11 August 2021 KANNADA Murli Today | Brahma Kumaris

Read and Listen today’s Gyan Murli in Kannada

August 10, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯು ಅತೀ ಮಧುರ ಸ್ಯಾಕ್ರೀನ್ ಆಗಿದ್ದಾರೆ, ಆದ್ದರಿಂದ ಅನ್ಯ ಎಲ್ಲಾ ಮಾತುಗಳನ್ನು ಬಿಟ್ಟು ಆ ತಂದೆಯನ್ನು ನೆನಪು ಮಾಡಿರಿ ಆಗ ಮಧುರ ಸ್ಯಾಕ್ರೀನ್ ಆಗಿ ಬಿಡುತ್ತೀರಿ”

ಪ್ರಶ್ನೆ:: -

ನೀವು ತಂದೆಯ ಮೂಲಕ ಶ್ರೀಮತವನ್ನು ಪಡೆದು ತಮ್ಮಲ್ಲಿ ಯಾವ ಸಂಸ್ಕಾರವನ್ನು ತುಂಬಿಸಿಕೊಳ್ಳುತ್ತಿದ್ದೀರಿ?

ಉತ್ತರ:-

ಭವಿಷ್ಯದಲ್ಲಿ ಮಂತ್ರಿಯಿಲ್ಲದೆ ಇಡೀ ವಿಶ್ವದ ಮೇಲೆ ರಾಜ್ಯ ಮಾಡುವ ಸಂಸ್ಕಾರವನ್ನು ತುಂಬಿಸಿಕೊಳ್ಳುತ್ತಿದ್ದೀರಿ. ಭವಿಷ್ಯ ರಾಜಧಾನಿಯನ್ನು ನಡೆಸುವ ಶ್ರೀಮತವನ್ನು ತೆಗೆದುಕೊಳ್ಳುವುದಕ್ಕಾಗಿಯೇ ನೀವಿಲ್ಲಿ ಬಂದಿದ್ದೀರಿ. ತಂದೆಯು ನಿಮಗೆ ಇಂತಹ ಶ್ರೀಮತವನ್ನು ಕೊಡುತ್ತಾರೆ ಯಾವುದರಿಂದ ಅರ್ಧಕಲ್ಪದವರೆಗೆ ಯಾರಿಂದಲೂ ಸಲಹೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಯಾರ ಬುದ್ಧಿಯು ಬಲಹೀನವಾಗಿರುವುದೋ ಅವರೇ ಸಲಹೆ ತೆಗೆದುಕೊಳ್ಳಬೇಕಾಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವೇ ಮಾತಾಪಿತಾ ಆಗಿದ್ದೀರಿ……

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಎಂದು ಯಾರು ಹೇಳಿದರು? ಅವಶ್ಯವಾಗಿ ಆತ್ಮಿಕ ತಂದೆಯೇ ಹೇಳುತ್ತಾರೆ. ಮಧುರಾತಿ ಮಧುರ ಮಕ್ಕಳು ಈಗ ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ಬಹಳ ಪ್ರೀತಿಯಿಂದ ತಂದೆಯು ತಿಳಿಸುತ್ತಿದ್ದಾರೆ. ಈಗ ನಿಮಗೆ ತಿಳಿದಿದೆ – ಆತ್ಮಿಕ ತಂದೆಯ ವಿನಃ ಇಡೀ ಪ್ರಪಂಚದಲ್ಲಿ ಮತ್ತ್ಯಾರೂ ಸಹ ಸರ್ವರಿಗೆ ಸುಖ-ಶಾಂತಿಯನ್ನು ಕೊಡುವವರು ಹಾಗೂ ಸರ್ವರನ್ನು ದುಃಖದಿಂದ ಬಿಡಿಸುವವರು ಯಾರೂ ಇಲ್ಲ. ಆದ್ದರಿಂದ ದುಃಖದಲ್ಲಿ ತಂದೆಯನ್ನು ನೆನಪು ಮಾಡುತ್ತಾ ಇರುತ್ತಾರೆ. ನೀವು ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ – ತಂದೆಯು ನಮ್ಮನ್ನು ಸುಖಧಾಮಕ್ಕೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಸದಾ ಸುಖಧಾಮದ ಮಾಲೀಕರನ್ನಾಗಿ ಮಾಡುವಂತಹ ತಂದೆಯ ಸನ್ಮುಖದಲ್ಲಿ ಬಂದಿದ್ದೀರಿ. ಈಗ ನಿಮಗೆ ತಿಳಿಯುತ್ತಿದೆ, ಸನ್ಮುಖದಲ್ಲಿ ಕೇಳುವ ಮತ್ತು ದೂರವಿದ್ದು ಕೇಳುವುದರಲ್ಲಿ ಬಹಳ ಅಂತರವಿದೆ. ಮಧುಬನದಲ್ಲಿ ಸನ್ಮುಖದಲ್ಲಿ ಬರುತ್ತೀರಿ, ಮಧುಬನವು ಪ್ರಸಿದ್ಧವಾಗಿದೆ. ಮಧುಬನ ಬೃಂದಾವನದಲ್ಲಿ ಅವರು ಕೃಷ್ಣನ ಚಿತ್ರವನ್ನು ತೋರಿಸಿದ್ದಾರೆ ಆದರೆ ಕೃಷ್ಣನಂತೂ ಇಲ್ಲ. ಇಲ್ಲಿ ನಿರಾಕಾರ ತಂದೆಯು ನೀವು ಮಕ್ಕಳೊಂದಿಗೆ ಮಿಲನ ಮಾಡುತ್ತಾರೆ. ನೀವು ಸ್ವಯಂನ್ನು ಪದೇ-ಪದೇ ಆತ್ಮ ನಿಶ್ಚಯ ಮಾಡಿಕೊಳ್ಳಬೇಕಾಗಿದೆ – ನಾನಾತ್ಮನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇನೆ. ಇಡೀ ಕಲ್ಪದಲ್ಲಿ ಇದೊಂದೇ ಸಮಯದಲ್ಲಿ ತಂದೆಯು ಬರುತ್ತಾರೆ, ಇದು ಕಲ್ಪದ ಬಹಳ ಕಲ್ಯಾಣಕಾರಿ ಸಂಗಮಯುಗವಾಗಿದೆ. ಇದಕ್ಕೆ ಪುರುಷೋತ್ತಮ ಎಂದು ಹೆಸರನ್ನಿಡಲಾಗಿದೆ. ಇದೇ ಸಂಗಮಯುಗವಾಗಿದೆ, ಇದರಲ್ಲಿ ಎಲ್ಲಾ ಮನುಷ್ಯ ಮಾತ್ರರೂ ಉತ್ತಮರಾಗುತ್ತಾರೆ. ಈಗಂತೂ ಎಲ್ಲಾ ಮನುಷ್ಯ ಮಾತ್ರರೂ ತಮೋಪ್ರಧಾನರಾಗಿದ್ದಾರೆ, ಮತ್ತೆ ಸತೋಪ್ರಧಾನರಾಗುತ್ತಾರೆ. ಸತೋಪ್ರಧಾನರಾಗಿದ್ದಾಗ ಮನುಷ್ಯರು ಉತ್ತಮರಾಗಿರುತ್ತಾರೆ, ತಮೋಪ್ರಧಾನರಾಗುವುದರಿಂದ ಮನುಷ್ಯರೂ ಕನಿಷ್ಠರಾಗುತ್ತಾರೆ ಅಂದಾಗ ತಂದೆಯು ಕುಳಿತು ಸನ್ಮುಖದಲ್ಲಿ ಆತ್ಮರಿಗೆ ತಿಳಿಸುತ್ತಾರೆ. ಎಲ್ಲಾ ಪಾತ್ರವನ್ನು ಆತ್ಮವೇ ಅಭಿನಯಿಸುತ್ತದೆ, ಶರೀರವಲ್ಲ. ಆತ್ಮ ಮತ್ತು ಶರೀರ ಯಾವಾಗ ಇವೆರಡರ ಮೇಳವಾಗುವುದೋ ಆಗ ಪಾತ್ರವನ್ನು ಅಭಿನಯಿಸಲ್ಪಡುತ್ತದೆ. ನಿಮ್ಮ ಬುದ್ಧಿಯಲ್ಲಿ ಬಂದುಬಿಟ್ಟಿದೆ – ನಾವಾತ್ಮರು ಮೂಲತಃ ನಿರಾಕಾರಿ ಪ್ರಪಂಚ ಅಥವಾ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಇದು ಯಾರಿಗೂ ತಿಳಿದಿಲ್ಲ. ತಾನು ತಿಳಿದುಕೊಳ್ಳುವುದೂ ಇಲ್ಲ, ಅನ್ಯರಿಗೂ ತಿಳಿಸುವುದಿಲ್ಲ. ಈಗ ನಿಮ್ಮ ಬುದ್ಧಿ ಬೀಗವು ತೆರೆದಿದೆ, ನೀವು ತಿಳಿದುಕೊಂಡಿದ್ದೀರಿ – ಅವಶ್ಯವಾಗಿ ಆತ್ಮರು ಪರಮಧಾಮದಲ್ಲಿರುತ್ತಾರೆ. ಅದು ನಿರಾಕಾರಿ ಪ್ರಪಂಚವಾಗಿದೆ, ಇದು ಸಾಕಾರಿ ಪ್ರಪಂಚವಾಗಿದೆ. ಇಲ್ಲಿ ನಾವೆಲ್ಲಾ ಆತ್ಮರು ಪಾತ್ರಧಾರಿಗಳಾಗಿದ್ದೇವೆ. ಮೊಟ್ಟ ಮೊದಲು ನಾವು ಪಾತ್ರವನ್ನು ಅಭಿನಯಿಸಲು ಬರುತ್ತೇವೆ ನಂತರ ನಂಬರ್ವಾರ್ ಆಗಿ ಬರತೊಡಗುತ್ತಾರೆ. ಎಲ್ಲಾ ಪಾತ್ರಧಾರಿಗಳು ಒಟ್ಟಿಗೆ ಬಂದು ಬಿಡುವುದಿಲ್ಲ, ಭಿನ್ನ-ಭಿನ್ನ ಪ್ರಕಾರದ ಪಾತ್ರಧಾರಿಗಳು ಬರುತ್ತಾ ಇರುತ್ತಾರೆ. ಯಾವಾಗ ನಾಟಕವು ಮುಕ್ತಾಯವಾಗುವುದೋ ಆಗ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಈಗ ನಿಮಗೆ ಪರಿಚಯ ಸಿಕ್ಕಿದೆ – ಆತ್ಮವು ಮೂಲತಃ ಶಾಂತಿಧಾಮ ನಿವಾಸಿಯಾಗಿದೆ, ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬರುತ್ತದೆ. ತಂದೆಯು ಇಡೀ ಸಮಯ ಪಾತ್ರವನ್ನು ಅಭಿನಯಿಸಲು ಬರುವುದಿಲ್ಲ. ನಾವೇ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ತಮೋಪ್ರಧಾನರಾಗಿ ಬಿಡುತ್ತೇವೆ, ಈಗ ನೀವು ಮಕ್ಕಳಿಗೆ ಸನ್ಮುಖದಲ್ಲಿ ಕೇಳುವುದರಿಂದ ಬಹಳ ಆನಂದವಾಗುತ್ತದೆ. ಇಲ್ಲಿ ಆಗುವಷ್ಟು ಆನಂದವು ಮುರುಳಿಯನ್ನು