14 November 2021 KANNADA Murli Today | Brahma Kumaris

Read and Listen today’s Gyan Murli in Kannada

13 November 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ವರದಾತನನ್ನು ರಾಜಿ ಮಾಡಿಕೊಳ್ಳುವ ಸಹಜ ವಿಧಿ

♫ ಕೇಳು ಇಂದಿನ ಮುರ್ಲಿ (audio)➤

ಇಂದು ವರದಾತ ತಂದೆಯು ತನ್ನ ವರದಾನೀ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ವರದಾತನ ಮಕ್ಕಳು ಎಲ್ಲರೂ ವರದಾನಿಗಳಾಗಿದ್ದಾರೆ ಆದರೆ ನಂಬರ್ವಾರ್ ಇದ್ದಾರೆ. ವರದಾತನು ಎಲ್ಲಾ ಮಕ್ಕಳಿಗೂ ವರದಾನಗಳ ಜೋಳಿಗೆಯನ್ನು ತುಂಬಿಸಿ ಕೊಡುತ್ತಾರೆ ಆದರೂ ನಂಬರ್ವಾರ್ ಏಕೆ? ವರದಾತನು ಕೊಡುವುದರಲ್ಲಿ ನಂಬರ್ವಾರ್ ಕೊಡುವುದಿಲ್ಲ ಏಕೆಂದರೆ ವರದಾತನ ಬಳಿ ಅಕೂಟ ವರದಾನಗಳಿವೆ. ತೆರೆದ ಭಂಡಾರವಿದೆ, ಯಾರೆಷ್ಟು ಬೇಕಾದರೂ ತೆಗೆದುಕೊಳ್ಳಬಹುದು. ಇಂತಹ ತೆರೆದ ಭಂಡಾರದಿಂದ ಕೆಲವು ಮಕ್ಕಳು ಸರ್ವ ವರದಾನಗಳಿಂದ ಸಂಪನ್ನರಿರುತ್ತಾರೆ, ಇನ್ನೂ ಕೆಲವರು ಯಥಾಶಕ್ತಿ ಸಂಪನ್ನರಾಗುತ್ತಾರೆ. ಎಲ್ಲರಿಗಿಂತ ಹೆಚ್ಚು ಜೋಳಿಗೆಯನ್ನು ತುಂಬಿಸಿ ಕೊಡುವುದರಲ್ಲಿ ಭೋಲಾನಾಥನು ‘ವರದಾತನ ರೂಪವೇ ಆಗಿದ್ದಾರೆ’ ಮೊದಲು ತಿಳಿಸಿದ್ದೇವೆ – ದಾತ, ಭಾಗ್ಯವಿದಾತ ಮತ್ತು ವರದಾತ. ಮೂರರಲ್ಲಿ ವರದಾತನ ರೂಪದಿಂದ ಭೋಲಾ ಭಗವಂತನೆಂದು ಹೇಳಲಾಗುತ್ತದೆ ಏಕೆಂದರೆ ವರದಾತನು ಬಹು ಬೇಗನೆ ರಾಜಿಯಾಗಿ ಬಿಡುತ್ತಾರೆ. ಕೇವಲ ರಾಜಿ ಮಾಡಿಕೊಳ್ಳುವ ವಿಧಿಯನ್ನು ಅರಿತುಕೊಳ್ಳುತ್ತೀರೆಂದರೆ ಸಿದ್ಧಿ ಅರ್ಥಾತ್ ವರದಾನಗಳ ಜೋಳಿಗೆಯಿಂದ ಸಂಪನ್ನರಾಗಿರುವುದು ಬಹಳ ಸಹಜವಾಗುತ್ತದೆ. ವರದಾತನನ್ನು ರಾಜಿ ಮಾಡಿಕೊಳ್ಳುವ ಎಲ್ಲದಕ್ಕಿಂತ ಸಹಜ ವಿಧಿಯನ್ನು ತಿಳಿದುಕೊಂಡಿದ್ದೀರಾ? ಅವರಿಗೆ ಯಾರು ಎಲ್ಲರಿಗಿಂತ ಪ್ರಿಯರೆನಿಸುತ್ತಾರೆ? ಅವರಿಗೆ ‘ಒಂದು’ (ಏಕ) ಶಬ್ಧವು ಎಲ್ಲದಕ್ಕಿಂತ ಪ್ರಿಯವೆನಿಸುತ್ತದೆ. ಯಾವ ಮಕ್ಕಳು ಇಲ್ಲಿಯವರೆಗೂ ಏಕವ್ರತದಿಂದ ಇದ್ದಾರೆಯೋ ಅವರೇ ವರದಾತನಿಗೆ ಅತೀ ಪ್ರಿಯರಾಗಿದ್ದಾರೆ.

