12 August 2021 KANNADA Murli Today | Brahma Kumaris
Read and Listen today’s Gyan Murli in Kannada
11 August 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಸುಖ ಕೊಡುವಂತಹ ತಂದೆಯನ್ನು ಬಹಳ-ಬಹಳ ಪ್ರೀತಿಯಿಂದ ನೆನಪು ಮಾಡಿರಿ, ನೆನಪು ಮಾಡದೆ ಪ್ರೀತಿಯುಂಟಾಗುವುದಿಲ್ಲ”
ಪ್ರಶ್ನೆ:: -
ತಂದೆಯು ಮಕ್ಕಳಿಗೆ ಪ್ರತಿನಿತ್ಯವೂ ನೆನಪಿನ ಅಭ್ಯಾಸ ಮಾಡುವ ಸೂಚನೆ ಏಕೆ ನೀಡುತ್ತಾರೆ?
ಉತ್ತರ:-
ಏಕೆಂದರೆ ನೆನಪಿನಿಂದಲೇ ಆತ್ಮವು ಪಾವನವಾಗುವುದು, ನೆನಪಿನಿಂದಲೇ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಆತ್ಮದ ಎಲ್ಲಾ ಬಂಧನಗಳು ಸಮಾಪ್ತಿಯಾಗಿ ಬಿಡುತ್ತವೆ, ವಿಕರ್ಮಗಳಿಂದ ಮುಕ್ತರಾಗಿ ಬಿಡುತ್ತೀರಿ, ಶಿಕ್ಷೆಗಳಿಂದ ಬಿಡುಗಡೆಯಾಗುತ್ತೀರಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಖುಷಿಯಿರುತ್ತದೆ. ಗುರಿಯು ಸಮೀಪದ ಅನುಭವವಾಗುತ್ತದೆ. ಎಂದೂ ಸುಸ್ತಾಗುವುದಿಲ್ಲ. ಬೇಹದ್ದಿನ ಸುಖ ಪಡೆಯುತ್ತೀರಿ, ಆದ್ದರಿಂದ ನೆನಪಿನ ಅಭ್ಯಾಸವನ್ನೂ ಖಂಡಿತ ಮಾಡಬೇಕಾಗಿದೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಬಾಲ್ಯದ ದಿನಗಳನ್ನು ಮರೆಯಬಾರದು…
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲಿನ ಅರ್ಥವನ್ನು ತಿಳಿದುಕೊಂಡಿರಿ. ನೀವೀಗ ಜೀವಿಸಿದ್ದಂತೆಯೇ ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ. ಇಡೀ ಕಲ್ಪ ಲೌಕಿಕ ತಂದೆಯ ಮಕ್ಕಳಾಗಿದ್ದೀರಿ. ನಿಮಗೆ ತಿಳಿದಿದೆ – ಬೇಹದ್ದಿನ ತಂದೆಯಿಂದ ನಾವು ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಒಂದುವೇಳೆ ತಂದೆಯನ್ನು ಬಿಟ್ಟು ಬಿಟ್ಟರೆ ಬೇಹದ್ದಿನ ಆಸ್ತಿಯು ಸಿಗಲು ಸಾಧ್ಯವಿಲ್ಲ. ಭಲೆ ನೀವು ತಿಳಿಸುತ್ತೀರಿ, ಆದರೆ ಸ್ವಲ್ಪದರಲ್ಲಿಯೇ ಯಾರೂ ಖುಷಿ ಪಡುವುದಿಲ್ಲ. ಮನುಷ್ಯರು ಧನವನ್ನು ಬಹಳ ಬಯಸುತ್ತಾರೆ. ಧನವಿಲ್ಲದೆ ಯಾರೂ ಸುಖಿಯಾಗಿರಲು ಸಾಧ್ಯವಿಲ್ಲ. ಧನವೂ ಬೇಕು, ಶಾಂತಿಯೂ ಬೇಕು, ನಿರೋಗಿ ಕಾಯವೂ ಬೇಕು. ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಪ್ರಪಂಚದಲ್ಲಿ ಇಂದು ಏನಿದೆ? ನಾಳೆ ಏನಾಗುವುದು? ವಿನಾಶವಂತೂ ಸನ್ಮುಖದಲ್ಲಿ ನಿಂತಿದೆ. ಮತ್ತ್ಯಾರ ಬುದ್ಧಿಯಲ್ಲಿಯೂ ಈ ಮಾತುಗಳಿಲ್ಲ. ಒಂದುವೇಳೆ ವಿನಾಶ ಸನ್ಮುಖದಲ್ಲಿ ನಿಂತಿದೆ ಎಂಬುದು ಅರ್ಥವಾದರೂ ಸಹ ಏನು ಮಾಡಬೇಕೆಂಬುದು ಗೊತ್ತಿಲ್ಲ. ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ, ನಿಮಗೆ ಈ ರೀತಿ ಅನಿಸುತ್ತದೆ – ಯಾವಾಗ ಬೇಕಾದರೂ ಯುದ್ಧವಾಗಬಹುದು. ಸ್ವಲ್ಪ ಕಿಡಿ ಬಂದರೆ ಸಾಕು ಅಲ್ಲೋಲ-ಕಲ್ಲೋಲವಾಗುವುದು, ಇದರಲ್ಲಿ ನಿಧಾನವಾಗುವುದಿಲ್ಲ. ಮೊದಲೂ ಸಹ ಚಿಕ್ಕ ಮಾತಿಗೆ ಎಷ್ಟು ದೊಡ್ಡ ಯುದ್ಧವಾಗಿತ್ತು! ಮಕ್ಕಳಿಗೆ ತಿಳಿದಿದೆ, ಈ ಹಳೆಯ ಪ್ರಪಂಚವು ಸಮಾಪ್ತಿಯಾಯಿತೆಂದರೆ ಆಯಿತು. ಆದ್ದರಿಂದ ಈಗ ಬೇಗನೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ತಂದೆಯನ್ನು ಸದಾ ನೆನಪು ಮಾಡುತ್ತಿದ್ದರೆ ಬಹಳ ಹರ್ಷಿತರಾಗಿರುತ್ತೀರಿ. ದೇಹಾಭಿಮಾನದಲ್ಲಿ ಬರುವುದರಿಂದಲೇ ಆ ಖುಷಿಯು ಮಾಯವಾಗುತ್ತದೆ. ದೇಹೀ-ಅಭಿಮಾನಿಗಳಾಗುತ್ತೀರೆಂದರೆ ತಂದೆಯನ್ನು ನೆನಪು ಮಾಡುವಿರಿ. ದೇಹಾಭಿಮಾನದಲ್ಲಿ ಬಂದರೆ ತಂದೆಯನ್ನು ಮರೆತು ದುಃಖಿಯಾಗುತ್ತೀರಿ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಬೇಹದ್ದಿನ ಸುಖವನ್ನೂ ಪಡೆಯುತ್ತೀರಿ. ನೀವಿಲ್ಲಿ ಬಂದಿರುವುದೇ ಇಂತಹ ಲಕ್ಷ್ಮೀ-ನಾರಾಯಣರಾಗುವುದಕ್ಕಾಗಿ. ರಾಜ-ರಾಣಿ ಮತ್ತು ಪ್ರಜೆಗಳ ನೌಕರ-ಚಾಕರರಾಗುವುದರಲ್ಲಿ ಬಹಳ ಅಂತರವಿದೆಯಲ್ಲವೆ. ಈಗಿನ ಪುರುಷಾರ್ಥವೇ ಕಲ್ಪ-ಕಲ್ಪಕ್ಕಾಗಿ ನಿಗಧಿಯಾಗುತ್ತದೆ. ನಾವು ಎಷ್ಟು ಪುರುಷಾರ್ಥ ಮಾಡಿದ್ದೇವೆ ಎಂಬುದು ಅಂತಿಮದಲ್ಲಿ ಸಾಕ್ಷಾತ್ಕಾರವಾಗುತ್ತದೆ. ಈಗಲೂ ಸಹ ತಂದೆಯು ಹೇಳುತ್ತಾರೆ, ತಮ್ಮ ಸ್ಥಿತಿಯನ್ನು ನೋಡಿಕೊಳ್ಳುತ್ತಾ ಇರಿ. ಯಾವ ಮಧುರಾತಿ ಮಧುರ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆಯೋ ಅವರನ್ನು ನಾವು ಎಷ್ಟು ನೆನಪು ಮಾಡುತ್ತೇವೆ? ನಿಮ್ಮದೆಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಖುಷಿಯೂ ಇರುವುದು. ನಾವೀಗ ಸನ್ಮುಖ ಬಂದು ತಲುಪಿದ್ದೇವೆ ಎಂಬುದನ್ನು ತಿಳಿದುಕೊಳ್ಳುತ್ತೀರಿ. ಕೆಲವರು ಗುರಿಯು ಇನ್ನೆಷ್ಟು ದೂರವಿದೆಯೋ ಎಂದು ಹೇಳಿ ಸುಸ್ತಾಗಿ ಬಿಡುತ್ತಾರೆ. ತಲುಪಿದಾಗಲೇ ಪರಿಶ್ರಮವೂ ಸಫಲವಾಗುವುದು. ಯಾರಿಗೆ ಭಗವಂತನೆಂದು ಹೇಳಲಾಗಿದೆ ಎಂಬುದು ಪ್ರಪಂಚದವರಿಗೆ ಗೊತ್ತಿಲ್ಲ. ಹೇ ಭಗವಂತ ಎಂದು ಹೇಳುತ್ತಾರೆ ಮತ್ತೆ ಕಲ್ಲು-ಮುಳ್ಳಿನಲ್ಲಿದ್ದಾರೆಂದು ಹೇಳುತ್ತಾರೆ. ನೀವೀಗ ತಿಳಿದುಕೊಳ್ಳುತ್ತೀರಿ, ನಾವು ತಂದೆಯ ಮಕ್ಕಳಾಗಿ ಬಿಟ್ಟಿದ್ದೇವೆ. ಈಗ ತಂದೆಯ ಮತದನುಸಾರವೇ ನಡೆಯಬೇಕಾಗಿದೆ. ಭಲೆ ವಿದೇಶದಲ್ಲಿಯೇ ಇರಿ, ಅಲ್ಲಿದ್ದರೂ ಸಹ ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ನಿಮಗೆ ಶ್ರೀಮತವಂತೂ ಸಿಕ್ಕಿದೆ, ತಂದೆಯ ನೆನಪಿನ ವಿನಃ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗಲು ಸಾಧ್ಯವಿಲ್ಲ. ಬಾಬಾ, ನಾವು ತಮ್ಮಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಹೇಗೆ ನಮ್ಮ ತಂದೆಯು (ಬ್ರಹ್ಮಾ) ಆಸ್ತಿಯನ್ನು ತೆಗೆದುಕೊಳ್ಳುವರೋ ಹಾಗೆಯೇ ನಾವೂ ಸಹ ಪುರುಷಾರ್ಥ ಮಾಡಿ ಅವರ ಸಿಂಹಾಸನದ ಮೇಲೆ ಅವಶ್ಯವಾಗಿ ಕುಳಿತುಕೊಳ್ಳುತ್ತೇವೆ. ಮಮ್ಮಾ-ಬಾಬಾ ರಾಜ ರಾಜೇಶ್ವರ-ರಾಜ ರಾಜೇಶ್ವರಿಯಾಗುತ್ತಾರೆ ಅಂದಮೇಲೆ ನಾವೂ ಆಗುತ್ತೇವೆ ಎಂದು ಹೇಳುತ್ತೀರಿ. ಪರೀಕ್ಷೆಯಂತೂ ಎಲ್ಲರಿಗೂ ಒಂದೇ ಆಗಿದೆ. ನಿಮಗೆ ಬಹಳ ಸ್ವಲ್ಪವೇ ಕಲಿಸಲಾಗುತ್ತದೆ, ಕೇವಲ ತಂದೆಯನ್ನು ನೆನಪು ಮಾಡಿರಿ, ಇದಕ್ಕೇ ಸಹಜ ರಾಜಯೋಗ ಬಲವೆಂದು ಹೇಳಲಾಗುತ್ತದೆ. ನೀವು ತಿಳಿದುಕೊಳ್ಳುತ್ತೀರಿ, ಯೋಗದಿಂದ ಬಹಳ ಬಲ ಸಿಗುತ್ತದೆ, ನಾವು ಯಾವುದೇ ವಿಕರ್ಮ ಮಾಡಿದರೆ ಬಹಳ ಶಿಕ್ಷೆಯನ್ನು ಅನುಭವಿಸುತ್ತೇವೆ, ಪದವಿ ಭ್ರಷ್ಟರಾಗುತ್ತೀರಿ. ನೆನಪಿನಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ.
