11 May 2022 KANNADA Murli Today | Brahma Kumaris

Read and Listen today’s Gyan Murli in Kannada

10 May 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಮಧುರ ಮಕ್ಕಳೇ - ನೀವೇ ಬಹಳ ಕಾಲದಿಂದ ಅಗಲಿದ್ದೀರಿ, ನೀವೇ ಪೂರ್ಣ 84 ಜನ್ಮಗಳ ಪಾತ್ರವನ್ನು ಅಭಿನಯಿಸಿದ್ದೀರಿ, ಈಗ ನೀವು ದುಃಖದ ಬಂಧನದಿಂದ ಸುಖದ ಸಂಬಂಧದಲ್ಲಿ ಹೋಗಬೇಕಾಗಿದೆ, ಆದ್ದರಿಂದ ಅಪಾರ ಖುಷಿಯಲ್ಲಿರಿ”

ಪ್ರಶ್ನೆ:: -

ಅಪಾರ ಖುಷಿಯು ಎಂತಹ ಮಕ್ಕಳಿಗೆ ಸದಾ ಇರುತ್ತದೆ?

ಉತ್ತರ:-

ಯಾರಿಗೆ ನಿಶ್ಚಯವಿರುತ್ತದೆ 1. ಬಾಬಾ ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. 2. ನಮ್ಮ ಸತ್ಯ ತಂದೆ ಅವರೇ ಗೀತೆಯ ಸತ್ಯ-ಸತ್ಯ ಜ್ಞಾನವನ್ನು ತಿಳಿಸಲು ಬಂದಿದ್ದಾರೆ. 3. ನಾವು ಆತ್ಮರು ಈಗ ಈಶ್ವರನ ಮಡಿಲಿನಲ್ಲಿ ಕುಳಿತಿದ್ದೇವೆ. ನಾವು ಆತ್ಮರು ಈ ಶರೀರ ಸಹಿತವಾಗಿ ತಂದೆಯ ಮಕ್ಕಳಾಗಿದ್ದೇವೆ. 4. ತಂದೆಯು ನಮಗೆ ಭಕ್ತಿಯ ಫಲ (ಸದ್ಗತಿ) ವನ್ನು ಕೊಡಲು ಬಂದಿದ್ದಾರೆ. 5. ಬಾಬಾ ನಮ್ಮನ್ನು ತ್ರಿಕಾಲದರ್ಶಿಯನ್ನಾಗಿ ಮಾಡಿದ್ದಾರೆ. 6. ಸ್ವಯಂ ಭಗವಂತನೇ ನಮಗೆ ತಾಯಿಯಾಗಿ ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ. ಯಾರು ಈ ಸ್ಮೃತಿ ಹಾಗೂ ನಿಶ್ಚಯದಲ್ಲಿರುತ್ತಾರೋ ಅವರಿಗೆ ಅಪಾರ ಖುಷಿ ಇರುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಕ್ಕಳಿಗೆ ನಾವು ಆತ್ಮರಾಗಿದ್ದೇವೆ ಎನ್ನುವ ನಿಶ್ಚಯವಿದೆ. ಭಗವಂತ ತಂದೆಯು ನಮಗೆ ಓದಿಸುತ್ತಿದ್ದಾರೆ. ಆದ್ದರಿಂದ ಮಕ್ಕಳಿಗೆ ತುಂಬಾ ಖುಷಿ ಇರಬೇಕು. ಸಮ್ಮುಖದಲ್ಲಿ ಬಂದಾಗ ಆತ್ಮವು ತಿಳಿದುಕೊಳ್ಳುತ್ತದೆ – ತಂದೆಯು ಎಲ್ಲರ ಸದ್ಗತಿ ಮಾಡಲು ಬಂದಿದ್ದಾರೆ. ಸರ್ವರ ಸದ್ಗತಿದಾತ ಜೀವನ್ಮುಕ್ತಿದಾತ ಅವರೇ ಆಗಿದ್ದಾರೆ. ಮಕ್ಕಳು ತಿಳಿದುಕೊಳ್ಳುತ್ತಾರೆ, ಮಾಯೆಯು ಗಳಿಗೆ-ಗಳಿಗೆಯು ಮರೆಸಿ ಬಿಡುತ್ತದೆ. ಆದರೆ ಇದನ್ನಂತು ತಿಳಿದುಕೊಳ್ಳುತ್ತೀರಲ್ಲವೇ – ನಾವು ತಂದೆಯ ಸಮ್ಮುಖದಲ್ಲಿ ಕುಳಿತಿದ್ದೇವೆ. ನಿರಾಕಾರ ತಂದೆಯು ಈ ರಥದ ಮೇಲೆ ಸವಾರರಾಗಿದ್ದಾರೆ. ಹೇಗೆ ಮುಸಲ್ಮಾನರು ಕುದರೆಯ ಮೇಲೆ ಕಟಿ ವಸ್ತ್ರವನ್ನು (ಸೊಂಟಕ್ಕೆ ಕಟ್ಟುವ ವಸ್ತ್ರ) ಇಡುತ್ತಾರೆ. ಈ ಕುದರೆಯ ಮೇಲೆ ಮಹಮ್ಮದನ ಸವಾರಿ ಇತ್ತು ಎಂದು ಹೇಳಿ ಅದರ ಸಂಕೇತವನ್ನು ಇಡುತ್ತಾರೆ. ಇಲ್ಲಿ ನಿರಾಕಾರ ತಂದೆಯ ಪ್ರವೇಶತೆಯಾಗಿದೆ. ಮಕ್ಕಳಿಗೆ ತುಂಬಾ ಖುಷಿ ಇರಬೇಕು. ಸ್ವರ್ಗದ ಮಾಲೀಕರನ್ನಾಗಿ ಮಾಡುವಂತಹ ತಂದೆ ಅಥವಾ ವಿಶ್ವದ ಮಾಲೀಕರನ್ನಾಗಿ ಮಾಡುವಂತಹ ತಂದೆಯು ಬಂದು ಬಿಟ್ಟಿದ್ದಾರೆ. ಗೀತೆಯ ಸತ್ಯ-ಸತ್ಯ ಭಗವಂತ ಬಾಬಾ ಆಗಿದ್ದಾರೆ. ಆತ್ಮನ ಬುದ್ಧಿಯು ತಂದೆಯ ಕಡೆ ಹೋಗುತ್ತದೆ. ಇದು ತಂದೆಯ ಜೊತೆ ಆತ್ಮಗಳಿಗಿರುವ ಪ್ರೀತಿಯಾಗಿದೆ. ಈ ಖುಷಿಯು ಎಂತಹವರಿಗಿರುತ್ತದೆ? ಯಾರು ಬಹಳ ಕಾಲದಿಂದ ಅಗಲಿ ಹೋಗಿದ್ದಾರೆ, ಅವರಿಗೆ ಅಪಾರ ಖುಷಿ ಇರುತ್ತದೆ. ಸ್ವಯಂ ತಂದೆಯೇ ಹೇಳುತ್ತಾರೆ ನಾನು ನಿಮ್ಮನ್ನು ಸುಖದ ಸಂಬಂಧದಲ್ಲಿ ಕಳಿಸಿದ್ದೆನು, ಈಗ ದುಃಖದ ಬಂಧನದಲ್ಲಿ ಇದ್ದೀರಿ. ನೀವೀಗ ತಿಳಿದುಕೊಂಡಿದ್ದೀರಿ – ಎಲ್ಲರೂ 84 ಜನ್ಮಗಳು ತೆಗೆದುಕೊಳ್ಳುವುದಿಲ್ಲವೆಂದು. 84 ಲಕ್ಷ ಜನ್ಮಗಳ ಚಕ್ರವು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಿಲ್ಲ. ತಂದೆಯೇ 84 ಜನ್ಮಗಳ ಚಕ್ರವನ್ನು ಸಂಪೂರ್ಣವಾಗಿ ಸರಿಯಾದ ರೀತಿಯಲ್ಲಿ ತಿಳಿಸಿದ್ದಾರೆ. ತಂದೆಯ ಮಕ್ಕಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ – ನಾವು ಆತ್ಮರು ಈ ಕರ್ಮೇಂದ್ರಿಯಗಳ ಮುಖಾಂತರ ಕೇಳುತ್ತೇವೆ. ತಂದೆಯು ಈ ಮುಖದ ಮುಖಾಂತರ ತಿಳಿಸುತ್ತಿದ್ದಾರೆ. ಸ್ವಯಂ ತಂದೆಯು ಹೇಳುತ್ತಾರೆ – ನಾನು ಈ ಕರ್ಮೇಂದ್ರಿಯಗಳ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ, ಇವರ ಹೆಸರನ್ನು ಬ್ರಹ್ಮಾ ಎಂದು ಇಡಲಾಗುತ್ತದೆ. ಮನುಷ್ಯರನ್ನೇ ಪ್ರಜಾಪಿತ ಬ್ರಹ್ಮನನ್ನಾಗಿ ಮಾಡಬೇಕಲ್ಲವೇ. ಸೂಕ್ಷ್ಮವತನದಲ್ಲಿ ಪ್ರಜಾಪಿತ ಬ್ರಹ್ಮಾ ಎಂದು ಹೇಳಲಾಗುತ್ತದೆಯೇ. ತಂದೆಯು ಸಾಕಾರಲೋಕದಲ್ಲಿ ಬಂದು ಹೇಳುತ್ತಾರೆ ನಾನು ಈ ಬ್ರಹ್ಮನ ಶರೀರದಲ್ಲಿ ಪ್ರವೇಶ ಮಾಡಿ ನಿಮ್ಮನ್ನು ದತ್ತು ಮಾಡಿಕೊಳ್ಳುತ್ತೇನೆ. ನೀವು ತಿಳಿದುಕೊಂಡಿದ್ದೀರಿ – ನಾವು ಆತ್ಮಗಳು ಈಶ್ವರನ ಮಡಿಲಿನಲ್ಲಿ ಹೋಗುತ್ತೇವೆ. ಶರೀರವಿಲ್ಲದೆ ಮಡಿಲಿರಲು ಸಾಧ್ಯವಿಲ್ಲ. ಆತ್ಮವು ಹೇಳುತ್ತದೆ ನಾನು ಶರೀರದ ಮುಖಾಂತರ ತಂದೆಯ ಮಗುವಾಗುತ್ತೇನೆ. ಈ ಶರೀರವನ್ನು ತಂದೆಯು ಲೋನ್ ತೆಗೆದುಕೊಂಡಿದ್ದಾರೆ. ಈ ಶರೀರವು ತಂದೆಯದಲ್ಲ. ಆದರೆ ಆತ್ಮವು ಇದರಲ್ಲಿ ಪ್ರವೇಶ ಮಾಡಿದೆ. ನಿಮ್ಮ ಶರೀರದಲ್ಲಿಯೂ ಸಹ ಆತ್ಮವು ಪ್ರವೇಶ ಆಗಿದೆಯಲ್ಲವೇ! ಈ ತಂದೆಯು ಹೇಳುತ್ತಾರೆ – ನಾನು ಈಗ ಇವರಲ್ಲಿ ಇದ್ದೇನೆ. ಕೆಲವು ಸಲ ಮಗುವಾಗಿ ಬಿಡುತ್ತೇನೆ. ಕೆಲವು ಸಲ ತಾಯಿಯೂ ಆಗುತ್ತೇನೆ. ತಂದೆಯು ಜಾದೂಗಾರ್ ಆಗಿದ್ದಾರಲ್ಲವೇ. ಕೆಲವರು ಈ ಆಟ-ಪಾಠವನ್ನು ಮಾಂತ್ರಿಕತನವೆಂದು ತಿಳಿಯುತ್ತಾರೆ. ಏಕೆಂದರೆ ಪ್ರಪಂಚದಲ್ಲಿ ಸುಳ್ಳು ರಿದ್ದಿ-ಸಿದ್ಧಿಯ ಕೆಲಸವು ತುಂಬಾ ನಡೆಯುತ್ತದೆ. ತಂದೆಯು ಕೆಲವೊಂದು ಸಲ ಕೃಷ್ಣನೂ ಆಗುತ್ತಾರೆ. ಯಾರ ಭಾವನೆಯು ಕೃಷ್ಣನಲ್ಲಿ ಇದ್ದರೆ ಅವರಿಗೆ ತಕ್ಷಣ ಕೃಷ್ಣನಾಗಿ ಕಂಡು ಬರುತ್ತಾರೆ. ನಂತರ ಅವರೇ ತಂದೆಯನ್ನು