11 July 2021 KANNADA Murli Today | Brahma Kumaris

Read and Listen today’s Gyan Murli in Kannada

July 10, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಬ್ರಹ್ಮಾ ಮಾತಾಪಿತರಿಗೆ ತನ್ನ ಬ್ರಾಹ್ಮಣ ಮಕ್ಕಳ ಪ್ರತಿ ಎರಡು ಶುಭ ಆಸೆಗಳು

♫ ಕೇಳು ಇಂದಿನ ಮುರ್ಲಿ (audio)➤

ಇಂದು ವಿಶ್ವದ ಸರ್ವ ಆತ್ಮರ ಸರ್ವ ಆಸೆಗಳನ್ನು ಪೂರ್ಣ ಮಾಡುವಂತಹ ಬಾಪ್ದಾದಾ ತನ್ನ ಶುಭ ಆಸೆಗಳ ಆತ್ಮಿಕ ದೀಪಗಳನ್ನು ನೋಡುತ್ತಿದ್ದರು. ಹೇಗೆ ತಂದೆಯು ಸರ್ವರ ಶುಭ ಆಸೆಗಳನ್ನು ಪೂರ್ಣ ಮಾಡುವವರಾಗಿದ್ದಾರೆ ಅಂದಮೇಲೆ ಮಕ್ಕಳೂ ಸಹ ತಂದೆಯ ಶುಭ ಆಸೆಗಳನ್ನು ಪೂರ್ಣ ಮಾಡುವವರಾಗಿದ್ದೀರಿ. ತಂದೆಯು ಮಕ್ಕಳ ಆಸೆಗಳನ್ನು ಪೂರ್ಣ ಮಾಡುತ್ತಾರೆ, ಮಕ್ಕಳು ತಂದೆಯದನ್ನು ಪೂರ್ಣ ಮಾಡುತ್ತೀರಿ. ಮಕ್ಕಳ ಪ್ರತಿ ತಂದೆಗೆ ಯಾವ ಶುಭ ಆಸೆಗಳಿದೆ ಎಂಬುದನ್ನು ತಿಳಿದುಕೊಂಡಿದ್ದೀರಲ್ಲವೆ? ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ತಂದೆಯ ಆಶಾ ದೀಪವಾಗಿದ್ದೀರಿ. ದೀಪ ಅರ್ಥಾತ್ ಸದಾ ಜಾಗೃತ ಜ್ಯೋತಿ. ಸದಾ ಬೆಳಗುತ್ತಿರುವ ದೀಪವು ಪ್ರಿಯವೆನಿಸುತ್ತದೆ. ಒಂದುವೇಳೆ ಪದೇ-ಪದೇ ಟಿಮ್ಟಿಮಾ ಎನ್ನುವ ದೀಪವಾಗಿದ್ದರೆ ಹೇಗೆನಿಸುವುದು? ತಂದೆಯ ಸರಳ ಆಸೆಗಳನ್ನು ಪೂರ್ಣ ಮಾಡುವವರು ಅರ್ಥಾತ್ ಸದಾ ಬೆಳಗುತ್ತಿರುವ ದೀಪಗಳನ್ನು ಬಾಪ್ದಾದಾ ನೋಡಿ ಹರ್ಷಿತರಾಗುತ್ತಾರೆ. ಇಂದು ಬಾಪ್ದಾದಾ ಪರಸ್ಪರ ವಾರ್ತಾಲಾಪ ಮಾಡುತ್ತಿದ್ದರು. ಬಾಪ್ದಾದಾರವರ ಮುಂದೆ ಸದಾ ಯಾರಿರುತ್ತಾರೆ? ಮಕ್ಕಳಿರುತ್ತಾರಲ್ಲವೆ ಅಂದಾಗ ಮಕ್ಕಳ ಪ್ರತಿಯೇ ವಾರ್ತಾಲಾಪ ಮಾಡುತ್ತಾರಲ್ಲವೆ. ಮಕ್ಕಳ ಪ್ರತಿ ಇಲ್ಲಿಯವರೆಗೆ ಯಾವುದಾದರೂ ಶುಭ ಆಸೆಗಳಿದೆಯೇ ಎಂದು ಶಿವ ತಂದೆಯು ಬ್ರಹ್ಮಾ ತಂದೆಯೊಂದಿಗೆ ಕೇಳುತ್ತಿದ್ದರು. ಆಗ ಬ್ರಹ್ಮಾ ತಂದೆಯು ತಿಳಿಸಿದರು – ಮಕ್ಕಳು ನಂಬರ್ವಾರ್ ತನ್ನ ಶಕ್ತಿಯ ಪ್ರಮಾಣ, ಸ್ನೇಹದ ಪ್ರಮಾಣ, ಗಮನದ ಪ್ರಮಾಣ ಸದಾ ತಂದೆಯ ಶುಭ ಆಸೆಗಳನ್ನು ಪೂರ್ಣ ಮಾಡುವುದರಲ್ಲಿ ಅವಶ್ಯವಾಗಿ ತೊಡಗಿದ್ದಾರೆ, ಪ್ರತಿಯೊಬ್ಬರ ಹೃದಯದಲ್ಲಿ ಉಲ್ಲಾಸ-ಉತ್ಸಾಹವೂ ಅವಶ್ಯವಾಗಿ ಇದೆ – ತಂದೆಯು ನಮ್ಮ ಸರ್ವ ಆಸೆಗಳನ್ನು ಪೂರ್ಣ ಮಾಡಿದ್ದಾರೆಂದ ಮೇಲೆ ನಾವೂ ಸಹ ತಂದೆಯ ಸರ್ವ ಆಸೆಗಳನ್ನು ಪೂರ್ಣ ಮಾಡಿಯೇ ತೋರಿಸಬೇಕೆಂದು. ಆದರೆ ಮಾಡಿ ತೋರಿಸುವುದರಲ್ಲಿ ನಂಬರ್ವಾರ್ ಆಗಿ ಬಿಡುತ್ತಾರೆ. ಆಲೋಚಿಸುವುದು ಮತ್ತು ಮಾಡಿ ತೋರಿಸುವುದರಲ್ಲಿ ಅಂತರವಾಗಿ ಬಿಡುತ್ತದೆ. ಕೆಲಕೆಲವು ಮಕ್ಕಳು ಈ ರೀತಿಯೂ ಇದ್ದಾರೆ ಆಲೋಚಿಸುವುದು ಮತ್ತು ಮಾಡಿ ತೋರಿಸುವುದರಲ್ಲಿ ಸಮಾನತೆಯಿದೆ ಆದರೆ ಎಲ್ಲರೂ ಇದೇ ರೀತಿ ಇಲ್ಲ. ಯಾವ ಸಮಯದಲ್ಲಿ ತಂದೆಯ ಸ್ನೇಹ ಮತ್ತು ತಂದೆಯ ಮೂಲಕ ಆಗಿರುವ ಪ್ರಾಪ್ತಿಗಳನ್ನು ಅಂದರೆ ತಂದೆಯು ಏನು ಮಾಡಿದರು ಮತ್ತು ಏನನ್ನು ಕೊಟ್ಟರು ಎಂಬುದನ್ನು ಸ್ಮೃತಿಯಲ್ಲಿ ತಂದುಕೊಂಡಾಗ ಸ್ನೇಹ ಸ್ವರೂಪರಾಗುವ ಕಾರಣ ತಂದೆಯು ಏನು ಹೇಳಿದ್ದಾರೆಯೋ ಅದನ್ನು ನಾನೇ ಮಾಡಿ ತೋರಿಸುವೆನು ಎಂದು ಬಹಳ ಉಲ್ಲಾಸ-ಉತ್ಸಾಹದಲ್ಲಿ ಹಾರುತ್ತಾರೆ. ಆದರೆ ಯಾವಾಗ ಸೇವೆಯ ಅಥವಾ ಸಂಘಟನೆಯ ಸಂಪರ್ಕದಲ್ಲಿ ಬರುವರೋ ಅರ್ಥಾತ್ ಅದನ್ನು ಪ್ರಯೋಗದಲ್ಲಿ ತರಲು ಕರ್ಮದಲ್ಲಿ ಬರಬೇಕಾಗುವುದೋ ಆಗ ಕೆಲವೊಂದೆಡೆ ಸಂಕಲ್ಪ ಮತ್ತು ಕರ್ಮ ಸಮಾನವಾಗಿ ಬಿಡುತ್ತದೆ ಅರ್ಥಾತ್ ಅದೇ ಉಲ್ಲಾಸ-ಉತ್ಸಾಹವಿರುತ್ತದೆ. ಇನ್ನೂ ಕೆಲವೊಮ್ಮೆ ಕರ್ಮದಲ್ಲಿ ಬರುವ ಸಮಯದಲ್ಲಿ ಸಂಘಟನೆಯ ಸಂಸ್ಕಾರ ಹಾಗೂ ಮಾಯೆ ಅಥವಾ ಪ್ರಕೃತಿಯ ಮೂಲಕ ಬಂದಂತಹ ಪರಿಸ್ಥಿತಿಗಳೆಂಬ ಪರೀಕ್ಷೆಗಳು ಕೆಲವೊಂದೆಡೆ ಕಷ್ಟದ ಅನುಭವ ಮಾಡಿಸುತ್ತದೆ ಆದ್ದರಿಂದ ಸ್ನೇಹದಿಂದ ಯಾವ ಉಲ್ಲಾಸ-ಉತ್ಸಾಹವಿತ್ತೋ ಅದು ಪರಿಸ್ಥಿತಿಗಳ ಕಾರಣ, ಸಂಸ್ಕಾರದ ಕಾರಣ ಮಾಡುವುದರಲ್ಲಿ ಅಂತರವನ್ನು ತಂದು ಬಿಡುತ್ತದೆ ಆಗ ಆಲೋಚಿಸುತ್ತಾರೆ – ಒಂದುವೇಳೆ ಈ ರೀತಿಯಾಗದಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಹೀಗೆ “ಹಾಗಿದ್ದರೆ, ಹೀಗಿದ್ದರೆ” ಎಂಬ ಚಕ್ರದಲ್ಲಿ ಬಂದು ಬಿಡುತ್ತಾರೆ. ಈ ರೀತಿಯಾಗಬೇಕಿತ್ತು ಆದರೆ ಈ ರೀತಿಯಾಯಿತು ಆದ್ದರಿಂದ ಇದಾಯಿತು, ಈ ಹಾಗೆ, ಹೀಗೆ ಎಂಬ ಚಕ್ರದಲ್ಲಿ ಬಂದು ಬಿಡುತ್ತಾರೆ ಆದ್ದರಿಂದ ಉಲ್ಲಾಸ-ಉತ್ಸಾಹದ ಸಂಕಲ್ಪ ಮತ್ತು ಪ್ರತ್ಯಕ್ಷ ಕರ್ಮದಲ್ಲಿ ಅಂತರವಾಗಿ ಬಿಡುತ್ತದೆ.

ಅಂದಾಗ ಬ್ರಹ್ಮಾ ತಂದೆಯು ಮಕ್ಕಳ ಪ್ರತಿ ಎರಡು ವಿಶೇಷ ಆಸೆಗಳನ್ನು ತಿಳಿಸುತ್ತಿದ್ದರು ಏಕೆಂದರೆ ಬ್ರಹ್ಮಾ ತಂದೆಯು ಮಕ್ಕಳನ್ನು ಜೊತೆ ಕರೆದುಕೊಂಡು ಹೋಗಲೂ ಬೇಕಾಗಿದೆ, ಜೊತೆ ಇರಲೂ ಬೇಕಾಗಿದೆ. ಶಿವ ತಂದೆಯಂತೂ ಜೊತೆ ಕರೆದುಕೊಂಡು ಹೋಗುವವರಾಗಿದ್ದಾರೆ ಆದರೆ ರಾಜ್ಯದಲ್ಲಿ ಅಥವಾ ಇಡೀ ಕಲ್ಪದಲ್ಲಿಯೇ ಜೊತೆಯಿರುವುದಿಲ್ಲ. ಬ್ರಹ್ಮಾ ತಂದೆಯು ಸದಾ ಜೊತೆಯಿರುವವರಾಗಿದ್ದಾರೆ ಮತ್ತು ಶಿವ ತಂದೆಯು ಸಾಕ್ಷಿಯಾಗಿ ನೋಡುವವರಾಗಿದ್ದಾರೆ. ಅಂತರವಿದೆಯಲ್ಲವೆ. ಬ್ರಹ್ಮಾ ತಂದೆಗೆ ಮಕ್ಕಳ ಪ್ರತಿ ಸದಾ ಸಮಾನರನ್ನಾಗಿ ಮಾಡುವ ಶುಭ ಆಸೆಗಳು ಇಮರ್ಜ್ ಆಗಿರುತ್ತವೆ. ಹಾಗೆ ನೋಡಿದರೆ ಬಾಪ್-ದಾದಾ ಇಬ್ಬರೂ ಜವಾಬ್ದಾರರಾಗಿದ್ದಾರೆ. ಆದರೂ ಸಹ ಸಾಕಾರದಲ್ಲಿ ಬ್ರಹ್ಮನು ರಚಯಿತನಾಗಿರುವುದರಿಂದ ಸಾಕಾರ ರಚಯಿತನಿಗೆ ಸಾಕಾರ ರಚನೆಯ ಪ್ರತಿ ಸ್ವತಹ ಸ್ನೇಹವಿರುತ್ತದೆ. ಮೊದಲೂ ಸಹ ತಿಳಿಸಿದ್ದೆವು – ತಂದೆ-ತಾಯಿ ಇಬ್ಬರಿಗೂ ಸಹ ಮಕ್ಕಳಾಗಿದ್ದರೂ ಸಹ ವಿಶೇಷವಾಗಿ ಮಕ್ಕಳ ಪ್ರತಿ ತಾಯಿಗೆ ಸ್ನೇಹವಿರುತ್ತದೆ ಏಕೆಂದರೆ ತಾಯಿಯು ಪಾಲನೆಗೆ ನಿಮಿತ್ತವಾಗುತ್ತಾಳೆ. ತಂದೆಯ ಸಮಾನರನ್ನಾಗಿ ಮಾಡಲು ತಾಯಿಯು ನಿಮಿತ್ತವಾಗುತ್ತಾಳೆ ಆದ್ದರಿಂದ ತಾಯಿಯ ಮಮತೆಯ ಗಾಯನವಿದೆ. ಇದು ಮೋಹದ ವಿಕಾರದ ಮಮತೆಯಲ್ಲ, ಶುದ್ಧ ಮಮತೆಯಾಗಿದೆ. ಎಲ್ಲಿ ಮೋಹವಿರುವುದೋ ಅಲ್ಲಿ ವ್ಯಾಕುಲರಾಗುತ್ತಾರೆ ಮತ್ತು ಎಲ್ಲಿ ಆತ್ಮಿಕ ಮಮತೆಯಿರುವುದೋ ಅಥವಾ ಸ್ನೇಹವೆಂದಾದರೂ ಹೇಳಿ, ಆತ್ಮಿಕ ಸ್ನೇಹವಿದ್ದಲ್ಲಿ ತಾಯಿಗೆ ಮಕ್ಕಳ ಪ್ರತಿ ಹೆಮ್ಮೆಯಿರುತ್ತದೆ, ವ್ಯಾಕುಲವಾಗುವುದಿಲ್ಲ ಅಂದಾಗ ಬ್ರಹ್ಮಾ ತಾಯಿ ಎಂದಾದರೂ ಹೇಳಿ, ತಂದೆಯೆಂದಾದರೂ ಹೇಳಿ. ಎರಡೂ ರೂಪದಿಂದ ವಿಶೇಷವಾಗಿ ಯಾವ ಆಸೆಯನ್ನು ಇಟ್ಟುಕೊಳ್ಳುತ್ತಾರೆ? ಒಂದು ತಂದೆಯ ಪ್ರತಿ ಆಸೆಯಿದೆ ಮತ್ತು ಇನ್ನೊಂದು ಬ್ರಾಹ್ಮಣ ಪರಿವಾರದ ಪ್ರತಿ ಶುಭ ಆಸೆಯಿದೆ. ತಂದೆಯ ಪ್ರತಿ ಶುಭ ಆಸೆಯೇನೆಂದರೆ ಹೇಗೆ ಬಾಪ್ದಾದಾ ಸಾಕ್ಷಿಯೂ ಆಗಿದ್ದಾರೆ ಮತ್ತು ಸಾಥಿಯೂ ಆಗಿದ್ದಾರೆ. ಅದೇರೀತಿ ಬಾಪ್ದಾದಾರವರ ಸಮಾನ ಸಾಕ್ಷಿ ಮತ್ತು ಸಾತಿ (ಜೊತೆಗಾರ), ಸಮಯ ಪ್ರಮಾಣ ಎಲ್ಲಾ ಮಕ್ಕಳು ಸದಾ ಇವೆರಡೂ ಪಾತ್ರವನ್ನು ಅಭಿನಯಿಸುವಂತಹ ಮಹಾನ್ ಆತ್ಮರಾಗಲಿ ಅಂದಾಗ ತಂದೆಯ ಪ್ರತಿ ಶುಭ ಆಸೆಯೇನೆಂದರೆ ಬಾಪ್ದಾದಾರವರ ಸಮಾನ ಸಾಕ್ಷಿ ಮತ್ತು ಸಾತಿಯಾಗುವುದು.

ಒಂದು ಮಾತಿನಲ್ಲಿ ಬಾಪ್-ದಾದಾ ಇಬ್ಬರೂ ಸಹ ಮಕ್ಕಳಿಂದ ಪೂರ್ಣ ಸಂತುಷ್ಟರಾಗಿದ್ದಾರೆ – ಅದು ಯಾವುದು? ಪ್ರತಿಯೊಬ್ಬ ಮಗುವಿಗೆ ಬಾಪ್ದಾದಾರೊಂದಿಗೆ ಸ್ನೇಹವು ಚೆನ್ನಾಗಿದೆ. ಬಾಪ್-ದಾದಾರವರೊಂದಿಗೆ ಸ್ನೇಹವು ಎಂದೂ ತುಂಡಾಗುವುದಿಲ್ಲ ಮತ್ತು ಸ್ನೇಹವಿರುವ ಕಾರಣವೇ ಶಕ್ತಿಶಾಲಿಯಾಗಿ ಅಥವಾ ಯಥಾ ಶಕ್ತಿಯಾಗಿ ನಡೆಯುತ್ತಿದ್ದಾರೆ. ಬ್ರಾಹ್ಮಣ ಆತ್ಮರೂಪಿ ಮುತ್ತುಗಳಾಗಿ ಸ್ನೇಹದ ದಾರದಲ್ಲಿ ಪೋಣಿಸಲ್ಪಟ್ಟಿದ್ದಾರೆ. ಸ್ನೇಹದ ದಾರವು ಗಟ್ಟಿಯಾಗಿದೆ ಆದ್ದರಿಂದ ಅದು ತುಂಡಾಗಲು ಸಾಧ್ಯವಿಲ್ಲ. ಸ್ನೇಹದ ಮಾಲೆಯಂತೂ ಉದ್ದವಾಗಿದೆ. ವಿಜಯ ಮಾಲೆಯು ಚಿಕ್ಕದಾಗಿದೆ. ಬಾಪ್-ದಾದಾರವರ ಸ್ನೇಹದ ಮೇಲೆ ಸಮರ್ಪಿತರೂ ಆಗಿದ್ದಾರೆ, ತಂದೆಯ ಸ್ನೇಹದಿಂದ ಯಾರೆಷ್ಟಾದರೂ ಬೇರ್ಪಡಿಸಲು ಪ್ರಯತ್ನ ಪಡಲಿ ಆದರೆ ಸ್ನೇಹದಲ್ಲಿ ಈ ರೀತಿ ಬಲಿಹಾರಿಯಾಗಿದ್ದಾರೆ ಅದರಿಂದ ಬೇರ್ಪಡಲು ಸಾಧ್ಯವೇ ಇಲ್ಲ. ಎಲ್ಲರಿಗೆ ಹೃದಯದ ಸ್ನೇಹದಿಂದ “ನನ್ನ ಬಾಬಾ” ಶಬ್ಧವು ಹೊರ ಬರುತ್ತದೆ ಅಂದಾಗ ಸ್ನೇಹದ ಮಾಲೆಯಲ್ಲಂತೂ ಸಂತುಷ್ಟರಾಗಿದ್ದಾರೆ ಆದರೆ ತಂದೆಯ ಸಮಾನ ಶಕ್ತಿಶಾಲಿ, ಹಾಗೆ-ಹೀಗೆ ಎಂಬ ಚಕ್ರದಿಂದ ಭಿನ್ನವಾಗುವುದರಲ್ಲಿ ಸದಾ ಶಕ್ತಿಶಾಲಿಯಾಗುವುದರ ಬದಲು ಯಥಾಶಕ್ತಿಯಾಗಿದ್ದಾರೆ. ಬಾಪ್ದಾದಾ ಇದರಲ್ಲಿ ತಂದೆಯ ಸಮಾನ ಸದಾ ಶಕ್ತಿಶಾಲಿಯನ್ನಾಗಿ ಮಾಡುವ ಶುಭ ಆಸೆಯನ್ನು ಎಲ್ಲಾ ಮಕ್ಕಳಲ್ಲಿ ಇಟ್ಟುಕೊಳ್ಳುತ್ತಾರೆ. ಎಲ್ಲಿ ಸಾಕ್ಷಿಯಾಗಬೇಕೋ ಅಲ್ಲಿ ಕೆಲವೊಮ್ಮೆ ಸಾಥಿಯಾಗಿ ಬಿಡುತ್ತಾರೆ ಮತ್ತು ಎಲ್ಲಿ ಸಾಥಿಯಾಗಬೇಕೋ ಅಲ್ಲಿ ಸಾಕ್ಷಿಯಾಗಿ ಬಿಡುತ್ತಾರೆ. ಸಮಯ ಪ್ರಮಾಣ ಎರಡೂ ರೀತಿಗಳನ್ನು ನಿಭಾಯಿಸುವುದಕ್ಕೆ ತಂದೆಯ ಸಮಾನರಾಗುವುದು ಎಂದು ಹೇಳುತ್ತಾರೆ. ಸ್ನೇಹದ ಮಾಲೆಯಂತೂ ತಯಾರಾಗಿದೆ ಆದರೆ ವಿಜಯ ಮಾಲೆಯು ಇಷ್ಟು ಉದ್ದವಾಗಿ ತಯಾರಾಗಬೇಕು – ಬಾಪ್ದಾದಾ ಇದೇ ಶುಭ ಆಸೆಯನ್ನು ಇಟ್ಟುಕೊಳ್ಳುತ್ತಾರೆ. ಕೇವಲ 108 ಅಷ್ಟೇ ಅಲ್ಲ, ಬಾಪ್ದಾದಾ ಅನುಮತಿ ಕೊಡುತ್ತೇವೆ – ಎಷ್ಟು ಮಂದಿ ವಿಜಯಿಗಳಾಗಬೇಕೋ ಅಷ್ಟು ದೊಡ್ಡ ವಿಜಯ ಮಾಲೆಯು ಆಗುವ ಸಾಧ್ಯತೆಯಿದೆ. 108 ಎಂದು ಹದ್ದಿನಲ್ಲಿಯೂ ಬರಬೇಡಿ, ಇರುವುದೇ 108 ಅಂದಮೇಲೆ ನಾವಂತೂ ಅದರಲ್ಲಿ ಬರಲು ಸಾಧ್ಯವಿಲ್ಲ ಎನ್ನುವ ಮಾತೇನೂ ಇಲ್ಲ. ಯಾರೆಲ್ಲಾ ಆಗಬೇಕೋ ಆಗಿರಿ.

ವಿಜಯಿಗಳಾಗುವ ಒಂದು ಬ್ಯಾಲೆನ್ಸ್ ನ ಅವಶ್ಯಕತೆಯಿದೆ – ನೆನಪು ಮತ್ತು ಸೇವೆಯ ಬ್ಯಾಲೆನ್ಸ್ನ್ನು ಸದಾ ಕೇಳುತ್ತಿರುತ್ತೀರಿ ಆದರೆ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಬಯಸಿದರೂ ಏಕೆ ಇರುವುದಿಲ್ಲ? ತಿಳಿದುಕೊಂಡಿದ್ದರೂ ಸಹ ಅದು ಕರ್ಮದಲ್ಲಿ ಏಕೆ ಬರುವುದಿಲ್ಲ? ಅದಕ್ಕಾಗಿ ಇನ್ನೊಂದು ಬ್ಯಾಲೆನ್ಸ್ನ ಅವಶ್ಯಕತೆಯಿದೆ. ಅದೇ ಬ್ಯಾಲೆನ್ಸ್ ಬ್ರಹ್ಮಾ ತಂದೆಯ ಎರಡನೇ ಆಸೆಯಾಗಿದೆ. ಸಮಾನರಾಗುವ ಒಂದು ಆಸೆಯಂತೂ ತಂದೆಯ ಪ್ರತಿ ಆಯಿತು, ಎರಡನೇ ಆಸೆಯು ಪರಿವಾರದ ಪ್ರತಿ ಆಗಿದೆ. ಅದು ಯಾವುದೆಂದರೆ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನ ಪ್ರತಿ ಸದಾ ಶುಭ ಭಾವನೆ, ಶುಭ ಕಾಮನೆಯು ಕರ್ಮದಲ್ಲಿರಲಿ. ಕೇವಲ ಇಚ್ಛೆಯವರೆಗೆ, ಸಂಕಲ್ಪದವರೆಗೆ ಅಲ್ಲ. ಕೆಲವರು ಹೇಳುತ್ತಾರೆ – ಶುಭ ಭಾವನೆಯನ್ನು ಇಡುವುದೇ ನಮ್ಮ ಇಚ್ಛೆಯಿದೆ ಆದರೆ ಕರ್ಮದಲ್ಲಿ ಬದಲಾಗಿ ಬಿಡುತ್ತದೆ. ಇದರ ವಿಸ್ತಾರವನ್ನು ಮೊದಲೂ ತಿಳಿಸಿದ್ದೇವೆ. ಪರಿವಾರದ ಪ್ರತಿ ಸದಾ ಶುಭ ಭಾವನೆ, ಶುಭ ಕಾಮನೆ ಏಕೆ ಇರುವುದಿಲ್ಲ, ಇದಕ್ಕೆ ಕಾರಣವೇನು? ಹೇಗೆ ತಂದೆಯೊಂದಿಗೆ ಹೃದಯದ ಸ್ನೇಹ, ಜಿಗರೀ ಸ್ನೇಹವಿದೆ ಮತ್ತು ಹೃದಯದ ಜಿಗರೀ ಸ್ನೇಹದ ಚಿಹ್ನೆಯಾಗಿದೆ – ಅವರೊಂದಿಗೆ ಸಂಬಂಧವು ತುಂಡಾಗದಿರುವುದು. ತಂದೆಯ ಪ್ರತಿ ಯಾರೆಷ್ಟಾದರೂ ನಿಮಗೆ ತಪ್ಪು ತಿಳುವಳಿಕೆ ನೀಡಲಿ, ಯಾರೆಷ್ಟೇ ಬಂದು ತಮಗೆ ಎಂತಹದ್ದೇ ಮಾತುಗಳನ್ನು ತಿಳಿಸಲಿ ಅಥವಾ ಸಾಕಾರದಲ್ಲಿ ಸ್ವಯಂ ತಂದೆಯೂ ಸಹ ಕೆಲವು ಮಕ್ಕಳನ್ನು ಮುಂದುವರೆಸುವುದಕ್ಕಾಗಿ ಸ್ವಯಂ ಬಂದು ಯಾವುದೇ ಸೂಚನೆ ಅಥವಾ ಶಿಕ್ಷಣ ಕೊಡಲಿ ಆದರೆ ಎಲ್ಲಿ ಸ್ನೇಹವಿರುವುದೋ ಅಲ್ಲಿ ಶಿಕ್ಷಣ ಅಥವಾ ಯಾವುದೇ ಪರಿವರ್ತನೆಯ ಸಲಹೆ, ತಪ್ಪು ಅರ್ಥವನ್ನು ಉತ್ಪನ್ನ ಮಾಡುವುದಿಲ್ಲ. ಸದಾ ಇದೇ ಭಾವನೆಯಿರುತ್ತದೆ – ತಂದೆಯು ಏನನ್ನು ಹೇಳುವರೋ ಅದರಲ್ಲಿ ಕಲ್ಯಾಣವಿದೆ. ಎಂದೂ ಸ್ನೇಹದ ಕೊರತೆಯಾಗುವುದಿಲ್ಲ. ಇನ್ನೂ ತಮ್ಮನ್ನು ತಂದೆಯ ಹೃದಯಕ್ಕೆ ಸಮೀಪವೆಂದು ತಿಳಿಯುತ್ತಾ ಇದ್ದಿರಿ – ಇದು ನನ್ನತನದ ಸ್ನೇಹವಾಗಿದೆ. ಇದಕ್ಕೆ ಹೃದಯದ ಜಿಗರೀ ಸ್ನೇಹವೆಂದು ಹೇಳುತ್ತಾರೆ. ಇದು ಭಾವನೆಯನ್ನು ಪರಿವರ್ತನೆ ಮಾಡಿ ಬಿಡುತ್ತದೆ. ತಂದೆಯ ಪ್ರತಿ ಇರುವ ಸ್ನೇಹದ ಗುರುತೇನೆಂದರೆ – ಸದಾ ತಂದೆಯು ಹೇಳಿದರು ಮತ್ತು “ಹಾಂಜಿ” ಎಂದು ಮಾಡಿದಿರಿ. ಅದೇ ರೀತಿ ಬ್ರಾಹ್ಮಣ ಪರಿವಾರದ ಪ್ರತಿ ಸದಾ ಇದೇ ಹೃದಯದ ಸ್ನೇಹವಿರಲಿ ಭಾವನಾ ಪರಿವರ್ತನೆಯ ವಿಧಿಯಿರಲಿ ಆಗ ತಂದೆ ಮತ್ತು ಪರಿವಾರದಲ್ಲಿ ಸ್ನೇಹದ ಬ್ಯಾಲೆನ್ಸ್ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಸ್ವತಹ ಕರ್ಮದಲ್ಲಿ ಕಾಣುವುದು ಅಂದಾಗ ತಂದೆಯ ಸ್ನೇಹದ ಪರಡೆ (ತಕ್ಕಡಿಯ ತಟ್ಟೆ) ಯು ಭಾರಿಯಾಗಿದೆ ಆದರೆ ಸರ್ವ ಬ್ರಾಹ್ಮಣ ಪರಿವಾರದಲ್ಲಿ ಸ್ನೇಹದ ಪರಡೆಯು ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಭಾರಿ, ಕೆಲವೊಮ್ಮೆ ಹಗುರ, ಕೆಲವರ ಪ್ರತಿ ಭಾರಿ, ಇನ್ನೂ ಕೆಲವರ ಪ್ರತಿ ಹಗುರ – ಹೀಗೆ ಪರಿವಾರ ಸ್ನೇಹದ ತಟ್ಟೆಯು ಮೇಲೆ ಕೆಳಗೆ ಆಗುತ್ತಿರುತ್ತದೆ. ಈ ತಂದೆ ಮತ್ತು ಮಕ್ಕಳ ಸ್ನೇಹದ ಬ್ಯಾಲೆನ್ಸ್ ಇರಲಿ. ಇದೇ ಬ್ರಹ್ಮಾ ತಂದೆಯ ಶುಭ ಆಸೆಯಾಗಿದೆ. ತಿಳಿಯಿತೆ – ಇದರಲ್ಲಿ ತಂದೆಯ ಸಮಾನರಾಗಿ.

ಸ್ನೇಹವು ಇಂತಹ ಶ್ರೇಷ್ಠತೆಯಾಗಿದೆ. ಯಾವುದರಲ್ಲಿ ತಾವು ಮಾಡಿದಿರಿ ಅಥವಾ ಬೇರೆಯವರು ಮಾಡಿದರು, ಇದರಲ್ಲಿ ಇಬ್ಬರಲ್ಲಿಯೂ ಸಮಾನ ಖುಷಿಯ ಅನುಭವವಾಗಲಿ. ಹೇಗೆ ಬಾಪ್ದಾದಾ ಸ್ಥಾಪನೆಯ ಕಾರ್ಯಾರ್ತವಾಗಿ ನಿಮಿತ್ತರಾದರು ಆದರೆ ಯಾವಾಗ ಮಕ್ಕಳನ್ನು ಸೇವೆಯಲ್ಲಿ ಜೊತೆಗಾರರನ್ನಾಗಿ ಮಾಡಿಕೊಂಡರು. ಒಂದುವೇಳೆ ಪ್ರಾಕ್ಟಿಕಲ್ನಲ್ಲಿ ಮಕ್ಕಳು ತಂದೆಗಿಂತಲೂ ಹೆಚ್ಚು ಸೇವೆ ಮಾಡುತ್ತಾರೆ, ಮಾಡುತ್ತಾ ಇರುತ್ತಿದ್ದರೆಂದರೆ ಬಾಪ್ದಾದಾ ಸದಾ ಮಕ್ಕಳನ್ನು ಸೇವೆಯಲ್ಲಿ ಮುಂದುವರೆಸುತ್ತಾ ಸ್ನೇಹದ ಕಾರಣ ಖುಷಿಯಾಗಿರುತ್ತಿದ್ದರು. ಎಂದೂ ಸಹ ಹೃದಯದ ಸ್ನೇಹದಲ್ಲಿ ಈ ಸಂಕಲ್ಪವು ಉತ್ಪನ್ನವಾಗಲಿಲ್ಲ – ಸೇವೆಯಲ್ಲಿ ಮಕ್ಕಳೇ ಏಕೆ ಮುಂದುವರೆಯಬೇಕು, ನಿಮಿತ್ತನಂತೂ ನಾನಾಗಿದ್ದೇನೆ, ನಾನೇ ಇವರನ್ನು ನಿಮಿತ್ತ ಮಾಡಿದೆನು ಎಂದು ಸ್ವಪ್ನ ಮಾತ್ರದಲ್ಲಿಯೂ ಈ ಭಾವನೆಯು ಉತ್ಪನ್ನವಾಗಲಿಲ್ಲ. ಇದಕ್ಕೆ ಸತ್ಯ ಸ್ನೇಹ, ನಿಸ್ವಾರ್ಥ ಸ್ನೇಹ, ಆತ್ಮಿಕ ಸ್ನೇಹವೆಂದು ಹೇಳಲಾಗುತ್ತದೆ. ಸದಾ ಮಕ್ಕಳನ್ನು ಮುಂದೆ ನಿಮಿತ್ತ ಮಾಡುವುದರಲ್ಲಿ ಹರ್ಷಿತರಾಗಿದ್ದರು. ಮಕ್ಕಳು ಮಾಡಲಿ ಅಥವಾ ತಂದೆಯು ಮಾಡಲಿ ಇದರಲ್ಲಿ ನಾನು ಎಂಬುದು ಇರಲಿಲ್ಲ. ನನ್ನ ಕೆಲಸವಾಗಿದೆ, ನನ್ನ ಕರ್ತವ್ಯವಾಗಿದೆ, ನನ್ನ ಅಧಿಕಾರವಾಗಿದೆ, ನನ್ನ ಬುದ್ಧಿಯಾಗಿದೆ, ನನ್ನ ಯೋಜನೆಯಾಗಿದೆ ಎಂಬುದಿಲ್ಲ. ಸ್ನೇಹವು ಈ ನನ್ನತನವನ್ನು ಕಳೆಯುತ್ತದೆ. ತಾವು ಮಾಡಿದರೆ ನಾನು ಮಾಡಿದಂತೆ, ನಾನು ಮಾಡಿದರೆ ತಾವು ಮಾಡಿದಂತೆ – ಈ ಶುಭ ಭಾವನೆ ಹಾಗೂ ಶುಭ ಕಾಮನೆಯಿರಲಿ. ಇದಕ್ಕೆ ಹೃದಯದ ಸ್ನೇಹವೆಂದು ಹೇಳಲಾಗುತ್ತದೆ. ಸ್ನೇಹದಲ್ಲಿ ಎಂದೂ ತನ್ನದು ಅಥವಾ ಪರರದು ಎನಿಸುವುದಿಲ್ಲ. ಸ್ನೇಹದಲ್ಲಿ ಕೆಲವೊಮ್ಮೆ ಸ್ನೇಹದ ಮಾತು, ಹೇಗೆ ಸಾಧಾರಣವಾಗಿಯೇ ಇರಲಿ, ತಮಾಷೆಯ ಮಾತಾಗಿರಲಿ ಆದರೆ ಬೇಸರವಾಗುವುದಿಲ್ಲ. ಇವರು ಹೀಗೇಕೆ ಹೇಳಿದರು? ಎಂದು ಎನಿಸುವುದಿಲ್ಲ. ಸ್ನೇಹಿಯು ಸ್ನೇಹಿ ಆತ್ಮನ ಪ್ರತಿ ಹೀಗಾಗುವುದು, ಹಾಗಾಗುವುದು ಎಂದು ಅನುಮಾನ ಉತ್ಪನ್ನ ಮಾಡುವುದಿಲ್ಲ. ಸದಾ ಸ್ನೇಹಿಯ ಪ್ರತಿ ನಂಬಿಕೆ ಇರುವ ಕಾರಣ ಅವರ ಹಗುರ ಮಾತೂ ಸಹ ಇವರು ಅವಶ್ಯವಾಗಿ ಯಾವುದೋ ಅರ್ಥದಿಂದ ಹೇಳಿದ್ದಾರೆ ಎನಿಸುತ್ತದೆ, ನಿರರ್ಥಕ, ವ್ಯರ್ಥವೆನಿಸುವುದಿಲ್ಲ. ಎಲ್ಲಿ ಸ್ನೇಹವಿರುವುದೋ ಅಲ್ಲಿ ನಂಬಿಕೆಯು ಅವಶ್ಯವಾಗಿ ಇರುವುದು. ಸ್ನೇಹವಿಲ್ಲದಿದ್ದರೆ ನಂಬಿಕೆಯೂ ಇಲ್ಲ ಅಂದಾಗ ಬ್ರಾಹ್ಮಣ ಪರಿವಾರದ ಪ್ರತಿ ಸ್ನೇಹ ಹಾಗೂ ನಂಬಿಕೆ ಇರುವುದಕ್ಕೆ ಬ್ರಹ್ಮಾ ತಂದೆಯ ಎರಡನೆಯ ಆಸೆಯನ್ನು ಪೂರ್ಣ ಮಾಡುವುದೆಂದು ಹೇಳುತ್ತಾರೆ. ಹೇಗೆ ತಂದೆಯ ಪ್ರತಿ ಸ್ನೇಹಕ್ಕಾಗಿ ಬಾಪ್ದಾದಾ ಸರ್ಟಿಫಿಕೇಟ್ ಕೊಟ್ಟರು ಹಾಗೆಯೇ ಬ್ರಾಹ್ಮಣ ಪರಿವಾರದ ಪ್ರತಿ ಯಾವ ಸ್ನೇಹದ ಪರಿಭಾಷೆಯನ್ನು ತಿಳಿಸಿದೆವೋ ಆ ವಿಧಿಯಿಂದ ಪ್ರತ್ಯಕ್ಷ ಕರ್ಮದಲ್ಲಿ ಬರುವುದು – ಈ ಸರ್ಟಿಫಿಕೇಟನ್ನು ತೆಗೆದುಕೊಳ್ಳಬೇಕಾಗಿದೆ. ಈ ಬ್ಯಾಲೆನ್ಸ್ ಬೇಕು. ಎಷ್ಟು ತಂದೆಯೊಂದಿಗೋ ಅಷ್ಟು ಮಕ್ಕಳೊಂದಿಗೂ ಸಹ ಬ್ಯಾಲೆನ್ಸ್ ಇರಬೇಕು – ಈ ಬ್ಯಾಲೆನ್ಸ್ ಇಲ್ಲದಿರುವ ಕಾರಣ ಯಾವಾಗ ಸೇವೆಯಲ್ಲಿ ಮುಂದುವರೆಯುತ್ತೀರೋ ಆಗ ಸೇವೆಯಲ್ಲಿ ಮಾಯೆ ಬರುತ್ತದೆ ಎಂದು ತಾವೇ ಹೇಳುತ್ತೀರಿ. ಕೆಲವೊಮ್ಮೆ ವಾಯುಮಂಡಲವನ್ನು ನೋಡಿ, ಇದನ್ನೂ ಹೇಳುತ್ತೀರಿ – ಇಂತಹ ಸೇವೆಗಿಂತಲೂ ನೆನಪಿನಲ್ಲಿರುವುದೇ ಒಳ್ಳೆಯದು. ಎಲ್ಲಾ ಸೇವೆಗಳಿಂದ ಬಿಡಿಸಿ ಭಟ್ಟಿಯಲ್ಲಿ ಕೂರಿಸಿ. ತಮ್ಮೆಲ್ಲರ ಬಳಿ ಸಮಯ ಪ್ರಮಾಣ ಈ ಸಂಕಲ್ಪಗಳಿರುತ್ತವೆ.

ವಾಸ್ತವದಲ್ಲಿ ಸೇವೆಯು ಮಾಯಾಜೀತರನ್ನಾಗಿ ಮಾಡುವಂತದ್ದಾಗಿದೆ, ಮಾಯೆಯನ್ನು ತರುವಂತದ್ದಲ್ಲ ಆದರೆ ಸೇವೆಯಲ್ಲಿ ಮಾಯೆಯು ಏಕೆ ಬರುತ್ತದೆ? ಇದಕ್ಕೆ ಮೂಲ ಕಾರಣ ಹೃದಯದ ಸ್ನೇಹವಲ್ಲ, ಪರಿವಾರದ ಪ್ರಮಾಣ ಸ್ನೇಹವಾಗಿದೆ ಆದರೆ ಹೃದಯದ ಸ್ನೇಹವು ತ್ಯಾಗದ ಭಾವನೆಯನ್ನು ಉತ್ಪನ್ನ ಮಾಡುತ್ತದೆ. ಅದು ಇಲ್ಲದಿರುವ ಕಾರಣ ಕೆಲಕೆಲವೊಮ್ಮೆ ಸೇವೆಯು ಮಾಯಾ ರೂಪವಾಗಿ ಬಿಡುತ್ತದೆ ಮತ್ತು ಇಂತಹ ಸೇವೆಯನ್ನು ಜಮಾ ಖಾತೆಯಲ್ಲಿ ಜಮಾ ಮಾಡಲು ಸಾಧ್ಯವಿಲ್ಲ. ಭಲೆ ಯಾರಾದರೂ 50-60 ಸೇವಾಕೇಂದ್ರಗಳನ್ನು ತೆರೆಯಲು ನಿಮಿತ್ತರಾಗಬಹುದು ಆದರೆ ಸೇವೆಯ ಖಾತೆಯಲ್ಲಿ ಹಾಗೂ ಬಾಪ್ದಾದಾರವರ ಹೃದಯದಲ್ಲಿ ಜಮಾ ಎಷ್ಟಾಗುತ್ತದೆ ಎಂದರೆ ಅವರು ಮಾಯೆಯಿಂದ ಮುಕ್ತರಾಗಿ, ಯೋಗಯುಕ್ತರಾಗಿ ಎಷ್ಟು ಮಾಡಿದರೋ ಅಷ್ಟೇ ಜಮಾ ಆಗುತ್ತದೆ. ಯಾರ ಬಳಿ ಎರಡು ಸೇವಾಕೇಂದ್ರಗಳಿದೆ, ನೋಡಲು ಮಾತ್ರ ಎರಡು ಸೇವಾಕೇಂದ್ರಗಳಿಗೆ ಸಂಚಾಲಕರಾಗಿರುತ್ತಾರೆ. ಇನ್ನೂ ಕೆಲವರು 50 ಸೇವಾಕೇಂದ್ರಗಳಿಗೆ ಸಂಚಾಲಕರಾಗಿ ಕಾಣುತ್ತಾರೆ ಆದರೆ ಒಂದುವೇಳೆ ಎರಡು ಸೇವಾಕೇಂದ್ರಗಳೂ ಸಹ ನಿರ್ವಿಘ್ನವಾಗಿದ್ದರೆ, ಮಾಯೆಯಿಂದ, ಏರುಪೇರುಗಳಿಂದ, ಸ್ವಭಾವ-ಸಂಸ್ಕಾರದ ಘರ್ಷಣೆಯಿಂದ ಮುಕ್ತವಾಗಿದ್ದರೆ ಎರಡು ಸೇವಾಕೇಂದ್ರಗಳನ್ನು ಸಂಭಾಲನೆ ಮಾಡುವವರಿಗೂ ಸಹ 50 ಸೇವಾಕೇಂದ್ರಗಳು ಇರುವವರಿಗಿಂತಲೂ ಹೆಚ್ಚು ಸೇವೆಯ ಖಾತೆಯು ಜಮಾ ಆಗುತ್ತದೆ. ನಮಗೆ 30 ಸೇವಾಕೇಂದ್ರಗಳಿವೆ, ನಮ್ಮದು 40 ಸೇವಾಕೇಂದ್ರಗಳಿವೆ ಖುಷಿಯಾಗಿ ಬಿಡಬೇಡಿ ಆದರೆ ಮಾಯೆಯಿಂದ ಮುಕ್ತ ಎಷ್ಟು ಸೇವಾಕೇಂದ್ರಗಳಾಗಿವೆ? ಸೇವಾಕೇಂದ್ರವನ್ನು ವೃದ್ಧಿ ಮಾಡುತ್ತಾ ಹೋಗಿ ಮಾಯೆಯನ್ನೂ ಹೆಚ್ಚಿಸಿಕೊಳ್ಳುತ್ತಾ ಹೋಗಿ – ಇಂತಹ ಸೇವೆಯು ತಂದೆಯ ರಿಜಿಸ್ಟರ್ನಲ್ಲಿ ಜಮಾ ಆಗುವುದಿಲ್ಲ. ನಾವಂತೂ ಬಹಳ ಸೇವೆ ಮಾಡುತ್ತಿದ್ದೇವೆ. ದಿನ-ರಾತ್ರಿ ನಿದ್ರೆಯನ್ನೂ ಮಾಡುವುದಿಲ್ಲ. ಅಡಿಗೆಯನ್ನೂ ಸಹ ಒಂದು ಬಾರಿ ಮಾಡಿ ರಾತ್ರಿಗೂ ಅದನ್ನೇ ತಿನ್ನುತ್ತೇವೆ, ಇಷ್ಟು ಬ್ಯುಸಿಯಾಗಿರುತ್ತೇವೆ ಎಂದು ತಾವು ಯೋಚಿಸುತ್ತೀರಿ ಆದರೆ ಸೇವೆಯ ಜೊತೆ ಜೊತೆಗೆ ಮಾಯೆಯಲ್ಲಿ ಬ್ಯುಸಿಯಾಗಿ ಬಿಡುವುದಿಲ್ಲ ತಾನೆ! ಇದು ಏಕಾಯಿತು, ಇದು ಹೇಗಾಯಿತು, ಇವರು ಇವರೇಕೆ ಮಾಡಿದರು, ನಾನೇಕೆ ಮಾಡಲಿಲ್ಲ, ನಿನ್ನ ಹಕ್ಕು, ನನ್ನ ಹಕ್ಕು ಆದರೆ ತಂದೆಯ ಹಕ್ಕು ಎಲ್ಲಿ ಹೋಯಿತು? ತಿಳಿಯಿತೆ? ಸೇವೆ ಅರ್ಥಾತ್ ಯಾವುದರಲ್ಲಿ ಸ್ವಯಂನ ಹಾಗೂ ಸರ್ವರ ಸಹಯೋಗದ ಸಂತುಷ್ಟತೆಯ ಫಲವು ಪ್ರತ್ಯಕ್ಷವಾಗಿ ಕಂಡುಬರಲಿ. ಒಂದುವೇಳೆ ಸರ್ವರ ಶುಭ ಭಾವನೆ, ಶುಭ ಕಾಮನೆಯ ಸಹಯೋಗ ಹಾಗೂ ಸಂತುಷ್ಟತೆಯ ಪ್ರತ್ಯಕ್ಷ ಫಲದ ರೂಪದಲ್ಲಿ ಪ್ರಾಪ್ತಿಯಾಗುತ್ತಿಲ್ಲವೆಂದರೆ ಪರಿಶೀಲನೆ ಮಾಡಿಕೊಳ್ಳಿ – ಕಾರಣವೇನು? ಫಲವೇಕೆ ಸಿಗಲಿಲ್ಲ? ಮತ್ತು ವಿಧಿಯನ್ನು ಪರಿಶೀಲನೆ ಮಾಡಿ ಪರಿವರ್ತನೆ ಮಾಡಿಕೊಳ್ಳಿ.

