13 July 2021 KANNADA Murli Today | Brahma Kumaris

Read and Listen today’s Gyan Murli in Kannada

July 12, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಮಕ್ಕಳು ದೊಡ್ಡವರಾದರೆ ನನ್ನ ಸೇವೆ ಮಾಡುವರು ಎಂಬ ಲಾಲಸೆಯೂ ಸಹ ಶಿವ ತಂದೆಗೆ ಇಲ್ಲ, ಅವರೆಂದೂ ವೃದ್ಧರಾಗುವುದಿಲ್ಲ, ತಂದೆಯೇ ನಿಷ್ಕಾಮ ಸೇವಾಧಾರಿಯಾಗಿದ್ದಾರೆ”

ಪ್ರಶ್ನೆ:: -

ಭೋಲಾನಾಥ ಶಿವ ತಂದೆಯು ನಾವೆಲ್ಲಾ ಮಕ್ಕಳ ಬಹಳ ದೊಡ್ಡ ಗ್ರಾಹಕನಾಗಿದ್ದಾರೆ – ಹೇಗೆ?

ಉತ್ತರ:-

ತಂದೆಯು ಹೇಳುತ್ತಾರೆ – ನಾನು ಇಷ್ಟು ಭೋಲಾ ಗ್ರಾಹಕನಾಗಿದ್ದೇನೆ ನಿಮ್ಮ ಎಲ್ಲಾ ಹಳೆಯ ವಸ್ತುಗಳನ್ನು ಖರೀದಿ ಮಾಡುತ್ತೇನೆ ಮತ್ತು ಅದಕ್ಕೆ ಬದಲಾಗಿ ಎಲ್ಲಾ ಹೊಸ-ಹೊಸ ವಸ್ತುಗಳನ್ನು ಕೊಡುತ್ತೇನೆ. ಬಾಬಾ, ಈ ತನು-ಮನ-ಧನ ಎಲ್ಲವೂ ತಮ್ಮದಾಗಿದೆ ಎಂದು ನೀವು ಹೇಳುತ್ತೀರಿ ಅದಕ್ಕೆ ಪ್ರತಿಫಲವಾಗಿ ನಿಮಗೆ ಸುಂದರ ಶರೀರವೂ ಸಿಗುತ್ತದೆ, ಅಪಾರ ಧನವೂ ಪ್ರಾಪ್ತಿಯಾಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಭೋಲಾನಾಥನಿಗಿಂತ ಭಿನ್ನ………

ಓಂ ಶಾಂತಿ. ಭಕ್ತಿಮಾರ್ಗದಲ್ಲಿ ಈ ಗೀತೆಗಳನ್ನು ಹಾಡುತ್ತಾರೆ ಯಾವುದೆಲ್ಲಾ ಗೀತೆಗಳಿವೆಯೋ ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಅದರ ಅರ್ಥವನ್ನು ತಂದೆಯು ತಿಳಿಸುತ್ತಾರೆ. ಯಾರಿಗೆ ಭೋಲಾನಾಥನೆಂದು ಹೇಳಲಾಗುತ್ತದೆ ಎಂಬುದನ್ನು ಮಕ್ಕಳೂ ಸಹ ತಿಳಿದುಕೊಳ್ಳುತ್ತೀರಿ, ದೇವತೆಗಳಿಗೆ ಭೋಲಾನಾಥನೆಂದು ಹೇಳುವುದಿಲ್ಲ. ಸುಧಾಮನ ಹಿಡಿ ಅವಲಕ್ಕಿಗೆ ಬದಲಾಗಿ ಮಹಲು ಸಿಕ್ಕಿತೆಂದು ಗಾಯನವಿದೆ, ಅದು ಎಷ್ಟು ಸಮಯಕ್ಕಾಗಿ? 21 ಜನ್ಮಗಳಿಗಾಗಿ. ಈಗ ಮಕ್ಕಳು ತಿಳಿದುಕೊಳ್ಳುತ್ತೀರಿ – ತಂದೆಯು ಬಂದು ಭಾರತವಾಸಿಗಳಿಗೆ ವಜ್ರ-ವೈಡೂರ್ಯಗಳ ಮಹಲನ್ನು ಕೊಡುತ್ತಾರೆ ಅಂದಮೇಲೆ ಯಾವುದಕ್ಕೆ ಬದಲಾಗಿ ಕೊಡುತ್ತಾರೆ? ಬಾಬಾ, ಈ ತನು-ಮನ-ಧನವೆಲ್ಲವೂ ನಿಮ್ಮದೇ ಆಗಿದೆ. ತಾವೇ ಕೊಟ್ಟಿರುವುದಾಗಿದೆ ಎಂದು ಮಕ್ಕಳು ಹೇಳುತ್ತಾರೆ. ಮಗುವಾದಾಗಲೂ ಭಗವಂತನು ಕೊಟ್ಟರೆಂದು ಹೇಳುತ್ತಾರೆ. ಹಣವನ್ನೂ ಭಗವಂತ ಕೊಟ್ಟನೆಂದು ಹೇಳುತ್ತಾರೆ. ಹೇಳುವವರು ಯಾರು? ಆತ್ಮ. ಭಗವಂತ ಅರ್ಥಾತ್ ತಂದೆಯು ಕೊಟ್ಟರು. ತಂದೆಯು ತಿಳಿಸುತ್ತಾರೆ – ನೀವೀಗ ಎಲ್ಲವನ್ನೂ ಕೊಡಬೇಕಾಗುವುದು, ಅದಕ್ಕೆ ಪ್ರತಿಯಾಗಿ ನಾನು ನಿಮಗೆ ಬಹಳ ಸುಂದರ ಶರೀರವನ್ನು ವರ್ಗಾವಣೆ ಮಾಡುತ್ತೇನೆ, ಅಪಾರ ಧನವನ್ನು ಕೊಡುತ್ತೇನೆ ಆದರೆ ಯಾರಿಗೆ ಕೊಡುತ್ತಾರೆ? ಅವಶ್ಯವಾಗಿ ಮಕ್ಕಳಿಗೇ ಕೊಡುತ್ತಾರೆ. ಲೌಕಿಕ ತಂದೆಯಿಂದ ಅಲ್ಪಕಾಲಕ್ಕಾಗಿ ಧನ ಸಿಗುತ್ತದೆ. ಬೇಹದ್ದಿನ ತಂದೆಯು ನಮಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ – ಜ್ಞಾನ ಮತ್ತು ಭಕ್ತಿಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಭಕ್ತಿಯಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ, ಹಣವಿದ್ದರೆ ಸುಖವಿರುತ್ತದೆ, ಹಣವಿಲ್ಲದಿದ್ದರೆ ಮನುಷ್ಯರು ಎಷ್ಟೊಂದು ದುಃಖಿಯಾಗುತ್ತಾರೆ! ತಂದೆಯು ನಮಗೆ ಅಪಾರ ಧನವನ್ನು ಕೊಡುತ್ತಾರೆಂದು ಮಕ್ಕಳಿಗೇ ತಿಳಿದಿದೆ ಆದ್ದರಿಂದ ಖುಷಿಯಾಗುತ್ತದೆ. ಸುಖಧಾಮದಲ್ಲಿ ಸುಖದ ಯಾವುದೇ ಕೊರತೆಯಿರುವುದಿಲ್ಲ. ಪ್ರತಿಯೊಬ್ಬರಿಗೆ ತಮ್ಮ-ತಮ್ಮ ರಾಜಧಾನಿಯಿರುತ್ತದೆ, ಅದಕ್ಕೆ ಪವಿತ್ರ ಗೃಹಸ್ಥಾಶ್ರಮವೆಂದು ಹೇಳಲಾಗುತ್ತದೆ ಅಂದಾಗ ತಂದೆಯು ಎಷ್ಟು ಮುಗ್ಧನಾಗಿದ್ದಾರೆ! ಏನನ್ನು ಕೊಡುತ್ತಾರೆ ಮತ್ತು ಏನನ್ನು ತೆಗೆದುಕೊಳ್ಳುತ್ತಾರೆ! ತಂದೆಯು ಎಷ್ಟು ಒಳ್ಳೆಯ ಗ್ರಾಹಕನಾಗಿದ್ದಾರೆ. ವಾಸ್ತವದಲ್ಲಿ ತಂದೆಯು ಮಕ್ಕಳ ಗ್ರಾಹಕನೇ ಆಗುತ್ತಾರೆ, ಮಗು ಜನಿಸಿತೆಂದರೆ ಸಂಪತ್ತೆಲ್ಲವೂ ಮಗುವಿನದಾಗುತ್ತದೆ ಆದರೆ ಅವರು ಹದ್ದಿನ ಗ್ರಾಹಕರಾಗಿರುತ್ತಾರೆ, ಇವರು ಬೇಹದ್ದಿನ ಭೋಲಾನಾಥನಾಗಿದ್ದಾರೆ. ಬೇಹದ್ದಿನ ಮಕ್ಕಳ ಗ್ರಾಹಕನಾಗಿದ್ದಾರೆ, ತಂದೆಯು ಹೇಳುತ್ತಾರೆ – ನಾನು ಪರಮಧಾಮದಿಂದ ಬಂದಿದ್ದೇನೆ, ಹಳೆಯದೆಲ್ಲವನ್ನೂ ನಿಮ್ಮಿಂದ ತೆಗೆದುಕೊಂಡು ಹೊಸ ಪ್ರಪಂಚದಲ್ಲಿ ನಿಮಗೆ ಎಲ್ಲವನ್ನೂ ಕೊಡುತ್ತೇನೆ. ಆದ್ದರಿಂದ ತಂದೆಗೆ ದಾತನೆಂದು ಹೇಳಲಾಗುತ್ತದೆ, ಇವರಂತಹ ದಾತನು ಮತ್ತ್ಯಾರೂ ಇಲ್ಲ. ನಿಷ್ಕಾಮ ಸೇವೆ ಮಾಡುತ್ತಾರೆ. ತಂದೆಯು ಹೇಳುತ್ತಾರೆ – ನಾನು ನಿಷ್ಕಾಮಿಯಾಗಿದ್ದೇನೆ, ನನಗೆ ಯಾವುದೇ ಲಾಲಸೆಯಿಲ್ಲ. ವೃದ್ಧ ತಂದೆಯ ಸಂಭಾಲನೆ ಮಾಡುವುದು ಮಕ್ಕಳ ಕೆಲಸವಾಗಿದೆ ಏಕೆಂದರೆ ನಾನು ನಿಮ್ಮ ಸಂಭಾಲನೆ ಮಾಡಿದ್ದೇನೆಂದು ತಂದೆಯು ನಿಮಗೆ ಹೇಳುವುದಿಲ್ಲ. ತಂದೆಯು ವೃದ್ಧನಾದಾಗ ಮಕ್ಕಳು ಅವರನ್ನು ಸಂಭಾಲನೆ ಮಾಡುವುದು ಕಾಯಿದೆಯಿರುತ್ತದೆ ಆದರೆ ಈ ತಂದೆಯಂತೂ ಎಂದೂ ವೃದ್ಧನಾಗುವುದಿಲ್ಲ, ಸದಾ ಯುವಕನಾಗಿರುತ್ತಾನೆ. ಆತ್ಮವೆಂದೂ ವೃದ್ಧಾಪ್ಯವನ್ನು ಹೊಂದುವುದಿಲ್ಲ. ಇದನ್ನಂತೂ ತಿಳಿದುಕೊಂಡಿದ್ದೀರಿ – ಲೌಕಿಕ ತಂದೆಯು ಮಕ್ಕಳಲ್ಲಿ ಭರವಸೆಯನ್ನು ಇಡುತ್ತಾರೆ – ನಾನು ವೃದ್ಧನಾದಾಗ ಮಕ್ಕಳು ನನ್ನ ಸೇವೆ ಮಾಡುವರು ಎಂದು. ಭಲೆ ಎಲ್ಲವನ್ನೂ ಮಕ್ಕಳಿಗೆ ಕೊಡುತ್ತಾರೆ ಆದರೂ ಸಹ ಸೇವೆಯಂತೂ ಇರುತ್ತದೆ. ಈ ಶಿವ ತಂದೆಯು ಹೇಳುತ್ತಾರೆ – ನಾನು ಅಭೋಕ್ತನಾಗಿದ್ದೇನೆ, ನಾನೆಂದೂ ಏನನ್ನೂ ಸ್ವೀಕರಿಸುವುದಿಲ್ಲ, ಕೇವಲ ಮಕ್ಕಳಿಗೇ ಜ್ಞಾನವನ್ನು ಕೊಡುವುದಕ್ಕಾಗಿಯೇ ನಾನು ಬರುತ್ತೇನೆ. ಪರಮಾತ್ಮನು ಆತ್ಮರಿಗೆ ತಿಳಿಸುತ್ತಾರೆ. ಆತ್ಮವೇ ಕೇಳುತ್ತದೆ, ಪ್ರತಿಯೊಂದು ಮಾತನ್ನು ಆತ್ಮವೇ ಮಾತನಾಡುತ್ತದೆ. ಆತ್ಮವೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ ಅದರ ಆಧಾರದ ಮೇಲೆ ಶರೀರವೂ ಸಿಗುತ್ತದೆ. ಇಲ್ಲಿ ಮನುಷ್ಯರದು ಅನೇಕ ಮತಗಳಿವೆ. ಆತ್ಮವೇ ಪರಮಾತ್ಮ, ಅದಕ್ಕೆ ಯಾವುದೇ ಲೇಪಚೇಪ ಅಂಟುವುದಿಲ್ಲವೆಂದು ಕೆಲವರು ಹೇಳುತ್ತಾರೆ. ಆತ್ಮವನ್ನು ನಿರ್ಲೇಪವೆಂದು ಹೇಳಿ ಬಿಡುತ್ತಾರೆ, ಒಂದುವೇಳೆ ಆತ್ಮವು ನಿರ್ಲೇಪವಾಗಿದ್ದರೆ ಪಾಪಾತ್ಮ, ಪುಣ್ಯಾತ್ಮ ಎಂದು ಏಕೆ ಹೇಳುತ್ತಾರೆ? ಆ ರೀತಿಯಿದ್ದಿದ್ದರೆ ಪಾಪ ಶರೀರ, ಪುಣ್ಯ ಶರೀರವೆಂದು ಹೇಳಬೇಕಾಗಿತ್ತು, ನೀವೀಗ ತಿಳಿದುಕೊಂಡಿದ್ದೀರಿ – ಎಲ್ಲಾ ಆತ್ಮರ ಆತ್ಮಿಕ ತಂದೆಯು ನಾವಾತ್ಮರಿಗೆ ಈ ಶರೀರದ ಮೂಲಕ ಓದಿಸುತ್ತಿದ್ದಾರೆ. ಆತ್ಮವನ್ನು ಆಹ್ವಾನ ಮಾಡುತ್ತಾರಲ್ಲವೆ. ನಮ್ಮ ತಂದೆಯ ಆತ್ಮವು ಬಂದಿತು, ಸ್ವಾದವನ್ನು ತೆಗೆದುಕೊಂಡಿತು ಎಂದು ಹೇಳುತ್ತಾರೆ. ಆತ್ಮವೇ ರುಚಿ ನೋಡುತ್ತದೆ. ತಂದೆಗೆ ಈ ರೀತಿ ಹೇಳುವುದಿಲ್ಲ, ಅವರು ಅಭೋಕ್ತನಾಗಿದ್ದಾರೆ. ಬ್ರಾಹ್ಮಣರಿಗೆ ತಿನ್ನಿಸುತ್ತಾರೆ, ಅವರಲ್ಲಿ ಆತ್ಮವು ಬರುತ್ತದೆ. ಬಂದು ಅವಶ್ಯವಾಗಿ ಎಲ್ಲಿಯೋ ವಿರಾಜಮಾನವಾಗುತ್ತದೆ. ಬ್ರಾಹ್ಮಣರಿಗೆ ತಿನ್ನಿಸುವುದು ಭಾರತದಲ್ಲಿ ಸಾಮಾನ್ಯ ಮಾತಾಗಿದೆ. ಆತ್ಮವನ್ನು ಕರೆಸುತ್ತಾರೆ, ಅದರೊಂದಿಗೆ ಕೇಳುತ್ತಾರೆ ಅದರಲ್ಲಿ ಕೆಲವು ಮಾತುಗಳು ಸತ್ಯವೂ ಆಗಿರುತ್ತದೆ. ಪಿತೃಗಳಿಗೆ ತಿನ್ನಿಸುವುದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಇದರಲ್ಲಿ ಆಶ್ಚರ್ಯವೆನಿಸಬಾರದು. ತಂದೆಯು ಸಾರ ರೂಪದಲ್ಲಿ ಡ್ರಾಮಾದ ರಹಸ್ಯವನ್ನು ತಿಳಿಸುತ್ತಾರೆ. ಡ್ರಾಮಾವನ್ನು ಅಷ್ಟು ವಿವರವಾಗಿ ತಿಳಿಸಿಕೊಡಲು ಸಾಧ್ಯವಿಲ್ಲ, ಒಂದೊಂದರ ತಿಳುವಳಿಕೆ ನೀಡುವುದರಲ್ಲಿಯೇ ಕೆಲವು ವರ್ಷಗಳು ಹಿಡಿಸುವುದು. ನೀವು ಮಕ್ಕಳಿಗೆ ಬಹಳ ಸಹಜ ಶಿಕ್ಷಣ ಸಿಗುತ್ತಿದೆ, ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಹಾಡುತ್ತಾರೆ. ಅವರ ಹೆಸರೇ ಆಗಿದೆ – ಪತಿತ-ಪಾವನ. ಬ್ರಹ್ಮಾ-ವಿಷ್ಣು-ಶಂಕರನಿಗೆ ಪತಿತ ಪಾವನನೆಂದು ಹೇಳುವುದಿಲ್ಲ, ತಂದೆಗೇ ಪತಿತ-ಪಾವನ, ಮುಕ್ತಿದಾತನೆಂದು ಹೇಳುತ್ತಾರೆ. ದುಃಖಹರ್ತ-ಸುಖಕರ್ತನೆಂದೂ ಹೇಳಲಾಗುತ್ತದೆ. ಅವರು ನಿರಾಕಾರನಾಗಿದ್ದಾರೆ. ಶಿವನ ಮಂದಿರದಲ್ಲಿ ಹೋಗಿ ನೋಡಿ ಅಲ್ಲಿ ಲಿಂಗವನ್ನು ಇಟ್ಟಿರುತ್ತಾರೆ. ಅವಶ್ಯವಾಗಿ ಚೈತನ್ಯದಲ್ಲಿ ಇದ್ದರು ಆದ್ದರಿಂದಲೇ ಪೂಜೆ ಮಾಡುತ್ತಾರಲ್ಲವೆ. ಈ ದೇವತೆಗಳೂ ಸಹ ಯಾವುದೋ ಸಮಯದಲ್ಲಿ ಚೈತನ್ಯದಲ್ಲಿದ್ದರು ಆದ್ದರಿಂದಲೇ ಅವರಿಗೆ ಮಹಿಮೆಯಿದೆ. ನೆಹರು ಚೈತನ್ಯದಲ್ಲಿದ್ದರು ಆದ್ದರಿಂದಲೇ ಅವರ ಭಾವಚಿತ್ರವನ್ನು ತೆಗೆದು ಮಹಿಮೆ ಮಾಡುತ್ತಾರೆ. ಯಾರಾದರೂ ಒಳ್ಳೆಯ ಕಾರ್ಯ ಮಾಡಿ ಹೋಗುತ್ತಾರೆಂದರೆ ಅವರ ಜಡ ಚಿತ್ರವನ್ನಿಟ್ಟು ಮಹಿಮೆ ಮಾಡುತ್ತಾರೆ. ಪವಿತ್ರರಿಗೇ ಪೂಜೆ ಮಾಡುತ್ತಾರೆ. ಯಾವುದೇ ಮನುಷ್ಯರ ಪೂಜೆ ಮಾಡುವುದಿಲ್ಲ. ವಿಕಾರದಿಂದ ಜನ್ಮ ಪಡೆಯುವವರ ಪೂಜೆಯಾಗಲು ಸಾಧ್ಯವಿಲ್ಲ. ಯಾರು ಸದಾ ಪವಿತ್ರರಾಗಿರುತ್ತಾರೆಯೋ ಅಂತಹ ದೇವತೆಗಳ ಪೂಜೆ ನಡೆಯುತ್ತದೆ. ನೀವು ತಿಳಿದುಕೊಂಡಿದ್ದೀರಿ – ತಂದೆಯು ಬಂದಿದ್ದರು, ಈಗ ಪುನಃ ಸಂಗಮದಲ್ಲಿ ಸ್ವರ್ಗದ ಸ್ಥಾಪನೆ ಮಾಡಲು ಬಂದಿದ್ದಾರೆ ನಂತರ ದ್ವಾಪರದಿಂದ ರಾವಣ ರಾಜ್ಯವು ಆರಂಭವಾಗುವುದು. ರಾವಣ ರಾಜ್ಯವು ಆರಂಭವಾದಾಗ ಶಿವನ ಮಂದಿರಗಳನ್ನು ಕಟ್ಟಿಸುತ್ತಾರೆ. ಈಗಂತೂ ಚೈತನ್ಯದಲ್ಲಿ ಶಿವನು ಜ್ಞಾನವನ್ನು ತಿಳಿಸುತ್ತಿದ್ದಾರೆ, ಅವರು ಸತ್ಯ-ಚೈತನ್ಯನಾಗಿದ್ದಾರೆ. ಅವರ ಮಹಿಮೆಯನ್ನೇ ಹಾಡುತ್ತಾರೆ. ನಿರಾಕಾರನಿಗೆ ಶರೀರವಂತೂ ಬೇಕಲ್ಲವೆ. ತಂದೆಯು ಬಂದು ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಆ ಸ್ವರ್ಗದಲ್ಲಿ ರಾಜ್ಯ ಮಾಡುವುದಕ್ಕಾಗಿ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಸ್ವರ್ಗವಾಸಿಗಳಾಗುತ್ತಿದ್ದೀರಿ, ನಿರಾಕಾರ ಪರಮಪಿತ ಪರಮಾತ್ಮನು ಜ್ಞಾನ ಸಾಗರನಾಗಿದ್ದಾರೆ ಆದರೆ ಅವರು ತಿಳಿಸುವುದು ಹೇಗೆ? ಆದ್ದರಿಂದ ಹೇಳುತ್ತಾರೆ – ನಾನು ಈ ಶರೀರದಲ್ಲಿ ಬಂದಿದ್ದೇನೆ, ನನ್ನದು ಡ್ರಾಮಾದಲ್ಲಿ ಈ ಪಾತ್ರವಿದೆ, ನಾನು ಪ್ರಕೃತಿಯ ಆಧಾರ ತೆಗೆದುಕೊಳ್ಳುತ್ತೇನೆ. ಯಾರು ಮೊಟ್ಟ ಮೊದಲಿಗರು ಆಗಿದ್ದಾರೆಯೋ ಅವರದೇ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಬಂದು ಪ್ರವೇಶ ಮಾಡುತ್ತೇನೆ ಮತ್ತು ಇವರಿಗೆ ಬ್ರಹ್ಮಾ ಎಂದು ಹೆಸರನ್ನಿಡುತ್ತೇನೆ. ಮೊದಲು ಎಲ್ಲರೂ ಭಟ್ಟಿಯಲ್ಲಿದ್ದಾಗ ಅನೇಕರಿಗೆ ಹೆಸರುಗಳನ್ನು ಇಡಲಾಗಿತ್ತು ಆದರೆ ಅನೇಕರು ಬಿಟ್ಟು ಹೋದರು ಆದ್ದರಿಂದ ಹೆಸರನ್ನು ಇಡುವುದರಿಂದ ಏನು ಲಾಭ. ನೀವು ಆ ಹೆಸರುಗಳನ್ನು ನೋಡಿದರೆ ಆಶ್ಚರ್ಯಚಕಿತರಾಗುವಿರಿ. ಒಂದೇ ಸಲ ಒಟ್ಟಿಗೆ ಎಷ್ಟೊಂದು ರಮಣೀಕ ಹೆಸರುಗಳನ್ನು ಸಂದೇಶಿಯು ತಂದರು, ಆ ಪಟ್ಟಿಯನ್ನು ನಿಮ್ಮ ಬಳಿ ಅವಶ್ಯವಾಗಿ ಇಟ್ಟುಕೊಳ್ಳಬೇಕು. ಸನ್ಯಾಸಿಗಳೂ ಸಹ ಸನ್ಯಾಸ ಮಾಡಿದರೆ ಅವರಿಗೂ ಹೆಸರು ಬದಲಾಗುತ್ತದೆ. ಗೃಹಸ್ಥವನ್ನು ಬಿಟ್ಟು ಬಿಡುತ್ತಾರೆ ಆದರೆ ನೀವಂತೂ ಬಿಡುವುದಿಲ್ಲ. ನೀವು ಬಂದು ಬ್ರಹ್ಮಾರವರ ಮಕ್ಕಳಾಗುತ್ತೀರಿ. ಶಿವನ ಸಂತಾನರಂತೂ ಆಗಿಯೇ ಇದ್ದೀರಿ. ನೀವು ಬಾಪ್ದಾದಾ ಎಂದು ಹೇಳುತ್ತೀರಿ. ಸನ್ಯಾಸಿಗಳಿಗೆ ಈ ರೀತಿಯಿರುವುದಿಲ್ಲ, ಭಲೆ ಹೆಸರು ಬದಲಾಗುತ್ತದೆ ಆದರೆ ಬಾಪ್ದಾದಾ ಎಂಬ ಹೆಸರನ್ನಿಡಿವುದಿಲ್ಲ. ಅವರಿಗೆ ಕೇವಲ ಗುರುವೆಂದು ಹೇಳುತ್ತಾರೆ. ಹಠಯೋಗಿ, ಹದ್ದಿನ ಸನ್ಯಾಸಿಗಳು ಮತ್ತು ರಾಜಯೋಗಿ ಬೇಹದ್ದಿನ ಸನ್ಯಾಸಿಗಳಲ್ಲಿ ರಾತ್ರಿ-ಹಗಲಿನ ಅಂತರವಿದೆ. ಜ್ಞಾನ, ಭಕ್ತಿ, ವೈರಾಗ್ಯ ಎಂದು ಗಾಯನವಿದೆ, ಅವರಿಗೆ ವೈರಾಗ್ಯವೂ ಇರುತ್ತದೆ ಆದರೆ ಅದು ಕೇವಲ ಮನೆ-ಮಠದಿಂದ ವೈರಾಗ್ಯ, ನಿಮಗೆ ಇಡೀ ಪ್ರಪಂಚದಿಂದ ವೈರಾಗ್ಯವಿದೆ. ಸೃಷ್ಟಿಯು ಬದಲಾಗುತ್ತದೆ ಎಂಬುದು ಅವರಿಗೆ ಗೊತ್ತೇ ಇಲ್ಲ. ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ, ಈ ಸೃಷ್ಟಿಯೇ ಸಮಾಪ್ತಿಯಾಗಲಿದೆ. ನಿಮಗಾಗಿ ಈಗ ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ, ಅಲ್ಲಿಗೆ ಹೋಗಬೇಕಾಗಿದೆ ಆದರೆ ಪಾವನರಾಗದೇ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಇದು ಮನಸ್ಸಿಗೂ ನಾಟುತ್ತದೆ, ಅವಶ್ಯವಾಗಿ ಹೊಸ ಪ್ರಪಂಚದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು ಯಾವುದನ್ನು ಈಗ ತಂದೆಯು ಸ್ಥಾಪನೆ ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯನ್ನು ನೆನಪು ಮಾಡುವುದರಿಂದ ನಾವು ಪುಣ್ಯಾತ್ಮರಾಗಿ ಬಿಡುತ್ತೇವೆ. ಇದು ಬಹಳ ಸಹಜವಾಗಿದೆ ಆದರೆ ನೆನಪು ಮರೆತು ಹೋಗುತ್ತದೆ. ಭಕ್ತಿಮಾರ್ಗದ ರೀತಿ ನೀತಿಗಳೇ ಬೇರೆಯಾಗಿದೆ, ಇದರಿಂದ ಯಾರೂ ಹಿಂತಿರುಗಿ ತಮ್ಮ ಮನೆಗೆ ಹೋಗಲು ಸಾಧ್ಯವಿಲ್ಲ. ಪುನರ್ಜನ್ಮವನ್ನು ಎಲ್ಲರೂ ಅವಶ್ಯವಾಗಿ ತೆಗೆದುಕೊಳ್ಳಲೇಬೇಕಾಗಿದೆ. ಮನೆಗೆ ಹೋಗುವ ಸಮಯವು ಒಂದೇ ಆಗಿದೆ ಆದರೆ ಇಂತಹವರಿಗೆ ಮೋಕ್ಷ ಸಿಕ್ಕಿತೆಂದು ಹೇಳುವುದೆಲ್ಲವೂ ಸುಳ್ಳಾಗಿದೆ. ತಂದೆಯು ತಿಳಿಸುತ್ತಾರೆ – ಯಾವುದೇ ಆತ್ಮನು ಮಧ್ಯದಲ್ಲಿ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಹಾಗೆ ಹೋಗುವುದಾದರೆ ಇಡೀ ಆಟವೇ ಕೆಟ್ಟು ಹೋಗುವುದು. ಪ್ರತಿಯೊಬ್ಬರೂ ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರಬೇಕಾಗಿದೆ. ಮೋಕ್ಷಕ್ಕಾಗಿ ಅನೇಕರು ಬರುತ್ತಾರೆ ಆದರೆ ಅವರಿಗೆ ತಿಳಿಸಬೇಕಾಗಿದೆ – ಮೋಕ್ಷವಂತೂ ಸಿಗುವುದಿಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದೆಂದೂ ಬದಲಾಗಲು ಸಾಧ್ಯವಿಲ್ಲ. ನೊಣವು ಇಲ್ಲಿಂದ ಹಾರಿ ಹೋಯಿತೆಂದರೆ ಪುನಃ 5000 ವರ್ಷಗಳ ನಂತರ ಇದೇರೀತಿ ಹಾರಿ ಹೋಗುವುದು. ಇದನ್ನಂತೂ ತಿಳಿದುಕೊಂಡಿದ್ದೀರಿ – ತಂದೆಯು ಎಷ್ಟೊಂದು ಭೋಲಾ ಆಗಿದ್ದಾರೆ, ಪತಿತ-ಪಾವನ ತಂದೆಯು ಪಾತ್ರವನ್ನು ಅಭಿನಯಿಸಲು ತಮ್ಮ ಪರಮಧಾಮದಿಂದ ಬರುತ್ತಾರೆ. ಈ ನಾಟಕವು ಹೇಗೆ ಮಾಡಲ್ಪಟ್ಟಿದೆ, ಇದರಲ್ಲಿ ಯಾರು-ಯಾರು ಮುಖ್ಯವಾಗಿದ್ದಾರೆ ಎಂಬುದನ್ನು ಅವರು ತಿಳಿಸುತ್ತಾರೆ. ಹೇಗೆ ಈ ಪ್ರಪಂಚದಲ್ಲಿ ಎಲ್ಲರಿಗಿಂತ ಸಾಹುಕಾರರು ಯಾರು ಎಂದು ಕೇಳುತ್ತಾರಲ್ಲವೆ ಅದರಲ್ಲಿ ನಂಬರ್ವಾರ್ ಹೆಸರುಗಳನ್ನು ತೆಗೆಯುತ್ತಾರೆ ಆದರೆ ಎಲ್ಲರಿಗಿಂತ ಸಾಹುಕಾರರು ಯಾರೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮನುಷ್ಯರು ಅಮೇರಿಕಾ ಸಾಹುಕಾರ ದೇಶವೆಂದು ಹೇಳುತ್ತಾರೆ ಆದರೆ ನಿಮಗೆ ತಿಳಿದಿದೆ – ಸ್ವರ್ಗದಲ್ಲಿ ಎಲ್ಲರಿಗಿಂತ ಸಾಹುಕಾರರು ಈ ಲಕ್ಷ್ಮೀ-ನಾರಾಯಣರೇ ಆಗುತ್ತಾರೆ, ನೀವು ಎಲ್ಲರಿಗಿಂತ ದೊಡ್ಡ ಸಾಹುಕಾರರಾಗಲು ಭವಿಷ್ಯಕ್ಕಾಗಿ ಪುರುಷಾರ್ಥ ಮಾಡುತ್ತೀರಿ, ಇದು ಸ್ಪರ್ಧೆಯಾಗಿದೆ. ಈ ಲಕ್ಷ್ಮೀ-ನಾರಾಯಣರಂತಹ ಸಾಹುಕಾರರು ಯಾರಾದರೂ ಇದ್ದಾರೆಯೇ? ಅಲ್ಲಾ ಅವಲುದ್ದೀನನ ಕಥೆಯನ್ನೂ ಬರೆಯುತ್ತಾರೆ. ಉಜ್ಜಿದರೆ ಸಾಕು ಕುಬೇರನ ಖಜಾನೆಯು ಹೊರ ಬಂದಿತೆಂದು ಅನೇಕ ಪ್ರಕಾರದ ನಾಟಕಗಳನ್ನು ರಚಿಸುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿದೆ – ಈ ಶರೀರವನ್ನು ಬಿಟ್ಟು ಸ್ವರ್ಗದಲ್ಲಿ ಹೋಗುತ್ತೇವೆ. ನಮಗೆ ಕುಬೇರನ ಖಜಾನೆಯು ಸಿಗುವುದು. ತಂದೆಯು ಹೇಳುತ್ತಾರೆ – ನನ್ನನ್ನು ನೆನಪು ಮಾಡಿದರೆ ಮಾಯೆಯು ಓಡಿ ಹೋಗುವುದು. ತಂದೆಯನ್ನು ನೆನಪು ಮಾಡದೇ ಇದ್ದರೆ ಮಾಯೆಯು ತೊಂದರೆ ಕೊಡುತ್ತದೆ. ಬಾಬಾ ನಮಗೆ ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಿರಿ ಆಗ ಬಿರುಗಾಳಿಗಳು ಶಾಂತವಾಗುವುದು. ಬಾಕಿ ನಾಟಕ ಇತ್ಯಾದಿಗಳನ್ನು ಕುಳಿತು ರಚಿಸಿದ್ದಾರೆ, ಇರುವುದೇನೂ ಇಲ್ಲ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ – ಕೇವಲ ತಂದೆಯನ್ನು ನೆನಪು ಮಾಡಿದರೆ ನಿಮ್ಮಲ್ಲಿರುವ ತುಕ್ಕು ಬಿಟ್ಟು ಹೋಗುವುದು, ಮತ್ತೇನೂ ಕಷ್ಟ ಕೊಡುವುದಿಲ್ಲ. ಆತ್ಮವು ಯಾವುದು ಪವಿತ್ರ ಸತ್ಯಚಿ ನ್ನವಾಗಿತ್ತೋ ಅದು ಈಗ ಅಸತ್ಯವಾಗಿ ಬಿಟ್ಟಿದೆ. ಮತ್ತೆ ಈ ಯೋಗಾಗ್ನಿಯಿಂದಲೇ ಸತ್ಯವಾಗುವುದು. ಬೆಂಕಿಯಲ್ಲಿ ಹಾಕದ ವಿನಃ ಚಿನ್ನವು ಪವಿತ್ರವಾಗಲು ಸಾಧ್ಯವಿಲ್ಲ, ಇದಕ್ಕೂ ಯೋಗಾಗ್ನಿಯೆಂದು ಹೇಳಲಾಗುತ್ತದೆ, ನೆನಪಿನ ಮಾತಾಗಿದೆ. ಆ ಮನುಷ್ಯರಂತೂ ಅನೇಕ ಪ್ರಕಾರದ ಹಠಯೋಗಗಳನ್ನು ಕಲಿಸುತ್ತಾರೆ. ನಿಮಗಂತೂ ತಂದೆಯು ತಿಳಿಸುತ್ತಾರೆ – ಏಳುತ್ತಾ-ಕುಳಿತುಕೊಳ್ಳುತ್ತಾ ನೆನಪು ಮಾಡಿರಿ, ಆಸನ ಇತ್ಯಾದಿಗಳನ್ನು ನೀವು ಎಲ್ಲಿಯವರೆಗೆ ಮಾಡಲು ಸಾಧ್ಯ! ಇಲ್ಲಂತೂ ನಡೆಯುತ್ತಾ-ತಿರುಗಾಡುತ್ತಾ ಕೆಲಸ ಕಾರ್ಯಗಳನ್ನು ಮಾಡುತ್ತಾ ನೆನಪಿನಲ್ಲಿ ಇರಬೇಕಾಗಿದೆ. ಭಲೆ ಖಾಯಿಲೆಯಿದ್ದಾಗಲೂ ಸಹ ಮಲಗಿಕೊಂಡೇ ತಂದೆಯನ್ನು ನೆನಪು ಮಾಡಬಹುದು. ಶಿವ ತಂದೆಯನ್ನು ನೆನಪು ಮಾಡಿರಿ ಮತ್ತು ಚಕ್ರವನ್ನು ತಿರುಗಿಸಿರಿ ಸಾಕು, ಇದಕ್ಕೆ ಅವರು ಗಂಗಾ ನದಿಯ ತೀರದಲ್ಲಿರಲಿ, ಅಮೃತವು ಬಾಯಲ್ಲಿರಲಿ ಆಗ ಪ್ರಾಣವು ಶರೀರವನ್ನು ಬಿಟ್ಟು ಹೋಗಲಿ ಎಂದು ಬರೆದಿದ್ದಾರೆ. ಗಂಗಾ ತೀರದಲ್ಲಿ ಗಂಗಾ ಜಲವೇ ಸಿಗುತ್ತದೆ, ಆದ್ದರಿಂದ ಮನುಷ್ಯರು ಹರಿದ್ವಾರದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ – ನೀವು ಎಲ್ಲಿಯಾದರೂ ಇರಿ, ರೋಗಿಯಾದಾಗಲೂ ಕೇವಲ ತಂದೆಯನ್ನು ನೆನಪು ಮಾಡಿರಿ. ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಇರಿ ಆಗ ಪ್ರಾಣವು ತನುವಿನಿಂದ ಹೋಗಲಿ, ಇದೇ ಅಭ್ಯಾಸವನ್ನು ಮಾಡಿರಿ. ಆ ಭಕ್ತಿ ಮಾರ್ಗದ ಮಾತುಗಳಲ್ಲಿ ಮತ್ತು ಈ ಜ್ಞಾನ ಮಾರ್ಗದ ಮಾತುಗಳಲ್ಲಿ ಎಷ್ಟೊಂದು ರಾತ್ರಿ-ಹಗಲಿನ ಅಂತರವಿದೆ. ತಂದೆಯ ನೆನಪಿನಿಂದ ನೀವು ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ, ಅವರಂತೂ ಸೈನಿಕರಿಗೆ ಹೇಳುತ್ತಾರೆ – ಯಾರು ಯುದ್ಧದ ಮೈದಾನದಲ್ಲಿ ಶರೀರ ಬಿಡುವರೋ ಅವರು ಸ್ವರ್ಗದಲ್ಲಿ ಹೋಗುವರು. ವಾಸ್ತವದಲ್ಲಿ ಯುದ್ಧವು ಇದೇ ಆಗಿದೆ. ಇದನ್ನು ಅವರು ಕೌರವರು ಮತ್ತು ಪಾಂಡವರ ಸೈನ್ಯವನ್ನು ತೋರಿಸಿದ್ದಾರೆ. ಮಹಾಭಾರತ ಯುದ್ಧವಾಯಿತು ನಂತರ ಏನಾಯಿತು? ಫಲಿತಾಂಶವೇನೂ ಇಲ್ಲ, ಸಂಪೂರ್ಣ ಘೋರ ಅಂಧಕಾರವಿದೆ, ಏನನ್ನೂ ತಿಳಿದುಕೊಳ್ಳುವುದಿಲ್ಲ ಆದ್ದರಿಂದ ಅಜ್ಞಾನ ಅಂಧಕಾರವೆಂದು ಹೇಳಲಾಗುತ್ತದೆ. ಪುನಃ ಬೆಳಕು ನೀಡಲು ತಂದೆಯು ಬಂದಿದ್ದಾರೆ. ಅವರಿಗೆ ಜ್ಞಾನ ಸಾಗರ, ಜ್ಞಾನ ಪೂರ್ಣನೆಂದು ಹೇಳಲಾಗುತ್ತದೆ, ಈಗ ನಿಮಗೂ ಸಹ ಸಂಪೂರ್ಣ ಜ್ಞಾನವು ಸಿಕ್ಕಿದೆ, ಅದು ಮೂಲವತನವಾಗಿದೆ ಎಲ್ಲಿ ನೀವಾತ್ಮರು ನಿವಾಸ ಮಾಡುತ್ತೀರಿ, ಅದಕ್ಕೆ ಬ್ರಹ್ಮಾಂಡವೆಂದೂ ಹೇಳಲಾಗುತ್ತದೆ. ಇಲ್ಲಿ ರುದ್ರ ಯಜ್ಞವನ್ನು ರಚಿಸಿದಾಗ ತಂದೆಯ ಜೊತೆ ಜೊತೆಗೆ ನೀವಾತ್ಮರಿಗೂ ಸಾಲಿಗ್ರಾಮಗಳ ರೂಪದಲ್ಲಿ ಪೂಜೆ ಮಾಡುತ್ತಾರೆ ಏಕೆಂದರೆ ನೀವು ಅನೇಕರ ಕಲ್ಯಾಣ ಮಾಡುತ್ತೀರಿ, ತಂದೆಯ ಜೊತೆಯಲ್ಲಿ ನೀವು ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ ಆತ್ಮಿಕ ಸೇವೆ ಮಾಡುತ್ತೀರಿ. ಆದ್ದರಿಂದ ತಂದೆಯ ಜೊತೆ ನೀವು ಮಕ್ಕಳಿಗೂ ಪೂಜೆ ನಡೆಯುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಮಾಯೆಯ ಬಿರುಗಾಳಿಗಳನ್ನು ಓಡಿಸಲು ತಂದೆಯನ್ನು ಬಹಳ-ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ, ಯೋಗಾಗ್ನಿಯಿಂದ ಆತ್ಮವನ್ನು ಸತ್ಯ-ಸತ್ಯವಾದ ಚಿನ್ನವನ್ನಾಗಿ ಮಾಡಿಕೊಳ್ಳಬೇಕಾಗಿದೆ.

2. ಬೇಹದ್ದಿನ ವೈರಾಗಿಗಳಾಗಿ ಈ ಹಳೆಯ ಪ್ರಪಂಚವನ್ನು ಮರೆಯಬೇಕಾಗಿದೆ. ಪ್ರಪಂಚವು ಬದಲಾಗುತ್ತಿದೆ, ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ. ಆದ್ದರಿಂದ ಇದರೊಂದಿಗೆ ಸನ್ಯಾಸವನ್ನು ತೆಗೆದುಕೊಳ್ಳಬೇಕಾಗಿದೆ.

ವರದಾನ:-

ಯಾವ ಜ್ಞಾನ ರತ್ನಗಳು ಡೈರಿಯಲ್ಲಿ ಅಥವಾ ಬುದ್ಧಿಯಲ್ಲಿರುತ್ತದೆಯೋ, ಅದನ್ನು ಪ್ರತಿನಿತ್ಯವೂ ಪರಿಶೋಧಿಸಿರಿ ಹಾಗೂ ಅದನ್ನು ಅನುಭವದಲ್ಲಿ ತಂದುಕೊಳ್ಳುತ್ತೀರೆಂದರೆ, ಯಾವುದೇ ಪ್ರಕಾರದ ಸಮಸ್ಯೆಯೂ ಸಹ ಸಹಜವಾಗಿಯೇ ಪರಿಹರಿಸಬಹುದು. ಎಂದಿಗೂ ಸಹ ಸಮಸ್ಯೆಗಳೆಂಬ ಕಲ್ಲುಗಳನ್ನು ವ್ಯರ್ಥ ಸಂಕಲ್ಪಗಳೆಂಬ ಸುತ್ತಿಗೆಯಿಂದ ಹೊಡೆಯುವುದರಲ್ಲಿ ಸಮಯವನ್ನು ಕಳೆಯಬಾರದು. “ಡ್ರಾಮಾ” ಶಬ್ಧದ ಸ್ಮೃತಿಯಿಂದ ಮೇಲ್ಜಿಗಿದು ಮುಂದೆ ಸಾಗಿರಿ. ಆನಂತರ ಈ ಹಳೆಯ ಸಂಸ್ಕಾರಗಳು ತಮ್ಮ ದಾಸನಾಗಿ ಬಿಡುತ್ತವೆ. ಆದರೆ ಅದಕ್ಕೆ ಮೊದಲು ಚಕ್ರವರ್ತಿಯಾಗಿರಿ, ಸಿಂಹಾಸನಾಧೀಶರು ಆಗಬೇಕು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top