15 August 2021 KANNADA Murli Today | Brahma Kumaris

Read and Listen today’s Gyan Murli in Kannada

August 14, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಹೋಲಿಯನ್ನು ಹೇಗೆ ಆಚರಿಸುವುದು ಹಾಗೂ ಸದಾಕಾಲದ ಪರಿವರ್ತನೆ ಹೇಗಾಗುವುದು?

♫ ಕೇಳು ಇಂದಿನ ಮುರ್ಲಿ (audio)➤

ಇಂದು ಸರ್ವರ ಭಾಗ್ಯವಿಧಾತ ತಂದೆಯು ತನ್ನ ಹೋಲಿ ಹಂಸಗಳೊಂದಿಗೆ ಜ್ಞಾನ ರತ್ನಗಳ ಹೋಲಿಯನ್ನು ಆಚರಿಸಲು ಬಂದಿದ್ದಾರೆ. ಆಚರಿಸುವುದು ಎಂದರೆ ಮಿಲನ ಮಾಡುವುದು. ಬಾಪ್ದಾದಾ ಪ್ರತಿಯೊಬ್ಬ ಅತಿಸ್ನೇಹೀ, ಸಹಜಯೋಗಿ, ಸದಾ ತಂದೆಯ ಕಾರ್ಯದಲ್ಲಿ ಸಹಯೋಗಿ, ಸದಾ ಪಾವನ ವೃತ್ತಿಯಿಂದ, ಪಾವನ ದೃಷ್ಟಿಯಿಂದ ಸೃಷ್ಟಿಯನ್ನು ಪರಿವರ್ತನೆ ಮಾಡುವಂತಹ ಸರ್ವ ಹೋಲಿ ಮಕ್ಕಳನ್ನು ನೋಡಿ ಸದಾ ಹರ್ಷಿತರಾಗುತ್ತೇವೆ. ಪಾವನರಂತೂ ಈಗಿನ ಮಹಾತ್ಮರು ಎನಿಸಿಕೊಂಡಿರುವವರೂ ಆಗುತ್ತಾರೆ ಆದರೆ ತಾವು ಶ್ರೇಷ್ಠಾತ್ಮರು ಬಹಳ ಶ್ರೇಷ್ಠ ಹೋಲಿಯಾಗುತ್ತೀರಿ ಅರ್ಥಾತ್ ಸಂಕಲ್ಪ ಮಾತ್ರ, ಸ್ವಪ್ನ ಮಾತ್ರದಲ್ಲಿಯೂ ಅಪವಿತ್ರತೆಯು ವೃತ್ತಿ, ದೃಷ್ಟಿಯಲ್ಲಿ ಪಾವನ ಸ್ಥಿತಿಯಿಂದ ಕೆಳಗೆ ತರಲು ಸಾಧ್ಯವಿಲ್ಲ. ಪ್ರತೀ ಸಂಕಲ್ಪ ಅರ್ಥಾತ್ ಸ್ಮೃತಿಯು ಪಾವನವಾಗಿರುವ ಕಾರಣ ವೃತ್ತಿ, ದೃಷ್ಟಿಯು ಸ್ವತಹವಾಗಿಯೇ ಪಾವನವಾಗಿ ಬಿಡುತ್ತದೆ. ಕೇವಲ ತಾವಷ್ಟೇ ಪಾವನರಾಗುವುದಿಲ್ಲ ಆದರೆ ಪ್ರಕೃತಿಯನ್ನೂ ಸಹ ಪಾವನವನ್ನಾಗಿ ಮಾಡಿ ಬಿಡುತ್ತೀರಿ ಆದರೆ ಪಾವನ ಪ್ರಕೃತಿಯ ಕಾರಣ ಭವಿಷ್ಯ ಅನೇಕ ಜನ್ಮಗಳು ಶರೀರವೂ ಸಹ ಪಾವನವಾದದ್ದೇ ಸಿಗುತ್ತದೆ. ಇಂತಹ ಹೋಲಿ ಹಂಸಗಳು ಅಥವಾ ಸದಾ ಪಾವನ ಸಂಕಲ್ಪಧಾರಿ ಶ್ರೇಷ್ಠಾತ್ಮರಾಗಿ ಬಿಡುತ್ತೀರಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಪ್ರತೀ ಮಾತಿನಲ್ಲಿ ಶ್ರೇಷ್ಠ ಜೀವನದವರನ್ನಾಗಿ ಮಾಡುತ್ತಾರೆ. ಪವಿತ್ರತೆಯೂ ಸಹ ಶ್ರೇಷ್ಠಾತಿ ಶ್ರೇಷ್ಠ ಪವಿತ್ರತೆಯಾಗಿದೆ, ಸಾಧಾರಣವಲ್ಲ. ಸಾಧಾರಣ ಪವಿತ್ರ ಆತ್ಮಗಳು ತಾವು ಮಹಾನ್ ಪವಿತ್ರ ಆತ್ಮರ ಮುಂದೆ ಮನಸ್ಸಿನಿಂದ ಒಪ್ಪಿಕೊಂಡು ನಮಸ್ಕಾರ ಮಾಡುತ್ತಾರೆ – ತಮ್ಮ ಪವಿತ್ರತೆಯು ಅತೀ ಶ್ರೇಷ್ಠವಾಗಿದೆ ಎಂದು. ಈಗಿನ ಗೃಹಸ್ಥಿಗಳು ತಮ್ಮನ್ನು ಅಪವಿತ್ರರೆಂದು ತಿಳಿಯುವ ಕಾರಣ ಯಾವ ಪವಿತ್ರ ಆತ್ಮಗಳನ್ನು ಮಹಾನರೆಂದು ತಿಳಿದು ತಲೆ ಬಾಗಿಸುತ್ತಾರೆಯೋ ಆ ಮಹಾನ್ ಆತ್ಮರೆಂದು ಕರೆಸಿಕೊಳ್ಳುವ ತಾವು ಶ್ರೇಷ್ಠ ಆತ್ಮರ ಮುಂದೆ ಇದನ್ನು ಖಂಡಿತ ಒಪ್ಪಿಕೊಳ್ಳುತ್ತಾರೆ – ತಮ್ಮ ಪವಿತ್ರತೆ ಮತ್ತು ನಮ್ಮ ಪವಿತ್ರತೆಯಲ್ಲಿ ಮಹಾನ್ ಅಂತರವಿದೆ.

