15 November 2021 KANNADA Murli Today | Brahma Kumaris

Read and Listen today’s Gyan Murli in Kannada

November 14, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯ ಮೂಲಕ ಯಾವ ಜ್ಞಾನವು ಸಿಕ್ಕಿದೆಯೋ ಅದನ್ನು ಬುದ್ಧಿಯಲ್ಲಿ ಸ್ಥಿರವಾಗಿಟ್ಟುಕೊಳ್ಳಬೇಕಾಗಿದೆ, ಮುಂಜಾನೆಯೆದ್ದು ಸ್ವದರ್ಶನ ಚಕ್ರಧಾರಿಗಳಾಗಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ”

ಪ್ರಶ್ನೆ:: -

ಈ ಈಶ್ವರೀಯ ವಿದ್ಯೆಯ ಕಾಯಿದೆಯೇನಾಗಿದೆ? ಅದಕ್ಕಾಗಿ ಯಾವ ಆದೇಶವು ಸಿಕ್ಕಿದೆ?

ಉತ್ತರ:-

ಈ ಈಶ್ವರೀಯ ವಿದ್ಯೆಯ ಕಾಯಿದೆಯಾಗಿದೆ – ನಿಯಮಿತವಾಗಿ ಓದುವುದು. ಕೆಲವೊಮ್ಮೆ ಓದುವುದು, ಕೆಲವೊಮ್ಮೆ ಓದದೇ ಇರುವುದು ಕಾಯಿದೆಯಿಲ್ಲ. ತಂದೆಯು ವಿದ್ಯಾಭ್ಯಾಸಕ್ಕಾಗಿ ಅನೇಕ ಪ್ರಬಂಧಗಳನ್ನು ಮಾಡಿಕೊಟ್ಟಿದ್ದಾರೆ. ಅಂಚೆಯ ಮೂಲಕ ವಿದ್ಯೆಯು (ಮುರುಳಿ) ಇಲ್ಲಿಂದಲೇ (ಮಧುಬನ) ಹೋಗುತ್ತದೆ. ನೀವು ಏಳು ದಿನಗಳ ಕೋರ್ಸ್ನ್ನು ತೆಗೆದುಕೊಂಡು ಎಲ್ಲಿಬೇಕಾದರೂ ಓದಬಹುದು ಆದರೆ ವಿದ್ಯೆಯನ್ನೆಂದಿಗೂ ತಪ್ಪಿಸಬಾರದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ….

ಓಂ ಶಾಂತಿ. ಯಾರೆಲ್ಲರೂ ಮಕ್ಕಳು ಕುಳಿತಿದ್ದೀರಿ, ಅವರು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯ ಅಥವಾ ಸ್ವದರ್ಶನ ಚಕ್ರವನ್ನು ನೆನಪು ಮಾಡುತ್ತೀರಿ. ತಂದೆಯು ಮಕ್ಕಳಿಗೆ ಜ್ಞಾನವನ್ನು ನೀಡಿದ್ದಾರೆ – ಮಕ್ಕಳೇ, ಸ್ವದರ್ಶನ ಚಕ್ರಧಾರಿಗಳಾಗಿರಿ. ಸ್ವದರ್ಶನ ಚಕ್ರಧಾರಿಗಳಾಗುವುದು ನೀವು ಬ್ರಾಹ್ಮಣ ಮಕ್ಕಳ ಉದ್ದೇಶವಾಗಿದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ, 84 ಜನ್ಮಗಳ ಚಕ್ರವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಬೇರೆಲ್ಲಾ ಮಾತುಗಳನ್ನು ಬುದ್ಧಿಯಿಂದ ತೆಗೆದುಹಾಕಬೇಕಾಗಿದೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ – ಅವಶ್ಯವಾಗಿ ತಂದೆಯು ನಮ್ಮನ್ನು ಸೂರ್ಯವಂಶಿ-ಚಂದ್ರವಂಶಿಯನ್ನಾಗಿ ಮಾಡಿದ್ದರು, ನಂತರ 84 ಜನ್ಮಗಳನ್ನು ತೆಗೆದುಕೊಂಡೆವು. ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ಆತ್ಮನಿಗೆ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿರುತ್ತದೆ. ಈಗ ನಿಮ್ಮನ್ನು ಶಿವ ತಂದೆಯು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿದ್ದಾರೆ. ನೀವು 84 ಜನ್ಮಗಳ ಚಕ್ರದ ಆಟವನ್ನು ಯಾವರೀತಿ ಆಡುತ್ತೀರಿ ಎಂಬುದನ್ನು ತಂದೆಯು ತಿಳಿಸಿದ್ದಾರೆ. ಮೊಟ್ಟ ಮೊದಲು ನಾವು ಬ್ರಾಹ್ಮಣರಾಗಿದ್ದೇವೆ, ನಾವು