15 June 2021 KANNADA Murli Today | Brahma Kumaris

Read and Listen BK Murli Of 15 June 2021 in Kannada Murli Today | Daily Murli Online

June 15, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಅತೀಂದ್ರಿಯ ಸುಖದ ಅನುಭವ ಮಾಡಲು ಸದಾ ಇದೇ ಸ್ಮೃತಿಯಲ್ಲಿರಿ, ನಾವು ಯಾರ ಮಕ್ಕಳಾಗಿದ್ದೇವೆ, ಒಂದುವೇಳೆ ತಂದೆಯನ್ನು ಮರೆತರೆ ಸುಖವು ಮಾಯವಾಗುವುದು”

ಪ್ರಶ್ನೆ:: -

ತಂದೆಯನ್ನು ಮಿಲನ ಮಾಡುವ ಸ್ಥಿರವಾದ ಖುಷಿ ಯಾವ ಮಕ್ಕಳಿಗೆ ಇರುತ್ತದೆ?

ಉತ್ತರ:-

ಯಾವ ಮಕ್ಕಳು ಒಬ್ಬರೊಂದಿಗೆ ತಮ್ಮ ಸರ್ವ ಸಂಬಂಧಗಳನ್ನು ಜೋಡಿಸಿರುವರೋ, ಯಾರು ಒಬ್ಬ ತಂದೆಯ ನೆನಪಿನಲ್ಲಿರುವ ಪರಿಶ್ರಮ ಪಡುವರೋ, ಯಾವುದೇ ದೇಹಧಾರಿಯನ್ನು ನೆನಪು ಮಾಡುವುದಿಲ್ಲವೋ, ಅವರಿಗೇ ಸ್ಥಿರವಾದ ಖುಷಿಯಿರುತ್ತದೆ. ಒಂದುವೇಳೆ ದೇಹಧಾರಿಯ ನೆನಪಿದ್ದರೆ ಬಹಳ ಅಳಬೇಕಾಗುವುದು. ವಿಶ್ವದ ಮಾಲೀಕರಾಗುವವರು ಎಂದೂ ಅಳುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಬಾಲ್ಯದ ದಿನಗಳನ್ನು ಮರೆಯಬಾರದು………..

ಓಂ ಶಾಂತಿ. ತಂದೆಯು ಹೇಳುತ್ತಾರೆ – ಮಧುರ ಮಕ್ಕಳೇ, ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಎಂಬುದನ್ನು ಮರೆಯಬೇಡಿ, ಇದನ್ನು ಮರೆತರೆ ತಮ್ಮನ್ನು ಅಳುವಂತೆ ಮಾಡಿಕೊಳ್ಳುತ್ತೀರಿ. ಛೀ ಛೀ ಪ್ರಪಂಚದ ಕಡೆ ಬುದ್ಧಿಯು ಹೊರಟು ಹೋಗುವುದು. ತಂದೆಯ ನೆನಪಿನಲ್ಲಿರುವುದರಿಂದ ಅತೀಂದ್ರಿಯ ಸುಖವು ಭಾಸವಾಗುತ್ತದೆ, ತಂದೆಯನ್ನು ಮರೆತರೆ ಆ ಸುಖವೂ ಮಾಯವಾಗುವುದು. ಪ್ರತೀ ಘಳಿಗೆ ನೆನಪಿರಬೇಕು, ನಾವು ತಂದೆಯ ಮಕ್ಕಳಾಗಿದ್ದೇವೆ ಎಂದು. ಇಲ್ಲದಿದ್ದರೆ ತಮ್ಮನ್ನು ಅಳುವಂತೆ ಮಾಡಿಕೊಳ್ಳುತ್ತೀರಿ. ಎಲ್ಲರೂ ಭಗವಂತನ ಮಕ್ಕಳಾಗಿದ್ದಾರೆ. ಎಲ್ಲರೂ ಸಹ ಹೇ ತಂದೆಯೇ, ಹೇ ಪರಮಪಿತ ಪರಮಾತ್ಮ, ರಕ್ಷಣೆ ಮಾಡಿ ಎಂದು ಹೇಳುತ್ತಾರೆ ಆದರೆ ತಂದೆಯ ರಕ್ಷಣೆ ಯಾವಾಗ ಸಿಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ತಂದೆಯಿಂದ ನಮಗೆ ಮುಕ್ತಿ-ಜೀವನ್ಮುಕ್ತಿಯು ಯಾವಾಗ ಸಿಗುವುದು ಎಂಬುದನ್ನು ಸಾಧು-ಸಂತ ಮೊದಲಾದವರೂ ಸಹ ತಿಳಿದುಕೊಂಡಿಲ್ಲ ಏಕೆಂದರೆ ಭಗವಂತನನ್ನು ಕಣ-ಕಣದಲ್ಲಿದ್ದಾರೆಂದು ಹೇಳಿ ಬಿಟ್ಟಿದ್ದಾರೆ. ಈಗ ನೀವು ಮಕ್ಕಳು ಬೇಹದ್ದಿನ ತಂದೆಯನ್ನು ಅರಿತುಕೊಂಡಿದ್ದೀರಿ. ಅವರು