ನೀವು ತಿಳಿದುಕೊಂಡಿದ್ದೀರಿ – ನಾವೀಗ ಪಾವನ ಪ್ರಪಂಚಕ್ಕೆ ಹೋಗುತ್ತಿದ್ದೇವೆ. ಯಾರು ಬ್ರಾಹ್ಮಣರಾಗುವರೋ ಅವರೇ ನಿಮಿತ್ತರಾಗುವರು. ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗದ ವಿನಃ ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತಂದೆಯು ಮಕ್ಕಳನ್ನು ಆಸ್ತಿ ಕೊಡುವುದಕ್ಕಾಗಿಯೇ ರಚಿಸುತ್ತಾರೆ. ನಾವಂತೂ ಶಿವ ತಂದೆಯ ಮಕ್ಕಳಾಗಿ ಬಿಟ್ಟಿದ್ದೇವೆ. ಅವರು ಹೊಸ ಸೃಷ್ಟಿಯನ್ನು ರಚಿಸುವುದೇ ಮಕ್ಕಳಿಗೆ ಆಸ್ತಿಯನ್ನು ಕೊಡುವುದಕ್ಕಾಗಿ. ಶರೀರಧಾರಿಗಳಿಗೇ ಆಸ್ತಿಯನ್ನು ಕೊಡುತ್ತಾರೆ. ಆತ್ಮಗಳಂತೂ ಮೇಲಿರುತ್ತಾರೆ. ಅಲ್ಲಿ ಆಸ್ತಿ ಅಥವಾ ಪ್ರಾಲಬ್ಧದ ಮಾತಿರುವುದಿಲ್ಲ. ನೀವೀಗ ಪುರುಷಾರ್ಥ ಮಾಡಿ ಪ್ರಾಲಬ್ಧವನ್ನು ಪಡೆಯುತ್ತಿದ್ದೀರಿ, ಇದು ಪ್ರಪಂಚದವರಿಗೆ ಗೊತ್ತಿಲ್ಲ. ಈಗ ಸಮಯವು ಸಮೀಪಿಸುತ್ತಾ ಹೋಗುತ್ತಿದೆ. ಒಂದುವೇಳೆ ಇಂತಹವರು ನಮ್ಮನ್ನು ಈ ರೀತಿ ಮಾಡಿದರೆ ನಾವು ಒಮ್ಮೆಲೆ ಅವರನ್ನು ಹಾರಿಸಿ ಬಿಡುತ್ತೇವೆ ಎಂದು ಸೂಚನೆ ಕೊಡುತ್ತಿರುತ್ತಾರೆ, ಹಾರಿಸುವ ತಯಾರಿಗಳಾಗುತ್ತಿವೆ. ಬಾಂಬುಗಳನ್ನು ಯಾರು ಸುಮ್ಮನೆ ಇಟ್ಟುಕೊಳ್ಳುವುದಿಲ್ಲ, ಬಹಳ ತಯಾರಿಗಳು ನಡೆಯುತ್ತಿದೆ. ಬ್ರಿಟೀಷ್ ಸರ್ಕಾರದ ಸಮಯದಲ್ಲಿ ಪಾಕೀಸ್ತಾನ, ಹಿಂದೂಸ್ತಾನ ಇತ್ತೆ? ಯಾದವರ ಯುದ್ಧವಾಯಿತೆಂದು ಬರೆಯಲ್ಪಟ್ಟಿದೆ, ಪಾಂಡವರು ಮತ್ತು ಕೌರವರ ಯುದ್ಧವಾಗಲಿಲ್ಲ, ಯಾದವರು ಹೊಡೆದಾಡುತ್ತಿದ್ದಾರೆ. ಬಾಂಬುಗಳೂ ತಯಾರಾಗಿವೆ. ಈಗ ತಂದೆಯು ನಮಗೆ ಆದೇಶ ನೀಡುತ್ತಾರೆ. ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ಇಲ್ಲದಿದ್ದರೆ ಅಂತಿಮದಲ್ಲಿ ಬಹಳ ಅಳಬೇಕಾಗುವುದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಕೋಪದಲ್ಲಿ ಹೋಗಿ ಮುಳುಗಿ ಸಾಯುತ್ತಾರೆ, ಇಲ್ಲಿ ಕೋಪದ ಮಾತಿಲ್ಲ. ಅಂತಿಮದಲ್ಲಿ ನಿಮಗೆ ಬಹಳ ಸಾಕ್ಷಾತ್ಕಾರಗಳಾಗುತ್ತವೆ. ನಾವು ಏನೇನಾಗುತ್ತೇವೆ ಎಂಬುದೂ ಸಹ ಅರ್ಥವಾಗಿ ಬಿಡುತ್ತದೆ. ಪುರುಷಾರ್ಥ ಮಾಡಿಸುವುದೇ ತಂದೆಯ ಕರ್ತವ್ಯವಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಕರ್ಮ ಮಾಡುತ್ತಾ ನೆನಪು ಮಾಡುವುದನ್ನು ಮರೆತು ಹೋಗುತ್ತೀರಿ ಅಥವಾ ಬಿಡುವು ಸಿಗುವುದಿಲ್ಲವೆಂದರೆ ಸಮಯ ತೆಗೆದು ಕುಳಿತು ತಂದೆಯನ್ನು ನೆನಪು ಮಾಡಿರಿ. ಪರಸ್ಪರ ನೀವು ಮಿಲನ ಮಾಡುತ್ತೀರೆಂದರೂ ಈ ಪ್ರಯತ್ನ ಪಡಿ, ನಾವು ತಂದೆಯನ್ನು ನೆನಪು ಮಾಡಬೇಕು, ಎಲ್ಲರೂ ಸೇರಿ ಕುಳಿತುಕೊಂಡಾಗ ಚೆನ್ನಾಗಿ ನೆನಪು ಮಾಡಬಹುದು. ಸಂಘಟನೆಯ ಸಹಯೋಗ ಸಿಗುವುದು. ಮೂಲ ಮಾತಾಗಿದೆ, ತಂದೆಯನ್ನು ನೆನಪು ಮಾಡುವುದು. ಇಲ್ಲಿ ಬರುವುದಾದರೆ ಬನ್ನಿ ಅಥವಾ ಬರದಿದ್ದರೂ ಸಹ ತಂದೆಯನ್ನು ನೆನಪು ಮಾಡುತ್ತಾ ಇರಿ. ಹೇಗೆ ಯಾರಾದರೂ ವಿದೇಶಕ್ಕೆ ಹೋಗುತ್ತಾರೆಂದರೆ ಅವರು ಅಷ್ಟು ದೂರದಿಂದ ಬರುವುದಕ್ಕೆ ಆಗುವುದಿಲ್ಲ. ಅಲ್ಲಿಯೂ ಸಹ ಕೇವಲ ಒಂದು ಮಾತನ್ನು ನೆನಪಿಟ್ಟುಕೊಳ್ಳಿ. ತಂದೆಯ ನೆನಪಿನಿಂದಲೇ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ತಂದೆಯು ತಿಳಿಸುತ್ತಾರೆ – ಒಂದು ಮಾತನ್ನು ನೆನಪಿಟ್ಟುಕೊಳ್ಳಿ, ತಂದೆಯನ್ನು ನೆನಪು ಮಾಡಿರಿ. ತಂದೆಯು ತಿಳಿಸುತ್ತಾರೆ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ವಿಶ್ವದ ಮಾಲೀಕರಾಗುತ್ತೀರಿ. ಮೂಲ ಮಾತು ನೆನಪಿನದಾಗಿದೆ, ಎಲ್ಲಿಯೂ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿರಿ ಕೇವಲ ತಂದೆಯನ್ನು ನೆನಪು ಮಾಡುತ್ತಾ ಇರಿ. ಪವಿತ್ರರಾಗದಿದ್ದರೆ ನೆನಪು ಮಾಡಲು ಆಗುವುದಿಲ್ಲ. ಎಲ್ಲರೂ ಬಂದು ತರಗತಿಯಲ್ಲಿ ಓದುತ್ತೇವೆಂದಲ್ಲ, ಮಂತ್ರವನ್ನು ತೆಗೆದುಕೊಂಡ ಮೇಲೆ ಭಲೆ ಎಲ್ಲಿಯೇ ಹೋಗಿ ಓದಿರಿ. ಸತೋಪ್ರಧಾನರಾಗುವ ಮಾರ್ಗವನ್ನು ತಂದೆಯು ತಿಳಿಸಿದ್ದಾರೆ. ವಾಸ್ತವದಲ್ಲಿ ಸೇವಾಕೇಂದ್ರಕ್ಕೆ ಬರುವುದರಿಂದ ಹೊಸ-ಹೊಸ ವಿಚಾರಗಳನ್ನು ಕೇಳುತ್ತಾ ಇರುತ್ತೀರಿ. ಒಂದುವೇಳೆ ಯಾವುದೇ ಕಾರಣದಿಂದ ಬರಲು ಆಗದೇ ಇದ್ದರೆ ಉದಾ: ಮಳೆ ಬರುತ್ತದೆ ಅಥವಾ ಕರ್ಫ್ಯೂ ಆಗುತ್ತದೆ, ಯಾರೂ ಹೊರಗೆ ಬರಲು ಸಾಧ್ಯವಾಗದಿದ್ದಾಗ ಏನು ಮಾಡುವಿರಿ? ಆದ್ದರಿಂದ ತಂದೆಯು ತಿಳಿಸುತ್ತಾರೆ – ಪರವಾಗಿಲ್ಲ, ಎಲ್ಲಿದ್ದರೂ ಸಹ ನೀವು ನೆನಪಿನಲ್ಲಿರಿ. ನಡೆಯುತ್ತಾ-ತಿರುಗಾಡುತ್ತಾ ನೆನಪಿನಲ್ಲಿರಿ, ಅನ್ಯರಿಗೆ ಇದನ್ನೇ ಹೇಳಿರಿ – ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ದೇವತೆಗಳಾಗಿ ಬಿಡುತ್ತೀರಿ. ಎರಡೇ ಅಕ್ಷರಗಳಿವೆ.
