13 August 2021 KANNADA Murli Today | Brahma Kumaris

Read and Listen today’s Gyan Murli in Kannada

August 12, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಮನ್ಮನಾಭವದ ಡ್ರಿಲ್ ಸದಾ ಮಾಡುತ್ತಾ ಇರಿ, ಇದರಿಂದ 21 ಜನ್ಮಗಳಿಗಾಗಿ ದಷ್ಟ-ಪುಷ್ಟ (ನಿರೋಗಿ) ಆಗಿ ಬಿಡುತ್ತೀರಿ”

ಪ್ರಶ್ನೆ:: -

ಸದ್ಗುರುವಿನ ಯಾವ ಶ್ರೀಮತವನ್ನು ಪಾಲನೆ ಮಾಡುವುದರಲ್ಲಿಯೇ ಗುಪ್ತ ಪರಿಶ್ರಮವಿದೆ?

ಉತ್ತರ:-

ಸದ್ಗುರುವಿನ ಶ್ರೀಮತವಾಗಿದೆ – ಮಧುರ ಮಕ್ಕಳೇ, ಈ ದೇಹವನ್ನೂ ಮರೆತು ನನ್ನನ್ನು ನೆನಪು ಮಾಡಿರಿ. ತನ್ನನ್ನು ಒಂಟಿ ಆತ್ಮನೆಂದು ತಿಳಿಯಿರಿ, ದೇಹೀ-ಅಭಿಮಾನಿಯಾಗಿರುವ ಪುರುಷಾರ್ಥ ಮಾಡಿ. ಎಲ್ಲರಿಗೆ ಇದೇ ಸಂದೇಶ ಕೊಡಿ – ಅಶರೀರಿಯಾಗಿರಿ, ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ಮರೆಯಿರಿ ಆಗಲೇ ನೀವು ಪಾವನರಾಗಿ ಬಿಡುವಿರಿ. ಈ ಶ್ರೀಮತವನ್ನು ಪಾಲನೆ ಮಾಡುವುದರಲ್ಲಿ ಮಕ್ಕಳು ಗುಪ್ತ ಪರಿಶ್ರಮ ಪಡಬೇಕಾಗುತ್ತದೆ. ಅದೃಷ್ಟವಂತ ಮಕ್ಕಳು ಈ ಗುಪ್ತ ಪರಿಶ್ರಮ ಪಡುವರು.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಕ್ಕಳು ತಮ್ಮ ಸಹೋದರ-ಸಹೋದರಿಯರಿಗೆ ಡ್ರಿಲ್ ಅನ್ನು ಕಲಿಸಲು ಕುಳಿತಿದ್ದೀರಿ, ಇದು ಎಂತಹ ಡ್ರಿಲ್ ಆಗಿದೆ? ಇದರಲ್ಲಿ ಮಕ್ಕಳು ಏನನ್ನೂ ಹೇಳುವಂತಿಲ್ಲ, ಆ ದೈಹಿಕ ಡ್ರಿಲ್ ಕಲಿಸುವವರು ಮಾತನಾಡಬೇಕಾಗುತ್ತದೆ. ಇವರಂತೂ ಪರಮ ಶಿಕ್ಷಕನಾಗಿದ್ದಾರೆ, ಗೀತೆಯ ಭಗವಂತನೂ ಆಗಿದ್ದಾರೆ. ಮಕ್ಕಳಿಗೆ ಯೋಗದ ಡ್ರಿಲ್ ಅನ್ನೂ ಕಲಿಸುತ್ತಾರೆ. ಇದು ಗುಪ್ತವಾದ ಡ್ರಿಲ್ ಆಗಿದೆ, ಈ ಡ್ರಿಲ್ ಅನ್ನು ಏಕೆ ಕಲಿಸಲಾಗುತ್ತದೆ ಎಂದರೆ ವಿದ್ಯಾರ್ಥಿಗಳು ದಷ್ಟ-ಪುಷ್ಟವಾಗಲಿ ಎಂದು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಈ ಮನ್ಮನಾಭವದ ಡ್ರಿಲ್ನಿಂದ 21 ಜನ್ಮಗಳಿಗಾಗಿ ದಷ್ಟ-ಪುಷ್ಟವಾಗಿರುತ್ತೀರಿ. ಎಂದೂ ರೋಗಿಯಾಗುವುದಿಲ್ಲ ಅಂದಮೇಲೆ ಇದು ಎಷ್ಟು ಒಳ್ಳೆಯ ಆತ್ಮಿಕ ಡ್ರಿಲ್ ಆಗಿದೆ! ತಂದೆಯು ತಿಳಿಸುತ್ತಾರೆ – ಮಕ್ಕಳೇ, ಮನ್ಮಾನಭವ ಆಗಿರಿ. ಇದರಲ್ಲಿ ಏನನ್ನೂ ಹೇಳುವ ಅವಶ್ಯಕತೆಯೇ ಇಲ್ಲ, ಕೇವಲ ತಮ್ಮನ್ನು ಆತ್ಮನೆಂದು ತಿಳಿಯಿರಿ. ದೇಹೀ-ಅಭಿಮಾನಿ ಭವ ಎಂದು ತಿಳಿಸಲಾಗುತ್ತದೆ. ಭವದ ಅರ್ಥವೇ ಆಗಿದೆ – ನೀವು ತಂದೆಯನ್ನು ನೆನಪು ಮಾಡಿದರೆ ಸದಾ ಆರೋಗ್ಯವಂತರಾಗುತ್ತೀರಿ. ಕಲ್ಪದ ಮೊದಲೂ ಸಹ ನಾವು ಆತ್ಮಿಕ ವ್ಯಾಯಾಮದಿಂದ ಸದಾ ಆರೋಗ್ಯವಂತರಾಗಿದ್ದೆವು. ಇದನ್ನು ಆತ್ಮಿಕ ತಂದೆ ಪರಮಪಿತ ಪರಮಾತ್ಮ ಶಿವನೇ ಕಲಿಸುತ್ತಾರೆ. ಅವರಿಗೇ ಭಗವಂತನೆಂದು ಹೇಳಲಾಗುತ್ತದೆ, ಅವರ ಪೂಜೆಯೂ ನಡೆಯುತ್ತದೆ. ಶಿವಾಯ ನಮಃ ಎಂದು ಹೇಳುತ್ತಾರಲ್ಲವೆ. ಬ್ರಹ್ಮ ದೇವತಾಯ ನಮಃ, ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ. ಈ ಆತ್ಮಿಕ ವ್ಯಾಯಾಮವನ್ನು ಯಾವುದೇ ಮನುಷ್ಯರು ಕಲಿಸುವುದಿಲ್ಲ. ನಿಮಗೆ ಇದನ್ನು ಬ್ರಹ್ಮನೂ ಕಲಿಸುವುದಿಲ್ಲ. ಭಲೆ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ ಆದರೆ… ಪತ್ರದ ಮೇಲೂ ಸಹ ಶಿವಬಾಬಾ ಛಿ/o ಬ್ರಹ್ಮಾ ಎಂದು ಬರೆಯುತ್ತೀರಿ. ಅವರಂತೂ ಗುಪ್ತವಾಗಿದ್ದಾರೆ ಆದರೆ ಬ್ರಹ್ಮನು ಪ್ರಜಾಪಿತನಾಗಿದ್ದಾರೆ ಎಂದು ಮನುಷ್ಯರಿಗೆ ಹೇಗೆ ಅರ್ಥವಾಗುವುದು? ಇಡೀ ಪ್ರಪಂಚವೇ ಅವರ ಮಕ್ಕಳಾಗಿದ್ದಾರೆ ಏಕೆಂದರೆ ಪ್ರಜಾಪಿತನಲ್ಲವೆ. ಈ ಆತ್ಮಿಕ ವ್ಯಾಯಾಮವನ್ನು ಕಲಿಸಿಕೊಡುವವರು ನಿರಾಕಾರ ತಂದೆಯಾಗಿದ್ದಾರೆ ಆದರೆ ಗುಪ್ತವಾಗಿದ್ದಾರೆ. ಗುಪ್ತವಾಗಿರುವ ಕಾರಣ ಮನುಷ್ಯರಿಗೆ ಇದನ್ನು ತಿಳಿದುಕೊಳ್ಳುವುದರಲ್ಲಿಯೂ ಕಷ್ಟವಾಗುತ್ತದೆ. ಬ್ರಹ್ಮನಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಇಲ್ಲಿ ಬ್ರಹ್ಮಾಕುಮಾರ-ಕುಮಾರಿಯರು ಅಂದರೆ ಬ್ರಹ್ಮನ ಸಂತಾನರೆಂದೇ ಹೆಸರನ್ನು ತೋರಿಸುತ್ತಾರೆ. ಯಾವಾಗ ಯಾರೇ ಬಂದರೂ ಸಹ ಅವರಿಗೆ ತಿಳಿಸಿಕೊಡಬೇಕು – ಹೊಸ ಪ್ರಪಂಚವನ್ನು ರಚಿಸುವವರು ಈ ಬ್ರಹ್ಮಾರವರಲ್ಲ, ನಿರಾಕಾರ ತಂದೆಯಾಗಿದ್ದಾರೆ. ಅವರು ಬ್ರಹ್ಮಾರವರ ಮೂಲಕ ರಚನೆಯನ್ನು ರಚಿಸುತ್ತಾರೆ, ಪಾರಲೌಕಿಕ ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ರಚಿಸುತ್ತಾರೆ ಅಂದಮೇಲೆ ಇವರೂ ಸಹ ಪರಮಾತ್ಮನ ರಚನೆಯಾದರು. ನೀವು ಪತ್ರದ ಮೇಲೆ ಬರೆಯುತ್ತೀರಿ – ಶಿವಬಾಬಾ ಛಿ/o ಬ್ರಹ್ಮಾ. ಅಂದಾಗ ನೆನಪು ಮಾಡಲು ಇದೂ ಸಹ ಯುಕ್ತಿಯಾಗಿದೆ. ಶಿವಬಾಬಾ ಬ್ರಹ್ಮನ ಮೂಲಕ ಕಲಿಸುತ್ತಾರೆ. ಕೇವಲ ಮನ್ಮಾನಭವ ಎಂದು ಹೇಳುತ್ತಾರೆ ಮತ್ತ್ಯಾವುದೇ ಕಷ್ಟ ಕೊಡುವುದಿಲ್ಲ, ಇಷ್ಟನ್ನೇ ಹೇಳುತ್ತಾರೆ, ನೀವು ತಮ್ಮ ಉನ್ನತಿಯನ್ನು ಮಾಡಿಕೊಳ್ಳಲು ಬಯಸುವುದಾದರೆ ಮತ್ತು ಸತ್ಯ ಖಂಡದ ಮಾಲೀಕರಾಗಬೇಕೆಂದರೆ ಸತ್ಯ ಖಂಡವನ್ನು ಸ್ಥಾಪನೆ ಮಾಡುವವರಂತೂ ಒಬ್ಬರೇ ತಂದೆಯಾಗಿದ್ದಾರೆ, ಅವರನ್ನೇ ನೆನಪು ಮಾಡಿರಿ. ಬೇಹದ್ದಿನ ತಂದೆಯೇ ಬಂದು ಮಕ್ಕಳಿಗೆ ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ಪಾಪಗಳಿಂದ ಮುಕ್ತರಾಗುತ್ತೀರಿ, ಪರಮಪಿತ ಪರಮಾತ್ಮನ ಹೊರತು ಕೃಷ್ಣನಿಗೂ ಸಹ ಪತಿತ-ಪಾವನನೆಂದು ಹೇಳಲಾಗುವುದಿಲ್ಲ, ಮತ್ತ್ಯಾವುದೇ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲರೂ ಗಾಡ್ಫಾದರ್ ಎಂದೇ ಹೇಳುತ್ತಾರೆ, ಎಲ್ಲರೂ ಅವರನ್ನು ತಂದೆಯೆಂದು ಹೇಳುತ್ತಾರೆ ಅಂದಮೇಲೆ ಅವರಿಗೆ ಸರ್ವವ್ಯಾಪಿಯೆಂದು ಹೇಳಲು ಹೇಗೆ ಸಾಧ್ಯ! ಅವರು ಎಲ್ಲರನ್ನೂ ಮುಕ್ತರನ್ನಾಗಿ ಮಾಡಲು ಬರುತ್ತಾರೆಂದು ಹೇಳುತ್ತಾರೆ. ಇದನ್ನು ಮನುಷ್ಯರು ತಿಳಿದುಕೊಂಡಿಲ್ಲ ಆದ್ದರಿಂದ ಕಲ್ಪದ ಆಯಸ್ಸನ್ನು ಉಲ್ಟಾ ಬರೆದು ಬಿಟ್ಟಿದ್ದಾರೆ. ಈಗ ಮಕ್ಕಳು ಈ ಡ್ರಿಲ್ ಮಾಡಬೇಕಾಗಿದೆ. ಜ್ಞಾನವಂತೂ ದೊರಕಿದೆ, ಯಾವಾಗ ಕುಳಿತುಕೊಳ್ಳುತ್ತೀರೋ ಆಗ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಇದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಟೀಚರ್ ಸನ್ಮುಖದಲ್ಲಿ ಗದ್ದುಗೆಯ ಮೇಲೆ ಕುಳಿತುಕೊಂಡರೆ ಶೋಭಿಸುತ್ತದೆ, ನಿಯಮವೇನೆಂದರೆ ಡ್ರಿಲ್ ಮಾಡಿಸಲು ಟೀಚರ್ ಅವಶ್ಯವಾಗಿ ಬೇಕು. ಕೆಲವರು ಹಿರಿಯ ಟೀಚರ್ ಇರುತ್ತಾರೆ, ಇನ್ನೂ ಕೆಲವರು ಕಿರಿಯ ಟೀಚರ್ ಇರುತ್ತಾರೆ. ಈಗ ನಿಮ್ಮಿಂದ ಪರೀಕ್ಷೆ ತೆಗೆದುಕೊಳ್ಳುವ ಯಾವುದೇ ಅವಶ್ಯಕತೆಯಿಲ್ಲ ಏಕೆಂದರೆ ನೀವು ಎಷ್ಟು ಸಮಯ ನಾವು ಪ್ರಿಯಾತಿ ಪ್ರಿಯ ತಂದೆಯನ್ನು ನೆನಪು ಮಾಡುತ್ತೇವೆಂದು ತಿಳಿದುಕೊಂಡಿದ್ದೀರಿ. ಬ್ರಹ್ಮನು ಪ್ರಿಯಾತಿ ಪ್ರಿಯನಲ್ಲ, ಯಾರು ಸದಾ ಪಾವನನಾಗಿದ್ದಾರೆಯೋ ಅವರೇ ಪ್ರಿಯಾತಿ ಪ್ರಿಯನಾಗಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಎಲ್ಲರಿಗಿಂತ ಪ್ರಿಯರು ಯಾರು ಎಂದು. ಮನುಷ್ಯರು ಪರಮಾತ್ಮನನ್ನೇ ಹೇ ದುಃಖಕರ್ತ-ಸುಖಕರ್ತನೆಂದು ನೆನಪು ಮಾಡುತ್ತಾರೆ, ಅವರಿಗೇ ಮುಕ್ತಿದಾತನೆಂತಲೂ ಹೇಳುತ್ತಾರೆ ಅರ್ಥಾತ್ ಅವರು ದುಃಖಗಳಿಂದ ಮುಕ್ತರನ್ನಾಗಿ ಮಾಡುವವರಾಗಿದ್ದಾರೆ ಆದ್ದರಿಂದ ಮಕ್ಕಳು ತಮ್ಮ ಪುರುಷಾರ್ಥ ಮಾಡಬೇಕಾಗಿದೆ. ಡ್ರಾಮಾನುಸಾರ ಈ ಪ್ರಪಂಚವು ಪಾವನವಾಗಲೇಬೇಕಾಗಿದೆ ಮತ್ತು ಪಾವನ ಪ್ರಪಂಚವಾಗಲು ಇದಕ್ಕೆ ಬೆಂಕಿ ಬೀಳಲಿದೆ. ಹೇಗೆ ಬೆಂಕಿ ಬೀಳುವುದು ಎಂಬುದನ್ನೂ ಸಹ ತಿಳಿದುಕೊಂಡಿದ್ದೀರಿ. ವಿನಾಶವಾಗದೇ ಪ್ರಪಂಚವು ಪಾವನವಾಗಲು ಸಾಧ್ಯವಿಲ್ಲ. ಇದು ರುದ್ರ ಜ್ಞಾನ ಯಜ್ಞವಾಗಿದೆ. ರುದ್ರ ಮತ್ತು ಶಿವ – ಇವೆರಡರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಆದರೆ ಶಿವ ಎಂಬ ಹೆಸರು ಮುಖ್ಯವಾಗಿದೆ. ಬಾಕಿ ತಮ್ಮ-ತಮ್ಮ ಭಾಷೆಗಳಲ್ಲಿ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಮೂಲ ಹೆಸರಾಗಿದೆ – ಶಿವ. ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಭಾರತದಲ್ಲಿ ಶಿವ ಜಯಂತಿಯು ಪ್ರಸಿದ್ಧವಾಗಿದೆ, ಬೇಹದ್ದಿನ ತಂದೆಯ ಶಿವ ಜಯಂತಿಯಾಗುತ್ತದೆ ಅಂದಮೇಲೆ ಅವರು ಅವಶ್ಯವಾಗಿ ಬರುವರು. ಶಿವ ತಂದೆಯ ಹೆಸರು ಪ್ರಸಿದ್ಧವಾಗಿದೆ, ಅವರು ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡಿಸುವವರಾಗಿದ್ದಾರೆ ಅಂದಮೇಲೆ ಆ ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ನೆನಪು ಮಾಡಬೇಕಾಗಿದೆ. ಬ್ರಹ್ಮನು ಶ್ರೇಷ್ಠಾತಿ ಶ್ರೇಷ್ಠನಲ್ಲ, ವಾಸ್ತವದಲ್ಲಿ ಬ್ರಹ್ಮನೂ ಸಹ ತಂದೆಯಿಂದಲೇ ಶ್ರೇಷ್ಠನಾಗುತ್ತಾರೆ ಮತ್ತೆ ಕೆಳಗೂ ಇಳಿಯುತ್ತಾರೆ. ನೀವು ಬಿ.