ಪ್ರಿಯಾತಿ ಪ್ರಿಯ ತಂದೆಯಾಗಿದ್ದಾರೆ, ಅವರಿಗಿಂತ ಪ್ರಿಯ ವಸ್ತು ಇನ್ನ್ಯಾವುದೂ ಇಲ್ಲ. ಇಂತಹ ತಂದೆಯನ್ನು ಅರಿತುಕೊಳ್ಳದೇ ಇರುವುದು ಬಹಳ ದೊಡ್ಡ ತಪ್ಪಾಗಿದೆ. ಶಿವ ಜಯಂತಿಯನ್ನು ಏಕೆ ಆಚರಿಸುತ್ತಾರೆ? ಅವರು ಯಾರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಹೇಳುತ್ತಾರೆ – ನೀವು ಎಷ್ಟು ಬುದ್ಧಿಹೀನರಾಗಿ ಬಿಟ್ಟಿದ್ದೀರಿ, ಮಾಯಾ ರಾವಣನು ನಿಮ್ಮನ್ನು ಹೇಗೆ ಮಾಡಿ ಬಿಟ್ಟಿದ್ದಾನೆ! ಈಗ ನೀವು ಮಕ್ಕಳಿಗೆ ತಿಳಿದಿದೆ – ಇದು ನಮ್ಮ ಜನ್ಮ ಭೂಮಿಯಾಗಿದೆ. ನಾನು ಪ್ರತೀ 5000 ವರ್ಷಗಳ ನಂತರ ಬರುತ್ತೇನೆ. ಮನುಷ್ಯರು 40 ಸಾವಿರ ವರ್ಷಗಳ ನಂತರ ಯಾವಾಗ ಈ ಕಲಿಯುಗವು ಮುಗಿಯುವುದೋ ಆಗ ಬರುತ್ತಾರೆಂದು ಹೇಳುತ್ತಾರೆ. ತ್ರಿಮೂರ್ತಿಯ ಚಿತ್ರವನ್ನೂ ತೋರಿಸಲಾಗುತ್ತದೆ. ತ್ರಿಮೂರ್ತಿ ಮಾರ್ಗ ಎಂಬ ಹೆಸರನ್ನೂ ಇಟ್ಟಿದ್ದಾರೆ ಆದರೆ ತ್ರಿ-ಮೂರ್ತಿ ಬ್ರಹ್ಮಾ-ವಿಷ್ಣು-ಶಂಕರನನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮನು ಏನು ಮಾಡಿ ಹೋದರು? ವಿಷ್ಣು ಮತ್ತು ಶಂಕರರು ಏನು ಮಾಡುತ್ತಾರೆ? ಎಲ್ಲಿರುತ್ತಾರೆ? ಏನನ್ನೂ ಅರಿತುಕೊಂಡಿಲ್ಲ, ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ತಂದೆಯು ರಚಯಿತನಾಗಿದ್ದಾರೆ, ಅವರದು ಇದು ಎಷ್ಟು ದೊಡ್ಡ ರಚನೆಯಾಗಿದೆ! ಎಷ್ಟು ಬೇಹದ್ದಿನ ನಾಟಕವಾಗಿದೆ! ಇದರಲ್ಲಿ ಬೇಹದ್ದಿನ ಮನುಷ್ಯರಿರುತ್ತಾರೆ. ಇಂದಿಗೆ 5000 ವರ್ಷಗಳ ಮೊದಲು ಯಾವಾಗ ಸತ್ಯಯುಗವಿತ್ತೋ, ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೋ ಆಗ ಮತ್ತ್ಯಾವುದೇ ರಾಜ್ಯವಿರಲಿಲ್ಲ. ಭಗವತಿ ಶ್ರೀಲಕ್ಷ್ಮೀ, ಭಗವಾನ್ ಎಂದು ಶ್ರೀನಾರಾಯಣನಿಗೆ ಹೇಳಲಾಗುತ್ತದೆ. ರಾಮ-ಸೀತೆಗೂ ಸಹ ಭಗವಾನ್ ರಾಮ, ಭಗವತಿ ಸೀತೆಯೆಂದು ಹೇಳುತ್ತಾರೆ. ಈ ಭಗವಾನ್ ನಾರಾಯಣ, ಭಗವತಿ ಲಕ್ಷ್ಮಿ ಎಲ್ಲಿಂದ ಬಂದರು? ರಾಜ್ಯ ಮಾಡಿ ಹೋಗಿದ್ದಾರೆ ಆದರೆ ಅವರ ಜೀವನ ಚರಿತ್ರೆಯನ್ನು ಒಬ್ಬರೂ ತಿಳಿದುಕೊಂಡಿಲ್ಲ. ಕೇವಲ ಹೇ ಭಗವಂತ, ದುಃಖಹರ್ತ-ಸುಖಕರ್ತ ಎಂದು ಹಾಡುತ್ತಿರುತ್ತಾರೆ ಆದರೆ ಅವರು ಹೇಗೆ ದುಃಖಹರ್ತ-ಸುಖಕರ್ತನಾಗಿದ್ದಾರೆ ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಅವರು ಎಲ್ಲರಿಗೂ ಯಾವ ಸುಖವನ್ನು ಕೊಟ್ಟರು? ಯಾವಾಗ ಎಲ್ಲರ ದುಃಖವನ್ನು ದೂರ ಮಾಡಿದರು? ಏನನ್ನೂ ತಿಳಿದುಕೊಂಡಿಲ್ಲ.

ನೀವು ಮಕ್ಕಳು ಈಗ ಭಗವತಿ ಲಕ್ಷ್ಮಿ, ಭಗವಾನ್ ನಾರಾಯಣರಾಗಲು ಇಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ನಿಮಗೆ ತಿಳಿದಿದೆ, ಭಗವತಿ ಸೀತೆ ಭಗವಾನ್ ರಾಮನು ಆಗಬೇಕಾಗಿದೆ. ಸತ್ಯಯುಗದಲ್ಲಿ 8 ಜನ್ಮಗಳನ್ನು ಪೂರ್ಣ ಮಾಡಿ ನಂತರ ರಾಮ-ಸೀತೆಯ ರಾಜ್ಯದಲ್ಲಿ ಬರುವವರಿದ್ದೀರಿ. ನೀವಿಲ್ಲಿ 21 ಜನ್ಮಗಳಿಗಾಗಿ ಬೇಹದ್ದಿನ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ. ನೀವು ಭಗವತಿ-ಭಗವಾನ್ ಸ್ವರ್ಗದ ಮಾಲೀಕರಾಗುತ್ತಿದ್ದೀರಿ. ಸ್ವರ್ಗವೆಂದರೆ ಯಾವುದೇ ಆಕಾಶದಲ್ಲಿಲ್ಲ, ಇದೂ ಸಹ ಯಾರಿಗೂ ತಿಳಿದಿಲ್ಲ, ಸಂಪೂರ್ಣ ತುಚ್ಛ ಬುದ್ಧಿಯವರಾಗಿದ್ದಾರೆ. ಇಂತಹವರು ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ ಆದರೆ ತಿಳಿದುಕೊಳ್ಳುವುದೇನೂ ಇಲ್ಲ. ಒಳ್ಳೆಯದು – ಕ್ರಿಶ್ಚಿಯನ್ನರು, ಬೌದ್ಧರೆಲ್ಲರೂ ಸ್ವರ್ಗಕ್ಕೆ ಹೋಗುವರೇ? ಅವರು ಕೊನೆಯಲ್ಲಿ ಬಂದು ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ಅಂದಮೇಲೆ ಅವರು ಸ್ವರ್ಗದಲ್ಲಿ ಬರಲು ಹೇಗೆ ಸಾಧ್ಯ? ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಎಂಬುದೂ ಸಹ ಅವರಿಗೆ ತಿಳಿದಿಲ್ಲ. ಸನ್ಯಾಸಿಗಳು ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಯಿತು ಎಂದು ಹೇಳುತ್ತಾರೆ. ಇನ್ನೂ ಕೆಲವರು ನಿರ್ವಾಣ ಧಾಮಕ್ಕೆ ಹೋದರೆಂದು ಹೇಳುತ್ತಾರೆ. ನಿರ್ವಾಣದಲ್ಲಿಯೂ ಲೋಕವಿದೆಯಲ್ಲವೆ, ಅದಂತೂ ನಿವಾಸ ಸ್ಥಾನವಾಗಿದೆ. ಜ್ಯೋತಿಯು ಜ್ಯೋತಿಯಲ್ಲಿ ಲೀನವಾಗುವ ಮಾತಿಲ್ಲ. ಜ್ಯೋತಿಯಲ್ಲಿ ಸೇರಿ ಹೋಗುವಂತಿದ್ದರೆ ಮತ್ತೆ ಆತ್ಮವೇ ಸಮಾಪ್ತಿಯಾಗಿ ಬಿಡುವುದು ಮತ್ತು ಆಟವೇ ಮುಕ್ತಾಯವಾಗುತ್ತದೆ. ಈ ಡ್ರಾಮಾದಿಂದ ಯಾವುದೇ ಆತ್ಮನು ಮುಕ್ತನಾಗಲು ಸಾಧ್ಯವಿಲ್ಲ. ಯಾರೂ ಸಹ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ಗೀತೆಯ ಅರ್ಥವನ್ನೂ ಸಹ ಯಾರೂ ತಿಳಿದುಕೊಳ್ಳುವುದಿಲ್ಲ. ಜೀವನ್ಮುಕ್ತಿಯ ಅರ್ಥವಾಗಲಿ, ಆತ್ಮ-ಪರಮಾತ್ಮನ ಅರ್ಥವಾಗಲಿ ತಿಳಿದುಕೊಂಡಿಲ್ಲ. ತಂದೆಯು ಹೇಳುತ್ತಾರೆ – ನಿಮ್ಮ ಚಹರೆಯಂತೂ ಮನುಷ್ಯರದಾಗಿದೆ, ಈ ದೇವತೆಗಳದೂ ಆಗಿತ್ತು, ಸತ್ಯಯುಗದ ಆದಿಯಲ್ಲಿ ದೇವತೆಗಳಿದ್ದರು. ಅವರ ರಾಜ್ಯವು 2500 ವರ್ಷಗಳು ನಡೆಯಿತು, ಉಳಿದ 2500 ವರ್ಷಗಳಲ್ಲಿ ಮತ್ತೆಲ್ಲಾ ಧರ್ಮದವರು ಬರುತ್ತಾರೆ. ಮನುಷ್ಯರು 5000 ವರ್ಷಗಳ ಬದಲು