ಕೇಳುವುದರಿಂದ ಆಗುವುದಿಲ್ಲ, ಇಲ್ಲಿ ಸನ್ಮುಖದಲ್ಲಿದ್ದೀರಲ್ಲವೆ ಅಂದಾಗ ಮೊಟ್ಟ ಮೊದಲಿಗೆ ಸತ್ಯಯುಗೀ ಆದಿ ಸನಾತನ ದೇವಿ-ದೇವತಾ ಧರ್ಮದವರೇ ಬರುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಭಾರತವು ದೇವಿ-ದೇವತೆಗಳ ಸ್ಥಾನವಾಗಿತ್ತು, ಈಗ ಇಲ್ಲ. ಚಿತ್ರಗಳನ್ನು ನೋಡುತ್ತೀರಿ, ಅಂದಾಗ ಅವಶ್ಯವಾಗಿ ಇದ್ದರು. ಮೊಟ್ಟ ಮೊದಲು ನಾವು ದೇವಿ-ದೇವತೆಗಳಾಗಿದ್ದೆವು, ತಮ್ಮ ಪಾತ್ರವನ್ನು ನೆನಪು ಮಾಡಿಕೊಳ್ಳುತ್ತೀರೋ ಅಥವಾ ಮರೆತು ಹೋಗುತ್ತೀರೋ? ತಂದೆಯು ಹೇಳುತ್ತಾರೆ, ನೀವು ಈ ಪಾತ್ರವನ್ನು ಅಭಿನಯಿಸಿದ್ದೀರಿ. ಇದು ಡ್ರಾಮಾ ಆಗಿದೆ, ಹೊಸ ಪ್ರಪಂಚವೇ ಮತ್ತೆ ಹಳೆಯದಾಗುತ್ತದೆ. ಮೊಟ್ಟ ಮೊದಲು ಮೇಲಿನಿಂದ ಯಾವ ಆತ್ಮರು ಬರುವರೋ ಅವರು ಸತ್ಯಯುಗದಲ್ಲಿ ಬರುತ್ತಾರೆ. ಇವೆಲ್ಲಾ ಮಾತುಗಳು ಈಗ ನಿಮ್ಮ ಬುದ್ಧಿಯಲ್ಲಿದೆ, ಸತ್ಯಯುಗದ ಆದಿಯಲ್ಲಿ ನೀವೇ ಪಾತ್ರವನ್ನು ಅಭಿನಯಿಸಲು ಬಂದಿದ್ದಿರಿ. ನೀವು ವಿಶ್ವದ ಮಾಲೀಕರು ಮಹಾರಾಜ-ಮಹಾರಾಣಿಯಾಗಿದ್ದಿರಿ. ನಿಮ್ಮದು ರಾಜಧಾನಿಯಿತ್ತು, ಈಗಂತೂ ರಾಜಧಾನಿಯಿಲ್ಲ. ನಾವು ರಾಜ್ಯಭಾರವನ್ನು ಹೇಗೆ ನಡೆಸಬೇಕು ಎಂಬುದನ್ನು ನೀವೀಗ ಕಲಿಯುತ್ತಿದ್ದೀರಿ. ಅಲ್ಲಿ ಮಂತ್ರಿಗಳಿರುವುದಿಲ್ಲ, ಸಲಹೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಅವರು ಈ ಸಮಯದಲ್ಲಿ ತಂದೆಯ ಶ್ರೀಮತದಿಂದ ಶ್ರೇಷ್ಠಾತಿ ಶ್ರೇಷ್ಠರಾಗಿ ಬಿಡುತ್ತಾರೆ. ಆದ್ದರಿಂದ ಅವರಿಗೆ ಮತ್ತ್ಯಾರಿಂದಲೂ ಸಲಹೆಯನ್ನು ಪಡೆಯುವ ಅವಶ್ಯಕತೆಯಿರುವುದಿಲ್ಲ. ಒಂದುವೇಳೆ ಯಾರಿಂದಲಾದರೂ ಸಲಹೆಯನ್ನು ತೆಗೆದುಕೊಂಡರೆ ಅವರ ಬುದ್ಧಿಯು ಬಲಹೀನವಾಗಿದೆ ಎಂದು ತಿಳಿಯಲಾಗುತ್ತದೆ. ಈಗ ಯಾವ ಶ್ರೀಮತವು ಸಿಗುತ್ತಿದೆಯೋ ಅದು ಸತ್ಯಯುಗದಲ್ಲಿಯೂ ಸ್ಥಿರವಾಗಿರುತ್ತದೆ. ಈಗ ನಿಮ್ಮ ಆತ್ಮವು ತಾಜಾ ಆಗುತ್ತಿದೆ. ಈಗ ನೀವು ಮಕ್ಕಳು ಆತ್ಮಾಭಿಮಾನಿಗಳಾಗಬೇಕಾಗಿದೆ. ಶಾಂತಿಧಾಮದಿಂದ ಬಂದು ನೀವಿಲ್ಲಿ ಶಬ್ಧದಲ್ಲಿ ಬಂದಿದ್ದೀರಿ. ಶಬ್ಧದಲ್ಲಿ ಬರದೆ ಕರ್ಮವು ನಡೆಯುವುದಿಲ್ಲ, ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಹೇಗೆ ತಂದೆಯಲ್ಲಿ ಸಂಪೂರ್ಣ ಜ್ಞಾನವಿದೆಯೋ ಹಾಗೆಯೇ ನಿಮ್ಮಲ್ಲಿ ಈಗ ಜ್ಞಾನವಿದೆ. ನಾನು ಒಂದು ಶರೀರವನ್ನು ಬಿಟ್ಟು ಸಂಸ್ಕಾರದನುಸಾರ ಮತ್ತೆ ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ ಎಂದು ಆತ್ಮವು ಹೇಳುತ್ತದೆ, ಪುನರ್ಜನ್ಮವು ಅವಶ್ಯವಾಗಿ ಆಗುತ್ತದೆ. ಆತ್ಮಕ್ಕೆ ಏನೆಲ್ಲಾ ಪಾತ್ರವು ಸಿಕ್ಕಿದೆಯೋ ಅದನ್ನು ಅಭಿನಯಿಸುತ್ತಾ ಇರುತ್ತದೆ ಮತ್ತು ಸಂಸ್ಕಾರಗಳ ಅನುಸಾರ ಇನ್ನೊಂದು ಜನ್ಮವನ್ನು ತೆಗೆದುಕೊಳ್ಳುತ್ತಾ ಇರುತ್ತದೆ. ದಿನ-ಪ್ರತಿದಿನ ಆತ್ಮದ ಪವಿತ್ರತೆಯ ದರ್ಜೆಯು ಕಡಿಮೆಯಾಗುತ್ತಾ ಹೋಗುತ್ತದೆ. ಪತಿತ ಶಬ್ಧವನ್ನು ದ್ವಾಪರದ ನಂತರ ಉಪಯೋಗಿಸುತ್ತಾರೆ ಆದರೂ ಸಹ ಸ್ವಲ್ಪ ಅಂತರವಿರುತ್ತದೆ. ನೀವು ಹೊಸ ಮನೆಯನ್ನು ಕಟ್ಟಿಸಿ ಒಂದು ತಿಂಗಳಿನ ನಂತರ ಅವಶ್ಯವಾಗಿ ಅದರಲ್ಲಿ ಅಂತರವಿರುತ್ತದೆ.

ನೀವೀಗ ತಿಳಿದುಕೊಳ್ಳುತ್ತೀರಿ – ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಾರೆ, ನಾನು ನೀವು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಪದವಿಯನ್ನು ಪಡೆಯುತ್ತಾರೆ, ತಂದೆಯ ಬಳಿ ಯಾವುದೇ ತಾರತಮ್ಯವಿಲ್ಲ. ತಂದೆಗೆ ತಿಳಿದಿದೆ, ನಾನು ಆತ್ಮರಿಗೇ ಓದಿಸುತ್ತೇನೆ. ಪ್ರತಿಯೊಂದು ಆತ್ಮವು ತನಗಾಗಿ ಪುರುಷಾರ್ಥ ಮಾಡುತ್ತದೆ, ಸ್ತ್ರೀ-ಪುರುಷರ ದೃಷ್ಟಿಯು ಇಲ್ಲಿರುವುದಿಲ್ಲ. ನೀವೆಲ್ಲಾ ಮಕ್ಕಳು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೀರಿ. ಎಲ್ಲಾ ಆತ್ಮರು ಸಹೋದರರಾಗಿದ್ದೀರಿ, ನಿಮಗೆ ತಂದೆಯು ಓದಿಸುತ್ತಾರೆ, ಆಸ್ತಿಯನ್ನು ಕೊಡುತ್ತಾರೆ. ತಂದೆಯೇ ಆತ್ಮಿಕ ಮಕ್ಕಳೊಂದಿಗೆ ಮಾತನಾಡುತ್ತಾರೆ, ಹೇ ಮುದ್ದಾದ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ, ನೀವು ಬಹಳ ಸಮಯದಿಂದ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಈಗ ತಮ್ಮ ಆಸ್ತಿಯನ್ನು ಪಡೆಯಲು ಪುನಃ ಬಂದು ಮಿಲನ ಮಾಡಿದ್ದೀರಿ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಆರಂಭದಿಂದ ಹಿಡಿದು ಪಾತ್ರವು ನಿಗಧಿಯಾಗಿದೆ, ನೀವು ಪಾತ್ರಧಾರಿಗಳು ಪಾತ್ರವನ್ನಭಿನಯಿಸುತ್ತಾ ಇರುತ್ತೀರಿ, ಆತ್ಮವು ಅವಿನಾಶಿಯಾಗಿದೆ, ಇದರಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಶರೀರವಂತೂ ಬದಲಾಗುತ್ತಿರುತ್ತದೆ ಬಾಕಿ ಆತ್ಮವು ಕೇವಲ ಪವಿತ್ರನಿಂದ ಅಪವಿತ್ರವಾಗುತ್ತದೆ. ಸತ್ಯಯುಗದಲ್ಲಿ ಪಾವನರಿರುತ್ತಾರೆ, ಈ ಪ್ರಪಂಚಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಈಗ ಸುಖಧಾಮವು ಸ್ಥಾಪನೆಯಾಗುತ್ತದೆ, ಉಳಿದೆಲ್ಲಾ ಆತ್ಮವು ಮುಕ್ತಿಧಾಮದಲ್ಲಿರುತ್ತಾರೆ. ಈಗ ಈ ಬೇಹದ್ದಿನ ನಾಟಕವು ಮುಕ್ತಾಯವಾಗಿದೆ, ಎಲ್ಲಾ ಆತ್ಮರು ಸೊಳ್ಳೆಗಳೋಪಾದಿಯಲ್ಲಿ ಹೋಗುವರು. ಈ ಸಮಯದಲ್ಲಿ ಯಾವುದೇ ಆತ್ಮವು ಮೇಲಿನಿಂದ ಬಂದರೂ ಸಹ ಪತಿತ ಪ್ರಪಂಚದಲ್ಲಿ ಅದಕ್ಕೆ ಏನು ಬೆಲೆಯಿರುತ್ತದೆ! ವಾಸ್ತವದಲ್ಲಿ ಯಾರು ಮೊಟ್ಟ ಮೊದಲು ಪ್ರಪಂಚದಲ್ಲಿ ಬರುವರೋ ಅವರಿಗೆ ಬೆಲೆಯಿರುತ್ತದೆ, ಹೊಸ ಪ್ರಪಂಚವಿತ್ತು ಅದು ನಂತರ ಹಳೆಯದಾಗಿದೆ, ಹೊಸ ಪ್ರಪಂಚದಲ್ಲಿ ದೇವತೆಗಳಿದ್ದರು, ಅಲ್ಲಿ ದುಃಖದ ಹೆಸರೂ ಇರಲಿಲ್ಲ ಇಲ್ಲಂತೂ ಅಪಾರ ದುಃಖವಿದೆ. ತಂದೆಯು ಬಂದು ದುಃಖದ ಹಳೆಯ ಪ್ರಪಂಚದಿಂದ ಮುಕ್ತರನ್ನಾಗಿ ಮಾಡುತ್ತಾರೆ. ಈ ಹಳೆಯ ಪ್ರಪಂಚವು ಅವಶ್ಯವಾಗಿ ಬದಲಾಗಲಿದೆ. ಹೇಗೆ ಹಗಲಿನ ನಂತರ ರಾತ್ರಿ, ರಾತ್ರಿಯ ನಂತರ ಹಗಲಾಗುತ್ತದೆ. ನೀವು ತಿಳಿದುಕೊಳ್ಳುತ್ತೀರಿ, ಅವಶ್ಯವಾಗಿ ನಾವು ಸತ್ಯಯುಗದ ಮಾಲೀಕರಾಗುತ್ತೇವೆ ಅಂದಮೇಲೆ ನಾವೇಕೆ ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಬಾರದು! ಸ್ವಲ್ಪವಾದರೂ ಪರಿಶ್ರಮ ಪಡಬೇಕಾಗುವುದು, ರಾಜ್ಯ ಪದವಿಯನ್ನು ಪಡೆಯುವುದು ಸಹಜವೇನಲ್ಲ. ತಂದೆಯನ್ನು ನೆನಪು ಮಾಡಬೇಕಾಗಿದೆ, ಮಾಯೆಯ ಅದ್ಭುತವೇನೆಂದರೆ ಪದೇ-ಪದೇ ನಿಮಗೆ ಮರೆಸಿ ಬಿಡುತ್ತದೆ, ಇದಕ್ಕಾಗಿ ಉಪಾಯ ರಚಿಸಬೇಕು. ನನ್ನವರಾದರೆ ನೆನಪು ಸ್ಥಿರವಾಗಿ ನಿಲ್ಲುತ್ತದೆಯೆಂದಲ್ಲ ಅಂದಮೇಲೆ ಪುರುಷಾರ್ಥವನ್ನೇನು ಮಾಡುತ್ತೀರಿ! ಇಲ್ಲಿ ಎಲ್ಲಿಯವರೆಗೆ ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಪುರುಷಾರ್ಥ ಮಾಡಬೇಕಾಗಿದೆ, ಜ್ಞಾನಾಮೃತವನ್ನು ಕುಡಿಯುತ್ತಾ ಇರಬೇಕಾಗಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ, ನಮ್ಮದು ಇದು ಅಂತಿಮ ಜನ್ಮವಾಗಿದೆ, ಈ ಶರೀರದ ಅಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಗಳಾಗಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕು, ಪುರುಷಾರ್ಥವನ್ನೂ ಅವಶ್ಯವಾಗಿ ಮಾಡಬೇಕು. ಕೇವಲ ತನ್ನನ್ನು ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿರಿ. ತ್ವಮೇವ ಮಾತಾಶ್ಚ ಪಿತಾ…. ಇದೆಲ್ಲವೂ ಭಕ್ತಿಮಾರ್ಗದ ಮಹಿಮೆಯಾಗಿದೆ. ನೀವು ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾನೊಬ್ಬನೇ ಸ್ಯಾಕ್ರೀನ್ ಆಗಿದ್ದೇನೆ. ನೀವೂ ಸಹ ಅನ್ಯ ಮಾತುಗಳನ್ನು ಬಿಟ್ಟು ಬಹಳ ಮಧುರ ಸ್ಯಾಕ್ರೀನ್ ಆಗಿ ಬಿಡಿ. ಈಗ ನಿಮ್ಮ ಆತ್ಮವು ತಮೋಪ್ರಧಾನವಾಗಿದೆ ಅದನ್ನು ಸತೋಪ್ರಧಾನ ಮಾಡಿಕೊಳ್ಳಲು ನೆನಪಿನ ಯಾತ್ರೆಯಲ್ಲಿರಿ. ಎಲ್ಲರಿಗೆ ಇದೇ ಮಾತನ್ನು ತಿಳಿಸಿರಿ – ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಳ್ಳಿ. ಸುಖವು ಸತ್ಯಯುಗದಲ್ಲಿಯೇ ಇರುತ್ತದೆ, ಸುಖಧಾಮವನ್ನು ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ತಂದೆಯನ್ನು ನೆನಪು ಮಾಡುವುದು ಅತಿ ಸಹಜವಾಗಿದೆ ಆದರೆ ಮಾಯೆಯ ವಿರೋಧವು ಬಹಳಷ್ಟಿದೆ ಆದ್ದರಿಂದ ಪ್ರಯತ್ನ ಪಟ್ಟು ನನ್ನನ್ನು ನೆನಪು ಮಾಡಿರಿ, ಆಗ ತುಕ್ಕು ಬಿಟ್ಟು ಹೋಗುವುದು. ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು ಗಾಯನವಿದೆ.