ಕೆ.ಗಳೂ ಸಹ ಕನಿಷ್ಟರಾಗಿದ್ದಿರಿ, ಈಗ ಪುನಃ ಶ್ರೇಷ್ಠರಾಗುತ್ತಿದ್ದೀರಿ. ಒಮ್ಮೆಲೇ ಶ್ರೇಷ್ಠ ತಂದೆಯ ಮನೆಗೆ ಹೋಗುವಿರಿ. ಈ ಸಮಯದಲ್ಲಿ ನೀವು ತ್ರಿಕಾಲದರ್ಶಿಗಳಾಗುತ್ತಿದ್ದೀರಿ, ನಾವೇ ಸ್ವದರ್ಶನ ಚಕ್ರಧಾರಿಗಳಾಗಿದ್ದೇವೆ. ನಾವು ಬ್ರಹ್ಮಾಂಡ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುವವರಾಗಿದ್ದೇವೆಂದು ನಿಮಗೆ ತಿಳಿದಿದೆ. ಬ್ರಹ್ಮಾಂಡ ಅರ್ಥಾತ್ ಅತಿ ಮೇಲಿನ ಸ್ಥಾನ, ಎಲ್ಲಿ ಎಲ್ಲಾ ಆತ್ಮರು ನಿವಾಸ ಮಾಡುತ್ತಾರೆ. ಮೂಲವತನದಲ್ಲಿ ಆತ್ಮರು ನಿವಾಸ ಮಾಡುತ್ತಾರೆ ಎಂದು ತಿಳಿಸುವವರು ಪ್ರಪಂಚದಲ್ಲಿ ಮತ್ತ್ಯಾರೂ ಇಲ್ಲ. ವಿಶ್ವ ಮತ್ತು ಬ್ರಹ್ಮಾಂಡವು ಬೇರೆ-ಬೇರೆಯಾಗಿದೆ, ಆತ್ಮರು ನಿರ್ವಾಣ ಧಾಮದಲ್ಲಿರುತ್ತಾರೆ, ಅದಕ್ಕೆ ಶಾಂತಿಧಾಮವೆಂದು ಹೇಳಲಾಗುತ್ತದೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ. ಅದರ ನಿಜವಾದ ಹೆಸರು – ನಿರ್ವಾಣಧಾಮ ಹಾಗೂ ಶಾಂತಿಧಾಮವಾಗಿದೆ. ಆತ್ಮದ ಸ್ವರೂಪವೂ ಶಾಂತಿಯಾಗಿದೆ, ಒಂದು ಶಾಂತಿಧಾಮ ಅದರ ನಂತರ ಮೂವ್ಹಿ ಧಾಮ (ಸೂಕ್ಷ್ಮ ಲೋಕ) ಮತ್ತು ಇದು ಟಾಕಿ ಧಾಮ (ಶಬ್ಧ ಪ್ರಪಂಚ). ಮೂವ್ಹಿಧಾಮದಲ್ಲಿ ಹೆಚ್ಚು ಇರುವುದಿಲ್ಲ, ಶಾಂತಿಧಾಮದಲ್ಲಂತೂ ಅನೇಕರು ಇರಬೇಕಾಗುತ್ತದೆ ಮತ್ತ್ಯಾವುದೇ ಸ್ಥಾನವಿಲ್ಲ. ಆತ್ಮವು ಯಾವಾಗ ತಂದೆಯನ್ನು ಮತ್ತು ಮನೆಯನ್ನು ನೆನಪು ಮಾಡುತ್ತದೆಯೋ ಆಗ ಮೇಲೆ ನೆನಪು ಮಾಡುತ್ತದೆ. ಮಧ್ಯದಲ್ಲಿರುವ ಧಾಮವನ್ನು (ಸೂಕ್ಷ್ಮ ಲೋಕ) ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಮನುಷ್ಯರಿಗಂತೂ ಇಷ್ಟಾದರೂ ಜ್ಞಾನವಿಲ್ಲ. ಬ್ರಹ್ಮಾ-ವಿಷ್ಣು-ಶಂಕರರು ಸೂಕ್ಷ್ಮವತನದಲ್ಲಿರುತ್ತಾರೆ ಎಂದು ಕೇವಲ ಹೇಳಿ ಬಿಡುತ್ತಾರೆ ಬಾಕಿ ಅವರ ಕರ್ತವ್ಯದ ಬಗ್ಗೆ ಗೊತ್ತಿಲ್ಲ. ಅವರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮನಾಗುತ್ತಾರೆ. ಇದು ಅತಿ ಚಿಕ್ಕ ಯುಗವಾಗಿದೆ, ಸ್ವಲ್ಪವೇ ಸಮಯದ್ದಾಗಿದೆ. ಹೇಗೆ ಪುರುಷೋತ್ತಮ ಮಾಸವೆಂದು ಹೇಳಲಾಗುತ್ತದೆಯೋ ಹಾಗೆಯೇ ನಿಮ್ಮದು ಇದು ವಜ್ರ ಸಮಾನ ಉತ್ತಮರಾಗುವ ಶ್ರೇಷ್ಠ ಜನ್ಮವಾಗಿದೆ. ಶೂದ್ರರಿಂದ ಬ್ರಾಹ್ಮಣರಾಗುವುದು ಎಲ್ಲದಕ್ಕಿಂತ ಉತ್ತಮವಾಗಿದೆ. ಬ್ರಾಹ್ಮಣರಾಗುತ್ತೀರೆಂದರೆ ತಾತನ ಆಸ್ತಿಯನ್ನು ಪಡೆಯಲು ಹಕ್ಕುದಾರರಾಗುತ್ತೀರಿ.

