16 August 2021 KANNADA Murli Today | Brahma Kumaris

Read and Listen today’s Gyan Murli in Kannada

August 15, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಎಲ್ಲಾ ಮಾತುಗಳಲ್ಲಿ ಸಹನಾಶೀಲರಾಗಿರಿ, ಸ್ತುತಿ-ನಿಂದೆ, ಜಯ-ಪರಾಜಯ ಎಲ್ಲದರಲ್ಲಿ ಸಮಾನವಾಗಿರಿ, ಹೇಳಿಕೆ-ಕೇಳಿಕೆ ಮಾತುಗಳಲ್ಲಿ ವಿಶ್ವಾಸವನ್ನಿಡಬೇಡಿ”

ಪ್ರಶ್ನೆ:: -

ಆತ್ಮವು ಸದಾ ಏರುವ ಕಲೆಯಲ್ಲಿ ಮುಂದುವರೆಯುತ್ತಾ ಇರಲಿ, ಅದಕ್ಕಾಗಿ ಸಹಜ ಯುಕ್ತಿಯನ್ನು ತಿಳಿಸಿ?

ಉತ್ತರ:-

ಒಬ್ಬ ತಂದೆಯಿಂದಲೇ ಕೇಳಿರಿ ಅನ್ಯರಿಂದಲ್ಲ. ವ್ಯರ್ಥ-ಪರಚಿಂತನೆಯಲ್ಲಿ ಅನರ್ಥ ಮಾತುಗಳಲ್ಲಿ ತಮ್ಮ ಸಮಯವನ್ನು ಕಳೆಯಬೇಡಿ ಆಗ ಆತ್ಮವು ಸದಾ ಏರುವ ಕಲೆಯಲ್ಲಿ ಇರುವುದು. ಉಲ್ಟಾ ಸುಲ್ಟಾ ಮಾತುಗಳನ್ನು ಕೇಳುವುದರಿಂದ, ಅದರ ಮೇಲೆ ವಿಶ್ವಾಸವನ್ನು ಇಡುವುದರಿಂದ ಒಳ್ಳೆಯ ಮಕ್ಕಳೂ ಸಹ ಬೀಳುತ್ತಾರೆ ಆದ್ದರಿಂದ ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಧುರಾತಿ ಮಧುರ ಮಕ್ಕಳಿಗೆ ಈಗ ಸ್ಮೃತಿ ಬಂದಿದೆ, ಅವಶ್ಯವಾಗಿ ಅರ್ಧ ಕಲ್ಪ ನಾವು ನೆನಪು ಮಾಡಿದ್ದೇವೆ, ರಾವಣ ರಾಜ್ಯವು ಆರಂಭವಾದಾಗಿನಿಂದ ನೆನಪು ಮಾಡಿದ್ದೇವೆ. ಪೂರ್ಣ ಅರ್ಧಕಲ್ಪ ನೆನಪು ಮಾಡಿದ್ದೀರಿ ಎಂದಲ್ಲ. ಯಾವ-ಯಾವ ಸಮಯದಲ್ಲಿ ದುಃಖವು ಹೆಚ್ಚಾಗುತ್ತಾ ಬಂದಿದೆಯೋ ಆಗಿನಿಂದಲೇ ನೆನಪು ಮಾಡುತ್ತಾ ಬಂದಿದ್ದೀರಿ. ಈಗ ನಿಮಗೆ ಅರ್ಥವಾಗಿದೆ – ಭಕ್ತಿ ಮಾರ್ಗದಿಂದ ನಾವು ಕೆಳಗಿಳಿಯುತ್ತಾ ಬಂದಿದ್ದೇವೆ, ಡ್ರಾಮಾದ ರಹಸ್ಯವು ಬುದ್ಧಿಯಲ್ಲಿದೆ. ಬಾಯಿಂದ ಏನನ್ನೂ ಹೇಳುವಂತಿಲ್ಲ. ನಾವು ತಂದೆಯ ಮಕ್ಕಳಾಗಿ ಬಿಟ್ಟೆವು ಆದ್ದರಿಂದ ಹೆಚ್ಚು ಜ್ಞಾನದ ಅವಶ್ಯಕತೆಯಿಲ್ಲ. ತಂದೆಯ ಮಕ್ಕಳಾದರೆ ಸಾಕು, ತಂದೆಯ ಆಸ್ತಿಗೆ ಮಾಲೀಕರಾಗಿ ಬಿಟ್ಟರು. ಕರ್ಮೇಂದ್ರಿಯಗಳಿಂದ ಏನನ್ನೂ ಮಾಡುವಂತಿಲ್ಲ. ಭಕ್ತಿಮಾರ್ಗದಲ್ಲಿ ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ ಎಷ್ಟೊಂದು ಯಜ್ಞ, ತಪ, ದಾನ-ಪುಣ್ಯಗಳನ್ನು ಮಾಡುತ್ತಾರೆ. ಎಲ್ಲಿಯಾದರೂ ಹೋಗಿರಿ, ಎಲ್ಲಾ ತೀರ್ಥ ಸ್ಥಾನಗಳಲ್ಲಿ ಬಹಳಷ್ಟು ಮಂದಿರಗಳಿವೆ. ಭಾರತದ ಎಲ್ಲಾ ತೀರ್ಥ ಸ್ಥಾನಗಳು ಮತ್ತು ಎಲ್ಲಾ ಮಂದಿರಗಳನ್ನು ಸುತ್ತಿರುವ ಮನುಷ್ಯರು ಯಾರೂ ಇಲ್ಲ. ಒಂದುವೇಳೆ ಸುತ್ತಿದರೂ ಸಹ ಸಿಗುವುದೇನೂ ಇಲ್ಲ. ಅಲ್ಲಿ ಗಂಟೆ, ಜಾಗಟೆಗಳ ಎಷ್ಟೊಂದು ಗದ್ದಲವಿರುತ್ತದೆ, ಇಲ್ಲಂತೂ ಸದ್ದಿನ ಮಾತಿಲ್ಲ. ಭಜನೆ ಮಾಡುವ, ಹಾಡುಗಳನ್ನು ಹಾಡುವ ಮಾತಿಲ್ಲ. ಮನುಷ್ಯರಂತೂ ಏನೇನು ಮಾಡುತ್ತಾರೆ! ಬಹಳ ಕರ್ಮಕಾಂಡವಿದೆ. ಇಲ್ಲಿ ನೀವು ಮಕ್ಕಳು ಕೇವಲ ನೆನಪು ಮಾಡಬೇಕಾಗಿದೆ, ಮತ್ತೇನೂ ಇಲ್ಲ. ಮನೆಯಲ್ಲಿರುತ್ತಾ ಎಲ್ಲವನ್ನು ಮಾಡುತ್ತಾ ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾವೀಗ ದೇವತೆಗಳಾಗುತ್ತೇವೆಂದು ನಿಮಗೆ ತಿಳಿದಿದೆ, ಇಲ್ಲಿಯೇ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಆಹಾರ-ಪಾನೀಯಗಳು ಶುದ್ಧವಾಗಿರಬೇಕು. 36 ಪ್ರಕಾರದ ಭೋಜನವಂತೂ ಅಲ್ಲಿ ಸಿಗುತ್ತವೆ. ಇಲ್ಲಿ ಸಾಧಾರಣ ಆಗಿರಬೇಕಾಗಿದೆ, ಬಹಳ ಉತ್ತಮವೂ ಅಲ್ಲ, ಬಹಳ ಕನಿಷ್ಠವೂ ಅಲ್ಲ, ಮಧ್ಯಮ ಸ್ಥಿತಿಯಲ್ಲಿರಬೇಕು. ಎಲ್ಲಾ ಮಾತುಗಳಲ್ಲಿ ಸಹನಾಶೀಲತೆ ಇರಬೇಕಾಗಿದೆ. ಹೊಗಳಿಕೆ-ತೆಗಳಿಕೆ, ಜಯ-ಪರಾಜಯ, ಚಳಿ-ಬಿಸಿಲು ಎಲ್ಲವನ್ನೂ ಸಹನೆ ಮಾಡಬೇಕಾಗುತ್ತದೆ. ಸಮಯವೇ ಹೀಗಿದೆ. ನೀರು ಸಿಗುವುದಿಲ್ಲ, ಮತ್ತೊಂದು ಸಿಗುವುದಿಲ್ಲ, ಸೂರ್ಯನೂ ಸಹ ತನ್ನ ತಾಪವನ್ನು ತೋರಿಸುವನು, ಪ್ರತೀ ವಸ್ತುವು ತಮೋಪ್ರಧಾನವಾಗುತ್ತದೆ. ಈ ಸೃಷ್ಟಿಯೇ ತಮೋಪ್ರಧಾನವಾಗಿದೆ. ತತ್ವಗಳೂ ತಮೋಪ್ರಧಾನವಾಗಿದೆ ಆದ್ದರಿಂದ ಇವು ದುಃಖ ಕೊಡುತ್ತವೆ. ಈಗ ಹೊಗಳಿಕೆ-ತೆಗಳಿಕೆಯಲ್ಲಿಯೂ ಹೋಗಬಾರದು. ಅನೇಕರು ಇದರಲ್ಲಿ ಬಹು ಬೇಗನೆ ಮುನಿಸಿಕೊಳ್ಳುತ್ತಾರೆ, ಯಾರಾದರೂ ಉಲ್ಟಾ ಸುಲ್ಟಾ ಯಾರಿಗೇನಾದರೂ ತಿಳಿಸಿದರೆಂದರೆ ಸಾಕು. ಏಕೆಂದರೆ ಇತ್ತೀಚೆಗೆ ಕಲ್ಪನೆಯ ಮಾತುಗಳು ಬಹಳ ಇರುತ್ತವೆಯಲ್ಲವೆ. ನಿಮ್ಮ ಬಗ್ಗೆ ಇವರಿಗೆ ದೇಹಾಭಿಮಾನವಿದೆ, ಹೊರಗಿನ ಆಡಂಬರ ಬಹಳಷ್ಟಿದೆ ಎಂದು ತಂದೆಯು ಹೇಳಿದರು ಎಂದು ಯಾರಾದರೂ ಹೇಳಿದರೆ ಸಾಕು, ಚಳಿ ಜ್ವರ ಬಂದು ಬಿಡುವುದು. ನಿದ್ರೆಯೂ ಸಹ ಬರುವುದಿಲ್ಲ, ಅರ್ಧ ಕಲ್ಪದಿಂದ ಮನುಷ್ಯರು ಈ ರೀತಿಯಿದ್ದಾರೆ. ಯಾರಿಗಾದರೂ ಬಹು ಬೇಗನೆ ಚಳಿ ಜ್ವರ ಬರುವಂತೆ ಮಾಡುತ್ತಾರೆ. ಆಗ ಅವರು ಕೂಡಲೇ ಸಪ್ಪೆಯಾಗಿ ಬಿಡುತ್ತಾರೆ ಆದ್ದರಿಂದ ತಂದೆಯು ಹೇಳುತ್ತಾರೆ – ಯಾವುದೇ ಇಂತಹ ವ್ಯರ್ಥ ಮಾತುಗಳನ್ನು ಕೇಳಬೇಡಿ. ತಂದೆಯು ಎಂದೂ ಯಾರ ನಿಂದನೆಯನ್ನೂ ಮಾಡುವುದಿಲ್ಲ, ತಂದೆಯು ಕೇವಲ ತಿಳಿಸುವುದಕ್ಕಾಗಿ ಹೇಳುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸುವುದರಿಂದ ಒಳ್ಳೊಳ್ಳೆಯ ಮಕ್ಕಳೂ ಸಹ ಮುನಿಸಿಕೊಳ್ಳುತ್ತಾರೆ ಆಗ ವಿರೋಧಿಗಳಾಗಿ ಹೋಗಿ ಒಬ್ಬರು ಇನ್ನೊಬ್ಬರಿಗೆ ವ್ಯರ್ಥ ಮಾತುಗಳನ್ನು ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಿಯೂ ಸಹ ಎಂತೆಂತಹ ಕಥೆಗಳನ್ನು ಬರೆದಿದ್ದಾರೆ, ಈಗ ನಿಮಗೆ ಜ್ಞಾನ ಸಿಕ್ಕಿದೆ ಆದ್ದರಿಂದ ನೀವೆಂದೂ ಸಹ ಹೇ ರಾಮ ಅಥವಾ ಅಯ್ಯೊ ಭಗವಂತ ಎಂದು ಹೇಳುವಂತಿಲ್ಲ. ಈ ಶಬ್ಧವು ಭಕ್ತಿಮಾರ್ಗದ್ದಾಗಿದೆ. ನಿಮ್ಮ ಬಾಯಿಂದ ಇಂತಹ ಶಬ್ಧಗಳು ಬರಲೇಬಾರದು.

ತಂದೆಯು ಕೇವಲ ತಿಳಿಸುತ್ತಾರೆ – ಮಧುರ ಮುದ್ದಾದ ಮಕ್ಕಳೇ, ಆತ್ಮಾಭಿಮಾನಿಯಾಗಿರಿ. ತಂದೆಯು ಎಷ್ಟು ಪ್ರೀತಿಯಿಂದ ತಿಳಿಸುತ್ತಾರೆ, ಯಾರ ಮಾತನ್ನೂ ಕೇಳಬೇಡಿ, ವ್ಯರ್ಥ ಪರಚಿಂತನೆ ಮಾಡಬೇಡಿರಿ. ಒಂದು ಮಾತನ್ನು ಪಕ್ಕಾ ಮಾಡಿಕೊಳ್ಳಿ – ನಾವಾತ್ಮರಾಗಿದ್ದೇವೆ, ಆತ್ಮವು ಅವಿನಾಶಿ, ಶರೀರ ವಿನಾಶಿಯಾಗಿದೆ. ಆತ್ಮವೇ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳುತ್ತದೆ, ಈಗ ನೀವು ಮಕ್ಕಳು ಆತ್ಮಾಭಿಮಾನಿ ಆಗಬೇಕಾಗಿದೆ. ದ್ವಾಪರದಿಂದ ನೀವು ರಾವಣ ರಾಜ್ಯದಲ್ಲಿ ದೇಹಾಭಿಮಾನಿಗಳಾಗಿರುತ್ತೀರಿ ಆದ್ದರಿಂದ ಈಗ ದೇಹೀ-ಅಭಿಮಾನಿ ಆಗುವುದರಲ್ಲಿ ಪರಿಶ್ರಮವಾಗುತ್ತದೆ. ಪದೇ-ಪದೇ ಬುದ್ಧಿಯಲ್ಲಿ ಇದೇ ಬರಲಿ – ನಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಕಲ್ಪ-ಕಲ್ಪವೂ ತಂದೆಯು ಆಸ್ತಿಯನ್ನು ಕೊಡುತ್ತಾರೆ, ಈಗ ಅವರ ಮತದಂತೆ ನಡೆಯುತ್ತಾರೆ. ನೀವು ಮಾತಾಪಿತಾ…… ಎಂದು ಅವರಿಗಾಗಿಯೇ ಗಾಯನವಿದೆ. ಅವರು ಎಲ್ಲಾ ಸಂಬಂಧಗಳ ಸುಖ ಕೊಡುವವರಾಗಿದ್ದಾರೆ. ಅವರಲ್ಲಿ ಎಲ್ಲಾ ಮಧುರತೆಯೂ ಇದೆ. ಉಳಿದೆಲ್ಲಾ ಮಿತ್ರ ಸಂಬಂಧಿ ಮೊದಲಾದವರು ದುಃಖವನ್ನೇ ಕೊಡುವವರಾಗಿದ್ದಾರೆ. ಒಬ್ಬ ತಂದೆಯೇ ಎಲ್ಲರಿಗೆ ಸುಖ ಕೊಡುವವರಾಗಿದ್ದಾರೆ, ಅವರಿಗೆ ಎಷ್ಟು ಸಹಜ ಮಾರ್ಗವನ್ನು ತಿಳಿಸುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ, ಇದೇನೂ ಹೊಸ ಮಾತಲ್ಲ. ನಿಮಗೆ ತಿಳಿದಿದೆ – ಪ್ರತೀ 5000 ವರ್ಷಗಳ ನಂತರ ನಾವು ಇಂತಹ ತಂದೆಯ ಬಳಿ ಬರುತ್ತೇವೆ. ಇವರು ಯಾವುದೇ ಸಾಧು-ಸಂತನಲ್ಲ. ನೀವು ಯಾವುದೇ ಸಾಧು-ಸಂತ ಮೊದಲಾದವರ ಬಳಿಯಿರುವುದಿಲ್ಲ ಬಾಕಿ ತಂದೆಯು ತಿಳಿಸುವುದೇನೆಂದರೆ ಪ್ರವೃತ್ತಿ ಮಾರ್ಗದ ಸಂಬಂಧವನ್ನೂ ಸಹ ನಿಭಾಯಿಸಬೇಕಾಗಿದೆ ಇಲ್ಲದಿದ್ದರೆ ಇನ್ನೂ ಕಿರಿ ಕಿರಿಯಾಗುತ್ತದೆ ಆದ್ದರಿಂದ ಯುಕ್ತಿಯಿಂದ ನಡೆಯಿರಿ. ಪ್ರತಿಯೊಬ್ಬರಿಗೆ ಪ್ರೀತಿಯಿಂದ ತಿಳಿಸಿಕೊಡಬೇಕಾಗಿದೆ – ನೋಡಿ, ಈಗ ವಿನಾಶದ ಸಮಯವು ಸಮೀಪವಿದೆ, ಈ ಆಸುರೀ ಪ್ರಪಂಚವು ಸಮಾಪ್ತಿಯಾಗಲಿದೆ. ಆದ್ದರಿಂದ ಈಗ ದೇವತೆಗಳಾಗಬೇಕು, ದೈವೀ ಗುಣಗಳನ್ನು ಇಲ್ಲಿಯೇ ಧಾರಣೆ ಮಾಡಿಕೊಳ್ಳಬೇಕಾಗಿದೆ, ಹೀಗೆ ಪ್ರೀತಿಯಿಂದ ತಿಳಿಸಿಕೊಡಬೇಕು. ದೇವತೆಗಳೂ ಸಹ ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳನ್ನು ತಿನ್ನುವುದಿಲ್ಲ, ನಾವೂ ಸಹ ಮನುಷ್ಯರಿಂದ ದೇವತೆಗಳಾಗುತ್ತೇವೆ ಅಂದಮೇಲೆ ಇದೆಲ್ಲವನ್ನೂ ನಾವು ಹೇಗೆ ತಿನ್ನಲು ಸಾಧ್ಯ! ನಿಮಗೂ ಸಹ ಸಲಹೆ ನೀಡುತ್ತೇವೆ – ಇದನ್ನು ಬಿಟ್ಟು ಬಿಡಿ. ಇಂತಹ ಪದಾರ್ಥಗಳನ್ನು ತಿನ್ನುವುದಿಲ್ಲ, ಈಗ ನಿಮಗೆ ಬೇಹದ್ದಿನ ತಂದೆ ದೈವೀ ಗುಣಗಳನ್ನು ಕಲಿಸುವವರು ಸಿಕ್ಕಿದ್ದಾರೆ ಅಂದಮೇಲೆ ಇಲ್ಲಿಯೇ ಸರ್ವಗುಣ ಸಂಪನ್ನರಾಗಬೇಕಾಗಿದೆ. ಇಲ್ಲಿಯೇ ಆಗುತ್ತೀರಿ ಆದ್ದರಿಂದಲೇ ಮತ್ತೆ ಭವಿಷ್ಯ ಹೊಸ ಪ್ರಪಂಚವು ಬರುವುದು. ಇದು ರಾತ್ರಿಯ ನಂತರ ಹಗಲು, ಹಗಲಿನ ನಂತರ ರಾತ್ರಿಯಾದಂತೆ. ಈಗ ರಾತ್ರಿಯ ಅಂತಿಮದಲ್ಲಿಯೇ ದೈವೀ ಗುಣಗಳನ್ನೂ ಧಾರಣೆ ಮಾಡಿಕೊಳ್ಳಬೇಕಾಗಿದೆ, ಇದರನಂತರ ಮುಂಜಾನೆಯಾಗುವುದು. ಪ್ರತಿಯೊಬ್ಬರೂ ತಮ್ಮಿಂದ ತಾವು ಪರೀಕ್ಷೆ ತೆಗೆದುಕೊಳ್ಳಬೇಕು. ತಂದೆಗಂತೂ ಎಲ್ಲವೂ ಗೊತ್ತಿಲ್ಲ ಎಂದಲ್ಲ. ನೀವು ತಮ್ಮನ್ನು ನೋಡಿಕೊಳ್ಳಿ, ವಿದ್ಯಾರ್ಥಿಗಳು ಎಂದಾದರೂ ಎಲ್ಲವೂ ಶಿಕ್ಷಕರಿಗೆ ಗೊತ್ತಿದೆ ಎಂದು ಹೇಳುವರೇ! ಪರೀಕ್ಷೆಯ ದಿನಗಳು ಸಮೀಪಿಸಿದಂತೆ ನಾವು ಎಷ್ಟು ತೇರ್ಗಡೆಯಾಗುತ್ತೇವೆ, ಯಾವ ಸಬ್ಜೆಕ್ಟ್ನಲ್ಲಿ ಹಿಂದುಳಿದಿದ್ದೇವೆ ಎಂದು ಮಕ್ಕಳು ಸ್ವಯಂ ತಿಳಿದುಕೊಳ್ಳುತ್ತಾರೆ. ಅದರಲ್ಲಿ ಅಂಕಗಳನ್ನು ತೆಗೆದುಕೊಳ್ಳುತ್ತಾರೆ ನಂತರ ಎಲ್ಲವನ್ನೂ ಸೇರಿಸಿ ತೇರ್ಗಡೆಯಾಗಿ ಬಿಡುತ್ತಾರೆ. ಅಂದಮೇಲೆ ಇಲ್ಲಿಯೂ ಸಹ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ – ನನ್ನಲ್ಲಿ ಯಾವ ಕೊರತೆಯಿದೆ? ನಾನು ಬಹಳ ಮಧುರನಾಗಿದ್ದೇನೆಯೇ? ಎಲ್ಲರಿಗೆ ಪ್ರೀತಿಯಿಂದ ತಿಳಿಸಬೇಕಾಗಿದೆ – ನಾವಾತ್ಮರ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ಮನುಷ್ಯರ ಮಾತಿಲ್ಲ, ನಾವು ನಿರಾಕಾರನಿಗೆ ಭಗವಂತನೆಂದು ಹೇಳುತ್ತೇವೆ. ಭಗವಂತ ರಚಯಿತನು ಒಬ್ಬರೇ ಆಗಿದ್ದಾರೆ ಉಳಿದೆಲ್ಲರೂ ರಚನೆಯಾಗಿದ್ದಾರೆ. ರಚನೆಯಿಂದ ಯಾರಿಗೂ ಆಸ್ತಿಯು ಸಿಗುವುದಿಲ್ಲ, ಇದು ನಿಯಮವಿಲ್ಲ. ಈಗ ಸರ್ವ ರಚನೆಯ ಸದ್ಗತಿದಾತನು ಒಬ್ಬರೇ ರಚಯಿತ ತಂದೆಯಾಗಿದ್ದಾರೆ. ರಚನೆಯಲ್ಲಿ ಸಾಧು-ಸಂತ ಎಲ್ಲರೂ ಬಂದು ಬಿಟ್ಟರು. ಅವರೂ ಸಹ ಆತ್ಮರಲ್ಲವೆ. ಹಾ! ಮನುಷ್ಯರು ಒಳ್ಳೆಯವರು-ಕೆಟ್ಟವರಂತೂ ಇದ್ದೇ ಇರುತ್ತಾರೆ. ಪದವಿಯು ಶ್ರೇಷ್ಠ ಮತ್ತು ಕನಿಷ್ಟವಿರುತ್ತದೆ, ಸನ್ಯಾಸಿಗಳಲ್ಲಿಯೂ ನಂಬರ್ವಾರ್ ಇರುತ್ತಾರೆ, ಕೆಲವರನ್ನು ನೋಡಿದರೆ ಭಿಕ್ಷೆ ಬೇಡುತ್ತಿರುತ್ತಾರೆ, ಇನ್ನೂ ಕೆಲವರಿಗೆ ಕಾಲಿಗೆ ಬೀಳುತ್ತಿರುತ್ತಾರೆ. ನೀವು ಮಕ್ಕಳೂ ಸಹ ಶ್ರೇಷ್ಠರಾಗಿರಿ, ಬಹಳ ಮಧುರರಾಗಿರಿ. ಎಂದೂ ಕ್ರೋಧದಿಂದ ಮಾತನಾಡಬಾರದು. ಎಷ್ಟು ಸಾಧ್ಯವೋ ಅಷ್ಟು ಪ್ರೀತಿಯಿಂದ ಕೆಲಸ ತೆಗೆದುಕೊಳ್ಳಿರಿ. ಬಾಬಾ, ಮಕ್ಕಳು ಬಹಳ ಚಂಚಲತೆ ಮಾಡುತ್ತಾರೆಂದು ಹೇಳುತ್ತಾರೆ, ಈಗಿನ ಮಕ್ಕಳು ಇರುವುದೇ ಹಾಗೆ ಆದ್ದರಿಂದ ಅವರಿಗೆ ಪ್ರೀತಿಯಿಂದ ತಿಳಿಸಿಕೊಡಿ. ಕೃಷ್ಣನು ಚಂಚಲತೆ ಮಾಡುತ್ತಿದ್ದನು, ಅವನನ್ನು ಹಗ್ಗದಿಂದ ಕಟ್ಟಿ ಹಾಕುತ್ತಿದ್ದರೆಂದು ತೋರಿಸುತ್ತಾರೆ. ಎಷ್ಟು ಸಾಧ್ಯವೋ ಪ್ರೀತಿಯಿಂದ ತಿಳಿಸಬೇಕು ಇಲ್ಲವೆ ಚಿಕ್ಕ ಪುಟ್ಟ ಶಿಕ್ಷೆ ಕೊಡಬೇಕಾಗಿದೆ. ಪಾಪ, ಮಕ್ಕಳು ಮುಗ್ಧರಾಗಿರುತ್ತಾರೆ. ಸಮಯವೂ ಅದೇರೀತಿ ಇದೆ, ಹೊರಗಿನ ಸಂಗದೋಷವು ಬಹಳ ಕೆಟ್ಟದ್ದಾಗಿದೆ. ಈಗ ಬೇಹದ್ದಿನ ತಂದೆಯು ತಿಳಿಸುತ್ತಾರೆ – ನೀವು ಮೂರ್ತಿ ಇತ್ಯಾದಿಗಳನ್ನು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ಏನೂ ಪರಿಶ್ರಮ ಪಡಬೇಕಾಗಿಲ್ಲ. ಶಿವನ ಚಿತ್ರವನ್ನೂ ಏಕೆ ಇಟ್ಟುಕೊಳ್ಳುವುದು! ಅವರಂತೂ ನಿಮ್ಮ ತಂದೆಯಲ್ಲವೆ. ಮನೆಯಲ್ಲಿ ಮಕ್ಕಳು ತಂದೆಯ ಚಿತ್ರವನ್ನು ಏಕೆ ಇಟ್ಟುಕೊಳ್ಳುತ್ತಾರೆ? ತಂದೆಯಂತೂ ಪ್ರತ್ಯಕ್ಷವಾಗಿರುತ್ತಾರಲ್ಲವೆ. ಹಾಗೆಯೇ ತಂದೆಯು ತಿಳಿಸುತ್ತಾರೆ, ನಾನೀಗ ನಿಮ್ಮ ಮುಂದೆ ಪ್ರತ್ಯಕ್ಷವಾಗಿದ್ದೇನೆ ಅಂದಮೇಲೆ ಚಿತ್ರಗಳ ಅವಶ್ಯಕತೆಯಿಲ್ಲ. ನಾನು ಕುಳಿತು ಮಕ್ಕಳಿಗೆ ತಿಳಿಸುತ್ತೇನೆ. ಬಾಪ್ದಾದಾರವರನ್ನು ನೋಡಬೇಕೆಂದು ಹೇಳುತ್ತಾರೆ, ತಂದೆಯಂತೂ ನಿರಾಕಾರನಾಗಿದ್ದಾರೆ, ಅವರನ್ನು ನೋಡಲು ಸಾಧ್ಯವಿಲ್ಲ. ಬುದ್ಧಿಯಿಂದ ತಿಳಿದುಕೊಳ್ಳಬಹುದಾಗಿದೆ. ತಂದೆಯು ತಿಳಿಸುತ್ತಾರೆ – ನಾನು ಇವರಲ್ಲಿ ಪ್ರವೇಶ ಮಾಡಿ ನಿಮಗೆ ಜ್ಞಾನವನ್ನು ತಿಳಿಸುತ್ತೇನೆ, ಇಲ್ಲದಿದ್ದರೆ ಹೇಗೆ ಬರಲಿ! ಕೃಷ್ಣನ ತನುವಿನಲ್ಲಿ ಹೇಗೆ ಬರುವೆನು! ಸನ್ಯಾಸಿಗಳಲ್ಲಿಯೂ ಬರಲು ಸಾಧ್ಯವಿಲ್ಲ, ಯಾರು ಮೊದಲ ನಂಬರಿನಲ್ಲಿದ್ದರೋ ಅವರೇ ಈಗ ಕೊನೆಯಲ್ಲಿದ್ದಾರೆ ಅವರ ಶರೀರದಲ್ಲಿ ನಾನು ಬರುತ್ತೇನೆ. ನೀವೂ ಸಹ ಈಗ ಓದಿ ಮೊದಲ ನಂಬರಿನಲ್ಲಿ ಹೋಗಬೇಕಾಗಿದೆ. ಓದಿಸುವವರು ಒಬ್ಬರೇ ಆಗಿದ್ದಾರೆ, ಅವರಿಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ನಿಮಗೆ ಬಹಳ ಒಳ್ಳೆಯ ಜ್ಞಾನವು ಸಿಗುತ್ತದೆ. ನೀವು ತಿಳಿದುಕೊಂಡಿದ್ದೀರಿ, ಶಾಂತಿಧಾಮವು ನಮ್ಮ ಮನೆಯಾಗಿದೆ, ಸುಖಧಾಮವು ನಮ್ಮ ರಾಜಧಾನಿಯಾಗಿದೆ. ದುಃಖಧಾಮವು ರಾವಣ ರಾಜ್ಯವಾಗಿದೆ. ಮಧುರಾತಿ ಮಧುರ ಮಕ್ಕಳೇ, ಈಗ ತಮ್ಮ ಮನೆ ಶಾಂತಿಧಾಮವನ್ನು ನೆನಪು ಮಾಡಿ, ಸುಖಧಾಮವನ್ನು ನೆನಪು ಮಾಡಿರಿ. ದುಃಖಧಾಮದ ಬಂಧನವನ್ನು ಮರೆಯುತ್ತಾ ಹೋಗಿರಿ. ಹೀಗೆ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಅವರು ಹೋಗುವುದಕ್ಕೂ ಸಾಧ್ಯವಿಲ್ಲ. ನಾಟಕದ ಮಧ್ಯದಲ್ಲಿ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಂತಹವರು ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಯಿತು, ನಿರ್ವಾಣಗೈದರು ಎಂದು ಹೇಳುತ್ತಾರೆ ಆದರೆ ಯಾರೊಬ್ಬರೂ ಹೋಗುವುದಿಲ್ಲ. ಎಲ್ಲರ ತಂದೆ ಅಥವಾ ಮಾಲೀಕನು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಎಲ್ಲಾ ಪ್ರಿಯತಮೆಯರ ಒಬ್ಬರೇ ಪ್ರಿಯತಮನಾಗಿದ್ದಾರೆ. ಆ ದೈಹಿಕ ಪ್ರಿಯತಮ-ಪ್ರಿಯತಮೆಯರು ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾರೆ. ಬುದ್ಧಿಯಲ್ಲಿ ಅವರ ಚಿತ್ರವು ಬಂದು ಬಿಡುತ್ತದೆ. ಮತ್ತೆ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾ ಇರುತ್ತಾರೆ. ಭೋಜನವನ್ನು ಮಾಡುತ್ತಾ ಇರುತ್ತಾರೆ, ನೆನಪು ಮಾಡುತ್ತಾ ಇರುತ್ತಾರೆ. ಅವರಂತೂ ಒಂದು ಜನ್ಮದ ಪ್ರಿಯತಮ-ಪ್ರಿಯತಮೆಯರಾಗಿದ್ದಾರೆ. ನೀವು ಒಬ್ಬ ಪ್ರಿಯತಮನಿಗೆ ಜನ್ಮ-ಜನ್ಮಾಂತರದ ಪ್ರಿಯತಮೆಯರಾಗಿದ್ದೀರಿ, ನೀವು ಮತ್ತೇನನ್ನೂ ಮಾಡಬೇಕಾಗಿಲ್ಲ, ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಆ ಪ್ರಿಯತಮ-ಪ್ರಿಯತಮೆಯರ ಮುಂದೆ ಚಿತ್ರವು ಬಂದು ಬಿಡುತ್ತದೆ. ಅವರನ್ನು ನೋಡುತ್ತಾ-ನೋಡುತ್ತಾ ಕೆಲಸವೂ ನಿಂತು ಹೋಗುತ್ತದೆ ಮತ್ತೆ ಅವರ ಚಹರೆಯು ಮಾಯವಾಗಿ ಬಿಡುತ್ತದೆ ಆಗ ಕೆಲಸ ಮಾಡತೊಡಗುತ್ತಾರೆ. ಇಲ್ಲಂತೂ ಆ ರೀತಿಯಿಲ್ಲ, ಆತ್ಮವೂ ಬಿಂದು, ಪರಮಾತ್ಮನೂ ಬಿಂದುವಾಗಿದ್ದಾರೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಲ್ಲಿಯೇ ಪರಿಶ್ರಮವಿದೆ, ಯಾರೂ ಇಂತಹ ಅಭ್ಯಾಸ ಮಾಡುವುದಿಲ್ಲ. ಆತ್ಮದ ಜ್ಞಾನ ಸಿಕ್ಕಿತು ಅರ್ಥಾತ್ ಆತ್ಮಾನುಭೂತಿ ಮಾಡಿದರೆಂದರೆ ಇನ್ನು ಪರಮಾತ್ಮನ ಪರಿಚಯ ಉಳಿಯಿತು. ಅದನ್ನೂ ನೀವು ತಿಳಿದುಕೊಂಡಿದ್ದೀರಿ. ತಂದೆಯು ಬಂದು ಇವರ ಭೃಕುಟಿಯಲ್ಲಿ ಕುಳಿತುಕೊಳ್ಳುತ್ತಾರೆ, ಇವರ ಸ್ಥಾನವೂ ಇಲ್ಲಿಯೇ ಇದೆ. ಆತ್ಮವು ಎಲ್ಲಿಂದಲಾದರೂ ಹೊರಟು ಹೋಗುತ್ತದೆ, ಅದು ತಿಳಿಯುವುದೇ ಇಲ್ಲ. ಅದರ ಮುಖ್ಯ ಸ್ಥಾನವು ಭೃಕುಟಿಯಾಗಿದೆ. ತಂದೆಯು ತಿಳಿಸುತ್ತಾರೆ – ನಾನೂ ಬಿಂದುವಾಗಿದ್ದೇನೆ, ಇವರಲ್ಲಿ ಬಂದು ಕುಳಿತುಕೊಳ್ಳುತ್ತೇನೆ. ನಾನು ಬರುವುದು ನಿಮಗೆ ತಿಳಿಯುವುದೇ ಇಲ್ಲ. ತಂದೆಯು ನೀವು ಮಕ್ಕಳಿಗೆ ಕುಳಿತು ತಿಳಿಸುತ್ತಾರೆ- ನಿಮಗೆ ಏನನ್ನು ತಿಳಿಸುತ್ತಾರೆಯೋ ಅದನ್ನು ನಾನೂ ಕೇಳಿಸಿಕೊಳ್ಳುತ್ತೇನೆ. ಈ ತಿಳುವಳಿಕೆಯು ಸಂಪೂರ್ಣ ಸರಿಯಾಗಿದೆ, ಯಾರು ದೈವೀ ಧರ್ಮದವರಾಗಿದ್ದಾರೆಯೋ ಅವರಿಗೆ ಕೂಡಲೇ ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದು ಅರ್ಥವಾಗಿ ಬಿಡುತ್ತದೆ. ಮೊದಲು ಸ್ಥಾಪನೆ ನಂತರ ವಿನಾಶವೂ ಆಗುವುದು. ಮತ್ತ್ಯಾವುದೇ ಧರ್ಮ ಸ್ಥಾಪಕರು ಈ ರೀತಿ ಮಾಡುವುದಿಲ್ಲ. ಅವರು ಕೇವಲ ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ನಂತರ ವೃದ್ಧಿಯನ್ನು ಪಡೆಯುತ್ತಾರೆ. ಇಲ್ಲಂತೂ ಯಾರು ಎಷ್ಟು ಪುರುಷಾರ್ಥ ಮಾಡುವರೋ ಅಷ್ಟು ಭವಿಷ್ಯದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನೀವು ಭವಿಷ್ಯ 21 ಜನ್ಮಗಳಿಗಾಗಿ ಪ್ರಾಲಬ್ಧವನ್ನು ಮಾಡಿಕೊಳ್ಳುತ್ತೀರಿ ಅಂದಮೇಲೆ ಎಷ್ಟೊಂದು ಪುರುಷಾರ್ಥ ಮಾಡಬೇಕು ಮತ್ತು ಸಹಜವೂ ಆಗಿದೆ, ಯೋಗವೂ ಸಹಜವಾಗಿದೆ. ಇದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ.

ತಂದೆಯು ಹೇಳುತ್ತಾರೆ – ನಾನು ಗ್ಯಾರಂಟಿ ಕೊಡುತ್ತೇನೆ, ಕಲ್ಪ-ಕಲ್ಪವೂ ನಾನೇ ಬಂದು ನೀವು ಮಕ್ಕಳನ್ನು ಪಾವನರನ್ನಾಗಿ ಮಾಡುತ್ತೇನೆ. ಅಲ್ಲಿ ಯಾರೊಬ್ಬರೂ ಪತಿತರಿರುವುದಿಲ್ಲ. ಜ್ಞಾನವು ಎಷ್ಟು ಸಹಜವಾಗಿದೆ! ಹೇಗೆ 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ ಎಂಬ ಜ್ಞಾನವೂ ಸಹ ಬುದ್ಧಿಯಲ್ಲಿದೆ. ನಾವೆ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ ಎಂಬ ನಿಶ್ಚಯ ಮಾಡಿಕೊಳ್ಳಬೇಕಾಗಿದೆ. ನಿಶ್ಚಯದಲ್ಲಿಯೇ ವಿಜಯವಿದೆ. ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆಯೋ ಅಥವಾ ಇನ್ನೂ ಕಡಿಮೆಯೋ ಗೊತ್ತಿಲ್ಲ ಎಂದು ಆಲೋಚಿಸಬೇಡಿ. ನೀವು ಬ್ರಾಹ್ಮಣರಾಗಿದ್ದೀರಿ ಅಂದಮೇಲೆ ನಿಮಗೇ ನಿಶ್ಚಯವಿರಬೇಕು. ಅವಶ್ಯವಾಗಿ ನಾವು 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ. ಇದು ಬಹಳ ಸಹಜ ತಿಳುವಳಿಕೆಯಾಗಿದೆ. ಮಕ್ಕಳಿಗೆ ತಿಳಿಸಿದ್ದಾರೆ – ಇವೆಲ್ಲಾ ಚಿತ್ರಗಳನ್ನು ತಂದೆಯು ದಿವ್ಯ ದೃಷ್ಟಿಯಿಂದ ಮಾಡಿಸಿದ್ದಾರೆ. ಅದರಲ್ಲಿ ತಿದ್ದು ಪಡಿಯೂ ಮಾಡಿಸಿದ್ದಾರೆ. ಯಜ್ಞದ ಆದಿಯಲ್ಲಿ ಬ್ರಹ್ಮಾ ತಂದೆಯು ಕಾಶಿಯಲ್ಲಿ ಏಕಾಂತದಲ್ಲಿ ಕುಳಿತಿದ್ದಾಗ ಗೋಡೆಗಳ ಮೇಲೆ ಇಂತಹ ಚಕ್ರ ಇತ್ಯಾದಿಗಳನ್ನು ಚಿತ್ರಿಸುತ್ತಿದ್ದರು, ಇದೇನು ಎಂಬುದು ಅರ್ಥವಾಗುತ್ತಿರಲಿಲ್ಲ, ಖುಷಿಯಾಗುತ್ತಿತ್ತು. ಸಾಕ್ಷಾತ್ಕಾರವಾದಾಗ ಹೇಗೆ ಹಾರುತ್ತಿದ್ದರು. ಇದೇನಾಗುತ್ತಿದೆ ಎಂಬುದೇನೂ ತಿಳಿಯುತ್ತಿರಲಿಲ್ಲ. ನೀವು ತಿಳಿದುಕೊಂಡಿದ್ದೀರಿ – ಯಾವ ಚಿತ್ರಗಳು ಮೊದಲು ತಯಾರಾಗಿದ್ದವೋ ಅದನ್ನು ಮತ್ತೆ ಬದಲಾಯಿಸಿ ಹೊಸ-ಹೊಸದಾಗಿ ಮಾಡಿಸುತ್ತಾ ಹೋಗಿದ್ದಾರೆ. ಈಗ ಹೊಸ-ಹೊಸ ಚಿತ್ರಗಳು ಕಲ್ಪದ ಹಿಂದಿನ ತರಹ ಆಗುತ್ತಾ ಹೋಗುತ್ತದೆ. ಏಣಿಯ ಚಿತ್ರ ನೋಡಿ, ಎಷ್ಟು ಚೆನ್ನಾಗಿದೆ! ಇದರ ಮೇಲೆ ತಿಳಿಸುವುದು ಬಹಳ ಸಹಜವಾಗುತ್ತದೆ. ಕೊನೆಯಲ್ಲಿ ಬರುವವರಿಗೆ ಇನ್ನೂ ಬಹಳ ಸಹಜವಾಗಿ ಸಿಗುತ್ತದೆ. ಈಗ ಬರುವ ಹೊಸಬರು ಏಳು ದಿನಗಳಲ್ಲಿ ಇಡೀ ಜ್ಞಾನವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹಳಬರಿಗಿಂತಲೂ ಮುಂದೆ ಹೋಗುತ್ತಿದ್ದಾರೆ. ಮೊದಲೇ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಕೆಲವರು ಹೇಳುತ್ತಾರೆ. ಅರೆ! ಈ ಚಿಂತೆಯನ್ನೂ ಮಾಡಬೇಡಿರಿ. ಒಂದುವೇಳೆ ಮೊದಲೇ ಬಂದು ಮತ್ತೆ ಜ್ಞಾನವನ್ನು ಬಿಟ್ಟು ಹೋಗಿದ್ದರೆ? ತಡವಾಗಿ ಬರುವವರಿಗೆ ಸಹಜವಾಗಿ ಸಿಂಹಾಸನ ಸಿಗುತ್ತದೆ. ಯಾರು ಮೊದಲು ಬಂದರೋ ಅವರು ನೋಡಿ, ಇಂದು ಇಲ್ಲವೇ ಇಲ್ಲ ಸಮಾಪ್ತಿಯಾದರು. ಕೊನೆಯಲ್ಲಿ ಯಾರು ತೇರ್ಗಡೆಯಾದರು ಎಂದು ಫಲಿತಾಂಶವು ತಿಳಿಯುತ್ತದೆ. ಹೊಸ ಹೊಸಬರು ಬರುತ್ತಾರೆ, ಕೂಡಲೇ ಸೇವೆಯಲ್ಲಿ ತೊಡಗುತ್ತಾರೆ. ಹಳಬರು ಈ ರೀತಿ ತೊಡಗುವುದಿಲ್ಲ. ಹೊಸ ಹೊಸ ಮಕ್ಕಳು ಸೇವೆಯಿಂದ ಹೃದಯವನ್ನೇರಿರುತ್ತಾರೆ. ಎಷ್ಟೊಂದು ಮಂದಿ ಹಳಬರು ಹೊರಟು ಹೋದರು ಆದ್ದರಿಂದ ತಂದೆಯು ತಿಳಿಸುತ್ತಾರೆ – ಯಾರಿಗೆ ಸರ್ವೋತ್ತಮ ಬ್ರಾಹ್ಮಣ ಕುಲಭೂಷಣರೆಂದು ಹೇಳಲಾಗುತ್ತದೆಯೋ ಅವರಲ್ಲಿಯೂ ಕೆಲವರು ಆಶ್ಚರ್ಯವೆನಿಸುವಂತೆ ಕೇಳಿ, ಹೇಳಿ, ಮತ್ತೆ ಬಿಟ್ಟು ಹೋಗುತ್ತಾರೆ. ಯಾವುದು ಗಾಯನವಿದೆಯೋ ಅದು ಈಗ ಪ್ರತ್ಯಕ್ಷದಲ್ಲಿ ನಡೆಯುತ್ತಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಮ್ಮನ್ನು ತಾವೇ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ – ನೋಡಿಕೊಳ್ಳಿ, ನಾನು ಬಹಳ-ಬಹಳ ಮಧುರನಾಗಿದ್ದೇನೆಯೇ? ನನ್ನಲ್ಲಿ ಯಾವ-ಯಾವ ಕೊರತೆಗಳಿವೆ? ಎಲ್ಲಾ ದೈವೀ ಗುಣಗಳು ಧಾರಣೆಯಾಗಿದೆಯೇ! ತಮ್ಮ ಚಲನೆಯನ್ನು ದೇವತೆಗಳಂತೆ ಮಾಡಿಕೊಳ್ಳಬೇಕಾಗಿದೆ. ಆಸುರೀ ಆಹಾರ-ಪಾನೀಯಗಳ ತ್ಯಾಗ ಮಾಡಬೇಕಾಗಿದೆ.

2. ಯಾವುದೇ ವ್ಯರ್ಥ ಮಾತುಗಳನ್ನು ಕೇಳಲೂಬಾರದು, ಹೇಳಲೂಬಾರದು, ಸಹನಾಶೀಲರಾಗಬೇಕಾಗಿದೆ.

ವರದಾನ:-

ಮುಂದೆ ನಡೆದಂತೆ ನಾಲ್ಕೂ ಕಡೆಯ ಸೇವೆಗಳ ವಿಸ್ತಾರವನ್ನು ನಿರ್ವಹಣೆ ಮಾಡುವುದಕ್ಕಾಗಿ, ಭಿನ್ನ-ಭಿನ್ನ ಸಾಧನಗಳನ್ನು ಉಪಯೋಗಿಸಬೇಕಾಗುವುದು ಏಕೆಂದರೆ ಆ ಸಮಯದಲ್ಲಿ ಪತ್ರ-ವ್ಯವಹಾರ ಅಥವಾ ಟೆಲಿಗ್ರಾಂ, ಟೆಲಿಪೋನ್ ಇತ್ಯಾದಿಗಳು ಕೆಲಸಕ್ಕೆ ಬರುವುದಿಲ್ಲ. ಇಂತಹ ಸಮಯದಲ್ಲಿ ವೈರ್ಲೆಸ್ ಸೆಟ್ ಇರಬೇಕು, ಇದಕ್ಕಾಗಿ ಈಗೀಗ ಕರ್ಮಯೋಗಿ, ಈಗೀಗ ಕರ್ಮಾತೀತ ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸವನ್ನು ಮಾಡಿದಾಗಲೇ, ನಾಲ್ಕೂ ಕಡೆಯಲ್ಲಿ ಸಂಕಲ್ಪದ ಸಿದ್ಧಿಯ ಮೂಲಕ ಸೇವೆಯಲ್ಲಿ ಸಹಯೋಗಿ ಆಗಬಹುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top