13 September 2021 KANNADA Murli Today | Brahma Kumaris

Read and Listen today’s Gyan Murli in Kannada

September 12, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

``ಮಧುರ ಮಕ್ಕಳೇ - ತತ್ವಗಳ ಸಹಿತವಾಗಿ ಎಲ್ಲಾ ಮನುಷ್ಯ ಮಾತ್ರರನ್ನೂ ಪರಿವರ್ತನೆ ಮಾಡುವಂತಹ ವಿಶ್ವ ವಿದ್ಯಾಲಯವು ಕೇವಲ ಇದೊಂದೇ ಆಗಿದೆ, ಇಲ್ಲಿಂದಲೇ ಎಲ್ಲರ ಸದ್ಗತಿಯಾಗುತ್ತದೆ''

ಪ್ರಶ್ನೆ:: -

ತಂದೆಯಲ್ಲಿ ನಿಶ್ಚಯವಾಗುತ್ತಿದ್ದಂತೆಯೇ ಯಾವ ಸಲಹೆಯನ್ನು ಕೂಡಲೇ ಕಾರ್ಯ ರೂಪದಲ್ಲಿ ತರಬೇಕು?

ಉತ್ತರ:-

1. ತಂದೆಯು ಬಂದಿದ್ದಾರೆ ಎಂದು ನಿಶ್ಚಯವಾಯಿತೆಂದರೆ ತಂದೆಯದು ಇದೇ ಮೊಟ್ಟ ಮೊದಲ ಸಲಹೆಯಾಗಿದೆ – ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದನ್ನು ಮರೆತು ಬಿಡಿ, ನನ್ನೊಬ್ಬನ ಮತದಂತೆ ನಡೆಯಿರಿ, ಈ ಸಲಹೆಯನ್ನು ಕೂಡಲೇ ಕಾರ್ಯ ರೂಪದಲ್ಲಿ ತರಬೇಕಾಗಿದೆ. 2. ನೀವೀಗ ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಪತಿತರ ಜೊತೆ ನಿಮ್ಮ ಹೆಚ್ಚಿನ ಲೇವಾದೇವಿಯಿರಬಾರದು. ನಿಶ್ಚಯ ಬುದ್ಧಿ ಮಕ್ಕಳಿಗೆ ಎಂದೂ ಯಾವುದೇ ಮಾತಿನಲ್ಲಿ ಸಂಶಯ ಬರಲು ಸಾಧ್ಯವಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಇದು ಮನೆಯೂ ಆಗಿದೆ ಮತ್ತು ವಿಶ್ವ ವಿದ್ಯಾಲಯವೂ ಆಗಿದೆ. ಇದಕ್ಕೆ ಈಶ್ವರೀಯ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತದೆ ಏಕೆಂದರೆ ಇಡೀ ಪ್ರಪಂಚದ ಮನುಷ್ಯ ಮಾತ್ರರ ಸದ್ಗತಿಯಾಗುತ್ತದೆ. ನಿಜವಾದ ವಿಶ್ವ ವಿದ್ಯಾಲಯವು ಇದಾಗಿದೆ. ಮನೆಗೆ ಮನೆಯೂ ಆಗಿದೆ, ಮಾತಾಪಿತರ ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ವಿಶ್ವ ವಿದ್ಯಾಲಯವೂ ಆಗಿದೆ, ಆತ್ಮಿಕ ತಂದೆಯು ಕುಳಿತಿದ್ದಾರೆ. ಇದು ಆತ್ಮಿಕ ಜ್ಞಾನವಾಗಿದೆ ಯಾವುದು ಆತ್ಮಿಕ ತಂದೆಯ ಮೂಲಕ ಸಿಗುತ್ತಿದೆ. ಆತ್ಮಿಕ ಜ್ಞಾನವು ಆತ್ಮಿಕ ತಂದೆಯ ವಿನಃ ಮತ್ತ್ಯಾವುದೇ ಮನುಷ್ಯರು ಕೊಡಲು ಸಾಧ್ಯವಿಲ್ಲ. ಅವರಿಗೇ ಜ್ಞಾನ ಸಾಗರನೆಂದು ಹೇಳಲಾಗುತ್ತದೆ ಮತ್ತು ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಆದ್ದರಿಂದ ಜ್ಞಾನ ಸಾಗರ ಸರ್ವರ ಸದ್ಗತಿದಾತನು ಒಬ್ಬ ತಂದೆಯೇ ಆಗಿದ್ದಾರೆ. ತಂದೆಯ ಮೂಲಕ ಇಡೀ ವಿಶ್ವದ ಮನುಷ್ಯರಷ್ಟೇ ಅಲ್ಲ ಪ್ರತಿಯೊಂದು ವಸ್ತು ಪಂಚ ತತ್ವಗಳೂ ಸತೋಪ್ರಧಾನ ಆಗಿ ಬಿಡುತ್ತವೆ. ಎಲ್ಲದರ ಸದ್ಗತಿ ಆಗಿ ಬಿಡುತ್ತದೆ. ಈ ಮಾತುಗಳು ಬಹಳ ತಿಳಿದುಕೊಳ್ಳುವಂತದ್ದಾಗಿದೆ. ಈಗ ಎಲ್ಲರ ಸದ್ಗತಿ ಆಗಬೇಕಾಗಿದೆ. ಹಳೆಯ ಪ್ರಪಂಚ ಮತ್ತು ಪ್ರಪಂಚದಲ್ಲಿ ಇರುವವರೆಲ್ಲರೂ ಪರಿವರ್ತನೆ ಆಗಿ ಬಿಡುತ್ತಾರೆ. ಏನೆಲ್ಲವನ್ನೂ ಇಲ್ಲಿ ನೋಡುತ್ತೀರೋ ಅದೆಲ್ಲವೂ ಪರಿವರ್ತನೆಯಾಗಿ ಹೊಸದಾಗುವುದು. ಗಾಯನವಿದೆ – ಇಲ್ಲಿ ಸುಳ್ಳು ಮಾಯೆ-ಸುಳ್ಳು ಕಾಯವಾಗಿದೆ…… ಇದು ಅಸತ್ಯ ಖಂಡ ಆಗಿ ಬಿಡುತ್ತದೆ. ಭಾರತವು ಸತ್ಯ ಖಂಡವಾಗಿತ್ತು, ಈಗ ಅಸತ್ಯ ಖಂಡವಾಗಿದೆ. ರಚಯಿತ ಮತ್ತು ರಚನೆಯ ಬಗ್ಗೆ ಮನುಷ್ಯರು ಕೇಳುವುದೆಲ್ಲವೂ ಸುಳ್ಳಾಗಿದೆ, ನೀವೀಗ ತಂದೆಯ ಮೂಲಕ ಭಗವಾನುವಾಚವನ್ನು ತಿಳಿದುಕೊಂಡಿದ್ದೀರಿ. ಭಗವಂತನು ಒಬ್ಬರೇ ತಂದೆಯಾಗಿದ್ದಾರಲ್ಲವೆ. ಅವರು ನಿರಾಕಾರನಾಗಿದ್ದಾರೆ. ಮೂಲತಃ ಎಲ್ಲಾ ಆತ್ಮರು ನಿರಾಕಾರಿಯಾಗಿದ್ದಾರೆ ನಂತರ ಇಲ್ಲಿ ಬಂದು ಸಾಕಾರ ರೂಪವನ್ನು ತೆಗೆದುಕೊಳ್ಳುತ್ತಾರೆ, ಅಲ್ಲಿ ಆಕಾರವಿರುವುದಿಲ್ಲ, ಆತ್ಮರು ಮೂಲವತನ ಅಥವಾ ಬ್ರಹ್ಮ ಮಹಾತತ್ವದಲ್ಲಿ ನಿವಾಸ ಮಾಡುತ್ತಾರೆ. ಅದು ನಾವಾತ್ಮರ ಮನೆ ಬ್ರಹ್ಮ ಮಹಾತತ್ವವಾಗಿದೆ. ಇದು ಆಕಾಶ ತತ್ವವಾಗಿದೆ ಎಲ್ಲಿ ಸಾಕಾರಿ ಪಾತ್ರವು ನಡೆಯುತ್ತದೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತದೆ, ಇದರ ಅರ್ಥವನ್ನೂ ತಿಳಿದುಕೊಂಡಿಲ್ಲ, ಕೇವಲ ಪುನರಾವರ್ತನೆ ಆಗುತ್ತದೆಯೆಂದು ಹೇಳುತ್ತಾರೆ. ಚಿನ್ನದ ಯುಗ, ಬೆಳ್ಳಿಯುಗ…… ಮತ್ತೇನು? ಪುನಃ ಸತ್ಯಯುಗವು ಅವಶ್ಯವಾಗಿ ಬರುವುದು. ಸಂಗಮಯುಗವು ಒಂದೇ ಆಗಿದೆ, ಸತ್ಯ-ತ್ರೇತಾ ಹಾಗೂ ತ್ರೇತಾ ಮತ್ತು ದ್ವಾಪರದ ಸಂಗಮವೆಂದು ಹೇಳಲಾಗುವುದಿಲ್ಲ. ಅದು ತಪ್ಪಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ – ನಾನು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಯಾವಾಗ ಪತಿತರಾಗುವರೋ ಆಗಲೇ ನನ್ನನ್ನು ಪಾವನರನ್ನಾಗಿ ಮಾಡಲು ಬನ್ನಿ ಎಂದು ಕರೆಯುತ್ತಾರೆ. ಪಾವನರಿರುವುದೇ ಸತ್ಯಯುಗದಲ್ಲಿ. ಈಗ ಸಂಗಮವಾಗಿದೆ, ಇದಕ್ಕೆ ಕಲ್ಯಾಣಕಾರಿ ಸಂಗಮಯುಗವೆಂದು ಹೇಳಲಾಗುತ್ತದೆ, ಆತ್ಮ ಮತ್ತು ಪರಮಾತ್ಮನ ಮಿಲನದ ಸಂಗಮ, ಇದಕ್ಕೆ ಕುಂಭವೆಂದೂ ಹೇಳಲಾಗುತ್ತದೆ. ಅವರು ಮತ್ತೆ ನದಿಗಳ ಮೇಳವನ್ನೂ ತೋರಿಸುತ್ತಾರೆ. ಎರಡು ನದಿಗಳಂತೂ ಇವೆ, ಮೂರನೆಯದು ಗುಪ್ತ ನದಿಯೆಂದು ಹೇಳುತ್ತಾರೆ, ಇದೂ ಸಹ ಸುಳ್ಳಾಗಿದೆ. ಎಂದಾದರೂ ಗುಪ್ತ ನದಿ ಇರುತ್ತದೆಯೇ? ಗುಪ್ತ ನದಿ ಇರುತ್ತದೆಯೆಂಬ ಮಾತನ್ನು ವಿಜ್ಞಾನದವರೂ ಸಹ ಒಪ್ಪುವುದಿಲ್ಲ. ಬಾಣ ಹೊಡೆದರು, ಗಂಗೆಯು ಹೊರ ಬಂದಿತು, ಇವೆಲ್ಲವೂ ಅಸತ್ಯವಾಗಿದೆ. ಜ್ಞಾನ, ಭಕ್ತಿ ಮತ್ತು ವೈರಾಗ್ಯವೆಂದು ಗಾಯನವಿದೆ. ಈ ಶಬ್ಧವನ್ನು ಹಿಡಿದುಕೊಂಡಿದ್ದಾರೆ ಆದರೆ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಮೊಟ್ಟ ಮೊದಲು ಜ್ಞಾನವು ದಿನ ಮತ್ತು ಸುಖವಾಗಿದೆ, ಭಕ್ತಿಯು ರಾತ್ರಿ ಮತ್ತು ದುಃಖವಾಗಿದೆ. ಬ್ರಹ್ಮನ ದಿನ, ಬ್ರಹ್ಮನ ರಾತ್ರಿ. ಕೇವಲ ಒಬ್ಬರ ರಾತ್ರಿ-ಹಗಲಿನ ಮಾತಲ್ಲ ಅನೇಕರಿರುವವರಲ್ಲವೆ. ಅರ್ಧಕಲ್ಪ ದಿನವಾಗುತ್ತದೆ, ಇನ್ನರ್ಧ ಕಲ್ಪ ರಾತ್ರಿಯಾಗುತ್ತದೆ ನಂತರ ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವುಂಟಾಗುತ್ತದೆ.