ತಂದೆಯು ಮಕ್ಕಳಿಗೆ ಹೇಳುತ್ತಾರೆ – ಮಕ್ಕಳೇ ಸದಾ ಮನ್ಮನಾಭವ. ತಂದೆಯ ಸಂದೇಶವನ್ನು ಎಲ್ಲರಿಗೆ ಕೊಡುತ್ತಾ ಇರಿ. ತಂದೆಗೆ ಮೆಸೆಂಜರ್ ಎಂದು ಹೇಳಲಾಗುತ್ತದೆ, ಮತ್ತ್ಯಾರೂ ಸಹ ಮೆಸೆಂಜರ್ ಅಥವಾ ಪೈಗಂಬರ್ ಅಲ್ಲ, ಆ ಧರ್ಮ ಗುರುಗಳಂತೂ ಬಂದು ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಪೈಗಂಬರ್ ಕೇವಲ ಒಬ್ಬರೇ ಆಗಿದ್ದಾರೆ, ಅವರೇ ಬಂದು ನಿಮಗೆ ಪವಿತ್ರರಾಗುವ ಸಂದೇಶ ಕೊಡುತ್ತಾರೆ. ಧರ್ಮ ಪಿತರು ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ ಆದರೆ ಅವರು ಮರಳಿ ಕರೆದುಕೊಂಡು ಹೋಗುವ ಮಾರ್ಗದರ್ಶಕರಲ್ಲ. ಆ ಒಬ್ಬರೇ ಸದ್ಗುರು ಸದ್ಗತಿ ನೀಡುವವರಾಗಿದ್ದಾರೆ. ಸತ್ಯವನ್ನು ಹೇಳುವವರು, ಸತ್ಯ ಮಾರ್ಗವನ್ನು ತಿಳಿಸುವವರು ಒಬ್ಬರೇ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ ಅಂದಾಗ ಮಕ್ಕಳು ಬಹಳ ಗುಪ್ತ ಪರಿಶ್ರಮ ಪಡಬೇಕಾಗಿದೆ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಈ ದೇಹವನ್ನೂ ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಶರೀರ ಬಿಟ್ಟರೆ ಇಡೀ ಪ್ರಪಂಚವೇ ಬಿಟ್ಟು ಹೋಗುತ್ತದೆ, ಆತ್ಮವು ಒಂಟಿಯಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಆತ್ಮಾಭಿಮಾನಿಯಾಗಿರಿ, ಆಗ ಯಾವುದೇ ಮಿತ್ರ ಸಂಬಂಧಿಗಳು ನೆನಪಿಗೆ ಬರುವುದಿಲ್ಲ. ನಾವಾತ್ಮರಾಗಿದ್ದೇವೆ, ನಾವು ತಂದೆಯ ಬಳಿಗೆ ಹೋಗುತ್ತೇವೆ. ನೀವು ನನ್ನ ಬಳಿ ಹೇಗೆ ಬರಬಹುದು ಎಂದು ತಂದೆಯು ಸಲಹೆ ನೀಡುತ್ತಾರೆ. ಈ ಬ್ರಹ್ಮಾರವರೂ ಸಹ ಹೆಸರುವಾಸಿಯಾಗಿದ್ದಾರೆ. ಇವರ ಮೂಲಕ ತಂದೆಯು ಎಲ್ಲಾ ಆತ್ಮರ ಮಾರ್ಗದರ್ಶಕನಾಗಿ ಸೊಳ್ಳೆಗಳೋಪಾದಿಯಲ್ಲಿ ಮರಳಿ ಕರೆದುಕೊಂಡು ಹೋಗುತ್ತಾರೆ. ಈ ಯಥಾರ್ಥ ಜ್ಞಾನವು ಕೇವಲ ನೀವು ಮಕ್ಕಳ ಬುದ್ಧಿಯಲ್ಲಿದೆ. ನಿಮಗೆ ಪಾಂಡವ ಸೇನೆಯೆಂದೂ ಹೇಳುತ್ತಾರೆ. ಪಾಂಡವ ಪತಿಯು ಸ್ವಯಂ ಸಾಕ್ಷಾತ್ ಪರಮಪಿತ ಪರಮಾತ್ಮನಾಗಿದ್ದಾರೆ, ಅವರು ನೀವು ಮಕ್ಕಳಿಗೆ ಆತ್ಮಿಕ ವ್ಯಾಯಾಮವನ್ನು ಕಲಿಸುತ್ತಿದ್ದಾರೆ ಕಲ್ಪದ ಹಿಂದಿನ ತರಹ. ವಿನಾಶವಾದಾಗ ಎಲ್ಲಾ ಆತ್ಮರು ಶರೀರವನ್ನು ಬಿಟ್ಟು ಹೊರಟು ಹೋಗುವರು. ಸತ್ಯಯುಗದಲ್ಲಿ ಯಾವಾಗ ಕೆಲವರೇ ಆತ್ಮರಿರುವರೋ ಆಗ ಒಂದು ರಾಜ್ಯವಿರುತ್ತದೆ, ಈಗ ಅನೇಕವಿದೆ ನಂತರ ಅವಶ್ಯವಾಗಿ ಒಂದೇ ರಾಜ್ಯವಾಗುವುದು. ಈ ಜ್ಞಾನವನ್ನು ಇಡೀ ದಿನ ಬುದ್ಧಿಯಲ್ಲಿ ಸ್ಮರಣೆ ಮಾಡಬೇಕಾಗಿದೆ. ಮಕ್ಕಳೇ, ಪ್ರದರ್ಶನಿಯಲ್ಲಿಯೂ ತಿಳಿಸಬೇಕಾಗಿದೆ, ಹೊಸ ದೆಹಲಿಯಿದ್ದಾಗ ಹೊಸ ಭಾರತವಾಗಿತ್ತು, ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಆದಿ ಸನಾತನ ಯಾವುದೇ ಹಿಂದೂ ಧರ್ಮವಾಗಿರಲಿಲ್ಲ. ನಾವು ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ, ಇದನ್ನು ಅನ್ಯ ಧರ್ಮದವರು ಒಪ್ಪುವುದಿಲ್ಲ. ಯಾರು ಮೊದಲು ಬರುವರೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಇವು ಬಹಳ ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ – ಈಗ ನಾಟಕವು ಮುಕ್ತಾಯವಾಗುತ್ತದೆ, ಎಲ್ಲಾ ಪಾತ್ರಧಾರಿಗಳು ಬಂದು ಬಿಟ್ಟಿದ್ದಾರೆ. 84 ಜನ್ಮಗಳನ್ನು ಪೂರ್ಣಮಾಡಿದಿರಿ, ಈಗ ಮತ್ತೆ ಮನೆಗೆ ಹೋಗಬೇಕಾಗಿದೆ ಏಕೆಂದರೆ ಬಹಳ ಸುಸ್ತಾಗಿ ಬಿಟ್ಟಿದ್ದೀರಲ್ಲವೆ. ಭಕ್ತಿಮಾರ್ಗವೇ ಸುಸ್ತಾಗುವ ಮಾರ್ಗವಾಗಿದೆ, ತಂದೆಯು ತಿಳಿಸುತ್ತಾರೆ – ಈಗ ನನ್ನನ್ನು ನೆನಪು ಮಾಡಿರಿ, ಅನ್ಯರಿಗೂ ಸಂದೇಶ ನೀಡಿರಿ – ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಅಶರೀರಿಯಾಗಿರಿ ಆಗ ಪಾವನರಾಗಿ ಬಿಡುವಿರಿ, ಏಕೆಂದರೆ ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈಗ ಮೃತ್ಯು ಸನ್ಮುಖದಲ್ಲಿ ನಿಂತಿದೆ.

ಇಲ್ಲಿಯೂ ಮಕ್ಕಳು ಸನ್ಮುಖದಲ್ಲಿ ತಂದೆಯ ಬಳಿ ರಿಫ್ರೆಶ್ ಆಗಲು ಬರುತ್ತೀರಿ, ತಂದೆಯು ಸನ್ಮುಖದಲ್ಲಿ ಮಕ್ಕಳಿಗೆ ತಿಳಿಸುತ್ತಾರೆ – ಮಕ್ಕಳೇ, ದೇಹಾಭಿಮಾನವನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿರಿ. ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ, ನೀವು ಒಬ್ಬ ತಂದೆಯನ್ನು ನೆನಪು ಮಾಡಿ ಪವಿತ್ರರಾಗಿರಿ ಆಗ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಒಂದುವೇಳೆ ಪರಿಶ್ರಮ ಪಡದಿದ್ದರೆ ಫಲವು ಸಿಗುವುದಿಲ್ಲ ಮತ್ತೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಕ್ಕಳೇ, ತಮ್ಮ ಸಂಪಾದನೆಯನ್ನೂ ಜಮಾ ಮಾಡಿಕೊಳ್ಳುತ್ತಾ ಇರಿ ಮತ್ತು ಅನ್ಯರಿಗೂ ನಿಮಂತ್ರಣ ಕೊಡಿ, ತಂದೆಯ ಮಾರ್ಗವನ್ನೂ ತಿಳಿಸಿರಿ. ನೀವು ಮಕ್ಕಳೂ ಸಹ ಕಲ್ಯಾಣಕಾರಿಗಳಾಗಬೇಕಾಗಿದೆ, ತಮ್ಮ ಮಿತ್ರ ಸಂಬಂಧಿಗಳ ಕಲ್ಯಾಣ ಮಾಡಬೇಕಾಗಿದೆ. ಇಲ್ಲಿ ನಿಮ್ಮನ್ನು ದೇಹೀ-ಅಭಿಮಾನಿಗಳನ್ನಾಗಿ ಮಾಡಲಾಗುತ್ತದೆ. ತಂದೆಯು ಮಹಾಮಂತ್ರವನ್ನು ಕೊಡುತ್ತಾರೆ. ಪ್ರಾಚೀನ ಯೋಗವನ್ನು ತಂದೆಯೇ ಬಂದು ಕಲಿಸಿದ್ದಾರೆ, ಅದಕ್ಕಾಗಿಯೇ ಗಾಯನವಿದೆ – ಯೋಗಾಗ್ನಿಯಿಂದ ಪಾಪಗಳು ಭಸ್ಮವಾಗುತ್ತವೆ, ಕಲ್ಪದ ಮೊದಲೂ ಸಹ ಇದೇ ಸೂಚನೆ ಸಿಕ್ಕಿತ್ತು. ತಂದೆಯು ಸನ್ನೆ ಮಾಡುತ್ತಾರೆ – ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ, ಭಲೆ ತಮ್ಮ ಗೃಹಸ್ಥ ವ್ಯವಹಾರದಲ್ಲಿಯೇ ಇರಿ, ನಾನು ನಿಮಗೆ ಶರಣಾದೆನು… ಎಂದು ಗಾಯನವಿದೆ. ಇದೂ ಸಹ ಆಗುತ್ತದೆ – ಯಾರಾದರೂ ದುಃಖಿಯಾದಾಗ ಅಂತಹವರು ಹೋಗಿ ಉತ್ತಮ ಶಕ್ತಿಯಿರುವವರ ಆಶ್ರಯವನ್ನು ತೆಗೆದುಕೊಳ್ಳುತ್ತಾರೆ. ಇಲ್ಲಂತೂ ಪ್ರತ್ಯಕ್ಷದಲ್ಲಿದೆ, ಯಾವಾಗ ಬಹಳ ದುಃಖವನ್ನು ನೋಡುವರೋ, ಸಹನೆ ಮಾಡಲು ಸಾಧ್ಯವಿಲ್ಲವೋ ಅಸಹಾಯಕರಾದಾಗ ಓಡಿ ಬಂದು ತಂದೆಯ ಆಶ್ರಯ ತೆಗೆದುಕೊಳ್ಳುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಸದ್ಗತಿ ನೀಡಲು ಸಾಧ್ಯವಿಲ್ಲ. ಹಳೆಯ ಪ್ರಪಂಚದ ವಿನಾಶವಾಗಲಿದೆ ಎಂದು ಮಕ್ಕಳಿಗೆ ತಿಳಿದಿದೆ, ತಯಾರಿಯು ನಡೆಯುತ್ತಿದೆ. ಇತ್ತ ಕಡೆ ನಿಮ್ಮ ಸ್ಥಾಪನೆಯ ತಯಾರಿಗಳು, ಅತ್ತ ಕಡೆ ವಿನಾಶದ ತಯಾರಿ ಆಗುತ್ತಿದೆ. ಸ್ಥಾಪನೆಯಾಗಿ ಬಿಟ್ಟರೆ ವಿನಾಶವೂ ಸಹ ಅವಶ್ಯವಾಗಿ ಆಗುವುದು. ನಿಮಗೆ ತಿಳಿದಿದೆ, ತಂದೆಯು ಸ್ಥಾಪನೆ ಮಾಡಿಸಲು ಬಂದಿದ್ದಾರೆ, ಇವರ ಮೂಲಕ ಆಸ್ತಿಯೂ ಅವಶ್ಯವಾಗಿ ಸಿಗುವುದು. ಬಾಕಿ ಪ್ರೇರಣೆಯಿಂದ ಕೆಲಸ ನಡೆಯುವುದಿಲ್ಲ. ನಾವು ತಮ್ಮ ಪ್ರೇರಣೆಯಿಂದ ಓದುತ್ತೇವೆಂದು ಶಿಕ್ಷಕರಿಗೆ ಹೇಳುವರೇ? ಒಂದುವೇಳೆ ಎಲ್ಲವೂ ಪ್ರೇರಣೆಯಿಂದ ಆಗುವಂತಿದ್ದರೆ ಶಿವ ಜಯಂತಿಯನ್ನು ಏಕೆ ಆಚರಿಸಲಾಗುತ್ತದೆ. ಪ್ರೇರಣೆಯಿಂದ ಮಾಡುವವರ ಶಿವ ಜಯಂತಿಯನ್ನು ಆಚರಿಸುವ ಅವಶ್ಯಕತೆಯಿಲ್ಲ. ಜಯಂತಿಯಂತೂ ಎಲ್ಲಾ ಆತ್ಮರಿಗೆ ಆಗುತ್ತದೆ, ಆತ್ಮರೆಲ್ಲರೂ ಜೀವದಲ್ಲಿ ಬರುತ್ತಾರೆ, ಆತ್ಮ ಮತ್ತು ಶರೀರವು ಸೇರಿದಾಗ ಪಾತ್ರವನ್ನು ಅಭಿನಯಿಸುತ್ತಾರೆ. ಆತ್ಮದ ಸ್ವ ಧರ್ಮವೇ ಶಾಂತಿಯಾಗಿದೆ, ಅದರಲ್ಲಿಯೇ ಜ್ಞಾನ ಧಾರಣೆಯಾಗುತ್ತದೆ. ಆತ್ಮವೇ ಒಳ್ಳೆಯ – ಕೆಟ್ಟ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ತಂದೆಯಂತೂ ಸ್ವರ್ಗದ ರಚಯಿತನಾಗಿದ್ದಾರೆ. ಅಲ್ಲಿ ಪವಿತ್ರತೆಯಯೇ ಇರುತ್ತದೆ, ಅಪವಿತ್ರತೆಯ ಹೆಸರು, ಗುರುತು ಇರುವುದಿಲ್ಲ. ಇದು ವಿಷಯ ಸಾಗರವಾಗಿದೆ, ಎಷ್ಟು ಸ್ಪಷ್ಟವಾಗಿ ತಿಳಿಸಿದರೂ ಸಹ ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಆದರೆ ನೀವು ಯಾರ ಮೇಲೂ ದೋಷ ಹೊರಿಸುವುದಿಲ್ಲ ಏಕೆಂದರೆ ಎಲ್ಲರೂ ಡ್ರಾಮಾದ ಬಂಧನದಲ್ಲಿ ಬಂಧಿತರಾಗಿದ್ದಾರೆ.

