13 April 2022 KANNADA Murli Today | Brahma Kumaris
Read and Listen today’s Gyan Murli in Kannada
12 April 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಗೃಹಸ್ಥ ವ್ಯವಹಾರದಲ್ಲಿದ್ದು ಕಮಾಲ್ ಮಾಡಿ ತೋರಿಸಬೇಕು, ಶ್ರೇಷ್ಠಾಚಾರಿ ದೇವತೆಯಾಗುವ ಹಾಗೂ ದೇವತೆಗಳನ್ನಾಗಿ ಮಾಡುವ ಸೇವೆ ಮಾಡಬೇಕು”
ಪ್ರಶ್ನೆ:: -
ರಾಜ್ಯಭಾಗ್ಯದ ಆಸ್ತಿಯ ಅಧಿಕಾರ ಯಾವ ಮಕ್ಕಳಿಗೆ ಪ್ರಾಪ್ತಿಯಾಗುತ್ತದೆ?
ಉತ್ತರ:-
ಯಾರು ತಂದೆಯ ಸಮೀಪ ಸಂಬಂಧದಲ್ಲಿ ಬಂದು ತಮ್ಮ ಚಲನೆ ಹಾಗೂ ಲಾಭ ನಷ್ಟದ ಪೂರ್ತಿ ಸಮಚಾರವನ್ನು ತಂದೆಗೆ ಕೊಡುತ್ತಾರೆ. ಇಂತಹ ಸ್ವಂತ ತಾಯಿ ಮಕ್ಕಳು ರಾಜ್ಯಭಾಗ್ಯದ ಆಸ್ತಿಯ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಯಾರು ತಂದೆಯ ಮುಂದೆ ಬರದೇ ತಮ್ಮ ಸಮಾಚಾರವನ್ನು ಹೇಳುವುದಿಲ್ಲ. ಆದುದರಿಂದ ಅವರಿಗೆ ರಾಜ್ಯಭಾಗ್ಯದ ಆಸ್ತಿ ಸಿಗುವುದಿಲ್ಲ, ಅವರು ಮಲತಾಯಿ ಮಕ್ಕಳಾಗಿದ್ದಾರೆ. ಮಕ್ಕಳೇ ತಮ್ಮ ಪೂರ್ತಿ ಸಮಾಚಾರವನ್ನು ಕೊಡುವುದರಿಂದ ಈ ಮಕ್ಕಳು ಯಾವ ಸೇವೆಯನ್ನು ಮಾಡುತ್ತಿದ್ದಾರೆಂದು ತಂದೆ ತಿಳಿದುಕೊಳ್ಳುತ್ತಾರೆ ಎಂದು ತಂದೆ ಹೇಳುತ್ತಾರೆ ಏಕೆಂದರೆ ಎಂತಹದ್ದೇ ಪರಿಸ್ಥಿತಿಯಲ್ಲಿ ತಂದೆಯು ಮಕ್ಕಳಿಂದ ಶ್ರೇಷ್ಠ ಪದವಿಯನ್ನು ಪಡೆಯುವಂತಹ ಪುರುಷಾರ್ಥ ಮಾಡಿಸುತ್ತಾರೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ನನ್ನ ಮನಸೆಂಬ ಬಾಗಿಲಲ್ಲಿ ಯಾರು ಬಂದರು…
ಓಂ ಶಾಂತಿ. ಪರಮಪಿತ ಪರಮಾತ್ಮ ಶಿವನೊಂದಿಗೆ ನಮ್ಮ ಸಂಬಂಧವೇನೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಪರಮಪಿತನೆಂದು ಹೇಳುತ್ತೇವೆ, ಅದರ ಜೊತೆ ಪತಿತ ಪಾವನವೆಂಬ ಅಕ್ಷರವನ್ನು ಸೇರಿಸಿ. ಪತಿತ ಪಾವನ ಪರಮಪಿತ ಪರಮಾತ್ಮ ಶಿವನೊಂದಿಗೆ ನಮ್ಮದು ತಂದೆಯ ಸಂಬಂಧವಾಗಿದೆ ಎಂದು ಮಕ್ಕಳ ಮನಸ್ಸಲ್ಲಿದೆ. ನಾನು ಮಕ್ಕಳ ಮುಂದೆ ಪ್ರತ್ಯಕ್ಷವಾಗುತ್ತೇನೆಂದು ತಂದೆ ಹೇಳುತ್ತಾರೆ. ತಂದೆ ಮಕ್ಕಳೊಂದಿಗೆ ಮಾತ್ರ ಆತ್ಮಿಕ ಸಂಭಾಷಣೆ ಮಾಡಿ ಪರಸ್ಪರ ಮಿಲನ ಮಾಡುತ್ತಾರೆ. ಈ ಮಾತನ್ನು ಅನ್ಯರಿಗೆ ತಿಳಿಸಿಕೊಡುವ ಸಲುವಾಗಿ ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಈಗ ನೀವು ಜಗದಂಬಾ ಹಾಗೂ ಜಗತ್ಪಿತರನ್ನೂ ಸಹ ತಿಳಿದುಕೊಂಡಿದ್ದೀರಿ. ಇವನಿಗೆ ಜಗತ್ಪಿತ ಎಂದು ಹೇಳಲಾಗುವುದಿಲ್ಲ ಏಕೆಂದರೆ ಜಗತ್ತಿನಲ್ಲಿ ಪ್ರಜೆಗಳಿರುತ್ತಾರೆ ಆದುದರಿಂದ ಪ್ರಜಾಪಿತ ಬ್ರಹ್ಮಾ ಹಾಗೂ ಜಗದಂಬಾ ಎಂದು ಹೇಳಲಾಗುತ್ತದೆ. ಇಡೀ ಜಗತ್ತಿಗೆ ಅಂಬಾ (ತಾಯಿ) ಆಗಿದ್ದಾರೆ. ಇದರಿಂದ ಅವರು ರಚಯಿತನೆಂದು ಸಿದ್ಧವಾಗುತ್ತದೆ. ಇದೂ ಸಹ ತಿಳುವಳಿಕೆ ಇರಬೇಕು. ಎಲ್ಲಾ ಮನುಷ್ಯರು ಪರಮಾತ್ಮನನ್ನು ನೆನಪು ಮಾಡುತ್ತಾರೆ ಆದರೆ ಪರಮಾತ್ಮನನ್ನು ತಿಳಿದುಕೊಂಡಿಲ್ಲ. ನೀವೀಗ ಪರಮಪಿತ ಪರಮಾತ್ಮನನ್ನು, ಜಗತ್ಪಿತನನ್ನು ಪ್ರಜಾಪಿತ ಬ್ರಹ್ಮಾರನ್ನು ತಿಳಿದುಕೊಂಡಿದ್ದೀರಿ ಹಾಗೂ ಬಂದು ಅವರ ಮಕ್ಕಳಾಗಿದ್ದೀರಿ. ಲೌಕಿಕ ತಾಯಿ-ತಂದೆ ಎಲ್ಲರಿಗೂ ಇದ್ದಾರೆ. ಅವರಿಗೆ ಜಗದಂಬಾ, ಜಗತ್ಪಿತ ಎಂದು ಹೇಳುವುದಿಲ್ಲ. ಜಗದಂಬಾ ಹಾಗೂ ಜಗತ್ಪಿತರು ಇಲ್ಲಿ ಇದ್ದು ಹೋಗಿದ್ದಾರೆ. ಈ ಸಮಯದಲ್ಲಿ ನೀವು ಪುನಃ ಅವರಿಗೆ ಮಕ್ಕಳಾಗಿದ್ದೀರಿ, ಹೀಗೆ ಮತ್ತೆ ಚರಿತ್ರೆ-ಭೂಗೋಳ ಪುನರಾವರ್ತನೆಯಾಗುತ್ತಿದೆ. ನಾವು ಈಗ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ತಂದೆ ಸ್ವರ್ಗ ಸ್ಥಾಪನೆ ಮಾಡುವವರಾಗಿದ್ದಾರೆ, ಆ ಸ್ವರ್ಗದಲ್ಲಿ ಲಕ್ಷ್ಮೀ ನಾರಾಯಣರ ರಾಜ್ಯವಿತ್ತು. ನಿಮಗೂ ಸಹ ರಾಜ್ಯಭಾಗ್ಯ ಸಿಕ್ಕಿತ್ತು. ಈಗ ಪುನಃ ನೀವು ತೆಗೆದುಕೊಳ್ಳುತ್ತಿದ್ದೀರಿ. ಪರಮಪಿತ ಪರಮಾತ್ಮನನ್ನು ತಿಳಿದುಕೊಂಡಿದ್ದೀರಾ ಎಂದು ನೀವು ಕೇಳಬೇಕಾಗಿದೆ. ಈ ಮಾತು ತಿಳಿದುಕೊಂಡಿದ್ದರೂ ಮರೆಯುವಂತಹ ಮಾತಾಗಿದೆ. ತನ್ನನ್ನು ತಾನು ಮರೆತು, ತಾಯಿ-ತಂದೆಯನ್ನು ಮರೆತು ಆಸ್ತಿಯನ್ನು ಕಳೆದುಕೊಳ್ಳುತ್ತಾರೆ. ಇದು ಯುದ್ಧ ಸ್ಥಳವಾಗಿದೆ, ನೀವು ಈ ಸಮಯದಲ್ಲಿ ಮಾಯೆಯ ಮೇಲೆ ವಿಜಯೀಗಳಾಗುವ ಸಲುವಾಗಿ ಯುದ್ಧದ ಮೈದಾನದಲ್ಲಿ ನಿಂತಿದ್ದೀರಿ. ಅಂತ್ಯ ಬರುವವರೆಗೂ ಯುದ್ಧ ನಡೆಯುತ್ತಿರುತ್ತದೆ. ಆ ಯುದ್ಧ ಮಾಡುವವರೂ ಸಹ ನಾವು ಮನಸ್ಸು ಮಾಡಿದರೆ ಒಂದು ಸೆಕೆಂಡಿನಲ್ಲಿ ಎಲ್ಲರನ್ನೂ ಹಾರಿಸಿ (ಕೊಲ್ಲುತ್ತೇವೆ) ಬಿಡುತ್ತೇವೆಂದು ತಿಳಿದುಕೊಂಡಿದ್ದಾರೆ. ಹೀಗೆ ಪರಸ್ಪರ ಆಯುಧಗಳನ್ನು ಕೊಡುತ್ತಾರೆ. ಸಾಲದ ರೂಪದಲ್ಲಿಯೂ ಸಹ ಆಯುಧಗಳನ್ನು ಕೊಡುತ್ತಾರೆ. ಒಂದುವೇಳೆ ಯಾರಾದರೂ ಅವರನ್ನು ಕೊಂದು ಬಿಟ್ಟರೆ ಸಾಲವೂ ಸಮಾಪ್ತಿ ಆಗುತ್ತದೆ. ತಂದೆ ಸಮಾಚಾರ ಪತ್ರವನ್ನೂ ಸಹ ಓದುತ್ತಾರೆ. ಮಕ್ಕಳೂ ಸಮಾಚಾರ ಪತ್ರಿಕೆಯನ್ನು ಓದಿ ಸೇವೆ ಮಾಡಬೇಕು. ಬಾಬಾ ನೀವು ಮಾಲೀಕರಾಗಿ ಮತ್ತೆ ರೇಡಿಯೊ ಏಕೆ ಕೇಳುತ್ತೀರಿ? ಎಂದು ತಂದೆಯನ್ನು ಕೇಳಬೇಕು. ಮಕ್ಕಳೇ ಶಿವಬಾಬಾ ಮಾಲೀಕರಾಗಿದ್ದಾರೆ, ನಮಗೆ ಪ್ರಪಂಚದ ವಾತಾವರಣ ಹೇಗಿದೆ ಎಂದು ಹೇಗೆ ತಿಳಯಬೇಕು! ಎಲ್ಲೆಲ್ಲಿ ಯುದ್ಧ ಮೊದಲಾದವುಗಳ ಪ್ರಭಾವವಿದೆ! ಈ ಸಮಯ ಬಹಳ ಸುಳ್ಳನ್ನು ಹೇಳುತ್ತಾರೆ. ಸದಾಚಾರ ಕಮಿಟಿ ಮೊದಲಾದವುಗಳನ್ನು ಮಾಡುತ್ತಾರೆ, ಈ ಪ್ರಪಂಚವೇ ಭ್ರಷ್ಟಾಚಾರಿಯಾಗಿದೆ ಎಂದು ಅವರಿಗೆ ಬರೆಯಬೇಕು. ಈ ಪ್ರಪಂಚದಲ್ಲಿ ಸದಾಚಾರಿಗಳು ಹೇಗೆ ಇರಲು ಸಾಧ್ಯ? ಏಕೆಂದರೆ ವಿಕಾರಿಗಳಿಗೆ ಭ್ರಷ್ಟಾಚಾರಿಗಳೆಂದು ಕರೆಯಲಾಗುತ್ತದೆ. ಈ ಮಾತುಗಳನ್ನು ನೀವು ಮಕ್ಕಳ ಮಾತ್ರ ನಂಬರ್ವಾರ್ ತಿಳಿದುಕೊಂಡಿದ್ದೀರಿ. ನೀವು ಎಲ್ಲರೊಂದಿಗೆ ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನೆಂದು ಕೇಳಬೇಕು. ಹೇಗೆ ಕ್ರೈಸ್ತರು ಒಂದು ನಿಗದಿಯಾದ ಸಮಯದಲ್ಲಿ ಕ್ರೈಸ್ತನ ಜನ್ಮವಾಯಿತೆಂದು ತಿಳಿದುಕೊಂಡಿದ್ದಾರೆ. ಒಳ್ಳೆಯದು. ಕ್ರೈಸ್ತನಿಗಿಂತ ಮೊದಲು ಯಾರು ಇದ್ದರು? ಲಕ್ಷ್ಮೀ-ನಾರಾಯಣರು ರಾಜ್ಯವನ್ನು ಎಷ್ಟು ಸಮಯ ಮಾಡಿದರು? ಈ ಸಮಯದಲ್ಲಿ ಆದಿ ಸನಾತನ ದೇವೀ-ದೇವತಾ ಧರ್ಮದವರು ಧರ್ಮಭ್ರಷ್ಟ ಕರ್ಮ ಭ್ರಷ್ಟರಾಗಿದ್ದಾರೆ. ಶಾಸ್ತ್ರಗಳಲ್ಲಿ ಲಕ್ಷಾಂತರ ವರ್ಷಗಳೆಂದು ಹೇಳಿದ್ದಾರೆ. ಈಗ ನೀವು ಜಾಗೃತರಾಗಿ ನಂತರ ಬೇರೆಯವರನ್ನು ಜಾಗೃತ ಮಾಡಬೇಕು.
