12 July 2021 KANNADA Murli Today | Brahma Kumaris

Read and Listen today’s Gyan Murli in Kannada

July 11, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯಂತಹ ನಿರಹಂಕಾರಿ ಮತ್ತು ನಿಷ್ಕಾಮ ಸೇವಾಧಾರಿ ಮತ್ತ್ಯಾರೂ ಇಲ್ಲ, ಇಡೀ ವಿಶ್ವದ ರಾಜ್ಯಭಾಗ್ಯವನ್ನು ಮಕ್ಕಳಿಗೆ ಕೊಟ್ಟು ತಾನು ವಾನಪ್ರಸ್ಥದಲ್ಲಿ ಕುಳಿತು ಬಿಡುತ್ತಾರೆ”

ಪ್ರಶ್ನೆ:: -

ತಂದೆಯ ಯಾವ ಸಂದೇಶವನ್ನು ನೀವು ಇಡೀ ವಿಶ್ವಕ್ಕೆ ಸಾರಬೇಕಾಗಿದೆ?

ಉತ್ತರ:-

ಎಲ್ಲರಿಗೂ ತಿಳಿಸಿ – ನೀವು ದುಃಖಹರ್ತ-ಸುಖಕರ್ತನ ಮಕ್ಕಳಾಗಿದ್ದೀರಿ, ನೀವು ಎಂದೂ ಯಾರಿಗೂ ದುಃಖ ಕೊಡಬಾರದು. ನೀವು ಸುಖದಾತ ತಂದೆಯನ್ನು ನೆನಪು ಮಾಡಿರಿ, ಅವರನ್ನು ಅನುಸರಿಸಿರಿ ಆಗ ಅರ್ಧಕಲ್ಪಕ್ಕಾಗಿ ಸುಖಧಾಮದಲ್ಲಿ ಹೋಗುವಿರಿ. ಈ ಸಂದೇಶವನ್ನು ಎಲ್ಲರಿಗೆ ತಿಳಿಸಬೇಕಾಗಿದೆ. ಯಾರು ಈ ಸಂದೇಶವನ್ನು ಜೀವನದಲ್ಲಿ ಧಾರಣೆ ಮಾಡಿಕೊಳ್ಳುವರೋ ಅವರು 21 ಜನ್ಮಗಳಿಗಾಗಿ ಮಾಯೆಯ ಮೂರ್ಛೆಯಿಂದ ಮುಕ್ತರಾಗುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯ ಅರ್ಥವನ್ನಂತೂ ತಿಳಿದುಕೊಂಡಿರಿ. ಅವರು ನಾವಾತ್ಮರ ತಂದೆಯಾಗಿದ್ದಾರೆ. ಮುಖ್ಯವಾದುದು ಆತ್ಮವಾಗಿದೆ. ನಾವಾತ್ಮರು ಪರಮಪಿತ ಪರಮಾತ್ಮನ ಸನ್ಮುಖದಲ್ಲಿ ಕುಳಿತುಕೊಂಡಿದ್ದೇವೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಿಮ್ಮ ಆತ್ಮವು ಪರಮಾತ್ಮನ ಸನ್ಮುಖದಲ್ಲಿ ಕುಳಿತಿದೆ. ನಿಮಗಾದರೆ ತನ್ನ ಶರೀರವಿದೆ ಆದರೆ ತಂದೆಗೆ ಇದು ಲೋನ್ ಆಗಿ ತೆಗೆದುಕೊಂಡಿರುವ ಶರೀರವಾಗಿದೆ. ಗುರುಗಳು ಮನುಷ್ಯರನ್ನು ಯಾತ್ರೆಗೆ ಕರೆದುಕೊಂಡು ಹೋಗುತ್ತಾರೆ, ಭಕ್ತಿಮಾರ್ಗದ ಗುರುಗಳು ಅನೇಕರಿದ್ದಾರೆ. ಭಾರತದಲ್ಲಂತೂ ಸ್ತ್ರೀಯು ತನ್ನ ಪತಿಯನ್ನೂ ಸಹ ಗುರು, ಈಶ್ವರನೆಂದು ತಿಳಿದುಕೊಳ್ಳುತ್ತಾಳೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ನೀವು ಮಕ್ಕಳಲ್ಲವೆ, ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ಬೇಹದ್ದಿನ ಆಸ್ತಿಯನ್ನು ಪುನಃ ಪಡೆಯಲು ಬಂದಿದ್ದೇವೆ. ನಾವೀಗ ಸದ್ಗತಿಯನ್ನು ಪಡೆಯಬೇಕೆಂದು ತಿಳಿದುಕೊಳ್ಳುತ್ತೀರಿ. ಇದಂತೂ ನಿಶ್ಚಯವಿದೆಯಲ್ಲವೆ. ಇಡೀ ಪ್ರಪಂಚವು ದುರ್ಗತಿಯಲ್ಲಿದೆ, ಪತಿತವಾಗಿದೆ. ಪಾವನರಾಗುವುದಕ್ಕಾಗಿ ಕರೆಯುತ್ತಾರೆ ಅಂದಾಗ ಭಾರತದಲ್ಲಿ ಬಹುತೇಕ ಗುರುಗಳಿದ್ದಾರೆ. ಕೆಲವರಿಗೆ 100 ಜನ ಅನುಯಾಯಿಗಳು, ಕೆಲವರಿಗೆ 500 ಮಂದಿ, ಇನ್ನೂ ಕೆಲವರಿಗೆ 50 ಮಂದಿಯೂ ಇರುತ್ತಾರೆ. ಕೆಲವರಿಗೆ ಲಕ್ಷ-ಕೋಟ್ಯಾಂತರ ಅಂದಾಜಿನಲ್ಲಿಯೂ ಇರುತ್ತಾರೆ. ಉದಾ: ಕೋಜರ ಆಗಾಂಕ ಗುರುವಿದ್ದಾರೆ, ಅವರಿಗೆ ಎಷ್ಟೊಂದು ಮಂದಿ ಅನುಯಾಯಿಗಳಿದ್ದಾರೆ, ಅವರಿಗೆ ಎಷ್ಟೊಂದು ಗೌರವ ಕೊಡುತ್ತಾರೆ! ಭಲೆ ಏನಾದರೂ ಮಾಡುವವರಾಗಿರಲಿ ಆದರೆ ಅವರಿಗೆ ಮಾನ್ಯತೆ ಎಷ್ಟೊಂದಿದೆ! ಭಕ್ತಿಮಾರ್ಗದಲ್ಲಿ ಗುರುಗಳು ಅನೇಕರಿದ್ದಾರೆ, ಅವರಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರ ಸಂಪಾದನೆಯು ಪದುಮದಷ್ಟಿರುತ್ತದೆ, ಆಗಾಂಕರ ಸಂಪಾದನೆಯು ಬಹಳಷ್ಟಿದೆ, ಅವರನ್ನು ಅವರ ಶಿಷ್ಯರು ವಜ್ರಗಳಲ್ಲಿ ತುಲಾಭಾರ ಮಾಡಿ ದಾನ ಮಾಡಿದ್ದರು. ಒಂದು ಕಡೆ ವಜ್ರಗಳು ಇನ್ನೊಂದು ಕಡೆ ಅವರ ಗುರು. ವಜ್ರಗಳನ್ನು ದಾನ ಮಾಡುತ್ತಾರೆ, ಅಂದಮೇಲೆ ಎಷ್ಟು ವಜ್ರಗಳಿರಬಹುದು! ಇತ್ತೀಚೆಗೆ ಚಿನ್ನದಲ್ಲಿ ಅನೇಕರನ್ನು ತುಲಾಭಾರ ಮಾಡುತ್ತಾರೆ. ಇನ್ನೊಂದು ಪ್ಲಾಟಿನಂ ಇರುತ್ತದೆ ಅದು ಚಿನ್ನಕ್ಕಿಂತಲೂ ಹೆಚ್ಚು ಬೆಲೆ ಬಾಳುವಂತದ್ದಾಗಿರುತ್ತದೆ. ಅದನ್ನೂ ಸಹ ತುಲಾಭಾರ ಮಾಡಿದ್ದರು. ಗುರುಗಳ ಪದವಿ ನೋಡಿ ಎಷ್ಟಿದೆ… ! ಇಂತಹ ಗುರುಗಳಂತೂ ಅನೇಕರಿದ್ದಾರೆ ಆದರೆ ಈ ಸದ್ಗುರುವಿಗೆ ಏನು ಕೊಡುತ್ತೀರಿ? ಅವರನ್ನು ತುಲಾಭಾರ ಮಾಡುವಿರಾ? ವಜ್ರಗಳಲ್ಲಿ ತುಲಾಭಾರ ಮಾಡುತ್ತೀರಾ? ಅವರಿಗೆ ತೂಕವಿದೆಯೇ? ಶಿವ ತಂದೆಗೆ ತೂಕವೇ ಇಲ್ಲ, ಶಿವನು ಬಿಂದುವಾಗಿದ್ದಾರೆ. ಅವರನ್ನು ನೀವು ಹೇಗೆ ತುಲಾಭಾರ ಮಾಡಬಲ್ಲಿರಿ! ಈ ನಿಮ್ಮ ಗುರುವು ಎಷ್ಟು ವಿಚಿತ್ರವಾಗಿದ್ದಾರೆ, ಎಲ್ಲದಕ್ಕಿಂತ ಹಗುರ. ಸಂಪೂರ್ಣ ಸೂಕ್ಷ್ಮವಾಗಿದ್ದಾರೆ. ನಿಮ್ಮ ಗುರು ಒಬ್ಬರೇ ಆಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ದಾತನಾಗಿದ್ದಾರೆ, ಭಗವಂತನೆಂದೂ ಏನನ್ನೂ ತೆಗೆದುಕೊಳ್ಳುವುದಿಲ್ಲ, ಅವರು ಕೊಡುತ್ತಾರೆ. ಈಶ್ವರಾರ್ಥವಾಗಿ ಎಲ್ಲರೂ ದಾನ ಮಾಡುತ್ತಾರೆ ಆಗ ಅದಕ್ಕೆ ಪ್ರತಿಫಲವು ಇನ್ನೊಂದು ಜನ್ಮದಲ್ಲಿ ಸಿಗುತ್ತದೆ ಎಂದು ತಿಳಿಯುತ್ತಾರೆ. ಕಾಮನೆಯನ್ನಂತೂ ಇಟ್ಟುಕೊಳ್ಳುತ್ತಾರೆ. ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ. ಇವರ ತರಹ ನಿಷ್ಕಾಮ ಸೇವೆಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ನಿಷ್ಕಾಮ ಸೇವೆಯೂ ನೋಡಿ ಹೇಗಿದೆ, ಮಕ್ಕಳನ್ನು ವಿಶ್ವದ, ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ವಿಶ್ವದ ಮಾಲೀಕನಾಗುವುದಿಲ್ಲ. ಅವರಿಗೆ ಸುಖದ ಸಾಗರ, ಶಾಂತಿಯ ಸಾಗರ, ಪವಿತ್ರತೆಯ ಸಾಗರನೆಂದು ಹೇಳಲಾಗುತ್ತದೆ. ಮಕ್ಕಳಿಗೆ ಪ್ರತಿಯೊಂದು ಮಾತನ್ನು ಬಹಳ ಚೆನ್ನಾಗಿ ತಿಳಿಸಲಾಗುತ್ತದೆ. ಒಬ್ಬ ತಂದೆಯಿಂದಲೇ ನಿಮಗೆ ಜೀವನ್ಮುಕ್ತಿ ಸಿಗುತ್ತದೆ. ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ನಿಶ್ಚಯ ಮಾಡಿದರೆ ಸಾಕು. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ, ಇವರಿಗೆ ಜ್ಞಾನ ಸಾಗರನೆಂದು ಹೇಳುತ್ತಾರೆ. ಇಡೀ ಸಾಗರವನ್ನು ಶಾಹಿಯನ್ನಾಗಿ ಮಾಡಿ ಗಿಡ-ಮರಗಳನ್ನು ಲೇಖನಿಯನ್ನು ಮಾಡಿ ಬರೆದರೂ ಸಹ ಇವರ ಮಹಿಮೆಯು ಮುಗಿಯುವುದಿಲ್ಲ. ನೀವು ಆರಂಭದಿಂದ ಹಿಡಿದು ಬರೆಯುತ್ತಾ ಹೋಗಿ. ನಿಮ್ಮದು ಎಷ್ಟೊಂದು ಪುಸ್ತಕಗಳಾಗಿ ಬಿಡುವುದು! ಈ ಜ್ಞಾನವು ಬಹಳ ಅತ್ಯಮೂಲ್ಯವಾಗಿದೆ, ಇದನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ – ಇದು ಪರಂಪರೆಯಂತೂ ನಡೆಯುವುದಿಲ್ಲ. ಈಗ ನಿಮಗೆ ಸಾರವು ಸಿಗುತ್ತದೆ. ತಂದೆಯು ಬಂದು ಮಕ್ಕಳಿಗೆ ತಮ್ಮ ಪರಿಚಯ ನೀಡುತ್ತಾರೆ. ಅದೇ ಸಾಕಷ್ಟು ಆಗುತ್ತದೆ. ತಂದೆಯ ಪರಿಚಯ ಕೊಡುವುದರಿಂದ, ರಚಯಿತನನ್ನು ಅರಿತುಕೊಳ್ಳುವುದರಿಂದ, ರಚನೆಯ ಜ್ಞಾನವೂ ಬಂದು ಬಿಡುತ್ತದೆ. ಬುದ್ಧಿಯೂ ಹೇಳುತ್ತದೆ – ಸತ್ಯಯುಗದಲ್ಲಿ ಯಾರು ಬರುವರೋ ಅವರದು ಹೆಚ್ಚು ಪುನರ್ಜನ್ಮಗಳಿರುವುದು, ಚಕ್ರದಲ್ಲಿ ಯಾರು ಮೊದಲು ಬಂದಿರುವರೋ ಅವರೇ ಬರುತ್ತಾರೆ. ಈ ಚಕ್ರವನ್ನೂ ಸಹ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ, ನಮ್ಮ ತೀರ್ಥ ಸ್ಥಾನವು ಭಿನ್ನವೆಂದು ಗೀತೆಯಲ್ಲಿಯೂ ಕೇಳಿದಿರಿ, ಆ ತೀರ್ಥ ಯಾತ್ರೆಗಳನ್ನಂತೂ ಜನ್ಮ-ಜನ್ಮಾಂತರದಿಂದಲೂ ಮಾಡುತ್ತಾ ಬಂದಿದ್ದೀರಿ, ಇದು ಕೇವಲ ನಿಮ್ಮ ಒಂದು ಜನ್ಮದ ಯಾತ್ರೆಯಾಗಿದೆ. ಈ ಆತ್ಮಿಕ ಯಾತ್ರೆಯಲ್ಲಿ ಸ್ವಲ್ಪವೂ ಕಷ್ಟವಿಲ್ಲ, ಜ್ಞಾನ ಕೊಡುವವರು ಒಬ್ಬರೇ ಸದ್ಗುರುವಾಗಿದ್ದಾರೆ. ಸದ್ಗತಿಯಂತೂ ಯಾರಿಗೂ ಆಗುವುದಿಲ್ಲ, ಅವರು ಸುಪ್ರೀಂ ಜ್ಞಾನ ಸಾಗರನಾಗಿದ್ದಾರೆ, ಸರ್ವರ ಸದ್ಗತಿಯಾಗಿ ಬಿಡುತ್ತದೆ ಅಂದಮೇಲೆ ಇನ್ನೇನು ಬೇಕು! ತತ್ವಗಳೂ ಸತೋಪ್ರಧಾನವಾಗಿ ಬಿಡುತ್ತವೆ. ಇಲ್ಲಿ ತಮೋಪ್ರಧಾನರಿರುವ ಕಾರಣ ವಾಯು ಇತ್ಯಾದಿಗಳೂ ಸಹ ಅದೇರೀತಿ ತಮೋಪ್ರಧಾನವಾಗುತ್ತದೆ, ಎಷ್ಟೊಂದು ಭೂಕಂಪಗಳಾಗುತ್ತವೆ. ಸತ್ಯಯುಗದಲ್ಲಿ ದುಃಖ ಕೊಡುವಂತಹ ಯಾವುದೇ ವಸ್ತು ಇರುವುದಿಲ್ಲ. ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆ. ನೀವು ಅವರ ಮಕ್ಕಳಾಗಿದ್ದೀರಿ ಆದ್ದರಿಂದ ಯಾರಿಗೂ ದುಃಖವನ್ನು ಕೊಡಬಾರದು. ಎಲ್ಲರಿಗೆ ಸುಖದ ಆಸ್ತಿಯನ್ನು ಪಡೆಯುವ ಈ ಮಾರ್ಗವನ್ನು ತಿಳಿಸಬೇಕಾಗಿದೆ.