ನೀವು ತಿಳಿದುಕೊಳ್ಳುತ್ತೀರಿ – ಮೇಲಿನಿಂದ ಏಣಿಯನ್ನಿಳಿಯುತ್ತಾ ಕೆಳಗಿಳಿದು ಬಂದಿದ್ದೇವೆ, ಡ್ರಾಮಾನುಸಾರ ನಾವು ಇಳಿಯಲೇಬೇಕಾಗಿದೆ. ಈಗ ಮತ್ತೆ ತಂದೆಯು ತಿಳಿಸುತ್ತಾರೆ, ಮಕ್ಕಳೇ ಏರುವುದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಹೀಗೆ ಹೇಳಿ ಬಿಡುತ್ತಾರೆ. ಯಾರು ಹೀಗೆ ಹೇಳುವರೋ ಅದರಿಂದಲೇ ತಿಳಿದುಕೊಳ್ಳಲಾಗುವುದು – ಇವರ ಅದೃಷ್ಟದಲ್ಲಿ ಇಲ್ಲವೆಂದು. 2-4 ವರ್ಷಗಳ ಕಾಲ ನಡೆಯುತ್ತಾ-ನಡೆಯುತ್ತಾ ಮತ್ತೆ ಕೆಳಗೆ ಬೀಳುತ್ತಾರೆ. ನಾವು ಬಹಳ ದೊಡ್ಡ ತಪ್ಪು ಮಾಡಿದ್ದೇವೆ, ಬಹಳ ದೊಡ್ಡ ಪೆಟ್ಟು ತಿಂದೆವು ಎಂಬುದನ್ನು ಅನುಭವ ಮಾಡುತ್ತಾರೆ. ಇದೂ ಸಹ ಅರ್ಧ ಕಲ್ಪದ ರೋಗವಾಗಿದೆ, ಕಡಿಮೆಯಲ್ಲ. ಅರ್ಧ ಕಲ್ಪದ ರೋಗಿಗಳಾಗಿದ್ದೀರಿ, ಭೋಗಿಗಳಾಗುವುದರಿಂದಲೇ ರೋಗಿಗಳಾಗುತ್ತೀರಿ, ಆದ್ದರಿಂದ ತಂದೆಯು ಬಂದು ಪುರುಷಾರ್ಥ ಮಾಡಿಸುತ್ತಾರೆ. ಕೃಷ್ಣನಿಗೆ ಯೋಗೇಶ್ವರನೆಂದು ಹೇಳುತ್ತಾರೆ, ಈ ಸಮಯದಲ್ಲಿ ನೀವು ಸತ್ಯ-ಸತ್ಯವಾದ ಯೋಗಿಗಳಾಗಿದ್ದೀರಿ. ಯೋಗೇಶ್ವರನು ನಿಮಗೆ ಯೋಗವನ್ನು ಕಲಿಸುತ್ತಾರೆ. ನೀವು ಜ್ಞಾನ ಜ್ಞಾನೇಶ್ವರರೂ ಆಗಿದ್ದೀರಿ, ನಂತರ ರಾಜ ರಾಜೇಶ್ವರರಾಗುತ್ತೀರಿ. ಜ್ಞಾನದಿಂದ ನೀವು ಧನವಂತರಾಗುತ್ತೀರಿ, ಯೋಗದಿಂದ ಸದಾ ಆರೋಗ್ಯವಂತರಾಗುತ್ತೀರಿ. ಅರ್ಧಕಲ್ಪಕ್ಕಾಗಿ ನಿಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ ಅಂದಮೇಲೆ ಇದಕ್ಕಾಗಿ ಎಷ್ಟೊಂದು ಪುರುಷಾರ್ಥ ಮಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪಾವನರಾಗಲು ಅಶರೀರಿಯಾಗುವ ಅಭ್ಯಾಸ ಮಾಡಬೇಕಾಗಿದೆ. ಎಲ್ಲರಿಗೆ ಸಂದೇಶ ಕೊಡಬೇಕಾಗಿದೆ – ಒಬ್ಬ ತಂದೆಯನ್ನು ನೆನಪು ಮಾಡಿರಿ, ದೇಹ ಸಹಿತ ಎಲ್ಲವನ್ನೂ ಮರೆಯಿರಿ.

2. ಯೋಗೇಶ್ವರ ತಂದೆಯಿಂದ ಯೋಗವನ್ನು ಕಲಿತು ಸತ್ಯ-ಸತ್ಯ ಯೋಗಿಗಳಾಗಬೇಕಾಗಿದೆ. ಜ್ಞಾನದಿಂದ ಧನವಂತರು ಮತ್ತು ಯೋಗದಿಂದ ನಿರೋಗಿ, ಸದಾ ಆರೋಗ್ಯವಂತರಾಗಬೇಕು.

ವರದಾನ:-

ಯಾರು ಎಲ್ಲರ ಬಗ್ಗೆ ಕಲ್ಯಾಣದ ವೃತ್ತಿ ಹಾಗೂ ಶುಭ ಚಿಂತಕ ಭಾವವನ್ನಿಡುತ್ತಾರೆಯೋ ಅವರೇ ತೀವ್ರ ಪುರುಷಾರ್ಥಿ ಆಗಿದ್ದಾರೆ. ಭಲೆ ಯಾರಾದರೂ ಮತ್ತೆ-ಮತ್ತೆ ಬೀಳಿಸಲು ಪ್ರಯತ್ನಿಸಲಿ, ಮನಸ್ಸನ್ನು ಏರುಪೇರು ಮಾಡಲಿ, ವಿಘ್ನ ರೂಪವೇ ಆಗಿರಲಿ, ಆದರೂ ಸಹ ಅವರ ಬಗ್ಗೆ ತಮ್ಮಲ್ಲಿ ಸದಾ ಶುಭ ಚಿಂತಕನ ಅಡೋಲ ಭಾವವಿರಲಿ, ಮಾತಿನ ಕಾರಣ ಭಾವನೆಯು ಬದಲಾಗಬಾರದು. ಪ್ರತಿಯೊಂದು ಪರಿಸ್ಥಿತಿಯಲ್ಲಿ ವೃತ್ತಿ ಹಾಗೂ ಭಾವವು ಯಥಾರ್ಥವಾಗಿ ಇದ್ದರೆ, ತಮ್ಮ ಮೇಲೆ ಅದರ ಪ್ರಭಾವ ಬೀರುವುದಿಲ್ಲ. ನಂತರ ಯಾವುದೇ ವ್ಯರ್ಥ ಮಾತುಗಳು ಕಾಣಿಸುವುದೇ ಇಲ್ಲ, ಸಮಯವೂ ಉಳಿತಾಯವಾಗುವುದು.ಇದೇ ವಿಶ್ವ ಕಲ್ಯಾಣಕಾರಿಯ ಸ್ಥಿತಿಯಾಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top