16 July 2021 KANNADA Murli Today | Brahma Kumaris

Read and Listen today’s Gyan Murli in Kannada

July 15, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಈ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ, ನಿಮಗೆ ತಂದೆಯ ಮೂಲಕ ಜ್ಞಾನದ ಮೂರನೇ ನೇತ್ರ ಸಿಕ್ಕಿದೆ ಆದ್ದರಿಂದ ನೀವು ಆಸ್ತಿಕರಾಗಿದ್ದೀರಿ”

ಪ್ರಶ್ನೆ:: -

ತಂದೆಯ ಯಾವ ಬಿರುದನ್ನು ಯಾವುದೇ ಧರ್ಮ ಸ್ಥಾಪಕರಿಗೆ ಕೊಡಲು ಸಾಧ್ಯವಿಲ್ಲ?

ಉತ್ತರ:-

ತಂದೆಯು ಸದ್ಗುರುವಾಗಿದ್ದಾರೆ, ಯಾವುದೇ ಧರ್ಮ ಸ್ಥಾಪಕರಿಗೆ ಗುರುವೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಯಾರು ದುಃಖದಿಂದ ಬಿಡಿಸಿ ಸುಖದಲ್ಲಿ ಕರೆದುಕೊಂಡು ಹೋಗುವರೋ ಅವರೇ ಗುರುವಾಗಿದ್ದಾರೆ. ಧರ್ಮ ಸ್ಥಾಪನೆ ಮಾಡುವವರ ಹಿಂದೆ ಅವರ ಧರ್ಮದ ಆತ್ಮರು ಮೇಲಿನಿಂದ ಕೆಳಗೆ ಬರುತ್ತಾರೆ, ಅವರು ಯಾರನ್ನೂ ಹಿಂತಿರುಗಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ತಂದೆಯು ಬರುತ್ತಾರೆಂದರೆ ಎಲ್ಲಾ ಆತ್ಮರನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಅವರು ಎಲ್ಲರ ಸದ್ಗುರುವಾಗಿದ್ದಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಈ ಪಾಪದ ಪ್ರಪಂಚದಿಂದ ನಮ್ಮನ್ನು ದೂರ ಕರೆದುಕೊಂಡು ಹೋಗಿ….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ, ಇದು ಪಾಪದ ಪ್ರಪಂಚವಾಗಿದೆ. ಇದು ಪಾಪಾತ್ಮರ ಪ್ರಪಂಚವೆಂದು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ. ಇದು ಎಷ್ಟು ಕೆಟ್ಟ ಅಕ್ಷರವಾಗಿದೆ ಆದರೆ ನಿಜವಾಗಿಯೂ ಇದು ಪಾಪಾತ್ಮರ ಪ್ರಪಂಚವಾಗಿದೆ, ಅವಶ್ಯವಾಗಿ ಯಾವುದೋ ಪುಣ್ಯಾತ್ಮರ ಪ್ರಪಂಚವಿತ್ತು ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಪಾಪಾತ್ಮರ ಪ್ರಪಂಚಕ್ಕೆ ನರಕವೆಂದು ಹೇಳಲಾಗುತ್ತದೆ. ಭಾರತದಲ್ಲಿಯೇ ಸ್ವರ್ಗ ಮತ್ತು ನರಕದ ಬಹಳ ಚರ್ಚೆ ಇದೆ. ಮನುಷ್ಯರು ಸತ್ತರೂ ಸಹ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಅಂದಮೇಲೆ ಇದುವರೆಗೂ ನರಕವಾಸಿಯಾಗಿದ್ದರು, ಪತಿತ ಪ್ರಪಂಚದಿಂದ ಪಾವನ ಪ್ರಪಂಚದಲ್ಲಿ ಹೋದರೆಂದು ಇದರಿಂದ ಸಿದ್ಧವಾಗುತ್ತದೆ ಆದರೆ ಮನುಷ್ಯರಿಗೆ ಏನೂ ತಿಳಿದಿಲ್ಲ, ಏನು ಬರುತ್ತದೆಯೋ ಅದನ್ನು ಹೇಳಿ ಬಿಡುತ್ತಾರೆ. ಯಥಾರ್ಥ ಅರ್ಥವೇನನ್ನೂ ತಿಳಿದುಕೊಂಡಿಲ್ಲ.

ತಂದೆಯು ಬಂದು ನೀವು ಮಕ್ಕಳಿಗೆ ಸಮಾಧಾನ ಪಡಿಸುತ್ತಾರೆ – ಇನ್ನೂ ಸ್ವಲ್ಪ ತಾಳ್ಮೆ ವಹಿಸಿ, ನೀವು ಪಾಪಗಳ ಹೊರೆಯಿಂದ ಬಹಳ ಭಾರಿಯಾಗಿ ಬಿಟ್ಟಿದ್ದೀರಿ, ಈಗ ನಿಮ್ಮನ್ನು ಪುಣ್ಯಾತ್ಮರನ್ನಾಗಿ ಮಾಡಿ ಇಂತಹ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತೇನೆ, ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಅಲ್ಲಿ ಯಾವುದೇ ಪಾಪವಾಗಲಿ, ದುಃಖವಾಗಲಿ ಇರುವುದಿಲ್ಲ. ಮಕ್ಕಳಿಗೆ ಈಗ ಧೈರ್ಯ ಸಿಕ್ಕಿದೆ, ನಾವು ಇಂದು ಇಲ್ಲಿದ್ದೇವೆ ನಾಳೆ ನಮ್ಮ ಶಾಂತಿಧಾಮ, ಸುಖಧಾಮಕ್ಕೆ ಹೋಗುತ್ತೇವೆ. ಹೇಗೆ ರೋಗಿ ಮನುಷ್ಯರು ಸ್ವಲ್ಪ ಸರಿಹೋದರೆ ಸಾಕು, ವೈದ್ಯರು ನೀವು ಬಹುಬೇಗನೆ ಚೆನ್ನಾಗಿ ಆಗಿಬಿಡುತ್ತೀರಿ ಎಂದು ಧೈರ್ಯ ತರಿಸುತ್ತಾರೆ. ಈಗ ಇದಂತೂ ಬೇಹದ್ದಿನ ಧೈರ್ಯವಾಗಿದೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ – ನೀವಂತೂ ಬಹಳ ದುಃಖಿ, ಪತಿತರಾಗಿ ಬಿಟ್ಟಿದ್ದೀರಿ. ನಾನೀಗ ನೀವು ಮಕ್ಕಳನ್ನು ಆಸ್ತಿಕರನ್ನಾಗಿ ಮಾಡುತ್ತೇನೆ. ಮತ್ತೆ ರಚನೆಯ ಪರಿಚಯವನ್ನೂ ಕೊಡುತ್ತೇನೆ. ಋಷಿ-ಮುನಿಗಳಂತೂ ನಾವು ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿಲ್ಲವೆಂದು ಹೇಳುತ್ತಾ ಬಂದಿದ್ದಾರೆ ಅಂದಮೇಲೆ ಈಗ ಅವರನ್ನು ಯಾರು ಅರಿತುಕೊಂಡಿದ್ದಾರೆ? ಯಾವಾಗ ಮತ್ತು ಯಾರ ಮೂಲಕ ಅರಿತುಕೊಳ್ಳಬಹುದು ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ಯಾರೂ ಅರಿತುಕೊಂಡಿಲ್ಲ. ತಂದೆಯು ಹೇಳುತ್ತಾರೆ – ನಾನು ಸಂಗಮಯುಗದಲ್ಲಿ ಬಂದು ಡ್ರಾಮಾ ಅನುಸಾರ ನೀವು ಮಕ್ಕಳನ್ನು ಮೊಟ್ಟ ಮೊದಲು ಆಸ್ತಿಕರನ್ನಾಗಿ ಮಾಡುತ್ತೇನೆ. ನಂತರ ನಿಮಗೆ ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇನೆ ಅರ್ಥಾತ್ ನಿಮ್ಮ ಜ್ಞಾನದ ಮೂರನೇ ನೇತ್ರವನ್ನು ತೆರೆಯುತ್ತೇನೆ. ನಿಮಗೆ ಪ್ರಕಾಶತೆಯು ಸಿಕ್ಕಿದೆ, ಹೇಗೆ ಕಣ್ಣಿನ ದೃಷ್ಟಿಯು ಹೊರಟುಹೋದರೆ ಮನುಷ್ಯರು ಅಂಧರಾಗಿ ಬಿಡುತ್ತಾರೆ. ಈ ಸಮಯದಲ್ಲಿ ಮನುಷ್ಯರಿಗೆ ಜ್ಞಾನದ ಮೂರನೇ ನೇತ್ರವಿಲ್ಲ, ಮನುಷ್ಯರಾಗಿಯೂ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೆಂದರೆ ಅವರಿಗೆ ಬುದ್ಧಿಹೀನರೆಂದು ಹೇಳಲಾಗುತ್ತದೆ. ಅಂಧರ ಮಕ್ಕಳು ಅಂಧರು, ಒಳ್ಳೆಯವರ ಮಕ್ಕಳು ಒಳ್ಳೆಯವರೆಂದು