ಏಕವ್ರತ ಅರ್ಥಾತ್ ಕೇವಲ ಪತಿವ್ರತೆಯಲ್ಲ, ಎಲ್ಲಾ ಸಂಬಂಧದಿಂದಲೂ ಏಕವ್ರತಸ್ಥರು. ಸಂಕಲ್ಪ, ಸ್ವಪ್ನದಲ್ಲಿಯೂ ಇನ್ನೊಂದು ವ್ರತವಿರಬಾರದು. ಮೊದಲನೆ ವ್ರತ ಅರ್ಥಾತ್ ಸದಾ ವೃತ್ತಿಯಲ್ಲಿ ಒಬ್ಬರೇ ಇರಬೇಕು. ಎರಡನೆಯದು – ಸದಾ ನನ್ನವರು ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲ. ಈ ರೀತಿ ಪಕ್ಕಾ ವ್ರತವನ್ನು ತೆಗೆದುಕೊಂಡಿರಬೇಕು. ಕೆಲವು ಮಕ್ಕಳು ಏಕವ್ರತರಾಗುವುದರಲ್ಲಿ ಬಹಳ ಚತುರತೆ ಮಾಡುತ್ತಾರೆ. ಯಾವ ಚತುರತೆ? ತಂದೆಗೇ ಮಧುರ ಮಾತುಗಳನ್ನು ತಿಳಿಸುತ್ತಾರೆ – ತಂದೆ, ಶಿಕ್ಷಕ, ಸದ್ಗುರುವಿನ ಮುಖ್ಯ ಸಂಬಂಧವಂತೂ ತಮ್ಮ ಜೊತೆಯಿದೆ. ಆದರೆ ಸಾಕಾರ ಶರೀರಧಾರಿಗಳಾಗಿರುವ ಕಾರಣ, ಸಾಕಾರಿ ಪ್ರಪಂಚದಲ್ಲಿ ನಡೆಯುವ ಕಾರಣ, ಯಾರಾದರೂ ಸಾಕಾರಿ ಸಖ ಅಥವಾ ಸಖಿಯು ಸಹಯೋಗಕ್ಕಾಗಿ, ಸೇವೆಗಾಗಿ, ಸಲಹೆಗಾಗಿ ಸಾಕಾರದಲ್ಲಿ ಅವಶ್ಯವಾಗಿ ಬೇಕು ಏಕೆಂದರೆ ತಂದೆಯಂತೂ ನಿರಾಕಾರ ಮತ್ತು ಆಕಾರಿಯಾಗಿದ್ದಾರೆ ಆದ್ದರಿಂದ ಸೇವೆಯ ಜೊತೆಗಾರರು ಬೇಕಾಗಿದೆ. ಮತ್ತೇನೂ ಇಲ್ಲ ಏಕೆಂದರೆ ನಿರಾಕಾರಿ, ಆಕಾರಿ ಮಿಲನವನ್ನು ಆಚರಿಸಲು ಸ್ವಯಂ ಕೂಡಾ ನಿರಾಕಾರಿ ಆಕಾರಿ ಸ್ಥಿತಿಯಲ್ಲಿ ಸ್ಥಿತರಾಗಬೇಕಾಗುತ್ತದೆ. ಅದು ಕೆಲಕೆಲವೊಮ್ಮೆ ಕಷ್ಟವೆನಿಸುತ್ತದೆ ಆದ್ದರಿಂದ ಸಮಯಕ್ಕಾಗಿ ಸಾಕಾರದಲ್ಲಿ ಯಾರಾದರೂ ಜೊತೆಗಾರರು ಬೇಕೆಂದು ಹೇಳುತ್ತಾರೆ. ಯಾವಾಗ ಬುದ್ಧಿಯಲ್ಲಿ ಬಹಳಷ್ಟು ಮಾತುಗಳು ತುಂಬುತ್ತವೆಯೋ ಆಗ ಏನು ಮಾಡುವುದು? ಕೇಳುವುದಕ್ಕಾಗಿ ಯಾರಾದರೂ ಬೇಕಲ್ಲವೆ! ಆದರೆ ಏಕವ್ರತಸ್ಥ ಆತ್ಮನ ಬಳಿ ಬೇರೆಯವರಿಗೆ ತಿಳಿಸಬೇಕಾಗುವಂತಹ ಹೊರೆಯ ಮಾತುಗಳ ಸಂಗ್ರಹಣೆ ಇರುವುದಿಲ್ಲ. ಒಂದು ಕಡೆ ಬಾಬಾ, ತಾವೇ ನನ್ನ ಜೊತೆಯಿರುತ್ತೀರಿ, ಸದಾ ತಂದೆಯು ನನ್ನ ಜೊತೆಯಿದ್ದಾರೆಂದು ತಂದೆಯನ್ನು ಬಹಳ ಖುಷಿ ಪಡಿಸುತ್ತೀರಿ. ಜೊತೆಗಾರನಿದ್ದಾರೆ, ಅಂದಮೇಲೆ ಆ ಸಮಯದಲ್ಲಿ ಅವರು ಎಲ್ಲಿ ಹೊರಟು ಹೋಗುತ್ತಾರೆ? ತಂದೆಯು ಹೊರಟುಹೋಗುತ್ತಾರೆಯೋ ಅಥವಾ ತಾವೇ ಅವರನ್ನು ಬಿಟ್ಟುಹೋಗುತ್ತೀರೋ? ಸದಾ ಜೊತೆಯಿದ್ದಾರೆಯೋ ಅಥವಾ 6-8 ಗಂಟೆಗಳ ಕಾಲ ಜೊತೆ ಇರುತ್ತಾರೆಯೋ? ಪ್ರತಿಜ್ಞೆ ಏನಾಗಿದೆ? ಜೊತೆಯಲ್ಲಿಯೇ ಇರುತ್ತೇವೆ, ಜೊತೆಯಲ್ಲಿಯೇ ನಡೆಯುತ್ತೇವೆ, ಜೊತೆಯಲ್ಲಿಯೇ ಇದ್ದೇವೆ – ಈ ಪ್ರತಿಜ್ಞೆಯು ಪಕ್ಕಾ ಇದೆಯಲ್ಲವೆ. ಬ್ರಹ್ಮಾ ತಂದೆಯೊಂದಿಗೆ ಇಷ್ಟೊಂದು ಪ್ರತಿಜ್ಞೆಯಿದೆ – ಇಡೀ ಚಕ್ರದಲ್ಲಿ ಜೊತೆಯಲ್ಲಿಯೇ ಪಾತ್ರವನ್ನು ಅಭಿನಯಿಸುತ್ತೇವೆ! ಎಂದು. ಯಾವಾಗ ಇಷ್ಟು ಶಕ್ತಿಶಾಲಿ ಪ್ರತಿಜ್ಞೆಯಿದೆ ಆದರೂ ಸಹ ಸಾಕಾರದಲ್ಲಿ ಯಾರಾದರೂ ವಿಶೇಷ ಜೊತೆಗಾರರು ಬೇಕೇ?

ಬಾಪ್ದಾದಾರವರ ಬಳಿ ಎಲ್ಲರ ಜನ್ಮಪತ್ರಿಯಿರುತ್ತದೆ. ತಂದೆಯ ಮುಂದೆ ಎಲ್ಲರೂ ಹೇಳುತ್ತಾರೆ – ತಾವೇ ಜೊತೆಗಾರರಾಗಿದ್ದೀರಿ ಎಂದು. ಯಾವಾಗ ಪರಿಸ್ಥಿತಿ ಬರುತ್ತದೆಯೋ ಆಗ ತಂದೆಗೆ ಹೇಳತೊಡಗುತ್ತಾರೆ – ಇದಂತೂ ಆಗಿಯೇ ಆಗುತ್ತದೆ, ಇಷ್ಟಾದರೂ ಬೇಕೇ ಬೇಕು…..ಇದಕ್ಕೆ ಏಕವ್ರತವೆಂದು ಹೇಳುವರೇ? ಜೊತೆಗಾರರೆಂದರೆ ಎಲ್ಲರೂ ಜೊತೆಗಾರರೆ, ಯಾರೂ ವಿಶೇಷವಲ್ಲ. ಇದಕ್ಕೇ ಏಕವ್ರತವೆಂದು ಹೇಳುತ್ತಾರೆ. ಆದ್ದರಿಂದ ವರದಾತನಿಗೆ ಇಂತಹ ಏಕವ್ರತಸ್ಥ ಮಕ್ಕಳು ಅತಿ ಪ್ರಿಯರಾಗಿದ್ದಾರೆ. ಇಂತಹ ಮಕ್ಕಳ ಪ್ರತೀ ಸಮಯದ ಜವಾಬ್ದಾರಿಗಳನ್ನು ವರದಾತ ತಂದೆಯು ಸ್ವಯಂ ತಾವೇ ನಿಭಾಯಿಸುತ್ತಾರೆ. ಇಂತಹ ವರದಾನೀ ಆತ್ಮಗಳು ಪ್ರತೀ ಸಮಯ, ಪ್ರತಿ ಪರಿಸ್ಥಿತಿಯಲ್ಲಿ ವರದಾನಗಳ ಪ್ರಾಪ್ತಿ ಸಂಪನ್ನ ಸ್ಥಿತಿಯ ಅನುಭವ ಮಾಡುತ್ತಾರೆ ಮತ್ತು ಸದಾ ಸಹಜವಾಗಿ ಪಾರು ಮಾಡುತ್ತಾರೆ, ಪಾಸ್-ವಿತ್-ಆನರ್ ಆಗುತ್ತಾರೆ. ಯಾವಾಗ ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಸ್ವಯಂ ವರದಾತನೇ ಸದಾ ಸಿದ್ಧನಾಗಿದ್ದಾರೆ ಅಂದಮೇಲೆ ನೀವೇಕೆ ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಳ್ಳುತ್ತೀರಿ? ಇದು ನನ್ನ ಜವಾಬ್ದಾರಿಯೆಂದು ತಿಳಿದುಕೊಳ್ಳುತ್ತೀರಿ ಆಗಲೇ ಪರಿಸ್ಥಿತಿಗಳಲ್ಲಿ ಪಾಸ್-ವಿತ್-ಆನರ್ ಆಗುವುದಿಲ್ಲ, ಬಹಳ ಕಷ್ಟದಿಂದ ತೇರ್ಗಡೆಯಾಗುತ್ತೀರಿ. ಯಾರ ಜೊತೆಯ ಸಹಯೋಗವಾದರೂ ಬೇಕಾಗುತ್ತದೆ. ಒಂದುವೇಳೆ ಬ್ಯಾಟರಿಯು ಪೂರ್ಣಚಾರ್ಜ್ ಆಗಿಲ್ಲವೆಂದರೆ ಕಾರನ್ನು ತಳ್ಳಿ ನಡೆಸುತ್ತಾರೆ. ಅಂದಾಗ ಒಬ್ಬರೇ ತಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ ಆದ್ದರಿಂದ ನಂಬರ್ವಾರ್ ಆಗಿ ಬಿಡುತ್ತಾರೆ ಅಂದಾಗ ವರದಾತನಿಗೆ ಒಂದು ಶಬ್ಧವು ಪ್ರಿಯವಾಗಿದೆ – ‘ಏಕವ್ರತ’. ಒಂದು ಬಲ ಒಂದು ಭರವಸೆ. ಒಬ್ಬರ ಭರವಸೆ, ಇನ್ನೊಬ್ಬರ ಬಲ ಎಂದು ಹೇಳುವುದಿಲ್ಲ. ಒಂದು ಬಲ, ಒಂದು ಭರವಸೆ ಎಂದೇ ಗಾಯನವಿದೆ. ಜೊತೆ ಜೊತೆಗೆ ಏಕಮತ. ಮನಮತ, ಪರಮತವಲ್ಲ ಮತ್ತು ಏಕರಸ ಅರ್ಥಾತ್ ಮತ್ತ್ಯಾವುದೇ ವ್ಯಕ್ತಿಯೂ ಇಲ್ಲ, ವೈಭವದ ರಸವೂ ಇಲ್ಲ ಹಾಗೆಯೇ ಜೊತೆಗೆ ಏಕತೆ, ಏಕಾಂತ ಪ್ರಿಯ ಅಂದಾಗ ಒಂದು ಶಬ್ಧವೇ ಪ್ರಿಯವಾಯಿತಲ್ಲವೆ. ಇದೇ ರೀತಿ ಇನ್ನೂ ಪಟ್ಟಿ ತೆಗೆಯಿರಿ.