ಬ್ರಾಹ್ಮಣರನ್ನು ರಚಿಸುವವರು ಬ್ರಹ್ಮನ ಮೂಲಕ ಶಿವ ತಂದೆಯಾಗಿದ್ದಾರೆ. ರಚಯಿತ ಮತ್ತು ರಚನೆಯ ಜ್ಞಾನದಿಂದಲೇ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ಈ ಜ್ಞಾನವನ್ನು ಬುದ್ಧಿಯಲ್ಲಿ ಸ್ಥಿರವಾಗಿ ಇಟ್ಟುಕೊಳ್ಳಬೇಕಾಗಿದೆ. ಮುಂಜಾನೆಯೆದ್ದು ಸ್ವದರ್ಶನ ಚಕ್ರಧಾರಿಗಳಾಗಿ ಕುಳಿತುಕೊಳ್ಳಬೇಕು. ನಾವು ನಮ್ಮ 84 ಜನ್ಮಗಳ ಚಕ್ರವನ್ನು ಅರಿತುಕೊಂಡಿದ್ದೇವೆ. ನಾವೆಲ್ಲಾ ಆತ್ಮರ ರಚಯಿತನು ಒಬ್ಬ ತಂದೆಯೇ ಆಗಿದ್ದಾರೆ, ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಎಂದು ತಿಳಿಸಿದ್ದಾರೆ. ನಮ್ಮ ತಂದೆಯು ಆ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಪರಮಧಾಮ ನಿವಾಸಿಯಾಗಿದ್ದಾರೆ. ನಾವೂ ಸಹ ಅಲ್ಲಿಯೇ ಇದ್ದೆವು. ಅವರು ನಮ್ಮ ತಂದೆಯಾಗಿದ್ದಾರೆ, ಬಾಬಾ ಎಂಬ ಶಬ್ಧವು ಬಹಳ ಪ್ರಿಯವಾಗಿದೆ. ಶಿವ ತಂದೆಯ ಮಂದಿರದಲ್ಲಿ ಹೋಗಿ ಎಷ್ಟೊಂದು ಪೂಜೆ ಮಾಡುತ್ತಾರೆ, ಬಹಳ ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ನಿಮ್ಮನ್ನು ಮನುಷ್ಯರಿಂದ ದೇವತೆ, ತುಚ್ಛ ಬುದ್ಧಿಯವರಿಂದ ಸ್ವಚ್ಛ ಬುದ್ಧಿಯವರನ್ನಾಗಿ ಮಾಡುತ್ತೇನೆ. ತುಚ್ಛ ಬುದ್ಧಿ ಅರ್ಥಾತ್ ಶೂದ್ರ ಬುದ್ಧಿಯಿಂದ ಸ್ವಚ್ಛ ಬುದ್ಧಿಯವರನ್ನಾಗಿ ಮಾಡಿದ್ದೆನು ಅರ್ಥಾತ್ ಶ್ರೇಷ್ಠ ಬುದ್ಧಿ ಪುರುಷೋತ್ತಮ ಬುದ್ಧಿಯವರನ್ನಾಗಿ ಮಾಡಿದ್ದೆನು. ಸ್ತ್ರೀ-ಪುರುಷರೆಲ್ಲರೂ ಈ ಲಕ್ಷ್ಮೀ-ನಾರಾಯಣರಿಗೆ ನಮಸ್ಕಾರ ಮಾಡುತ್ತಾರೆ. ಆದರೆ ಇವರು ಯಾರು, ಯಾವಾಗ ಬಂದರು, ಏನು ಮಾಡಿದರು ಎಂದು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ – ಈ ಭಾರತವು ಅವಿನಾಶಿ ಖಂಡವಾಗಿದೆ ಏಕೆಂದರೆ ಅವಿನಾಶಿ ತಂದೆಯಾದ ಪರಮಪಿತ ಪರಮಾತ್ಮನ ಜನ್ಮಭೂಮಿಯಾಗಿದೆ, ಪತಿತ-ಪಾವನ, ಸರ್ವರ ಸದ್ಗತಿದಾತನ ಜನ್ಮಸ್ಥಾನವಾಗಿದೆ ಅಂದಮೇಲೆ ಇದು ಬಹಳ ದೊಡ್ಡ ತೀರ್ಥ ಸ್ಥಾನವಾಯಿತು ಆದರೆ ಇದು ಪರಮಪಿತ ಪರಮಾತ್ಮನ, ಸರ್ವರ ಸದ್ಗತಿದಾತನ ಜನ್ಮಭೂಮಿಯಾಗಿದೆ ಎಂಬ ನಶೆಯು ಯಾರಿಗಾದರೂ ಇದೆಯೇ!! ಪತಿತ-ಪಾವನ ತಂದೆಯ ಜಯಂತಿಯು ಭಾರತದಲ್ಲಿಯೇ ಆಗಿದೆ, ಶಿವ ಜಯಂತಿಯನ್ನೂ ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಶಿವನ ಜನ್ಮವು ಇಲ್ಲಿಯೇ ಆಗುತ್ತದೆ. ಈ ಭಾರತವು ದೊಡ್ಡ ತೀರ್ಥ ಸ್ಥಾನವಾಗಿದೆ. ಆದರೆ ಇದು ನಮ್ಮ ಪರಮಪಿತ ಅಥವಾ ಮಾತಾಪಿತ, ಪತಿತ-ಪಾವನ, ಸರ್ವರ ಸದ್ಗತಿದಾತ ತಂದೆಯ ಜನ್ಮ ಸ್ಥಾನವಾಗಿದೆ ಡ್ರಾಮಾನುಸಾರ ಯಾರಿಗೂ ಗೊತ್ತಿಲ್ಲ. ಆದ್ದರಿಂದಲೇ ಭಾರತ ಭೂಮಿಯನ್ನು ವಂದೇ ಮಾತರಂ ಎಂದು ಹೇಳುತ್ತಾರೆ ಅರ್ಥಾತ್ ಈ ಭೂಮಿಯ ಮೇಲೆ ಈ ಕನ್ಯೆಯರು ಶ್ರೀಮತದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಅವರಿಗೆ ಈ ನಶೆಯಿರಬೇಕು – ಶ್ರೀಮತದಂತೆ ನಾವು ಕಲ್ಪ-ಕಲ್ಪವೂ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ. ಯಾರೆಷ್ಟು ಶ್ರೀಮತದಂತೆ ನಡೆಯುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಭಾರತವಾಸಿಗಳು ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ನಿಮಗೆ ತಿಳಿದಿದೆ – ಈ ಭಾರತವು ತಂದೆಯ ಜನ್ಮಸ್ಥಾನವಾಗಿದೆ, ಆ ತಂದೆಯು ಯಾವ ಧರ್ಮ ಸ್ಥಾಪನೆ ಮಾಡಿದರೋ, ಅದರ ಧರ್ಮ ಗ್ರಂಥವಾಗಿದೆ – ಗೀತೆ (ಭಗವದ್ಗೀತೆ), ಗೀತೆಯನ್ನು ಯಾರು ತಿಳಿಸಿದರು ಎಂಬುದನ್ನೇ ಭಾರತವಾಸಿಗಳು ಮರೆತು ಹೋಗಿದ್ದಾರೆ! ಎಷ್ಟೊಂದು ಅಂತರವಾಗಿ ಬಿಟ್ಟಿದೆ! ನಿರಾಕಾರ ಶಿವನೆಲ್ಲಿ ಮತ್ತು ಶ್ರೀಕೃಷ್ಣನೆಲ್ಲಿ! ನಿಮಗೆ ತಿಳಿದಿದೆ – ಕೃಷ್ಣನ ಆತ್ಮವೇ ಸುಂದರವಾಗಿತ್ತು, ಈಗ ಆ ಆತ್ಮವು ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿ ತಮೋಪ್ರಧಾನವಾಗಿ ಬಿಟ್ಟಿದೆ. ಪುನಃ ಇವರಲ್ಲಿ(ಬ್ರಹ್ಮಾ) ಶಿವ ತಂದೆಯು ಪ್ರವೇಶ ಮಾಡಿ, ಇವರನ್ನೇ ಸುಂದರ ಶ್ರೀಕೃಷ್ಣನನ್ನಾಗಿ ಮಾಡುತ್ತಿದ್ದಾರೆ ಆದ್ದರಿಂದ ಕೃಷ್ಣನಿಗೆ ಶ್ಯಾಮ ಮತ್ತು ಸುಂದರನೆಂದು ಹೇಳುತ್ತಾರೆ. ಕೃಷ್ಣನು ಸತ್ಯಯುಗದ ಮೊದಲನೇ ಸುಂದರ ರಾಜಕುಮಾರನಾಗಿದ್ದನು. ಮರ್ಯಾದಾ ಪುರುಷೋತ್ತಮ, ಅಹಿಂಸಾ ಪರಮೋಧರ್ಮಿ ಎಂದು ಮಹಿಮೆಯಿದೆ. ಭಾರತವಾಸಿಗಳಿಗೆ ರಾಧೆ-ಕೃಷ್ಣ ಮತ್ತು ಲಕ್ಷ್ಮೀ-ನಾರಾಯಣರ ಪರಸ್ಪರ ಸಂಬಂಧವೇನು ಎಂಬುದೂ ಸಹ ತಿಳಿದಿಲ್ಲ. ತಂದೆಯು ಹೇಳುತ್ತಾರೆ – ಇಲ್ಲಿಯವರೆಗೆ ಏನೆಲ್ಲವನ್ನೂ ಓದುತ್ತಾ ಬಂದಿದ್ದೀರೋ ಅದರಲ್ಲಿ ಯಾವುದೇ ಸಾರವಿಲ್ಲ. ಈಗ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ – ತಂದೆಯು 5000 ವರ್ಷಗಳ ನಂತರ ನಮಗೆ ಪುನಃ ರಾಜಯೋಗದ ಶಿಕ್ಷಣ ಕೊಡುತ್ತಿದ್ದಾರೆ. ಕೃಷ್ಣನು ಗೀತೆಯನ್ನು ಹೇಳಿದನೆಂದು ಇಡೀ ಪ್ರಪಂಚವು ಹೇಳುತ್ತದೆ. ತಂದೆಯು ಹೇಳುತ್ತಾರೆ – ಕೃಷ್ಣನಲ್ಲಿ ಸೃಷ್ಠಿಯ ಆದಿ-ಮಧ್ಯ-ಅಂತ್ಯದ ಜ್ಞಾನವೇ ಇಲ್ಲ. ಕೃಷ್ಣನ ಆತ್ಮವೂ ಸಹ ತನ್ನ ಹಿಂದಿನ ಜನ್ಮದಲ್ಲಿ ಈ ಜ್ಞಾನವನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಈ ಕಲ್ಪದಲ್ಲಿ ಈಗ ಪುನಃ ಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾರೆ, ಇವರಿಗೆ ನಾನು ಬ್ರಹ್ಮಾ ಎಂದು ಹೆಸರನ್ನು ಇಟ್ಟಿದ್ದೇನೆ. ಅವರ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ, ನೀವು ಮರುಜೀವಿಗಳಾಗಿದ್ದೀರಲ್ಲವೆ. ಆದಿಯಲ್ಲಿ ಕೆಲವರಿಗೆ ಅವ್ಯಕ್ತ ಹೆಸರುಗಳನು ಇಡಲಾಗುತ್ತಿತ್ತು, ಈಗ ಇಡುವುದಿಲ್ಲ ಏಕೆಂದರೆ ಅನೇಕರು ವಿಚ್ಛೇದನವನ್ನು ಕೊಟ್ಟು ಬಿಟ್ಟರು, ತಂದೆಯ ಮಕ್ಕಳಾಗಿ ಹೆಸರನ್ನು ಇಟ್ಟ ನಂತರದಲ್ಲಿಯೂ ಜ್ಞಾನವನ್ನು ಬಿಟ್ಟು ಹೋಗುವುದು ಶೋಭಿಸುವುದಿಲ್ಲ ಆದ್ದರಿಂದ ಹೆಸರಿಡುವುದನ್ನು ನಿಲ್ಲಿಸಲಾಯಿತು. ನೀವೀಗ ಬ್ರಾಹ್ಮಣರಾಗಿದ್ದೀರಿ, ಪ್ರಜಾಪಿತ ಬ್ರಹ್ಮನ ಮಕ್ಕಳು ಶಿವ ತಂದೆಯ ಮೊಮ್ಮಕ್ಕಳಾಗಿದ್ದೀರಿ. ತಂದೆಯು ಹೇಳುತ್ತಾರೆ – ನೀವು ಆಸ್ತಿಯನ್ನು ನನ್ನಿಂದಲೇ ತೆಗೆದುಕೊಳ್ಳಬೇಕಾಗಿದೆ ಆದ್ದರಿಂದ ನನ್ನನ್ನೇ ನೆನಪು ಮಾಡಿರಿ. ಈ ಬ್ರಹ್ಮಾರವರದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ, ಸೂಕ್ಷ್ಮವತನದಲ್ಲಿ ಯಾವ ಬ್ರಹ್ಮನನ್ನು ತೋರಿಸುತ್ತಾರೆಯೋ ಅವರು ಪಾವನನಾಗಿದ್ದಾರೆ. ವಾಸ್ತವದಲ್ಲಿ ಪ್ರಜಾಪಿತನು ಸೂಕ್ಷ್ಮವತನದಲ್ಲಿರಲು ಸಾಧ್ಯವಿಲ್ಲ ಅಂದರೆ ವ್ಯಕ್ತ ಬ್ರಹ್ಮನೇ ಪುರುಷಾರ್ಥ ಮಾಡಿ ಅವ್ಯಕ್ತ ಬ್ರಹ್ಮನಾಗುತ್ತಾರೆ. ಇವರು ವ್ಯಕ್ತ ಬ್ರಹ್ಮನಾಗಿದ್ದಾರೆ, ಪವಿತ್ರ ಫರಿಶ್ತೆಯಾಗುವುದಕ್ಕಾಗಿ ಇವರು ಮಾನವ ವಂಶ ವೃಕ್ಷದ ತುದಿಯಲ್ಲಿ ನಿಂತಿದ್ದಾರೆ ಮತ್ತು ಕೆಳಗೆ ಮಕ್ಕಳ ಜೊತೆ ತಪಸ್ಸಿನಲ್ಲಿ ಕುಳಿತಿದ್ದಾರೆ ಆದ್ದರಿಂದ ಇವರನ್ನು ಸೂಕ್ಷ್ಮವತನದಲ್ಲಿ ತೋರಿಸಬೇಕಾಗುತ್ತದೆ. ಇಲ್ಲಿಯೂ ಸಹ ಪ್ರಜಾಪಿತನು ಅವಶ್ಯವಾಗಿ ಬೇಕಾಗಿದ್ದಾರೆ. ಸೂಕ್ಷ್ಮವತನದಲ್ಲಿ ಅವ್ಯಕ್ತ ಬ್ರಹ್ಮಾ, ಇಲ್ಲಿ ವ್ಯಕ್ತ ಬ್ರಹ್ಮಾ. ನೀವೂ ಸಹ ಫರಿಶ್ತೆಗಳಾಗಲು ಬಂದಿದ್ದೀರಿ, ಇದರಲ್ಲಿಯೇ ಮನುಷ್ಯರು ತಬ್ಬಿಬ್ಬಾಗುತ್ತಾರೆ ಏಕೆಂದರೆ ಇದು ಸಂಪೂರ್ಣವಾಗಿ ಹೊಸ ಜ್ಞಾನವಾಗಿದೆ. ಯಾವುದೇ ಶಾಸ್ತ್ರಗಳಲ್ಲಿ ಈ ಜ್ಞಾನವಿಲ್ಲ. ಭಗವಂತನು ಒಬ್ಬರೇ ಸರ್ವಶ್ರೇಷ್ಠ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಅವರ ನಿವಾಸ ಸ್ಥಾನವು ಪರಮಧಾಮವಾಗಿದೆ. ಅವರನ್ನು ಎಲ್ಲರೂ ಹೀಗೆ ನೆನಪು ಮಾಡುತ್ತಾರೆ – ನಮ್ಮ ಮೇಲೆ ಮಾಯೆಯ ನೆರಳು ಬಿದ್ದಿದೆ, ಪತಿತರಾಗಿ ಬಿಟ್ಟಿದ್ದೇವೆ ಆದ್ದರಿಂದ ಬನ್ನಿ. ಈ ಮಾತುಗಳು ಹೊಸಬರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನೀವೀಗ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಬಹಳ ಕೆಲವರೇ ರಾಜ್ಯಭಾರ ಮಾಡುತ್ತಿದ್ದರು, ಅಲ್ಲಿ ಅಧರ್ಮದ ಮಾತೇ ಇರುವುದಿಲ್ಲ. ಶಾಸ್ತ್ರಗಳಲ್ಲಿ ಎಷ್ಟೊಂದು ಮಾತುಗಳನ್ನು ಬರೆದು ಬಿಟ್ಟಿದ್ದಾರೆ ಆದರೆ ಅದರಲ್ಲಿ ಯಾವುದೇ ಸಾರವಿಲ್ಲ. ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಈಗ ಅಂತ್ಯದಲ್ಲಿ ಬಂದು ಪತಿತರಾಗಿದ್ದೀರಿ. ನೀವೀಗ ಮೇಲೇರುತ್ತೀರಿ. ಇಳಿಯುವುದರಲ್ಲಿ 84 ಜನ್ಮಗಳು ಹಿಡಿಸಿತು, ಈಗ ಸೆಕೆಂಡಿನಲ್ಲಿ ಮೇಲೇರುತ್ತೀರಿ.