ಕಲ್ಪವೃಕ್ಷದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಆದರೆ ನಿಮ್ಮ ಮಾತನ್ನು ತಿಳಿದುಕೊಳ್ಳುವುದಕ್ಕಾದರೂ ಬರುವುದಿಲ್ಲ. ಹಾ! ಯಾರು ಕಲ್ಪದ ಮೊದಲು ಬಂದು ತಿಳಿದುಕೊಂಡಿದ್ದರೋ ಅವರೇ ಬರುತ್ತಾರೆ. ಮೊದಲು ತಿಳಿಸಬೇಕಾಗಿದೆ – ಒಂದು ಹದ್ದಿನ ಸನ್ಯಾಸವಾಗಿದೆ, ಸನ್ಯಾಸಿಗಳು ಮನೆ-ಮಠವನ್ನು ಬಿಟ್ಟು ಹೋಗಿ ಕಾಡಿನಲ್ಲಿರುತ್ತಾರೆ. ಮೊದಲಿಗೆ ಅವರು ಸತೋಪ್ರಧಾನರಾಗಿದ್ದರು, ಈಗ ತಮೋಪ್ರಧಾನರಾಗಿದ್ದಾರೆ ಆದ್ದರಿಂದ ಕಾಡಿನಿಂದ ಮರಳಿಬಂದು ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟಿಸಿದ್ದಾರೆ. ಈ ಸನ್ಯಾಸಿಗಳೂ ಸಹ ಪವಿತ್ರತೆಯ ಆಧಾರದ ಮೇಲೆ ಭಾರತವನ್ನು ಸ್ವಲ್ಪ ಶೀತಲ ಮಾಡಿದ್ದಾರೆ, ಭಾರತದ ಸೇವೆ ಮಾಡಿದ್ದಾರೆ. ಆ ಸನ್ಯಾಸ ಧರ್ಮವೇ ಇರದಿದ್ದರೆ ಭಾರತವು ಒಮ್ಮೆಲೆ ವಿಕಾರಗಳಲ್ಲಿ ಸುಟ್ಟು ಹೋಗುತ್ತಿತ್ತು, ಪತಿತವಾಗಿ ಬಿಡುತ್ತಿತ್ತು. ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ಅವರಲ್ಲಿ ಮೊದಲು ಪವಿತ್ರತೆಯ ಶಕ್ತಿಯಿತ್ತು, ಅದರಿಂದ ಭಾರತವನ್ನು ಸ್ವಲ್ಪ ಶೀತಲಗೊಳಿಸಿದ್ದಾರೆ. ಈ ದೇವತೆಗಳ ರಾಜ್ಯವಿದ್ದಾಗ ಭಾರತವು ಎಷ್ಟೊಂದು ಸಾಹುಕಾರನಾಗಿತ್ತು, ಇವರ ಎಷ್ಟು ದೊಡ್ಡ-ದೊಡ್ಡ ವಜ್ರ ವೈಡೂರ್ಯಗಳ ಮಹಲುಗಳಿತ್ತು, ಅವೆಲ್ಲವೂ ಎಲ್ಲಿ ಹೋದವು? ಎಲ್ಲವೂ ಕೆಳಗಡೆ ಹೊರಟು ಹೋಯಿತು. ಲಂಕೆ ಮತ್ತು ದ್ವಾರಿಕೆಯು ಸಮುದ್ರದ ಕೆಳಗಡೆ ಹೊರಟು ಹೋಯಿತೆಂದು ಹೇಳುತ್ತಾರೆ, ಈಗಂತೂ ಇಲ್ಲ. ಚಿನ್ನದ ಮಹಲು ಇತ್ಯಾದಿ ಇತ್ತಲ್ಲವೆ. ಯಾವಾಗ ಮಂದಿರಗಳಲ್ಲಿಯೇ ವಜ್ರ ವೈಡೂರ್ಯಗಳನ್ನು ಅಲಂಕರಿಸುತ್ತಾರೆ ಅಂದಮೇಲೆ ಅಲ್ಲಿ ಏನು ತಾನೆ ಇರುವುದಿಲ್ಲ? ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು, ತಂದೆಯು ಪುನಃ ಬಂದಿದ್ದಾರೆ, ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಒಬ್ಬರನ್ನೇ ನೆನಪು ಮಾಡಬೇಕಾಗಿದೆ ಅದರಿಂದ ವಿಕರ್ಮಗಳು ವಿನಾಶವಾಗುತ್ತವೆ ಆದರೆ ಅವರನ್ನು ಮರೆತು ಹೋಗುತ್ತೀರಿ ಮತ್ತು ದೇಹಧಾರಿಯ ನೆನಪು ಬಂದು ಬಿಡುತ್ತದೆ. ದೇಹಧಾರಿಗಳ ನೆನಪಿನಿಂದ ಏನೂ ಲಾಭವಿಲ್ಲ. ತಂದೆಯು ಹೇಳುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿರಿ, ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ, ತಾಯಿ ಸತ್ತರೂ ಸಹ ಹಲ್ವ ತಿನ್ನಿರಿ… ಒಬ್ಬ ತಂದೆಯ ನೆನಪಿನಿಂದಲೇ ಸಂಪಾದನೆಯಾಗುವುದು. ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಈ ಸಮಯದಲ್ಲಿ ತಂದೆಯನ್ನು ನೆನಪು ಮಾಡದಿದ್ದರೆ ನಂತರ ಬಹಳ ಪಶ್ಚಾತ್ತಾಪ ಪಡಬೇಕಾಗುವುದು, ಅಳಬೇಕಾಗುವುದು. ವಿಶ್ವದ ಮಾಲೀಕರಾಗುವವರಿಗೆ ಅಳುವ ಅವಶ್ಯಕತೆಯಾದರೂ ಏನಿದೆ! ನೀವು ತಂದೆಯನ್ನು ಮರೆತು ಹೋಗುತ್ತೀರಿ, ಆಗಲೇ ಮಾಯೆಯು ಪೆಟ್ಟು ಕೊಡುತ್ತದೆ. ಆದ್ದರಿಂದ ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ – ಮಕ್ಕಳೇ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಅಮರನಾಥನು ಅಮರಪುರಿಯಲ್ಲಿ ಕೇವಲ ಒಬ್ಬ ಪಾರ್ವತಿಗೆ ಅಮರ ಕಥೆಯನ್ನು ತಿಳಿಸಿರುವುದಿಲ್ಲ. ಅವಶ್ಯವಾಗಿ ಅನೇಕರಿರುತ್ತಾರೆ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರಿಗೂ ತಂದೆಯು ತಿಳಿಸುತ್ತಾರೆ – ಈಗ ಪತಿತರಾಗಬೇಡಿ, ಈ ಅಂತಿಮ ಜನ್ಮ ಪವಿತ್ರರಾಗಿರಿ. ಅಲ್ಲಿ ಸ್ವರ್ಗದಲ್ಲಿ ಯಾವುದೇ ವಿಕಾರವಿರುವುದಿಲ್ಲ, ಒಂದುವೇಳೆ ಅಲ್ಲಿಯೂ ವಿಕಾರವಿರುವುದಾದರೆ ಸ್ವರ್ಗ ಮತ್ತು ನರಕದಲ್ಲಿ ಅಂತರವಾದರೂ ಏನು ಉಳಿಯಿತು? ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರು….. ಎಂದು ದೇವಿ-ದೇವತೆಗಳ ಮಹಿಮೆ ಹಾಡುತ್ತಾರೆ. ಭಗವಂತನು ಬಂದು ಭಗವಾನ್-ಭಗವತಿಯರನ್ನಾಗಿಯೇ ಮಾಡುತ್ತಾರೆ, ಭಗವಂತನ ಹೊರತು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಭಗವಂತ ಒಬ್ಬರೇ ಆಗಿದ್ದಾರೆ, ಭಗವಾನ್-ಭಗವತಿಯ ರಾಜಧಾನಿಯೆಂದು ಗಾಯನವಿದೆ, ಯಥಾರಾಜ-ರಾಣಿ ತಥಾ ಪ್ರಜೆಗಳು, ಅವರೇ ಆಗಿರುವರು. ಆದರೆ ಅವರಿಗೆ ಭಗವಾನ್-ಭಗವತಿಯೆಂದು ಹೇಳಲಾಗುವುದಿಲ್ಲ ಆದ್ದರಿಂದ ಆದಿ ಸನಾತನ ದೇವಿ-ದೇವತಾ ಧರ್ಮವೆಂದು ಹೇಳಲಾಗುತ್ತದೆ. ಇದು ಯಾರಿಗೂ ತಿಳಿದಿಲ್ಲ. ಇವರ (ಬ್ರಹ್ಮಾ) ಆತ್ಮಕ್ಕೂ ತಂದೆಯೇ ತಿಳಿಸುತ್ತಾರೆ. ಒಂದು ತಂದೆಯ ಆತ್ಮ, ಇನ್ನೊಂದು ದಾದಾರವರ ಆತ್ಮ. ಇಬ್ಬರಿದ್ದಾರಲ್ಲವೆ. ಒಂದು ಆತ್ಮವು 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ, ಇನ್ನೊಂದು ಆತ್ಮವು ಪುನರ್ಜನ್ಮ ರಹಿತ ಆಗಿದ್ದಾರೆ. ತಂದೆ ಎಂದೂ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ, ಒಂದೇ ಬಾರಿ ಬಂದು ಇಡೀ ವಿಶ್ವವನ್ನು ಪವಿತ್ರವನ್ನಾಗಿ ಮಾಡಲು ನಮಗೆ ರಾಜಯೋಗವನ್ನು ಕಲಿಸುತ್ತಾರೆ. ತಂದೆಯು ನಿಮಗೆ ತಿಳಿಸುತ್ತಾರೆ – ನಾನು ಇವರಲ್ಲಿ ಪ್ರವೇಶ ಮಾಡಿದ್ದೇನೆ, ಇವರು 84 ಜನ್ಮಗಳನ್ನು ಭೋಗಿಸಿ ಬಂದಿದ್ದಾರೆ. ಈಗ ಇವರದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ನಾನು ನಿರಾಕಾರನಾಗಿದ್ದೇನೆ ಅಂದಮೇಲೆ ಮಕ್ಕಳಿಗೆ ಹೇಗೆ ಬಂದು ರಾಜಯೋಗವನ್ನು ಕಲಿಸಲಿ? ಪ್ರೇರಣೆಯಿಂದ ಏನೂ ನಡೆಯುವುದಿಲ್ಲ, ಕೃಷ್ಣ ಭಗವಾನುವಾಚ ಅಂತೂ ಇರಲು ಸಾಧ್ಯವಿಲ್ಲ. ಅವರು ಹೇಗೆ ಬರಲು ಸಾಧ್ಯ? ಕೃಷ್ಣನು ಸತ್ಯಯುಗದ ಮೊದಲ ರಾಜ ಕುಮಾರ, 16 ಕಲಾ ಸಂಪೂರ್ಣ… ನಂತರ ತ್ರೇತಾದಲ್ಲಿ 14 ಕಲಾ ಸಂಪೂರ್ಣರಿರುತ್ತಾರೆ ಅಂದಮೇಲೆ ಕೃಷ್ಣನನ್ನು ದ್ವಾಪರದಲ್ಲಿ ಏಕೆ ತೆಗೆದುಕೊಂಡು ಹೋಗಿದ್ದಾರೆ? ಕೃಷ್ಣನಂತೂ ಮೊದಲು ಬರಬೇಕಲ್ಲವೆ. ತಂದೆಯು ತಿಳಿಸುತ್ತಾರೆ – ಮೊದಲು ತಂದೆಯನ್ನು ನೆನಪು ಮಾಡಿ, ಇಲ್ಲದಿದ್ದರೆ ಮಾಯೆಯು ಒಮ್ಮೆಲೆ ಪೆಟ್ಟು ಕೊಡುವುದು. ಒಂದು ಮುಟ್ಟಿದರೆ ಮುನಿ ಎಂಬ ಗಿಡವು ಇರುತ್ತದೆ, ಕೈ ಹಾಕಿದರೆ ಸಾಕು ಅದು ಮುದುಡಿಕೊಳ್ಳುತ್ತದೆ. ತಂದೆಯನ್ನು ನೆನಪು ಮಾಡದಿದ್ದರೆ ನಿಮ್ಮದೂ ಸಹ ಇದೇ ಸ್ಥಿತಿಯಾಗುತ್ತದೆ ಮತ್ತು ಸಮಾಪ್ತಿಯಾಗುವಿರಿ. ಗೀತೆಯಲ್ಲಿಯೂ ಕೇಳಿದಿರಿ, ಬಾಲ್ಯದ ದಿನಗಳನ್ನು ಮರೆಯಬಾರದು. ತಂದೆಯನ್ನು ಮರೆತರೆ ಎಲ್ಲಾದರೂ ಒಂದು ಕಡೆ ಪೆಟ್ಟು ಬೀಳುತ್ತದೆ. ತಂದೆಯು ಹೇಳುತ್ತಾರೆ, ನೀವು ನನ್ನ ಮಕ್ಕಳಲ್ಲವೆ. ಈ ಶರೀರವಂತೂ ವಿಕಾರದಿಂದ ಜನಿಸಿದೆ. ಅವರು ಇವರ ಲೌಕಿಕ ತಂದೆ-ತಾಯಿಯಾಗಿದ್ದಾರೆ. ಇಲ್ಲಿ ಪಾರಲೌಕಿಕ ತಂದೆಯಿದ್ದಾರೆ ಮತ್ತು ಬ್ರಹ್ಮನಿಗೆ ಆಲೌಕಿಕ ತಂದೆಯೆಂದು ಹೇಳಲಾಗುತ್ತದೆ. ಇವರು ಹದ್ದಿನ ತಂದೆಯಾಗಿದ್ದರು, ನಂತರ ಬೇಹದ್ದಿನವರಾಗಿ ಬಿಟ್ಟರು. ಈಗ ನೋಡಿ, ಈ ಲೌಕಿಕ ಮಗಳೂ (ನಿರ್ಮಲ ಶಾಂತ ದಾದಿ) ಕುಳಿತಿದ್ದಾರೆ. ಇವರಿಗೆ ಲೌಕಿಕ ತಂದೆಯೂ ಆಗಿದ್ದಾರೆ, ಅಲೌಕಿಕ ತಂದೆಯೂ ಆಗಿದ್ದಾರೆ, ಪಾರಲೌಕಿಕ ತಂದೆಯೂ ಇದ್ದಾರೆ. ಬಾಕಿ ಶಿವ ತಂದೆಗೆ ಸಹೋದರ-ಸಹೋದರಿಯರಿಲ್ಲ. ಲೌಕಿಕ ಸಹೋದರ-ಸಹೋದರಿಯರಾಗಲಿ, ಅಲೌಕಿಕ ಮತ್ತು ಪಾರಲೌಕಿಕವಾಗಲಿ ಇಲ್ಲ. ಎಷ್ಟು ಅಂತರವಿದೆ! ಒಬ್ಬ ತಂದೆಯ ಮಕ್ಕಳಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಇಂತಹ ತಂದೆಯೊಂದಿಗೆ ಸಂಬಂಧವನ್ನು ಜೋಡಿಸಬೇಕಾಗಿದೆ, ಸಮಯ ಹಿಡಿಸುತ್ತದೆ. ಶಿವ ತಂದೆಯ ನೆನಪಿನಲ್ಲಿರುವುದು ದೊಡ್ಡ ಪರಿಶ್ರಮವಾಗಿದೆ. ಕೆಲವರು 50 ವರ್ಷಗಳಿಂದ ಇರುವವರೂ ಸಹ ಇಡೀ ದಿನ ಶಿವ ತಂದೆಯನ್ನು ನೆನಪೂ ಮಾಡುವುದಿಲ್ಲ, ಇಂತಹವರೂ ಇದ್ದಾರೆ. ಮತ್ತೆಲ್ಲರನ್ನೂ ಮರೆತು ಒಬ್ಬ ತಂದೆಯನ್ನು ನೆನಪು ಮಾಡುವುದು ಬಹಳ-ಬಹಳ ಪರಿಶ್ರಮವಾಗಿದೆ. ಕೆಲವರು 1% ನೆನಪು ಮಾಡುತ್ತಾರೆ. ಕೆಲವರು 2%, ಕೆಲವರು 1/2% ನೆನಪು ಮಾಡುವುದೂ ವಿರಳ. ಇದು ಬಹಳ ದೊಡ್ಡ ಗುರಿಯಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಬಾಲ್ಯವನ್ನು ಮರೆಯಬೇಡಿ. ತಂದೆಯಿಂದ ಸ್ವರ್ಗದ ಆಸ್ತಿ ಸಿಗುತ್ತದೆ, ನೀವು ತಿಳಿದುಕೊಂಡಿದ್ದೀರಿ – ನಾವು ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಜೀವಿಸಿದ್ದಂತೆಯೇ ಸತ್ತು ತಂದೆಯ ಮಕ್ಕಳಾಗಿದ್ದೇವೆ. ಅಂದಮೇಲೆ ನಿಮಗೆ ಸ್ಥಿರವಾದ ಖುಷಿಯಿರಬೇಕು – ಓಹೋ! ನಾವು ಡಬಲ್ ಕಿರೀಟಧಾರಿಗಳಾಗುತ್ತೇವೆ! ಸತ್ಯಯುಗದಲ್ಲಿ ಈ ದೇವತೆಗಳಿಗೆ 16 ಕಲಾ ಸಂಪೂರ್ಣರು ಮತ್ತು 14 ಕಲಾ ಸಂಪೂರ್ಣರೆಂದು ಏಕೆ ಹೇಳುತ್ತಾರೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿದ್ದಾರೆಯೇ? ಅವರಿಗೆ ಏನೂ ಗೊತ್ತಿಲ್ಲ. ಈ ಭಕ್ತಿಮಾರ್ಗದ ಶಾಸ್ತ್ರಗಳು ಮುಂದಿನ ಕಲ್ಪದಲ್ಲಿಯೂ ಆಗುತ್ತವೆ. ಈ ಹಠಯೋಗ, ತೀರ್ಥ ಯಾತ್ರೆಗಳೆಲ್ಲವೂ ಕಲ್ಪದ ನಂತರವೂ ಇದೇ ರೀತಿ ಆಗುತ್ತವೆ ಆದರೆ ಇದರಿಂದೇನಾಗುವುದು? ಸ್ವರ್ಗದಲ್ಲಿ ಹೋಗುವರೇ? ಇಲ್ಲ. ಅನೇಕರು ರಿದ್ಧಿ ಸಿದ್ಧಿಯಿಂದ ಬಹಳ ಕೆಲಸ ಮಾಡುತ್ತಾರೆ. ಇಂತಹವರು ಅನೇಕರಿದ್ದಾರೆ. ಸಾವಿರಾರು ಮಂದಿ ಮನುಷ್ಯರು ಅವರ ಹಿಂದೆ ಬಿದ್ದಿರುತ್ತಾರೆ, ರಿದ್ಧಿ ಸಿದ್ಧಿಯಿಂದ ಗಡಿಯಾರ ಮೊದಲಾದ ವಸ್ತುವನ್ನು ತೆಗೆಯುತ್ತಾರೆ ಆದರೆ ಇದೆಲ್ಲವೂ ಅಲ್ಪಕಾಲಕ್ಕಾಗಿ ಎಂದು ತಿಳಿದುಕೊಂಡಿದ್ದಾರೆಯೇ! ಇದರಲ್ಲಿ ಬಹಳ ಪರಿಶ್ರಮ ಪಡಬೇಕಾಗುತ್ತದೆ. ಈ ರಿದ್ಧಿಸಿದ್ಧಿಯನ್ನು ಕಲಿಯುವುದಕ್ಕೂ ಒಂದು ಪುಸ್ತಕವಿರುತ್ತದೆ. ಲಕ್ಷಾಂತರ ಮಂದಿ ಅವರ ಹಿಂದೆ ಬಿದ್ದಿರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಮಗೆ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಇದೇನೂ ಉಳಿಯುವುದಿಲ್ಲ. ತಂದೆಯು ತಿಳಿಸುತ್ತಾರೆ – ನೀವು ಅಶರೀರಿಯಾಗಿ ಬಂದಿದ್ದಿರಿ, ಮತ್ತೆ ಶರೀರದ ಜೊತೆ ಪಾತ್ರವನ್ನಭಿನಯಿಸಿದಿರಿ. ಒಂದುವೇಳೆ 84 ಲಕ್ಷದ ಲೆಕ್ಕಾಚಾರವನ್ನು ತಿಳಿಸಿದ್ದೇ ಆದರೆ 12 ತಿಂಗಳು ಹಿಡಿಸುವುದು. ಆದರೆ ಇದು ಸಾಧ್ಯವಿಲ್ಲ, 84 ಜನ್ಮಗಳ ಲೆಕ್ಕವನ್ನು ತಿಳಿಸುವುದು ಬಹಳ ಸಹಜವಾಗಿದೆ. ನೀವೇ 84ರ ಚಕ್ರವನ್ನು ಸುತ್ತುತ್ತಾ ಇರುತ್ತೀರಿ. ಸೂರ್ಯವಂಶಿಯರಿದ್ದಾಗ ಚಂದ್ರವಂಶಿಯರಿರುವುದಿಲ್ಲ, ಸೂರ್ಯವಂಶಿ ಮನೆತನವು ಪೂರ್ಣವಾಯಿತು, ನಂತರ ಚಂದ್ರವಂಶಿಯರಾದರು.

