15 July 2021 KANNADA Murli Today | Brahma Kumaris

Read and Listen today’s Gyan Murli in Kannada

July 14, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ವಿಕಾರಗಳನ್ನು ದಾನ ಕೊಟ್ಟರೆ ರಾಹುವಿನ ಗ್ರಹಣ ಬಿಡುವುದು, ದಾನ ಕೊಟ್ಟರೆ ಗ್ರಹಣ ಬಿಡುವುದು”

ಪ್ರಶ್ನೆ:: -

ವೃಕ್ಷಪತಿ ತಂದೆಯು ತನ್ನ ಭಾರತವಾಸಿ ಮಕ್ಕಳ ಮೇಲೆ ಬೃಹಸ್ಪತಿ ದೆಶೆಯನ್ನು ಕೂರಿಸಲು ಯಾವ ಸ್ಮೃತಿ ತರಿಸುತ್ತಾರೆ?

ಉತ್ತರ:-

ಹೇ ಭಾರತವಾಸಿ ಮಕ್ಕಳೇ, ನಿಮ್ಮದು ಆದಿ ಸನಾತನ ದೇವಿ-ದೇವತಾ ಧರ್ಮವು ಅತಿ ಶ್ರೇಷ್ಠವಾಗಿತ್ತು, ನೀವು ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರಾಗಿದ್ದಿರಿ. ಸಾಗರನಾದ ನನ್ನ ಮಕ್ಕಳಾದ ನೀವು ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿ ಬಿಟ್ಟಿದ್ದೀರಿ, ಗ್ರಹಣ ಹಿಡಿದಿದೆ. ಈಗ ನಿಮ್ಮನ್ನು ಮತ್ತೆ ಸುಂದರರನ್ನಾಗಿ ಮಾಡಲು ಬಂದಿದ್ದೇನೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ…….

ಓಂ ಶಾಂತಿ. ಯಾರ ಮಹಿಮೆಯನ್ನು ಕೇಳಿದಿರಿ? ಬೇಹದ್ದಿನ ತಂದೆಯ ಮಹಿಮೆ. ಶ್ರೇಷ್ಠಾತಿ ಶ್ರೇಷ್ಠ ತಂದೆ ಪರಮಪಿತ ಪರಮಾತ್ಮನೆ ಆಗಿದ್ದಾರೆ, ಲೌಕಿಕ ತಂದೆಗಂತೂ ಈ ರೀತಿ ಯಾರೂ ಹೇಳುವುದಿಲ್ಲ. ಎಲ್ಲಾ ಆತ್ಮಗಳ ಪಾರಲೌಕಿಕ ತಂದೆಯು ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ ಎಂದು ಮಕ್ಕಳು ತಿಳಿದಿದ್ದೀರಿ. ಅವರ ಹೆಸರು ಶಿವ ಎಂದಾಗಿದೆ. ಹೆಸರಿಲ್ಲದೆ ಯಾವ ವಸ್ತುವೂ ಇರಲು ಸಾಧ್ಯವಿಲ್ಲ, ಈ ಸಮಯದಲ್ಲಿ ಎಲ್ಲರಿಗೂ ರಾಹುವಿನ ಗ್ರಹಣ ಹಿಡಿದಿದೆ ಆದ್ದರಿಂದಲೇ ಇದನ್ನು ಕಬ್ಬಿಣದ ಯುಗವೆಂದು ಹೇಳಲಾಗುತ್ತದೆ. ದೆಶೆಗಳೂ ಇರುತ್ತದೆಯಲ್ಲವೆ. ಬೃಹಸ್ಪತಿ ದೆಶೆ, ಶುಕ್ರ ದೆಶೆ….. ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ. ನೀವು ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಮಹಿಮೆಯನ್ನೂ ಕೇಳಿದಿರಿ. ವಾಸ್ತವದಲ್ಲಿ ಅವರ ಹೆಸರು ಶಿವ ಎಂದಾಗಿದೆ ಉಳಿದಂತೆ ಅನೇಕ ಪ್ರಕಾರವಾಗಿ ಹೆಸರುಗಳನ್ನು ಇಟಿದ್ದಾರೆ. ವಾಸ್ತವದಲ್ಲಿ ಶಿವಬಾಬಾ ಎಂಬುದು ಹೆಸರಿದೆ. ನಾನು ಬೀಜರೂಪ, ಚೈತನ್ಯನಾಗಿದ್ದೇನೆ. ಸತ್ಚಿತ್ ಎಂದು ಹೇಳುತ್ತಾರೆ ನಂತರ ಸುಖದ ಸಾಗರ, ಆನಂದ ಸಾಗರ, ಶಾಂತಿಯ ಸಾಗರನೆಂದು ಹೇಳುತ್ತಾರೆ. ಅವರೊಬ್ಬರದೇ ಎಲ್ಲಾ ಮಹಿಮೆಗಳಿವೆ. ಭಾರತವಾಸಿಗಳು ಮಹಿಮೆ ಮಾಡುತ್ತಾರೆ ಆದರೆ ಸ್ವಲ್ಪವೂ ತಿಳಿದಿಲ್ಲ. ಕಲ್ಲು ಬುದ್ಧಿಯವರಾಗಿದ್ದಾರೆ, ಕಲ್ಲು ಬುದ್ಧಿಯವರನ್ನಾಗಿ ರಾವಣನು ಮಾಡಿದನು. ಸತ್ಯಯುಗದಲ್ಲಿ ಭಾರತವಾಸಿಗಳು ಪಾರಸ ಬುದ್ಧಿಯವರಾಗಿದ್ದರು, 5000 ವರ್ಷಗಳ ಹಿಂದೆ ಈ ಭಾರತವು ಪಾರಸ ಪುರಿಯಾಗಿತ್ತು, ಅದರಲ್ಲಿ ದೇವಿ-ದೇವತೆಗಳು ವಾಸ ಮಾಡುತ್ತಿದ್ದರು. ಭಾರತವನ್ನೇ ಅವಿನಾಶಿ ಖಂಡವೆಂದು ಗಾಯನ ಮಾಡುತ್ತಾರೆ, ಭಾರತದಲ್ಲಿಯೇ ಪಾರಸ ಬುದ್ಧಿಯಿರುವ ದೇವತೆಗಳಿದ್ದರು, ಈ ಸಮಯದಲ್ಲಿ ಕಲ್ಲು ಬುದ್ಧಿ ಪತಿತರಿದ್ದಾರೆ. ಪತಿತರು ಹೇಗಾಗುತ್ತಾರೆ ಎಂದು ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ. ದ್ವಾಪರದಿಂದ ನೀವು ಯಾವಾಗ ಕಾಮಚಿತೆಯ ಮೇಲೆ ಕುಳಿತುಕೊಳ್ಳುತ್ತೀರೋ ಆಗ ನೀವು ಕಪ್ಪಾಗಿ ಬಿಡುತ್ತೀರಿ. ಕಾಮಾಗ್ನಿಯಿಂದ ಎಲ್ಲವೂ ಭಸ್ಮವಾಗಿ ಬಿಡುತ್ತದೆ, ಅದರಲ್ಲಿಯೂ ಮುಖ್ಯವಾಗಿ ಭಾರತದ ಮಾತಾಗಿದೆ. ಭಾರತದಲ್ಲಿ ಪಾರಸಬುದ್ಧಿ ದೇವತೆಗಳ ರಾಜ್ಯವಿತ್ತು, ಅದಕ್ಕೆ ವಿಷ್ಣು ಪುರಿ, ರಾಮ ರಾಜ್ಯವೆಂದೂ ಸಹ ಹೇಳಲಾಗುತ್ತದೆ. ಈಗ ತಂದೆಯು ಬಂದು ತಿಳಿಸುತ್ತಾರೆ – ಮಧುರಾತಿ ಮಧುರ ಮುದ್ದಾದ ಮಕ್ಕಳೇ, ನೀವು ಸತ್ಯಯುಗದಲ್ಲಿದ್ದಿರಿ, ಸರ್ವಗುಣ ಸಂಪನ್ನರಾಗಿದ್ದಿರಿ – ಇದು ನಿಮ್ಮ ಮಹಿಮೆಯಾಗಿದೆ. ಸತ್ಯಯುಗದಲ್ಲಿ ವಿಕಾರಗಳಿರುವುದೇ ಇಲ್ಲ, ದ್ವಾಪರದಿಂದ ರಾವಣ ಮತ್ತು ಪಂಚ ವಿಕಾರಗಳ ರಾಜ್ಯವು ಆರಂಭವಾಗುತ್ತದೆ ಅಂದಮೇಲೆ ರಾಮ ರಾಜ್ಯವು ಹೋಗಿ ರಾವಣ ರಾಜ್ಯವಾಗುತ್ತದೆ. ಈಗ ಗ್ರಹಣ ಹಿಡಿದಿದೆ, ಭಾರತವು ಖಂಡಿತ ಕಪ್ಪಾಗಿ ಬಿಟ್ಟಿದೆ. ಬೃಹಸ್ಪತಿ ದೆಶೆಯು ಎಲ್ಲಾ ದೆಶೆಗಳಿಗಿಂತ ಒಳ್ಳೆಯ ದೆಶೆಯಾಗಿದೆ. ಭಾರತದಲ್ಲಿ ಬೃಹಸ್ಪತಿ ದೆಶೆಯು ಸತ್ಯಯುಗದಲ್ಲಿತ್ತು, ನಂತರ ತ್ರೇತಾದಲ್ಲಿ ಶುಕ್ರ ದೆಶೆಯಿತ್ತು ಅಂದರೆ ಎರಡು ಕಲೆಗಳು ಕಡಿಮೆಯಾಯಿತು. ಅದಕ್ಕೆ ಬೆಳ್ಳಿಯ ಯುಗವೆಂದು ಹೇಳಲಾಗುತ್ತದೆ ನಂತರ ದ್ವಾಪರ-ಕಲಿಯುಗ ಬಂದಿತು. ಏಣಿಯನ್ನು ಇಳಿಯುತ್ತಲೇ ಬಂದಿರಿ. ಶನಿ ದೆಶೆಯೂ ಹಿಡಿಯಿತು. ಈ ಸಮಯದಲ್ಲಿ ಎಲ್ಲರ ಮೇಲೆ ಸಂಪೂರ್ಣ ರಾಹುವಿನ ದೆಶೆಯಿದೆ. ಸೂರ್ಯ ಗ್ರಹಣವಾದಾಗ ದಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದೆಂದು ಹೇಳುತ್ತಾರೆ.

