12 April 2022 KANNADA Murli Today | Brahma Kumaris

Read and Listen today’s Gyan Murli in Kannada

11 April 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ದುಃಖಹರ್ತ-ಸುಖಕರ್ತ ತಂದೆಯ ಮಕ್ಕಳಾಗಿದ್ದೀರಿ, ನೀವು ಮನಸಾ-ವಾಚಾ-ಕರ್ಮಣಾ ಯಾರಿಗೂ ದುಃಖ ಕೊಡಬಾರದು, ಎಲ್ಲರಿಗೂ ಸುಖವನ್ನು ಕೊಡಬೇಕಾಗಿದೆ”

ಪ್ರಶ್ನೆ:: -

ನೀವು ಮಕ್ಕಳು ಮನುಷ್ಯರಿಂದ ದೇವತೆಯಾಗುತ್ತೀರಿ, ಆದ್ದರಿಂದ ನಿಮ್ಮ ಮುಖ್ಯ ಧಾರಣೆ ಏನಿರಬೇಕು?

ಉತ್ತರ:-

ನಿಮ್ಮ ಮುಖದಿಂದ ಯಾವ ಮಾತೇ ಬರಲಿ, ಆ ಒಂದೊಂದು ಮಾತು ಮನುಷ್ಯರನ್ನು ವಜ್ರ ಸಮಾನ ಮಾಡುವುದಾಗಿರಬೇಕು. ನೀವು ತುಂಬಾ ಮಧುರರಾಗಬೇಕು, ಎಲ್ಲರಿಗೂ ಸುಖವನ್ನು ಕೊಡಬೇಕಾಗಿದೆ. ಯಾರಿಗೂ ದುಃಖ ಕೊಡುವಂತಹ ವಿಚಾರ ಬರಬಾರದು. ಏಕೆಂದರೆ ನೀವೀಗ ಸತ್ಯಯುಗೀ ಸ್ವರ್ಗದ ಪ್ರಪಂಚದಲ್ಲಿ ಹೋಗುತ್ತೀರಿ, ಅಲ್ಲಿ ಸದಾ ಸುಖವೇ ಸುಖವಿರುತ್ತದೆ. ದುಃಖದ ಹೆಸರೇ ಇರುವುದಿಲ್ಲ. ಈಗ ನಿಮಗೆ ತಂದೆಯ ಶ್ರೀಮತ ಸಿಕ್ಕಿದೆ – ಮಕ್ಕಳೇ, ತಂದೆಯ ಸಮಾನ ದುಃಖಹರ್ತಾ, ಸುಖಕರ್ತಾ ಆಗಿ. ನಿಮ್ಮ ವ್ಯಾಪಾರವೇ ಎಲ್ಲರ ದುಃಖ ದೂರ ಮಾಡಿ ಸುಖ ಕೊಡುವುದಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಈ ಪಾಪದ ಪ್ರಪಂಚದಿಂದ ..

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ನಾವು ಪುರುಷಾರ್ಥ ಮಾಡುತ್ತಿರುವುದೇ ಇಂತಹ ಪ್ರಪಂಚದಲ್ಲಿ ಹೋಗುವುದಕ್ಕೋಸ್ಕರ ಎಂದು ನೀವು ತಿಳಿದುಕೊಂಡಿದ್ದೀರಿ. ಅಲ್ಲಿ ಒಂದಂತೂ ಮಾಯೆ ಇರುವುದೇ ಇಲ್ಲ ಮತ್ತು ಯಾರು ಯಾರಿಗೂ ಎಂದೂ ಮನಸಾ-ವಾಚಾ-ಕರ್ಮಣಾ ದುಃಖ ಕೊಡುವುದಿಲ್ಲ. ಆದ್ದರಿಂದ ಅದರ ಹೆಸರೇ ಆಗಿದೆ ಸ್ವರ್ಗ, ಪ್ಯಾರಡೈಸ್, ವೈಕುಂಠ ಮತ್ತು ಅಲ್ಲಿನ ಮಾಲೀಕರು ಲಕ್ಷ್ಮೀ-ನಾರಾಯಣರ ಚಿತ್ರವನ್ನು ತೋರಿಸಲಾಗಿದೆ. ಪ್ರಜೆಗಳದಂತು ಚಿತ್ರವನ್ನು ತೋರಿಸುವುದಿಲ್ಲ. ಲಕ್ಷ್ಮೀ-ನಾರಾಯಣರ ಚಿತ್ರವಿದೆ, ಇದರಿಂದ ಸಿದ್ಧವಾಗುತ್ತದೆ ಅವರ ರಾಜಧಾನಿಯಲ್ಲಿ ಅವಶ್ಯವಾಗಿ ಇಂತಹ ಮನುಷ್ಯರೇ ಇರುತ್ತಾರೆ. ಭಾರತದಲ್ಲಿಯೇ ಇವರು ಸ್ವರ್ಗದ ಮಾಲೀಕರಾಗಿದ್ದರು, ಅಲ್ಲಿ ದುಃಖದ ಹೆಸರೇ ಇರುವುದಿಲ್ಲ. ಮನಸಾ-ವಾಚಾ-ಕರ್ಮಣಾ ಯಾರು ಯಾರಿಗೂ ದುಃಖ ಕೊಡುವುದಿಲ್ಲವೋ ಹಾಗೆಯೇ ತಂದೆಯೂ ಎಂದೂ ಯಾರಿಗೂ ದುಃಖವನ್ನು ಕೊಡುವುದಿಲ್ಲ. ಆದ್ದರಿಂದ ಅವರ ಹೆಸರು ದುಃಖಹರ್ತ-ಸುಖಕರ್ತನೆಂದು ಪ್ರಸಿದ್ಧವಾಗಿದೆ. ಈಗ ಅವರೇ ಕುಳಿತು ನಾವು ಮಕ್ಕಳಿಗೆ ಓದಿಸುತ್ತಾರೆ. ಈ ಪ್ರಪಂಚದಲ್ಲಂತು ಎಲ್ಲರೂ ಮನಸಾ-ವಾಚಾ-ಕರ್ಮಣಾ ದುಃಖ ಕೊಡುವವರಾಗಿದ್ದಾರೆ ಆದರೆ ಅಲ್ಲಿ ಮನಸಾ-ವಾಚಾ-ಕರ್ಮಣಾ ಸುಖ ಕೊಡುವವರಾಗಿರುತ್ತಾರೆ. ಪರಮಪಿತ ಪರಮಾತ್ಮನ ವಿನಃ ಯಾರೂ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ. ಸ್ವರ್ಗವಂತು ಅವಶ್ಯವಾಗಿ ಇತ್ತು. ಇಲ್ಲಿಯೂ ನೋಡಿ, ವಿಜ್ಞಾನದಿಂದ ಏನೇನು ಆಗುತ್ತಿರುತ್ತದೆ. ವಿಮಾನ, ಮೋಟರ್, ಮಹಲು ಮುಂತಾದವುಗಳನ್ನು ಹೇಗೆ ತಯಾರು ಮಾಡುತ್ತಾರೆ. ಸತ್ಯಯುಗದಲ್ಲಿಯೂ ವಿಜ್ಞಾನವೆಲ್ಲವೂ ಕೆಲಸಕ್ಕೆ ಬರುತ್ತದೆ ಆದರೆ ಯಾವುದೇ ಭೂಮಿಯ ಒಳಗಿಂದ ವೈಕುಂಠ ಬರುವುದಿಲ್ಲ. ಹೇಗೆ ಚಿನ್ನದ ದ್ವಾರಿಕಾ ಸಮುದ್ರದ ಕೆಳಗಡೆ ಹೋಯಿತೆಂದು ತೋರಿಸುತ್ತಾರೆ. ಕೆಳಗಡೆ ಹೋದ ದ್ವಾರಿಕವಂತು ಕರಗಿ ಸಮಾಪ್ತಿಯಾಗುವುದು. ಈಗ ಎಲ್ಲವೂ ಹೊಸದಾಗಿ ಆಗಬೇಕಾಗಿರುವುದರಿಂದ ನಾವೀಗ ತಂದೆಯಿಂದ ಸ್ವರ್ಗದ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೇವೆ. ಆ ಕಾರಣ ಮನಸಾ-ವಾಚಾ-ಕರ್ಮಣಾ ಯಾರ ಪ್ರತಿಯೂ ಬುದ್ಧಿಯಲ್ಲಿ ದುಃಖ ಕೊಡುವಂತಹ ವಿಚಾರ ಬರಲೇಬಾರದು. ಭಲೆ ಇದು ಮಾಯೆಯ ರಾಜ್ಯವೇ ಆಗಿದೆ ಆದ್ದರಿಂದ ಮನಸ್ಸಿನ ಬಿರುಗಾಳಿಗಳಂತೂ ಬರುತ್ತವೆ ಆದರೆ ಮನಸ್ಸಿನಲ್ಲಿ ಯಾರಿಗೂ ದುಃಖ ಕೊಡುವಂತಹ ವಿಚಾರವೇ ಬರಬಾರದು. ಈ ಸಮಯದಲ್ಲಂತೂ ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಾರೆ, ಅದನ್ನು ಅವರು ಸುಖವೆಂದು ತಿಳಿದುಕೊಳ್ಳುತ್ತಾರೆ ಆದರೆ ಅದು ದುಃಖವಾಗಿದೆ. ಎಲ್ಲರನ್ನು ತಂದೆಯಿಂದ ಬೇಮುಖರನ್ನಾಗಿ ಮಾಡುತ್ತಾರೆ. ಈ ಭಕ್ತಿಮಾರ್ಗವೂ ನಾಟಕದಲ್ಲಿ ನಿಗಧಿಯಾಗಿದೆ. ನಾಟಕವನ್ನು ಯಾರೂ ಅರಿತುಕೊಂಡಿಲ್ಲ. ಅವರು ತಿಳಿಯುತ್ತಾರೆ – ನಾವು ಈ ಶಾಸ್ತ್ರ ಮುಂತಾದವುಗಳನ್ನು ತಿಳಿಸುತ್ತೇವೆ. ಭಕ್ತಿಮಾರ್ಗದವರು ತಿಳಿಯುತ್ತಾರೆ – ಇವರು ಶಾಸ್ತ್ರ ಮುಂತಾದವುಗಳನ್ನು ತಿಳಿಸುತ್ತಾರೆ, ಜ್ಞಾನವೂ ಸಹ ಕೊಡುತ್ತಾರೆ. ಜಪ, ತಪ ಮುಂತಾದವುಗಳನ್ನು ಮಾಡುವುದರಿಂದ ಮನುಷ್ಯರು ಮುಕ್ತಿ-ಜೀವನ್ಮುಕ್ತಿ ಪಡೆಯುತ್ತೇವೆಂದು ಅನೇಕ ಪ್ರಕಾರದ ಮಾರ್ಗಗಳನ್ನು ತಿಳಿಸುತ್ತಾರೆ. ಮತ್ತು ಹೇಳುತ್ತಾರೆ ಬಹಳ ಸಮಯದಿಂದ ಭಕ್ತಿ ಮಾಡುತ್ತಾ ಬಂದಿದ್ದೇವೆ. ಆದ್ದರಿಂದಲೇ ಭಗವಂತ ಬಂದಿದ್ದಾರೆಂದು. ನಾವೂ ಹೇಳುತ್ತೇವೆ ಯಾವಾಗ ಭಕ್ತಿಯ ಅಂತ್ಯವಾಗುತ್ತದೆ, ಆಗ ಭಗವಂತ ಬರಬೇಕಾಗುತ್ತದೆ. ಅವರು ಬಂದು ಭಕ್ತಿಯ ಫಲವನ್ನು ಕೊಡುತ್ತಾರೆ ಆದರೆ ಭಕ್ತರೆಲ್ಲರು ಭಕ್ತಿಯ ಸಾಲಿನಲ್ಲಿ ಹೊರಟು ಹೋಗುತ್ತಾರೆ, ಇದಕ್ಕೆ ಜ್ಞಾನವೆಂದು ಹೇಳುವುದಿಲ್ಲ. ಶಾಸ್ತ್ರಗಳ ಜ್ಞಾನದಿಂದ ಸದ್ಗತಿಯಾಗುವುದಿಲ್ಲ ಏಕೆಂದರೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಅವರಿಗಿಲ್ಲ. ಈಗ ನಾವು ತಿಳಿದುಕೊಂಡಿದ್ದೇವೆ – ಪ್ರಾಚೀನ ಜ್ಞಾನ ಮತ್ತು ಯೋಗದಿಂದ ಭಾರತ ಸ್ವರ್ಗವಾಗಿತ್ತು ಅಂದಾಗ ಅವಶ್ಯವಾಗಿ ಅಂತಹ ಜ್ಞಾನ ಮತ್ತು ಯೋಗವನ್ನು ಭಗವಂತನೇ ಕಲಿಸುತ್ತಾರೆ. ಮನುಷ್ಯರಂತು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಭಗವಂತನು ಯಾವ ಸಹಜ ರಾಜಯೋಗವನ್ನು ಕಲಿಸಿಕೊಟ್ಟರು ಅದರ ನಂತರವೇ ಈ ಶಾಸ್ತ್ರಗಳೆಲ್ಲಾ ಮಾಡಲ್ಪಟ್ಟಿದೆ. ಇಲ್ಲಂತು ಸ್ವಯಂ ಭಗವಂತನೇ ಕುಳಿತು ಜ್ಞಾನವನ್ನು ತಿಳಿಸುತ್ತಾರೆ. ಗೀತೆಯಲ್ಲಿ ಕೇವಲ ಒಂದು ತಪ್ಪನ್ನು ಮಾಡಿದ್ದಾರೆ. ಭಗವಂತ ಶಿವನ ಬದಲಾಗಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಮತ್ತು ಸಮಯವನ್ನು ಬೇರೆ ಬರೆದು ಬಿಟ್ಟಿದ್ದಾರೆ. ನಾವೀಗ ತಿಳಿದುಕೊಂಡಿದ್ದೇವೆ. ಪರಮಾತ್ಮ ನಮಗೆ ಜ್ಞಾನ ಮತ್ತು ರಾಜಯೋಗವನ್ನು ಕಲಿಸುತ್ತಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನ ಮತ್ತೆ ಯಾವುದೇ ಶಾಸ್ತ್ರದಲ್ಲಿಲ್ಲ. ಕಲ್ಪದ ಆಯಸ್ಸನ್ನೂ ಸಹ ಉದ್ದಗಲ ಮಾಡಿ ಬಿಟ್ಟಿದ್ದಾರೆ. ಮನುಷ್ಯರಂತು ಅದೇ ಶಾಸ್ತ್ರಗಳನ್ನು ಓದುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ – ಇದು ಸೃಷ್ಟಿರೂಪಿ ವೃಕ್ಷವಾಗಿದೆ, ವೃಕ್ಷದಲ್ಲಿ ಮೊದಲು ಸ್ವಲ್ಪ ಎಲೆಗಳು ಮತ್ತೆ ಅದು ದೊಡ್ಡದಾಗುತ್ತಾ ಹೋಗುತ್ತದೆ. ಭಿನ್ನ-ಭಿನ್ನ ಧರ್ಮದ ಎಲೆಗಳನ್ನು ತೋರಿಸಲಾಗಿದೆ. ವಾಸ್ತವದಲ್ಲಿ ಯಾವುದೆಲ್ಲಾ ವೇದ ಶಾಸ್ತ್ರಗಳಿವೆ ಎಲ್ಲವೂ ಭಗವದ್ಗೀತೆಯ ಎಲೆಗಳಾಗಿವೆ ಅರ್ಥಾತ್ ಎಲ್ಲಾ ಶಾಸ್ತ್ರಗಳು ಗೀತೆಯಿಂದ ಹೊರಟಿರುವುದಾಗಿವೆ. ನೀವು ನೋಡುತ್ತೀರಿ ಅವಶ್ಯವಾಗಿ ಹೊಸವೃಕ್ಷದ ಸ್ಥಾಪನೆಯಾಗುತ್ತದೆ. ಕೆಲವರಂತು ಬಿರುಗಾಳಿ ಮುಂತಾದವುಗಳಲ್ಲಿ ಬೇಗಾ ಓಡಿ ಹೋಗುತ್ತಾರೆ, ಬಿದ್ದು ಹೋಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ- ಈಗ ನಮ್ಮ ದೈವಿ ವೃಕ್ಷದ ತಳಪಾಯ ಹಾಕಲಾಗುತ್ತಿದೆ. ಯಾರೆಲ್ಲಾ ಧರ್ಮ ಸ್ಥಾಪಕರಿದ್ದಾರೆ ಅವರು ಇದನ್ನು ತಿಳಿದುಕೊಂಡಿಲ್ಲ – ನಾವು ಕ್ರಿಶ್ಚಯನ್ ಧರ್ಮದ ಅಥವಾ ಇಂತಹ ಧರ್ಮದ ತಳಪಾಯ ಹಾಕುತ್ತೇವೆಂದು. ಇಂತಹವರು ಇಂತಹ ತಳಪಾಯ ಹಾಕಿದರೆಂದು ಅಂತ್ಯದಲ್ಲಿ ಅವರಿಗೆ ಅರ್ಥವಾಗುತ್ತದೆ. ಇಲ್ಲಂತು