ಗೀತೆಯಲ್ಲಿಯೂ ಇದೆ. ಮಹಾಭಾರತ ಯುದ್ಧವಾಗಿತ್ತು ಮತ್ತು ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗಿತ್ತು ಎಂದು ತೋರಿಸುತ್ತಾರೆ. ತಂದೆಯು ಬಂದು ಆತ್ಮರಿಗೆ ಸತ್ಯಯುಗೀ ಸ್ವರಾಜ್ಯವನ್ನು ಕೊಡುವುದಕ್ಕಾಗಿ ರಾಜಯೋಗವನ್ನು ಕಲಿಸಿದ್ದರು. ಆತ್ಮರು ಹೇಳುತ್ತಾರೆ – ನಾನು ರಾಜನಾಗಿದ್ದೇನೆ, ನಾನು ವಕೀಲನಾಗಿದ್ದೇನೆ ಎಂದು. ಈಗ ವಿಶ್ವದ ರಚಯಿತ ತಂದೆಯ ಮೂಲಕ ನಾವು ವಿಶ್ವದ ಸ್ವರಾಜ್ಯವನ್ನು ಪಡೆಯುತ್ತಿದ್ದೇವೆಂದು ನೀವಾತ್ಮರಿಗೆ ತಿಳಿದಿದೆ, ಅವರು ಯಾವುದರ ರಚಯಿತನಾಗಿದ್ದಾರೆ? ಹೊಸ ಪ್ರಪಂಚದ ರಚಯಿತ. ತಂದೆಯು ಹೊಸ ಸೃಷ್ಟಿಯನ್ನು ರಚಿಸುತ್ತಾರೆ, ರಚಯಿತನೂ ಆಗಿದ್ದಾರೆ ಮತ್ತು ಅವರಲ್ಲಿ ಸಂಪೂರ್ಣ ಜ್ಞಾನವೂ ಇದೆ. ಇಡೀ ವಿಶ್ವದ ಚರಿತ್ರೆಯನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ, ಯಾರಿಗೂ ಜ್ಞಾನದ ಮೂರನೇ ನೇತ್ರವಿಲ್ಲ. ತಂದೆಯ ವಿನಃ ಯಾರೂ ಮೂರನೇ ನೇತ್ರವನ್ನು ಕೊಡಲು ಸಾಧ್ಯವಿಲ್ಲ. ವಿಶ್ವದ ಚರಿತ್ರೆ-ಭೂಗೋಳ, ಮೂಲವತನ, ಸೂಕ್ಷ್ಮವತನ, ಸ್ಥೂಲವತನ… ಇದೆಲ್ಲವನ್ನೂ ನೀವು ತಿಳಿದುಕೊಂಡಿದ್ದೀರಿ. ಮೂಲವತನವು ಆತ್ಮರ ಸೃಷ್ಟಿಯಾಗಿದೆ. ನಾವು ಬ್ರಹ್ಮತತ್ವದಲ್ಲಿ ಲೀನವಾಗಿ ಬಿಡುತ್ತೇವೆಂದು ಸನ್ಯಾಸಿಗಳು ಹೇಳುತ್ತಾರೆ ಆದರೆ ಇಲ್ಲ, ನಿಮಗೆ ತಿಳಿದಿದೆ – ಹೋಗಿ ಬ್ರಹ್ಮ್ತತ್ವದಲ್ಲಿ ನಿವಾಸ ಮಾಡುತ್ತಾರೆ ಅದು ಶಾಂತಿಧಾಮ, ಮನೆಯಾಗಿದೆ. ಸನ್ಯಾಸಿಗಳು ಬ್ರಹ್ಮತತ್ವವೇ ಭಗವಂತನೆಂದು ಹೇಳುತ್ತಾರೆ, ಎಷ್ಟೊಂದು ಅಂತರವಿದೆ! ಬಹ್ಮ್ವಂತೂ ತತ್ವವಾಗಿದೆ, ಹೇಗೆ ಆಕಾಶ ತತ್ವವಿದೆ ಹಾಗೆಯೇ ಬ್ರಹ್ಮ್ ವೂ ತತ್ವವಾಗಿದೆ. ಅಲ್ಲಿ ನಾವಾತ್ಮರು ಮತ್ತು ಪರಮಪಿತ ಪರಮಾತ್ಮನು ನಿವಾಸ ಮಾಡುತ್ತಾರೆ, ಅದಕ್ಕೆ ಮಧುರ ಮನೆಯೆಂದು ಹೇಳಲಾಗುತ್ತದೆ, ಅದು ಆತ್ಮಗಳ ಮನೆಯಾಗಿದೆ. ಮಕ್ಕಳಿಗೆ ಅರ್ಥವಾಗಿದೆ, ಬ್ರಹ್ಮ್ ತತ್ವದಲ್ಲಿ ಯಾವುದೇ ಆತ್ಮರು ಲೀನವಾಗುವುದಿಲ್ಲ ಮತ್ತು ಆತ್ಮವೆಂದೂ ವಿನಾಶ ಹೊಂದುವುದಿಲ್ಲ. ಆತ್ಮವು ಅವಿನಾಶಿಯಾಗಿದೆ, ಈ ನಾಟಕವೂ ಸಹ ಮಾಡಿ-ಮಾಡಲ್ಪಟ್ಟ ಅವಿನಾಶಿಯಾಗಿದೆ. ಈ ಡ್ರಾಮಾದಲ್ಲಿ ಎಷ್ಟೊಂದು ಮಂದಿ ಪಾತ್ರಧಾರಿಗಳಿದ್ದಾರೆ. ಈಗ ಸಂಗಮಯುಗವಾಗಿದೆ, ಈಗ ಎಲ್ಲಾ ಪಾತ್ರಧಾರಿಗಳು ಹಾಜರಾಗಿದ್ದಾರೆ. ಹೇಗೆ ನಾಟಕವು ಮುಕ್ತಾಯವಾದಾಗ ಎಲ್ಲಾ ಪಾತ್ರಧಾರಿಗಳು ನಿರ್ದೇಶಕ ಮೊದಲಾದವರೆಲ್ಲರೂ ಬಂದು ಹಾಜರಾಗುತ್ತಾರೆ, ಈ ಸಮಯದಲ್ಲಿ ಈ ಬೇಹದ್ದಿನ ನಾಟಕವೂ ಸಹ ಮುಕ್ತಾಯವಾಗುತ್ತದೆ ಮತ್ತೆ ಪುನರಾವರ್ತನೆ ಆಗುತ್ತದೆ. ಆ ಹದ್ದಿನ ನಾಟಕಗಳಲ್ಲಿ ಬದಲಾವಣೆ ಆಗಬಹುದು, ನಾಟಕವು ಹಳೆಯದಾಗಿ ಬಿಡುತ್ತದೆ ಆದರೆ ಈ ಬೇಹದ್ದಿನ ನಾಟಕವು ಅನಾದಿ-ಅವಿನಾಶಿಯಾಗಿದೆ. ತಂದೆಯು ತ್ರಿಕಾಲದರ್ಶಿ, ತ್ರಿನೇತ್ರಿಗಳನ್ನಾಗಿ ಮಾಡುತ್ತಾರೆ. ದೇವತೆಗಳು ತ್ರಿಕಾಲದರ್ಶಿಗಳಾಗಿರುವುದಿಲ್ಲ. ಶೂದ್ರ ವರ್ಣದವರು ತ್ರಿಕಾಲದರ್ಶಿಗಳಾಗಿರುವುದಿಲ್ಲ, ಕೇವಲ ನೀವು ಬ್ರಾಹ್ಮಣ ವರ್ಣದವರೇ ತ್ರಿಕಾಲದರ್ಶಿಗಳಾಗಿದ್ದೀರಿ. ಎಲ್ಲಿಯವರೆಗೆ ಬ್ರಾಹ್ಮಣರು ಆಗುವುದಿಲ್ಲವೋ ಅಲ್ಲಿಯವರೆಗೆ ಜ್ಞಾನದ ಮೂರನೇ ನೇತ್ರವು ಸಿಗಲು ಸಾಧ್ಯವಿಲ್ಲ. ನೀವು ವೃಕ್ಷದ ಆದಿ-ಮಧ್ಯ-ಅಂತ್ಯವನ್ನು ಎಲ್ಲಾ ಧರ್ಮಗಳನ್ನೂ ತಿಳಿದುಕೊಂಡಿದ್ದೀರಿ. ನೀವೂ ಸಹ ಮಾ|| ಜ್ಞಾನಪೂರ್ಣನಾಗುತ್ತೀರಿ. ತಂದೆಯು ಮಕ್ಕಳನ್ನು ತನ್ನ ಸಮಾನರನ್ನಾಗಿ ಮಾಡುತ್ತಾರಲ್ಲವೆ. ಜ್ಞಾನ ಸಾಗರನು ಒಬ್ಬರೇ ತಂದೆಯಾಗಿದ್ದಾರೆ, ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಎಲ್ಲಾ ಮಕ್ಕಳನ್ನು ಆಸ್ತಿಕರನ್ನಾಗಿ ಮಾಡಿ ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ. ಈಗ ನೀವು ಮಕ್ಕಳು ಇದನ್ನು ಎಲ್ಲರಿಗೆ ಹೇಳಬೇಕಾಗಿದೆ – ಶಿವ ತಂದೆಯು ಬಂದಿದ್ದಾರೆ, ಅವರನ್ನು ನೆನಪು ಮಾಡಿರಿ. ಯಾರು ಆಸ್ತಿಕರಾಗುವರೋ ಅವರು ತಂದೆಯನ್ನು ಬಹಳ ಚೆನ್ನಾಗಿ ಪ್ರೀತಿ ಮಾಡುತ್ತಾರೆ. ನಿಮ್ಮಮೇಲೆ ತಂದೆಗೂ ಪ್ರೀತಿಯಿದೆ, ನಿಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ವಿನಾಶಕಾಲೇ ವಿಪರೀತ ಬುದ್ಧಿ ವಿನಶ್ಯಂತಿ ಮತ್ತು ವಿನಾಶಕಾಲೇ ಪ್ರೀತಿ ಬುದ್ಧಿ ವಿಜಯಂತಿ ಎಂದು ಗಾಯನವಿದೆ. ಗೀತೆಯಲ್ಲಿ ಕೆಲಕೆಲವು ಅಕ್ಷರಗಳು ಸತ್ಯವಾಗಿವೆ. ಶ್ರೀಮದ್ಭಗವದ್ಗೀತೆಯು ಸರ್ವೋತ್ತಮ ಶಾಸ್ತ್ರವಾಗಿದೆ, ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಇದನ್ನೂ ತಿಳಿಸಿದ್ದಾರೆ – ಮುಖ್ಯವಾಗಿ ನಾಲ್ಕು ಧರ್ಮ ಶಾಸ್ತ್ರಗಳಿವೆ ಮತ್ತು ಅನ್ಯ ಧರ್ಮದವರೆಲ್ಲರೂ ಕೇವಲ ತಮ್ಮ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಅವರು ರಾಜ್ಯಭಾರ ಮಾಡುವ ಮಾತಿಲ್ಲ ಮತ್ತು ಅವರಿಗೆ ಗುರುಗಳೆಂದೂ ಹೇಳಲು