ಇದು ಆತ್ಮಿಕ ಜ್ಞಾನವಾಗಿದೆ ಎಂದು ಆತ್ಮಿಕ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ಇದು ಯಾವುದೇ ಶಾಸ್ತ್ರಗಳ ಜ್ಞಾನವಲ್ಲ, ಶಾಸ್ತ್ರಗಳಲ್ಲಿ ಜ್ಞಾನವನ್ನು ಭಕ್ತಿಮಾರ್ಗವೆಂದು ಹೇಳಲಾಗುತ್ತದೆ, ಸತ್ಯಯುಗದಲ್ಲಿ ಭಕ್ತಿಮಾರ್ಗವು ಇರುವುದಿಲ್ಲ. ಜ್ಞಾನ ಮತ್ತು ಭಕ್ತಿ ನಂತರ ವೈರಾಗ್ಯ ಅರ್ಥಾತ್ ಈ ಹಳೆಯ ಪ್ರಪಂಚವನ್ನು ಬಿಡಬೇಕಾಗುತ್ತದೆ. ಇದು ಶೂದ್ರ ವರ್ಣವಾಗಿದೆ. ವಿರಾಟ ರೂಪದ ಚಿತ್ರದಲ್ಲಿ ಬ್ರಾಹ್ಮಣ, ದೇವತಾ, ಕ್ಷತ್ರಿಯ, ವೈಶ್ಯ…. ತೋರಿಸುತ್ತಾರೆ. ಇದು ಭಾರತದ್ದೇ ಕಥೆಯಾಗಿದೆ. ವಿರಾಟ ರೂಪದ ಚಿತ್ರವನ್ನೂ ಮಾಡುತ್ತಾರೆ ಆದರೆ ಕಲ್ಲು ಬುದ್ಧಿಯವರು ತಿಳಿದುಕೊಳ್ಳುವುದಿಲ್ಲ. ಕಲ್ಲು ಬುದ್ಧಿಯವರು ಏಕೆ ಆಗಿದ್ದಾರೆ? ಏಕೆಂದರೆ ಎಲ್ಲರೂ ಪತಿತರಾಗಿದ್ದಾರೆ. ಭಾರತವಾಸಿಗಳೇ ಪಾರಸ ಬುದ್ಧಿಯವರು, ಸಂಪೂರ್ಣ ನಿರ್ವಿಕಾರಿಗಳಾಗಿದ್ದರು, 5000 ವರ್ಷಗಳ ಹಿಂದೆ ಭಾರತವು ಸ್ವರ್ಗವಾಗಿತ್ತು, ಮತ್ತ್ಯಾವುದೇ ಖಂಡವಿರಲಿಲ್ಲ. ಇದನ್ನು ತಂದೆಯೇ ತಿಳಿಸುತ್ತಾರೆ. ಈ ರಾಜಯೋಗವನ್ನು ಯಾರು ಕಲಿಸುತ್ತಾರೆ? ಜ್ಞಾನ ಸಾಗರನಾದ ಶಿವಾಚಾರ್ಯ ಕಲಿಸುತ್ತಾರೆ, ಯಾವುದೇ ಮನುಷ್ಯನಿಗೆ ಜ್ಞಾನ ಸಾಗರ, ಸರ್ವರ ಪತಿತ-ಪಾವನನೆಂದು ಹೇಳಲಾಗುವುದಿಲ್ಲ. ಎಲ್ಲರ ಮುಕ್ತಿದಾತ ಒಬ್ಬರೇ ಆಗಿದ್ದಾರೆ, ದುಃಖದಲ್ಲಿ ರಾವಣನಿಂದ ಬಿಡಿಸಲು ಸ್ವಯಂ ತಂದೆಯೇ ಬಂದು ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆ, ಅವರಿಗೇ ಆತ್ಮೀಯ ಮಾರ್ಗದರ್ಶಕನೆಂದು ಹೇಳಲಾಗುತ್ತಾರೆ. ನಾನು ನೀವೆಲ್ಲಾ ಆತ್ಮರ ಮಾರ್ಗದರ್ಶಕನಾಗಿದ್ದೇನೆ, ನಿಮ್ಮೆಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸುತ್ತಾರೆ. ನನ್ನಂತಹ ಮಾರ್ಗದರ್ಶಕನು ಯಾರೂ ಇರಲು ಸಾಧ್ಯವಿಲ್ಲ. ಗಾಡ್ ಈಜ್ ಲಿಬರೇಟರ್, ಗೈಡ್, ಬ್ಲಿಸ್ಫುಲ್…. (ಭಗವಂತನು ಮುಕ್ತಿದಾತ, ಮಾರ್ಗದರ್ಶಕ, ಆನಂದ ಸಾಗರನಾಗಿದ್ದಾನೆ) ಎಲ್ಲರ ಮೇಲೆ ದಯೆ ತೋರಿಸುತ್ತಾರೆ ಏಕೆಂದರೆ ಸಾಗರನ ಮಕ್ಕಳೆಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಹೋಗಿದ್ದಾರೆ, ಅದರಲ್ಲಿಯೂ ಮುಖ್ಯವಾಗಿ ಭಾರತದ್ದೇ ಮಾತಾಗಿದೆ. ನೀವು 16 ಕಲಾ ಸಂಪೂರ್ಣರಾಗಿದ್ದಿರಿ, ಸಂಪೂರ್ಣ ನಿರ್ವಿಕಾರಿಗಳಾಗಿದ್ದಿರಿ ಎಂದು ತಂದೆಯು ತಿಳಿಸುತ್ತಾರೆ. ಈಗ ಕಾಮ ಚಿತೆಯ ಮೇಲೆ ಕುಳಿತು ಏನಾಗಿ ಬಿಟ್ಟಿದ್ದೀರಿ! ಈಗ ತಂದೆಯು ಪುನಃ ಬಂದಿದ್ದಾರೆ. ವೃಕ್ಷಪತಿ ತಂದೆಯು ಬಂದು ಮನುಷ್ಯರೆಲ್ಲರ ಮೇಲೆ ಬೃಹಸ್ಪತಿ ದೆಶೆಯನ್ನು ಕೂರಿಸುತ್ತಾರೆ. ಮುಖ್ಯವಾಗಿ ಭಾರತ ಮತ್ತು ಇಡೀ ಪ್ರಪಂಚದ ಮೇಲೆ ಈ ಸಮಯದಲ್ಲಿ ರಾಹುವಿನ ಗ್ರಹಣ ಹಿಡಿದಿದೆ. ತಂದೆಯು ತಿಳಿಸುತ್ತಾರೆ – ನಾನೇ ಬಂದು ಮುಖ್ಯವಾಗಿ ಭಾರತ ಮತ್ತು ಇಡೀ ಪ್ರಪಂಚಕ್ಕೆ ಗತಿ-ಸದ್ಗತಿಯನ್ನು ಕೊಡುತ್ತೇನೆ. ಇಲ್ಲಿ ನೀವು ಪಾರಸ ಬುದ್ಧಿಯವರಾಗಲು ಬಂದಿದ್ದೀರಿ, ಅತಿಪ್ರಿಯ ತಂದೆಯು ಎಲ್ಲಾ ಪ್ರಿಯತಮೆಯರ ಒಬ್ಬರೇ ಪ್ರಿಯತಮನಾಗಿದ್ದಾರೆ. ಎಲ್ಲಾ ದೇಶಗಳಲ್ಲಿಯೂ ಅವಶ್ಯವಾಗಿ ಶಿವಲಿಂಗವನ್ನು ಇಡುತ್ತಾರೆ ಏಕೆಂದರೆ ಎಲ್ಲರ ತಂದೆಯಾಗಿದ್ದಾರಲ್ಲವೆ. ಶಿವನ ಮಂದಿರಗಳು ಭಾರತದಲ್ಲಿ ಬಹಳಷ್ಟಿವೆ ಶಿವನಿರುವ ಸ್ಥಾನವೆಂದು ಹೇಳುತ್ತಾರೆ. ಸತ್ಯಯುಗದಲ್ಲಿ ದೇವಿ-ದೇವತಾ ಧರ್ಮದ ಮನುಷ್ಯರಿದ್ದರೆ ಆದರೆ ಆ ಧರ್ಮವು ಯಾವಾಗಿತ್ತು, ಅವರ ರಾಜ್ಯವು ಯಾವಾಗಿತ್ತು…. ಇದು ಯಾರಿಗೂ ತಿಳಿದಿಲ್ಲ. ಸತ್ಯಯುಗದ ಆಯಸ್ಸನ್ನು ಬಹಳ ಉದ್ದವಾಗಿ ಬರೆದು ಬಿಟ್ಟಿದ್ದಾರೆ. 21 ಜನ್ಮಗಳಿಗಾಗಿ ನಿಮ್ಮ ಮೇಲೆ ಈಗ ಬೃಹಸ್ಪತಿ ದೆಶೆಯು ಕುಳಿತಿದೆ ಎಂದು ತಂದೆಯು ತಿಳಿಸುತ್ತಾರೆ. ಎಲ್ಲರೂ ಯಾರನ್ನು ಕರೆಯುತ್ತಾರೆಯೋ ಅವರು ವೃಕ್ಷಪತಿ, ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ನೀವು ತಂದೆ-ತಾಯಿ, ನಾವು ನಿಮ್ಮ ಮಕ್ಕಳಾಗಿದ್ದೇವೆಂದು ಅವರ ಮಹಿಮೆಯನ್ನು ಮಾಡುತ್ತಾರೆ. ಅವಶ್ಯವಾಗಿ ಸತ್ಯಯುಗ-ತ್ರೇತಾದಲ್ಲಿ ಅಪಾರ ಸುಖವಿತ್ತು, ತಂದೆಯು ಹೆವೆನ್ಲೀ ಗಾಡ್ಫಾದರ್ ಆಗಿದ್ದಾರೆ, ಸ್ವರ್ಗದ ರಚಯಿತನೂ ಆಗಿದ್ದಾರೆಂದ ಮೇಲೆ ಸ್ವರ್ಗವು ಇರಬೇಕಲ್ಲವೆ! ನೀವೆಲ್ಲರೂ ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಗಳಾಗಿದ್ದೀರಿ. ಭಾರತದ್ದೇ ಆದಿ ಸನಾತನ ದೇವಿ-ದೇವತಾ ಧರ್ಮವಾಗಿತ್ತು. ಹೇಗೆ ಕ್ರಿಶ್ಚಿಯನ್ ಧರ್ಮವಿದೆಯೆಂದರೆ ಅಲ್ಲಿ ಕ್ರಿಶ್ಚಿಯನ್ನರೇ ಇರುತ್ತಾರೆ. ನೀವು ದೇವಿ-ದೇವತಾ ಧರ್ಮದವರು ನಿಮ್ಮ ಧರ್ಮವನ್ನು ಏಕೆ ಮರೆತು ಹೋದಿರಿ? ನೀವು ದೇವಿ-ದೇವತಾ ಧರ್ಮದವರೇ ಆಗಿದ್ದಿರಿ ಎಂದು ತಂದೆಯು ತಿಳಿಸುತ್ತಾರೆ.

