17 August 2021 KANNADA Murli Today | Brahma Kumaris

Read and Listen today’s Gyan Murli in Kannada

August 16, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದರಲ್ಲಿ ನಿಮ್ಮ ಸಂಪಾದನೆಯೂ ಇದೆ, ಆರೋಗ್ಯವೂ ಇದೆ, ನೀವು ಅಮರರಾಗಿ ಬಿಡುತ್ತೀರಿ”

ಪ್ರಶ್ನೆ:: -

ಹೃದಯವನ್ನು ಶುದ್ಧ ಮಾಡಿಕೊಳ್ಳುವ ಸಹಜ ಯುಕ್ತಿ ಯಾವುದಾಗಿದೆ?

ಉತ್ತರ:-

ಎಲ್ಲಿಯಾದರೂ ಇರಿ ಟ್ರಸ್ಟಿಯಾಗಿ ಇರಿ. ಸದಾ ತಿಳಿದುಕೊಳ್ಳಿ – ನಾವು ಶಿವ ತಂದೆಯ ಭಂಡಾರದಿಂದ ತಿನ್ನುತ್ತೇವೆ. ಶಿವ ತಂದೆಯ ಭಂಡಾರದ ಭೋಜನವನ್ನು ತಿನ್ನುವವರ ಹೃದಯವು ಶುದ್ಧವಾಗುತ್ತಾ ಹೋಗುತ್ತದೆ. ಪ್ರವೃತ್ತಿಯಲ್ಲಿರುತ್ತಾ ಒಂದುವೇಳೆ ಶ್ರೀಮತದ ಪ್ರಮಾಣ ಆದೇಶದನುಸಾರ ಟ್ರಸ್ಟಿಯಾಗಿ ಇರುತ್ತೀರೆಂದರೆ ಅದೂ ಸಹ ಶಿವ ತಂದೆಯ ಭಂಡಾರವಾಗಿ ಬಿಡುತ್ತದೆ. ಮನಸ್ಸಿನಿಂದ ಸಮರ್ಪಿತವಾಗಿರುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಜನ್ಮ-ಜನ್ಮಾಂತರದಿಂದ ಅರ್ಧಕಲ್ಪ ಮಕ್ಕಳು ಸತ್ಸಂಗ ಮಾಡಿದ್ದೀರಿ, ಸಾಧು-ಸಂತ, ಪಂಡಿತ ಮೊದಲಾದವರ ಎಲ್ಲಾ ಮನುಷ್ಯರ ಸತ್ಸಂಗಗಳಿರುತ್ತವೆ. ಈಗ ಇಲ್ಲಿಯದು ಮನುಷ್ಯರ ಸತ್ಸಂಗವಲ್ಲ, ಇದಕ್ಕೆ ಆತ್ಮಿಕ ಸತ್ಸಂಗವೆಂದು ಹೇಳಲಾಗುತ್ತದೆ. ಪರಮಾತ್ಮನು ಆತ್ಮಗಳ ಜೊತೆ ಆತ್ಮಿಕ ವಾರ್ತಾಲಾಪ ಅರ್ಥಾತ್ ಸತ್ಸಂಗ ಮಾಡುತ್ತಾರೆ, ನೀವಿಲ್ಲಿ ಯಾವುದೇ ಮನುಷ್ಯರಿಂದ ಕೇಳುವುದಿಲ್ಲ ಅಥವಾ ದೇವತೆಗಳಿಂದಲೂ ಕೇಳುವುದಿಲ್ಲ, ನೀವು ಭಗವಂತನಿಂದ ಕೇಳುತ್ತೀರಿ. ಭಗವಂತನನ್ನು ಯಾವಾಗಲೂ ನಿರಾಕಾರನೆಂದು ಹೇಳಲಾಗುತ್ತದೆ ಮತ್ತು ಭಗವಂತನು ಮಕ್ಕಳನ್ನು ಭಗವಾನ್-ಭಗವತಿಯರನ್ನಾಗಿ ಮಾಡುವುದಕ್ಕಾಗಿ ಓದಿಸಲು ಬರುತ್ತಾರೆ. ಭಗವಾನ್ ಮತ್ತು ಭಗವತಿಯ ಪದವಿಯನ್ನು ಭಗವಂತನ ವಿನಃ ಅನ್ಯರ್ಯಾರೂ ಕೊಡಲು ಸಾಧ್ಯವಿಲ್ಲ. ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ, ಕಲ್ಪ-ಕಲ್ಪವೂ ಸಂಗಮಯುಗವಾದಾಗ ನಿರಾಕಾರ ಭಗವಂತನು ಬಂದು ನಮಗೆ ಜ್ಞಾನವನ್ನು ಕೊಡುತ್ತಾರೆ. ಇದನ್ನೂ ಸಹ ಕೇವಲ ನೀವೇ ತಿಳಿದುಕೊಳ್ಳುತ್ತೀರಿ. ಅನ್ಯರು ತಿಳಿದುಕೊಳ್ಳುವುದು ಬಹಳ ವಿರಳ. ಶಿವ ತಂದೆಯು ಖಂಡಿತ ಬರುತ್ತಾರೆ ಆದರೆ ಅವರ ಬದಲು ಕೃಷ್ಣನನ್ನು ಗೀತೆಯ ಭಗವಂತನೆಂದು ಹೇಳಿದ್ದಾರೆ ಆದ್ದರಿಂದ ಎಲ್ಲರ ಬುದ್ಧಿಯಲ್ಲಿ ಮನುಷ್ಯನ ತನುವೇ ಬರುತ್ತಿರುವುದು. ನೀವೇ ದೈವೀ ಗುಣವಂತರಾಗಿದ್ದಿರಿ, ಈಗ ಆಸುರೀ ಗುಣವಂತರಾಗಿದ್ದೀರಿ. ಈಗ ಪುನಃ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳುತ್ತೀರಿ. ದೈವೀ ಗುಣವುಳ್ಳವರಿಗೆ ಈಶ್ವರೀಯ ಸಂಪ್ರದಾಯವೆಂದು, ಆಸುರೀ ಗುಣವಿರುವವರಿಗೆ ಆಸುರೀ ಸಂಪ್ರದಾಯದವರೆಂದು ಹೇಳಲಾಗುತ್ತದೆ. ಈಗ ನಿರಾಕಾರ ತಂದೆಯು ನಿರಾಕಾರ ಸಂಪ್ರದಾಯ ಅರ್ಥಾತ್ ಆತ್ಮರಿಗೆ ಓದಿಸುತ್ತಾರೆ ಆದ್ದರಿಂದ ಈಶ್ವರೀಯ ಸಂಪ್ರದಾಯ ಅಥವಾ ಆತ್ಮಿಕ ಸಂಪ್ರದಾಯವೆಂದು ಹೇಳಲಾಗುತ್ತದೆ. ಅವರಿಗೇ ಆತ್ಮಿಕ ತಂದೆಯು ಬಂದು ಓದಿಸುತ್ತಾರೆ. ನೀವೀಗ ಆತ್ಮಾಭಿಮಾನಿಗಳಾಗುತ್ತೀರಿ. ನಾವಾತ್ಮರಾಗಿದ್ದೇವೆ, ತಂದೆಯು ನಮಗೆ ಓದಿಸುತ್ತಾರೆ. ತಂದೆಯು ತಿಳಿಸುತ್ತಾರೆ, ಮಕ್ಕಳೇ ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು. ತಂದೆಯು ಆತ್ಮರಿಗೇ ಓದಿಸುತ್ತಾರೆ, ಅವರೇ ಜ್ಞಾನಪೂರ್ಣನಾಗಿದ್ದಾರೆ ಮತ್ತು ಋಷಿ ಮುನಿ ಮೊದಲಾದವರೆಲ್ಲರೂ ನೇತಿ ನೇತಿ ಎಂದು ಹೇಳುತ್ತಾ ಹೋದರು ಅರ್ಥಾತ್ ನಾವು ಪರಮಾತ್ಮನನ್ನು ತಿಳಿದುಕೊಂಡಿಲ್ಲ ಎಂದು. ಎಲ್ಲಿಯವರೆಗೆ ಆ ಜ್ಞಾನ ಸಾಗರನೇ ಸನ್ಮುಖದಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಜ್ಞಾನವನ್ನು ಹೇಗೆ ತಿಳಿಸುವುದು! ಇವು ಬಹಳ ಚೆನ್ನಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ನಮಗೆ ಯಾವುದೇ ಮನುಷ್ಯರು ಓದಿಸುತ್ತಿಲ್ಲ, ತಂದೆಯು ಓದಿಸುತ್ತಾರೆ. ಅವರು ಬೇಹದ್ದಿನ ನಿರಾಕಾರನಾಗಿದ್ದಾರೆ. ಇದನ್ನೂ ಸಹ ಮಕ್ಕಳಿಗೆ ತಿಳಿಸಲಾಗಿದೆ – ಪ್ರತಿಯೊಬ್ಬರಿಗೆ ಸಾಕಾರ ಮತ್ತು ನಿರಾಕಾರ ಇಬ್ಬರು ತಂದೆಯರಿರುತ್ತಾರೆ. ಒಬ್ಬರು ಆತ್ಮಿಕ ತಂದೆ, ಇನ್ನೊಬ್ಬರು ದೈಹಿಕ ತಂದೆ. ಆತ್ಮಿಕ ತಂದೆಯೇ ಬಂದು ಆತ್ಮರನ್ನು ಪಾವನ ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ನಾವು ಪಾವನರಾಗಿದ್ದೆವು ನಂತರ ಪತಿತರಾದೆವು. ಈಗ ಪುನಃ ಪತಿತರಿಂದ ಹೇಗೆ ಪಾವನರಾಗುತ್ತೇವೆ! ಚಿತ್ರಗಳು ಸನ್ಮುಖದಲ್ಲಿವೆ. ತಂದೆಯು ಸಲಹೆ ನೀಡುತ್ತಾರೆ – ಪದೇ-ಪದೇ ಚಕ್ರದ ಮುಂದೆ ಹೋಗಿ ಕುಳಿತುಕೊಳ್ಳಿ ಆಗ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವು ಬಂದು ಬಿಡುತ್ತದೆ – ನಾವೀಗ ಸಂಗಮಯುಗದಲ್ಲಿ ಕುಳಿತಿದ್ದೇವೆ ಮತ್ತೆಲ್ಲರೂ ತಮ್ಮನ್ನು ಕಲಿಯುಗದಲ್ಲಿದ್ದೇವೆಂದು ತಿಳಿಯುತ್ತಾರೆ. ಕಲಿಯುಗಕ್ಕೆ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ನೀವೀಗ ಸಂಗಮದಲ್ಲಿದ್ದೀರಿ, ಈಗ ನಿಮಗೆ ಪ್ರಕಾಶತೆಯಿದೆ ಮತ್ತೆ ಸತ್ಯಯುಗದಲ್ಲಿ ನಿಮಗೆ ಈ ಜ್ಞಾನವು ಸಿಗುವುದಿಲ್ಲ. ತಂದೆಯು ಬಂದಾಗಲೇ ಘೋರ ಪ್ರಕಾಶತೆಯಾಗುತ್ತದೆ. ಈ ಸಂಗಮಯುಗವೇ ಕಲ್ಯಾಣಕಾರಿ ಯುಗವಾಗಿದೆ. ಇಂತಹ ಯುಗವು ಮತ್ತ್ಯಾವುದೂ ಇಲ್ಲ. ಈ ಸಮಯದಲ್ಲಿಯೇ ತಂದೆಯು ಬರುತ್ತಾರೆ. ಸತ್ಯಯುಗಕ್ಕೂ ಕಲ್ಯಾಣಕಾರಿ ಎಂದು ಹೇಳುವುದಿಲ್ಲ, ಅಲ್ಲಿ ಯಾರದೇ ಕಲ್ಯಾಣವಾಗುವುದಿಲ್ಲ. ಕಲ್ಯಾಣವು ಸಂಗಮಯುಗದಲ್ಲಿಯೇ ಆಗುತ್ತದೆ, ಸತ್ಯಯುಗದಲ್ಲಂತೂ ಕಲ್ಯಾಣವಾಗಿಯೇ ಇರುತ್ತದೆ. ಸಂಗಮದಲ್ಲಿಯೇ ಎಷ್ಟೊಂದು ಸತ್ಯಯುಗ, ಕಲ್ಯಾಣಕಾರಿಯನ್ನಾಗಿ ಮಾಡುತ್ತಾರೆ ಅಂದಮೇಲೆ ಈಗ ನೋಡಿ, ನಿಮ್ಮದು ಎಷ್ಟೊಂದು ಕಲ್ಯಾಣವಾಗುತ್ತದೆ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದರಲ್ಲಿ ನಿಮ್ಮದು ಎಷ್ಟು ಸಂಪಾದನೆಯಿದೆ! ಸಂಪಾದನೆಯೂ ಇದೆ ಮತ್ತೊಂದು ಕಡೆ ಆರೋಗ್ಯವೂ ಇದೆ. ನಿಮ್ಮ ಜೀವನವು ಅಮರವಾಗುತ್ತದೆ, ಎಂದೂ ಅಕಾಲ ಮೃತ್ಯುವಾಗುವುದಿಲ್ಲ. ಅಂದಾಗ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ಏಕೆಂದರೆ ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ಇಲ್ಲಿ ನೀವು ಮಕ್ಕಳು ಬರುತ್ತೀರೆಂದರೆ ಪುರುಷಾರ್ಥ ಮಾಡಿ ಮ್ಯೂಜಿಯಂನ ಚಿತ್ರಗಳ ಬಗ್ಗೆ ತಿಳಿಸಲು ಯೋಗ್ಯರಾಗಬೇಕು. ತಮ್ಮನ್ನು ಯೋಗ್ಯನನ್ನಾಗಿ ಮಾಡಿಕೊಳ್ಳಲು 7-8 ದಿನಗಳವರೆಗೆ ಕುಳಿತು ಕಲಿತುಕೊಳ್ಳಿ. ಅಭ್ಯಾಸವಾಯಿತೆಂದರೆ ಸೇವೆಗಾಗಿ ಹೊರಡಿರಿ. ಸೇವೆ ಮಾಡಿ ಮರಳಿ ಬನ್ನಿರಿ, ಇದನ್ನು ಕಲಿಯುವುದಂತೂ ಬಹಳ ಸಹಜವಾಗಿದೆ. ಚಿತ್ರವನ್ನು ಸನ್ಮುಖದಲ್ಲಿ ನೋಡುತ್ತಿದ್ದಂತೆಯೇ ಬುದ್ಧಿಯಲ್ಲಿ ಬಂದು ಬಿಡುತ್ತದೆ – ನಾವು ಸಂಗಮದಲ್ಲಿ ಕುಳಿತಿದ್ದೇವೆ, ಈಗಿನ ಪ್ರಪಂಚದಲ್ಲಿ ಬಹಳ ಜನಸಂಖ್ಯೆಯಿದೆ. ನಾಳೆಯ ದಿನ ಬಹಳ ಕಡಿಮೆ ಸಂಖ್ಯೆಯಿರುತ್ತದೆ, ಏಕೆಂದರೆ ಇಷ್ಟೊಂದು ಮನುಷ್ಯರೆಲ್ಲರೂ ಹಿಂತಿರುಗಿ ಹೋಗುವರು. ಈಗ ಸ್ವಯಂ ತಂದೆಯೇ ಬಂದಿದ್ದಾರೆ, ಮಕ್ಕಳಿಗೆ ಎಷ್ಟೊಂದು ಗೌರವ ಕೊಡುತ್ತಾರೆ. ದೂರ ದೇಶದಲ್ಲಿ ಇರುವವರು ಪರದೇಶದಲ್ಲಿ ಬಂದರು….. ರಾವಣನ ದೇಶವು ಪರದೇಶವಲ್ಲವೆ. ರಾಮನ ದೇಶದಲ್ಲಿ ಎಂದೂ ರಾವಣನು ಬರಲು ಸಾಧ್ಯವಿಲ್ಲ, ಇದರ ಮೇಲೆ ಒಂದು ಕಥೆಯನ್ನೂ ತಿಳಿಸುತ್ತಾರೆ. ಏನೆಲ್ಲಾ ಕಥೆಗಳನ್ನು ತಿಳಿಸುತ್ತಾರೆಯೋ ಅವೆಲ್ಲವೂ ದಂತ ಕಥೆಗಳಾಗಿವೆ. ಈ ಕಥೆಗಳಲ್ಲಿ ಯಾವುದೇ ಸಾರವೂ ಇಲ್ಲ, ಕಾದಂಬರಿಗಳಲ್ಲಿಯೂ ಯಾವುದೇ ಸಾರವಿಲ್ಲ. ಎಷ್ಟೊಂದು ಕಾದಂಬರಿ, ಪುಸ್ತಕಗಳು ಮಾರಾಟವಾಗುತ್ತವೆ. ಕೇವಲ ಇವನ್ನು ಮಾರುವವರೇ ಲಕ್ಷಾಧಿಪತಿಗಳಾಗುತ್ತಾರೆ.

ಈಗ ನೀವು ಮಕ್ಕಳ ಪಾಲನೆಯು ತಂದೆಯ ಕೈಯಲ್ಲಿದೆ. ನಿಮ್ಮೊಂದಿಗೇ ತಿನ್ನುವೆನು ಅರ್ಥಾತ್ ನಿಮ್ಮ ಭಂಡಾರದಿಂದಲೇ ತಿನ್ನುವೆನು….. ನಿಮ್ಮ ಎಲ್ಲಾ ಪಾಲನೆಯು ಇಲ್ಲಿಯೇ ಆಗುತ್ತದೆ, ಯಾರು ಸಮರ್ಪಿತರಾಗುತ್ತಾರೆಯೋ ಅವರ ಪಾಲನೆಯಂತೂ ಆಗಿಯೇ ಆಗುತ್ತದೆ ಆದರೆ ಮನಸ್ಸಿನಿಂದಲೂ ಇದೆಲ್ಲವೂ ಈಶ್ವರ ತಂದೆಯದಾಗಿದೆ, ನಾನು ಟ್ರಸ್ಟಿಯಾಗಿದ್ದೇನೆ, ನಾನು ಶ್ರೀಮತದ ಅನುಸಾರವೇ ನಡೆದು ಖರ್ಚು ಮಾಡುತ್ತೇನೆಂದು ಯಾರು ತಿಳಿದುಕೊಳ್ಳುವರೋ ಅವರೂ ಸಹ ಶಿವತಂದೆಯ ಭಂಡಾರದಿಂದಲೇ ಸ್ವೀಕಾರ ಮಾಡಿದಂತಾಗುತ್ತದೆ. ಶಿವ ತಂದೆಯ ಭಂಡಾರದಿಂದ ಸೇವಿಸುವುದರಿಂದ ಹೃದಯವು ಶುದ್ಧವಾಗುತ್ತದೆ. ಹೊರಗಿರುವವರು ಶಿವ ತಂದೆಯ ಭಂಡಾರದಿಂದ ಸ್ವೀಕಾರ ಮಾಡುವುದಿಲ್ಲ ಎಂದಲ್ಲ. ತಂದೆಯ ಆದೇಶದನುಸಾರ ನಡೆಯುವವರೂ ಸಹ ತಂದೆಯ ಭಂಡಾರದಿಂದಲೇ ಸೇವಿಸಿದಂತಾಗುತ್ತದೆ. ಯಾವ ಭಂಡಾರದಿಂದ ಸ್ವೀಕರಿಸುವರೋ ಆ ಭಂಡಾರ ಸಂಪನ್ನ ಮತ್ತು ಕಾಲ ಕಂಟಕಗಳು ದೂರವಾಗುತ್ತವೆ…. ಅದರ ನಂತರ ನೀವೆಂದೂ ಅಕಾಲಮೃತ್ಯು ಹೊಂದುವುದಿಲ್ಲ. ಈ ಸಮಯದಲ್ಲಿಯೇ ಶಿವ ತಂದೆಯು ಬರುತ್ತಾರೆ, ಅವರ ಮಹಿಮೆಯ ಗಾಯನವೂ ಇದೆ. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಅವರ ಜಯಂತಿ ಹೇಗಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯೂ ಸಹ ಅವಶ್ಯವಾಗಿ ಬರುತ್ತಾರಲ್ಲವೆ. ಯಾವ ಮಕ್ಕಳೆಲ್ಲರೂ ಬರುತ್ತಾರೆಯೋ ಅವರಿಗೆ ಶಿವ ತಂದೆಯ ಭಂಡಾರದಿಂದಲೇ ಆಹಾರವು ಸಿಗುತ್ತದೆ. ಪುರುಷರು ಸಮರ್ಪಿತರಾದರೆ ಸರಿ, ಒಂದುವೇಳೆ ಅವರು ಸಮರ್ಪಿತ ಆಗದಿದ್ದರೆ ಮಾತೆಯರು ಏನು ಮಾಡುವುದು? ಏಕೆಂದರೆ ಅದು ಪತಿಯ ಸಂಪಾದನೆಯಾಗಿರುತ್ತದೆ. ಅವರಂತೂ ಸಮರ್ಪಣೆಯಾಗುವುದಿಲ್ಲ. ಅವರು ಯಾವಾಗ ಸಂಪಾದಿಸುವರೋ ಆಗಲೇ ಸ್ತ್ರೀಯರು ಸ್ವೀಕರಿಸುವರು. ದಂಪತಿಗಳಿಬ್ಬರೂ ಸಮರ್ಪಿತ (ಮನಸ್ಸಿನಿಂದ) ರಾಗಿದ್ದಾಗ ಅಂತಹವರು ಪಾಲನೆಯು ಶಿವ ತಂದೆಯ ಭಂಡಾರದಿಂದ ಆಗುತ್ತದೆ ಎಂದರ್ಥ. ಇದೆಲ್ಲವನ್ನೂ ತಂದೆಯು ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸುತ್ತಾರೆ. ಬುದ್ಧಿಯಲ್ಲಿರಲಿ – ನಾವು ಕರ್ಮಾತೀತ ಆಗುವವರೆಗೆ ತಂದೆಯ ಬಳಿ ಕುಳಿತಿರುತ್ತೇವೆ. ದಿನ-ಪ್ರತಿದಿನ ನಾವು ನಮ್ಮ ಸ್ವರಾಜ್ಯಕ್ಕೆ ಸಮೀಪಿಸುತ್ತಾ ಹೋಗುತ್ತೇವೆ. ಸಮಯವು ಕಳೆಯುತ್ತಾ ಹೋಗುತ್ತದೆ. ನೀವು ಸಮೀಪ ಬರುತ್ತಾ ಹೋಗುತ್ತೀರಿ. ಸತ್ಯಯುಗದ ಮೊದಲ ವರ್ಷಕ್ಕೆ ಇನ್ನೆಷ್ಟು ವರ್ಷಗಳಿರಬಹುದು? ಈಗ ಎಷ್ಟು ಸಮೀಪ ಬಂದಿದ್ದೀರಿ? ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈಗ ನಿಮ್ಮ 84 ಜನ್ಮಗಳ ಚಕ್ರವು ಮುಕ್ತಾಯವಾಗುತ್ತದೆ, ನೀವೀಗ 84 ಜನ್ಮಗಳ ಚಕ್ರವನ್ನು ಅರಿತುಕೊಂಡಿದ್ದೀರಿ. ಚಕ್ರವನ್ನು ನೋಡುತ್ತಿದ್ದಂತೆಯೇ ನಾವೀಗ ಸಂಗಮಯುಗದಲ್ಲಿ ಇದ್ದೇವೆಂದು ಹೇಳುತ್ತಾರೆ. ಒಂದು ಕಡೆ ಕಲಿಯುಗ, ಇನ್ನೊಂದು ಕಡೆ ಸತ್ಯಯುಗವಿದೆ. ನಾಳೆ ನಾವು ನಮ್ಮ ಸುಖಧಾಮದಲ್ಲಿರುತ್ತೇವೆ. ಪ್ರಪಂಚದವರಿಗೆ ತಿಳಿದಿಲ್ಲ, ಅವರು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು, ಬೇಹದ್ದಿನ ತಂದೆಯಿಂದ ನಾವು 21 ಜನ್ಮಗಳ ಸಂಪಾದನೆ ಮಾಡಿಕೊಳ್ಳುತ್ತೇವೆ. ಸದಾ ಸುಖದ ಆಸ್ತಿಯನ್ನು ಪಡೆಯುತ್ತಿದ್ದೇವೆಂದು ಖುಷಿಯಿರುತ್ತದೆ, ಸ್ವರ್ಗವಾಸಿಗಳಾಗುವುದು ನಿಮ್ಮ ಅದೃಷ್ಟದಲ್ಲಿಯೂ ಇದೆ. ಸ್ವರ್ಗವು ಒಂದು ಅತ್ಯದ್ಭುತವಾಗಿದೆ. ಹೇಗೆ ಏಳು ಅದ್ಭುತಗಳನ್ನು ತೋರಿಸುತ್ತಾರಲ್ಲವೆ. ಸ್ವರ್ಗವಂತೂ ಎಲ್ಲದಕ್ಕಿಂತ ದೊಡ್ಡ ಅದ್ಭುತವಾಗಿದೆ. ಅದ್ಭುತ ಸ್ವರ್ಗದ ಚಿತ್ರವೂ ಇದೆ, ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು ಆದ್ದರಿಂದ ತಂದೆಯು ಬರೆದಿದ್ದರು – ಮೇಲೆ ಸೂರ್ಯವಂಶಿಯರ ಹೆಸರು, ಅದರ ಕೆಳಗಡೆ ಚಂದ್ರವಂಶಿಯರ ಹೆಸರನ್ನು ಬರೆಯಿರಿ ಆಗ ಅರ್ಧಕಲ್ಪ ಪೂರ್ಣವಾಗುವುದು. ಸೂರ್ಯವಂಶಿ, ಚಂದ್ರವಂಶಿ ಒಂದೊಂದಕ್ಕೂ 1250 ವರ್ಷಗಳು ನಡೆಯುತ್ತವೆ, ಇದರಿಂದ ಲಕ್ಷಾಂತರ ವರ್ಷಗಳ ಮಾತು ಹೊರಟು ಹೋಗುವುದು. ಅಲ್ಲಿ ಬಾಹುಬಲದಲ್ಲಿ ಎಷ್ಟೊಂದು ಖರ್ಚಾಗುತ್ತದೆ, ಇಲ್ಲಿ ಆದಿಯಿಂದ ಹಿಡಿದು ಅಂತ್ಯದವರೆಗೆ ಏನೂ ಖರ್ಚಾಗುವುದಿಲ್ಲ, ಇದಂತೂ ತಂದೆ-ಮಕ್ಕಳ ಲೆಕ್ಕವಾಗಿದೆ, ಖರ್ಚಿನ ಮಾತಿಲ್ಲ. ಇಲ್ಲಿ ಮಕ್ಕಳು ರಿಫ್ರೆಶ್ ಆಗಲಿ ಎಂದು ಮನೆಗಳನ್ನು ಕಟ್ಟಿಸಲಾಗುತ್ತದೆ. ಇದು ಮಕ್ಕಳದೇ ಹಣವಾಗಿದೆ, ಅದರಲ್ಲಿಯೂ ಎಷ್ಟೊಂದು ದಿನಗಳು ಕಳೆದು ಹೋಯಿತು, ಇನ್ನು ಕೆಲವೇ ದಿನಗಳಿವೆ, ಖರ್ಚೇನೂ ಇಲ್ಲ, ನೀವು ಕವಡೆಯೂ ಖರ್ಚಿಲ್ಲದೆ ಜೀವನ್ಮುಕ್ತಿಯನ್ನು ಪಡೆಯುತ್ತೀರಿ. ಇದರಲ್ಲಿ ಕೇವಲ ಪರಿಶ್ರಮದ ಮಾತಾಗಿದೆ. ಭಗವಂತನನ್ನು ಎಲ್ಲಾ ಭಕ್ತರು ನೆನಪು ಮಾಡುತ್ತಾರೆ ಆದರೆ ಭಗವಂತ ಯಾರೆಂಬುದನ್ನು ತಿಳಿದುಕೊಂಡಿಲ್ಲ. ಭಗವಂತನನ್ನು ಅರಿಯದ ಕಾರಣ ಅನೇಕರನ್ನು ಭಗವಂತನೆಂದು ನಂಬುತ್ತಾರೆ. ಈಗ ನೀವು ಮಕ್ಕಳು ಸತ್ಯ ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯು ಎಷ್ಟು ಬಾರಿ ತಿಳಿಸಿದ್ದಾರೆ, ದೊಡ್ಡ-ದೊಡ್ಡ ಚಿತ್ರಗಳನ್ನು ಮುಖ್ಯ ಸ್ಥಾನಗಳು ಅಂದರೆ ವಿಮಾನ ನಿಲ್ದಾಣದಂತಹ ಸ್ಥಾನಗಳಲ್ಲಿ ಹಾಕಿರಿ. ವಿಮಾನ ನಿಲ್ದಾಣದವರು ಏನು ತೆಗೆದುಕೊಳ್ಳುವರು? ಅವರಿಗೆ ತಿಳಿಸಿ, ಇದು ಎಲ್ಲಾ ಮನುಷ್ಯರ ಕಲ್ಯಾಣಕ್ಕಾಗಿ ಇವೆ, ಇದರ ಬಗ್ಗೆ ತಿಳಿದುಕೊಳ್ಳುವುದರಿಂದಲೇ ಮನುಷ್ಯರು ತಂದೆಯಿಂದ ಆಸ್ತಿಯನ್ನು ಪಡೆದು ವಿಶ್ವದ ಮಾಲೀಕರಾಗುವರು. ಮುಖ್ಯವಾದುದು ದೆಹಲಿಯಾಗಿದೆ, ದೆಹಲಿಯು ರಾಜಧಾನಿಯಲ್ಲವೆ. ಅಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಾರೆ, ಅಲ್ಲಿ ಇಂತಹ ದೊಡ್ಡ-ದೊಡ್ಡ ಚಿತ್ರಗಳಿರಲಿ. ಮುಖ್ಯವಾದವು ತ್ರಿಮೂರ್ತಿ, ಸೃಷ್ಟಿಚಕ್ರ ಮತ್ತು ಕಲ್ಪವೃಕ್ಷವಾಗಿದೆ. ಈ ಏಣಿಯ ಚಿತ್ರವು ಚಮತ್ಕಾರ ಮಾಡುವಂತದ್ದಾಗಿದೆ, ಇದರಲ್ಲಿ ವಿನಾಶದ ಬಗ್ಗೆ ಬಹಳ ಚೆನ್ನಾಗಿ ಬರೆಯಲ್ಪಟ್ಟಿದೆ ಮತ್ತು ಪತಿತ-ಪಾವನ ಪರಮಪಿತ ಪರಮಾತ್ಮನೋ ಅಥವಾ ನೀರಿನ ನದಿಯೋ? ನಿರ್ಣಯಿಸಿರಿ. ಬ್ರಹ್ಮಾಕುಮಾರ-ಕುಮಾರಿಯರು ಕೇಳುತ್ತಾರೆ – ಈಶ್ವರ ಸರ್ವವ್ಯಾಪಿಯೇ ಅಥವಾ ಒಬ್ಬ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆಯೇ? ತಂದೆಯಿಂದ ಮಕ್ಕಳಿಗೆ ಆಸ್ತಿಯು ಸಿಗುತ್ತದೆ. ಈ ಚಿತ್ರವೂ ಮುಖ್ಯವಾಗಿದೆ. ತ್ರಿಮೂರ್ತಿಯ ಚಿತ್ರವೂ ಸಹ ಬಹಳ-ಬಹಳ ಅಮೂಲ್ಯವಾಗಿದೆ. ಬ್ರಹ್ಮನ ಮೂಲಕ ವಿಷ್ಣುಪುರಿಯ ಸ್ಥಾಪನೆಯಾಗುತ್ತದೆ ಮತ್ತೆ ಅವರೇ ಪಾಲನೆಯನ್ನೂ ಮಾಡುತ್ತಾರೆ.

ಮಕ್ಕಳಿಗೆ ಅಪಾರ ಖುಷಿಯಿರಲಿ – ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆ ಸ್ವರ್ಗದ ಮಾಲೀಕರನ್ನಾಗಿ ಮಾಡುವುದಕ್ಕಾಗಿ. ತಂದೆಯು ಬಂದು ಸ್ವರ್ಗದ ಸ್ಥಾಪನೆ, ನರಕದ ವಿನಾಶ ಮಾಡಿಸುತ್ತಾರೆ. ಆದ್ದರಿಂದ ಮಹಾಭಾರತ ಯುದ್ಧವೂ ಜೊತೆಯಲ್ಲಿದೆ. ಪ್ರತೀ 5000 ವರ್ಷಗಳ ನಂತರ ಈ ಚಕ್ರವು ಸುತ್ತುತ್ತದೆ, ತಂದೆಯೂ ಸಹ ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತಾರೆ. ಇದನ್ನು ಅವರು ಭಗವದ್ಗೀತೆಯಲ್ಲಿ ಯುಗ-ಯುಗಗಳಲ್ಲಿ ಬರುತ್ತಾರೆಂದು ಹೇಳಿದ್ದಾರೆ. ಅದರಲ್ಲಿಯೂ ಐದು ಯುಗಗಳಿವೆ ಅಂದಮೇಲೆ ಐದು ಬಾರಿ ಬರುವರೇ? ಹಾಗಾದರೆ 24 ಅವತಾರ ಎಂದು ಏಕೆ ಬರೆದಿದ್ದಾರೆ! ಮನುಷ್ಯರು ಎಷ್ಟೊಂದು ಯಜ್ಞ, ತಪ, ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ, ಇವೆಲ್ಲವೂ ಭಗವಂತನೊಂದಿಗೆ ಮಿಲನ ಮಾಡುವ ಮಾರ್ಗಗಳೆಂದು ತಿಳಿಯುತ್ತಾರೆ ಆದ್ದರಿಂದ ಭಗವಂತನ ಬಳಿ ಯಾರೂ ಹೋಗಲು ಸಾಧ್ಯವಿಲ್ಲ. ಅರ್ಧಕಲ್ಪ ಎಷ್ಟೊಂದು ತಲೆ ಕೆಡಿಸಿಕೊಂಡಿದ್ದೀರಿ, ಜನ್ಮ-ಜನ್ಮಾಂತರದಿಂದ ತಿರುಗಾಡಿದಿರಿ ಆದರೂ ಸಹ ತಂದೆಯು ಸಿಗಲಿಲ್ಲ. ಈಗ ತಂದೆಯು ನೀವು ಮಕ್ಕಳಿಗೆ ಎಷ್ಟು ಸಮೀಪವಿದ್ದಾರೆ, ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ, ನಿಮಗೆ ತಿಳಿಸುತ್ತಿದ್ದಾರೆ. ನೀವು ತಿಳಿದುಕೊಳ್ಳುತ್ತೀರಿ, ಕಲ್ಪ-ಕಲ್ಪವೂ ನಾವು ಇದೇರೀತಿ ಮಿಲನ ಮಾಡುತ್ತೇವೆ, ಏನು ಕಳೆಯಿತೋ ಅದು ಕಲ್ಪ-ಕಲ್ಪವೂ ಆಗುವುದು, ಆ ದಾದಾರವರೇ ವಜ್ರ ವ್ಯಾಪಾರಿಯಾಗುವರು ಮತ್ತೆ ಅವರಲ್ಲಿಯೇ ತಂದೆಯು ಪ್ರವೇಶ ಮಾಡುವರು ಮತ್ತೆ ಅದೇ ಮಕ್ಕಳು ಬಂದು ತಂದೆಯ ಮಡಿಲು ಸೇರುತ್ತೀರಿ, ಪುನಃ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ನೀವು ಮಕ್ಕಳ ಜೊತೆ ತಂದೆಯ ಈ ಅನಾದಿ, ಅವಿನಾಶಿ ಪಾತ್ರವು ಕಲ್ಪ-ಕಲ್ಪವೂ ಇದೇರೀತಿ ಪುನರಾವರ್ತನೆಯಾಗುತ್ತಾ ಇರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಇದು ಕಲ್ಯಾಣಕಾರಿ ಸಂಗಮಯುಗವಾಗಿದೆ, ಇದರಲ್ಲಿ ಪ್ರತೀ ಮಾತಿನಲ್ಲಿ ಕಲ್ಯಾಣವಿದೆ, ಸಂಪಾದನೆಯೇ ಸಂಪಾದನೆಯಿದೆ. ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ, 21 ಜನ್ಮಗಳಿಗಾಗಿ ಜೀವನವನ್ನು ಅಮರ ಮಾಡಿಕೊಳ್ಳಬೇಕಾಗಿದೆ.

2. ಪ್ರವೃತ್ತಿಯಲ್ಲಿರುತ್ತಾ ಮನಸ್ಸು-ಬುದ್ಧಿಯಿಂದ ಸಮರ್ಪಣೆಯಾಗಬೇಕಾಗಿದೆ. ಶ್ರೀಮತ ಪ್ರಮಾಣ ಖರ್ಚು ಮಾಡಬೇಕಾಗಿದೆ. ಸಂಪೂರ್ಣ ಟ್ರಸ್ಟಿಯಾಗಿರಬೇಕಾಗಿದೆ. ಶಿವ ತಂದೆಯ ಭಂಡಾರವು ಬರ್ಪೂರ್, ಕಾಲಕಂಟಕ ದೂರ….

ವರದಾನ:-

ಯಾವಾಗ ತಂದೆಯನ್ನು ನೋಡುವ ಬದಲು ಮಾತುಗಳನ್ನು ನೋಡತೊಡಗುವಿರಿ, ಆಗ ಹಲವು ಪ್ರಶ್ನೆಗಳು ಉತ್ಪನ್ನವಾಗುವುದು ಮತ್ತು ಸಹಜ ಮಾತೂ ಸಹ ಕಷ್ಟದ ಅನುಭವವಾಗುವುದು. ಏಕೆಂದರೆ ಮಾತುಗಳಾಗಿದೆ ವೃಕ್ಷ ಮತ್ತು ತಂದೆಯಾಗಿದ್ದಾರೆ ಬೀಜ. ಯಾರು ವಿಸ್ತಾರವಿರುವ ವೃಕ್ಷವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾರೆಯೋ ಅವರು ತಂದೆಯನ್ನು ದೂರ ಮಾಡಿಕೊಂಡು ಬಿಡುತ್ತಾರೆ, ನಂತರ ವಿಸ್ತಾರವು ಒಂದು ಜಾಲವಾಗಿ ಬಿಡುತ್ತದೆ, ಅದರಲ್ಲಿಯೇ ಸಿಲುಕಿಕೊಳ್ಳುತ್ತಾರೆ. ಮಾತುಗಳ ವಿಸ್ತಾರದಲ್ಲಿ ರಂಗು-ರಂತಿನ ಮಾತುಗಳಿರುತ್ತವೆ, ಅದು ತನ್ನ ಕಡೆಗೆ ಆಕರ್ಷಿಸುತ್ತವೆ. ಆದ್ದರಿಂದ ಬೀಜ ರೂಪ ತಂದೆಯ ನೆನಪಿನಿಂದ ಬಿಂದುವನ್ನಿಡುತ್ತಾ, ಅದರಿಂದ ದೂರವಾಗುತ್ತೀರೆಂದರೆ ಸಹಜ ಯೋಗಿ ಆಗಿ ಬಿಡುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top