ಈ ಹೋಲಿಯ ಉತ್ಸವವು ತಾವು ಪಾವನ ಆತ್ಮರ ಪಾವನರಾಗುವ ವಿಧಿಯ ಸ್ಮರಣಾರ್ಥವಾಗಿದೆ ಏಕೆಂದರೆ ತಾವೆಲ್ಲಾ ನಂಬರ್ವಾರ್ ಪಾವನ ಆತ್ಮರು ತಂದೆಯ ನೆನಪಿನ ಲಗನ್ನಿನ ಅಗ್ನಿಯ ಮೂಲಕ ಸದಾಕಾಲಕ್ಕಾಗಿ ಅಪವಿತ್ರತೆಯನ್ನು ಭಸ್ಮ ಮಾಡಿ ಬಿಡುತ್ತೀರಿ. ಆದ್ದರಿಂದ ಮೊದಲು ಸುಡುವ ಹೋಲಿಯನ್ನು ಆಚರಿಸುತ್ತಾರೆ ನಂತರ ಬಣ್ಣದ ಹೋಲಿ ಹಾಗೂ ಮಂಗಳ ಮಿಲನವನ್ನು ಆಚರಿಸುತ್ತಾರೆ. ಸುಡುವುದು ಎಂದರೆ ಹೆಸರೂ, ಗುರುತನ್ನೂ ಸಮಾಪ್ತಿ ಮಾಡುವುದು. ಹೇಗೆ ಯಾರನ್ನಾದರೂ ಹೆಸರು, ಗುರುತಿನ ಸಹಿತವಾಗಿ ಸಮಾಪ್ತಿ ಮಾಡಬೇಕಾದರೆ ಏನು ಮಾಡುತ್ತೀರಿ? ಸುಟ್ಟು ಬಿಡುತ್ತೀರಿ. ಆದ್ದರಿಂದ ರಾವಣನನ್ನೂ ಸಹ ಸಾಯಿಸಿದ ನಂತರ ಸುಟ್ಟು ಬಿಡುತ್ತಾರೆ. ಇದು ತಾವಾತ್ಮರ ನೆನಪಾರ್ಥವಾಗಿದೆ. ಅಪವಿತ್ರತೆಯನ್ನು ಸುಟ್ಟಿರಿ ಅರ್ಥಾತ್ ಪಾವನ “ಹೋಲಿ”ಯಾಗಿ ಬಿಟ್ಟಿರಿ. ಬಾಪ್ದಾದಾ ಸದಾ ತಿಳಿಸುತ್ತಾರೆ – ಬ್ರಾಹ್ಮಣರು ಹೋಲಿಯನ್ನು ಆಚರಿಸುವುದು ಎಂದರೆ ಹೋಲಿ (ಪವಿತ್ರ) ಯನ್ನಾಗಿ ಮಾಡುವುದು. ಅಂದಾಗ ಇದನ್ನು ಪರಿಶೀಲನೆ ಮಾಡಿಕೊಳ್ಳಿ – ಅಪವಿತ್ರತೆಯನ್ನು ಕೇವಲ ಸಾಯಿಸಿದ್ದೀರಾ ಅಥವಾ ಸುಟ್ಟಿದ್ದೀರಾ? ಸತ್ತಿರುವವರು ಒಂದುವೇಳೆ ಬದುಕಿ ಬಿಡಬಹುದು. ಎಲ್ಲಿಯಾದರೂ ಶ್ವಾಸವು ಮುಚ್ಚಿಟ್ಟುಕೊಂಡಿರುತ್ತದೆ ಆದರೆ ಸುಡುವುದು ಎಂದರೆ ಹೆಸರು, ಗುರುತನ್ನೂ ಸಮಾಪ್ತಿ ಮಾಡುವುದು ಅಂದಾಗ ಎಲ್ಲಿಯವರೆಗೆ ತಲುಪಿದ್ದೇವೆ ಎಂಬುದನ್ನು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ಸ್ವಪ್ನದಲ್ಲಿಯೂ ಸಹ ಅಪವಿತ್ರತೆಯ ಬಚ್ಚಿಟ್ಟುಕೊಂಡಿರುವ ಶ್ವಾಸವು ಪುನಃ ಜೀವಂತವಾಗಬಾರದು. ಅಂತಹವರಿಗೆ ಶ್ರೇಷ್ಠ ಪಾವನ ಆತ್ಮರೆಂದು ಹೇಳಲಾಗುತ್ತದೆ. ಸಂಕಲ್ಪದಿಂದ ಸ್ವಪ್ನಗಳೂ ಸಹ ಪರಿವರ್ತನೆ ಆಗಿ ಬಿಡುತ್ತದೆ.

