14 October 2021 KANNADA Murli Today | Brahma Kumaris

Read and Listen today’s Gyan Murli in Kannada

October 13, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ಯೋಗ ಬಲದಿಂದ ವಿಕಾರಗಳೆಂಬ ರಾವಣನ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಂಡು ಸತ್ಯ-ಸತ್ಯವಾದ ದಶಹರವನ್ನು ಆಚರಿಸಿ”

ಪ್ರಶ್ನೆ:: -

ರಾಮಾಯಣ ಮತ್ತು ಮಹಾಭಾರತದ ಪರಸ್ಪರ ಏನು ಸಂಬಂಧವಿದೆ? ದಶಹರ ಯಾವ ಮಾತನ್ನು ಸಿದ್ಧ ಮಾಡುತ್ತದೆ?

ಉತ್ತರ:-

ದಶಹರಾ ಆಗುವುದು ಎಂದರೆ ರಾವಣನು ಸಮಾಪ್ತಿಯಾಗುವುದು ಮತ್ತು ಸೀತೆಯರಿಗೆ ಮುಕ್ತಿ ಸಿಗುವುದು ಆದರೆ ದಶಹರಾವನ್ನು ಕೇವಲ ಆಚರಣೆ ಮಾಡಿದರೆ ರಾವಣನಿಂದ ಮುಕ್ತಿ ಸಿಗುವುದಿಲ್ಲ. ಯಾವಾಗ ಮಹಾಭಾರತವಾಗುತ್ತದೆಯೋ ಆಗ ಎಲ್ಲಾ ಸೀತೆಯರಿಗೆ ಮುಕ್ತಿಯು ಪ್ರಾಪ್ತಿಯಾಗುತ್ತದೆ. ಮಹಾಭಾರತ ಯುದ್ಧದಿಂದ ರಾವಣ ರಾಜ್ಯವು ಸಮಾಪ್ತಿಯಾಗುತ್ತದೆ. ಆದ್ದರಿಂದ ರಾಮಾಯಣ-ಮಹಾಭಾರತ ಮತ್ತು ಗೀತೆಯ ಪರಸ್ಪರ ಬಹಳ ಆಳವಾದ ಸಂಬಂಧವಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸಭೆಯಲ್ಲಿ ಜ್ಯೋತಿ ಬೆಳಗಿತು…..

ಓಂ ಶಾಂತಿ. ತಂದೆಯು ಆದೇಶಿಸುತ್ತಾರೆ – ನೀವು ಬ್ರಾಹ್ಮಣ ಸಂಪ್ರದಾಯದವರಾಗಿದ್ದೀರಿ. ಈಗ ನಿಮಗೆ ದೈವೀ ಸಂಪ್ರದಾಯದವರೆಂದು ಹೇಳಲು ಸಾಧ್ಯವಿಲ್ಲ. ನೀವೀಗ ಬ್ರಾಹ್ಮಣ ಸಂಪ್ರದಾಯದವರಾಗಿದ್ದೀರಿ. ನಂತರ ದೈವೀ ಸಂಪ್ರದಾಯದವರು ಆಗಲಿದ್ದೀರಿ. ಈ ಯಾವ ರಾಮಾಯಣವಿದೆಯೋ ಇದು ಇಂದು (ದಶಹರದಂದು) ಮುಕ್ತಾಯವಾಗಬೇಕು ಆದರೆ ಇದು ಆಗುವುದಿಲ್ಲ. ಒಂದುವೇಳೆ ರಾವಣನು ಸತ್ತರೆ ರಾಮಾಯಣದ ಕಥೆಯೇ ಮುಕ್ತಾಯವಾಗಬೇಕು ಆದರೆ ಆಗುತ್ತಿಲ್ಲ. ಮಹಾಭಾರತ ಯುದ್ಧದಿಂದಲೇ ಇದು ಮುಗಿಯುತ್ತದೆ. ಇವೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ರಾಮಾಯಣವೆಂದರೇನು ಮತ್ತು ಮಹಾಭಾರತವೆಂದರೇನು? ಪ್ರಪಂಚದವರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ರಾಮಾಯಣ ಮತ್ತು ಮಹಾಭಾರತ ಎರಡಕ್ಕೂ ಸಂಬಂಧವಿದೆ, ಮಹಾಭಾರತ ಯುದ್ಧದಿಂದ ರಾವಣ ರಾಜ್ಯವು ಸಮಾಪ್ತಿಯಾಗುತ್ತದೆ ಮತ್ತೆ ಈ ದಶಹರಾವನ್ನು ಆಚರಣೆ ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಗೀತೆ ಅಥವಾ ಮಹಾಭಾರತವು ರಾವಣ ರಾಜ್ಯವನ್ನು ಸಮಾಪ್ತಿ ಮಾಡುವುದಕ್ಕಾಗಿ ಇದೆ. ಈಗಿನ್ನೂ ಸಮಯವಿದೆ ಅದಕ್ಕಾಗಿ ತಯಾರಿ ಆಗುತ್ತಿದೆ, ಅದು ಹಿಂಸಕ ಯುದ್ಧವಾಗಿದೆ, ನಿಮ್ಮದು ಅಹಿಂಸಕವಾಗಿದೆ. ನಿಮ್ಮದು ಗೀತೆಯಾಗಿದೆ, ನೀವು ಗೀತಾ ಜ್ಞಾನವನ್ನು ಕೇಳುತ್ತೀರಿ ಅದರಿಂದ ಏನಾಗುವುದು? ರಾವಣ ರಾಜ್ಯವು ಸಮಾಪ್ತಿಯಾಗಬೇಕಾಗಿದೆ. ಅವರು ಭಲೆ ರಾವಣನನ್ನು ಸಾಯಿಸುತ್ತಾರೆ ಆದರೆ ರಾಮ ರಾಜ್ಯವಂತೂ ಆಗುವುದಿಲ್ಲ. ಈಗ ರಾಮಾಯಣ ಮತ್ತು ಮಹಾಭಾರತ ಇದೆಯಲ್ಲವೆ. ಮಹಾಭಾರತವು ರಾವಣನನ್ನು ಸಮಾಪ್ತಿ ಮಾಡುವುದಕ್ಕಾಗಿ ಇದೆ. ಇವು ಬಹಳ ಗುಹ್ಯ ತಿಳಿದುಕೊಳ್ಳುವ ಮಾತುಗಳಾಗಿವೆ. ಇದರಲ್ಲಿ ವಿಶಾಲ ಬುದ್ಧಿ ಬೇಕು. ತಂದೆಯು ತಿಳಿಸುತ್ತಾರೆ – ಮಹಾಭಾರತ ಯುದ್ಧದಿಂದ ರಾವಣ ರಾಜ್ಯವು ಸಮಾಪ್ತಿಯಾಗುತ್ತದೆ. ಕೇವಲ ರಾವಣನನ್ನು ಸಾಯಿಸುವುದರಿಂದ ರಾವಣ ರಾಜ್ಯವು ಸಮಾಪ್ತಿಯಾಗಿ ಬಿಡುತ್ತದೆ ಎಂದಲ್ಲ ಅದಕ್ಕಾಗಿ ಸಂಗಮದ ಸಮಯವು ಬೇಕಾಗಿದೆ, ಇದು ಸಂಗಮವಾಗಿದೆ. ನೀವೀಗ ರಾವಣನ ಮೇಲೆ ವಿಜಯವನ್ನು ಪಡೆಯುವ ತಯಾರಿ ಮಾಡಿಕೊಳ್ಳುತ್ತೀರಿ, ಇದರಲ್ಲಿ ಜ್ಞಾನದ ಅಸ್ತ್ರಶಸ್ತ್ರಗಳು ಬೇಕು. ಆ ಅಸ್ತ್ರಶಸ್ತ್ರಗಳಲ್ಲ, ಹೇಗೆ ರಾವಣ ಮತ್ತು ರಾಮನ ಯುದ್ಧವಾಯಿತು ಎಂದು ತೋರಿಸುತ್ತಾರೆ. ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ನೀವೀಗ ಯೋಗ ಬಲದಿಂದ ರಾವಣ ರಾಜ್ಯದ ಮೇಲೆ ವಿಜಯ ಗಳಿಸುತ್ತೀರಿ, ಇದು ಗುಪ್ತ ಮಾತಾಗಿದೆ. ಐದು ವಿಕಾರಗಳೆಂಬ ರಾವಣನ ಮೇಲೆ ನಿಮ್ಮದು ವಿಜಯವಾಗುತ್ತದೆ. ಯಾವುದರಿಂದ? ಗೀತೆಯಿಂದ. ತಂದೆಯು ನಿಮಗೆ ಗೀತೆಯನ್ನು ತಿಳಿಸುತ್ತಿದ್ದಾರೆ. ಭಾಗವಂತವಂತೂ ಇಲ್ಲ. ಭಾಗವತದಲ್ಲಿ ಕೃಷ್ಣನ ಚರಿತ್ರೆಯನ್ನು ತೋರಿಸುತ್ತಾರೆ. ವಾಸ್ತವದಲ್ಲಿ ಕೃಷ್ಣನ ಚರಿತ್ರೆಯೇನೂ ಇಲ್ಲ. ನೀವು ತಿಳಿದುಕೊಂಡಿದ್ದೀರಿ, ಯಾವಾಗ ವಿನಾಶವಾಗುವುದೋ ಮಹಾಭಾರಿ ಮಹಭಾರತ ಯುದ್ಧವಾಗುವುದೋ ಅದರಿಂದಲೇ ರಾವಣ ರಾಜ್ಯವು ಸಮಾಪ್ತಿಯಾಗುವುದು. ಏಣಿಯ ಚಿತ್ರದಲ್ಲಿಯೂ ತೋರಿಸಲಾಗಿದೆ, ಯಾವಾಗಿನಿಂದ ರಾವಣ ರಾಜ್ಯವು ಆರಂಭವಾಯಿತೋ ಆಗಿನಿಂದ ಭಕ್ತಿಮಾರ್ಗವಾಗಿದೆ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ಗೀತೆಯ ಸಂಬಂಧವು ಮಹಾಭಾರತ ಯುದ್ಧದೊಂದಿಗೆ ಇದೆ. ನೀವು ಗೀತೆಯನ್ನು ಕೇಳಿ ರಾಜ್ಯವನ್ನು ಪಡೆಯುತ್ತೀರಿ ಮತ್ತು ಸ್ವಚ್ಛತೆಗಾಗಿ ಯುದ್ಧವಾಗುತ್ತದೆ. ಬಾಕಿ ಭಾಗವತದಲ್ಲಿ ಚರಿತ್ರೆಯೆಲ್ಲವೂ ವ್ಯರ್ಥವಾಗಿದೆ. ಶಿವ ಪುರಾಣದಲ್ಲಿ ಏನೂ ಇಲ್ಲ. ಇಲ್ಲದಿದ್ದರೆ ಗೀತೆಯ ಹೆಸರು ಶಿವ ಪುರಾಣ ಎಂದು ಇರಬೇಕು. ಶಿವ ತಂದೆಯೇ ಕುಳಿತು ಜ್ಞಾನವನ್ನು ಕೊಡುತ್ತಾರೆ, ಎಲ್ಲದಕ್ಕಿಂತ ಶ್ರೇಷ್ಠವಾದುದು ಗೀತೆಯಾಗಿದೆ. ಗೀತೆಯು ಎಲ್ಲಾ ಶಾಸ್ತ್ರಗಳಿಗಿಂತ ಚಿಕ್ಕದಾಗಿದೆ, ಮತ್ತೆಲ್ಲಾ ಪುಸ್ತಕಗಳನ್ನು ಬಹಳ ದೊಡ್ಡದಾಗಿ ಮಾಡಿಸಿದ್ದಾರೆ. ಮನುಷ್ಯರ ಜೀವನ ಕಥೆಗಳನ್ನೂ ಸಹ ಬಹಳ ದೊಡ್ಡ-ದೊಡ್ಡದನ್ನಾಗಿ ಮಾಡಿಸಿದ್ದಾರೆ. ನೆಹರು ಶರೀರ ಬಿಟ್ಟರು ನಂತರ ಅವರದು ಎಷ್ಟು ದೊಡ್ಡ ಪುಸ್ತಕವನ್ನು ಮಾಡಿದ್ದಾರೆ! ವಾಸ್ತವದಲ್ಲಿ ಶಿವ ತಂದೆಯ ಗೀತೆಯ ಎಷ್ಟು ದೊಡ್ಡ ಪುಸ್ತಕವಿರಬೇಕು ಆದರೆ ಗೀತೆಯು ಎಷ್ಟು ಚಿಕ್ಕದಾಗಿದೆ ಏಕೆಂದರೆ ತಂದೆಯು ಒಂದೇ ಮುಖ್ಯ ಮಾತನ್ನು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಚಕ್ರವನ್ನು ತಿಳಿದುಕೊಳ್ಳಿ, ಸಾಕು. ಈ ರೀತಿ ಹೇಳಿರುವುದರಿಂದ ಗೀತೆಯನ್ನು ಚಿಕ್ಕದಾಗಿ ಮಾಡಿ ಬಿಟ್ಟಿದ್ದಾರೆ. ಇದು ಕಂಠಪಾಠ ಮಾಡಿಕೊಳ್ಳುವ ಜ್ಞಾನವಾಗಿದೆ. ನಿಮಗೆ ತಿಳಿದಿದೆ – ಗೀತೆಯ ಲಾಕೆಟನ್ನು ಮಾಡಿಸುತ್ತಾರೆ ಅದರಲ್ಲಿ ಚಿಕ್ಕ-ಚಿಕ್ಕ ಅಕ್ಷರಗಳಿರುತ್ತವೆ, ಈಗ ತಂದೆಯೂ ಸಹ ನಿಮ್ಮ ಕೊರಳಿನಲ್ಲಿ ತ್ರಿಮೂರ್ತಿ ಮತ್ತು ರಾಜಧಾನಿಯ ಲಾಕೇಟ್ ತೊಡಿಸುತ್ತಾರೆ. ತಂದೆಯು ತಿಳಿಸುತ್ತಾರೆ – ಗೀತೆಯಿರುವುದೇ ಎರಡು ಶಬ್ಧಗಳು – ತಂದೆ ಮತ್ತು ಆಸ್ತಿ. ಇದು ಗುಪ್ತ ಮಂತ್ರದ ಲಾಕೆಟ್ ಆಗಿದೆ – ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವವು. ನಿಮ್ಮ ಕೆಲಸವಾಗಿದೆ – ಯೋಗಬಲದಿಂದ ವಿಜಯವನ್ನು ಪಡೆಯುವುದು ಮತ್ತೆ ನಿಮಗಾಗಿ ಈ ಪ್ರಪಂಚವೇ ಸ್ವಚ್ಛವಾಗಬೇಕು. ಆದ್ದರಿಂದ ತಂದೆಯು ತಿಳಿಸುತ್ತಾರೆ – ನಿಮ್ಮ ಯೋಗಬಲದಿಂದಲೇ ರಾವಣ ರಾಜ್ಯದ ವಿನಾಶವಾಗುವುದು. ರಾವಣ ರಾಜ್ಯವು ಯಾವಾಗ ಆರಂಭವಾಯಿತು ಎಂಬುದನ್ನು ತಿಳಿದುಕೊಂಡಿಲ್ಲ. ಈ ಜ್ಞಾನವು ಬಹಳ ಸಹಜವಾಗಿದೆ. ಸೆಕೆಂಡಿನ ಮಾತಲ್ಲವೆ! 84 ಜನ್ಮಗಳ ಏಣಿಯಲ್ಲಿಯೂ ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಎಷ್ಟು ಸಹಜವಾಗಿದೆ! ತಂದೆಯು ಜ್ಞಾನ ಸಾಗರನಾಗಿದ್ದಾರೆ, ಜ್ಞಾನವನ್ನು ತಿಳಿಸುತ್ತಲೇ ಇರುತ್ತಾರೆ. ನೀವೆಲ್ಲರೂ ಮುರುಳಿಯ ಕಾಗದಗಳನ್ನು ಒಂದುವೇಳೆ ಕೂಡಿಡುವುದೇ ಆದರೆ ಬಹಳಷ್ಟಾಗಿ ಬಿಡುವುದು. ತಂದೆಯು ವಿವರವಾಗಿ ತಿಳಿಸುತ್ತಾರೆ ಮತ್ತೆ ಸಾರ ರೂಪದಲ್ಲಿ ಇದನ್ನೇ ಹೇಳುತ್ತಾರೆ – ತಂದೆಯನ್ನು ನೆನಪು ಮಾಡಿ ಸಾಕು. ಉಳಿದ ಸಮಯವನ್ನು ಯಾವುದರಲ್ಲಿ ತೊಡಗಿಸುತ್ತೀರಿ? ನಿಮ್ಮ ತಲೆಯ ಮೇಲೆ ಪಾಪಗಳ ಹೊರೆಯು ಬಹಳಷ್ಟಿದೆ ಅದು ನೆನಪಿನಿಂದಲೇ ಇಳಿಯಬೇಕಾಗಿದೆ, ಇದರಲ್ಲಿ ಪರಿಶ್ರಮವಾಗುತ್ತದೆ. ಪದೇ-ಪದೇ ನೀವು ನೆನಪನ್ನು ಮರೆತು ಹೋಗುತ್ತೀರಿ, ನೀವು ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ಎಂದೂ ವಿಘ್ನಗಳು ಬರುವುದಿಲ್ಲ. ದೇಹಾಭಿಮಾನಿಗಳಾಗುವುದರಿಂದ ವಿಘ್ನಗಳು ಬರುತ್ತವೆ, ಅಂತ್ಯದಲ್ಲಿ ದೇಹೀ-ಅಭಿಮಾನಿಗಳಾಗುತ್ತೀರಿ ನಂತರ ಅರ್ಧಕಲ್ಪ ಯಾವುದೇ ವಿಘ್ನವಿರುವುದಿಲ್ಲ. ಇವು ತಿಳಿದುಕೊಳ್ಳುವ ಎಷ್ಟು ಗುಹ್ಯ ಮಾತುಗಳಾಗಿವೆ! ಯಜ್ಞದ ಆದಿಯಿಂದಲೂ ಎಷ್ಟೊಂದು ತಿಳಿಸುತ್ತಾ ಬಂದಿದ್ದಾರೆ ಆದರೂ ಸಹ ಹೇಳುತ್ತಾರೆ – ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿರಿ. ವೃಕ್ಷದ ಜ್ಞಾನವು ವಿಸ್ತಾರವಾಗಿದೆ, ಬೀಜವು ಅತಿ ಚಿಕ್ಕದಾಗಿರುತ್ತದೆ. ಅದರಿಂದ ಎಷ್ಟು ದೊಡ್ಡ ವೃಕ್ಷವು ಬರುತ್ತದೆ!

ಇಂದು ದಶಹರಾ ಅಲ್ಲವೆ! ಈಗ ತಂದೆಯು ತಿಳಿಸುತ್ತಾರೆ – ಮಹಾಭಾರತದೊಂದಿಗೆ ರಾಮಾಯಣದ ಸಂಬಂಧವೇನು? ರಾಮಾಯಣವಂತೂ ಭಕ್ತಿಮಾರ್ಗದ್ದಾಗಿದೆ. ಅರ್ಧಕಲ್ಪದಿಂದ ನಡೆಯುತ್ತಾ ಬಂದಿದೆ ಅಂದರೆ ಈಗ ರಾವಣ ರಾಜ್ಯವು ನಡೆಯುತ್ತಾ ಇದೆ ನಂತರ ಮಹಾಭಾರತವಾಗುವುದು ಆಗ ರಾವಣ ರಾಜ್ಯವು ಸಮಾಪ್ತಿಯಾಗಿ ರಾಮ ರಾಜ್ಯವು ಪ್ರಾರಂಭವಾಗಿ ಬಿಡುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಏನು ಅಂತರವಿದೆ? ರಾಮ ರಾಜ್ಯದ ಸ್ಥಾಪನೆ ಮತ್ತು ರಾವಣ ರಾಜ್ಯದ ವಿನಾಶವಾಗಲಿದೆ. ಗೀತೆಯನ್ನು ಕೇಳಿ ನೀವು ವಿಶ್ವದ ಮಾಲೀಕರಾಗಲು ಯೋಗ್ಯರಾಗುತ್ತೀರಿ. ಗೀತೆ ಮತ್ತು ಮಹಾಭಾರತವಿರುವುದು ಈ ಸಮಯಕ್ಕಾಗಿ, ರಾವಣ ರಾಜ್ಯವು ಸಮಾಪ್ತಿಯಾಗುವುದಕ್ಕಾಗಿ. ಬಾಕಿ ಅವರು ಯಾವ ಯುದ್ಧವನ್ನು ತೋರಿಸುತ್ತಾರೆ ಅದು ತಪ್ಪಾಗಿದೆ. ಇದು ಪಂಚ ವಿಕಾರಗಳ ಮೇಲೆ ಜಯ ಗಳಿಸುವ ಯುದ್ಧವಾಗಿದೆ. ನಿಮಗೆ ತಂದೆಯು ಗೀತೆಯ ಎರಡು ಶಬ್ಧಗಳನ್ನು ತಿಳಿಸುತ್ತಾರೆ – ಮನ್ಮನಾಭವ, ಮಧ್ಯಾಜೀಭವ. ಗೀತೆಯ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಇವೆರಡೂ ಶಬ್ಧಗಳು ಬರುತ್ತವೆ. ಮಕ್ಕಳು ತಿಳಿದುಕೊಂಡಿದ್ದೀರಿ – ಈಗ ಗೀತಾಭಾಗವು ನಡೆಯುತ್ತಿದೆ ಆದರೆ ಯಾರಿಗಾದರೂ ಈ ಮಾತನ್ನು ಹೇಳಿದರೆ ಕೃಷ್ಣನು ಎಲ್ಲಿದ್ದಾನೆ ಎಂದು ಕೇಳುತ್ತಾರೆ. ತಂದೆಯ ತಿಳಿಸುವಿಕೆ ಮತ್ತು ಭಕ್ತಿಮಾರ್ಗದ ಶಾಸ್ತ್ರಗಳಲ್ಲಿ ಎಷ್ಟೊಂದು ಅಂತರವಿದೆ. ರಾಮಾಯಣವೆಂದರೇನು, ಮಹಾಭಾರತವೆಂದರೇನು ಎಂಬುದು ಯಾರಿಗೂ ತಿಳಿದಿಲ್ಲ. ಮಹಾಭಾರತ ಯುದ್ಧದ ನಂತರವೇ ಸ್ವರ್ಗದ ಬಾಗಿಲು ತೆರೆಯುತ್ತದೆ ಆದರೆ ಮನುಷ್ಯರು ಇದನ್ನು ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ನೀವು ತಂದೆಯ ಪರಿಚಯವನ್ನೇ ಈ ರೀತಿ ಕೊಡಿ – ತಂದೆಯು ತಿಳಿಸುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿ. ಇದನ್ನು ತಂದೆಯು ಇಡೀ ಪ್ರಪಂಚದವರಿಗಾಗಿ ಹೇಳುತ್ತಾರೆ. ಒಂದು ಗೀತೆಯನ್ನೇ ಖಂಡನೆ ಮಾಡಿದ್ದಾರೆ. ಗೀತೆಯದು ಎಲ್ಲಾ ಭಾಷೆಗಳಲ್ಲಿ ಪ್ರಚಾರವಿದೆ. ನಿಮ್ಮ ರಾಜ್ಯದಲ್ಲಿ ಒಂದೇ ಭಾಷೆಯಿರುವುದು. ಅಲ್ಲಿ ಯಾವುದೇ ಶಾಸ್ತ್ರ ಪುಸ್ತಕ ಇತ್ಯಾದಿಗಳಿರುವುದಿಲ್ಲ, ಭಕ್ತಿಮಾರ್ಗದ ಯಾವುದೇ ಮಾತುಗಳಿರುವುದಿಲ್ಲ. ಭಾರತದ ಸಂಬಂಧವೇ ರಾಮಾಯಣ, ಮಹಾಭಾರತ ಮತ್ತು ಗೀತೆಯೊಂದಿಗೆ ಇದೆ. ಭಗವಂತನು ಮಕ್ಕಳಿಗೆ ಗೀತೆಯನ್ನು ತಿಳಿಸುತ್ತಾರೆ, ಇದರಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಮಹಾಭಾರತ ಯುದ್ಧವು ಅವಶ್ಯವಾಗಿ ಆಗಬೇಕು ಯಾವುದರಿಂದ ಪತಿತ ಪ್ರಪಂಚವು ಸಮಾಪ್ತಿಯಾಗುವುದು. ಗೀತೆಯಿಂದ ನೀವು ಪಾವನರಾಗುತ್ತೀರಿ. ಪತಿತ-ಪಾವನ ಭಗವಂತನು ಅಂತಿಮದಲ್ಲಿಯೇ ಬರುತ್ತಾರೆ, ತಿಳಿಸುತ್ತಾರೆ – ಮಕ್ಕಳೇ, ಕಾಮ ಮಹಾಶತ್ರುವಾಗಿದೆ. ಇದರ ಮೇಲೆ ವಿಜಯ ಗಳಿಸಬೇಕಾಗಿದೆ. ಕಾಮ ವಿಕಾರಕ್ಕೆ ಎಂದೂ ಸೋಲಬಾರದು, ಇದರಿಂದ ಬಹಳ ನಷ್ಟವಾಗುತ್ತದೆ. ವಿಕಾರಗಳ ಹಿಂದೆ ದೊಡ್ಡ-ದೊಡ್ಡ ಹೆಸರುವಾಸಿ ಅಧಿಕಾರಿಗಳೂ ಸಹ ತಮ್ಮ ಹೆಸರನ್ನು ಕೆಡಿಸಿಕೊಳ್ಳುತ್ತಾರೆ. ಕಾಮ ವಿಕಾರದ ಹಿಂದೆ ಅನೇಕರು ಕೆಟ್ಟು ಹೋಗುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಬಾಬಾರವರ ಬಳಿ ಯುವ ಮಕ್ಕಳು ಬರುತ್ತಾರೆ. ಇಂತಹವರೂ ಅನೇಕರಿದ್ದಾರೆ ಬ್ರಹ್ಮಚರ್ಯದಲ್ಲಿರುತ್ತಾರೆ. ಜೀವನಪರ್ಯಂತ ವಿವಾಹ ಮಾಡಿಕೊಳ್ಳುವುದಿಲ್ಲ, ಸ್ತ್ರೀಯರೂ ಅದೇರೀತಿ ಇರುತ್ತಾರೆ. ನನ್ಸ್ ಎಂದೂ ವಿಕಾರದಲ್ಲಿ ಹೋಗುವುದಿಲ್ಲ, ಆದರೆ ಅದರಿಂದ ಯಾವುದೇ ಪ್ರಾಪ್ತಿಯಿಲ್ಲ. ಇಲ್ಲಂತೂ ಪವಿತ್ರರಾಗಿ ಜನ್ಮ-ಜನ್ಮಾಂತರ ಸ್ವರ್ಗದ ಮಾಲೀಕರಾಗುವ ಮಾತಾಗಿದೆ. ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ತಲೆಯ ಮೇಲಿದೆ. ಅದು ಯಾವಾಗ ಇಳಿಯುವುದೋ ಆಗಲೇ ಸ್ವರ್ಗದಲ್ಲಿ ಹೋಗುವಿರಿ. ಇಲ್ಲಿ ಮನುಷ್ಯರು ಪಾಪ ಮಾಡುತ್ತಿರುತ್ತಾರೆ. ಭಲೆ ಒಂದು ಜನ್ಮ ಯಾರಾದರೂ ಸನ್ಯಾಸಿ ಆಗಬಹುದು ಆದರೆ ಜನ್ಮವಂತೂ ವಿಕಾರದಿಂದಲೇ ತೆಗೆದುಕೊಳ್ಳುತ್ತಾರೆ. ರಾವಣ ರಾಜ್ಯದಲ್ಲಿ ವಿಕಾರವಿಲ್ಲದೆ ಜನ್ಮವಾಗುವುದಿಲ್ಲ. ಕೇಳುತ್ತಾರೆ, ಅಲ್ಲಿ ಹೇಗೆ ಜನ್ಮವಾಗುವುದು? ಯೋಗಬಲವೆಂದು ಯಾವುದಕ್ಕೆ ಹೇಳಲಾಗುತ್ತದೆ? ಇದನ್ನು ಕೇಳುವ ಅವಶ್ಯಕತೆಯೇ ಇಲ್ಲ ಏಕೆಂದರೆ ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ. ರಾವಣ ರಾಜ್ಯವೇ ಇಲ್ಲವೆಂದ ಮೇಲೆ ಪ್ರಶ್ನೆಯೇ ಬರಲು ಸಾಧ್ಯವಿಲ್ಲ, ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಯಾವಾಗ ವೃದ್ಧರಾಗುವರೋ ಆಗ ನಾನು ಹೋಗಿ ಮಗುವಾಗುತ್ತೇನೆ, ತಾಯಿಯ ಗರ್ಭದಲ್ಲಿ ಹೋಗಬೇಕೆಂದು ಸಾಕ್ಷಾತ್ಕಾರವಾಗುತ್ತದೆ. ನಾನು ಇಂತಹ ಮನೆಯಲ್ಲಿಯೇ ಹೋಗಿ ಜನಿಸುವೆನೆಂದು ತಿಳಿಯುವುದಿಲ್ಲ. ಕೇವಲ ಈಗ ಚಿಕ್ಕ ಮಗುವಾಗಬೇಕಾಗಿದೆ ಎಂಬುದಷ್ಟೇ ತಿಳಿಯುತ್ತದೆ. ಹೇಗೆ ನವಿಲಿನ ಉದಾಹರಣೆಯಿದೆ, ಅದರ ಕಣ್ಣೀರಿನಿಂದಲೇ ಗರ್ಭ ಧಾರಣೆಯಾಗುತ್ತದೆ. ಪರಂಗಿಯ ಗಿಡಗಳಲ್ಲಿಯೂ ಒಂದು ಹೆಣ್ಣು, ಒಂದು ಗಂಡು ಗಿಡವಿರುತ್ತದೆ. ಒಂದರ ಪಕ್ಕದಲ್ಲಿ ಇನ್ನೊಂದು ಇದ್ದಾಗ ಅವು ಫಲ ಕೊಡುತ್ತವೆ. ಇದೂ ಸಹ ಆಶ್ಚರ್ಯಕರವಾಗಿದೆ. ಯಾವಾಗ ಜಡ ವಸ್ತುಗಳಲ್ಲಿಯೇ ಈ ರೀತಿಯಿದೆಯೆಂದರೆ ಚೈತನ್ಯದಲ್ಲಿ ಸತ್ಯಯುಗದಲ್ಲಿ ಏನು ತಾನೆ ಆಗಲು ಸಾಧ್ಯವಿಲ್ಲ! ಇದೆಲ್ಲಾ ವಿವರವು ಮುಂದೆ ಹೋದಂತೆ ಅರ್ಥವಾಗುವುದು. ಮುಖ್ಯ ಮಾತೇನೆಂದರೆ ತಂದೆಯನ್ನು ನೆನಪು ಮಾಡಿ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಆಸ್ತಿಯನ್ನು ತೆಗೆದುಕೊಳ್ಳಿ ನಂತರ ಅಲ್ಲಿನ ಪದ್ಧತಿಗಳು ಏನಿರುವುದೊ ಅದನ್ನು ತಾವೇ ನೋಡಿರಿ. ನೀವು ಯೋಗ ಬಲದಿಂದ ವಿಶ್ವದ ಮಾಲೀಕರಾಗುತ್ತೀರಿ ಅಂದಮೇಲೆ ಮಕ್ಕಳು ಜನಿಸಲು ಏಕೆ ಸಾಧ್ಯವಿಲ್ಲ! ಹೀಗೆ ಅನೇಕರು ಪ್ರಶ್ನೆಗಳನ್ನು ಕೇಳುತ್ತಾರೆ ನಂತರ ಯಾವುದೇ ಮಾತಿನಲ್ಲಿ ಸರಿಯಾದ ಉತ್ತರ ಸಿಗಲಿಲ್ಲವೆಂದರೆ ಬಿದ್ದು ಹೋಗುತ್ತಾರೆ. ಚಿಕ್ಕ ಮಾತಿನಲ್ಲಿಯೇ ಸಂಶಯ ಬಂದು ಬಿಡುತ್ತದೆ. ಶಾಸ್ತ್ರಗಳಲ್ಲಿ ಇಂತಹ ಯಾವುದೇ ಮಾತುಗಳಿಲ್ಲ, ಶಾಸ್ತ್ರಗಳು ಭಕ್ತಿಮಾರ್ಗದ್ದಾಗಿದೆ. ಪರಮಪಿತ ಪರಮಾತ್ಮನು ಬಂದು ಬ್ರಾಹ್ಮಣ ಧರ್ಮ, ಸೂರ್ಯವಂಶಿ-ಚಂದ್ರವಂಶಿ ಧರ್ಮದ ಸ್ಥಾಪನೆ ಮಾಡುತ್ತಾರೆ. ಬ್ರಾಹ್ಮಣರು ಸಂಗಮಯುಗ ವಾಸಿಗಳಾಗಿದ್ದೀರಿ, ತಂದೆಯು