14 August 2021 KANNADA Murli Today | Brahma Kumaris

Read and Listen today’s Gyan Murli in Kannada

August 13, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಡ್ರಾಮಾದ ಗುಪ್ತ ರಹಸ್ಯವನ್ನು ಅರಿತುಕೊಂಡಿದ್ದೀರಿ - ಈ ಸಂಗಮಯುಗವೇ ಏರುವ ಕಲೆಯ ಯುಗವಾಗಿದೆ, ಸತ್ಯಯುಗದಿಂದ ಹಿಡಿದು ಕಲೆಗಳು ಕಡಿಮೆಯಾಗುತ್ತಾ ಬರುತ್ತದೆ”

ಪ್ರಶ್ನೆ:: -

ಎಲ್ಲದಕ್ಕಿಂತ ಉತ್ತಮ ಸೇವೆ ಯಾವುದು ಮತ್ತು ಆ ಸೇವೆಯನ್ನು ಯಾರು ಮಾಡುತ್ತಾರೆ?

ಉತ್ತರ:-

ಭಾರತವನ್ನು ಸ್ವರ್ಗವನ್ನಾಗಿ ಮಾಡುವುದು, ಗುಲಾಮರನ್ನು ರಾಜರನ್ನಾಗಿ ಮಾಡುವುದು, ಪತಿತರನ್ನು ಪಾವನರನ್ನಾಗಿ ಮಾಡುವುದು ಇದುವರೆಗೆ ಎಲ್ಲದಕ್ಕಿಂತ ಮ ಸೇವೆ. ಇಂತಹ ಸೇವೆಯನ್ನು ಒಬ್ಬ ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ತಂದೆಯು ಇಂತಹ ಮಹಾನ್ ಸೇವೆ ಮಾಡಿದ್ದಾರೆ. ಆದ್ದರಿಂದಲೇ ಮಕ್ಕಳು ಅವರಿಗೆ ಗೌರವ ಕೊಡುತ್ತಾರೆ, ಎಲ್ಲದಕ್ಕಿಂತ ಮೊದಲು ಸೋಮನಾಥ ಮಂದಿರವನ್ನು ಕಟ್ಟಿಸಿ ಅವರ ಪೂಜೆ ಮಾಡುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಕೊನೆಗೂ ಆ ದಿನ ಇಂದು ಬಂದಿತು….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಹೇಗೆ ಆತ್ಮವು ಗುಪ್ತವಾಗಿದೆ ಮತ್ತು ಶರೀರವು ಪ್ರತ್ಯಕ್ಷವಾಗಿದೆ. ಆತ್ಮವನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ, ಅಗೋಚರವಾಗಿದೆ. ಅದು ಖಂಡಿತವಾಗಿಯೂ ಇದೆ ಆದರೆ ಈ ಶರೀರದಿಂದ ಮುಚ್ಚಲ್ಪಟ್ಟಿದೆ. ಆದ್ದರಿಂದ ಆತ್ಮವು ಗುಪ್ತವಾಗಿದೆ ಎಂದು ಹೇಳಲಾಗುತ್ತದೆ. ನಾನು ನಿರಾಕಾರನಾಗಿದ್ದೇನೆ, ಇಲ್ಲಿ ಸಾಕಾರದಲ್ಲಿ ಬಂದು ಗುಪ್ತವಾಗಿದ್ದೇನೆ ಎಂದು ಆತ್ಮವೇ ಹೇಳುತ್ತದೆ. ಆತ್ಮಗಳ ನಿವಾಸ ಸ್ಥಾನವು ನಿರಾಕಾರಿ ಪ್ರಪಂಚವಾಗಿದೆ. ಅಲ್ಲಂತೂ ಗುಪ್ತವಾಗಿರುವ ಮಾತಿಲ್ಲ, ಪರಮಪಿತ ಪರಮಾತ್ಮನೂ ಸಹ ಅಲ್ಲಿರುತ್ತಾರೆ, ಅವರಿಗೆ ಸುಪ್ರೀಂ ಎಂದು ಹೇಳುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಆತ್ಮ. ಅತಿ ದೂರಕ್ಕಿಂತಲೂ ದೂರ ಇರುವವರು ಪರಮಪಿತ ಪರಮಾತ್ಮನಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ಹೇಗೆ ನೀವು ಗುಪ್ತವಾಗಿದ್ದೀರೋ ಹಾಗೆಯೇ ನಾನೂ ಗುಪ್ತವಾಗಿ ಬರಬೇಕಾಗುತ್ತದೆ. ನಾನು ಗರ್ಭ ಜೈಲಿನಲ್ಲಿ ಬರುವುದಿಲ್ಲ, ನನ್ನ ಹೆಸರು ಶಿವ ಎಂದೇ ನಡೆದು ಬರುತ್ತದೆ. ನಾನು ಇವರಲ್ಲಿ (ಬ್ರಹ್ಮಾ) ಬರುತ್ತೇನೆಂದರೂ ಸಹ ನನ್ನ ಹೆಸರು ಬದಲಾಗುವುದಿಲ್ಲ. ಈ ಆತ್ಮನಿಗೆ ಯಾವ ಶರೀರವಿದೆಯೋ ಅದರ ಹೆಸರು ಬದಲಾಗುತ್ತದೆ, ನನಗೆ ಶಿವನೆಂದೇ ಹೇಳುತ್ತಾರೆ. ಎಲ್ಲಾ ಆತ್ಮರ ತಂದೆಯಾಗಿದ್ದೇನೆ ಅಂದಾಗ ನೀವಾತ್ಮರು ಈ ಶರೀರದಲ್ಲಿ ಗುಪ್ತವಾಗಿದ್ದೀರಿ. ಈ ಶರೀರದ ಮೂಲಕ ಕರ್ಮ ಮಾಡುತ್ತೀರಿ, ನಾನೂ ಸಹ ಗುಪ್ತವಾಗಿದ್ದೇನೆ. ನೀವು ಮಕ್ಕಳಿಗೆ ಈ ಜ್ಞಾನವು ಈಗ ಸಿಗುತ್ತಿದೆ – ನಾನಾತ್ಮನು ಈ ಶರೀರದಿಂದ ಮುಚ್ಚಲ್ಪಟ್ಟಿದ್ದೇನೆ. ಆತ್ಮವು ನಿರಾಕಾರಿಯಾಗಿದೆ, ಶರೀರವು ಸಾಕಾರಿಯಾಗಿದೆ. ನಾನು ಅಶರೀರಿಯಾಗಿದ್ದೇನೆ, ನಿರಾಕಾರಿ ತಂದೆಯು ಈ ಶರೀರದ ಮೂಲಕ ತಿಳಿಸುತ್ತಾರೆ – ನೀವೂ ಸಹ ನಿರಾಕಾರಿಯಾಗಿದ್ದೀರಿ, ಶರೀರದ ಮೂಲಕ ಕೇಳುತ್ತೀರಿ. ನಿಮಗೆ ತಿಳಿದಿದೆ – ತಂದೆಯು ಬಂದಿದ್ದಾರೆ, ತಂದೆಯು ಭಾರತವನ್ನು ಪುನಃ ಬಡ ದೇಶದಿಂದ ಸಾಹುಕಾರವನ್ನಾಗಿ ಮಾಡಲು ಬರುತ್ತಾರೆ. ನಮ್ಮದು ಬಡ ಭಾರತವಾಗಿದೆ ಎಂದು ನೀವು ಹೇಳುತ್ತೀರಿ, ಎಲ್ಲರಿಗೂ ತಿಳಿದಿದೆ ಆದರೆ ನಮ್ಮ ಭಾರತ ದೇಶವು ಯಾವಾಗ ಸಾಹುಕಾರನಾಗಿತ್ತು, ಹೇಗಾಗಿತ್ತು ಎಂಬುದು ಅವರಿಗೆ ತಿಳಿದಿಲ್ಲ. ನೀವು ಮಕ್ಕಳಿಗೆ ಬಹಳ ನಶೆಯಿದೆ – ನಮ್ಮ ಭಾರತವು ಬಹಳ ಸಾಹುಕಾರನಾಗಿತ್ತು, ದುಃಖದ ಮಾತಿರಲಿಲ್ಲ. ಸತ್ಯಯುಗದಲ್ಲಿ ಅನ್ಯ ಯಾವುದೇ ಧರ್ಮವಿರಲಿಲ್ಲ, ಒಂದೇ ದೇವಿ-ದೇವತಾ ಧರ್ಮವಿತ್ತು, ಇದು ಯಾರಿಗೂ ತಿಳಿದಿಲ್ಲ. ವಿಶ್ವದ ಈ ಚರಿತ್ರೆ-ಭೂಗೋಳವನ್ನು ಯಾರೂ ತಿಳಿದುಕೊಂಡಿಲ್ಲ. ನೀವೀಗ ಚೆನ್ನಾಗಿ ತಿಳಿದುಕೊಂಡಿದ್ದೀರಿ – ನಮ್ಮ ಭಾರತವು ಬಹಳ ಸಾಹುಕಾರನಾಗಿತ್ತು, ಈಗ ಬಹಳ ಬಡ ಭಾರತವಾಗಿದೆ. ಪುನಃ ಸಾಹುಕಾರ ರಾಷ್ಟ್ರವನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಭಾರತವು ಸತ್ಯಯುಗದಲ್ಲಿ ಬಹಳ ಸಾಹುಕಾರನಾಗಿತ್ತು, ಯಾವಾಗ ದೇವಿ-ದೇವತೆಗಳ ರಾಜ್ಯವಿತ್ತು ನಂತರ ಆ ರಾಜ್ಯವು ಎಲ್ಲಿಗೆ ಹೊರಟು ಹೋಯಿತು, ಇದು ಯಾರಿಗೂ ತಿಳಿದಿಲ್ಲ. ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲವೆಂದು ಋಷಿ ಮುನಿಗಳೂ ಸಹ ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಸತ್ಯಯುಗದಲ್ಲಿ ಈ ದೇವಿ-ದೇವತೆಗಳಿಗೂ ರಚಯಿತ ಮತ್ತು ರಚನೆಯ ಜ್ಞಾನವಿರಲಿಲ್ಲ, ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿರಲಿಲ್ಲ. ಒಂದುವೇಳೆ ಅವರಿಗೆ ನಾವು ಏಣಿಯನ್ನಿಳಿಯುತ್ತಾ ರಸಾತಳದಲ್ಲಿ ಹೋಗುತ್ತೇವೆಂಬ ಜ್ಞಾನವಿದ್ದಿದ್ದರೆ ರಾಜ್ಯಭಾಗ್ಯದ ಸುಖವೇ ಇರುತ್ತಿರಲಿಲ್ಲ, ಚಿಂತೆಯಾಗಿ ಬಿಡುತ್ತಿತ್ತು.

ಈಗ ನಿಮಗೆ ಇದೇ ಚಿಂತೆಯಿದೆ – ನಾವು ಹೇಗೆ ತಮೋಪ್ರಧಾನರಿಂದ ಸತೋಪ್ರಧಾನರಾಗುವುದು? ನಾವಾತ್ಮರು ಯಾವ ನಿರಾಕಾರಿ ಪ್ರಪಂಚದಲ್ಲಿದ್ದೆವು ಅಲ್ಲಿಂದ ಹೇಗೆ ಸುಖಧಾಮದಲ್ಲಿ ಬಂದೆವು ಎಂಬ ಜ್ಞಾನವೂ ಇದೆ. ನಾವೀಗ ಏರುವಕಲೆಯಲ್ಲಿದ್ದೇವೆ, ಇದು 84 ಜನ್ಮಗಳ ಏಣಿಯಾಗಿದೆ. ಇದರ ಮಧ್ಯದಲ್ಲಿ ಏನಾಗುತ್ತದೆ ಎಂಬುದನ್ನೂ ಸಹ ನೀವು ಅರಿತುಕೊಂಡಿದ್ದೀರಿ. ಎಲ್ಲರೂ ಸತ್ಯಯುಗದಲ್ಲಿ ಬರುವುದಿಲ್ಲ, ಡ್ರಾಮಾನುಸಾರ ನೀವು ಪ್ರತಿಯೊಬ್ಬ ಪಾತ್ರಧಾರಿಯೂ ನಂಬರ್ವಾರ್ ತಮ್ಮ-ತಮ್ಮ ಸಮಯದಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತೀರಿ.

ಈಗ ನೀವು ಮಕ್ಕಳು ಯಾರಿಗೆ ಬಡವರ ಬಂಧುವೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತೀರಿ, ಪ್ರಪಂಚದವರಿಗೆ ತಿಳಿದಿಲ್ಲ. ಕೊನೆಗೂ ಆ ದಿನ ಇಂದು ಬಂದಿತು ಎಂಬುದನ್ನು ಗೀತೆಯಲ್ಲಿಯೂ ಕೇಳಿದಿರಿ. ಇದೆಲ್ಲವೂ ಭಕ್ತಿಯಾಗಿದೆ. ಭಗವಂತನು ಯಾವಾಗ ಬಂದು ನಾವು ಭಕ್ತರನ್ನು ಈ ಭಕ್ತಿಮಾರ್ಗದಿಂದ ಬಿಡಿಸಿ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ ಎಂಬುದನ್ನೂ ಸಹ ತಿಳಿದಿದ್ದೀರಿ. ರಾಮ ರಾಜ್ಯ, ರಾವಣ ರಾಜ್ಯ ಯಾವುದರ ಹೆಸರಾಗಿದೆ ಎಂಬುದನ್ನೂ ಸಹ ಯಾವ ಮನುಷ್ಯರೂ ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ – ತಂದೆಯು ಪುನಃ ಈ ಶರೀರದಲ್ಲಿ ಬಂದಿದ್ದಾರೆ, ಶಿವ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಶಿವನು ಅವಶ್ಯವಾಗಿ ಬರುತ್ತಾರೆ. ನಾನು ಕೃಷ್ಣನ ತನುವಿನಲ್ಲಿ ಬರುತ್ತೇನೆಂದು ಹೇಳುವುದಿಲ್ಲ, ತಂದೆಯು ತಿಳಿಸುತ್ತಾರೆ – ಕೃಷ್ಣನ ಆತ್ಮವು 84 ಜನ್ಮಗಳನ್ನು ತೆಗೆದುಕೊಂಡಿದೆ. ಯಾರು ಮೊಟ್ಟ ಮೊದಲಿಗರಾಗಿದ್ದರೋ ಅವರೇ ಈಗ ಅಂತಿಮದಲ್ಲಿದ್ದಾರೆ. ತತ್ತ್ವಂ. ನಾನಂತೂ ಸಾಧಾರಣ ತನುವಿನಲ್ಲಿ ಬರುತ್ತೇನೆ, ಬಂದು ನಿಮಗೆ ಹೇಗೆ ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರೆಂದು ತಿಳಿಸುತ್ತೇನೆ. ಈ ಸಮಯದಲ್ಲಿ ಯಾರೊಬ್ಬರೂ ತಮ್ಮನ್ನು ದೇವತಾ ಧರ್ಮದವರೆಂದು ತಿಳಿದುಕೊಳ್ಳುವುದಿಲ್ಲ ಏಕೆಂದರೆ ಸತ್ಯಯುಗವನ್ನು ಬಹಳ ದೂರ ತೆಗೆದುಕೊಂಡು ಹೋಗಿದ್ದಾರೆ. ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ವಾಸ್ತವದಲ್ಲಿ ಡ್ರಾಮಾದ ಚರಿತ್ರೆಯು ಬಹಳ ಚಿಕ್ಕದಾಗಿದೆ, ಇದರಲ್ಲಿ ಕೆಲವು ಧರ್ಮಗಳ ಚರಿತ್ರೆಯು 500 ವರ್ಷಗಳು, ಇನ್ನೂ ಕೆಲವರದು 2500 ವರ್ಷಗಳ ಇತಿಹಾಸವಿದೆ, ನಿಮ್ಮದು 5000 ವರ್ಷಗಳ ಇತಿಹಾಸವಾಗಿದೆ. ದೇವತಾ ಧರ್ಮದವರೇ ಸ್ವರ್ಗದಲ್ಲಿ ಬರುತ್ತೀರಿ, ಅನ್ಯ ಧರ್ಮದವರು ಬರುವುದೇ ನಂತರದಲ್ಲಿ. ದೇವತಾ ಧರ್ಮದವರೇ ಅನ್ಯ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆ. ಡ್ರಾಮಾನುಸಾರ ಮುಂದಿನ ಕಲ್ಪದಲ್ಲಿಯೂ ಇದೇ ರೀತಿ ಹೋಗಿ ಸೇರುತ್ತಾರೆ ಮತ್ತೆ ತಮ್ಮ-ತಮ್ಮ ಧರ್ಮಕ್ಕೆ ಮರಳಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವಂತೂ ವಿಶ್ವದ ಮಾಲೀಕರಾಗಿದ್ದಿರಿ, ನೀವೀಗ ತಿಳಿದುಕೊಂಡಿದ್ದೀರಿ – ತಂದೆಯು ಸ್ವರ್ಗದ ಸ್ಥಾಪನೆ ಮಾಡುವವರಾಗಿದ್ದಾರೆ ಅಂದಮೇಲೆ ನಾವೇಕೆ ಸ್ವರ್ಗದಲ್ಲಿರಬಾರದು! ತಂದೆಯಿಂದ ನಾವು ಆಸ್ತಿಯನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತೇವೆ ಅಂದಮೇಲೆ ಇದರಿಂದಲೇ ಸಿದ್ಧವಾಗುತ್ತದೆ – ಇವರು ನಮ್ಮ ಧರ್ಮದವರಾಗಿದ್ದಾರೆ, ಯಾರು ಈ ಧರ್ಮದವರಲ್ಲವೋ ಅವರು ಬರುವುದಿಲ್ಲ. ಪರಧರ್ಮದಲ್ಲಿ ಏಕೆ ಹೋಗಬೇಕೆಂದು ಹೇಳುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಸತ್ಯಯುಗ ಹೊಸ ಪ್ರಪಂಚದಲ್ಲಿ ದೇವತೆಗಳಿಗೆ ಬಹಳ ಸುಖವಿತ್ತು, ಚಿನ್ನದ ಮಹಲುಗಳಿತ್ತು. ಸೋಮನಾಥ ಮಂದಿರದಲ್ಲಿ ಎಷ್ಟೊಂದು ಚಿನ್ನವಿತ್ತು! ಈ ರೀತಿ ಮತ್ತ್ಯಾವುದೇ ಮಂದಿರವಿರುವುದಿಲ್ಲ, ಅದರಲ್ಲಿ ಬಹಳ ವಜ್ರ ವೈಡೂರ್ಯಗಳಿತ್ತು. ಬೌದ್ಧ ಮೊದಲಾದವರದು ವಜ್ರ ರತ್ನಗಳ ಮಹಲುಗಳಿರುವುದಿಲ್ಲ. ನೀವು ಮಕ್ಕಳನ್ನು ಯಾವ ತಂದೆಯು ಇಷ್ಟು ಶ್ರೇಷ್ಠರನ್ನಾಗಿ ಮಾಡಿದ್ದಾರೆಯೋ ಅವರಿಗೆ ನೀವು ಎಷ್ಟೊಂದು ಗೌರವವನ್ನಿಟ್ಟಿದ್ದೀರಿ. ಯಾರು ಒಳ್ಳೆಯ ಕರ್ಮ ಮಾಡಿ ಹೋಗುವರೋ ಅವರಿಗೆ ಗೌರವ ಕೊಡಲಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ಎಲ್ಲರಿಗಿಂತ ಒಳ್ಳೆಯ ಕರ್ಮವನ್ನು ಪತಿತ-ಪಾವನ ತಂದೆಯೇ ಮಾಡಿ ಹೋಗುತ್ತಾರೆ. ನಿಮ್ಮ ಆತ್ಮ ಹೇಳುತ್ತದೆ – ಎಲ್ಲರಿಗಿಂತ ಅತ್ಯುತ್ತಮ ಸೇವೆಯನ್ನು ಬೇಹದ್ದಿನ ತಂದೆಯೇ ಬಂದು ಮಾಡುತ್ತಾರೆ. ನಮ್ಮನ್ನು ಬಡವರಿಂದ ರಾಜ, ಭಿಕಾರಿಗಳಿಂದ ರಾಜಕುಮಾರರನ್ನಾಗಿ ಮಾಡಿ ಬಿಡುತ್ತಾರೆ. ಯಾರು ಭಾರತವನ್ನು ಸ್ವರ್ಗವನ್ನಾಗಿ ಮಾಡುವರೋ ಅವರಿಗೂ ಸಹ ಯಾರೂ ಗೌರವವನ್ನಿಡುವುದಿಲ್ಲ, ನೀವು ತಿಳಿದುಕೊಂಡಿದ್ದೀರಿ – ಸೋಮನಾಥ ಮಂದಿರವು ಬಹಳ ಶ್ರೇಷ್ಠವೆಂದು ಗಾಯನವಿದೆ, ಅದನ್ನೇ ಲೂಟಿ ಮಾಡಿಕೊಂಡು ಹೋದರು. ಲಕ್ಷ್ಮೀ-ನಾರಾಯಣರ ಮಂದಿರವನ್ನು ಎಂದೂ ಯಾರೂ ಲೂಟಿ ಮಾಡಲಿಲ್ಲ. ಸೋಮನಾಥ ಮಂದಿರವನ್ನೇ ಲೂಟಿ ಮಾಡಿದ್ದಾರೆ. ಭಕ್ತಿಮಾರ್ಗದಲ್ಲಿ ಇವರು ಬಹಳ ಧನವಂತರಾಗಿರುತ್ತಾರೆ, ರಾಜರಲ್ಲಿಯೂ ನಂಬರ್ವಾರ್ ಇರುತ್ತಾರಲ್ಲವೆ. ಯಾರು ಉತ್ತಮ ಪದವಿಯವರು ಇರುವರೋ ಅವರಿಗೆ ಚಿಕ್ಕ ಪದವಿಯನ್ನು ಹೊಂದಿರುವವರು ಗೌರವ ಕೊಡುತ್ತಾರೆ. ದರ್ಬಾರಿನಲ್ಲಿಯೂ ನಂಬರ್ವಾರ್ ಆಗಿ ಕುಳಿತುಕೊಳ್ಳುತ್ತಾರೆ. ಬ್ರಹ್ಮಾ ತಂದೆಯು ಅನುಭವಿಯಲ್ಲವೆ. ಇಲ್ಲಿಯದು ಪತಿತ ರಾಜರ ದರ್ಬಾರಾಗಿದೆ. ಅಂದಮೇಲೆ ಪಾವನ ರಾಜರ ದರ್ಬಾರು ಹೇಗಿರಬಹುದು! ಯಾವಾಗ ಅವರ ಬಳಿ ಇಷ್ಟೊಂದು ಹಣವಿರುತ್ತದೆ ಅಂದಮೇಲೆ ಅವರ ಮನೆಯೂ ಸಹ ಅಷ್ಟೇ ಚೆನ್ನಾಗಿರುತ್ತದೆ, ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ನಮಗೆ ಓದಿಸುತ್ತಿದ್ದಾರೆ, ಸ್ವರ್ಗದ ಸ್ಥಾಪನೆ ಮಾಡಿಸುತ್ತಿದ್ದಾರೆ. ನಾವು ಸ್ವರ್ಗದ ಮಹಾರಾಜ-ಮಹಾರಾಣಿಯಾಗುತ್ತೇವೆ ನಂತರ ನಾವು ಕೆಳಗಿಳಿಯುತ್ತೇವೆ. ಕೆಳಗಿಳಿಯುತ್ತಾ ನಾವು ಮೊಟ್ಟ ಮೊದಲು ಶಿವ ತಂದೆಯ ಪೂಜಾರಿಗಳಾಗುತ್ತೇವೆ. ಯಾರು ಸ್ವರ್ಗದ ಮಾಲೀಕರನ್ನಾಗಿ ಮಾಡಿದರೋ ಅವರಿಗೆ ನಾವು ಪೂಜೆ ಮಾಡುತ್ತೇವೆ. ಅವರು ನಮ್ಮನ್ನು ಬಹಳ ಸಾಹುಕಾರರನ್ನಾಗಿ ಮಾಡುತ್ತಾರೆ, ಈಗ ಭಾರತವು ಎಷ್ಟು ಬಡ ದೇಶವಾಗಿದೆ! ಮೊದಲು ಇಷ್ಟೊಂದು ಬಡ ರಾಷ್ಟ್ರವಾಗಿರಲಿಲ್ಲ, ಬಹಳ ಖುಷಿಯಲ್ಲಿದ್ದರು. ಯಾವ ಜಮೀನನ್ನು 500 ರೂಪಾಯಿಗಳಿಗೆ ತೆಗೆದುಕೊಂಡಿದ್ದರೋ ಅದು ಇಂದು 5000 ಕೊಟ್ಟರೂ ಸಿಗುವುದಿಲ್ಲ. ಸತ್ಯಯುಗದಲ್ಲಿ ಧರಣಿಗೆ ಮೌಲ್ಯವೇ ಇರುವುದಿಲ್ಲ, ಯಾರು ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳಬಹುದು. ಬಹಳಷ್ಟು ಜಮೀನಿರುತ್ತದೆ, ಸಿಹಿ ನೀರಿನ ನದಿಗಳ ತೀರದಲ್ಲಿ ನಿಮ್ಮ ಮಹಲುಗಳಿರುತ್ತವೆಯಲ್ಲವೆ. ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ, ಪ್ರಕೃತಿಯು ದಾಸಿಯಾಗಿರುತ್ತದೆ. ಬಹಳ ಒಳ್ಳೊಳ್ಳೆಯ ಫಲ ಪುಷ್ಫಗಳು ಸಿಗುತ್ತಿರುತ್ತವೆ. ನೀವೀಗ ಎಷ್ಟೊಂದು ಪರಿಶ್ರಮ ಪಡುತ್ತೀರಿ ಆದರೂ ಸಹ ಬರಗಾಲವು ಬಂದಿತೆಂದರೆ ಆಹಾರವು ಸಿಗುವುದಿಲ್ಲ ಅಂದಾಗ ಹಾಡು ಕೇಳುತ್ತಿದ್ದಂತೆಯೇ ನಿಮಗೆ ರೋಮಾಂಚನವಾಗಿ ಬಿಡಬೇಕು. ತಂದೆಗೆ ಬಡವರ ಬಂಧು ಎಂದು ಹೇಳುತ್ತೀರಿ, ಈಗ ಅರ್ಥವನ್ನು ತಿಳಿದುಕೊಂಡಿರಲ್ಲವೆ. ಯಾರನ್ನು ಸಾಹುಕಾರರನ್ನಾಗಿ ಮಾಡುತ್ತಾರೆ? ಅವಶ್ಯವಾಗಿ ಯಾರು ಇಲ್ಲಿಗೆ ಬರುವರೋ ಅವರನ್ನೇ ಸಾಹುಕಾರರನ್ನಾಗಿ ಮಾಡುತ್ತಾರಲ್ಲವೆ. ನೀವು ಮಕ್ಕಳಿಗೆ ತಿಳಿದಿದೆ – ಪಾವನರಿಂದ ಪತಿತರಾಗುವುದರಲ್ಲಿ 5000 ವರ್ಷಗಳು ಹಿಡಿಸಿದೆ, ಈಗ ಪುನಃ ತಂದೆಯು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುತ್ತಾರೆ, ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯು ಪ್ರಾಪ್ತಿಯಾಗುತ್ತದೆ. ಬಾಬಾ, ನಾವು ನಿಮ್ಮವರಾಗಿದ್ದೇವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ನೀವು ವಿಶ್ವದ ಮಾಲೀಕರಾಗಿದ್ದೀರಿ, ಮಗು ಜನ್ಮ ಪಡೆಯಿತೆಂದರೆ ವಾರಸುಧಾರನಾಯಿತು, ಎಷ್ಟೊಂದು ಖುಷಿಯಾಗುತ್ತದೆ! ಆದರೆ ಹೆಣ್ಣು ಮಗುವನ್ನು ನೋಡುತ್ತಿದ್ದಂತೆ ಚಹರೆಯೇ ಬಾಡಿ ಹೋಗುತ್ತದೆ. ಇಲ್ಲಂತೂ ಎಲ್ಲಾ ಆತ್ಮರೂ ಗಂಡು ಮಕ್ಕಳಾಗಿದ್ದೀರಿ, ನಾವು ಸ್ವರ್ಗದ ಮಾಲೀಕರಾಗಿ ಬಿಟ್ಟೆವು. ಈಗ ಅರ್ಥವಾಗಿದೆ – ನಾವು 5000 ವರ್ಷಗಳ ಮೊದಲೂ ಸ್ವರ್ಗದ ಮಾಲೀಕರಾಗಿದ್ದೆವು, ತಂದೆಯು ಆ ರೀತಿ ಮಾಡಿದ್ದರು. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಅವರು ಯಾವಾಗ ಬಂದಿದ್ದರು ಎಂಬುದನ್ನು ತಿಳಿದುಕೊಂಡಿಲ್ಲ. ಯಾವಾಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಎಂಬುದೇನೂ ಗೊತ್ತಿಲ್ಲ. ವಾಸ್ತವದಲ್ಲಿ ಭಾರತದ ಸಂಪನ್ನತೆಯು ಎಲ್ಲದಕ್ಕಿಂತ ಹೆಚ್ಚಿನದಾಗಿರಬೇಕು. ಭಾರತದ ಭೂಮಿಯೂ ಎಲ್ಲದಕ್ಕಿಂತ ದೊಡ್ಡದಾಗಿರಬೇಕು. ಲಕ್ಷಾಂತರ ವರ್ಷಗಳಿದ್ದಿದ್ದೇ ಆದರೆ ಮತ್ತೆ ಬಹಳ ಜಮೀನು ಬೇಕಾಗುವುದು, ಇಡೀ ಪ್ರಪಂಚದ ಜಮೀನಾದರೂ ಸಾಕಾಗುವುದಿಲ್ಲ. ಲಕ್ಷಾಂತರ ವರ್ಷಗಳಲ್ಲಿ ಎಷ್ಟೊಂದು ಜನಸಂಖ್ಯೆಯಾಗಿ ಬಿಡುವುದು, ಅಸಂಖ್ಯಾತ ಮನುಷ್ಯರಾಗುವರು ಆದ್ದರಿಂದ ಲಕ್ಷಾಂತರ ವರ್ಷಗಳಂತೂ ಇಲ್ಲ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಮನುಷ್ಯರು ಈ ಮಾತುಗಳನ್ನು ಕೇಳಿದಾಗ ಇದನ್ನು ಎಂದೂ ಕೇಳಿಲ್ಲ, ಯಾವುದೇ ಶಾಸ್ತ್ರಗಳಲ್ಲಿ ಓದಲಿಲ್ಲ ಎಂದು ಹೇಳುತ್ತಾರೆ. ಇವು ಬಹಳ ಅದ್ಭುತ ಮಾತುಗಳಾಗಿವೆ.

ಈಗ ನೀವು ಮಕ್ಕಳ ಬುದ್ಧಿಯಲ್ಲಿ ಇಡೀ ಚಕ್ರದ ಜ್ಞಾನವಿದೆ, ಇವರು ಬಹಳ ಜನ್ಮಗಳ ಅಂತಿಮದಲ್ಲಿ ಈಗ ಪತಿತ ಆತ್ಮನಾಗಿದ್ದಾರೆ, ಯಾರು ಸತೋಪ್ರಧಾನರಾಗಿದ್ದರೋ ಅವರೇ ಈಗ ತಮೋಪ್ರಧಾನವಾಗಿದ್ದಾರೆ ಪುನಃ ಸತೋಪ್ರಧಾನರಾಗಬೇಕಾಗಿದೆ. ನೀವಾತ್ಮರಿಗೆ ಈಗ ಶಿಕ್ಷಣ ಸಿಗುತ್ತಿದೆ – ಶರೀರದ ಮುಖಾಂತರ ಆತ್ಮವು ಕೇಳುವಾಗ ಶರೀರವು ತೂಗುತ್ತದೆ ಏಕೆಂದರೆ ಆತ್ಮವು ಇದರ ಮೂಲಕ ಕೇಳಿಸಿಕೊಳ್ಳುತ್ತದೆಯಲ್ಲವೆ. ಅವಶ್ಯವಾಗಿ ನಾವಾತ್ಮರು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಅಂದಮೇಲೆ ಅವಶ್ಯವಾಗಿ 84 ಮಂದಿ ತಂದೆ-ತಾಯಿಯರು ಸಿಕ್ಕಿರುವರು, ಇದೂ ಸಹ ಲೆಕ್ಕವಿದೆಯಲ್ಲವೆ. ಬುದ್ಧಿಯಲ್ಲಿ ಬರುತ್ತದೆ – 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತೆ ಇನ್ನೂ ಕಡಿಮೆ ಜನ್ಮಗಳೂ ಇರಬಹುದು, ಕನಿಷ್ಠ ಮತ್ತು ಗರಿಷ್ಠದ ಲೆಕ್ಕವಿದೆಯಲ್ಲವೆ. ತಂದೆಯು ತಿಳಿಸುತ್ತಾರೆ – ಶಾಸ್ತ್ರಗಳಲ್ಲಿ ಏನೇನು ಬರೆದು ಬಿಟ್ಟಿದ್ದಾರೆ! ನಿಮಗಾದರೂ 84 ಜನ್ಮಗಳೆಂದು ಹೇಳುತ್ತಾರೆ ಆದರೆ ನನಗೆ ನೋಡಿ, ಅಸಂಖ್ಯಾತ ಜನ್ಮಗಳೆಂದು ಹೇಳಿ ಬಿಟ್ಟಿದ್ದಾರೆ, ಕಣ ಕಣದಲ್ಲಿ ಎಲ್ಲಿ ನೋಡಿದರಲ್ಲಿ ನೀನೇ ನೀನು….. ಕೃಷ್ಣನೇ ಕೃಷ್ಣನಿದ್ದಾನೆ. ಮಥುರಾ ಬೃಂದಾವನದಲ್ಲಿ ಕೃಷ್ಣನು ಸರ್ವವ್ಯಾಪಿಯಾಗಿದ್ದಾನೆಂದು ಹೇಳುತ್ತಾರೆ. ರಾಧೆಯ ಪಂಥದವರು ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ ಎಂದು ಹೇಳುತ್ತಾರೆ. ನಾವು ರಾಧಾ ಸ್ವಾಮಿಗಳೆಂದು ಹೇಳುತ್ತಾರೆ. ಕೃಷ್ಣ ಸ್ವಾಮಿಗಳೇ ಬೇರೆ. ಅವರು ರಾಧೆಯನ್ನು ಒಪ್ಪುತ್ತಾರೆ. ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ, ನೀವೂ ರಾಧೆ, ನಾನೂ ರಾಧೆ ಎಂದು ಹೇಳುತ್ತಾರೆ.