ತಂದೆಯು ಹೇಳುತ್ತಾರೆ – ಮಕ್ಕಳೇ, ಬಾಲ್ಯವನ್ನು ಮರೆಯಬೇಡಿ. ಒಂದುವೇಳೆ ತಂದೆಯನ್ನು ಮರೆತರೆ ಇಂದು ನಗುತ್ತೀರಿ ನಾಳೆ ಅಳಬೇಕಾಗುವುದು. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಸ್ವರ್ಗದಲ್ಲಂತೂ ಹೋಗುತ್ತೇವೆ ಅಲ್ಲವೆ. ಅಂದಮೇಲೆ ಅದೃಷ್ಟದಲ್ಲಿ ಏನಿದ್ದರೆ ಅದೇ ಆಗುವುದೆಂದು ಅನೇಕರು ಹೇಳುತ್ತಾರೆ. ಅದಕ್ಕೆ ಯಾರೂ ಪುರುಷಾರ್ಥ ಮಾಡುವುದು ಎಂದು ಹೇಳುವುದಿಲ್ಲ. ಮನುಷ್ಯರು ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿಯೇ ಪುರುಷಾರ್ಥ ಮಾಡುತ್ತಾರೆ, ಈಗ ತಂದೆಯ ಬಳಿ ಶ್ರೇಷ್ಠ ಪದವಿ ಸಿಗುತ್ತದೆ ಅಂದಮೇಲೆ ಏಕೆ ಹುಡುಗಾಟಿಕೆ ಮಾಡುವಿರಿ? ಶಾಲೆಯಲ್ಲಿ ಯಾರು ಓದುವುದಿಲ್ಲವೋ ಅವರು ವಿದ್ಯಾವಂತರ ಮುಂದೆ ತಲೆ ಬಾಗಬೇಕಾಗುವುದು. ತಂದೆಯನ್ನು ಪೂರ್ಣ ನೆನಪು ಮಾಡದಿದ್ದರೆ ಹೋಗಿ ಪ್ರಜೆಗಳಿಗೂ ನೌಕರ-ಚಾಕರರಾಗುತ್ತೀರಿ. ಇದರಲ್ಲಿಯೇ ಖುಷಿಯಾಗಿ ಬಿಡಬಾರದು. ಆದ್ದರಿಂದ ತಂದೆಯು ತಿಳಿಸುತ್ತಾರೆ, ಮಧುರಾತಿ ಮಧುರ ಮಕ್ಕಳು ಸನ್ಮುಖದಲ್ಲಿ ರಿಫ್ರೆಶ್ ಆಗಿ ಹೋಗುತ್ತೀರಿ. ಕೆಲವರು ಬಂಧನದಲ್ಲಿದ್ದಾರೆ, ಅವರು ಮನೆಯಲ್ಲಿ ಕುಳಿತೇ ನೆನಪು ಮಾಡುತ್ತಾ ಇರಿ ಪರವಾಗಿಲ್ಲ. ನಿಮಗೆ ಎಷ್ಟೊಂದು ಸಹಜವಾಗಿ ತಿಳಿಸುತ್ತೇನೆ, ಮೃತ್ಯು ಸನ್ಮುಖದಲ್ಲಿ ನಿಂತಿದೆ. ಆಕಸ್ಮಿಕವಾಗಿಯೇ ಯುದ್ಧವು ಪ್ರಾರಂಭವಾಗಿ ಬಿಡುವುದು. ಸ್ವಲ್ಪ ಗಡಿ ಬಿಡಿ ಮಾಡಿದರೂ ಸಹ ನಾವು ಈ ರೀತಿ ಮಾಡಿ ಬಿಡುತ್ತೇವೆ ಎಂದು ಒಬ್ಬರು ಇನ್ನೊಬ್ಬರಿಗೆ ಹೇಳುತ್ತಾರೆ, ಮೊದಲೇ ಹೇಳಿ ಬಿಡುತ್ತಾರೆ. ಬಾಂಬುಗಳ ಗರ್ವವು ಬಹಳಷ್ಟಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಬಹುಷಃ ಯೋಗ ಬಲದಲ್ಲಿ ಇನ್ನೂ ಅಷ್ಟು ತೀಕ್ಷ್ಣವಾಗಿಲ್ಲ. ಆದ್ದರಿಂದ ಪುರುಷಾರ್ಥಕ್ಕೆ ಮೊದಲೇ ಯುದ್ಧವಾಗುವಂತಾಗಬಾರದು ಆದರೆ ಡ್ರಾಮಾನುಸಾರ ಈ ರೀತಿ ಆಗುವುದೇ ಇಲ್ಲ ಏಕೆಂದರೆ ಮಕ್ಕಳು ಪೂರ್ಣ ಆಸ್ತಿಯನ್ನು ತೆಗೆದುಕೊಂಡಿಲ್ಲ. ಆದ್ದರಿಂದ ನಿಶ್ಚಯವಾಗುತ್ತದೆ, ಒಂದುವೇಳೆ ಯುದ್ಧವಾಗಲೂಬಹುದು ಆದರೂ ಸಹ ಸ್ವಲ್ಪ ನಡೆದು ಮತ್ತೆ ನಿಂತು