ಎಲ್ಲರಿಗಿಂತ ಶ್ರೇಷ್ಠ ಧರ್ಮ-ಕರ್ಮ ನಿಮ್ಮದೇ ಆಗಿತ್ತು ಎಂದು ಸ್ಮೃತಿ ತರಿಸುತ್ತಾರೆ. ಈಗ ನೀವು ನೀಚ, ಪಾಪಿ, ಕಂಗಾಲರಾಗಿದ್ದೀರಿ. ನೀವು ದೇವತೆಗಳ ಪೂಜಾರಿಗಳಾಗಿದ್ದೀರಿ ಅಂದಮೇಲೆ ನಿಮ್ಮನ್ನು ನೀವು ಹಿಂದೂಗಳೆಂದು ಏಕೆ ಕರೆದುಕೊಳ್ಳುತ್ತೀರಿ? ನೋಡಿ, ಭಾರತದ ಸ್ಥಿತಿ ಏನಾಗಿ ಬಿಟ್ಟಿದೆ! ಯಾರು ದೇವತಾ ಧರ್ಮದವರಾಗಿದ್ದರೋ ಅವರು ವಿಕಾರಿಗಳಾದ ಕಾರಣ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳುವುದಿಲ್ಲ. ಈ ಪತಿತ ಪ್ರಪಂಚದ ಅಂತ್ಯವಾಗಿದೆ, ಮಹಾಭಾರತದ ಯುದ್ಧ ಸಮ್ಮುಖದಲ್ಲಿ ನಿಂತಿದೆ. ಭಗವಾನುವಾಚ – ನಾನು ನಿಮಗೆ ಸತ್ಯಯುಗಕ್ಕಾಗಿ ರಾಜಯೋಗವನ್ನು ಕಲಿಸುತ್ತೇನೆ. ಭಗವಂತನಂತೂ ಒಬ್ಬರೇ ಆಗಿದ್ದಾರೆ, ನಾವೆಲ್ಲರೂ ಅವರ ಮಕ್ಕಳು ಸಾಲಿಗ್ರಾಮಗಳಾಗಿದ್ದೇವೆ. ನೀವು ಪೂಜ್ಯರಾಗಿದ್ದಿರಿ, ನೀವೇ ಪೂಜಾರಿ ಭಕ್ತರಾಗಿ ಬಿಟ್ಟಿರಿ. ಈಗ ಪುನಃ ಜ್ಞಾನ ಪಡೆದು ಪೂಜ್ಯ ದೇವತೆಗಳಾಗುತ್ತಿದ್ದೀರಿ ನಂತರ ದ್ವಾಪರದಿಂದ ಪೂಜ್ಯ ಸೋ ಪುಜಾರಿಗಳಾಗಿ ಬಿಡುತ್ತೀರಿ. ನೀವು ಸಂಪೂರ್ಣ 84 ಜನ್ಮಗಳನ್ನು ಪಡೆಯುತ್ತೀರಿ. ಯಾರು 84 ಜನ್ಮಗಳನ್ನು ಪಡೆದಿದ್ದರೋ ಅವರೇ ಬಂದು ಬ್ರಹ್ಮಾಕುಮಾರ-ಕುಮಾರಿಯರಾಗುತ್ತಾರೆ. ಬ್ರಹ್ಮನ ಮುಖಾಂತರ ಆದಿ ಸನಾತನ ಧರ್ಮದ ಸ್ಥಾಪನೆಯಾಯಿತು, ಇದೂ ಸಹ ಗಾಯನವಿದೆ. ಪ್ರಜಾಪಿತನಿದ್ದಾರೆ ಎಂದರೆ ಅವರ ಮಕ್ಕಳೂ ಇರಬೇಕಲ್ಲವೆ. ಅವರು ಅವಶ್ಯವಾಗಿ ಇಲ್ಲಿಯೇ ಇರಬೇಕು. ಎಷ್ಟೊಂದು ಮಂದಿ ಪ್ರಜೆಗಳಿದ್ದಾರೆ, ಈ ಬ್ರಾಹ್ಮಣರೇ ನಂತರ ದೇವತೆಗಳಾಗುವರು. ತಂದೆಯು ಬಂದು ಶೂದ್ರರನ್ನು ಪರಿವರ್ತನೆ ಮಾಡಿ ಬ್ರಾಹ್ಮಣ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಈ ಸಂಗಮಯುಗದಲ್ಲಿಯೇ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ, ಇದು ಕಲ್ಯಾಣಕಾರಿ ಸಂಗಮಯುಗವಾಗಿದೆ. ಈ ಯುದ್ಧವನ್ನೇ ಕಲ್ಯಾಣಕಾರಿ ಎಂದು ಹೇಳಲಾಗುತ್ತದೆ. ಈ ವಿನಾಶದ ನಂತರದ ಸ್ವರ್ಗದ ದ್ವಾರ ತೆರೆಯಲ್ಪಡುತ್ತದೆ. ನೀವಿಲ್ಲಿ ಸ್ವರ್ಗವಾಸಿಗಳಾಗಲು, ವಿಷ್ಣು