12 June 2021 KANNADA Murli Today | Brahma Kumaris

June 11, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಸೂರ್ಯವಂಶಿ ರಾಜ್ಯ ಪದವಿಯನ್ನು ಪಡೆಯಲು ತಮ್ಮದೆಲ್ಲವನ್ನೂ ತಂದೆಗೆ ಸ್ವಾಹಾ ಮಾಡಿರಿ, ಸೂರ್ಯವಂಶಿ ರಾಜ್ಯ ಪದವಿ ಅರ್ಥಾತ್ ಏರ್ಕಂಡೀಷನ್ ಟಿಕೇಟ್”

ಪ್ರಶ್ನೆ:: -

ಪ್ರಪಂಚದಲ್ಲಿ ನೀವು ಮಕ್ಕಳಿಗಿಂತಲೂ ಅದೃಷ್ಟವಂತರು ಯಾರೂ ಇಲ್ಲ – ಏಕೆ?

ಉತ್ತರ:-

ನೀವು ಮಕ್ಕಳ ಸನ್ಮುಖದಲ್ಲಿ ಬೇಹದ್ದಿನ ತಂದೆಯಿದ್ದಾರೆ, ಅವರಿಂದ ನಿಮಗೆ ಆಸ್ತಿಯು ಸಿಗುತ್ತಿದೆ. ನೀವು ಈ ಸಮಯದಲ್ಲಿ ಬೇಹದ್ದಿನ ತಂದೆ, ಶಿಕ್ಷಕ ಮತ್ತು ಸದ್ಗುರುವಿನ ಮಕ್ಕಳಾಗಿ ಅವರಿಂದ ಬೇಹದ್ದಿನ ಪ್ರಾಪ್ತಿಯನ್ನು ಮಾಡಿಕೊಳ್ಳುತ್ತೀರಿ. ಪ್ರಪಂಚದವರಂತೂ ಅವರನ್ನು ತಿಳಿದುಕೊಂಡೇ ಇಲ್ಲ ಅಂದಮೇಲೆ ನಿಮ್ಮಂತಹ ಅದೃಷ್ಟವಂತರಾಗಲು ಹೇಗೆ ಸಾಧ್ಯ!

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಬಹಳ ಅದೃಷ್ಟವಂತನಾಗಿದ್ದೇನೆ…………

ಓಂ ಶಾಂತಿ. ಬ್ರಾಹ್ಮಣ ಕುಲ ಭೂಷಣ ಮಕ್ಕಳು ತಿಳಿದುಕೊಂಡಿದ್ದೀರಿ – ನಾವೀಗ ಬ್ರಾಹ್ಮಣ ಸಂಪ್ರದಾಯದವರಾಗಿದ್ದೇವೆ ನಂತರ ದೈವೀ ಸಂಪ್ರದಾಯದವರಾಗುತ್ತೇವೆ. ಮಕ್ಕಳಿಗೆ ತಂದೆಯು ಕುಳಿತು ತಿಳಿಸುತ್ತಾರೆ – ಈಗ ಬೇಹದ್ದಿನ ತಂದೆಯು ಸನ್ಮುಖದಲ್ಲಿದ್ದಾರೆ ಮತ್ತು ಅವರಿಂದ ಬೇಹದ್ದಿನ ಆಸ್ತಿಯು ಸಿಗುತ್ತಿದೆ. ಅಂದಮೇಲೆ ಇನ್ನೇನು ಬೇಕು! ಭಕ್ತಿಮಾರ್ಗವು ಯಾವಾಗಿನಿಂದ ನಡೆಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಭಕ್ತಿಮಾರ್ಗದ ಭಕ್ತರು ಭಗವಂತನನ್ನು ಅಥವಾ ವಧುಗಳು ವರನನ್ನು ನೆನಪು ಮಾಡುತ್ತಾರೆ ಆದರೆ ಆಶ್ಚರ್ಯವೇನೆಂದರೆ ಯಾರನ್ನು ನೆನಪು ಮಾಡುವರೋ ಅವರನ್ನೇ ಅರಿತುಕೊಂಡಿಲ್ಲ. ಪ್ರಿಯತಮೆಯು ಪ್ರಿಯತಮನನ್ನು ತಿಳಿದುಕೊಂಡಿಲ್ಲದೇ ಇರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅವರ ಬಗ್ಗೆ ತಿಳಿದೇ ಇಲ್ಲವೆಂದರೆ ನೆನಪು ಮಾಡಲು ಹೇಗೆ ಸಾಧ್ಯ? ಭಗವಂತನು ಎಲ್ಲರ ತಂದೆಯಾಗಿದ್ದಾರೆ, ಮಕ್ಕಳು ತಂದೆಯನ್ನು ನೆನಪು ಮಾಡುತ್ತಾರೆ ಆದರೆ ಪರಿಚಯವಿಲ್ಲದೆ ನೆನಪು ಮಾಡುವುದೆಲ್ಲವೂ ವ್ಯರ್ಥವಾಗುತ್ತದೆ ಆದ್ದರಿಂದ ನೆನಪು ಮಾಡಿದರೂ ಸಹ ಯಾವುದೇ ಲಾಭವಾಗುವುದಿಲ್ಲ. ನೆನಪು ಮಾಡುತ್ತಾ ಯಾರೂ ಸಹ ಆ ಲಕ್ಷ್ಯವನ್ನು ತಲುಪುವುದಿಲ್ಲ. ಭಗವಂತ ಯಾರು? ಅವರಿಂದ ಏನು ಸಿಗುತ್ತದೆ? ಏನನ್ನೂ ತಿಳಿದುಕೊಂಡಿಲ್ಲ. ಇಷ್ಟೆಲ್ಲಾ ಧರ್ಮಗಳು ಕ್ರೈಸ್ಟ್, ಬುದ್ಧ ಮುಂತಾದ ಧರ್ಮ ಗುರುಗಳು ಅಥವಾ ಧರ್ಮ ಸ್ಥಾಪನೆ ಮಾಡುವವರನ್ನು ಅವರ ಅನುಯಾಯಿಗಳು ನೆನಪು ಮಾಡುತ್ತಾರೆ ಆದರೆ ಅವರನ್ನು ನೆನಪು ಮಾಡುವುದರಿಂದ ನಮಗೆ ಏನು ಸಿಗುವುದು ಎಂಬುದೇನನ್ನೂ ತಿಳಿದುಕೊಂಡಿಲ್ಲ. ಇದಕ್ಕಿಂತಲೂ ಆ ಲೌಕಿಕ ವಿದ್ಯೆಯೇ ಒಳ್ಳೆಯದಾಗಿದೆ ಏಕೆಂದರೆ ಅಲ್ಲಾದರೂ ಗುರಿ-ಧ್ಯೇಯವು ಬುದ್ಧಿಯಲ್ಲಿರುತ್ತದೆಯಲ್ಲವೆ. ತಂದೆಯಿಂದ ಏನು ಸಿಗುತ್ತದೆ? ಶಿಕ್ಷಕನಿಂದ ಏನು ಸಿಗುತ್ತದೆ? ಮತ್ತು ಗುರುಗಳಿಂದ ಏನು ಸಿಗುತ್ತದೆ? ಎಂಬುದನ್ನು ಮತ್ತ್ಯಾರೂ ತಿಳಿದುಕೊಳ್ಳುವುದಿಲ್ಲ. ನೀವಿಲ್ಲಿ ತಂದೆಯ ಮಕ್ಕಳಾಗಿ ನಂತರ ಶಿಕ್ಷಕ ಮತ್ತು ಸದ್ಗುರುವಿನವರಾಗುತ್ತೀರಿ. ತಂದೆ ಮತ್ತು ಶಿಕ್ಷಕರಿಗಿಂತಲೂ ಗುರು ಶ್ರೇಷ್ಠವಾಗಿರುತ್ತಾರೆ. ಈಗ ನೀವು ಮಕ್ಕಳಿಗೆ ನಾವು ತಂದೆಯ ಮಕ್ಕಳಾಗಿದ್ದೇವೆ ಎಂದು ನಿಶ್ಚಯವಾಯಿತು. ತಂದೆಯು ನಮ್ಮನ್ನು 5000 ವರ್ಷಗಳ ಮೊದಲಿನ ತರಹ ಬಂದು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಥವಾ ಶಾಂತಿಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಮುದ್ದು ಮಕ್ಕಳೇ, ನೀವು ನನ್ನಿಂದ ತಮ್ಮ ಆಸ್ತಿಯನ್ನು ಪಡೆಯುತ್ತೀರಲ್ಲವೆ! ಹೌದು ಬಾಬಾ, ಏಕೆ ಪಡೆಯುವುದಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಒಳ್ಳೆಯದು, ಚಂದ್ರವಂಶಿ ರಾಮ ಪದವಿಯನ್ನು ಪಡೆಯುವುದರಲ್ಲಿ ರಾಜಿಯಾಗುವಿರಾ? ನಿಮಗೆ ಏನು ಬೇಕು? ತಂದೆಯು ಉಡುಗೊರೆಯನ್ನು ತೆಗೆದುಕೊಂಡು ಬಂದಿದ್ದಾರೆ, ನೀವು ಸೂರ್ಯವಂಶಿ ಲಕ್ಷ್ಮಿಯನ್ನು ವರಿಸುತ್ತೀರೋ ಅಥವಾ ಚಂದ್ರವಂಶಿ ಸೀತೆಯನ್ನೋ? ನೀವು ತಮ್ಮ ಮುಖವನ್ನಾದರೂ ನೋಡಿಕೊಳ್ಳಿ. ಶ್ರೀ ನಾರಾಯಣನನ್ನೊ ಅಥವಾ ಶ್ರೀ ಲಕ್ಷ್ಮಿಯನ್ನು ವರಿಸಲು ಯೋಗ್ಯರಾಗಿದ್ದೀರಾ? ಯೋಗ್ಯರಾಗದೆ ವರಿಸಲು ಹೇಗೆ ಸಾಧ್ಯ? ತಂದೆಯು ತಿಳಿಸುತ್ತಾರೆ – ಹೇಗೆ ಕಲ್ಪದ ಮೊದಲು ತಿಳಿಸಿದ್ದೆನೋ ಅದೇರೀತಿ ಈಗಲೂ ತಿಳಿಸುತ್ತಿದ್ದೇನೆ. ನೀವು ಪುನಃ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುವುದೇ ನಿಮ್ಮ ಗುರಿ-ಧ್ಯೇಯವಾಗಿದೆ. ಮೊದಲನೆಯದು ಸೂರ್ಯವಂಶಿ ರಾಜ್ಯ ಪದವಿಯಾಗಿದೆ. ಎರಡನೆಯ ದರ್ಜೆಯು ಚಂದ್ರವಂಶವಾಗಿದೆ. ಹೇಗೆ ಏರ್ಕಂಡೀಷನ್, ಫಸ್ಟ್ಕ್ಲಾಸ್, ಸೆಕೆಂಡ್ ಕ್ಲಾಸ್ ಟಿಕೇಟ್ ಇರುತ್ತದೆಯಲ್ಲವೆ ಅದೇರೀತಿ ಸತ್ಯಯುಗದ ಪೂರ್ಣ ರಾಜಧಾನಿಯು ಏರ್ಕಂಡೀಷನ್ ಎಂದೇ ತಿಳಿಯಿರಿ. ಏರ್ಕಂಡೀಷನ್ಗಿಂತಲೂ ಮೇಲೆ ಮತ್ತ್ಯಾವುದೂ ಇರುವುದಿಲ್ಲ. ಅದರ ನಂತರ ಫಸ್ಟ್ಕ್ಲಾಸ್ ಟಿಕೇಟ್. ಅಂದಾಗ ಈಗ ತಂದೆಯು ತಿಳಿಸುತ್ತಾರೆ – ನೀವು ಏರ್ಕಂಡೀಷನ್ನ ಸೂರ್ಯವಂಶಿ ರಾಜ್ಯವನ್ನು ಪಡೆಯುತ್ತೀರೋ ಅಥವಾ ಚಂದ್ರವಂಶಿ, ಫಸ್ಟ್ಕ್ಲಾಸ್ ಟಿಕೇಟ್ನ್ನೋ? ಅದಕ್ಕಿಂತಲೂ ಕಡಿಮೆಯೆಂದರೆ ಸೆಕೆಂಡ್ಕ್ಲಾಸ್ನಲ್ಲಿ ನಂಬರ್ವಾರ್ ವಾರಸುಧಾರರಾಗುವುದು. ಹಾಗಿದ್ದರೆ ನೀವು ಕೊನೆ-ಕೊನೆಯಲ್ಲಿ ಬಂದು ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಅದೂ ಇಲ್ಲವೆಂದರೆ ಥರ್ಡ್ಕ್ಲಾಸ್ ಪ್ರಜೆಗಳು. ಮತ್ತೆ ಅದರಲ್ಲಿಯೂ ಟಿಕೇಟ್ ರಿಸರ್ವ್ ಆಗಿರುತ್ತದೆ. ಫಸ್ಟ್ಕ್ಲಾಸ್ ರಿಸರ್ವ್, ಸೆಕೆಂಡ್ಕ್ಲಾಸ್ ರಿಸರ್ವ್. ನಂಬರ್ವಾರ್ ದರ್ಜೆಗಳಂತೂ ಇರುತ್ತವೆಯಲ್ಲವೆ. ಬಾಕಿ ಸುಖವಂತೂ ಅಲ್ಲಿ ಇದ್ದೇ ಇರುತ್ತದೆ. ಬೇರೆ-ಬೇರೆ ಕಂಪಾರ್ಟ್ಮೆಂಟ್ಗಳಂತು ಇರುತ್ತದೆಯಲ್ಲವೆ. ಸಾಹುಕಾರ ವ್ಯಕ್ತಿಗಳು ಏರ್ಕಂಡೀಷನ್ ಟಿಕೇಟನ್ನು ಖರೀದಿಸುತ್ತಾರೆ. ನಿಮ್ಮಲ್ಲಿ ಯಾರು ಸಾಹುಕಾರರಾಗುತ್ತಾರೆ? ಯಾರು ಸರ್ವಸ್ವವನ್ನು ತಂದೆಗೆ ಕೊಡುತ್ತಾರೆ, ಬಾಬಾ ಇದೆಲ್ಲವೂ ತಮ್ಮದಾಗಿದೆ ಎಂದು. ಸೌಧಾಗಾರ, ರತ್ನಾಗಾರ, ಜಾದೂಗಾರನೆಂದು ಭಾರತದಲ್ಲಿಯೇ ಮಹಿಮೆಯ ಗಾಯನವಿದೆ. ಈ ಮಹಿಮೆಯು ತಂದೆಯದಾಗಿದೆ, ಕೃಷ್ಣನದಲ್ಲ. ಕೃಷ್ಣನಂತೂ ಆಸ್ತಿಯನ್ನು ತೆಗೆದುಕೊಂಡನು, ಸತ್ಯಯುಗದಲ್ಲಿ ಪ್ರಾಲಬ್ಧವನ್ನು ಪಡೆದನು, ಅವನೂ ಸಹ ತಂದೆಯ ಮಗುವಾದನು. ಎಲ್ಲಿಂದಲೋ ಪ್ರಾಲಬ್ಧವನ್ನು ಪಡೆದಿರಬೇಕಲ್ಲವೆ! ಲಕ್ಷ್ಮೀ-ನಾರಾಯಣರು ಸತ್ಯಯುಗದಲ್ಲಿ ಪ್ರಾಲಬ್ಧವನ್ನು ಭೋಗಿಸುತ್ತಾರೆ, ಈಗ ನೀವು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಇವರು ಹಿಂದೆ ಪ್ರಾಲಬ್ಧವನ್ನು ರೂಪಿಸಿಕೊಂಡಿರಬೇಕಲ್ಲವೆ. ನೆಹರುನ ಪ್ರಾಲಬ್ಧವು ಎಷ್ಟು ಚೆನ್ನಾಗಿತ್ತು! ಅವಶ್ಯವಾಗಿ ಅವರು ಒಳ್ಳೆಯ ಕರ್ಮ ಮಾಡಿದ್ದರು, ಕಿರೀಟವಿಲ್ಲದೆ ಭಾರತದ ರಾಜನಾಗಿದ್ದರು. ಭಾರತದ ಮಹಿಮೆಯು ಬಹಳಷ್ಟಿದೆ. ಭಾರತದಂತಹ ಶ್ರೇಷ್ಠ ದೇಶವು ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಭಾರತವು ಪರಮಪಿತ ಪರಮಾತ್ಮನ ಜನ್ಮ ಸ್ಥಳವಾಗಿದೆ. ಈ ರಹಸ್ಯವು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಪರಮಾತ್ಮನೇ ಅರ್ಧಕಲ್ಪಕ್ಕಾಗಿ ಎಲ್ಲರಿಗೆ ಸುಖ-ಶಾಂತಿಯನ್ನು ಕೊಡುತ್ತಾರೆ. ಭಾರತವೇ ನಂಬರ್ವನ್ ತೀರ್ಥ ಸ್ಥಾನವಾಗಿದೆ ಆದರೆ ಡ್ರಾಮಾನುಸಾರ ಒಬ್ಬ ತಂದೆಯನ್ನು ಮರೆಯುವ ಕಾರಣ ಸೃಷ್ಟಿಯ ಗತಿಯು ಈ ರೀತಿಯಾಗಿ ಬಿಟ್ಟಿದೆ. ಆದ್ದರಿಂದ ಶಿವ ತಂದೆಯು ಪುನಃ ಬರುತ್ತಾರೆ. ನಿಮಿತ್ತರಂತೂ ಯಾರಾದರೂ ಆಗಲೇಬೇಕಲ್ಲವೆ.

ಈಗ ತಂದೆಯು ತಿಳಿಸುತ್ತಾರೆ – ಅಶರೀರಿ ಭವ, ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ – ನಾನಾತ್ಮನು ಯಾರ ಸಂತಾನನಾಗಿದ್ದೇನೆ? ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಆಶ್ಚರ್ಯವಲ್ಲವೆ. ಓ ಗಾಡ್ಫಾದರ್ ದಯೆ ತೋರಿಸಿ ಎಂದು ಹೇಳುತ್ತಾರೆ, ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಅವರು ಯಾವಾಗ ಬಂದಿದ್ದರು ಎಂಬುದು ಯಾರಿಗೂ ತಿಳಿದಿಲ್ಲ. ಇದು 5000 ವರ್ಷಗಳ ಮಾತಾಗಿದೆ. ತಂದೆಯೇ ಬಂದು ಹೊಸ ಪ್ರಪಂಚ, ಸತ್ಯಯುಗವನ್ನು ಸ್ಥಾಪನೆ ಮಾಡುತ್ತಾರೆ. ಸತ್ಯಯುಗದ ಆಯಸ್ಸು ಲಕ್ಷಾಂತರ ವರ್ಷಗಳಂತೂ ಇಲ್ಲ ಅಂದಮೇಲೆ ಘೋರ ಅಂಧಕಾರವಲ್ಲವೆ. ಗೀತೋಪದೇಶವನ್ನು ಎಷ್ಟೊಂದು ಮಂದಿ ಬಂದು ಕೇಳುತ್ತಾರೆ ಆದರೆ ಓದುವವರಾಗಲಿ, ಓದಿಸುವವರಾಗಲಿ ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ಎಷ್ಟು ಸಹಜ ಮಾಡಿ ತಿಳಿಸುತ್ತಾರೆ – ಕೇವಲ ನನ್ನನ್ನು ನೆನಪು ಮಾಡಿರಿ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಾಗಿರಿ. ವಿಷ್ಣುವಿಗೆ ಎಲ್ಲಾ ಅಲಂಕಾರಗಳನ್ನು ತೋರಿಸಿದ್ದಾರೆ. ಶಂಖುವನ್ನೂ ತೋರಿಸಿದ್ದಾರೆ, ಹೂವನ್ನೂ ತೋರಿಸಿದ್ದಾರೆ. ವಾಸ್ತವದಲ್ಲಿ ದೇವತೆಗಳಿಗೆ ಇವನ್ನು ತೋರಿಸಲಾಗುವುದಿಲ್ಲ. ಇವು ಎಷ್ಟು ಗುಹ್ಯ ಗಂಭೀರ ಮಾತುಗಳಾಗಿವೆ. ವಾಸ್ತವದಲ್ಲಿ ಇದು ಬ್ರಾಹ್ಮಣರ ಅಲಂಕಾರವಾಗಿದೆ, ಆದರೆ ಇಂದು ಬ್ರಾಹ್ಮಣರಾಗಿರುತ್ತಾರೆ, ನಾಳೆ ಶೂದ್ರರಾಗುತ್ತಾರೆ ಅಂದಮೇಲೆ ಬ್ರಾಹ್ಮಣರಿಗೆ ಹೇಗೆ ತೋರಿಸುವುದು? ಬ್ರಹ್ಮಾಕುಮಾರರೇ ಶೂದ್ರ ಕುಮಾರರಾಗುತ್ತಾರೆ. ಇದರಲ್ಲಿ ಮಾಯೆಯು ತಡ ಮಾಡುವುದಿಲ್ಲ. ಒಂದುವೇಳೆ ಯಾವುದೇ ತಪ್ಪು ಮಾಡಿದಿರಿ, ಶ್ರೀಮತದಂತೆ ನಡೆಯಲಿಲ್ಲ, ಬುದ್ಧಿಯು ಕೆಟ್ಟು ಹೋಯಿತೆಂದರೆ ಮಾಯೆಯು ಚೆನ್ನಾಗಿ ಪೆಟ್ಟು ಕೊಟ್ಟು ಮುಖವನ್ನು ತಿರುಗಿಸಿ ಬಿಡುತ್ತದೆ. ಮನುಷ್ಯರು ಕೋಪದಲ್ಲಿ ಬಂದು ನಿಮ್ಮ ಮುಖವನ್ನು ತಿರುಗಿಸಿ ಬಿಡುವೆನು ಎಂದು ಹೇಳಿ ಬಿಡುತ್ತಾರಲ್ಲವೆ. ಅಂದಾಗ ಮಾಯೆಯೂ ಹಾಗೆಯೇ. ತಂದೆಯನ್ನು ಮರೆತರೆ ಸಾಕು ಮಾಯೆಯು ಒಂದು ಸೆಕೆಂಡಿನಲ್ಲಿ ಪೆಟ್ಟು ಕೊಟ್ಟು ಮುಖವನ್ನು ತಿರುಗಿಸಿ ಬಿಡುತ್ತದೆ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಪಡೆಯುತ್ತಾರೆ. ಹಾಗೆಯೇ ಮಾಯೆಯು ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಎಷ್ಟು ಒಳ್ಳೊಳ್ಳೆಯ ಮಕ್ಕಳನ್ನು ಮಾಯೆಯು ಹಿಡಿದುಕೊಳ್ಳುತ್ತದೆ, ಎಲ್ಲಿಯಾದರೂ ಸ್ವಲ್ಪ ಹುಡುಗಾಟಿಕೆ ಇದ್ದರೆ ಸಾಕು ಅದನ್ನು ನೋಡಿ ಮಾಯೆಯು ಪೆಟ್ಟು ಕೊಡುತ್ತದೆ. ತಂದೆಯು ಬಂದು ಹಳೆಯ ಪ್ರಪಂಚದಿಂದ ಮುಖವನ್ನು ತಿರುಗಿಸುತ್ತಾರೆ. ಲೌಕಿಕ ತಂದೆಯು ಬಡವರಾಗಿರುತ್ತಾರೆ, ಹಳೆಯ ಗುಡಿಸಲಿನಲ್ಲಿರುತ್ತಾರೆ ನಂತರ ಹೊಸ ಮನೆಯನ್ನು ಕಟ್ಟಿಸಿದರೆ ಮಕ್ಕಳ ಬುದ್ಧಿಯಲ್ಲಿ ನಾವೀಗ ಹೊ ಸಮನೆಯು ತಯಾರಾಗಿ ಬಿಟ್ಟರೆ ನಾವು ಹೋಗಿ ಅದರಲ್ಲಿ ಕುಳಿತುಕೊಳ್ಳುತ್ತೇವೆ, ಈ ಹಳೆಯದನ್ನು ಬಿಟ್ಟು ಬಿಡುತ್ತೇವೆ ಎಂದು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಹಾಗೆಯೇ ತಂದೆಯು ನಿಮಗಾಗಿ ಈಗ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದಾರೆ. ಹೇಳುತ್ತಾರೆ, ಮುದ್ದಾದ ಮಕ್ಕಳೇ ಎಂದು. ಆತ್ಮಗಳೊಂದಿಗೆ ಮಾತನಾಡುತ್ತಾರೆ, ಈ ಕಣ್ಣುಗಳ ಮೂಲಕ ನೀವು ಮಕ್ಕಳನ್ನು ನೋಡುತ್ತಾರೆ, ತಂದೆಯು ತಿಳಿಸುತ್ತಾರೆ – ನಾನೂ ಸಹ ಡ್ರಾಮಾದ ವಶವಾಗಿದ್ದೇನೆ. ಡ್ರಾಮಾ ಇಲ್ಲದೆ ನಾನೂ ಸಹ ಏನೂ ಮಾಡಲು ಸಾಧ್ಯವಿಲ್ಲ. ಮಕ್ಕಳು ರೋಗಿಯಾದರೆ ನಾನು ಸರಿಪಡಿಸಿ ಬಿಡುತ್ತೇನೆ ಎಂದಲ್ಲ. ಆಪರೇಷನ್ ಮಾಡುವುದರಿಂದ ಬಿಡಿಸುತ್ತೇನೆ ಎಂದಲ್ಲ, ಕರ್ಮ ಭೋಗವನ್ನಂತೂ ಎಲ್ಲರೂ ಭೋಗಿಸಲೇಬೇಕಾಗಿದೆ. ನಿಮ್ಮ ಮೇಲಂತೂ ಬಹಳ ಹೊರೆಯಿದೆ ಏಕೆಂದರೆ ನೀವು ಎಲ್ಲರಿಗಿಂತ ಹಳಬರಾಗಿದ್ದೀರಿ, ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೀರಿ. ಈಗ ನೀವು ಮಕ್ಕಳಿಗೆ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು – ನೀವು ತಿಳಿದುಕೊಂಡಿದ್ದೀರಿ – ಕಲ್ಪ-ಕಲ್ಪವೂ ಡ್ರಾಮಾನುಸಾರ ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಯಾರು ಸೂರ್ಯವಂಶಿ, ಚಂದ್ರವಂಶಿ ಮನೆತನದವರಾಗಿರುವರೋ ಅವರು ಅವಶ್ಯವಾಗಿ ಬರುತ್ತಾರೆ. ಯಾರು ದೇವತೆಗಳಾಗಿದ್ದರು ನಂತರ ಶೂದ್ರರಾಗಿದ್ದಾರೆಯೋ ಮತ್ತೆ ಅವರೇ ಬ್ರಾಹ್ಮಣರಾಗಿ ದೈವೀ ಸಂಪ್ರದಾಯದವರಾಗುತ್ತಾರೆ. ಈ ಮಾತುಗಳನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ.