ಹೋಗುತ್ತದೆ ಏಕೆಂದರೆ ಈಗಿನ್ನೂ ರಾಜಧಾನಿಯು ಸ್ಥಾಪನೆಯಾಗಿಲ್ಲ, ಸಮಯ ಬೇಕಾಗಿದೆ. ಪುರುಷಾರ್ಥ ಮಾಡಿಸುತ್ತಾ ಇರುತ್ತಾರೆ. ಯಾವ ಸಮಯದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆಯಿದೆ. ವಿಮಾನವು ಬೀಳಬಹುದು, ರೈಲು ಗಾಡಿಯು ಬೀಳಬಹುದು. ಮೃತ್ಯುವು ಎಷ್ಟು ಸಹಜವಾಗಿ ನಿಂತಿದೆ! ಭೂಮಿಯೂ ಸಹ ಅಲುಗಾಡುತ್ತಿರುತ್ತದೆ. ಎಲ್ಲದಕ್ಕಿಂತ ಹೆಚ್ಚು ಕೆಲಸವನ್ನು ಭೂಕಂಪವು ಮಾಡಬೇಕಾಗಿದೆ ಆದರೆ ವಿನಾಶವಾಗುವ ಮೊದಲೇ ನೀವು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಿರಿ. ಬಾಬಾ, ತಮ್ಮ ವಿನಃ ಮತ್ತ್ಯಾರೂ ನನ್ನವರಿಲ್ಲ, ಹೀಗೆ ಕೇವಲ ತಂದೆಯನ್ನೇ ನೆನಪು ಮಾಡುತ್ತಾ ಇರಿ. ಎಷ್ಟು ಸಹಜ ರೀತಿಯಿಂದ ಚಿಕ್ಕ ಚಿಕ್ಕ ಮಕ್ಕಳಿಗೆ ತಿಳಿಸುವಂತೆ ತಿಳಿಸುತ್ತಾರೆ – ಮಕ್ಕಳೇ, ಮತ್ತ್ಯಾವುದೇ ಕಷ್ಟ ಕೊಡುವುದಿಲ್ಲ, ಕೇವಲ ನೆನಪು ಮಾಡಿರಿ ಮತ್ತು ಕಾಮ ಚಿತೆಯ ಮೇಲೆ ಕುಳಿತು ನೀವು ಸುಟ್ಟು ಹೋಗಿದ್ದೀರಿ. ಈಗ ಜ್ಞಾನ ಚಿತೆಯ ಮೇಲೆ ಕುಳಿತು ಪವಿತ್ರರಾಗಿರಿ. ತಮ್ಮ ಉದ್ದೇಶವೇನೆಂದು ನಿಮ್ಮೊಂದಿಗೆ ಯಾರಾದರೂ ಕೇಳುತ್ತಾರೆ ಆಗ ತಿಳಿಸಿರಿ, ಯಾರು ಎಲ್ಲರ ತಂದೆಯಾಗಿದ್ದಾರೆಯೋ ಅವರು ತಿಳಿಸುತ್ತಿದ್ದಾರೆ – ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ, ಈಗ ತಂದೆಯು ತಿಳಿಸುತ್ತಾರೆ – ಕೇವಲ ನನ್ನನ್ನು ನೆನಪು ಮಾಡಿದರೆ ತುಕ್ಕು ಕಳೆಯುವುದು. ಇಷ್ಟು ಸಂದೇಶವನ್ನಂತೂ ಕೊಡುತ್ತೀರಲ್ಲವೆ. ಸ್ವಯಂ ನೆನಪು ಮಾಡಿದಾಗಲೇ ಅನ್ಯರಿಂದಲೂ ನೆನಪು ಮಾಡಿಸಲು ಸಾಧ್ಯ. ಅನ್ಯರಿಗೂ ರುಚಿಯಿಂದ ಹೇಳುತ್ತೀರಿ, ಇಲ್ಲದಿದ್ದರೆ ಅದು ಅಂತರಾಳದಿಂದ ಹೊರಡುವುದಿಲ್ಲ. ತಂದೆಯು ತಿಳಿಸುತ್ತಾರೆ – ಎಲ್ಲಿಯಾದರೂ ಇರಿ, ಎಷ್ಟು ಸಾಧ್ಯವೋ ಕೇವಲ ನನ್ನನ್ನು ನೆನಪು ಮಾಡಿರಿ. ಭಲೆ ಆಹಾರ-ಪಾನೀಯಗಳ ವಿಷಯದಲ್ಲಿ ಸ್ವಲ್ಪ ಕಷ್ಟವಾಗಬಹುದು ಆದರೆ ಮನೆಯಲ್ಲಿಯೇ ಇರಿ, ಮನೆಯಲ್ಲಿದ್ದು ತಂದೆಯನ್ನು ನೆನಪು ಮಾಡಿರಿ. ಯಾರು ಸಿಕ್ಕಿದರೂ ಅವರಿಗೆ ಇದೇ ಶಿಕ್ಷಣವನ್ನು ಕೊಡಿ – ಮೃತ್ಯು ಸನ್ಮುಖದಲ್ಲಿ ನಿಂತಿದೆ.
