13 October 2021 KANNADA Murli Today | Brahma Kumaris

Read and Listen today’s Gyan Murli in Kannada

October 12, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ರಕ್ತ ಸಂಬಂಧದಲ್ಲಿಯೇ ದುಃಖವಿದೆ, ನೀವು ಅದರ ತ್ಯಾಗ ಮಾಡಿ ಪರಸ್ಪರದಲ್ಲಿ ಆತ್ಮಿಕ ಪ್ರೀತಿಯನ್ನು ಇಡಬೇಕಾಗಿದೆ, ಇದೇ ಸುಖ ಮತ್ತು ಆನಂದಕ್ಕೆ ಆಧಾರವಾಗಿದೆ”

ಪ್ರಶ್ನೆ:: -

ವಿಜಯ ಮಾಲೆಯಲ್ಲಿ ಬರಲು ವಿಶೇಷವಾಗಿ ಯಾವ ಪುರುಷಾರ್ಥ ಮಾಡಬೇಕಾಗಿದೆ?

ಉತ್ತರ:-

ವಿಜಯ ಮಾಲೆಯಲ್ಲಿ ಬರಬೇಕೆಂದರೆ ವಿಶೇಷವಾಗಿ ಪವಿತ್ರರಾಗುವ ಪುರುಷಾರ್ಥ ಮಾಡಿರಿ. ಯಾವಾಗ ಪಕ್ಕಾ ಸನ್ಯಾಸಿಗಳು ಅರ್ಥಾತ್ ನಿರ್ವಿಕಾರಿಗಳಾಗುತ್ತೀರೋ ಆಗ ವಿಜಯ ಮಾಲೆಯ ಮಣಿಯಾಗುತ್ತೀರಿ. ಯಾವುದೇ ಕರ್ಮಬಂಧನದ ಲೆಕ್ಕಾಚಾರವಿದ್ದರೆ ವಾರಸುಧಾರರಾಗಲು ಸಾಧ್ಯವಿಲ್ಲ, ಪ್ರಜೆಗಳಲ್ಲಿ ಬರುತ್ತೀರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸಭೆಯಲ್ಲಿ ಜ್ಯೋತಿ ಬೆಳಗಿತು ಪತಂಗಗಳಿಗಾಗಿ……

ಓಂ ಶಾಂತಿ. ನೋಡಿ, ನಾವು ನಮ್ಮ ತಂದೆಯದೇ ಮಹಿಮೆ ಮಾಡುತ್ತೇವೆ. ನಾವಾತ್ಮರು ಅವಶ್ಯವಾಗಿ ನಮ್ಮ ತಂದೆಯ ಪ್ರತ್ಯಕ್ಷತೆ ಮಾಡುತ್ತೇವೆ ಅಲ್ಲವೆ. ಸನ್ ಶೋಜ್ ಫಾದರ್ ಅಂದಾಗ ನಾನು ಆತ್ಮ, ನೀವೂ ಸಹ ಹೇಳುತ್ತೀರಿ, ನಾವು ಆತ್ಮರಾಗಿದ್ದೇವೆ. ನಮ್ಮೆಲ್ಲರ ತಂದೆಯು ಒಬ್ಬ ಪರಮಾತ್ಮನಾಗಿದ್ದಾರೆ, ಅವರು ಎಲ್ಲರ ಪಿತನಾಗಿದ್ದಾರೆ, ಇದನ್ನು ಎಲ್ಲರೂ ಒಪ್ಪುವರು. ನಾವಾತ್ಮರ ತಂದೆಯು ಬೇರೆ-ಬೇರೆಯಾಗಿದ್ದಾರೆ ಎಂದು ಹೇಳುವುದಿಲ್ಲ. ನಮ್ಮೆಲ್ಲರಿಗೆ ಒಬ್ಬರೇ ತಂದೆಯಾಗಿದ್ದಾರೆ, ನಾವೀಗ ಅವರ ಮಕ್ಕಳಾಗಿರುವ ಕಾರಣ ಅವರ ಪರಿಚಯವನ್ನು ತಿಳಿದುಕೊಂಡಿದ್ದೇವೆ. ಪರಮಾತ್ಮ ಸರ್ವವ್ಯಾಪಿಯೆಂದು ನಾವು ಹೇಳಲು ಸಾಧ್ಯವಿಲ್ಲ, ಹಾಗೆ ಹೇಳುವುದಾದರೆ ಎಲ್ಲರಲ್ಲಿ ಪರಮಾತ್ಮನಿದ್ದಾರೆ ಎಂದಾಗುತ್ತದೆ. ತಂದೆಯನ್ನು ನೆನಪು ಮಾಡಿ, ಮಕ್ಕಳು ಖುಷಿ ಪಡುತ್ತೀರಿ ಏಕೆಂದರೆ ತಂದೆಯ ಬಳಿ ಏನೆಲ್ಲವೂ ಇರುತ್ತದೆಯೋ ಆ ಆಸ್ತಿಯೆಲ್ಲವೂ ಮಕ್ಕಳಿಗೆ ಸಿಗುತ್ತದೆ. ನಾವೀಗ ಪರಮಾತ್ಮನಿಗೇ ವಾರಸುಧಾರರಾಗಿದ್ದೇವೆ, ಅವರ ಬಳಿ ಏನಿದೆ? ಅವರು ಆನಂದ ಸಾಗರ, ಜ್ಞಾನ ಸಾಗರ, ಪ್ರೇಮ ಸಾಗರನಾಗಿದ್ದಾರೆ. ನಮಗೆ ಗೊತ್ತಿದೆ ಆದ್ದರಿಂದಲೇ ನಾವು ಅವರ ಮಹಿಮೆ ಮಾಡುತ್ತೇವೆ. ಅನ್ಯರು ಈ ರೀತಿ ಹೇಳುವುದಿಲ್ಲ. ಭಲೆ ಕೆಲವರು ಹೇಳಲೂಬಹುದು ಆದರೆ ಅವರು ಹೇಗಿದ್ದಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಉಳಿದೆಲ್ಲರೂ ಪರಮಾತ್ಮ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ ಆದರೆ ನಾವು ಅವರ ಮಕ್ಕಳಾಗಿದ್ದೇವೆ ಆದ್ದರಿಂದ ನಾವು ನಿರಾಕಾರ ಅವಿನಾಶಿ ತಂದೆಯ ಮಹಿಮೆ, ವರ್ಣನೆ ಮಾಡುತ್ತೇವೆ – ಅವರು ಆನಂದ ಸಾಗರ, ಜ್ಞಾನ ಸಾಗರ, ಪ್ರೇಮದ ಭಂಡಾರವಾಗಿದ್ದಾರೆ. ಆದರೆ ಯಾರಿಗಾದರೂ ಪ್ರಶ್ನೆ ಬರಬಹುದು – ನಿರಾಕಾರಿ ಪ್ರಪಂಚದಲ್ಲಿ ಸುಖ, ದುಃಖದಿಂದ ಭಿನ್ನವಾದ ಸ್ಥಿತಿಯಿರುತ್ತದೆ ಎಂದು ತಾವು ಹೇಳುತ್ತೀರಿ ಅಂದಮೇಲೆ ಅಲ್ಲಿ ಸುಖ ಅಥವಾ ಆನಂದ ಅಥವಾ ಪ್ರೇಮವೆಲ್ಲಿಂದ ಬಂದಿತು ಎಂದು ಕೇಳುತ್ತಾರೆ. ಈಗ ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಆನಂದ, ಸುಖ ಅಥವಾ ಪ್ರೇಮ ಇದೆಲ್ಲವೂ ಸುಖದ ಸ್ಥಿತಿಯಾಗಿದೆ ಆದರೆ ಅಲ್ಲಿ ಶಾಂತಿಯ ದೇಶದಲ್ಲಿ ಆನಂದ, ಪ್ರೇಮ ಅಥವಾ ಜ್ಞಾನವೆಲ್ಲಿಂದ ಬಂದಿತು? ಆ ಸುಖದ ಸಾಗರನು ಯಾವಾಗ ಸೃಷ್ಟಿಯಲ್ಲಿ ಬರುತ್ತಾರೆಯೋ ಆಗ ಸುಖವನ್ನು ಕೊಡುತ್ತಾರೆ. ಶಾಂತಿಧಾಮದಲ್ಲಿದ್ದಾಗ ಸುಖ-ದುಃಖದಿಂದ ಭಿನ್ನ ಸ್ಥಿತಿಯಲ್ಲಿರುತ್ತಾರೆ ಏಕೆಂದರೆ ನಿಮಗೆ ತಿಳಿಸಲಾಗಿದೆ – ಒಂದು ಸುಖ-ದುಃಖದಿಂದ ಭಿನ್ನ ಪ್ರಪಂಚವಾಗಿದೆ ಯಾವುದಕ್ಕೆ ನಿರಾಕಾರಿ ಪ್ರಪಂಚವೆಂದು ಹೇಳುತ್ತಾರೆ. ಇನ್ನೊಂದು ಸುಖದ ಪ್ರಪಂಚವಾಗಿದೆ ಎಲ್ಲಿ ಸದಾ ಸುಖ, ಆನಂದ ಇರುತ್ತದೆ ಅದಕ್ಕೆ ಸ್ವರ್ಗವೆಂದು ಹೇಳುತ್ತಾರೆ ಮತ್ತು ಇದು ದುಃಖದ ಪ್ರಪಂಚವಾಗಿದೆ, ಇದಕ್ಕೆ ನರಕ ಅಥವಾ ತಮೋಪ್ರಧಾನ ಪ್ರಪಂಚವೆಂದು ಹೇಳುತ್ತಾರೆ. ಈಗ ಈ ಕಲಿಯುಗವನ್ನು ಪರಮಪಿತ ಪರಮಾತ್ಮನು ಯಾರು ಸುಖದ ಸಾಗರನಾಗಿದ್ದಾರೆಯೋ ಅವರೇ ಬಂದು ಇದನ್ನು ಪರಿವರ್ತನೆ ಮಾಡಿ ಆನಂದ, ಸುಖ, ಪ್ರೇಮದ ಭಂಡಾರವನ್ನಾಗಿ ಮಾಡುತ್ತಾರೆ ಎಲ್ಲಿ ಸುಖವೇ ಸುಖವಿರುತ್ತದೆ, ಪ್ರೇಮವೇ ಪ್ರೇಮವಿರುತ್ತದೆ ಅಲ್ಲಿ ಪ್ರಾಣಿಗಳಲ್ಲಿಯೂ ಪರಸ್ಪರ ಬಹಳ ಪ್ರೇಮವಿರುತ್ತದೆ. ಹುಲಿ, ಹಸು ಒಟ್ಟಿಗೆ ನೀರು ಕುಡಿಯುತ್ತದೆ, ಅವುಗಳಲ್ಲಿಯೂ ಇಷ್ಟೊಂದು ಪ್ರೇಮವಿರುತ್ತದೆ ಅಂದಾಗ ಪರಮಾತ್ಮನು ಬಂದು ಯಾವ ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆಯೋ ಅದರಲ್ಲಿ ಸುಖ ಮತ್ತು ಆನಂದವಿರುತ್ತದೆ ಬಾಕಿ ಪರಮಧಾಮದಲ್ಲಿ ಸುಖ, ಆನಂದದ ಮಾತೇ ಇರುವುದಿಲ್ಲ. ಪ್ರೇಮದ ಮಾತಿರುವುದಿಲ್ಲ. ಅದು ನಿರಾಕಾರಿ ಆತ್ಮರ ನಿವಾಸ ಸ್ಥಾನವಾಗಿದೆ. ಅದು ಎಲ್ಲರ ನಿವೃತ್ತ ಜೀವನ ಅಥವಾ ನಿರ್ವಾಣ ಸ್ಥಿತಿಯಾಗಿದೆ. ಅಲ್ಲಿ ಯಾವುದೇ ಸುಖ-ದುಃಖದ ಅನುಭೂತಿಯಿರುವುದಿಲ್ಲ. ಆ ಸುಖ-ದುಃಖದ ಪಾತ್ರವು ಈ ಸಾಕಾರ ಪ್ರಪಂಚದಲ್ಲಿಯೇ ನಡೆಯುತ್ತದೆ, ಇದೇ ಸೃಷ್ಟಿಯಲ್ಲಿ ಸ್ವರ್ಗವಿದ್ದಾಗ ಅವಿನಾಶಿ ಆತ್ಮಿಕ ಪ್ರೀತಿಯಿರುತ್ತದೆ ಏಕೆಂದರೆ ರಕ್ತ ಸಂಬಂಧದಲ್ಲಿ ದುಃಖವಿದೆ, ಸನ್ಯಾಸಿಗಳಲ್ಲಿಯೂ ರಕ್ತ ಸಂಬಂಧವಿರುವುದಿಲ್ಲ ಆದ್ದರಿಂದ ಅವರಲ್ಲಿಯೂ ಯಾವುದೇ ದುಃಖದ ಮಾತಿರುವುದಿಲ್ಲ. ನಾನು ಸತ್ಚಿತ್ ಆನಂದ ಸ್ವರೂಪನಾಗಿದ್ದೇನೆ ಎಂದು ಅವರು ಹೇಳುತ್ತಾರೆ ಏಕೆಂದರೆ ರಕ್ತ ಸಂಬಂಧವನ್ನು ತ್ಯಜಿಸುತ್ತಾರೆ ಹಾಗೆಯೇ ಇಲ್ಲಿ ನಿಮ್ಮದೂ ಸಹ ಯಾವುದೇ ರಕ್ತ ಸಂಬಂಧವಿಲ್ಲ, ಇಲ್ಲಿ ನಮ್ಮೆಲ್ಲರದು ಆತ್ಮಿಕ ಪ್ರೀತಿಯಾಗಿದೆ, ಅದನ್ನು ಪರಮಾತ್ಮನು ಕಲಿಸುತ್ತಾರೆ.

ತಂದೆಯು ತಿಳಿಸುತ್ತಾರೆ – ನೀವು ನನ್ನ ಅತಿ ಪ್ರಿಯ ಮಕ್ಕಳಾಗಿದ್ದೀರಿ. ನನ್ನ ಆನಂದ, ಪ್ರೇಮ, ಸುಖವು ನಿಮ್ಮದಾಗಿದೆ ಏಕೆಂದರೆ ನೀವು ಆ ಪ್ರಪಂಚವನ್ನು ಬಿಟ್ಟು ಬಂದು ನನ್ನ ಮಡಿಲಲ್ಲಿ ಸೇರಿದ್ದೀರಿ. ಇದು ನೀವು ಪ್ರತ್ಯಕ್ಷ ಜೀವನದಲ್ಲಿ ಬಂದು ಮಡಿಲಿನಲ್ಲಿ ಕುಳಿತಿದ್ದೀರಿ. ಇದು ಹೇಗೆ ಆ ಗುರುವಿನ ಮಡಿಲನ್ನು ತೆಗೆದುಕೊಂಡು ಮತ್ತೆ ತಮ್ಮ ಮನೆಗೆ ಹೊರಟು ಹೋಗುವ ಮಾತಲ್ಲ. ಅವರಿಗೆ ಅತಿ ಪ್ರಿಯ ಮಕ್ಕಳೆಂದು ಹೇಳುವುದಿಲ್ಲ. ಹೇಗೆ ಗುರುಗಳಿಗೆ ಅವರು ಪ್ರಜೆಗಳಿದ್ದಂತೆ. ಬಾಕಿ ಯಾರು ಗುರುವಿನಂತೆ ಸನ್ಯಾಸ ಮಾಡಿ ಅವರ ಮಡಿಲನ್ನೂ ಪಡೆಯುತ್ತಾರೆಯೋ ಅವರೇ ಪ್ರಿಯ ಮಕ್ಕಳಾಗುತ್ತಾರೆ ಏಕೆಂದರೆ ಅವರೇ ಗುರುವಿನ ನಂತರ ಅವರ ಗದ್ದುಗೆಯನ್ನು ಏರುತ್ತಾರೆ. ಮಕ್ಕಳು ಮತ್ತು ಪ್ರಜೆಗಳಲ್ಲಿ ರಾತ್ರಿ-ಹಗಲಿನ ಅಂತರವಿದೆ. ಮಕ್ಕಳು ವಾರಸುಧಾರರಾಗಿ ಆಸ್ತಿಯನ್ನು ಪಡೆಯುತ್ತಾರೆ. ಹೇಗೆ ನೀವು ಅವರಿಂದ ರಕ್ತ ಸಂಬಂಧವನ್ನು ಬಿಟ್ಟು ಈ ನಿರಾಕಾರ ಹಾಗೂ ಸಾಕಾರ ತಂದೆಯ ಮಡಿಲನ್ನು ಪಡೆದಿದ್ದೀರಿ ಆದ್ದರಿಂದ ವಾರಸುಧಾರರಾಗಿ ಬಿಟ್ಟಿದ್ದೀರಿ. ಇದರಲ್ಲಿಯೇ ಎಷ್ಟು ಜ್ಞಾನವನ್ನು ತೆಗೆದುಕೊಳ್ಳುವರೋ ಅಷ್ಟು ಅವರ ಅದೃಷ್ಟ. ವಿದ್ಯೆಗೆ ಅದೃಷ್ಟವೆಂದು ಹೇಳಲಾಗುತ್ತದೆ ಅಂದಾಗ ಎಷ್ಟು ವಿದ್ಯೆಯನ್ನು ಓದುವರೋ ಅಷ್ಟು ಆ ರಾಜಧಾನಿಯಲ್ಲಿ ಪ್ರಜೆಗಳಲ್ಲಿ ಸುಖ ಪಡೆಯುವರು. ಈ ಈಶ್ವರೀಯ ವಿದ್ಯೆಯು ಅದೃಷ್ಟವಲ್ಲವೆ. ಇದರಿಂದ ಪರಮ ಶಾಂತಿ ಮತ್ತು ಸಂತೋಷ ಸಿಗುತ್ತದೆ. ಈ ಅಟಲ, ಅಖಂಡ, ಸುಖ-ಶಾಂತಿಮಯ ಸ್ವರಾಜ್ಯವು ಈಶ್ವರನ ಆಸ್ತಿಯಾಗಿದೆ. ಅದು ಮಕ್ಕಳಿಗೆ ಸಿಗುತ್ತದೆ. ಯಾರು ಎಷ್ಟೆಷ್ಟು ಜ್ಞಾನವನ್ನು ಪಡೆದುಕೊಳ್ಳುವರೋ ಅಷ್ಟು ತಂದೆಯ ಆಸ್ತಿಯು ಸಿಗುವುದು. ಹೇಗೆ ನಿಮ್ಮ ಬಳಿ ಇಷ್ಟೊಂದು ಜಿಜ್ಞಾಸುಗಳು ಬರುತ್ತಾರೆ, ಅವರು ನಿಮ್ಮ ಪ್ರಿಯ ಪ್ರಜೆಗಳಾಗಿದ್ದಾರೆ. ಮಕ್ಕಳಲ್ಲ ಏಕೆಂದರೆ ಬಂದು ಹೋಗುತ್ತಾ ಇರುತ್ತಾರೆ. ಮಕ್ಕಳೂ ಆಗಬಹುದು ಏಕೆಂದರೆ ಪ್ರಜೆಗಳಲ್ಲಿ ಕೆಲವರು ವಾರಸುಧಾರರೂ ಆಗುತ್ತಾರೆ, ಜ್ಞಾನವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಯಾವಾಗ ಇಲ್ಲಿ ಅಪಾರ ಸುಖ ಮತ್ತು ಶಾಂತಿಯಿದೆ, ಆ ಪ್ರಪಂಚದಲ್ಲಿ ದುಃಖವಿದೆಯೆಂದು ನೋಡುತ್ತಾರೆಯೋ ಆಗ ಬಂದು ಮಡಿಲನ್ನು (ಸಮರ್ಪಣೆ) ತೆಗೆದುಕೊಳ್ಳುತ್ತಾರೆ. ಕೂಡಲೇ ಯಾರೂ ಮಕ್ಕಳಾಗಿ ಬಿಡುವುದಿಲ್ಲ. ನೀವೂ ಸಹ ಬಂದು ಹೋಗುತ್ತಿದ್ದಿರಿ, ನಂತರ ಕೇಳುತ್ತಾ-ಕೇಳುತ್ತಾ ಇಲ್ಲಿಯೇ ಉಳಿದುಕೊಂಡಿರಿ, ವಾರಸುಧಾರರಾದಿರಿ. ಸನ್ಯಾಸಿಗಳ ಬಳಿಯೂ ಇದೇರೀತಿ ಆಗುತ್ತದೆ. ಸನ್ಯಾಸಿಗಳಿಂದ ಜ್ಞಾನವನ್ನು ಕೇಳುತ್ತಾ-ಕೇಳುತ್ತಾ ಸನ್ಯಾಸತ್ವದಲ್ಲಿ ಸುಖ-ಶಾಂತಿ ಇದೆ ಎಂಬುದು ತಿಳಿದಾಗ ಅವರೂ ಸನ್ಯಾಸ ಮಾಡುತ್ತಾರೆ. ಇಲ್ಲಿಯೂ ಸಹ ಯಾವಾಗ ರುಚಿ ಬಂದು ಬಿಡುತ್ತದೆಯೋ ಆಗ ಪ್ರಿಯ ಮಕ್ಕಳಾಗುತ್ತಾರೆ, ಇದರಿಂದ ಜನ್ಮ-ಜನ್ಮಾಂತರಕ್ಕಾಗಿ ಆಸ್ತಿ ಸಿಗುತ್ತದೆ. ಅವರು ಮತ್ತೆ ದೈವೀ ವೃಕ್ಷದಲ್ಲಿ ಬರುತ್ತಾ ಇರುತ್ತಾರೆ. ಪ್ರಜೆಗಳಂತೂ ಜೊತೆಯಿರುವುದಿಲ್ಲ. ಅವರು ಎಲ್ಲೆಲ್ಲಿಯೋ ಕರ್ಮ ಬಂಧನದಲ್ಲಿ ಹೊರಟು ಹೋಗುತ್ತಾರೆ. ಹೇಗೆ ಗೀತೆಯನ್ನು ಹೇಳುತ್ತಾರೆ – ಸಭೆಯಲ್ಲಿ ಪತಂಗಗಳಿಗಾಗಿ ಜ್ಯೋತಿ ಬೆಳಗಿತು. ಜ್ಯೋತಿಯ ಸುತ್ತಲೂ ಪತಂಗಗಳು ಸುತ್ತುತ್ತಾ ಸತ್ತು ಹೋಗುತ್ತವೆ, ಇನ್ನೂ ಕೆಲವು ಸುತ್ತಿ, ಸುತ್ತಿ ಹಿಂತಿರುಗಿ ಹೊರಟು ಹೋಗುತ್ತವೆ. ಈ ಶರೀರವೂ (ಬ್ರಹ್ಮಾ) ಸಹ ಒಂದು ಜ್ಯೋತಿಯಾಗಿ, ಇದರಲ್ಲಿ ಆಲ್ಮೈಟಿ ತಂದೆಯ ಪ್ರವೇಶತೆಯಾಗಿದೆ, ನೀವು ಪತಂಗಗಳಾಗಿ ಬಂದಿರಿ. ಬಂದು-ಹೋಗುತ್ತಾ ಕೊನೆಗೆ ಯಾವಾಗ ರಹಸ್ಯವನ್ನು ತಿಳಿದುಕೊಂಡಿರೋ ಆಗ ಇಲ್ಲಿಯೇ ಕುಳಿತುಬಿಟ್ಟಿರಿ. ಲಕ್ಷಾಂತರ ಮಂದಿ ಬರುತ್ತಾರೆ, ನಿಮ್ಮ ಮುಖಾಂತರ ಜ್ಞಾನವನ್ನು ಕೇಳುತ್ತಾರೆ. ಅವರೆಷ್ಟು ಕೇಳುವರೋ ಅಷ್ಟು ಶಾಂತಿ ಮತ್ತು ಆನಂದದ ವರದಾನವನ್ನು ತೆಗೆದುಕೊಳ್ಳುತ್ತಾ ಹೋಗುತ್ತಾರೆ ಏಕೆಂದರೆ ಈ ಅವಿನಾಶಿ ತಂದೆಯ ಶಿಕ್ಷಣವು ಎಂದೂ ವಿನಾಶ ಹೊಂದುವುದಿಲ್ಲ. ಇದಕ್ಕೆ ಅವಿನಾಶಿ ಜ್ಞಾನ ಧನವೆಂದು ಹೇಳುತ್ತಾರೆ, ಎಂದೂ ಇದರ ವಿನಾಶವಾಗುವುದಿಲ್ಲ ಆದ್ದರಿಂದ ಯಾರಾದರೂ ಅಲ್ಪಸ್ವಲ್ಪ ಕೇಳಿದರೂ ಸಹ ಅವರು ಪ್ರಜೆಗಳಲ್ಲಿ ಬರುತ್ತಾರೆ. ಅಲ್ಲಂತೂ ಪ್ರಜೆಗಳೂ ಸಹ ಬಹಳ-ಬಹಳ ಸುಖಿಯಾಗಿರುತ್ತಾರೆ. ಅವಿನಾಶಿ ಆನಂದವಿರುತ್ತದೆ ಏಕೆಂದರೆ ಅಲ್ಲಿ ಎಲ್ಲರೂ ಆತ್ಮಾಭಿಮಾನಿಯಾಗಿರುತ್ತಾರೆ. ಇಲ್ಲಿ ದೇಹಾಭಿಮಾನಿಗಳಾಗಿ ಬಿಟ್ಟಿದ್ದಾರೆ ಆದ್ದರಿಂದ ದುಃಖಿಯಾಗಿದ್ದಾರೆ. ಅಲ್ಲಿ ಸ್ವರ್ಗವಿರುತ್ತದೆ, ದುಃಖದ ಹೆಸರು-ಗುರುತು ಇರುವುದಿಲ್ಲ. ಪ್ರಾಣಿಗಳೇ ಎಷ್ಟು ಸುಖ-ಶಾಂತಿಯಲ್ಲಿರುತ್ತವೆ ಅಂದಮೇಲೆ ಪ್ರಜೆಗಳಲ್ಲಿ ಇನ್ನೆಷ್ಟು ಪ್ರೇಮ, ಸುಖವಿರಬಹುದು! ಇದಂತೂ ನಿಶ್ಚಿತವಾಗಿದೆ, ಎಲ್ಲರೂ ವಾರಸುಧಾರರಾಗಲು ಸಾಧ್ಯವಿಲ್ಲ. ಇಲ್ಲಿ 108 ಮಂದಿ ಪಕ್ಕಾ ಸನ್ಯಾಸಿಗಳೇ ವಿಜಯಮಾಲೆಯ ಮಣಿಗಳಾಗುವರು. ಆ ಮಾಲೆಯೂ ಸಹ ಈಗಿನ್ನೂ ತಯಾರಾಗಿಲ್ಲ, ಆಗುತ್ತಿದ್ದಾರೆ. ಜೊತೆ ಜೊತೆಯಲ್ಲಿ ಪ್ರಜೆಗಳೂ ತಯಾರಾಗುತ್ತಿದ್ದಾರೆ, ಅವರೂ ಸಹ ಹೊರಗಡೆಯಿದ್ದು ಕೇಳುತ್ತಿರುತ್ತಾರೆ. ಮನೆಯಲ್ಲಿ ಇದ್ದುಕೊಂಡೇ ಯೋಗ ಮಾಡುತ್ತಿರುತ್ತಾರೆ, ಯೋಗ ಮಾಡುತ್ತಾ-ಮಾಡುತ್ತಾ ಕೆಲವರು ಒಳಗೆ ಬಂದು ಬಿಡುತ್ತಾರೆ ಅರ್ಥಾತ್ ಸಂಪೂರ್ಣ ಸಮರ್ಪಣೆಯಾಗುತ್ತಾರೆ ಆಗ ಪ್ರಜೆಗಳಿಂದ ವಾರಸುಧಾರರಾಗುತ್ತಾರೆ. ಎಲ್ಲಿಯವರೆಗೆ ಕರ್ಮಬಂಧನದ ಲೆಕ್ಕಾಚಾರವಿರುವುದೋ ಅಲ್ಲಿಯವರೆಗೆ ಹೊರಗಡೆಯಿದ್ದು ಯೋಗ ಮಾಡುತ್ತಾ ನಿರ್ವಿಕಾರಿಗಳಾಗುತ್ತಾ ಬರುತ್ತಾರೆ ನಂತರ ಮನೆಯಲ್ಲಿದ್ದು ನಿರ್ವಿಕಾರಿಗಳಾಗಿದ್ದಾಗ ಮನೆಯಲ್ಲಿ ಅವಶ್ಯವಾಗಿ ಜಗಳವಾಗುವುದು ಏಕೆಂದರೆ ಕಾಮೇಶು ಕ್ರೋಧೆಶು…. ಕಾಮ ಮಹಾಶತ್ರುವಿನ ಮೇಲೆ ಯಾವಾಗ ನೀವು ಜಯ ಗಳಿಸುತ್ತೀರೋ ವಿಕಾರದಲ್ಲಿ ಹೋಗುವುದನ್ನು ನಿಲ್ಲಿಸುತ್ತೀರೋ ಆಗ ಮನೆಯಲ್ಲಿ ಜಗಳವಾಗುತ್ತದೆ.

