16 January 2022 KANNADA Murli Today | Brahma Kumaris

Read and Listen today’s Gyan Murli in Kannada

January 15, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಆತ್ಮಿಕ ನಶೆಯಲ್ಲಿದ್ದು ನಿಶ್ಚಿಂತ ಚಕ್ರವರ್ತಿಗಳಾಗಿ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಅತಿ ದೊಡ್ಡ ತಂದೆಯು ಮಕ್ಕಳಿಗೆ ಅಲೌಕಿಕ ದಿವ್ಯ ಸಂಗಮಯುಗದ ಪ್ರತಿದಿನ ಶುಭಾಷಯಗಳನ್ನು ನೀಡುತ್ತಿದ್ದಾರೆ. ಪ್ರಪಂಚದವರಿಗಾಗಿ ಒಂದು ದಿನವು ವಿಶೇಷ ದಿನವಾಗಿರುತ್ತದೆ ಮತ್ತು ಆ ದೊಡ್ಡ ದಿನದಂದು ಏನು ಮಾಡುತ್ತಾರೆ? ದೊಡ್ಡ ಹೃದಯದಿಂದ (ವಿಶಾಲ) ಆಚರಿಸುತ್ತಿದ್ದೇವೆ ಎಂದು ಅವರು ತಿಳಿದುಕೊಳ್ಳುತ್ತಾರೆ ಆದರೆ ಅವರು ಆಚರಿಸುವುದೇನೆಂದು ನೀವು ತಿಳಿದುಕೊಂಡಿದ್ದೀರಿ. ಅವರ ಆಚರಣೆ ಮತ್ತು ತಮ್ಮ ಅತಿ ದೊಡ್ಡ ತಂದೆಯ ವಿಶಾಲ ಹೃದಯೀ ಮಕ್ಕಳ ಆಚರಣೆಗೆ ಎಷ್ಟು ಭಿನ್ನ ಮತ್ತು ಪ್ರಿಯವಾಗಿದೆ! ಹೇಗೆ ಪ್ರಪಂಚದವರಿಗೆ ದೊಡ್ಡ ದಿನವಿರುತ್ತದೆ ಖುಷಿಯಲ್ಲಿ ನರ್ತಿಸುತ್ತಾ, ಹಾಡುತ್ತಾ, ಒಬ್ಬರು ಇನ್ನೊಬ್ಬರಿಗೆ ಆ ದಿನದ ಶುಭಾಷಯಗಳನ್ನು ಕೊಡುತ್ತಾರೆ ಹಾಗೆಯೇ ತಾವು ಮಕ್ಕಳಿಗಾಗಿ ಸಂಗಮಯುಗವೇ ದೊಡ್ಡ ಯುಗವಾಗಿದೆ. ಆಯಸ್ಸಿನಲ್ಲಿ ಚಿಕ್ಕದಾಗಿದೆ ಆದರೆ ವಿಶೇಷತೆಗಳು ಮತ್ತು ಪ್ರಾಪ್ತಿಯನ್ನು ಕೊಡಿಸುವುದರಲ್ಲಿ ಎಲ್ಲದಕ್ಕಿಂತ ದೊಡ್ಡ ಯುಗವಾಗಿದೆ. ಅಂದಾಗ ಸಂಗಮಯುಗದ ಪ್ರತಿದಿನವೂ ತಮಗಾಗಿ ವಿಶೇಷ ದಿನವಾಗಿದೆ ಏಕೆಂದರೆ ಅತಿದೊಡ್ಡ ತಂದೆಯ ದೊಡ್ಡಯುಗ “ಸಂಗಮಯುಗ” ದಲ್ಲಿಯೇ ಸಿಗುತ್ತಾರೆ. ಜೊತೆ ಜೊತೆಗೆ ತಂದೆಯ ಮೂಲಕ ಅತಿ ದೊಡ್ಡ ಪ್ರಾಪ್ತಿಯೂ ಈಗಲೇ ಆಗುತ್ತದೆ. ಬಾಪ್ದಾದಾ ಎಲ್ಲಾ ಮಕ್ಕಳನ್ನೂ ಅತಿ ದೊಡ್ಡ “ಪುರುಷೋತ್ತಮ” ರನ್ನಾಗಿ ಈಗಲೇ ಮಾಡುತ್ತಾರೆ. ಹೇಗೆ ಇಂದಿನ ದಿನದ ವಿಶೇಷತೆಯಾಗಿದೆ – ಖುಷಿಯನ್ನು ಆಚರಿಸುವುದು ಮತ್ತು ಒಬ್ಬರು ಇನ್ನೊಬ್ಬರಿಗೆ ಉಡುಗೊರೆ ಕೊಡುವುದು, ಶುಭಾಷಯಗಳನ್ನು ಕೊಡುವುದು ಮತ್ತು ತಂದೆಯ ಮುಖಾಂತರವೇ ಉಡುಗೊರೆ ಸಿಗುವ ದಿನವನ್ನೇ ಆಚರಿಸುತ್ತಾರೆ. ತಮ್ಮೆಲ್ಲರಿಗೆ ತಂದೆಯು ಸಂಗಮಯುಗದಲ್ಲಿಯೇ ಅತಿ ದೊಡ್ಡದಾದ ಯಾವ ಉಡುಗೊರೆಯನ್ನು ನೀಡಿದ್ದಾರೆ? ಬಾಪ್ದಾದಾ ಸದಾ ಹೇಳುತ್ತಾರೆ – ತಾವು ಮಕ್ಕಳಿಗಾಗಿ ಅಂಗೈಯಲ್ಲಿ ಸ್ವರ್ಗದ ರಾಜ್ಯಭಾಗ್ಯವನ್ನು ತಂದಿದ್ದೇನೆ ಅಂದಮೇಲೆ ಎಲ್ಲರ ಅಂಗೈಯಲ್ಲಿ ಸ್ವರ್ಗದ ರಾಜ್ಯಭಾಗ್ಯವಿದೆಯಲ್ಲವೆ. ಅದಕ್ಕೇ ಅಂಗೈಯಲ್ಲಿ ಸ್ವರ್ಗವೆಂದು ಹೇಳುತ್ತಾರೆ, ಇದಕ್ಕಿಂತಲೂ ದೊಡ್ಡ ಉಡುಗೊರೆಯನ್ನು ಮತ್ತ್ಯಾರದರೂ ಕೊಡಲು ಸಾಧ್ಯವೇ? ಎಷ್ಟೇ ದೊಡ್ಡ ವ್ಯಕ್ತಿಯು ದೊಡ್ಡ ಉಡುಗೊರೆಯನ್ನು ಕೊಡಲಿ ಆದರೆ ತಂದೆಯ ಉಡುಗೊರೆಯ ಮುಂದೆ ಅದು ಏನಾಗಿರುವುದು? ಹೇಗೆ ಸೂರ್ಯನ ಮುಂದೆ ದೀಪವಿದ್ದಂತೆ. ಅಂದಾಗ ಸಂಗಮಯುಗದ ನೆನಪಾರ್ಥ ಸಾಕ್ಷಿಗಳು ಅನ್ಯ ಧರ್ಮಗಳಲ್ಲಿಯೂ ಉಳಿದುಕೊಂಡಿವೆ. ತಮಗೆ ದೊಡ್ಡ ಯುಗದಲ್ಲಿ ದೊಡ್ಡ ತಂದೆಯು ಅತಿ ದೊಡ್ಡ ಉಡುಗೊರೆ ನೀಡಿದ್ದಾರೆ ಆದ್ದರಿಂದ ಇಂದಿನ ದೊಡ್ಡ ದಿನದಂದು ಈ ವಿಧಿಯಿಂದ ಆಚರಿಸುತ್ತಾರೆ. ಅವರು ಕ್ರಿಸ್ಮಸ್ ಫಾದರ್ ಎಂದು ಹೇಳುತ್ತಾರೆ. ಫಾದರ್ (ತಂದೆ) ಸದಾ ಮಕ್ಕಳಿಗೆ ಕೊಡುವಂತಹ “ದಾತ” ನಾಗಿದ್ದಾರೆ. ಭಲೆ ಲೌಕಿಕ ರೀತಿಯಿಂದಲೂ ನೋಡಿ, ತಂದೆಯು ಮಕ್ಕಳಿಗೆ ದಾತನಾಗಿರುತ್ತಾರೆ. ಇವರು ಬೇಹದ್ದಿನ ಫಾದರ್ ಆಗಿದ್ದಾರೆ, ಬೇಹದ್ದಿನ ತಂದೆಯು ಬೇಹದ್ದಿನ ಉಡುಗೊರೆಯನ್ನೇ ಕೊಡುತ್ತಾರೆ. ಮತ್ತ್ಯಾವುದೆ ಉಡುಗೊರೆಯು ಎಷ್ಟು ಸಮಯ ನಡೆಯುವುದು? ಎಷ್ಟು ಒಳ್ಳೊಳ್ಳೆಯ ಶುಭಾಷಯಗಳ ಕಾರ್ಡುಗಳನ್ನು ಉಡುಗೊರೆಯಾಗಿ ಕೊಡುತ್ತಾರೆ ಆದರೆ ಇಂದಿನ ದಿನವು ಕಳೆಯಿತೆಂದರೆ ಮತ್ತೆ ಆ ಕಾರ್ಡನ್ನು ಏನು ಮಾಡುವುದು? ಅದು ಸ್ವಲ್ಪ ಸಮಯವೇ ನಡೆಯುತ್ತದೆಯಲ್ಲವೆ. ತಿಂದು, ಕುಡಿಯುವ ಸಿಹಿ ಪದಾರ್ಥಗಳನ್ನೂ ಕೊಡಬಹುದು, ಅದೂ ಸಹ ಎಷ್ಟು ಸಮಯ ನಡೆಯುವುದು? ಎಷ್ಟು ಸಮಯ ಖುಷಿಯನ್ನು ಆಚರಿಸುವರು? ಭಲೆ ಒಂದು ರಾತ್ರಿ ಹಾಡುತ್ತಾರೆ, ಕುಣಿಯುತ್ತಾರೆ. ಆದರೆ ತಾವಾತ್ಮರಿಗೆ ತಂದೆಯು ಇಂತಹ ಉಡುಗೊರೆಯನ್ನು ಕೊಡುತ್ತಾರೆ, ಅದು ಈ ಜನ್ಮದಲ್ಲಂತೂ ಜೊತೆ ಇದ್ದೇ ಇರುತ್ತದೆ ಆದರೆ ಜನ್ಮ-ಜನ್ಮದಲ್ಲಿಯೂ ಜೊತೆಯಿರುತ್ತದೆ. ಖಾಲಿ ಕೈಯಲ್ಲಿ ಬಂದೆವು ಮತ್ತೆ ಖಾಲಿ ಕೈಯಲ್ಲಿ ಹೋಗಬೇಕಾಗಿದೆ ಎಂದು ಪ್ರಪಂಚದವರು ಹೇಳುತ್ತಾರೆ ಆದರೆ ತಾವೇನು ಹೇಳುತ್ತೀರಿ? ತಾವು ನಶೆಯಿಂದ ಹೇಳುತ್ತೀರಿ, ನಾವಾತ್ಮರು ತಂದೆಯ ಮೂಲಕ ಸಿಕ್ಕಿರುವ ಖಜಾನೆಯಿಂದ ಸಂಪನ್ನರಾಗಿ ಹೋಗುತ್ತೇವೆ ಮತ್ತು ಅನೇಕ ಜನ್ಮಗಳ ಕಾಲ ಸಂಪನ್ನರಾಗಿರುತ್ತೇವೆ. 21 ಜನ್ಮಗಳವರೆಗೆ ಈ ಉಡುಗೊರೆಯು ಜೊತೆಯಿರುತ್ತದೆ. ಇಂತಹ ಉಡುಗೊರೆಯನ್ನು ಎಂದಾದರೂ ನೋಡಿದ್ದೀರಾ? ಭಲೆ ಯಾವುದೇ ವಿದೇಶದ ರಾಜ-ರಾಣಿಯೇ ಆಗಿರಲಿ, ಅವರು ಇಂತಹ ಉಡುಗೊರೆಯನ್ನು ಕೊಡಬಲ್ಲರೆ? ಪೂರ್ಣ ಸಿಂಹಾಸನವನ್ನೇ ಕೊಟ್ಟು ಬಿಡಲಿ, ಈ ಸಿಂಹಾಸನವನ್ನು ತಾವು ಅಲಂಕರಿಸಿ ಎಂದು ಹೇಳಲಿ. ತಾವು ಏನು ಮಾಡುತ್ತೀರಿ? ಯಾರಾದರೂ ತೆಗೆದುಕೊಳ್ಳುವಿರಾ? ತಂದೆಯ ಹೃದಯ ಸಿಂಹಾಸನದ ಮುಂದೆ ಈ ಸಿಂಹಾಸನವೇನು. ಆದ್ದರಿಂದ ತಾವೆಲ್ಲರೂ ನಶೆಯಲ್ಲಿ ಇರುತ್ತೀರಿ, ಇದು ಆತ್ಮಿಕ ನಶೆ. ಈ ಆತ್ಮಿಕ ನಶೆಯಲ್ಲಿ ಇರುವವರು ಯಾವುದೇ ಮಾತಿನ ಚಿಂತೆ ಮಾಡುವುದಿಲ್ಲ, ನಿಶ್ಚಿಂತ ಚಕ್ರವರ್ತಿಗಳಾಗಿ ಬಿಡುತ್ತಾರೆ. ಈಗಲೂ ಚಕ್ರವರ್ತಿಗಳು ಮತ್ತು ಭವಿಷ್ಯದಲ್ಲಿಯೂ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಆದ್ದರಿಂದ ಎಲ್ಲರಿಗಿಂತ ಹಿರಿಯ ಮತ್ತು ಎಲ್ಲರಿಗಿಂತ ಒಳ್ಳೆಯದು ಈ ನಿಶ್ಚಿಂತ ರಾಜ್ಯವೇ ಆಗಿದೆ, ಯಾವುದೇ ಚಿಂತೆಯಿದೆಯೇ? ಮತ್ತು ಪ್ರವೃತ್ತಿಯಲ್ಲಿ ಇರುವವರಿಗೆ ಮರಿ ಮಕ್ಕಳ ಚಿಂತೆಯಿದೆಯೇ? ಕುಮಾರರಿಗೆ ಅಡಿಗೆಯನ್ನು ತಯಾರಿಸುವ ಚಿಂತೆಯು ಹೆಚ್ಚಾಗಿರುತ್ತದೆ. ಕುಮಾರಿಯರಿಗೆ ಏನು ಚಿಂತೆಯಿರುತ್ತದೆ? ಒಳ್ಳೆಯ ನೌಕರಿ ಸಿಗಲಿ ಎಂದು ನೌಕರಿಯ ಚಿಂತೆಯಿದೆಯೇ? ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ. ಯಾರಿಗೆ ಚಿಂತೆಯಿರುವುದೋ ಅವರು ನಿಶ್ಚಿಂತ ರಾಜ್ಯಾಧಿಕಾರದ ಆನಂದವನ್ನು ಪಡೆಯಲು ಸಾಧ್ಯವಿಲ್ಲ. ವಿಶ್ವದ ರಾಜ್ಯವಂತೂ 20 ಜನ್ಮಗಳವರೆಗೆ ಇರಲಿ ಆದರೆ ಈ ನಿಶ್ಚಿಂತ ರಾಜ್ಯಭಾಗ್ಯ ಮತ್ತು ಹೃದಯ ಸಿಂಹಾಸನವು ಇದೊಂದೇ ಈ ಯುಗದಲ್ಲಿ ಒಂದು ಜನ್ಮಕ್ಕಾಗಿ ಸಿಗುತ್ತದೆ ಆದ್ದರಿಂದ ಒಂದರ ಮಹತ್ವಿಕೆಯಿದೆಯಲ್ಲವೆ.