ತಂದೆಯು ಹೇಳುತ್ತಾರೆ – ನೀವೆಲ್ಲರೂ ತಮೋಪ್ರಧಾನ, ಪತಿತರಾಗಿ ಬಿಟ್ಟಿದ್ದೀರಿ. ಈಗ ನನ್ನನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಆತ್ಮವೇ ಪತಿತನಾಗಿದೆ, ಸತ್ಯಯುಗದಲ್ಲಿ ಪಾವನ ಆತ್ಮರಿರುತ್ತಾರೆ. ತಂದೆಯ ನೆನಪಿನಿಂದಲೇ ಆತ್ಮವು ಪಾವನವಾಗುವುದು, ಮತ್ತ್ಯಾವುದೇ ಉಪಾಯವಿಲ್ಲ. ಈ ಸಂದೇಶವನ್ನು ಎಲ್ಲರಿಗೂ ಕೊಡುತ್ತಾ ಹೋಗಿ ಆಗ ಅನೇಕರ ಕಲ್ಯಾಣ ಮಾಡುವಿರಿ ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಈಗ ಪುರುಷೋತ್ತಮ ಮಾಸವಾಗಿದೆ. ಹೋಗಿ ಎಲ್ಲರಿಗೆ ತಿಳಿಸಿರಿ – ಎಲ್ಲರಿಗಿಂತ ಪುರುಷೋತ್ತಮರು ಯಾರು? ಎಂದು. ಸತ್ಯಯುಗದ ಆದಿಯಲ್ಲಿ ಈ ಲಕ್ಷ್ಮೀ-ನಾರಾಯಣರು ಪುರುಷೋತ್ತಮರಾಗಿದ್ದರು, ಇವರನ್ನು ಇಷ್ಟು ಪುರುಷೋತ್ತಮರನ್ನಾಗಿ ಮಾಡುವವರು ಅರ್ಥಾತ್ ಸ್ವರ್ಗದ ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ಎಲ್ಲಾ ಆತ್ಮರನ್ನೂ ಪಾವನ ಮಾಡುವವರು ಪತಿತ-ಪಾವನ ತಂದೆಯೇ ಆಗಿದ್ದಾರೆ. ಎಲ್ಲರಿಗಿಂತ ಉತ್ತಮರಿಗಿಂತ ಉತ್ತಮ ಪುರುಷರನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಯಾರು ಪೂಜ್ಯರಾಗಿದ್ದರೋ ಅವರೇ ನಂತರ ಪೂಜಾರಿಗಳಾಗಿದ್ದಾರೆ. ರಾವಣ ರಾಜ್ಯದಲ್ಲಿ ನಾವು ಪೂಜಾರಿಗಳಾಗಿರುತ್ತೇವೆ, ರಾಮ ರಾಜ್ಯದಲ್ಲಿ ಪೂಜ್ಯರಾಗುತ್ತೇವೆ. ಈಗ ರಾವಣ ರಾಜ್ಯದ ಅಂತ್ಯವಾಗಿದೆ, ನಾವು ಪೂಜಾರಿಗಳಿಂದ ಮತ್ತೆ ಪೂಜ್ಯರಾಗುತ್ತೇವೆ. ತಂದೆಯನ್ನು ನೆನಪು ಮಾಡುವ ಮಾರ್ಗವನ್ನು ಅನ್ಯರಿಗೂ ತಿಳಿಸಬೇಕಾಗಿದೆ. ವೃದ್ಧರೂ ಸಹ ಈ ಸೇವೆ ಮಾಡಬೇಕು. ಮಿತ್ರ ಸಂಬಂಧಿಗಳಿಗೂ ಸಹ ತಂದೆಯ ಪರಿಚಯ ಕೊಡಿ. ಈ ರೀತಿ ತಿಳಿಸಿರಿ, ಶಿವ ತಂದೆಯು ಹೇಳುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ನಿರಾಕಾರ ಶಿವ ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ, ಅವರು ಎಲ್ಲಾ ಆತ್ಮರಿಗೆ ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ ಆಗ ಸತೋಪ್ರಧಾನರಾಗುವಿರಿ. ಇದನ್ನು ತಿಳಿಸುವುದು ಸಹಜವಲ್ಲವೆ. ವೃದ್ಧರೂ ಸಹ ಈ ಸರ್ವೀಸ್ ಮಾಡಬಹುದು, ಮೂಲ ಮಾತೇ ಇದಾಗಿದೆ. ಎಲ್ಲಿಯೇ ಮದುವೆ-ಮುಂಜಿಗಳಿಗೆ ಹೋಗುತ್ತೀರೆಂದರೆ ಕಿವಿಯಲ್ಲಿ ಈ ಮಾತನ್ನು ತಿಳಿಸಿರಿ. ಗೀತೆಯ ಭಗವಂತನು ಹೇಳುತ್ತಾರೆ – ನನ್ನನ್ನು ನೆನಪು ಮಾಡಿರಿ ಎಂದು. ಈ ಮಾತನ್ನು ಎಲ್ಲರೂ ಇಷ್ಟ ಪಡುತ್ತಾರೆ. ಹೆಚ್ಚಿನದಾಗಿ ಹೇಳುವ ಅವಶ್ಯಕತೆಯಿಲ್ಲ. ಕೇವಲ ತಂದೆಯ ಸಂದೇಶವನ್ನು ಕೊಡಬೇಕಾಗಿದೆ – ನನ್ನನ್ನು ನೆನಪು ಮಾಡಿರಿ ಎಂದು ತಂದೆಯು ಹೇಳುತ್ತಾರೆ.