ಒಪ್ಪುತ್ತಾರೆ ಮತ್ತು ಅವರ ಅನುಯಾಯಿಗಳೂ ಆಗಿ ಬಿಡುತ್ತಾರೆ. ಇದೆಲ್ಲವೂ ಜ್ಞಾನದ ಮಾತುಗಳಾಗಿವೆ. ಮೊದಲು ಇದು ಪಕ್ಕಾ ನಿಶ್ಚಯವಿರಬೇಕು ನಾನು ಆತ್ಮನಾಗಿದ್ದೇನೆ ಮತ್ತು ತಂದೆಯು ಹೇಳುತ್ತಾರೆ ನಾನು ನಿಮ್ಮ ತಂದೆ ಆಗಿದ್ದೇನೆ, ನೀವು ಮಕ್ಕಳನ್ನು ತ್ರಿಕಾಲದರ್ಶಿಯನ್ನಾಗಿ ಮಾಡುತ್ತೇನೆ. ಈ ಇಂತಹ ಜ್ಞಾನವನ್ನು ಯಾರೂ ಕೊಡಲು ಸಾಧ್ಯವಿಲ್ಲ. ಯಾವಾಗ ಭಕ್ತಿಮಾರ್ಗದ ಅಂತ್ಯವಾಗುತ್ತದೆ ಆಗ ತಂದೆಯು ಬರಬೇಕಾಗುತ್ತದೆ. ಭಲೆ ಅನೇಕರಿಗೆ ಶಿವಲಿಂಗದ, ಅಖಂಡ ಜ್ಯೋತಿ ಸ್ವರೂಪದ ಸಾಕ್ಷಾತ್ಕಾರವಗುತ್ತದೆ. ಯಾರಿಗೆ ಯಾವ ಭಾವನೆ ಇರುತ್ತದೆ ಆ ಭಾವನೆಯನ್ನು ನಾನು ಪೂರ್ಣ ಮಾಡುತ್ತೇನೆ. ಆದರೆ ತಂದೆಯ ರೂಪದಲ್ಲಿ ಅವರಿಗೆ ನನ್ನಿಂದ ಏನೂ ಸಿಗುವುದಿಲ್ಲ. ಏಕೆಂದರೆ ನನ್ನನ್ನು ಅರ್ಥ ಮಾಡಿಕೊಂಡಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ – ತಂದೆಯು ಬಿಂದು ಆಗಿದ್ದಾರೆ, ನಾವೂ ಬಿಂದು ಆಗಿದ್ದೇವೆ. ತಂದೆಯ ಆತ್ಮನಲ್ಲಿ ಈ ಜ್ಞಾನವಿದೆ, ನಾವು ಆತ್ಮರಲ್ಲೂ ಜ್ಞಾನವಿದೆ. ಪರಮಾತ್ಮ ಪರಮಧಾಮದಲ್ಲಿ ಇರುತ್ತಾರೆಂದು ಯಾರಿಗೂ ಗೊತ್ತಿಲ್ಲ. ಯಾವಾಗ ನೀವು ಬಾಬಾನ ಸಮ್ಮುಖದಲ್ಲಿ ಬಂದು ಕುಳಿತುಕೊಳ್ಳುತ್ತೀರಿ, ಆಗ ರೋಮಾಂಚನವಾಗಿ ನಿಂತು ಬಿಡುತ್ತೀರಿ, ಓಹೋ! ಜ್ಞಾನಸಾಗರ ಶಿವಬಾಬಾ ಇವರಲ್ಲಿ ಕುಳಿತು ನಮಗೆ ಓದಿಸುತ್ತಾರೆ. ಬಾಕಿ ಭಕ್ತಿಮಾರ್ಗದಲ್ಲಿ ಹೇಳುವ ಕೃಷ್ಣ ಹಾಗೂ ಗೋಪಿಕೆಯರ ಮಾತಿಲ್ಲ. ಅವರು ಇಲ್ಲಿಯೂ ಇಲ್ಲ, ಸತ್ಯಯುಗದಲ್ಲಿಯೂ ಇರುವುದಿಲ್ಲ. ಅಲ್ಲಿ ಪ್ರತಿಯೊಬ್ಬ ರಾಜಕುಮಾರ ತಮ್ಮ-ತಮ್ಮ ಮೆಹಲ್ಗಳಲ್ಲಿರುತ್ತಾರೆ. ಯಾರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ, ಅವರೇ ಈ ಎಲ್ಲಾ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ, ಆದ್ದರಿಂದ ಒಳಗೆ ಈ ಖುಷಿ ಇರಬೇಕು. ನೀವೇ ಮಾತಾ-ಪಿತಾ….. ಎಂದು ಹೇಳುತ್ತಾರೆ ಆದರೆ ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯಂತು ಇದ್ದಾರೆ ಮತ್ತೆ ತಾಯಿ ಎಂದು ಯಾರಿಗೆ ಹೇಳಲಾಗುತ್ತದೆ. ತಾಯಿಯಂತು ಅವಶ್ಯವಾಗಿ ಬೇಕಲ್ಲವೇ. ಈ ತಾಯಿಗೆ (ಬ್ರಹ್ಮಾ ತಾಯಿ) ಅವರ ತಾಯಿ ಯಾರೂ ಇರುವುದಿಲ್ಲ. ಈ ರಹಸ್ಯವು ತಿಳಿದುಕೊಳ್ಳುವುದಾಗಿದೆ. ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಹೇಳುತ್ತಾರೆ – ನಿಮ್ಮಲ್ಲಿಯೂ ಯಾವುದೇ ಅವಗುಣವಿರಬಾರದು. ಗಾಯನ ಮಾಡುತ್ತಾರೆ ನಾನು ನಿರ್ಗುಣನಾಗಿದ್ದೇನೆ, ನನ್ನಲ್ಲಿ ಯಾವುದೇ ಗುಣವಿಲ್ಲ. ಈಗ ನೀವು ಮಕ್ಕಳು ಗುಣವಂತರಾಗಬೇಕು ಆದ್ದರಿಂದ ಯಾವುದೇ ಕಾಮ, ಕ್ರೋಧ ಮತ್ತು ದೇಹದ ಅಹಂಕಾರವೂ ಇರಬಾರದು.

ಈ ಸಮಯದಲ್ಲಿ ನೀವಿಲ್ಲಿ ಕುಳಿತಿದ್ದೀರಿ, ನಾವು ಇಲ್ಲಿ ಕುಳಿತುಕೊಂಡಿದ್ದೇವೆಂದು ತಿಳಿದುಕೊಂಡಿದ್ದೀರಿ ಮತ್ತೆ ಈ ಆಲಸ್ಯತನ ಮುಂತಾದವು ಏಕೆ ಬರಬೇಕು? ಆದರೆ ಈ ಪರಿಪಕ್ವ ಅವಸ್ಥೆಯು ಅಂತ್ಯದಲ್ಲಿಯೇ ಆಗುವುದು. ಗಾಯನವೂ ಇದೆ – ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪ-ಗೋಪಿಯರನ್ನು ಕೇಳಿ. ಇದು ಅಂತ್ಯದಲ್ಲಿಯೇ ಇರುತ್ತದೆ. ಈಗ ನಾವು 75% ಅತೀಂದ್ರಿಯ ಸುಖದಲ್ಲಿ ಇರುತ್ತೇವೆ ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ಪಾಪಗಳ ಹೊರಯು ತುಂಬಾ ಇದೆ. ಗುರು ಕೃಪೆಯಿಂದ ಅಥವಾ ಗಂಗಾ ಸ್ನಾನದಿಂದ ಪಾಪವು ಪರಿಹಾರ ಆಗುವುದಿಲ್ಲ. ತಂದೆಯು ಅಂತ್ಯದಲ್ಲಿಯೇ ಬಂದು ಜ್ಞಾನವನ್ನು ಕೊಡುತ್ತಾರೆ. ತೋರಿಸಿದ್ದಾರೆ – ಕನ್ಯೆಯ ಮುಖಾಂತರ ಬಾಣ ಹೊಡೆಸಿದರು ಮತ್ತು ಅವರು ಸತ್ತು ಹೋದರು. ನಂತರ ಸಾಯುವ ಸಮಯದಲ್ಲಿ ಗಂಗಾ ಜಲವನ್ನು ಕುಡಿಸಿದರು. ನೀವಿಲ್ಲಿ ಯಾವಾಗ ಮೂರ್ಛಿತರಾಗುತ್ತೀರಿ, ಆಗ ನಿಮಗೆ ಬಾಬಾನ ನೆನಪು ತರಿಸಲಾಗುತ್ತದೆ. ತಂದೆಯೊಬ್ಬರನ್ನು ನೆನಪು ಮಾಡುವುದು ಮಕ್ಕಳಿಗೆ ಅಭ್ಯಾಸವಾಗಿ ಬಿಡಬೇಕು. ಬೇರೆಯವರು ಅವರಿಗೆ ನೆನಪು ತರಿಸುವಂತ ಆಗಬಾರದು. ಯಾರಾದರು ಅವರಿಗೆ ನೆನಪು ತರಿಸುವಂತಾಗಬಾರದು. ಶರೀರ ಬಿಡುವ ಸಮಯದಲ್ಲಿ ತಾನಾಗಿಯೇ ನೆನಪು ಬರಬೇಕು. ಆ ಸಮಯದಲ್ಲಿ ಯಾರದೇ ಸಹಯೋಗವಿಲ್ಲದೆ ತಂದೆಯನ್ನು ನೆನಪು ಮಾಡಬೇಕು. ಮನುಷ್ಯರಂತು ಮಂತ್ರವನ್ನು ಕೊಡುತ್ತಾರೆ, ಅದಂತು ಸಾಮಾನ್ಯ ಮಾತಾಗಿದೆ. ಅಂತಿಮ ಸಮಯದಲ್ಲಿ ತುಂಬಾ ಹೆಚ್ಚು-ಕಡಿಮೆಗಳಾಗುತ್ತಿರುತ್ತದೆ. ನೀವು ಭಿನ್ನ-ಭಿನ್ನ ಸ್ಥಾನಾಗಳಲ್ಲಿ ಇರುತ್ತೀರಿ ಆ ಸಮಯದಲ್ಲಿ ಯಾರೂ ಯಾರಿಗೂ ಶಿವ-ಶಿವ ಎಂದು ಹೇಳಿ, ಎಂದು ಹೇಳಿ ಕೊಡುವುದಿಲ್ಲ. ಆ ಸಮಯದಲ್ಲಿ ಪೂರ್ತಿ ತಂದೆಯ ನೆನಪು ಬೇಕು, ತಂದೆಯೊಂದಿಗೆ ಪ್ರೀತಿ ಬೇಕು, ಆಗಲೇ ನಂಬರ್ವನ್ ಪದವಿ ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾನು ನಿಮ್ಮ ತಂದೆಯಾಗಿದ್ದೇನೆ. ಕಲ್ಪದ ಮೊದಲೂ ಸಹ ನೀವು ಮಕ್ಕಳನ್ನು ಹೂಗಳನ್ನಾಗಿ ಮಾಡಿದ್ದೆನು. ಸತ್ಯಯುಗದಲ್ಲಿ ಯೋಗಬಲದಿಂದ ಹೂಗಳು, ಮಕ್ಕಳು ಜನ್ಮವನ್ನು ಪಡೆಯುತ್ತಾರೆ. ದುಃಖ ಕೊಡುವಂತಹ ಯಾವುದೇ ವಸ್ತುಗಳು ಅಲ್ಲಿ ಇರುವುದಿಲ್ಲ. ಹೆಸರೇ ಸ್ವರ್ಗವಾಗಿದೆ. ಆದರೆ ಅಲ್ಲಿ ಯಾರು ನಿವಾಸ ಮಾಡುತ್ತಾರೆ ಎನ್ನುವುದನ್ನು ಈ ಭಾರತವಾಸಿಗಳು ಅರಿತುಕೊಂಡೇ ಇಲ್ಲ. ಶಾಸ್ತ್ರಗಳಲ್ಲಿ ಈ ರೀತಿಯ ಅನೇಕ ಮಾತುಗಳನ್ನು ಬರೆದಿದ್ದಾರೆ – ಅಲ್ಲಿಯೂ ಸಹ ಹಿರಣ್ಯ ಕಷ್ಯಪ ಮುಂತಾದವರಿದ್ದರೆಂದು ಹೇಳಿದ್ದಾರೆ – ಇವೆಲ್ಲವೂ ಭಕ್ತಿಮಾರ್ಗ ಸಾಮಾಗ್ರಿಗಳಾಗಿದೆ. ಭಕ್ತಿಯೂ ಸಹ ಮೊದಲು ಸತೋಪ್ರಧಾನವಾಗಿರುತ್ತದೆ ನಂತರ ನಿಧಾನ-ನಿಧಾನವಾಗಿ ತಮೋಪ್ರಧಾನವಾಗುತ್ತಾ ಹೋಗುತ್ತದೆ.

ತಂದೆಯು ಹೇಳುತ್ತಾರೆ – ಮಕ್ಕಳೇ ನಿಮ್ಮನ್ನು ಆಕಾಶದ ಮೇಲೆ ಏರಿಸುತ್ತೇನೆ. ನೀವು ನಿಧಾನ-ನಿಧಾನವಾಗಿ ಕೆಳಗಡೆ ಬಂದು ಬಿಡುತ್ತೀರಿ. ಯಾವುದೇ ಮನುಷ್ಯರದು ಮಹಿಮೆ ಇಲ್ಲ. ಸರ್ವರ ಸದ್ಗತಿದಾತ ತಂದೆ ಒಬ್ಬರೇ ಆಗಿದ್ದಾರೆ. ಬಾಕಿ ಗುರುಗಳೆಲ್ಲರೂ ಅನೇಕ ಪ್ರಕಾರದ ತೀರ್ಥ ಯಾತ್ರೆ ಮುಂತಾದವುಗಳನ್ನು ಕಲಿಸುತ್ತಾರೆ, ಆದರೂ ಸಹ ಕೆಳಗಡೆ ಬೀಳುತ್ತಿರುತ್ತಾರೆ. ಭಕ್ತಿ ಮಾರ್ಗದಲ್ಲಿ ಭಕ್ತ ಮೀರಾಗೆ ಭಲೆ ಸಾಕ್ಷಾತ್ಕಾರವಾಯಿತು. ಆದರೆ ಅವರು ಯಾವುದೇ ವಿಶ್ವದ ಮಾಲೀಕರಾಗಲಿಲ್ಲ. ನಿಮಗೆ ಈಗ ತಂದೆಯು ಹೇಳುತ್ತಾರೆ- ಜಿನ್ ಆಗಿ. ನಿಮಗೆ ಕೆಲಸವನ್ನು ಕೊಡುತ್ತೇನೆ, ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ ಇರಿ. ಒಂದುವೇಳೆ ಸುಸ್ತಾಗುತ್ತೀರಿ, ನೆನಪು ಮಾಡುವುದಿಲ್ಲವೆಂದರೆ ಮಾಯೆಯು ಹಸಿಯಾಗಿಯೇ ತಿಂದು ಬಿಡುತ್ತದೆ. ಒಂದು ಕಥೆಯು ಇದೆ- ಜಿನ್ ರಾಕ್ಷಸನು ರಾಜನಿಗೆ ನೀವು ನನಗೆ ಕೆಲಸ ಕೊಡದಿದ್ದರೆ ನಾನು ನಿಮ್ಮನ್ನೇ ತಿಂದು ಬಿಡುತ್ತೇನೆ ಎಂದು ಹೇಳುತಿದ್ದನು. ಇಲ್ಲಿ ತಂದೆಯೂ ಹೇಳುತ್ತಾರೆ ನೀವು ನನ್ನನ್ನು ನೆನಪು ಮಾಡುವುದಿಲ್ಲವೆಂದರೆ ಮಾಯೆಯು ಹಸಿಯಾಗಿಯೇ ತಿಂದುಬಿಡುತ್ತದೆ. ನೆನಪಿನಲ್ಲಿ ಕುಳಿತುಕೊಳ್ಳುವುದರಿಂದ ಖುಷಿಯು ಏರುತ್ತದೆ. ಬಾಬಾ ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ನಮ್ಮ ಸಮುಖದಲ್ಲಿಯೇ ಕುಳಿತಿದ್ದಾರೆ. ನೀವು ಆತ್ಮರು ಕೇಳುತ್ತೀರಿ. ತಂದೆಯು ಹೇಳುತ್ತಾರೆ ನನ್ನ ಮಧುರ ಮುದ್ದು ಮಕ್ಕಳೇ ನಾನು ನಿಮ್ಮನ್ನು ಮುಕ್ತಿಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಅನೇಕರು ಹಿಂತಿರುಗಿ ಹೋಗುವ ಪ್ರಯತ್ನವನ್ನು ತುಂಬಾ ಮಾಡುತ್ತಾರೆ, ಆದರೆ ಯಾರೂ ಹೋಗಲು ಸಾಧ್ಯವಿಲ್ಲ. ಕಲಿಯುಗದ ನಂತರ ಸತ್ಯಯುಗ, ರಾತ್ರಿಯ ನಂತರ ದಿನವು ಬರಲೇಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ ಸತ್ಯಯುಗದಲ್ಲಿ ನಾವೇ ಇರುತ್ತೇವೆಂದು. ತಂದೆಯು ಪುನಃ ನಮಗೆ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಖುಷಿಯ ನಶೆ ಅಂತ್ಯದಲ್ಲಿಯೇ ಏರುತ್ತದೆ. ಯಾವಾಗ ಫೈನಲ್ ಆಗುತ್ತದೆ, ಆಗ ವಿನಾಶವಾಗುತ್ತದೆ. ನೀವು ಸಾಕ್ಷಿಯಾಗಿ ನೋಡುತ್ತಿರುತೀರಿ. ಇದು ರಕ್ತ ಪಾತದ ಆಟವಾಗಿದೆಯಲ್ಲವೇ. ಯಾವ ಅಪರಾಧವನ್ನು ಮಾಡಿರುವ ಕಾರಣ ಒಬ್ಬರು ಇನ್ನೊಬರನ್ನು ಸಾಯಿಸಲು ಬಾಂಬ್ಸ್ ಮುಂತಾದವನ್ನು ತಯಾರಿಸುತ್ತಾರೆ! ಸಾಯುವುದು ಸರಿಯಲ್ಲವೇ, ಇದಕ್ಕೋಸ್ಕರ ಈ ಬಾಂಬುಗಳು ಏತಕ್ಕೆ ಬೇಕು! ಇವುಗಳನ್ನು ತಯಾರಿಸುವವರೂ ಸಹ ತಿಳಿದುಕೊಳ್ಳುತ್ತಾರೆ ನಮಗೆ ಯಾರೋ ಪ್ರೇರಣೆ ಮಾಡುತ್ತಿದ್ದಾರೆ. ಆದ್ದರಿಂದ ಇಷ್ಟವಿಲ್ಲದಿದರೂ ಸಹ ಈ ಬಾಂಬುಗಳನ್ನು ತಯಾರಿಸುತ್ತೇವೆ. ಇದಕ್ಕೆ ತುಂಬಾ ಖರ್ಚು ಆಗುತ್ತದೆ. ಇದೂ ಸಹ ನಾಟಕದಲ್ಲಿ ನಿಗದಿಯಾಗಿದೆ, ಇದರಿಂದ ವಿನಾಶವಾಗಲೇ ಬೇಕಾಗಿದೆ. ಅನೇಕ ಧರ್ಮಗಳ ನಡುವೆ ಒಂದು ಧರ್ಮವು ರಾಜ್ಯ ಮಾಡಲು ಸಾಧ್ಯವಿಲ್ಲ. ಆದರಿಂದ ಈಗ ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆ ಆಗಬೇಕಾಗಿದೆ. ನೀವು ಅರಿತುಕೊಂಡಿದ್ದೀರಿ – ನಾವು ತಂದೆಯ ಶ್ರೀಮತದ ಮೇಲೆ ರಾಜ್ಯವನ್ನು ಸ್ಥಾಪನೆ ಮಾಡುತಿದ್ದೇವೆ. ಆ ಮನುಷ್ಯರು ಮಯದಾನದಲ್ಲಿ ಡ್ರಿಲ್ ಮುಂತಾದವನ್ನು ಕಲಿಯಲು ಹೋಗುತ್ತಾರೆ, ಅವರು ಸಾಯಬೇಕು ಮತ್ತು ಸಾಯಿಸಬೇಕು ಎಂದು ತಿಳಿದುಕೊಳುತ್ತಾರೆ. ಆದರೆ ಇಲ್ಲಿ ಆ ಮಾತಿಲ್ಲ. ತಂದೆಯು ಬಂದಿದ್ದಾರೆ ಎಂದು ತುಂಬಾ ಖುಷಿ ಇರಬೇಕು. ಪ್ರಾಚೀನ ಭಾರತದ ರಾಜಯೋಗವನ್ನು ನಿರಾಕರ ಭಗವಂತನೇ ಕಲಿಸಿದ್ದರು. ಅವರ ಹೆಸರನ್ನು ಬದಲಾಯಿಸಿ ಕೃಷ್ಣನ ಹೆಸರನ್ನು ಹಾಕಿಬಿಟ್ಟಿದ್ದಾರೆ. ಸನ್ಯಾಸಿಗಳು ನಮ್ಮದೇ ಪ್ರಾಚೀನ ಯೋಗವೆಂದು ತಿಳಿಯುತ್ತಾರೆ. ಈಗ ತಂದೆಯು ಒಳ್ಳೆಯ ರೀತಿಯಲ್ಲಿ ತಿಳಿಸಿಕೊಡುತ್ತಾರೆ ಮಕ್ಕಳೇ ನನ್ನನ್ನು ಅರ್ಥಾ ಮಾಡಿಕೊಂಡಿದೀರಿ. ನಾನು ನಿಮ್ಮ ತಂದೆ ಆಗಿದೇನೆ. ನನ್ನನ್ನೇ ಪತಿತಪವನ, ಜ್ಞಾನಸಾಗರ ಎಂದು ಹೇಳುತ್ತೀರಿ. ಕೃಷ್ಣನು ಪತಿತ ಪ್ರಪಂಚದಲ್ಲಿ ಬರಲು ಸಾಧ್ಯವಿಲ್ಲ. ಆದರೆ ಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇದು ಎಷ್ಟೊಂದು ತಪ್ಪು ತಿಳುವಳಿಕೆಯಾಗಿದೆ, ಸಂಪೂರ್ಣ ತಮೋಪ್ರಧಾನವಾಗಿ ಬಿಟ್ಟಿದ್ದಾರೆ. ಯಾವಾಗ ಎಲ್ಲರನ್ನು ಮುಕ್ತಿಧಾಮದಲ್ಲಿ ಕರೆದುಕೊಂಡು ಹೋಗಬೇಕೋ ಆಗಲೇ ನಾನು ಬರುತ್ತೇನೆ.