ಬಾಪ್ದಾದಾ ಸದಾ ಮಕ್ಕಳಿಗೆ ಇದನ್ನೇ ಹೇಳುತ್ತೇವೆ – “ಬ್ರಾಹ್ಮಣ ಜೀವನವೆಂದರೆ ನಿಶ್ಚಿಂತ ಚಕ್ರವರ್ತಿಗಳು”. ಬ್ರಹ್ಮಾ ತಂದೆಯು ನಿಶ್ಚಿಂತ ಚಕ್ರವರ್ತಿಯಾದರು ಆದ್ದರಿಂದಲೇ ಯಾವ ಗೀತೆಯನ್ನು ಹಾಡಿದರು? ಏನನ್ನು ಪಡೆಯಬೇಕಿತ್ತೊ ಅದನ್ನು ಪಡೆದು ಬಿಟ್ಟೆನು, ಇನ್ನೇನು ಕೆಲಸವಿದೆ. ತಾವೇನು ಹೇಳುತ್ತೀರಿ? ಸೇವೆಯ ಕಾರ್ಯವಂತೂ ಉಳಿದುಕೊಂಡಿದೆ ಆದರೆ ಅದನ್ನೂ ಸಹ ಮಾಡಿಸುವ ತಂದೆಯು ಮಾಡಿಸುತ್ತಿದ್ದಾರೆ ಮತ್ತು ಮಾಡಿಸುತ್ತಾ ಇರುತ್ತಾರೆ. ನಾವೂ ಮಾಡಬೇಕೆಂದು ಹೇಳಿದರೆ ಅದು ಭಾರವೆನಿಸುತ್ತದೆ. ತಂದೆಯು ನಮ್ಮ ಮೂಲಕ ಮಾಡಿಸುತ್ತಿದ್ದಾರೆ ಎಂದಾಗ ನಿಶ್ಚಿಂತರಾಗಿ ಬಿಡುತ್ತೀರಿ. ಈ ಶ್ರೇಷ್ಠ ಕಾರ್ಯವು ಆಗಲೇಬೇಕಾಗಿದೆ ಮತ್ತು ಆಗಿಯೇ ಬಿಟ್ಟಿದೆ ಎಂಬ ನಿಶ್ಚಯವಿದೆ ಆದ್ದರಿಂದ ನಿಶ್ಚಯಬುದ್ಧಿ, ನಿಶ್ಚಿಂತರಾಗಿರುತ್ತೀರಿ. ಕೇವಲ ಮಕ್ಕಳಿಗೆ ಬ್ಯುಜಿಯಾಗಿರುವುದಕ್ಕಾಗಿ ತಂದೆಯು ಕೇವಲ ಸೇವೆಯ ಒಂದು ಆಟವನ್ನು ಆಡಿಸುತ್ತಿದ್ದಾರೆ. ನಿಮಿತ್ತರನ್ನಾಗಿ ಮಾಡಿ ವರ್ತಮಾನ ಮತ್ತು ಭವಿಷ್ಯ ಸೇವೆಯ ಫಲದ ಅಧಿಕಾರಿಗಳನ್ನಾಗಿ ಮಾಡುತ್ತಿದ್ದಾರೆ. ಕಾರ್ಯ ತಂದೆಯದು, ಹೆಸರು ಮಕ್ಕಳದು. ಫಲವನ್ನು ಮಕ್ಕಳಿಗೇ ತಿನ್ನಿಸುತ್ತಾರೆ, ತಾನು ತಿನ್ನುವುದಿಲ್ಲ ಅಂದಮೇಲೆ ನಿಶ್ಚಿಂತರಾದಿರಲ್ಲವೆ. ಸೇವೆಯಲ್ಲಿ ಸಫಲತೆಗೆ ಸಹಜ ಸಾಧನವೇ ಇದಾಗಿದೆ – ಮಾಡಿಸುವವರು ಮಾಡಿಸುತ್ತಿದ್ದಾರೆ. ಒಂದುವೇಳೆ “ನಾನು ಮಾಡುತ್ತಿದ್ದೇನೆ” ಎಂಬ ಸ್ಮೃತಿಯಿದ್ದರೆ ಆತ್ಮದ ಶಕ್ತಿಯ ಪ್ರಮಾಣ ಸೇವೆಯ ಫಲ ಸಿಗುತ್ತದೆ. ತಂದೆಯು ಮಾಡಿಸುತ್ತಿದ್ದಾರೆ ಎಂದಾಗ ತಂದೆಯು ಸರ್ವಶಕ್ತಿವಂತನಾಗಿದ್ದಾರೆ ಆದ್ದರಿಂದ ಕರ್ಮದ ಫಲವೂ ಸಹ ಅಷ್ಟೇ ಶ್ರೇಷ್ಠವಾದುದೂ ಸಿಗುತ್ತದೆ ಅಂದಾಗ ಸದಾ ತಂದೆಯ ಮೂಲಕ ಪ್ರಾಪ್ತಿಯಾಗಿರುವ ನಿಶ್ಚಿಂತ ಸಾಮ್ರಾಜ್ಯ ಅಥವಾ ಅಂಗೈಯಲ್ಲಿ ಸ್ವರ್ಗದ ರಾಜ್ಯಭಾಗ್ಯದ ಈಶ್ವರೀಯ ಉಡುಗೊರೆಯನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಿ. ತಂದೆ ಮತ್ತು ಉಡುಗೊರೆ – ಇವೆರಡರ ನೆನಪಿನಿಂದ ಪ್ರತಿದಿನವೇನು, ಪ್ರತಿ ಘಳಿಗೆಯೂ ಸಹ ಅತಿ ದೊಡ್ಡ ಘಳಿಗೆಯಾಗಿದೆ, ದೊಡ್ಡ ದಿನವಾಗಿದೆ, ಈ ರೀತಿಯ ಅನುಭೂತಿ ಮಾಡುತ್ತೀರಿ. ಪ್ರಪಂಚದವರು ಕೇವಲ ಶುಭಾಷಯಗಳನ್ನು ನೀಡುತ್ತಾರೆ. ಏನು ಹೇಳುತ್ತಾರೆ? ಸಂತೋಷವಾಗಿರಿ, ಆರೋಗ್ಯವಂತರು-ಐಶ್ವರ್ಯವಂತರಾಗಿರಿ…. ಎಂದು ಹೇಳಿ ಬಿಡುತ್ತಾರೆ ಆದರೆ ಅದೇ ರೀತಿಯಾಗಿ ಬಿಡುವುದಿಲ್ಲ ಅಲ್ಲವೆ. ತಂದೆಯಂತೂ ಇಂತಹ ಶುಭಾಷಯಗಳನ್ನು ನೀಡುತ್ತಾರೆ ಯಾವುದು ಸದಾಕಾಲಕ್ಕಾಗಿ ಆರೋಗ್ಯ, ಐಶ್ವರ್ಯ, ಸಂತೋಷ ವರದಾನಗಳ ರೂಪದಲ್ಲಿ ಜೊತೆಯಲ್ಲಿರುತ್ತದೆ. ಕೇವಲ ಬಾಯಿಂದ ಹೇಳಿ ಖುಷಿ ಪಡಿಸುವುದಿಲ್ಲ. ಅದರಂತೆಯೇ ಮಾಡುತ್ತಾರೆ ಮತ್ತು ಆಗುವುದೇ ಆಚರಿಸುವುದಾಗಿದೆ ಏಕೆಂದರೆ ಅವಿನಾಶಿ ತಂದೆಯ ಶುಭಾಷಯವು ಅವಿನಾಶಿಯಾಗಿರುವುದಲ್ಲವೆ. ಆದ್ದರಿಂದ ಶುಭಾಷಯವು ವರದಾನವಾಗಿ ಬಿಡುತ್ತದೆ.

