14 December 2021 KANNADA Murli Today | Brahma Kumaris

Read and Listen today’s Gyan Murli in Kannada

December 13, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವೀಗ ಸತ್ಯ-ಸತ್ಯವಾದ ಸತ್ಸಂಗದಲ್ಲಿ ಕುಳಿತಿದ್ದೀರಿ. ನಿಮಗೆ ಸತ್ಯ ಖಂಡದಲ್ಲಿ ಹೋಗುವ ಮಾರ್ಗವನ್ನು ಸತ್ಯ ತಂದೆಯು ತಿಳಿಸುತ್ತಿದ್ದಾರೆ”

ಪ್ರಶ್ನೆ:: -

ಯಾವ ನಿಶ್ಚಯದ ಆಧಾರದ ಮೇಲೆ ಪಾವನರಾಗುವ ಶಕ್ತಿಯು ಸ್ವತಹವಾಗಿ ಬರುತ್ತದೆ?

ಉತ್ತರ:-

ಈ ಮೃತ್ಯುಲೋಕದಲ್ಲಿ ಈಗ ನಮ್ಮದು ಅಂತಿಮ ಜನ್ಮವಾಗಿದೆ. ಈ ಪತಿತ ಪ್ರಪಂಚದ ವಿನಾಶವಾಗಲಿದೆ. ಪಾವನರಾದರೆ ಪಾವನ ಪ್ರಪಂಚದ ಮಾಲೀಕರಾಗುತ್ತೀರಿ ಎಂಬುದು ತಂದೆಯ ಶ್ರೀಮತವಿದೆ – ಒಂದುವೇಳೆ ಈ ಮಾತಿನ ನಿಶ್ಚಯವಿದ್ದರೆ ಪಾವನರಾಗುವ ಶಕ್ತಿಯು ಸ್ವತಹವಾಗಿ ಬರುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಕೊನೆಗೂ ಆ ದಿನ ಇಂದು ಬಂದಿತು….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಈ ಗೀತೆಯು ನಿಮಗಾಗಿ ವಜ್ರ ಸಮಾನವಾಗಿದೆ ಮತ್ತು ಯಾರು ರಚಿಸಿದ್ದಾರೆಯೋ ಅವರಿಗಾಗಿ ಕವಡೆಯಂತಾಗಿದೆ ಏಕೆಂದರೆ ಅವರು ಕೇವಲ ಗಿಳಿ ಪಾಠದಂತೆ ಹಾಡುತ್ತಾರೆ, ಅರ್ಥವೇನೂ ತಿಳಿದುಕೊಂಡಿಲ್ಲ, ನೀವು ಅರ್ಥವನ್ನು ತಿಳಿದುಕೊಂಡಿದ್ದೀರಿ. ಈಗ ಆ ದಿನವು ಬಂದಿದೆ ಯಾವಾಗ ಕಲಿಯುಗವು ಬದಲಾಗಿ ಸತ್ಯಯುಗ, ಪತಿತ ಪ್ರಪಂಚವು ಬದಲಾಗಿ ಪಾವನ ಪ್ರಪಂಚವಾಗುವುದಿದೆ. ಹೇ ಪತಿತ-ಪಾವನ ಬನ್ನಿ ಎಂದೇ ಕರೆಯುತ್ತಾರೆ, ಪಾವನ ಪ್ರಪಂಚದಲ್ಲಿ ಯಾರೂ ಕರೆಯುವುದಿಲ್ಲ. ನೀವು ಈ ಗೀತೆಯ ಅರ್ಥವನ್ನು ಚೆನ್ನಾಗಿ ಅರಿತುಕೊಂಡಿದ್ದೀರಿ, ಅವರು ಅರಿತುಕೊಂಡಿಲ್ಲ. ಈಗ ನಿಮಗೆ ತಿಳಿದಿದೆ, ಭಕ್ತಿಮಾರ್ಗವು ಅರ್ಧಕಲ್ಪ ನಡೆಯುತ್ತದೆ, ಯಾವಾಗ ರಾವಣ ರಾಜ್ಯವು ಆರಂಭವಾಗುತ್ತದೆಯೋ ಆಗಿನಿಂದ ಭಕ್ತಿಯೂ ಆರಂಭವಾಗುತ್ತದೆ, ಏಣಿಯನ್ನು ಕೆಳಗಿಳಿಯಬೇಕಾಗುತ್ತದೆ. ಈ ರಹಸ್ಯವು ಮಕ್ಕಳ ಬುದ್ಧಿಯಲ್ಲಿ ಇದೆ. ನೀವೀಗ ತಿಳಿದುಕೊಂಡಿದ್ದೀರಿ, ಭಾರತವಾಸಿಗಳು ಯಾರು 16 ಕಲಾ ಸಂಪೂರ್ಣರಾಗಿದ್ದರೋ ಅವರೇ 14 ಕಲೆಯವರಾಗಿದ್ದಾರೆ, ಅವಶ್ಯವಾಗಿ ಯಾರು 14 ಕಲೆಗಳನ್ನು ಹೊಂದಿದ್ದರೋ ಅವರೇ 14 ಕಲೆಯವರಾಗುತ್ತಾರಲ್ಲವೆ. ಇಲ್ಲದಿದ್ದರೆ ಮತ್ತ್ಯಾರು ಆಗುತ್ತಾರೆ! ನೀವೇ ಆಗಿದ್ದಿರಿ, ಈಗ ಪುನಃ ಆಗುತ್ತಿದ್ದೀರಿ. ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಪ್ರಪಂಚದ ಕಲೆಯು ಕಳೆಯುತ್ತಾ ಹೋಗುತ್ತದೆ. ಮನೆಯು ಯಾವುದು ಮೊದಲು ಸತೋಪ್ರಧಾನವಾಗಿರುತ್ತದೆಯೋ ಅದು ಅವಶ್ಯವಾಗಿ ತಮೋಪ್ರಧಾನವಾಗಲೇಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ – ಸತ್ಯಯುಗಕ್ಕೆ ಸತೋಪ್ರಧಾನ ಪ್ರಪಂಚ, ಕಲಿಯುಗಕ್ಕೆ ತಮೋಪ್ರಧಾನ ಪ್ರಪಂಚವೆಂದು ಹೇಳಲಾಗುತ್ತದೆ. ಸತೋಪ್ರಧಾನರೇ ತಮೋಪ್ರಧಾನರಾಗಿದ್ದಾರೆ ಏಕೆಂದರೆ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರಪಂಚವು ಹೊಸದರಿಂದ ಅವಶ್ಯವಾಗಿ ಹಳೆಯದಾಗುತ್ತದೆ ಆದ್ದರಿಂದ ಹೊಸ ಪ್ರಪಂಚ, ಹೊಸ ರಾಜ್ಯವು ಬೇಕೆಂದು ಬಯಸುತ್ತಾರೆ. ಹೊಸ ಪ್ರಪಂಚದಲ್ಲಿ ಯಾರ ರಾಜ್ಯವಿತ್ತು ಎಂಬುದನ್ನು ಯಾರಿಗೂ ತಿಳಿದಿಲ್ಲ. ನಿಮಗೆ ಈ ಸತ್ಸಂಗದಿಂದ ಎಲ್ಲವೂ ತಿಳಿದು ಬರುತ್ತದೆ. ಈ ಸಮಯದಲ್ಲಿ ಇದೇ ಸತ್ಯ ಸತ್ಯವಾದ ಸತ್ಸಂಗವಾಗಿದೆ ಯಾವುದು ಇದು ಮತ್ತೆ ಭಕ್ತಿಮಾರ್ಗದಲ್ಲಿ ನಡೆಯುತ್ತದೆ ಆದ್ದರಿಂದ ಇದು ಪರಂಪರೆಯಿಂದ ನಡೆದು ಬಂದಿದೆ ಎಂದು ಹೇಳುತ್ತಾರಲ್ಲವೆ ಆದರೆ ನೀವು ತಿಳಿದುಕೊಂಡಿದ್ದೀರಿ – ಸತ್ಯ-ಸತ್ಯವಾದ ಸತ್ಸಂಗವು ನಿಮ್ಮದಾಗಿದೆ. ಉಳಿದಂತೆ ಏನೆಲ್ಲವೂ ಇವೆಯೋ ಅವು ಅಸತ್ಯ ಸಂಗಗಳಾಗಿವೆ, ಅವು ವಾಸ್ತವದಲ್ಲಿ ಸತ್ಸಂಗ ಅಲ್ಲವೇ ಅಲ್ಲ ಏಕೆಂದರೆ ಅವುಗಳಿಂದ ಮನುಷ್ಯರು ಕೆಳಗೇ ಇಳಿಯುತ್ತಾರೆ. ಈ ಸತ್ಸಂಗ ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಒಬ್ಬ ಸತ್ಯ ತಂದೆಯ ಜೊತೆ ಸಂಗವಾಗುತ್ತದೆ. ಬಾಕಿ ಮತ್ತ್ಯಾರೂ ಸತ್ಯವನ್ನು ಹೇಳುವುದೇ ಇಲ್ಲ, ಇದು ಅಸತ್ಯ ಖಂಡವಾಗಿದೆ. ಸುಳ್ಳು ಮಾಯೆ-ಸುಳ್ಳು ಕಾಯ…. ಮೊಟ್ಟ ಮೊದಲು ಈಶ್ವರ ಸರ್ವವ್ಯಾಪಿಯೆಂದು ಈಶ್ವರನ ಪ್ರತಿಯೇ ಸುಳ್ಳು ಹೇಳುತ್ತಾರೆ. ಪರಮಾತ್ಮನನ್ನೇ ಅಸತ್ಯ ಮಾಡಿ ಬಿಟ್ಟಿದ್ದಾರೆ ಆದ್ದರಿಂದ ನೀವು ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ, ಅವರಂತೂ ಉಲ್ಟಾ ಪರಿಚಯ ಕೊಡುತ್ತಾರೆ. ಅಸತ್ಯವೇ ಅಸತ್ಯ, ಸತ್ಯದ ಅಂಶವೂ ಇಲ್ಲ. ಇವು ಜ್ಞಾನದ ಮಾತುಗಳಾಗಿವೆ. ನೀರನ್ನು ನೀರು ಎಂದು ಹೇಳುವುದು ಅಸತ್ಯವೆಂದಲ್ಲ, ಇದು ಜ್ಞಾನ ಮತ್ತು ಅಜ್ಞಾನದ ಮಾತಾಗಿದೆ. ಜ್ಞಾನವನ್ನು ಒಬ್ಬ ಜ್ಞಾನ ಸಾಗರ ತಂದೆಯೇ ಕೊಡುತ್ತಾರೆ ಅದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಅಸತ್ಯವಿರುವುದಿಲ್ಲ, ರಾವಣನು ಬಂದು ಸತ್ಯ ಖಂಡವನ್ನು ಅಸತ್ಯ ಖಂಡವನ್ನಾಗಿ ಮಾಡಿ ಬಿಡುತ್ತಾನೆ. ತಂದೆಯು ತಿಳಿಸುತ್ತಾರೆ – ನಾನು ಸರ್ವವ್ಯಾಪಿಯಲ್ಲ, ಸತ್ಯವನ್ನು ನಾನೇ ತಿಳಿಸುತ್ತೇನೆ. ನಾನು ಬಂದು ಸನ್ಮಾರ್ಗ ಅರ್ಥಾತ್ ಸತ್ಯ ಖಂಡದಲ್ಲಿ ಹೋಗುವ ಮಾರ್ಗವನ್ನು ತಿಳಿಸುತ್ತೇನೆ. ನಾನಂತೂ ನಿಮ್ಮ ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದೇನೆ. ನಿಮಗೆ ಆಸ್ತಿಯನ್ನು ಕೊಡುವುದಕ್ಕಾಗಿಯೇ ಬರುತ್ತೇನೆ. ನೀವು ಮಕ್ಕಳಿಗಾಗಿ ಉಡುಗೊರೆಯನ್ನು ತರುತ್ತೇನೆ, ನನ್ನ ಹೆಸರೇ ಆಗಿದೆ – ಸ್ವರ್ಗದ ರಚಯಿತ. ಸ್ವರ್ಗವನ್ನು ಅಂಗೈಯಲ್ಲಿ ತೆಗೆದುಕೊಂಡು ಬರುತ್ತೇನೆ, ಸ್ವರ್ಗದಲ್ಲಿ ಸ್ವರ್ಗವಾಸಿ ದೇವತೆಗಳ ರಾಜ್ಯವಿರುತ್ತದೆ, ಈಗ ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತಿದ್ದಾರೆ. ಸತ್ಯವಾದವರು ಒಬ್ಬ ತಂದೆಯೇ ಆಗಿದ್ದಾರೆ, ಆದ್ದರಿಂದ ತಂದೆಯು ಹೇಳ್ತುತಾರೆ – ಹಿಯರ್ ನೋ ಈವಿಲ್, ಸೀ ನೋ ಈವಿಲ್….. ಇವೆಲ್ಲರೂ ಸತ್ತು ಹೋಗಿದ್ದಾರೆ, ಇದು ಸ್ಮಶಾನವಾಗಿದೆ, ಇದನ್ನು ನೋಡಿಯೂ ನೋಡದಂತಿರಬೇಕಾಗಿದೆ. ನೀವು ಹೊಸ ಪ್ರಪಂಚಕ್ಕಾಗಿ ಯೋಗ್ಯರಾಗಬೇಕಾಗಿದೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಅಂದರೆ ಸ್ವರ್ಗಕ್ಕೆ ಯೋಗ್ಯರಿಲ್ಲ. ತಂದೆಯು ತಿಳಿಸುತ್ತಾರೆ – ನಿಮ್ಮನ್ನು ರಾವಣನು ಅಯೋಗ್ಯರನ್ನಾಗಿ ಮಾಡಿದ್ದಾನೆ, ಅರ್ಧಕಲ್ಪಕ್ಕಾಗಿ ತಂದೆಯು ಬಂದು ಮತ್ತೆ ಯೋಗ್ಯರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರ ಶ್ರೀಮತದಂತೆ ನಡೆಯಬೇಕಾಗಿದೆ ನಂತರ ಎಲ್ಲಾ ಜವಾಬ್ದಾರಿಯು ಅವರ ಮೇಲಿರುವುದು. ತಂದೆಯು ಇಡೀ ಪ್ರಪಂಚವನ್ನು ಪಾವನವನ್ನಾಗಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ, ಅವರು ಯಾವ ಮತವನ್ನು ಕೊಡುವರೋ ಅದು ಕಲ್ಪದ ಮೊದಲಿನದನ್ನೇ ಕೊಡುತ್ತಾರೆ. ಇದರಲ್ಲಿ ತಬ್ಬಿಬ್ಬಾಗಬಾರದು. ಏನು ಕಳೆಯಿತೋ ಅದು ಡ್ರಾಮಾನುಸಾರ ಆಯಿತೆಂದು ಹೇಳಲಾಗುತ್ತದೆ. ಮಾತೇ ಸಮಾಪ್ತಿಯಾಯಿತು. ಶ್ರೀಮತವು ಹೀಗೆ ಮಾಡಿರಿ ಎಂದು ಹೇಳುತ್ತದೆ ಅಂದಮೇಲೆ ಮಾಡಬೇಕಲ್ಲವೆ. ಶ್ರೀಮತದಂತೆ ನಡೆದಾಗ ಅದಕ್ಕೆ ತಂದೆಯು ಜವಾಬ್ದಾರನಾಗಿದ್ದಾರೆ ಏಕೆಂದರೆ ಅವರೇ ಕರ್ಮಗಳಿಗೆ ಶಿಕ್ಷೆಯನ್ನು ಕೊಡಿಸುತ್ತಾರೆ ಅಂದಮೇಲೆ ಅವರ ಮಾತನ್ನು ಒಪ್ಪಿಕೊಳ್ಳಬೇಕು. ಮಧುರಮಕ್ಕಳೇ, ಗೃಹಸ್ಥ ವ್ಯವಹಾರದಲ್ಲಿರುತ್ತಾ, ಈ ಅಂತಿಮ ಜನ್ಮ ಪವಿತ್ರರಾಗಿರಿ. ಈ ಮೃತ್ಯುಲೋಕದಲ್ಲಿ ನಿಮ್ಮದು ಅಂತಿಮ ಜನ್ಮವಾಗಿದೆ ಎಂದು ಹೇಳುತ್ತಾರೆ. ಈ ಮಾತನ್ನು ಅರಿತುಕೊಂಡಾಗಲೇ ಪಾವನರಾಗಲು ಸಾಧ್ಯ.