ತಂದೆಗೆ ನೀವು ಮಕ್ಕಳು ಎಷ್ಟು ಪ್ರಿಯರಾಗುತ್ತೀರಿ. ತಂದೆಯು ಹೇಳುತ್ತಾರೆ, ನೀವು ನನ್ನ ಕಲ್ಪದ ಹಿಂದಿನ ಮಕ್ಕಳಾಗಿದ್ದೀರಿ. ನಾನು ಕಲ್ಪ-ಕಲ್ಪವೂ ಬಂದು ನಿಮಗೆ ಓದಿಸುತ್ತೇನೆ. ಎಷ್ಟು ವಿಚಿತ್ರಮಾತುಗಳಾಗಿವೆ. ನಿರಾಕಾರ ಭಗವಾನುವಾಚ, ಶರೀರದಿಂದಲೇ ಮಾತನಾಡುತ್ತಾರಲ್ಲವೆ. ಶರೀರವು ಬೇರೆಯಾಗಿ ಬಿಟ್ಟರೆ ಆತ್ಮವು ಮಾತನಾಡಲು ಸಾಧ್ಯವಿಲ್ಲ. ಆತ್ಮವು ಭಿನ್ನವಾಗಿ ಬಿಡುತ್ತದೆ. ಈಗ ತಂದೆಯು ಹೇಳುತ್ತಾರೆ – ಅಶರೀರಿ ಭವ. ಪ್ರಾಣಾಯಾಮ ಇತ್ಯಾದಿಗಳನ್ನು ಮಾಡಬೇಕೆಂದಲ್ಲ, ತಿಳಿದುಕೊಳ್ಳಿ – ನಾನಾತ್ಮ ಅವಿನಾಶಿಯಾಗಿದ್ದೇನೆ. ನಾನಾತ್ಮನಲ್ಲಿ 84 ಜನ್ಮಗಳ ಪಾತ್ರವು ತುಂಬಿದೆ. ತಂದೆಯೂ ಹೇಳುತ್ತಾರೆ – ನಾನಾತ್ಮನು ಯಾವ ಪಾತ್ರ ಮಾಡುತ್ತೇನೆಯೋ ಅದೆಲ್ಲಾ ಪಾತ್ರವು ತುಂಬಲ್ಪಟ್ಟಿದೆ. ಭಕ್ತಿಮಾರ್ಗದಲ್ಲಿ ಅಲ್ಲಿ ಪಾತ್ರ ನಡೆಯುತ್ತದೆ, ಮತ್ತೆ ಜ್ಞಾನ ಮಾರ್ಗದಲ್ಲಿ ಇಲ್ಲಿ ಬಂದು ಜ್ಞಾನವನ್ನು ಕೊಡುತ್ತೇನೆ. ಭಕ್ತಿಮಾರ್ಗದವರಿಗೆ ಜ್ಞಾನದ ಬಗ್ಗೆ ತಿಳಿದಿರುವುದಿಲ್ಲ. ಯಾರಾದರೂ ಸಾರಾಯಿಯನ್ನೇ ಕುಡಿದಿಲ್ಲವೆಂದರೆ ಅದರ ರುಚಿಯು ಹೇಗೆ ತಿಳಿಯುತ್ತದೆ? ಜ್ಞಾನವನ್ನೂ ಸಹ ತಿಳಿದುಕೊಂಡಾಗಲೇ ಅದು ಅರ್ಥವಾಗುತ್ತದೆ. ಜ್ಞಾನದಿಂದ ಸದ್ಗತಿಯಾಗುತ್ತದೆ ಅಂದಮೇಲೆ ಅವಶ್ಯವಾಗಿ ಜ್ಞಾನ ಸಾಗರನೇ ಸದ್ಗತಿ ಮಾಡುತ್ತಾರೆ. ನಾನು ಸರ್ವರ ಸದ್ಗತಿದಾತನಾಗಿದ್ದೇನೆಂದು ತಂದೆಯು ಹೇಳುತ್ತಾರೆ, ಸರ್ವೋದಯ ಲೀಡರ್ ಆಗಿದ್ದಾರಲ್ಲವೆ. ಎಷ್ಟೊಂದು ಭಿನ್ನ-ಭಿನ್ನ ಪ್ರಕಾರದವರಿದ್ದಾರೆ. ವಾಸ್ತವದಲ್ಲಿ ಸರ್ವರ ಮೇಲೆ ದಯೆ ತೋರುವವರು ತಂದೆಯಾಗಿದ್ದಾರೆ. ಹೇ ಭಗವಂತ ದಯೆ ತೋರಿಸಿ ಎಂದು ತಂದೆಯೊಂದಿಗೆ ಹೇಳುತ್ತಾರೆ ಅಂದಮೇಲೆ ಎಲ್ಲರ ಮೇಲೆ ದಯೆ ತೋರಿಸುವವರು ಆ ತಂದೆಯೇ ಆಗಿದ್ದಾರೆ. ಉಳಿದೆಲ್ಲರೂ ಒಂದು ಮಿತವಾದ ದಯೆ ತೋರಿಸುವವರಾಗಿದ್ದಾರೆ. ತಂದೆಯಂತೂ ಇಡೀ ಪ್ರಪಂಚವನ್ನು ಸತೋಪ್ರಧಾನವನ್ನಾಗಿ ಮಾಡುತ್ತಾರೆ. ಅದರಲ್ಲಿ ತತ್ವಗಳೂ ಸಹ ಸತೋಪ್ರಧಾನವಾಗಿ ಬಿಡುತ್ತವೆ. ಇದು ಪರಮಾತ್ಮನ ಕಾರ್ಯವೇ ಆಗಿದೆ. ಅಂದಾಗ ಸರ್ವೋದಯ ಎಂಬುದಕ್ಕೆ ಎಷ್ಟು ದೊಡ್ಡ ಅರ್ಥವಿದೆ, ಅವರು ಎಲ್ಲರಮೇಲೆ ದಯೆ ತೋರಿಸಿ ಬಿಡುತ್ತಾರೆ. ಸ್ವರ್ಗದ ಸ್ಥಾಪನೆಯಲ್ಲಿ ಯಾರೂ ದುಃಖಿಯಾಗುವುದಿಲ್ಲ. ಅಲ್ಲಿ ನಂಬರ್ವನ್ ಪೀಠೋಪಕರಣಗಳು, ವೈಭವ ಎಲ್ಲವೂ ಸಿಗುತ್ತವೆ. ದುಃಖ ಕೊಡುವಂತಹ ಪ್ರಾಣಿಗಳಾಗಲಿ, ನೊಣಗಳಾಗಲಿ ಯಾವುದೂ ಇರುವುದಿಲ್ಲ. ಅಲ್ಲಿಯೂ ಹಿರಿಯ ವ್ಯಕ್ತಿಗಳ ಮನೆಯಲ್ಲಿ ಎಷ್ಟೊಂದು ಸ್ವಚ್ಛತೆಯಿರುತ್ತದೆ. ನೀವೆಂದೂ ನೊಣಗಳನ್ನು ನೋಡುವುದಿಲ್ಲ, ಯಾವುದೇ ಸೊಳ್ಳೆ ಇತ್ಯಾದಿಗಳು ಒಳಗೆ ನುಗ್ಗಲು ಸಾಧ್ಯವಿಲ್ಲ. ಸ್ವರ್ಗದಲ್ಲಿ ಒಳ ಪ್ರವೇಶಿಸಲು ಯಾವುದಕ್ಕೂ ಶಕ್ತಿಯಿರುವುದಿಲ್ಲ. ಕೊಳಕು ಮಾಡುವಂತಹ ಪ್ರಾಣಿ-ಪಕ್ಷಿಗಳು ಅಲ್ಲಿ ಇರುವುದೇ ಇಲ್ಲ. ಸ್ವಾಭಾವಿಕ ಹೂಗಳ ಸುಗಂಧವಿರುತ್ತದೆ. ನಿಮಗೆ ಸೂಕ್ಷ್ಮವತನದಲ್ಲಿ ತಂದೆಯು ಶೂಬೀ ರಸವನ್ನು ಕುಡಿಸುತ್ತಿದ್ದರು. ಈಗ ಸೂಕ್ಷ್ಮವತನದಲ್ಲಿ ಏನೂ ಇಲ್ಲ, ಇದೆಲ್ಲವೂ ಕೇವಲ ಸಾಕ್ಷಾತ್ಕಾರವಾಗಿದೆ. ವೈಕುಂಠದಲ್ಲಿ ಎಷ್ಟು ಒಳ್ಳೊಳ್ಳೆಯ ಹೂಗಳು, ಉದ್ಯಾನವನ ಇತ್ಯಾದಿಗಳಿರುತ್ತವೆ. ಸೂಕ್ಷ್ಮವತನದಲ್ಲಿ ಇದೇನೂ ಇಲ್ಲ. ಇದೆಲ್ಲವೂ ಸಾಕ್ಷಾತ್ಕಾರವಾಗಿದೆ. ಇಲ್ಲಿ ಕುಳಿತಿದ್ದರೂ ಸಹ ನೀವು ಸಾಕ್ಷಾತ್ಕಾರ ಮಾಡುತ್ತೀರಿ.

ಗೀತೆಯು ಬಹಳ ಸುಂದರವಾಗಿದೆ, ನೀವು ತಿಳಿದುಕೊಂಡಿದ್ದೀರಿ – ನಮಗೆ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ನಮಗೆ ಇನ್ನೇನು ಬೇಕು! ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಅಂದಮೇಲೆ ತಂದೆಯನ್ನು ನೆನಪು ಮಾಡಬೇಕಲ್ಲವೆ. ತಂದೆಯ ಮತವು ಪ್ರಸಿದ್ಧವಾಗಿದೆ, ಶ್ರೀಮತದಿಂದಲೇ ನಾವು ಶ್ರೇಷ್ಠಾತಿ ಶ್ರೇಷ್ಠರಾಗುತ್ತೇವೆ. ಉಳಿದೆಲ್ಲರದೂ ಆಸುರೀ ಮತವಾಗಿದೆ ಆದ್ದರಿಂದ ಸತ್ಯಯುಗದಲ್ಲಿ ಸದಾ ಸುಖವಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಎಂಬುದನ್ನು ಅವರು ತಿಳಿದುಕೊಳ್ಳುವುದೇ ಇಲ್ಲ. ಬಾಲ್ಯದಲ್ಲಿ ಅವರೇ ರಾಧಾಕೃಷ್ಣರಾಗಿದ್ದರು ಆದರೆ ಅವರ ಚರಿತ್ರೆಯೇನೂ ಇಲ್ಲ. ಸ್ವರ್ಗದಲ್ಲಂತೂ ಎಲ್ಲಾ ಮಕ್ಕಳು ಬಹಳ ಸುಂದರರಾಗಿರುತ್ತಾರೆ. ಚಂಚಲತೆಯ ಯಾವುದೇ ಮಾತಿರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಹಳೆಯ ಪ್ರಪಂಚದಿಂದ ಮುಖವನ್ನು ತಿರುಗಿಸಿಕೊಂಡಿದ್ದೀರಿ ಅಂದಮೇಲೆ ಪುನಃ ಮಾಯೆಯು ತನ್ನ ಕಡೆ ತಿರುಗಿಸುವಂತಹ ಯಾವುದೇ ತಪ್ಪನ್ನು ಮಾಡಬಾರದು. ಶ್ರೀಮತದ ಉಲ್ಲಂಘನೆ ಮಾಡಬಾರದು. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ.

2. ತಂದೆಗೆ ತಮ್ಮದೆಲ್ಲವನ್ನೂ ಸ್ವಾಹಾ ಮಾಡಿ ಪಕ್ಕಾ ವಾರಸುಧಾರರಾಗಿ ಸತ್ಯಯುಗೀ ಏರ್ಕಂಡೀಷನ್ ಟಿಕೇಟನ್ನು ತೆಗೆದುಕೊಳ್ಳಬೇಕಾಗಿದೆ. ಗುರಿ-ಧ್ಯೇಯವನ್ನು ಬುದ್ಧಿಯಲ್ಲಿಟ್ಟುಕೊಂಡು ಪುರುಷಾರ್ಥ ಮಾಡಬೇಕಾಗಿದೆ.