ಇಂದು ವತನದಲ್ಲಿ ಬಾಪ್ದಾದಾ ಮಕ್ಕಳ ಸಮಯ-ಪ್ರತಿ-ಸಮಯ ಸಂಕಲ್ಪದ ಮೂಲಕ ಅಥವಾ ಬರವಣಿಗೆಯ ಮೂಲಕ ತಂದೆಯ ಮೂಲಕ ಮಾಡಿರುವ ಪ್ರತಿಜ್ಞೆಗಳನ್ನು ನೋಡುತ್ತಿದ್ದೆವು. ಭಲೆ ಸ್ಥಿತಿಯಲ್ಲಿ ಮಹಾರಥಿಯಿರಬಹುದು, ಸೇವೆಯಲ್ಲಿ ಮಹಾರಥಿಯಿರಬಹುದು. ಇಬ್ಬರ ಸಮಯ-ಪ್ರತಿ-ಸಮಯದ ಪ್ರತಿಜ್ಞೆಗಳು ಬಹಳ ಒಳ್ಳೆಯದಾಗಿ ಮಾಡಿದ್ದೀರಿ. ಮಹಾರಥಿಗಳಲ್ಲಿಯೂ ಎರಡು ಪ್ರಕಾರದವರಿದ್ದಾರೆ. ಒಬ್ಬರು ತನ್ನನ್ನು ವರದಾನ ಹಾಗೂ ಆಸ್ತಿಯ ಪ್ರಾಪ್ತಿಯ ಪುರುಷಾರ್ಥದ ಆಧಾರದಿಂದ ಮಹಾರಥಿಗಳು ಮತ್ತು ಎರಡನೆಯವರು ಯಾವುದಾದರೊಂದು ಸೇವೆಯ ವಿಶೇಷ ಆಧಾರದಿಂದ ಮಹಾರಥಿಗಳು. ಇಬ್ಬರೂ ಮಹಾರಥಿಗಳೆಂದೇ ಕರೆಸಿಕೊಳ್ಳುತ್ತಾರೆ ಆದರೆ ಮೊದಲನೆಯವರನ್ನು ತಿಳಿಸಿದೆವಲ್ಲವೆ – ಸ್ಥಿತಿಯ ಆಧಾರದ ಮೇಲೆ ಇರುವವರು, ಸದಾ ಮನಸ್ಸಿನಿಂದ ಅತೀಂದ್ರಿಯ ಸುಖದ ಸಂತುಷ್ಟತೆಯ ಸರ್ವರ ಹೃದಯದ ಸ್ನೇಹದ ಪ್ರಾಪ್ತಿ ಸ್ವರೂಪದ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾರೆ ಮತ್ತು ಎರಡನೇ ನಂಬರಿನವರು ಸೇವೆಯ ವಿಶೇಷತೆಯ ಆಧಾರದಿಂದ ಆಗಿರುವವರು, ತನುವಿನಿಂದ ಅರ್ಥಾತ್ ಹೊರಗಿನಿಂದ ಸೇವೆಯ ವಿಶೇಷತೆಯ ಫಲ ಸ್ವರೂಪವಾಗಿ ಸಂತುಷ್ಟವಾಗಿ ಕಂಡು ಬರುತ್ತಾರೆ. ಸೇವೆಯ ವಿಶೇಷತೆಯ ಕಾರಣ ಸೇವೆಯ ಆಧಾರದ ಮೇಲೆ ಮನಸ್ಸಿನ ಸಂತುಷ್ಟತೆಯಿರುತ್ತದೆ. ಸೇವೆಯ ವಿಶೇಷತೆಯ ಕಾರಣ ಸರ್ವರ ಸ್ನೇಹವೂ ಇರುತ್ತದೆ ಆದರೆ ಮನಸ್ಸಿನಿಂದ ಹಾಗೂ ಹೃದಯದಿಂದ ಸದಾ ಇರುವುದಿಲ್ಲ. ಕೆಲವೊಮ್ಮೆ ಹೃದಯದಿಂದ, ಕೆಲವೊಮ್ಮೆ ಹೊರಗಿನಿಂದ ಆದರೆ ಸೇವೆಯ ವಿಶೇಷತೆಯು ಮಹಾರಥಿಗಳನ್ನಾಗಿ ಮಾಡಿ ಬಿಡುತ್ತದೆ. ಎಣಿಕೆಯಲ್ಲಿ ಮಹಾರಥಿಯ ಸಾಲಿನಲ್ಲಿ ಬರುತ್ತಾರೆ.