ಒಳ್ಳೆಯದು. ಭಗವಂತನು ಪ್ರೇರಣೆ ಕೊಡುತ್ತಾರೆಂದೇ ತಿಳಿದುಕೊಳ್ಳಿ, ಸ್ವಪ್ನದಲ್ಲಿ ಸಾಕ್ಷಾತ್ಕಾರವಾಗುತ್ತದೆ ಅಥವಾ ಸದ್ದು ಕೇಳಿ ಬರುತ್ತದೆ – ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುವಿರಿ. ನೀವು ಕೇವಲ ಇದೇ ಚಿಂತನೆ ಮಾಡುತ್ತಾ ಇರಿ, ಇದರಿಂದ ದೋಣಿಯು ಪಾರಾಗುವುದು. ನಾವು ಪ್ರತ್ಯಕ್ಷದಲ್ಲಿ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಮತ್ತು ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಅಂದಮೇಲೆ ಖುಷಿಯಿರಬೇಕಲ್ಲವೆ. ತಂದೆಯನ್ನು ಮರೆಯುವುದರಿಂದಲೇ ಕಷ್ಟವಾಗುತ್ತದೆ. ನನ್ನನ್ನು ನೆನಪು ಮಾಡಿರಿ ಎಂದು ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ, ಇದರಿಂದ ಇವರಿಗೆ ಒಳ್ಳೆಯ ಮಾರ್ಗವು ಸಿಕ್ಕಿದೆಯೆಂದು ಎಲ್ಲರೂ ತಿಳಿದುಕೊಳ್ಳುವರು. ಈ ಮಾರ್ಗವನ್ನು ಎಂದೂ ಯಾರೂ ತಿಳಿಸಲು ಸಾಧ್ಯವಿಲ್ಲ. ಮುಂದೆ ಇಂತಹ ಸಮಯವು ಬರುವುದು ನೀವು ಮನೆಯಿಂದ ಹೊರ ಬರುವುದಕ್ಕೇ ಸಾಧ್ಯವಾಗುವುದಿಲ್ಲ. ತಂದೆಯನ್ನು ನೆನಪು ಮಾಡುತ್ತಾ -ಮಾಡುತ್ತಾ ಶರೀರ ಬಿಡುತ್ತೀರಿ. ಅಂತ್ಯ ಕಾಲದಲ್ಲಿ ಯಾರು ಶಿವ ತಂದೆಯ ಸ್ಮರಣೆ ಮಾಡಿದರೋ…. ಅಂತಹವರು ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಬರುತ್ತಾರೆ, ಮತ್ತೆ ಮತ್ತೆ ರಾಜ್ಯ ಪದವಿಯನ್ನು ಪಡೆಯುತ್ತಾರೆ. ಆದ್ದರಿಂದ ಕೇವಲ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿರಿ. ನೆನಪು ಮಾಡದೇ ಹೇಗೆ ಪ್ರೀತಿ ಮಾಡುವಿರಿ? ಸುಖವು ಸಿಗುತ್ತದೆ ಆದ್ದರಿಂದಲೇ ನೆನಪು ಮಾಡಲಾಗುತ್ತದೆಯಲ್ಲವೆ. ದುಃಖ ಕೊಡುವವರನ್ನು ನೆನಪು ಮಾಡಲಾಗುವುದಿಲ್ಲ. ತಂದೆಯು ಹೇಳುತ್ತಾರೆ – ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ ಆದ್ದರಿಂದ ನನ್ನನ್ನು ನೆನಪು ಮಾಡಿರಿ, ತಂದೆಯ ಮತದಂತೆ ನಡೆಯಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ವಿದ್ಯೆಯಲ್ಲಿ ಎಂದೂ ಹುಡುಗಾಟಿಕೆ ಮಾಡಬಾರದು. ಯುದ್ಧಕ್ಕೆ ಮೊದಲೇ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ.
2. ಶ್ರೀಮತದಂತೆ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ.
ವರದಾನ:-
ಸಂಗಮಯುಗದಲ್ಲಿ ಪ್ರತಿಯೊಬ್ಬ ಮಗುವಿಗೂ ಜ್ಞಾನದ ಮೂಲಕ ಅವಶ್ಯವಾಗಿ ಯಾವುದಾದರೊಂದು ವಿಶೇಷ ಗುಣವು ಪ್ರಾಪ್ತಿಯಾಗುವುದು ಆದ್ದರಿಂದ ಪವಿತ್ರ ಹಂಸಗಳಾಗಿದ್ದು ಪ್ರತಿಯೊಬ್ಬರ ವಿಶೇಷತೆಯನ್ನು ನೋಡಿ ಹಾಗೂ ವರ್ಣನೆ ಮಾಡಿರಿ. ಯಾವುದೇ ಸಮಯದಲ್ಲಿ ಯಾರಲ್ಲಿಯೇ ಬಲಹೀನತೆಯನ್ನು ನೋಡುತ್ತಾ ಅಥವಾ ಕೇಳುತ್ತೀರೆಂದರೆ ತಿಳಿಯಿರಿ – ಇದು ಇವರ ಬಲಹೀನತೆಯಲ್ಲ, ನನ್ನದು ಏಕೆಂದರೆ ನಾವೆಲ್ಲರೂ ಒಬ್ಬರೇ ತಂದೆಯ ಮಕ್ಕಳು, ಒಂದೇ ಪರಿವಾರದವರು, ಒಂದೇ ಮಾಲೆಯ ಮಣಿಗಳಾಗಿದ್ದೇವೆ. ಯಾವ ರೀತಿ ನಮ್ಮ ಬಲಹೀನತೆಯನ್ನು ಪ್ರಸಿದ್ಧ ಮಾಡಬಾರದೆಂದು ಬಯಸುತ್ತೀರಿ, ಹಾಗೆಯೇ ಅನ್ಯರ ಬಲಹೀನತೆಯ ವರ್ಣನೆಯನ್ನೂ ಮಾಡಬಾರದು. ಹೋಲಿ ಹಂಸ ಎಂದರೆ ವಿಶೇಷತೆಗಳನ್ನೇ ಗ್ರಹಿಸುವುದು ಮತ್ತು ಬಲಹೀನತೆಗಳನ್ನು ನಶಿಸುವುದು.
ಸ್ಲೋಗನ್:-
➤ Email me Murli: Receive Daily Murli on your email. Subscribe!