ಸಾಧ್ಯವಿಲ್ಲ. ಹಿಂತಿರುಗಿ ಕರೆದುಕೊಂಡು ಹೋಗುವುದೇ ಗುರುಗಳ ಕರ್ತವ್ಯವಾಗಿದೆ. ಇಬ್ರಾಹಿಂ, ಬುದ್ಧ, ಕ್ರೈಸ್ಟ್ ಮೊದಲಾದವರು ಬರುತ್ತಾರೆ, ಅವರ ಹಿಂದೆ ಅವರ ವಂಶಾವಳಿಯೂ ಬರುತ್ತದೆ ಆದರೆ ಯಾರು ದುಃಖದಿಂದ ಬಿಡಿಸಿ ಸುಖದಲ್ಲಿ ಕರೆದುಕೊಂಡು ಹೋಗುವರೋ ಅವರೇ ನಿಜವಾದ ಗುರುವಾಗಿದ್ದಾರೆ. ಇವರಂತೂ ಕೇವಲ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಇಲ್ಲಿ ಅನೇಕರಿಗೆ ಗುರುಗಳೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ಬ್ರಹ್ಮಾ-ವಿಷ್ಣು-ಶಂಕರನಿಗೂ ಸಹ ಗುರುಗಳೆಂದು ಹೇಳಲು ಸಾಧ್ಯವಿಲ್ಲ. ಶಿವತಂದೆಯೊಬ್ಬರೇ ಸರ್ವರ ಸದ್ಗತಿದಾತನಾಗಿದ್ದಾರೆ. ಒಬ್ಬ ರಾಮನನ್ನೇ ಕರೆಯುತ್ತಾರೆ. ಶಿವತಂದೆಗೂ ರಾಮನೆಂದು ಹೇಳುತ್ತಾರೆ. ಅನೇಕ ಭಾಗಗಳಿವೆ ಆದ್ದರಿಂದ ಅನೇಕ ಹೆಸರಗಳನ್ನು ಇಟ್ಟುಬಿಟ್ಟಿದ್ದಾರೆ. ಮೂಲ ಹೆಸರಾಗಿದೆ ಶಿವ. ಅವರಿಗೆ ಸೋಮನಾಥನೆಂದೂ ಹೇಳುತ್ತಾರೆ, ಸೋಮರಸವನ್ನು ಕುಡಿಸಿದರು ಅರ್ಥಾತ್ ಜ್ಞಾನ ಧನವನ್ನು ಕೊಟ್ಟರು, ಬಾಕಿ ನೀರು ಇತ್ಯಾದಿಗಳ ಮಾತಿಲ್ಲ. ನಿಮ್ಮನ್ನು ಸಮ್ಮುಖದಲ್ಲಿ ಜ್ಞಾನಪೂರ್ಣ, ಆನಂದ ಸ್ವರೂಪರನ್ನಾಗಿ ಮಾಡುತ್ತಿದ್ದಾರೆ. ತಂದೆಯಂತೂ ಆನಂದ ಸಾಗರನಾಗಿದ್ದಾರೆ, ನೀವು ಮಕ್ಕಳನ್ನು ಜ್ಞಾನ ನದಿಗಳನ್ನಾಗಿ ಮಾಡುತ್ತಾರೆ. ಸಾಗರವು ಒಂದೇ ಇರುತ್ತದೆ, ಒಂದು ಸಾಗರದಿಂದ ಅನೇಕ ನದಿಗಳು ಉಕ್ಕುತ್ತವೆ, ನೀವೀಗ ಸಂಗಮದಲ್ಲಿದ್ದೀರಿ, ಈ ಸಮಯದಲ್ಲಿ ಇಡೀ ಧರಣಿಯೇ ರಾವಣನ ಸ್ಥಾನವಾಗಿದೆ, ಕೇವಲ ಒಂದು ಲಂಕೆಯಷ್ಟೇ ಇರಲಿಲ್ಲ, ಇಡೀ ಧರಣಿಯ ಮೇಲೆ ರಾವಣ ರಾಜ್ಯವಿತ್ತು. ರಾಮ ರಾಜ್ಯದಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ, ಇದು ಕೇವಲ ಈಗ ನಿಮ್ಮ ಬುದ್ಧಿಯಲ್ಲಿದೆ, ತಂದೆಯು ತಿಳಿಸಿದ್ದಾರೆ – ನಾನು ಬ್ರಾಹ್ಮಣ, ದೇವತಾ, ಕ್ಷತ್ರಿಯ ಮೂರು ಧರ್ಮಗಳ ಸ್ಥಾಪನೆ ಮಾಡುತ್ತೇನೆ ನಂತರ ವೈಶ್ಯ, ಶೂದ್ರ ವರ್ಣದಲ್ಲಿ ಮತ್ತೆಲ್ಲರೂ ಬಂದು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಅನೇಕ ಧರ್ಮಗಳ ವಿನಾಶವನ್ನೂ ಮಾಡಿಸುತ್ತಾರೆ. ಭಾರತದಲ್ಲಿ ತ್ರಿಮೂರ್ತಿಯ ಚಿತ್ರವನ್ನೂ ಮಾಡುತ್ತಾರೆ ಆದರೆ ಅದರಲ್ಲಿ ಶಿವನ ಚಿತ್ರವನ್ನು ಮರೆ ಮಾಡಿ ಬಿಟ್ಟಿದ್ದಾರೆ. ಶಿವನಿಂದಲೇ ಸಿದ್ಧವಾಗುತ್ತದೆ – ಪರಮಪಿತ ಪರಮಾತ್ಮ ಶಿವನು ಬ್ರಹ್ಮಾರವರ ಮೂಲಕ ಸ್ಥಾಪನೆಯನ್ನು, ವಿಷ್ಣುವಿನ ಮೂಲಕ ಪಾಲನೆಯನ್ನು ಮಾಡಿಸುತ್ತಾರೆ. ಅವರಿಗೆ ಮಾಡಿ-ಮಾಡಿಸುವವರೆಂದು ಹೇಳಲಾಗುತ್ತದೆ. ತಾನೂ ಕರ್ಮ ಮಾಡುತ್ತಾರೆ, ನೀವು ಮಕ್ಕಳಿಗೂ ಕಲಿಸುತ್ತಾರೆ. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿಸುತ್ತಾರೆ. ರಾವಣ ರಾಜ್ಯದಲ್ಲಿ ನೀವು ಯಾವ ಕರ್ಮ ಮಾಡುತ್ತೀರೋ ಅದು ವಿಕರ್ಮವಾಗಿ ಬಿಡುತ್ತದೆ, ಸತ್ಯಯುಗದಲ್ಲಿ ನೀವು ಯಾವ ಕರ್ಮ ಮಾಡುತ್ತೀರೋ ಅದು ಅಕರ್ಮವಾಗುತ್ತದೆ. ಇಲ್ಲಿ ವಿಕರ್ಮವೇ ಆಗುತ್ತದೆ ಏಕೆಂದರೆ ರಾವಣ ರಾಜ್ಯವಾಗಿದೆ. ಸತ್ಯಯುಗದಲ್ಲಿ 5 ವಿಕಾರಗಳಿರುವುದೇ ಇಲ್ಲ. ಒಂದೊಂದು ಮಾತು ತಿಳಿದುಕೊಳ್ಳುವಂತದ್ದಾಗಿದೆ ಮತ್ತು ಸೆಕೆಂಡಿನಲ್ಲಿ ತಿಳಿಸಲಾಗುತ್ತದೆ. ಓಂನ ಅರ್ಥವನ್ನು ಮನುಷ್ಯರು ಬಹಳ ವಿಸ್ತಾರವಾಗಿ ತಿಳಿಸುತ್ತಾರೆ, ತಂದೆಯು ಹೇಳುತ್ತಾರೆ – ಓಂ ಎಂದರೆ ನಾನು ಆತ್ಮ, ಇದು ನನ್ನ ಶರೀರವಾಗಿದೆ. ಎಷ್ಟು ಸಹಜವಾಗಿದೆ, ನಾವು ಸುಖಧಾಮದಲ್ಲಿ ಹೋಗುತ್ತಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ. ಕೃಷ್ಣನ ಮಂದಿರಕ್ಕೆ ಸುಖಧಾಮವೆಂದು ಹೇಳುತ್ತಾರೆ ವಾಸ್ತವದಲ್ಲಿ ಕೃಷ್ಣ ಪುರಿಯಾಗಿದೆ. ಮಾತೆಯರು ಕೃಷ್ಣ ಪುರಿಯಲ್ಲಿ ಹೋಗುವುದಕ್ಕಾಗಿ ಬಹಳ ಪರಿಶ್ರಮ ಪಡುತ್ತಾರೆ, ನೀವೀಗ ಭಕ್ತಿ ಮಾಡುವುದಿಲ್ಲ. ನಿಮಗೆ ಜ್ಞಾನ ಸಿಕ್ಕಿದೆ ಮತ್ತ್ಯಾವುದೇ ಮನುಷ್ಯ ಮಾತ್ರರಲ್ಲಿ ಈ ಜ್ಞಾನವಿಲ್ಲ. ನಾನು ನಿಮ್ಮನ್ನು ಪಾವನರನ್ನಾಗಿ ಮಾಡಿ ಹೋಗುತ್ತೇನೆ ನಂತರ ಪತಿತರನ್ನಾಗಿ ಯಾರು ಮಾಡುತ್ತಾರೆ? ಇದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಎಲ್ಲಾ ಪುರುಷರು ಅಥವಾ ಸ್ತ್ರೀಯರು ಭಕ್ತಿನಿಯರಾಗಿದ್ದಾರೆ, ಸೀತೆಯರಾಗಿದ್ದಾರೆ, ಎಲ್ಲರ ಸದ್ಗತಿ ಮಾಡುವವರು ತಂದೆಯಾಗಿದ್ದಾರೆ. ಎಲ್ಲರೂ ರಾವಣನ ಬಂಧನದಲ್ಲಿದ್ದಾರೆ. ಇದು ದುಃಖಧಾಮವಾಗಿದೆ. ತಂದೆಯು ನಿಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ, ಇಂತಹ ತಂದೆಯನ್ನು 5000 ವರ್ಷಗಳ ನಂತರ ಕೇವಲ ನೀವು ನೋಡುತ್ತೀರಿ. ಲಕ್ಷ್ಮೀ-ನಾರಾಯಣರ ಆತ್ಮಕ್ಕೆ ಈಗ ಜ್ಞಾನವಿದೆ, ನಾವು ಬಾಲ್ಯದಲ್ಲಿ ಈ ಕೃಷ್ಣನಾಗಿರುತ್ತೇನೆ ನಂತರ ದೊಡ್ಡವನಾಗಿ ಹೀಗೆ ಶರೀರ ಬಿಡುತ್ತೇನೆ ಮತ್ತೆ ಇನ್ನೊಂದು ಶರೀರ ತೆಗೆದುಕೊಳ್ಳುತ್ತೇನೆ ಮತ್ತ್ಯಾರಿಗೂ ಈ ಜ್ಞಾನವಿಲ್ಲ.

