14 May 2022 KANNADA Murli Today | Brahma Kumaris
Read and Listen today’s Gyan Murli in Kannada
13 May 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಶರೀರ ನಿರ್ವಹಣಾರ್ಥವಾಗಿ ಭಲೇ ಕರ್ಮ ಮಾಡಿ ಆದರೆ ಕೊನೆಪಕ್ಷ 8 ಘಂಟೆ ತಂದೆಯನ್ನು ನೆನಪು ಮಾಡಿ ಇಡೀ ವಿಶ್ವಕ್ಕೆ ಶಾಂತಿಯ ದಾನ ಕೊಡಿ, ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳುವಂತಹ ಸೇವೆ ಮಾಡಬೇಕು”
ಪ್ರಶ್ನೆ:: -
ಸೂರ್ಯವಂಶೀ ಮನೆತನದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಏನಾಗಿದೆ?
ಉತ್ತರ:-
1. ಸೂರ್ಯವಂಶಿ ಮನೆತನದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ತಂದೆಯನ್ನು ನೆನಪು ಮಾಡಿ ಮತ್ತು ಅನ್ಯರಿಗೆ ಮಾಡಿಸಿ. ಎಷ್ಟೆಷ್ಟು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ ಮತ್ತು ಅನ್ಯರನ್ನು ಮಾಡಿಸುತ್ತೀರಿ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. 2. ಪುರುಷಾರ್ಥ ಮಾಡಿ ಗೌರವಪೂರ್ಣವಾಗಿ ೀರ್ಣರಾಗಿ. ಶಿಕ್ಷೆಯನ್ನು ಭೋಗಿಸುವಂತಹ ಯಾವುದೇ ಕರ್ಮವಾಗಬಾರದು. ಶಿಕ್ಷೆ ಭೋಗಿಸುವವರ ಪದವಿ ಭ್ರಷ್ಟವಾಗಿ ಬಿಡುತ್ತದೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಈ ಪಾಪದ ಪ್ರಪಂಚದಿಂದ ನಮ್ಮನ್ನು ದೂರ ಕರೆದುಕೊಂಡು ಹೋಗು.
ಓಂ ಶಾಂತಿ. ಇದು ಮಕ್ಕಳ ಪ್ರಾರ್ಥನೆಯಾಗಿದೆ. ಯಾವ ಮಕ್ಕಳದು? ಯಾರು ಇಲ್ಲಿಯ ತನಕ ತಂದೆಯನ್ನು ಅರಿತಿಲ್ಲವೋ ಅವರದಾಗಿದೆ. ತಂದೆಯು ಈ ಪಾಪದ ಪ್ರಪಂಚದಿಂದ ನಮ್ಮನ್ನು ಪುಣ್ಯದ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಅಲ್ಲಿ ಸದಾ ವಿಶ್ರಾಂತಿಯಿರುತ್ತದೆ. ದುಃಖದ ಹೆಸರೇ ಇರುವುದಿಲ್ಲ. ಈಗ ತಮ್ಮ ಹೃದಯದೊಂದಿಗೆ ಪ್ರಶ್ನೆ ಕೇಳಿಕೊಳ್ಳಲಾಗುತ್ತದೆ – ನಾವು ಆ ಸುಖಧಾಮದಿಂದ ಮತ್ತೆ ಈ ದುಃಖಧಾಮದಲ್ಲಿ ಹೇಗೆ ಬಂದೆವು. ಭಾರತವು ಪ್ರಾಚೀನ ದೇಶವಾಗಿದೆ ಎನ್ನುವುದನ್ನು ಎಲ್ಲರೂ ತಿಳಿದುಕೊಂಡಿದ್ದಾರೆ. ಭಾರತವೇ ಸುಖಧಾಮವಾಗಿತ್ತು. ಒಬ್ಬರೇ ಭಗವಾನ್ ಭಗವತಿಯ ರಾಜ್ಯವಿತ್ತು. ದೇವತಾ ಕೃಷ್ಣ, ದೇವಿ ರಾಧೆ ಅಥವಾ ದೇವತಾ ನಾರಾಯಣ, ದೇವಿ ಲಕ್ಷ್ಮಿ ರಾಜ್ಯ ಮಾಡುತ್ತಿದ್ದರು. ಈಗ ಮತ್ತೆ ಭಾರತವಾಸಿಗಳೇ ತಮ್ಮನ್ನು ಪತಿತ ಭ್ರಷ್ಟಾಚಾರಿ ಎಂದು ಏಕೆ ಹೇಳುತ್ತಾರೆನ್ನುವುದನ್ನು ಎಲ್ಲರೂ ತಿಳಿದುಕೊಂಡಿದ್ದಾರೆ. ಇದನ್ನೂ ತಿಳಿದುಕೊಂಡಿದ್ದಾರೆ- ಭಾರತವು ಚಿನ್ನದ ಪಕ್ಷಿಯಾಗಿತ್ತು, ಪಾರಸನಾಥ, ಪಾರಸನಾಥಿನಿಯ ರಾಜ್ಯವಿತ್ತು. ನಂತರ ಈ ಭ್ರಷ್ಟಾಚಾರಿ ಅವಸ್ಥೆಯನ್ನು ಹೇಗೆ ಪಡೆದರು? ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ – ಮಕ್ಕಳೇ, ನನ್ನದೂ ಸಹ ಇಲ್ಲಿಯೇ ಜನ್ಮವಿದೆ ಆದರೆ ನನ್ನದು ದಿವ್ಯ ಜನ್ಮವಾಗಿದೆ. ಈಗ ನೀವು ತಿಳಿದುಕೊಂಡಿದ್ದೀರಿ- ನಾವೇ ಶಿವವಂಶಿಯರಾಗಿದ್ದೇವೆ ಹಾಗೂ ಪ್ರಜಾಪಿತ ಬ್ರಹ್ಮಾ ಕುಮಾರ ಕುಮಾರಿಯರಾಗಿದ್ದೇವೆ. ಆದ್ದರಿಂದ ತಂದೆಯು ತಿಳಿಸಿದ್ದಾರೆ ಮಕ್ಕಳೇ ಮೊದಲು ಮೊದಲು ಇದನ್ನು ಕೇಳಿ- ಭಗವಂತ ತಂದೆಯನ್ನು ಅರಿತುಕೊಂಡಿದ್ದೀರಾ? ಅದಕ್ಕೆ ಅವರು- ತಂದೆಯಾಗಿದ್ದಾರೆ ಎಂದು ಹೇಳುತ್ತಾರೆ. ಅವರು ತಂದೆಯಾಗಿದ್ದಾರೆಂದ ಮೇಲೆ ನಂತರ ಸಂಬಂಧವನ್ನೇನು ಕೇಳುವುದು. ಎಲ್ಲಾ ಆತ್ಮರು ಶಿವವಂಶೀಯರಾಗಿದ್ದಾರೆಂದ ಮೇಲೆ ಎಲ್ಲರೂ ಸಹೋದರರಾಗಿದ್ದಾರೆ. ನಂತರ ಸಾಕಾರ ಪ್ರಜಾಪಿತ ಬ್ರಹ್ಮಾನೊಂದಿಗೆ ಏನು ಸಂಬಂಧವಿದೆ. ಅದಕ್ಕೇ ಎಲ್ಲರೂ ತಂದೆಯಾಗಿದ್ದಾರೆ ಎಂದು ಹೇಳುತ್ತಾರೆ. ಅವರನ್ನೇ ಆದಿದೇವ ಎಂದು ಹೇಳುತ್ತಾರೆ. ಶಿವನು ನಿರಾಕಾರ ತಂದೆಯಾಗಿರುವುದರಿಂದ ಅವರು ಅವಿನಾಶಿಯಾಗಿ ಬಿಟ್ಟರು. ಆತ್ಮಗಳೂ ಸಹ ಅವಿನಾಶಿಯಾಗಿದ್ದಾರೆ. ಬಾಕಿ ಸಾಕಾರಿ ಶರೀರವನ್ನು ಒಂದನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ನಿರಾಕಾರ ಶಿವವಂಶೀಯರಾಗಿರುವ ಕಾರಣ ನಂತರ ಆತ್ಮದ ಲೆಕ್ಕದಲ್ಲಿ ಕುಮಾರ-ಕುಮಾರಿಯರೆಂದು ಹೇಳಲಾಗುವುದಿಲ್ಲ. ಶಿವವಂಶಿಯರಂತೂ ಮೊದಲಿನಿಂದಲೇ ಆಗಿದ್ದಾರೆ. ಶಿವ ತಂದೆಯು ಪುನರ್ಜನ್ಮದಲ್ಲಿ ಬರುವುದಿಲ್ಲ. ನಾವು ಆತ್ಮಗಳು ಪುನರ್ಜನ್ಮದಲ್ಲಿ ಬರುತ್ತೇವೆ. ನೀವು ಪುಣ್ಯಾತ್ಮಗಳಾಗಿದ್ದವರು ನಂತರ ಪಾಪಾತ್ಮರು ಹೇಗಾದಿರಿ? ತಂದೆಯು ಹೇಳುತ್ತಾರೆ- ನೀವು ಭಾರತವಾಸಿಗಳು ನಿಮಗೆ ನೀವೇ ಪೆಟ್ಟನ್ನು ಹಾಕಿಕೊಂಡಿದ್ದೀರಿ. ಪರಮಪಿತ ಎಂದು ಹೇಳುತ್ತೀರಿ. ನಂತರ ಅವರನ್ನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತೀರಿ. ಪುಣ್ಯಾತ್ಮರನ್ನಾಗಿ ಮಾಡುವಂತಹ ತಂದೆಯನ್ನು ನೀವು ನಾಯಿ-ಬೆಕ್ಕು, ಕಲ್ಲು-ಮುಳ್ಳು ಎಲ್ಲದರಲ್ಲೂ ಸೇರಿಸಿ ಬಿಟ್ಟಿದ್ದೀರಿ. ಅವರೇ ಬೇಹದ್ದಿನ ತಂದೆ ಆಗಿದ್ದಾರೆ. ಈಗ ಅವರನ್ನೇ ನೀವು ನೆನಪು ಮಾಡುತ್ತೀರಿ. ತಂದೆಯೇ ಪ್ರಜಾಪಿತ ಬ್ರಹ್ಮನ ಮುಖಾಂತರ ಬ್ರಾಹ್ಮಣರನ್ನು ರಚಿಸುತ್ತಾರೆ. ನೀವು ಬ್ರಾಹ್ಮಣರೇ ನಂತರ ದೇವತೆಗಳಾಗುತ್ತೀರಿ. ಪತಿತರಿಂದ ಪಾವನರನ್ನಾಗಿ ಮಾಡುವಂತಹವರು ಒಬ್ಬರೇ ತಂದೆ ಆದರಲ್ಲವೇ. ಅವರನ್ನು ಎಲ್ಲರಿಗಿಂತ ಜಾಸ್ತಿ ನೀವೇ ನಿಂದನೆ ಮಾಡಿದ್ದೀರಿ, ಆದ್ದರಿಂದ ನಿಮ್ಮ ಮೇಲೆ ಧರ್ಮರಾಜನ ಮುಖಾಂತರ ಕೇಸ್ ನಡೆಯುತ್ತದೆ. ಪಂಚ ವಿಕಾರ ರೂಪಿ ರಾವಣ ನಿಮ್ಮ ದೊಡ್ಡ ಶತ್ರು ಆಗಿದ್ದಾನೆ. ನಿಮ್ಮದು ರಾಮ ಬುದ್ಧಿಯಾಗಿದೆ, ಬಾಕಿ ಎಲ್ಲರದ್ದು ರಾವಣನ ಬುದ್ಧಿಯಾಗಿದೆ. ರಾಮ ರಾಜ್ಯದಲ್ಲಿ ನೀವು ಎಷ್ಟು ಸುಖಿಗಳಾಗಿದ್ದೀರಿ, ಈಗ ರಾವಣ ರಾಜ್ಯದಲ್ಲಿ ನೀವು ಎಷ್ಟು ದುಃಖಿಗಳಾಗಿದ್ದೀರಿ. ಅಲ್ಲಿ ಪಾವನ ವಂಶಾವಳಿಯಾಗಿದೆ, ಆದರೆ ಇಲ್ಲಿ ಪತಿತ ವಂಶಾವಳಿಯಾಗಿದೆ. ಈಗ ಯಾರ ಮತದ ಮೇಲೆ ನಡೆಯಬೇಕು? ಪತಿತ ಪಾವನನಂತು ಒಬ್ಬರೇ ನಿರಾಕಾರನಾಗಿದ್ದಾರೆ. ತಂದೆಯೂ ಈ ಸಮಯದಲ್ಲಿ ನಮ್ಮ ಮುಂದೆ ಹಾಜರಾಗಿದ್ದಾರೆ ಎನ್ನುವುದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಈಗ ಕಣ್ಣುಗಳಿಂದ ಅವರನ್ನು ನೋಡುತ್ತೇವೆ. ಪರಮಪಿತ ಪರಮಾತ್ಮ ಈ ಶರೀರದಲ್ಲಿ ಬಂದಿದ್ದಾರೆ ಎನ್ನುವುದು ಆತ್ಮನಿಗೆ ಈಗ ಗೊತ್ತಾಗಿದೆ. ನಾವೇ ಅರಿತುಕೊಳ್ಳುತ್ತೇವೆ, ನಾವೇ ಅರ್ಥ ಮಾಡಿಕೊಳ್ಳುತ್ತೇವೆ. ಶಿವಬಾಬಾ ನಂತರ ಬ್ರಹ್ಮನಲ್ಲಿ ಪ್ರವೇಶವಾಗಿ ನಮಗೆ ವೇದ-ಶಾಸ್ತ್ರಗಳ ಸಾರ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯ ರಹಸ್ಯವನ್ನು ತಿಳಿಸಿ ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಿದ್ದಾರೆ. ಸ್ವದರ್ಶನ ಚಕ್ರಧಾರಿಗಳನ್ನೇ ತ್ರಿಕಾಲದರ್ಶಿ ಎಂದು ಹೇಳಲಾಗುತ್ತದೆ. ವಿಷ್ಣುವಿಗೆ ಈ ಚಕ್ರವನ್ನು ಕೊಡುತ್ತಾರೆ. ನೀವು ಬ್ರಾಹ್ಮಣರೇ ಪುನಃ ದೇವತೆಗಳಾಗುತ್ತೀರಿ. ದೇವತೆಗಳ ಆತ್ಮ ಮತ್ತು ಶರೀರ ಎರಡು ಪವಿತ್ರವಾಗಿರುತ್ತವೆ. ನಿಮ್ಮ ಶರೀರವಂತೂ ವಿಕಾರದಿಂದಲೇ ಆಗಿದೆಯಲ್ಲವೇ! ಭಲೆ! ನೀವು ಆತ್ಮರು ಅಂತ್ಯದಲ್ಲಿ ಪವಿತ್ರರಾಗುತ್ತೀರಿ ಆದರೆ ಶರೀರವಂತು ಪತಿತವಾಗಿದೆಯಲ್ಲವೇ! ಆದ್ದರಿಂದ ನಿಮಗೆ ಸ್ವದರ್ಶನ ಚಕ್ರವನ್ನು ಕೊಡಲು ಸಾಧ್ಯವಿಲ್ಲ. ನೀವು ಸಂಪೂರ್ಣರಾಗುತ್ತೀರಿ ನಂತರ ವಿಷ್ಣುವಿನ ವಿಜಯ ಮಾಲೆಯಾಗುತ್ತೀರಿ. ರುದ್ರ ಮಾಲೆ ಮತ್ತು ನಂತರ ವಿಷ್ಣು ಮಾಲೆ. ರುದ್ರ ಮಾಲೆಯು ನಿರಾಕಾರಿಯಾಗಿದೆ ಮತ್ತು ಅವರು ಯಾವಾಗ ಸಾಕಾರದಲ್ಲಿ ರಾಜ್ಯ ಮಾಡುತ್ತಾರೆ, ಆಗ ವಿಷ್ಣುವಿನ ಮಾಲೆಯಾಗುತ್ತದೆ. ಈ ಎಲ್ಲಾ ಮಾತುಗಳನ್ನು ನೀವೀಗ ತಿಳಿದುಕೊಂಡಿದ್ದೀರಿ. ಪತಿತ ಪಾವನ ಬಾ ಎಂದು ಗಾಯನ ಮಾಡುತ್ತಾರೆಂದಾಗ ಅವಶ್ಯವಾಗಿ ಒಬ್ಬರೇ ಆದರಲ್ಲವೇ! ಸರ್ವ ಪತಿತರನ್ನು ಪಾವನ ಮಾಡುವವರು ಒಬ್ಬರೇ ತಂದೆ ಆಗಿದ್ದಾರೆ. ಅವರೇ ಪತಿತ ಪಾವನ ಪ್ರಿಯಾತಿ ಪ್ರಿಯ ನಿರಾಕಾರ ಪರಮಪಿತ ಪರಮಾತ್ಮನಾದರಲ್ಲವೇ. ಅವರೇ ದೊಡ್ಡ ಬಾಬಾ ಆಗಿದ್ದಾರೆ. ಚಿಕ್ಕ ಬಾಬಾರವರನ್ನು (ಬ್ರಹ್ಮಾ) ಎಲ್ಲರೂ ಬಾಬಾ, ಬಾಬಾ ಎಂದು ಹೇಳುತ್ತಿರುತ್ತಾರೆ. ಯಾವಾಗ ದುಃಖವಾಗುತ್ತದೆ, ಆಗ ಪರಮಪಿತ ಪರಮಾತ್ಮನನ್ನು ನೆನಪು ಮಾಡುತ್ತಾರೆ. ಇವು ತುಂಬಾ ತಿಳಿದುಕೊಳ್ಳುವ ಮಾತುಗಳಾಗಿವೆ. ಮೊದಲು-ಮೊದಲು ಈ ಮಾತುಗಳನ್ನು ತಿಳಿಸಬೇಕು. ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಶಿವ ಜಯಂತಿಯನ್ನು ಆಚರಿಸುತ್ತಾರೆ. ನಿರಾಕಾರ ಪರಮಪಿತ ಪರಮಾತ್ಮನ ಮಹಿಮೆಯು ಅತಿ ದೊಡ್ಡದಾಗಿದೆ. ಎಷ್ಟು ದೊಡ್ಡ ಪರೀಕ್ಷೆಯೋ ಅಷ್ಟು ದೊಡ್ಡ ಬಿರುದು ಸಿಗುತ್ತದೆಯಲ್ಲವೇ. ಬಾಬಾರವರ ಬಿರುದು ಅತಿ ದೊಡ್ಡದಾಗಿದೆ. ದೇವತೆಗಳ ಮಹಿಮೆ ಸಾಮಾನ್ಯವಾಗಿದೆ. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ….. ಅತಿ ದೊಡ್ಡ ಹಿಂಸೆಯೆಂದರೆ ಒಬ್ಬರು ಇನ್ನೊಬ್ಬರ ಮೇಲೆ ಕಾಮ ಕಟಾರಿಯನ್ನು ನಡೆಸಿ ಒಬ್ಬರು ಇನ್ನೊಬ್ಬರಿಗೆ ಆದಿ, ಮಧ್ಯ, ಅಂತ್ಯ ದುಃಖವನ್ನು ಕೊಡುತ್ತಾರೆ. ಇದೇ ಅತಿ lದೊಡ್ಡ ಹಿಂಸೆಯಾಗಿದೆ. ಈಗ ನೀವು ಡಬಲ್ ಅಹಿಂಸಕರಾಗಬೇಕಾಗಿದೆ. ಭಗವಾನುವಾಚ – ಹೇ! ಮಕ್ಕಳೇ ನೀವು ಆತ್ಮಗಳಾಗಿದ್ದೀರಿ, ನಾನು ಪರಮಾತ್ಮನಾಗಿದ್ದೇನೆ. ನೀವು 63 ಜನ್ಮಗಳು ವಿಷಯ ಸಾಗರದಲ್ಲಿ ಇರುತ್ತೀರಿ. ಈಗ ನಾನು ನಿಮ್ಮನ್ನು ಕ್ಷೀರಸಾಗರದಲ್ಲಿ ಕರೆದುಕೊಂಡು ಹೋಗುತ್ತೇನೆ. ಉಳಿದ ಅಂತ್ಯದ ಈ ಸ್ವಲ್ಪ ಸಮಯವನ್ನು ನೀವು ಪವಿತ್ರತೆಯ ಪ್ರತಿಜ್ಞೆ ಮಾಡಿ. ಇದಂತು ಒಳ್ಳೆಯ ಮತವಾಗಿದೆಯಲವೇ. ನಮ್ಮನ್ನು ಪಾವನ ಮಾಡು ಎಂದು ಹೇಳುತ್ತಾರೆ. ಪಾವನ ಆತ್ಮಗಳು ಮುಕ್ತಿಯಲ್ಲಿರುತ್ತಾರೆ. ಸತ್ಯಯುಗದಲ್ಲಿ ಜೀವನ್ಮುಕ್ತಿ ಇರುತ್ತದೆ. ತಂದೆಯೂ ಹೇಳುತ್ತಾರೆ – ಒಂದುವೇಳೆ ನೀವು ಸೂರ್ಯವಂಶಿಯರಾಗಬೇಕೆಂದರೆ ಪೂರ್ಣ ಪುರುಷಾರ್ಥ ಮಾಡಿ. ನನ್ನನ್ನು ನೆನಪು ಮಾಡಿ ಮತ್ತು ಅನ್ಯರಿಗೂ ನೆನಪು ಮಾಡಿಸಿ. ಎಷ್ಟೆಷ್ಟು ಸ್ವದರ್ಶನ ಚಕ್ರಧಾರಿಗಳಾಗಿ, ಅನ್ಯರನ್ನು ಮಾಡಿಸುತ್ತೀರಿ, ಅಷ್ಟೇ ಉತ್ತಮ ಪದವಿಯನ್ನು ಪಡೆಯುತ್ತೀರಿ. ಈಗ ನೋಡಿ! ಈ ಪ್ರೇಮ್ಬೆಹನ್ ಡೆಹ್ರಾಡುನ್ನಲ್ಲಿ ಇರುತ್ತಾರೆ. ಇಷ್ಟೆಲ್ಲಾ ಡೆಹ್ರಾಡೂನ್ ನಿವಾಸಿಗಳು ಸ್ವದರ್ಶನ ಚಕ್ರಧಾರಿಗಳಾಗಿರಲಿಲ್ಲ. ಮತ್ತೆ ಇವರು ಹೇಗಾದರು? ಪ್ರೇಮ್ಬೆಹನ್ ಅನ್ಯರನ್ನು ತಮ್ಮ ಸಮಾನ ಮಾಡಿದರು. ಹೀಗೆ ತಮ್ಮ ಸಮಾನ ಮಾಡಿಕೊಳ್ಳುತ್ತಾ-ಮಾಡಿಕೊಳ್ಳುತ್ತಾ ದೈವೀ ವೃಕ್ಷದ ವೃದ್ಧಿ ಆಗುತ್ತದೆ. ಅಂಧರನ್ನು ಸರಿಪಡಿಸುವಂತಹ ಪುರುಷಾರ್ಥ ಮಾಡಬೇಕಲ್ಲವೇ. 8 ಗಂಟೆಯಂತು ನಿಮಗೆ ಬಿಡುವಿದೆ. ಶರೀರ ನಿರ್ವಹಣಾರ್ಥ ವ್ಯಾಪಾರ ಮುಂತಾದವುಗಳನ್ನು ಮಾಡಬೇಕು. ಎಲ್ಲಿಯೇ ಹೋದರು ಪ್ರಯತ್ನ ಮಾಡಿ ನನ್ನನ್ನು ನೆನಪು ಮಾಡಿ. ಎಷ್ಟು ನೀವು ತಂದೆಯನ್ನು ನೆನಪು ಮಾಡುತ್ತೀರೆಂದರೆ ನೀವು ಶಾಂತಿಯ ದಾನವನ್ನು ಇಡೀ ಸೃಷ್ಟಿಗೆ ಕೊಡುತ್ತೀರೆಂದು ಅರ್ಥ. ಯೋಗದಿಂದ ಶಾಂತಿಯ ದಾನ ಕೊಡುವುದು, ಯಾವುದೇ ಕಷ್ಟವಿಲ್ಲ. ಹಾ! ಆಗಾಗ ಯೋಗದಲ್ಲಿ ಕೂರಿಸಬೇಕಾಗುತ್ತದೆ ಏಕೆಂದರೆ ಸಂಘಟನೆಯ ಬಲವು ಒಟ್ಟುಗೂಡುತ್ತದೆ. ತಂದೆಯು ತಿಳಿಸಿದ್ದಾರೆ – ಶಿವಬಾಬಾರವರನ್ನು ನೆನಪು ಮಾಡಿ, ಅವರಿಗೆ ಹೇಳಿ – ಬಾಬಾ ಇವರು ನಮ್ಮ ಕುಲದವರಾಗಿದ್ದಾರೆ, ಇವರ ಬುದ್ಧಿಯ ಬೀಗವನ್ನು ತೆರೆಯಿರಿ. ಇದೂ ಸಹ ನೆನಪು ಮಾಡುವ ಯುಕ್ತಿಯಾಗಿದೆ. ಈ ರೀತಿ ತಮ್ಮ ಅಭ್ಯಾಸವನ್ನು ಇಟ್ಟುಕೊಳ್ಳಬೇಕು, ನಡೆಯುತ್ತಾ, ತಿರುಗಾಡುತ್ತಾ ಶಿವಬಾಬಾರವರ ನೆನಪೇ ಇರಬೇಕು. ಬಾಬಾ ಇವರಿಗೆ ಆಶೀರ್ವಾದ ಮಾಡಿ. ಆಶೀರ್ವಾದ ಮಾಡುವಂತಹ ದಯಾಹೃದಯಿ ಬಾಬಾ ಒಬ್ಬರೇ ಆಗಿದ್ದಾರೆ. ಹೇ! ಭಗವಂತ ಇವರ ಮೇಲೆ ದಯೆ ತೋರಿಸು ಎಂದು ಭಗವಂತನಿಗೇ ಹೇಳುತ್ತಾರಲ್ಲವೇ! ಅವರೇ ಕರುಣಾ ಸಾಗರ, ಜ್ಞಾನ ಸಾಗರ, ಆನಂದ ಸಾಗರ ಆಗಿದ್ದಾರೆ. ಪವಿತ್ರತೆಯಲ್ಲಿಯೂ ಸಾಗರ ಆಗಿದ್ದಾರೆ, ಪ್ರೀತಿಯಲ್ಲಿಯೂ ಸಾಗರ ಆಗಿದ್ದಾರೆ. ಆದ್ದರಿಂದ ಬ್ರಾಹ್ಮಣ ಕುಲಭೂಷಣರಲ್ಲಿಯೂ ಸಹ ಪರಸ್ಪರ ಎಷ್ಟು ಪ್ರೀತಿ ಇರಬೇಕು. ಯಾರಿಗೂ ದುಃಖವನ್ನು ಕೊಡಬಾರದಾಗಿದೆ. ಸತ್ಯಯುಗದಲ್ಲಿ ಪ್ರಾಣಿಗಳೂ ಸಹ ಯಾರಿಗೂ ದುಃಖವನ್ನು ಕೊಡುವುದಿಲ್ಲ. ನೀವು ಮಕ್ಕಳು ಒಂದು ಮನೆಯಲ್ಲಿದ್ದು, ಪರಸ್ಪರ ಸಹೋದರರೇ ಅತಿ ಚಿಕ್ಕ ಮಾತಿನಲ್ಲಿ ಜಗಳಾಡುತ್ತೀರಿ. ಅಲ್ಲಿ ಪ್ರಾಣಿಗಳು ಮುಂತಾದವೂ ಸಹ ಜಗಳಾಡುವುದಿಲ್ಲ. ಈಗ ನೀವೂ ಸಹ ಕಲಿಯಬೇಕಾಗಿದೆ. ಕಲಿಯುವುದಿಲ್ಲವೆಂದರೆ ತಂದೆಯು ಹೇಳುತ್ತಾರೆ – ನೀವು ತುಂಬಾ ಶಿಕ್ಷೆಗಳನ್ನು ಅನುಭವಿಸುತ್ತೀರಿ, ಪದವಿಯೂ ಸಹ ಭ್ರಷ್ಟ ಆಗುವುದು. ನಾವು ಶಿಕ್ಷೆಗೆ ಯೋಗ್ಯರು ಏಕಾಗಬೇಕು! ಗೌರವ ಪೂರ್ಣರಾಗಿ ಉತ್ತೀರ್ಣರಾಗಬೇಕಲ್ಲವೇ! ಮುಂದೆ ನಡೆಯುತ್ತಾ ಹೋದಂತೆ ತಂದೆಯು ಎಲ್ಲಾ ಸಾಕ್ಷಾತ್ಕಾರಗಳನ್ನು ಮಾಡಿಸುತ್ತಿರುತ್ತಾರೆ. ಈಗ ಸ್ವಲ್ಪವೆ ಸಮಯವಿದೆ. ಆದ್ದರಿಂದ ಬೇಗ ಪುರುಷಾರ್ಥ ಮಾಡಿ. ಕಾಯಿಲೆ ಇದ್ದಾಗಲೂ ಸಹ ರಾಮ-ರಾಮ ಎಂದು ಹೇಳಿ ಎಂದು ಎಲ್ಲರಿಗೂ ಹೇಳುತ್ತಾರಲ್ಲವೇ. ಒಳಗಿನಿಂದಲೂ ಹೇಳುತ್ತಾರೆ. ಅಂತ್ಯದಲ್ಲಿಯೂ ಸಹ ಕೆಲ-ಕೆಲವರು ತುಂಬಾ ಮುಂದೆ ಹೋಗುತ್ತಾರೆ. ಪರಿಶ್ರಮ ಪಟ್ಟು ಮುಂದೆ ಹೋಗಿ ಬಿಡುತ್ತಾರೆ. ನೀವು ತುಂಬಾ ಅದ್ಭುತವನ್ನು ನೋಡುತ್ತಿರುತ್ತೀರಿ. ನಾಟಕದ ಅಂತ್ಯದಲ್ಲಿ ಅದ್ಭುತವಾದ ಪಾತ್ರವಿರುತ್ತದೇಯಲ್ಲವೇ! ಅಂತ್ಯದಲ್ಲಿಯೇ ವಾಹ್! ವಾಹ್! ಇರುತ್ತದೆ, ಅದೇ ಸಮಯದಲ್ಲಿ ನೀವು ತುಂಬಾ ಖುಷಿಯಲ್ಲಿ ಇರುತ್ತೀರಿ. ಯಾರಲ್ಲಿ ಜ್ಞಾನವಿರುವುದಿಲ್ಲ ಅವರಂತು ಅಲ್ಲಿಯೇ ಮೂರ್ಚಿತರಾಗಿ ಬಿಡುತ್ತಾರೆ. ಆಪರೇಷನ್ ಮುಂತಾದ ಸಮಯದಲ್ಲಿ ವೈದ್ಯರೆಲ್ಲರೂ ದುರ್ಬಲರನ್ನು ಸರಿ ಮಾಡಲು ಪ್ರಯತ್ನಿಸುತ್ತಾರೆ, ಆದರೆ ಸರಿಪಡಿಸಲಾಗುವುದಿಲ್ಲ. ಪಾರ್ಟಿಷನಲ್ಲಿ ಏನಾಯಿತೆಂದು ಎಲ್ಲರೂ ನೋಡಿದಿರಲ್ಲವೇ. ಇದಂತು ತುಂಬಾ ದುಃಖದಾಯಕ ಸಮಯವಾಗಿದೆ. ಇದನ್ನು ರಕ್ತಪಾತದ ಸಮಯವೆಂದು ಹೇಳಲಾಗುತ್ತದೆ. ಇದನ್ನು ನೋಡಲು ತುಂಬಾ ಧೈರ್ಯ ಬೇಕು. ನಿಮ್ಮದು 84 ಜನ್ಮಗಳ ಕಥೆಯಾಗಿದೆ. ನಾವು ದೇವೀ-ದೇವತೆಗಳೇ ರಾಜ್ಯ ಮಾಡುತ್ತಿದ್ದೆವು ನಂತರ ಮಾಯೆಯ ವಶರಾಗಿ ವಾಮಮಾರ್ಗದಲ್ಲಿ ಬಂದೆವು, ಮತ್ತೆ ಈಗ ದೇವತೆಗಳಾಗುತ್ತೇವೆ. ಇದನ್ನು ಸ್ಮರಣೆ ಮಾಡುತ್ತಿದ್ದರೂ ಸಹ ಜೀವನದ ದೋಣಿಯು ಪಾರಾಗುತ್ತದೆ. ಇದೇ ಸ್ವದರ್ಶನ ಚಕ್ರವಲ್ಲವೇ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ತಂದೆಯ ಸಮಾನ ಸರ್ವಗುಣಗಳಲ್ಲಿ ಪೂರ್ಣರಾಗಬೇಕಾಗಿದೆ. ಪರಸ್ಪರ ಬಹಳ ಪ್ರೀತಿಯಿಂದ ಇರಬೇಕಾಗಿದೆ. ಎಂದೂ ಯಾರಿಗೂ ದುಃಖವನ್ನು ಕೊಡಬಾರದಾಗಿದೆ.
2. ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. ನೆನಪಿನಲ್ಲಿದ್ದು ಇಡೀ ವಿಶ್ವಕ್ಕೆ ಶಾಂತಿಯ ದಾನ ಕೊಡಬೇಕಾಗಿದೆ.
ವರದಾನ:-
ವಿಘ್ನ ವಿನಾಶಕ ಸ್ಥಿತಿಯಲ್ಲಿ ಸ್ಥಿತರಾಗಿರುವುದರಿಂದ ಎಷ್ಟೇ ದೊಡ್ಡ ವಿಘ್ನವು ಆಟದಂತೆ ಅನುಭವವಾಗುವುದು. ಆಟವೆಂದು ತಿಳಿಯುವುದರಿಂದ ವಿಘ್ನಗಳಿಂದ ಎಂದಿಗೂ ಗಾಬರಿಯಾಗುವುದಿಲ್ಲ ಆದರೆ ಖುಷಿ-ಖುಷಿಯಿಂದ ವಿಜಯಿಯಾಗುವಿರಿ ಹಾಗೂ ಡಬಲ್ ಲೈಟ್ ಆಗಿರುತ್ತೀರಿ. ಡ್ರಾಮಾದ ಜ್ಞಾನದ ಸ್ಮೃತಿಯಿಂದ ಪ್ರತಿಯೊಂದು ವಿಘ್ನವು ಹೊಸದೇನಲ್ಲವೆಂದು ಅನಿಸುವುದು. ಹೊಸ ಮಾತೆನಿಸುವುದಿಲ್ಲ, ಬಹಳ ಹಳೆಯ ಮಾತಾಗಿದೆ, ಅನೇಕ ಬಾರಿ ವಿಜಯಿಯಾಗಿದ್ದೇವೆ – ಇಂತಹ ನಿಶ್ಚಯ ಬುದ್ಧಿ, ಜ್ಞಾನದ ರಹಸ್ಯವನ್ನು ತಿಳಿದುಕೊಳ್ಳುವಂತಹ ಮಕ್ಕಳ ನೆನಪಾರ್ಥವೇ ಅಚಲ್ಘರ್ ಆಗಿದೆ.
ಸ್ಲೋಗನ್:-
ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ:
ನಾವೇನು ಒಳ್ಳೆಯ ಅಥವಾ ಕೆಟ್ಟ ಕರ್ಮವನ್ನು ಮಾಡುತ್ತೇವೆ, ಅದರ ಫಲವು ಅವಶ್ಯವಾಗಿ ಸಿಗುತ್ತದೆ. ಹೇಗೆ ಯಾರಾದರೂ ದಾನ-ಪುಣ್ಯ ಮಾಡುತ್ತಾರೆ, ಯಜ್ಞ-ಹೋಮವನ್ನು ಮಾಡುತ್ತಾರೆ, ಪೂಜೆ-ಪುನಸ್ಕಾರವನ್ನು ಮಾಡುತ್ತಾರೆಂದರೆ ತಿಳಿಯುತ್ತಾರೆ- ನಾವು ಈಶ್ವರಾರ್ಥವಾಗಿ ಏನೆಲ್ಲಾ ದಾನ ಮಾಡಿದೆವೋ, ಅದು ಪರಮಾತ್ಮನ ದರ್ಬಾರಿನಲ್ಲಿ ಸೇರ್ಪಡೆಯಾಯಿತು. ಯಾವಾಗ ನಾವು ಸಾಯುತ್ತೇವೆಯೋ ಆಗ ಅದರ ಫಲವು ಅವಶ್ಯವಾಗಿ ಸಿಗುವುದು ಮತ್ತು ನಮ್ಮ ಮುಕ್ತಿಯಾಗುವುದು. ಆದರೆ ಇದನ್ನಂತು ತಿಳಿದಿದ್ದೇವೆ- ಇದನ್ನು ಮಾಡುವುದರಿಂದೇನೂ ಸದಾಕಾಲಕ್ಕಾಗಿ ಲಾಭವಾಗುವುದಿಲ್ಲ. ಇದಂತು ನಾವು ಎಂತಹ ಕರ್ಮವನ್ನು ಮಾಡುತ್ತೇವೆಯೋ ಅದರಿಂದ ಅಲ್ಪಕಾಲದ ಕ್ಷಣಿಕ ಸುಖದ ಪ್ರಾಪ್ತಿಯಂತು ಅವಶ್ಯವಾಗಿ ಆಗುವುದು. ಆದರೆ ಎಲ್ಲಿಯವರೆಗೆ ಈ ಪ್ರತ್ಯಕ್ಷ ಜೀವನವು ಸದಾ ಸುಖಿಯಾಗುವುದಿಲ್ಲವೋ, ಅಲ್ಲಿಯವರೆಗೆ ಅದರ ರಿಟರ್ನ್ ಸಿಗಲು ಸಾಧ್ಯವಿಲ್ಲ. ಭಲೆ ನಾವು ಯಾರೊಂದಿಗಾದರೂ ಕೇಳುತ್ತೇವೆ- ನೀವು ಇದೇನೆಲ್ಲಾ ಮಾಡುತ್ತಾ ಬಂದಿದ್ದೀರಿ, ಅದನ್ನು ಮಾಡುವುದರಿಂದ ನಿಮಗೆ ಲಾಭವು ಸಿಕ್ಕಿದೆಯೇ? ಇದಕ್ಕೆ ಅವರ ಬಳಿ ಯಾವುದೇ ಜವಾಬು ಇರುವುದಿಲ್ಲ. ಈಗ ಪರಮಾತ್ಮನ ಬಳಿ ದಾಖಲಾತಿ ಆಯಿತೇ ಅಥವಾ ಇಲ್ಲವೆಂಬುದು ನಮಗೆ ಹೇಗೆ ಗೊತ್ತು? ಎಲ್ಲಿಯವರೆಗೆ ತಮ್ಮ ಪ್ರತ್ಯಕ್ಷ ಜೀವನದಲ್ಲಿ ಕರ್ಮ ಶ್ರೇಷ್ಠವಿಲ್ಲವೋ ಅಲ್ಲಿಯವರೆಗೆ ಎಷ್ಟಾದರೂ ಪರಿಶ್ರಮ ಮಾಡುತ್ತಿದ್ದರೂ, ಮುಕ್ತಿ-ಜೀವನ್ಮುಕ್ತಿಯ ಪ್ರಾಪ್ತಿಯಾಗುವುದಿಲ್ಲ. ದಾನ-ಪುಣ್ಯ ಮಾಡಿದಿರಿ ಒಳ್ಳೆಯದು ಆದರೆ ಅದನ್ನು ಮಾದುವುದರಿಂದಂತು ವಿಕರ್ಮವಂತು ಭಸ್ಮವಾಗುವುದಿಲ್ಲ, ನಂತರ ಮುಕ್ತಿ-ಜೀವನ್ಮುಕ್ತಿಯು ಹೇಗೆ ಪ್ರಾಪ್ತಿಯಾಗುವುದು! ಭಲೆ ಇಷ್ಟೊಂದು ಸಂತ-ಮಹಾತ್ಮರಿದ್ದಾರೆ, ಎಲ್ಲಿಯವರೆಗೆ ಅವರುಗಳಿಗೆ ಕರ್ಮಗಳ ತಿಳುವಳಿಕೆಯಿಲ್ಲವೋ ಅಲ್ಲಿಯವರೆಗೆ ಆ ಕರ್ಮವು ಅಕರ್ಮವಾಗಲು ಸಾಧ್ಯವಿಲ್ಲ, ಅವರು ಮುಕ್ತಿ-ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲೂ ಆಗುವುದಿಲ್ಲ. ಅವರಿಗೆ ಇದೂ ಸಹ ಗೊತ್ತಿಲ್ಲ- ಸತ್ಯ-ಧರ್ಮ ಏನಾಗಿದೆ ಮತ್ತು ಸತ್ಯ ಕರ್ಮವೇನಾಗಿದೆ, ಕೇವಲ ಮುಖದಿಂದ ರಾಮ-ರಾಮ ಎಂದು ಹೇಳುವುದರಿಂದ ಮುಕ್ತಿ ಹೊಂದುವುದಿಲ್ಲ. ಸತ್ತ ನಂತರ ನಮಗೆ ಮುಕ್ತಿಯಾಗುವುದು ಎಂದು ತಿಳಿದುಕೊಂಡು ಕುಳಿತಿದ್ದಾರೆ. ಅವರುಗಳಿಗೆ ಇದೂ ಸಹ ಗೊತ್ತಿಲ- ಮರಣದ ನಂತರ ಯಾವ ಲಾಭ ಸಿಗುವುದು? ಏನೂ ಇಲ್ಲ. ಉಳಿದದ್ದು ಮನುಷ್ಯ ತನ್ನ ಜೀವನದಲ್ಲಿ ಕೆಟ್ಟ ಕರ್ಮ ಬೇಕೋ, ಒಳ್ಳೆಯ ಕರ್ಮವನ್ನು ಮಾಡುತ್ತಾರೆಯೋ, ಅದನ್ನೂ ಇದೇ ಜೀವನದಲ್ಲಿ ಅನುಭವಿಸಬೇಕಾಗಿದೆ. ಈಗ ಇದೆಲ್ಲದರ ಸಂಪೂರ್ಣ ತಿಳುವಳಿಕೆಯನ್ನು ನಮಗೆ ಪರಮಾತ್ಮ ಶಿಕ್ಷಕನ ಮೂಲಕ ಸಿಗುತ್ತಿದೆ- ಹೇಗೆ ಶುದ್ಧ ಕರ್ಮವನ್ನು ಮಾಡುತ್ತಾ ತಮ್ಮ ಪ್ರತ್ಯಕ್ಷ ಜೀವನವನ್ನು ತಯಾರು ಮಾಡಿಕೊಳ್ಳಬೇಕಾಗಿದೆ. ಒಳ್ಳೆಯದು. ಓಂ ಶಾಂತಿ.
➤ Email me Murli: Receive Daily Murli on your email. Subscribe!