ನೀವು ಮಕ್ಕಳು ಈಗ ರಾಜಯೋಗವನ್ನು ಕಲಿಯುತ್ತಿದ್ದೀರಿ ನಂತರ ಶಾಂತಿಧಾಮದಲ್ಲಿ ಹೋಗಿ ಸುಖಧಾಮದಲ್ಲಿ ಬರುತ್ತೀರಿ. ಇದು ದುಃಖಧಾಮವಾಗಿದೆ. ಮೊದಲು ನೀವೇ ಬಂದಿದ್ದೀರಿ ಆದ್ದರಿಂದ ತಂದೆಯೂ ಸಹ ಮೊಟ್ಟ ಮೊದಲು ನಿಮ್ಮೊಂದಿಗೆ ಬಂದು ಮಿಲನ ಮಾಡುತ್ತಾರೆ. ಇಲ್ಲಿ ತಂದೆ ಮತ್ತು ಮಕ್ಕಳು, ಆತ್ಮರು ಮತ್ತು ಪರಮಾತ್ಮನ ಮೇಳವಾಗುತ್ತದೆ. ಲೆಕ್ಕವಿದೆಯಲ್ಲವೆ – ನಾವು ತಂದೆಯಿಂದ ವಿದಾಯಿಯನ್ನು ಪಡೆದು 5000 ವರ್ಷಗಳಾಯಿತು, ಮೊಟ್ಟ ಮೊದಲೇ ಸ್ವರ್ಗದಲ್ಲಿ ಪಾತ್ರವನ್ನು ಅಭಿನಯಿಸಿದೆವು. ಅಲ್ಲಿಂದ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಕೆಳಗಿಳಿದು ಬಂದಿದ್ದೇವೆ. ಈಗ ತಂದೆಯ ಬಳಿ ಬಂದು ಬಿಟ್ಟಿದ್ದೇವೆ. ಇನ್ನು ಅಲ್ಪಸ್ವಲ್ಪ ಯಾರೆಲ್ಲರೂ ಪರಮಧಾಮದಲ್ಲಿ ಉಳಿದಿದ್ದಾರೆಯೋ ಅವರೂ ಬಂದು ಬಿಡುತ್ತಾರೆ ಅನಂತರ ವಿದ್ಯಾಭ್ಯಾಸ ಸಮಾಪ್ತಿಯಾಗುವುದು. ಎಲ್ಲರೂ ಇಲ್ಲಿಗೆ ಬರಬೇಕಾಗಿದೆ. ಯಾವಾಗ ಪರಮಧಾಮದಲ್ಲಿ ಖಾಲಿಯಾಗಿ ಬಿಡುವುದೋ ಆಗ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವರು. ಇದು ತಿಳಿದುಕೊಳ್ಳುವ ಮಾತುಗಳಾಗಿವೆ. ಇಲ್ಲಿ ಓದಬೇಕಾಗಿದೆ. ಶಾಲೆಗೆ ಕೆಲವೊಮ್ಮೆ ಹೋಗುವುದು, ಕೆಲವೊಮ್ಮೆ ಹೋಗದೇ ಇರುವುದು – ಈ ಕಾಯಿದೆ ಇಲ್ಲ. ತಂದೆಯು ವಿದ್ಯಾಭ್ಯಾಸಕ್ಕಾಗಿ ಅನೇಕ ಪ್ರಬಂಧಗಳನ್ನು ನೀಡಿದ್ದಾರೆ. ವಾಸ್ತವದಲ್ಲಿ ಲೌಕಿಕ ವಿದ್ಯೆಯು ಎಂದೂ ಯಾರ ಬಳಿಯೂ ಅಂಚೆಯ ಮೂಲಕ ಹೋಗುವುದಿಲ್ಲ ಆದರೆ ಈ ಬೇಹದ್ದಿನ ತಂದೆಯ ವಿದ್ಯೆಯು (ಮುರುಳಿ) ಅಂಚೆಯ ಮೂಲಕ ಹೋಗುತ್ತದೆ, ಎಷ್ಟೊಂದು ಕಾಗದಗಳು ಮುದ್ರಿತವಾಗುತ್ತದೆ, ಎಲ್ಲೆಲ್ಲಿಗೆ ಹೋಗುತ್ತದೆ! ಏಳು ದಿನಗಳ ಕೋರ್ಸ್ ತೆಗೆದುಕೊಂಡು ನಂತರ ಎಲ್ಲಿ ಬೇಕಾದರೂ ಓದುತ್ತಾ ಇರಿ. ಈ ಸಮಯದಲ್ಲಿ ಎಲ್ಲರೂ ಅರ್ಧಕಲ್ಪದ ರೋಗಿಗಳಾಗಿದ್ದಾರೆ ಆದ್ದರಿಂದ ಏಳು ದಿನಗಳ ಕಾಲ ಭಟ್ಟಿಯಲ್ಲಿ ಇರಬೇಕಾಗುತ್ತದೆ. ಈ ಪಂಚ ವಿಕಾರಗಳ ಕಾಯಿಲೆಯು ಇಡೀ ಪ್ರಪಂಚದಲ್ಲಿ ಹರಡಿದೆ. ಸತ್ಯಯುಗದಲ್ಲಿ ನಿಮ್ಮ ಕಾಯವು ನಿರೋಗಿಯಾಗಿತ್ತು, ಸದಾ ಆರೋಗ್ಯವಂತರು, ಐಶ್ವರ್ಯವಂತರಾಗಿದ್ದಿರಿ, ಈಗಂತೂ ಸ್ಥಿತಿಯೇನಾಗಿ ಬಿಟ್ಟಿದೆ? ಇಡೀ ಆಟವು ಭಾರತದ ಮೇಲಿದೆ. ನಿಮಗೆ ಈಗ 84 ಜನ್ಮಗಳ ಸ್ಮೃತಿ ಬಂದಿದೆ. ಕಲ್ಪ-ಕಲ್ಪವೂ ನೀವೇ ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ ಮತ್ತು ಚಕ್ರವರ್ತಿ ರಾಜರೂ ಆಗುತ್ತೀರಿ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಅದರಲ್ಲಿ ನಂಬರ್ವಾರ್ ಪದವಿಗಳಿರುತ್ತವೆ. ಪ್ರಜೆಗಳೂ ಸಹ ಅನೇಕ ಪ್ರಕಾರದವರು ಬೇಕು. ಹೃದಯದಿಂದ ಕೇಳಿಕೊಳ್ಳಿರಿ – ನಾವು ಎಷ್ಟು ಜನರನ್ನು ನಮ್ಮ ಸಮಾನ ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತೇವೆ? ಯಾರು ಎಷ್ಟು ಜನರನ್ನು ಮಾಡುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ತಂದೆಯು ನಿಮಗೆ ಮಾಯೆಯೊಂದಿಗೆ ಯುದ್ಧ ಮಾಡುವುದನ್ನು ಕಲಿಸುತ್ತಾರೆ ಆದ್ದರಿಂದ ಅವರ ಹೆಸರನ್ನು ಯುಧಿಷ್ಠಿರ ಎಂದು ಇಟ್ಟಿದ್ದಾರೆ. ಮಾಯೆಯ ಮೇಲೆ ಜಯ ಗಳಿಸುವ ಯುದ್ಧವನ್ನು ಕಲಿಸುತ್ತಾರೆ. ಯುಧಿಷ್ಠಿರ ಮತ್ತು ಧೃತರಾಷ್ಟ್ರನನ್ನೂ ತೋರಿಸುತ್ತಾರೆ. ಮಾಯಾಜೀತರೇ ಜಗಜ್ಜೀತರೆಂದು ಗಾಯನವಿದೆ, ಎಷ್ಟು ಸಮಯ ನಿಮ್ಮ ಜಯವು ಸ್ಥಿರವಾಗಿತ್ತು ನಂತರ ಎಷ್ಟು ಸಮಯ ಸೋಲನ್ನು ಅನುಭವಿಸುತ್ತೀರಿ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಇದು ಸ್ಥೂಲ ಯುದ್ಧವಲ್ಲ, ದೇವತೆಗಳು ಮತ್ತು ಅಸುರರ ಯುದ್ಧವೂ ಆಗಲಿಲ್ಲ. ಕೌರವರು ಮತ್ತು ಪಾಂಡವರ ಯುದ್ಧವೂ ಇಲ್ಲ. ಸುಳ್ಳು ಮಾಯೆ ಸುಳ್ಳುಕಾಯ… ಈ ಭಾರತವು ಅಸತ್ಯಖಂಡವಾಗಿದೆ. ಸತ್ಯಖಂಡವಿತ್ತು, ಯಾವಾಗಿನಿಂದ ರಾವಣರಾಜ್ಯವು ಆರಂಭವಾಯಿತೋ ಆಗಿನಿಂದ ಅಸತ್ಯಖಂಡವಾಯಿತು. ಈಶ್ವರನಪ್ರತಿ ಎಷ್ಟೊಂದು ಸುಳ್ಳು ಹೇಳುತ್ತಾರೆ, ಎಷ್ಟೊಂದು ಕಳಂಕವನ್ನು ಹಾಕುತ್ತಾರೆ, ಕಳಂಗೀ ಅವತಾರವೆಂದು ಗಾಯನವಿದೆ, ಎಲ್ಲರಿಗಿಂತ ಹೆಚ್ಚು ಕಳಂಕವನ್ನು ತಂದೆಗೆ ಹೊರಿಸುತ್ತಾರೆ. ಅವರಿಗೆ ಮೀನು, ಮೊಸಳೆ ಅವತಾರವೆಂದು, ಕಲ್ಲು-ಮುಳ್ಳಿನಲ್ಲಿ ಈಶ್ವರನಿದ್ದಾನೆಂದು ಎಷ್ಟೊಂದು ನಿಂದನೆ ಮಾಡುತ್ತಾರೆ ಅಂದಮೇಲೆ ಇದು ಸಭ್ಯತೆಯೇ? ಈಗ ನಿಮಗೆ ಪ್ರಕಾಶತೆಯು ಸಿಕ್ಕಿದೆ, ನೀವು ತಿಳಿದುಕೊಂಡಿದ್ದೀರಿ- ತಂದೆಯು ನಮಗೆ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಿದ್ದಾರೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ, ತಂದೆಯೇ ಸದ್ಗತಿದಾತನಾಗಿದ್ದಾರೆ. ತಂದೆಯ ಜ್ಞಾನದಿಂದ ಎಲ್ಲರ ಸದ್ಗತಿಯಾಗುತ್ತದೆ. ಬಾಕಿ ಯಾರು ಸ್ವಯಂ ದುರ್ಗತಿಯಲ್ಲಿದ್ದಾರೆಯೋ ಅವರು ಅನ್ಯರ ಸದ್ಗತಿಯನ್ನು ಹೇಗೆ ಮಾಡುವರು! ನಾನು ಬಂದು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ, ನೀವೇ ಪವಿತ್ರ ಪೂಜ್ಯರಾಗಿದ್ದಿರಿ ಈಗ ಬಂದು ಪೂಜಾರಿಗಳಾಗಿದ್ದೀರಿ. ಅಪವಿತ್ರ ರಾಜರು ಪವಿತ್ರರಾಜರಿಗೆ ಪೂಜೆ ಮಾಡುತ್ತಾರೆ. ಸತ್ಯಯುಗದಲ್ಲಿ ಡಬಲ್ ಕಿರೀಟಧಾರಿಗಳಿದ್ದರು, ವಿಕಾರಿ ರಾಜರಾದಾಗ ಒಂದು ಕಿರೀಟವಿರುತ್ತದೆ. ಅವರೂ ಸಹ ಮಹಾರಾಜ-ಮಹಾರಾಣಿ. ಆದರೆ ಪವಿತ್ರರಿಗೆ ಅಪವಿತ್ರರು ಹೋಗಿ ತಲೆಬಾಗುತ್ತಾರೆ. ಭಾರತವಾಸಿ ಪವಿತ್ರ ಪ್ರವೃತ್ತಿ ಮಾರ್ಗದವರೇ ನಂತರ ಪತಿತ ಪ್ರವೃತ್ತಿ ಮಾರ್ಗದವರಾಗುತ್ತಾರೆ. ಈಗ ತಂದೆಯು ತಿಳಿಸುತ್ತಾರೆ – ನಿಮ್ಮದು ಈ ಮೃತ್ಯುಲೋಕದಲ್ಲಿ ಅಂತಿಮ ಜನ್ಮವಾಗಿದೆ, ನಾನೀಗ ನಿಮ್ಮನ್ನು ಪುನಃ ಸತ್ಯಯುಗದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಈ ಅಣು ಬಾಂಬುಗಳ ಯುದ್ಧವು 5000 ವರ್ಷಗಳ ಮೊದಲೂ ಸಹ ಆಗಿತ್ತು, ಈ ಹಳೆಯ ಪ್ರಪಂಚವು ಸಮಾಪ್ತಿ ಆಗಬೇಕಾಗಿದೆ. ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಬೇಕಾಗಿದೆ. ಕಮಲಪುಷ್ಫ ಸಮಾನರು ನೀವು ಬ್ರಾಹ್ಮಣರಾಗುತ್ತೀರಿ ಆದರೆ ಈ ಅಲಂಕಾರವನ್ನು ವಿಷ್ಣುವಿಗೆ ತೋರಿಸಿದ್ದಾರೆ ಏಕೆಂದರೆ ನೀವು ಬ್ರಾಹ್ಮಣರು ಸದಾ ಏಕರಸವಾಗಿರುವುದಿಲ್ಲ, ಮೊದಲು ಕಮಲಪುಷ್ಫ ಸಮಾನರಾಗುತ್ತೀರಿ, ಎರಡು ವರ್ಷಗಳ ನಂತರ ಮತ್ತೆ ಪತಿತರಾಗಿ ಬಿಡುತ್ತೀರಿ ಆದ್ದರಿಂದ ನಿಮಗೆ ಅಲಂಕಾರಗಳನ್ನು ತೋರಿಸುವುದಿಲ್ಲ.

ನಿಮ್ಮದು ಇದು ಸರ್ವೋತ್ತಮ ಕುಲವಾಗಿದೆ. ನೀವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಶೂದ್ರರಿಂದ ಕೂಡಲೇ ದೇವತೆಗಳಾಗಿ ಬಿಡುವುದಿಲ್ಲ. ಬ್ರಾಹ್ಮಣರು ಅವಶ್ಯವಾಗಿ ಬೇಕು. ಈಗ ಬ್ರಾಹ್ಮಣರಿಗೆ ತಂದೆಯು ಓದಿಸುತ್ತಿದ್ದಾರೆ ಅಂದಮೇಲೆ ಇಂತಹ ತಂದೆಗೆ ವಿಚ್ಛೇದನ ಕೊಡುವುದೇ! ತಂದೆಯು ತಿಳಿಸುತ್ತಾರೆ – ಆಶ್ಚರ್ಯವೆನಿಸುವಂತೆ ನನ್ನವರಾಗುತ್ತಾರೆ, ಜ್ಞಾನವನ್ನು ಕೇಳುತ್ತಾರೆ ಆದರೂ ಮತ್ತೆ ಹೋಗಿ ಮಾಯೆಗೆ ವಶರಾಗುತ್ತಾರೆ. ವಿರೋಧಿಗಳಾಗಿ ನನ್ನ ನಿಂದನೆ ಮಾಡಿಸುತ್ತಾರೆ, ಅಂತಹ ಸದ್ಗುರುವಿನ ನಿಂದಕರಿಗೆ ಸ್ವರ್ಗದಲ್ಲಿ ನೆಲೆಯಿಲ್ಲವೆಂದು ಹೇಳಲಾಗುತ್ತದೆ. ಇದನ್ನು ಸಾಮಾನ್ಯ ಗುರುಗಳಿಗೆ ಹೇಳಿ ಬಿಟ್ಟಿದ್ದಾರೆ ಆದರೆ ಅವರಂತೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಅವರು ಸದ್ಗತಿದಾತರಲ್ಲ. ಎಲ್ಲಾ ಆತ್ಮರ ತಂದೆ, ಶಿಕ್ಷಕ, ಸದ್ಗುರು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ, ಅವರೇ ಎಲ್ಲರ ಉದ್ಧಾರ ಮಾಡಲು ಬಂದಿದ್ದಾರೆ. ಮುಂದೆ ಹೋದಂತೆ ತಿಳಿದುಕೊಳ್ಳುವರು ನಂತರ ಟೂಲೇಟ್ ಆಗಿ ಬಿಡುವುದು. ಅವರು ಮತ್ತೆ ತಮ್ಮ ಧರ್ಮದಲ್ಲಿಯೇ ಹೊರಟು