ಇಂದು ಬಾಪ್ದಾದಾ ಮಹಾರಥಿ ಮತ್ತು ಪುರುಷಾರ್ಥಿ ಇಬ್ಬರ ಪ್ರತಿಜ್ಞೆಗಳನ್ನು ನೋಡುತ್ತಿದ್ದೆವು. ಈಗೀಗ ಸಮೀಪದಲ್ಲಿ ಬಹಳ ಪ್ರತಿಜ್ಞೆ ಮಾಡುತ್ತಾರೆ, ಅಂದಾಗ ಏನು ನೋಡಿರಬಹುದು? ಪ್ರತಿಜ್ಞೆಯಿಂದ ಲಾಭವಂತೂ ಆಗುತ್ತದೆ ಏಕೆಂದರೆ ಧೃಡತೆಯ ಪೂರ್ಣ ಗಮನವಿರುತ್ತದೆ. ಪದೇ-ಪದೇ ಪ್ರತಿಜ್ಞೆಯ ಸ್ಮೃತಿಯು ಸಾಮರ್ಥ್ಯವನ್ನು ತರಿಸುತ್ತದೆ. ಇದರ ಕಾರಣ ಅಲ್ಪಸ್ವಲ್ಪ ಪರಿವರ್ತನೆಯೂ ಆಗುತ್ತಾರೆ ಆದರೆ ಬೀಜವು ಮುಚ್ಚಿಡಲ್ಪಟ್ಟಿರುತ್ತದೆ. ಆದ್ದರಿಂದ ಯಾವಾಗ ಅಂತಹ ಸಮಯ ಅಥವಾ ಸಮಸ್ಯೆಯು ಬರುತ್ತದೆಯೋ ಆಗ ‘ಸಮಸ್ಯೆ’ ಅಥವಾ ‘ಕಾರಣ’ದ ನೀರು ಸಿಕ್ಕಿದರೆ ಸಾಕು, ಆ ಮರೆಯಾಗಿರುವ ಬೀಜವು ಪುನಃ ಎಲೆಗಳನ್ನು ಬಿಡಲು ಆರಂಭಿಸಿ ಬಿಡುತ್ತದೆ. ಸದಾಕಾಲಕ್ಕಾಗಿ ಸಮಾಪ್ತಿ ಆಗುವುದಿಲ್ಲ. ಸುಡುವಂತಹ ಹೋಲಿಯನ್ನು ಯಾರು ಆಚರಣೆ ಮಾಡಿದ್ದಾರೆ ಎಂಬುದನ್ನು ಬಾಪ್ದಾದಾ ನೋಡುತ್ತಿದ್ದೇವೆ. ಬೀಜವನ್ನು ಸುಟ್ಟ ಮೇಲೆ ಸುಟ್ಟ ಬೀಜವೆಂದು ಫಲ ಕೊಡುವುದಿಲ್ಲ. ಪ್ರತಿಜ್ಞೆಗಳನ್ನಂತೂ ಎಲ್ಲರೂ ಮಾಡಿದಿರಿ – ಕಳೆದುದನ್ನು ಕಳೆದು ಹಾಕಿ. ಎಲ್ಲಿಯವರೆಗೆ ಏನಾಯಿತೋ, ಸ್ವಯಂನ ಪ್ರತಿ ಹಾಗೂ ಅನ್ಯರ ಪ್ರತಿ ಎಲ್ಲವನ್ನೂ ಸಮಾಪ್ತಿ ಮಾಡಿ ಪರಿವರ್ತನೆ ಮಾಡಿಕೊಳ್ಳುತ್ತೇವೆ ಎಂದು ಎಲ್ಲರೂ ಈಗೀಗ ಪ್ರತಿಜ್ಞೆ ಮಾಡಿದಿರಲ್ಲವೆ. ವಾರ್ತಾಲಾಪದಲ್ಲಿಯೂ ಎಲ್ಲರೂ ಪ್ರತಿಜ್ಞೆ ಮಾಡುತ್ತಾರಲ್ಲವೆ. ಪ್ರತಿಯೊಬ್ಬರ ರೆಕಾರ್ಡ್ ಬಾಪ್ದಾದಾರವರ ಬಳಿ ಇದೆ. ಬಹಳ ಒಳ್ಳೆಯ ರೂಪದಿಂದ ಪ್ರತಿಜ್ಞೆ ಮಾಡುತ್ತಾರೆ. ಕೆಲವರು ಗೀತೆ, ಕವಿತೆಗಳ ಮೂಲಕ, ಇನ್ನೂ ಕೆಲವರು ಚಿತ್ರಗಳ ಮೂಲಕ.