ತಂದೆಯು ತಿಳಿಸುತ್ತಾರೆ – ದೇಹ ಸಹಿತವಾಗಿ ಏನೆಲ್ಲವನ್ನೂ ಈ ಕಣ್ಣುಗಳಿಂದ ನೋಡುತ್ತೀರೋ ಅದನ್ನು ಜ್ಞಾನದಿಂದ ಮರೆಯಬೇಕಾಗಿದೆ. ಉದ್ಯೋಗ-ವ್ಯವಹಾರ ಎಲ್ಲವನ್ನೂ ಮಾಡಬೇಕಾಗಿದೆ, ಮಕ್ಕಳನ್ನು ಸಂಭಾಲನೆ ಮಾಡಬೇಕಾಗಿದೆ ಆದರೆ ಬುದ್ಧಿಯೋಗವು ಒಬ್ಬ ತಂದೆಯೊಂದಿಗೆ ಇರಲಿ. ಅರ್ಧ ಕಲ್ಪ ನೀವು ರಾವಣನ ಮತದಂತೆ ನಡೆಯುತ್ತೀರಿ, ಈಗ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಏನನ್ನೇ ಮಾಡಿದರೂ ತಂದೆಯ ಸಲಹೆಯಂತೆ ಮಾಡಿರಿ. ಇಷ್ಟು ಸಮಯದಿಂದ ಪತಿತರೊಂದಿಗೆ ನಿಮ್ಮ ಲೇವಾದೇವಿಯು ನಡೆಯುತ್ತಾ ಬಂದಿದೆ, ಅದರ ಫಲವೇನಾಯಿತು! ದಿನ-ಪ್ರತಿದಿನ ಪತಿತರಾಗುತ್ತಲೇ ಬಂದಿದ್ದೀರಿ ಏಕೆಂದರೆ ಭಕ್ತಿಮಾರ್ಗವು ಇಳಿಯುವ ಕಲೆಯ ಮಾರ್ಗವಾಗಿದೆ, ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ ಬರಬೇಕಾಗುತ್ತದೆ. ಅವಶ್ಯವಾಗಿ ಇಳಿಯಲೇಬೇಕಾಗಿದೆ. ಇದರಿಂದ ಯಾರೂ ಬಿಡಿಸಲು ಸಾಧ್ಯವಿಲ್ಲ. ಲಕ್ಷ್ಮೀ-ನಾರಾಯಣರಿಗೆ 84 ಜನ್ಮಗಳೆಂದು ತಿಳಿಸಲಾಗಿದೆ ಅಲ್ಲವೆ. ಆಂಗ್ಲ ಭಾಷೆಯ ಪದಗಳು ಬಹಳ ಚೆನ್ನಾಗಿದೆ – ಗೋಲ್ಡನ್ ಏಜ್, ಸಿಲ್ವರ್ ಏಜ್…. ಹೀಗೆ ಬರುತ್ತಾ ಈ ಸಮಯದಲ್ಲಿ ಬಂದು ಐರನ್ ಏಜ್ ಆಗಿದ್ದೀರಿ. ಗೋಲ್ಡನ್ಏಜ್ನಲ್ಲಿ ಹೊಸ ಪ್ರಪಂಚವಿತ್ತು, ಹೊಸ ಭಾರತವಾಗಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದು ನೆನ್ನೆಯ ಮಾತಾಗಿದೆ. ಶಾಸ್ತ್ರಗಳಲ್ಲಿ ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ, ಈಗ ತಂದೆಯು ತಿಳಿಸುತ್ತಾರೆ – ನಿಮ್ಮ ಶಾಸ್ತ್ರಗಳು ಸರಿಯೋ ಅಥವಾ ನಾನು ಸರಿಯೋ? ತಂದೆಗೆ ಸರ್ವ ಶಕ್ತಿವಂತನೆಂದು ಹೇಳಲಾಗುತ್ತದೆ. ಯಾರು ಬಹಳ ವೇದ ಶಾಸ್ತ್ರಗಳನ್ನು ಓದುವರೋ ಅವರಿಗೆ ಅಥಾರಿಟಿಯೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ಇವರೆಲ್ಲರೂ ಭಕ್ತಿಮಾರ್ಗದ ಅಥಾರಿಟಿಯಾಗಿದ್ದಾರೆ. ಜ್ಞಾನಕ್ಕಾಗಿ ನನ್ನದೇ ಗಾಯನ ಮಾಡುತ್ತಾರೆ – ತಾವು ಜ್ಞಾನ ಸಾಗರನಾಗಿದ್ದೀರಿ, ನಾವಲ್ಲ ಎಂದು. ಮನುಷ್ಯರೆಲ್ಲರೂ ಭಕ್ತಿಯ ಸಾಗರದಲ್ಲಿ ಮುಳುಗಿದ್ದಾರೆ, ಸತ್ಯಯುಗದಲ್ಲಿ ಯಾರೂ ವಿಕಾರದಲ್ಲಿ ಹೋಗುವುದಿಲ್ಲ. ಕಲಿಯುಗದಲ್ಲಿ ಮನುಷ್ಯರು ಆದಿ-ಮಧ್ಯ-ಅಂತ್ಯ ದುಃಖಿಯಾಗುತ್ತಿರುತ್ತಾರೆ. ತಂದೆಯು ಕಲ್ಪದ ಮೊದಲೂ ಸಹ ಈ ರೀತಿ ತಿಳಿಸಿದ್ದರು, ಈಗ ಪುನಃ ತಿಳಿಸುತ್ತಿದ್ದಾರೆ. ಮಕ್ಕಳು ತಿಳಿದುಕೊಳ್ಳುತ್ತಾರೆ – ಕಲ್ಪದ ಮೊದಲೂ ಸಹ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆದಿದ್ದೆವು, ಈಗ ಪುನಃ ಓದಿ ಪಡೆಯುತ್ತಿದ್ದೇವೆ. ಸಮಯವು ಬಹಳ ಕಡಿಮೆಯಿದೆ, ಇದೆಲ್ಲವೂ ವಿನಾಶವಾಗಲಿದೆ. ಆದ್ದರಿಂದ ಬೇಹದ್ದಿನ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು. ಅವರು ತಂದೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಪರಮಪಿತ, ಪರಮಶಿಕ್ಷಕ ಆಗಿದ್ದಾರೆ. ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆ ಆಗುತ್ತದೆ ಎಂಬುದನ್ನು ತಿಳಿಸುತ್ತಾರೆ, ಇದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈಗ ಮಕ್ಕಳು 5000 ವರ್ಷಗಳ ಹಿಂದಿನ ತರಹ ತಿಳಿದುಕೊಳ್ಳುತ್ತೀರಿ, ಇವರು ಅದೇ ಗೀತೆಯ ಭಗವಂತನಾಗಿದ್ದಾರೆ, ಶ್ರೀಕೃಷ್ಣನಲ್ಲ. ಮನುಷ್ಯರಿಗೆ ಭಗವಂತನೆಂದು ಹೇಳಲಾಗುವುದಿಲ್ಲ, ಭಗವಂತನು ಪುನರ್ಜನ್ಮ ರಹಿತನಾಗಿದ್ದಾರೆ, ಇದಕ್ಕೆ ದಿವ್ಯ ಜನ್ಮವೆಂದು ಹೇಳುತ್ತಾರೆ. ಇಲ್ಲದಿದ್ದರೆ ನಿರಾಕಾರನಾದ ನಾನು ಹೇಗೆ ಮಾತನಾಡಲಿ? ನಾನು ಬಂದು ಪಾವನರನ್ನಾಗಿ ಮಾಡಬೇಕೆಂದರೆ ಅವಶ್ಯವಾಗಿ ಯುಕ್ತಿಯನ್ನು ತಿಳಿಸಬೇಕಾಗುತ್ತದೆ, ನೀವು ತಿಳಿದುಕೊಂಡಿದ್ದೀರಿ – ನಾವಾತ್ಮರು ಅಮರರಾಗಿದ್ದೇವೆ. ರಾವಣ ರಾಜ್ಯದಲ್ಲಿ ನೀವೆಲ್ಲರೂ ದೇಹಾಭಿಮಾನಿಗಳಾಗಿ ಬಿಟ್ಟಿದ್ದೀರಿ, ಸತ್ಯಯುಗದಲ್ಲಿ ದೇಹೀ-ಅಭಿಮಾನಿಗಳಿರುತ್ತಾರೆ ಆದರೆ ಪರಮಾತ್ಮ ರಚಯಿತ ಮತ್ತು ಅವರ ರಚನೆಯನ್ನು ಅಲ್ಲಿಯೂ ಯಾರೂ ತಿಳಿದುಕೊಂಡಿರುವುದಿಲ್ಲ. ಒಂದುವೇಳೆ ನಾವು ಪುನಃ ಹೀಗೆ ಕೆಳಗೆ ಇಳಿಯಬೇಕಾಗುತ್ತದೆ ಎಂಬುದು ಅಲ್ಲಿ ತಿಳಿದಿದ್ದರೆ ರಾಜ್ಯಭಾಗ್ಯದ ಖುಷಿಯೇ ಇರುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಈ ಜ್ಞಾನವು ಅಲ್ಲಿ ಪ್ರಾಯಲೋಪವಾಗಿ ಬಿಡುತ್ತದೆ, ನಿಮ್ಮದು ಸದ್ಗತಿಯಾಗಿ ಬಿಡುತ್ತದೆ ನಂತರ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ದುರ್ಗತಿಯಲ್ಲಿಯೇ ಜ್ಞಾನದ ಅವಶ್ಯಕತೆಯಿರುತ್ತದೆ. ಈ ಸಮಯದಲ್ಲಿ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಎಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಹೋಗಿದ್ದಾರೆ. ತಂದೆಯು ತಿಳಿಸುತ್ತಾರೆ – ನನ್ನ ಮಕ್ಕಳು ಆತ್ಮರು ಯಾರು ಶರೀರದ ಮೂಲಕ ಬಂದು ಪಾತ್ರವನ್ನು ಅಭಿನಯಿಸುವರೋ ಅವರು ಕಾಮ ಚಿತೆಯ ಮೇಲೆ ಕುಳಿತು ತಮೋಪ್ರಧಾನರಾಗಿ ಬಿಟ್ಟಿದ್ದಾರೆ, ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು ಕರೆಯುತ್ತಾರೆ. ಪತಿತರಾಗುವುದೇ ಕಾಮ ಚಿತೆಯಿಂದ, ಕ್ರೋಧ ಅಥವಾ ಲೋಭದಿಂದ ಪತಿತರಾಗುವುದಿಲ್ಲ. ಸಾಧು-ಸಂತ ಮೊದಲಾದವರು ಪಾವನರಾಗಿರುತ್ತಾರೆ, ದೇವತೆಗಳು ಪಾವನರಾಗಿದ್ದಾರೆ. ಆದ್ದರಿಂದ ಪತಿತ ಮನುಷ್ಯರು ಹೋಗಿ ತಲೆ ಬಾಗುತ್ತಾರೆ. ತಾವು ನಿರ್ವಿಕಾರಿಗಳು ನಾವು ವಿಕಾರಿಗಳೆಂದು ಹಾಡುತ್ತಾರೆ. ವಿಕಾರಿ ಪ್ರಪಂಚ, ನಿರ್ವಿಕಾರಿ ಪ್ರಪಂಚದ ಗಾಯನವಿದೆಯಲ್ಲವೆ. ಭಾರತವೇ ನಿರ್ವಿಕಾರಿ ಪ್ರಪಂಚವಾಗಿತ್ತು, ಈಗ ವಿಕಾರಿಯಾಗಿದೆ. ಭಾರತದ ಜೊತೆ ಇಡೀ ವಿಶ್ವವೇ ವಿಕಾರಿಯಾಗಿದೆ. ನಿರ್ವಿಕಾರಿ ಪ್ರಪಂಚದಲ್ಲಿ ಇಂದಿಗೆ 5000 ವರ್ಷಗಳ ಮೊದಲು ಒಂದೇ ಧರ್ಮವಿತ್ತು, ಪವಿತ್ರತೆಯಿದ್ದಾಗ ಸುಖ-ಶಾಂತಿ ಮೂರೂ ಇತ್ತು. ಮೊದಲು ಪವಿತ್ರತೆಯಾಗಿದೆ. ಈಗ ಪವಿತ್ರತೆಯಿಲ್ಲ ಆದ್ದರಿಂದ ಸುಖ-ಶಾಂತಿಯೂ ಇಲ್ಲ.