ಪರಮಾತ್ಮನಂತೂ ಹೇಳುತ್ತಾರೆ – ಮಕ್ಕಳೇ, ಮೃತ್ಯು ಸನ್ಮುಖದಲ್ಲಿ ನಿಂತಿದೆ. ಇಡೀ ಪ್ರಪಂಚವು ವಿನಾಶವಾಗಲಿದೆ. ಹೇಗೆ ವೃದ್ಧರಿಗೆ ಹೇಳುತ್ತಾರೆ – ಮೃತ್ಯು ಸನ್ಮುಖದಲ್ಲಿದೆ ಪರಮಾತ್ಮನನ್ನು ನೆನಪು ಮಾಡಿರಿ ಎಂದು. ಹಾಗೆಯೇ ತಂದೆಯೂ ಹೇಳುತ್ತಾರೆ – ಮಕ್ಕಳೇ, ನಿರ್ವಿಕಾರಿಗಳಾಗಿ ಪರಮಾತ್ಮನನ್ನು ನೆನಪು ಮಾಡಿರಿ. ಹೇಗೆ ತೀರ್ಥ ಯಾತ್ರೆಗೆ ಹೋಗುತ್ತಾರೆಂದರೆ ಕಾಮ, ಕ್ರೋಧ ಎಲ್ಲವನ್ನೂ ನಿಲ್ಲಿಸಿ ಬಿಡುತ್ತಾರೆ. ಮಾರ್ಗದಲ್ಲಿ ಕಾಮ ಚೇಷ್ಠೆಯನ್ನು ಮಾಡುವುದಿಲ್ಲ, ಹೋಗುವವರೆಗೂ ಅಮರನಾಥನಿಗೆ ಜೈ ಜೈ ಎಂದು ಹೇಳುತ್ತಾ ಹೋಗುತ್ತಾರೆ ಆದರೆ ಹಿಂತಿರುಗುತ್ತಾರೆಂದರೆ ಮತ್ತೆ ಅದೇ ವಿಕಾರಗಳಲ್ಲಿ ಮುಳುಗುತ್ತಾ ಇರುತ್ತಾರೆ, ನೀವಂತೂ ಹಿಂತಿರುಗಿ ಬರುವಂತಿಲ್ಲ, ಕಾಮ-ಕ್ರೋಧವು ಬರಬಾರದಾಗಿದೆ. ವಿಕಾರದಲ್ಲಿ ಹೋದರೆ ಪದವಿ ಭ್ರಷ್ಟರಾಗುತ್ತೀರಿ, ಪವಿತ್ರರಾಗುವುದಿಲ್ಲ. ಯಾರು ಪವಿತ್ರರಾಗುವರೋ ಅವರು ವಿಜಯ ಮಾಲೆಯಲ್ಲಿ ಬರುತ್ತಾರೆ. ಯಾರು ಅನುತ್ತೀರ್ಣರಾಗುವರೋ ಅವರು ಚಂದ್ರವಂಶಿ ಮನೆತನದಲ್ಲಿ ಬರುವರು.

ನಿಮ್ಮೆಲ್ಲರಿಗೆ ಇಲ್ಲಿ ಪರಮಪಿತ ಪರಮಾತ್ಮನೇ ಕುಳಿತು ಓದಿಸುತ್ತಾರೆ, ಆ ಜ್ಞಾನ ಸಾಗರ ತಂದೆಯೇ ಆಗಿದ್ದಾರಲ್ಲವೆ. ಆ ನಿರಾಕಾರಿ ಪ್ರಪಂಚದಲ್ಲಿ ಆತ್ಮರಿಗೆ ಕುಳಿತು ಜ್ಞಾನವನ್ನು ತಿಳಿಸುವುದಿಲ್ಲ. ಇಲ್ಲಿ ಬಂದು ನಿಮಗೇ ಜ್ಞಾನವನ್ನು ತಿಳಿಸುತ್ತಾರೆ. ನೀವು ನನ್ನ ಮಕ್ಕಳಾಗಿದ್ದೀರಿ. ಹೇಗೆ ನಾನು ಪಾವನನಾಗಿದ್ದೇನೆಯೋ ಹಾಗೆಯೇ ನೀವೂ ಪಾವನರಾಗಿ ಎಂದು ಹೇಳುತ್ತಾರೆ ಆಗಲೇ ನೀವು ಸತ್ಯಯುಗದಲ್ಲಿ ಸುಖಮಯ, ಪ್ರೇಮಮಯ ರಾಜ್ಯಭಾರ ಮಾಡುತ್ತೀರಿ ಯಾವುದಕ್ಕೆ ವೈಕುಂಠವೆಂದು ಹೇಳುತ್ತಾರೆ. ಈಗ ಈ ಪ್ರಪಂಚವು ಬದಲಾಗುತ್ತಿದೆ ಏಕೆಂದರೆ ಕಲಿಯುಗದಿಂದ ಸತ್ಯಯುಗವಾಗುತ್ತಿದೆ ಮತ್ತೆ ಸತ್ಯಯುಗದಿಂದ ತ್ರೇತಾಯುಗಕ್ಕೆ ಬದಲಾಗುತ್ತದೆ. ತ್ರೇತಾ ಯುಗದಿಂದ ದ್ವಾಪರ ಯುಗ, ಮತ್ತೆ ದ್ವಾಪರ ಯುಗದಿಂದ ಕಲಿಯುಗವಾಗುತ್ತಾ ಹೋಗುತ್ತದೆ. ಹೀಗೆ ಪ್ರಪಂಚವು ಬದಲಾಗುತ್ತಿರುತ್ತದೆ ಅಂದಾಗ ಈಗ ಈ ಪ್ರಪಂಚವು ಬದಲಾಗುತ್ತಿದೆ, ಯಾರು ಬದಲಾಯಿಸುತ್ತಿದ್ದಾರೆ? ಭಗವಂತನಿಂದ ಮಾತ್ರ ಸಾಧ್ಯ. ನೀವು ಅವರಿಗೆ ಅತೀಪ್ರಿಯ ಮಕ್ಕಳಾಗಿದ್ದೀರಿ, ಪ್ರಜೆಗಳೂ ತಯಾರಾಗುತ್ತಿದ್ದಾರೆ ಆದರೆ ಮಕ್ಕಳು ಮಕ್ಕಳೇ, ಪ್ರಜೆಗಳು ಪ್ರಜೆಗಳೇ. ಯಾರು ಸನ್ಯಾಸ ಮಾಡುವರೋ ಅವರು ವಾರಸುಧಾರರಾಗಿ ಬಿಡುವರು. ಅವರನ್ನು ರಾಯಲ್ ಮನೆತನದಲ್ಲಿ ಅವಶ್ಯವಾಗಿ ಕರೆದುಕೊಂಡು ಹೋಗಬೇಕಾಗಿದೆ ಆದರೆ ಒಂದುವೇಳೆ ಅಷ್ಟೊಂದು ಜ್ಞಾನವನ್ನು ಪಡೆಯಲಿಲ್ಲವೆಂದರೆ ಪದವಿಯನ್ನೂ ಪಡೆಯುವುದಿಲ್ಲ. ಯಾರು ಓದುವರೋ ಅವರು ನವಾಬರಾಗುವರು. ಯಾರು ಬಂದು ಹೋಗುತ್ತಿರುವರೋ ಅವರು ಪ್ರಜೆಗಳಲ್ಲಿ ಬರುವರು. ಎಷ್ಟು ಪವಿತ್ರರಾಗುವರೋ ಅಷ್ಟು ಸುಖ ಸಿಗುವುದು. ಅವರು ತಂದೆಗೆ ಪ್ರಿಯರೇ ಆಗುತ್ತಾರೆ ಆದರೆ ಯಾವಾಗ ಸಂಪೂರ್ಣ ಮಕ್ಕಳಾಗುವರೋ ಆಗಲೇ ಅತಿ ಪ್ರಿಯರಾಗುವರು. ತಿಳಿಯಿತೆ!