ಮುಳ್ಳುಗಳನ್ನು ಹೂವುಗಳ ಸಮಾನ ಮಾಡಬೇಕಾಗುತ್ತದೆ. ನಿಮಗೆ ಗೊತ್ತಿದೆ ನಾವೀಗ ದೇವತೆ ಆಗುತ್ತೇವೆ. ಆದ್ದರಿಂದ ಎಲ್ಲರಿಗೂ ಸುಖವನ್ನೇ ಕೊಡಬೇಕಾಗಿದೆ. ಯಾರಿಗೂ ದುಃಖವನ್ನು ಕೊಡುವಂತಹ ವಿಚಾರವೂ ಬರಬಾರದು. ಒಂದೊಂದು ಅಕ್ಷರವೂ ಬಾಯಿಯಿಂದ ಈ ರೀತಿ ಬರಬೇಕು ಆ ಮಾತುಗಳು ಮನುಷ್ಯರನ್ನು ವಜ್ರ ಸಮಾನ ಮಾಡಬೇಕು. ತಂದೆಯು ನಮಗೆ ಜ್ಞಾನವನ್ನು ತಿಳಿಸುತ್ತಾರೆ, ಯಾವ ಜ್ಞಾನವನ್ನು ಧಾರಣೆ ಮಾಡುತ್ತಾ-ಮಾಡುತ್ತಾ ನಾವು ವಜ್ರ ಸಮಾನರಾಗಿ ಬಿಡುತ್ತೇವೆ. ವಾಸ್ತವದಲ್ಲಿ ಟೀಚರ್ ದುಃಖವನ್ನು ಏಕೆ ಕೊಡುತ್ತಾರೆ, ಅವರಂತು ಓದಿಸುತ್ತಾರೆ. ಹಾ! ಒಂದುವೇಳೆ ಒಳ್ಳೆಯ ರೀತಿಯಲ್ಲಿ ಓದದೆ ಇದ್ದರೆ 21 ಜನ್ಮಗಳಿಗೋಸ್ಕರ ನಷ್ಟವಾಗುತ್ತದೆಂದು ತಿಳಿಸುತ್ತಾರೆ. ಈಗಲೇ 21 ಜನ್ಮಗಳಿಗೋಸ್ಕರ ಪುರುಷಾರ್ಥ ಮಾಡಬೇಕಾಗಿದೆ. ಯಾರನ್ನು ಭಕ್ತಿಮಾರ್ಗದಲ್ಲಿ ಹೇ! ಭಗವಂತ ಎಂದು ನೆನಪು ಮಾಡುತ್ತಿದ್ದೆವು ಅಂತಹ ತಂದೆ ಸಿಕ್ಕಿದ್ದಾರೆ. ಸಾಧು-ಸಂತ ಮುಂತಾದವರು ಎಲ್ಲರೂ ನೆನಪು ಮಾಡುತ್ತಾರೆ ಆದರೆ ಭಗವಂತ ಒಬ್ಬರೇ ಆಗಿದ್ದಾರೆ. ಆದರೆ ಅವರು ಯಾರಾಗಿದ್ದಾರೆಂದು ಯಾರೂ ತಿಳಿದುಕೊಂಡಿಲ್ಲ. ಶ್ರೀ ಕೃಷ್ಣನಂತು ಸತ್ಯಯುಗದ ರಾಜಕುಮಾರನಾಗಿದ್ದರು ಆದ್ದರಿಂದ ಅವರನ್ನು ಸರ್ವರ ದುಃಖಹರ್ತ-ಸುಖಕರ್ತ ಎಂದು ಹೇಳಲು ಸಾಧ್ಯವಿಲ್ಲ. ಅತಿಯಾದಂತಹ ಸುಖದಲ್ಲಿದ್ದ ಶ್ರೀಕೃಷ್ಣನ ಆತ್ಮವೇ ಈಗ ದುಃಖದಲ್ಲಿದೆ ಆದರೆ ಭಗವಂತ ದುಃಖದಲ್ಲಿದ್ದಾರೆಂದು ಹೇಳುವುದಿಲ್ಲ ಅಲ್ಲವೇ! ಪರಮಾತ್ಮನಂತು ದುಃಖ-ಸುಖದಿಂದ ಭಿನ್ನ ಆಗಿದ್ದಾರೆ. ಅವರಿಗೆ ಮನುಷ್ಯನ ಶರೀರವಿಲ್ಲ ಆದ್ದರಿಂದಲೇ ಅಂತಹ ತಂದೆಯು ಯಾವ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ, ಅಲ್ಲಿಯೂ ಸುಖವೇ ಸುಖವಿರುತ್ತದೆ. ಆದ್ದರಿಂದ ಅವರನ್ನು ದುಃಖಹರ್ತ-ಸುಖಕರ್ತ ಎಂದು ಗಾಯನ ಮಾಡಲಾಗಿದೆ. ನಾವು ತಿಳಿದುಕೊಂಡಿದ್ದೇವೆ- ರಾವಣ ರಾಜ್ಯದಲ್ಲಿ ನಾವು ಅರ್ಧಕಲ್ಪ ದುಃಖಿಯಾಗಿದ್ದೆವು. ಅಲ್ಪಕಾಲದ ಸುಖವಿರುತ್ತದೆ ಬಾಕಿ ದುಃಖವೇ ದುಃಖವಿರುತ್ತದೆ. ಇದನ್ನೇ ಸನ್ಯಾಸಿಗಳು ಕಾಗವಿಷ್ಟ ಸಮಾನ ಸುಖ ಎಂದು ಹೇಳುತ್ತಾರೆ ಏಕೆಂದರೆ ಇಲ್ಲಿ ವಿಕಾರದಿಂದ ಜನ್ಮವಾಗುತ್ತದೆಯಲ್ಲವೇ! ಆದರೆ ಕೆಲವು ಪವಿತ್ರ ಮಾರ್ಗಗಳೂ ಇರುವುದು. ಅಲ್ಲಿ ಯಾವುದೇ ವಿಕಾರವಿರುವುದಿಲ್ಲ ಅವಶ್ಯಕವಾಗಿ ಅವರೇ ಸತ್ಯಯುಗದಲ್ಲಿ ಇದ್ದರು. ಆ ಸ್ಥಾನದ ಹೆಸರೇ ಆಗಿದೆ ಸ್ವರ್ಗ. ಅದಾಗಿದೆ ಪವಿತ್ರ ಮಾರ್ಗ ಸ್ವರ್ಗ. ನಂತರ ಅವರೇ ಪತಿತರಾದಾಗ ಅದಕ್ಕೆ ನರಕ, ಭ್ರಷ್ಟಾಚಾರಿ ಮಾರ್ಗ ಎಂದು ಹೇಳಲಾಗುತ್ತದೆ. ಈ ಸುಖ-ದುಃಖದ ಆಟ ಮಾಡಲ್ಪಟ್ಟಿದೆ. ಮನುಷ್ಯರಿಗೆ ಈಗೀಗ ಸುಖ, ಈಗೀಗ ದುಃಖ. ಅವರಿಗೆ ಇದು ಗೊತ್ತೇ ಇಲ್ಲ – ಸ್ವರ್ಗದಲ್ಲಿ ಸದಾ ಸುಖವೇ ಇರುತ್ತದೆ, ದುಃಖದ ಹೆಸರೇ ಇರುವುದಿಲ್ಲವೆಂದು. ಇಲ್ಲಿ ಸುಖದ ಹೆಸರೇ ಇಲ್ಲ. ವಿಕಾರದಲ್ಲಿ ಹೋಗುವುದು – ಇದಂತು ದುಃಖವೇ ಆಗಿದೆ, ಆದ್ದರಿಂದ ಸನ್ಯಾಸಿಗಳು ಸನ್ಯಾಸ ಮಾಡುತ್ತಾರೆ, ಆದರೆ ಅವರದು ನಿವೃತ್ತಿ ಮಾರ್ಗವಾಗಿದೆ. ಸತ್ಯಯುಗದಲ್ಲಿ ಪ್ರವೃತ್ತಿ ಮಾರ್ಗವಿತ್ತು, ಅದು ಶಿವಾಲಯವಾಗಿತ್ತು. ದೇವೀ-ದೇವತೆಗಳು, ಲಕ್ಷ್ಮೀ-ನಾರಾಯಣ ಮುಂತಾದವರ ಜಡಚಿತ್ರಗಳು ಮಂದಿರಗಳಲ್ಲಿಯೂ ಹೇಗೆ ಕಿರೀಟ ಹಾಗೂ ಸಿಂಹಾಸನದಿಂದ ಶೃಂಗರಿಸಲ್ಪಟ್ಟಿವೆ. ಭಾರತದಲ್ಲಿಯೇ ರಾಜಾ-ರಾಣಿ ದೈವೀ ಸಂಪ್ರದಾಯವಿತ್ತು ಮತ್ತೆ ಯಾವುದೇ ಧರ್ಮದಲ್ಲಿ ಈ ರೀತಿ ಇಲ್ಲ. ಭಲೆ ರಾಜರಿದ್ದಾರೆ ಆದರೆ ಅವರಿಗೆ ಡಬಲ್ ಕಿರೀಟವಿಲ್ಲ. ಸತ್ಯಯುಗದಲ್ಲಿ ಶುರುವಿನಿಂದಲೇ ರಾಜಾಯಿ ನಡೆಯುತ್ತದೆ. ಆದಿ ಸನಾತನ ಡಬಲ್ಕಿರೀಟಧಾರಿ ದೇವೀ-ದೇವತಾ ಧರ್ಮವಿತ್ತು. ಆ ಧರ್ಮ ಹೇಗೆ ಸ್ಥಾಪನೆ ಆಯಿತು, ಈ ಎಲ್ಲಾ ಮಾತುಗಳನ್ನು ನಾವು ಮಕ್ಕಳೇ ತಿಳಿದುಕೊಂಡಿದ್ದೇವೆ. ಶಿವಬಾಬಾರವರ ಮತದಿಂದ ನಾವು ದುಃಖಹರ್ತಾ, ಸುಖಕರ್ತಾ ಆಗುತ್ತೇವೆ. ನಮ್ಮ ವ್ಯಾಪಾರವೇ ಎಲ್ಲರ ದುಃಖ ದೂರ ಮಾಡಿ ಸುಖ ಕೊಡುವುದಾಗಿದೆ. ಒಂದುವೇಳೆ ನಾವೂ ಯಾರಿಗಾದರೂ ದುಃಖ ಕೊಡುತ್ತೇವೆಂದರೆ ನಮ್ಮನ್ನು ದುಃಖಹರ್ತಾ ಸುಖಕರ್ತನ ಸಂತಾನರೆಂದು ಯಾರು ಹೇಳುತ್ತಾರೆ. ಮೊದಲು ಮನಸ್ಸಿನಲ್ಲಿ ವಿಚಾರ ಬರುತ್ತದೆ, ನಂತರ ಅದು ಕರ್ಮದಲ್ಲಿ ಬರುತ್ತದೆ. ನಾವು ಮಕ್ಕಳಂತು ತುಂಬಾ ಮಧುರರಾಗಬೇಕಾಗಿದೆ. ಸ್ವಯಂ ಭಗವಂತ ಓದಿಸುತ್ತಿರುವುದರಿಂದ ಎಲ್ಲಿಯ ತನಕ ನಮ್ಮದು ದೈವೀ ಚಲನೆ ಆಗುವುದಿಲ್ಲ ಅಲ್ಲಿಯ ತನಕ ಮನುಷ್ಯರು ನಮ್ಮ ಮೇಲೆ ಹೇಗೆ ವಿಶ್ವಾಸವನ್ನು ಇಡುತ್ತಾರೆ? ಗೀತೆಯಲ್ಲಿಯು ಬರೆಯಲಾಗಿದೆ – ಭಗವಾನುವಾಚ, ನಾನು ನಿಮ್ಮನ್ನು ನರನಿಂದ ನಾರಾಯಣರನ್ನಾಗಿ ಮಾಡುತ್ತೇನೆ. ಭಗವಂತ ಅವಶ್ಯವಾಗಿ ಸಂಗಮಯುಗದಲ್ಲಿಯೇ ಬರುತ್ತಾರೆ. ನಂತರ ಭಗವನುವಾಚ: ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ ಆದ್ದರಿಂದ ಅವಶ್ಯವಾಗಿ ಹಳೆಯ ಪ್ರಪಂಚವೂ ಸಹ ವಿನಾಶ ಆಗಬೇಕಾಗಿದೆ. ಈ ಕೆಲಸವು ಯಾವುದೇ ಕೃಷ್ಣನದಲ್ಲ. ತ್ರಿಮೂರ್ತಿಯನ್ನು ತೋರಿಸಿದ್ದಾರೆ ಆದರೆ ಶಿವನನ್ನು ಹಾರಿಸಿ ಬಿಟ್ಟಿದ್ದಾರೆ. ಮತ್ತೆ ಹೇಳುತ್ತಾರೆ – ಬ್ರಹ್ಮನಿಗಂತು ಮೂರು ಮುಖಗಳು ಇರುತ್ತವೆ. ಈ ಒಂದು ಮುಖದ ಬ್ರಹ್ಮ ಎಲ್ಲಿಂದ ಬಂದರು? ಈಗ ಮನುಷ್ಯರಿಗೆ ಮೂರು ಮುಖಗಳು ಹೇಗೆ ಇರಲು ಸಾಧ್ಯ? ತಂದೆಯು ಹೇಳುತ್ತಾರೆ – ಮಕ್ಕಳೇ ನೀವು ನನ್ನನ್ನು ಅರ್ಥ ಮಾಡಿಕೊಂಡಿರುವ ಸುಪುತ್ರ ಮಕ್ಕಳಾಗಿದ್ದೀರಿ. ನೀವೇ ವಿಶ್ವದ ಮೇಲೆ ರಾಜ್ಯ ಮಾಡಿದ್ದಿರಿ. ಈಗ ಬಾಬಾ ನಿಮ್ಮನ್ನು ಆತ್ಮಾಭಿಮಾನಿಯನ್ನಾಗಿ ಮಾಡುತ್ತಿದ್ದಾರೆ. ಈಗ ತಮ್ಮನ್ನು ಆತ್ಮನೆಂದು ತಿಳಿಯಿರಿ. ತಂದೆಯು ಎಲ್ಲರನ್ನು ಅಶರೀರಿಯನ್ನಾಗಿ ಮಾಡಿ ಮುಕ್ತಿಧಾಮದಲ್ಲಿ ಕಳಿಸುತ್ತಾರೆ. ಇಲ್ಲಿಗೆ ಬಂದು ನೀವು ಈ ಶರೀರವನ್ನು ಧಾರಣೆ ಮಾಡಿದ್ದಿರಿ. ಶರೀರ ಧಾರಣೆ ಮಾಡುತ್ತಾ-ಮಾಡುತ್ತಾ ನಿಮಗೆ ದೇಹಾಭಿಮಾನವು ಪಕ್ಕಾ ಆಗಿದೆ. ಈಗ ನೀವು ನಿಮ್ಮನ್ನು ಆತ್ಮನೆಂದು ತಿಳಿಯಿರಿ. ನಾನು ಆತ್ಮ, 84 ಜನ್ಮಗಳ ಪಾತ್ರವನ್ನು ಅಭಿನಯಿಸಿದ್ದೇನೆ. ಈಗ ಇದು ಅಂತಿಮ ಜನ್ಮವಾಗಿದೆ ಹೀಗೆ ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳಿ. ತಂದೆಯು ಹೇಳುತ್ತಾರೆ – ಮಕ್ಕಳೇ ನೀವೀಗ ಆತ್ಮಾಭಿಮಾನಿಯಾಗಿ ಹಿಂತಿರುಗಿ ಹೋಗಬೇಕಾಗಿದೆ, ಪುನಃ ನೀವು ಸ್ವರ್ಗದಲ್ಲಿ ಬರುತ್ತೀರಿ. ನೀವೀಗ ನನ್ನಿಂದ ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವಂತಹ ಪರಿಶ್ರಮ ಮಾಡುತ್ತಿದ್ದೀರಿ. ತಂದೆಯನ್ನು ನೀವು ಮರೆಯುತ್ತೀರೆಂದರೆ ಖುಷಿಯ ನಶೆ ಏರುವುದಿಲ್ಲ. ಶಾಸ್ತ್ರಗಳಲ್ಲಿ ಎಷ್ಟು ದೊಡ್ಡ ತಪ್ಪು ಮಾಡಿ ಬಿಟ್ಟಿದ್ದಾರೆ, ಶಿವ ತಂದೆಯನ್ನೇ ಹಾರಿಸಿ ಬಿಟ್ಟಿದ್ದಾರೆ. ಪೂಜೆ ಮಾಡುತ್ತಿದ್ದರೂ ಹೇಳುತ್ತಾರೆ ಭಗವಂತ ನಾಮ, ರೂಪದಿಂದ ಭಿನ್ನ ಆಗಿದ್ದಾರೆಂದು. ಅರೇ! ಮತ್ತೆ ಯಾರ ಪೂಜೆಯನ್ನು ಮಾಡುತ್ತೀರಿ! ಯಾರನ್ನು ನೆನಪು ಮಾಡುತ್ತೀರಿ! ಆತ್ಮ ಭೃಕುಟಿಯ ಮಧ್ಯದಲ್ಲಿ ಇದೆ ಎಂದು ಹೇಳುತ್ತೀರಿ, ಆದರೆ ಆತ್ಮ ಯಾರ ಸಂತಾನ ಆಗಿದೆ ಎನ್ನುವುದನ್ನು ತಿಳಿದುಕೊಂಡಿಲ್ಲ. ನಾನು ಆತ್ಮ ಭೃಕುಟಿಯ ಮಧ್ಯದಲ್ಲಿದ್ದು ಈ ಶರೀರದ ಮುಖಾಂತರ ಪಾತ್ರ ಅಭಿನಯಿಸುತ್ತೇನೆ, ಈ ಗೊಂಬೆಯನ್ನು ಕುಣಿಸುತ್ತೇನೆ. ಹೇಗೆ ತೊಗಲು ಬೊಂಬೆಯ ಆಟ ಇರುತ್ತದೆಯಲ್ಲವೇ! ಅದನ್ನು ಮನುಷ್ಯರು ಕುಳಿತು ನೃತ್ಯ ಮಾಡಿಸುತ್ತಾರೆ. ಮೊಟ್ಟ ಮೊದಲಂತು ಆತ್ಮಾಭಿಮಾನಿಯಾಗಬೇಕು ಮತ್ತು ತಂದೆ ಏನು ತಿಳಿಸುತ್ತಾರೆ ಅದನ್ನು ಧಾರಣೆ ಮಾಡಬೇಕಾಗಿದೆ. ಪ್ರದರ್ಶನಿಯಲ್ಲಿ ಮೊಟ್ಟ ಮೊದಲು ತಂದೆಯ ಪರಿಚಯ ತಿಳಿಸಬೇಕು – ಇವರು ಎಲ್ಲರ ತಂದೆಯಾಗಿದ್ದಾರೆ, ನಿರಾಕಾರ, ಎರಡನೆಯವರು ಸಾಕಾರ ಪ್ರಜಾಪಿತ ಬ್ರಹ್ಮಾ – ಆದ್ದರಿಂದ ಇಬ್ಬರು ತಂದೆಯರಾಗಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ ಲೌಕಿಕ ತಂದೆಯು ಇರುತ್ತಾರೆ, ಪಾರಲೌಕಿಕ ತಂದೆಯು ಇರುತ್ತಾರೆ. ಒಬ್ಬರು ಹದ್ದಿನ ತಂದೆ, ಇನ್ನೊಬ್ಬರು ಬೇಹದ್ದಿನ ತಂದೆಯಾಗಿದ್ದಾರೆ. ಈಗ ಹೊಸ ರಚನೆಯನ್ನು ರಚಿಸುತ್ತಿದ್ದಾರೆ. ನಾವು ಆಸ್ತಿಯನ್ನು ಶಿವ ತಂದೆಯಿಂದ ತಿಳಿದುಕೊಳ್ಳುತ್ತೇವೆ. ಇಂತಿಂತಹ ಮಾತುಗಳನ್ನು ತಮ್ಮ ಜೊತೆ ತಾವೇ ಮಾತನಾಡಿಕೊಂಡು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ಆತ್ಮಾಭಿಮಾನಿಯಾಗಬೇಕಾಗಿದೆ. ನಾವು ಶಿವಬಾಬಾರವರ ಹತ್ತಿರ ಓದಲು ಹೋಗುತ್ತೇವೆ, ಅವರು ಪರಮಪಿತ ಪರಮಾತ್ಮ ನಿರಾಕಾರ ಆಗಿದ್ದಾರೆ. ಪ್ರಜಾಪಿತ ಬ್ರಹ್ಮಾ ಸಾಕಾರ ಆಗಿದ್ದಾರೆ. ನೀವು ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ನಿಮ್ಮನ್ನು ಬ್ರಹ್ಮಾ ದತ್ತು ಮಾಡಿಕೊಂಡಿದ್ದಾರೆ. ಆದ್ದರಿಂದ ನೀವು ಬ್ರಾಹ್ಮಣರು ಹೊಸ ರಚನೆಯಾಗಿದ್ದೀರಿ. ಅವರು ಹಳೆಯ ಶಾರೀರಿಕ ಬ್ರಾಹ್ಮಣರಾಗಿದ್ದಾರೆ. ಆದ್ದರಿಂದ ಶಾರೀರಿಕ ಯಾತ್ರೆಯನ್ನೇ ಮಾಡಿಸುತ್ತಾರೆ ಆದರೆ ನೀವು ಆತ್ಮಿಕಯಾತ್ರೆ ಮಾಡುತ್ತೀರಿ. ನೀವು ಮಕ್ಕಳು ಈಗ ಶ್ರೇಷ್ಠರಾಗುತ್ತಿದ್ದೀರಿ. ಇದು ಭ್ರಷ್ಟಾಚಾರಿಯಿಂದ ಶ್ರೇಷ್ಠಾಚಾರಿಯನ್ನಾಗಿ ಮಾಡುವ ಈಶ್ವರೀಯ ಮಿಷನ್ (ಯಂತ್ರ) ಆಗಿದೆ. ಇದನ್ನು ಮನುಷ್ಯರು ಮಾಡಲು ಸಾಧ್ಯವಿಲ್ಲ. ವಾಸ್ತವದಲ್ಲಿ ಸತ್ಯ-ಸತ್ಯ ಸದಾಚಾರ ಸಮಿತಿ ನಿಮ್ಮದಾಗಿದೆ. ನಿಮ್ಮ ಲೀಡರ್ ನೋಡಿ ಯಾರಾಗಿದ್ದಾರೆ! ಅಂತಹ ತಂದೆ ಹೇಳುತ್ತಾರೆ – ನಾನು ಪುನಃ ರಾಜಯೋಗವನ್ನು ಕಲಿಸಲು ಬಂದಿದ್ದೇನೆ, ಇದು ಅದೇ ಕಲ್ಪದ ಹಿಂದಿನ ಸಂಗಮಯುಗವಾಗಿದೆ. ಈಗ ಮನುಷ್ಯರಿಂದ ದೇವತೆಯನ್ನಾಗಿ ಮಾಡುತ್ತೇನೆ. ನಾವು ಶೂದ್ರರಿಂದ ಈಗ ಬ್ರಾಹ್ಮಣರಾಗುತ್ತಿದ್ದೇವೆಂದು ತಿಳಿದುಕೊಂಡಿದ್ದೀರಿ. ಬ್ರಾಹ್ಮಣರದು ಶಿಕೆ(ಜುಟ್ಟು)ಯಾಗಿದೆ. ಬ್ರಹ್ಮನೂ ಶಿಕೆಯಾಗಿದ್ದಾರೆ, ಇವರಲ್ಲಿ ಯಾರು ಪ್ರವೇಶ ಆಗುತ್ತಾರೆ, ಅವರನ್ನು ಈ ಸ್ಥೂಲ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಬಾಕಿ ಎಲ್ಲರನ್ನೂ ನೋಡುತ್ತೇವೆ, ಬುದ್ಧಿಯಿಂದ ತಿಳಿಯುತ್ತೇವೆ ನಿರಾಕಾರ ತಂದೆಯು ನಮಗೆ ಓದಿಸುತ್ತಿದ್ದಾರೆ. ಬ್ರಹ್ಮನಿಗಂತು ಬ್ರಾಹ್ಮಣರು ಇಲ್ಲಿಯೇ ಬೇಕಾಗಿದೆ. ಸೂಕ್ಷ್ಮವತನದಲ್ಲಿ ಇರಲು ಸಾಧ್ಯವಿಲ್ಲ. ದತ್ತು ಮಾಡಿಕೊಳ್ಳುತ್ತಾರೆ, ವ್ಯಕ್ತ ಬ್ರಹ್ಮಾ ಸೋ ಅವ್ಯಕ್ತ ಬ್ರಹ್ಮನಾಗುತ್ತಾರೆ. ಇದು ಅತಿ ದೊಡ್ಡ ತಿಳಿದುಕೊಳ್ಳುವಂತಹ ಮಾತಾಗಿದೆ. ಮೊಟ್ಟ ಮೊದಲು ಲಕ್ಷ್ಯವನ್ನು ತಿಳಿದುಕೊಂಡರೆ ನಂತರ ಎಲ್ಲಿ ಬೇಕಾದರೂ ಕುಳಿತು ಓದಬಹುದಾಗಿದೆ. ಪ್ರತಿದಿನ ಮುರಳಿ ಕೇಳಬೇಕಾಗಿದೆ. ಒಂದು ದಿನ ತಪ್ಪಿಸಿದರೂ ತುಂಬಾ ನಷ್ಟವಾಗುತ್ತದೆ ಏಕೆಂದರೆ ವಿಷಯಗಳು ಅತಿ ರಹಸ್ಯ, ವಜ್ರ ಸಮಾನ ರತ್ನಗಳು ಹೊರಡುತ್ತವೆ. ಯಾವುದೇ ಫಸ್ಟ್ ಕ್ಲಾಸ್ ಜ್ಞಾನ ರತ್ನ ತಿಳಿಸಿದ್ದಾಗ ನಾವು ತಪ್ಪಿಸಿಕೊಂಡರೆ ನಷ್ಟವಾಗುವುದು. ನಿಯಮಿತ ವಿದ್ಯಾರ್ಥಿ ಸರಿಯಾಗಿರುತ್ತಾರೆ (ಅಕ್ಯುರೇಟಾಗಿ). ಒಳ್ಳೆಯ ರೀತಿಯಲ್ಲಿ ಪುರುಷಾರ್ಥ ಮಾಡದೆ ಇದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಇದಂತು ಬಹಳ ಶ್ರೇಷ್ಠ ವಿದ್ಯೆಯಾಗಿದೆ. ಸರಸ್ವತಿಯ ಕೈಯಲ್ಲಿ ವೀಣೆ ಮತ್ತು ಕೃಷ್ಣನ ಕೈಯಲ್ಲಿ ಮುರಳಿಯನ್ನು ಕೊಟ್ಟಿದ್ದಾರೆ. ವಾಸ್ತವದಲ್ಲಿ ಮುರಳಿಯನ್ನು ಕೃಷ್ಣನಿಗೆ ತಪ್ಪಾಗಿ ಕೊಟ್ಟುಬಿಟ್ಟಿದ್ದಾರೆ. ಇದು ಬ್ರಹ್ಮನ ಮುರಳಿಯಾಗಿದೆ. ನೀವು ತಿಳಿದುಕೊಂಡಿದ್ದೀರಿ ಬ್ರಹ್ಮಾ ಶಿವಬಾಬಾರವರಿಗೆ ಮುಖ ಆಗಿದ್ದಾರೆ. ಕೃಷ್ಣ ಮತ್ತು ಸರಸ್ವತಿಗೆ ಯಾವುದೇ ಸಂಬಂಧವಿಲ್ಲ. ಎಲ್ಲವನ್ನು ಗೊಂದಲವನ್ನಾಗಿ ಮಾಡಿ ಬಿಟ್ಟಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ನಾನು ಆತ್ಮ ಈ ಶರೀರರೂಪಿ ಗೊಂಬೆಯನ್ನು ಆಡಿಸುತ್ತಿದ್ದೇನೆ. ನಾನು ಇದರಿಂದ ಬೇರೆಯಾಗಿದ್ದೇನೆ, ಇಂತಹ ಅಭ್ಯಾಸ ಮಾಡುತ್ತಾ-ಮಾಡುತ್ತಾ ಆತ್ಮಾಭಿಮಾನಿಯಾಗಬೇಕಾಗಿದೆ.

2. ಮುರಳಿಗೆ ಎಂದೂ ತಪ್ಪಿಸಿಕೊಳ್ಳಬಾರದಾಗಿದೆ. ರೆಗ್ಯುಲರ್ ಆಗಬೇಕಾಗಿದೆ. ವಿದ್ಯೆಯಲ್ಲಿ ತುಂಬಾ-ತುಂಬಾ ನಿಯಮಿತವಾಗಿರಬೇಕು.

ವರದಾನ:-

ಸದಾ ಸುರಕ್ಷಿತವಾಗಿರುವ ಸ್ಥಾನ – ಹೃದಯರಾಮನ ತಂದೆಯ ಹೃದಯ ಸಿಂಹಾಸನವಾಗಿದೆ. ಸದಾ ಇದೇ ಸ್ಮೃತಿಯಲ್ಲಿರಿ – ಯಾರು ಭಗವಂತನ ಹೃದಯ ಸಿಂಹಾಸನಾಧೀಶರಾಗಿ ಬಿಟ್ಟೆವು – ಇದು ನಮ್ಮದೇ ಶ್ರೇಷ್ಠ ಭಾಗ್ಯವಾಗಿದೆ. ಯಾರು ಪರಮಾತ್ಮನ ಹೃದಯದಲ್ಲಿ ಸಮಾವೇಶವಾಗಿದ್ದಾರೆ ಅಥವಾ ಹೃದಯ ಸಿಂಹಾಸನಾಧೀಶರಾಗಿದ್ದಾರೆಯೋ ಅವರು ಸದಾ ಸುರಕ್ಷಿತವಾಗಿರುತ್ತಾರೆ. ಮಾಯೆ ಅಥವಾ ಪ್ರಕೃತಿಯ ಬಿರುಗಾಳಿಯೂ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ. ಈ ರೀತಿ ಅಚಲವಾಗಿರುವವರ ನೆನಪಾರ್ಥವು ಅಚಲ್ಘರ್ ಆಗಿದೆ, ಚಂಚಲ್ ಘರ್ ಅಲ್ಲ ಆದ್ದರಿಂದ ಸ್ಮೃತಿಯಿರಲಿ – ನಾವು ಅನೇಕ ಬಾರಿ ಅಚಲರಾಗಿದ್ದೇವೆ ಮತ್ತು ಈಗಲೂ ಅಚಲರಾಗಿದ್ದೇವೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top