ಯಾವಾಗ ಪತಿತ ಪ್ರಪಂಚದ ವಿನಾಶವಾಗಬೇಕಾಗಿದೆಯೋ ಆಗಲೇ ತಂದೆಯು ಬರುತ್ತಾರೆ. ಮೊದಲು ಸ್ಥಾಪನೆ ನಂತರ ವಿನಾಶ ಎಂಬ ಪದವನ್ನು ಅರ್ಥ ಸಹಿತವಾಗಿ ಬರೆಯಬೇಕಾಗುತ್ತದೆ. ಸ್ಥಾಪನೆ, ಪಾಲನೆ, ವಿನಾಶ ಎಂದಲ್ಲ. ಸ್ಥಾಪನೆ, ವಿನಾಶ ನಂತರ ಪಾಲನೆ. ನಾವು ಓದಿ ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಂಡಿರಬೇಕು. ಕೆಲವು ಮಕ್ಕಳು ಭಲೆ ಚೆನ್ನಾಗಿ ತಿಳಿಸುತ್ತಾರೆ ಆದರೆ ಆ ಅತೀಂದ್ರಿಯ ಸುಖವು ಯಾರಿಗೂ ಇಲ್ಲ. ಗಿಳಿಪಾಠದಂತೆ ನೆನಪು ಮಾಡುತ್ತಾರಲ್ಲವೆ. ನಿಮ್ಮ ಬುದ್ಧಿಯಲ್ಲಿಯೂ ಸಹ ಅದು ಚೆನ್ನಾಗಿ ಧಾರಣೆಯಾಗಬೇಕು. ನೀವು ತಿಳಿದುಕೊಂಡಿದ್ದೀರಿ – ಈ ಯಾವುದೆಲ್ಲಾ ಶಾಸ್ತ್ರಗಳಿವೆಯೋ ಎಲ್ಲವೂ ಭಕ್ತಿಮಾರ್ಗದ್ದಾಗಿದೆ, ಆದ್ದರಿಂದ ಈಗ ನಿರ್ಣಯಿಸಿ – ಸತ್ಯವು ಯಾವುದಾಗಿದೆ? ಸತ್ಯ ನಾರಾಯಣನ ಕಥೆಯನ್ನು ನಿಮಗೆ ಒಂದೇ ಬಾರಿ ತಂದೆಯು ತಿಳಿಸುತ್ತಾರೆ. ತಂದೆಯು ಎಂದೂ ಅಸತ್ಯವನ್ನು ಹೇಳಲು ಸಾಧ್ಯವಿಲ್ಲ. ತಂದೆಯೇ ಸತ್ಯ ಖಂಡದ ಸ್ಥಾಪನೆ ಮಾಡುತ್ತಾರೆ, ಸತ್ಯ ಕಥೆಯನ್ನು ತಿಳಿಸುತ್ತಾರೆ. ಇದರಲ್ಲಿ ಅಸತ್ಯವಾಗಲು ಸಾಧ್ಯವಿಲ್ಲ. ಮಕ್ಕಳಿಗೆ ಇದು ನಿಶ್ಚಯವಿರಲಿ, ನಾವು ಯಾರ ಜೊತೆ ಕುಳಿತಿದ್ದೇವೆ? ತಂದೆಯು ನಮಗೆ ತನ್ನ ಜೊತೆ ಯೋಗವನ್ನಿಡುವುದನ್ನು ಕಲಿಸುತ್ತಾರೆ. ಸತ್ಯ ಅಮರ ಕಥೆ, ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಿದ್ದಾರೆ, ಇದರಿಂದ ನಾವು ನರನಿಂದ ನಾರಾಯಣನಾಗುತ್ತಿದ್ದೇವೆ ನಂತರ ಭಕ್ತಿಮಾರ್ಗದಲ್ಲಿ ಇದರ ಗಾಯನ ನಡೆಯುತ್ತದೆ. ಇದು ಬುದ್ಧಿಯಲ್ಲಿರಬೇಕು, ನಮಗೆ ಯಾವುದೇ ಮನುಷ್ಯರು ಓದಿಸುತ್ತಿಲ್ಲ, ನಾವಾತ್ಮರಿಗೆ ಆತ್ಮಿಕ ತಂದೆಯು ಓದಿಸುತ್ತಾರೆ. ಶಿವ ತಂದೆ ಯಾರು ನಾವಾತ್ಮರ ತಂದೆಯಾಗಿದ್ದಾರೆ, ಅವರೇ ನಮಗೆ ಓದಿಸುತ್ತಾರೆ. ನಾವೀಗ ಶಿವತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ. ಮಧುಬನದಲ್ಲಿ ಬಂದಾಗ ನಶೆಯೇರುತ್ತದೆ, ಇಲ್ಲಿ ನಿಮಗೆ ರಿಫ್ರೆಶಮೆಂಟ್ ಸಿಗುತ್ತದೆ. ನೀವು ಅನುಭವ ಮಾಡುತ್ತೀರಿ, ಇಲ್ಲಿ ಸ್ವಲ್ಪ ಸಮಯಕ್ಕಾಗಿ ಬಂದರೂ ಸಹ ರಿಫ್ರೆಶ್ ಆಗಿ ಬಿಡುತ್ತೀರಿ. ಹೊರಗಡೆಯಂತೂ ಉದ್ಯೋಗ ವ್ಯವಹಾರಗಳ ಜಂಜಾಟವಿರುತ್ತದೆ. ತಂದೆಯು ತಿಳಿಸುತ್ತಾರೆ- ಹೇ ಆತ್ಮರೇ ಎಂದು. ತಂದೆಯು ಆತ್ಮರೊಂದಿಗೆ ಮಾತನಾಡುತ್ತಾರೆ, ತಂದೆಯು ನಿರಾಕಾರನಾಗಿದ್ದಾರೆ. ಅವರನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮಾ, ವಿಷ್ಣು, ಶಂಕರನನ್ನೂ ತಿಳಿದುಕೊಂಡಿಲ್ಲ. ಚಿತ್ರವಂತೂ ಎಲ್ಲರ ಬಳಿಯಲ್ಲಿರಲಿ. ಕಾಗದದ ಚಿತ್ರವನ್ನು ನೋಡಿ ಕೆಲವರು ಹರಿದು ಹಾಕುತ್ತಾರೆ, ಕೆಲವರಂತೂ ಎಷ್ಟು ದೂರ ದೂರದವರೆಗೆ ಹೋಗಿ ಎಷ್ಟೊಂದು ಪೂಜೆ ಇತ್ಯಾದಿಗಳನ್ನು