ಶಿವ ನಮ್ಮ ತಂದೆಯಾಗಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಪ್ರಜಾಪಿತ ಬ್ರಹ್ಮಾ ಹಾಗೂ ಜಗದಂಬಾರವರೂ ಸಹ ತಾಯಿ-ತಂದೆ ಆಗಿದ್ದಾರೆ ನಂತರ ಲಕ್ಷ್ಮೀ-ನಾರಾಯಣರಿಗೆ ಸತ್ಯಯುಗದ ಆಸ್ತಿ ಎಲ್ಲಿಂದ ಸಿಕ್ಕಿತು? ಎಂದು ಕೇಳಬೇಕು. ಅವರಿಗೆ ಆಸ್ತಿ ದೊರೆತು 5 ಸಾವಿರ ವರ್ಷವಾಯಿತು. ಈಗ ಇಲ್ಲವಾಗಿದೆ, ಮತ್ತೆ ಸಿಗುತ್ತಿದೆ. ಈಗ ಚರಿತ್ರೆ ಭೋಗೋಳ ಪುನರಾವರ್ತನೆಯಾಗುತ್ತದೆ. ಈಗ ಎಲ್ಲರಿಗೂ ತಂದೆಯ ಸಂದೇಶ ಹೇಗೆ ಕೊಡುವುದು! ಮನೆ-ಮನೆಯಲ್ಲಿ ಸಾರಲು ಸಾಧ್ಯವಾಗುತ್ತದೇನು? ಒಳ್ಳೆಯದು. ನೀವು ಬೋರ್ಡನ್ನು ಹಾಕಬಹುದು ಏಕೆಂದರೆ ನೀವು ಮಾಸ್ಟರ್ ಅವಿನಾಶಿ ಸರ್ಜನ್ ಆಗಿದ್ದೀರಿ. ಪರಮಪಿತ ಪರಮಾತ್ಮ ನಿರಾಕಾರ ಆಗಿದ್ದಾರೆ, ಶಿವ ತಂದೆ ಯಾರ ಶರೀರದಲ್ಲಿ ಜನ್ಮ ಪಡೆದಿದ್ದಾರೆಂದು ಯಾರೂ ಸಹ ತಿಳಿದುಕೊಂಡಿಲ್ಲ! ಕೃಷ್ಣನ ಶರೀರದಲ್ಲಿ ಪ್ರವೇಶ ಮಾಡಿ ಜನ್ಮ ಪಡೆದಿದ್ದಾರೆಂದು ಹೇಳಲಾಗುವುದಿಲ್ಲ, ಅವರು ನಮ್ಮ ಪರಮಪಿತ ಹಾಗೂ ಶಿಕ್ಷಕ ಆಗಿದ್ದಾರೆಂದು ನೀವು ನಂಬರ್ವಾರ್ ತಿಳಿದುಕೊಂಡಿದ್ದೀರಿ. ಅವರು ನಮಗೆ ಬಹಳ ಉತ್ತಮವಾದ ಶಿಕ್ಷಣವನ್ನು ಕೊಡುತ್ತಿದ್ದಾರೆ. ತಂದೆ ಪುನಃ ಕಲ್ಪದ ನಂತರ ಬಂದು ನಮಗೆ ಸಿಕ್ಕಿದ್ದಾರೆ. ಇದನ್ನು ನೀವು ತಿಳಿದುಕೊಂಡಿದ್ದೀರಿ ಹಾಗೂ ಪಕ್ಕಾ-ಪಕ್ಕಾ ನಿಶ್ಚಯವು ಇದೆ, ಆದರೆ ಮನೆಗೆ ಹೋದ ತಕ್ಷಣ ಆ ನಶೆ ಸಮಾಪ್ತಿಯಾಗುತ್ತದೆ. ಮನೆ ಮಠದಲ್ಲಿರುತ್ತಾ, ವ್ಯಾಪಾರ ವ್ಯವಹಾರ ಮಾಡುತ್ತಾ ಎಲ್ಲಿಯವರೆಗೆ ನಶೆ ಇರುತ್ತದೆಂದು ತಂದೆಗೆ ಅವಶ್ಯಕವಾಗಿ ಪತ್ರ ಬರೆಯಬೇಕು. ಆದರೆ ಮಕ್ಕಳು ತಂದೆಗೆ ಪೂರ್ತಿ ಸಮಾಚಾರವನ್ನು ಕೊಡುವುದಿಲ್ಲ. ನೀವು ಮಕ್ಕಳು ತಂದೆಯನ್ನು ಪೂರ್ಣವಾಗಿ ತಿಳಿದುಕೊಂಡಿದ್ದರೆ ತಂದೆಗೂ ಸಹ ನಿಮ್ಮದೆಲ್ಲವೂ ತಿಳಿದಿರಬೇಕು. ಅವರು ನಿಮ್ಮ ತಾತನಾಗಿರುವ ಕಾರಣ ಅವರಿಗೆ ನಿಮ್ಮ ನಡವಳಿಕೆ ಹಾಗೂ ಲಾಭ ನಷ್ಟ ಪೂರ್ಣ ತಿಳಿದಿರಬೇಕು, ಆಗ ಅವರು ತಮ್ಮ ಸಲಹೆಯನ್ನು ನೀಡಬಹುದು. ಶಿವ ತಂದೆ ಅಂತರ್ಯಾಮಿ ಎಂದು ನೀವು ಹೇಳುತ್ತೀರಿ. ಆದರೆ ಈ ಬ್ರಹ್ಮಾ ಹೇಗೆ ತಿಳಿದುಕೊಳ್ಳುತ್ತಾರೆ? ಕೆಲವರು ತಂದೆಯ ಮುಂದೆ ಬರುವುದೇ ಇಲ್ಲ, ಆದುದರಿಂದ ಅಂತಹವರನ್ನು ಮಲತಾಯಿ ಮಕ್ಕಳೆಂದು ತಿಳಿದುಕೊಳ್ಳಲಾಗುವುದು. ಅವರು ರಾಜ್ಯಭಾಗ್ಯದ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದುವೇಳೆ ಶ್ರೀಮತದಂತೆ ನಡೆಯಬೇಕಾದರೆ ಪೂರ್ತಿ ಸಮಾಚಾರ ಕೊಡಬೇಕು. ಮಕ್ಕಳು ತಂದೆಯದೆಲ್ಲವನ್ನೂ ತಿಳಿದುಕೊಳ್ಳುತ್ತಾರೆ, ಹಾಗಾದರೆ ತಂದೆಗೂ ಸಹ ತಮ್ಮ ಸಮಾಚಾರವನ್ನು ಕೊಡಬೇಕು. ಇದು ನಮ್ಮ ಆತ್ಮಿಕ ಗೃಹಸ್ಥ ವ್ಯವಹಾರದ ಸಂಬಂಧವಾಗಿದೆ.
ಇದು ಆತ್ಮಿಕ ಈಶ್ವರೀಯ ಪರಿವಾರವಾಗಿದೆ. ಸರ್ವಶ್ರೇಷ್ಠ ಆತ್ಮನೊಂದಿಗೆ ಎಲ್ಲಾ ಆತ್ಮಗಳ ಸಂಬಂಧವಿದೆಯಲ್ಲವೇ! ಈ ಲಕ್ಷ್ಮೀ-ನಾರಾಯಣರನ್ನು, ಪರಮಪಿತ ಪರಮಾತ್ಮನನ್ನು ತಿಳಿದುಕೊಂಡಿದ್ದೀರಾ? ನೀವು ಸತ್ಯಯುಗೀ ಶ್ರೇಷ್ಠಾಚಾರಿ ದೇವೀ-ದೇವತೆಗಳನ್ನು ತಿಳಿದುಕೊಂಡಿದ್ದೀರಾ? ಎಂದು ಎಲ್ಲರನ್ನು ಪ್ರಶ್ನೆ ಕೇಳಬೇಕು. ಈ ಮಾತುಗಳನ್ನು ತಿಳಿದುಕೊಳ್ಳುವುದರಿಂದ ನೀವು ಶ್ರೇಷ್ಠಾಚಾರಿಯಾಗಬಹುದು, ಇಲ್ಲವಾದರೆ ಖಂಡಿತವಾಗಿ ಆಗಲು ಸಾಧ್ಯವಿಲ್ಲವೆಂದು ನೀವು ಬರೆಯಬಹುದು. ಈ ರೀತಿ ಸೇವೆ ಮಾಡುವುದರಿಂದ ನೀವು ಶ್ರೇಷ್ಠ ಪದವಿ ಪಡೆಯಬಹುದು. ಭ್ರಷ್ಟಚಾರಿಯನ್ನು ಶ್ರೇಷ್ಠಾಚಾರಿ ಮಾಡುವುದು ನಿಮ್ಮ ವ್ಯಾಪಾರವಾಗಿದೆ. ಆದುದರಿಂದ ನೀವು ಬೋರ್ಡ್ ಏಕೆ ಹಾಕಬಾರದು! ಸ್ತ್ರೀ-ಪುರುಷರಿಬ್ಬರೂ ಈ ಸೇವೆಯಲ್ಲಿದ್ದಾಗ ತಂದೆಯೂ ಈ ರೀತಿ ಮಾರ್ಗದರ್ಶನ ಕೊಡುತ್ತಾರೆ, ಆದರೂ ಮಕ್ಕಳು ಮರೆತು ತಮ್ಮ ವ್ಯಾಪಾರದಲ್ಲಿ ತೊಡುಗುತ್ತಾರೆ. ಯಾವ ಸೇವೆಯನ್ನು ಮಾಡಬೇಕೋ ಅದನ್ನು ಮಾಡುವುದಿಲ್ಲ ಹಾಗೂ ಫೂರ್ತಿ ಸಮಾಚಾರವನ್ನು ಕೊಡುವುದಿಲ್ಲ ಹಾಗೂ ಬೋರ್ಡ್ ಸಹ ಹಾಕುವುದಿಲ್ಲ. ಬೋರ್ಡ್ ಹಾಕದೆ, ಸೇವೆ ಮಾಡದೆ ಇದ್ದಾಗ ತುಂಬಾ ದೇಹಾಭಿಮಾನವಿದೆ ಎಂದು ತಿಳಿದುಕೊಳ್ಳುತ್ತಾರೆ. ತಂದೆ ಏನೇನು ಹೇಳುತ್ತಾರೆಂದು ಮುರಳಿಯನ್ನೇನೋ ಕೇಳುತ್ತಾರೆ. ಅನೇಕ ಮತ ಸಿಗುತ್ತದೆ. ಬೇಸಿಗೆಯಾದರೆ ಬೆಟ್ಟಗಳ ಮೇಲೆ ಹೋಗಿ ಪ್ರಬಂಧ ಮಾಡಿ ಎಂದು ಪ್ರದರ್ಶನಕೋಸ್ಕರ ತಂದೆ ಹೇಳುತ್ತಾರೆ. ಬಾಬಾ ನಾವು ಈ ಪ್ರಬಂಧ ಮಾಡಿದ್ದೇವೆಂದು ಎಲ್ಲಿಂದ ಸಮಾಚಾರ ಬರುತ್ತದೆ ಎಂದು ಈಗ ನೋಡಬೇಕು. ಪರಿಚಯಸ್ಥರ ಹಾಲ್ ಅಥವಾ ಧರ್ಮಶಾಲೆಯನ್ನು ತೆಗೆದುಕೊಂಡು ಪ್ರಬಂಧ ಮಾಡಬೇಕು, ಅದರಿಂದ ಅನೇಕರಿಗೆ ಸಂದೇಶ ಸಿಗುವಂತೆ ಆಗಬೇಕು. ಜ್ಞಾನ ಸಾಗರ, ಪತಿತ ಪಾವನ ನಿರಾಕಾರ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಎಂದು ಇಲ್ಲಿಯೂ ಸಹ ಬೋರ್ಡ್ ಹಾಕಬೇಕು, ಮತ್ತೆ ಜಗದಂಬಾ ಹಾಗೂ ಜಗತ್ಪಿತರೊಂದಿಗೆ ನಿಮ್ಮ ಸಂಬಂಧವೇನು ಹಾಗೂ ಅವರು ಏನು ಕೊಡುತ್ತಾರೆ? ಅವಶ್ಯವಾಗಿ ಜಗತ್ತಿಗೆ ಮಾಲೀಕರನ್ನಾಗಿ ಮಾಡುತ್ತಾರೆ. ಈಗ ನೀವು ಮಾಲೀಕರಾಗುತ್ತಿದ್ದೀರಿ. ಕಲ್ಪದ ಹಿಂದೆ ಸಹ ಮಾಲೀಕರಾಗಿದ್ದೀರಿ. ನೀವು ಈ ರೀತಿ ಬೋರ್ಡ್ ಬರೆದಾಗ ಎಲ್ಲಾ ಪ್ರಶ್ನೆಗಳು ಸಮಾಪ್ತಿಯಾಗುತ್ತವೆ. ಲಕ್ಷ್ಮೀ-ನಾರಾಯಣರಿಗೆ ವಿಶ್ವದ ಮಾಲೀಕತನದ ಆಸ್ತಿ ಹೇಗೆ ದೊರೆಯಿತು? ಕೇಳುವವರು ಅಗತ್ಯವಾಗಿ ತಿಳಿದುಕೊಂಡಿರಬೇಕು. ಒಂದುವೇಳೆ ಇಷ್ಟೊಂದು ಸೇವೆ ಮಾಡದಿದ್ದರೆ ಸಿಂಹಾಸನದ ಮೇಲೆ ಹೇಗೆ ಕುಳಿತುಕೊಳ್ಳುತ್ತೀರಿ, ಇದು ನರನಿಂದ ನಾರಾಯಣನಾಗುವ ರಾಜಯೋಗವಾಗಿದೆ, ಇದು ಪ್ರಜೆಗಳಾಗುವ ಯೋಗವಲ್ಲ. ನೀವು ಇಲ್ಲಿಗೆ ಪ್ರಜೆಗಳಾಗಲು ಬಂದಿದ್ದೀರೇನು? ತಮ್ಮ ಸೇವೆಯ ಸಮಾಚಾರ ತಂದೆಯಬಳಿ ಕಳುಹಿಸಿ ಕೊಟ್ಟರೆ ತಂದೆಯು ಇವರು ಸೇವೆ ಮಾಡುತ್ತಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಮನೆ ಅಥವಾ ಸೇವೆಯ ಸಮಾಚಾರವನ್ನು ಕೊಡದಿದ್ದರೆ ಇವರು ವಿಜಯಮಾಲೆಯಲ್ಲಿ ಬರುತ್ತಾರೆಂದು ಹೇಗೆ ತಿಳಿದುಕೊಳ್ಳುವರು. ನಿಶ್ಚಯ ಬುದ್ಧಿ ವಿಜಯಂತಿ, ಸಂಶಯ ಬುದ್ಧಿ ವಿನಶ್ಯಂತಿ.