ತಂದೆಯು ಇಷ್ಟೊಂದು ಭೋಲಾ ಆಗಿದ್ದಾರೆ ಅವರು ಒಂದರಲ್ಲಿಯೇ ರಾಜಿಯಾಗಿ ಬಿಡುತ್ತಾರೆ. ಇಂತಹ ಭೋಲಾನಾಥ ವರದಾತನನ್ನು ರಾಜಿ ಮಾಡಿಕೊಳ್ಳುವುದು ಕಷ್ಟವೇ? ಕೇವಲ ಒಂದರ ಪಾಠವನ್ನು ಪಕ್ಕಾ ಮಾಡಿಕೊಳ್ಳಿ, 5-7 ರಲ್ಲಿ ಹೋಗುವ ಅವಶ್ಯಕತೆಯಿಲ್ಲ. ವರದಾತನನ್ನು ರಾಜಿ ಮಾಡಿಕೊಳ್ಳುವವರು ಅಮೃತವೇಳೆಯಿಂದ ರಾತ್ರಿಯವರೆಗೆ ಪ್ರತೀ ದಿನಚರಿಯ ಕರ್ಮದಲ್ಲಿ ವರದಾನಗಳಿಂದಲೇ ಬೆಳೆಯುತ್ತಾರೆ, ನಡೆಯುತ್ತಾರೆ ಮತ್ತು ಹಾರುತ್ತಾರೆ. ಇಂತಹ ವರದಾನಿ ಆತ್ಮರಿಗೆ ಮನಸ್ಸಿನಿಂದಾಗಲಿ, ಸಂಬಂಧ-ಸಂಪರ್ಕದಿಂದಾಗಲಿ ಎಂದೂ ಯಾವುದೇ ಕಷ್ಟದ ಅನುಭವವಾಗುವುದಿಲ್ಲ. ಪ್ರತೀ ಸಂಕಲ್ಪ, ಪ್ರತೀ ಸೆಕೆಂಡ್, ಪ್ರತೀ ಕರ್ಮ, ಪ್ರತೀ ಹೆಜ್ಜೆಯಲ್ಲಿ ವರದಾತ ಮತ್ತು ವರದಾನವು ಸದಾ ಸಮೀಪ, ಸನ್ಮುಖ ಸಾಕಾರ ರೂಪದಲ್ಲಿ ಅನುಭವವಾಗುವುದು. ಅವರು ಹೇಗೆ ಸಾಕಾರದಲ್ಲಿ ಮಾತನಾಡುತ್ತಿದ್ದಾರೆ ಎನ್ನುವಂತೆ ಅನುಭವವಾಗುತ್ತದೆ, ಅವರಿಗೆ ಪರಿಶ್ರಮದ ಅನುಭವವಾಗುವುದಿಲ್ಲ. ಇಂತಹ ವರದಾನಿ ಆತ್ಮನಿಗೆ ಈ ವಿಶೇಷ ವರದಾನವು ಪ್ರಾಪ್ತಿಯಾಗುತ್ತದೆ ಅವರು ನಿರಾಕಾರ, ಆಕಾರನನ್ನು ಹೇಗೆ ಸಾಕಾರದ ಅನುಭವ ಮಾಡಬಲ್ಲರು! ಇಂತಹ ವರದಾನಗಳ ಮುಂದೆ ಹಜೂರ್ ತಂದೆಯು ಸದಾ ಹಾಜರಾಗುತ್ತಾರೆ, ಕೇಳಿದಿರಾ? ವರದಾತನನ್ನು ರಾಜಿ ಮಾಡಿಕೊಳ್ಳುವ ವಿಧಿ ಮತ್ತು ಸಿದ್ಧಿ – ಸೆಕೆಂಡಿನಲ್ಲಿ ಮಾಡಬಲ್ಲಿರಾ? ಕೇವಲ ಒಂದರಲ್ಲಿ. ಇದಕ್ಕೆ ಬದಲಾಗಿ ಎರಡನ್ನು ಸೇರಿಸಬೇಡಿ, ಒಂದರ ಪಾಠದ ವಿಸ್ತಾರವನ್ನು ಮತ್ತೆಂದಾದರೂ ತಿಳಿಸುತ್ತೇವೆ.

ಬಾಪ್ದಾದಾರವರ ಬಳಿ ಎಲ್ಲಾ ಮಕ್ಕಳ ಚರಿತ್ರೆಯೂ ಇದೆ ಮತ್ತು ಚತುರತೆಯೂ ಇದೆ. ಫಲಿತಾಂಶವೆಲ್ಲವೂ ಬಾಪ್ದಾದಾರವರ ಬಳಿಯಿದೆಯಲ್ಲವೆ. ಚತುರತೆಯ ಮಾತೂ ಸಹ ಬಹಳಷ್ಟಿದೆ. ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ. ಅದನ್ನು ಕೇಳಿಸಿಕೊಳ್ಳುತ್ತಾ ಇರುತ್ತೇನೆ. ಕೇವಲ ಬಾಪ್ದಾದಾ ಹೆಸರನ್ನು ಹೇಳುವುದಿಲ್ಲ ಆದ್ದರಿಂದ ತಂದೆಗೆ ಏನು ತಿಳಿಯುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಆದರೂ ಸಹ ಅವಕಾಶ ಕೊಡುತ್ತಾ ಇರುತ್ತೇವೆ. ತಂದೆಯು ತಿಳಿದುಕೊಳ್ಳುತ್ತಾರೆ – ಮಕ್ಕಳೇ, ರಿಯಲ್ ತಿಳುವಳಿಕೆಯಿಂದ ಭೋಲಾ ಆಗಿದ್ದಾರೆ ಆದರೆ ಇಂತಹ ಭೋಲಾ ಆಗಬೇಡಿ. ಒಳ್ಳೆಯದು.

ಮಕ್ಕಳು ವಿದೇಶವನ್ನು ಸುತ್ತಿಕೊಂಡು ಹಿಂತಿರುಗಿ ಬಂದಿದ್ದಾರೆ (ಜಾನಕಿ ದಾದಿ, ಡಾ|| ನಿರ್ಮಲ ಬೆಹೆನ್, ಜಗದೀಶ್ ಭಾಯಿ, ವಿದೇಶಕ್ಕೆ ಹೋಗಿ ಬಂದಿದ್ದಾರೆ)

ಒಳ್ಳೆಯ ಫಲಿತಾಂಶವಿದೆ ಮತ್ತು ಸದಾ ಸೇವೆಯ ಸಫಲತೆಯಲ್ಲಿ ವೃದ್ಧಿಯಾಗಲೇಬೇಕಾಗಿದೆ. ಇಂಗ್ಲೆಂಡಿನದೂ ಸಹ ವಿಶೇಷ ಸೇವಾ ಕಾರ್ಯದಲ್ಲಿ ಸಂಬಂಧವಿದೆ. ಹೆಸರು ಅವರದು, ಕೆಲಸವು ತಮ್ಮದು ನಡೆಯುತ್ತಿದೆ. ಆತ್ಮಗಳಿಗೆ ಸಹಜವಾಗಿ ಸಂದೇಶವು ತಲುಪಲಿ, ತಮ್ಮ ಈ ಸೇವೆಯು ನಡೆಯುತ್ತಿದೆ. ಅಂದಾಗ ಅಲ್ಲಿನ ಕಾರ್ಯಕ್ರಮವು ಚೆನ್ನಾಗಿ ಆಯಿತು, ರಷ್ಯಾ ಉಳಿದುಕೊಂಡಿತ್ತು, ಅದೂ ಸಹ ಬರಲೇಬೇಕಾಗಿತ್ತು. ಬಾಪ್ದಾದಾ ಮೊದಲೇ ಸಫಲತೆಯ ನೆನಪು, ಪ್ರೀತಿಯನ್ನು ಕೊಟ್ಟು ಬಿಟ್ಟಿದ್ದೆವು, ಭಾರತದ ರಾಯಭಾರಿಯಾಗಿ ಹೋಗಿದ್ದರಿಂದ ಭಾರತದ ಹೆಸರು ಪ್ರಸಿದ್ಧವಾಯಿತಲ್ಲವೆ. ಚಕ್ರವರ್ತಿಯಾಗಿ ಚಕ್ಕರ್ ಹಾಕುವುದರಲ್ಲಿ ಮಜಾ ಬರುತ್ತದೆಯಲ್ಲವೆ. ಎಷ್ಟೊಂದು ಆಶೀರ್ವಾದಗಳನ್ನು ಜಮಾ ಮಾಡಿಕೊಂಡು ಬಂದಿರಿ. ಈ ನಿರ್ಮಲರವರೂ ಸಹ ಚಕ್ಕರ್ ಹಾಕುತ್ತಲೇ ಇರುತ್ತಾರೆ. ಹಾಗೆ ನೋಡಿದರೆ ಎಲ್ಲರೂ ಸೇವೆಯಲ್ಲಿ ತೊಡಗಿದ್ದಾರೆ ಆದರೆ ಸಮಯ ಪ್ರಮಾಣ ವಿಶೇಷ ಸೇವೆಯಾಗುತ್ತಿದೆ ಆದ್ದರಿಂದ ವಿಶೇಷ ಸೇವೆಯ ಶುಭಾಷಯಗಳನ್ನು ಕೊಡುತ್ತೇವೆ. ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. ಲಂಡನ್, ಅಮೇರಿಕಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾ – ತಾವು ಈ ನಾಲ್ಕೂ ಜೋನ್ಗಳನ್ನು ಮಾಡಿದ್ದೀರಲ್ಲವೆ. 5ನೇಯದು ಭಾರತವಾಗಿದೆ. ಭಾರತದವರಿಗೆ ಮಿಲನ ಮಾಡಲು ಮೊದಲವಕಾಶ ಸಿಕ್ಕಿದೆ. ಯಾವುದನ್ನು ಮಾಡಿ ಬಂದಿದ್ದೀರಿ ಮತ್ತು ಮುಂದೆ ಏನು ಮಾಡುತ್ತೀರಿ ಎಲ್ಲವೂ ಒಳ್ಳೆಯದೇ ಆಗಿದೆ. ಮತ್ತು ಸದಾ ಒಳ್ಳೆಯದೇ ಆಗಿರುತ್ತದೆ. ನಾಲ್ಕೂ ಜೋನ್ಗಳ ಎಲ್ಲಾ ಡಬಲ್ ವಿದೇಶಿ ಮಕ್ಕಳಿಗೆ ಇಂದು ವಿಶೇಷ ನೆನಪು-ಪ್ರೀತಿಯನ್ನು ಕೊಡುತ್ತಿದ್ದೇವೆ. ರಷ್ಯಾ ಸಹ ಏಷ್ಯಾದಲ್ಲಿ ಬಂದು ಬಿಡುತ್ತದೆ. ಸೇವೆಯ ಪ್ರತಿಫಲ ಚೆನ್ನಾಗಿ ಸಿಗುತ್ತಿದೆ, ಸಾಹಸವೂ ಚೆನ್ನಾಗಿದೆ ಆದ್ದರಿಂದ ಸಹಯೋಗವೂ ಸಿಗುತ್ತಿದೆ ಮತ್ತು ಸಿಗುತ್ತಾ ಇರುತ್ತದೆ. ಭಾರತದಲ್ಲಿಯೂ ಸಹ ಈಗ ವಿಶಾಲ ಕಾರ್ಯಕ್ರಮಗಳನ್ನು ಮಾಡುವ ಯೋಜನೆ ಮಾಡುತ್ತಿದ್ದಾರೆ. ಒಬ್ಬೊಬ್ಬರಿಗೂ ಸಹ ವಿಶೇಷತೆ ಮತ್ತು ಸೇವೆಯ ಲಗನ್ನ್ನಲ್ಲಿ ಮಗ್ನರಾಗಿರುವ ಶುಭಾಷಯಗಳು ಮತ್ತು ನೆನಪು, ಪ್ರೀತಿ. ಒಳ್ಳೆಯದು.

ಸರ್ವ ಮಕ್ಕಳಿಗೆ ಸದಾ ಸಹಜವಾಗಿ ನಡೆಯುವ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಯಾವ ಸಹಜ ಯುಕ್ತಿಯನ್ನು ತಿಳಿಸಿದೆವೋ ಇದೇ ವಿಧಿಯನ್ನು ಸದಾ ಪ್ರಯೋಗದಲ್ಲಿ ತರುವಂತಹ ಪ್ರಯೋಗಿ ಮತ್ತು ಸಹಜಯೋಗಿ, ಸದಾ ವರದಾತನ ವರದಾನಗಳಿಂದ ಸಂಪನ್ನ ವರದಾನೀ ಮಕ್ಕಳಿಗೆ ಸದಾ ಒಂದರ ಪಾಠವನ್ನು ಪ್ರತಿ ಹೆಜ್ಜೆಯಲ್ಲಿ ಸಾಕಾರ ಸ್ವರೂಪದಲ್ಲಿ ತರುವಂತಹ ಸದಾ ನಿರಾಕಾರ, ಆಕಾರ ತಂದೆಯನ್ನು ಜೊತೆಯ ಅನುಭೂತಿಯಿಂದ ಸದಾ ಸಾಕಾರ ಸ್ವರೂಪದಲ್ಲಿ ಪ್ರತ್ಯಕ್ಷ ಅನುಭವ ಮಾಡುವಂತಹ ಸದಾ ವರದಾನಿ ಮಕ್ಕಳಿಗೆ ಬಾಪ್ದಾದಾರವರ ದಾತ, ಭಾಗ್ಯವಿದಾತ ಮತ್ತು ವರದಾತನ ನೆನಪು, ಪ್ರೀತಿ ಹಾಗೂ ನಮಸ್ತೆ.