ಪುರಿಯಲ್ಲಿ ಹೋಗುವುದಕ್ಕಾಗಿಯೇ ಬರುತ್ತೀರಿ. ನೀವು ಮಕ್ಕಳ ಮೇಲೆ ಈಗ ಅವಿನಾಶಿ ಬೃಹಸ್ಪತಿ ದೆಶೆ ಕುಳಿತಿದೆ, 16 ಕಲಾ ಸಂಪೂರ್ಣ ಎಂದು ಹೇಳಲಾಗುತ್ತದೆ ನಂತರ 2 ಕಲೆಗಳು ಕಡಿಮೆ ಆಗುತ್ತದೆಯೆಂದರೆ ಶುಕ್ರ ದೆಶೆಯೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಬೃಹಸ್ಪತಿಯ ದೆಶೆಯಿತ್ತು ನಂತರ ತ್ರೇತಾದಲ್ಲಿ ಶುಕ್ರ ದೆಶೆಯಿತ್ತು, ನಂತರ ಕೆಳಗಿಳಿಯುತ್ತಾ ಬರುತ್ತಾ ಮಂಗಳ, ಶನಿ, ರಾಹು ದೆಶೆಗಳಾಗುತ್ತವೆ. ಜನ್ಮ-ಜನ್ಮಾಂತರದಿಂದಲೂ ಉಲ್ಟಾ ದೆಶೆಗಳೇ ಆಗುತ್ತಾ ಬರುತ್ತವೆ. ಈಗ ತಂದೆಯ ಮೂಲಕ ಬೃಹಸ್ಪತಿ ದೆಶೆ ಕುಳಿತಿದೆ. ಈ ಬೇಹದ್ದಿನ ತಂದೆಯು ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ. ಅವರೇ ನಿಮ್ಮ ತಂದೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಉಳಿದಂತೆ ಎಲ್ಲರೂ ಅಸತ್ಯವನ್ನೇ ಹೇಳುತ್ತಾರೆ, ಯಾರಿಗೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ, ಇದಕ್ಕೇ ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಅದು ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಈ ವಿಕಾರಿ ಪ್ರಪಂಚದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ, ಯುದ್ಧ ಹೊಡೆದಾಟಗಳು ಏನೆಲ್ಲಾ ನಡೆಯುತ್ತಿವೆ, ಇದಕ್ಕೆ ರಕ್ತದ ಕೋಡಿ ಹರಿಯುತ್ತದೆ….. ತಪ್ಪು ಮಾಡದೇ ಇದ್ದವರನ್ನೂ ಏನೆಲ್ಲಾ ಮಾಡುತ್ತಾರೆ! ಒಂದೇ ಒಂದು ಬಾಂಬು ಬಿದ್ದರೆ ಸಾಕು ಕ್ಷಣ ಮಾತ್ರದಲ್ಲಿಯೇ ಎಲ್ಲವೂ ಸಮಾಪ್ತಿ ಆಗಿ ಬಿಡುವುದು. ಇದೇ ಆ ಸಂಗಮಯುಗದ ಸಮಯವಾಗಿದೆ. ನೀವು ದೇವತೆಗಳಿಗೆ ನಂತರ ಹೊಸ ಪ್ರಪಂಚ ಬೇಕಲ್ಲವೆ. ಮಧುರಾತಿ ಮಧುರ ಮಕ್ಕಳೇ – ಮನ್ಮನಾಭವ. ಯಾವ ತಂದೆ ಹೇಳಿದರು? ಶಿವ ತಂದೆಯು ಹೇಳಿದರು. ಅವರಂತೂ ನಿರಾಕಾರನಾಗಿದ್ದಾರೆ, ನೀವೂ ನಿರಾಕಾರರಾಗಿದ್ದೀರಲ್ಲವೆ. ಆದರೆ ನೀವು ಪುನರ್ಜನ್ಮದಲ್ಲಿ ಬರುತ್ತೀರಿ ನಾನು ಬರುವುದಿಲ್ಲ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ, ಯಾರೂ ಪಾವನರಿಲ್ಲ. ಪತಿತರಾಗಲೇಬೇಕು, ಸತೋ-ರಜೋ-ತಮೋದಲ್ಲಿ ಬರಲೇಬೇಕಾಗಿದೆ. ಈ ಸಮಯದಲ್ಲಿ ಇಡೀ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ಹಿಡಿದಿದೆ. ಪ್ರಪಂಚವು ಅವಶ್ಯವಾಗಿ ಹಳೆಯದಾಗಿ ಬಿಟ್ಟಿದೆ. ಈಗ ಮತ್ತೆ ಇದನ್ನು ಹೊಸದನ್ನಾಗಿ ಮಾಡಬೇಕಾಗಿದೆ. ಪತಿತ ಪ್ರಪಂಚವನ್ನು ನೋಡಿ, ಎಷ್ಟೊಂದು ಮನುಷ್ಯರಿದ್ದಾರೆ! ಪಾವನ ಪ್ರಪಂಚದಲ್ಲಿ ಬಹಳ ಕಡಿಮೆ ಜನ ರಾಜ್ಯ ಮಾಡುತ್ತಾರೆ. ಒಂದೇ ಧರ್ಮವಿರುತ್ತದೆ, ಮತ್ತ್ಯಾವ ಧರ್ಮವೂ ಇರುವುದಿಲ್ಲ. ಭಾರತವನ್ನೇ ಹೆವೆನ್ ಎಂದು ಹೇಳಲಾಗುತ್ತದೆ. ಘಟದಲ್ಲಿ ಸೂರ್ಯ, ಘಟದಲ್ಲಿ ಚಂದ್ರ ಎಂದು ಗಾಯನವಿದೆ, ಸತ್ಯಯುಗದಲ್ಲಿ 9 ಲಕ್ಷ ಜನಸಂಖ್ಯೆಯಿರುತ್ತದೆ ನಂತರ ವೃದ್ಧಿಯಾಗುತ್ತದೆ. ಮೊದಲು ಹೂವಿನ ಗಿಡ ಚಿಕ್ಕದಾಗಿರುತ್ತದೆ, ಮುಳ್ಳಿನ ಕಾಡು ಎಷ್ಟು ದೊಡ್ಡದಾಗಿದೆ! ದೆಹಲಿಯಲ್ಲಿ ಮೊಗಲ್ ಗಾರ್ಡನ್ ಎಷ್ಟು ಚೆನ್ನಾಗಿದೆ ನೋಡಿ! ಅದಕ್ಕಿಂತಲೂ ದೊಡ್ಡ ಗಾರ್ಡನ್ ಮತ್ತ್ಯಾವುದೂ ಇಲ್ಲ. ಕಾಡನ್ನು ನೋಡಿ ಎಷ್ಟೊಂದು ದೊಡ್ಡದಾಗಿರುತ್ತದೆ, ಸತ್ಯಯುಗದ ಗಾರ್ಡನ್ ಸಹ ಚಿಕ್ಕದಾಗಿರುತ್ತದೆ ನಂತರ ವೃದ್ಧಿ ಹೊಂದುತ್ತಾ-ಹೊಂದುತ್ತಾ ದೊಡ್ಡದಾಗುತ್ತದೆ. ಈಗಂತೂ ಮುಳ್ಳಿನ ಕಾಡಾಗಿ ಬಿಟ್ಟಿದೆ. ರಾವಣನು ಬಂದು ಮುಳ್ಳಿನ ಕಾಡನ್ನಾಗಿ ಮಾಡುತ್ತಾನೆ, ಇದು ಮುಳ್ಳಿನ ಕಾಡಾಗಿದೆ. ಪರಸ್ಪರದಲ್ಲಿ ಹೊಡೆದಾಡುತ್ತಾರೆ ಅಂದಮೇಲೆ ಒಬ್ಬರನ್ನೊಬ್ಬರು ಕೊಲೆ ಮಾಡುತ್ತಾರೆ. ಎಷ್ಟೊಂದು ಕೋಪವಿದೆ! ವಾನರನಿಗಿಂತ ಕೀಳು ಮಟ್ಟವೆಂದು ಹೇಳಲಾಗುತ್ತದೆ. ನನ್ನ ಮುದ್ದಾದ ಮಕ್ಕಳೇ, ನಿಮ್ಮ ಮೇಲೆ ಈಗ ವೃಕ್ಷಪತಿಯ ದೆಶೆಯಿದೆ ಎಂದು ತಂದೆಯು ತಿಳಿಸುತ್ತಾರೆ. ಈಗ ದಾನ ಕೊಟ್ಟರೆ ಗ್ರಹಣ ಬಿಡುವುದು. ಸಂಪೂರ್ಣ ನಿರ್ವಿಕಾರಿಗಳು ಇಲ್ಲಿಯೇ ಆಗಬೇಕಾಗಿದೆ. ನಂತರ ಶರೀರ ಬಿಟ್ಟು ಮತ್ತೆ ಶಿವಾಲಯದಲ್ಲಿ ಬರುತ್ತೇವೆ. ಶಿವಾಲಯದಲ್ಲಿ ಬಹಳ ಸುಖವಿರುತ್ತದೆ, ದೇವಿ-ದೇವತೆಗಳ ರಾಜ್ಯವಿರುತ್ತದೆ. ಸತ್ಯಯುಗವನ್ನು ಶಿವಾಲಯ, ಕಲಿಯುಗವನ್ನು ವೇಶ್ಯಾಲಯವೆಂದು