ಈಗ ತಂದೆಯು ತಿಳಿಸುತ್ತಾರೆ – ನೀವು ಸುಖವನ್ನೇ ಕೊಡಬೇಕಾಗಿದೆ, ತಂದೆಯು ನಿಮಗೆ ಅರ್ಧಕಲ್ಪಕ್ಕಾಗಿ ಇಂತಹ ಸುಖವನ್ನು ಕೊಡುತ್ತಾರೆ, ಅಲ್ಲಿ ದುಃಖದ ಹೆಸರೇ ಇರುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ – ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ನೀವು ವಿದ್ಯಾರ್ಥಿಗಳಾಗಿದ್ದೀರಲ್ಲವೆ. ನಿಮ್ಮ ಹೃದಯದಲ್ಲಿದೆ – ಶಿವ ತಂದೆಯಿಂದ ಸ್ವರ್ಗದ ಸುಖವನ್ನು ತೆಗೆದುಕೊಳ್ಳುತ್ತೇವೆ, ಅದರಿಂದ ಎಲ್ಲಾ ದುಃಖಗಳೂ ದೂರವಾಗಿ ಬಿಡುತ್ತವೆ. ತಂದೆಯು ನಮಗೆ ಎಚ್ಚರವಾಗಲು ಸಂಜೀವಿನ ಮೂಲಿಕೆಯನ್ನು ಕೊಡುತ್ತಾರೆ ನಂತರ 21 ಜನ್ಮಗಳವರೆಗೂ ಎಂದೂ ಮೂರ್ಛಿತರಾಗುವುದಿಲ್ಲ. ಆ ಸಂಜೀವಿನಿ ಮೂಲಿಕೆಯಾಗಿದೆ – ಮನ್ಮನಾಭವ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ, ಅವರಿಗೆ ನಿರಾಕಾರ-ನಿರಹಂಕಾರಿ ಎಂದು ಹೇಳಲಾಗುತ್ತದೆ. ಯಾವ ತನುವಿನಲ್ಲಿ ಬರುವರೋ ಅವರು ಸಾಧಾರಣರಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ಡಿಯರ್ ಚಿಲ್ಡ್ರನ್, ಐ ಆಮ್ ಯುವರ್ ಒಬಿಡಿಯಂಟ್ ಫಾದರ್ (ಪ್ರಿಯ ಮಕ್ಕಳೇ, ನಾನು ನಿಮ್ಮ ವಿಧೇಯ ತಂದೆಯಾಗಿದ್ದೇನೆ) ಹಿರಿಯ ವ್ಯಕ್ತಿಗಳು ಯಾವಾಗಲೂ ನಾನು ನಿಮ್ಮ ವಿಧೇಯ ಸೇವಕ ಎಂದು ಬರೆಯುತ್ತಾರೆ. ತಮಗೆ ಎಂದೂ ಶ್ರೀ ಎಂದು ಬರೆಯುವುದಿಲ್ಲ. ಇತ್ತೀಚೆಗಂತೂ ಶ್ರೀ ಶ್ರೀ ಎಂದು ಬರೆಯುತ್ತಾರೆ. ತಾವೇ ತಮಗೆ ಶ್ರೀ ಶ್ರೀ ಎಂದು ಬರೆದುಕೊಳ್ಳುತ್ತಾರೆ. ತಂದೆಯಂತೂ ನಿರಾಕಾರಿ ನಿರಹಂಕಾರಿಯಾಗಿದ್ದಾರೆ. ನೀವೀಗ ಅವರ ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ – ಅವರು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಉಳಿದೆಲ್ಲರೂ ಭಕ್ತಿ ಮಾರ್ಗದ ಅನೇಕ ಗುರುಗಳಿದ್ದಾರೆ. ಗುರುಗಳಿಗೂ ಗುರುಗಳಿರುತ್ತಾರೆ ಆದರೆ ಇವರಿಗೆ ಯಾರೂ ಗುರುವಿಲ್ಲ. ಇವರು ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ.

ನೀವು ತಿಳಿದುಕೊಂಡಿದ್ದೀರಿ – ಆತ್ಮವೇ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳುತ್ತಿದೆ. ತಂದೆಯೂ ಸಹ ಆತ್ಮನಲ್ಲವೆ, ಅವರಲ್ಲಿಯೂ ಗುಣಗಳಿವೆ. ನಿಮ್ಮ ಗುಣಗಳು ಬೇರೆ-ಬೇರೆಯಾಗಿ ಬಿಡುತ್ತವೆ. ಈ ಸಮಯದಲ್ಲಿ ಯಾವ ಗುಣಗಳು ನಿಮ್ಮಲ್ಲಿವೆಯೋ ಅದೇ ತಂದೆಯದಾಗಿದೆ. ಮತ್ತೆ ಸತ್ಯಯುಗದಲ್ಲಿ ನಿಮ್ಮದು ದೈವೀ ಗುಣಗಳಾಗುತ್ತವೆ. ತಂದೆಯು ಜ್ಞಾನ ಸಾಗರ, ಪ್ರೀತಿಯ ಸಾಗರನಾಗಿದ್ದಾರೆ. ಕೃಷ್ಣನ ಮಹಿಮೆಯು ಬೇರೆಯಾಗಿದೆ. ಶಿವ ತಂದೆಗೆ 16 ಕಲಾ ಸಂಪೂರ್ಣನೆಂದು ಹೇಳಲು ಸಾಧ್ಯವಿಲ್ಲ. ಅವರಂತೂ ಸ್ಥಿರವಾಗಿದ್ದಾರೆ. ತಂದೆಯು ಹೇಳುತ್ತಾರೆ – ಈ ಬಿರುದನ್ನು ನನಗೆ ಕೊಡಲು ಸಾಧ್ಯವಿಲ್ಲ. ನಾನು ಪುನಃ ಸರ್ವಗುಣ ಸಂಪನ್ನನಾಗಲು ನಾನು ವಿಕಾರಿಯಾಗುತ್ತೇನೆಯೇ! ಕೃಷ್ಣನ ಹಾಗೆ ನನ್ನ ಮಹಿಮೆ ಮಾಡುವುದಿಲ್ಲ. ಈ ಜ್ಞಾನವನ್ನು ಯಾರು ಕಲ್ಪದ ಮೊದಲು ಕೇಳಿದ್ದಾರೆಯೋ ಅವರೇ ಬರುತ್ತಾರೆ, ಬಂದು ತಂದೆಯಿಂದ ಕೇಳುತ್ತಾರೆ ಮತ್ತು ತಂದೆಯನ್ನು ನೆನಪು ಮಾಡುತ್ತಾರೆ. ಅಂತಿಮದಲ್ಲಿ ಅಯ್ಯೊ, ಅಯ್ಯೊ ಎಂದು ಅಳುತ್ತಾರೆ, ನಂತರ ಜಯ ಜಯಕಾರವಾಗಿ ಬಿಡುತ್ತದೆ. ನೀವೀಗ ಯಾತ್ರೆಯ ರಹಸ್ಯವನ್ನೂ ತಿಳಿದುಕೊಂಡಿದ್ದೀರಿ – ಈ ಯಾತ್ರೆಯಿಂದ ಮತ್ತೆ ನೀವು ಮೃತ್ಯುಲೋಕಕ್ಕೆ ಹಿಂತಿರುಗುವುದಿಲ್ಲ. ಆ ತೀರ್ಥ ಯಾತ್ರೆಗಳಿಂದ ಪುನಃ ಮನೆಗೆ ಹಿಂತಿರುಗಿ ಬರುತ್ತಾರೆ. ಎಷ್ಟೊಂದು ಮನುಷ್ಯರು ಸ್ನಾನ ಮಾಡಲು ಹೋಗುತ್ತಾರೆ, ಭಕ್ತಿಯ ವಿಸ್ತಾರ ನೋಡಿ ಎಷ್ಟೊಂದಿದೆ! ಹೇಗೆ ವೃಕ್ಷವು ಎಷ್ಟು ದೊಡ್ಡದಾಗಿರುತ್ತದೆ, ಬೀಜವಂತೂ ಬಹಳ ಚಿಕ್ಕದಾಗಿರುತ್ತದೆ ಹಾಗೆಯೇ ಭಕ್ತಿಯ ವಿಸ್ತಾರವು ಎಷ್ಟೊಂದಿದೆ! ಜ್ಞಾನ ಸಾಗರದಲ್ಲಿ ಒಂದು ಸಲ ಮುಳುಗಿದರೂ ಸಹ ನಿಮ್ಮದು ಸದ್ಗತಿ ಆಗಿ ಬಿಡುತ್ತದೆ, ಭಕ್ತಿಯಲ್ಲಿ ಇಳಿಯುತ್ತಾ-ಇಳಿಯುತ್ತಾ ಅರ್ಧಕಲ್ಪ ಹಿಡಿಸುತ್ತದೆ, ಇಲ್ಲಿ ನಿಮಗೆ ಏಣಿಯನ್ನು ಹತ್ತುವುದರಲ್ಲಿ ಒಂದು ಸೆಕೆಂಡ್ ಸಾಕು. ಎಷ್ಟು ಒಳ್ಳೆಯ ಲಿಫ್ಟ್ ಆಗಿದೆ. ಕೆಳಗಿನಿಂದ ಒಮ್ಮೆಲೆ ಮೇಲೆ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ಇದಕ್ಕೆ ಏರುವ ಕಲೆಯಿಂದ ಸರ್ವರ ಉದ್ಧಾರವೆಂದು ಹೇಳಲಾಗುತ್ತದೆ. ಸರ್ವರ ಸದ್ಗತಿದಾತನು ತಂದೆಯೊಬ್ಬರೇ ಆಗಿದ್ದಾರೆ. ಈಗ ಜ್ಞಾನ-ಭಕ್ತಿಯ ಅಂತರವನ್ನು ನೋಡಿದಿರಿ. ಜ್ಞಾನ, ಭಕ್ತಿ, ವೈರಾಗ್ಯವಲ್ಲವೆ! ಸನ್ಯಾಸಿಗಳದು ಮಿತವಾದ ವೈರಾಗ್ಯವಾಗಿದೆ, ತಂದೆಯು ತಿಳಿಸಿದ್ದಾರೆ – ಎರಡು ಪ್ರಕಾರದ ವೈರಾಗ್ಯವಿದೆ, ಒಂದು ಹದ್ದಿನ ವೈರಾಗ್ಯ ಯಾವುದರಿಂದ ಯಾರದೇ ಸದ್ಗತಿ ಆಗುವುದಿಲ್ಲ. ಇನ್ನೊಂದು ಬೇಹದ್ದಿನ ವೈರಾಗ್ಯವಾಗಿದೆ, ಇದರಿಂದ ನಿಮ್ಮ ಸದ್ಗತಿ ಆಗಿ ಬಿಡುತ್ತದೆ. ಸದ್ಗತಿಗಾಗಿ ಈಗ ನೀವು ಮಕ್ಕಳಿಗೆ ಶ್ರೇಷ್ಠಾತಿ ಶ್ರೇಷ್ಠರಾಗುವ ಮತ ಸಿಗುತ್ತದೆ. ಈಗ ಶ್ರೀಮತದ ಅನುಸಾರ ಶ್ರೇಷ್ಠ ಪ್ರಪಂಚದ ಸ್ಥಾಪನೆಯಾಗುತ್ತಿದೆ. ರಾವಣನ ಮತದ ಅನುಸಾರ ಈ ಭ್ರಷ್ಟ ಪ್ರಪಂಚವಾಗಿದೆ. ನಾವು ಶ್ರೇಷ್ಠರಾಗುತ್ತಿದ್ದೇವೆ, ಈ ಮಾತುಗಳು ನಿಮಗೇ ತಿಳಿದಿದೆ. ಪ್ರಪಂಚದವರಿಗೆ ಏನೂ ತಿಳಿದಿಲ್ಲ. ಈ ಬ್ರಹ್ಮಾಕುಮಾರಿಯರು ವಿನಾಶ ಮಾಡಿಸುವವರಾಗಿದ್ದಾರೆಂದು ಹೇಳುತ್ತಾರೆ ಆದರೆ ಸತ್ಯವಾಗಿ ವಿನಾಶವಂತೂ ಆಗಲೇಬೇಕಾಗಿದೆ, ಇದರಿಂದಲೇ ಕಲ್ಯಾಣವಾಗುವುದು. ಕಲ್ಯಾಣಕಾರಿ ತಂದೆಯು ಬರುತ್ತಾರೆ ಆಗಲೇ ಮಹಾಭಾರತ ಯುದ್ಧವಾಗುತ್ತದೆ. ಈ ಬ್ರಹ್ಮಾಕುಮಾರಿಯರು ವಿನಾಶ ಮಾಡುತ್ತಾರೆ ಎಂದು ನಾವು ಹೇಳುತ್ತಿದ್ದೆವಲ್ಲವೆ ಎನ್ನುತ್ತಾರೆ. ಅವಶ್ಯವಾಗಿ ವಿನಾಶವಂತೂ ಆಗಲೇಬೇಕಾಗಿದೆ, ನಾವು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತೇವೆ, ಹಳೆಯದರ ನಂತರ ಹೊಸದು ಬರಲೇಬೇಕಾಗಿದೆ. ಕಲ್ಪ-ಕಲ್ಪವೂ ವಿನಾಶವಾಗುತ್ತದೆ, ಇದರಿಂದಲೇ ಭಾರತದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಆದರೆ ಇದನ್ನು ಮನುಷ್ಯರು ತಿಳಿದುಕೊಳ್ಳುವುದಾದರೂ ಹೇಗೆ? ಮುಂದೆ ಹೋದಂತೆ ಅನೇಕರು ತಿಳಿದುಕೊಳ್ಳುವರು. ತಂದೆಯು ಬರುತ್ತಾರೆ, ಇಡೀ ಹಳೆಯ ಪ್ರಪಂಚವು ಸ್ವಾಹಾ ಆಗಿ ಬಿಡುತ್ತದೆ, ನಿಮ್ಮ ಈ ಯಜ್ಞವಂತೂ ಅದ್ಭುತವಾಗಿದೆ, ಇದರಲ್ಲಿ ಎಲ್ಲವೂ ಆಹುತಿ ಆಗಬೇಕಾಗಿದೆ. ಇದೂ ಸಹ ನಿಮಗೇ ಗೊತ್ತು, ಮತ್ತ್ಯಾರಿಗೂ ಗೊತ್ತಿಲ್ಲ. ಪಾಂಡವರ ವಿಜಯವಾಗುವುದು ಮತ್ತೆಲ್ಲರೂ ಸಮಾಪ್ತಿಯಾಗುವರು. ನೀವು ಪಾಂಡವರೇ ಉಳಿಯುತ್ತೀರಿ ನಂತರ ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತೀರಿ. ಈ ಜ್ಞಾನವು ಬಹಳ ಅದ್ಭುತವಾಗಿದೆ. ಎಲ್ಲರ ದುಃಖಹರ್ತ-ಸುಖಕರ್ತ ಸದ್ಗತಿ ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ಎಷ್ಟು ಮಧುರ, ಎಷ್ಟೊಂದು ಪ್ರಿಯ ತಂದೆಯಾಗಿದ್ದಾರೆ. ಮಧುರ ತಂದೆಯೇ, ತಾವು ಬಂದರೆ ನಾವು ನಿಮಗೆ ಬಲಿಹಾರಿ ಆಗುತ್ತೇವೆ. ನನ್ನವರು ನಿಮ್ಮ ಹೊರತು ಮತ್ತ್ಯಾರೂ ಇಲ್ಲವೆಂದು ಹೇಳುತ್ತಾ ಬಂದಿದ್ದೀರಿ ಆದರೆ ಇದರ ಅರ್ಥವು ಮನೆ-ಮಠವನ್ನು ಬಿಟ್ಟು ಇಲ್ಲಿ ಬಂದು ಕುಳಿತುಕೊಳ್ಳುತ್ತೇವೆ ಎಂದಲ್ಲ. ಭಲೆ ಗೃಹಸ್ಥ ವ್ಯವಹಾರದಲ್ಲಿಯೇ ಇರಿ, ಏಳು ದಿನಗಳ ಕೋರ್ಸ್ ತೆಗೆದುಕೊಂಡು ಮತ್ತೆ ಎಲ್ಲಿಯಾದರೂ ಹೋಗಿರಿ – ಮನ್ಮನಾಭವ. ಕೇವಲ ತಂದೆಯನ್ನು ನೆನಪು ಮಾಡಬೇಕು ಮತ್ತು ಆಸ್ತಿಯನ್ನು ಪಡೆಯಬೇಕಾಗಿದೆ. ಕೇವಲ ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ, ಇದರಿಂದಲೇ ದೋಣಿಯು ಪಾರಾಗುವುದು. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ – ಪವಿತ್ರರಾಗಿರಬೇಕಾಗಿದೆ, ಛೀ ಛೀ ಪದಾರ್ಥಗಳನ್ನು ತಿನ್ನಬಾರದು. ಮುರುಳಿಯಂತೂ ಅವಶ್ಯವಾಗಿ ಸಿಗುತ್ತದೆ. ಕೆಲವೊಂದು ಸಮಯದಲ್ಲಿ ಮುರುಳಿಯೂ ಸಿಗುವುದಿಲ್ಲ, ಆಪತ್ತುಗಳು ಬರುತ್ತವೆ, ಏರುಪೇರುಗಳಾಗುತ್ತವೆ ಆಗ ಮುರುಳಿಯೂ ಸಿಗುವುದಿಲ್ಲ. ನೀವು ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಇದೇನೂ ಉಳಿಯುವುದಿಲ್ಲ, ಎಲ್ಲವೂ ಭಸ್ಮವಾಗಿ ಬಿಡುವುದು. ಪ್ರಳಯವಂತೂ ಆಗುವುದಿಲ್ಲ, ಪ್ರಪಂಚವಂತೂ ಒಂದೇ ಆಗಿದೆ, ಹೊಸದರಿಂದ ಹಳೆಯದಾಗುತ್ತದೆ. ಹೊಸ ಪ್ರಪಂಚ, ಹಳೆಯ ಪ್ರಪಂಚವೆಂದು ಹೇಳಲಾಗುತ್ತದೆ. ಈಗಂತೂ ಹೇಳುತ್ತೀರಿ, ಇದು ಹಳೆಯ ಪ್ರಪಂಚವಾಗಿದೆ, ಇನ್ನು ಸ್ವಲ್ಪವೇ ಸಮಯವಿದೆ, ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಅವರು ಹೇಳುತ್ತಾರೆ. ಕಲಿಯುಗವು ಇನ್ನೂ 40 ಸಾವಿರ ವರ್ಷಗಳು ನಡೆಯುವುದೆಂದು ಹೇಳುತ್ತಾರೆ. ವಾಸ್ತವದಲ್ಲಿ ಇದು 5000 ವರ್ಷಗಳ ಚಕ್ರವಾಗಿದೆ, ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ಮನುಷ್ಯರು ಬಹಳ ಕಲ್ಲು ಬುದ್ಧಿಯವರಾಗಿದ್ದಾರೆ, ಪಾತ್ರಧಾರಿಗಳಾಗಿಯೂ ಡ್ರಾಮಾದ ರಚಯಿತ, ನಿರ್ದೇಶಕರನ್ನು ಅರಿತುಕೊಂಡಿಲ್ಲ ಅಂದಮೇಲೆ ಅವರಿಗೆ ಏನು ಹೇಳುವುದು! ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನಂತೂ ತಿಳಿದುಕೊಳ್ಳಬೇಕಲ್ಲವೆ. ಯಾರು ಚೆನ್ನಾಗಿ ತಿಳಿದುಕೊಳ್ಳುವರೋ ಅವರು ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡು ಅನ್ಯರಿಗೆ ಧಾರಣೆ ಮಾಡಿಸುತ್ತಾರೆ. ಅಂತಹವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ತಂದೆಯು ತಿಳಿಸುತ್ತಾರೆ – ನನ್ನಲ್ಲಿ ಯಾವ ಜ್ಞಾನವಿದೆಯೋ ಅದನ್ನು ಈಗ ನಿಮಗೆ ತಿಳಿಸುತ್ತಿದ್ದೇನೆ. ಡ್ರಾಮಾನುಸಾರ ನಾನು ಪುನರಾವರ್ತನೆ ಮಾಡುತ್ತೇನೆ, ನನ್ನದೂ ಡ್ರಾಮಾದಲ್ಲಿ ಪಾತ್ರವಿದೆ, ಭಕ್ತಿಮಾರ್ಗದಲ್ಲಿಯೂ ಪಾತ್ರವನ್ನು ಅಭಿನಯಿಸಿದೆನು, ಈಗ ಬಂದು ನಿಮಗೆ ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಪರಿಚಯವನ್ನು ಕೊಡುತ್ತೇನೆ, ನಾನೂ ಸಹ ಡ್ರಾಮಾದ ಬಂಧನದಲ್ಲಿದ್ದೇನೆ, ನನ್ನ ಪರಿಚಯವನ್ನು ಕೊಡಲು ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿಸಲು ಒಂದೇಬಾರಿ ಬರುತ್ತೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಸಮಾನ ವಿಧೇಯರಾಗಬೇಕಾಗಿದೆ, ಎಂದೂ ಯಾವುದೇ ಮಾತಿನಲ್ಲಿ ತಮ್ಮ ಅಹಂಕಾರವನ್ನು ತೋರಿಸಬಾರದು. ನಿರಾಕಾರಿ ಮತ್ತು ನಿರಹಂಕಾರಿಗಳಾಗಿ ಇರಬೇಕಾಗಿದೆ.

2. ತಂದೆ, ಶಿಕ್ಷಕ ಮತ್ತು ಸದ್ಗುರುವಿನ ಅಂತರವನ್ನು ತಿಳಿದುಕೊಂಡು ನಿಶ್ಚಯ ಬುದ್ಧಿಯವರಾಗಿ ಶ್ರೀಮತದಂತೆ ನಡೆಯಬೇಕಾಗಿದೆ, ಆತ್ಮಿಕ ಯಾತ್ರೆಯಲ್ಲಿ ಇರಬೇಕಾಗಿದೆ.

ವರದಾನ:-

ಹೇಗೆ ಈಗ ನಾಲ್ಕೂ ಕಡೆಗಳಲ್ಲಿ ಈ ಧ್ವನಿಯು ಹರಡುತ್ತಿದೆ – ಈ ಶ್ವೇತ ವಸ್ತ್ರಧಾರಿಗಳು ಯಾರು ಮತ್ತು ಎಲ್ಲಿಂದ ಬಂದಿರುವರು! ಇದೇ ರೀತಿ ಈಗ ನಾಲ್ಕೂ ಕಡೆಗಳಲ್ಲಿ ಫರಿಶ್ತಾ ರೂಪದ ಸಾಕ್ಷಾತ್ಕಾರ ಮಾಡಿಸಿರಿ – ಇದಕ್ಕೆ ಡಬಲ್ ಸೇವಾ ರೂಪವೆಂದು ಹೇಳಲಾಗುವುದು. ಹೇಗೆ ಮೋಡಗಳು ನಾಲ್ಕೂ ಕಡೆಗಳಲ್ಲಿ ಹರಡಿಕೊಳ್ಳುತ್ತದೆಯೋ ಹಾಗೆಯೇ ನಾಲ್ಕೂ ಕಡೆಗಳಲ್ಲಿ ಫರಿಶ್ತಾ ರೂಪದಿಂದ ಪ್ರಕಟವಾಗಿರಿ, ಎಲ್ಲಿಯೇ ನೋಡಿದರೂ ಫರಿಶ್ತೆಗಳೇ ಕಾಣಿಸಲಿ. ಆದರೆ ಈ ರೀತಿ ಆಗ ಆಗುವುದು, ಯಾವಾಗ ದೇಹದಿಂದ ನಿರ್ಲಿಪ್ತರಾಗಿ ಅಂತಃವಾಹಕ ಶರೀರದಿಂದ ಪರಿಕ್ರಮಿಸುವ ಅಭ್ಯಾಸಿ ಆಗಿರುವಿರಿ. ಮನಸ್ಸಿನಿಂದ ಶಕ್ತಿಶಾಲಿ ಆಗಿರುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top