ಈಗ ನಮ್ಮ ರಾಜಧಾನಿ ಸ್ಥಾಪನೆಯಾಗುತ್ತಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳು ಆ ರಾಜಧಾನಿಯಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವಂತಹ ಪುರುಷಾರ್ಥವನ್ನು ಮಾಡಬೇಕು. ಆದರೆ ಕೆಲವರ ಅದೃಷ್ಟದಲ್ಲಿ ಇಲ್ಲದಿದ್ದಾಗ ಟೀಚರ್ ಏನು ಮಾಡುತ್ತಾರೆ. ನೀವು ಮಾಡುವ ಕನಿಷ್ಟ ಕರ್ಮದಿಂದ ನೀವೇ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಮಮ್ಮಾ ತುಂಬಾ ಗಮನ ನೀಡಿ ಉತ್ತಮ ಕರ್ಮ ಮಾಡಿದುದರಿಂದ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಕೊಂಡರು. ನೀವು ಮಕ್ಕಳು ಎಂತಹ ಪರಿಸ್ಥಿತಿಯಲ್ಲಿಯೂ ಸಹ ಬಹಳ ಪುರುಷಾರ್ಥವನ್ನು ಮಾಡಬೇಕು. ತಂದೆಯ ಆದೇಶದಂತೆ ಈ ಲಕ್ಷ್ಮೀ-ನಾರಾಯಣರನ್ನು ತಿಳಿದುಕೊಳ್ಳುವುದರಿಂದ ನೀವು ಇಂತಹ ಶ್ರೇಷ್ಠಾಚಾರಿ ದೇವತೆ ಆಗುತ್ತೀರೆಂದು ಬೋರ್ಡ್ ಹಾಕಬೇಕು ಮತ್ತು ಚಿಕ್ಕ-ಚಿಕ್ಕ ಪ್ರತಿಗಳನ್ನು ಮುದ್ರಿಸಿ ಹಂಚಬೇಕು. ಶುಭಕಾರ್ಯ ಮಾಡಲು ತಡ ಮಾಡಬಾರದು. ನೀವು ಮಧುರ-ಮಧುರ ಮಕ್ಕಳು ಬಹಳ ಸೇವೆಯನ್ನು ಮಾಡಬೇಕು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಾಲ್ ಮಾಡಿ ತೋರಿಸಬೇಕು. ಎಂದಿಗೂ ವಿದ್ಯೆ ಅಥವಾ ತಂದೆಯನ್ನು ಬಿಡುವಂತಹ ಯೋಚನೆ ಮಾಡಬಾರದು. ತಂದೆ ನಮಗೆ ಬ್ರಹ್ಮಾರವರ ಮೂಲಕ ಕಲಿಸುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಶಿವ ತಂದೆ ಭಾರತದಲ್ಲಿ ಬಂದಿರುವರೆಂದಾಗ ಏನು ನಿರಾಕಾರ ಬಂದಿದ್ದಾರೆಯೇ? ಹೇಗೆ ಬಂದರು? ಏನು ಮಾಡಿದರು? ಎಂದು ಯಾರಿಗೂ ಗೊತ್ತಿಲ್ಲ. ಶಿವರಾತ್ರಿಯನ್ನು ಆಚರಿಸಿದರೂ ಸಹ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಪಾವನ ಮಾಡಲು ಪರಮಾತ್ಮ ಬರುತ್ತಾರೆ.
ಯಾವುದೇ ಮಾತಿನಲ್ಲಿ ಗೊಂದಲವಾದಾಗ ಬಾಬಾ ನಮಗೆ ಈ ಮಾತು ತಿಳಿಯಲಿಲ್ಲ ಎಂದು ತಂದೆಯನ್ನು ಕೇಳಬೇಕೆಂದು ತಂದೆ ಹೇಳುತ್ತಾರೆ, 84 ಜನ್ಮಗಳ ರಹಸ್ಯವನ್ನೂ ಸಹ ತಿಳಿಸಲಾಗಿದೆ. ವರ್ಣಗಳಲ್ಲಿಯೂ ಬರಬೇಕು. ನೀವು ಈ ಮಾತುಗಳನ್ನು ಧಾರಣೆ ಮಾಡುತ್ತೀರಿ. ನಾವೇ ಈ ರೀತಿ 84 ಜನ್ಮಗಳನ್ನು ಪ್ರಾಪ್ತಿ ಮಾಡಿಕೊಂಡಿದ್ದೆವು, ಈಗ ಮತ್ತೆ ನಾವು ಸೂರ್ಯವಂಶದವರಾಗಿದ್ದೇವೆ. ಯಾರು ಎಷ್ಟು ಪುರುಷಾರ್ಥ ಮಾಡುತ್ತಾರೆ, ಅಷ್ಟು ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುವರು. ಇಷ್ಟು ಸಹಜ ಮಾತುಗಳಾದರೂ ಬುದ್ದಿಯಲ್ಲಿ ಕುಳಿತುಕೊಳ್ಳದೇ ಇದ್ದಾಗ ಬಾಬಾ ನಾವು ಈ ತಿಳುವಳಿಕೆಯಲ್ಲಿ ಗೊಂದಲವಾಗಿದ್ದೇವೆಂದು ತಂದೆಯನ್ನು ಕೇಳಬೇಕು. ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕು. ಈ ಜ್ಞಾನದಿಂದ ನೀವು ಸದಾ ಸುಖಿ, ಶ್ರೇಷ್ಠಾಚಾರಿಗಳಾಗುತ್ತೀರೆಂದು ಬೋರ್ಡ್ ಹಾಕಬೇಕು. ಈ ರೀತಿ ಬೋರ್ಡ್ ಹಾಕುವುದೂ ಸಹ ಚೆನ್ನಾಗಿದೆಯಲ್ಲವೇ! ಆಗ ಏಕೆ ನಾವು ಈ ಮಾತುಗಳನ್ನು ತಿಳಿದುಕೊಳ್ಳಬಾರದೆಂಬ ಕುತೂಹಲ ಬರುತ್ತದೆ. ತಂದೆಯು ಯಾರು-ಯಾರು ಸತ್ಯಮಕ್ಕಳಾಗಿದ್ದಾರೆ ಎಂದು ಸೇವೆಯಿಂದ ತಿಳಿದುಕೊಳ್ಳುತ್ತಾರೆ, ಯಾರು ಗಮನ ಕೊಡುತ್ತಾರೆ, ಅವರೇ ಮಾಲೆಯ ಮಣಿಯಾಗುತ್ತಾರೆ. ಸೇವೆಯನ್ನು ಮಾಡಿ ತೋರಿಸಬೇಕು. ನೀವು ಪ್ರಾಕ್ಟಿಕಲ್ ಸಮ್ಮುಖದಲ್ಲಿ ಕುಳಿತು ಕೇಳುತ್ತಿದ್ದೀರಿ. ಉಳಿದ ಮಕ್ಕಳು ಮುರಳಿಯ ಮೂಲಕ ಕೇಳುತ್ತಾರೆ. ಇದೆಲ್ಲಾ ತಿಳಿದುಕೊಳ್ಳುವ ಮಾತುಗಳಾಗಿವೆ. ಪರಮಾತ್ಮ ತಂದೆಯೂ ಆಗಿದ್ದಾರೆ ಮತ್ತೆ ಪತಿತರಿಂದ ಪಾವನ ಮಾಡಿ ಕರೆದೊಯ್ಯುವ ಸದ್ಗುರು ಆಗಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಶಿಕ್ಷಕನಾಗಿ ಓದಿಸುತ್ತಾರೆ. ಹೀಗೆ ತಂದೆಯೂ ಮೂರು ಸಂಬಂಧಿಯಾಗಿದ್ದಾರೆ. ಆದರೆ ಬಹಳ ಮಕ್ಕಳು ಮರೆತು ಹೋಗುತ್ತಾರೆ. ಬುದ್ಧಿಯಿಂದ ಈ ನಶೆ ಹೊರಟು ಹೋಗುತ್ತದೆ. ಇಲ್ಲವಾದರೆ ಮಕ್ಕಳಲ್ಲಿ ಅವಿನಾಶಿಯಾದ ಖುಷಿ ಇರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ವಿಜಯ ಮಾಲೆಯಲ್ಲಿ ಮಣಿಯಾಗುವ ಸಲುವಾಗಿ ನಿಮ್ಮ ಮೇಲೆ ಪೂರ್ಣ ಗಮನ ಕೊಡಬೇಕು. ಶ್ರೇಷ್ಠಾಚಾರಿಯಾಗುವ ಸೇವೆ ಮಾಡಬೇಕು.
2. ಯಾವುದೇ ನಷ್ಟವಾಗುವ ಕರ್ಮಭೋಗವನ್ನು ಭೋಗಿಸುವಂತಹ ಕನಿಷ್ಟ ಕರ್ಮ ಮಾಡಬಾರದು. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯ ಆದೇಶದಂತೆ ನಡೆಯಬೇಕು.
ವರದಾನ:-
ಆತ್ಮಿಕ ಸೇವಾಧಾರಿಯೆಂದಿಗೂ ಈ ರೀತಿ ಯೋಚಿಸಲು ಸಾಧ್ಯವಿಲ್ಲ – ಸೇವೆಯಲ್ಲಿ ವೃದ್ಧಿಯಾಗುವುದಿಲ್ಲ ಅಥವಾ ಆಲಿಸುವವರು ಸಿಗುವುದಿಲ್ಲ. ಕೇಳಿಸಿಕೊಳ್ಳುವವರು ಬಹಳಷ್ಟಿದ್ದಾರೆ, ಅದಕ್ಕಾಗಿ ಕೇವಲ ತಾವು ತಮ್ಮ ಸ್ಥಿತಿಯನ್ನು ಆತ್ಮಿಕ ಆಕರ್ಷಣಮಯವನ್ನಾಗಿ ಮಾಡಿಕೊಳ್ಳಿರಿ. ಎಲ್ಲಿಯವರೆಗೆ ಅಯಸ್ಕಾಂತವು ತನ್ನ ಕಡೆಗೆ ಸೆಳೆಯಲು ಸಾಧ್ಯವಿದೆಯೆಂದಮೇಲೆ, ತಮ್ಮ ಆತ್ಮಿಕ ಶಕ್ತಿಯು ಆತ್ಮರನ್ನು ಆಕರ್ಷಿಸಲು ಸಾಧ್ಯವಿಲ್ಲವೇ! ಅಂದಾಗ ಆತ್ಮಿಕ ಆಕರ್ಷಣೆ ಮಾಡುವಂತಹ ಮಾಡುವಂತಹ ಚುಂಬಕವಾಗಿರಿ, ಇದರಿಂದ ಆತ್ಮರು ಸ್ವತಹವಾಗಿಯೇ ಆಕರ್ಷಣೆಯಾಗಿ ತಮ್ಮಮುಂದೆ ಬಂದುಬಿಡುವರು. ಇದೇ ತಾವು ಆತ್ಮಿಕ ಸೇವಾಧಾರಿ ಮಕ್ಕಳ ಸೇವೆಯಾಗಿದೆ.
ಸ್ಲೋಗನ್:-
➤ Email me Murli: Receive Daily Murli on your email. Subscribe!