ನೀವೀಗ ತಿಳಿದುಕೊಂಡಿದ್ದೀರಿ – ನಾವು ಬ್ರಾಹ್ಮಣ ವಂಶಿಯರೇ ನಂತರ ದೇವತಾ ವಂಶಿಯರಾಗಬೇಕಾಗಿದೆ. ಆದ್ದರಿಂದ ನಾವು ವಿದ್ಯೆಯನ್ನು ಓದುತ್ತಿದ್ದೇವೆ. ಏಣಿಯನ್ನು ಕೆಳಗಿಳಿಯುತ್ತಾ-ಇಳಿಯುತ್ತಾ ವೈಶ್ಯ, ಶೂದ್ರ ವಂಶಿಯರಾಗುತ್ತೇವೆ. ಈಗ ತಮ್ಮ 84 ಜನ್ಮಗಳ ಸ್ಮೃತಿ ಬಂದಿದೆ, ಈ ಚಕ್ರವನ್ನೂ ಸಹ ನೆನಪು ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡುವುದರಿಂದ ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ, ಪಾಪಗಳು ಕಳೆಯುತ್ತವೆ. ಚಕ್ರವನ್ನು ಅರಿತುಕೊಳ್ಳುವುದರಿಂದ ಚಕ್ರವರ್ತಿಗಳಾಗಿ ಬಿಡುತ್ತೀರಿ. ನಿಮಗೆ ತಿಳಿದಿದೆ, ಈ ಹಳೆಯ ಪ್ರಪಂಚವು ಸ್ಮಶಾನವಾಗುವುದಿದೆ, ಏನೂ ಉಳಿಯುವುದಿಲ್ಲ. ಎಲ್ಲವೂ ಸಮಾಪ್ತಿಯಾಗಿ ಬಿಡುವುದು, ರಾಮನೂ ಹೋದ ರಾವಣನೂ ಹೋದ…. ಸತ್ಯಯುಗದಲ್ಲಿ ರಾಮನ ಎಷ್ಟು ಚಿಕ್ಕ ಪರಿವಾರವಿರುತ್ತದೆ. ಈಗ ರಾವಣನ ಎಷ್ಟು ದೊಡ್ಡ ಪರಿವಾರವಿದೆ, ಮಕ್ಕಳಿಗೆ ತಿಳಿದಿದೆ – ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಪ್ರತೀ ಮಾತಿನಲ್ಲಿ ಪುರುಷಾರ್ಥ ಮೊದಲು. ತಂದೆಯು ಪುರುಷಾರ್ಥ ಮಾಡಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿರಿ. ಯಾವ ತಂದೆಯಿಂದ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆಯೋ ಅವರನ್ನೇ ನೀವು ನೆನಪು ಮಾಡುವುದಿಲ್ಲವೆ? ತಂದೆಯು ಸ್ಮೃತಿ ತರಿಸುತ್ತಾರೆ – ನೀವು ಸ್ವರ್ಗದ ಮಾಲೀಕರಾಗಿದ್ದಿರಿ, ಈಗ ಪುನಃ ಪುರುಷಾರ್ಥ ಮಾಡಿ ಸ್ವರ್ಗದ ಮಾಲೀಕರಾಗಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಎಂದೂ ಯಾವುದೇ ಮಾತಿನಲ್ಲಿ ಮುಟ್ಟಿದರೆ ಮುನಿ ಆಗಬಾರದು. ಈಶ್ವರೀಯ ಬಾಲ್ಯವನ್ನು ಮರೆತು ಬಾಡಿ ಹೋಗಬಾರದು. ಈ ಕಣ್ಣುಗಳಿಂದ ಏನೆಲ್ಲವೂ ಕಾಣುತ್ತಿದೆಯೋ ಅದನ್ನು ನೋಡಿದರೂ ನೋಡದಂತಿರಬೇಕಾಗಿದೆ.

2. ಒಬ್ಬ ತಂದೆಯ ನೆನಪಿನಲ್ಲಿಯೇ ಸಂಪಾದನೆಯಿದೆ, ಆದ್ದರಿಂದ ದೇಹಧಾರಿಗಳನ್ನು ನೆನಪು ಮಾಡಿ ಅಳಬಾರದು. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ವಿಶ್ವದ ರಾಜ್ಯವನ್ನು ಪಡೆದುಕೊಳ್ಳಬೇಕಾಗಿದೆ.

ವರದಾನ:-

ಜ್ಞಾನದಿಂದ ತನ್ನ ಬಲಹೀನ ಸಂಸ್ಕಾರಗಳ ಬಗ್ಗೆ ತಿಳಿದು ಬರುತ್ತದೆ ಹಾಗೂ ಯಾವಾಗ ಆ ಮಾತಿನ ತಿಳುವಳಿಕೆಯ ಸಿಗುತ್ತದೆಯೋ ಆಗ ಆ ಸಂಸ್ಕಾರಗಳು ಸ್ವಲ್ಪ ಸಮಯಕ್ಕಾಗಿ ಒಳಗೆ ಅದುಮಿಡುತ್ತದೆ ಆದರೆ ಬಲಹೀನ ಸಂಸ್ಕಾರಗಳನ್ನು ಸಮಾಪ್ತಿಗೊಳಿಸಲು ಲೈಟ್ ಮತ್ತು ಮೈಟ್ನ (ಜ್ಞಾನ-ಯೋಗ) ವಿಶೇಷ ಶಕ್ತಿಯ ಅವಶ್ಯಕತೆಯಿದೆ. ಇದಕ್ಕಾಗಿ ಮಾಸ್ಟರ್ ಸರ್ವಶಕ್ತಿವಂತ, ಮಾಸ್ಟರ್ ಜ್ಞಾನ ಸಾಗರ ಆಗುವುದರ ಜೊತೆ ಜೊತೆಗೆ ಪರಿಶೀಲನೆ ಮಾಡುವುದರಲ್ಲಿಯೂ ಮಾಸ್ಟರ್ ಆಗಿರಿ. ಜ್ಞಾನದ (ತಿಳುವಳಿಕೆ) ಮೂಲಕ ಸ್ವಯಂನಲ್ಲಿ ಶಕ್ತಿಯನ್ನು ತುಂಬಿಕೊಳ್ಳಿರಿ, ಮನನ ಶಕ್ತಿಯನ್ನು ಹೆಚ್ಚಿಸುತ್ತೀರೆಂದರೆ ಶಕ್ತಿ ಸಂಪನ್ನರು ಆಗಿ ಬಿಡುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top