ಹೋಗುವರು. ಶ್ರೇಷ್ಠಾತಿ ಶ್ರೇಷ್ಠವಾದುದು ದೇವಿ-ದೇವತಾ ಧರ್ಮವಾಗಿದೆ, ಅದಕ್ಕಿಂತಲೂ ಶ್ರೇಷ್ಠರು ನೀವು ಬ್ರಾಹ್ಮಣರಾಗಿದ್ದೀರಿ. ತಂದೆಯ ಜೊತೆಯಲ್ಲಿ ಕುಳಿತಿದ್ದೀರಿ. ನಿಮಗೆ ಓದಿಸುವವರು ವಿಚಿತ್ರ ಮತ್ತು ವಿದೇಹಿಯಾಗಿದ್ದಾರೆ. ಆ ತಂದೆಯು ತಿಳಿಸುತ್ತಾರೆ – ನನಗೆ ದೇಹವಿಲ್ಲ, ನನಗೆ ಶಿವನೆಂದು ಹೇಳುತ್ತೀರಿ, ನನ್ನ ಹೆಸರು ಬದಲಾಗುವುದಿಲ್ಲ. ಮತ್ತೆಲ್ಲರ ಶರೀರಗಳ ಹೆಸರು ಬದಲಾಗುತ್ತದೆ. ನಾನು ಪರಮ ಆತ್ಮನಾಗಿದ್ದೇನೆ, ನನ್ನ ಜನನ ಪತ್ರವನ್ನು ಯಾರೂ ಬರೆಯಲು ಸಾಧ್ಯವಿಲ್ಲ. ಯಾವಾಗ ಬೇಹದ್ದಿನ ರಾತ್ರಿಯಾಗುವುದೋ ಆಗ ನಾನು ದಿನವನ್ನಾಗಿ ಮಾಡಲು ಬರುತ್ತೇನೆ. ಈಗ ಸಂಗಮವಾಗಿದೆ, ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಂಡು ನಂತರ ಧಾರಣೆ ಮಾಡಿಕೊಳ್ಳಬೇಕು, ಸ್ಮೃತಿಯಲ್ಲಿ ತರಬೇಕಾಗಿದೆ. ಇಲ್ಲಿ ನೀವು ಮಕ್ಕಳು ಬರುತ್ತೀರೆಂದರೆ ಬಿಡುವು ಸಿಗುತ್ತದೆ. ಇಲ್ಲಿ ಬಹಳ ಚೆನ್ನಾಗಿ ವಿಚಾರ ಸಾಗರ ಮಂಥನ ಮಾಡಬಹುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಗೃಹಸ್ಥ ವ್ಯವಹಾರದಲ್ಲಿದ್ದರೂ ತಮ್ಮ ಸರ್ವೋತ್ತಮ ಕುಲದ ಸ್ಮೃತಿಯಿಂದ ಕಮಲ ಪುಷ್ಫ ಸಮಾನ ಪವಿತ್ರರಾಗಬೇಕಾಗಿದೆ. ಎಂದಿಗೂ ಸದ್ಗುರುವಿನ ನಿಂದನೆ ಮಾಡಿಸಬಾರದು.

2. ಶ್ರೀಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯನ್ನು ಮಾಡಬೇಕಾಗಿದೆ. ಸ್ವದರ್ಶನ ಚಕ್ರಧಾರಿಗಳಾಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ. ಸಮಯ ಸಿಕ್ಕಿದರೆ ಅವಶ್ಯವಾಗಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.

ವರದಾನ:-

ತಮ್ಮ ಚಿಂತನೆಯಲ್ಲಿದ್ದರೆ ನಶೆಯೇರುತ್ತದೆ ಎಂದು ಹೇಳಲಾಗುತ್ತದೆ, ಅನ್ಯರ ಸಂಪಾದನೆಯಲ್ಲೆಂದಿಗೂ ಕಣ್ಣು ಹೋಗಬಾರದು (ಆಸೆಯುಂಟಾಗಬಾರದು). ಅನ್ಯರ ನಶೆಯನ್ನು ಗುರಿಯನ್ನಾಗಿ ಮಾಡಿಕೊಳ್ಳುವ ಬದಲು ಬಾಪ್ದಾದಾರವರ ಗುಣ ಹಾಗೂ ಕರ್ತವ್ಯವನ್ನು ಗುರಿಯನ್ನಾಗಿಸಿಕೊಳ್ಳಿರಿ. ಬಾಪ್ದಾದಾರವರ ಜೊತೆ ಅಧರ್ಮದ ವಿನಾಶ ಮತ್ತು ಸತ್ಯ ಧರ್ಮದ ಸ್ಥಾಪನೆಯ ಕರ್ತವ್ಯದಲ್ಲಿ ಸಹಯೋಗಿಯಾಗಿರಿ. ಅಧರ್ಮದ ವಿನಾಶ ಮಾಡುವವರು ಧರ್ಮದ ಕಾರ್ಯ ಅಥವಾ ದೈವೀ ಮರ್ಯಾದೆಯನ್ನು ಮುರಿಯುವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಅವರು ಮರ್ಯಾದಾ ಪುರುಷೋತ್ತಮರಾಗಿರುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top