ಮಾಡುತ್ತಾರೆ! ಚಿತ್ರವನ್ನಂತೂ ಮನೆಯಲ್ಲಿಯೂ ಇಟ್ಟಿರುತ್ತಾರಲ್ಲವೆ ಅಂದಮೇಲೆ ಇಷ್ಟು ದೂರದವರೆಗೆ ಹೋಗಿ ಅಲೆದಾಡುವುದರಿಂದ ಏನು ಲಾಭ? ಈಗ ನೀವು ಮಕ್ಕಳಿಗೆ ಈ ಜ್ಞಾನವು ಸಿಕ್ಕಿದೆ ಆದ್ದರಿಂದ ಅದೆಲ್ಲವೂ ಅನರ್ಥವೆನಿಸುತ್ತದೆ. ಕೃಷ್ಣನನ್ನು ಇಲ್ಲಿಯೂ ಸಹ ಕಲ್ಲಿನಿಂದ ಶ್ಯಾಮ ಹಾಗೂ ಸುಂದರನನ್ನಾಗಿ ಮಾಡಿಸಬಹುದಾಗಿದೆ ಆದರೆ ಜಗನ್ನಾಥ ಪುರಿಗೇ ಏಕೆ ಹೋಗುತ್ತಾರೆ? ಕೃಷ್ಣನನ್ನು ಶ್ಯಾಮ ಸುಂದರನೆಂದು ಏಕೆ ಹೇಳುತ್ತಾರೆ? ಇವೆಲ್ಲಾ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ. ಆತ್ಮವು ತಮೋಪ್ರಧಾನವಾಗುವುದರಿಂದ ಕಪ್ಪಾಗಿ ಬಿಡುತ್ತದೆ, ಮತ್ತೆ ಆತ್ಮವು ಪವಿತ್ರವಾದಾಗ ಸುಂದರವಾಗಿ ಬಿಡುತ್ತದೆ. ಇದೇ ಭಾರತವು ಸ್ವರ್ಗವಾಗಿತ್ತು, ಅಲ್ಲಿ ಪಂಚತತ್ವಗಳಲ್ಲಿಯೂ ಸ್ವಾಭಾವಿಕ ಸೌಂದರ್ಯವಿರುತ್ತದೆ. ಆದ್ದರಿಂದ ಶರೀರವೂ ಸಹ ಅಷ್ಟು ಸುಂದರವಾಗಿರುತ್ತಿತ್ತು. ಈಗ ತತ್ವಗಳು ತಮೋಪ್ರಧಾನವಾಗಿರುವ ಕಾರಣ ಶರೀರವೂ ಸಹ ಕೆಲವರದು ಕಪ್ಪು, ಕೆಲವರದು ಡೊಂಕು, ಕುರುಡರು, ಕುಂಟರು ಆಗುತ್ತಿರುತ್ತಾರೆ. ಇದಕ್ಕೆ ನರಕವೆಂದು ಹೇಳಲಾಗುತ್ತದೆ. ಇದಂತೂ ಮಾಯೆಯ ಆಡಂಬರವಾಗಿದೆ. ವಿದೇಶದಲ್ಲಂತೂ ದೀಪಗಳು ಈ ರೀತಿಯಿರುತ್ತವೆ, ಅದರ ಬೆಳಕು ಕಾಣಿಸುತ್ತದೆಯೇ ಹೊರತು ದೀಪಗಳು ಕಾಣಿಸುವುದಿಲ್ಲ. ಸತ್ಯಯುಗದಲ್ಲಿಯೂ ಸಹ ಇದೇ ರೀತಿಯ ಪ್ರಕಾಶವಿರುತ್ತದೆ. ವಿಮಾನ ಇತ್ಯಾದಿಗಳು ಅಲ್ಲಿಯೂ ಇರುತ್ತವೆ ಏಕೆಂದರೆ ವಿಜ್ಞಾನದವರೂ ಸಹ ಇಲ್ಲಿ ಬಂದು ತಿಳಿದುಕೊಳ್ಳುತ್ತಾರಲ್ಲವೆ. ಅಂದಮೇಲೆ ಅವರು ಅಲ್ಲಿಯೂ ಬಂದು ವಿಮಾನ ಇತ್ಯಾದಿಗಳನ್ನು ತಯಾರು ಮಾಡುತ್ತಾರೆ. ನೀವು ಎಷ್ಟು ಸಮೀಪ ಬರತೊಡಗುತ್ತೀರೋ ಅಷ್ಟು ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗುವುದು. ವಿದ್ಯುತ್ತಿನ ಕಾರ್ಯಕರ್ತರು ಮೊದಲಾದವರೆಲ್ಲರೂ ಬಂದು ಜ್ಞಾನವನ್ನು ತಿಳಿದುಕೊಳ್ಳುತ್ತಾರೆ, ಸ್ವಲ್ಪ ತಿಳಿದುಕೊಂಡರೂ ಸಹ ಪ್ರಜೆಗಳಲ್ಲಿ ಬರುತ್ತಾರೆ. ಅವರ ಕಲೆಯನ್ನು ಸಂಸ್ಕಾರದಲ್ಲಿ ತೆಗೆದುಕೊಂಡು ಹೋಗುತ್ತಾರೆ, ಇದರಿಂದ ಅಂತ್ಯ ಮತಿ ಸೋ ಗತಿಯಾಗುತ್ತದೆ. ಹಾ! ನಿಮ್ಮಂತೆ ಕರ್ಮಾತೀತ ಸ್ಥಿತಿಯನ್ನು ಪಡೆಯುವುದಿಲ್ಲ ಆದರೆ ಆತ್ಮವು ತನ್ನಲ್ಲಿರುವ ಕಲೆಗಳನ್ನು ತೆಗೆದುಕೊಂಡು ಹೋಗುತ್ತದೆಯಲ್ಲವೆ. ಟಿ.ವಿ., ಇತ್ಯಾದಿಗಳ ಮೂಲಕ ದೂರದಲ್ಲಿ ಕುಳಿತೇ ನೋಡುತ್ತಿರುತ್ತಾರೆ. ದಿನ ಕಳೆದಂತೆ ಪ್ರಯಾಣ ಮಾಡುವುದೇ ಕಷ್ಟವಾಗಿ ಬಿಡುತ್ತದೆ. ಪ್ರಪಂಚದಲ್ಲಿ ಏನೇನು ಸಂಶೋಧನೆಗಳನ್ನು ಮಾಡಿ ವಸ್ತುಗಳನ್ನು ತಯಾರು ಮಾಡುತ್ತಾರೆ, ಪ್ರಾಕೃತಿಕ ವಿಕೋಪಗಳಲ್ಲಿಯೂ ಬಹಳ ಮಂದಿ ಮರಣ ಹೊಂದುತ್ತಾರೆ. ಪ್ರವಾಹಗಳು ಬರುತ್ತವೆ, ಸಮುದ್ರಗಳು ಉಕ್ಕುತ್ತವೆ, ಸಮುದ್ರವನ್ನೂ ಸಹ ಒಣಗಿಸಿದ್ದಾರಲ್ಲವೆ.

ಈಗ ನೀವು ಮಕ್ಕಳು ಈ ಪ್ರಪಂಚದಲ್ಲಿ ಏನೇನಿದೆ ಮತ್ತು ಸತ್ಯಯುಗದಲ್ಲಿ ಏನೇನಿರುವುದು ಎಂಬುದೆಲ್ಲವನ್ನೂ ತಿಳಿದುಕೊಂಡಿದ್ದೀರಿ. ಕೇವಲ ಭಾರತ ಖಂಡವೇ ಇರುತ್ತದೆ, ಅದು ಚಿಕ್ಕದಾಗಿರುತ್ತದೆ, ಉಳಿದೆಲ್ಲರೂ ಪರಮಧಾಮಕ್ಕೆ ಹೊರಟು ಹೋಗುತ್ತಾರೆ. ಇನ್ನು ಸ್ವಲ್ಪವೇ ಸಮಯ ಉಳಿದಿದೆ, ಇದೇನೂ ಇರುವುದಿಲ್ಲ. ನೀವು ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ, ನಿಮಗಾಗಿ ಹಳೆಯ ಪ್ರಪಂಚದ ವಿನಾಶವೂ ಮೊದಲೇ ನಿಶ್ಚಿತವಾಗಿದೆ. ಈ ಛೀ ಛೀ ಪ್ರಪಂಚದಲ್ಲಿ ನೀವು ಇನ್ನು ಕೆಲವು ದಿನಗಳು ಮಾತ್ರವೇ ಇರುತ್ತೀರಿ ನಂತರ ತಮ್ಮ ಹೊಸ ಪ್ರಪಂಚಕ್ಕೆ ಹೊರಟು ಹೋಗುತ್ತೀರಿ. ಇದನ್ನು ಕೇವಲ ನೆನಪು ಮಾಡಿಕೊಳ್ಳುತ್ತಾ ಇದ್ದರೂ ಸಹ ಖುಷಿಯಿಂದ ಇರುತ್ತೀರಿ. ನಿಮ್ಮ ಬುದ್ಧಿಯಲ್ಲಿದೆ – ಇದೆಲ್ಲವೂ ಸಮಾಪ್ತಿಯಾಗಲಿದೆ, ಇಷ್ಟೇಲ್ಲಾ ಖಂಡಗಳು ಉಳಿಯುವುದಿಲ್ಲ. ಪ್ರಾಚೀನ ಭಾರತಖಂಡವೇ ಉಳಿಯುತ್ತದೆ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ, ಕೆಲಸ ಇತ್ಯಾದಿಗಳನ್ನು ಮಾಡುತ್ತಾ ಇರಿ ಆದರೆ ಬುದ್ಧಿಯಲ್ಲಿ ತಂದೆಯ ನೆನಪಿರಲಿ. ನೀವು ಈ ಮನುಷ್ಯರಿಂದ ದೇವತೆಗಳಾಗುವ ಕೋರ್ಸನ್ನು ತೆಗೆದುಕೊಳ್ಳಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ನೌಕರಿ ಇತ್ಯಾದಿಗಳನ್ನು ಮಾಡುತ್ತಾ ತಂದೆ ಮತ್ತು ಚಕ್ರವನ್ನು ನೆನಪು ಮಾಡಿರಿ. ಏಕಾಂತದಲ್ಲಿ ಕುಳಿತು ವಿಚಾರಸಾಗರ ಮಂಥನ ಮಾಡಿರಿ. ಮುಂದೆ ಪ್ರಾಕೃತಿಕ ಆಪತ್ತುಗಳು ಬರುವವು ಯಾವುದರಿಂದ ಇಡೀ ಪ್ರಪಂಚವು ಸಮಾಪ್ತಿಯಾಗುವುದು. ಸತ್ಯಯುಗದಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ, ಅಲ್ಲಿ ಕಣಿವೆ ಇತ್ಯಾದಿಗಳ ಅವಶ್ಯಕತೆಯಿಲ್ಲ, ಇಲ್ಲಂತೂ ಎಷ್ಟು ಕಣಿವೆಗಳನ್ನು ತೋಡುತ್ತಾರೆ. ನದಿಗಳಂತೂ ಅನಾದಿಯಾಗಿವೆ, ಸತ್ಯಯುಗದಲ್ಲಿ ಜಮುನಾ ನದಿಯ ತೀರದಲ್ಲಿ ಸಿಹಿ ನೀರಿನ ನದಿಗಳ ತೀರದಲ್ಲಿ ಮಹಲುಗಳಿರುತ್ತವೆ. ಅಲ್ಲಿ ಈ ಬಾಂಬೆ ಇರುವುದಿಲ್ಲ, ಇದನ್ನು ಯಾರೂ ಹೊಸ ಬಾಂಬೆ ಎಂದು ಹೇಳುವುದಿಲ್ಲ. ನೀವು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ, ನಾವು ಸ್ವರ್ಗಕ್ಕಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ ನಂತರ ಈ ನರಕವು ಇರುವುದೇ ಇಲ್ಲ. ರಾವಣ ಪುರಿಯು ಸಮಾಪ್ತಿಯಾಗುತ್ತದೆ, ರಾಮ ಪುರಿಯು ಸ್ಥಾಪನೆಯಾಗುತ್ತದೆ. ತಮೋಪ್ರಧಾನ ಪೃಥ್ವಿಯಲ್ಲಿ ದೇವತೆಗಳು ತಮ್ಮ ಪಾದಗಳನ್ನೂ ಇಡಲು ಸಾಧ್ಯವಿಲ್ಲ, ಯಾವಾಗ ಇದು ಪರಿವರ್ತನೆಯಾಗುವುದೋ ಆಗ ಹೆಜ್ಜೆಯನ್ನು ಇಡುತ್ತಾರೆ ಆದ್ದರಿಂದ ಲಕ್ಷ್ಮಿಯನ್ನು