ನೀವು ತಿಳಿದುಕೊಂಡಿದ್ದೀರಿ – ನಾವೀಗ ಓದುತ್ತಿದ್ದೇವೆ. ನಾವು ಈಶ್ವರೀಯ ವಿದ್ಯಾರ್ಧಿಗಳಾಗಿದ್ದೇವೆ. ಈ ಸ್ಮರಣೆ ಮಾಡುತ್ತಾ ಇರುತ್ತೀರೆಂದರೆ ರೋಮಾಂಚನವಾಗಿ ನಿಂತುಬಿಡುತ್ತೀರಿ. ತಂದೆಯು ನೀವು ಮಕ್ಕಳಿಗೆ ಜ್ಞಾನದ ಧಾರಣೆ ಮಾಡಿಸುತ್ತಿದ್ದಾರೆ. ನಂತರ ನೀವು ಇದನ್ನು ಏಕೆ ಮರೆತುಹೋಗುತ್ತೀರಿ. ಮಕ್ಕಳು ಜನ್ಮ ತೆಗೆದುಕೊಂಡ ನಂತರ ತಂದೆ ಎಂದು ಕರೆಯಲು ಪ್ರಾರಂಭಿಸುತ್ತಾರೆ, ನಾವು ವಾರಸಧಾರರೆಂದು ತಿಳಿದುಕೊಳ್ಳುತ್ತಾರೆ. ಆದರೆ ನೀವಿಲ್ಲಿ ನಿರಂತರ ತಾತನನ್ನು ನೆನಪು ಮಾಡಿ. ತಂದೆಯು ಮತ ಕೊಡುತ್ತಾರೆ ಮಕ್ಕಳೇ ಕಾಮ ಮಹಾ ಶತ್ರು ಆಗಿದೆ. ಇದು ನಿಮ್ಮನ್ನು ಆದಿ-ಮಧ್ಯ-ಅಂತ್ಯ ತುಂಬಾ ದುಃಖಿಗಳನ್ನಾಗಿ ಮಾಡಿದೆ. ಇದು ಮೃತ್ಯುಲೋಕ, ವೇಶ್ಯಾಲಯವಾಗಿದೆ. ತಂದೆಯು ಬಂದು ಶಿವಾಲಯವನ್ನಾಗಿ ಮಾಡುತ್ತಾರೆ. ಇದರಲ್ಲಿ ದೇವೀ-ದೇವತಾ ಧರ್ಮದ ರಾಜ್ಯವಿರುತ್ತದೆ. ಅವರು ಹೇಗೆ ರಾಜ್ಯ ಪಡೆದುಕೊಂಡರು. ಯಾವಾಗ ಪಡೆದುಕೊಂಡರು ಎನ್ನುವುದನ್ನು ನೀವೀಗ ತಿಳಿದುಕೊಂಡಿದೀರಿ. ಅವರು ತಿಳಿದುಕೊಳ್ಳುತ್ತಾರೆ – ದೇವೀ-ದೇವತೆಗಳು ಎಂದೂ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲವೆಂದು. ಈ ಮಾತು ಯಾರಾದರು ದೊಡ್ಡವರಿಗೆ ಅರ್ಥವಾಯಿತೆಂದರೆ ಅದು ಎಲ್ಲಾ ಕಡೆಯೂ ಹರಡುತ್ತದೆ. ಬಡವರ ಮಾತನ್ನು ಯಾರೂ ಕೇಳುವುದಿಲ್ಲ. ನಿಮ್ಮಲ್ಲಿಯೂ ಸಹ ಧಾರಣೆ ಮಾಡುವವರು ನಂಬರ್ವಾರ್ ಇದ್ದಾರೆ. ಶಾಲೆಯೂ ಒಂದೇ ಆಗಿದೆ. ಶಿಕ್ಷಕರೂ ಒಬ್ಬರೇ ಆಗಿದ್ದಾರೆ, ಆದರೆ ಓದುವವರೆಲ್ಲರೂ ನಂಬರ್ವಾರ್ ಆಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಮಾಯೆಯ ಯುಧದಿಂದ ಬಚಾವ್ ಆಗಲು ಜಿನ್ ಆಗಿ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ ಇರಬೇಕಾಗಿದೆ. ತಲೆಯ ಮೇಲೆ ಯಾವ ಪಾಪಗಳ ಹೊರೆಯಿದೆ ಅದನ್ನು ಯೋಗಬಲದಿಂದ ಕಳೆದುಕೊಳ್ಳಬೇಕಾಗಿದೆ. ಅತೀಂದ್ರಿಯ ಸುಖದಲ್ಲಿ ಇರಬೇಕಾಗಿದೆ.

2. ಬಾಯಿಯಿಂದ ಕೇವಲ ಶಿವ-ಶಿವ ಎಂದು ಹೇಳಬಾರದು. ತಂದೆಯೊಂದಿಗೆ ಸತ್ಯ ಪ್ರೀತಿಯನ್ನು ಇಟ್ಟುಕೊಳ್ಳಬೇಕಾಗಿದೆ. ಮುಳ್ಳುಗಳಿಂದ ಹೂಗಳನ್ನಾಗಿ ಮಾಡುವ ಸೇವೆಯಲ್ಲಿ ತತ್ಪರರಾಗಬೇಕಾಗಿದೆ.

ವರದಾನ:-

ಸದಾ ವಿಜಯಿಯಾಗುವ ಸಹಜ ಸಾಧನವಾಗಿದೆ – ಒಂದು ಬಲ, ಒಂದು ಭರವಸೆ. ಒಬ್ಬರಲ್ಲಿ ಭರವಸೆಯಿದ್ದರೆ ಬಲವು ಸಿಗುತ್ತದೆ. ನಿಶ್ಚಯವು ಸದಾ ನಿಶ್ಚಿಂತವಾಗಿ ಇಡುತ್ತದೆ ಹಾಗೂ ಯಾರ ಸ್ಥಿತಿ ನಿಶ್ಚಿಂತವಾಗಿ ಇರುತ್ತದೆಯೋ ಅವರು ಪ್ರತಿಯೊಂದು ಕಾರ್ಯದಲ್ಲಿ ಸಫಲವಾಗುತ್ತಾರೆ ಏಕೆಂದರೆ ನಿಶ್ಚಿಂತವಾಗಿ ಇರುವುದರಿಂದ ಬುದ್ಧಿಯು ಯಥಾರ್ಥವಾದ ನ್ಯಾಯ ಕೊಡುತ್ತದೆ. ಹಾಗಾದರೆ ಯಥಾರ್ಥ ನಿರ್ಣಯದ ಆಧಾರವಾಗಿದೆ – ನಿಶ್ಚಯಬುದ್ಧಿ, ನಿಶ್ಚಿಂತ. ಯೋಚಿಸುವ ಅವಶ್ಯಕತೆಯೂ ಇಲ್ಲ ಏಕೆಂದರೆ ಫಾಲೋ ಫಾದರ್ ಮಾಡಬೇಕು, ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡಬೇಕು, ಶ್ರೀಮತವೇನು ಸಿಗುವುದೋ ಅದರನುಸಾರ ನಡೆಯಬೇಕು. ಕೇವಲ ಶ್ರೀಮತದ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಸಾಗುತ್ತೀರೆಂದರೆ ವಿಜಯಿ ರತ್ನಗಳಾಗುತ್ತೀರಿ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ:

ಈ ಸಂಗಮದ ಸಮಯದಲ್ಲಿ ನಮಗೆ ಈಶ್ವರೀಯ ಜ್ಞಾನವೇನು ಸಿಗುತ್ತಿದೆ, ಇದೇ ಜ್ಞಾನವು ಸತ್ಯಯುಗದಲ್ಲಿ ಸಿಗುವುದೇ? ಈಗ ಇದರ ಬಗ್ಗೆ ತಿಳಿಸಲಾಗುತ್ತದೆ – ಸತ್ಯಯುಗದಲ್ಲಂತು ನಾವು ಸ್ವಯಂ ಜ್ಞಾನ ಸ್ವರೂಪರಾಗಿ ಇರುತ್ತೇವೆ. ದೇವತೆಯ ಪ್ರಾಲಬ್ಧವನ್ನು ಭೋಗಿಸುತ್ತೇವೆ, ಅಲ್ಲಿ ಜ್ಞಾನದ ಲೇವಾದೇವಿ ನಡೆಯುವುದಿಲ್ಲ, ಜ್ಞಾನದ ಅವಶ್ಯಕತೆಯಂತು ಅಜ್ಞಾನಿಗಳಿಗಿರುತ್ತದೆ. ಸತ್ಯಯುಗದಲ್ಲಂತು ಎಲ್ಲರೂ ಜ್ಞಾನ ಸ್ವರೂಪರಾಗಿ ಇರುತ್ತಾರೆ, ಅಲ್ಲಿ ಜ್ಞಾನ ಕೊಡುವ ಅವಶ್ಯಕತೆಯಿದೆ ಎನ್ನುವುದಕ್ಕೆ ಅಲ್ಲಿ ಯಾರೂ ಸಹ ಅಜ್ಞಾನಿಗಳೇ ಇರುವುದಿಲ್ಲ. ಈ ಸಮಯದಲ್ಲಿ ನಾವು ಇಡೀ ವಿರಾಟ (ವಿಸ್ತಾರ) ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇವೆ. ಆದಿಯಲ್ಲಿ ನಾವು ಯಾರಾಗಿದ್ದೆವು, ಎಲ್ಲಿಂದ ಬಂದೆವು ಮತ್ತು ಮಧ್ಯದಲ್ಲಿ ಕರ್ಮ ಬಂಧನದಲ್ಲಿ ಸಿಲುಕಿದೆವು ನಂತರ ಯಾವ ರೀತಿ ಕೆಳಗೆ ಬೀಳಲಾಯಿತು, ಅಂತ್ಯದಲ್ಲಿ ನಾವು ಕರ್ಮ ಬಂಧನದಿಂದ ಅತೀತರಾಗಿ ಕರ್ಮಾತೀತ ದೇವತೆಗಳಾಗಬೇಕು. ಈಗ ಪುರುಷಾರ್ಥವೇನು ನಡೆಯುತ್ತಿದೆ, ಇದರಿಂದ ನಾವು ಭವಿಷ್ಯ ಪ್ರಾಲಬ್ಧವಾದ ಸತ್ಯಯುಗಿ ದೇವತೆಯಾಗುತ್ತೇವೆ. ಒಂದುವೇಳೆ ಅಲ್ಲಿ ನಾವು ದೇವತೆಗಳು ಕೆಳಗಿಳಿಯುತ್ತೇವೆ ಎನ್ನುವುದೇನಾದರೂ ಗೊತ್ತಿದ್ದರೆ, ಈ ವಿಚಾರ ಬರುವುದರಿಂದಲೂ ಖುಷಿಯು ಮಾಯವಾಗಿ ಬಿಡುತ್ತದೆ. ಆದ್ದರಿಂದ ಅಲ್ಲಿ ಇದರ ತಿಳುವಳಿಕೆ ಇರುವುದಿಲ್ಲ. ಈ ವಿಚಾರಗಳೂ ಸಹ ಅಲ್ಲಿರುವುದಿಲ್ಲ, ನಮಗೆ ಈ ತಿಳುವಳಿಕೆಯ ಮೂಲಕ ಈಗ ಗೊತ್ತಾಗಿದೆ – ನಾವೀಗ ಏರಬೇಕು (ಶ್ರೇಷ್ಠರಾಗುವುದು) ಮತ್ತು ಸುಖದ ಜೀವನವನ್ನು ತಯಾರು ಮಾಡಿಕೊಳ್ಳಬೇಕು. ಅರ್ಧಕಲ್ಪ ನಮ್ಮ ಪ್ರಾಲಬ್ಧವನ್ನು ಭೋಗಿಸಿದ ನಂತರ ತಮ್ಮನ್ನು ತಾವೇ ವಿಸ್ಮೃತಿಗೊಳಿಸಿಕೊಂಡು, ಮಾಯೆಗೆ ವಶರಾಗಿ ಬೀಳುತ್ತೇವೆ. ಹೀಗೆ ಏರುವುದು ಮತ್ತು ಬೀಳುವುದು ಅನಾದಿ ಮಾಡಿ-ಮಾಡಲ್ಪಟ್ಟಂತಹ ಆಟವಾಗಿದೆ. ಈಗ ಇದರ ಸಂಪೂರ್ಣ ಜ್ಞಾನವು ಬುದ್ಧಿಯಲ್ಲಿದೆ, ಇದು ಸತ್ಯಯುಗದಲ್ಲಿ ಇರುವುದಿಲ್ಲ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top