12 May 2022 KANNADA Murli Today | Brahma Kumaris

Read and Listen today’s Gyan Murli in Kannada

11 May 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಸಮಯದಲ್ಲಿ ವೃದ್ಧರ, ಮಕ್ಕಳ, ಯುವಕರ ಎಲ್ಲರದು ವಾನಪ್ರಸ್ಥ ಸ್ಥಿತಿಯಾಗಿದೆ ಏಕೆಂದರೆ ಎಲ್ಲರೂ ಈಗ ವಾಣಿಯಿಂದ ದೂರ ಮುಕ್ತಿಧಾಮಕ್ಕೆ ಹೋಗಬೇಕಾಗಿದೆ, ನೀವು ಅವರಿಗೆ ಮನೆಯ ಮಾರ್ಗವನ್ನು ತೋರಿಸಿ”

ಪ್ರಶ್ನೆ:: -

ತಂದೆಯ ಶ್ರೀಮತವು ಪ್ರತಿಯೊಂದು ಮಗುವಿನ ಪ್ರತಿ ಬೇರೆ-ಬೇರೆ ಆಗಿದೆ, ಒಂದೇ ರೀತಿಯಾಗಿಲ್ಲ – ಏಕೆ?

ಉತ್ತರ:-

ಏಕೆಂದರೆ ತಂದೆಯು ಪ್ರತಿಯೊಂದು ಮಗುವಿನ ನಾಡಿಯನ್ನು ನೋಡಿ, ಪರಿಸ್ಥಿತಿ ನೋಡಿ ಶ್ರೀಮತ ಕೊಡುತ್ತಾರೆ. ಯಾರಾದರೂ ನಿರ್ಬಂಧನರಾಗಿರುತ್ತಾರೆ, ವೃದ್ಧರಾಗಿರಬಹುದು ಅಥವಾ ಕುಮಾರಿಯಾಗಿರಬಹುದು ತಿಳಿದುಕೊಳ್ಳಿ, ಅವರು ಸೇವೆಗೆ ಯೋಗ್ಯರಾಗಿದ್ದರೆ ತಂದೆಯು ಅವರಿಗೆ ನೀವು ಈ ಸೇವೆಯಲ್ಲಿ ತತ್ಪರರಾಗಿ ಎಂದು ಸಲಹೆ ಕೊಡುತ್ತಾರೆ. ಬಾಕಿ ಎಲ್ಲರನ್ನು ತಂದೆಯು ಇಲ್ಲಿ ಕೂರಿಸಿಕೊಳ್ಳುವುದಿಲ್ಲ. ಯಾರ ಪ್ರತಿ ತಂದೆಯ ಯಾವ ಶ್ರೀಮತ ಸಿಗುತ್ತದೆ ಅದರಲ್ಲಿ ಕಲ್ಯಾಣವಿದೆ. ಹೇಗೆ ಮಮ್ಮಾ-ಬಾಬಾ ಶಿವಬಾಬಾರವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ, ಹಾಗೆಯೇ ಅವರನ್ನು ಅನುಕರಣೆ ಮಾಡಿ. ಅವರಂತೆ ಸೇವೆ ಮಾಡಿ ಆಸ್ತಿ ತೆಗೆದುಕೊಳ್ಳಬೇಕಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಭೋಲಾನಾಥನಗಿಂತ ಭಿನ್ನ ಯಾರೂ ಇಲ್ಲ…

ಓಂ ಶಾಂತಿ. ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ. ಶಿವನಿಗೆ ಭೋಲಾನಾಥನೆಂದು ಹೇಳಲಾಗುತ್ತದೆ ಮತ್ತು ಯಾರು ಡಮರುಗವನ್ನು ಬಾರಿಸುತ್ತಾರೆ ಅವರನ್ನು ಶಂಕರನೆಂದು ಹೇಳುತ್ತಾರೆ. ಇಲ್ಲಿ ಎಷ್ಟೊಂದು ಆಶ್ರಮಗಳಿವೆ, ಅಲ್ಲಿ ವೇದ, ಶಾಸ್ತ್ರ, ಉಪನಿಷತ್ ಮುಂತಾದವುಗಳನ್ನು ತಿಳಿಸುತ್ತಾರೆ, ಇವರೂ ಸಹ ಡಮರುಗವನ್ನು ಬಾರಿಸುತ್ತಾರೆ. ಎಷ್ಟು ಆಶ್ರಮಗಳಿವೆ, ಅಲ್ಲಿ ಮನುಷ್ಯರೂ ಹೋಗಿ ಇರುತ್ತಾರೆ, ಆದರೆ ಯಾವುದೇ ಗುರಿ-ಧ್ಯೇಯವಿಲ್ಲ. ಅವರು ತಿಳಿಯುತ್ತಾರೆ ಗುರುಗಳು ನನ್ನನ್ನು ವಾಣಿಯಿಂದ ದೂರ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಯೇ ನಾವು ಪ್ರಾಣ ತ್ಯಾಗ ಮಾಡಬೇಕೆನ್ನುವ ವಿಚಾರದಿಂದ ಹೋಗಿ ಇರುತ್ತಾರೆ. ಆದರೆ ಯಾರೂ ಹಿಂತಿರುಗಿ ಶಾಂತಿಧಾಮಕ್ಕೆ ಹೋಗಲು ಸಾಧ್ಯವಿಲ್ಲ. ಅವರೆಲ್ಲರೂ ತಮ್ಮ-ತಮ್ಮ ಭಕ್ತಿ ಮುಂತಾದವುಗಳನ್ನು ಕಲಿಸುತ್ತಾರೆ. ಇಲ್ಲಿ ಮಕ್ಕಳು ತಿಳಿದುಕೊಂಡಿದೀರಿ – ಇದೇ ಸತ್ಯ-ಸತ್ಯ ವಾನಪ್ರಸ್ಥವಾಗಿದೆ. ಮಕ್ಕಳು, ವೃದ್ಧರು, ಯುವಕರು ಎಲ್ಲರೂ ವಾನಪ್ರಸ್ಥಿಗಳಾಗಿದ್ದಾರೆ. ಬಾಕಿ ಮುಕ್ತಿಧಾಮದಲ್ಲಿ ಹೋಗಲು, ಪುರುಷಾರ್ಥ ಮಾಡುತ್ತಿದ್ದಾರೆ. ಸದ್ಗತಿ ಅಥವಾ ವಾಣಿಯಿಂದ ದೂರ ಹೋಗುವ ಮಾರ್ಗವನ್ನು ತೋರಿಸುವವರು ತಂದೆಯ ವಿನಃ ಬೇರೆ ಯಾರೂ ಇಲ್ಲ. ಗತಿ-ಸದ್ಗತಿ ದಾತಾ ಒಬ್ಬರೇ ಆಗಿದ್ದಾರೆ. ನೀವು ಗೃಹಸ್ಥ ವ್ಯವಹಾರವನ್ನು ಬಿಟ್ಟು ಬಂದು ಇಲ್ಲಿ ಕುಳಿತುಬಿಡಿ ಎಂದು ತಂದೆಯು ಹೇಳುವುದಿಲ್ಲ. ಹಾ! ಯಾರು ಸೇವೆಗೆ ಯೋಗ್ಯರಾಗಿದ್ದಾರೆ, ಅವರನ್ನು ಮಾತ್ರ ಇಟ್ಟುಕೊಳ್ಳಲಾಗುತ್ತದೆ. ಅನ್ಯರಿಗೂ ಸಹ ವಾನಪ್ರಸ್ಥದ ಮಾರ್ಗವನ್ನು ತಿಳಿಸಬೇಕಾಗಿದೆ ಏಕೆಂದರೆ ಎಲ್ಲರೂ ಈಗ ವಾಣಿಯಿಂದ ದೂರ ಹೋಗುವ ಸಮಯವಾಗಿದೆ. ವಾನಪ್ರಸ್ಥ ಅಥವಾ ಮುಕ್ತಿಧಾಮದಲ್ಲಿ ಕರೆದುಕೊಂಡು ಹೋಗುವವರು ತಂದೆ ಒಬ್ಬರೇ ಆಗಿದ್ದಾರೆ. ಆ ತಂದೆಯ ಸಮೀಪದಲ್ಲಿ ನೀವು ಕುಳಿತಿದ್ದೀರಿ. ಅವರೆಲ್ಲರೂ ಭಲೆ ವಾನಪ್ರಸ್ಥವನ್ನು ತೆಗೆದುಕೊಳ್ಳುತ್ತಾರೆ, ಆದರೆ ಹಿಂತಿರುಗಿ ಯಾರೂ ಹೋಗಲು ಸಾಧ್ಯವಿಲ್ಲ. ವಾನಪ್ರಸ್ಥದಲ್ಲಿ ಕರೆದುಕೊಂಡು ಹೋಗುವವರು ಒಬ್ಬ ತಂದೇ ಆಗಿದ್ದಾರೆ, ಅವರೇ ಒಳ್ಳೆಯ ಮತವನ್ನು ಕೊಡುತ್ತಾರೆ. ಕೆಲವರು ಹೇಳುತ್ತಾರೆ ಬಾಬಾ ನಾವು ಎಲ್ಲವನ್ನೂ ಇಲ್ಲಿಗೇ ತೆಗೆದುಕೊಂಡು ಬಂದು ಇಲ್ಲಿಯೇ ಇರಬಹುದೇ! ಇಲ್ಲ. ಇವರು ಸೇವೆಗೆ ಯೋಗ್ಯರು ಅಥವಾ ಇಲ್ಲವೋ ಎಂದು ನೋಡಲಾಗುತ್ತದೆ. ಯಾರು ಬಂಧನ ಮುಕ್ತರಾಗಿದ್ದಾರೆ, ವೃದ್ಧಾರಾಗಿರುತ್ತಾರೆ, ಸರ್ವೀಸೆಬುಲ್ ಆಗಿರುತ್ತಾರೆಂದರೆ ಅವರಿಗೆ ಶ್ರೀಮತ ಕೊಡಲಾಗುತ್ತದೆ. ಕೆಲವು ಮಕ್ಕಳು ಬಾಬಾ ಚರ್ಚಾ ಘೋಷ್ಟಿಗಳನ್ನು ಮಾಡಿದರೆ ಸೇವೆಯ ಯುಕ್ತಿಗಳನ್ನು ಕಲಿಯುತ್ತೇವೆ ಎಂದು ಹೇಳುತ್ತಾರೆ. ಕನ್ಯೆಯರ ಜೊತೆ-ಜೊತೆಗೆ ಮಾತೆಯರು, ಪುರುಷರೂ ಸಹ ಕಲಿಯುತ್ತಾ ಹೋಗುತ್ತಾರೆ. ಚರ್ಚಾ ಘೋಷ್ಟಿ ಎಂದರೆ ಇದೇ ಆಗಿದೆಯಲ್ಲವೇ. ತಂದೆಯು ಪ್ರತಿದಿನ ಯಾರಿಗೆ, ಹೇಗೆ ತಿಳಿಸಬೇಕು ಎನ್ನುವ ಶಿಕ್ಷಣವನ್ನು ಕೊಡುತ್ತಿರುತ್ತಾರೆ. ಸಲಹೆ ಕೊಡುತ್ತಿರುತ್ತಾರೆ. ಮೊದಲು-ಮೊದಲು ಒಂದೇ ಮಾತನ್ನು ತಿಳಿಸಿ. ಪರಮಪಿತ ಪರಮಾತ್ಮ ಯಾರನ್ನು ನೀವು ನೆನಪು ಮಾಡುತ್ತೀರಿ, ಅವರು ನಿಮಗೆ ಏನಾಗಬೇಕು? ಒಂದುವೇಳೆ ತಂದೆಯಾಗಿದ್ದಾರೆಂದರೆ ತಂದೆಯಿಂದ ಆಸ್ತಿಯು ಸಿಗಬೇಕು. ನೀವು ತಂದೆಯನ್ನು ಅರಿತುಕೊಂಡೇ ಇಲ್ಲ. ಎಲ್ಲರಲ್ಲೂ ಭಗವಂತ ಇದ್ದಾರೆಂದು ಹೇಳಿಬಿಡುತ್ತೀರಿ. ಕಣ-ಕಣದಲ್ಲಿ ಭಗವಂತನಿದ್ದರೆ, ನಂತರ ನಿಮ್ಮ ಪರಿಸ್ಥಿತಿ ಏನಾಗಬಹುದು! ಈಗ ನೀವು ಮಕ್ಕಳು ತಿಳಿದುಕೊಂಡಿದೀರಿ – ನಾವು ಬಾಬಾನ ಸಮ್ಮುಖದಲ್ಲಿ ಕುಳಿತಿದ್ದೇವೆ. ತಂದೆಯು ನಮ್ಮನ್ನು ಯೋಗ್ಯರನ್ನಾಗಿ ಮಾಡಿ, ಮುಳ್ಳುಗಳಿಂದ ಹೂಗಳನ್ನಾಗಿ ಮಾಡಿ ಜೊತೆ ಕರೆದುಕೊಂಡು ಹೋಗುತ್ತಾರೆ. ಉಳಿದವರೆಲ್ಲರೂ ಅರಣ್ಯದ ಮಾರ್ಗವನ್ನೇ ತಿಳಿಸುತ್ತಾರೆ. ಆದರೆ ತಂದೆಯು ಎಷ್ಟು ಸಹಜ ಮಾರ್ಗವನ್ನು ತಿಳಿಸುತ್ತಾರೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು ಗಾಯನವಿದೆ. ಇದು ಸುಳ್ಳು ಆಗುತ್ತದೆಯೇನು? ಬಾಬಾ ಎಂದು ಹೇಳಿದರೆ ಸಾಕು ನೀವು ಜೀವನ್ಮುಕ್ತರಾಗಿಬಿಡುತ್ತೀರಿ. ತಂದೆಯು ಮೊದಲು-ಮೊದಲು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ನೀವೆಲ್ಲರೂ ತಮ್ಮ ಮನೆಯನ್ನು ಮರೆತು ಬಿಟ್ಟಿದ್ದೀರಲ್ಲವೇ. ಪರಮಾತ್ಮನು ಧರ್ಮ ಸ್ಥಾಪನೆ ಮಾಡಲು ಎಲ್ಲಾ ಧರ್ಮ ಸ್ಥಾಪಕರನ್ನು ಕಲಿಸುತ್ತಾರೆಂದು ಹೇಳುತ್ತಾರೆ, ನಂತರ ಸರ್ವವ್ಯಾಪಿ ಎಂದು ಏಕೆ ಹೇಳುತ್ತಾರೆ? ಅವರು ಮೇಲಿನಿಂದ ಕಳಿಸುತ್ತಾರಲ್ಲವೇ. ಹೇಳುವುದೇನೋ ಹೇಳುತ್ತಾರೆ, ಮತ್ತೆ ಅದನ್ನು ಒಪ್ಪುವುದಿಲ್ಲ. ತಂದೆಯು ಧರ್ಮ ಸ್ಥಾಪನಾರ್ಥವಾಗಿ ಕಳಿಸುವಂತಿದ್ದರೆ ಅವರ ಸಂಸ್ಥೆಯೂ ಸಹ ಅವರ ಹಿಂದೆ ಬರಬೇಕಾಗುತ್ತದೆ. ಮೊದಲು-ಮೊದಲು ದೇವೀ-ದೇವತೆಗಳ ಸಂಸ್ಥೆ ಇರುತ್ತದೆ. ಮೊದಲು ಆದಿ ಸನಾತನ ದೇವೀ-ದೇವತಾ ಧರ್ಮದ ಲಕ್ಷ್ಮೀ-ನಾರಾಯಣ ತಮ್ಮ ಪ್ರಜೆಗಳ ಸಹಿತ ಬರುತ್ತಾರೆ. ಮತ್ಯಾರೂ ಪ್ರಜೆಗಳ ಸಹಿತ ಬರುವುದಿಲ್ಲ. ಅವರು ಒಬರು ಬರುತ್ತಾರೆ, ನಂತರ ಇನ್ನೊಬ್ಬರು, ನಂತರ ಮೂರನೆಯವರು ಬರುತ್ತಾರೆ. ಇಲ್ಲಿ ನೀವೆಲ್ಲರೂ ತಂದೆಯಿಂದ ಆಸ್ತಿಯನ್ನು ಪಡೆಯಲು ತಯಾರಾಗುತ್ತಿದ್ದೀರಿ. ಇದು ಶಾಲೆಯಾಗಿದೆ. ಒಂದು ಸೆಕೆಂಡಿನಲ್ಲಿ ನೀವು ತಿಳಿಸುತ್ತೀರಿ – ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು. ಪರಮಪಿತ… ಅವರು ಎಲ್ಲರ ತಂದೆ ರಚಯಿತನಾಗಿದ್ದಾರೆ ಎಂದು ಬಾಯಿಯಿಂದ ಹೇಳುತ್ತಾರೆ. ಆದರೆ ತಂದೆಯನ್ನು ತಿಳಿದುಕೊಳ್ಳುವುದಿಲ್ಲವೆಂದರೆ ಅಂತಹವರಿಗೆ ಏನು ಹೇಳುವುದು! ತಂದೆಯು ಸ್ವರ್ಗದ ರಚಯಿತನಾಗಿರುವುದರಿಂದ ಅವಶ್ಯವಾಗಿ ಸ್ವರಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಭಾರತಕ್ಕೆ ಕೊಟ್ಟಿದ್ದಾರಲ್ಲವೇ. ನರನಿಂದ ನಾರಾಯಣರನ್ನಾಗಿ ಮಾಡುವ ರಾಜಯೋಗವು ಪ್ರಸಿದ್ದಿಯಾಗಿದೆ. ಇದು ಸತ್ಯನಾರಾಯಣನ ಕಥೆಯು ಆಗಿದೆ. ಅಮರ ಕಥೆಯೂ ಆಗಿದೆ, ತಿಜರಿ ಅರ್ಥಾತ್ ಮೂರನೆಯ ನೇತ್ರ ಸಿಗುವ ಕಥೆಯೂ ಆಗಿದೆ. ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಿದ್ದಾರೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ಶ್ರೀಮತ ಕೊಡುತ್ತಾರೆ. ಅವರ ಮತದಿಂದ ಅವಶ್ಯವಾಗಿ ಕಲ್ಯಾಣವೇ ಆಗುವುದು. ತಂದೆಯು ಪ್ರತಿಯೊಬ್ಬರ ನಾಡಿಯನ್ನು ನೋಡುತ್ತಾರೆ. ಅವರಿಗೆ ಯಾವುದೇ ಬಂಧನವಿಲ್ಲ, ಸೇವೆಯನ್ನು ಮಾಡಬಲ್ಲರು ಎಂದು ತಂದೆಗೆ ಗೊತ್ತಾದರೆ ಅವರ ಯೋಗ್ಯತೆ ನೋಡಿ ನಂತರ ಸಲಹೆ ಕೊಡುತ್ತಾರೆ. ಪರಿಸ್ಥಿತಿ ನೋಡಿ ಹೇಳಲಾಗುತ್ತದೆ – ನೀವು ಇಲ್ಲಿ ಇರಬಹುದು ಅಥವಾ ಸೇವೆಯನ್ನು ಮಾಡುತ್ತೀರಿ. ಕೆಲವೊಂದು ಸಲ ಅವಶ್ಯಕತೆ ಬೀಳುತ್ತದೆ, ಪ್ರದರ್ಶನಿಗಳಲ್ಲಿ ಅನೇಕರ ಆವಶ್ಯಕತೆ ಬೀಳುತ್ತದೆ. ವೃದ್ಧರೂ ಬೇಕು, ಕನ್ಯೆಯರು ಬೇಕು. ಎಲ್ಲರಿಗೆ ಶಿಕ್ಷಣ ಸಿಗುತ್ತಿರುತ್ತದೆ. ಇದು ವಿದ್ಯೆಯಾಗಿದೆ. ಭಗವಾನುವಾಚ ನಿರಾಕಾರನನ್ನು ಭಗವಂತನೆಂದು ಹೇಳಲಾಗುತ್ತದೆ. ನೀವು ಆತ್ಮಗಳು ಅವರ ಮಕ್ಕಳಾಗಿದ್ದೀರಿ. ಓ ಪರಮಪಿತ ಎಂದು ಹೇಳುವುದರಿಂದ ಅವರನ್ನು ನಂತರ ಸರ್ವವ್ಯಾಪಿ ಎಂದು ಹೇಳಲು ಸಾಧ್ಯವೇ. ಲೌಕಿಕ ತಂದೆಯು ಸರ್ವವ್ಯಾಪಿ ಆಗಿದ್ದಾರೇನು! ಇಲ್ಲ. ನೀವು ಭಗವಂತನನ್ನು ತಂದೆ ಎಂದು ಹೇಳುತ್ತೀರಿ. ಪತಿತ ಪಾವನ ಎಂದು ಗಾಯನ ಮಾಡುತ್ತೀರೆಂದಾಗ ಅವರು ಖಂಡಿತವಾಗಿ ಬಂದು ಪಾವನ ಮಾಡುತ್ತಾರೆ. ಅವರು ಪತಿತರಿಂದ ಪಾವನರನ್ನಾಗಿ ಮಾಡುತ್ತಿದ್ದಾರೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ಹೇಳುತ್ತಾರೆ 5000 ವರ್ಷಗಳ ನಂತರ ಪುನಃ ಬಂದು ಸೇರಿರುವಂತಹ ನನ್ನ ಮಕ್ಕಳೇ ನೀವು ಪುನಃ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದೀರಿ. ರಾಜಧಾನಿಯು ಸ್ಥಾಪನೆ ಆಗುತ್ತಾ ಇದೆ ಎಂಬುವುದನ್ನು ನೀವು ತಿಳಿದುಕೊಂಡಿದ್ದೀರಿ. ಹೇಗೆ ಮಮ್ಮಾ-ಬಾಬಾ ಶಿವಬಾಬಾರವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ, ನಾವೂ ಸಹ ಅವರಿಂದಲೇ ತೆಗೆದುಕೊಳ್ಳುತ್ತೇವೆ ಆದ್ದರಿಂದ ಅವರನ್ನು ಅನುಕರಣೆ ಮಾಡಿ. ಮಮ್ಮಾ ಬಾಬಾನ ತರಹ ಸೇವೆಯನ್ನು ಮಾಡಿ. ಮಮ್ಮಾ ಬಾಬಾ ನರನಿಂದ ನಾರಾಯಣರನ್ನಾಗಿ ಮಾಡುವ ಕಥೆಯನ್ನು ತಿಳಿಸುತ್ತಾರೆ. ಅಂದಮೇಲೆ ಮತ್ತೆ ನಾವೇಕೆ ಕಡಿಮೆ ಕೇಳಬೇಕು. ಇದನ್ನೂ ತಿಳಿದುಕೊಂಡಿದೀರಿ ಸೂರ್ಯವಂಶಿಗಳೇ ನಂತರ ಚಂದ್ರವಂಶಿಗಳಾಗುತ್ತಾರೆ. ಮೊದಲಂತು ಸೂರ್ಯವಂಶಿಯಲ್ಲಿಯೇ ಬರಬೇಕಲ್ಲವೇ. ತಿಳುವಳಿಕೆಯಂತು ಇದೇಯಲ್ಲವೇ. ತಿಳುವಳಿಕೆ ಇಲ್ಲದೆ ಶಾಲೆಯಲ್ಲಿ ಯಾರೂ ಕುಳಿತುಕೊಳ್ಳುವುದಿಲ್ಲ. ಬಾಬಾ ಶ್ರೀಮತ ಕೊಡುತ್ತಾರೆ. ಇವರಲ್ಲಿ ಬಾಬಾನ ಪ್ರವೇಶತೆ ಆಗಿದೆ ಎಂದು ನಾವು ತಿಳಿಯುತ್ತೇವೆ. ಇಲ್ಲದಿದ್ದರೆ ಪ್ರಜಾಪಿತ ಎಲ್ಲಿಂದ ಬರುತ್ತಾರೆ. ಬ್ರಹ್ಮನಂತು ಸೂಕ್ಷ್ಮವತನವಾಸಿ ಆಗಿದ್ದಾರೆ. ಆದರೆ ಪ್ರಜಾಪಿತ ಬ್ರಹ್ಮನೆಂದರೆ ಇಲ್ಲಿಯೇ ಬೇಕಲ್ಲವೇ. ಬ್ರಹ್ಮನ ಮುಖಾಂತರ ನಾನು ಸ್ಥಾಪನೆ ಮಾಡುತ್ತೇನೆ ಎಂದು ತಂದೆಯು ಹೇಳುತ್ತಾರೆ. ಯಾರ ಸ್ಥಾಪನೆ? ಬ್ರಾಹ್ಮಣರ ಸ್ಥಾಪನೆ ಮಾಡುತ್ತಾರೆ. ಈ ಬ್ರಹ್ಮನಲ್ಲಿ ಪ್ರವೇಶ ಮಾಡುತ್ತೇನೆ. ಹೇಗೆ ನೀವು ಆತ್ಮರೂ ಸಹ ಶರೀರದಲ್ಲಿ ಪ್ರವೇಶ ಮಾಡುತ್ತೀರಲ್ಲವೇ. ನನ್ನನ್ನು ಜ್ಞಾನಸಾಗರ ಎಂದು ಹೇಳುತ್ತಾರೆ. ಆದ್ದರಿಂದ ನಾನು ನಿರಾಕಾರ ಜ್ಞಾನವನ್ನು ಹೇಗೆ ಹೇಳುವುದು. ಆದ್ದರಿಂದಲೇ ಬ್ರಹ್ಮನಲ್ಲಿ ಪ್ರವೇಶ ಮಾಡುತ್ತೇನೆ. ಕೃಷ್ಣನನ್ನು ಜ್ಞಾನಸಾಗರ ಎಂದು ಹೇಳುವುದಿಲ್ಲ. ಕೃಷ್ಣನ ಆತ್ಮವು ಬಹಳ ಜನ್ಮಗಳ ಅಂತ್ಯದಲ್ಲಿ ಜ್ಞಾನವನ್ನು ತೆಗೆದುಕೊಂಡು ನಂತರ ಕೃಷ್ಣನಾಗುತ್ತದೆ, ಈಗ ಇಲ್ಲ. ಭಗವಂತನ ಮುಖಾಂತರ ರಾಜಯೋಗವನ್ನು ಕಲಿತು ದೇವೀ-ದೇವತೆಗಳು ಸ್ವರ್ಗದ ಮಾಲೀಕರಾಗುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ. ತಂದೆಯು ಹೇಳುತ್ತಾರೆ ಕಲ್ಪ-ಕಲ್ಪವು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ವಿದ್ಯೆಯಿಂದ ರಾಜ್ಯಭಾಗ್ಯವು ಸಿಗುತ್ತದೆ. ನೀವು ರಾಜರಿಗಳಿಗೂ ರಾಜರಾಗುತ್ತೀರಿ. ನಿಮ್ಮ ಲಕ್ಷ್ಯವೇ ಇದಾಗಿದೆ. ನೀವು ಪುನಃ ಸೂರ್ಯವಂಶಿ ದೇವೀ-ದೇವತೆಗಳಾಗಲು ಬಂದಿದೀರಿ. ಒಂದು ದೇವೀ-ದೇವತಾ ಧರ್ಮದ ಸ್ಥಾಪನೆ ಆಗುತ್ತಿದೆ. ಈಗ ಅನೇಕಾನೇಕ ಧರ್ಮಗಳಿವೆ. ಅನೇಕ ಗುರುಗಳಿದ್ದಾರೆ. ಅವರೆಲ್ಲರೂ ಸಮಾಪ್ತಿ ಆಗುತ್ತಾರೆ. ಈ ಎಲ್ಲಾ ಗುರುಗಳಿಗೆ ಗುರು ಸದ್ಗತಿದಾತ ಒಬ್ಬ ತಂದೆ ಆಗಿದ್ದಾರೆ. ಆ ತಂದೆಯು ಹೇಳುತ್ತಾರೆ ಸಾಧುಗಳೆಲ್ಲರ ಸದ್ಗತಿ ಮಾಡಲು ಬಂದಿದ್ದೇನೆ. ಮುಂದೆ ಹೋದಂತೆ ಕಲ್ಪದ ಹಿಂದಿನ ತರಹ ಅವರೂ ಸಹ ನಿಮ್ಮ ಮುಂದೆ ಬಾಗುತ್ತಾರೆ. ನೀವು ಮಕ್ಕಳ ಬುದ್ದಿಯಲ್ಲಿ ಡ್ರಾಮಾದ ಎಲ್ಲಾ ರಹಸ್ಯವಿದೆ. ತಿಳಿದುಕೊಂಡಿದ್ದೀರಿ ಸೂಕ್ಷ್ಮವತನದಲ್ಲಿ ಬ್ರಹ್ಮಾ, ವಿಷ್ಣು, ಶಂಕರರಿದ್ದಾರೆ. ಮತ್ತೆ ಇವರು ಪ್ರಜಾಪಿತ ಆಗಿದ್ದಾರೆ. ತಂದೆಯು ಹೇಳುತ್ತಾರೆ ಬ್ರಹ್ಮನ ವೃದ್ಧ ಶರೀರದಲ್ಲಿ ನಾನು ಪ್ರವೇಶ ಮಾಡುತ್ತೇನೆ. ಇವರಿಗೂ ಸಹ ಹೇಳುತ್ತಾರೆ ಹೇ! ಮಕ್ಕಳೇ ನೀವೆಲ್ಲರೂ ಬ್ರಾಹ್ಮಣರಾಗಿದ್ದೀರಿ, ನಿಮ್ಮ ಮೇಲೆ ಕಲಶವನ್ನು ಇಡುತ್ತೇನೆ. ನೀವು ಇಷ್ಟೊಂದು ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಈ ಸಮಯದಲ್ಲಿ ರೌರವ ನರಕವಾಗಿದೆ. ಬಾಕಿ ಯಾವುದೇ ನದಿ ಇಲ್ಲ ಅದಕ್ಕೆ ನರಕವೆಂದು ಹೇಳಲು. ಗರುಡ ಪುರಾಣದಲ್ಲಿ ಅನೇಕ ಮಾತುಗಳನ್ನು ಬರೆದಿದ್ದಾರೆ. ಈಗ ತಂದೆಯು ಮಕ್ಕಳಿಗೆ ಕುಳಿತು ತಿಳಿಸಿಕೊಡುತ್ತಾರೆ – ಇದನ್ನಂತು ಓದಿದ್ದೀರಲ್ಲವೇ. ಆದ್ದರಿಂದ ಈಗ ಭೋಲಾನಾಥ ತಂದೆಯು ನೀವು ಭೋಲಾ ಮಕ್ಕಳಿಗೆ ಕುಳಿತು ತಿಳಿಸಿಕೊಡುತ್ತಾರೆ. ಬಡವ ಮುಗ್ದ ಮಕ್ಕಳನ್ನು ನಂತರ ಶ್ರೇಷ್ಠಾತಿ ಶ್ರೇಷ್ಠ ಸಾಹುಕಾರರನ್ನಗಿ ಮಾಡುತ್ತಾರೆ. ಸೂರ್ಯವಂಶಿ ಮಾಲೀಕರಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ನೀವೇ ನಂತರ ನಿಧನ-ನಿಧಾನವಾಗಿ ಬೀಳುತ್ತಾ ಏನಾಗಿ ಬಿಟ್ಟಿದ್ದೀರಿ. ಇದು ಎಂತಹ ಅದ್ಭುತವಾದ ಆಟವಾಗಿದೆ. ಸ್ವರ್ಗದಲ್ಲಿ ಎಷ್ಟೊಂದು ಸಂಪನ್ನರಾಗಿದ್ದಿರಿ. ಈಗಲೂ ಸಹ ರಾಜರುಗಳ ತುಂಬಾ ದೊಡ್ಡ-ದೊಡ್ಡ ಮೆಹಲ್ಗಳು ಇದೆ. ಜೈಪುರದಲ್ಲಿಯೂ ಇದೆ. ಈಗಲೇ ಇಂತಿಂತಹ ಮೆಹಗಳಿದೆ ಎಂದರೆ ಮೊದಲು ಹೇಗಿರಬಹುದೋ ಗೊತ್ತಿಲ್ಲ! ಸರ್ಕಾರದ ಮನೆಗಳು ಈ ರೀತಿ ಇರುವುದಿಲ್ಲ. ರಾಜರುಗಳ ಮೆಹಲ್ಗಳನ್ನು ಮಾಡುವಂತಹ ಅಲಂಕಾರವೇ ಬೇರೆಯಾಗಿದೆ. ಒಳ್ಳೆಯದು, ಮತ್ತೆ ಸ್ವರ್ಗದ ಮಾದರಿಯನ್ನು ನೋಡಬೇಕೆಂದರೆ ಅಜ್ಮೀರ್ಗೆ ಹೋಗಿ. ಒಂದು ಮಾದರಿಯನ್ನು ಮಾಡುವುದರಲ್ಲಿಯೂ ತುಂಬಾ ಪರಿಶ್ರಮ ಪಟ್ಟಿದ್ದಾರೆ. ನೋಡುವುದರಿಂದಲೇ ನಿಮಗೆ ಎಷ್ಟೊಂದು ಖುಷಿ ಆಗುತ್ತದೆ. ಇಲ್ಲಂತು ತಂದೆಯು ತಕ್ಷಣ ಸಾಕ್ಷಾತ್ಕಾರ ಮಾಡಿಸುತ್ತಾರೆ. ಯಾವುದನ್ನು ದಿವ್ಯದೃಷ್ಟಿಯಿಂದ ನೋಡುತ್ತೀರಿ ಅದನ್ನು ಮತ್ತೆ ನೀವು ಪ್ರತ್ಯಕ್ಷದಲ್ಲಿ ನೋಡಬೇಕಾಗಿದೆ. ಭಕ್ತಿಮಾರ್ಗದಲ್ಲಿ ಭಕ್ತರಿಗೆ ಭಲೆ ಸಾಕ್ಷಾತ್ಕಾರವಾಗುತ್ತದೆ. ಆದರೆ ಅವರು ಯಾವುದೇ ವೈಕುಂಠದ ಮಾಲೀಕರಾದರೇನು! ನೀವು ಪ್ರತ್ಯಕ್ಷದಲ್ಲಿ ಮಾಲೀಕರಾಗುತ್ತೀರಿ. ಈಗಂತು ನರಕವಾಗಿದೆ. ಒಬ್ಬರು ಇನ್ನೊಬ್ಬರನ್ನು ಸಾಯಿಸುತ್ತಾ ಜಗಳಾಡುತ್ತಾ ಇರುತ್ತಾರೆ. ಮಕ್ಕಳು ತಂದೆಯನ್ನು, ಸಹೋದರರನ್ನೂ ಸಹ ಕೊಲೆ ಮಾಡುವುದರಲ್ಲಿ ನಿಧಾನಿಸುವುದಿಲ್ಲ. ಸತ್ಯಯುಗದಲ್ಲಿ ಯುದ್ಧ, ಜಗಳ ಮುಂತಾದವುಗಳ ಯಾವುದೇ ಮಾತಿಲ್ಲ. ಈಗಿನ ಸಂಪಾದನೆಯಿಂದ ನೀವು 21 ಜನ್ಮಗಳ ಪದವಿಯನ್ನು ಪಡೆಯುತ್ತೀರಿ. ಆದ್ದರಿಂದ ಎಷ್ಟೊಂದು ಖುಷಿ ಇರಬೇಕು. ಮೊದಲ ಮಾತಾಗಿದೆ- ಒಂದುವೇಳೆ ತಂದೆಯ ಪರಿಚಯ ಮತ್ತು ತಂದೆಯ ಚರಿತ್ರೆಯನ್ನು ಅರಿತುಕೊಳ್ಳದೆ ಸುಮ್ಮನೆ ಬಾಬಾ ಎಂದು ಹೇಳುವುದರಿಂದ ಲಾಭವೇನು, ಇಷ್ಟೊಂದು ದಾನ-ಪುಣ್ಯ ಮಾಡುತ್ತಿದ್ದರೂ ಭಾರತದ ಸ್ಥಿತಿ ಹೀಗಾಗಿಬಿಟ್ಟಿದೆ. ಆದರೆ ಇದನ್ನು ಯಾರೂ ತಿಳಿದುಕೊಂಡಿಲ್ಲ. ಭಕ್ತಿಯ ನಂತರ ಭಗವಂತ ಸಿಗುತ್ತಾರೆಂದು ಹೇಳುತ್ತಾರೆ. ತಿಳಿದುಕೊಳ್ಳುವುದಕ್ಕೆ ಎಷ್ಟೊಂದು ಅವಕಾಶಗಳಿವೆ. ನೀವು ಯಾರಿಗಾದರೂ ಹೇಳಬಲ್ಲಿರಿ. ಈ ಶಾಸ್ತ್ರ ಮುಂತಾದವೆಲ್ಲವನ್ನು ಮರೆಯಿರಿ, ಜೀವಿಸಿದ್ದಂತೆಯೇ ಸತ್ತು ಹೋಗಿ. ಬ್ರಹ್ಮವು ತತ್ವವಾಗಿದೆ. ಅದರಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ. ಆಸ್ತಿಯು ತಂದೆಯಿಂದಲೇ ಸಿಗುತ್ತದೆ. ಕಲ್ಪ-ಕಲ್ಪವು ನಾವು ತೆಗೆದುಕೊಳ್ಳುತ್ತೇವೆ. ಯಾವುದೇ ಹೊಸ ಮಾತಿಲ್ಲ. ಈಗ ನಾಟಕವು ಪೂರ್ತಿ ಆಗುವುದಿದೆ. ನಾವು ಶರೀರವನ್ನು ಬಿಟ್ಟು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈಗ ಎಷ್ಟು ನೆನಪು ಮಾಡುತ್ತೀರೋ ಅಷ್ಟು ಅಂತಿಮತಿ ಸೋ ಗತಿ ಆಗುವುದು. ಇದಕ್ಕೆ ಅಂತಿಮದ ಸಮಯವೆಂದು ಹೇಳಲಾಗುತ್ತದೆ. ಪಾಪಾತ್ಮರ ಲೆಕ್ಕಾಚಾರವೂ ಸಮಾಪ್ತಿಯಾಗುವುದಿದೆ. ಯೋಗಬಲದಿಂದ ಪುಣ್ಯಾತ್ಮರಾಗಬೇಕಾಗಿದೆ. ಈ ಬಿದಿರಿನ ಕಾಡಿಗೆ ಬೆಂಕಿ ಬೀಳುವುದು. ಆತ್ಮಗಳು ಹಿಂತಿರುಗಿ ಹೋಗುತ್ತಾರೆ. ಒಂದು ಧರ್ಮದ ಸ್ಥಾಪನೆ ಆಗುವುದರಿಂದ ಅನೇಕ ಧರ್ಮದ ಆತ್ಮಗಳು ಅವಶ್ಯವಾಗಿ ಹಿಂತಿರುಗಿ ಹೋಗುತ್ತಾರೆ. ಶರೀರವನ್ನು ಜೊತೆ ತೆಗೆದುಕೊಂಡು ಹೋಗುತ್ತಾರೇನು.

ಕೆಲವರು ಮೋಕ್ಷ ಸಿಗಲಿ ಎಂದು ಹೇಳುತ್ತಾರೆ ಆದರೆ ಇದು ಆಗಲು ಸಾಧ್ಯವಿಲ್ಲ, ಇದು ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ, ಇದು ಸದಾ ತಿರುಗುತ್ತಲೇ ಇರುತ್ತದೆ. ಇದರ ಕೊನೆಯು ಎಂದೂ ಆಗುವುದಿಲ್ಲ. ಅನಾದಿ ಚಕ್ರವು ಹೇಗೆ ತಿರುಗುತ್ತದೆ ಎನ್ನುವುದನ್ನು ಈಗ ತಂದೆಯು ಕುಳಿತು ರಹಸ್ಯವನ್ನು ತಿಳಿಸುತ್ತಾರೆ. ಈ ಎಲ್ಲಾ ಮಾತುಗಳನ್ನು ತಿಳಿಸಬೇಕಾಗಿದೆ. ಯಾವಾಗ ಅವರು ಜಾಸ್ತಿ ತಿಳಿದುಕೊಳ್ಳಲು ತೊಡಗುತ್ತಾರೆ, ಆಗ ವೃದ್ಧಿಯಾಗ ತೊಡಗುತ್ತದೆ. ನಿಮ್ಮದು ತುಂಬಾ ಶ್ರೇಷ್ಠ ಧರ್ಮವಾಗಿದೆ. ಆದ್ದರಿಂದ ಇದನ್ನು ಪಕ್ಷಿಗಳು ತಿನ್ನುತ್ತವೆ. ಬೇರೆ ಧರ್ಮಗಳನ್ನು ಪಕ್ಷಿಗಳು ತಿನ್ನುವುದಿಲ್ಲ. ನೀವು ಮಕ್ಕಳು ಈ ಪ್ರಪಂಚದಲ್ಲಿ ಯಾವುದೇ ಆಸಕ್ತಿಯನ್ನು ಇಟ್ಟುಕೊಳ್ಳಬಾರದು – ಇದು ಸ್ಮಶಾನವಾಗಿದೆ. ಹಳೆಯ ಪ್ರಪಂಚದೊಂದಿಗೆ ಸೆಳೆತವನ್ನು ಏಕೆ ಇಟ್ಟುಕೊಳ್ಳಬೇಕು. ಅಮೆರಿಕಾದಲ್ಲಿ ಯಾರು ಬುಧಿವಂತರಿದ್ದಾರೆ, ಅವರು ನಮಗೆ ಯಾರೋ ಪ್ರೇರಕರು (ಪ್ರೇರಣೆ ಕೊಡುವವರು) ಇದ್ದಾರೆಂದು