ತಾವು ಬುಡದಿಂದ ಹೊರಟಿದ್ದೀರಿ. ಇವರೆಲ್ಲರೂ ಶಾಖೆಗಳಾಗಿದ್ದಾರೆ. ಎಲ್ಲಾ ಧರ್ಮದವರೂ ತಮ್ಮ ಶಾಖೆಗಳಲ್ಲವೆ! ಕಲ್ಪವೃಕ್ಷದ ಶಾಖೆಗಳಾಗಿದ್ದಾರೆ ಆದ್ದರಿಂದ ವೃಕ್ಷದ ಗುರುತಾಗಿ ಕ್ರಿಸ್ಮಸ್ ವೃಕ್ಷವನ್ನು ತೋರಿಸುತ್ತಾರೆ. ಕ್ರಿಸ್ಮಸ್ ವೃಕ್ಷವು ಎಂದಾದರೂ ಶೃಂಗರಿಸಲ್ಪಟ್ಟಿರುವುದನ್ನು ನೋಡಿದ್ದೀರಾ? ಇದರಲ್ಲಿ ಏನು ಮಾಡುತ್ತಾರೆ? (ಸ್ಟೇಜಿನ ಮೇಲೆ ಎರಡು ಕ್ರಿಸ್ಮಸ್ ವೃಕ್ಷಗಳನ್ನು ಶೃಂಗರಿಸಿಡಲಾಗಿದೆ) ಇದರಲ್ಲಿ ಏನು ತೋರಿಸಿದ್ದಾರೆ? ವಿಶೇಷವಾಗಿ ಹೊಳೆಯುತ್ತಿರುವ, ಬೆಳಗುತ್ತಿರುವ ದೀಪಗಳನ್ನು ತೋರಿಸುತ್ತಾರೆ. ಚಿಕ್ಕ-ಚಿಕ್ಕ ಬಲ್ಭುಗಳಿಂದಲೇ ಶೃಂಗರಿಸುತ್ತಾರೆ ಅಂದಮೇಲೆ ಇದರ ಅರ್ಥವೇನು? ತಾವು ಕಲ್ಪವೃಕ್ಷದ ಹೊಳೆಯುತ್ತಿರುವ ಆತ್ಮನಾಗಿದ್ದೀರಿ ಮತ್ತು ಯಾರೆಲ್ಲಾ ಧರ್ಮಪಿತರು ಬರುತ್ತಾರೆಯೋ ಅವರೂ ಸಹ ತಮ್ಮ ಲೆಕ್ಕದಿಂದ ಸತೋಪ್ರಧಾನರು ಆಗಿರುತ್ತಾರೆ ಆದ್ದರಿಂದ ಸತೋಪ್ರಧಾನ ಆತ್ಮವು ಹೊಳೆಯುತ್ತಿರುತ್ತದೆ ಆದ್ದರಿಂದ ಈ ಕಲ್ಪವೃಕ್ಷದ ಚಿಹ್ನೆಯಾಗಿ ಅನ್ಯ ಧರ್ಮದ ಶಾಖೆಗಳವರೂ ಸಹ ಪ್ರತಿವರ್ಷ ಇದನ್ನು ಹಬ್ಬವಾಗಿ ಆಚರಿಸುತ್ತಿರುತ್ತಾರೆ. ಇವರು ಈ ವೃಕ್ಷದ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್. ಯಾವ ತಂದೆಯು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ? ತಂದೆಯು ಬ್ರಹ್ಮಾರವರನ್ನು ಮುಂದಿಟ್ಟಿದ್ದಾರೆ. ಸಾಕಾರ ಸೃಷ್ಟಿಯ ಆತ್ಮದ ಆದಿಪಿತ, ಆದಿನಾಥ ಬ್ರಹ್ಮನಾಗಿದ್ದಾರೆ ಆದ್ದರಿಂದ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಆದಿ ದೇವನ ಜೊತೆಗೆ ತಾವೂ ಇದ್ದೀರಲ್ಲವೆ ಅಥವಾ ಒಂಟಿ ಆದಿ ದೇವನಿದ್ದಾರೆಯೇ! ತಾವು ಆದಿ ಆತ್ಮರು ಈಗ ಆದಿ ದೇವನ ಜೊತೆಯಲ್ಲಿದ್ದೀರಿ ಮತ್ತು ಮುಂದೆಯೂ ಕೂಡ ಜೊತೆಯಿರುತ್ತೀರಿ – ಇಷ್ಟು ನಶೆಯಿದೆಯೇ? ಸದಾ ಖುಷಿಯ ಗೀತೆಯನ್ನು ಹಾಡುತ್ತಾ ಇರುತ್ತೀರಾ ಅಥವಾ ಇಂದು ಮಾತ್ರವೇ ಹಾಡುವಿರೋ?

ಇಂದು ವಿಶೇಷ ಡಬಲ್ ವಿದೇಶಿಯರ ದಿನವಾಗಿದೆ. ನಿಮಗಾಗಿ ನಿತ್ಯವೂ ವಿಶೇಷ ದಿನವೋ ಅಥವಾ ಇಂದು ಮಾತ್ರವೇ? ನಾಲ್ಕಾರು ಕಡೆಯ ದೇಶ-ವಿದೇಶದ ಮಕ್ಕಳು ಕಲ್ಪವೃಕ್ಷದ ಹೊಳೆಯುತ್ತಿರುವ ನಕ್ಷತ್ರಗಳಂತೆ ಕಂಡು ಬರುತ್ತಿದ್ದಾರೆ. ಸೂಕ್ಷ್ಮ ರೂಪದಲ್ಲಿ ಎಲ್ಲರೂ ಮಧುಬನಕ್ಕೆ ತಲುಪಿದ್ದಾರೆ. ಅವರೆಲ್ಲರೂ ಸಹ ಆಕಾರಿ ರೂಪದಲ್ಲಿ ಮಿಲನವನ್ನು ಆಚರಿಸುತ್ತಿದ್ದಾರೆ. ತಾವು ಸಾಕಾರಿ ರೂಪದಲ್ಲಿ ಆಚರಿಸುತ್ತಿದ್ದೀರಿ. ಎಲ್ಲರ ಮನಸ್ಸು ತಂದೆಯ ಈಶ್ವರೀಯ ಉಡುಗೊರೆಯನ್ನು ನೋಡಿ ಖುಷಿಯಲ್ಲಿ ನರ್ತಿಸುತ್ತಿದೆ. ಬಾಪ್ದಾದಾರವರೂ ಸಹ ಸರ್ವಸಾಕಾರ ರೂಪ ಮತ್ತು ಆಕಾರ ರೂಪಧಾರಿ ಮಕ್ಕಳಿಗೆ ಸದಾ ಹರ್ಷಿತಭವದ ಶುಭಾಷಯಗಳನ್ನು ನೀಡುತ್ತಿದ್ದೇವೆ. ಸದಾ ದಿಲ್ಖುಷ್ ಮಿಠಾಯಿಯನ್ನು ತಿನ್ನುತ್ತಾ ಇರಿ ಮತ್ತು ಪ್ರಾಪ್ತಿಗಳ ಗೀತೆಯನ್ನು ಹಾಡುತ್ತಾ ಇರಿ. ಡ್ರಾಮಾನುಸಾರ ಭಾರತದವರಿಗೆ ವಿಶೇಷ ಭಾಗ್ಯವು ಸಿಕ್ಕಿದೆ. ಒಳ್ಳೆಯದು.

ಎಲ್ಲಾ ಟೀಚರ್ಸ್ ಈ ದೊಡ್ಡ ದಿನವನ್ನು ಆಚರಿಸಿದಿರಾ? ಅಥವಾ ನಿತ್ಯವೂ ಆಚರಿಸುತ್ತೀರಾ? ದೊಡ್ಡ ತಂದೆಯಾಗಿದ್ದಾರೆ ಮತ್ತು ತಾವೂ ದೊಡ್ಡವರಾಗಿದ್ದೀರಿ ಆದ್ದರಿಂದ ಪ್ರಪಂಚದವರ ಯಾವ ದೊಡ್ಡ ದಿನವಿದೆಯೋ ಅದಕ್ಕೆ ಮಹತ್ವಿಕೆ ನೀಡುತ್ತಾರೆ. ಇದರಲ್ಲಿಯೂ ತಾವು ದೊಡ್ಡವರು ಚಿಕ್ಕ ಸಹೋದರರಿಗೆ ಉತ್ಸಾಹವನ್ನು ತರಿಸುತ್ತೀರಿ, ಎಲ್ಲಾ ಟೀಚರ್ಸ್ ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಾ? ಚಕ್ರವರ್ತಿ ಅರ್ಥಾತ್ ಸದಾ ನಿಶ್ಚಯ ಮತ್ತು ನಶೆಯಲ್ಲಿ ಸ್ಥಿತರಾಗಿರುವವರು ಏಕೆಂದರೆ ನಿಶ್ಚಯವು ವಿಜಯಿಯನ್ನಾಗಿ ಮಾಡುತ್ತದೆ ಮತ್ತು ನಶೆ-ಖುಷಿಯಲ್ಲಿ ಸದಾ ಮೇಲೆ ಹಾರಿಸುತ್ತದೆ. ಅಂದಮೇಲೆ ನಿಶ್ಚಿಂತ ಚಕ್ರವರ್ತಿಗಳೇ ಆಗಿರುವಿರಲ್ಲವೆ! ಯಾವುದಾದರೂ ಚಿಂತೆಯಿದೆಯೇ? ಸೇವೆಯು ಹೇಗೆ ವೃದ್ಧಿಯಾಗುವುದು, ಒಳ್ಳೊಳ್ಳೆಯ ಜಿಜ್ಞಾಸುಗಳು ಯಾವಾಗ ಬರುವರೋ, ಎಲ್ಲಿಯವರೆಗೆ ಸೇವೆ ಮಾಡಬೇಕಾಗಿದೆಯೋ – ಈ ರೀತಿ ಯೋಚಿಸುವುದಿಲ್ಲ ಅಲ್ಲವೆ. ಯಾವಾಗ ನೀವು ಇದನ್ನು ಆಲೋಚಿಸುವುದಿಲ್ಲವೋ ಆಗಲೇ ಸೇವೆಯು ವೃದ್ಧಿಯಾಗುವುದು. ಯೋಚಿಸುವುದರಿಂದ ವೃದ್ಧಿಯಾಗುವುದಿಲ್ಲ. ಯೋಚನೆ ಮಾಡದಿರುವವರಾಗಿ ಬುದ್ಧಿಯನ್ನು ಖಾಲಿಯಾಗಿಟ್ಟುಕೊಳ್ಳಿ ಆಗ ತಂದೆಯ ಶಕ್ತಿಯನ್ನು ಸಹಯೋಗದ ರೂಪದಲ್ಲಿ ಅನುಭವ ಮಾಡುತ್ತೀರಿ. ಆಲೋಚಿಸುವುದರಲ್ಲಿಯೇ ಬುದ್ಧಿಯನ್ನು ವ್ಯಸ್ತವಾಗಿಟ್ಟುಕೊಂಡರೆ ತಂದೆಯ ಪ್ರೇರಣೆ, ತಂದೆಯ ಶಕ್ತಿಯನ್ನು ಗ್ರಹಿಸಲು ಸಾಧ್ಯವಿಲ್ಲ. ತಂದೆ ಮತ್ತು ನಾವು ಕಂಬೈಂಡ್ ಆಗಿದ್ದೇವೆ, ಮಾಡಿಸುವವರು ಮತ್ತು ಮಾಡಲು ನಿಮಿತ್ತ ನಾನಾತ್ಮನಾಗಿದ್ದೇನೆ. ಇದಕ್ಕೇ ಒಬ್ಬರ ನೆನಪು ಅರ್ಥಾತ್ ನಿಶ್ಚಿಂತರಾಗುವುದು ಎಂದು ಹೇಳಲಾಗುತ್ತದೆ. ಶುಭ ಚಿಂತನೆಯಲ್ಲಿ ಇರುವವರಿಗೆ ಎಂದೂ ಚಿಂತೆಯಿರುವುದಿಲ್ಲ. ಎಲ್ಲಿ ಚಿಂತೆಯಿರುವುದೋ ಅಲ್ಲಿ ಶುಭ ಚಿಂತನೆಯಿಲ್ಲ ಮತ್ತು ಎಲ್ಲಿ ಶುಭ ಚಿಂತನೆಯು ಇರುವುದೋ ಅಲ್ಲಿ ಚಿಂತೆಯಿರುವುದಿಲ್ಲ. ಒಳ್ಳೆಯದು.