ದಾದಿ ಜಾನಕಿಯವರೊಂದಿಗೆ ವಾರ್ತಾಲಾಪ:

ಎಲ್ಲರಿಗೂ ತಂದೆಯ ಪ್ರೀತಿಯನ್ನು ಎಷ್ಟು ಹಂಚುವಿರಿ, ಅಷ್ಟೇ ಪ್ರೀತಿಯ ಭಂಡಾರವು ವೃದ್ಧಿಯಾಗುತ್ತಿರುತ್ತದೆ. ಹೇಗೆ ಪ್ರತೀ ಸಮಯದಲ್ಲಿ ಪ್ರೀತಿಯ ಸುರಿಮಳೆ ಆಗುತ್ತಿದೆ ಎಂಬಂತೆ ಅನುಭವ ಆಗುತ್ತದೆಯಲ್ಲವೆ! ಒಂದು ಹೆಜ್ಜೆಯಲ್ಲಿ ಪ್ರೀತಿಯನ್ನು ಕೊಡಿ ಮತ್ತು ಮತ್ತೆ-ಮತ್ತೆ ಪ್ರೀತಿ ಪಡೆಯಿರಿ. ಎಲ್ಲರಿಗೂ ಸಹ ಪ್ರೀತಿಯೇ ಬೇಕಾಗಿದೆ, ಜ್ಞಾನವನ್ನಂತು ಕೇಳಿದ್ದಾರಲ್ಲವೆ! ಅಂದಾಗ ಒಂದು ಪ್ರಕಾರದ ಮಕ್ಕಳಿದ್ದಾರೆ ಅವರಿಗೆ ಪ್ರೀತಿ ಬೇಕು ಮತ್ತು ಇನ್ನೊಂದು ಪ್ರಕಾರದವರಿಗೆ ಶಕ್ತಿ ಬೇಕು. ಹಾಗಾದರೆ ಯಾವ ಸೇವೆ ಮಾಡಿದಿರಿ? ಇದೇ ಸೇವೆಯನ್ನು ಮಾಡಿದಿರಲ್ಲವೆ – ಕೆಲವರಿಗೆ ತಂದೆಯ ಮೂಲಕ ಪ್ರೀತಿಯನ್ನು ಕೊಟ್ಟಿರಿ ಹಾಗೂ ಕೆಲವರಿಗೆ ತಂದೆಯಿಂದ ಶಕ್ತಿಯನ್ನು ಕೊಡಿಸಿದಿರಿ. ಜ್ಞಾನದ ರಹಸ್ಯಗಳನ್ನಂತು ತಿಳಿದಿದ್ದಾರೆ, ಈಗ ಅವರಲ್ಲಿ ಸದಾಕಾಲದ ಒಲವು-ಉತ್ಸಾಹವು ಇರಬೇಕಾಗಿದೆ, ಅದೇ ಏರುಪೇರಾಗುತ್ತದೆ, ಆದರೂ ಬಾಪ್ದಾದಾರವರು ಡಬಲ್ ವಿದೇಶಿ ಮಕ್ಕಳಿಗೆ ಶಭಾಷ್ ಕೊಡುತ್ತಾರೆ. ಏಕೆಂದರೆ ಭಿನ್ನ ಧರ್ಮಗಳಲ್ಲಿಂದ ಹೊರಟು ಬಂದು ಬಿಟ್ಟರಲ್ಲವೆ! ದೇಶವೂ ಬೇರೆ, ಪದ್ಧತಿಗಳೂ ಸಹ ಭಿನ್ನವಾಗಿದ್ದರೂ ಇದರಲ್ಲಿ ನಡೆಯುತ್ತಿದ್ದಾರೆ, ಹಾಗೆಯೇ ಕೆಲವರಂತು ವಾರಸುಧಾರರೂ ಬಂದಿದ್ದಾರೆ. ಒಳ್ಳೆಯದು.

ಮಹಾರಾಷ್ಟ್ರ-ಪೂನಾ ಗ್ರೂಪ್:

ಎಲ್ಲರೂ ಮಹಾನ್ ಆತ್ಮರಾಗಿದ್ದೀರಲ್ಲವೆ! ಮುಂಚೆ ತಮ್ಮನ್ನು ಕೇವಲ ಮಹಾರಾಷ್ಟ್ರದ ನಿವಾಸಿಯೆಂದು ಹೇಳಿಕೊಳ್ಳುತ್ತಿದ್ದಿರಿ, ಈಗ ಸ್ವಯಂ ಮಹಾನರಾಗಿದ್ದೀರಿ. ತಂದೆಯು ಪ್ರತಿಯೊಂದು ಮಗುವನ್ನೂ ಮಹಾನರನ್ನಾಗಿ ಮಾಡಿ ಬಿಟ್ಟರು. ವಿಶ್ವದಲ್ಲಿ ಇನ್ಯಾರಾದರೂ ತಮಗಿಂತ ಮಹಾನರಿದ್ದಾರೆಯೇ? ಎಲ್ಲರಿಗಿಂತಲೂ ಕೆಳಗೆಂದರೆ ಭಾರತವಾಸಿಗಳೇ ಬಿದ್ದರು ಮತ್ತು ಅದರಲ್ಲಿಯೂ ಯಾರು 84 ಜನ್ಮಗಳನ್ನು ತೆಗೆದುಕೊಳ್ಳುವಂತಹ ಬ್ರಾಹ್ಮಣ ಆತ್ಮರಿದ್ದಾರೆ, ಅವರು ಕೆಳಗೆ ಬಿದ್ದರು. ಅಂದಾಗ ಎಷ್ಟು ಕೆಳಗೆ ಬಿದ್ದರೋ ಅಷ್ಟೇ ಈಗ ಶ್ರೇಷ್ಠ ಮಟ್ಟಕ್ಕೆ ಹೋಗಿದ್ದಾರೆ ಆದ್ದರಿಂದ ಹೇಳುತ್ತಾರೆ – ಬ್ರಾಹ್ಮಣರು ಅಂದರೆ ಶ್ರೇಷ್ಠ ಶಿಖೆಯಲ್ಲಿ ಇರುವವರು. ಅತಿ ಎತ್ತರದ ಸ್ಥಾನವು ಯಾವುದಿರುತ್ತದೆಯೋ ಅದನ್ನೇ ಶಿಖೆ ಎಂದು ಹೇಳಲಾಗುತ್ತದೆ. ಪರ್ವತಗಳ ತುತ್ತ ತುದಿಯನ್ನು ಶಿಖೆಯೆಂದು ಹೇಳುತ್ತಾರೆ ಅಂದಮೇಲೆ ನಾವು ಎಂತಹವರಿಂದ ಏನಾಗಿ ಬಿಟ್ಟೆವು ಎನ್ನುವ ಖುಷಿಯಿದೆ. ಪಾಂಡವರಿಗೆ ಹೆಚ್ಚು ಖುಷಿಯಿದೆಯೋ ಅಥವಾ ಶಕ್ತಿಯರಿಗೆ ಇದೆಯೇ? (ಶಕ್ತಿಯರಿಗೆ) ಏಕೆಂದರೆ ಶಕ್ತಿಯರನ್ನು ಬಹಳ ಕೆಳಮಟ್ಟಕ್ಕೆ ಬೀಳಿಸಲಾಗಿತ್ತು. ದ್ವಾಪರದಿಂದಲೂ ಪುರುಷ ತನುವಿರುವವರೇ ಯಾವುದಾದರೊಂದು ಪದವಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಧರ್ಮದಲ್ಲಿಯೂ ಈಗೀಗ ಸ್ತ್ರೀಯರನ್ನೂ ಮಹಾಮಂಡಲೇಶ್ವರಿ ಮಾಡಿದ್ದಾರೆ, ಇಲ್ಲದಿದ್ದರೆ ಮಹಾಮಂಡಲೇಶ್ವರ ಎಂದೇ ಗಾಯನವಾಗುತ್ತಿತ್ತು. ಯಾವಾಗಿನಿಂದ ತಂದೆಯವರು ಮಾತೆಯರನ್ನು ಮುಂದಿಟ್ಟರು, ಆಗಿನಿಂದ ಅವರು 2-4 ಮಹಾಮಂಡಲೇಶ್ವರಿಯನ್ನಾಗಿ ಮಾಡಿಟ್ಟಿದ್ದಾರೆ. ಇಲ್ಲದಿದ್ದರೆ ಧರ್ಮದ ಕಾರ್ಯಗಳಲ್ಲಿ ಮಾತೆಯರಿಗೆಂದಿಗೂ ಆಸನವನ್ನು ಕೊಡುತ್ತಿರಲಿಲ್ಲ ಆದ್ದರಿಂದ ಮಾತೆಯರಿಗೆ ಹೆಚ್ಚಿನದಾಗಿ ಖುಷಿಯಿದೆ ಮತ್ತು ಪಾಂಡವರದೂ ಗಾಯನವಿದೆ. ಪಾಂಡವರು ವಿಜಯವನ್ನು ಪ್ರಾಪ್ತಿ ಮಾಡಿಕೊಂಡರು, ಹೆಸರಂತು ಪಾಂಡವರಿಗೇ ಬರುತ್ತದೆ ಆದರೆ ಪೂಜೆಯೂ ಹೆಚ್ಚಾಗಿ ಶಕ್ತಿಯರದಾಗುತ್ತದೆ. ಮುಂಚೆ ಗುರುಗಳ ಪೂಜೆಯನ್ನಂತು ಬಹಳ ಮಾಡಿದ್ದಾರೆ, ಈಗ ಶಕ್ತಿಯರ ಪೂಜೆ ಮಾಡುತ್ತಾರೆ. ಜಾಗರಣೆಯನ್ನು ಗಣೇಶ ಅಥವಾ ಹನುಮಂತನಿಗಾಗಿ ಮಾಡುವುದಿಲ್ಲ, ಶಕ್ತಿಯರಿಗಾಗಿ ಮಾಡುತ್ತಾರೆ ಏಕೆಂದರೆ ಶಕ್ತಿಯರೀಗ ಸ್ವಯಂ ಜಾಗೃತರಾಗಿ ಬಿಟ್ಟಿದ್ದಾರೆ. ಅಂದಾಗ ಶಕ್ತಿಯರು ತಮ್ಮ ಶಕ್ತಿರೂಪದಲ್ಲಿ ಇರುತ್ತೀರಲ್ಲವೆ! ಅಥವಾ ಕೆಲವೊಮ್ಮೆ ಬಲಹೀನರು ಆಗಿ ಬಿಡುತ್ತೀರಾ? ಮಾತೆಯರಲ್ಲಿ ದೇಹದ ಸಂಬಂಧದ ಮೋಹವು ಬಲಹೀನರನ್ನಾಗಿ ಮಾಡುತ್ತದೆ. ಸ್ವಲ್ಪ-ಸ್ವಲ್ಪ ಮೊಮ್ಮಕ್ಕಳಲ್ಲಿ, ಮರಿ ಮಕ್ಕಳಲ್ಲಿ ಮೋಹವಿರುತ್ತದೆ ಮತ್ತು ಪಾಂಡವರಲ್ಲಿ ಯಾವ ಮಾತು ಬಲಹೀನರನ್ನಾಗಿ ಮಾಡುತ್ತದೆ? ಪಾಂಡವರಲ್ಲಿ ಅಹಂಕಾರದ ಕಾರಣ ಬೇಗನೆ ಕ್ರೋಧ ಬರುತ್ತದೆ, ಆದರೆ ಈಗಂತು ವಿಜಯವನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಲ್ಲವೆ! ಈಗಂತು ಶಾಂತ ಸ್ವರೂಪ ಪಾಂಡವರಾಗಿದ್ದೀರಿ ಮತ್ತು ಮಾತೆಯರೂ ಸಹ ನಿರ್ಮೋಹಿ ಆಗಿ ಬಿಟ್ಟಿದ್ದಾರೆ. ಪ್ರಪಂಚದವರು ಹೇಳುವರು – ಮಾತೆಯರಲ್ಲಿ ಮೋಹವಿರುತ್ತದೆ, ಹಾಗಾದರೆ ತಾವು ಚಾಲೆಂಜ್ ಮಾಡಿರಿ- ನಾವು ಮಾತೆಯರು ನಿರ್ಮೋಹಿ ಆಗಿದ್ದೇವೆ. ಅದೇರೀತಿ ಪಾಂಡವರೂ ಸಹ ಶಾಂತ ಸ್ವರೂಪರಾಗಿದ್ದೇವೆ, ಅದರಲ್ಲಿ ಅಂಶದಷ್ಟೂ ಕ್ರೋಧವು ಕಾಣಿಸುವುದಿಲ್ಲ. ಚಲನೆ-ವಲನೆಯವರೆಗೂ ಬರಬಾರದು. ಕೆಲವರು ಹೀಗೂ ಹೇಳುತ್ತಾರೆ – ಕ್ರೋಧವಂತು ಬರುವುದಿಲ್ಲ, ಸ್ವಲ್ಪ ಆವೇಶ ಬರುತ್ತದೆ ಅಂದಾಗ ಅದೇನಾಯಿತು! ಅದೂ ಸಹ ಕ್ರೋಧದ ಅಂಶವೇ ಆಯಿತಲ್ಲವೆ. ಹಾಗಾದರೆ ಪಾಂಡವರು ವಿಜಯಿ ಅಂದರೆ ಸಂಪೂರ್ಣವಾಗಿ ಸಂಕಲ್ಪದಲ್ಲಿಯೂ ಶಾಂತ, ಮಾತು ಮತ್ತು ಕರ್ಮದಲ್ಲಿಯೂ ಶಾಂತ ಸ್ವರೂಪರು. ಮಾತೆಯರು ಇಡೀ ವಿಶ್ವದ ಮುಂದೆ ತಮ್ಮ ನಿರ್ಮೋಹಿ ಸ್ವರೂಪವನ್ನು ತೋರಿಸಿರಿ. ಜನರಂತು ಇದು ಅಸಂಭವವೆಂದು ತಿಳಿಯುವರು ಮತ್ತು ತಾವು ಹೇಳಿರಿ – ಸಂಭವವೂ ಆಗುತ್ತದೆ ಮತ್ತು ಬಹಳ ಸಹಜವೂ ಇದೆ. ಲಕ್ಷ್ಯವನ್ನು ಇಟ್ಟುಕೊಳ್ಳುತ್ತೀರೆಂದರೆ ಅವಶ್ಯವಾಗಿ ಲಕ್ಷಣವೂ ಬರುತ್ತದೆ. ಸ್ಮೃತಿಯಂತೆ ಸ್ಥಿತಿಯಾಗುತ್ತದೆ. ಧರಣಿಯಲ್ಲಿ ಮಾತಾಪಿತರ ಪ್ರೇಮಜಲವು ಉತ್ಪನ್ನವಾಗಿದೆ ಆದ್ದರಿಂದ ಫಲವು ಸಹಜವಾಗಿ ಹೊರ ಬರುತ್ತಿದೆ. ಬಾಪ್ದಾದಾರವರು ಸೇವೆ ಮತ್ತು ಸ್ವ-ಉನ್ನತಿ – ಇವೆರಡನ್ನೂ ನೋಡಿ ಖುಷಿಯಾಗುತ್ತದೆ, ಕೇವಲ ಸೇವೆಯನ್ನೇ ನೋಡಿ ಖುಷಿಯಾಗುವುದಿಲ್ಲ. ಸೇವೆಯಲ್ಲಿ ತಾವೆಷ್ಟು ವೃದ್ಧಿ ಮಾಡುತ್ತೀರಿ, ಅಷ್ಟು ಸ್ವ-ಉನ್ನತಿಯಲ್ಲಿಯೂ ಇರಲಿ, ಎರಡೂ ಒಟ್ಟೊಟ್ಟಿಗೆ ಆಗುತ್ತಿರಲಿ ಮತ್ತು ಯಾವುದೇ ಇಚ್ಛೆಯಿರಬಾರದು. ಯಾವಾಗ ಸ್ವತಹವಾಗಿಯೇ ಎಲ್ಲವೂ ಸಿಗುತ್ತದೆಯೆಂದರೆ ಇಚ್ಛೆಯನ್ನೇಕೆ ಇಟ್ಟುಕೊಳ್ಳುವುದು. ಕೇಳದೆ, ಬೇಡದೇ ಇಷ್ಟೊಂದು ಸಿಕ್ಕಿದೆ, ಇದಕ್ಕಾಗಿ ಬೇಡುವ ಇಚ್ಛೆಯ ಅವಶ್ಯಕತೆಯೂ ಇಲ್ಲ ಅಂದಮೇಲೆ ಇಷ್ಟು ಸಂತುಷ್ಟವಾಗಿ ಇದ್ದೀರಲ್ಲವೇ! ತಮ್ಮ ಸ್ಮೃತಿಯಲ್ಲಿ ಈ ಟೈಟಲ್ನ್ನು ಇಟ್ಟುಕೊಳ್ಳಿರಿ – ಸಂತುಷ್ಟರಿದ್ದೇವೆ ಮತ್ತು ಸರ್ವರನ್ನೂ ಸಂತುಷ್ಟ ಪಡಿಸಿ, ಪ್ರಾಪ್ತಿ ಸ್ವರೂಪರನ್ನಾಗಿ ಮಾಡುವವರು ಆಗಿದ್ದೇವೆ. ಅಂದಮೇಲೆ ‘ಸಂತುಷ್ಟವಾಗಿರುವುದು ಮತ್ತು ಸಂತುಷ್ಟ ಪಡಿಸುವುದು’ ಇದೇ ವಿಶೇಷವಾದ ವರದಾನವಾಗಿದೆ. ಅಸಂತುಷ್ಟತೆಯ ಹೆಸರು-ಚಿಹ್ನೆಯೂ ಇರಬಾರದು. ಒಳ್ಳೆಯದು.