ತಿಳಿಯುತ್ತಾರೆ. ಮೃತ್ಯುವು ಹತ್ತಿರದಲ್ಲಿಯೇ ನಿಂತಿದೆ. ವಿನಾಶವಂತು ಆಗಲೇ ಬೇಕಾಗಿದೆ. ಎಲ್ಲರ ಮನಸ್ಸು ತಿನ್ನುತ್ತಲೇ ಇರುತ್ತದೆ. ನಾಟಕದ ಭಾವಿಯೇ ಈ ರೀತಿ ಮಾದಲ್ಪಟ್ಟಿದೆ. ಶಿವಬಾಬಾ ದಾತಾ ಆಗಿದ್ದಾರೆ, ಇವರಿಗೆ ಯಾವುದೇ ಆಸಕ್ತಿ ಇಲ್ಲ. ನಿರಾಕಾರನಾಗಿದ್ದಾರೆ. ಇದೆಲ್ಲವೂ ಮಕ್ಕಳಿಗೇ ಆಗಿದೆ. ಹೊಸ ಪ್ರಪಂಚವೂ ಸಹ ಮಕ್ಕಳಿಗಾಗಿಯೇ. ವಿಶ್ವದ ರಾಜಾಯಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ, ನಾವೇ ರಾಜ್ಯ ಮಾಡುತ್ತೇವೆ. ತಂದೆಯು ಎಷ್ಟು ನಿಷ್ಕಾಮಿ ಆಗಿದ್ದಾರೆ. ನೀವು ತಂದೆಯನ್ನು ನೆನಪು ಮಾಡಿದಾಗ ನಿಮ್ಮ ಬುದ್ಧಿಯ ಬೀಗವು ತೆರೆಯುವುದು. ನೀವು ಡಬಲ್ ಪರೋಪಕಾರಿಗಳಾಗಿದ್ದೀರಿ. ತನು, ಮನ, ಧನವನ್ನು ಕೊಡುತ್ತೀರಿ, ಅವಿನಾಶಿ ಜ್ಞಾನರತ್ನಗಳನ್ನು ಕೊಡುತ್ತೀರಿ. ಶಿವಬಾಬಾರವರಿಗೆ ನೀವು ಏನು ಕೊಡುತ್ತೀರಿ? ಈಶ್ವರ ಸಮರ್ಪಣಂ ಎಂದು ಹೇಳುತ್ತಾರೆ, ಈಶ್ವರನು ಭಿಕ್ಷುಕರೇನು? ಅಥವಾ ಕೃಷ್ಣಾರ್ಪಣಂ ಎನ್ನುತ್ತಾರೆ. ಇಬ್ಬರನ್ನು ಭಿಕ್ಷಕರನ್ನಾಗಿ ಮಾಡಿದ್ದಾರೆ. ಅವರು ದಾತ ಆಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.ಆತ್ಮೀಯ ತಂದೆ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಹಳೆಯ ಪ್ರಪಂಚದ ಯಾವುದೇ ವಸ್ತುವಿನಲ್ಲಿ ಸೆಳೆತವನ್ನು ಇಟ್ಟುಕೊಳ್ಳಬಾರದು. ಈ ಪ್ರಪಂಚದಲ್ಲಿ ಯಾವುದೇ ಮಾತಿನ ಆಸಕ್ತಿಯನ್ನು ಇಟ್ಟುಕೊಳ್ಳಬಾರದು. ಏಕೆಂದರೆ ಇದು ಸ್ಮಶಾನವಾಗುವುದಿದೆ.

2. ಈಗ ನಾಟಕವು ಪೂರ್ತಿ ಆಗುತ್ತದೆ, ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ಯೋಗಬಲದ ಮುಖಾಂತರ ಪಾಪಗಳಿಂದ ಮುಕ್ತರಾಗಿ ಪುಣ್ಯಾತ್ಮರಾಗಬೇಕಾಗಿದೆ. ಡಬಲ್ ದಾನಿಗಳು ಆಗಬೇಕಾಗಿದೆ.

ವರದಾನ:-

“ವಾಹ್ ಬಾಬಾ ವಾಹ್ ಹಾಗೂ ವಾಹ್ ನನ್ನ ಭಾಗ್ಯವೇ ವಾಹ್” ಸದಾ ಇದೇ ಖುಷಿಯ ಹಾಡನ್ನು ಹಾಡುತ್ತಿರಿ. `ಖುಷಿ’ ಅತ್ಯಂತ ಶ್ರೇಷ್ಠವಾದ ಔಷಧಿಯಾಗಿದೆ, ಖುಷಿಯ ಔಷಧಿಯಿಲ್ಲ. ಯಾರು ಪ್ರತಿನಿತ್ಯವೂ ಖುಷಿಯ ಔಷಧಿಯನ್ನು ಸೇವಿಸುತ್ತಾರೆಯೋ ಅವರು ಸದಾ ಆರೋಗ್ಯದಿಂದ ಕೂಡಿರುತ್ತಾರೆ. ಎಂದಿಗೂ ಸಹ ಬಲಹೀನರಾಗುವುದಿಲ್ಲ ಆದ್ದರಿಂದ ಖುಷಿಯ ಔಷಧಿಯ ಮೂಲಕ ಮನಸ್ಸು-ಬುದ್ಧಿಯನ್ನು ಶಕ್ತಿಶಾಲಿಗೊಳಿಸಿರಿ, ಅದರಿಂದ ಸ್ಥಿತಿಯು ಶಕ್ತಿಶಾಲಿಯಾಗಿ ಇರುತ್ತದೆ. ಇಂತಹ ಶಕ್ತಿಶಾಲಿ ಸ್ಥಿತಿಯಲ್ಲಿರುವವರು ಸದಾಕಾಲ ಅಚಲ-ಅಡೋಲರಾಗಿ ಇರುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top