ಬಾಪ್ದಾದಾ ನೋಡುತ್ತಿದ್ದೇವೆ. ಎಷ್ಟನ್ನು ಬಯಸುತ್ತಾರೆಯೋ ಅಷ್ಟು ಪರಿವರ್ತನೆ ಏಕೆ ಆಗುವುದಿಲ್ಲ? ಕಾರಣವೇನು? ಸದಾಕಾಲಕ್ಕಾಗಿ ಏಕೆ ಸಮಾಪ್ತಿಯಾಗುವುದಿಲ್ಲ? ಏನು ನೋಡಿರಬಹುದು? ತನ್ನ ಪ್ರತಿ ಹಾಗೂ ಅನ್ಯರ ಪ್ರತಿ ಸಂಕಲ್ಪ ಮಾಡುತ್ತೀರಿ – ಈ ನಿರ್ಬಲತೆಯನ್ನು ಮತ್ತೆ ಬರಲು ಬಿಡುವುದಿಲ್ಲ ಹಾಗೂ ಅನ್ಯರ ಪ್ರತಿಯೂ ಆಲೋಚಿಸುತ್ತೀರಿ. ಯಾವುದೇ ಆತ್ಮನ ಪ್ರತಿ ಸಂಸ್ಕಾರದ ಕಾರಣ ಅಥವಾ ಲೆಕ್ಕಾಚಾರವು ಸಮಾಪ್ತಿಯಾಗುವ ಕಾರಣ ಏನೆಲ್ಲಾ ಸಂಕಲ್ಪದಲ್ಲಿ, ಮಾತಿನಲ್ಲಿ ಹಾಗೂ ಕರ್ಮದಲ್ಲಿ ಸಂಸ್ಕಾರದ ಘರ್ಷಣೆಯಾಗುತ್ತದೆ ಅದರ ಪರಿವರ್ತನೆ ಮಾಡಿಕೊಳ್ಳುತ್ತೇವೆ ಎಂದು. ಆದರೆ ಸಮಯದಲ್ಲಿ ಅದು ಪುನಃ ಏಕೆ ಪುನರಾವರ್ತನೆಯಾಗುತ್ತದೆ? ಅದಕ್ಕೆ ಕಾರಣವೇನು? ಇನ್ನು ಮುಂದೆ ಈ ಆತ್ಮನ ಈ ಸಂಸ್ಕಾರವನ್ನು ಅರಿತುಕೊಂಡು ಸ್ವಯಂನ್ನು ಸುರಕ್ಷಿತವಾಗಿಟ್ಟುಕೊಂಡು ಆ ಆತ್ಮನಿಗೂ ಶುಭ ಭಾವನೆ, ಶುಭ ಕಾಮನೆಯನ್ನು ಕೊಡುತ್ತೇವೆಂದು ಆಲೋಚಿಸುತ್ತೀರಿ. ಆದರೆ ಹೇಗೆ ಅನ್ಯರ ನಿರ್ಬಲತೆಯನ್ನು ನೋಡುವ, ಕೇಳುವ ಹಾಗೂ ಗ್ರಹಿಸುವ ಹವ್ಯಾಸವು ಸ್ವಾಭಾವಿಕವಾಗಿದೆ ಮತ್ತು ಬಹಳ ಕಾಲದಿಂದ ಇದೆ. ಈ ಹವ್ಯಾಸವನ್ನು ಇಟ್ಟುಕೊಳ್ಳುವುದಿಲ್ಲ, ಇದಂತೂ ಬಹಳ ಒಳ್ಳೆಯದು ಆದರೆ ಅದರ ಸ್ಥಾನದಲ್ಲಿ ಏನು ನೋಡುತ್ತೀರಿ? ಆ ಆತ್ಮನಿಂದ ಏನನ್ನು ಗ್ರಹಿಸುತ್ತೀರಿ ಎಂಬುದನ್ನು ಗಮನದಲ್ಲಿ ಪದೇ-ಪದೇ ಇಟ್ಟುಕೊಳ್ಳುವುದಿಲ್ಲ. ಇದನ್ನು ಮಾಡಬಾರದು ಎಂಬುದು ನೆನಪಿರುತ್ತದೆ ಆದರೆ ಅಂತಹ ಆತ್ಮಗಳ ಪ್ರತಿ ಏನು ಮಾಡಬೇಕು? ಆಲೋಚಿಸಬೇಕು, ನೋಡಬೇಕು ಎಂಬ ಮಾತುಗಳು ಸ್ವಾಭಾವಿಕವಾಗಿ ಗಮನದಲ್ಲಿ ಇರುವುದಿಲ್ಲ. ಹೇಗೆ ಯಾವುದೇ ಸ್ಥಾನವು ಖಾಲಿಯಾಗಿರುತ್ತದೆ, ಅದನ್ನು ಒಳ್ಳೆಯ ರೂಪದಲ್ಲಿ ಉಪಯೋಗಿಸಲಿಲ್ಲವೆಂದರೆ ಖಾಲಿ ಸ್ಥಾನದಲ್ಲಿ ಕೊಳಕು ಹಾಗೂ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಏಕೆಂದರೆ ವಾಯುಮಂಡಲದಲ್ಲಿ ಮಣ್ಣು, ಧೂಳು, ಸೊಳ್ಳೆಗಳು ಇದ್ದೇ ಇರುತ್ತವೆ. ಅವು ಮತ್ತೆ ಸ್ವಲ್ಪ-ಸ್ವಲ್ಪವಾಗಿಯೇ ವೃದ್ಧಿಯಾಗಿ ಬಿಡುತ್ತದೆ ಆದರೆ ಆ ಸ್ಥಾನವನ್ನು ತುಂಬಬೇಕು. ಯಾವಾಗಲೂ ಆತ್ಮಗಳ ಸಂಪರ್ಕದಲ್ಲಿ ಬರುತ್ತೀರೆಂದರೆ ಮೊದಲು ಸ್ವಾಭಾವಿಕ ಪರಿವರ್ತನೆ ಮಾಡಿಕೊಂಡಿರುವ ಶ್ರೇಷ್ಠ ಸಂಕಲ್ಪದ ಸ್ವರೂಪವು ಸ್ಮೃತಿಯಲ್ಲಿ ಬರಬೇಕು ಏಕೆಂದರೆ ಜ್ಞಾನ ಪೂರ್ಣರಂತೂ ಆಗಿಯೇ ಬಿಡುತ್ತೀರಿ. ಎಲ್ಲರ ಗುಣ, ಕರ್ತವ್ಯ, ಸಂಸ್ಕಾರ, ಸೇವೆ, ಸ್ವಭಾವ ಪರಿವರ್ತನೆ, ಶುಭ ಸಂಸ್ಕಾರ ಹಾಗೂ ಸ್ಥಾನವು ಸದಾ ಸಂಪನ್ನವಾಗಿದ್ದರೆ ಅಶುದ್ಧತೆಯನ್ನು ಸ್ವತಹವಾಗಿಯೇ ಸಮಾಪ್ತಿ ಮಾಡಿ ಬಿಡುವುದು.

ಹೇಗೆ ತಿಳಿಸಿದ್ದೆವು – ಕೆಲವು ಮಕ್ಕಳು ನೆನಪಿನಲ್ಲಿ ಕುಳಿತುಕೊಂಡಾಗ ಅಥವಾ ಬ್ರಾಹ್ಮಣ ಜೀವನದಲ್ಲಿ ನಡೆಯುತ್ತಾ-ತಿರುಗಾಡುತ್ತಾ ನೆನಪಿನ ಅಭ್ಯಾಸ ಮಾಡುವಾಗ ನೆನಪಿನಲ್ಲಿ ಶಾಂತಿಯ ಅನುಭವ ಮಾಡುತ್ತಾರೆ ಆದರೆ ಖುಷಿಯ ಅನುಭವ ಮಾಡುವುದಿಲ್ಲ. ಕೇವಲ ಶಾಂತಿಯ ಅನುಭೂತಿಯು ಕೆಲವೊಮ್ಮೆ ತಲೆಯನ್ನು ಭಾರಿ ಮಾಡಿ ಬಿಡುತ್ತದೆ. ಇನ್ನೂ ಕೆಲವೊಮ್ಮೆ ನಿದ್ರೆಯ ಕಡೆ ತೆಗೆದುಕೊಂಡು ಹೋಗುತ್ತದೆ. ಶಾಂತಿಯ ಸ್ಥಿತಿಯ ಜೊತೆಗೆ ಖುಷಿಯಿರುವುದಿಲ್ಲ ಅಂದಮೇಲೆ ಎಲ್ಲಿ ಖುಷಿಯಿಲ್ಲವೋ ಅಲ್ಲಿ ಉಲ್ಲಾಸ-ಉತ್ಸಾಹವಿಲ್ಲ ಮತ್ತು ಯೋಗ ಮಾಡಿದರೂ ಸಹ ತನ್ನೊಂದಿಗೆ ಸಂತುಷ್ಟವಾಗಿರುವುದಿಲ್ಲ, ಸುಸ್ತಾಗಿರುತ್ತಾರೆ. ಸದಾ ಆಲೋಚಿಸುವ ಮೂಡಿನಲ್ಲಿರುತ್ತಾರೆ. ಆಲೋಚಿಸುತ್ತಲೇ ಇರುತ್ತಾರೆ. ಖುಷಿಯೇಕೆ ಇರುವುದಿಲ್ಲ ಎಂಬುದಕ್ಕೂ ಕಾರಣವಿದೆ. ಏಕೆಂದರೆ ಇದನ್ನು ಆಲೋಚಿಸುತ್ತೀರಿ – ನಾನಾತ್ಮನಾಗಿದ್ದೇನೆ, ಬಿಂದುವಾಗಿದ್ದೇನೆ, ಜ್ಯೋತಿ ಸ್ವರೂಪನಾಗಿದ್ದೇನೆ. ತಂದೆಯೂ ಹಾಗೆಯೇ ಇದ್ದಾರೆ ಆದರೆ ನಾನು ಎಂತಹ ಆತ್ಮನಾಗಿದ್ದೇನೆ! ನಾನಾತ್ಮನ ವಿಶೇಷತೆಯೇನಾಗಿದೆ? ಹೇಗೆ ನಾನು ಪದಮಾಪದಮ ಭಾಗ್ಯಶಾಲಿ ಆತ್ಮನಾಗಿದ್ದೇನೆ, ನಾನು ಆದಿ ರಚನೆಯ ಆತ್ಮನಾಗಿದ್ದೇನೆ. ನಾನು ತಂದೆಯ ಹೃದಯ ಸಿಂಹಾಸನಾಧಿಕಾರಿಯಾಗುವ ಆತ್ಮನಾಗಿದ್ದೇನೆ. ಈ ವಿಶೇಷತೆಗಳು ಯಾವುದು ಖುಷಿಯನ್ನು ತರುತ್ತವೆಯೋ ಅದನ್ನು ಆಲೋಚಿಸುವುದಿಲ್ಲ. ಕೇವಲ ಬಿಂದುವಾಗಿದ್ದೇನೆ, ಜ್ಯೋತಿಯಾಗಿದ್ದೇನೆ, ಶಾಂತ ಸ್ವರೂಪನಾಗಿದ್ದೇನೆ ಎಂದರೆ ಶೂನ್ಯದಲ್ಲಿ ಹೊರಟು ಹೋಗುತ್ತೀರಿ. ಆದ್ದರಿಂದ ತಲೆಯು ಭಾರವಾಗಿ ಬಿಡುತ್ತದೆ ಅದೇರೀತಿ ಯಾವಾಗ ಸ್ವಯಂನ ಪ್ರತಿ ಹಾಗೂ ಅನ್ಯ ಆತ್ಮರ ಪ್ರತಿ ಪರಿವರ್ತನೆಯ ಧೃಡ ಸಂಕಲ್ಪ ಮಾಡುತ್ತೀರೋ ಆಗ ಸ್ವಯಂನ ಪ್ರತಿ ಹಾಗೂ ಅನ್ಯ ಆತ್ಮರ ಪ್ರತಿ ಶುಭ ಹಾಗೂ ಶ್ರೇಷ್ಠ ಸಂಕಲ್ಪ ಹಾಗೂ ವಿಶೇಷತೆಯ ಸ್ವರೂಪವನ್ನು ಸದಾ ಇಮರ್ಜ್ ರೂಪದಲ್ಲಿ ಇಟ್ಟುಕೊಳ್ಳಿ ಆಗ ಪರಿವರ್ತನೆ ಆಗುವುದು.