ಆಹ್ವಾನ ಮಾಡುತ್ತಾರೆಂದರೆ ಬಹಳ ಸ್ವಚ್ಛ ಮಾಡುತ್ತಾರೆ. ಲಕ್ಷ್ಮಿಯ ಆಹ್ವಾನ ಮಾಡುತ್ತಾರೆ, ಚಿತ್ರವನ್ನಿಡುತ್ತಾರೆ ಆದರೆ ಅವರ ಪರಿಚಯವು ಯಾರಿಗೂ ಗೊತ್ತಿಲ್ಲ ಆದ್ದರಿಂದ ಅದಕ್ಕೆ ವಿಗ್ರಹಾರಾಧನೆ ಎಂದು ಹೇಳಲಾಗುತ್ತದೆ. ಕಲ್ಲಿನ ಮೂರ್ತಿಯನ್ನೇ ಭಗವಂತನೆಂದು ಹೇಳಿ ಬಿಡುತ್ತಾರೆ. ಇವೆಲ್ಲಾ ಮಾತುಗಳನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಪರಮಾತ್ಮನೇ ತಿಳಿಸುತ್ತಾರೆ. ಆತ್ಮವು ಆತ್ಮಕ್ಕೆ ತಿಳಿಸಲು ಸಾಧ್ಯವಿಲ್ಲ, ಆತ್ಮವು ಹೇಗೆ ಮತ್ತು ಯಾವ-ಯಾವ ಪಾತ್ರವನ್ನು ಅಭಿನಯಿಸುತ್ತದೆ ಎಂಬುದನ್ನೂ ಸಹ ನೀವೀಗ ತಿಳಿಸಬಲ್ಲಿರಿ. ತಂದೆಯು ಬಂದು ಆತ್ಮವೆಂದರೇನು ಎಂದು ಅನುಭೂತಿ ಮಾಡಿಸುತ್ತಾರೆ. ಮನುಷ್ಯರು ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ ಅಂದಮೇಲೆ ಅವರಿಗೆ ಏನು ಹೇಳುವುದು! ಮನುಷ್ಯರಾಗಿದ್ದರೂ ಚಲನೆಯು ಪ್ರಾಣಿಗಳಂತಿದೆ, ಈಗ ನಿಮಗೆ ಜ್ಞಾನವು ಸಿಕ್ಕಿದೆ. ಏಣಿಯ ಚಿತ್ರದಲ್ಲಿ ಅನ್ಯರಿಗೆ ತಿಳಿಸುವುದು ಬಹಳ ಸಹಜವಾಗುತ್ತದೆ, ಅದರಲ್ಲಿಯೂ ಬಹಳ ಚೆನ್ನಾಗಿ ತಿಳಿಸಬೇಕಾಗಿದೆ. ನಾವು ಭಾರತವಾಸಿಗಳು ಯಾರು ದೇವಿ-ದೇವತೆಗಳಾಗಿದ್ದೆವು ಅವರೇ ಹೇಗೆ ಸತೋಪ್ರಧಾನರಾದೆವು? ನಂತರ ಸತೋ, ರಜೋ, ತಮೋದಲ್ಲಿ ಬಂದೆವು, ಇವೆಲ್ಲಾ ಮಾತುಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ ಆಗಲೇ ವಿಚಾರ ಸಾಗರ ಮಂಥನ ನಡೆಯುವುದು. ಧಾರಣೆಯಾಗದಿದ್ದರೆ ವಿಚಾರ ಸಾಗರ ಮಂಥನ ನಡೆಯಲು ಸಾಧ್ಯವಿಲ್ಲ. ಕೇಳುತ್ತಾರೆ ಮತ್ತೆ ಉದ್ಯೋಗ-ವ್ಯವಹಾರಗಳಲ್ಲಿ ತೊಡಗಿ ಬಿಡುತ್ತಾರೆ, ವಿಚಾರ ಸಾಗರ ಮಂಥನ ಮಾಡಲು ಸಮಯವೇ ಇಲ್ಲ. ವಾಸ್ತವದಲ್ಲಿ ನೀವು ಮಕ್ಕಳು ಪ್ರತಿನಿತ್ಯವೂ ಓದಬೇಕಾಗಿದೆ ಮತ್ತು ಅದರಮೇಲೆ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ, ಮುರುಳಿಯಂತೂ ಎಲ್ಲಿ ಬೇಕಾದರೂ ಸಿಗುತ್ತದೆ. ವಿಶಾಲ ಬುದ್ಧಿಯವರಾದರೆ ಜ್ಞಾನ ಬಿಂದುಗಳನ್ನು ಅರಿತುಕೊಳ್ಳುತ್ತಾರೆ. ತಂದೆಯು ನಿತ್ಯವೂ ತಿಳಿಸುತ್ತಾರೆ, ಅನ್ಯರಿಗೆ ತಿಳಿಸುವುದಕ್ಕಾಗಿ ಬಹಳಷ್ಟು ಅಂಶಗಳಿವೆ. ಗಂಗಾ ನದಿಯ ತೀರದಲ್ಲಿಯೂ ನೀವು ಹೋಗಿ ತಿಳಿಸಬಹುದು – ಸರ್ವರ ಸದ್ಗತಿದಾತನು ತಂದೆಯೋ ಅಥವಾ ನೀರಿನ ಗಂಗೆಯೋ? ತಾವೇಕೆ ಸುಮ್ಮನೆ ಹಣವನ್ನು ಖರ್ಚು ಮಾಡುತ್ತೀರಿ! ಒಂದುವೇಳೆ ಗಂಗಾ ಸ್ನಾನದಿಂದ ಪಾವನರಾಗುವಂತಿದ್ದರೆ ಗಂಗೆಯಲ್ಲಿ ಹೋಗಿ ಕುಳಿತು ಬಿಡಿ. ಹೊರಗಡೆಯೇಕೆ ಬರುತ್ತೀರಿ? ತಂದೆಯಂತೂ ತಿಳಿಸುತ್ತಾರೆ – ಶ್ವಾಸ-ಶ್ವಾಸದಲ್ಲಿಯೂ ನನ್ನನ್ನು ನೆನಪು ಮಾಡಿ, ಇದೇ ಯೋಗಾಗ್ನಿಯಾಗಿದೆ. ಯೋಗ ಅರ್ಥಾತ್ ನೆನಪು.

ಬಹಳಷ್ಟು ಜ್ಞಾನವಿದೆ ಆದರೆ ಸತೋಪ್ರಧಾನ ಬುದ್ಧಿಯವರು ಕೂಡಲೇ ತಿಳಿದುಕೊಳ್ಳುತ್ತಾರೆ, ಕೆಲವರು ರಜೋ, ಕೆಲವರು ತಮೋ ಬುದ್ಧಿಯವರಿದ್ದಾರೆ. ಇಲ್ಲಿ ತರಗತಿಯಲ್ಲಿ ನಂಬರ್ವಾರ್ ಕುಳ್ಳರಿಸುವುದಿಲ್ಲ, ಹಾಗೆ ಮಾಡಿದ್ದೇ ಆದರೆ ಹೃದಯಾಘಾತವಾಗಿ ಬಿಡುವುದು. ಡ್ರಾಮಾ ಪ್ಲಾನನುಸಾರ ರಾಜಧಾನಿಯು ಪೂರ್ಣ ಸ್ಥಾಪನೆಯಾಗುತ್ತಿದೆ, ನಂತರ ಸತ್ಯಯುಗದಲ್ಲಿ ತಂದೆಯು ಓದಿಸುವರೇ! ತಂದೆಯ ವಿದ್ಯೆಯು ಇದೊಂದೇ ಸಮಯ ನಡೆಯುತ್ತದೆ, ನಂತರ ಭಕ್ತಿಮಾರ್ಗದಲ್ಲಿ ಅಸತ್ಯ ಮಾತುಗಳನ್ನು ಬರೆಯುತ್ತಾರೆ. ಆಶ್ಚರ್ಯವೇನೆಂದರೆ ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುವರೋ ಅವರ ಹೆಸರನ್ನು ಗೀತೆಯಲ್ಲಿ ಹಾಕಿದ್ದಾರೆ ಮತ್ತು ಯಾರು ಪುನರ್ಜನ್ಮರಹಿತ ಆಗಿದ್ದಾರೆಯೋ ಅವರ ಹೆಸರನ್ನು ಮರೆ ಮಾಡಿ ಬಿಟ್ಟಿದ್ದಾರೆ. ಅಂದಮೇಲೆ ಇದು 100% ಅಸತ್ಯವಾಯಿತಲ್ಲವೆ.

ಮಕ್ಕಳು ಅನೇಕರ ಕಲ್ಯಾಣ ಮಾಡಬೇಕಾಗಿದೆ, ನಿಮ್ಮದೆಲ್ಲವೂ ಗುಪ್ತವಾಗಿದೆ. ಇಲ್ಲಿ ನೀವು ಬ್ರಹ್ಮಾಕುಮಾರ-ಕುಮಾರಿಯರು ತಮಗಾಗಿ ಸ್ವರ್ಗದ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ಇದೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ನಿಮ್ಮಲ್ಲಿಯೂ ಮರೆತು ಹೋಗುತ್ತಾರೆ ಅಂದಮೇಲೆ ಅನ್ಯರು ಹೇಗೆ ತಿಳಿದುಕೊಳ್ಳುವರು. ನೀವಿದನ್ನು ಮರೆಯದಿದ್ದರೆ ಸದಾ ಖುಷಿಯಲ್ಲಿರುತ್ತೀರಿ. ಮರೆಯುವುದರಿಂದಲೇ ಗುಟುಕರಿಸುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಅಪಾರ ಸುಖದ ಅನುಭವ ಮಾಡಲು ತಂದೆಯು ಏನನ್ನು ಓದಿಸುತ್ತಾರೆಯೋ ಅದನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ, ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.

2. ಈ ಸ್ಮಶಾನವನ್ನು ನೋಡಿಯೂ ನೋಡದಂತಿರಬೇಕಾಗಿದೆ. ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ…… ಹೊಸ ಪ್ರಪಂಚಕ್ಕೆ ಯೋಗ್ಯರಾಗಬೇಕಾಗಿದೆ.

ವರದಾನ:-

ಕೇವಲ ಶಬ್ಧದ (ವಾಚಾ) ಮೂಲಕ ಸೇವೆ ಮಾಡುವುದರಿಂದ ಪ್ರಜೆಗಳಾಗುತ್ತಿದ್ದಾರೆ ಆದರೆ ಶಬ್ಧದಿಂದ ಆಚೆಯಿರುವ ಸ್ಥಿತಿಯಲ್ಲಿ ಸ್ಥಿತರಾಗುತ್ತಾ, ನಂತರ ಶಬ್ಧದಲ್ಲಿ ಬನ್ನಿರಿ. ಅವ್ಯಕ್ತ ಸ್ಥಿತಿ ನಂತರ ಶಬ್ಧ – ಈ ರೀತಿ ಕಂಬೈಂಡ್ ರೂಪದ ಸೇವೆಯು ವಾರಸುಧಾರರನ್ನಾಗಿ ಮಾಡುತ್ತದೆ. ಶಬ್ಧದ ಮೂಲಕ ಪ್ರಭಾವಿತರಾಗಿರುವ ಆತ್ಮರು, ಅನೇಕ ಶಬ್ಧಗಳನ್ನು ಕೇಳುವುದರಿಂದ ಬಂದು-ಹೋಗುವ ಚಕ್ರದಲ್ಲಿ ಬಂದು ಬಿಡುತ್ತಾರೆ. ಆದರೆ ಕಂಬೈಂಡ್ ರೂಪಧಾರಿಯಾಗಿದ್ದು ಕಂಬೈಂಡ್ ರೂಪದ ಸೇವೆ ಮಾಡುತ್ತೀರೆಂದರೆ, ಅದರಲ್ಲಿ ಯಾರದೇ ರೂಪದ ಪ್ರಭಾವ ಬೀರಲು ಸಾಧ್ಯವಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top