ವರದಾನ:-

ಸ್ನೇಹಿಯು ಸೇಹದಲ್ಲಿ ಬಂದು ತನ್ನದೆಲ್ಲವನ್ನೂ ಅರ್ಪಣೆ ಮಾಡಿ ಬಿಡುತ್ತಾನೆ, ಇದರಲಿ ಯೋಚಿಸಬೇಕಾಗಿರುವುದಿಲ್ಲ. ಅಂದಾಗ ಏನೆಲ್ಲಾ ಮರ್ಯಾದೆಗಳು ಅಥವಾ ನಿಯಮಗಳನ್ನು ಕೇಳುತ್ತೀರಿ, ಅದನ್ನು ಪ್ರತ್ಯಕ್ಷವಾಗಿ (ಧಾರಣೆಯಲ್ಲಿ) ತರುವುದಕ್ಕಾಗಿ ಅಥವಾ ಸರ್ವ ಬಲಹೀನತೆಗಳಿಂದ ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಸಹಜ ಯುಕ್ತಿಯೆಂದರೆ – ಸದಾ ಒಬ್ಬ ತಂದೆಯ ಸ್ನೇಹಿಯಾಗಿ ಇರುವುದು. ಯಾರ ಸ್ನೇಹಿಯಾಗಿದ್ದೀರಿ, ಅವರ ಸಂಗದಲ್ಲಿಯೇ ನಿರಂತರವೂ ಇರುತ್ತೀರೆಂದರೆ, ಆತ್ಮೀಯತೆಯ ರಂಗೇರಿ ಬಿಡುತ್ತದೆ ಹಾಗೂ ಒಂದು ಸೆಕೆಂಡಿನಲ್ಲಿ ಮರ್ಯಾದಾ ಪುರುಷೋತ್ತಮರು ಆಗಿ ಬಿಡುವಿರಿ ಏಕೆಂದರೆ ಸ್ನೇಹಿಗೆ ಸ್ವತಹವಾಗಿಯೇ ತಂದೆಯವರ ಸಹಯೋಗವು ಲಭಿಸುತ್ತದೆ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯಗಳು- ``ಮನುಷ್ಯ-ಲೋಕ, ದೇವ-ಲೋಕ, ಭೂತ-ಪ್ರೇತಗಳ ಪ್ರಪಂಚದ ವಿಸ್ತಾರ"

ಬಹಳ ಮನುಷ್ಯರು ಪ್ರಶ್ನಿಸುತ್ತಾರೆ- ಈ ಅಶುದ್ಧ ಆತ್ಮರೇನಿದ್ದಾರೆ, ಅವರನ್ನು ಭೂತವೆಂದು ಹೇಳಲಾಗುತ್ತದೆ. ಇದು ಸತ್ಯವೇ ಅಥವಾ ಕಲ್ಪನೆಯೇ? ಅಥವಾ ಭ್ರಮೆಯೇ? ಇಂದು ಅದರ ಬಗ್ಗೆ ತಿಳಿಸಲಾಗುತ್ತದೆ- ಮನುಷ್ಯಾತ್ಮರು ಯಾವಾಗ ವಿಕರ್ಮ ಮಾಡುತ್ತಾರೆಯೋ, ಆಗ ಅವರಿಗೆ ಅವಶ್ಯವಾಗಿ ಅನೇಕ ಪ್ರಕಾರದ ಶಿಕ್ಷೆಗಳಾಗುತ್ತವೆ ಮತ್ತು ಆ ಶಿಕ್ಷೆಗಳನ್ನು ಮನುಷ್ಯ ಜನ್ಮದಲ್ಲಿಯೇ ಭೋಗಿಸಲಾಗುತ್ತದೆಯೇ ಹೊರತು ಪ್ರಾಣಿ ಅಥವಾ ಪಕ್ಷಿಯ ಗರ್ಭದಲ್ಲಲ್ಲ. ಮನುಷ್ಯನು ಮನುಷ್ಯನೇ ಆಗುತ್ತಾನೆ, ಮನುಷ್ಯಾತ್ಮವೇ ಬೇರೆ ಮತ್ತು ಪ್ರಾಣಿಗಳ ಆತ್ಮವೇ ಬೇರೆ ಆಗಿದೆ, ಮನುಷ್ಯನೆಂದಿಗೂ ಪ್ರಾಣಿಯಾಗುವುದಿಲ್ಲ ಹಾಗೂ ಪ್ರಾಣಿಗಳೆಂದಿಗೂ ಮನುಷ್ಯನಾಗಲು ಸಾಧ್ಯವಿಲ್ಲ. ಅವುಗಳ ಪ್ರಪಂಚವೇ ಬೇರೆ, ಮನುಷ್ಯಾತ್ಮರ ಪ್ರಪಂಚವೇ ಬೇರೆ ಆಗಿದೆ. ದುಃಖ-ಸುಖವನ್ನು ಭೋಗಿಸುವ ಅನುಭೂತಿಯು ಮನುಷ್ಯರಲ್ಲಿ ಹೆಚ್ಚಾಗಿರುತ್ತದೆ, ಪ್ರಾಣಿಗಳಲ್ಲಿ ಇರುವುದಿಲ್ಲ. ಯಾವಾಗ ನಾವು ಶುದ್ಧ ಕರ್ಮವನ್ನು ಮಾಡುವುದರಿಂದ ಸುಖವನ್ನೂ ಸಹ ಮನುಷ್ಯ ತನುವಿನಲ್ಲಿಯೇ ಪಡೆಯುತ್ತೇವೆ, ಅದೇರೀತಿ ದುಃಖವನ್ನೂ ಕೂಡ ಅವಶ್ಯವಾಗಿ ಮನುಷ್ಯ ತನುವಿನಲ್ಲಿಯೇ ಬಂದು ಭೋಗಿಸಬೇಕಾಗಿದೆ. ಹಾಗೆಯೇ ಈ ಜ್ಞಾನವನ್ನು ಕೇಳುವ ಬುದ್ಧಿಯೂ ಸಹ ಮನುಷ್ಯ ತನುವಿನಲ್ಲಿಯೇ ಇರುತ್ತದೆ, ಪ್ರಾಣಿಗಳಲ್ಲಿ ಇರುವುದಿಲ್ಲ ಅಂದಮೇಲೆ ಈ ಸೃಷ್ಟಿಯ ಆಟದಲ್ಲಿ ಮುಖ್ಯವಾದ ಪಾತ್ರವು ಮನುಷ್ಯನದಾಯಿತು. ಈ ಪ್ರಾಣಿ, ಪಕ್ಷಿ ಇತ್ಯಾದಿಗಳಂತು ಸೃಷ್ಟಿನಾಟಕದ ಶೋಭೆಯಿದ್ದಂತೆ. ಇಡೀ ಕಲ್ಪದಲ್ಲಿ ಸತ್ಯಯುಗದ ಆದಿಯಿಂದ ಕಲಿಯುಗದ ಅಂತ್ಯದವರೆಗೂ ಮನುಷ್ಯಾತ್ಮರ 84 ಜನ್ಮಗಳಿವೆ, ಉಳಿದ ಈ 84 ಲಕ್ಷವಂತು ಅನೇಕ ಪ್ರಕಾರದ ಪ್ರಾಣಿ-ಪಕ್ಷಿ ಇತ್ಯಾದಿ… ಇರಬಹುದು. ಈಗ ಇವೆಲ್ಲಾ ರಹಸ್ಯಗಳನ್ನು ಪರಮಾತ್ಮನಲ್ಲದೆ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಆತ್ಮರುಗಳ ನಿವಾಸ ಸ್ಥಾನ `ಬ್ರಹ್ಮ್ ತತ್ವ’ ಅರ್ಥಾತ್ ನಿರಾಕಾರಿ ಪ್ರಪಂಚವಾಗಿದೆ. ಉಳಿದಂತಹ ಈ ಎಲ್ಲಾ ಪ್ರಾಣಿಗಳ ಆತ್ಮಗಳು ಬ್ರಹ್ಮ್ ತತ್ವದಲ್ಲಿ ಹೋಗಲು ಸಾಧ್ಯವಿಲ್ಲ, ಅವು ಈ ಆಕಾಶ ತತ್ವದಲ್ಲಿಯೇ ಪಾತ್ರವನ್ನು ಅಭಿನಯಿಸುತ್ತದೆ, ಅವುಗಳಲ್ಲಿಯೂ ಮರ್ಜ್-ಇಮರ್ಜ್ (ವಿಸ್ಮೃತಿ-ಸ್ಮೃತಿ)ನ ಮತ್ತು ಸತೋ, ರಜೋ, ತಮೋದಲ್ಲಿ ಬರುವ ಪಾತ್ರವಿರುತ್ತದೆ ಆದ್ದರಿಂದ ನಾವು ಪ್ರಕೃತಿಯ ಬಗ್ಗೆ ಹೆಚ್ಚು ವಿಸ್ತಾರದಲ್ಲಿ ಹೋಗುವುದಕ್ಕೆ ಮೊದಲು ಸ್ವಯಂ ಆತ್ಮನ ಕಲ್ಯಾಣವನ್ನು ಮಾಡಿಕೊಳ್ಳಬೇಕು ಅರ್ಥಾತ್ ಮನ್ಮಾನಭವ. ಈಗ ಮನುಷ್ಯಾತ್ಮನ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬರುತ್ತೇವೆ, ಯಾವ ಆತ್ಮರು ಅಶುದ್ಧ ಕರ್ಮವನ್ನು ಮಾಡುವುದರಿಂದ ವಿಕರ್ಮಗಳಾಗುತ್ತವೆ, ಅವು ತನ್ನ ಅಶುದ್ಧ ಸಂಸ್ಕಾರದನುಸಾರ ಜನನ-ಮರಣದ ಚಕ್ರದಲ್ಲಿ ಬರುತ್ತಾ, ಆದಿ-ಮಧ್ಯ-ಅಂತ್ಯ ಅರ್ಥಾತ್ ತಾನು ಮಾಡಿರುವ ವಿಕರ್ಮಗಳ ಸಾಕ್ಷಾತ್ಕಾರವು ಸಾಯುವ ಸಮಯದಲ್ಲಿ ನೋಡುತ್ತಾ, ಸೂಕ್ಷ್ಮದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಾರೆ. ಈ ಸ್ವಲ್ಪ ಸಮಯದಲ್ಲಿ ಅನೇಕ ಜನ್ಮಗಳ ದುಃಖದ ಅನುಭೂತಿಯಾಗುವುದು, ಆನಂತರ ಶರೀರವನ್ನು ಬಿಟ್ಟುಹೋಗಿ ಗರ್ಭಜೈಲಿನಲ್ಲಿ ದುಃಖವನ್ನು ಅನುಭವಿಸುತ್ತಾರೆ. ಆನಂತರ ಸಂಸ್ಕಾರದನುಸಾರ ಅಂತಹ ಮಾತಾಪಿತನ ಬಳಿ ಜನ್ಮವನ್ನು ಪಡೆದು, ತನ್ನ ಜೀವನದಲ್ಲಿ ಅಲ್ಲಿಯೇ ಸುಖ-ದುಃಖವನ್ನು ಅನುಭವಿಸುತ್ತಾರೆ. ಇದಕ್ಕೆ ಆದಿ-ಮಧ್ಯ-ಅಂತ್ಯ ಎಂದು ಹೇಳಲಾಗುತ್ತದೆ ಆದರೆ ಕೆಲವು ಆತ್ಮಗಳು ಶರೀರವನ್ನು ಧಾರಣೆ ಮಾಡದೆ ಆಕಾರಿ ರೂಪದಲ್ಲಿದ್ದು, ಈ ಆಕಾಶ ತತ್ವದಲ್ಲಿಯೇ ಭೂತವಾಗಿ ಅಲೆದಾಡುತ್ತಾ ಇರುತ್ತಾರೆ- ಇದೂ ಸಹ ಒಂದು ಶಿಕ್ಷೆಯಾಗಿದೆ ಅರ್ಥಾತ್ ಭೋಗಿಸುವುದೇ ಆಗಿದೆ. ಯಾರಜೊತೆ ಆ ಅಶುದ್ಧ ಜೀವಾತ್ಮರ ಲೆಕ್ಕಾಚಾರ ಇರುತ್ತದೆಯೋ, ಅವರಲ್ಲಿ ಪ್ರವೇಶ ಮಾಡಿ ಅವರಿಗೆ ದುಃಖ ಕೊಡುತ್ತದೆ ಅರ್ಥಾತ್ ಲೆಕ್ಕಾಚಾರವನ್ನು ಪೂರ್ಣಗೊಳಿಸಿದ ನಂತರ ಹೋಗಿ ತನ್ನ ಶರೀರವನ್ನು ಧಾರಣೆ ಮಾಡುತ್ತದೆ. ಕೆಲವು ಜೀವಾತ್ಮರಂತು ಯಾರಲ್ಲಿ ಪ್ರವೇಶ ಮಾಡುತ್ತದೆಯೋ, ಅವರಿಗೆ ಬಹಳ ಪೆಟ್ಟು ಕೊಡುತ್ತದೆ, ಬಹಳ ಕಷ್ಟ ಕೊಡುತ್ತದೆ ಆದರೆ ಇವೆಲ್ಲವೂ ಲೆಕ್ಕಾಚಾರಗಳಲ್ಲಿ ಭೋಗಿಸುವ ಪ್ರಕಾರಗಳಾಗಿವೆ. ಅದೆಲ್ಲವನ್ನೂ ಮನುಷ್ಯ ತನುವಿನಲ್ಲಿಯೇ ಸುಖ ಅಥವಾ ದುಃಖದ ಅನುಭೂತಿ ಆಗುವುದು. ತಮಗೆ ಇದನ್ನಂತು ತಿಳಿಸಲಾಗಿದೆ- ಯಾವ ಆತ್ಮವು ಮುಕ್ತಿಧಾಮದಿಂದ ಈ ಸಾಕಾರಿ ಆಟದಲ್ಲಿ ಬರುತ್ತದೆಯೋ, ಅದು ಮಧ್ಯದಲ್ಲಿಯೇ ಹಿಂತಿರುಗಿ ಹೋಗಲು ಸಾಧ್ಯವಿಲ್ಲ ಆದರೆ ಸ್ವಯಂ ಮಾಡಿರುವ ಅಶುದ್ಧ, ಶುದ್ಧ ಕರ್ಮಗಳನುಸಾರ ಸಂಸ್ಕಾರವನ್ನು ತೆಗೆದುಕೊಂಡು, ಸುಖ-ದುಃಖದ ಬಂಧನದಲ್ಲಿ ಬರುತ್ತದೆ. ಎಲ್ಲಾ ಆತ್ಮರುಗಳ ಪುನರ್ಜನ್ಮವಾಗುತ್ತದೆ, ಆದರೆ ಕೇವಲ ಒಬ್ಬ ಪರಮಾತ್ಮನದಾಗುವುದಿಲ್ಲ. ಒಳ್ಳೆಯದು. ಓಂಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top