ಸಂಗಮಯುಗದಲ್ಲಿಯೇ ಬರಬೇಕಾಗುತ್ತದೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಇನ್ನೊಂದು ಕಡೆಯವರು ಹೇ ಮುಕ್ತಿದಾತ, ದುಃಖದಿಂದ ಮುಕ್ತಗೊಳಿಸಿ ಎಂದು ಕರೆಯುತ್ತಾರೆ. ದುಃಖ ಕೊಡುವವರು ಯಾರು ಎಂಬುದೂ ಸಹ ಅವರಿಗೆ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ, ರಾವಣ ರಾಜ್ಯವು ಸಮಾಪ್ತಿಯಾಗುತ್ತದೆ. ನಿಮಗೆ ತಂದೆಯು ರಾಜಯೋಗವನ್ನು ಕಲಿಸುತ್ತಾರೆ. ಯಾವಾಗ ವಿದ್ಯೆಯು ಪೂರ್ಣವಾಗುವುದೋ ಆಗ ವಿನಾಶವಾಗುತ್ತದೆ. ಇದರ ಹೆಸರು ಮಹಾಭಾರತ ಎಂದು ಇಟ್ಟಿದ್ದಾರೆ. ಮಹಾಭಾರತದಲ್ಲಿ ರಾವಣ ರಾಜ್ಯವು ಸಮಾಪ್ತಿಯಾಗುತ್ತದೆ. ದಶಹರಾದಲ್ಲಿ ಒಬ್ಬ ರಾವಣನನ್ನು ಸಮಾಪ್ತಿ ಮಾಡುತ್ತಾರೆ, ಅವು ಹದ್ದಿನ ಮಾತುಗಳಾಗಿವೆ, ಇವು ಬೇಹದ್ದಿನ ಮಾತುಗಳಾಗಿವೆ. ಇಡೀ ಪ್ರಪಂಚವೇ ಸಮಾಪ್ತಿಯಾಗುವುದು. ಇಷ್ಟು ಚಿಕ್ಕ-ಚಿಕ್ಕ ಮಕ್ಕಳು ಎಷ್ಟು ದೊಡ್ಡ ಜ್ಞಾನವನ್ನು ಪಡೆಯುತ್ತಿದ್ದೀರಿ, ಇದರ ಮುಂದೆ ಆ ಲೌಕಿಕ ವಿದ್ಯೆಯು ಸೀಮೆ ಎಣ್ಣೆಯಂತೆ. ಇದು ಅಪ್ಪಟ ತುಪ್ಪವಾಗಿದೆ ಅಂದಾಗ ರಾತ್ರಿ-ಹಗಲಿನ ಅಂತರವಿದೆಯಲ್ಲವೆ. ರಾವಣ ರಾಜ್ಯದಲ್ಲಿ ನೀವು ಸೀಮೆ ಎಣ್ಣೆ (ತುಚ್ಚ ಎಣ್ಣೆ)ಯನ್ನು ಸೇವಿಸಬೇಕಾಗುತ್ತದೆ. ಮೊದಲು ಎಷ್ಟು ಅಗ್ಗವಾಗಿ ಅಪ್ಪಟ ತುಪ್ಪವು ಸಿಗುತ್ತಿತ್ತು ನಂತರ ಬೇಡಿಕೆ ಹೆಚ್ಚಾದ ಕಾರಣ ಎಣ್ಣೆ (ತೈಲ) ತಿನ್ನಬೇಕಾಯಿತು. ಈ ಗ್ಯಾಸ್, ವಿದ್ಯುತ್ ಇತ್ಯಾದಿಗಳೇನೂ ಮೊದಲು ಇರಲಿಲ್ಲ. ಕೆಲವೇ ವರ್ಷಗಳಲ್ಲಿ ಎಷ್ಟೊಂದು ಅಂತರವಾಗಿದೆ! ನೀವು ತಿಳಿದುಕೊಂಡಿದ್ದೀರಿ, ಇದೆಲ್ಲವೂ ಸಮಾಪ್ತಿಯಾಗುವುದಿದೆ. ಶಿವ ತಂದೆಯು ನಮ್ಮನ್ನು ಲಕ್ಷ್ಮೀ-ನಾರಾಯಣರಂತೆ ಆಗುವುದಕ್ಕೆ ಓದಿಸುತ್ತಿದ್ದಾರೆ. ಈ ನಶೆಯು ಈ ಬ್ರಹ್ಮಾ ತಂದೆಗೆ ಹೆಚ್ಚಿನದಾಗಿ ಇರುತ್ತದೆ. ಮಕ್ಕಳಿಗೆ ಮಾಯೆಯು ಮರೆಸುತ್ತದೆ. ಬಾಬಾ, ನಾವು ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೇವೆ ಎಂದು ಹೇಳುತ್ತೀರಿ ಅಂದಮೇಲೆ ಆ ನಶೆ ಏಕೆ ಇರುವುದಿಲ್ಲ! ಮಧುರ ಮನೆ, ಮಧುರ ರಾಜಧಾನಿಯೇ ಮರೆತು ಹೋಗುತ್ತದೆ. ತಂದೆಗೆ ಗೊತ್ತಿದೆ, ಯಾರು-ಯಾರು ಅವಿಶ್ರಾಂತ ಸೇವೆ ಮಾಡುವರೋ ಅವರೇ ಮಹಾರಾಜಕುಮಾರರಾಗಿದ್ದಾರೆ. ನಿಮಗೆ ಈ ನಶೆಯು ಏಕೆ ಇರುವುದಿಲ್ಲ? ಏಕೆಂದರೆ ನೆನಪಿನಲ್ಲಿರುವುದಿಲ್ಲ. ಸೇವೆಯಲ್ಲಿ ತತ್ಫರರಾಗಿರುವುದಿಲ್ಲ, ಕೆಲವೊಮ್ಮೆ ಸೇವೆಯ ಉಮ್ಮಂಗದಲ್ಲಿರುತ್ತೀರಿ, ಕೆಲವೊಮ್ಮೆ ತಣ್ಣಗಾಗಿ ಬಿಡುತ್ತೀರಿ, ಇದನ್ನು ಪ್ರತಿಯೊಬ್ಬರೂ ತಮ್ಮೊಂದಿಗೆ ಕೇಳಿಕೊಳ್ಳಿ – ಈ ರೀತಿ ಆಗುತ್ತದೆಯಲ್ಲವೆ! ಕೆಲಕೆಲವೊಮ್ಮೆ ತಪ್ಪುಗಳೂ ಆಗಿ ಬಿಡುತ್ತವೆ ಆದ್ದರಿಂದ ತಂದೆಯು ತಿಳಿಸುತ್ತಾರೆ. ಮಾತು ಬಹಳ ಮಧುರವಾಗಿರಲಿ, ಎಲ್ಲರನ್ನೂ ಖುಷಿ ಪಡಿಸುವಂತಿರಲಿ. ಯಾರಿಗೂ ಆವೇಶ ಬರದಿರಲಿ. ತಂದೆಯು ಎಷ್ಟು ಪ್ರೀತಿಯ ಸಾಗರನಾಗಿದ್ದಾರೆ! ಈ ಗೋ-ಹತ್ಯೆಯನ್ನು ನಿಲ್ಲಿಸುವುದಕ್ಕಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾ ಇರುತ್ತಾರೆ. ತಂದೆಯು ತಿಳಿಸುತ್ತಾರೆ – ಎಲ್ಲದಕ್ಕಿಂತ ದೊಡ್ಡ ಹತ್ಯೆಯಾಗಿದೆ, ಕಾಮ ಕಟಾರಿಯನ್ನು ನಡೆಸುವುದು. ಮೊದಲು ಇದನ್ನು ನಿಲ್ಲಿಸಿ. ಬಾಕಿ ಆ ಗೋ-ಹತ್ಯೆಯೇನೂ ನಿಲ್ಲುವುದಿಲ್ಲ, ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ. ಈ ಕಾಮ ಕಟಾರಿ ಇಬ್ಬರೂ ನಡೆಸುವಂತಿಲ್ಲ. ಮನುಷ್ಯರ ಮಾತೆಲ್ಲಿ! ತಂದೆಯ ಮಾತೆಲ್ಲಿ! ಯಾರು ಕಾಮ ವಿಕಾರವನ್ನು ಗೆಲ್ಲವರೋ ಅವರೇ ಪವಿತ್ರ ಪ್ರಪಂಚದ ಮಾಲೀಕರಾಗುವರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಸಮಾನ ಪ್ರೀತಿಯ ಸಾಗರರಾಗಬೇಕಾಗಿದೆ. ಎಂದೂ ಆವೇಶದಲ್ಲಿ ಬರಬಾರದು. ತಮ್ಮ ನಾಲಿಗೆಯನ್ನು (ಮಾತು) ಬಹಳ ಮಧುರವಾಗಿ ಇಟ್ಟುಕೊಳ್ಳಬೇಕಾಗಿದೆ. ಎಲ್ಲರನ್ನೂ ಖುಷಿ ಪಡಿಸಬೇಕಾಗಿದೆ.

2. ಅವಿಶ್ರಾಂತ ಸೇವೆ ಮಾಡಬೇಕಾಗಿದೆ. ನಶೆಯಲ್ಲಿರಿ – ಈಗ ಈ ಹಳೆಯ ಶರೀರವನ್ನು ಬಿಟ್ಟು ಹೋಗಿ ರಾಜಕುಮಾರ-ಕುಮಾರಿಯರಾಗುತ್ತೇವೆ.

ವರದಾನ:-

ಸೇವಾಧಾರಿಯ ಕರ್ತವ್ಯವಾಗಿದೆ – ನಿರಂತರ ಸೇವೆಯಲ್ಲಿರುವುದು. ಭಲೆ ಮನಸಾ ಸೇವೆಯಾಗಿರಬಹುದು, ಭಲೆ ವಾಚಾ-ಕರ್ಮಣಾ ಸೇವೆಯಾಗಿರಬಹುದು. ಸೇವಾಧಾರಿಯು ಎಂದಿಗೂ ಸಹ ಸೇವೆಯನ್ನು ತನ್ನಿಂದ ಬೇರೆ ಎಂದು ತಿಳಿಯುವುದಿಲ್ಲ. ಯಾರ ಬುದ್ಧಿಯಲ್ಲಿ ಸದಾ ಸೇವೆಯ ಲಗನ್ನಿರುತ್ತದೆಯೋ ಅವರ ಲೌಕಿಕ ಪ್ರವೃತ್ತಿಯು ಬದಲಾಗಿ ಈಶ್ವರೀಯ ಪ್ರವೃತ್ತಿಯಾಗಿ ಬಿಡುತ್ತದೆ. ಸೇವಾಧಾರಿಯು ಮನೆಯನ್ನು ಮನೆ ಎಂದು ತಿಳಿಯುವುದಿಲ್ಲ ಆದರೆ ಸೇವಾಸ್ಥಾನವೆಂದು ತಿಳಿದುಕೊಂಡು ನಡೆಯುತ್ತಾರೆ. ಸೇವಾಧಾರಿಯ ಮುಖ್ಯ ಗುಣವೆಂದರೆ ತ್ಯಾಗ ಆಗಿದೆ. ತ್ಯಾಗ ವೃತ್ತಿಯಿರುವವರು ಪ್ರವೃತ್ತಿಯಲ್ಲಿ ತಪಸ್ವಿಮೂರ್ತಿ ಆಗಿರುತ್ತಾರೆ, ಇದರಿಂದ ಸೇವೆಯು ಸ್ವತಹವಾಗಿ ಆಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top