ಈ ಡ್ರಾಮಾದಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಪುನರಾವರ್ತಿಸಬೇಕಾಗಿದೆ. ಈ ಡ್ರಾಮಾದಲ್ಲಿ ಎಲ್ಲರಿಗಿಂತ ಹೆಚ್ಚು ಪಾತ್ರವು ನಮ್ಮದಾಗಿದೆ. ಎಲ್ಲರಿಗಿಂತ ಹೆಚ್ಚು ಸುಖವೂ ನಮಗೇ ಸಿಗುವುದು. ತಂದೆಯು ಹೇಳುತ್ತಾರೆ, ನಿಮ್ಮ ದೇವಿ-ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ ಉಳಿದೆಲ್ಲಾ ಆತ್ಮರು ತಮ್ಮ ಲೆಕ್ಕಾಚಾರಗಳನ್ನು ಮುಗಿಸಿ ಶಾಂತಿಧಾಮಕ್ಕೆ ಹೊರಟು ಹೋಗುವರು. ಹೆಚ್ಚು ವಿಸ್ತಾರದಲ್ಲಿ ನಾವೇಕೆ ಹೋಗಬೇಕು. ತಂದೆಯು ಬರುವುದೇ ಎಲ್ಲರನ್ನೂ ಮರಳಿ ಕರೆದುಕೊಂಡು ಹೋಗುವುದಕ್ಕಾಗಿ. ಸೊಳ್ಳೆಗಳೋಪಾದಿಯಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ, ಶರೀರಗಳು ಸಮಾಪ್ತಿಯಾಗಿ ಬಿಡುತ್ತವೆ. ಬಾಕಿ ಆತ್ಮವು ಏನು ಅವಿನಾಶಿಯಾಗಿದೆಯೋ ಅದು ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೊರಟು ಹೋಗುವುದು. ಆತ್ಮವನ್ನು ಬೆಂಕಿಯಲ್ಲಿ ಹಾಕುವುದರಿಂದ ಪವಿತ್ರವಾಗುವುದು ಎಂದಲ್ಲ, ಆತ್ಮವು ನೆನಪು ಎಂಬ ಯೋಗದಿಂದಲೇ ಪವಿತ್ರವಾಗಬೇಕಾಗಿದೆ. ಇದು ಯೋಗದ ಅಗ್ನಿಯಾಗಿದೆ. ಇದನ್ನು ಅವರು ಸೀತೆಯು ಅಗ್ನಿಯಿಂದ ಪಾರಾದಳು ಎಂದು ನಾಟಕದಲ್ಲಿ ಬರೆದಿದ್ದಾರೆ. ಅಗ್ನಿಯಿಂದ ಒಬ್ಬರೇ ಪಾರಾಗುವರೇ? ತಂದೆಯು ತಿಳಿಸುತ್ತಾರೆ – ನೀವೆಲ್ಲಾ ಸೀತೆಯರು ಈ ಸಮಯದಲ್ಲಿ ಪತಿತರಾಗಿದ್ದೀರಿ, ರಾವಣ ರಾಜ್ಯದಲ್ಲಿದ್ದೀರಿ. ಈಗ ಒಬ್ಬ ತಂದೆಯ ನೆನಪಿನಿಂದ ನೀವು ಪಾವನರಾಗಬೇಕಾಗಿದೆ. ರಾಮನು ಒಬ್ಬರೇ ಆಗಿದ್ದಾರೆ. ಅಗ್ನಿ ಶಬ್ಧವನ್ನು ಕೇಳಿ ಅಗ್ನಿಯಿಂದ ಪಾರಾದಳೆಂದು ಹೇಳುತ್ತಾರೆ, ಯೋಗಾಗ್ನಿಯೆಲ್ಲಿ! ಆ ಅಗ್ನಿಯೆಲ್ಲಿ! ಆತ್ಮವು ಪರಮಾತನೊಂದಿಗೆ ಯೋಗವನ್ನು ಇಡುವುದರಿಂದಲೇ ಪತಿತದಿಂದ ಪಾವನವಾಗುವುದು. ರಾತ್ರಿ-ಹಗಲಿನ ಅಂತರವಿದೆ. ಆತ್ಮರೆಲ್ಲರೂ ಸೀತೆಯರಾಗಿದ್ದೀರಿ. ರಾವಣನ ಜೈಲಿನಲ್ಲಿ ಶೋಕವಾಟಿಕೆಯಲ್ಲಿ ಇದ್ದೀರಿ, ಇಲ್ಲಿನ ಸುಖವು ಕಾಗವಿಷ್ಟ ಸಮಾನವಾಗಿದೆ, ಸ್ವರ್ಗದ ಸುಖವು ಅಪಾರವಾಗಿದೆ ಆದ್ದರಿಂದ ಮಕ್ಕಳು ಜ್ಞಾನರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ, ಯಾವುದೇ ಪ್ರಕಾರದ ಸಂಶಯ ಬರಬಾರದು. ದೇಹಾಭಿಮಾನವು ಬಂದರೆ ಮತ್ತೆ ಅನೇಕ ಪ್ರಕಾರದ ಪ್ರಶ್ನೆಗಳು ಉತ್ಪನ್ನವಾಗುತ್ತವೆ. ಆಗ ತಂದೆಯು ಯಾವ ಕರ್ತವ್ಯವನ್ನು ಕೊಡುತ್ತಾರೆಯೋ ಅದನ್ನು ಮಾಡುವುದಿಲ್ಲ. ಮೂಲ ಮಾತಾಗಿದೆ – ನಾವು ಪತಿತರಿಂದ ಪಾವನರಾಗಬೇಕಾಗಿದೆ, ಅನ್ಯ ಯಾವುದೇ ಸಂಕಲ್ಪವನ್ನು ನಡೆಸುವ ಅವಶ್ಯಕತೆಯಿಲ್ಲ. ಇದು ಪತಿತ ಪ್ರಪಂಚ, ಅದು ಪಾವನ ಪ್ರಪಂಚವಾಗಿದೆ, ಪಾವನರಾಗುವುದು ಮುಖ್ಯ ಮಾತಾಗಿದೆ. ಯಾರು ಪಾವನರನ್ನಾಗಿ ಮಾಡುತ್ತಾರೆ, ಇದೇನೂ ತಿಳಿದಿಲ್ಲ. ನೀವು ಪತಿತರಾಗಿದ್ದೀರಿ ಎಂದು ಹೇಳಿದರೆ ಕ್ರೋಧಿತರಾಗಿ ಬಿಡುತ್ತಾರೆ. ಯಾರೂ ಸಹ ತಮ್ಮನ್ನು ವಿಕಾರಿ ಎಂದು ತಿಳಿದುಕೊಳ್ಳುವುದಿಲ್ಲ, ಎಲ್ಲರೂ ಗೃಹಸ್ಥಿಯಾಗಿದ್ದರು. ರಾಮ-ಸೀತೆ, ಲಕ್ಷ್ಮೀ-ನಾರಾಯಣರಿಗೂ ಸಹ ಮಕ್ಕಳಿದ್ದರಲ್ಲವೆ. ಅಲ್ಲಿಯೂ ಸಹ ಮಕ್ಕಳು ಜನಿಸುತ್ತಾರೆಂದು ಹೇಳುತ್ತಾರೆ, ಆದರೆ ಅದಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಶಿವಾಲಯವಾಗಿದೆ ಎಂಬುದನ್ನೇ ಮರೆತು ಬಿಟ್ಟಿದ್ದಾರೆ.

ತಂದೆಯು ನೀವು ಮಕ್ಕಳಿಗೆ ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ಇವರು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ಎಲ್ಲರಿಗೆ ಸದ್ಗತಿ ನೀಡುತ್ತಾರೆ. ಅವರಂತೂ ಒಬ್ಬ ಗುರು ಶರೀರ ಬಿಟ್ಟರೆ ಮತ್ತೆ ಮಕ್ಕಳಿಗೆ ಅವರ ಸಿಂಹಾಸನವನ್ನು ಕೊಡುತ್ತಾರೆ. ಈಗ ಅವರು ಹೇಗೆ ಸದ್ಗತಿಯಲ್ಲಿ ಕರೆದುಕೊಂಡು ಹೋಗುವರು! ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ರಾವಣ ರಾಜ್ಯದಲ್ಲಿ ದುರ್ಗತಿಯಿದೆ, ರಾಮ ರಾಜ್ಯದಲ್ಲಿ ಸದ್ಗತಿ ಇರುತ್ತದೆ. ತಂದೆಯು ಎಲ್ಲರನ್ನೂ ಪಾವನ ಮಾಡಿ ಕರೆದುಕೊಂಡು ಹೋಗುತ್ತಾರೆ ನಂತರ ಕೂಡಲೇ ಯಾರೂ ಪತಿತರಾಗುವುದಿಲ್ಲ, ನಂಬರ್ವಾರ್ ಆಗಿ ಕೆಳಗಿಳಿಯುತ್ತಾರೆ. ಸತೋಪ್ರಧಾನರಿಂದ ಸತೋ, ರಜೋ, ತಮೋ…. ನಿಮ್ಮ ಬುದ್ಧಿಯಲ್ಲಿ 84 ಜನ್ಮಗಳ ಚಕ್ರದ ಜ್ಞಾನವಿದೆ. ನೀವೀಗ ಲೈಟ್ಹೌಸ್ ಆಗಿದ್ದೀರಿ. ಜ್ಞಾನದಿಂದ ಹೇಗೆ ಈ ಚಕ್ರವು ಸುತ್ತುತ್ತದೆ ಎಂಬುದನ್ನು ಅರಿತುಕೊಂಡಿದ್ದೀರಿ. ಈಗ ನೀವು ಮಕ್ಕಳು ಮತ್ತೆಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. ನೀವೆಲ್ಲರೂ ಸೇನೆಯಾಗಿದ್ದೀರಿ, ನೀವು ಮಾರ್ಗವನ್ನು ತಿಳಿಸುವಂತಹ ಪೈಲೆಟ್ ಆಗಿದ್ದೀರಿ. ಎಲ್ಲರಿಗೆ ತಿಳಿಸಿರಿ – ಈಗ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿರಿ. ಕಲಿಯುಗ ದುಃಖಧಾಮವನ್ನು ಮರೆತು ಹೋಗಿ. ನಾವು ನಿಮಗೆ ಬಹಳ ಒಳ್ಳೆಯ ಮಾರ್ಗವನ್ನು ತಿಳಿಸುತ್ತೇವೆ. ಪತಿತ-ಪಾವನನು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ, ಅವರನ್ನು ನೆನಪು ಮಾಡಿದರೆ ನೀವು ಪಾವನರಾಗಿ ಬಿಡುತ್ತೀರಿ. ನಿಮ್ಮ ಆತ್ಮದಲ್ಲಿ ಹಿಡಿದಿರುವ ತುಕ್ಕು ಕಳೆಯುತ್ತಾ ಹೋಗುತ್ತದೆ. ಭಗವಾನುವಾಚ – ಮನ್ಮನಾಭವ. ಶಿವ ಭಗವಾನುವಾಚ – ವಿನಾಶ ಕಾಲೇ ವಿಪರೀತ ಬುದ್ಧಿ ವಿನಃಶ್ಯಂತಿ ಮತ್ತು ವಿನಾಶಕಾಲೇ ಪರಮಪಿತ ಪರಮಾತ್ಮನ ಜೊತೆ ಪ್ರೀತಿ ಬುದ್ಧಿ ವಿಜಯಂತಿ. ನಿಮ್ಮದು ಎಷ್ಟು ಪ್ರೀತಿಬುದ್ಧಿಯಿರುವುದೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ದೇಹಾಭಿಮಾನದಲ್ಲಿ ಬಂದರೆ ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನ ರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ, ಯಾವುದೇ ಪ್ರಕಾರದ ಸಂಶಯವನ್ನು ತರಬಾರದು. ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡಿ ಪಾವನರಾಗಬೇಕಾಗಿದೆ. ಅನ್ಯ ಪ್ರಶ್ನೆಗಳಲ್ಲಿ ಹೋಗಬಾರದು.

2. ಒಬ್ಬ ತಂದೆಯೊಂದಿಗೇ ಸತ್ಯ ಪ್ರೀತಿಯನ್ನಿಟ್ಟು ತಂದೆಯ ಸಮಾನ ಮಧುರ ಸ್ಯಾಕ್ರೀನ್ ಆಗಬೇಕಾಗಿದೆ.

ವರದಾನ:-

ಭಲೆ ಯಾರೇ ಕಿರಿಯರಿರಲಿ ಅಥವಾ ಹಿರಿಯರು – ತಾವು ಪ್ರತಿಯೊಬ್ಬರ ಸಲಹೆಗೆ ಅವಶ್ಯವಾಗಿ ಗೌರವ ಕೊಡಿ. ಏಕೆಂದರೆ ಯಾರದೇ ಸಲಹೆಯನ್ನು ಮುರಿಯುವುದು ಅರ್ಥಾತ್ ತಮ್ಮನ್ನು ತಾವು ಅವರ ಸಂಬಂಧದಿಂದ ದೂರವಾಗುವುದು. ಆದ್ದರಿಂದ ಒಂದುವೇಳೆ ಯಾರಲ್ಲಿಯೇ ಇರುವಂತಹ ವ್ಯರ್ಥವನ್ನು ತೆಗೆಯಬೇಕೆಂದರೆ, ಮೊದಲು ಅವರಿಗೆ ಗೌರವ ಕೊಡಿ, ಸ್ವಮಾನ ಕೊಡಿ ನಂತರದಲ್ಲಿ ಶಿಕ್ಷಣ ಕೊಡಿ – ಇದು ವಿಧಿಯಾಗಿದೆ. ಯಾವಾಗ ಈ ರೀತಿ ಗೌರವ ಕೊಡುವ ಸಂಸ್ಕಾರವನ್ನು ತಮ್ಮಲ್ಲಿ ತುಂಬಿಕೊಳ್ಳುತ್ತೀರಿ, ಆಗಲೇ ವಿಶ್ವದಿಂದ ತಮಗೆ ಗೌರವು ಸಿಗುವುದು. ಇದಕ್ಕಾಗಿ ಬಾಲಕನಿಂದ ಮಾಲೀಕ, ಮಾಲೀಕನಿಂದ ಬಾಲಕರಾಗಿರಿ. ಬುದ್ಧಿಯು ಬೇಹದ್ದಿನಲ್ಲಿ ಶುಭ ಕಲ್ಯಾಣದ ಭಾವನೆಯಿಂದ ಸಂಪನ್ನವಾಗಿರಲಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top