ಹೇಳಲಾಗುತ್ತದೆ. ಇದು ವೇಶ್ಯಾಲಯ, ರಾವಣನು ಸ್ಥಾಪನೆ ಮಾಡಿದನು. ಪತಿತರಿಂದ ಪಾವನರಾಗಬೇಕಾಗಿದೆ ಅಂದಮೇಲೆ ಹೇಗಾಗುವುದು? ತ್ರಿವೇಣಿ ಸಂಗಮದಲ್ಲಿನ ಗಂಗಾ ಸ್ನಾನದಿಂದ ಪಾವನರಾಗುವಿರೇನು? ಇದನ್ನಂತೂ ಜನ್ಮ-ಜನ್ಮಾಂತರ ಮಾಡುತ್ತಲೇ ಬಂದಿರಿ, ಕೋಟಿ ಗಟ್ಟಲೇ ಮನುಷ್ಯರು ಹೋಗಿ ಸ್ನಾನ ಮಾಡುತ್ತಾರೆ. ಬಹಳಷ್ಟು ನದಿಗಳು, ಕಾಲುವೆಗಳು, ಕೊಳಗಳು ಇತ್ಯಾದಿಗಳಿವೆ, ಎಲ್ಲಿ ನೀರನ್ನು ನೋಡುತ್ತಾರೆಂದರೆ ಅಲ್ಲಿಗೆ ಹೋಗಿ ಸ್ನಾನ ಮಾಡುತ್ತಾರೆ ಏಕೆಂದರೆ ತಮ್ಮನ್ನು ತಾವು ಪತಿತರಾಗಿದ್ದೇವೆ ಎಂದು ತಿಳಿದುಕೊಂಡಿದ್ದಾರೆ. ಈಗ ನಿಮ್ಮನ್ನು ಪಾರಸನಾಥನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಿದ್ದಾರೆ ಅಂದಮೇಲೆ ಅಂತಹ ಪಾರಸನಾಥ ತಂದೆಯನ್ನು ಎಷ್ಟೊಂದು ಪ್ರೀತಿಯಿಂದ ನೆನಪು ಮಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಮುಳ್ಳಿನ ಪ್ರಪಂಚದಿಂದ ಹೂದೋಟಕ್ಕೆ ಹೋಗಲು ಯಾವುದೇ ಮುಳ್ಳು (ವಿಕಾರ) ಗಳಿವೆ ಅವನ್ನು ತೆಗೆಯಬೇಕು. ಪಾರಸ ಬುದ್ಧಿಯವರಾಗಲು ಒಬ್ಬ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ.

2. ಈ ಕಲ್ಯಾಣಕಾರಿ ಸಂಗಮಯುಗದಲ್ಲಿ ಶೂದ್ರರಿಂದ ಬ್ರಾಹ್ಮಣ ಸೋ ದೇವತೆಗಳಾಗುವ ಪುರುಷಾರ್ಥ ಮಾಡಬೇಕಾಗಿದೆ. ರಾಹುವಿನ ಗ್ರಹಣದಿಂದ ಬಿಡಿಸಿಕೊಳ್ಳಲು ವಿಕಾರಗಳ ದಾನ ಕೊಡಬೇಕಾಗಿದೆ.

ವರದಾನ:-

ಸಂಘಟನೆಯಲ್ಲಿ ಒಬ್ಬರು ಹೇಳಿದರು ಇನ್ನೊಬ್ಬರು ಒಪ್ಪಿಕೊಂಡರು – ಇದಾಗಿದೆ ಸತ್ಯ ಸ್ನೇಹದ ಪ್ರತ್ಯುತ್ತರ. ಇಂತಹ ಸ್ನೇಹಿ ಮಕ್ಕಳ ಉದಾಹರಣೆ ನೋಡಿ ಅನ್ಯರೂ ಸಹ ಸಂಪರ್ಕದಲಿ ಬರುವುದರಲ್ಲಿ ಸಾಹಸವನ್ನಿಡುವರು. ಸಂಘಟನೆಯಲ್ಲಿಯೂ ಸೇವಾ ಸಾಧಾನವಾಗುತ್ತದೆ. ಮಾಯೆಯು ಎಲ್ಲಿಯೇ ನೋಡುತ್ತದೆ – ಇವರಲ್ಲಿ ಏಕತೆ ಚೆನ್ನಾಗಿದೆ, ಒಟ್ಟಾಗಿದ್ದಾರೆಂದರೆ ಅಲ್ಲಿ ಬರಲು ಧೈರ್ಯವಿಡುವುದಿಲ್ಲ. ಏಕಮತ ಹಾಗೂ ಏಕರಸ ಸ್ಥಿತಿಯ ಸಂಸ್ಕಾರವೇ ಸತ್ಯಯುಗದಲ್ಲಿಯೂ ಒಂದು ರಾಜ್ಯದ ಸ್ಥಾಪನೆ ಮಾಡುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top