ಸನ್ಯಾಸಿಗಳೂ ಸಹ ಅನೇಕ ಪ್ರಕಾರದವರು ಇರುತ್ತಾರೆ. ಕೆಲವರು ಗೃಹಸ್ಥವನ್ನು ಬಿಟ್ಟು ಹೊರಟು ಹೋಗುತ್ತಾರೆ, ಇನ್ನೂ ಕೆಲವರು ಹೀಗೂ ಇರುತ್ತಾರೆ – ಅವರು ಗೃಹಸ್ಥ ವ್ಯವಹಾರದಲ್ಲಿದ್ದರೂ ವಿಕಾರದಲ್ಲಿ ಹೋಗುವುದಿಲ್ಲ, ಅವರು ಅನುಯಾಯಿಗಳಿಗೆ ಕುಳಿತು ಶಾಸ್ತ್ರ ಇತ್ಯಾದಿಗಳನ್ನು ತಿಳಿಸುತ್ತಾರೆ, ಆತ್ಮ ಜ್ಞಾನವನ್ನು ಕೊಡುತ್ತಾರೆ. ಅವರಿಗೂ ಶಿಷ್ಯರಿರುತ್ತಾರೆ, ಆದರೆ ಅವರ ಶಿಷ್ಯರು ಅವರಿಗೆ ಪ್ರಿಯ ಮಕ್ಕಳೆನಿಸಲು ಸಾಧ್ಯವಿಲ್ಲ ಏಕೆಂದರೆ ಶಿಷ್ಯರಿಗೆ ಮನೆ-ಮಠ ಮಕ್ಕಳು ಎಲ್ಲರೂ ಇರುತ್ತಾರೆ. ಗುರುಗಳು ಅವರನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ಸಾಧ್ಯವಿಲ್ಲ. ತಾವು ಸನ್ಯಾಸ ಮಾಡಿರುವುದಿಲ್ಲ, ಅನ್ಯರಿಗೂ ಸನ್ಯಾಸ ಮಾಡಿಸಲು ಸಾಧ್ಯವಿಲ್ಲ. ಅವರ ಶಿಷ್ಯರೂ ಸಹ ಗೃಹಸ್ಥದಲ್ಲಿಯೇ ಇರುತ್ತಾರೆ. ಕೇವಲ ಗುರುಗಳ ಬಳಿ ಬಂದು ಹೋಗುತ್ತಿರುತ್ತಾರೆ. ಅವರು ತಮ್ಮ ಶಿಷ್ಯರಿಗೆ ಜ್ಞಾನವನ್ನು ಕೊಡುತ್ತಾ ಇರುತ್ತಾರೆ, ಮಂತ್ರವನ್ನು ಹೇಳಿಕೊಡುತ್ತಾರಷ್ಟೇ. ಅಂದಮೇಲೆ ಗುರುಗಳಿಗೆ ವಾರಸುಧಾರರಂತೂ ಆಗಲಿಲ್ಲ ಅಂದಮೇಲೆ ಅವರದು ಹೇಗೆ ವೃದ್ಧಿಯಾಗುವುದು, ಕೇವಲ ಜ್ಞಾನವನ್ನು ಕೊಡುತ್ತಾ-ಕೊಡುತ್ತಾ ಶರೀರವನ್ನು ಬಿಟ್ಟು ಹೊರಟು ಹೋಗುತ್ತಾರೆ.

ನೋಡಿ, ಒಂದು 108ರ ಮಾಲೆಯಿದೆ, ಇನ್ನೊಂದು ಅದಕ್ಕಿಂತಲೂ ದೊಡ್ಡದು 16,108ರ ಮಾಲೆಯಿರುತ್ತದೆ. ಅದು ಚಂದ್ರವಂಶಿ ಮನೆತನದ ರಾಯಲ್ ರಾಜಕುಮಾರ-ರಾಜಕುಮಾರಿಯರ ಮಾಲೆಯಾಗಿದೆ ಅಂದಾಗ ಯಾರು ಇಲ್ಲಿ ಹೆಚ್ಚು ಜ್ಞಾನವನ್ನು ಪಡೆಯುವುದಿಲ್ಲವೋ, ಪವಿತ್ರರಾಗುವುದಿಲ್ಲವೋ ಅವರು ಶಿಕ್ಷೆಗಳನ್ನು ಅನುಭವಿಸಿ ಚಂದ್ರವಂಶಿ ಮನೆತನದ ಮಾಲೆಯಲ್ಲಿ ಬರುತ್ತಾರೆ. ರಾಜಕುಮಾರ-ಕುಮಾರಿಯರಂತೂ ಅನೇಕರು ಆಗುತ್ತಾರೆ.

ಈ ರಹಸ್ಯವನ್ನೂ ಸಹ ನೀವು ಈಗಲೇ ಕೇಳುತ್ತೀರಿ. ತಿಳಿದುಕೊಂಡಿದ್ದೀರಿ, ಅಲ್ಲಿ ಈ ಜ್ಞಾನದ ಮಾತುಗಳಿರುವುದಿಲ್ಲ, ಈ ಜ್ಞಾನವು ಕೇವಲ ಈಗ ಸಂಗಮದಲ್ಲಿಯೇ ಸಿಗುತ್ತದೆ. ಈಗ ದೈವೀ ಧರ್ಮದ ಸ್ಥಾಪನೆಯಾಗುತ್ತಿದೆ. ಅಂದಮೇಲೆ ಯಾರು ಪೂರ್ಣ ಕರ್ಮೇಂದ್ರಿಯಗಳನ್ನು ಜಯಿಸುವುದಿಲ್ಲವೋ ಅವರು ಚಂದ್ರವಂಶಿ ಮನೆತನದವರ ಮಾಲೆಯಲ್ಲಿ ಬರುತ್ತಾರೆ. ಯಾರು ಜಯಿಸುವರೋ ಅವರು ಸೂರ್ಯವಂಶದಲ್ಲಿ ಬರುತ್ತಾರೆ. ಅವರಲ್ಲಿಯೂ ನಂಬರ್ವಾರ್ ಆಗುತ್ತಾರೆ. ಶರೀರವೂ ಸಹ ಸ್ಥಿತಿಯನುಸಾರವೇ ಸಿಗುತ್ತದೆ. ನೋಡಿ, ಎಲ್ಲರಿಗಿಂತ ಮಮ್ಮಾರವರು ತೀಕ್ಷ್ಣವಾಗಿ ಮುಂದೆ ಹೋದದ್ದರಿಂದ ಅವರಿ ಸ್ಕಾಲರ್ಶಿಪ್ ಸಿಕ್ಕಿ ಬಿಟ್ಟಿತು, ಮುಖಂಡನಾಗಿ ಬಿಟ್ಟರು. ಅವರಿಗೆ ಇಡೀ ಜ್ಞಾನದ ಕಳಶವನ್ನೇ ಕೊಡಲಾಯಿತು, ಅವರಿಗೆ ನಾನೂ (ಬ್ರಹ್ಮಾ) ಸಹ ತಾಯಿಯೆಂದು ಹೇಳುತ್ತೇನೆ ಏಕೆಂದರೆ ನಾನೂ ಸಹ ತನು-ಮನ-ಧನ ಎಲ್ಲವನ್ನೂ ಅವರ ಚರಣಗಳಲ್ಲಿ ಸ್ವಾಹಾ ಮಾಡಿ ಬಿಟ್ಟೆನು. ಲೌಕಿಕ ಮಕ್ಕಳಿಗೂ ಕೊಡಲಿಲ್ಲ ಏಕೆಂದರೆ ಅದು ರಕ್ತ ಸಂಬಂಧವಾಯಿತು, ಆದರೆ ಇಲ್ಲಂತೂ ಅವಿನಾಶಿಯಾಗಿ ಮಕ್ಕಳಾಗುತ್ತಾರೆ, ಎಲ್ಲವನ್ನೂ ಸನ್ಯಾಸ ಮಾಡಿ ಬರುತ್ತಾರೆ, ಆದ್ದರಿಂದ ಅವರ ಪ್ರತಿ ಹೆಚ್ಚು ಪ್ರೀತಿ ಬರುತ್ತದೆ. ಅವಿನಾಶಿ ಪ್ರೀತಿಯು ಎಲ್ಲದಕ್ಕಿಂತ ದೊಡ್ಡದಾಗಿರುತ್ತದೆ. ಸನ್ಯಾಸಿಗಳಂತೂ ಮನೆಮಠವನ್ನು ಬಿಟ್ಟು ಒಂಟಿಯಾಗಿ ಹೊರಟು ಹೋಗುತ್ತಾರೆ. ಇಲ್ಲಂತೂ ನಾನು ಎಲ್ಲವನ್ನು ತೆಗೆದುಕೊಂಡು ಬಂದು ಸ್ವಾಹಾ ಮಾಡಿದೆನು. ಪರಮಾತ್ಮನು ಸ್ವಯಂ ಪ್ರತ್ಯಕ್ಷದಲ್ಲಿ ಪಾತ್ರ ಮಾಡಿ ತೋರಿಸುತ್ತಾರೆ.