ಹೇಗೆ ಇವರು ಇರುವುದೇ ಹೀಗೆ, ಇದು ಆಗುವುದೇ ಹೀಗೆ, ಇವರು ಹೀಗೆಯೇ ಮಾಡುತ್ತಾರೆ ಎಂಬ ಸಂಕಲ್ಪ ಬರುತ್ತದೆ, ಇದಕ್ಕೆ ಬದಲು ಈ ರೀತಿ ಆಲೋಚಿಸಿ – ಇವರು ವಿಶೇಷತೆಯ ಪ್ರಮಾಣ ಈ ರೀತಿ ವಿಶೇಷವಾಗಿದ್ದಾರೆ. ಹೇಗೆ ನಿರ್ಬಲತೆಗೆ ‘ಹೀಗೆ’ ಮತ್ತು ‘ಹಾಗೆ’ ಎಂದು ಬರುತ್ತದೆಯೋ ಹಾಗೆಯೇ ಶ್ರೇಷ್ಠತೆ ಹಾಗೂ ವಿಶೇಷತೆಗೆ ‘ಹೀಗೆ’, ‘ಹಾಗೆ’ ಎಂಬುದನ್ನು ಸನ್ಮುಖದಲ್ಲಿ ತಂದುಕೊಳ್ಳಿ, ಸ್ಮೃತಿಯನ್ನು ಸ್ವರೂಪವನ್ನು ದೃಷ್ಟಿ, ವೃತ್ತಿಯನ್ನು ಪರಿವರ್ತನೆಯಲ್ಲಿ ತಂದುಕೊಳ್ಳಿ. ಈ ರೂಪದಿಂದ ಸ್ವಯಂನ್ನು ನೋಡಿಕೊಳ್ಳಿ ಮತ್ತು ಅನ್ಯರನ್ನೂ ನೋಡಿ. ಇದಕ್ಕೇ ಸ್ಥಾನವನ್ನು ತುಂಬಿದರು, ಖಾಲಿ ಬಿಡಲಿಲ್ಲವೆಂದು ಹೇಳಲಾಗುತ್ತದೆ. ಈ ವಿಧಿಯಿಂದ ಸುಡುವ ಹೋಲಿಯನ್ನು ಆಚರಿಸಿ. ತನ್ನ ಪ್ರತಿ ಹಾಗೂ ಅನ್ಯರ ಪ್ರತಿ ಈ ರೀತಿ ಎಂದೂ ಆಲೋಚಿಸಬೇಡಿ – ನೋಡಿ, ಇವರು ಬದಲಾಗುವುದೇ ಇಲ್ಲವೆಂದು ನಾವು ಹೇಳಿದ್ದೆವು ಆದರೆ ಆ ಸಮಯದಲ್ಲಿ ತಾವು ತಮ್ಮೊಂದಿಗೆ ಕೇಳಿಕೊಳ್ಳಿ – ‘ನಾನು ಬದಲಾಗಿದ್ದೇನೆಯೇ?’ ಸ್ವ ಪರಿವರ್ತನೆಯೇ ಅನ್ಯರ ಪರಿವರ್ತನೆಯನ್ನು ಸನ್ಮುಖದಲ್ಲಿ ತರುವುದು. ಪ್ರತಿಯೊಬ್ಬರೂ ಇದನ್ನು ಆಲೋಚಿಸಿ- ‘ಮೊದಲು ನಾನು ಪರಿವರ್ತನೆಯಾಗಲು ಉದಾಹರಣೆ ಆಗುತ್ತೇನೆ’ ಇದಕ್ಕೆ ಹೋಲಿಯನ್ನು ಸುಡುವುದು ಎಂದು ಹೇಳುತ್ತಾರೆ. ಸುಡದ ವಿನಃ ಆಚರಿಸಲಾಗುವುದಿಲ್ಲ. ಮೊದಲು ಸುಡಲಾಗುತ್ತದೆ ಏಕೆಂದರೆ ಯಾವಾಗ ಸುಟ್ಟು ಬಿಟ್ಟರು ಎಂದರೆ ಸ್ವಚ್ಛವಾದರು. ಶ್ರೇಷ್ಠ, ಪವಿತ್ರರಾಗಿ ಬಿಟ್ಟರು ಅಂದಾಗ ಇಂತಹ ಆತ್ಮನು ತಂದೆಯಿಂದ ಹಾಗೂ ಸರ್ವ ಆತ್ಮರಿಂದ ಮಂಗಳ ಮಿಲನ ಅರ್ಥಾತ್ ಕಲ್ಯಾಣಕಾರಿ ಶ್ರೇಷ್ಠ ಶುಭ ಮಿಲನವನ್ನು ಆಚರಿಸುತ್ತಲೇ ಇರುತ್ತಾರೆ. ತಿಳಿಯಿತೆ.

ಇಂತಹ ಹೋಲಿಯನ್ನು ಆಚರಿಸಬೇಕಲ್ಲವೆ. ಎಲ್ಲಿ ಉಲ್ಲಾಸ-ಉತ್ಸಾಹವಿರುವುದೋ ಅಲ್ಲಿ ಪ್ರತೀ ಘಳಿಗೆ ಉತ್ಸವವಿರುತ್ತದೆ ಅಂದಾಗ ಖುಷಿಯಿಂದ ಆಚರಿಸಿ. ಆಡಿರಿ, ಕುಣಿಯಿರಿ, ತಿನ್ನಿರಿ, ಮಜಾ ಮಾಡಿ ಆದರೆ ಸದಾ ಹೋಲಿ (ಪವಿತ್ರ) ಆಗಿ ಮಿಲನವನ್ನು ಆಚರಿಸುತ್ತಾ ಇರಿ. ಒಳ್ಳೆಯದು.

ಸದಾ ಪ್ರತೀ ಸೆಕೆಂಡ್ ತಂದೆಯ ಮೂಲಕ ವರದಾನದ ಶುಭಾಷಯಗಳನ್ನು ತೆಗೆದುಕೊಳ್ಳುವವರು, ಸದಾ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನ ಮೂಲಕ ಶುಭ ಭಾವನೆಯ ಶುಭಾಷಯಗಳನ್ನು ಪಡೆಯುವವರು ಅತಿ ಶ್ರೇಷ್ಠ ಪಾವನ ಆತ್ಮರಿಗೆ, ಸದಾ ಸಂಗದ ರಂಗಿನಲ್ಲಿ ರಂಗಿತರಾಗಿರುವ ಆತ್ಮಗಳಿಗೆ ಸದಾ ತಂದೆಯೊಂದಿಗೆ ಮಿಲನವನ್ನು ಆಚರಿಸುವ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವ್ಯಕ್ತಿಗತ ವಾರ್ತಾಲಾಪದ ಸಮಯದಲ್ಲಿ ವರದಾನ ರೂಪದಲ್ಲಿ ನುಡಿಸಿರುವ ಮಹಾವಾಕ್ಯಗಳು:

1. ಸದಾ ತಮ್ಮನ್ನು ತಂದೆಯ ನೆನಪಿನ ಛತ್ರಛಾಯೆಯಲ್ಲಿ ಇರುವಂತಹ ಶ್ರೇಷ್ಠಾತ್ಮರೆಂದು ಅನುಭವ ಮಾಡುವಿರಾ? ಛತ್ರಛಾಯೆಯೇ ಸುರಕ್ಷತೆಯ ಸಾಧನವಾಗಿದೆ. ಈ ಛತ್ರಛಾಯೆಯಿಂದ ಸಂಕಲ್ಪ ಕಾಲನ್ನು ಹೊರಗಿಟ್ಟರೂ ಏನಾಗುವುದು? ರಾವಣನು ಹೊತ್ತುಕೊಂಡು ಹೋಗುವನು ಮತ್ತು ಶೋಕವಾಟಿಕೆಯಲ್ಲಿ ಕೂರಿಸಿ ಬಿಡುವನು. ಅಲ್ಲಿಗಂತು ಹೋಗಬಾರದು, ಸದಾ ತಂದೆಯ ಛತ್ರಛಾಯೆಯಲ್ಲಿ ಇರುವವರು ಮತ್ತು ತಂದೆಯ ಸ್ನೇಹಿ ಆತ್ಮನಾಗಿದ್ದೇನೆ ಎಂಬ ಅನುಭವದಲ್ಲಿಯೇ ಇರಿ. ಇದೇ ಅನುಭವದಿಂದ ಸದಾ ಶಕ್ತಿಶಾಲಿಯಾಗಿ ಮುಂದುವರೆಯುತ್ತಾ ಇರುತ್ತೀರಿ.