ಈಗ ತಂದೆಯು ತಿಳಿಸುತ್ತಾರೆ – ಅವಶ್ಯವಾಗಿ ನಾನು ಬಡವರ ಬಂಧುವಾಗಿದ್ದೇನೆ ಅಲ್ಲವೆ. ಭಾರತವೇ ಎಲ್ಲದಕ್ಕಿಂತ ಸಾಹುಕಾರನಾಗಿತ್ತು, ಈಗ ಎಲ್ಲದಕ್ಕಿಂತ ಬಡ ದೇಶವಾಗಿದೆ. ಆದ್ದರಿಂದ ನಾನು ಭಾರತದಲ್ಲಿಯೇ ಬರಬೇಕಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಇದು ಬೇಹದ್ದಿನ ಡ್ರಾಮಾ ಆಗಿದೆ. ಡ್ರಾಮಾದಲ್ಲಿ ಏನು ಶೂಟಿಂಗ್ ನಡೆದಿದೆಯೋ ಅದೇ ಪುನರಾವರ್ತನೆಯಾಗುವುದು. ಡ್ರಾಮಾದ ಬಗ್ಗೆಯೂ ತಿಳಿದಿರಬೇಕು, ಡ್ರಾಮಾ ಎಂದರೆ ಡ್ರಾಮಾ. ಅದು ಹದ್ದಿನ ಡ್ರಾಮಾ ಆಗಿರುತ್ತದೆ, ಇದು ಬೇಹದ್ದಿನ ಡ್ರಾಮಾ ಆಗಿದೆ. ಇದರ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ಬಡವರ ಬಂಧು ಎಂದು ನಿರಾಕಾರ ಭಗವಂತನನ್ನೇ ಒಪ್ಪುತ್ತಾರೆ, ಕೃಷ್ಣನನ್ನು ಒಪ್ಪುವುದಿಲ್ಲ. ಕೃಷ್ಣನಂತೂ ಧನವಂತ, ಸತ್ಯಯುಗದ ರಾಜಕುಮಾರನಾಗುತ್ತಾನೆ. ಭಗವಂತನಿಗೆ ತನ್ನ ಶರೀರವೇ ಇಲ್ಲ. ಅವರು ಬಂದು ನೀವು ಮಕ್ಕಳನ್ನು ಧನವಂತರನ್ನಾಗಿ ಮಾಡುತ್ತಾರೆ. ನಿಮಗೆ ರಾಜಯೋಗದ ಶಿಕ್ಷಣವನ್ನು ಕೊಡುತ್ತಾರೆ. ಮನುಷ್ಯರೂ ಸಹ ವಿದ್ಯೆಯಿಂದ ಬ್ಯಾರಿಸ್ಟರ್ ಇತ್ಯಾದಿಯಾಗುತ್ತಾರೆ ಮತ್ತು ಸಂಪಾದನೆ ಮಾಡುತ್ತಾರೆ. ತಂದೆಯು ಸಹ ನಿಮಗೆ ಈಗ ಓದಿಸುತ್ತಾರೆ. ನೀವು ಭವಿಷ್ಯದಲ್ಲಿ ನರನಿಂದ ನಾರಾಯಣನಾಗುತ್ತೀರಿ. ನಿಮ್ಮ ಜನ್ಮವಂತೂ ಆಗುತ್ತದೆಯಲ್ಲವೆ. ಸ್ವರ್ಗದಲ್ಲಿ ಯಾರೂ ಸಮುದ್ರದಿಂದ ತೇಲಿ ಬರುವುದಿಲ್ಲ, ಕೃಷ್ಣನೂ ಸಹ ಜನ್ಮ ಪಡೆದನಲ್ಲವೆ. ಆ ಸಮಯದಲ್ಲಿ ಕಂಸ ಪುರಿ ಇತ್ಯಾದಿಗಳಿರಲಿಲ್ಲ. ಕೃಷ್ಣನ ಹೆಸರು ಎಷ್ಟೊಂದು ಗಾಯನವಿದೆ, ಅವರ ತಂದೆಯ ಹೆಸರೇ ಇಲ್ಲ. ಅವರ ತಂದೆಯು ಎಲ್ಲಿದ್ದಾರೆ? ಅವಶ್ಯವಾಗಿ ರಾಜನ ಮಗುವಾಗಿರಬೇಕಲ್ಲವೆ. ಅಲ್ಲಿ ದೊಡ್ಡ ರಾಜರ ಮನೆಯಲ್ಲಿ ಜನ್ಮವಾಗುತ್ತದೆ ಆದರೆ ಅವರು ಪತಿತ ರಾಜರಾಗಿರುವ ಕಾರಣ ಅವರ ಹೆಸರು ಪ್ರಸಿದ್ಧವಾಗುವುದಿಲ್ಲ. ಕೃಷ್ಣನು ಇರುವಾಗ ಕೆಲವರು ಪತಿತರೂ ಇರುತ್ತಾರೆ, ಯಾವಾಗ ಅವರು ಸಂಪೂರ್ಣ ಸಮಾಪ್ತಿಯಾಗುವರೋ ಆಗ ಕೃಷ್ಣನು ಸಿಂಹಾಸನವನ್ನೇ ಏರುತ್ತಾನೆ, ತನ್ನ ರಾಜ್ಯವನ್ನು ತೆಗೆದುಕೊಳ್ಳುತ್ತಾನೆ ಆಗಲೇ ಅವರ ಸಂವತ್ಸರವು ಆರಂಭವಾಗುತ್ತದೆ. ಲಕ್ಷ್ಮೀ-ನಾರಾಯಣರಿಂದ ಸಂವತ್ಸರವು ಆರಂಭವಾಗುತ್ತದೆ, ನೀವು ಪೂರ್ಣ ಲೆಕ್ಕವನ್ನು ಬರೆಯುತ್ತೀರಿ. ಇವರ ರಾಜ್ಯವು ಇಷ್ಟು ಸಮಯ ಮತ್ತು ಇಂತಹವರ ರಾಜ್ಯವು ಇಷ್ಟು ಸಮಯ ಎಂದು ನೀವು ಲೆಕ್ಕವನ್ನು ತೆಗೆಯುತ್ತೀರಿ. ಇದರಿಂದ ಮನುಷ್ಯರು ತಿಳಿದುಕೊಳ್ಳುವರು – ಕಲ್ಪದ ಆಯಸ್ಸು ದೊಡ್ಡದಾಗಿರಲು ಸಾಧ್ಯವೇ ಇಲ್ಲ, ಈ 5000 ವರ್ಷಗಳ ಪೂರ್ಣ ಲೆಕ್ಕವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ರಚಯಿತ ಮತ್ತು ರಚನೆಯ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. ಕೇವಲ ಒಂದೇ ಚಿಂತೆಯಿರಲಿ – ನಾವು ಖಂಡಿತವಾಗಿಯೂ ಸತೋಪ್ರಧಾನರಾಗಬೇಕಾಗಿದೆ.

2. ಈ ಬೇಹದ್ದಿನ ಡ್ರಾಮಾವನ್ನು ಬುದ್ಧಿಯಲ್ಲಿಟ್ಟುಕೊಂಡು ಅಪಾರ ಖುಷಿಯಲ್ಲಿರಬೇಕು, ತಂದೆಯ ಸಮಾನ ಗೌರವವನ್ನು ಪಡೆಯಲು ಪತಿತರನ್ನು ಪಾವನ ಮಾಡುವ ಸೇವೆ ಮಾಡಬೇಕಾಗಿದೆ.

ವರದಾನ:-

ಯಾರು ಎವರೆಡಿ ಆಗಿದ್ದಾರೆಯೋ ಅವರ ಪ್ರತ್ಯಕ್ಷ ಸ್ವರೂಪವು ಎವರ್ಹ್ಯಾಪಿಯದಾಗಿರುತ್ತದೆ. ಯಾವುದೇ ಪರಿಸ್ಥಿತಿ ಎಂಬ ಪರೀಕ್ಷೆ ಅಥವಾ ಪಾಕೃತಿಕ ಆಪತ್ತುಗಳ ಮೂಲಕ ಬಂದಿರುವಂತಹ ಪರೀಕ್ಷೆ ಅಥವಾ ಯಾವುದೇ ದೈಹಿಕ ಕರ್ಮಭೋಗದ ಪರೀಕ್ಷೆಯೇ ಬರಲಿ… ಇವೆಲ್ಲಾ ಪ್ರಕಾರದ ಪರೀಕ್ಷೆಗಳಲ್ಲಿ ಸಂಪೂರ್ಣವಾಗಿ ಉತ್ತೀರ್ಣರಾಗುವವರೇ ಎವರೆಡಿ ಎಂದು ಹೇಳುತ್ತೇವೆ. ಹೇಗೆ ಸಮಯವು ಯಾರಿಗಾಗಿಯೂ ನಿಲ್ಲುವುದಿಲ್ಲವೋ, ಹಾಗೆಯೇ ಎಂದಿಗೂ ಯಾವುದೇ ಅಡಚಣೆಗಳು ನಿಲ್ಲಿಸಲು ಸಾಧ್ಯವಾಗಬಾರದು, ಒಂದು ಸೆಕೆಂಡಿನಲ್ಲಿ ಮಾಯೆಯ ಸೂಕ್ಷ ಅಥವಾ ಸ್ಥೂಲ ವಿಘ್ನಗಳು ಸಮಾಪ್ತಿಯಾಗಿ ಬಿಡಬೇಕು, ಹೀಗಾದಾಗಲೇ ಎವರ್ಹ್ಯಾಪಿ ಆಗಿರಲು ಸಾಧ್ಯ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top