ಗುಜರಾತ್ ಗ್ರೂಪ್:

ಅಂತಿಮ ಜನ್ಮವಾಗಿರುವ ಕಾರಣ ಈ ಬ್ರಾಹ್ಮಣ ಜೀವನದಲ್ಲಿ ಭಲೆ ಶರೀರದಿಂದ ಎಷ್ಟೇ ಬಲಹೀನವಾಗಿರಬಹುದು ಅಥವಾ ರೋಗಗಳಿರಬಹುದು, ನಡೆಯಬಹುದು ಅಥವಾ ಇಲ್ಲದೆಯೂ ಇರಬಹುದು ಆದರೆ ಮನಸ್ಸಿನ ಹಾರುವಿಕೆಗಾಗಿ ರೆಕ್ಕೆಗಳನ್ನಂತು ಕೊಡಲಾಗಿದೆ, ಶರೀರ ನಡೆಯದಿರಬಹುದು ಆದರೆ ಮನಸ್ಸಿನಿಂದಂತು ಹಾರಬಹುದಲ್ಲವೆ! ಏಕೆಂದರೆ ಬಾಪ್ದಾದಾರವರಿಗೆ ಗೊತ್ತಿದೆ – 63 ಜನ್ಮಗಳಿಂದ ಅಲೆದಾಡುತ್ತಾ-ಹುಡುಕಾಡುತ್ತಾ ಬಲಹೀನವಾಗಿದೆ. ಶರೀರವು ತಮೋಗುಣಿ ಆಗಿರುವ ಕಾರಣ ಬಲಹೀನ, ರೋಗಿಯಾಗಿ ಬಿಟ್ಟಿದೆ. ಆದರೆ ಎಲ್ಲರ ಮನಸ್ಸು ಆರೋಗ್ಯದಿಂದ ಕೂಡಿದೆ. ಶರೀರದಲ್ಲಿ ರೋಗವಿರಬಹುದು ಆದರೆ ಮನಸ್ಸಿನಲ್ಲಂತು ಯಾವುದೇ ರೋಗವಿಲ್ಲ ಅಲ್ಲವೇ. ಎಲ್ಲರ ಮನಸ್ಸು ರೆಕ್ಕೆಗಳಿಂದ ಹಾರಿ ಬಿಡುತ್ತದೆ, ಶಕ್ತಿಶಾಲಿ ಮನಸ್ಸಿನ ಲಕ್ಷಣವು ಇದೇ ಆಗಿರುತ್ತದೆ – ಸೆಕೆಂಡಿನಲ್ಲಿ ಎಲ್ಲಿಗೆ ಬೇಕು ಅಲ್ಲಿಗೆ ತಲುಪಿ ಬಿಡುತ್ತದೆ. ಇದೇರೀತಿ ಶಕ್ತಿಶಾಲಿ ಆಗಿದ್ದೀರಾ ಅಥವಾ ಕೆಲವೊಮ್ಮೆ ಬಲಹೀನರಾಗುತ್ತೀರಾ. ಮನಸ್ಸಿಗೆ ಯಾವಾಗ ಹಾರುವುದು ಬಂದು ಬಿಡುತ್ತದೆ ಅಥವಾ ಅಭ್ಯಾಸವಾಗುತ್ತದೆಯೋ ಆಗ ಸೆಕೆಂಡಿನಲ್ಲಿಯೇ ಎಲ್ಲಿಗೆ ಬೇಕೋ ಅಲ್ಲಿಗೆ ತಲುಪಿ ಬಿಡಬಹುದು. ಈಗೀಗ ಸಾಕಾರ ವತನದಲ್ಲಿ, ಈಗೀಗ ಪರಮಧಾಮದಲ್ಲಿಯೂ ಒಂದು ಸೆಕೆಂಡಿನಲ್ಲಿ ತಲುಪುವ ತೀವ್ರತೆಯಿದೆ. ಅಂದಾಗ ಇಷ್ಟು ತೀವ್ರ ಗತಿಯಿದೆಯೇ? ಸದಾ ತಮ್ಮ ಭಾಗ್ಯದ ಹಾಡನ್ನು ಹಾಡುತ್ತಾ ಹಾರುತ್ತಿರಿ. ಅನೇಕ ಪ್ರಕಾರದ ಭಾಗ್ಯವು ಸಿಕ್ಕಿರುತ್ತದೆ, ಅನೇಕ ಪ್ರಕಾರದ ಪ್ರಾಪ್ತಿಗಳಾಗಿವೆ, ಅಂದಮೇಲೆ ಸದಾ ಅಮೃತವೇಳೆಯಲ್ಲಿ ತಮ್ಮ ಭಾಗ್ಯದ ಯಾವುದಾದರೊಂದು ಮಾತಿನ ಸ್ಮೃತಿಯನ್ನು ಇಟ್ಟುಕೊಳ್ಳಿ. ಕೆಲವೊಮ್ಮೆ ಯಾವುದಾದರೊಂದು ಪ್ರಾಪ್ತಿಯನ್ನು, ಕೆಲವೊಮ್ಮೆ ಕೆಲವು ಪ್ರಾಪ್ತಿಯನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತೀರೆಂದರೆ, ಬಹಳ ರಮಣೀಕ ಪುರುಷಾರ್ಥವಿರುತ್ತದೆ. ತಾವು ಪುರುಷಾರ್ಥವನ್ನೆಂದಿಗೂ ಬೇಸರವೆಂದು ತಿಳಿಯದೇ, ನವೀನತೆಯ ಅನುಭವವನ್ನು ಮಾಡುವಿರಿ ಅಲ್ಲವೇ. ಹೀಗಿಲ್ಲದಿದ್ದರೆ ಕೆಲವು ಮಕ್ಕಳು ಹೇಳುತ್ತಾರೆ – ನಾನಾತ್ಮ, ಶಿವ ತಂದೆಯ ಮಗುವಾಗಿದ್ದೇನೆ, ಇದನ್ನಂತು ಸದಾ ಹೇಳುತ್ತಾ ಇರುತ್ತೇವೆ. ಆದರೆ ನಾನಾತ್ಮನಿಗೆ ತಂದೆಯು ಎಂತೆಂತಹ ಭಾಗ್ಯವನ್ನು ರೂಪಿಸಿದ್ದಾರೆ, ಯಾವ-ಯಾವ ಬಿರುದುಗಳನ್ನು ಕೊಟ್ಟಿದ್ದಾರೆ, ಯಾವ-ಯಾವ ಖಜಾನೆಗಳನ್ನು ಕೊಟ್ಟಿದ್ದಾರೆ, ಈ ರೀತಿಯಲ್ಲಿ ಭಿನ್ನ-ಭಿನ್ನವಾದ ಸ್ಮೃತಿಯನ್ನು ಇಟ್ಟುಕೊಳ್ಳಿರಿ, ಅದಕ್ಕಾಗಿ ಪಟ್ಟಿಯನ್ನು ಮಾಡಿರಿ. ಸ್ಮೃತಿಗಳ ಬಹಳ ದೊಡ್ಡ ಪಟ್ಟಿಯೇ ಇದೆ! ಕೆಲವೊಮ್ಮೆ ಖಜಾನೆಗಳ ಸ್ಮೃತಿಯಲ್ಲಿರಿ, ಕೆಲವೊಮ್ಮೆ ಶಕ್ತಿಗಳ ಸ್ಮೃತಿಯಲ್ಲಿರಿ, ಕೆಲವೊಮ್ಮೆ ಗುಣಗಳ, ಕೆಲವೊಮ್ಮೆ ಜ್ಞಾನದ ಸ್ಮೃತಿ, ಕೆಲವೊಮ್ಮೆ ತಮ್ಮ ಬಿರುದುಗಳ ಸ್ಮೃತಿಯನ್ನು ಇಟ್ಟುಕೊಳ್ಳಿರಿ. ವಿಧ-ವಿಧವಾದ ಸ್ಮೃತಿಗಳಲ್ಲಿ ಮನೋರಂಜನೆಯಾಗುವುದು. ಎಲ್ಲಾದರೂ ಮನೋರಂಜನೆ(ಸಾಂಸ್ಕೃತಿಕ) ಕಾರ್ಯಕ್ರಮವಾದರೆ, ಅಲ್ಲಿ ವಿಧ-ವಿಧವಾದ ನೃತ್ಯಗಳಿರುತ್ತವೆ, ವಿಧ-ವಿಧವಾದ ತಿನಿಸುಗಳಿರುತ್ತವೆ, ವಿಧ-ವಿಧವಾದ ಜನರೊಂದಿಗೆ ಭೇಟಿಯಾಗುವುದು, ಇದರಿಂದಲೇ ಮನೋರಂಜನೆಯಾಗುವುದಲ್ಲವೇ. ಅಂದಮೇಲೆ ಇದರಲ್ಲಿಯೂ ಸದಾ ಮನೋರಂಜನೆಯಲ್ಲಿ ಇರುವುದಕ್ಕಾಗಿ ವಿಧ-ವಿಧವಾದ ಮಾತುಗಳನ್ನು ಚಿಂತನೆ ಮಾಡಿರಿ. ಒಳ್ಳೆಯದು!

ವರದಾನ:-

ಪುರುಷಾರ್ಥದ ಮುಖ್ಯ ಆಧಾರವೇ ಕ್ಯಾಚಿಂಗ್ ಪವರ್ ಆಗಿದೆ. ಹೇಗೆ ವೈಜ್ಞಾನಿಕವಾಗಿ ಬಹಳ ಹಳೆಯ ಶಬ್ಧವನ್ನೇ ಕ್ಯಾಚ್ ಮಾಡುತ್ತಾರೆ, ಹಾಗೆಯೇ ತಾವು ಶಾಂತಿಯ ಶಕ್ತಿಯಿಂದ ತಮ್ಮ ಆದಿ ದೈವೀ ಸಂಸ್ಕಾರವನ್ನು ಕ್ಯಾಚ್ ಮಾಡಿರಿ, ಇದಕ್ಕಾಗಿ ಸದಾ ಸ್ಮೃತಿಯಿರಲಿ – ನಾನು ಹೀಗೆಯೇ ಇದ್ದೆನು, ಪುನಃ ಹೀಗಾಗುತ್ತಿದ್ದೇನೆ. ಆ ಸಂಸ್ಕಾರಗಳನ್ನೆಷ್ಟು ಕ್ಯಾಚ್ ಮಾಡುವಿರಿ ಅಷ್ಟು ಅದರ ಸ್ವರೂಪರಾಗುವಿರಿ. 5 ಸಾವಿರ ವರ್ಷಗಳ ಮಾತುಗಳೆಷ್ಟು ಅನುಭವದಲ್ಲಿ ಬರುತ್ತದೆ, ಹೇಗೆಂದರೆ ನೆನ್ನೆಯ ಮಾತಾಗಿದೆ ಎಂಬಂತೆ. ತಮ್ಮ ಸ್ಮೃತಿಯನ್ನು ಇಷ್ಟೂ ಶ್ರೇಷ್ಠ ಹಾಗೂ ಸ್ಪಷ್ಟ ಮಾಡಿಕೊಂಡಾಗಲೇ ಶಕ್ತಿಶಾಲಿ ಆಗುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top