ಜ್ಞಾನ ಸಾಗರ, ಸುಖದ ಸಾಗರ, ಪ್ರೀತಿಯ ಸಾಗರನು ಒಬ್ಬರೇ ತಂದೆಯಾಗಿದ್ದಾರೆ. ನಿಮ್ಮನ್ನು ಪ್ರಿಯರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಲ್ಲಿ ಎಲ್ಲರೂ ಪ್ರಿಯರಾಗಿದ್ದಾರೆ. ಮನುಷ್ಯ ಮಾತ್ರರು, ಪ್ರಾಣಿ ಪಕ್ಷಿಗಳೆಲ್ಲವೂ ಪ್ರಿಯವಾಗಿರುತ್ತವೆ. ಹುಲಿ, ಹಸು ಒಟ್ಟಿಗೆ ನೀರು ಕುಡಿಯುತ್ತವೆ. ಇದೊಂದು ಉದಾಹರಣೆಯಿದೆ. ಅಲ್ಲಿ ಇಂತಹ ಕೊಳಕು ಮಾಡುವ ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ ಇರುವುದಿಲ್ಲ. ಇಲ್ಲಿ ಕಾಯಿಲೆಗಳು, ಸೊಳ್ಳೆ, ಕೀಟಾಣುಗಳು ಇರುತ್ತವೆ, ಅಲ್ಲಿ ಇಂತಹ ಮಾತುಗಳಿರುವುದಿಲ್ಲ. ಸಾಹುಕಾರ ವ್ಯಕ್ತಿಗಳ ಬಳಿ ಬಹಳ ಸುಂದರ ಪೀಠೋಪಕರಣಗಳಿರುತ್ತವೆ. ಬಡವರ ಪೀಠೋಪಕರಣಗಳು ಸಾಧಾರಣವಾಗಿರುತ್ತವೆ. ನಮ್ಮ ದೇಶವು ಈಗ ಬಡ ಭಾರತವಾಗಿದೆ, ಎಷ್ಟೊಂದು ಕೊಳಕಾಗಿ ಬಿಟ್ಟಿದೆ. ಸತ್ಯಯುಗದಲ್ಲಿ ಎಷ್ಟು ಸ್ವಚ್ಛತೆಯಿರುತ್ತದೆ, ಚಿನ್ನದ ಮಹಲುಗಳು ಎಷ್ಟು ಸುಂದರವಾಗಿರುತ್ತವೆ. ವೈಕುಂಠದ ಹಸುಗಳು ನೋಡಿ ಅತಿಸುಂದರವಾಗಿರುತ್ತವೆ. ಕೃಷ್ಣನಿಗೆ ಎಷ್ಟು ಒಳ್ಳೆಯ ಹಸುಗಳನ್ನು ತೋರಿಸುತ್ತಾರೆ, ಕೃಷ್ಣ ಪುರಿಯಲ್ಲಿ ಹಸುಗಳೂ ಇರುತ್ತವೆಯಲ್ಲವೆ. ಆದರೆ ಅಲ್ಲಿ ಬಹಳ ಸುಂದರ ಪ್ರಾಣಿಗಳಿರುತ್ತವೆ. ಸ್ವರ್ಗವೆಂದರೆ ಮತ್ತೇನು? ಈ ಹಳೆಯ ಛೀ ಛೀ ಪ್ರಪಂಚದಲ್ಲಿ ಎಷ್ಟೊಂದು ಕೊಳಕಿದೆ, ಇದೆಲ್ಲವೂ ಈ ಜ್ಞಾನ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುವುದು. ಬಾಂಬುಗಳನ್ನು ಹೇಗೆ ತಯಾರು ಮಾಡುತ್ತಾ ಇರುತ್ತಾರೆ! ಬಾಂಬು ಹಾಕಿದರೆ ಸಾಕು ಬೆಂಕಿ ಹರಡುವುದು. ಇತ್ತೀಚೆಗೆ ಇಂತಹ ಜೀವಾಣುಗಳನ್ನೂ ಹಾಕುತ್ತಾರೆ, ಇಂತಹ ವಿನಾಶ ಮಾಡುತ್ತಾರೆ ಯಾವುದರಿಂದ ಬೇಹದ್ದಿನಲ್ಲಿ ಸಮಾಪ್ತಿಯಾಗಲಿ ಎಂದು. ಔಷಧೋಪಚಾರ ನೀಡಲು ಯಾವುದೇ ಆಸ್ಪತ್ರೆಗಳೂ ಉಳಿಯುವುದಿಲ್ಲ. ತಂದೆಯು ತಿಳಿಸುತ್ತಾರೆ – ಮಕ್ಕಳಿಗೆ ಯಾವುದೇ ಕಷ್ಟವಾಗಬಾರದು ಆದ್ದರಿಂದ ಪ್ರಾಕೃತಿಕ ವಿಕೋಪಗಳು, ಅಣ್ವಸ್ತ್ರಗಳ ಮಳೆ ಸುರಿಯುವುದು ಎಂದು ಗಾಯನವಿದೆ. ಮಕ್ಕಳು ವಿನಾಶದ ಸಾಕ್ಷಾತ್ಕಾರವನ್ನೂ ನೋಡಿದ್ದೀರಿ, ವಿನಾಶವು ಅವಶ್ಯವಾಗಿ ಆಗುವುದೆಂದು ಬುದ್ಧಿಯೂ ಹೇಳುತ್ತದೆ. ವಿನಾಶದ ಸಾಕ್ಷಾತ್ಕಾರವಾಗಲಿ, ಆಗ ಒಪ್ಪುತ್ತೇವೆ ಎಂದು ಯಾರಾದರೂ ಕೇಳಿದರೆ ಒಪ್ಪಿಕೊಳ್ಳಿ ಅಥವಾ ಒಪ್ಪದಿರಿ ಅದು ನಿಮ್ಮಿಷ್ಟ ಎಂದು ಹೇಳಿರಿ. ನಾವು ಆತ್ಮದ ಸಾಕ್ಷಾತ್ಕಾರ ಮಾಡಿದಾಗಲೇ ನಂಬುವೆವು ಎಂದು ಕೆಲವರು ಹೇಳುತ್ತಾರೆ, ಆತ್ಮವಂತೂ ಬಿಂದುವಾಗಿದೆ ಅದನ್ನು ಸಾಕ್ಷಾತ್ಕಾರದಲ್ಲಿ ನೋಡಿ ಬಿಟ್ಟರೆ ಏನಾಯಿತು? ಇದರಿಂದ ಸದ್ಗತಿಯಾಗುವುದೇ? ಪರಮಾತ್ಮನು ಅಖಂಡ ಜ್ಯೋತಿ ಸ್ವರೂಪ, ಕೋಟಿ ಸೂರ್ಯ ತೇಜೋಮಯನಾಗಿದ್ದಾನೆ, ಅದಕ್ಕಾಗಿ ಅರ್ಜುನನು ಸಾಕು ಮಾಡಿ, ನಾನು ಸಹನೆ ಮಾಡಲಾರೆ ಎಂದು ಹೇಳಿದನೆಂದು ಗೀತೆಯಲ್ಲಿ ಬರೆದಿದ್ದಾರೆ. ಆದರೆ ಇಂತಹ ಮಾತಿಲ್ಲ. ತಂದೆಯನ್ನು ಮಕ್ಕಳು ನೋಡಿ ನಾವು ಸಹನೆ ಮಾಡಲು ಸಾಧ್ಯವಿಲ್ಲ ಎಂದು ಹೇಳುವುದುಂಟೆ! ಹೇಗೆ ಆತ್ಮವಿದೆಯೋ ಹಾಗೆಯೇ ಪರಮಪಿತ ಪರಮಾತ್ಮ ತಂದೆಯೂ ಇದ್ದಾರೆ. ಕೇವಲ ಅವರು ಜ್ಞಾನ ಸಾಗರನಾಗಿದ್ದಾರೆ, ನಿಮ್ಮಲ್ಲಿಯೂ ಜ್ಞಾನವಿದೆ. ತಂದೆಯು ಬಂದು ಓದಿಸುತ್ತಾರೆ, ಮತ್ತ್ಯಾವುದೇ ಮಾತಿಲ್ಲ, ಯಾರು-ಯಾರು ಯಾವ ಭಾವನೆಯಿಂದ ನೆನಪು ಮಾಡುವರೋ ಅವರ ಭಾವನೆಯನ್ನು ಪೂರ್ಣ ಮಾಡುತ್ತೇವೆ. ಇದೂ ಡ್ರಾಮಾದಲ್ಲಿ ನಿಗಧಿಯಾಗಿದೆ ಆದರೆ ಯಾರಿಗೂ ಭಗವಂತನು ಸಿಗಲು ಸಾಧ್ಯವಿಲ್ಲ. ಭಕ್ತ ಮೀರಾ ಸಾಕ್ಷಾತ್ಕಾರದಲ್ಲಿ ಎಷ್ಟೊಂದು ಖುಷಿ ಪಡುತ್ತಿದ್ದಳು, ಇನ್ನೊಂದು ಜನ್ಮದಲ್ಲಿಯೂ ಭಕ್ತಿನಿಯೇ ಆಗಿರಬೇಕು, ವೈಕುಂಠದಲ್ಲಂತೂ ಹೋಗಲು ಸಾಧ್ಯವಿಲ್ಲ. ನೀವು ಮಕ್ಕಳು ವೈಕುಂಠದಲ್ಲಿ ಹೋಗುವ ತಯಾರು ಮಾಡಿಕೊಳ್ಳುತ್ತಿದ್ದೀರಿ. ನಾವು ವೈಕುಂಠ, ಕೃಷ್ಣ ಪುರಿಯ ಮಾಲೀಕರಾಗುತ್ತಿದ್ದೇವೆಂದು ತಿಳಿದುಕೊಂಡಿದ್ದೀರಿ. ಇಲ್ಲಿ ಎಲ್ಲರೂ ನರಕದ ಮಾಲೀಕರಾಗಿದ್ದಾರೆ, ಈ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತದೆಯಲ್ಲವೆ. ನಾವು ನಮ್ಮ ರಾಜ್ಯಭಾಗ್ಯವನ್ನು ಪುನಃ ಪಡೆಯುತ್ತಿದ್ದೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ, ಇದು ರಾಜಯೋಗ ಬಲವಾಗಿದೆ, ಬಾಹುಬಲದ ಯುದ್ಧಗಳಂತೂ ಅನೇಕ ಬಾರಿ ಅನೇಕ ಜನ್ಮಗಳಿಂದ ನಡೆದಿದೆ. ಯೋಗ ಬಲದಿಂದ ನಿಮ್ಮದು ಏರುವ ಕಲೆಯಾಗುತ್ತದೆ. ನಿಮಗೆ ತಿಳಿದಿದೆ – ಅವಶ್ಯವಾಗಿ ಸ್ವರ್ಗದ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಯಾರು ಕಲ್ಪದ ಮೊದಲು ಪುರುಷಾರ್ಥ ಮಾಡಿರುವರೋ ಹಾಗೆಯೇ ಮಾಡುತ್ತಾರೆ. ಇದರಲ್ಲಿ ನಿಮಗೆ ಆಘಾತವಾಗಬಾರದು. ಯಾವ ಮಕ್ಕಳು ನಿಶ್ಚಯ ಬುದ್ದಿಯವರು ಆಗಿದ್ದಾರೆಯೋ ಅವರಿಗೆ ಎಂದೂ ಸಂಶಯ ಬರಲು ಸಾಧ್ಯವಿಲ್ಲ. ಸಂಶಯ ಬುದ್ಧಿಯವರು ಆಗಿ ಬಿಡುತ್ತಾರೆ. ತಂದೆಯು ಹೇಳಿದ್ದಾರೆ – ಆಶ್ಚರ್ಯವೆನಿಸುವಂತೆ ಕೇಳಿ ಅನ್ಯರಿಗೆ ಹೇಳಿ ನಡೆಯುತ್ತಾ ಮತ್ತೆ ಬಿಟ್ಟು ಹೋಗುತ್ತಾರೆ. ಓಹೋ ಮಾಯೆ ನೀನು ಇವರ ಮೇಲೆ ಜಯ ಗಳಿಸುತ್ತೀಯೇ? ಮಾಯೆಯು ಬಹಳ ಬಲಶಾಲಿಯಾಗಿದೆ. ಒಳ್ಳೊಳ್ಳೆಯ ಸರ್ವೀಸ್ ಮಾಡುವಂತಹ ಸೇವಾಕೇಂದ್ರವನ್ನು ನಡೆಸುವವರಿಗೂ ಸಹ ಮಾಯೆಯು ಪೆಟ್ಟು ಕೊಡುತ್ತದೆ. ಆಗ ಬಾಬಾ, ವಿವಾಹ ಮಾಡಿಕೊಂಡು ಮುಖ ಕಪ್ಪು ಮಾಡಿಕೊಂಡೆನು ಎಂದು ಬರೆಯುತ್ತಾರೆ. ಕಾಮದ ಕಟಾರಿಯಿಂದ ನಾವು ಸೋಲನ್ನು ಅನುಭವಿಸಿದೆವು. ಈಗಂತೂ ತಮ್ಮ ಸನ್ಮುಖದಲ್ಲಿಯೂ ಬರುವುದಕ್ಕೆ ಅರ್ಹರಲ್ಲ ಎಂದು ಹೇಳುತ್ತಾರೆ. ಪುನಃ ಬಾಬಾ, ನಾವು ಸನ್ಮುಖದಲ್ಲಿ ಬರಬೇಕೆನಿಸುತ್ತದೆ ಎಂದು ಬರೆಯುತ್ತಾರೆ. ಅದಕ್ಕೆ ತಂದೆಯು ಬರೆಯುತ್ತಾರೆ – ಮುಖ ಕಪ್ಪು ಮಾಡಿಕೊಂಡಿರಿ, ಈಗ ಇಲ್ಲಿ ನೀವು ಬರುವಂತಿಲ್ಲ, ಇಲ್ಲಿ ಬಂದು ಏನು ಮಾಡುತ್ತೀರಿ? ಅಲ್ಲಿಯೇ ಇದ್ದು ಪುರುಷಾರ್ಥ ಮಾಡಿರಿ, ಒಂದು ಸಲ ಬಿದ್ದರೆಂದರೆ ಬಿದ್ದರು, ರಾಜ್ಯ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಹೇಳಲಾಗುತ್ತದೆಯಲ್ಲವೆ – ಏರಿದರೆ ವೈಕುಂಠ ರಸ ಬಿದ್ದರೆ ಚಂಡಾಲರಾಗುವರು….. ಮೂಳೆಗಳು ಪುಡಿ ಪುಡಿಯಾಗುತ್ತವೆ. ಹೇಗೆ ಐದನೇ ಅಂತಸ್ತಿನಿಂದ ಬಿದ್ದಂತೆ. ಮತ್ತೆ ಕೆಲವರು ಸತ್ಯವನ್ನು ಬರೆಯುತ್ತಾರೆ, ಕೆಲವರು ತಿಳಿಸುವುದೇ ಇಲ್ಲ. ಇಂದ್ರಪ್ರಸ್ಥದ ದೇವತೆಗಳ ಉದಾಹರಣೆಯೂ ಇದೆಯಲ್ಲವೆ. ಇದ್ದೆಲ್ಲವೂ ಜ್ಞಾನದ ಮಾತಾಗಿದೆ. ಈ ಸಭೆಯಲ್ಲಿ ಪತಿತರು ಕುಳಿತುಕೊಳ್ಳಲು ಅನುಮತಿಯಿಲ್ಲ ಆದರೆ ಕೆಲವು ಸನ್ನಿವೇಶಗಳಲ್ಲಿ ಕುಳ್ಳರಿಸಬೇಕಾಗುತ್ತದೆ. ಪತಿತರೇ ಬರುವರಲ್ಲವೆ. ಈಗಂತೂ ನೋಡಿ, ಎಷ್ಟೊಂದು ದ್ರೌಪದಿಯರು ಹೋಗುತ್ತಾರೆ. ಬಾಬಾ, ನಮ್ಮನ್ನು ಅಪವಿತ್ರರಾಗುವುದರಿಂದ ಬಿಡಿಸಿ ಎಂದು ಹೇಳುತ್ತಾರೆ. ಬಂಧನದಲ್ಲಿ ಇರುವವರ ಪಾತ್ರವು ನಡೆಯುತ್ತದೆ. ಕಾಮೇಶು, ಕ್ರೋಧೇಶುಗಳು ಇರುತ್ತಾರಲ್ಲವೆ. ಇದರಿಂದ ಬಹಳ ಏರುಪೇರುಗಳಾಗುತ್ತವೆ. ತಂದೆಯ ಬಳಿ ಸಮಾಚಾರ ಬರುತ್ತದೆ, ಬೇಹದ್ದಿನ ತಂದೆಯು ಹೇಳುತ್ತಾರೆ – ಮಕ್ಕಳೇ, ಇದರ ಮೇಲೆ ಜಯ ಗಳಿಸಿರಿ, ಈಗ ಪವಿತ್ರರಾಗಿರಿ, ನನ್ನನ್ನು ನೆನಪು ಮಾಡಿರಿ ಆಗ ಗ್ಯಾರಂಟಿ ಏನೆಂದರೆ ನೀವು ವಿಶ್ವದ ಮಾಲೀಕರಾಗುವಿರಿ. ವಿಜ್ಞಾನಿಗಳು ಪತ್ರಿಕೆಗಳಲ್ಲಿಯೂ ಹಾಕುತ್ತಾರೆ, ಯಾರೋ ಪ್ರೇರಕರು ನಮ್ಮಿಂದ ಈ ಬಾಂಬುಗಳನ್ನು ತಯಾರು ಮಾಡಿಸುತ್ತಾರೆ. ಇದರಿಂದ ನಮ್ಮದೇ ಕುಲದ ನಾಶವಾಗುವುದು ಆದರೆ ಏನು ಮಾಡುವುದು ಡ್ರಾಮಾದಲ್ಲಿ ನಿಗಧಿಯಾಗಿದೆ. ದಿನ-ಪ್ರತಿದಿನ ತಯಾರಿಸುತ್ತಲೇ ಹೋಗುತ್ತಾರೆ. ಇನ್ನು ಸಮಯವಂತೂ ಬಹಳ ಇಲ್ಲ ಅಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸತ್ಯಯುಗೀ ಪ್ರೀತಿಯ ರಾಜಧಾನಿಯಲ್ಲಿ ಹೋಗುವುದಕ್ಕಾಗಿ ಬಹಳ-ಬಹಳ ಪ್ರಿಯರಾಗಬೇಕಾಗಿದೆ. ರಾಜ್ಯ ಪದವಿಗಾಗಿ ಅವಶ್ಯವಾಗಿ ಪಾವನರಾಗಬೇಕಾಗಿದೆ. ಮೊದಲನೆಯದು ಪವಿತ್ರತೆಯಾಗಿದೆ, ಆದ್ದರಿಂದ ಕಾಮ ಮಹಾಶತ್ರುವಿನ ಮೇಲೆ ಜಯ ಗಳಿಸಬೇಕಾಗಿದೆ.

2. ಈ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗಿಗಳಾಗುವುದಕ್ಕಾಗಿ ಈ ಕಣ್ಣುಗಳಿಂದ ದೇಹ ಸಹಿತ ಏನೆಲ್ಲವೂ ಕಾಣುತ್ತಿದೆಯೋ ಎಲ್ಲವನ್ನೂ ನೋಡಿಯೂ ನೋಡದಂತಿರಬೇಕು. ಪ್ರತೀ ಹೆಜ್ಜೆಯಲ್ಲಿ ತಂದೆಯಿಂದ ಸಲಹೆ ತೆಗೆದುಕೊಂಡು ನಡೆಯಬೇಕಾಗಿದೆ.

ವರದಾನ:-

ಯಾರು ಶಕ್ತಿಶಾಲಿ ಆತ್ಮರಾಗಿರುತ್ತಾರೆಯೋ ಅವರು ಈ ರೀತಿ ಸಮಸ್ಯೆಗಳನ್ನು ಪಾರು ಮಾಡಿ ಬಿಡುತ್ತಾರೆ, ಹೇಗೆಂದರೆ ಯಾವುದೋ ನೇರವಾದ ಮಾರ್ಗವನ್ನು ಸಹಜವಾಗಿಯೇ ಪಾರು ಮಾಡಿದಂತೆ. ಅವರಿಗಾಗಿ ಸಮಸ್ಯೆಗಳು ಏರುವ ಕಲೆಯ ಸಾಧನ ಆಗಿ ಬಿಡುತ್ತದೆ. ಪ್ರತಿಯೊಂದು ಸಮಸ್ಯೆಯು ನಮಗೆ ಗೊತ್ತಿದೆ ಎನ್ನುವಂತೆ ಅನುಭವವಾಗುವುದು. ಅವರೆಂದಿಗೂ ಆಶ್ಚರ್ಯ ಪಡುವುದಿಲ್ಲ ಆದರೆ ಸದಾ ಸಂತುಷ್ಟವಾಗಿ ಇರುತ್ತಾರೆ. ಮುಖದಿಂದ ಎಂದಿಗೂ ಕಾರಣವೆಂಬ ಶಬ್ಧವೇ ಬರುವುದಿಲ್ಲ ಆದರೆ ಅದೇ ಸಮಯದಲ್ಲಿ ಕಾರಣವನ್ನು ನಿವಾರಣೆಯಲ್ಲಿ ಪರಿವರ್ತಿಸುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top