16 June 2021 KANNADA Murli Today | Brahma Kumaris
Read and Listen BK Murli Of 16 June 2021 in Kannada Murli Today | Daily Murli Online
15 June 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ – ನಿಮ್ಮ ಬಳಿ ಅವಿನಾಶಿ ಜ್ಞಾನ ರತ್ನಗಳ ಅಪಾರ ಖಜಾನೆಯಿದೆ, ನೀವು ಅದನ್ನು ದಾನ ಮಾಡಿ, ನಿಮ್ಮ ಹೊಸಿಲಿನಿಂದ ಯಾರೂ ಹಾಗೆಯೇ ಹೋಗಬಾರದು”
ಪ್ರಶ್ನೆ:: -
ಸರ್ವ ಸಂಬಂಧಗಳ ಸ್ಯಾಕ್ರೀನ್ ತಂದೆಯು ತನ್ನ ಮಕ್ಕಳಿಗೆ ಯಾವ ಶ್ರೀಮತ ಕೊಡುತ್ತಾರೆ?
ಉತ್ತರ:-
ಮಧುರ ಮಕ್ಕಳೇ, ತಮ್ಮ ಬುದ್ಧಿಯೋಗವನ್ನು ಎಲ್ಲಾ ಕಡೆಯಿಂದ ತೆಗೆದು ನನ್ನೊಬ್ಬನನ್ನೇ ನೆನಪು ಮಾಡುತ್ತಾ ಇರಿ, ಪ್ರಪಂಚದ ಯಾವುದೇ ವಸ್ತು, ಮಿತ್ರ ಸಂಬಂಧಿ ಮೊದಲಾದವರು ನೆನಪಿಗೆ ಬರಬಾರದು ಏಕೆಂದರೆ ಈ ಸಮಯದಲ್ಲಿ ಎಲ್ಲರೂ ದುಃಖ ಕೊಡುವವರಾಗಿದ್ದಾರೆ. ವಿಶ್ವದ ಮಾಲೀಕರಾಗಬೇಕೆಂದರೆ ಅವಶ್ಯವಾಗಿ 63 ಜನ್ಮಗಳ ಲೆಕ್ಕಾಚಾರವನ್ನೂ ಮುಗಿಸುವ ಪರಿಶ್ರಮ ಪಡಲೇಬೇಕಾಗುತ್ತದೆ. ಎಲ್ಲವನ್ನೂ ಮರೆತು ಅಶರೀರಿಯಾಗಿರಿ ಆಗ ಲೆಕ್ಕಾಚಾರವು ಕಳೆಯುವುದು, ನಾನು ಸರ್ವ ಸಂಬಂಧಗಳ ಸ್ಯಾಕ್ರೀನ್ ಆಗಿದ್ದೇನೆ.
♫ ಕೇಳು ಇಂದಿನ ಮುರ್ಲಿ (audio)➤
ಓಂ ಶಾಂತಿ. ಬಾಪ್ದಾದಾ ಮಕ್ಕಳೊಂದಿಗೆ ಕೇಳುತ್ತಾರೆ – ಯಾರ ನೆನಪಿನಲ್ಲಿ ಕುಳಿತಿದ್ದೀರಿ? (ಶಿವ ತಂದೆಯ ನೆನಪಿನಲ್ಲಿ) ಮೇರು ಧ್ವನಿಯಲ್ಲಿ ಹೇಳಬೇಕು – ಶಿವ ತಂದೆಯ ನೆನಪಿನಲ್ಲಿ ಕುಳಿತಿದ್ದೇವೆ ಎಂದು. ನೀವು ಮಕ್ಕಳು ಅರ್ಥಾತ್ ಆತ್ಮರ ಸಂಬಂಧವು ಶಿವ ತಂದೆಯೊಂದಿಗೆ ಇದೆ. ನೀವು ಇವರ ಮೂಲಕ ಶಿವ ತಂದೆಯ ಮಕ್ಕಳಾಗುತ್ತೀರಿ ಏಕೆಂದರೆ ಶಿವ ತಂದೆಯು ಇವರ (ಬ್ರಹ್ಮಾ) ಮುಖಾಂತರವೇ ಮಿಲನ ಮಾಡುತ್ತಾರೆ. ಇವರನ್ನು ಮಧ್ಯದಲ್ಲಿ ದಲ್ಲಾಳಿಯೆಂದು ಹೇಳಲಾಗುತ್ತದೆ. ದಲ್ಲಾಳಿಯೊಂದಿಗೆ ನಿಮ್ಮದು ಯಾವುದೇ ಸಂಬಂಧವಿಲ್ಲ. ಇವರು ಕೇವಲ ಮಧ್ಯವರ್ತಿಯಾಗಿದ್ದಾರೆ ಅಂದಮೇಲೆ ನಿಮ್ಮ ಲೇವಾದೇವಿಯ ಲೆಕ್ಕಾಚಾರವು ತಂದೆಯೊಂದಿಗಿರಬೇಕು, ಇವರೊಂದಿಗಲ್ಲ. ಇವರ ಲೇವಾದೇವಿಯೂ ತಂದೆಯೊಂದಿಗೆ ಇದೆ. ಇವರೂ ಸಹ ಆ ತಂದೆಗೇ ಹೇಳುತ್ತಾರೆ – ಬಾಬಾ, ನನ್ನದೆಲ್ಲವೂ ನಿಮ್ಮದೇ ಎಂದು. ನಿಮಗೂ ಸಹ ಒಂದಂತೂ ನಿಶ್ಚಯವಿದೆ – ನಾವಾತ್ಮರಾಗಿದ್ದೇವೆ ಮತ್ತು ಎರಡನೇ ನಿಶ್ಚಯವಾಗಿದೆ – ನಾವಾತ್ಮರು ಈಗ ಪರಮಪಿತ ಪರಮಾತ್ಮನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಮನಸ್ಸಾ-ವಾಚಾ-ಕರ್ಮಣಾ, ತನು-ಮನ-ಧನದಿಂದ ನಾವು ಶಿವ ತಂದೆಗೆ ಸಹಯೋಗಿಗಳಾಗುತ್ತೇವೆ. ಇವೆಲ್ಲವನ್ನೂ ಶಿವ ತಂದೆಗೆ ಅರ್ಪಣೆ ಮಾಡಲಾಗಿದೆ ನಂತರ ಶಿವ ತಂದೆಯು ಹೀಗೆ ಇದನ್ನು ಉಪಯೋಗಿಸಿ ಎಂದು ಸಲಹೆ ನೀಡುತ್ತಾರೆ, ಇದಕ್ಕೆ ಶ್ರೀಮತವೆಂದು ಹೇಳಲಾಗುತ್ತದೆ, ಸ್ವಯಂ ತಂದೆಯೇ ಹೇಳುತ್ತಾರೆ – ನಾನು ಈ ಹಳೆಯ ತನುವಿನಲ್ಲಿ ಪ್ರವೇಶ ಮಾಡುತ್ತೇನೆ, ಇವರೂ ಸಹ ಪತಿತನಿಂದ ಪಾವನನಾಗುತ್ತಿದ್ದಾರೆ. ಇದನ್ನು ಯಾರು ಹೇಳಿದರು? ಶಿವ ತಂದೆ. ಈ ಬ್ರಹ್ಮನೂ ಸಹ ಪಾವನನಾಗುತ್ತಿದ್ದಾರೆ, ಇವರದೂ ನನ್ನ ಜೊತೆ ಲೆಕ್ಕಾಚಾರವಿದೆ, ಇವರ ಜೊತೆ ಯಾರದೇ ಲೆಕ್ಕಾಚಾರವಿಲ್ಲ. ನೀವು ಶಿವಬಾಬಾ ಛಿ/o ಬ್ರಹ್ಮಾ ಎಂದು ಪತ್ರ ಬರೆಯುತ್ತೀರಿ ಆದರೆ ಮಾಯೆಯು ಇಷ್ಟು ಪ್ರಬಲವಾಗಿದೆ ನಿರಂತರ ನೆನಪು ಮಾಡಲು ಬಿಡುವುದಿಲ್ಲ. ಬುದ್ಧಿಯೋಗವನ್ನು ಪದೇ-ಪದೇ ವಿಚಲಿತ ಮಾಡುತ್ತದೆ. ಒಂದುವೇಳೆ ಇದೇ ಪಕ್ಕಾ ಪುರುಷಾರ್ಥ ಮಾಡಿದ್ದೇ ಆದರೆ ಬೇರೆಲ್ಲವೂ ಮರೆತು ಹೋಗುವುದು, ಶರೀರವೂ ಮರೆತು ಹೋಗುವುದು. ಈ ಶರೀರವಿರುತ್ತದೆ ಆದರೆ ಆತ್ಮಕ್ಕೆ ಇವೆಲ್ಲಾ ವಸ್ತುಗಳಿಂದ ತಿರಸ್ಕಾರವುಂಟಾಗುತ್ತದೆ. ಈ ಸ್ಥಿತಿಯನ್ನು ಹೊಂದುವ ಅಭ್ಯಾಸ ಮಾಡಬೇಕಾಗಿದೆ. ಅಂತ್ಯದಲ್ಲಿ ನಿಮಗೆ ತನ್ನ ಶರೀರವೂ ನೆನಪಿಗೆ ಬರಬಾರದು. ತಂದೆಯು ಹೇಳುತ್ತಾರೆ – ತಮ್ಮನ್ನು ಅಶರೀರಿ ಎಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ನಾನು ಸದಾ ಅಶರೀರಿಯಾಗಿದ್ದೇನೆ, ನೀವೂ ಅಶರೀರಿಯಾಗಿದ್ದೀರಿ ನಂತರ ನೀವು ಪಾತ್ರವನ್ನಭಿನಯಿಸಿದಿರಿ. ಈಗ ಮತ್ತೆ ನೀವು ಪಾತ್ರವನ್ನಭಿನಯಿಸಬೇಕಾಗಿದೆ. ಇದೇ ಪರಿಶ್ರಮವಿದೆ. ವಿಶ್ವದ ಮಾಲೀಕರಾಗುವುದು ಕಡಿಮೆ ಮಾತೇನು! ಮನುಷ್ಯರೇ ವಿಶ್ವದ ಮಾಲೀಕರಾಗುತ್ತಾರೆ, ಈ ದೇವತೆಗಳೂ ಸಹ ಮನುಷ್ಯರೇ ಆಗಿದ್ದಾರೆ ಆದರೆ ಇವರಿಗೆ ದೈವೀ ಗುಣವುಳ್ಳ ದೇವತೆಗಳೆಂದು ಹೇಳಲಾಗುತ್ತದೆ. ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, ಇವರಿಗೆ ತಮ್ಮ ಮಕ್ಕಳೂ ಇರುತ್ತಾರೆ, ಅವರೇ ಇವರನ್ನು ತಂದೆ-ತಾಯಿಯೆಂದು ಒಪ್ಪುತ್ತಾರೆ ಆದರೆ ಈಗಿನ ಮನುಷ್ಯರು ಅಂಧಶ್ರದ್ಧೆಯಿಂದ ಈ ಲಕ್ಷ್ಮೀ-ನಾರಾಯಣರಿಗೂ ತ್ವಮೇವ ಮಾತಾಶ್ಚ ಪಿತಾ…. ಎಂದು ಹೇಳುತ್ತಾರೆ. ವಾಸ್ತವದಲ್ಲಿ ಇದು ಶಿವ ತಂದೆಯ ಮಹಿಮೆಯಾಗಿದೆ. ತಾವು ಸರ್ವ ಗುಣ ಸಂಪನ್ನರು ಎಂದು ದೇವತೆಗಳ ಮಹಿಮೆಯನ್ನು ಹಾಡುತ್ತಾರೆ ಆದರೆ ಅವರಿಗೆ ಏಕೆ ಪೂಜೆ ಮಾಡುತ್ತೇವೆ ಎಂಬುದನ್ನು ತಿಳಿದುಕೊಂಡಿಲ್ಲ. ನೀವು ಮಾತಾಪಿತಾ…. ಎಂದು ಈ ರೀತಿಯ ಮಹಿಮೆಯನ್ನು ನೀವೀಗ ಹಾಡುವುದಿಲ್ಲ. ನಿಮಗೆ ತಿಳಿದಿದೆ, ಶಿವ ತಂದೆಯು ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ಅವರಿಂದಲೇ ಅಪಾರ ಸುಖ ಸಿಗುತ್ತದೆ ಬಾಕಿ ಯಾರೆಲ್ಲಾ ಸಂಬಂಧಿ ಮೊದಲಾದವರಿದ್ದಾರೆಯೋ ಅವರಿಂದ ದುಃಖವೇ ಸಿಗುತ್ತದೆ. ಇವರಂತೂ ಸ್ಯಾಕ್ರೀನ್ ಆಗಿದ್ದಾರೆ ಯಾರಿಂದ ಸರ್ವ ಸಂಬಂಧಗಳ ರಸದ ಅನುಭೂತಿಯಾಗುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ – ಚಿಕ್ಕಪ್ಪ, ದೊಡ್ಡಪ್ಪ, ಮಾವ ಮೊದಲಾದವರೆಲ್ಲರಿಂದ ಬುದ್ಧಿಯೋಗವನ್ನು ತೆಗೆದು ನನ್ನೊಬ್ಬನನ್ನೇ ನೆನಪು ಮಾಡಿರಿ. ನೀವೇ ಹಾಡುತ್ತೀರಿ – ದುಃಖಹರ್ತ-ಸುಖಕರ್ತ…. ಎಂದು. ಸರ್ವರ ಸದ್ಗತಿದಾತನೂ ಒಬ್ಬರೇ ಆಗಿದ್ದಾರೆ, ಅವರೇ ನಮ್ಮ ಸರ್ವಸ್ವವಾಗಿದ್ದಾರೆ. ಲೌಕಿಕ ತಂದೆಯಿಂದಲೂ ದುಃಖ ಸಿಗುತ್ತದೆ ಬಾಕಿ ಶಿಕ್ಷಕರಿಂದ ಯಾರಿಗೂ ದುಃಖ ಸಿಗುವುದಿಲ್ಲ. ಶಿಕ್ಷಕರ ಬಳಿ ಹೋಗಿ ಓದುವುದರಿಂದ ಶರೀರ ನಿರ್ವಹಣೆ ಮಾಡಿಕೊಳ್ಳುತ್ತೀರಿ. ಕಲೆಯನ್ನು ಕಲಿಸುವವರೂ ಇರುತ್ತಾರೆ, ಅವರೆಲ್ಲರೂ ಅಲ್ಪಕಾಲಕ್ಕಾಗಿ ಶಿಕ್ಷಣ ನೀಡುತ್ತಾರೆ. ಭಕ್ತಿಯಲ್ಲಿಯೂ ಮಹಿಮೆಯನ್ನು ಒಬ್ಬ ರಾಮ ಅಥವಾ ಪರಮಪಿತ ಪರಮಾತ್ಮನಿಗೇ ಮಾಡುತ್ತಾರೆ, ಅವರನ್ನೇ ನೆನಪು ಮಾಡುತ್ತಾರೆ. ವಾಸ್ತವದಲ್ಲಿ ಭಕ್ತಿಯನ್ನೂ ಒಬ್ಬರಿಗೇ ಮಾಡಬೇಕಾಗಿದೆ, ಅವರೊಬ್ಬರೇ ನಿಮ್ಮನ್ನು ಪೂಜ್ಯರನ್ನಾಗಿ ಮಾಡುತ್ತಾರೆ. ನೀವು ಮೊಟ್ಟ ಮೊದಲು ಒಬ್ಬ ಶಿವ ತಂದೆಯ ಪೂಜೆ ಮಾಡುತ್ತೀರಿ ಅದಕ್ಕೆ ಸತೋಪ್ರಧಾನ ಭಕ್ತಿಯೆಂದು ಹೇಳಲಾಗುತ್ತದೆ. ನಂತರ ಆತ್ಮವೂ ಸಹ ಸತೋಪ್ರಧಾನದಿಂದ ಸತೋ, ರಜೋ, ತಮೋ ಆಗುತ್ತದೆ. ನೀವು ತಿಳಿದುಕೊಂಡಿದ್ದೀರಿ – ನಾವೇ ಪೂಜಾರಿಗಳಾಗಿದ್ದೇವೆ, ಮೊದಲು ಒಬ್ಬ ಶಿವನಿಗೆ ಪೂಜೆ ಮಾಡುತ್ತೇವೆ ನಂತರ ಕಲೆಗಳು ಕಡಿಮೆಯಾಗತೊಡಗುತ್ತದೆ. ಭಕ್ತಿಯೂ ಸಹ ಸತೋಪ್ರಧಾನದಿಂದ ಸತೋ, ರಜೋ, ತಮೋ ಆಗಿ ಬಿಡುತ್ತದೆ. ಇಡೀ ನಾಟಕವು ನಿಮ್ಮ ಮೇಲೆ ಮಾಡಲ್ಪಟ್ಟಿದೆ. ತಾನೇ ಪೂಜ್ಯ, ತಾನೇ ಪೂಜಾರಿ, ಯಾರು 84 ಜನ್ಮಗಳನ್ನು ಪೂರ್ಣ ತೆಗೆದುಕೊಳ್ಳುವರೋ ಅವರದೇ ಕಥೆಯಿದೆ. ಅವರಿಗೇ ತಂದೆಯು ಕುಳಿತು ನೀವು 84 ಜನ್ಮಗಳನ್ನು ಹೇಗೆ ತೆಗೆದುಕೊಂಡಿದ್ದೀರಿ ಎಂಬುದನ್ನು ತಿಳಿಸುತ್ತಾರೆ. ಅವರದೇ ಲೆಕ್ಕವಿದೆ. ಯಾರು ಮೊಟ್ಟ ಮೊದಲು ಪೂಜ್ಯ ದೇವಿ-ದೇವತೆಗಳಾಗುವರೋ ಅವರೇ ಪೂಜಾರಿಗಳಾಗುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಕಲ್ಪ-ಕಲ್ಪವೂ ಬಂದು ನಿಮಗೆ ಓದಿಸುತ್ತೇನೆ ಮತ್ತು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ, ರಾಜಯೋಗವನ್ನು ಕಲಿಸುತ್ತೇನೆ. ಗೀತೆಯಲ್ಲಿ ತಪ್ಪಾಗಿ ಕೃಷ್ಣ ಭಗವಾನುವಾಚ ಎಂದು ಬರೆದು ಬಿಟ್ಟಿದ್ದಾರೆ. ಭಗವಂತನು ಒಬ್ಬರೇ ಆಗಿರುವರು, ಮನುಷ್ಯರಂತೂ ಕಲ್ಲು, ಮುಳ್ಳು, ಕಣ ಕಣದಲ್ಲಿಯೂ ಪರಮಾತ್ಮನಿದ್ದಾರೆಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. ಭಗವಂತನ ಮಹಿಮೆಯು ಅಪರಮಪಾರವಾಗಿದೆ. ಹೇಳುತ್ತಾರೆ – ಹೇ ತಂದೆಯೇ, ನಿಮ್ಮ ಗತಿಮತವು ಭಿನ್ನವಾಗಿದೆ ಅರ್ಥಾತ್ ನಿಮ್ಮ ಶ್ರೀಮತವು ಎಲ್ಲದಕ್ಕಿಂತ ಭಿನ್ನವಾಗಿದೆ. ತಂದೆಗೆ ಗತಿ-ಸದ್ಗತಿದಾತ, ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಆಗ ಬುದ್ಧಿಯು ಮೇಲೆ ಹೋಗುತ್ತದೆ. ದುಃಖದ ಸಮಯದಲ್ಲಿ ಅವರ ನೆನಪೇ ಬರುತ್ತದೆ. ಒಂದುವೇಳೆ ರಾಮ-ಸೀತೆಯು ಬುದ್ಧಿಯಲ್ಲಿದ್ದರೆ ಮತ್ತೆ ಇಡೀ ರಾಮಾಯಣವೇ ಬುದ್ಧಿಯಲ್ಲಿ ಬಂದು ಬಿಡುವುದು. ನೀವಂತೂ ಆ ಒಬ್ಬ ತಂದೆಯನ್ನೇ ಕರೆಯುತ್ತೀರಿ. ಆ ತಂದೆಯ ವಿನಃ ಯಾವುದೇ ಸಾಕಾರಿ ಮನುಷ್ಯ ಅಥವಾ ಆಕಾರಿ ದೇವತೆಯೊಂದಿಗೆ ಬುದ್ಧಿಯನ್ನಿಡಬಾರದು. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಯಾವುದೇ ಸತ್ಸಂಗದಲ್ಲಿ ಹೋಗಿ ಇದನ್ನೇ ಹಾಡುತ್ತಾರೆ – ಪತಿತ-ಪಾವನ ಸೀತಾರಾಂ, ಆದರೆ ಅರ್ಥವೇನೂ ಇಲ್ಲ. ಇದೆಲ್ಲವೂ ಭಕ್ತಿಮಾರ್ಗದ ಗಾಯನವಾಗಿದೆ. ಎಲ್ಲರೂ ರಾವಣನ ಬಂಧನದಲ್ಲಿದ್ದಾರೆ. ಭಕ್ತಿಮಾರ್ಗದಲ್ಲಿ ಬಹಳ ಅಲೆಯುತ್ತಾರೆ. ಇಲ್ಲಿ ಅಲೆದಾಡುವ ಮಾತಿಲ್ಲ. ತಂದೆಯು ತಿಳಿಸುತ್ತಾರೆ, ಮಕ್ಕಳಿಗೆ ಎಲ್ಲಾ ಅಂಶಗಳೂ ಬುದ್ಧಿಯಲ್ಲಿ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ನಿಯಮಿತವಾಗಿ ವಿದ್ಯಾಭ್ಯಾಸ ಮಾಡಬೇಕಾಗಿದೆ. ಒಂದುವೇಳೆ ಯಾವುದೇ ಕಾರಣದಿಂದ ಮುಂಜಾನೆ ಬರಲು ಸಾಧ್ಯವಾಗಲಿಲ್ಲವೆಂದರೆ ಮಧ್ಯಾಹ್ನದ ಸಮಯದಲ್ಲಾದರೂ ಬರಬೇಕಾಗಿದೆ. ಯಾರಿಗೂ ತೊಂದರೆ ಕೊಡಬಾರದು. ಇಡೀದಿನ ಸಮಯವಿರುತ್ತದೆ, ಯಾವುದೇ ಸಮಯದಲ್ಲಿ ಹೋಗಿ ಓದಬೇಕಾಗಿದೆ. ಈ ಕನ್ಯೆಯರು ಬೆಳಗ್ಗೆಯಿಂದ ಹಿಡಿದು ರಾತ್ರಿಯವರೆಗೆ ಸೇವೆಯಲ್ಲಿರುತ್ತಾರೆ, ಇಡೀ ದಿನ ಸೇವಾಕೇಂದ್ರಗಳು ತೆರೆದಿರುತ್ತದೆ. ಯಾರಾದರೂ ಬರಲಿ ಅವರಿಗೆ ಮಾರ್ಗ ತಿಳಿಸಬೇಕಾಗಿದೆ. ಮೊಟ್ಟ ಮೊದಲಿಗೆ ತಿಳಿಸಬೇಕು – ವಿಚಾರ ಮಾಡಿ, ನಿಮಗೆ ಇಬ್ಬರು ತಂದೆಯರಿದ್ದಾರೆ. ದುಃಖದಲ್ಲಿ ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತಾರಲ್ಲವೆ. ಈಗ ಶಿವ ತಂದೆಯು ತಿಳಿಸುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿರಿ. ಮೃತ್ಯು ಸನ್ಮುಖದಲ್ಲಿ ನಿಂತಿದೆ, ಇದು ಅದೇ ಮಹಾಭಾರತ ಯುದ್ಧವಾಗಿದೆ, ಭಲೆ ದೊಡ್ಡ-ದೊಡ್ಡ ಪದಮಾಪತಿ, ಕೋಟ್ಯಾಧಿಪತಿಗಳಿದ್ದಾರೆ. ದೊಡ್ಡ-ದೊಡ್ಡ ಬಂಗಲೆಗಳನ್ನು ಕಟ್ಟಿಸುತ್ತಾರೆ ಆದರೆ ಅದರಲ್ಲಿ ಅವರು ಇರುತ್ತಾರೆಯೇ? ಇವೆಲ್ಲವೂ ಮಣ್ಣು ಪಾಲಾಗಲಿವೆ. ಕಲಿಯುಗದ ಆಯಸ್ಸು ಲಕ್ಷಾಂತರ ವರ್ಷಗಳಿದೆ ಎಂದು ಅವರು ತಿಳಿದುಕೊಳ್ಳುತ್ತಾರೆ, ಇದಕ್ಕೆ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ಯಾರ ಬಳಿಯಾದರೂ ಹಣವಿದ್ದರೆ ಬಾಬಾ, ಮನೆ ಕಟ್ಟಿಸುವುದೇ ಎಂದು ಕೇಳುತ್ತಾರೆ. ತಂದೆಯು ಹೇಳುತ್ತಾರೆ – ಹಣವಿದ್ದರೆ ಭಲೆ ಕಟ್ಟಿಸಿ, ಹಣವಂತೂ ಮಣ್ಣು ಪಾಲಾಗುತ್ತದೆಯಲ್ಲವೆ. ಇದಂತೂ ಅಶಾಶ್ವತವಾಗಿದೆ. ಇಲ್ಲದಿದ್ದರೆ ಇದೆಲ್ಲಾ ಹಣವು ಹೊರಟು ಹೋಗುತ್ತದೆ, ಏನೂ ಇರುವುದಿಲ್ಲ. ಭಲೆ ಕಟ್ಟಿಸಿ ಮತ್ತೆ ಅದರಲ್ಲಿ ಗೀತಾ ಪಾಠಶಾಲೆಯ ಪ್ರಬಂಧ ಮಾಡಿ. ಯಾರೇ ನಿಮ್ಮ ಬಾಗಿಲಿಗೆ ಬಂದರೂ ಸಹ ಅವರಿಗೆ ಜ್ಞಾನದ ಭಿಕ್ಷೆ ನೀಡಿ. ಅದರಿಂದ ಅವರನ್ನು ವಿಶ್ವದ ಮಾಲೀಕರನ್ನಾಗಿ ಮಾಡಿರಿ. ನಿಮ್ಮ ಬಳಿ ಅಪಾರ ಜ್ಞಾನ ಧನವಿದೆ, ಇಷ್ಟೊಂದು ಯಾರ ಬಳಿಯೂ ಇರುವುದಿಲ್ಲ. ನಿಮ್ಮಲ್ಲಿಯೂ ಜ್ಞಾನರತ್ನಗಳು ಯಾರಲ್ಲಿ ತುಂಬಿಕೊಂಡಿರುತ್ತದೆಯೋ ಅಂತಹವರೇ ಎಲ್ಲರಿಗಿಂತ ಸಾಹುಕಾರರಾಗಿದ್ದರೆ. ಯಾರೇ ಬಂದರೂ ಅವರ ಜೋಳಿಗೆಯನ್ನು ತುಂಬಿಸಿ. ನಿಮ್ಮ ಬಳಿ ಅಪಾರವಾದ ಖಜಾನೆಯಿದೆ. ಕೇವಲ ಈ ಬೋರ್ಡನ್ನು ಹಾಕಿರಿ, ನಿಮಗೆ ಸ್ವರ್ಗದ ಸದಾ ಸುಖದ ಆಸ್ತಿಯನ್ನು ಪಡೆಯಲು ಮಾರ್ಗವನ್ನು ತೋರಿಸುತ್ತೇವೆ ಆದರೆ ಮಕ್ಕಳಿಗೆ ಈ ನಶೆಯಿರುವುದಿಲ್ಲ. ಇಲ್ಲಿರುವಾಗ ನಶೆಯೇರುತ್ತದೆ, ಹೊರಗೆ ಹೋದ ನಂತರ ನಶೆಯು ಮರೆತು ಹೋಗುತ್ತಾರೆ. ಆಸಕ್ತಿಯಿರಬೇಕಾಗಿದೆ. ಯಾರೇ ಬಂದರೂ ಅವರಿಗೆ ದಾರಿಯನ್ನು ತೋರಿಸಿದಾಗ ದೋಣಿಯು ಪಾರಾಗಿ ಬಿಡುವುದು. ನಿಮ್ಮಬಳಿ ಬಹಳ ಭಾರಿ ಹಣವಿದೆ, ಯಾವುದೇ ವಿಕಾರಿ ಅಥವಾ ಲಕ್ಷಾಧೀಪತಿ ಬಂದರೂ ಬಹಳ ರತ್ನಗಳನ್ನು ಕೊಡಬಹುದು. ಬಾಬಾ, ಇಲ್ಲಿ ನಶೆಯೇರುತ್ತದೆ ನಂತರ ಸೋಡಾ ನೀರಾಗಿ ಬಿಡುತ್ತದೆ, ತಂದೆಯು ನಿಮ್ಮನ್ನು ಅವಿನಾಶಿ ಜ್ಞಾನರತ್ನಗಳನ್ನು ನಂಬರ್ವಾರ್ ಆಗಿ ಜೋಳಿಗೆಯನ್ನು ತುಂಬಿಸುತ್ತಾರೆ. ಯಾರ ಅದೃಷ್ಟದಲ್ಲಿರುತ್ತದೆಯೋ ಅವರು ಸಂಪೂರ್ಣ ಧಾರಣೆ ಮಾಡುತ್ತಾರೆ. ಪ್ರಯತ್ನ ಪಟ್ಟು ನಿರಂತರ ನೆನಪಿನಲ್ಲಿರಬೇಕಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಸೇವಾಕೇಂದ್ರದಲ್ಲಿ ಒಂದು ಕಡೆ ಕುಳಿತು ಬಿಡುವುದು ಎಂದಲ್ಲ. ಇಲ್ಲ. ನಡೆದಾಡುತ್ತಾ-ತಿರುಗಾಡುತ್ತಾ ಸಮಯ ಸಿಕ್ಕಿದಾಗಲೆಲ್ಲಾ ತಂದೆಯನ್ನು ನೆನಪು ಮಾಡಬೇಕು. ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯ ಜೊತೆ ಜೋಡಣೆಯಾಗಿರಲಿ. ತಂದೆಯ ನೆನಪಿನಿಂದ ನಿಮ್ಮದು ಬಹಳ ಕಲ್ಯಾಣವಾಗುವುದು. 21 ಜನ್ಮಗಳಿಗೆ ನೀವು ಸಾಹುಕಾರರಾಗಿ ಬಿಡುತ್ತೀರಿ. ಬೇಹದ್ದಿನ ತಂದೆ, ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಭಾರತ ಸ್ವರ್ಗವಾಗಿತ್ತು, ಈಗ ನರಕವಾಗಿದೆ.
ನನ್ನನ್ನು ನೆನಪು ಮಾಡಿ ನಿಮ್ಮ ಆತ್ಮವು ಸತೋಪ್ರಧಾನರಾಗಿ ಬಿಡುತ್ತದೆ ಎಂದು ತಂದೆಯು ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡುತ್ತೀರಿ ಅಂದಮೇಲೆ ನಶೆಯೇರುತ್ತದೆ. ಸ್ವರ್ಗದಲ್ಲಂತೂ ನೀವು ಮಕ್ಕಳಿಗೆ ಅಪಾರ ಸುಖ ಸಿಗುತ್ತದೆ. ಶಾಸ್ತ್ರಗಳಲ್ಲಂತೂ ಎಷ್ಟೊಂದು ದಂತ ಕಥೆಗಳನ್ನು ಬರೆದಿದ್ದಾರೆ. ಗಾಯನವಿದೆ – ರಾಮ ರಾಜ, ರಾಮ ಪ್ರಜಾ…. ಧರ್ಮದ ಉಪಕಾರವಿದೆ. ನಂತರ ರಾಮನ ಸೀತೆಯನ್ನು ಕದ್ದಕೊಂಡು ಹೋದನು, ವಾನರ ಸೈನ್ಯವನ್ನು ತೆಗೆದುಕೊಂಡನು… ಎಂದು ಹೇಳುತ್ತಾರೆ. ಮುಂಚೆ ನೀವೂ ಓದುತ್ತಿದ್ದಿರಿ ಆದರೆ ಏನೂ ತಿಳಿದಿರಲಿಲ್ಲ, ಈಗ ಎಷ್ಟೊಂದು ತಿಳುವಳಿಕೆ ಬಂದಿದೆ. ಎಷ್ಟೊಂದು ಆಶ್ಚರ್ಯಕರ ಮಾತನ್ನು ಬರೆದಿದ್ದಾರೆ. ತಂದೆಯು ತಿಳಿಸುತ್ತಾರೆ – ನಾನೂ ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ತ್ರಿಮೂರ್ತಿಗಳಲ್ಲಿ ಬ್ರಹ್ಮಾ-ವಿಷ್ಣು-ಶಂಕರರನ್ನು ತೋರಿಸುತ್ತಾರೆ. ಆದರೆ ವಿಷ್ಣು ಯಾರು, ಎಲ್ಲಿ ವಾಸ ಮಾಡುತ್ತಾನೆ ಎಂಬುದು