದ ಮುರಳಿಯನ್ನು ಕೇಳಿ ಹಾಗೂ ಹೇಳಿ, ಜ್ಞಾನ ರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಕೊಂಡಾಗ ಭವಿಷ್ಯದಲ್ಲಿ ರಾಜ್ಯಾಧಿಕಾರಿಯಾಗುತ್ತೀರಿ”

ಪ್ರಶ್ನೆ:: -

ಶಿವಬಾಬಾರವರಿಗೆ ಭೋಲಾನಾಥನೆಂದು ಏಕೆ ಹೇಳಲಾಗುತ್ತದೆ?

ಉತ್ತರ:-

ಏಕೆಂದರೆ ಶಿವ ತಂದೆಯು ಸರ್ವ ಮಕ್ಕಳ ಭಾಗ್ಯವನ್ನು ಒಂದು ಸೆಕಂಡಿನಲ್ಲಿ ಮಾಡಿ ಬಿಡುತ್ತಾರೆ. ರಾಜಾ ಜನಕನಿಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಪ್ರಾಪ್ತಿಯಾಯಿತು ಎಂದು ಹೇಳಲಾಗುತ್ತದೆ. ಆದರೆ ತಂದೆಯು ಒಬ್ಬ ಜನಕನಿಗಷ್ಟೇ ಜೀವನ್ಮುಕ್ತಿಯನ್ನು ಕೊಡುವುದಿಲ್ಲ. ನಿಮ್ಮೆಲ್ಲರಿಗೂ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಕೊಟ್ಟು ಬಿಡುತ್ತಾರೆ. ಭಾರತದ ಭಾಗ್ಯವನ್ನು ಮಾಡುತ್ತಾರೆ. ದುಃಖಿ ಮಕ್ಕಳನ್ನು ಸದಾ ಕಾಲಕ್ಕೋಸ್ಕರ ಸುಖಿಗಳನ್ನಾಗಿ ಮಾಡಿ ಬಿಡುತ್ತಾರೆ ಆದ್ದರಿಂದ ಅವರನ್ನು ಎಲ್ಲರು ಭೋಲನಾಥನೆಂದು ಹೇಳುತ್ತಾ ನೆನಪು ಮಾಡುತ್ತಾರೆ. ಶಂಕರನಿಗೆ ಭೋಲಾನಾಥನೆಂದು ಹೇಳಲಾಗುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಭೋಲಾನಾಥನಿಗಿಂತ ಭಿನ್ನ……

ಓಂ ಶಾಂತಿ. ಮಕ್ಕಳ ಪ್ರತಿ ಭೋಲಾನಾಥ ತಂದೆಯ ಮೊದಲನೇಯ ಆದೇಶವಾಗಿದೆ – ಭೋಲಾನಾಥನ ನೆನಪಿನಲ್ಲಿರಿ. ಮನುಷ್ಯರಿಗೆ ಭೋಲ (ಮುಗ್ಧ) ಎಂದು ಹೇಳಲಾಗದು. ಭೋಲಾನಾಥ ಶಿವ ತಂದೆಗಷ್ಟೇ ಹೇಳುವುದು. ಶಂಕರಿನಿಗೂ ಸಹ ಭೋಲಾನಾಥನೆಂದು ಹೇಳುವುದಿಲ್ಲ. ಭಾಗ್ಯವನ್ನು ಮಾಡುವವರು ಅರ್ಥಾತ್ ದುಃಖಿಗಳನ್ನು ಸುಖಿಗಳನ್ನಾಗಿ ಮಾಡುವಂತಹವರಿಗೆ ಭೋಲಾನಾಥನೆಂದು ಕರೆಯಲಾಗುತ್ತದೆ. ಭಾರತೀಯರ ಭಾಗ್ಯವನ್ನು ಮಾಡುವುದೆಂದರೆ ಭಾರತದ ಭಾಗ್ಯವನ್ನು ಮಾಡುವಂತಹವರು ಅವಶ್ಯವಾಗಿ ಭಾರತದಲ್ಲಿಯೇ ಬರುವರಲ್ಲವೇ? ಭಾಗ್ಯವನ್ನು ಮಾಡುವಂತಹ ಯುಕ್ತಿ ಒಂದು ಸೆಕೆಂಡಿನಲ್ಲಿ ತಿಳಿಸುತ್ತಾರೆ. ಜನಕನಿಗೂ ಉಪಾಯವನ್ನು ತಿಳಿಸಿದ್ದರು. ಕೇವಲ ಒಬ್ಬರದೇ ಭಾಗ್ಯವಾಗುವುದಿಲ್ಲ. ಒಂದುವೇಳೆ ಜನಕನ ಭಾಗ್ಯವನ್ನು ಮಾಡಿ ಅವರೆ ಜೀವನ್ಮುಕ್ತಿ ಪಡೆದುಕೊಂಡರೆ ಅವನ ರಾಜಧಾನಿಯು ಅಗತ್ಯವಾಗಿ ಇರಬೇಕಲ್ಲವೆ? ಆಗ ಅವನ ಜೊತೆ ಅನೇಕರಿಗೆ ಜೀವನ್ಮುಕ್ತಿ ದೊರೆತಿರಬೇಕು. ಭಾರತ ಜೀವನ್ಮುಕ್ತವಾಗಿತ್ತು ಎಂದು ಭಾರತವಾಸಿಯರು ಸಹ ತಿಳಿದುಕೊಂಡಿದ್ದಾರೆ. ಸ್ವರ್ಗಕ್ಕೆ ಜೀವನ್ಮುಕ್ತಯೆಂದು ಕರೆಯಲಾಗುತ್ತದೆ. ನರಕಕ್ಕೆ ಜೀವನ ಬಂಧನವೆಂದು ಕರೆಯಲಾಗುತ್ತದೆ. ಇದಾಗಿದೆ ರಾಜಯೋಗ. ರಾಜಯೋಗದಿಂದ ರಾಜ್ಯ ಸ್ಥಾಪನೆಯಾಗುತ್ತದೆ. ಆದುದರಿಂದ ಒಬ್ಬ ಜನಕನ ಮಾತಲ್ಲ. ಭಗವಂತ ರಾಜಯೋಗವನ್ನು ಕಲಿಸಿ ರಾಜ್ಯವನ್ನು ಕೊಟ್ಟಿದ್ದಾರೆ. ಸತ್ಯಯುಗದ ಲಕ್ಷ್ಮೀ ನಾರಾಯಣರು ರಾಜ್ಯವನ್ನು ಹೇಗೆ ಪಡೆದರೆಂಬುದನ್ನು ಖಂಡಿತವಾಗಿ ನೀವು ನೋಡಿತ್ತೀರಿ. ಈಗಂತೂ ಕಲಿಯುಗವಿದೆ. ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯ ಸ್ಥಾಪನೆಯಾಗಿ ಬಿಟ್ಟಿದೆ. ಇದು ಪಂಚಾಯಿತಿ ರಾಜ್ಯವಾಗಿದೆ. ಇದರ ನಂತರ ಸತ್ಯಯುಗವಿದೆ. ಲಕ್ಷ್ಮೀ-ನಾರಾಯಣರು ಹಿಂದಿನ ಜನ್ಮದಲ್ಲಿ ಅಂತಹ ಕರ್ತವ್ಯವನ್ನು ಮಾಡಿ ಸೂರ್ಯವಂಶಿ ರಾಜ್ಯ ಪಡೆದರೆಂದು ನೀವು ತಿಳಿದಿದ್ದೀರಿ. ನಂತರ ಚಂದ್ರವಂಶ ರಾಜ್ಯವಾಗಿದೆ. ಅದು ಸೂರ್ಯವಂಶದಿಂದ ಪರಿವರ್ತನೆಯಾಗಿ ಚಂದ್ರವಂಶ ರಾಜ್ಯವಾಯಿತು. ಗೀತೆಯು ಸರ್ವೋತ್ತಮ ಶಾಸ್ತ್ರವೆಂದು ನೀವು ತಿಳಿದಿದ್ದೀರಿ. ಇದರಿಂದಲೇ ಮೂರು ಧರ್ಮ ಸ್ಥಾಪನೆಯಾಗುತ್ತದೆ. ಹಾಗೂ ಪ್ರತಿಯೊಂದು ಧರ್ಮದ ಶಾಸ್ತ್ರವು ಒಂದೇ ಆಗಿರುತ್ತದೆ. ಸಂಗಮದ ಶಾಸ್ತ್ರವೂ ಸಹ ಒಂದೇ ಆಗಿದೆ ಎಲ್ಲರ ಗೀತೆಯ ಮಹಿಮೆಯಾಗಿದೆ, ಇದರಿಂದ ಸರ್ವರ ಸದ್ಗತಿಯಾಗುತ್ತದೆ. ಆದುದರಿಂದ ಸದ್ಗತಿ ಮಾಡುವವರು ಸಹ ಒಬ್ಬರೇ ಆಗಿದ್ದಾರೆ. ರುದ್ರ ಜ್ಞಾನ ಯಜ್ಞದ ವರ್ಣನೆ ಗೀತೆಯಲ್ಲಿ ಸ್ಪಷ್ಟವಾಗಿದೆ. ಈ ಯಜ್ಞದಿಂದ ಹಳೆಯ ನರಕದ ವಿನಾಶವಾಗಿ ಸ್ವರ್ಗ ಸ್ಥಾಪನೆ ಆಗುತ್ತದೆ. ಇದರಲ್ಲಿ ಗೊಂದಲವಾಗುವ ಮಾತೇಯಿಲ್ಲ. ತಂದೆ ತಿಳಿಸಿದ್ದಾರೆ ವಿಶ್ವದಲ್ಲಿ ಸ್ವರ್ಗ ಸ್ಥಾಪನೆ ಮಾಡುವಂತಹ ವಿಶ್ವದ ಮಾಲಿಕ ತಂದೆ ಒಬ್ಬರೇ ಆಗಿದ್ದಾರೆಂದು ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕು. ಅವರು ಸರ್ವರಿಗೂ ಪಿತ ಆಗ್ಗಿದ್ದಾರೆ, ಲಕ್ಷ್ಮೀ-ನಾರಾಯಣರು ವಿಶ್ವದ ಮಾಲಿಕರು. ಅವರಿಗೆ ಶಿವ ತಂದೆಯೇ ಅವಶ್ಯವಾಗಿ ರಾಜ್ಯ ಕೊಟ್ಟಿರಬೇಕು. ಇದು ಕಲಿಯುಗವಾಗಿದೆ. ಭಾರತವು ಕವಡೆ ಸಮಾನ ಇದೆ, ಸಾಲವು ವೃದ್ಧಿಯಾಗುತ್ತಾ ಹೋಗುತ್ತಿದೆ. ಆದುದರಿಂದ ಚಿನ್ನ ತೆಗೆದುಕೊಳ್ಳುವ ಪ್ರಬಂಧ ಮಾಡಿತ್ತಿರುತ್ತಾರೆ. ಪುನಃ ಭಾರತ ವಜ್ರ ಸಮಾನ ಹೇಗೆ ಆಗುತ್ತದೆ. ಲಕ್ಷ್ಮೀ-ನಾರಾಯಣರಿಗೆ ಸ್ವರ್ಗದ ರಾಜ್ಯವು ದೊರೆತಿದೆಯಲ್ಲವೆ.

ನಿಂದನೆ ಕೇಳಲೇಬೇಕು ಎಂದೂ ಸಹ ಮಕ್ಕಳು ತಿಳಿದಿದ್ದೀರಿ. ಭಾರತದಲ್ಲಿ ದೇವತೆಗಳು ಸಹ ನಿಂದನೆಯನ್ನು ಕೇಳುತ್ತಾ ಬಂದಿದ್ದಾರೆ ಹಾಗೂ ಬೇರೆ ದೇಶದವರು ಬಹಳ ಮಹಿಮೆ ಮಾಡುತ್ತಾರೆ. ಏಕೆಂದರೆ ಅವರು ದೇವತೆಗಳೇ ಭಾರತದ ಪ್ರಾಚೀನ ಮಾಲಿಕರೆಂದು ತಿಳಿದಿದ್ದಾರೆ. ಈಗ ಮಕ್ಕಳು ನೀವು ಪ್ರತ್ಯಕ್ಷವಾಗಿ ನೋಡುತ್ತಿದ್ದೀರಿ. ನಿಮ್ಮಲ್ಲಿಯೂ ಸಹ ಯಾರಿಗೆ ವಿಶಾಲ ಬುದ್ದಿಯಿದೆ ಅವರಿಗೆ ತುಂಬಾ ಖುಷಿಯಾಗುತ್ತದೆ. ಧಾರಣೆ ಮಾಡಿ ಅನ್ಯರಿಗೂ ಧಾರಣೆ ಮಾಡಿಸುವವರೇ ವಿಶಾಲ ಬುದ್ದಿಯವರಾಗಿದ್ದಾರೆ. ಬೇರೆ ಸತ್ಸಂಗ ಮುಂತಾದವುಗಳಲ್ಲಿ ಐದು-ಹತ್ತು ಸಾವಿರ ಜನರು ಪ್ರತಿ ನಿತ್ಯ ಹೋಗುತ್ತಾರೆ, ಇಲ್ಲಿಗೆ ಇಷ್ಟೊಂದು ಜನರು ಬರುವುದೇ ಇಲ್ಲವೆಂದು ತಿಳಿಯಬಾರದು. ಏಕೆಂದರೆ ಭಕ್ತಿಯಂತೂ ಅಗತ್ಯವಾಗಿ ವೃದ್ದಿಯಾಗುತ್ತಾ ಹೋಗುತ್ತದೆ. ಭಕ್ತಿಯಿಂದ ದೇವೀ ದೇವತಗಳ ವೃಕ್ಷವು ವೃದ್ಧಿಯಾಗುತ್ತಾ ಹೋಗುತ್ತದೆ. ಕಲ್ಪದ ಹಿಂದೆ ಯಾರು ಈ ಮಾತುಗಳನ್ನು ತಿಳಿದುಕೊಂಡಿದ್ದೀರೋ ಈಗ ಅವರೇ ತಿಳಿದುಕೊಳ್ಳುತ್ತಾರೆ. ಜನರು ಕಥೆ ಕೇಳಿ ತಮ್ಮ ಮನೆಗೆ ಹಿಂತಿರುಗಿದರೆ ಮುಗಿಯುತು ಅಷ್ಟೆ. ಇಲ್ಲಿಯಾದರೊ ಎಷ್ಟೊಂದು ಶ್ರಮ ಪಡಬೇಕಾಗುತ್ತದೆ ಪವಿತ್ರತೆಗಾಗಿ ಎಷ್ಟೊಂದು ಜಗಳ ನಡೆಯುತ್ತದೆ. ಸರ್ಕಾರವು ಏನೂ ಮಾಡಲು ಸಾಧ್ಯವಿಲ್ಲ. ಈ ಪಾಂಡವ ಸರ್ಕಾರವಂತೂ ಗುಪ್ತವಾಗಿದೆ. ಗುಪ್ತ ಸೈನ್ಯ ಎಂಬ ಹೆಸರಿದೆ. ನೀವು ಶಕ್ತಿ ಸೇನೆ ಗುಪ್ತವಾಗಿದ್ದೀರಿ. ನಿಮ್ಮನ್ನು ಯಾರು ಗುರುತಿಸಲು ಆಗುವುದಿಲ್ಲ. ನೀವು ಅಹಿಂಸಕ ಶಕ್ತಿಸೈನ್ಯ ಆಗಿದ್ದೀರಿ. ಇದರ ಅರ್ಥವನ್ನು ಯಾರು ತಿಳಿದುಕೊಳ್ಳಲಾಗುವುದಿಲ್ಲ. ಗೀತೆಯ ಅಕ್ಷರ ಅರ್ಥವನ್ನು ತಿಳಿಯಲಾರರು. ಈ ಜ್ಞಾನ ಪ್ರಾಯಃಲೋಪ ಆಗಿ ಬಿಡುತ್ತದೆಂದು ಸ್ವಯಂ ತಂದೆಯೆ ಹೇಳುತ್ತಿದ್ದಾರೆ. ಲಕ್ಷ್ಮಿ ನಾರಾಯಣರಲ್ಲು ಈ ಜ್ಞಾನ ಇರುವುದಿಲ್ಲ. ನಾನು ಈ ಜ್ಞಾನವನ್ನು ಹೇಳಿ ರಾಜಧಾನಿ ಸ್ಥಾಪನೆ ಮಾಡುತ್ತಿದ್ದೇನೆ. ಇದೂ ಸಹ ಯಾರ ಬುದ್ದಿಯಲ್ಲಿ ಇಲ್ಲ. ಈ ಬ್ರಹ್ಮಾ ತಂದೆಯು ಗೀತೆ ಮುಂತಾದವುಗಳನ್ನು ಓದುತ್ತಿದ್ದರು, ಆದರೆ ಈ ಮಾತುಗಳು ಅವರ ಬುದ್ದಿಯಲ್ಲಿ ಇತ್ತೇನು?