ತಂದೆಯು ಹೇಳುತ್ತಾರೆ – ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ಶಿವ ತಂದೆಯು ನಿಮ್ಮನ್ನು ಅಮರರನ್ನಾಗಿ ಮಾಡಲು ಅಮರಲೋಕದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ ಅಮರ ಕಥೆಯನ್ನು ತಿಳಿಸುತ್ತಿದ್ದಾರೆ. ಇದು ಮೃತ್ಯುಲೋಕವಾಗಿದೆ. ನೀವೆಲ್ಲಾ ಪಾರ್ವತಿಯರು ಅಮರನಾಥನ ಮೂಲಕ ಅಮರ ಕಥೆಯನ್ನು ಕೇಳುತ್ತಿದ್ದೀರಿ, ನೀವು ಸತ್ಯ-ಸತ್ಯವಾಗಿ ಆಗುತ್ತೀರಿ. ಕೇವಲ ತಂದೆಯನ್ನು ನೆನಪು ಮಾಡಿದರೆ ನಿಮ್ಮ ಆತ್ಮವು ಅಮರನಾಗುತ್ತದೆ. ಅಲ್ಲಿ ದುಃಖದ ಮಾತುಗಳಿರುವುದಿಲ್ಲ, ಹೇಗೆ ಸರ್ಪವು ಒಂದು ಪೋರೆಯನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ, ಇವೆಲ್ಲಾ ಉದಾಹರಣೆಗಳು ಇಲ್ಲಿಯದಾಗಿದೆ. ಭ್ರಮರಿಯ ಉದಾಹರಣೆಯೂ ಇಲ್ಲಿಯದಾಗಿದೆ. ನೀವು ಬ್ರಾಹ್ಮಣರು ಏನು ಮಾಡುತ್ತೀರಿ? ವಿಕಾರಿ ಕೀಟಗಳನ್ನು ಪರಿವರ್ತನೆ ಮಾಡಿ ದೇವತೆಗಳನ್ನಾಗಿ ಮಾಡುವಿರಿ. ಮನುಷ್ಯರದೇ ಮಾತಾಗಿದೆ. ಭ್ರಮರಿಯದಂತೂ ಇದೊಂದು ದೃಷ್ಟಾಂತವಾಗಿದೆ. ನೀವು ಬ್ರಾಹ್ಮಣ ಮಕ್ಕಳು ಈಗ ತಂದೆಯ ಮೂಲಕ ಅಮರ ಕಥೆಯನ್ನು ಕೇಳುತ್ತಿದ್ದೀರಿ, ಅನ್ಯರಿಗೆ ಕುಳಿತು ಜ್ಞಾನದ ಭೂ ಭೂ ಮಾಡುತ್ತೀರಿ, ಇದರಿಂದ ಮನುಷ್ಯನಿಂದ ದೇವತೆ, ಸ್ವರ್ಗದ ಪರಿಗಳಾಗಿ ಬಿಡುವರು. ಕೇವಲ ಮಾನಸ ಸರೋವರದಲ್ಲಿ ಮುಳುಗಿದರೆ ಯಾರೂ ದೇವತೆಗಳಾಗುವುದಿಲ್ಲ, ಇದೆಲ್ಲವೂ ಸುಳ್ಳಾಗಿದೆ. ನೀವು ಸುಳ್ಳನ್ನೇ ಕೇಳುತ್ತಾ ಬಂದಿದ್ದೀರಿ, ಈಗ ತಂದೆಯು ಸತ್ಯವಂತರನ್ನಾಗಿ ಮಾಡುತ್ತಾರೆ. ತಂದೆಯು ಹೇಳುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿಯಿರಿ, ನೀವು ತಿಳಿದುಕೊಂಡಿದ್ದೀರಿ – ನಿರಾಕಾರ ಪರಮಪಿತ ಪರಮಾತ್ಮನು ಈ ಮುಖದ ಮೂಲಕ ತಿಳಿಸುತ್ತಿದ್ದಾರೆ. ನಾವು ಈ ಕಿವಿಗಳ ಮೂಲಕ ಕೇಳುತ್ತಿದ್ದೇವೆ, ಆತ್ಮಾಭಿಮಾನಿಗಳಾಗಬೇಕಾಗಿದೆ, ಮತ್ತೆ ಪರಮಾತ್ಮನೂ ಸಹ ನಾನು ಯಾರು ಎಂಬುದನ್ನು ಅನುಭೂತಿ ಮಾಡಿಸುತ್ತಾರೆ ಮತ್ತ್ಯಾರೂ ಆತ್ಮಾಭಿಮಾನಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ತಂದೆಯ ವಿನಃ ಆತ್ಮಾಭಿಮಾನಿಗಳಾಗಿ ಎಂಬುದನ್ನು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಅವರ ಜಯಂತಿ ಹೇಗಾಗುವುದು? ಎಂಬುದನ್ನು ತಿಳಿದುಕೊಂಡಿಲ್ಲ. ತಂದೆಯೇ ಸ್ವಯಂ ಬಂದು ತಿಳಿಸುತ್ತಾರೆ – ನಾನು ಸಾಧಾರಣ ವೃದ್ಧನ ತನುವಿನಲ್ಲಿ ಪ್ರವೇಶ ಮಾಡುತ್ತೇನೆ, ಇಲ್ಲದಿದ್ದರೆ ಬ್ರಹ್ಮಾ ಎಲ್ಲಿಂದ ಬರುವರು? ಪತಿತ ಶರೀರವೇ ಬೇಕಾಗಿದೆ, ಸೂಕ್ಷ್ಮ ವತನವಾಸಿ ಬ್ರಹ್ಮನಲ್ಲಿ ವಿರಾಜಮಾನನಾಗಿ ಬ್ರಾಹ್ಮಣರನ್ನು ರಚಿಸುವುದಿಲ್ಲ. ನಾನು ಪತಿತ ಶರೀರ, ಪತಿತ ಪ್ರಪಂಚದಲ್ಲಿ ಬರುತ್ತೇನೆ. ಬ್ರಹ್ಮನ ಮೂಲಕ ಸ್ಥಾಪನೆಯೆಂದು ಗಾಯನವಿದೆ, ಯಾವುದರ ಸ್ಥಾಪನೆ ಮಾಡುವರೋ, ಯಾರು ಈ ಜ್ಞಾನವನ್ನು ಪಡೆಯುವರೋ ಅವರು ಈ ದೇವತೆಗಳು ಆಗಿ ಬಿಡುತ್ತಾರೆ. ಮನುಷ್ಯರು ಬ್ರಹ್ಮನ ಚಿತ್ರವನ್ನು ನೋಡಿ ತಬ್ಬಿಬ್ಬಾಗುತ್ತಾರೆ, ಇದಂತೂ ದಾದಾರವರ ಚಿತ್ರವೆಂದು ಹೇಳುತ್ತಾರೆ. ಪ್ರಜಾಪಿತ ಬ್ರಹ್ಮನಂತೂ ಅವಶ್ಯವಾಗಿ ಇಲ್ಲಿಯೇ ಇರುವರು. ಸೂಕ್ಷ್ಮವತನದಲ್ಲಿ ಪ್ರಜೆಗಳನ್ನು ಹೇಗೆ ರಚಿಸುವರು! ಪ್ರಜಾಪಿತನ ಮಕ್ಕಳು ಸಾವಿರಾರು ಮಂದಿ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆ ಅಂದಮೇಲೆ ಇದು ಸುಳ್ಳಾಗಿದೆಯೇ? ನಾವು ಶಿವ ತಂದೆಯ ಮೂಲಕ ಆಸ್ತಿಯನ್ನು ಪಡೆಯುತ್ತಿದ್ದೇವೆ, ನೀವು ಮಕ್ಕಳಿಗೆ ತಿಳಿಸಲಾಗಿದೆ – ಸೂಕ್ಷ್ಮವತನದಲ್ಲಿರುವವರು ಅವ್ಯಕ್ತ ಬ್ರಹ್ಮನಾಗಿದ್ದಾರೆ, ಪ್ರಜಾಪಿತನಂತೂ ಸಾಕಾರದಲ್ಲಿ ಬೇಕು. ಈ ಪತಿತರೇ ನಂತರ ಪಾವನನಾಗುತ್ತಾರೆ. ತತ್ತ್ವಂ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಆತ್ಮಾಭಿಮಾನಿಗಳಾಗಿ ಈ ಕಿವಿಗಳ ಮೂಲಕ ಅಮರ ಕಥೆಯನ್ನು ಕೇಳಬೇಕಾಗಿದೆ. ಜ್ಞಾನದ ಭೂ ಭೂ ಮಾಡಿ ತಮ್ಮ ಸಮಾನ ಮಾಡಿಕೊಳ್ಳುವ ಸೇವೆಯಲ್ಲಿ ಇರಬೇಕಾಗಿದೆ.

2. ತಂದೆಯ ಸಮಾನ ಜ್ಞಾನ ಸ್ವರೂಪ ಆನಂದ ಸ್ವರೂಪರಾಗಬೇಕಾಗಿದೆ. ಸೋಮ ರಸವನ್ನೂ ಕುಡಿಯಬೇಕು ಮತ್ತು ಕುಡಿಸಬೇಕಾಗಿದೆ.

ವರದಾನ:-

“ಸೀ ಫಾದರ್ – ಫಾಲೋ ಫಾದರ್” ಈ ಮಂತ್ರವನ್ನು ಸದಾ ತಮ್ಮಮುಂದೆ ಇಟ್ಟುಕೊಳ್ಳುತ್ತಾ ಏರುವ ಕಲೆಯಲ್ಲಿ ಸಾಗುತ್ತಿರಿ, ಹಾರುತ್ತಿರಿ. ಆತ್ಮರನ್ನೆಂದಿಗೂ ನೋಡಬಾರದು. ಏಕೆಂದರೆ ಆತ್ಮರೆಲ್ಲರೂ ಪುರುಷಾರ್ಥಿ ಆಗಿದ್ದಾರೆ, ಪುರುಷಾರ್ಥಿಯಲ್ಲಿ ಸದ್ಗುಣವೂ ಇರುತ್ತದೆ, ಹಾಗೆಯೇ ಕೆಲವು ಕೊರತೆಗಳೂ ಇರುತ್ತವೆ. ಅವರು ಸಂಪನ್ನರಲ್ಲ ಆದ್ದರಿಂದ ಫಾಲೋ ಫಾದರ್ ಮಾಡಿರಿ, ಫಾಲೋ ಬ್ರದರ್ಸ್-ಸಿಸ್ಟರ್ಸ್ ಅಲ್ಲ. ಹೇಗೆ ತಂದೆಯವರು ಏಕರಸವಾಗಿ ಇರುತ್ತಾರೆಯೋ ಹಾಗೆಯೇ ಅನುಕರಣೆ ಮಾಡುವವರೂ ಸಹ ಸ್ವತಹವಾಗಿಯೇ ಏಕರಸ ಸ್ಥಿತಿಯವರು ಆಗಿ ಬಿಡುವರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top