ಇಂತಹ ಸತ್ಯ ಸೇವೆಯನ್ನು ವೃದ್ಧಿ ಮಾಡುವುದು ಸೇವೆಯನ್ನು ವೃದ್ಧಿ ಪಡಿಸುವುದಾಗಿದೆ. ಕೇವಲ ನಾನಂತೂ ಬಹಳ ಚೆನ್ನಾಗಿ ಸೇವೆ ಮಾಡುತ್ತಿದ್ದೇನೆಂದು ತಮ್ಮ ಮನಸ್ಸನ್ನು ಖುಷಿ ಪಡಿಸಿಕೊಳ್ಳಬೇಡಿ ಆದರೆ ತಂದೆಯ ಹೃದಯವನ್ನು ಖುಷಿಪಡಿಸಿ ಮತ್ತು ಬ್ರಾಹ್ಮಣ ಪರಿವಾರದ ಹೃದಯದ ಆಶೀರ್ವಾದಗಳನ್ನು ಪಡೆಯಿರಿ, ಇದಕ್ಕೆ ಸತ್ಯ ಸೇವೆಯೆಂದು ಹೇಳಲಾಗುತ್ತದೆ. ತೋರ್ಪಡಿಕೆಯ ಸೇವೆಯಂತೂ ಬಹಳ ದೊಡ್ಡದಾಗಿರುತ್ತದೆ ಆದರೆ ಎಲ್ಲಿ ಹೃದಯ ಪೂರ್ವಕವಾದ ಸೇವೆ ಇರುವುದೋ ಅಲ್ಲಿ ಹೃದಯದ ಸ್ನೇಹದ ಸೇವೆಯು ಅವಶ್ಯವಾಗಿ ಆಗುವುದು. ಇದಕ್ಕೆ ಪರಿವಾರದ ಪ್ರತಿ ಬ್ರಹ್ಮಾ ತಂದೆಯ ಆಸೆಯನ್ನು ಪೂರ್ಣ ಮಾಡುವುದೆಂದು ಹೇಳುತ್ತಾರೆ. ಇದು ಇಂದಿನ ವಾರ್ತಾಲಾಪವಾಗಿತ್ತು, ಇನ್ನು ಉಳಿದುದನ್ನು ಮುಂದೆ ತಿಳಿಸುತ್ತೇವೆ. ಇಂದು ಭಾರತವಾಸಿ ಮಕ್ಕಳ ಈ ಸೀಜನ್ನಿನ ಕೊನೆಯ ಅವಕಾಶವಾಗಿದೆ ಆದ್ದರಿಂದ ಬಾಪ್ದಾದಾ ಏನನ್ನು ಬಯಸುತ್ತೇವೆ ಎಂಬುದನ್ನು ತಿಳಿಸಿದೆವು. ಪಾಸ್ನ ಒಂದು ಸರ್ಟಿಫಿಕೇಟನ್ನು ತೆಗೆದುಕೊಂಡಿರಿ. ಈಗ ಇನ್ನೊಂದು ಸರ್ಟಿಫಿಕೇಟನ್ನು ತೆಗೆದುಕೊಳ್ಳಬೇಕಾಗಿದೆ. ಒಳ್ಳೆಯದು. ಈಗ ತಂದೆಯ ಆಶಾ ದೀಪವನ್ನು ಸದಾ ಬೆಳಗಿಸುತ್ತಾ ಇರಿ. ಒಳ್ಳೆಯದು.

ನಾಲ್ಕಾರು ಕಡೆಯ ಸರ್ವಬ್ರಾಹ್ಮಣ ಕುಲದೀಪಕರು, ಸದಾ ಬಾಪ್ದಾದಾರವರ ಶುಭ ಆಸೆಗಳನ್ನು ಪೂರ್ಣ ಮಾಡುವವರು ಸದಾ ತಂದೆ ಮತ್ತು ಪರಿವಾರದ ಹೃದಯದ ಸ್ನೇಹದ ಸಮತೋಲನೆಯನ್ನು ನ್ನಿಟ್ಟುಕೊಳ್ಳುವವರು, ಸದಾ ಹೃದಯ ಪೂರ್ವಕ ಸೇವೆಯಿಂದ ಸೇವೆಯ ಖಾತೆಯನ್ನು ಹೆಚ್ಚು ಜಮಾ ಮಾಡಿಕೊಳ್ಳುವವರು – ಇಂತಹ ತಂದೆಯ ಶುಭ ಆಶಾದೀಪಗಳಿಗೆ ಸತ್ಯ ಹೃದಯದಿಂದ ಸೇವೆ ಮಾಡುವಂತಹ ಸೇವಾಧಾರಿಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವರದಾನ:-

ಯಾರು ಡ್ರಾಮಾದ ಮಾತಿನಲ್ಲಿ ಅನುಭವಿಯಾಗಿದ್ದಾರೆಯೋ ಅವರು ಸದಾ ಸಾಕ್ಷಿತನ ಸ್ಥಿತಿಯಲ್ಲಿ ಸ್ಥಿತರಾಗಿದ್ದು, ಏಕರಸ ಹಾಗೂ ಅಚಲ-ಅಡೋಲ ಸ್ಥಿತಿಯ ಅನುಭವವನ್ನು ಮಾಡುತ್ತಾರೆ. ಡ್ರಾಮಾದ ಮಾತಿನ ಅನುಭವಿ ಆತ್ಮನೆಂದಿಗೂ ಕೆಡುಕಿನಲ್ಲಿಯೂ ಕೆಡಕನ್ನು ನೋಡದೆ, ಒಳಿತನ್ನೇ ನೋಡುವನು ಅರ್ಥಾತ್ ಸ್ವ-ಕಲ್ಯಾಣದ ಮಾರ್ಗವು ಕಾಣಿಸುವುದು. ಅಕಲ್ಯಾಣದ ಖಾತೆಯು ಸಮಾಪ್ತಿಯಾಯಿತು, ಕಲ್ಯಾಣಕಾರಿ ತಂದೆಯ ಮಕ್ಕಳಾಗಿದ್ದೇವೆ, ಇದು ಕಲ್ಯಾಣಕಾರಿ ಯುಗವಾಗಿದೆ – ಎಂಬ ಈ ಜ್ಞಾನ ಹಾಗೂ ಅನುಭವ ಅಧಿಕಾರದಿಂದ ಅಚಲ-ಅಡೋಲರಾಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top