ನಾಲ್ಕಾರು ಕಡೆಯ ಈಶ್ವರೀಯ ಉಡುಗೊರೆಯ ಅಧಿಕಾರಿಗಳು, ಅತಿ ದೊಡ್ಡ ತಂದೆಯ ಅತಿ ದೊಡ್ಡ ಭಾಗ್ಯಶಾಲಿ ಆತ್ಮರು, ಆದಿಪಿತನ ಸದಾ ಜೊತೆಗಾರ ಆದಿ ಆತ್ಮರು, ಸದಾ ಅತಿ ದೊಡ್ಡ ತಂದೆಯ ಮೂಲಕ ಸ್ನೇಹದ ಶುಭಾಷಯಗಳು, ಅವಿನಾಶಿ ವರದಾನವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವಸಾಕಾರಿ ರೂಪಧಾರಿ ಮತ್ತು ಆಕಾರಿ ರೂಪಧಾರಿ ಎಲ್ಲಾ ಮಕ್ಕಳಿಗೆ, ದಿಲ್ಖುಷ್ ಮಿಠಾಯಿಯ ಜೊತೆಗೆ ನೆನಪು, ಪ್ರೀತಿ ಹಾಗೂ ನಮಸ್ತೆ.

ಪೂನಾ-ಬೀದರ್ ಗ್ರೂಪ್:

ಪ್ರತಿನಿತ್ಯವೂ ಅಮೃತವೇಳೆಯಲ್ಲಿ ದಿಲ್ಖುಷ್ ಮಿಠಾಯಿ ಸೇವಿಸುತ್ತೀರಾ? ಯಾರು ಪ್ರತಿನಿತ್ಯ ಅಮೃತವೇಳೆಯಲ್ಲಿ ದಿಲ್ಖುಷ್ ಮಿಠಾಯಿ ಸೇವಿಸುತ್ತಾರೆಯೋ, ಅವರು ಸ್ವಯಂ ಸಹ ಇಡೀ ದಿನದಲ್ಲಿ ಖುಷಿಯಾಗಿರುತ್ತಾರೆ ಹಾಗೂ ಅವರನ್ನು ನೋಡಿ ಅನ್ಯರೂ ಖುಷಿಯಾಗುತ್ತಾರೆ.ಇದು ಇಂತಹ ಔಷಧಿಯಾಗಿದೆ, ಯಾವುದೇ ಪರಿಸ್ಥಿತಿಗಳೇ ಬರಲಿ ಆದರೆ ದಿಲ್ಖುಷ್ ಔಷಧಿಯು ಪರಿಸ್ಥಿತಿಯನ್ನೂ ಚಿಕ್ಕದನ್ನಾಗಿ ಮಾಡಿ ಬಿಡುತ್ತದೆ, ಪರ್ವತವನ್ನೂ ಸಾಸಿವೆಯನ್ನಾಗಿ ಮಾಡಿ ಬಿಡುತ್ತದೆ. ಈ ಔಷಧಿಯಲ್ಲಿ ಇಷ್ಟೊಂದು ಶಕ್ತಿಯಿದೆ! ಹೇಗೆ ಶರೀರದ ಲೆಕ್ಕದಿಂದಲೂ ಆರೋಗ್ಯವಂತ ಅಥವಾ ಶಕ್ತಿಶಾಲಿ ಯಾರಾಗಿರುತ್ತಾರೆಯೋ ಅವರು ಪ್ರತಿಯೊಂದು ಪ್ರತಿಯೊಂದು ಪರಿಸ್ಥಿತಿಯನ್ನೂ ಸಹಜವಾಗಿಯೇ ಪಾರು ಮಾಡುವರು ಮತ್ತು ಯಾರು ಬಲಹೀನರಾಗಿ ಇರುತ್ತಾರೆಯೋ ಅವರು ಚಿಕ್ಕದಾದ ಮಾತಿನಲ್ಲಿಯೂ ಗಾಬರಿಯಾಗುತ್ತಾರೆ.ಬಲಹೀನರ ಮುಂದೆ ಪರಿಸ್ಥಿತಿಯು ದೊಡ್ಡದಾಗಿ ಬಿಡುತ್ತದೆ ಮತ್ತು ಶಕ್ತಿಶಾಲಿಗಳ ಮುಂದೆ ಪರಿಸ್ಥಿತಿಯು ಪರ್ವತದಿಂದ ಹತ್ತಿಯ ಸಮಾನವಾಗಿ ಬಿಡುತ್ತದೆ.ಅಂದಾಗ ಪ್ರತಿನಿತ್ಯವೂ ದಿಲ್ಖುಷ್ ಮಿಠಾಯಿ ಸೇವನೆ ಮಾಡುವುದು ಅಂದರೆ ಸದಾ ದಿಲ್ಖುಷ್ ಆಗಿರುವುದಾಗಿದೆ. ಈ ಅಲೌಕಿಕ ಖುಷಿಯ ದಿನಗಳು ಬಹಳ ಕಡಿಮೆಯಿದೆ! ದೇವತೆಗಳ ಖುಷಿಗೂ ಹಾಗೂ ಬ್ರಾಹ್ಮಣ ಖುಷಿಯಲ್ಲಿಯೂ ಅಂತರವಿದೆ. ಬ್ರಾಹ್ಮಣ ಜೀವನದ ಈ ಪರಮಾತ್ಮ ಖುಷಿ, ಅತೀಂದ್ರಿಯ ಸುಖದ ಅನುಭೂತಿಯು ದೇವತೆಗಳ ಜೀವನದಲ್ಲಿಯೂ ಅನುಭವವಾಗುವುದಿಲ್ಲ. ಆದ್ದರಿಂದ ಈ ಖುಷಿಯನ್ನೆಷ್ಟು ಬೇಕೋ ಅಷ್ಟು ಅನುಭವ ಮಾಡಿರಿ. ಪ್ರತಿನಿತ್ಯವೂ ತಿಳಿಯಿರಿ – ಇಂದು ಖುಷಿಯನ್ನಾಚರಿಸುವ ದಿನವಾಗಿದೆ. ಇಲ್ಲಿ ಬರುವುದರಿಂದ ಖುಷಿಯು ಹೆಚ್ಚಾಗಿ ಬಿಡುತ್ತದೆ ಅಲ್ಲವೆ! ಇಲ್ಲಿಂದ ಕೆಳಗಿಳಿಯುತ್ತೀರೆಂದರೆ ಕಡಿಮೆಯಾಗುವುದಿಲ್ಲವೇ?ಈಗ ಹಾರುವ ಕಲೆಯಿದೆ, ನಂತರದಲ್ಲಂತು ಎಷ್ಟು ಪಡೆದಿರುತ್ತೀರಿ ಅಷ್ಟು ಅನುಭವಿಸುತ್ತೀರಿ. ಆದ್ದರಿಂದ ಸದಾ ಈ ಸ್ಮೃತಿಯಿರಲಿ – ನಾವು ದಿಲ್ಖುಷ್ ಮಿಠಾಯಿ ಸೇವನೆ ಮಾಡುವವರು ಮತ್ತು ಅನ್ಯರಿಗೂ ಸೇವನೆ ಮಾಡಿಸುವವರು ಆಗಿದ್ದೇವೆ. ಏಕೆಂದರೆ ಎಷ್ಟು ಕೊಡುತ್ತೇವೆಯೋ ಅಷ್ಟು ಹೆಚ್ಚಾಗುತ್ತದೆ. ಖುಷಿಯ ಚಹರೆಯು ಎಲ್ಲರಿಗೂ ಎಷ್ಟೊಂದು ಇಷ್ಟವಾಗುತ್ತದೆ ನೋಡಿ, ದುಃಖ-ಅಶಾಂತಿಯಲ್ಲಿ ಗಾಬರಿಯಾಗಿರುವ ಚಹರೆಯಿದ್ದರೆ ಯಾರಿಗೂ ಇಷ್ಟವಾಗುವುದಿಲ್ಲ ಅಲ್ಲವೆ! ಯಾವಾಗ ಅನ್ಯರಿಗೇ ಇಷ್ಟವಾಗುವುದಿಲ್ಲ ಅಂದಮೇಲೆ ತಮಗೂ ಇಷ್ಟವಾಗಬಾರದು. ಅಂದಾಗ ಸದಾ ಖುಷಿಯ ಚಹರೆಯಿಂದ ಸೇವೆ ಮಾಡುತ್ತಿರಿ. ಮಾತೆಯರು ಇಂತಹ ಸೇವೆಯನ್ನು ಮಾಡುತ್ತೀರಾ?ಮನೆಯವರು ತಮ್ಮನ್ನು ನೋಡಿ ಖುಷಿಯಾಗಿ ಬಿಡಬೇಕು. ಭಲೆ ಕೆಲವರು ಜ್ಞಾನವನ್ನು ಒಳ್ಳೆಯದಲ್ಲವೆಂದು ತಿಳಿಯುತ್ತಾರೆ, ಆದರೂ ಖುಷಿಯ ಜೀವನವನ್ನು ನೋಡಿ ಮನಸ್ಸಿನಿಂದ ಅನುಭವವನ್ನಂತು ಮಾಡುತ್ತಾರೆ – ಇವರಿಗೇನೋ ಸಿಕ್ಕಿದೆ ಅದರಿಂದ ಖುಷಿಯಾಗಿರುತ್ತಾರೆ. ಹೊರಗೆ ಅಭಿಮಾನದಿಂದ ಹೇಳದೇ ಇರಬಹುದು ಆದರೆ ಆಂತರ್ಯದಲ್ಲಿ ಅನುಭೂತಿ ಮಾಡುತ್ತಾರೆ, ಕೊನಗೆ ಬಾಗಲೇಬೇಕು. ಇಂದು ಗ್ಲಾನಿ ಮಾಡುತ್ತಾರೆ ನಾಳೆ ಚರಣಗಳ ಮೇಲೆ ಬಾಗುತ್ತಾರೆ. ಎಲ್ಲಿ ಬಾಗುತ್ತಾರೆ? “ಅಹೋ ಪ್ರಭು” ಎನ್ನುತ್ತಾ ಅವಶ್ಯವಾಗಿ ಬಾಗುವರು. ಇಂತಹ ಸ್ಥಿತಿಯಾದಾಗ ನಮಸ್ಕರಿಸುವರಲ್ಲವೆ! ಯಾರು ಯಾರ ಮುಂದೆಯೇ ಬಾಗುತ್ತಾರೆಂದರೆ, ಅವರಲ್ಲೇನೋ ಶ್ರೇಷ್ಠತನವಿರುತ್ತದೆ, ಯಾವುದೇ ವಿಶೇಷತೆಯಿರುತ್ತದೆ, ಆ ವಿಶೇಷತೆಗಾಗಿ ಬಾಗುತ್ತಾರೆ. ಹಾಗೆಯೇ ಬಾಗುವುದಿಲ್ಲ ಅಲ್ಲವೆ. ಇವರಿಗಿರುವಂತಹ ಜೀವನ ಮತ್ತ್ಯಾರಿಗೂ ಇಲ್ಲ, ಇವರು ಸದಾ ಖುಷಿಯಾಗಿರುತ್ತಾರೆ – ಇದು ಕಾಣಿಸುತ್ತದೆ. ಅಳುವ ಪರಿಸ್ಥಿತಿಯಲ್ಲಿಯೂ ಖುಷಿಯಾಗಿರಿ, ಮನಸ್ಸು ಖುಷಿಯಾಗಿರಲಿ. ಅಲ್ಲಿ ನಗುತ್ತಿರಿ ಎಂದಲ್ಲ ಆದರೆ ಮನಸ್ಸಿನ ಖುಷಿಯಿರಲಿ. ಪಾಂಡವರೇನು ತಿಳಿಯುತ್ತೀರಿ? ಇಂತಹ್ ಆನುಭವ ಅನ್ಯರಿಗೂ ಆಗುತ್ತದೆಯೇ ಅಥವಾ ಈಗ ಕಡಿಮೆ ಆಗುತ್ತದೆಯೇ?

ಪ್ರಸನ್ನಚಿತ್ತವಾಗಿರುವವರು ಚಹರೆಯಿಂದ ಬಹಳ ಸೇವೆಯನ್ನು ಮಾಡುತ್ತಾರೆ. ಮುಖದಿಂದ ಮಾತನಾಡಲಿ ಅಥವಾ ಮಾತನಾಡದಿರಲಿ ಆದರೆ ತಮ್ಮ ಚಹರೆ, ಜ್ಞಾನದ ಲಕ್ಷಣಗಳು ಸ್ವತಹವಾಗಿಯೇ ಪ್ರತ್ಯಕ್ಷ ಮಾಡುತ್ತವೆ. ಅಂದಮೇಲೆ ಇದನ್ನೇ ನೆನಪಿಟ್ಟುಕೊಳ್ಳಿರಿ – ದಿಲ್ಖುಷ್ ಮಿಠಾಯಿ ಸೇವಿಸಬೇಕು ಮತ್ತು ಅನ್ಯರಿಗೂ ಸೇವನೆ ಮಾಡಿಸಬೇಕಾಗಿದೆ. ಇದನ್ನು ಸ್ವಯಂ ಯಾರು ಸೇವಿಸುತ್ತಾರೆಯೋ ಅವರು ಅನ್ಯರಿಗೆ ಸೇವನೆ ಮಾಡಿಸದಿರಲು ಸಾಧ್ಯವಿಲ್ಲ. ಒಳ್ಳೆಯದು!

ಬೆಳಗಾಂ, ಸೋಲಾಪುರ ಗ್ರೂಪ್:

ತಮ್ಮ ಈ ಶ್ರೇಷ್ಠ ಜೀವನವನ್ನು ನೋಡುತ್ತಾ ಹರ್ಷಿತವಾಗುತ್ತೀರಾ? ಏಕೆಂದರೆ ಈ ಜೀವನವು ವಜ್ರ ಸಮಾನ ಜೀವನವಾಗಿದೆ. ವಜ್ರದ ಅತ್ಯಂತ ಬೆಲೆಯುಳ್ಳದಲ್ಲವೆ! ಅಂದಮೇಲೆ ಈ ಜೀವನವನ್ನೂ ಇಷ್ಟೇ ಅಮೂಲ್ಯವೆಂದು ತಿಳಿದುಕೊಂಡು ಪ್ರತಿಯೊಂದು ಕರ್ಮ ಮಾಡಿರಿ. ಬ್ರಾಹ್ಮಣ ಜೀವನವೆಂದರೆ ಅಲೌಕಿಕ ಜೀವನ, ಇದರಲ್ಲಿ ಸಾಧಾರಣ ಚಲನೆಯಾಗಲು ಸಾಧ್ಯವಿಲ್ಲ. ಯಾವುದೇ ಕರ್ಮವನ್ನು ಮಾಡುತ್ತೀರಿ ಅದು ಅಲೌಕಿಕವಾಗಿರಬೇಕು, ಸಾಧಾರಣವಲ್ಲ. ಯಾವಾಗ ಅಲೌಕಿಕ ಸ್ವರೂಪದ ಸ್ಮೃತಿಯಿರುತ್ತದೆಯೋ ಆಗಲೇ ಅಲೌಕಿಕ ಕರ್ಮವಾಗುವುದು ಏಕೆಂದರೆ ಸ್ಮೃತಿಯಂತೆ ಸ್ಥಿತಿಯುಂಟಾಗುವುದು. ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ ಎಂಬ ಸ್ಮೃತಿಯಿದ್ದಾಗ ಸದಾ ಸಮರ್ಥರನ್ನಾಗಿ ಮಾಡುತ್ತದೆ. ಆದ್ದರಿಂದ ಕರ್ಮವೂ ಶ್ರೇಷ್ಠ ಅಲೌಕಿಕವಾಗುವುದು. ಇಡೀ ದಿನದಲ್ಲಿ ಅಜ್ಞಾನಿ ಜೀವನದಲ್ಲಿ ಹೇಗೆ ನನ್ನದು-ನನ್ನದೆನ್ನುತ್ತಾ ಇರುತ್ತಾರೆ, ಈಗ ಇದೇ ನನ್ನದನ್ನು ಬಾಬಾರವರ ಕಡೆ ತಿರುಗಿಸಿದರಲ್ಲವೆ! ಈಗ ಬೇರೆಲ್ಲಾ ನನ್ನದು-ನನ್ನದೆನ್ನುವುದು ಸಮಾಪ್ತಿಯಾಯಿತು, ಬ್ರಾಹ್ಮಣರಾಗುವುದೆಂದರೆ ಸರ್ವಸ್ವವೂ ನಿನ್ನದು. ಮರೆತೂ ಸಹ ಹೀಗೆ ಹೇಳುವುದಿಲ್ಲ – ನನ್ನದನ್ನು ನಿನ್ನದು, ನಿನ್ನದನ್ನು ನನ್ನದು, ಈ ರೀತಿ ಮಾಡುವುದಿಲ್ಲವೇ? ಯಾವಾಗ ಅವಶ್ಯಕತೆಯಿರುತ್ತದೆಯೋ ಆಗ ನನ್ನದು, ಅವಶ್ಯಕತೆಯಿರದೇ ಇದ್ದಾಗ ನಿನ್ನದು ಎಂದು ಹೇಳುವುದಿಲ್ಲವೆ! ನನ್ನದೆಂದು ಭಲೆ ಹೇಳಿರಿ ಆದರೆ “ನನ್ನ ಬಾಬಾ” ಎಂದು ಹೇಳಿರಿ.ಉಳಿದೆಲ್ಲಾ ನನ್ನದು-ನನ್ನದನ್ನು ಬಿಟ್ಟು ಒಬ್ಬರು ನನ್ನವರು. ಒಬ್ಬರು ನನ್ನವರು ಎಂದು ಹೇಳುವುದರಿಂದ ಪರಿಶ್ರಮಗಳಿಂದ ಮುಕ್ತರಾಗುತ್ತೀರಿ, ಹೊರೆಯು ಇಳಿದು ಹೋಗುತ್ತದೆ. ಇಲ್ಲದಿದ್ದರೆ ಗೃಹಸ್ಥಿ ಜೀವನದಲ್ಲಿ ಎಷ್ಟೊಂದು ಹೊರೆಯಿದೆ! ಈಗ ಹಗುರವಾಗಿ ಡಬಲ್ ಲೈಟ್ ಆಗಿ ಬಿಟ್ಟಿದ್ದೀರಿ ಆದ್ದರಿಂದ ಸದಾ ಹಾರುವ ಕಲೆಯವರಾಗಿದ್ದೀರಿ. ಹಾರುವ ಕಲೆಯನ್ನು ಬಿಟ್ಟು ನಿಲ್ಲುವ ಕಲೆಯಲ್ಲಿ ನಿಲ್ಲಬಾರದು. ಸದಾ ಹಾರುತ್ತಾ ಸಾಗಿರಿ. ತಂದೆಯು ತನ್ನ ಮಗುವನ್ನಾಗಿ ಮಾಡಿಕೊಂಡರು ಎಂಬ ಖುಷಿಯಲ್ಲಿಯೇ ಸದಾ ಇರಬೇಕು.

ವರದಾನ:-

ವರ್ತಮಾನ ಸಮಯ ಪರಸ್ಪರದಲ್ಲಿ ವಿಶೇಷವಾಗಿ ಕರ್ಮದ ಮೂಲಕ ಗುಣದಾತರಾಗುವ ಅವಶ್ಯಕತೆಯಿದೆ. ಆದ್ದರಿಂದ ಜ್ಞಾನದ ಜೊತೆ-ಜೊತೆಗೆ ಗುಣಗಳನ್ನು ಇಮರ್ಜ್ ಮಾಡಿಟ್ಟುಕೊಳ್ಳಿರಿ. ಇದೇ ಸಂಕಲ್ಪ ಮಾಡಿರಿ – ನಾನು ಸದಾ ಗುಣ ಮೂರ್ತಿಯಾಗಿದ್ದು ಎಲ್ಲರನ್ನೂ ಗುಣ ಮೂರ್ತಿಯನ್ನಾಗಿ ಮಾಡುವ ವಿಶೇಷ ಕರ್ತವ್ಯವನ್ನು ಮಾಡಲೇಬೇಕಾಗಿದೆ. ಅದರಿಂದ ವ್ಯರ್ಥ ನೋಡುವ, ಕೇಳುವ ಅಥವಾ ಮಾಡುವುದಕ್ಕೆ ಸಮಯವೇ ಇರುವುದಿಲ್ಲ. ಅನ್ಯರನ್ನು ನೋಡುವುದರ ಬದಲು ಪ್ರತೀ ಸೆಕೆಂಡಿನಲ್ಲಿ ಬ್ರಹ್ಮಾ ತಂದೆಯನ್ನು ಫಾಲೋ ಮಾಡುತ್ತಾ ಗುಣಗಳ ದಾನ ಮಾಡುತ್ತಾ ಸಾಗುತ್ತೀರೆಂದರೆ ಸರ್ವಗುಣ ಸಂಪನ್ನರಾಗುವ ಹಾಗೂ ಅನ್ಯರನ್ನು ಮಾಡುವ ಉದಾಹರಣಾ ಮೂರ್ತಿಯಾಗಿ ನಂಬರ್ವನ್ ಆಗಿ ಬಿಡುವಿರಿ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಈ ಪರಮಾತ್ಮನ ಪ್ರೀತಿಯು ಇಷ್ಟೂ ಸುಖ ಕೊಡುವ ಪ್ರೀತಿಯಾಗಿದೆ, ಈ ಪ್ರೀತಿಯಲ್ಲಿ ಯಾರು ಒಂದು ಸೆಕೆಂಡಿಗಾದರೂ ಮುಳುಗುತ್ತಾರೆಯೋ ಅವರು ಅನೇಕ ದುಃಖಗಳನ್ನು ಮರೆತು ಬಿಡುತ್ತಾರೆ ಹಾಗೂ ಸದಾಕಾಲಕ್ಕಾಗಿ ಸುಖದ ಉಯ್ಯಾಲೆಯಲ್ಲಿ ತೂಗತೊಡಗುವರು.

Daily Murli in Kannada

Email me Murli: Receive Daily Murli on your email. Subscribe!

1 thought on “16 January 2022 KANNADA Murli Today | Brahma Kumaris”

  1. ☀️🕉️JAY PARAMATMA JAY BAAPDADA JAY OM SHANTI 🌹🌹🌹🌹🌹🌹🌹🌹🌹🌹🌹🌹🌹🌹🌹👃🇲🇰

Leave a Comment

Your email address will not be published. Required fields are marked *

Scroll to Top