ಯಾರಿಗೂ ತಿಳಿದಿಲ್ಲ. ವಿಷ್ಣುವಿನ ಮಂದಿರವನ್ನು ನರ-ನಾರಾಯಣರ ಮಂದಿರವೆಂದು ಕರೆಯುತ್ತಾರೆ ಆದರೆ ಅದರ ಅರ್ಥವನ್ನು ಒಂದುಸ್ವಲ್ಪವೂ ತಿಳಿದಿಲ್ಲ. ವಿಷ್ಣುವಿನ ಎರಡು ರೂಪಗಳು ಲಕ್ಷ್ಮೀ-ನಾರಾಯಣರಾಗಿದ್ದಾರೆ ಯಾರು ಸತ್ಯಯುಗದಲ್ಲಿ ರಾಜ್ಯವನ್ನು ಮಾಡುತ್ತಿದ್ದರು. ಈಗ ನೀವು ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಯಾರೇ ಬಂದರೂ ಸಹ ಹೇಳಿ, ಇವರು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರಾಗಿದ್ದಾರೆ. ಅಂದಮೇಲೆ ಪ್ರಜಾಪಿತ ಬ್ರಹ್ಮನು ಎಲ್ಲರ ತಂದೆಯಾದರಲ್ಲವೆ. ಬಹಳಷ್ಟು ಜನ ಪ್ರಜೆಗಳಿದ್ದಾರೆ, ಹೆಸರಂತೂ ಕೇಳಿದ್ದೀರಲ್ಲವೆ. ಭಗವಂತನು ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚಿಸಿದರು, ತಂದೆಯು ಅವಶ್ಯವಾಗಿ ಮಕ್ಕಳಿಗೆ ಆಸ್ತಿಯನ್ನು ಕೊಟ್ಟಿರಬೇಕಲ್ಲವೆ. ನೀವು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ನೀವು ಶಿವ ತಂದೆಯಿಂದ ಆಸ್ತಿಯನ್ನು ಪಡೆಯುತ್ತೀರಿ. ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆಯಾಗಿದ್ದಾರೆ. ಈಗ ನಿಮಗೆ ಅಲೌಕಿಕ ತಂದೆಯು ಸಿಕ್ಕಿದ್ದಾರೆ, ಇವರು ವಜ್ರ ವ್ಯಾಪಾರಿಯಾಗಿದ್ದರು. ಇವರಿಗೇನಾದರೂ ಮೊದಲು ತಿಳಿದಿತ್ತೆ! ಇವರಿಗೇ ಹೇಳುತ್ತಾರೆ – ಇವರ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಬಂದು ನಾನು ಪ್ರವೇಶ ಮಾಡುತ್ತೇನೆ. ವಾನಪ್ರಸ್ಥಿಯಾಗುವ ಪದ್ಧತಿಯು ಭಾರತದಲ್ಲಿಯೇ ಇದೆ, 60 ವರ್ಷಗಳ ನಂತರ ಗುರುಗಳ ಬಳಿ ಹೋಗುತ್ತಾರೆ, ತಂದೆಯು ಇವರಲ್ಲಿ ಪ್ರವೇಶ ಮಾಡಿ, ಮನೆಗೆ ಮನೆಗೆ ಹೋಗಬೇಕೆಂದು ಹೇಳುತ್ತಾರೆ. ಮುಕ್ತಿಯನ್ನಂತೂ ಎಲ್ಲರೂ ಬಯಸುತ್ತಾರೆ ಆದರೆ ಹೋಗುವುದು ಯಾರಿಗೂ ಗೊತ್ತಿಲ್ಲ. ಬ್ರಹ್ಮ್ದಲ್ಲಿ ಯಾರೂ ಲೀನವಾಗಲು ಸಾಧ್ಯವಿಲ್ಲ. ಈ ಸೃಷ್ಟಿಯ ಚಕ್ರವಂತೂ ಸುತ್ತುತ್ತಲೇ ಇರುತ್ತದೆ, ಎಲ್ಲರೂ ಪಾತ್ರವನ್ನಭಿನಯಿಸಲೇಬೇಕು. ಪ್ರಪಂಚದ ಭೂಗೋಳ-ಇತಿಹಾಸವು ಪುನರಾವರ್ತನೆಯಾಗುತ್ತದೆ ಎಂದು ಹೇಳುತ್ತಾರೆ. ಇದು ಅನಾದಿಯ ನಾಟಕವು ಮಾಡಲ್ಪಟ್ಟಿದೆ. 84 ಜನ್ಮಗಳ ಪಾತ್ರವನ್ನು ನೀವೇ ಅಭಿನಯಿಸುತ್ತೀರಿ. ಇದು ಜ್ಞಾನದ ನೃತ್ಯವಾಗುವುದು. ಅವರು ನಂತರ ಡಮರುಗವನ್ನು ತೋರಿಸುತ್ತಾರೆ. ಸೂಕ್ಷ್ಮವತನವಾಸಿ ಶಂಕರನು ಡಮರುಗವನ್ನು ಹೇಗೆ ಬಾರಿಸಲು ಸಾಧ್ಯ!
ನೀವು ವಾನರ ಸಮಾನ ಇದ್ದಿರಿ ಎಂದು ತಂದೆಯು ತಿಳಿಸುತ್ತಾರೆ. ಅಂದಮೇಲೆ ನೀವು ವಾನರರ ಸೇನೆಯನ್ನೇ ತೆಗೆದುಕೊಂಡರು. ನಿಮ್ಮ ಮುಂದೆ ಬಾಬಾ ಜ್ಞಾನದ ಡಮರುಗವನ್ನು ಬಾರಿಸುತ್ತಾರೆ, ನಿಮಗೇ ಜ್ಞಾನವನ್ನು ಕೊಡುತ್ತಾರೆ. ಈಗ ಮುಖ ಲಕ್ಷಣ ಬದಲಾಗುತ್ತಿದೆ. ಕಾಮ ಚಿತೆಯ ಮೇಲೆ ಕುಳಿತು ನೀವು ಕಪ್ಪಗಾಗಿ ಬಿಟ್ಟಿದ್ದೀರಿ. ನಿಮ್ಮನ್ನು ಪುನಃ ಜ್ಞಾನ ಚಿತೆಯ ಮೇಲೆ ಕೂರಿಸಿ, ಕಪ್ಪಾಗಿರುವವರಿಂದ ಸುಂದರರನ್ನಾಗಿ ತಂದೆಯು ಮಾಡಿ ಬಿಡುತ್ತಾರೆ. ಈ ತಂದೆಯು ಎಷ್ಟೊಂದು ನಶೆಯೇರಿಸಿ ಬಿಡುತ್ತಾರೆ ಅಂದಮೇಲೆ ನಂತರ ಅದನ್ನು ಏಕೆ ಕಳೆದುಕೊಳ್ಳುತ್ತೀರಿ! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ತಂದೆಯು ಯಾವ ಅಪಾರ ಜ್ಞಾನ ಧನವನ್ನು ಕೊಟ್ಟಿದ್ದಾರೆ ಅದನ್ನು ಸ್ವಯಂನಲ್ಲಿ ಧಾರಣೆ ಮಾಡಿ ಸಾಹುಕಾರರಾಗಬೇಕಾಗಿದೆ ಮತ್ತು ಎಲ್ಲರಿಗೂ ದಾನ ಮಾಡಬೇಕಾಗಿದೆ. ಯಾರೇ ಬಂದರೂ ಅವರ ಜೋಳಿಗೆಯನ್ನು ತುಂಬಬೇಕಾಗಿದೆ.
2. ತಂದೆಯ ನೆನಪಿನಿಂದಲೇ ಕಲ್ಯಾಣವಾಗಬೇಕಾಗಿದೆ ಆದ್ದರಿಂದ ನಡೆದಾಡುತ್ತಾ ಎಷ್ಟು ಸಾಧ್ಯವೋ ಅಷ್ಟು ತಂದೆಯ ನೆನಪಿನಲ್ಲಿರಬೇಕು. ಎಲ್ಲಾ ಸಂಬಂಧಗಳ ರಸವನ್ನು ತಂದೆಯಿಂದಲೇ ತೆಗೆದುಕೊಳ್ಳಬೇಕಾಗಿದೆ.
ವರದಾನ:-
ಭಕ್ತಿ ಮಾರ್ಗದಲ್ಲಿ ತೋರಿಸುತ್ತಾರೆ – ತಪಸ್ವಿಯು ವೃಕ್ಷದ ಕೆಳಗೆ ಕುಳಿತುಕೊಂಡು ತಪಸ್ಸನ್ನು ಮಾಡುತ್ತಾರೆ. ಇದರಲ್ಲಿಯೂ ರಹಸ್ಯವಿದೆ. ಈ ಸೃಷ್ಟಿಯೆಂಬ ಕಲ್ಪವೃಕ್ಷದಲ್ಲಿ ತಾವು ಮಕ್ಕಳ ನಿವಾಸ ಸ್ಥಾನವು ಬುಡದಲ್ಲಿದೆ. ವೃಕ್ಷದ ಕೆಳಗೆ ಕುಳಿತುಕೊಳ್ಳುವುದರಿಂದ ಬುದ್ಧಿಯಲ್ಲಿ ಸ್ವತಹವಾಗಿಯೇ ಇಡೀ ವೃಕ್ಷದ ಜ್ಞಾನವಿರುತ್ತದೆ. ಅಂದಮೇಲೆ ಇಡೀ ವೃಕ್ಷದ ಜ್ಞಾನವನ್ನು ಸ್ಮೃತಿಯಲ್ಲಿ ಇಟ್ಟುಕೊಂಡು, ಈ ವೃಕ್ಷವನ್ನು ಸಾಕ್ಷಿಯಾಗಿದ್ದು ನೋಡುತ್ತೀರೆಂದರೆ ನಶೆ, ಖುಷಿ ಕೊಡುತ್ತದೆ ಹಾಗೂ ಇದರಿಂದ ಬ್ಯಾಟರಿ ಚಾರ್ಜ್ ಆಗಿ ಬಿಡುತ್ತದೆ. ಆನಂತರ ಸೇವೆ ಮಾಡುತ್ತಿದ್ದರೂ ತಪಸ್ಸು ಸಹ ಒಟ್ಟೊಟ್ಟಿಗೆ ಇರುತ್ತದೆ.
ಸ್ಲೋಗನ್:-
➤ Email me Murli: Receive Daily Murli on your email. Subscribe!