ಈಗ ಎಷ್ಟೊಂದು ಸೇವಾಕೇಂದ್ರಗಳು ತೆರೆಯಲ್ಪಡುತ್ತಿವೆ. ಪ್ರತ್ಯಕ್ಷವಾಗಿ ಪವಿತ್ರತೆಗಾಗಿ ವಿಘ್ನವು ಬೀಳುತ್ತಿದೆ. ಮೊದಲು ಸಹ ವಿಘ್ನಗಳು ಬರುತಿದ್ದವು. ಆ ಗೀತಾ ಪಾಠಶಾಲೆಗಳಲ್ಲಿ ವಿಘ್ನದ ಮಾತು ಇರುವುದಿಲ್ಲ. ಇಲ್ಲಿ ನೀವು ಬ್ರಹ್ಮಾಕುಮಾರ-ಕುಮಾರಿಯಾಗಿದ್ದೀರಿ. ಈ ಅಕ್ಷರವಂತೂ ಗೀತೆಯಲ್ಲೂ ಸಹ ಇಲ್ಲ. ಇದೆಲ್ಲವು ತಿಳಿಯವಂತಹ ಮಾತುಗಳಾಗಿವೆ. ಕೇವಲ ಭಾರತವಾಸಿಗಳು ಮಾತ್ರವಷ್ಟೆ ಪ್ರಜಾಪಿತ ಬ್ರಹ್ಮನ ಮಕ್ಕಳು, ಬ್ರಹ್ಮಾಕುಮಾರ-ಕುಮಾರಿಯರಲ್ಲ, ಸೃಷ್ಟಿಯ ಪ್ರತಿಯೊಬ್ಬ ಮನುಷ್ಯರು ಆಗಿದ್ದಾರೆ. ಎಲ್ಲರೂ ಪ್ರಜಾಪಿತ ಬ್ರಹ್ಮನಿಗೆ “ಆಡಮ್”ಎಂದು ಹೇಳುತ್ತಾರೆ. ಅವರು ಸೃಷ್ಟಿಯ ಮೊದಲನೆ ಹಿರಿಯರೆಂದು ತಿಳಿದಿದ್ದಾರೆ. ಮನುಷ್ಯ ಸೃಷ್ಟಿಯನ್ನು ಸ್ಥಾಪನೆ ಮಾಡುವವರು ಆಗಿದ್ದಾರೆ. ಈ ರೀತಿಯಲ್ಲ, ಸೃಷ್ಟಿಯಿರಲೇ ಇಲ್ಲ, ಆಗ ಬ್ರಹ್ಮನ ಜನ್ಮವಾಯಿತು, ಅವರ ಮುಖದಿಂದ ಮನುಷ್ಯರನ್ನು ರಚಿಸಲಾಯಿತು. ಈ ರೀತಿ ಸಾಧ್ಯವಿಲ್ಲ. ಒಂದುವೇಳೆ ಯಾವುದೇ ಮನುಷ್ಯರಿಲ್ಲದಾಗ ಮತ್ತೆ ಮುಖವಂಶಾವಳಿಯು ಜನ್ಮ ಪಡೆಯಲಾಗುವುದಿಲ್ಲ. ಬ್ರಹ್ಮ ಮುಖವಂಶಾವಳಿಯು ಇರಲಾಗದು, ಬ್ರಹ್ಮ ಕುಖವಂಶಾವಳಿಯು ಇರಲಾಗದು. ಸೃಷ್ಟಿ ಇದ್ದೇ ಇರುತ್ತದೆ. ಆದರೆ ಹಳೆಯದನ್ನು ಹೊಸದನ್ನಾಗಿ ಪರವರ್ತನೆ ಮಾಡಲಾಗುತ್ತದೆ. ಈ ಹೊಸ ಹೊಸ ಮಾತುಗಳನ್ನು ತಿಳಿದುಕೊಳ್ಳಬೇಕಾಗಿದೆ. ಕೆಲವರು ತಿಳಿದುಕೊಳ್ಳಲು ಸಮಯವು ಆಗುತ್ತದೆ. ಕೆಲವರು ಒಂದೇ ತಿಂಗಳಿನಲ್ಲಿ ತಿಳಿದುಕೊಂಡು ಬಿಡುತ್ತಾರೆ. ಹೇಗೆ ನೋಡಿ-ಬೆಂಗಳೂರಿನ ಅಂಗಣ್ಣ ಮಗುವಿಗೆ ನಶೆ ಇರುತ್ತಿತ್ತು. ನಮ್ಮಲ್ಲಿ ಇಪ್ಪತ್ತು ವರ್ಷದವರಿಗೂ ಆ ನಶೆಯಿಲ್ಲ. ಅವರು ಖುಷಿಯಲ್ಲಿ ನೃತ್ಯ ಮಾಡುತ್ತಿದ್ದರು. ಭಗವಂತನೇ ಸಿಕ್ಕಿದ್ದಾರೆಂದರೆ-ಖುಷಿಯ ಮಾತಲ್ಲವೇ. ಮಾಯೆಯಿಂದ ಭಗವಂತನೇ ಬಂದು ರಕ್ಷಣೆ ಮಾಡುತ್ತಾ ನಂತರ ಸ್ವರ್ಗದ ರಾಜ್ಯ ಸ್ಥಾಪನೆ ಮಾಡುತ್ತಿದ್ದಾರೆ. ತಂದೆಯಾದರೊ ತುಂಬಾ ಸ್ಪಷ್ಟವಾಗಿ ತಿಳಿಸಿ ಕೊಡುತ್ತಾರೆ. ನಾನು ಈ ಸಾಧಾರಣ ಶರೀರದ ಮುಖಾಂತರ ಪುನಃ ಮಕ್ಕಳಿಗೆ ಅದೇ ಸಹಜ ರಾಜಯೋಗ ಹಾಗು ಸೃಷ್ಟಿ ಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕಲಿಸುತ್ತೇನೆ. ನೀವೂ ಬಂದರೆ ನಿಮಗೆ ನಾವು ತಮಗೆ ಸತ್ಯಯುಗದಿಂದ ಕಲಿಯುಗದ ಅಂತ್ಯದವರೆಗಿನ ಚರಿತ್ರೆ ಹೇಳುತ್ತೇವೆ. ಮತ್ತೆ ಈಗ ಹೇಗೆ ಸತ್ಯಯುಗ ಬರುತ್ತದೆ ಎಂದು ನೀವು ಅನ್ಯರಿಗೆ ಹೇಳಬಹುದು. ಕಲಿಸುವವರು ಅವಶ್ಯಕವಾಗಿ ಇರಬೇಕಾಗುತ್ತದೆ. ನಮಗೆ ಕಲಿಸುತ್ತಿರುವ ಕಾರಣ ತಿಳಿಸಿಕೊಡುತ್ತಿದ್ದೇವೆ. ಗೀತೆಯನ್ನು ನೀವು ತುಂಬಾ ಕೇಳಿದ್ದೀರಿ. ಬಹಳ ಉಪನ್ಯಾಸಗಳು ನಡೆಯುತ್ತಿರುತ್ತವೆ. ಆದರೆ ಅವರು ದೇವತಾ ಧರ್ಮದವರಲ್ಲದ ಕಾರಣ ಈ ಕಡೆ ಆಕರ್ಷಣೆ ಆಗುವುದಿಲ್ಲ. ಯಾವಾಗ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ, ಆಗ ವೃದ್ದಿಯಾಗುತ್ತದೆ. ನಿಧಾನ-ನಿಧಾನವಾಗಿ ವೃದ್ದಿಯಾಗುತ್ತಿರುತ್ತದೆ. ಭಾರತ ಎಷ್ಟೊಂದು ಬಡ ದೇಶವಾಗಿದೆ ಎಂದು ತಿಳಿದಿದ್ದಾರೆ. ಮನುಷ್ಯರೆಷ್ಟು ತುಂಬಾ ಹಸಿವಿನಿಂದ ಸಾಯಿತ್ತಿರುತ್ತಾರೆ. ದುಃಖಿಗಳು ಆಗುತ್ತಾರೆ. ಆದ್ದರಿಂದ ಭಗವಂತನನ್ನು ದುಃಖದಿಂದ ಬಿಡಸು ಎಂದು ಬೇಡುತ್ತಿರುತ್ತಾರೆ. ನೀವು ಮಕ್ಕಳಿಗೆ ಗೊತ್ತು, ಈ ಸೃಷ್ಟಿಯಲ್ಲಿ ಸುಖ ಯಾವಾಗ ಬರುತ್ತದೆ. ಇಲ್ಲಿ ಈ ಅವಿನಾಶಿ ಜ್ಞಾನರತ್ನಗಳಿಂದ ನಿಮ್ಮ ಜೋಳಿಗೆ ತುಂಬುತ್ತಿದೆ. ಮೊದಲು ಸಹ ನೀವೇ ಎಲ್ಲರೂ ತುಂಬಾ ಕೇಳಿರಬೇಕು, ಹಾಗೂ ಹೇಳಿರಬೇಕು, ಆದರೆ ಇಲ್ಲಿ ಜೋಳಿಗೆ ತುಂಬುವ ಪ್ರಶ್ನೆ ಇಲ್ಲ. ಜೋಳಿಗೆಯನ್ನು ಈಗ ಕೇವಲ ನೀವು ತುಂಬಿಕೊಳ್ಳುತ್ತಿದ್ದೀರಿ ಹಾಗೂ ಯಾರು ಕ್ಯಾಸೆಟ್ ನಿಂದ ಕೇಳುತ್ತಾರೆ, ಅಥವಾ ಮುರಳಿ ಓದುತ್ತಾರೆ, ಅಥವಾ ಕೇಳುತ್ತಿರುತ್ತಾರೆ ಅವರು ಸಹ ಜೋಳಿಗೆಯನ್ನು ತುಂಬಿಕೊಳ್ಳುತ್ತಿರುತ್ತಾರೆ.

ಭಾರತದ ಜೋಳಿಗೆ ತುಂಬುವಂತಹ ನೀವು ಶಿವಶಕ್ತಿ ಸೈನ್ಯ ಆಗಿದ್ದೀರಿ. ಇದರಿಂದ ಭಾರತ ತುಂಬಾ ಶ್ರೀಮಂತವಾಗಿ ಬಿಡುತ್ತದೆ. ಆದರೆ ಜೋಳಿಗೆ ತುಂಬಿವಂತಹವರೇ ರಾಜ್ಯವನ್ನು ಮಾಡುತ್ತಾರೆ. ಭಾರತ ಚಿನ್ನದ ಪಕ್ಷಿಯಾಗಿತ್ತು ಪುನಃ ಆಗಿ ಬಿಡುತ್ತದೆ. ಆಗ ಎಲ್ಲರು ಸುಖಿಗಳಾಗಿ ಬಿಡುತ್ತಾರೆ. ಆದರೆ ಭಾರತದಲ್ಲಿ ಕೋಟ್ಯಾಂತರ ಜನ ಸಂಖ್ಯೆ ಇದೆ. ಇವರೆಲ್ಲರು ಸತ್ಯಯುಗದಲ್ಲಿ ಬರುವುದಿಲ್ಲ. ಜೋಳಿಗೆ ತುಂಬುವಂತಹವರೆ ರಾಜ್ಯ ಭಾಗ್ಯವನ್ನು ಪಡೆದುಕೊಳ್ಳಬೇಕಾಗುತ್ತದೆ. ಇದು ಹೇಗೆ? ಎಂದು ಗೊಂದಲವಾಗುವ ಅವಶ್ಯಕತೆಯಿಲ್ಲ. ಈ ಲಕ್ಷ್ಮೀ-ನಾರಾಯಣರನ್ನು ನೋಡಿ ಇವರು ಸತ್ಯಯುಗದ ಮಾಲಿಕರಾಗಿದ್ದರು. ಶಿವ ತಂದೆಯು ಸತ್ಯಯುಗದ ರಚೈತ ಆಗಿದ್ದಾರೆ ಹಾಗು ಈ ಲಕ್ಷ್ಮಿ-ನಾರಾಯಣರು ಸತ್ಯಯುಗದ ಮಾಲಿಕರಾಗಿದ್ದಾರೆ. ಅವರು ಹಿಂದಿನ ಜನ್ಮದಲ್ಲಿ ಅಂತಹ ಪುರುಷಾರ್ಥ ಮಾಡಿರುತ್ತಾರೆ. ಅವರ ಹಿಂದಿನ ಜನ್ಮವು ಸಹ ಸಂಗಮಯುಗದಲ್ಲಿಯೇ ಆಗಿರಬೇಕು. ಈ ಸಂಗಮವು ಕಲ್ಯಾಣಕಾರಿಯಾಗಿದೆ ಯಲ್ಲವೆ? ಏಕೆಂದರೆ ಸಂಗಮಯುಗದಲ್ಲಿಯೇ ಪ್ರಪಂಚ ಪರಿವರ್ತನೆಯಾಗುತ್ತದೆ, ಆದ್ದರಿಂದ ಅವಶ್ಯಕವಾಗಿ ಕಲಿಯುಗ ಮತ್ತು ಸತ್ಯಯುಗ ಮಧ್ಯದಲ್ಲಿ ಜ್ಞಾನ ಪಡೆದಿರಬೇಕು. ಈಗ ಪುನಃ ಪಡೆಯುತ್ತಿದ್ದಾರೆ. ಯಾರಾದರೂ ನಿರಾಕಾರ ಪರಮಾತ್ಮ ಬಂದು ಹೇಗೆ ರಾಜಯೋಗವನ್ನು ಕಲಿಸಿಕೊಡುತ್ತಿದ್ದಾರೆಂದು ಕೇಳಿದರೆ ನೀವು ಈ ತ್ರಿಮೂರ್ತಿ ಚಿತ್ರವನ್ನು ತೋರಿಸಿ. ಬ್ರಹ್ಮನ ಮುಖಾಂತರ ಸ್ಥಾಪನೆ…. ಯಾರು ಸ್ಥಾಪನೆ ಮಾಡುತ್ತಾರೆ ಅವರೆ ಪಾಲನೆಯನ್ನು ಮಾಡುತ್ತಾರೆ. ಕ್ರೈಸ್ತ ಸ್ಥಾಪನೆ ಮಾಡಿದನಂತರ ಪಾಲನೆಗಾಗಿ ಅವಶ್ಯಕವಾಗಿ ಪೋಪ್ ರೂಪದಲ್ಲಿ ಬರಬೇಕಾಗುತ್ತದೆ. ಏಕೆಂದರೆ ಯಾರು ಹಿಂತಿರುಗಲು ಸಾಧ್ಯವಿಲ. ಅಗತ್ಯವಾಗಿ ಪಾಲನೆ ಮಾಡಬೇಕಾಗುತ್ತದೆ. ಪುನರ್ಜನ್ಮವನ್ನು ಇಲ್ಲವೆಂದರೆ ಈ ಸೃಷ್ಟಿ ಹೇಗೆ ವೃದ್ಧಿಯಾಗುತ್ತದೆ. ಸೃಷ್ಟಿಯ ಆದಿ ಸತ್ಯ ತ್ರೇತಾದಲ್ಲಿ ದೇವತೆಗಳ ರಾಜ್ಯವಿತ್ತು, ಆದ್ದರಿಂದ ಎಲ್ಲರಿಗಿಂತ ಜಾಸ್ತಿ ಜನ ಸಂಖ್ಯೆ ಅವರದ್ದೇ ಆಗಿರಬೇಕು. ಹಾಗಾದರೆ ಕ್ರೈಸ್ತರ ಜನ ಸಂಖ್ಯೆ ಏಕೆ ಜಾಸ್ತಿ ಆಯಿತು? ಈ ಎಲ್ಲಾ ಕಾರಣಗಳಿಂದ ಸೃಷ್ಟಿಯ ಆಯಸ್ಸು ಲಕ್ಷಾಂತರ ವರ್ಷಗಳ ಮಾತೇ ಉಳಿಯುವುದಿಲ್ಲ. ಯಾರು ದೇವತಾ ಕುಲದವರಾಗಿರುತ್ತಾರೆ ಅವರೇ ಈ ಎಲ್ಲಾ ಮಾತುಗಳನ್ನು ತಿಳಿದುಕೊಳ್ಳುತ್ತಾರೆ. ದೇವತಾ ಕುಲ ಅಲ್ಲದವರಿಗೆ ಬಾಣದ ಗುರಿ ತಲುಪುವುದೇ ಇಲ್ಲ. ಈ ಜ್ಞಾನವು ಬಾಣವಿದ್ದಂತೆ. ಬಾಬಾ ಹೇಳುತ್ತಾರೆ ಒಂದು ವೇಳೆ ಯಾರನ್ನಾದರು ಕರೆತಂದು ಜ್ಞಾನ ಬಾಣ ಬಿಡಿ, ಅವರು ಬ್ರಾಹ್ಮಣ ಕುಲದವರಾಗಿದ್ದರೆ ಮಾತ್ರ ಆ ಬಾಣದ ಗುರಿ ತಲುಪುತ್ತದೆ. ಯುದ್ದದಲ್ಲಿ ಯಾದವರು-ಕೌರವರು ನಾಶವಾದರೆಂದು ಶಾಸ್ತ್ರಗಳಲ್ಲಿ ತೋರಿಸುತ್ತಾರೆ. ಕೊನೆಯಲ್ಲಿ ಪಂಚ ಪಾಂಡವರು ಉಳಿದುಕೊಂಡರು. ಆದರೆ ಅವರು ಸಹ ಹಿಮಾಲಯದ ಮೇಲೆ ಹೋಗಿ ಕರಗಿ ಹೋದರು. ಆದರೆ ಈ ರೀತಿ ನಡೆಯಲು ಸಾಧ್ಯವಿಲ್ಲ. ಆತ್ಮ ಘಾತ ಮಹಾ ಪಾಪವೆಂದು ಹೇಳಲಾಗುತ್ತದೆ. ಆತ್ಮದ ಘಾತವೂ(ನಾಶ) ಸಹ ಆಗುವುದಿಲ್ಲ. ಆತ್ಮ ಸ್ವಯಂ ಶರೀರದ ವಿನಾಶ ಮಾಡಿ ಮತ್ತೊಂದು ಶರೀರ ಪಡೆಯುತ್ತದೆ. ಪಾಂಡವರಿಗೆ ಪರಮಾತ್ಮನೇ ಶ್ರೀಮತವನ್ನು ಕೊಡುತ್ತಿದ್ದರು. ಅಂತಹವರು ಪರ್ವತದ ಮೇಲೆ ಕರಿಗ ಹೋಗಲು ಸಾಧ್ಯವಿಲ್ಲ. ಒಳ್ಳೆಯದು ಪಂಚ ಪಾಂಡವರಷ್ಟೆ ಇದ್ದರು, ಉಳಿದ ಪಾಂಡವರು ಎಲ್ಲಿಗೆ ಹೋದರು, ಏಕೆಂದರೆ ಅವರ ಜೊತೆ ಸೈನ್ಯವನ್ನು ತೋರಿಸುವುದಿಲ್ಲ. ವಿನಾಶ ಹೇಗೆ ಆಗುತ್ತದೆ ಎಂದು ನೀವು ತಿಳಿದಿದ್ದೀರಿ. ಅದನ್ನು ನೀವು ನೋಡುತ್ತೀರಿ. ಮಕ್ಕಳಿಗೆ ತುಂಬಾ ಸಾಕ್ಷಾತ್ಕಾರವು ಆಗುತ್ತದೆ. ಯಜ್ಞದ ಆರಂಭದಲ್ಲಿ ನಿಮಗೆ ತುಂಬಾ ಸಾಕ್ಷಾತ್ಕಾರವಾಗುತ್ತಿತ್ತು. ಒಮ್ಮೊಮ್ಮೆ ಲಕ್ಷ್ಮೀಯನ್ನು, ಒಮ್ಮೊಮ್ಮೆ ನಾರಾಯಣನನ್ನು ಆಹ್ವಾನ ಮಾಡುತ್ತಿದ್ದರು. ಈ ರೀತಿ ಎಷ್ಟೊಂದು ಸಾಕ್ಷಾತ್ಕಾರವಾಗುತ್ತಿತ್ತು ಮತ್ತೆ ಯಾವಾಗ ಅಂತಿಮ ಸಮಯದಲ್ಲಿ ಹಾಹಾಕಾರ ಪ್ರಾರಂಭವಾಗುತ್ತದೆ. ಆಗ ನಿಮಗೆ ಮತ್ತೆ ಸಾಕ್ಷಾತ್ಕಾರವಾಗುತ್ತದೆ. ಯುದ್ದ (ತೊಂದರೆಗಳು) ಆರಂಭವಾದಾಗ ನೀವೆಲ್ಲಾ ಮಕ್ಕಳು ಇಲ್ಲಿಗೆ ಬಂದು ಸಂಘಟಿತರಾಗುತ್ತೀರಿ. ಆದ್ದರಿಂದಲೇ ಮಧುಬನದಲ್ಲಿ ಜಾಸ್ತಿ ಮನೆಗಳನ್ನು ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಮಕ್ಕಳನ್ನು ಈ ಸಾಕ್ಷಾತ್ಕಾರದಿಂದ ಖುಷಿ ಪಡುಸುತ್ತಿರುತ್ತಾರೆ. ಇಲ್ಲಿಗೆ (ಮಧುಬನ) ಬರುವುದು ಚಿಕ್ಕಮ್ಮನ ಮನೆಯಷ್ಟು ಸುಲಭವಲ್ಲ. ಸುಪುತ್ರ ಮಕ್ಕಳು ತಂದೆಗೆ ಸಹಯೋಗಿಗಳಾಗಿರುವವರೆ ಬರುತ್ತಾರೆ. ಒಂದುವೇಳೆ ಪಾಂಡವರು ಅಂತಿಮದಲ್ಲಿ ಕರಿಗಿ ಹೋಗುವುದಾದರೆ ಇಷ್ಟೊಂದು ಮನೆಗಳನ್ನು ಏಕೆ ಮಾಡುತ್ತಿದ್ದರು! ಯಾವುದೇ ಮಾತಿನಲ್ಲಿ ಗೊಂದಲವಾದರೆ ಅನನ್ಯ ಮಕ್ಕಳನ್ನು ಕೇಳಬಹುದು. ಇಲ್ಲಿ ಆದರೆ ಬ್ರಹ್ಮಾ ತಂದೆಯು ಕುಳಿತಿದ್ದಾರೆ. ಇವರು ತಿಳಿಸಲಿಲ್ಲವೆಂದರೆ ಹಿರಿಯ ತಂದೆ (ಶಿವ ಬಾಬಾ) ಕುಳಿತಿದ್ದಾರೆ. ಶಿವ ತಂದೆಯಂತೂ ಇದನ್ನು ತಿಳಿಸಿದ್ದಾರೆ. . . . . . . . ಇನ್ನೂ ತಿಳಿಯುವುದು ತುಂಬಾ ಇದೆ. ಪೂರ್ಣ ಚಕ್ರದ ರಹಸ್ಯವನ್ನು ತಿಳಿಸಿಕೊಡುತ್ತಾರೆ. ಎಷ್ಟೊಂದು ಜ್ಞಾನ ಬಿಂದುಗಳನ್ನು ಹೇಳುತ್ತಿರುತ್ತಾರೆ. ಇನ್ನು ಸಮಯವಿದೆಯೆಂದರೆ ಅವಶ್ಯಕವಾಗಿ ಇನ್ನು ತಿಳಿಸಿಕೊಡಬಹುದು. ಆದರೆ ಮೊಟ್ಟ ಮೊದಲನೆ ಮುಖ್ಯ ಮಾತನ್ನು ಅಗತ್ಯವಾಗಿ ಬರೆಸಬೇಕು, ಒಮ್ಮೆಯೇ ರಕ್ತದಿಂದಲು ಬರೆಸಬೇಕು. ಸತ್ಯವಾದ ಪರಮಪಿತ ಪರಮಾತ್ಮನೆ ನಮಗೆ ಓದುಸುತ್ತಿದ್ದಾರೆಂಬ ನಿಶ್ಚಯವಿದೆ. ಸುಮ್ಮನೆ ಹಾಗೆಯೇ ಬರೆದರೆ ಪರಿವರ್ತನೆ ಆಗುವುದಿಲ್ಲ. ನಾವು ಹಾಗೆ ಸುಮ್ಮನೆ ಬರೆದವು ಎಂದು ಹೇಳಿ ಬಿಡುತ್ತಾರೆ. ಯಾರೊಂದಿಗೂ ಹೆಚ್ಚಾಗಿ ಚರ್ಚೆ ಮಾಡಬಾರದು. ಭಗವಾನುವಾಚ-ಭಗವಂತನೆಂದು ನಾವು ಶಿವ ತಂದೆಯನ್ನು ಒಪ್ಪುಕೊಳ್ಳುತ್ತೇ ವೆಂದು ಹೇಳಬೇಕು. ಅವರು ಜ್ಞಾನಸಾಗರ ಸತ್-ಚಿತ್ ಆಗಿದ್ದಾರೆ. ಅವರಿಗೆ ತಮ್ಮದೇ ಆದ ಶರೀರವಿಲ್ಲ, ಆದುದರಿಂದ ಅವಶ್ಯಕವಾಗಿ ಸಾಧಾರಣ ಶರೀರದ ಆಧಾರ ಪಡೆದುಕೊಳ್ಳುತ್ತಾರಲ್ಲವೆ. ಮೊದಲಿಗೆ ನನ್ನೊಬ್ಬನನ್ನೇ ನೆನಪು ಮಾಡಿರೆಂದು ತಂದೆ ತಿಳಿಸುತ್ತಾರೆ, ದೇಹದ ಎಲ್ಲಾ ಧರ್ಮ ವನ್ನು ಬಿಟ್ಟು ನನ್ನನ್ನು ನೆನಪು ಮಾಡಿದಾಗ ವಿಕರ್ಮ ವಿನಾಶವಾಗಿ ನೀವು ನನ್ನ ಬಳಿಗೆ ಬಂದು ಬಿಡುತ್ತೀರಿ ಹಾಗು ಚಕ್ರವನ್ನು ನೆನಪು ಮಾಡುವುದರಿಂದ ನೀವು ಚಕ್ರವರ್ತಿ ರಾಜಾ ಆಗುತ್ತೀರಿ. ತಂದೆಯು ಎಷ್ಟೊಂದು ಮಧುರರಾಗಿದ್ದಾರೆ ಹಾಗು ನಮ್ಮನ್ನು ಎಷ್ಟೊಂದು ಮಧುರ ರನ್ನಾಗಿ ಮಾಡುತಿದ್ದಾರೆ. ಸತ್ಯಯುಗದ ಚಿನ್ಹೆಗಳವೆಲ್ಲವು ಪುನಃ ಅಗತ್ಯವಾಗಿ ಪುನರಾವರ್ತನೆ ಆಗುತ್ತವೆ. ಕಲಿಯುಗವು ಇದೆ. ನೀವೀಗ ರಾಜಯೋಗವನ್ನು ಕಲಿಯುತ್ತಿದ್ದೀರಿ. ವನಾಶವು ನಿಮ್ಮ ಮುಂದೆ ನಿಂತಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಸಮಾನರಾಗಬೇಕು. ಭಗವಂತ ಬಂದು ಮಾಯೆಯಿಂದ ನಮ್ಮ ರಕ್ಷಣೆ ಮಾಡುತ್ತಿದ್ದಾರೆನ್ನುವ ಖುಷಿಯಲ್ಲಿರಬೇಕು.

2. ಯಾವ ಮಾತಿನಲ್ಲಿ ಗೊಂದಲವಾಗಬಾರದು. ಸುಪುತ್ರ ಮಗುವಾಗಿ ತಂದೆಗೆ ಪೂರ್ಣ ಸಹಯೋಗಿಯಾಗಬೇಕು.

ವರದಾನ:-

ಹೇಗೆ ಬ್ರಹ್ಮಾ ತಂದೆಯವರು ತನ್ನ ಸಂಸ್ಕಾರವನ್ನಾಗಿ ಏನು ಮಾಡಿಕೊಂಡರು, ಅದನ್ನು ಎಲ್ಲಾ ಮಕ್ಕಳಿಗೂ ಅಂತ್ಯದ ಸಮಯದಲ್ಲಿ ನೆನಪು ತರಿಸಿದರು – ನಿರಾಕಾರಿ, ನಿರ್ವಿಕಾರಿ ಹಾಗೂ ನಿರಹಂಕಾರಿ. ಬ್ರಹ್ಮಾ ತಂದೆಯ ಈ ಸಂಸ್ಕಾರವೇ ಬ್ರಾಹ್ಮಣರಲ್ಲಿಯೂ ಸ್ವಾಭಾವಿಕವಾಗಿ ಸಂಸ್ಕಾರವಾಗಲಿ. ಸದಾ ಈ ಶ್ರೇಷ್ಠ ಸಂಸ್ಕಾರಗಳನ್ನೇ ಸನ್ಮುಖದಲ್ಲಿಟ್ಟುಕೊಳ್ಳಿರಿ. ಇಡೀ ದಿನದಲ್ಲಿ ಪ್ರತೀ ಕರ್ಮವನ್ನು ಮಾಡುವ ಸಮಯದಲ್ಲಿ ಪರಿಶೀಲನೆ ಮಾಡಿಕೊಳ್ಳಿರಿ – ಮೂರೂ ಸಂಸ್ಕಾರಗಳು ಸ್ವರೂಪದಲ್ಲಿದೆಯೇ! ಇವೇ ಸಂಸ್ಕಾರಗಳನ್ನು ಧಾರಣೆ ಮಾಡುವುದರಿಂದ ಸ್ವ-ಪರಿವರ್ತಕರಿಂದ ವಿಶ್ವ-ಪರಿವರ್ತಕರು ಆಗಿ ಬಿಡುತ್ತೀರಿ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:
ತಂದೆಗೆ ತಾವು ಮಕ್ಕಳೊಂದಿಗೆ ಇಷ್ಟೂ ಪ್ರೀತಿಯಿದೆ, ಅದು ಜೀವನದ ಸುಖ-ಶಾಂತಿಯ ಸರ್ವ ಕಾಮನೆಗಳನ್ನೂ ಪೂರ್ಣಗೊಳಿಸುತ್ತದೆ. ತಂದೆಯು ಸುಖವನ್ನಷ್ಟೇ ಕೊಡುವುದಿಲ್ಲ ಆದರೆ ಸುಖದ ಭಂಡಾರದ ಮಾಲೀಕರನ್ನಾಗಿ ಮಾಡಿಬಿಡುತ್ತಾರೆ. ಜೊತೆ-ಜೊತೆಗೆ ಶ್ರೇಷ್ಠ ಭಾಗ್ಯದ ರೇಖೆಯನ್ನೆಳೆಯುವ ಲೇಖನಿ (ಶ್ರೇಷ್ಠ ಕರ್ಮದ ಜ್ಞಾನ)ಯನ್ನೂ ಕೊಡುತ್ತಾರೆ. ಯಾರಿಗೆಷ್ಟು ಬೇಕೋ ಅಷ್ಟೂ ಭಾಗ್ಯವನ್ನು ಮಾಡಿಕೊಳ್ಳಬಹುದು – ಇದೇ ಪರಮಾತ್ಮನ ಪ್ರೀತಿಯಾಗಿದೆ.ಈ ಪ್ರೀತಿಯಲ್ಲಿಯೇ ಸಮಾವೇಶವಾಗಿರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top