ನಿಮಗೆ ಯಾವುದೇ ಪ್ರಶ್ನೆಗೆ ಉತ್ತರವು ಇಲ್ಲಿ ಸಿಗುತ್ತದೆ. ಸ್ವಯಂ ಪರಮಾತ್ಮನೇ ಬಂದು ತಿಳಿಸುತ್ತಾರೆ – ಅವರು ಜಾದೂಗಾರನಾಗಿದ್ದಾರೆ, ಅವರ ಈ ಜಾದೂಗಾರಿಕೆಯ ಪಾತ್ರವು ಈಗ ನಡೆಯುತ್ತಿದೆ. ನೀವಂತೂ ಬಹಳ ಪ್ರಿಯ ಮಕ್ಕಳಾಗಿದ್ದೀರಿ. ನಿಮ್ಮನ್ನು ತಂದೆಯು ಎಂದೂ ಬೇಸರ ಪಡಿಸುವುದಿಲ್ಲ, ಒಂದುವೇಳೆ ಬೇಸರ ಪಟ್ಟರೆ ಮಕ್ಕಳೂ ಸಹ ಕೋಪಿಸಿಕೊಳ್ಳಲು ಕಲಿತು ಬಿಡುವರು. ಇಲ್ಲಂತೂ ಎಲ್ಲರಿಗೂ ಆಂತರಿಕ ಪ್ರೀತಿಯಿದೆ, ಸ್ವರ್ಗದಲ್ಲಿಯೂ ಸಹ ಎಷ್ಟೊಂದು ಪ್ರೀತಿಯಿರುತ್ತದೆ, ಅಲ್ಲಿ ಸತೋಪ್ರಧಾನರಾಗಿರುತ್ತಾರೆ.

ಇಲ್ಲಿಗೆ ಎಷ್ಟೊಂದು ಪ್ರವಾಸಿಗರು ಬರುತ್ತಾರೆ, ಅವರದು ಬಹಳ ಸೇವೆಯಾಗುತ್ತದೆ ಏಕೆಂದರೆ ಅವರಿಗೂ ಶಾಂತಿ ಮತ್ತು ಸಂತೋಷದ ಆಸ್ತಿಯ ಹಕ್ಕಿದೆ. ಅವರೂ ಅತಿ ಪ್ರಿಯ ಪ್ರಜೆಗಳಾಗಬೇಕಾಗಿದೆ. ತಂದೆ-ತಾಯಿ, ಮಕ್ಕಳು ಎಲ್ಲರೂ ಅವರ ಸೇವೆಯಲ್ಲಿ ತೊಡಗಿ ಬಿಡುತ್ತಾರೆ. ಭಲೆ ದೇವಿ-ದೇವತೆಗಳಾಗುತ್ತಿದ್ದಾರೆ ಆದರೆ ಇಲ್ಲಿ ಆ ಪದವಿಯ ಅಹಂಕಾರವಿರುವುದಿಲ್ಲ. ಎಲ್ಲರೂ ವಿಧೇಯ ಸೇವಕರಾಗಿ ಸೇವೆಯಲ್ಲಿ ಹಾಜರಾಗುತ್ತಾರೆ. ಭಗವಂತನೂ ಸಹ ವಿಧೇಯ ಸೇವಕನಾಗಿ ತಮ್ಮ ಪ್ರಿಯ ಮಕ್ಕಳು ಮತ್ತು ಪ್ರಜೆಗಳ ಸೇವೆ ಮಾಡುತ್ತಾರೆ. ಮಕ್ಕಳ ಮೇಲೆ ಅವರ ಆಶೀರ್ವಾದವಿರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಕಣ್ಮಣಿಗಳು, ಕಲ್ಪ-ಕಲ್ಪದ ಅಗಲಿರುವ ಮಕ್ಕಳು ಯಾರು ಪುನಃ ಬಂದು ಸೇರಿದ್ದೀರೊ ಅಂತಹ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ಹೃದಯ ಪೂರ್ವಕ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಹೇಗೆ ಬಾಪ್ದಾದಾ ಮಕ್ಕಳನ್ನು ಎಂದೂ ಬೇಸರ ಪಡಿಸುವುದಿಲ್ಲವೋ ಹಾಗೆಯೇ ನೀವು ಮಕ್ಕಳೂ ಸಹ ಯಾರನ್ನೂ ಬೇಸರ ಪಡಿಸಬಾರದು. ಪರಸ್ಪರ ಆಂತರಿಕ ಪ್ರೀತಿಯಿಂದ ಇರಬೇಕಾಗಿದೆ. ಎಂದೂ ಕೋಪಿಸಿಕೊಳ್ಳಬಾರದು.

2. ಶಾಂತಿ ಮತ್ತು ಸುಖದ ವರದಾನವನ್ನು ಪಡೆಯಲು ಪರಂಜ್ಯೋತಿಗೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ. ವಿದ್ಯೆಯಿಂದ ಅಪಾರ ಶಾಂತಿ ಮತ್ತು ಸಂತೋಷದ ಈಶ್ವರೀಯ ಅಧಿಕಾರವನ್ನು ಪಡೆಯಬೇಕಾಗಿದೆ.

ವರದಾನ:-

ಒಂದುವೇಳೆ ಸಂಘಟನೆಯಲ್ಲಿ ಪ್ರತಿಯೊಬ್ಬರೂ ಒಬ್ಬರಿಗೊಬ್ಬರ ಸಹಯೋಗಿಗಳು, ಶುಭಚಿಂತಕರಾಗಿದ್ದರೆ ಸಹಯೋಗದ ಶಕ್ತಿಯ ಮುತ್ತಿಗೆಯು ಬಹಳ ಚಮತ್ಕಾರ ಮಾಡಬಹುದು. ಪರಸ್ಪರದಲ್ಲಿ ಒಬ್ಬರಿನ್ನೊಬ್ಬರ ಶುಭಚಿಂತಕ, ಸಹಯೋಗಿಯಾಗಿದ್ದರೆ ಈ ಮುತ್ತಿಗೆಯೊಳಗೆ ಬರಲು ಸಾಹಸವಿರಲು ಸಾಧ್ಯವಿಲ್ಲ. ಆದರೆ ಸಂಘಟನೆಯಲ್ಲಿ ಭಲೆ ಎಷ್ಟೇ ಮಾತುಗಳಲ್ಲಿ ಸಹನೆ ಮಾಡಬೇಕಾಗಬಹುದು ಆದರೆ ಎದುರಿಸುತ್ತಾ ತೋರಿಸುತ್ತೇವೆ, ವಿಜಯಿಯಾಗಿ ತೋರಿಸುತ್ತೇವೆ – ಯಾವಾಗ ಈ ಧೃಡ ಸಂಕಲ್ಪವನ್ನು ಮಾಡುತ್ತೀರಿ ಆಗ ಸಹಯೋಗದ ಶಕ್ತಿಯು ಬರುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top