2. ಸದಾ ತಮ್ಮನ್ನು ಬಾಪ್ದಾದಾರವರ ದೃಷ್ಟಿಯಲ್ಲಿ ಸಮಾವೇಶವಾಗಿರುವ ಆತ್ಮನೆಂದು ಅನುಭವ ಮಾಡುವಿರಾ? ನಯನಗಳಲ್ಲಿ ಸಮಾವೇಶವಾಗಿರುವ ಆತ್ಮನ ಸ್ವರೂಪವೇನಾಗಿರುತ್ತದೆ? ನಯನಗಳಲ್ಲಿ ಏನಿರುತ್ತದೆ? ಬಿಂದು. ನೋಡುವಂತಹ ಶಕ್ತಿಯೇ ಬಿಂದುವಿನಲ್ಲಿದೆ ಅಲ್ಲವೆ. ಅಂದಮೇಲೆ ನಯನಗಳಲಿ ಸಮಾವೇಶವಾಗಿರುವ ಅಂದರೆ ಸದಾ ಬಿಂದು ಸ್ವರೂಪದಲ್ಲಿ ಸ್ಥಿತರಾಗಿರುವವರು – ಇಂತಹ ಅನುಭವ ಆಗುತ್ತದೆಯಲ್ಲವೆ! ಇಂತಹವರಿಗೇ “ಕಣ್ಮಣಿ”ಗಳೆಂದು ಹೇಳುವರು. ಅಂದಮೇಲೆ ಸದಾ ತಮ್ಮನ್ನು ಈ ಸ್ಮೃತಿಯಿಂದ ಮುಂದುವರೆಸುತ್ತಿರಿ. ಸದಾ ಇದೇ ನಶೆಯಲ್ಲಿರಿ – ನಾನು ‘ಕಣ್ಮಣಿ’ ಆತ್ಮನಾಗಿದ್ದೇನೆ.

ವರದಾನ:-

ಹೇಗೆ ಯಾವುದೇ ಆಕರ್ಷಣೆ ಮಾಡುವ ವಸ್ತುವು, ತನ್ನ ಅಕ್ಕ ಪಕ್ಕದಲ್ಲಿ ಇರುವವರನ್ನು ತನ್ನ ಕಡೆಗೆ ಆಕರ್ಷಿಸುತ್ತದೆ, ಎಲ್ಲರ ಗಮನವು ಅದರ ಕಡೆಗೆ ಹೋಗುತ್ತದೆ. ಹಾಗೆಯೇ ಯಾವಾಗ ತಮ್ಮ ವೃತ್ತಿ ಅಲೌಕಿಕ, ಆತ್ಮೀಯತೆಯಿಂದ ಕೂಡಿರುತ್ತದೆಯೆಂದರೆ, ಸ್ವತಹವಾಗಿಯೇ ತಮ್ಮ ಪ್ರಭಾವವು ಅನೇಕ ಆತ್ಮರುಗಳ ಮೇಲೆ ಬೀರುವುದು. ಅಲೌಕಿಕ ವೃತ್ತಿ ಅರ್ಥಾತ್ ಭಿನ್ನ ಹಾಗೂ ಪ್ರಿಯವಾದ ಸ್ಥಿತಿಯು ಸ್ವತಹವಾಗಿಯೇ ಅನೇಕ ಆತ್ಮರನ್ನು ಆಕರ್ಷಿಸುತ್ತದೆ.ಇಂತಹ ಅಲೌಕಿಕ ಶಕ್ತಿಶಾಲಿ ಆತ್ಮರು ಮಾಸ್ಟರ್ ಜ್ಞಾನ ಸೂರ್ಯನಾಗಿದ್ದು, ತನ್ನ ಪ್ರಕಾಶತೆಯನ್ನು ನಾಲ್ಕೂ ಕಡೆಗಳಲ್ಲಿ ಹರಡಿಸುತ್ತಾರೆ.

ಸ್ಲೋಗನ್:-

ಸೂಚನೆ: ಇಂದು ತಿಂಗಳಿನ ಮೂರನೇ ರವಿವಾರ, ಅಂತರಾಷ್ಟ್ರೀಯ ಯೋಗ ದಿನವಾಗಿದೆ. ಬಾಬಾರವರ ಸರ್ವ ಮಕ್ಕಳು ಸಂಜೆ 6.30 ರಿಂದ 7.30 ಗಂಟೆಯವರೆಗೆ, ವಿಶೇಷವಾಗಿ ಮಾಸ್ಟರ್ ಮುಕ್ತಿ ದಾತಾ ಆಗಿದ್ದು, ಹಳೆಯ ದೇಹ ಹಾಗೂ ಪ್ರಪಂಚದ ಬಂಧನಗಳಿಂದ, ಹಳೆಯ ಸಂಸ್ಕಾರ-ಸ್ವಭಾವದಿಂದ ಮುಕ್ತರಾಗಿದ್ದು ಮುಕ್ತಿ-ಜೀವನ್ಮುಕ್ತಿಯ ವರದಾನ ಕೊಡುವಂತಹ ಸೇವೆ ಮಾಡಿರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top